ಬಿಜಾಪೂರ ತಾಲ್ಲೂಕು

ಬಿಜಾಪೂರ ಒಂದು ನಗರ, ಪುಣ್ಯಕ್ಷೇತ್ರ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರ .ಇದು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಯಲ್ಲಿದೆ.

ಬಿಜಾಪೂರ ತಾಲ್ಲೂಕು
ಬಿಜಾಪೂರ
village
Population
 (೨೦೧೨)
 • Total೩೫೦೦೦
Websitewww.bijapur.nic.in

ಚರಿತ್ರೆ

ಬದಲಾಯಿಸಿ

ನಗರವು ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಭೌಗೋಳಿಕ

ಬದಲಾಯಿಸಿ

ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ವಿಜಾಪುರ ತಾಲ್ಲೂಕವು ೧೧೫ ಹಳ್ಳಿಗಳು, ೪೪ ಗ್ರಾಮ ಪಂಚಾಯತಗಳು, ಮತ್ತು ೩ ಹೊಬಳ್ಳಿಗಳನ್ನೊಳಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಾಪುರ ಜಿಲ್ಲೆಯ ವಿಜಾಪುರ ತಾಲ್ಲೂಕಿನಲ್ಲಿ ತಿಕೋಟಾ ಮತ್ತು ಬಬಲೇಶ್ವರ ನಗರಗಳನ್ನು ಹೊಸ ತಾಲ್ಲೂಕಗಳನ್ನಾಗಿ ರಚಿಸಿದೆ.

ಧರ್ಮಗಳು

ಬದಲಾಯಿಸಿ

ಬಿಜಾಪೂರ ತಾಲ್ಲೂಕಿನ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.

ಭಾಷೆಗಳು

ಬದಲಾಯಿಸಿ

ತಾಲ್ಲೂಕಿನ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ಕೃಷಿ ಬಿಜಾಪೂರ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭೀಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ದೇವಾಲಯಗಳು

ಬದಲಾಯಿಸಿ

ಶ್ರೀ ಸಿದ್ದೇಶ್ವರ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಬದಲಾಯಿಸಿ

ಬಿಜಾಪೂರ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಬದಲಾಯಿಸಿ

ಪ್ರಮುಖ ಶಿಕ್ಷಣ ಸಂಸ್ಥೆಗಳು

ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳ ಸಂಖ್ಯೆ

  • ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ,ಬಬಲೇಶ್ವರ, ಬಿಜಾಪೂರ

ಕೇಂದ್ರೀಯ ಪಠ್ಯ ಕ್ರಮದ ಮಹಾವಿದ್ಯಾಲಯಗಳು

  • ಸೈನಿಕ ಶಾಲೆ,ವಿಜಾಪೂರ
  • ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆ, ಕವಲಗಿ, ವಿಜಾಪೂರ
  • ಬಿ.ಎಂ.ಪಾಟೀಲ ಅಂತರಾಷ್ಟ್ರೀಯ ಶಾಲೆ, ವಿಜಾಪೂರ
  • ಶಾರದಾ ಅಂತರಾಷ್ಟ್ರೀಯ ಶಾಲೆ, ವಿಜಾಪೂರ
  • ಬಿ.ಟಿ.ಪಾಟೀಲ ಸ್ಮಾರಕ ನಂದಿ ಅಂತರಾಷ್ಟ್ರೀಯ ವಸತಿ ಶಾಲೆ, ಚಿಕ್ಕಗಲಗಲಿ, ವಿಜಾಪೂರ
  • ಕೇಂದ್ರೀಯ ವಿದ್ಯಾಲಯ, ವಿಜಾಪೂರ
  • ಡಪ್ಪೊಡಿಲ್ಸ್ ಅಂತರಾಷ್ಟ್ರೀಯ ಶಾಲೆ, ವಿಜಾಪೂರ
  • ಪ್ರೇರಣಾ ಅಂತರಾಷ್ಟ್ರೀಯ ಶಾಲೆ, ಭೂತನಾಳ, ವಿಜಾಪೂರ

