ಸರ್ವಾಂಗೀಣ ಆಟಗಾರ ಅಥವಾ ಆಲ್‌ರೌಂಡರ್ ಎಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್‌ಗಳಲ್ಲಿ ಅನುಕ್ರಮವಾಗಿ ಉತ್ತಮ ನಿರ್ವಹಣೆ ತೋರುವ ಓರ್ವ ಕ್ರಿಕೆಟ್ ಆಟಗಾರ. ಎಲ್ಲಾ ಬೌಲರ್‌ಗಳು ಬ್ಯಾಟ್ ಮಾಡಲೇ ಬೇಕಾಗಿದ್ದರೂ ಮತ್ತು, ಕೆಲವೊಮ್ಮೆ ಕೆಲವು ಬ್ಯಾಟ್ಸ್‌ಮನ್‌ಗಳು ಸಂದರ್ಭಾನುಸಾರವಾಗಿ ಬೌಲಿಂಗ್ ಮಾಡಿದರೂ ಹೆಚ್ಚಿನ ಎಲ್ಲಾ ಆಟಗಾರರು ಈ ಎರಡು ವಿಭಾಗಗಳಲ್ಲೊಂದರಲ್ಲಿ ಮಾತ್ರ ಕೌಶಲ್ಯ ಹೊಂದಿದ್ದು, ತಜ್ಞತೆಯುಳ್ಳವರೆಂದು ಪರಿಗಣಿಸಲ್ಪಡುತ್ತಾರೆ. ಕೆಲವು ವಿಕೆಟ್ ಕೀಪರ್‌ಗಳು ತಜ್ಞ ಬ್ಯಾಟ್ಸ್‌ಮನ್‌‌‌ಗಳ ಕೌಶಲ್ಯವನ್ನು ಹೊಂದಿರುತ್ತಾರೆ ಮತ್ತು ಸರ್ವಾಂಗೀಣ ಸಾಮರ್ಥ್ಯದ ಆಟಗಾರರೆಂದು ಗುರುತಿಸಲ್ಪಡುತ್ತಾರೆ. ಆದರೆ, ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌‌ ಎಂಬ ಪದಗಳು ಇವರಿಗೆ ಹೆಚ್ಚಾಗಿ ಅನ್ವಯಿಸಲ್ಪಡುತ್ತದೆ. ಅತಿ ಶ್ರೇಷ್ಟ ಸರ್ವಾಂಗೀಣ ಆಟಗಾರರೆಂದರೆ, ಇಮ್ರಾನ್ ಖಾನ್, ಜಾರ್ಜ್ ಹರ್ಸ್ಟ್, ವಿಲ್ಫ್ರೆಡ್ ರೋಡ್ಸ್, ಮುಸ್ತಾಖ್ ಮಹಮದ್, ಕ್ರಿಸ್ ಕೈರ್ನ್ಸ್, ಕೀತ್ ಮಿಲ್ಲರ್, ಗಾರ್‌ಫೀಲ್ಡ್ ಸೋಬರ್ಸ್, ಇಯಾನ್ ಬಾಥಮ್‌, ಜಾಕಸ್ ಕಾಲ್ಲಿಸ್, ಕಪಿಲ್ ದೇವ್, ರಿಚರ್ಡ್ ಹ್ಯಾಡ್ಲೀ, ಡಬ್ಲ್ಯೂ. ಜಿ. ಗ್ರೇಸ್, ವಾಲ್ಟರ್ ಹಮ್ಮೋಂಡ್ ಮತ್ತು ವಾಸಿಮ್ ಅಕ್ರಮ್.

ಕಲ್ಪನೆ

ಬದಲಾಯಿಸಿ

ಓರ್ವ ಆಟಗಾರನು ಸರ್ವಾಂಗೀಣ ಆಟಗಾರ ಎಂದು ಪರಿಗಣಿಸಲ್ಪಡಬೇಕಾದರೆ, ಅವನಿಗೆ ಕರಾರುವಕ್ಕಾದ ಯಾವುದೇ ವಿದ್ಯಾರ್ಹತೆಗಳಿರಬೇಕಾದ ಅಗತ್ಯವಿಲ್ಲ ಮತ್ತು ಈ ಪದದ ಬಳಕೆಯು ವ್ಯಕ್ತಿನಿಷ್ಟವಾಗಿದೆ. ಸಾಮಾನ್ಯವಾಗಿ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟ ನಿರ್ಣಾಯಕ ಅಂಶವೆಂದರೆ, "ನಿಜವಾದ/ಪ್ರಾಮಾಣಿಕ ಸರ್ವಾಂಗೀಣ ಆಟಗಾರ"ನು ತಾನು ಆಡುವ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಷ್ಟರ ಮಟ್ಟಿಗೆ ಉತ್ತಮವಾದ ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡರಲ್ಲಿ ಯಾವುದಾದರೂ ಒಂದರಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು ಎಂಬುದಾಗಿದೆ.