ದೆಹಲಿ ಗ್ಯಾಂಗ್​ ರೇಪ್ ಪ್ರಕರಣ

ಡಿಸೆಂಬರ್ ೧೬, ೨೦೧೨ರಂದು ಭಾರತದ ರಾಜಧಾನಿ ದೆಹಲಿಯಲ್ಲಿ ವೈದ್ಯವಿದ್ಯಾರ್ಥಿನಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ನಲ್ಲಿ ಆರು ಮಂದಿ ದುಷ್ಕರ್ಮಿಗಳು ಕಬ್ಬಿಣದ ಸರಳಿನಿದ ಹೊಡೆಯುವ ಮೂಲಕ ದಾರುಣವಾಗಿ ಅತ್ಯಾಚಾರ ಮಾಡಿದ್ದರು. ಈ ಪೈಶಾಚಿಕ ಘಟನೆಯಿಂದಾಗಿ ದುದರ್ೈವಿ ಯುವತಿಯ ತಲೆ ಹಾಗೂ ಕರುಳಿಗೆ ತೀವ್ರವಾದ ಗಾಯಗಳುಂಟಾಗಿದ್ದವು. ೧೩ ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡಿದ ಯುವತಿ ಅಂತಿಮವಾಗಿ ೨೯, ಡಿಸೆಂಬರ್ ೨೦೧೨ರಂದು ಕೊನೆಯುಸಿರೆಳೆದಳು. ಡಿಸೆಂಬರ್ ೧೬ರ ಸಂಜೆ ಅತ್ಯಾಚಾರಕ್ಕೊಳಗಾದ ಯುವತಿ ಗೆಳೆಯನೊಂದಿಗೆ ದಬಾಂಗ್ ೨ ಸಿನಿಮಾ ನೋಡಲು ಹೋಗಿದ್ದಳು. ಸಿನಿಮಾ ನೋಡಿ ಬಂದ್ ಇಬ್ಬರೂ ೫ ಮಂದಿ ಪ್ರಯಾಣಿಸುತ್ತಿದ್ದ ಬಸ್ ಹತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಜೊತೆಗಿದ್ದ ಗೆಳೆಯನಿಗೆ ಕಬ್ಬಿಣದ ಸರಳಿನಿಂದ ಹೊಡೆದು, ಒಂದು ಗಂಟೆಯವರೆಗೂ ಯುವತಿಯ ಮೇಲೆ ಐವರು ಅತ್ಯಾಚಾರ ನಡೆಸಿದ್ದಾರೆ. ನಂತರ ಚಲಿಸುತ್ತಿದ್ದ ಬಸ್ನಿಂದ ಇಬ್ಬರನ್ನೂ ಹೊರಕ್ಕೆಸೆದಿದ್ದಾರೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಂದಿಬ್ಬರು ವಿವಸ್ತ್ರವಾಗಿ, ಅರೆಚೇತನ ಸ್ಥಿತಿಯಲ್ಲಿ ಬಿದ್ದಿದ್ದವರ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ದೆಹಲಿ ಪೊಲೀಸರು ಆ ಇಬ್ಬರನ್ನು ಸಪ್ದರ್ಜಂಗ್ ಆಸ್ಪತ್ರೆಗೆ ಸೇರಿಸಿದರು. ತುತರ್ು ಚಿಕಿತ್ಸ ಘಟಕಕ್ಕೆ ಸೇರಿಸಿ, ಉದರ ಸಂಬಂಧಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ನಂತರ ಆಕೆಯನ್ನು ವೆಂಟಿಲೇಟರ್ಗೆ ಹಾಕಲಾಯಿತು. ಡಿಸೆಂಬರ್ ೨೬ ರಂದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರಿನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಸೇರಿಸಲಾಯಿತು. ಏನೆಲ್ಲಾ ಪ್ರಯತ್ನ, ಚಿಕಿತ್ಸೆಗಳು ನಡೆಸಿದರು ಅಂತಿಮವಾಗಿ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಹೊಸ ವರ್ಷಕ್ಕೆ ಎರಡು ದಿನ ಮುನ್ನ ಇಡೀ ಭಾರತವನ್ನು ಶೋಕ ಸಾಗರಕ್ಕೆ ತಳ್ಳಿ, ಇಹಲೋಕ ತ್ಯಜಿಸಿದಳು. ಡಿಸೆಂಬರ್ ೨೧ರಂದು ಬಸ್ ಡ್ರೈವರ್ ಸಮೇತ ಆರು ಮಂದಿಯನ್ನು ಪೊಲೀಸರು ಬಂಧಿಸಿದರು. ಈ ದುರ್ಘಟನೆ ದೇಶವ್ಯಾಪಿ ಸಂಚಲನವನ್ನುಂಟುಮಾಡ್ತು. ಮಂದಿ ಸಾಮೂಹಿಕ ಅತ್ಯಾಚಾರವನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಜರುಗಿದವು.