ಕೃಷಿ ಮಹಾವಿದ್ಯಾಲಯ

  • ಕೃಷಿ ಮಹಾವಿದ್ಯಾಲಯ,ಹಿಟ್ಟಿನಹಳ್ಳಿ , ಬಿಜಾಪೂರ

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ಆರಕ್ಷಕ (ಪೋಲಿಸ್) ಠಾಣೆ

ಬದಲಾಯಿಸಿ

ವಿಜಾಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು

  • ಪೋಲಿಸ್ ಠಾಣೆ, ಬಬಲೇಶ್ವರ
  • ಪೋಲಿಸ್ ಠಾಣೆ, ತಿಕೋಟಾ

ವಿದ್ಯುತ್ ಪರಿವರ್ತನಾ ಕೇಂದ್ರಗಳು

ಬದಲಾಯಿಸಿ

ಬಿಜಾಪೂರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೨೨೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜಾಪೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಿಕೋಟಾ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮಮದಾಪುರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಶಿರಬೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ಬಿಜಾಪೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜಾಪೂರ ನಗರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಭೂತನಾಳ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಬಲೇಶ್ವರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಿಡಗುಂದಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೊನ್ನುಟಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಗೇಣ್ಣೂರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಬಲೇಶ್ವರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜ್ಜರಗಿ

ಬ್ಯಾಂಕಗಳು

ಬದಲಾಯಿಸಿ

ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ

ರಾಷ್ತ್ರೀಕೃತ ಬ್ಯಾಂಕುಗಳು

  • ಎಸ್.ಬಿ.ಐ.ಬ್ಯಾಂಕ - ವಿಜಾಪುರ, ಕನ್ನೂರ.
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ - ವಿಜಾಪುರ, ಅರ್ಜುಣಗಿ, ಹೊನವಾಡ,ಹೊನ್ನುಟಗಿ, ಕನಮಡಿ, ಜೈನಾಪೂರ, ನಾಗಠಾಣ, ಸಾರವಾಡ, ತಿಕೋಟಾ, ಜಂಬಗಿ, ಬಬಲೇಶ್ವರ.
  • ಐ.ಎನ್.ಜಿ ವೈಶ್ಯ ಬ್ಯಾಂಕ್ - ವಿಜಾಪುರ
  • ಸಿಂಡಿಕೇಟ್ ಬ್ಯಾಂಕ್ - ವಿಜಾಪುರ, ಬಿಜ್ಜರಗಿ,, ಹೊನಗನಹಳ್ಳಿ , ಮಮದಾಪೂರ.
  • ಎಚ್.ಡಿ.ಎಪ್.ಸಿ.ಬ್ಯಾಂಕ್ - ವಿಜಾಪುರ
  • ಐ.ಡಿ.ಐ.ಬಿ.ಬ್ಯಾಂಕ್ - ವಿಜಾಪುರ
  • ಐ.ಸಿ.ಐ.ಸಿ.ಐ.ಬ್ಯಾಂಕ್ - ವಿಜಾಪುರ
  • ಎಸ್.ಬಿ.ಎಮ್.ಬ್ಯಾಂಕ್ - ವಿಜಾಪುರ
  • ಎಸ್.ಬಿ.ಎಚ್.ಬ್ಯಾಂಕ್ - ವಿಜಾಪುರ
  • ಕೆನರಾ ಬ್ಯಾಂಕ್ - ವಿಜಾಪುರ
  • ಕಾರ್ಪೋರೇಶನ್ ಬ್ಯಾಂಕ್ - ವಿಜಾಪುರ
  • ವಿಜಯ ಬ್ಯಾಂಕ್ - ವಿಜಾಪುರ, ಬಬಲೇಶ್ವರ
  • ಬ್ಯಾಂಕ್ ಆಫ್ ಮಹಾರಾಷ್ಟ್ರ - ವಿಜಾಪುರ
  • ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ, ಶಿವಣಗಿ.
  • ಪಂಜಾಬ್ ನ್ಯಾಶನಲ್ ಬ್ಯಾಂಕ್ - ವಿಜಾಪುರ
  • ಆಕ್ಸಿಸ್ ಬ್ಯಾಂಕ್ - ವಿಜಾಪುರ
  • ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ
  • ಬ್ಯಾಂಕ್ ಆಫ್ ಬರೋಡ - ವಿಜಾಪುರ
  • ಇಂಡಸಲ್ಯಾಂಡ್ ಬ್ಯಾಂಕ್ - ವಿಜಾಪುರ
  • ಇಂಡಿಯನ್ ಬ್ಯಾಂಕ್ - ವಿಜಾಪುರ
  • ಇಂಡಿಯನ್ ಒವರಸೀಸ್ ಬ್ಯಾಂಕ್ - ವಿಜಾಪುರ
  • ದೇನಾ ಬ್ಯಾಂಕ್ - ವಿಜಾಪುರ
  • ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್ - ವಿಜಾಪುರ
  • ಆಂಧ್ರ ಬ್ಯಾಂಕ್ - ವಿಜಾಪುರ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ
  • ಅಲಹಾಬಾದ್ ಬ್ಯಾಂಕ್ - ವಿಜಾಪುರ

