ಅಸ್ಸೋಸಿಯೆಷನ್ ಫುಟ್‌ಬಾಲ್
ಫುಟ್‌ಬಾಲ್ ಆಟ
ಬದಲಾಯಿಸಿಪುರಾತನ ಕಾಲದಿಂದಲೂ ಜಗತ್ತಿನಾದ್ಯಂತ ಜನರು ಚೆಂಡನ್ನು ಒದೆಯುವ ಮತ್ತು ಕೊಂಡೊಯ್ಯುವ ಆಟಗಳನ್ನು ಆಡುತ್ತಿದ್ದರು. ಆದರೂ, ಫುಟ್‌ಬಾಲ್‌ನ ಹೆಚ್ಚಿನ ಆಧುನಿಕ ನಿಯಮಾವಳಿಗಳು ಇಂಗ್ಲೆಂಡ್[೧] ಮೂಲವನ್ನು ಹೊಂದಿವೆ. ಗೋಲು ಗಳಿಸುವುದಕ್ಕಾಗಿ ತಂಡದ ಸದಸ್ಯರೆಲ್ಲರೂ ಕಾಲಿನಿಂದ ಚೆಂಡನ್ನು (ವಿವಿಧ ಕೋನಗಳಿಗೆ) ಒದೆಯುವುದರಲ್ಲಿ ತೊಡಗುವ ಒಂದೇ ತೆರನಾದ ಸಾಂಘಿಕ ಆಟಗಳ ಪ್ರಕಾರಕ್ಕೆ ಫುಟ್‌ಬಾಲ್ ಎಂಬ ಹೆಸರ ನ್ನಿಡಲಾಗಿದೆ. ಈ ಆಟಗಳ ಪೈಕಿ ಅಸೋಸಿಯೇಷನ್ ಫುಟ್‌ಬಾಲ್ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಈ ಆಟವನ್ನು ಸಾಮಾನ್ಯವಾಗಿ "ಫುಟ್‌ಬಾಲ್" ಅಥವಾ "ಸಾಕ್ಕರ್" ಎಂದು ಕರೆಯಲಾಗುತ್ತದೆ. ಆದಾಗ್ಯೂ ಜಗತ್ತಿನ ನಿರ್ದಿಷ್ಟ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಫುಟ್‌ಬಾಲ್‌ನ ಯಾವುದೇ ಪ್ರಕಾರಕ್ಕೆ ಫುಟ್‌ಬಾಲ್ ಎಂಬ ಪದವು ಅನ್ವಯಿಸುತ್ತದೆ. ಈ ಕಾರಣದಿಂದಾಗಿ, ಇಂಗ್ಲಿಷ್ ಭಾಷೆಯ "ಫುಟ್‌ಬಾಲ್" ಪದವು "ಗ್ರಿಡ್ಐಯರ್ನ್ ಫುಟ್‌ಬಾಲ್" (ಉತ್ತರ ಅಮೆರಿಕದ ಆಟಗಳಿಗೆ ಸಂಬಂಧಿ ಸಿದ, ವಿಶೇಷವಾಗಿ ಅಮೆರಿಕನ್ ಫುಟ್‌ಬಾಲ್ ಮತ್ತು ಕೆನಡಿಯನ್ ಫುಟ್‌ಬಾಲ್),ಆಸ್ಟ್ರೇಲಿಯನ್ ಫುಟ್‌ಬಾಲ್, ಗೇಲಿಕ್ ಫುಟ್‌ಬಾಲ್, ರಗ್ಬಿ ಲೀಗ್, ರಗ್ಬಿ ಒಕ್ಕೂಟ, ಮತ್ತು ಸಂಬಂಧಿಸಿದ ಆಟಗಳಿಗೆ ಅನ್ವಯಿಸುವುದು.
ಈ ಆಟಗಳು ಕೆಳಗಿನ ಅಂಶಗಳನ್ನು ಒಳಗೊಂಡಿದೆ:
ಬದಲಾಯಿಸಿ- ಎರಡು ತಂಡಗಳು ಸಾಮಾನ್ಯವಾಗಿ 11 ರಿಂದ 18 ಮಂದಿಯವರೆಗೆ ಆಟಗಾರರನ್ನು ಹೊಂದಿರುತ್ತವೆ; ಕೆಲವು ಆಟಗಾರರು ಕೆಲವು ವಿಶೇಷತೆಗಳನ್ನು ಹೊಂದಿರುವುದು ಕೂಡ (ಪ್ರತಿ ತಂಡದಲ್ಲಿ ಐವರು ಅಥವಾ ಹೆಚ್ಚು) ಅಷ್ಟೇ ಜನಪ್ರಿಯ.
