ಬೈಸಾಲಿ ಮೊಹಂತಿ
ಬೈಸಾಲಿ ಮೊಹಂತಿ (ಜನನ: ೫ ಆಗಸ್ಟ್ ೧೯೯೪) ಇವರು ಭಾರತೀಯ ಶಾಸ್ತ್ರೀಯ ನರ್ತಕಿ ಮತ್ತು ನೃತ್ಯ ಸಂಯೋಜಕಿ, ಲೇಖಕಿ, ಅಂಕಣಕಾರರು ಮತ್ತು ವಿದೇಶಿ ಮತ್ತು ಸಾರ್ವಜನಿಕ ನೀತಿಯ ವಿಶ್ಲೇಷಕರು. ಅಮೆರಿಕದ ವ್ಯಾಪಾರ ನಿಯತಕಾಲಿಕೆ ಫೋರ್ಬ್ಸ್, ದಿ ಹಫಿಂಗ್ಟನ್ ಪೋಸ್ಟ್, ದಿ ಡಿಪ್ಲೊಮ್ಯಾಟ್ ಮತ್ತು ಓಪನ್ ಡೆಮೋಕ್ರಸಿ, ಲಂಡನ್ ಸೇರಿದಂತೆ ಹಲವಾರು ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಕಟಣೆಗಳಿಗೆ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಕಾರ್ಯತಂತ್ರ ಕಾರ್ಯತಂತ್ರದ ವಿಷಯದ ಮೇಲೆ ಲೇಖನಗನ್ನು ಬರೆದಿದ್ದಾರೆ.[೧][೨][೩][೪][೫][೬] ಅವರು ಆಕ್ಸ್‌ಫರ್ಡ್ ಒಡಿಸ್ಸಿ ಕೇಂದ್ರದ ಸ್ಥಾಪಕರಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್‌ಡಂನ ಇತರ ಪ್ರಮುಖ ಸಂಸ್ಥೆಗಳಲ್ಲಿ ಒಡಿಸ್ಸಿ ನೃತ್ಯದ ಪ್ರಚಾರ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.[೭][೮]
ಬೈಸಾಲಿ ಮೊಹಂತಿ | |
---|---|
Born | ೧೯೯೪ ಆಗಸ್ಟ್ ೦೫ ಪುರಿ, ಒರಿಸ್ಸಾ |
Nationality | ಭಾರತೀಯರು |
Alma mater | ಆಕ್ಸ್‌ಫ಼ಾರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್ಡಮ್ ಲೇಡಿ ಶ್ರೀರಾಮ್ ಮಹಿಳೆಯರ ಕಾಲೇಜು, ದೆಹಲಿ |
Occupation(s) | ಭಾರತೀಯ ಶಾಸ್ತ್ರೀಯ ನರ್ತಕಿ ಮತ್ತು ನೃತ್ಯ ಸಂಯೋಜಕಿ, ಲೇಖಕಿ, ಅಂಕಣಕಾರರು ಮತ್ತು ವಿದೇಶಿ ಮತ್ತು ಸಾರ್ವಜನಿಕ ನೀತಿಯ ವಿಶ್ಲೇಷಕರು |
Works | ಪರಮಾಣು ರಾಜತಾಂತ್ರಿಕತೆ |
ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ೨೦೧೫-೧೬ನೇ ಸಾಲಿನ ಎಎಲ್‌ಸಿ ಗ್ಲೋಬಲ್ ಫೆಲೋ ಆಗಿದ್ದಾರೆ.[೯]
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಬೈಸಾಲಿ ಮೊಹಂತಿ ಅವರು ೧೯೯೪ ರ ಆಗಸ್ಟ್ ೫ ರಂದು ಒಡಿಶಾದ ಪುರಿಯಲ್ಲಿ ಜನಿಸಿದರು. ಇವರು ಒಡಿಶಾದ ಪುರಿಯಲ್ಲಿ ಪ್ರಸಿದ್ಧ ಸ್ತ್ರೀಸಮಾನತಾವಾದಿ, ಕವಿ ಮತ್ತು ಲೇಖಕಿಯಾದ ಮಾನಸಿ ಪ್ರಧಾನ್ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಲೆಕ್ಟ್ರಿಕಲ್ ಎಂಜಿನಿಯರ್ ರಾಧಾ ಬಿನೋಡ್ ಮೊಹಂತಿ ದಂಪತಿಗೆ ಜನಿಸಿದರು.[೧೦]
ಇವರು ಬ್ಲೆಸ್ಡ್ ಸಾಕ್ರಮೆಂಟ್ ಪ್ರೌಢಶಾಲೆ, ಪುರಿ ಮತ್ತು ಕೆಐಐಟಿ ಅಂತರರಾಷ್ಟ್ರೀಯ ಶಾಲೆ, ಭುವನೇಶ್ವರದಲ್ಲಿ ಶಿಕ್ಷಣ ಪಡೆದರು.[೧೧] ದೆಹಲಿಯ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜ್‌ನಿಂದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು.[೧೨]
ನ್ಯೂಕ್ಲಿಯರ್ ಡಿಪ್ಲೊಮಸಿ ಎಂಬ ವಿಷಯದ ಕುರಿತ ಪ್ರಬಂಧವನ್ನು ಬರೆಯುವುದರೊಂದಿಗೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಇವರು ಸ್ನಾತಕೋತ್ತರ ಪದವಿಯನ್ನು ಮೊದಲದರ್ಜೆಯಲ್ಲಿ ಗಳಿಸಿದರು.[೬]
ನೃತ್ಯ ವೃತ್ತಿ
ಬದಲಾಯಿಸಿಬೈಸಾಲಿ ಮೊಹಂತಿ ಅವರು ಒಡಿಸ್ಸಿ ಶೈಲಿಯ ನೃತ್ಯದಲ್ಲಿ ಪ್ರಖ್ಯಾತ ಒಡಿಸ್ಸಿ ಶಿಕ್ಷಕ, ಪದ್ಮಶ್ರೀ ಗುರು ಗಂಗಾಧರ ಪ್ರಧಾನ್ ಅವರಿಂದ ಒಂದು ದಶಕಕ್ಕೂ ಹೆಚ್ಚು ಕಾಲ ತರಬೇತಿ ಪಡೆದರು. ಮತ್ತೊಬ್ಬ ಪ್ರಖ್ಯಾತ ಒಡಿಸ್ಸಿ ಶಿಕ್ಷಕಿ ಮತ್ತು ನೃತ್ಯ ಸಂಯೋಜಕ ಪದ್ಮಶ್ರೀ ಗುರು ಇಲಿಯಾನಾ ಸಿಟಾರಿಸ್ಟಿ ಅವರಿಂದ ನೃತ್ಯ ಸಂಯೋಜನೆಯಲ್ಲಿ ಮುಂಗಡ ತರಬೇತಿ ಪಡೆದರು. ಅವರು ಒಡಿಸ್ಸಿ ನೃತ್ಯದಲ್ಲಿ ಪ್ರಥಮ ದರ್ಜೆ ಹೊಂದಿ ವಿಶಾರದ್ ಪದವಿ ಪಡೆದಿದ್ದಾರೆ.[೧೩]
ಅವರು ಹದಿನೈದು ವರ್ಷಗಳಿಂದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಉತ್ಸವಗಳಲ್ಲಿ ತಮ್ಮದೇ ನೃತ್ಯ ಸಂಸ್ಥೆ ''ಬೈಸಾಲಿ ಮೊಹಂತಿ ಮತ್ತು ತಂಡ" ದೊಂದಿಗೆ ಏಕವ್ಯಕ್ತಿ ಮತ್ತು ಗುಂಪು ನೃತ್ಯ ಸಂಯೋಜನೆಗಳನ್ನು ಪ್ರದರ್ಶಿಸಿದ್ದಾರೆ.[೧೪][೧೫]
ಆಕ್ಸ್‌ಫರ್ಡ್ ಒಡಿಸ್ಸಿ ಕೇಂದ್ರ
ಬದಲಾಯಿಸಿ2015 ರಲ್ಲಿ, ಅವರು ಭಾರತೀಯ ಶಾಸ್ತ್ರೀಯ ನೃತ್ಯವನ್ನು ವಾರ್ಸಿಟಿಯಲ್ಲಿ ಜನಪ್ರಿಯಗೊಳಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಆಕ್ಸ್‌ಫರ್ಡ್ ಒಡಿಸ್ಸಿ ಕೇಂದ್ರವನ್ನು ಸ್ಥಾಪಿಸಿದರು.[೧೬][೧೭][೧೮] ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸದಸ್ಯರಿಗಾಗಿ ನಿಯಮಿತ ಒಡಿಸ್ಸಿ ನೃತ್ಯ ತರಗತಿಗಳನ್ನು ನಡೆಸುವುದರ ಜೊತೆಗೆ, ಕೇಂದ್ರವು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್), ಕಿಂಗ್ಸ್ ಕಾಲೇಜ್ ಲಂಡನ್, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಆಫ಼್ ಎಡಿನ್ಬರ್ಗ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಒಡಿಸ್ಸಿ ನೃತ್ಯ ಕಾರ್ಯಾಗಾರಗಳನ್ನು ನಡೆಸುತ್ತದೆ .[೧೯][೨೦]