ಖಾಸಗಿ ಬ್ಯಾಂಕುಗಳು

  • ಕರ್ನಾಟಕ ಬ್ಯಾಂಕ್ - ವಿಜಾಪುರ
  • ಡಿ.ಸಿ.ಸಿ.ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ) ಹಾಗೂ ಶಾಖೆಗಳು

ಬಬಲೇಶ್ವರ, ಬಿಜಾಪೂರ, ತಿಕೋಟಾ, ಕೃಷ್ಣಾನಗರ.

ಬಿಜಾಪೂರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಬದಲಾಯಿಸಿ

ಆಹೇರಿ, ಐನಾಪೂರ, ಅಗಸನಹಳ್ಳಿ, ಅಳಗಿನಾಳ, ಅಲಿಯಾಬಾದ್, ಅಂಕಲಗಿ, ಅರಕೇರಿ, ಅರ್ಜುನಗಿ, ಅಡವಿ ಸಂಗಾಪೂರ, ಅತಾಲಟ್ಟಿ, ಬಬಲಾದಿ, ಬಬಲೇಶ್ವರ, ಬಾಬಾನಗರ, ಬರಟಗಿ, ಬೆಳ್ಳುಬ್ಬಿ, ಬಿಜ್ಜರಗಿ, ಬೋಳಚಿಕ್ಕಲಕಿ, ಬೊಮ್ಮನಳ್ಳಿ, ಭುರಣಾಪೂರ, ಚಿಕ್ಕ ಗಲಗಲಿ, ದಾಶ್ಯಾಳ, ದೇವಾಪೂರ, ದೇವರ ಗೆಣ್ಣೂರ, ಧನರ್ಗಿ, ಧನ್ಯಾಳ, ಡೋಮನಾಳ, ದೂಡಿಹಾಳ, ದ್ಯಾಬೇರಿ, ಧನವಾಡ ಹಟ್ಟಿ, ದದಾಮಟ್ಟಿ, ಘೊನಸಗಿ, ಗೂಗದಡ್ಡಿ, ಗುಣದಾಳ, ಗುಣಕಿ, ಹಡಗಲಿ, ಹಲಗಣಿ, ಹಂಚಿನಾಳ ಪಿ.ಎಚ್, ಹಂಚಿನಾಳ ಪಿ.ಎಮ್, ಹಂಗರಗಿ, ಹೆಬ್ಬಾಳಟ್ಟಿ, ಹೆಗಡಿಹಾಳ, ಹಿಟ್ಟಿನಹಳ್ಳಿ, ಹೊಕ್ಕುಂಡಿ, ಹೊನಗನಹಳ್ಳಿ, ಹೊನವಾಡ, ಹೊನ್ನಳ್ಳಿ, ಹೊನ್ನುಟಗಿ, ಹೊಸೂರ, ಹುಬನೂರ, ಹುಣಶ್ಯಾಳ, ಹರನಾಳ, ಹಣಮಸಾಗರ, ಇಂಗನಾಳ, ಇಟ್ಟಂಗಿಹಾಳ, ಜೈನಾಪೂರ, ಜಾಲಗೇರಿ, ಜಂಬಗಿ ಎ, ಜಂಬಗಿ ಎಚ್, ಜುಮನಾಳ, ಕಗ್ಗೋಡ, ಕಾಖಂಡಕಿ, ಕೃಷ್ಣಾನಗರ, ಕಿಲಾರಹಟ್ಟಿ, ಕಳ್ಳಕವಟಗಿ, ಕಂಬಾಗಿ, ಕಣಬೂರ, ಕನಮಡಿ, ಕಣಮುಚನಾಳ, ಕನ್ನಾಳ, ಕನ್ನೂರ, ಕಾರಜೋಳ, ಕತ್ನಳ್ಳಿ(ಕತಕನಹಳ್ಳಿ), ಕಾತ್ರಾಳ, ಕವಲಗಿ, ಕೆಂಗಲಗುತ್ತಿ, ಖತಿಜಾಪೂರ(ಖಜಾಪೂರ), ಕೊಡಬಾಗಿ, ಕೊಟ್ಯಾಳ, ಕುಮಟಗಿ, ಕುಮಠೆ, ಲಿಂಗದಳ್ಳಿ, ಲೋಹಗಾಂವ, ಮಧಗುಣಕಿ, ಮಡಸನಾಳ, ಮಧಬಾವಿ, ಮಖಣಾಪೂರ, ಮಮದಾಪೂರ, ಮಂಗಳೂರ, ಮಿಂಚನಾಳ, ಮಲಕನದೇವರಹಟ್ಟಿ, ನಾಗರಾಳ, ನಾಗಠಾಣ, ನಂದ್ಯಾಳ, ನವರಸಪೂರ, ನಿಡೋಣಿ, ರತ್ನಾಪೂರ, ರಾಂಪೂರ, ಸಾರವಾಡ, ಸಂಗಾಪೂರ ಎಸ್.ಎಚ್, ಸವನಳ್ಳಿ, ಶೇಗುಣಸಿ, ಶಿರಬೂರ, ಶಿರನಾಳ, ಶಿವಣಗಿ, ಸಿದ್ದಾಪೂರ ಕೆ., ಸಿದ್ದಾಪೂರ, ಸೋಮದೇವರಹಟ್ಟಿ, ಸುತಗುಂಡಿ, ತಾಜಪೂರ ಪಿ.ಎಮ್., ತಾಜಪೂರ ಎಚ್, ಟಕ್ಕಳಕಿ, ತಿಡಗುಂದಿ, ತಿಗಣಿಬಿದರಿ, ತಿಕೋಟಾ, ತೋನಶ್ಯಾಳ, ತೊರವಿ, ಉಕುಮನಾಳ, ಉಪ್ಪಲದಿನ್ನಿ, ಉತ್ನಾಳ, ಯಕ್ಕುಂಡಿ, ಯತ್ನಾಳ.

ಬಿಜಾಪೂರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಬದಲಾಯಿಸಿ

ಆಹೇರಿ, ಐನಾಪುರ, ಅಲಿಯಾಬಾದ, ಅರಕೇರಿ, ಅರ್ಜುಣಗಿ, ಬಬಲೇಶ್ವರ, ಬಾಬಾನಗರ, ಬರಟಗಿ, ಬಿಜ್ಜರಗಿ, ಬೋಳಚಿಕ್ಕಲಕಿ, ದೇವರಗೆಣ್ಣೂರ, ಘೋಣಸಗಿ, ಗುಣದಾಳ, ಗುಣಕಿ, ಹಡಗಲಿ, ಹಲಗಣಿ, ಹೆಗಡಿಹಾಳ, ಹಿಟ್ನಳ್ಳಿ, ಹೊನಗನಹಳ್ಳಿ, ಹೊನವಾಡ, ಹೊನ್ನುಟಗಿ, ಹೊಸುರ, ಜೈನಾಪುರ, ಜಾಲಗೇರಿ, ಜಂಬಗಿ ಹೆಚ್, ಕಂಬಾಗಿ, ಕನಮಡಿ, ಕನ್ನೂರ, ಕಾರಜೋಳ, ಕಾಖಂಡಕಿ, ಕೋಟ್ಯಾಳ, ಕುಮಠೆ, ಲೋಹಗಾಂವ, ಮದಭಾವಿ, ಮಖಣಾಪುರ, ಮಮದಾಪೂರ, ನಾಗಠಾಣ, ನಿಡೋಣಿ, ಸಾರವಾಡ, ಶಿವಣಗಿ, ಸಿದ್ದಾಪುರ ಕೆ, ತಾಜಪುರ ಹೆಚ್, ಟಕ್ಕಳಕಿ, ತಿಡಗುಂದಿ, ತಿಕೋಟಾ, ತೊರವಿ.