- ಅವರು ಆಡುವ ಸ್ಥಳವನ್ನು ಸ್ಪಷ್ಟವಾಗಿ ನಿಗದಿ ಪಡಿಸಲಾಗುತ್ತದೆ;
- ಎದುರಾಳಿ ತಂಡದ ಕ್ಷೇತ್ರದ ಕೊನೆ ಭಾಗಕ್ಕೆ ಮತ್ತು ಗೋಲಿನ ವಲಯಕ್ಕೆ ಅಥವಾ ಗೆರೆಯಾಚೆಗೆ ಚೆಂಡನ್ನು ಸೇರಿಸುವುದರಿಂದ ತಂಡವು ಗೋಲುಗಳು ಅಥವಾ ಅಂಕಗಳನ್ನು ಗಳಿಸುತ್ತದೆ ;
- ಎರಡು ಗೋಲು ಕಂಬಗಳ ನಡುವೆ ಆಟಗಾರರು ಚೆಂಡನ್ನು ತಲುಪಿಸುವುದರಿಂದ ತಂಡವು ಗೋಲು ಅಥವಾ ಅಂಕ ಗಳಿಸುತ್ತದೆ
- ಎದುರಾಳಿ ತಂಡವು ಗೋಲು ಅಥವಾ ಗೆಲುವಿನ ಗೆರೆಯನ್ನು ರಕ್ಷಿಸುತ್ತದೆ ;
- ಆಟಗಾರರು ನಿಯಮಾವಳಿಗಳಿಗೆ ಅನುಸಾರವಾಗಿ ಚೆಂಡನ್ನು ಒದೆಯುವುದರಿಂದ, ಚೆಂಡನ್ನು ಕೊಂಡೊಯ್ಯುವುದರಿಂದ ಅಥವಾ ಕೈ ಬದಲಾಯಿಸುವುದರಿಂದ ಚೆಂಡನ್ನು ಚಲಿಸುವಂತೆ ಮಾಡಬೇಕಾಗುತ್ತದೆ; ಮತ್ತು
- ಆಟಗಾರರು ಚೆಂಡನ್ನು ಚಲಿಸುವಂತೆ ಮಾಡಲು ತಮ್ಮ ದೇಹವನ್ನು ಮಾತ್ರ ಬಳಸಬೇಕು.
ಹೆಚ್ಚಿನ ನಿಯಮಾವಳಿಗಳಲ್ಲಿ, ಆಫ್‌ಸೈಡ್ ಕಡೆಗೆ ಆಟಗಾರರ ಚಲನೆಯನ್ನು ನಿರ್ಬಂಧಿಸುವಂತಹ ನಿಯಮಗಳಿದ್ದು ಮತ್ತು ಗೋಲು ಕಂಬಗಳ ನಡುವಿನ ಗಡಿಗೆರೆ ಯೊಳಗೆ ಅಥವಾ ಗೆರೆಯಾಚೆಗೆ ಚೆಂಡನ್ನು ಸೇರಿಸುವುದರಿಂದ ಆಟಗಾರರು ಗೋಲನ್ನು ಗಳಿಸುತ್ತಾರೆ. ಹೆಚ್ಚಿನ ಫುಟ್‌ಬಾಲ್ ನಿಯಮಾವಳಿಗಳಲ್ಲಿರುವ ಇತರ ಸಾಮಾನ್ಯ ಅಂಶಗಳೆಂದರೆ: ಹೆಚ್ಚಾಗಿ ಚೆಂಡನ್ನು ಗೋಲು ಗೆರೆಯಿಂದಾಚೆ ಸೇರಿಸಿದ ಆಟಗಾರನು ಅಂಕಗಳನ್ನು ಪಡೆಯುತ್ತಾನೆ ಮತ್ತು ಆಟಗಾರರು ಮಾರ್ಕ್ ತೆಗೆದುಕೊಂಡ ಅಥವಾ ಉತ್ತಮ ಕ್ಯಾಚ್ ಹಿಡಿದ ನಂತರ ಫ್ರೀ ಕಿಕ್ ಮಾಡುವ ಅವಕಾಶವನ್ನು ಪಡೆಯುತ್ತಾರೆ.
ಫುಟ್‌ಬಾಲ್ ಪದದ ವ್ಯುತ್ಪತ್ತಿ
ಬದಲಾಯಿಸಿ- "ಫುಟ್‌ಬಾಲ್" (ಅಥವಾ "ಫುಟ್ ಬಾಲ್") ಪದದ ಮೂಲವು ಚೆಂಡನ್ನು ಕಾಲಿನಿಂದ ಒದೆಯುವ ಪಕ್ರಿಯೆಯನ್ನು ಸೂಚಿಸುವುದರಿಂದ ಬಂದಿದೆ ಎಂದು ನಂಬಲಾಗಿದೆ. ಇದಕ್ಕೆ ಪ್ರತಿಯಾಗಿ, ಮೂಲತಃ ಫುಟ್‌ಬಾಲ್ ಪದವು ಮಧ್ಯಕಾಲೀನ ಯುರೋಪ್‌ನಲ್ಲಿ ಕಾಲಿನಲ್ಲಿ ಆಡುವ ವಿವಿಧ ಆಟಗಳನ್ನು ಸೂಚಿಸುತ್ತದೆ ಎಂದು ವಿವರಿಸಲಾಗಿದೆ.[೨] ಸಾಮಾನ್ಯವಾಗಿ ರೈತರು ಈ ರೀತಿಯ ಆಟಗಳನ್ನು ಆಡುತ್ತಿದ್ದರು, ಕುದುರೆ-ಸವಾರಿ ಇತ್ಯಾದಿ ಕ್ರೀಡೆಗಳು ಶ್ರೀಮಂತರ ಆಟವಾಗಿತ್ತು. ಈ ವಿವರಣೆಗೆ ಯಾವುದೇ ನಿರ್ಣಾಯಕ ಸಾಕ್ಷ್ಯಗಳು ಇಲ್ಲದಿರುವುದರಿಂದ, ಫುಟ್‌ಬಾಲ್ ಪದವು ಯಾವಾಗಲೂ ಕಾಲಿನಿಂದ ಚೆಂಡನ್ನು ಒದೆಯುವುದು ಮಾತ್ರವಲ್ಲದೆ, ಕಾಲಿನಿಂದ ಆಡುವ ವಿವಿಧ ಆಟಗಳನ್ನು ಸೂಚಿಸುತ್ತದೆ. ಕೆಲವು ಆಟಗಳಲ್ಲಿ, ಚೆಂಡು ಒದೆಯುವುದನ್ನು ನಿಷೇಧಿಸಿರುವ ಆಟಗಳಿಗೂ ಫುಟ್‌ಬಾಲ್ ಎಂಬ ಪದ ಅನ್ವಯಿಸಿರುವ ಕೆಲವು ಪ್ರಕರಣಗಳಿವೆ.