೨೩ ವರ್ಷದ ವೈದ್ಯ ವಿದ್ಯಾಥರ್ಿನಿ ಹಾಗೂ ಆಕೆಯ ಗೆಳೆಯ ಜೊತೆಗೂಡಿ ದೆಹಲಿಇಯ ಸಾಕೆತ್ ಬಳಿ ಚಿತ್ರಮಂದಿವೊಂದರಲ್ಲಿ ದಬಾಂಗ್ ೨ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿಸಿಕೊಂಡು ಹೊರಬಂದಾಗ ಸಮಯ ರಾತ್ರಿ ೯.೩೦ ಆಗಿತ್ತು. ಆ ವೇಳೆ ಒಂದು ಖಾಸಗಿ ಬಸ್ ಹತ್ತಿದ್ದಾರೆ. ಆ ಬಸ್ನಲ್ಲಿ ಚಾಲಕನನ್ನು ಒಳಗೊಂಡು ಆರು ಮಂದಿ ಪ್ರಯಾಣಿಕರಿದ್ದರು. ಬಸ್ನೊಳಗಿದ್ದ ಮಂದಿ ನಗರದ ಕೊಳೆಗೇರಿಗೆ ಸೇರಿದ್ದವರಾಗಿದ್ದರು. ಡ್ರೈವರ್ ಹಾದಿ ತಪ್ಪಿಸಿದ್ದಲ್ಲದೇ ಚಲಿಸುತ್ತಿದ್ದ ಬಸ್ನ ಬಾಗಿ ಹಾಕಿದ್ದಾರೆ. ಇದೇಕೆ ಹೀಗೆ ಮಾಡ್ತಿದ್ದಾರ? ಅಂತ ಆಕೆಯ ಗೆಳೆಯ ಕೇಳಿದ್ದಾನೆ. ಅಲ್ಲಿದ್ದ ಪ್ರಯಾಣಿಕ, `ರಾತ್ರಿ ಹೊತ್ತು ನಿನಗೆ ಏನು ಕೆಲಸ?' ಅಂತ ಪ್ರಶ್ನೆ ಮಾಡುವ ಮೂಲಕ ಆಕೆಯ ಹತ್ತಿರ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಅದನ್ನು ತಡೆಯಲು ಬಂದ ಗೆಳೆಯನಿಗೆ ಕಬ್ಬಿಣದ ಸರಳಿನಿಂದ ಹೊಡೆದು ಪ್ರಜ್ಞೆತಪ್ಪುವಂತೆ ಮಾಡಿದ್ದಾರೆ. ಆ ನಂತರ ಯುವತಿಯನ್ನು ಒಬ್ಬೊಬ್ಬರಾಗಿ ಪೀಡಿಸಲು ಶುರು ಮಾಡಿದ್ದಾರೆ. ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಯುವತಿ ದುರುಳರ ಕೈ ಕಚ್ಚಿದ್ದಾಳೆ. ಇದ್ದರಿಂದ ರಿಚ್ಚಿಗೆದ್ದ ದುಷ್ಕಮರ್ಿಗಳು ಆಕೆಗೂ ಸರಳಿನಿಂದ ಹೊಡೆದಿದ್ದಾರೆ. ಒಂದು ಗಂಟೆಗಳ ಕಾಲ ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಮೇಲೆರಗಿ ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಒಬ್ಬೊಬ್ಬರಾಗಿ ಬಸ್ ಚಲಿಸುವ ಮೂಲಕ, ಅತ್ಯಾಚಾರ ಮಾಡಿದ್ದಾರೆ. ಕೊನೆಗೆ ಕಬ್ಬಿಣದ ಸರಳನ್ನು ಆಕೆಯ ಮರ್ಮಾಂಗಕ್ಕೆ ಚುಚ್ಚುವ ಮೂಲಕ ದಾರುಣವಾಗಿ ಗಾಯಗೊಳಿಸಿ ಆಕೆಯನ್ನು ಹಾಗೂ ಆಕೆಯ ಗೆಳೆಯನನ್ನು ರಸ್ತೆಯ ಮೇಲೆ ಎಸೆದು ಹೋಗಿದ್ದಾರೆ. ಸುದ್ದಿ ತಿಳಿದ ದೆಹಲಿ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆ, ಕರುಳು, ಮರ್ಮಾಂಗಕ್ಕೆ ತೀವ್ರವಾಗಿ ಗಾಯವಾಗಿವೆ ಅಂತ ತಿಳಿಸಿದರು. ವಿಕೃತ ಕಾಮಿಗಳು ಆಕೆಯ ಮಮಾಂಗಕ್ಕೆ ಕಬ್ಬಿಣದ ಸರಳಿನಿಂದ ಚುಚ್ಚಿದ್ದರಿಂದಾಗಿ ಆಕೆಯಲ್ಲಿ ಉಳಿದಿದ್ದು ಕೇವಲ ೫% ಕರುಳು ಮಾತ್ರ.