[ಸೂಕ್ತ ಉಲ್ಲೇಖನ ಬೇಕು] "ನಿಜವಾದ/ಪ್ರಾಮಾಣಿಕ ಸರ್ವಾಂಗೀಣ ಆಟಗಾರ" ನ ಇನ್ನೊಂದು ನಿರೂಪಣೆಯೆಂದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್‌ಗಳೆರಡರ ಮೂಲಕ (ಆದರೂ ಎರಡರಲ್ಲೂ ಉತ್ತಮ ನಿರ್ವಹಣೆಯನ್ನು ಒಂದೇ ಪಂದ್ಯದಲ್ಲಿ ತೋರಬೇಕಾದ ಅಗತ್ಯವಿಲ್ಲ) ಸ್ಥಿರವಾಗಿ ನಿರ್ವಹಣೆ ತೋರಿ "ತಂಡಕ್ಕಾಗಿ ಪಂದ್ಯವನ್ನು ಜಯಿಸಬಲ್ಲ" ಆಟಗಾರ. (ಅಂದರೆ, ಅವನ/ಅವಳ ತಂಡವನ್ನು ವಿಜಯದತ್ತ ತಿರುಗಿಸುವಂತಹ ಅತ್ಯಮೋಘ ವೈಯಕ್ತಿಕ ನಿರ್ವಹಣೆ). ಎರಡೂ ನಿರೂಪಣೆಯಿಂದಲೂ ಸಹ, ನಿಜವಾದ ಸರ್ವಾಂಗೀಣ ಆಟಗಾರನು ಬಹಳ ಅಪರೂಪ ಮತ್ತು ತಾನು ಪರಿಣಾತ್ಮಕವಾಗಿ ಎರಡು ಆಟಗಾರರಂತೆ ನಿರ್ವಹಿಸುವ ಮೂಲಕ ತಂಡಕ್ಕೆ ಅತ್ಯಂತ ಅಮೂಲ್ಯವಾಗಿದ್ದಾನೆ. ತಜ್ಞ ಬೌಲರ್ ಓರ್ವ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಸಂದರ್ಭಗಳಲ್ಲಿ ಗೊಂದಲಗಳು ಕೆಲವೊಮ್ಮೆ ಮೂಡುತ್ತವೆ. ಉದಾಹರಣೆಗೆ, ವೆಸ್ಟ್ ಇಂಡೀಸ್‌ನ ಪ್ರಖ್ಯಾತ ಪೇಸ್ ಬೌಲರ್ ಮ್ಯಾಲ್ಕಮ್‌ ಮಾರ್ಶಲ್ ಕೆಲವೊಮ್ಮೆ ಒಳ್ಳೆಯ ಇನ್ನಿಂಗ್ಸ್ ತೋರಿಸಿದ್ದನು. ಆದರೆ, ಸರ್ವಾಂಗೀಣ ಆಟಗಾರ ಎಂದು ತಾನು ಗುರುತಿಸಲ್ಪಡುವಷ್ಟು ಭಾರಿ ಅತ್ಯುತ್ತಮವಾಗಿ ಆಡಲಿಲ್ಲ. ಬದಲಿಗೆ, ಇವನು "ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್" ಎಂದು ಕರೆಯಲ್ಪಡಬಲ್ಲವನು. ಇದಕ್ಕೆ ಸಮಾನವಾಗಿ, ಓರ್ವ ತಜ್ಞ ಬ್ಯಾಟ್ಸ್‌ಮ್ಯಾನ್ "ಉಪಯುಕ್ತ ಬದಲಿ ಬೌಲರ್" ಎಂದೂ ಕರೆಯಲ್ಪಡುತ್ತಾನೆ ಮತ್ತು, ಇಂತಹುದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ೧೯೮೯ರ ಟೆಸ್ಟ್ ಪಂದ್ಯದಲ್ಲಿ ಅಪರೂಪಕ್ಕೆ ತಾನು ಬಳಸುತ್ತಿದ್ದ ಎಡಗೈ ಸ್ಪಿನ್ ತಂತ್ರಕ್ಕೆ ಅನುಕೂಲಕರ ಪರಿಸ್ಥಿತಿ ಒದಗಿದ ಅವಕಾಶವನ್ನು ಬಳಸಿಕೊಂಡು, ಇದರಲ್ಲಿ ೧೧ ವಿಕೆಟ್‌ಗಳನ್ನು ಕಬಳಿಸಿದ ಅಲ್ಲನ್ ಬಾರ್ಡರ್.