ಬಿಜಾಪೂರ ತಾಲ್ಲೂಕಿನ ಪಿನಕೋಡ್ ಸಂಕೇತಗಳು

ಬದಲಾಯಿಸಿ

ಬಬಲೇಶ್ವರ - ೫೮೬೧೧೩, ಬಿಜ್ಜರಗಿ - ೫೮೬೧೧೪, ಕನ್ನೂರ - ೫೮೬೧೧೯, ಸಾರವಾಡ - ೫೮೬೧೨೫, ಶಿವಣಗಿ - ೫೮೬೧೨೭, ತಿಕೋಟಾ - ೫೮೬೧೩೦.

ಬಿಜಾಪೂರ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು

ಬದಲಾಯಿಸಿ

ಬಬಲೇಶ್ವರ, ಬಿಜಾಪೂರ, ತಿಕೋಟಾ, ನಾಗಠಾಣ, ಮಮದಾಪೂರ.

ವಿಜಾಪೂರ ತಾಲ್ಲೂಕಿನ ಕೆರೆಗಳು

ಬದಲಾಯಿಸಿ

ಡೋಮನಾಳ, ಕಗ್ಗೋಡ, ಮಮದಾಪೂರ, ಹೊನ್ನುಟಗಿ, ಲೋಹಗಾಂವ, ಅರಕೇರಿ, ನಿಡೋಣಿ, ಉಪ್ಪಲದಿನ್ನಿ, ಕುಮಟಗಿ, ಯತ್ನಾಳ,ದ್ಯಾಬೇರಿ, ಅಂಕಲಗಿ, ಆಹೇರಿ, ಹುಣಶ್ಯಾಳ.

ನದಿಗಳು

ಬದಲಾಯಿಸಿ

ವಿಜಾಪುರ ಜಿಲ್ಲೆಯಲ್ಲಿ ಹರಿಯುವ ನದಿಗಳೆಂದರೆ ಕೃಷ್ಣಾ ಮತ್ತು ಡೋಣಿ.

  1. ಕೃಷ್ಣಾ
  2. ಡೋಣಿ

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಕ್ಕರೆ ಕಾರ್ಖಾನೆಗಳು

ಬದಲಾಯಿಸಿ
  • ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ, ತಾ|| ಜಿ|| ವಿಜಾಪೂರ. ಇದು ೧೯೮೨ ರಲ್ಲಿ ಸ್ಥಾಪಿಸಿದ ಜಿಲ್ಲೆಯ ಪ್ರಪ್ರಥಮ ಸಕ್ಕರೆ ಕಾರ್ಖಾನೆಯಾಗಿದೆ.
  • ಬಸವೇಶ್ವರ ಸಕ್ಕರೆ ಕಾರ್ಖಾನೆ, ಕಾರಜೋಳ, ತಾ||ಜಿ|| ವಿಜಾಪೂರ.
  • ಸೋಮೇಶ್ವರ ಸಕ್ಕರೆ ಕಾರ್ಖಾನೆ, ಸಂಗಾಪೂರ, ತಾ||ಜಿ|| ವಿಜಾಪೂರ.
  • ಬೆಳಗಾಂವ ಸಕ್ಕರೆ ಕಾರ್ಖಾನೆ, ಹೊನವಾಡ, ತಾ||ಜಿ|| ವಿಜಾಪೂರ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಬದಲಾಯಿಸಿ

ಬಿಜಾಪೂರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಬಬಲೇಶ್ವರ, ಹೊನ್ನುಟಗಿ, ತಿಕೋಟಾ, ಮಮದಾಪೂರ, ನಾಗಠಾಣ, ಕನ್ನೂರ, ಕಾಖಂಡಕಿ, ಹೊನಗನಹಳ್ಳಿ , ಹೊನವಾಡ, ಕಂಬಾಗಿ, ಕನಮಡಿ, ಯಕ್ಕುಂಡಿ.

ಪಶು ಆಸ್ಪ ತ್ರೆಗಳು

ಬದಲಾಯಿಸಿ

ಪಶು ಆಸ್ಪ ತ್ರೆ, ಬಿಜಾಪೂರ

ಪಶು ಚಿಕಿತ್ಸಾಲಯಗಳು

ಗುಣದಾಳ, ಹೊನವಾಡ, ಹೊಸಟ್ಟಿ, ತಿಡಗುಂದಿ, ಜೈನಾಪುರ, ಕಾಖಂಡಕಿ, ಬಿಜ್ಜರಗಿ, ಕಾರಜೋಳ, ಐನಾಪುರ, ಅರಕೇರಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಹೊನ್ನುಟಗಿ, ಜಂಬಗಿ ಹೆಚ್, ಕಗ್ಗೋಡ, ಶಿವಣಗಿ, ಕನ್ನಾಳ, ಮಮದಾಪೂರ, ನಿಡೋಣಿ, ಲೋಹಗಾಂವ.

ಪಶು ಕೃತಕ ಗರ್ಭಧಾರಣಾ ಕೇಂದ್ರಗಳು

ಕವಲಗಿ, ಹೊನಗನಹಳ್ಳಿ , ನಾಗಠಾಣ, ತೊರವಿ, ಹಿಟ್ನಳ್ಳಿ , ಸಾರವಾಡ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ಬದಲಾಯಿಸಿ

ರಾಷ್ಟ್ರೀಯ ಹೆದ್ದಾರಿಗಳು

ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - ೧೩ ಮತ್ತು ರಾಷ್ಟ್ರೀಯ ಹೆದ್ದಾರಿ - ೨೧೮

ರಾಷ್ಟ್ರೀಯ ಹೆದ್ದಾರಿ - ೧೩ => ಸೋಲಾಪೂರ - ಬಿಜಾಪೂರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.

ರಾಷ್ಟ್ರೀಯ ಹೆದ್ದಾರಿ - ೨೧೮ => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟ (ಗದ್ದನಕೇರಿ ಕ್ರಾಸ್) -ಬೀಳಗಿ(ಕ್ರಾಸ್) - ಬಿಜಾಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ.

ರಾಜ್ಯ ಹೆದ್ದಾರಿಗಳು

ಜಿಲ್ಲೆಯಲ್ಲಿ ೫ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ,

ರಾಜ್ಯ ಹೆದ್ದಾರಿ - ೧೨ => ಬಿಜಾಪೂರ - ಅಥಣಿ - ಚಿಕ್ಕೋಡಿ - ಸಂಕೇಶ್ವರ

ರಾಜ್ಯ ಹೆದ್ದಾರಿ - ೫೫ => ಬಬಲೇಶ್ವರ - ಕಾಖಂಡಕಿ - ಮಮದಾಪೂರ - ಕಂಬಾಗಿ - ಗಲಗಲಿ - ಮುಧೋಳ -ಯಾದವಾಡ - ಯರಗಟ್ಟಿ

ರಾಜ್ಯ ಹೆದ್ದಾರಿ - ೬೫ => ಬಿಜಾಪೂರ - ಜಮಖಂಡಿ - ಮುಧೋಳ - ರಾಮದುರ್ಗ - ಸವದತ್ತಿ -ಧಾರವಾಡ