ಇತಿಹಾಸ
ಬದಲಾಯಿಸಿಇತಿಹಾಸ ಪೂರ್ವ
ಬದಲಾಯಿಸಿಪ್ರಾಚೀನ ಆಟಗಳು
ಬದಲಾಯಿಸಿ- ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಚೆಂಡಿನ ಹಲವು ಆಟಗಳನ್ನು ತಿಳಿದಿದ್ದರು. ಅವುಗಳಲ್ಲಿ ಕೆಲವನ್ನು ಕಾಲಿನಿಂದ ಆಡುತ್ತಿದ್ದರು. ರೋಮನ್ನರ ಆಟವಾದ ಹರ್ಪಸ್ಟಮ್, "επισκυρος" (ಎಪಿಸ್ಕ್‌ಯ್ರೊಸ್ ) ಅಥವಾ ಫೈನಿಂಡಾ ಎಂದು ಕರೆಯಲ್ಪಡುವ ಸಾಂಘಿಕ ಆಟದ ಅಂಶಗಳನ್ನು ಅಳವಡಿಸಿಕೊಂಡಿರುವುದಾಗಿ ಭಾವಿಸಲಾಗಿದೆ.
- ಗ್ರೀಕ್ ನಾಟಕಕಾರ ಆಂಟಿಫೇನಸ್‌ರವರು (388–311 BC) ಈ ಬಗ್ಗೆ ತಿಳಿಸಿದ್ದಾರೆ. ನಂತರ ಈ ಕುರಿತು ಕ್ರೈಸ್ತ ದೇವತಾಶಾಸ್ತ್ರಜ್ಞ ಕ್ಲೆಮೆಂಟ್ ಆಫ್ ಅಲೆಕ್ಸಾಂಡ್ರಿಯಾರವರು ಹೀಗೆ (c.150-c.215 AD) ಉಲ್ಲೇಖಿಸಿದ್ದಾರೆ. ಕ್ಷೌರಿಕನ ಅಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಚೆಂಡಿನ ಒದೆತ ತಿಂದು ಮೃತಪಟ್ಟ ಪ್ರಸಂಗವನ್ನು ರೋಮನ್ ರಾಜಕಾರಣಿ ಸಿಸೆರೊ (106-43 BC)ವಿವರಿಸಿದ್ದಾರೆ.
- ಈ ಆಟಗಳು ಮೇಲ್ನೋಟಕ್ಕೆ ರಗ್ಬಿ ಫುಟ್‌ಬಾಲ್‌ಅನ್ನು ಹೋಲುತ್ತವೆ. ರೋಮನ್‌ರು ಚೆಂಡಿನ ಆಟಗಳಲ್ಲಿ ಗಾಳಿ ತುಂಬಿದ ಚೆಂಡಿನ ಬಳಕೆಯನ್ನು ತಿಳಿದಿದ್ದರು. ಅವರದನ್ನು ಫೊಲ್ಲಿಸ್ ಎಂದು ಕರೆಯುತ್ತಿದ್ದರು.[೩][೪]
- 3ನೇ ಶತಮಾನದಿಂದ 1ನೇ ಶತಮಾನ BCದ ನಡುವಿನ ಕಾಲದಲ್ಲಿ ಫುಟ್‌ಬಾಲ್ ಮಾದರಿಯ ಚಟುವಟಿಕೆಗಳ ಬಗ್ಗೆ ದಾಖಲಾರ್ಹ ಸಾಕ್ಷ್ಯಗಳು ಚೀನಾದ ಸೇನಾಪಡೆ ಕೈಪಿಡಿಯಾದ ಝಾನ್ ಗುವೊ ಸೆಯಲ್ಲಿ ಕಂಡು ಬಂದಿವೆ.[೫] ಇದನ್ನು ಕುಜು (蹴鞠, ಪದಶಃ "ಒದೆಯುವ ಚೆಂಡು") ಎಂದು ಕರೆಯಲಾಗಿತ್ತು. ಈ ಆಟದಲ್ಲಿ ನೆಲದಿಂದ ಸುಮಾರು 9 ಮೀಟರ್ ಮೇಲೆ ಬಿದಿರು ಕೋಲಿಗೆ ಅಳವಡಿಸಿದ ಅಥವಾ ತೂಗುಹಾಕಿದ ರೇಷ್ಮೆ ಬಟ್ಟೆಯ ಚಿಕ್ಕ ತೂತಿನ ಮೂಲಕ ಚರ್ಮದ ಚೆಂಡನ್ನು ದಾಟಿಸಬೇಕಾಗುತ್ತದೆ.
- ಹನ್ ರಾಜಸಂತತಿಯ (206 BC–220 AD) ಅವಧಿಯಲ್ಲಿ, ಕುಜು ಆಟಗಳನ್ನು ಪ್ರಮಾಣೀಕರಿಸಿ ಮತ್ತು ಆಟದ ನಿಯಮಗಳನ್ನು ದೃಢಪಡಿಸಲಾಯಿತು.
- ನಂತರ ಈ ಆಟದಲ್ಲಿ ಪರಿವರ್ತನೆಗಳಾಗಿ ಜಪಾನ್ ಮತ್ತು ಕೊರಿಯಾಕ್ಕೆ ಕ್ರಮವಾಗಿ ಕೆಮಾರಿ ಮತ್ತು ಚುಕ್-ಗುಕ್ ಗಳಂತೆ ಈ ಆಟವೂ ಪರಿಚಯಿಸಲ್ಪಟ್ಟಿತು.