[] ಸರ್ವಾಂಗೀಣ ಆಟಗಾರನಾಗಿ ಗುರುತಿಸಲ್ಪಡಲು ಇರಬೇಕಾದ ಪ್ರಮುಖ ಇತಿಮಿತಿಗಳಲ್ಲೊಂದು ಬ್ಯಾಟ್ಸ್‌ಮನ್‌‌ ಮತ್ತು ಬೌಲರ್‌ಗಳು ಬೇರೆ ಬೇರೆ ವಯಸ್ಸಿನಲ್ಲಿ ತಮ್ಮ ಯಶಸ್ಸಿನ ಶೃಂಗವನ್ನು ತಲುಪುವುದು. ಬ್ಯಾಟ್ಸ್‌ಮ್ಯಾನ್‍ಗಳು ತಮ್ಮ ಯಶಸ್ಸಿನ ತುತ್ತತುದಿಯನ್ನು ಅನುಭವದ ಮೂಲಕ ತಮ್ಮ ತಂತ್ರಗಾರಿಕೆಯಲ್ಲಿ ಪ್ರೌಢತೆಯನ್ನು ಸಾಧಿಸಿದ ಬಳಿಕ ತಮ್ಮ ಇಪ್ಪತ್ತರ ಕೊನೆಯಲ್ಲಿ ತಲುಪುತ್ತಾರೆ. ಇದಕ್ಕೆ ವಿರುದ್ಧವಾಗಿ, ವೇಗದ ಬೌಲರ್‌ಗಳು ತಮ್ಮ ಯಶಸ್ಸಿನ ಶೃಂಗವನ್ನು ಯಾವತ್ತೂ ತಮ್ಮ ಇಪ್ಪತ್ತರ ಪೂರ್ವದಲ್ಲಿ ಅಥವಾ ಇಪ್ಪತ್ತರ ಮಧ್ಯಭಾಗದಲ್ಲಿ, ತಮ್ಮ ದೈಹಿಕ ಸಾಮರ್ಥ್ಯದ ಪ್ರಾಭಲ್ಯವು ಬಲಿಷ್ಟವಾಗಿರುವಾಗ ತಲುಪುತ್ತಾರೆ. ಇತರ ಬೌಲರ್‌ಗಳು, ಹೆಚ್ಚಾಗಿ ಚೆಂಡನ್ನು ಆಕಾಶದಲ್ಲಿ ಸುತ್ತುವಂತೆ (ಸ್ವಿಂಗ್) ಎಸೆಯುವ ಸ್ಪಿನ್ನರ್‌ಗಳು ತಮ್ಮ ವೃತ್ತಿಜೀವನದ ಅಂತಿಮ ಸಮಯದಲ್ಲಿ ಪರಿಣಾಮಕಾರಿಯಾಗಿರುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಆಟಗಾರನ ಬ್ಯಾಟಿಂಗ್ ಸರಾಸರಿಯು (ಹೆಚ್ಚಿರುವಷ್ಟು ಒಳ್ಳೆಯದು) ಅವನ ಬೌಲಿಂಗ್ ಸರಾಸರಿ (ಕಡಿಮೆಯಿದ್ದಷ್ಟು ಒಳ್ಳೆಯದು) ಗಿಂತ ಹೆಚ್ಚಿರಲೇಬೇಕೆಂಬುದು ಸಾಮಾನ್ಯವಾಗಿ ಬಳಸುವ ಒಂದು ಹೆಬ್ಬೆರಳ ಸಂಖ್ಯಾಶಾಸ್ತ್ರೀಯ ನಿಯಮವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಕೇವಲ ಮೂವರು ಸರ್ವಾಂಗೀಣ ಆಟಗಾರರರು ತಮ್ಮ ವೃತ್ತಿಜೀವನದುದ್ದಕ್ಕೂ, ತಮ್ಮ ಬೌಲಿಂಗ್ ಸರಾಸರಿಗಿಂತ ಹೆಚ್ಚಿರುವ ಬ್ಯಾಟಿಂಗ್ ಸರಾಸರಿ, ೨೦ ನ್ನು ಕಾಯ್ದುಕೊಂಡಿದ್ದಾರೆ. ಅವರೆಂದರೆ: ಗಾರ್ಫೀಲ್ಡ್ ಸೋಬರ್ಸ್, ಜಾಕ್ವಸ್ ಕಾಲ್ಲಿಸ್ ಮತ್ತು ವಾಲ್ಟರ್ ಹಮ್ಮಾಂಡ್. ಆದಾಗ್ಯೂ, ಇಮ್ರಾನ್ ಖಾನ್, ಸ್ಟೀವ್ ವ್ಹಾ, ಆಂಡ್ರ್ಯೂ ಸೈಮಂಡ್ಸ್ ಮತ್ತು ಶೇನ್ ವಾಟ್ಸನ್‌ನಂತಹ ಇತರ ಕೆಲವು ಆಟಗಾರರು ತಮ್ಮ ವೃತ್ತಿಜೀವನದ ಮಹತ್ವಪೂರ್ಣ ಘಟ್ಟಗಳಲ್ಲಿ ಕೂಡಾ ವೈಶಿಷ್ಟ್ಯಪೂರ್ಣ ಸಾಧನೆಯನ್ನು ತೋರಿದ್ದಾರೆ. (ಮೈಕೇಲ್ ಸ್ಲಾಟರ್ ೪೨.೮ ಬ್ಯಾಟಿಂಗ್ ಸರಾಸರಿ ಮತ್ತು ೧೦.೦ ಬೌಲಿಂಗ್ ಸರಾಸರಿಯನ್ನು ಹೊಂದಿದ್ದನು, ಆದರೆ, ಪಂದ್ಯದಿಂದ ಹೊರಗುಳಿದ ಕೆಲವು ಘಟನೆಗಳಿಂದ, ಆಡಿದ ಪಂದ್ಯಗಳ, ರನ್ನುಗಳ ಅಥವಾ ವಿಕೆಟ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ತನ್ನ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ ಸ್ಲಾಟರ್ ಒಟ್ಟು ಹತ್ತು ರನ್ನುಗಳನ್ನು ನೀಡಿ ಒಂದೇ ಒಂದು ವಿಕೆಟ್ ಪಡೆದಿದ್ದನು.) ಡಾಗ್ ವಾಲ್ಟರ್ಸ್ ಸುಮಾರು ಬ್ಯಾಟಿಂಗ್ ಸರಾಸರಿ ೪೨.