ಬಾಧಿತರು

ಬದಲಾಯಿಸಿ

ವೈದ್ಯ ವಿದ್ಯಾರ್ಥಿನಿಯ ಪೋಷಕರು ಉತ್ತರ ಪ್ರದೇಶದ ಬಾಲಿಯ ಜಿಲ್ಲೆಗೆ ಸೇರಿದವರು. ಆಕೆಯದ್ದು ಕೃಷಿಕ ಕುಟುಂಬ. ಬಡತನವೇ ಮನೆ ತುಂಬಿಕೊಂಡಿತ್ತು. ಮಗಳ ಶಿಕ್ಷಣಕ್ಕಾಗಿ ಜೀವನಾಂಶಕ್ಕಾಗಿ ಇದ್ದ ಮೂರು ಕುಂಟೆ ಜಮೀನನ್ನು ಮಾರಿದ್ದರು. ಆಗಾಗಾ ಮಾತ್ರ ದೆಹಲಿಗೆ ಬರುತ್ತಿದ್ದರು. ಮೃತ ದುರ್ದೈವಿ ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ. ಭದ್ರತೆಯ ಕಾರಣಕ್ಕಾಗಿ ಆಕೆಯನ್ನು ಜ್ಯೋತಿ, ಜಾಗೃತಿ, ಅಮಾನತ್, ನಿರ್ಭಯ ಹಾಗೂ ದಾಮಿನಿ ಅಂತ ಕರೆಯಲಾಗುತ್ತದೆ. ನವದೆಹಲಿಯ ಬೆರ್ ಸರೈ ಪ್ರಾಂತ್ಯದಲ್ಲಿ ಜೀವಿಸುತ್ತಿದ್ದಳು.

ಚಿಕಿತ್ಸೆ ಮತ್ತು ಮರಣ

ಬದಲಾಯಿಸಿ

ಡಿಸೆಂಬರ್ ೧೯ ರಂದು ಗಾಯಗೊಂಡು ಆಕೆಗೆ ಗ್ಯಾಂಗ್ರಿನ್ ತಗುಲಿಕೊಂಡಿತ್ತು. ನರಗಳ ಮೂಲಕ ಔಷಧ ಹಾಗೂ ಪೋಷಣೆ ಮಾಡಲಾಯಿತು. ಡಿಸೆಂಬರ್ ೨೧ ರಂದು ಸರಕಾರ ಆಕೆಗಾಗಿ ಅತ್ಯುತ್ತಮ ವೈದ್ಯ ಸಮಿತಿಯನ್ನು ನೇಮಕ ಮಾಡಿತು. ೨೫ ಡಿಸೆಂಬರ್ ಕಳೆದರೂ ಆಯ್ಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರ್ನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಂತಿಮವಗಿ ಅಲ್ಲಿಯೂ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಸಾವಿನೊಂದಿಗೆ ಹೋರಾಡುತ್ತಲೇ ಡಿಸೆಂಬರ್ನ ೨೯ರ ಬೆಳಗ್ಗೆ ೪.೪೫ಕ್ಕೆ ಕೊನೆಯುಸಿರೆಳೆದಳು.

ಆರೋಪಿಗಳು

ಬದಲಾಯಿಸಿ

ವೈದ್ಯ ವಿದ್ಯಾರ್ಥಿನಿಯ ಮೇಲೆರಗಿ ಪೈಶಾಚಿಕ ಕೃತ್ಯವೆಸಗಿದ ದು‍‍ಷ್ಕರ್ಮಿಗಳನ್ನು ಬಂಧಿಸಲಾಯಿತು. ಬಸ್ ಚಾಲಕ ರಾಮ್ ಸಿಂಗ್. ಅವನ ತಮ್ಮ ಮುಕೇಶ್ ಸಿಂಗ್ ರನ್ನು ರಾಜಸ್ತಾನದಲ್ಲಿ ಬಂಧಿಸಿದರು. ವನಯ್ ಶರ್ಮ ಅನ್ನೋ ಜಿಮ್ ಇನ್ಸ್ ಟ್ರಕ್ಟರ್ ಅನ್ನು ದೆಹಲಿಯಲ್ಲಿ ಬಂಧಿಸಿದರು. ಹಾಗಯೇ ಹಣ್ಣಿನ ವ್ಯಾಪಾರಿಯಾಗಿದ್ದ ಪವನ್ ಗುಪ್ತ, ಅಪ್ರಾಪ್ತನಾದ ರಾಜು, ಬಿಹಾರದಿಂದ ಕೆಲಸಕ್ಕೆ ಬಂದಿದ್ದ ಅಕ್ಷಯ್ ಠಾಕೂರ್ ನನ್ನು ಬಂಧಿಸಿದ್ದಾರೆ. ಬಂಧಿತರನ್ನು ತಿಹಾರ್ ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಹಾಕಲಾಗಿದೆ.