ಬಿಳಿ ಎಕ್ಕ
ಬಿಳಿ ಎಕ್ಕ ಗಿಡವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಸಿಗುವಂತಹದ್ದು. ಆದರೆ ಪುರಾತನವಾದ ಗಿಡವು ಸಿಗುವುದು ದುರ್ಲಭವಾಗಿರುವುದು. ಎಕ್ಕ ಗಿಡದಲ್ಲಿ ಗುಲಾಬಿ, ನೀಲಿ ಬಣ್ಣದ ಹೂಗಳಿರುವಂತಹ ಸಸ್ಯಗಳು ಎಲ್ಲಾ ಕಡೆಗಳಲ್ಲಿ ಸಿಗುವುವು ಆದರೆ ಬಿಳಿ ಎಕ್ಕದ ಗಿಡ ಸಿಗುವುದು ವಿರಳ. ಇದನ್ನು ಶ್ವೇತಾರ್ಕವೆಂದೂ ಕರೆಯುತ್ತಾರೆ. ಈ ಗಿಡವು ೬ ರಿಂದ ೭ ಅಡಿ ಎತ್ತರವಾಗಿ,೪ ರಿಂದ ೫ ಅಡಿ ವಿಸ್ತಾರವನ್ನು ಹೊಂದಿರುತ್ತದೆ. ಸುತ್ತಲೂ ಹರಡಿಕೊಂಡಿರುವ ಸಸ್ಯವಿದಾಗಿದೆ. ಇನ್ನೂ ಹೆಚ್ಚು ಹರಡಿರುವ ಸಾಧ್ಯತೆಯೂ ಇದೆ. ಈ ಸಸ್ಯಕ್ಕೆ ಬಲಿಷ್ಠವಾದ ಟೊಂಗೆಗಳಿದ್ದು,ವಟವೃಕ್ಷದ ಎಲೆಗಳಂತೆ ಎಲೆ ಹೊಂದಿರುತ್ತದೆ. ಬಿಳಿ ಹಾಲಿನಂತೆ ಬಣ್ಣ ಹೊಂದಿದ ಹೂಗಳಿದ್ದು,ಬೀಜಗಳು ಅಗಸೇ ಗಿಡದ ಬೀಜಗಳಂತಿರುತ್ತವೆ. ಈ ಗಿಡದಲ್ಲಿ ಬಿಳಿಯ ಹೂಗಳಾಗುತ್ತವೆ. ಭಾರತದಲ್ಲಿ ಅನೇಕ ರೀತಿಯಲ್ಲಿರುವ ಎಕ್ಕ ಸಸ್ಯಗಳನ್ನು ಪಡೆಯಬಹುದಾಗಿದೆ. ಬಹಳಷ್ಟು ನೀಲಿ ಬಣ್ಣದಲ್ಲಿರುವುವು. ಕೆಲವು ಕಂದು ಬಣ್ಣದಲ್ಲಿರುತ್ತವೆ. ಎಕ್ಕ ಗಿಡಕ್ಕೆ ಸಸ್ಯಗಳಲ್ಲಿಯೇ ವಿಶೇಷವಾದ ಸ್ಥಾನವಿರುವುದು,ತಾಂತ್ರಿಕ ಪ್ರಯೋಗಗಳಲ್ಲಿ ಸಹ ಅನೇಕ ರೀತಿಯಿಂದ ಎಕ್ಕ ಗಿಡದ ಭಾಗಗಳನ್ನು ಉಪಯೋಗಿಸುತ್ತಾರೆ. ಕನಿಷ್ಠ ೨೭ ವರ್ಷಗಳಷ್ಟು ಹಳೆಯದಾದ ಎಕ್ಕ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವವಿರುವುದು. ಈ ಗಿಡದ ಬೇರಿನಲ್ಲಿ ಗಣೇಶನ ಮೂರ್ತಿಯ ನಿರ್ಮಾಣವಾಗಿರುತ್ತದೆ. ಇದೊಂದು ಪ್ರಕೃತಿಯ ಆಶ್ಚರ್ಯವೆಂದರೆ ತಪ್ಪಿಲ್ಲ. ಈ ರೀತಿಯ ಎಕ್ಕದ ಬೇರನ್ನು ಪಡೆಯಲು ೫೬ ಅಡಿಗಳಷ್ಟು ನೆಲವನ್ನು ಅಗೆದು ತೆಗೆಯಬೇಕಾಗುವುದು. ಹಿಂದಿನ ಕಾಲದಲ್ಲಿ ಸಿದ್ಧರು ತಾವು ಅನೇಕ ಬಿಳಿ ಎಕ್ಕ ಮೂರ್ತಿಗಳನ್ನು ಸಂಪಾದಿಸಿ ಸಂಗ್ರಹಿಸಿಡುತ್ತಿದ್ದರು. ತಮ್ಮ ಚೀಲಗಳಲ್ಲಿಟ್ಟು ಬೇರೆ ಬೇರೆ ಊರುಗಳಿಗೆ ಹೋಗುವಾಗ ಸತ್ಪಾತ್ರರಿಗೆ ಅದನ್ನು ಪ್ರಸಾದಿಸುತ್ತಿದ್ದರು. ಈ ರೀತಿಯ ಮಹಿಮೆಯನ್ನು ಇಂದು ವಿರಳವಾಗಿ ಕಾಣಬಹುದಾಗಿದೆ. ಅತಿ ಹಳೆಯ ಎಕ್ಕ ಗಿಡದ ಬೇರನ್ನು ತೆಗೆಯಲು ತುಂಬಾ ಆಳವಾಗಿ ಅಗೆಯ ಬೇಕಾಗುವುದು. ಗುದ್ದಲಿಯನ್ನು ಬಳಸಿ ಈ ಗಣಪತಿಯ ಮೂರ್ತಿಯನ್ನು ಎಚ್ಚರಿಕೆಯಿಂದಲೇ ಹೊರಗೆ ತೆಗೆಯಬೇಕು. ಗಿಡದ ಅವಧಿ ಹೆಚ್ಚಾದಂತೆ ಗಣಪತಿ ಮೂರ್ತಿಯು ಅತಿ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದಾಗಿದೆ. ಅದಕ್ಕಾಗಿ ಶ್ರಮಪಟ್ಟು ಹುಡುಕಿ ಪಡೆಯಬೇಕಾಗುವುದು.[೧]
ಬಿಳಿ ಎಕ್ಕ ಸಸ್ಯಕ್ಕಿರುವ ಹೆಸರುಗಳು
ಬದಲಾಯಿಸಿಹಿಂದಿ ಭಾಷೆಯಲ್ಲಿ -ಆಕೆ;ಅಕೌಡ ಸಂಸ್ಕೃತದಲ್ಲಿ -ಅರ್ಕ;ಪಂಜಾಬಿಯಲ್ಲಿ -ಆಕ್;ಉರ್ದು ಭಾಷೆಯಲ್ಲಿ-ವಂದಾರ;ಗುಜರಾತಿಯಲ್ಲಿ-ಅಕಡಾ;ಕನ್ನಡದಲ್ಲಿ-ಎಕ್ಕ. ಔಷದೀಯ ಉಪಯೋಗ
ತಂತ್ರಶಾಸ್ತ್ರದಲ್ಲಿ ಎಕ್ಕ ಗಿಡದ ಬಳಕೆ
ಬದಲಾಯಿಸಿತಂತ್ರಶಾಸ್ತ್ರದಲ್ಲಿ ಎಕ್ಕ ಗಿಡದ ಬೇರು,ಎಲೆ,ಹಾಲು ಶ್ರೇಷ್ಠ ಔಷಧಿ ಎಂದು ತಿಳಿಯಲಾಗಿದೆ. ಎಕ್ಕ ಗಿಡದ ಹಾಲನ್ನು ಆಕಳ ತುಪ್ಪದಲ್ಲಿ ಸೇರಿಸಿ ಪಾಕಗೊಳಿಸಲಾಗುತ್ತದೆ.[೨]
ಔಷದೀಯ ಉಪಯೋಗ
ಬದಲಾಯಿಸಿಮೂಲವ್ಯಾಧಿ
ಬದಲಾಯಿಸಿಮೂಲವ್ಯಾಧಿಯು ಉಷ್ಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗವಾಗಿರುವುದು. ಮಲಬದ್ಧತೆ ಆಹಾರದೋಷಗಳು ಮೂಲವ್ಯಾಧಿಗೆ ಕಾರಣಗಳಾಗಿವೆ. ಆಯುರ್ವೇದದಲ್ಲಿ ಉತ್ತಮವಾದ ಹಲವು ಚಿಕಿತ್ಸೆಗಳು ಜಾರಿಯಲ್ಲಿವೆ.
ವಿಷ ಪರಿಹಾರಕ್ಕಾಗಿ ಎಕ್ಕ ಗಿಡದ ಉಪಯೋಗ
ಬದಲಾಯಿಸಿಎಕ್ಕದ ಬೇರನ್ನು ತಂದು ತಣ್ಣೀರಿನಲ್ಲಿ ಅರೆದು ಚೇಳು ಕಡಿದವರಿಗೆ ಕುಡಿಸುವುದರಿಂದ ವಿಷದ ಬಾಧೆಯು ನಿವಾರಣೆಯಾಗುವುದು. ಎಕ್ಕದ ಹಾಲು, ಎಲೆ,ಬೇರುಗಳಿಂದ ಹಲವಾರು ರೋಗಗಳ ನಿವಾರಣೆಯಾಗುತ್ತದೆ.[೩]