೮ಕ್ಕೆ ಭಿನ್ನವಾಗಿ ೨೦ ರನ್ ಸರಾಸರಿ ಹಾಗೂ, ಬೌಲಿಂಗ್ ಸರಾಸರಿ ೧೦.೦ ಹೊಂದಿದ್ದನು. ಆದಾಗ್ಯೂ, ಸಾಮಾನ್ಯವಾಗಿ ಅವನು ನಿಜವಾದ ಸರ್ವಾಂಗೀಣ ಆಟಗಾರನಿಗಿಂತ ಚೆನ್ನಾಗಿ ಜತೆಯಾಟವನ್ನು ಬೇರ್ಪಡಿಸಬಲ್ಲ ಓರ್ವ ಸಾಂದರ್ಭಿಕ ಬೌಲರ್ ಎಂದು ಗುರುತಿಸಲ್ಪಟ್ಟನು. ಒಟ್ಟು ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಹಲವಾರು ಆಟಗಾರರು ಮಹತ್ವಪೂರ್ಣವಾದ ಹೆಚ್ಚಿನ ಮೌಲ್ಯದ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಅಂಕಿಅಂಶಗಳ ಪ್ರಕಾರ, ಕೆಲವರು ಮಾತ್ರ ೪೦.೭ರಷ್ಟು ಬ್ಯಾಟಿಂಗ್ ಸರಾಸರಿ ಮತ್ತು ೧೯.೮೭ರಷ್ಟು ಬೌಲಿಂಗ್ ಸರಾಸರಿ ಹೊಂದಿರುವ ಫ್ರಾಂಕ್ ವೋಲ್ಲೆ ಗೆ ಸವಾಲು ನೀಡಬಲ್ಲರು. ವೋಲ್ಲೆ ತನ್ನ ವೃತ್ತಿ ಜೀವನದಲ್ಲಿ ೨೦೦೦ ವಿಕೆಟ್‌ಗಳನ್ನು ಕಿತ್ತಿದ್ದಾರೆ ಅಲ್ಲದೆ, ಜಾಕ್ ಹಾಬ್ಸ್‌ನ ಹೊರತಾಗಿ ಅತೀ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ ಮತ್ತು, ೧೦೦೦ಕ್ಕಿಂತಲೂ ಅಧಿಕ ಕ್ಯಾಚ್ ಪಡೆದ ವಿಕೆಟ್ ಕೀಪರ್ ಅಲ್ಲದ ಏಕೈಕ ಆಟಗಾರ.[] ಆಟಗಾರನ ಸರ್ವಾಂಗೀಣ ಸಾಮರ್ಥ್ಯವನ್ನು ಪರಿಶೀಲಿಸುವಾಗ ಆತನ ಕ್ಷೇತ್ರ ನಿರ್ವಹಣೆಯಲ್ಲಿನ [ಫೀಲ್ಡಿಂಗ್] ಪರಿಣತಿಯೂ ಕೂಡಾ ಇನ್ನೊಂದು ಅಂಶವಾಗಿದೆ. ವೋಲ್ಲೆಯ ಜೊತೆಗೆ, ಸರ್ವಾಂಗೀಣ ಸಾಮರ್ಥ್ಯ ತೋರಿದ ಇತರ ಪ್ರಮುಖ ಕ್ಷೇತ್ರರಕ್ಷಣಾ ಆಟಗಾರರೆಂದರೆ, ಡಬ್ಲ್ಯು ಜಿ ಗ್ರೇಸ್, ವಾಲ್ಟರ್ ಹಮ್ಮೋಂಡ್, ಮತ್ತು ಗ್ರೇ ಸೋಬರ್ಸ್. ಇವರೆಲ್ಲರೂ ಅತ್ಯಂತ ಬಲಿಷ್ಟ ಕ್ಷೇತ್ರರಕ್ಷಕರು ಮತ್ತು ಸುರಕ್ಷಿತ ಕ್ಯಾಚ್ ಪಡೆಯುವವರು. ಅಗತ್ಯವಾಗಿ, ಸರ್ವಾಂಗೀಣ ಆಟಗಾರನು ಬ್ಯಾಂಟಿಂಗ್‌ಗಿಂತ ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆಯನ್ನು ಅಥವಾ, ಇದಕ್ಕೆ ಪ್ರತಿಕ್ರಮವಾಗಿ ಸಹಾ ನಿರ್ವಹಣೆಯನ್ನು ತೋರುತ್ತಾನೆ. ಕೇವಲ ಕೆಲವರು ಮಾತ್ರ ಎರಡರಲ್ಲೂ ಸಮನಾಗಿ ಉತ್ತಮ ನಿರ್ವಹಣೆಯನ್ನು ತೋರುತ್ತಾರೆ ಮತ್ತು ಅಪರೂಪಕ್ಕೆ ಯಾರಾದರೊಬ್ಬರೂ ಎರಡರಲ್ಲೂ ಉತ್ಕೃಷ್ಟ ನಿರ್ವಹಣೆಯನ್ನು ಪ್ರದರ್ಶಿಸುತ್ತಾರೆ. ಆದುದರಿಂದ, "ಬೌಲಿಂಗ್‌ನ ಸರ್ವಾಂಗೀಣ ಆಟಗಾರ" ಮತ್ತು "ಬ್ಯಾಟಿಂಗ್‌ನ ಸರ್ವಾಂಗೀಣ ಆಟಗಾರ" ಎಂಬ ಪದಗಳು ಬಳಕೆಗೆ ಬಂದುವು.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಕೀತ್ ಮಿಲ್ಲರ್ ಉತ್ತಮ ಬ್ಯಾಟಿಂಗ್ ಸರಾಸರಿ ೩೬.೯೭ ನ್ನು ಹೊಂದಿದ್ದನು (ಆದರೆ, ಅಧಿಕ ಪ್ರಥಮ ದರ್ಜೆಯ ಸರಾಸರಿ ೪೮.೯೦) ಮತ್ತು ಅತ್ಯುತ್ಕೃಷ್ಟ ಬೌಲಿಂಗ್ ಸರಾಸರಿ ೨೨.೯೭ನ್ನು ಹೊಂದಿದ್ದು ಈತನು "ಬೌಲಿಂಗ್ ಸರ್ವಾಂಗೀಣ ಆಟಗಾರ" ಎಂದು ಕರೆಯಲ್ಪಟ್ಟನು.[ಸೂಕ್ತ ಉಲ್ಲೇಖನ ಬೇಕು] ಇದಕ್ಕೆ ವಿರುದ್ಧವಾಗಿ, ಗ್ಯಾರಿ ಸೋಬರ್ಸ್ ಮಹತ್ವಪೂರ್ಣ ಬ್ಯಾಟಿಂಗ್ ಸರಾಸರಿ ೫೭.೭೮ ನ್ನು ಹೊಂದಿದ್ದ ಮತ್ತು ಒಳ್ಳೆಯ ಬೌಲಿಂಗ್ ಸರಾಸರಿ ೩೪.೦೩ನ್ನು ಹೊಂದಿದ್ದು ಅವನು "ಬ್ಯಾಟಿಂಗ್ ಸರ್ವಾಂಗೀಣ ಆಟಗಾರ" ಎಂದು ಕರೆಯಲ್ಪಟ್ಟನು.[ಸೂಕ್ತ ಉಲ್ಲೇಖನ ಬೇಕು] ಆದರ್ಶಪ್ರಾಯವಾದ ನೈಜ ಸರ್ವಾಂಗೀಣ ಆಟಗಾರನೆಂದರೆ, ೩೭ (ಬ್ಯಾಟಿಂಗ್), ೨೩ (ಬೌಲಿಂಗ್) ಸರಾಸರಿಗಳನ್ನು ಹೊಂದಿದ್ದು ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್ ಮತ್ತು ಅತ್ಯುತ್ಕೃಷ್ಟ ಮಟ್ಟದ ಬೌಲರ್ ಆಗಿರುವ ಇಮ್ರಾನ್ ಖಾನ್. ಒಂದಕ್ಕಿಂತ ಇನ್ನೊಂದರಲ್ಲಿ ಉತ್ತಮ ನಿರ್ವಹಣೆ ತೋರಿದ್ದಾನೆ ಎಂದು ಅಂಕಿಅಂಶಗಳು ಸೂಚಿಸಿದರೂ, ಸೋಬರ್ಸ್ "ಅತ್ಯುತ್ತಮ ಸಾರ್ವಕಾಲಿಕ ಸರ್ವಾಂಗೀಣ ಆಟಗಾರ" ಎಂಬ ಅಭಿನಂದನೆಗೆ ಪಾತ್ರನಾದನು.[][] ಅವನು ಮೊತ್ತಮೊದಲಿಗೆ ಉತ್ಕೃಷ್ಟ ದರ್ಜೆಯ ಬ್ಯಾಟ್ಸ್‌ಮನ್‌‌ ಮತ್ತು ಒಳ್ಳೆಯ ಬೌಲರ್ ಎಂದು ವಿವರಿಸಲ್ಪಟ್ಟನು. ಮೂಲತಃ ಫಿಂಗರ್ ಸ್ಪಿನ್ನರ್‌ ಆಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರವೇಶಿಸಿದ ಇವನ ಗಮನಾರ್ಹ ಸಾಮರ್ಥ್ಯವೆಂದರೆ, ಈತನು ಮಧ್ಯಮ ವೇಗದಲ್ಲಿ ಬೌಲ್ ಮಾಡಬಲ್ಲನು ಹಾಗೆಯೇ, ರಿಸ್ಟ್ ಸ್ಪಿನ್ ಕೂಡಾ ಎಸೆಯಬಲ್ಲನು. ಶತಮಾನದ ವಿಸ್ಡನ್ ಕ್ರಿಕೆಟರ್ಸ್ ಅವಾರ್ಡ್‌ನ ೧೦೦ ಜನ ತೀರ್ಪುಗಾರರಲ್ಲಿ ೯೦ ಜನ ತೀರ್ಪುಗಾರರು ಸೋಬರ್ಸ್‌ನನ್ನು ತಮ್ಮ ಐದು ಆಯ್ಕೆಗಳಲ್ಲೊಬ್ಬನಾಗಿ ಆರಿಸಿದರು. ೧೯೭೦ ಮತ್ತು ೧೯೮೦ರಲ್ಲಿ ಪ್ರತ್ಯೇಕತಾ ನೀತಿಯು ಜಾರಿಯಲ್ಲಿದ್ದ ಕಾರಣದಿಂದ ಟೆಸ್ಟ್ ಕ್ರಿಕೆಟ್‌ನಿಂದ ವಂಚಿತನಾದ ಸರ್ವಾಂಗೀಣ ಆಟಗಾರನೆಂದರೆ, ದಕ್ಷಿಣ ಆಫ್ರಿಕಾದ ಕ್ಲೈವ್ ರೈಸ್. ಈತನ ಪ್ರಥವ ದರ್ಜೆಯ ಬ್ಯಾಟಿಂಗ್ ಸರಾಸರಿ ೪೦.೯೫ ಆಗಿದೆ ಮತ್ತು ಈತನ ಬೌಲಿಂಗ್ ಸರಾಸರಿ ೨೨.೪೯ ಆಗಿದೆ. ದಕ್ಷಿಣ ಆಫ್ರಿಕಾದ ಇನ್ನೋರ್ವ ಮಹತ್ವಪೂರ್ಣ ಸರ್ವಾಂಗೀಣ ಆಟಗಾರನೆಂದರೆ, ೪೧ ವಿಕೆಟ್‌ಗಳನ್ನು ೧೫.೦೨ ಸರಾಸರಿಯಲ್ಲಿ ಕಬಳಿಸಿ ಇದೇ ಕಾರಣದಿಂದ ಕೇವಲ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ ಮೈಕ್ ಪ್ರೋಕ್ಟೆರ್. ಇವನ ಬ್ಯಾಟಿಂಗ್ ಸರಾಸರಿಯು ಟೆಸ್ಟ್ ಪಂದ್ಯದಲ್ಲಿ ೨೫.೧೧ ಮತ್ತು ಪ್ರಥಮ ದರ್ಜೆಯ ಕ್ರಿಕೆಟ್ ಪಂದ್ಯದಲ್ಲಿ ೩೬.೦೧ ಮತ್ತು, ಅವನು ಅನುಕ್ರಮ ಇನ್ನಿಂಗ್ಸ್‌ಗಳಲ್ಲಿ ಸಮಾನವಾದ ದಾಖಲೆ ಆರನ್ನು ಹೊಂದಿದ್ದು ೪೦೧ ಪಂದ್ಯಗಳಲ್ಲಿ ೪೮ ಪ್ರಥಮ ದರ್ಜೆಯ ಶತಕಗಳನ್ನು ಗಳಿಸಿದನು.

ಶ್ರೇಷ್ಠ ಸವಾಂಗೀಣ ಸಾಧನೆಗಳು

ಬದಲಾಯಿಸಿ

೧೮೫೯ರ ಜುಲೈ ೨೧, ೨೨, ೨೩ರಂದು ವೊವಲ್‌ನಲ್ಲಿ ಸರ್ರೆ ವಿರುದ್ಧ ಅಲ್‌ ಇಂಗ್ಲೆಂಡ್‌ ಆಟವಾಡುತ್ತಿತ್ತು. ಇದರಲ್ಲಿ ಆಲ್‌ ಇಂಗ್ಲೆಡ್‌ ಪರ ಆಟವಾಡುತ್ತಿದ್ದ ಮಿಡಲ್ ಸೆಕ್ಸ್‌ನ ವಿ.ಇ.ವಲ್ಕೆರ್ ಮೊದಲ ಇನ್ನಿಂಗ್ಸ್‌ನಲ್ಲಿ ಸುರೆ ತಂಡದ ಎಲ್ಲಾ ೧೦ ವಿಕೆಟ್‌ಗಳನ್ನು ವಶಪಡಿಸಿಕೊಂಡರು. ಇದರ ಜೊತೆಗೆ ಇಂಗ್ಲೆಡ್‌ನ ಎರಡನೆ ಮೊದಲ ಇನ್ನಿಂಗ್ಸ್‌ನಲ್ಲಿ೧೦೮ ರನ್‌ಗಳನ್ನು ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ (೨೦*) ಬ್ಯಾಟ್ಸ್ ಮ್ಯಾನ್‌ರಾಗಿ ಉಳಿದರು. ಇದಲ್ಲದೆ ಸುರೆಯ ಎರಡನೆ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಆಲ್‌ ಇಂಗ್ಲೆಡ್‌ ೩೨೯ ರನ್‌ಗಳಿಂದ ಗೆಲುವು ಸಾಧಿಸಿತು.[ಸೂಕ್ತ ಉಲ್ಲೇಖನ ಬೇಕು] ೧೮೬೨ರ ಆಗಸ್ಟ್ ೧೫ರಂದು ಇ.ಎಂ.ಗ್ರೆಸ್‌ ಎಂಸಿಸಿ ಇನ್ನಿಂಗ್ಸ್‌ನಲ್ಲಿ ಉದ್ದಕ್ಕೂ ಔಟ್‌ ಆಗದೆ ಒಟ್ಟು ೧೯೨ ಸ್ಕೋರು ಮಾಡುವ ಮೂಲಕ ತನ್ನ ಬ್ಯಾಟ್ಸನ್ನು ಝಳಪಿಸಿ ತಂಡದ ಒಟ್ಟು ಮೊತ್ತ ೩೩೪ಕ್ಕೆ ಕಾರಣರಾದರು. ನಂತರ ಅಂಡರ್ ಆರ್ಮ್ ಎಸೆತದ ಮೂಲಕ ಕೆಂಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ೬೯ ರನ್‌ಗಳಿಗೆ ೧೦ ವಿಕೆಟ್‌ಗಳನ್ನು ಪಡೆದರು. ಆದರೆ ಇದು ೧೨ ಎ ಸೈಡ್‌ ಗೆಮ್‌ ಆಗಿದ್ದರಿಂದ ಅಧಿಕೃತ ದಾಖಲೆಯಲ್ಲ. (ಇದರಲ್ಲಿ ಕೆಂಟ್‌ನ ಒರ್ವ ಬ್ಯಾಟ್ಸ್ ಮ್ಯಾನ್ ಗಾಯಗೊಂಡ).