ಪ್ರಸಾದ
ಪ್ರಸಾದ ಹಿಂದೂ ಧರ್ಮ ಮತ್ತು ಸಿಖ್ ಧರ್ಮದಲ್ಲಿ ಆರಾಧಕರಿಂದ ಸೇವಿಸಲಾದ ಧಾರ್ಮಿಕ ಅರ್ಪಣೆಯಾದ ಆಹಾರದ ಒಂದು ಭೌತಿಕ ವಸ್ತು. ಅಕ್ಷರಶಃ ಒಂದು ಗೌರವಯುತ ಉಡುಗೊರೆ. ಮೊದಲು ದೇವರು, ಸಂತ, ಅವತಾರನಿಗೆ ಅರ್ಪಿಸಲಾದ ಮತ್ತು ನಂತರ ಅವನ ಅಥವಾ ಅವಳ ಹೆಸರಿನಲ್ಲಿ ಅವರ ಅನುಯಾಯಿಗಳಿಗೆ ಅಥವಾ ಇತರರಿಗೆ ವಿತರಿಸಲಾದ ಯಾವುದಾದರೂ, ಸಾಮಾನ್ಯವಾಗಿ ತಿನ್ನಬಹುದಾದ ಆಹಾರ, ಒಂದು ಶುಭ ಚಿಹ್ನೆಯಾಗಿದೆ.