ಇವರು ಆಕ್ಸ್‌ಫರ್ಡ್ ಒಡಿಸ್ಸಿ ಉತ್ಸವದ ಸ್ಥಾಪಕಿಯೂ ಆಗಿದ್ದಾರೆ, ಆಕ್ಸ್‌ಫರ್ಡ್ ಒಡಿಸ್ಸಿ ಉತ್ಸವವು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಮೊದಲ ಭಾರತೀಯ ಶಾಸ್ತ್ರೀಯ ನೃತ್ಯೊತ್ಸವವಾಗಿದೆ.[೨೧][೨೨][೨೩][೨೪][೨೫]
ಪ್ರಶಸ್ತಿಗಳು
ಬದಲಾಯಿಸಿ೨೦೧೩ ರಲ್ಲಿ, ಒಟ್ಟೂ ಸಾಧನೆಗಳಿಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಮಹಿಳಾ ಆಯೋಗವು ಇವರನ್ನು ಸನ್ಮಾನಿಸಿತು.[೨೬] ಅದೇ ವರ್ಷದಲ್ಲಿ, ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತರಿಗೆ ಗೌರವ ಸಲ್ಲಿಸುವ ಅವರ ನೃತ್ಯ ಸಂಯೋಜನೆಯು ದೆಹಲಿ ವಿಶ್ವವಿದ್ಯಾಲಯದ ನೃತ್ಯ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತ್ತು.[೨೭]
೨೦೧೭ ರಲ್ಲಿ, ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಆರ್ಯ ಪ್ರಶಸ್ತಿಯನ್ನು, ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರಿಂದ ನೀಡಿಸಿ ಗೌರವಿಸಲಾಯಿತು.[೨೮][೨೯]
ಉಲ್ಲೇಖಗಳು
ಬದಲಾಯಿಸಿ- ↑ "Orissa POST E-Paper". Archived from the original on 5 May 2016. Retrieved 14 April 2016.
- ↑ https://www.forbes.com/sites/realspin/2016/10/04/has-modis-mantra-of-reform-perform-and-transform-failed-desperately/#50a3cfac73fa
- ↑ "ಆರ್ಕೈವ್ ನಕಲು". Archived from the original on 2017-08-19. Retrieved 2020-03-17.
- ↑ https://thediplomat.com/2016/11/can-the-nuclear-deal-with-japan-get-india-into-the-nuclear-suppliers-group/
- ↑ "Archived copy". Archived from the original on 23 June 2016. Retrieved 7 June 2016.
{{cite web}}
: CS1 maint: archived copy as title (link) - ↑ ೬.೦ ೬.೧ "Puri girl Baisali makes it to Oxford Varsity". Retrieved 14 April 2016.
- ↑ "Odissi beats to resonate at Oxford University". The Telegraph. Retrieved 14 April 2016.
- ↑ "ಆರ್ಕೈವ್ ನಕಲು". Archived from the original on 2016-12-24. Retrieved 2020-03-17.
- ↑ "Oxford India Society - About". Archived from the original on 26 ಏಪ್ರಿಲ್ 2016. Retrieved 14 April 2016.
- ↑ "Odisha: Odia girl Baisali Mohanty in class of Aung San Suu Kyi, Oriya Success Orbit, Odisha Latest Headlines". Archived from the original on 8 May 2016. Retrieved 16 April 2016.
- ↑ "The Pioneer". Retrieved 14 April 2016.
- ↑ "Odisha: Odia girl Baisali Mohanty in class of Aung San Suu Kyi, Oriya Success Orbit, Odisha Latest Headlines". Archived from the original on 8 May 2016. Retrieved 14 April 2016.
- ↑ "Odisha girl Baisali selected for Master's Degree at Oxford University, Oriya Success Orbit, Odisha Latest Headlines". Archived from the original on 8 May 2016. Retrieved 14 April 2016.
- ↑ "A Beautiful Fusion of Classical Dances". Telangana Today. Archived from the original on 7 ನವೆಂಬರ್ 2017. Retrieved 4 October 2017.
- ↑ "Archived copy". Archived from the original on 24 April 2016. Retrieved 14 April 2016.
{{cite web}}
: CS1 maint: archived copy as title (link) - ↑ http://www.telegraphindia.com/1160504/jsp/odisha/story_83592.jsp
- ↑ "Archived copy". Archived from the original on 2016-05-06. Retrieved 2016-06-07.
{{cite web}}
: CS1 maint: archived copy as title (link) - ↑ "Archived copy". Archived from the original on 2 June 2016. Retrieved 7 June 2016.
{{cite web}}
: CS1 maint: archived copy as title (link) - ↑ http://www.telegraphindia.com/1160113/jsp/odisha/story_63528.jsp
- ↑ "ಆರ್ಕೈವ್ ನಕಲು". Archived from the original on 2017-08-19. Retrieved 2020-03-17.
- ↑ "Archived copy". Archived from the original on 15 August 2016. Retrieved 7 June 2016.
{{cite web}}
: CS1 maint: archived copy as title (link) - ↑ http://www.dailypioneer.com/state-editions/bhubaneswar/odishi-fest-at-oxford-varsity-from-today.html
- ↑ "ಆರ್ಕೈವ್ ನಕಲು". Archived from the original on 2017-08-19. Retrieved 2020-03-17.
- ↑ http://www.citynewsline.co.uk/news/odissi-festival-to-be-held-at-oxford-university-on-may-27
- ↑ http://www.dailypioneer.com/state-editions/bhubaneswar/odishi-at-oxford-enthrals-foreigners.html
- ↑ "Odissi Centre to open at Oxford University from 2016". Archived from the original on 12 May 2016. Retrieved 16 April 2016.
- ↑ "Baisali Mohanty wins DU dance competition". Retrieved 14 April 2016.
- ↑ "12 women achievers get Arya Award". The Pioneer. Retrieved 4 October 2017.
- ↑ "12 women achievers awarded by Kailash Satyarthi". Pragativadi. Archived from the original on 7 ನವೆಂಬರ್ 2017. Retrieved 4 October 2017.
ಬಾಹ್ಯ ಲಿಂಕ್‌ಗಳು
ಬದಲಾಯಿಸಿ- http://www.oxfordindias Society.org.uk/about Archived 2016-04-26 ವೇಬ್ಯಾಕ್ ಮೆಷಿನ್ ನಲ್ಲಿ.
- https://www.facebook.com/baisalimohanty/
- https://www.opendemocracy.net/author/baisali-mohanty Archived 2017-08-19 ವೇಬ್ಯಾಕ್ ಮೆಷಿನ್ ನಲ್ಲಿ.
- http://www.huffingtonpost.com/author/baisali-mohanty
- http://scroll.in/authors/3426