[ಸೂಕ್ತ ಉಲ್ಲೇಖನ ಬೇಕು] ೧೮೭೩ರಲ್ಲಿ ಡಬ್ಲು.ಜಿ.ಗ್ರೆಸ್‌ ಇಂಗ್ಲಿಷ್‌ನ ಅವಧಿಯಲ್ಲಿ ೧ ಸಾವಿರದ ರನ್ನುಗಳ ಡಬಲ್‌ ಸಾಧನೆ ಮತ್ತು ನೂರು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಆಟಗಾರ. ೭೧.೩೦ ಸರಾಸರಿಯಲ್ಲಿ ೨,೧೩೯ ರನ್‌ ಗಳಿಸಿ, ೧೦೬ ವಿಕೆಟ್‌ಗಳನ್ನು ೧೨.೯೪ ಸರಾಸರಿಯಲ್ಲಿ ಪಡೆದ ಗ್ರೆಸ್‌, ೧೮೮೬ರಲ್ಲಿ ಎಂಟು ಡಬಲ್ಸ್ ಪೂರ್ಣಗೊಳಿಸಿದರು. ಈ ಸಾಧನೆಯನ್ನು ೧೮೮೨ರ ವರೆಗೆ ಇನ್ನೊಬ್ಬ ಆಟಗಾರ (ಸಿ.ಟಿ.ಸ್ಟಡ್‌‌)ನಿಗೆ ಪೂರೈಸಲು ಸಾಧ್ಯವಾಗಿರಲಿಲ್ಲ.[] ೧೯೦೬ರಲ್ಲಿ ಇಂಗ್ಲಿಷ್‌ ಕ್ರಿಕೆಟ್‌ ಸೀಸನ್‌ನಲ್ಲಿ ಜಾರ್ಜ್‌ ಹರ್ಬೆಟ್‌ ಹರ್ಸ್ಟ್ ೨ ಸಾವಿರ ರನ್‌ಗಳನ್ನು ಮತ್ತು ೨೦೦ ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರೀ ದೊಡ್ಡ ಸಾಧನೆ ಮಾಡಿದರು. ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ೧೬೯ರೊಂದಿಗೆ ೪೫.೮೬ ಸರಾಸರಿಯಲ್ಲಿ ೬ ಶತಕ ಸೇರಿದಂತೆ[] ೨,೩೮೫ ರನ್‌ಗಳನ್ನು ದಾಖಲಿಸಿದರು. ೧೬.೫೦ ಸರಾಸರಿಯಲ್ಲಿ ೨೦೮ ವಿಕೆಟ್‌ಗಳನ್ನು ೭/೧೨ರ ಉತ್ತಮ ಸಾಧನೆಯೊಂದಿಗೆ ಪಡೆದರು.[] ಅದೇ ಸೀಸನ್‌ನಲ್ಲಿ ಹಿರ್ಸ್ಟ್ ಇನ್ನೊಂದು ಭಾರೀ ಸಾಧನೆಯನ್ನು ಮಾಡಿದರು. ಒಂದೇ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಅದೇ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ೫ ವಿಕೆಟ್‌ಗಳನ್ನು ಕಬಳಿಸಿ ಇನ್ನೊಂದು ಅಪೂರ್ವ ಸಾಧನೆಯನ್ನು ಮಾಡಿದರು. ಯಾರ್ಕ್‌ಶೈರ್‌ಗಾಗಿ ಸಾಮರ್ಸೆಟ್‌ ವಿರುದ್ಧ ಬತ್‌ನಲ್ಲಿ ಆಟವಾಡುತ್ತಿದ್ದಾಗ ಹಿರ್ಸ್ಟ್ ಔಟ್‌ ಆಗದೆ ೧೧೧ ಮತ್ತು ೧೧೭ ರನ್‌ಗಳು ಮತ್ತು ೬/೭೦ ಮತ್ತು ೫/೪೫ನ್ನು ಪಡೆದರು.[][] ಇಂಗ್ಲಿಷ್‌ ಸೀಸನ್‌ನಲ್ಲಿ ಹೆಚ್ಚಾಗಿ ಪ್ರವಾಸಿ ತಂಡದ ಸದಸ್ಯರಾಗಿದ್ದ ಜಾರ್ಜ್‌ ಗಿಫ್ಫೆನ್‌ (೧೮೮೬, ೧೮೯೩ ಮತ್ತು ೧೮೯೬) ಮತ್ತು ವರ್ವಿಕ್‌ ಅರ್ಮ್‌ಸ್ಟ್ರಾಂಗ್ (೧೯೦೫, ೧೯೦೯ ಮತ್ತು ೧೯೨೧) ಮೂರು ಬಾರಿ ಸಾಧನೆ ಮಾಡಿದ್ದಾರೆ.