- ಚೀನಾದ ತಂಗ್ ರಾಜಸಂತತಿಯವರು (618–907) ಆಟದಲ್ಲಿ ಗರಿಗಳಿಂದ ಮಾಡಿದ ಚೆಂಡಿನ ಬದಲಿಗೆ ಗಾಳಿ ತುಂಬಿದ ಚೆಂಡಿನ ಬಳಸಲು ಪ್ರಾರಂಭಿಸಿದರು ಮತ್ತು ಹಲವು ಆಟಗಾರರು ಕುಜುವನ್ನು ಆಡಿ ಜೀವನ ನಡೆಸಲು ಪ್ರಾರಂಭಿಸಿದ್ದರಿಂದ ಕುಜು ಆಟ ವೃತ್ತಿಪರ ಆಟವಾಯಿತು ಹಾಗೂ ಈ ಅವಧಿಯಲ್ಲಿ ಎರಡು ಪ್ರಕಾರದ ಗೋಲು ಕಂಬಗಳು ಉದಯಿಸಿದವು. ಅವುಗಳೆಂದರೆ ಎರಡು ಗೋಲು ಕಂಬಗಳ ನಡುವೆ ಬಲೆಯನ್ನು ಇರಿಸುವುದು ಮತ್ತು ಮೈದಾನದ ಮಧ್ಯದಲ್ಲಿ ಒಂದೇ ಗೋಲು ಕಂಬವನ್ನಿರಿಸುವುದು.
- ಕೆಮಾರಿ ಯು ಕುಜು ವಿನ ಜಪಾನ್ ನ ಆವೃತ್ತಿ (蹴鞠) ಮತ್ತು ಆಸುಕಾ ಕಾಲದಲ್ಲಿ ಈ ಆಟವು ಅಭಿವೃದ್ಧಿಗೊಂಡಿತು. ಈ ಆಟವನ್ನು 600 AD ಯಿಂದ ಕ್ಯೊಟೊದಲ್ಲಿರುವ ಜಪಾನಿನ ಇಂಪೀರಿಯನ್ ಕ್ರೀಡಾಂಗಣದಲ್ಲಿ ಆಡಲಾಗುತ್ತಿತ್ತು ಎನ್ನುವುದು ತಿಳಿದುಬಂದಿದೆ. ಕೆಮಾರಿ ಆಟದಲ್ಲಿ ಹಲವು ಮಂದಿ ಸುತ್ತು ಕಟ್ಟಿ ನಿಂತಿರುತ್ತಾರೆ ಮತ್ತು ಚೆಂಡು ನೆಲಕ್ಕೆ ಬೀಳುವುದನ್ನು ತಪ್ಪಿಸಲು ಆಟಗಾರರು ಅದನ್ನು ಒದೆಯುತ್ತಾರೆ (ಹೆಚ್ಚಾಗಿ ಕೀಪೀ ಉಪ್ಪೀಯಂತೆ).
- ಈ ಆಟ 19ನೇ ಶತಮಾನದ ಮಧ್ಯಭಾಗಕ್ಕಿಂತ ಮೊದಲೇ ಕೆಲ ಸಮಯ ನಾಶವಾದಂತಿತ್ತು. ಅದು 1903ರಲ್ಲಿ ಪುನರ್ಜನ್ಮ ಪಡೆಯಿತು ಮತ್ತು ಈ ಆಟವನ್ನು ಈಗ ಹಲವು ಉತ್ಸವದ ಸಂದರ್ಭಗಳಲ್ಲಿ ಆಡಲಾಗುತ್ತದೆ.
- ಸಾಂಪ್ರದಾಯಿಕ, ಪ್ರಾಚೀನ ಅಥವಾ ಇತಿಹಾಸ ಪೂರ್ವದ ಚೆಂಡಿನ ಆಟಗಳನ್ನು ಜಗತ್ತಿನ ವಿವಿಧ ಭಾಗಗಳ ಸ್ಥಳೀಯ ಜನರು ಆಡಿದ್ದಾರೆ ಎನ್ನುವುದಕ್ಕೆ ಹಲವಾರು ಉಲ್ಲೇಖಗಳಿವೆ. ಉದಾಹರಣೆಗೆ, 1586ರಲ್ಲಿ ಇಂಗ್ಲಿಷ್ ಅನ್ವೇಷಕ ಜಾನ್ ಡೇವಿಸ್‌ರವರ ನೇತೃತ್ವದ ನಾವಿಕರ ತಂಡ, ಗ್ರೀನ್‌ಲೆಂಡ್‌ನಲ್ಲಿರುವ ಇನ್ಯೂಟ್‌ದ (ಎಸ್ಕಿಮೊ) ಜನರೊಂದಿಗೆ ಫುಟ್‌ಬಾಲ್‌ನ ಒಂದು ಪ್ರಕಾರವನ್ನು ಆಡುವುದಕ್ಕಾಗಿ ವಿದೇಶಕ್ಕೆ ಹೋಗಿತ್ತು.[೬]
- ನಂತರ ಇದು ಮಂಜಿನಲ್ಲಿ ಆಡುವ ಅಕ್ಸಾಕ್ಟುಕ್ ಆಟವಾಗಿ ರೂಪಾಂತರಗೊಂಡಿತು. ಪ್ರತಿ ಪಂದ್ಯವು ಎರಡು ತಂಡಗಳು ಪರಸ್ಪರ ಎದುರಾಗಿ ಸಮಾಂತರ ಗೆರೆಯಲ್ಲಿ ನಿಲ್ಲುವುದರೊಂದಿಗೆ ಪ್ರಾರಂಭವಾಗುವುದು. ಪರಸ್ಪರ ತಂಡದ ಗೆರೆಯಿಂದ ಚೆಂಡನ್ನು ಒದೆಯಬೇಕು. ನಂತರ ಅದನ್ನು ಗೋಲಿನ ಕಡೆಗೆ ಒದೆಯಬೇಕು. 1610ರಲ್ಲಿ ವರ್ಜಿನಿಯಾದ ಜೇಮ್ಸ್ಟೌನ್ ವಸಾಹತುವಿನ ವಿಲಿಯಮ್ ಸ್ಟ್ರ್ಯಾಚಿರವರು ಮೂಲ ಅಮೆರಿಕನ್ನರು ಆಡುತ್ತಿದ್ದ ಆಟವೊಂದನ್ನು ದಾಖಲಿಸಿದ್ದಾರೆ. ಅದನ್ನು ಪಹ್ಸಾಹೆಮ್ಯಾನ್ ಎಂದು ಕರೆಯುತ್ತಿದ್ದರು.
- ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಸ್ಥಳೀಯ ಜನರು ಮಾರ್ನ್ ಗ್ರೂಕ್ ("ಚೆಂಡಿನ ಆಟ") ಆಟವನ್ನು ಆಡುತ್ತಿದ್ದರು.
- 1841ರಲ್ಲಿ ಅಬೊರಿಜಿನಲ್‌ನ ಜನರು ಆಟವಾಡುವುದನ್ನು ನೋಡಿದ ರಿಚರ್ಡ್ ಥೋಮಸ್‌ರವರ ಹೇಳಿಕೆಯನ್ನು 1878ರಲ್ಲಿ ರಾಬರ್ಟ್ ಬ್ರೋವ್-ಸ್ಮಿತ್‌ರವರು ಬರೆದಿರುವ ದಿ ಅಬೊರಿಜಿನ್ಸ್ ಆಫ್ ವಿಕ್ಟೋರಿಯಾ ದಲ್ಲಿ ಹೀಗೆ ಉಲ್ಲೇಖಿಸಲಾಗಿದೆ: "ಪೊಸ್ಸಮ್‌ನ ಚರ್ಮದಿಂದ ಮಾಡಿದ ಚೆಂಡನ್ನು ಆಟಗಾರರು ಎಷ್ಟು ಉತ್ತಮವಾಗಿ ಡ್ರಾಪ್ ಕಿಕ್ ಮಾಡುತ್ತಿದ್ದರು ಮತ್ತು ಇತರ ಆಟಗಾರರು ಚೆಂಡನ್ನು ಹಿಡಿಯುವ ಬದಲು ಅದನ್ನು ಗಾಳಿಯಲ್ಲಿ ಹೇಗೆ ಹಾರಿಸುತ್ತಿದ್ದರು ಎನ್ನುವುದನ್ನು ಥೋಮಸ್‌ರವರು ವಿವರಿಸುತ್ತಾರೆ."
- ಆಸ್ಟ್ರೇಲಿಯಾದ ಫುಟ್‌ಬಾಲ್ ನಿಯಮಗಳ ಅಭಿವೃದ್ಧಿಯಲ್ಲಿ ಮಾರ್ನ್ ಗ್ರೂಕ್ ಪಾತ್ರವಿದೆ ಎಂದು ಹೆಚ್ಚಿನ ಜನರು ಭಾವಿಸಿದ್ದಾರೆ (ಕೆಳಗೆ ನೋಡಿ).
- ನ್ಯೂ ಜೀಲ್ಯಾಂಡ್ನ ಮಾವೊರಿ ಜನರು ಕಿ-ಒ-ರಾಹಿ ಎನ್ನುವ ಆಟವನ್ನು ಆಡುತ್ತಿದ್ದರು.
- ಈ ಆಟದಲ್ಲಿ ವಲಯಗಳಾಗಿ ವಿಂಗಡಿಸಿದ ಮೈದಾನದಲ್ಲಿ ಪ್ರತಿ ತಂಡವು ಏಳು ಆಟಗಾರರನ್ನು ಹೊಂದಿರುತ್ತದೆ ಮತ್ತು 'ಪೌ'ನ್ನು (ಗಡಿ ಗುರುತುಗಳು) ಮುಟ್ಟುವಂತೆ ಮಾಡುವುದರಿಂದ ಮತ್ತು ಕೇಂದ್ರದಲ್ಲಿರುವ 'ತುಪು' ಅಥವಾ ಗುರಿಗೆ ಹೊಡೆಯುವುದರಿಂದ ಅಂಕಗಳನ್ನು ಗಳಿಸಬಹುದು.
- ಸ್ಥಳೀಯ ಜನರು ರಬ್ಬರ್ ಚೆಂಡನ್ನು ಬಳಸಿ ಮೆಸೊ ಅಮೆರಿಕದಲ್ಲಿ ಆಡಿದ ಆಟಗಳನ್ನು ಈ ಹಿಂದೆ ಅಸ್ತಿತ್ವದಲ್ಲಿರುವಂತೆ ದಾಖಲಿಸಲಾಗಿದೆ. ಆದರೆ ಇವುಗಳು ಬಾಸ್ಕೆಟ್‌ಬಾಲ್ ಅಥವಾ ವಾಲಿಬಾಲ್‌ಗಳ ಜೊತೆ ಹೆಚ್ಚಿನ ಹೋಲಿಕೆಗಳನ್ನು ಹೊಂದಿವೆ ಮತ್ತು ಆಧುನಿಕ ಫುಟ್‌ಬಾಲ್ ಆಟಗಳ ಮೇಲೆ ಇದರ ಪ್ರಭಾವ ಕಡಿಮೆ ಇರುವುದರಿಂದ ಇದನ್ನು ಫುಟ್‌ಬಾಲ್ ಜೊತೆಗೆ ಹೋಲಿಸಲಾಗದು.
- ಈಶಾನ್ಯ ಅಮೆರಿಕಾದಲ್ಲಿರುವ ಭಾರತೀಯರು, ಅದರಲ್ಲೂ ವಿಶೇಷವಾಗಿ ಐಕೊರಿಸ್ ಒಕ್ಕೂಟದವರು ಬಲೆಯ ರಾಕಿಟುಗಳನ್ನು ಬಳಸಿ ಚೆಂಡನ್ನು ಎಸೆಯುವ ಮತ್ತು ಹಿಡಿಯುವ ಆಟವನ್ನು ಆಡುತ್ತಿದ್ದರು; ಲಕ್ರಾಸ್ಸೆ (ಆದರ ಆಧುನಿಕ ಪ್ರಕಾರವನ್ನು ಹೀಗೆ ಕರೆಯುತ್ತಾರೆ) ಎಂದು ಕರೆಯಲ್ಪಡುವ ಈ ಆಟವು ಚೆಂಡು-ಗೋಲುಗಳಿಂದ ಕೂಡಿದ್ದು ಕಾಲಿನಿಂದ ಆಡುವ ಆಟವಾಗಿದ್ದರೂ ಸಹ ಇದನ್ನು "ಫುಟ್‌ಬಾಲ್"ನ ಪ್ರಕಾರಗಳಂತೆ ವಿಂಗಡಿಸಲಾಗಿಲ್ಲ.
- ಈ ತೆರನಾದ ಆಟಗಳು ಮತ್ತು ಇತರ ಆಟಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದವು ಮತ್ತು ಸಂಬಂಧಿಸಿದ ಕ್ರೀಡಾ ಸಂಸ್ಥೆಗಳಲ್ಲಿ ಆರಿಸಿ ಬಂದ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿದ್ದು ಈ ಆಟಗಳ ಮೇಲೆ ಪ್ರಭಾವ ಬೀರಿದ್ದಲ್ಲದೆ, ಕ್ರಮೇಣವಾಗಿ ಫುಟ್‌ಬಾಲ್ ಮೇಲೆಯೂ ಪರಿಣಾಮ ಬೀರಿತು. ಆದಾಗ್ಯೂ, ಆಧುನಿಕ ಫುಟ್‌ಬಾಲ್ ನಿಯಮಾವಳಿಗಳ ಪ್ರಮುಖ ಮೂಲವು ಪಾಶ್ಚಿಮಾತ್ಯ ಯುರೋಪ್, ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ಕಂಡುಬರುತ್ತದೆ.
ಮಧ್ಯಕಾಲೀನ ಮತ್ತು ಆಧುನಿಕ ಯುಗದ ಆರಂಭದಲ್ಲಿ ಯುರೋಪ್
ಬದಲಾಯಿಸಿ- ಮಧ್ಯಯುಗದಲ್ಲಿ ಯುರೋಪ್‌ನಾದ್ಯಂತ, ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್ ನಲ್ಲಿ ವಾರ್ಷಿಕ ಷ್ರೋವ್‌ಟೈಡ್ ಫುಟ್‌ಬಾಲ್ ಪಂದ್ಯಗಳು ಜನಪ್ರಿಯತೆಯ ಉತ್ತುಂಗ ತಲುಪಿದ್ದವು. ಇಂಗ್ಲೆಂಡ್‌ನಲ್ಲಿ ಆಡುವ ಈ ಆಟವು ರೋಮನ್ ಆಕ್ರಮಣದ ಸಮಯದಲ್ಲಿ ಅಲ್ಲಿಗೆ ಬಂದಿರಬಹುದು.
- ಆದರೆ ತೊಂಬತ್ತನೇ ಶತಮಾನದ ಹಿಸ್ಟರಿಯಾ ಬ್ರಿಟನಮ್‌ನಲ್ಲಿ ಹುಡುಗರು "ಚೆಂಡಿನ ಆಟ"ಗಳನ್ನು ಆಡುತ್ತಿದ್ದರು ಎಂದು ನಾರ್ಮನ್ ಪೂರ್ವಜರು ಉಲ್ಲೇಖಿಸಿದ್ದಾರೆ. ಲಾ ಸೋಲೆ ಅಥವಾ ಚೌಲೆ ಎಂದು ಕರೆಯಲಾಗುವ ಆಟವನ್ನು ಬ್ರಿಟನಿ, ನಾರ್ಮ್ಯಾಂಡಿ ಮತ್ತು ಪಿಕಾರ್ಡಿಯಲ್ಲಿ ಆಡುತ್ತಿದ್ದರು ಎಂದು ದಾಖಲಾಗಿದೆ.
- ನಾರ್ಮನ್ ವಿಜಯದ ಪರಿಣಾಮವಾಗಿ ಈ ಫುಟ್‌ಬಾಲ್ ಆಟದ ಪ್ರಕಾರಗಳಲ್ಲಿ ಕೆಲವು ಇಂಗ್ಲೆಂಡ್‌ಗೆ ಬಂದವು.
- ಫುಟ್‌ಬಾಲ್‌ನ ಈ ಪ್ರಕಾರಗಳನ್ನು, ಕೆಲವೊಮ್ಮೆ "ಸಾಮೂಹಿಕ ಫುಟ್‌ಬಾಲ್" ಎಂದು ಉಲ್ಲೇಖಿಸಲಾಗಿದೆ. ಈ ಆಟವನ್ನು ನೆರೆಹೊರೆ ಪಟ್ಟಣಗಳು ಮತ್ತು ಹಳ್ಳಿಗಳ ನಡುವೆ ಆಡಲಾಗುತ್ತದೆ. ಇಲ್ಲಿ ವಿರುದ್ಧ ತಂಡಗಳಲ್ಲಿ ದೊಡ್ಡ ಗುಂಪಿನ ಅನಿಯಮಿತ ಸಂಖ್ಯೆಯ ಆಟಗಾರರಿದ್ದು, ಗಾಳಿ ತುಂಬಿದ ಹಂದಿಯ ಮೂತ್ರಕೋಶವನ್ನು ಅವರ ಎದುರಾಳಿ ಚರ್ಚ್‌ನಂತಹ ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ಸೇರಿಸುವುದಕ್ಕಾಗಿ ಆಟಗಾರರು ಸಾಮೂಹಿಕವಾಗಿ ಕಾದಾಡುತ್ತಾರೆ. ಷ್ರೋವ್‌ಟೈಡ್ ಆಟಗಳು ಆಧುನಿಕ ಕಾಲದಲ್ಲಿಯೂ ಹಲವು ಇಂಗ್ಲಿಷ್ ನಗರಗಳಲ್ಲಿ ಅಸ್ತಿತ್ವದಲ್ಲಿದೆ (ಕೆಳಗೆ ನೋಡಿ).
- ಇಂಗ್ಲೆಂಡ್‌ನಲ್ಲಿ ಆಡುತ್ತಿದ್ದ ಫುಟ್‌ಬಾಲ್ ಬಗ್ಗೆ 1174–1183 ಹೊತ್ತಿಗೆ ವಿಲಿಯಮ್ ಫಿಟ್ಜ್ ಸ್ಟೀಫನ್‌ರವರು ಮೊದಲ ವಿಸ್ತೃತ ವಿವರಣೆಯನ್ನು ನೀಡಿದರು. ಷ್ರೋವ್ ಟ್ಯೂಸ್ಡ್‌ಯ ವಾರ್ಷಿಕ ಉತ್ಸವದ ಸಮಯದಲ್ಲಿ ಲಂಡನ್ ಯುವಕರ ಚಟುವಟಿಕೆಗಳನ್ನು ಅವರು ಹೀಗೆ ವಿವರಿಸಿದ್ದಾರೆ:
- ನಗರದ ಎಲ್ಲಾ ಯುವಕರು ಊಟದ ನಂತರ ಚೆಂಡಿನ ಆಟದಲ್ಲಿ ಪಾಲ್ಗೊಳ್ಳಲು ಮೈದಾನಕ್ಕೆ ಬರುತ್ತಿದ್ದರು. ಪ್ರತಿ ಶಾಲೆಯ ವಿದ್ಯಾರ್ಥಿಗಳು ತಮ್ಮದೇ ಆದ ಚೆಂಡನ್ನು ಹೊಂದಿದ್ದರು; ಪ್ರತಿ ಸಿಟಿ ಕ್ರ್ಯಾಫ್ಟ್‌ನ ಕೆಲಸಗಾರರು ಅವರ ಚೆಂಡುಗಳನ್ನು ಹೊಂದಿದ್ದರು. ಕುದುರೆ ಸವಾರಿ ಮಾಡಿಕೊಂಡು ಬರುತಿದ್ದ ವಯಸ್ಕ ನಾಗರಿಕರು, ಪಾದ್ರಿಗಳು ಮತ್ತು ಶ್ರೀಮಂತರು ಕಿರಿಯರ ಸ್ಪರ್ಧೆಯನ್ನು ವೀಕ್ಷಿಸಿ ತಮ್ಮ ಯೌವ್ವನದ ದಿನಗಳನ್ನು ಮೆಲುಕು ಹಾಕಿಕೊಂಡು ಅನುಭವಿಸುತ್ತಿದ್ದರು; ಆಟವನ್ನು ನೋಡುತ್ತಿರುವಂತೆ ಅತ್ಯುತ್ಸಾಹದಿಂದ ಅವರು ತಮ್ಮ ಆಂತರಿಕ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದುದನ್ನು ನೀವು ಕಾಣಬಹುದು ಮತ್ತು ಈ ಮಂದಿ ಹಾಯಾಗಿರುವ ಯುವಕರ ಜೊತೆ ವಿನೋದಕ್ಕಿಳಿದು ಸಿಕ್ಕಿಬೀಳುತ್ತಿದ್ದರು. .[೭]
- ಈ ಆಟದ ಬಗ್ಗೆ ಇದ್ದ ತೀರಾ ಹಳೆಯ ಉಲ್ಲೇಖವು ಕೇವಲ "ಚೆಂಡಿನ ಆಟ" ಅಥವಾ "ಚೆಂಡಿನಲ್ಲಿ ಆಡುವುದು" ಎಂದು ತಿಳಿಸುವುದು. ಆ ಕಾಲದಲ್ಲಿ ಆಡುತ್ತಿದ್ದ ಆಟದಲ್ಲಿ ಚೆಂಡನ್ನು ಒದೆಯಬೇಕಾದ ಅವಶ್ಯಕತೆಯಿರಲಿಲ್ಲ ಎಂಬ ಅಂಶವನ್ನು ಈ ಉಲ್ಲೇಖವು ಬಲಪಡಿಸುತ್ತದೆ.
- ಬಹುಶಃ ಫುಟ್‌ಬಾಲ್ 1280ರಲ್ಲಿ ಉಲ್ಗಾಮ್, ನಾರ್ಥಂಬರ್ಲೆಂಡ್, ಇಂಗ್ಲೆಂಡ್‌ನಿಂದ ಫುಟ್‌ಬಾಲ್ ಬಂದಿರಬಹುದೆಂದು ಚೆಂಡಿನ ಆಟಕ್ಕಿರುವ ಪ್ರಾಚೀನ ಉಲ್ಲೇಖ ಹೀಗೆ ತಿಳಿಸುತ್ತದೆ: "ಹೆನ್ರಿ... ಚೆಂಡನ್ನು ಆಡುತ್ತಿರುವಾಗ.. ಡೇವಿಡ್‌ನ ವಿರುದ್ಧ ಓಡಿದನು" [೮].