[೧೦] ಟೆಸ್ಟ್ ಪಂದ್ಯವೊಂದರಲ್ಲಿ ೧೦ ವಿಕೆಟ್‌ಗಳು ಮತ್ತು ೧೦೦ ರನ್‌ಗಳನ್ನು ಪಡೆದ ಮೊದಲ ಆಟಗಾರ ಅಲನ್‌ ಡೆವಿಡ್ಸನ್‌. ಈತ ೧೯೬೦-೬೧ರಲ್ಲಿ ಬ್ರಿಸ್ಬನ್‌ನಲ್ಲಿ ಆಸ್ಟೇಲಿಯಾ ತಂಡಕ್ಕಾಗಿ ವೆಸ್ಟ್ ಇಂಡಿಸ್‌ ವಿರುದ್ಧದ ಪಂದ್ಯದಲ್ಲಿ ಆಡಿ, ೮/೧೩೫ ಮತ್ತು ೬/೮೭ ಮತ್ತು ೪೪ ಮತ್ತು ೮೦ ರನ್‌ಗಳನ್ನು ಮಾಡಿದ್ದು, ಅಂತಿಮವಾಗಿ ಈ ಟೆಸ್ಟ್ ಪಂದ್ಯ ಟೈ ಆಯಿತು. ಇವರು ಕಡೆಯವರೆಗೂ ಆಡಿದ್ದು, ತುಂಡಾದ ಬೆರಳಿನಲ್ಲೇ!.[೧೧] ೧೯ ಆಟಗಾರರು ಒಟ್ಟು ೨೬ ಸಂದರ್ಭಗಳಲ್ಲಿ ೬ ವಿಕೆಟ್‌ಗಳನ್ನು ಒಂದು ಇನ್ನಿಂಗ್ಸ್‌ನಲ್ಲಿ ಮತ್ತು ಅದೇ ಟೆಸ್ಟ್ ಮ್ಯಾಚ್‌ನಲ್ಲಿ ಶತಕವೊಂದನ್ನು ಬಾರಿಸಿದರು. ಇಯಾನ್‌ ಬಾಥಮ್‌ ಐದು ಬಾರಿ ಮತ್ತು ಜಾಕ್‌ ಕಾಲಿಸ್‌, ಗರ್ಫಿಲ್ಡ್ ಸೊಬೆರ್ಸ್‌ ಮತ್ತು ಮುಸ್ತಕ್‌ ಮೊಹಮ್ಮದ್‌ ತಲಾ ಎರಡು ಬಾರಿ ಈ ಸಾಹಸವನ್ನು ಮಾಡಿದರು.[೧೨]

ಇವನ್ನೂ ಗಮನಿಸಿ‌

ಬದಲಾಯಿಸಿ
  • ಬ್ಯಾಟ್ಸ್‌ಮನ್‌
  • ಬೌಲರ್(ಕ್ರಿಕೆಟ್)
  • ಡಬಲ್ (ಕ್ರಿಕೆಟ್)
  • ಫೀಲ್ಡರ್
  • ವಿಕೆಟ್-ಕೀಪರ್
  • ಕ್ರಿಕೆಟ್‌ ಪಾರಿಭಾಷಿಕ ಶಬ್ದಗಳು

ಉಲ್ಲೇಖಗಳು‌

ಬದಲಾಯಿಸಿ
  1. http://www.cricinfo.com/ci/engine/match/63499.html
  2. ಕ್ರಿಕ್‌ಇನ್ಫೋ - ಕ್ರೀಡಾವಧಿ ಬ್ಯಾಟಿಂಗ್ ದಾಖಲೆಗಳು ಕ್ರಿಕ್‌ಇನ್ಫೋ - ಕ್ರೀಡಾವಧಿ ಬೌಲಿಂಗ್‌ ದಾಖಲೆಗಳು recordsಕ್ರಿಕ್‌ಇನ್ಫೋ - ಕ್ರೀಡಾವಧಿ ಕ್ಷೇತ್ರರಕ್ಷಣೆ ದಾಖಲೆಗಳು
  3. ಬೆನೌಡ್‌, p.೧೧೯.
  4. ಟ್ರೂಮನ್‌, p.೨೯೪
  5. ವೆಬ್ಬರ್‌, p.೧೮೦.
  6. ಕ್ರಿಕೆಟ್‌ಸಂಗ್ರಹ
  7. ಕ್ರಿಕೆಟ್‌ಸಂಗ್ರಹ
  8. ವೆಬ್ಬರ್‌, p.೧೮೪.
  9. ಕ್ರಿಕೆಟ್‌ಆರ್ಕೈವ್ – ಪಂದ್ಯದ ಸ್ಕೋರ್‌ಕಾರ್ಡ್. ೨೬ ನವೆಂಬರ್‌ ೨೦೦೮ರಂದು ಪಡೆಯಲಾಗಿದೆ‌.
  10. ವೆಬ್ಬರ್‌, p.೧೮೦-೧೮೧.
  11. "1st Test Australia v West Indies Scorecard". Cricinfo.com.
  12. "Records / Test matches / All-round records / A hundred and five wickets in an innings".

ಉದಾಹರಿಸಿದ ಮೂಲಗಳು

ಬದಲಾಯಿಸಿ

ಟೆಂಪ್ಲೇಟು:Test cricket doubles to 1977