- 1321ರಲ್ಲಿ ಶೌಲ್ದಮ್, ನೊರ್ಫೊಲ್ಕ್, ಇಂಗ್ಲೆಂಡ್‌ಗೆ ಫುಟ್‌ಬಾಲ್ ಆಟವು ಆಗಮಿಸಿದೆ ಎಂದು ತಿಳಿಸುವ ಮೊದಲ ನಿರ್ದಿಷ್ಟ ಉಲ್ಲೇಖವು ಹೀಗೆ ತಿಳಿಸುತ್ತದೆ: "ಅವನು ಚೆಂಡಿನ ಆಡುತ್ತಿರುವಾಗ ಚೆಂಡನ್ನು ಒದೆದನು, ಅದು ಅವನ ವಿರುದ್ಧ ದಿಕ್ಕಿನಿಂದ ಓಡಿ ಬರುತ್ತಿರುವ ಅವನ ಸ್ನೇಹಿತನ ಮೇಲೆ ಬಿದ್ದು, ಸ್ನೇಹಿತನು ಗಾಯಗೊಂಡನು".[೮]
- 1314ರಲ್ಲಿ ಲಂಡನ್ ನಗರದ ಲಾರ್ಡ್ ಮೇಯರ್ ಆಗಿರುವ ನಿಕೋಲಸ್ ಡೆ ಫರ್ನ್‌ಡೋನ್‌ರು ಫ್ರಾನ್ಸ್‌ನಲ್ಲಿ ಆ ಕಾಲದಲ್ಲಿ ಶ್ರೀಮಂತ ಇಂಗ್ಲೀಷರು ಆಡುತ್ತಿದ್ದ ಫುಟ್‌ಬಾಲ್‌ನ್ನು ನಿಷೇಧಿಸಲು ಆದೇಶಿಸಿದನು. ಆ ಆದೇಶದ ಅನುವಾದವು ಹೀಗೆ ತಿಳಿಸುತ್ತದೆ: "ಸಾರ್ವಜನಿಕ ಮೈದಾನಗಳಲ್ಲಿ ದೊಡ್ಡ ಫುಟ್ ಬಾಲ್‌ಗಳನ್ನು ಒದೆಯುವುದರಿಂದ ನಗರದಲ್ಲಿ ದೊಡ್ಡ ಪ್ರಮಾಣದ ಶಬ್ದ ಉಂಟಾಗುತ್ತದೆ, ಇದು ದೇವರು ನಿಷೇಧಿಸಿದ ಅನೇಕ ದುಷ್ಟಶಕ್ತಿಗಳು ಮತ್ತೆ ತಲೆಎತ್ತಲು ಎಡೆ ಮಾಡಿಕೊಡಬಹುದು [rageries de grosses pelotes de pee ]: ಹಾಗಾಗಿ ಇನ್ನು ಮುಂದೆ ಈ ನಗರದಲ್ಲಿ ಅಂತಹ ಆಟವನ್ನು ಆಡಿದಲ್ಲಿ ಕಠಿಣ ಶಿಕ್ಷೆಯನ್ನು ನೀಡುವುದಾಗಿ ರಾಜನ ಪರವಾಗಿ ನಾವು ಆದೇಶಿಸುತ್ತೇವೆ ಮತ್ತು ಆಟವನ್ನು ನಿಷೇಧಿಸುತ್ತೇವೆ." ಇದು ಫುಟ್‌ಬಾಲ್‌ಗೆ ಇರುವ ಅತ್ಯಂತ ಹಳೆಯ ಉಲ್ಲೇಖವಾಗಿದೆ.
- 1363ರಲ್ಲಿ ರಾಜ ಇಂಗ್ಲೆಂಡ್‌ನ IIIನೇ ಎಡ್ವರ್ಡ್‌ನು "...ಹ್ಯಾಂಡ್‌ಬಾಲ್, ಫುಟ್‌ಬಾಲ್ ಅಥವಾ ಹಾಕಿ; ಬೇಟೆ ಮತ್ತು ಕೋಳಿ ಜಗಳ ಅಥವಾ ಇತರ ಅಂತಹ ವ್ಯರ್ಥ ಆಟಗಳನ್ನು" ನಿಷೇಧಿಸುವಂತೆ ಆದೇಶಿಸಿದನು. ವಾಸ್ತವಾಂಶ ಏನೇ ಇರಲಿ, ಇಲ್ಲಿ "ಫುಟ್‌ಬಾಲ್"ನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ ಮತ್ತು ಹ್ಯಾಂಡ್‌ಬಾಲ್‌ನಂತಹ ದೇಹದ ಇತರ ಭಾಗಗಳಿಂದ ಆಡುವ ಆಟಗಳಿಂದ ಫುಟ್‌ಬಾಲ್‌ನ್ನು ಪ್ರತ್ಯೇಕಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
- 1409ರಲ್ಲಿ ರಾಜ ಇಂಗ್ಲೆಂಡ್‌ನ IVನೇ ಹೆನ್ರಿಯವರು "ಫುಟ್‌ಬಾಲ್"ಗಾಗಿ ಹಣ ಸಂಗ್ರಹಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಇಂಗ್ಲಿಷ್ ನಲ್ಲಿ "ಫುಟ್‌ಬಾಲ್" ಪದ ಬಳಸಿರುವುದಕ್ಕೆ ಅತ್ಯಂತ ಹಳೆಯ ದಾಖಲೆ.[೮][೯]
- 15ನೆ ಶತಮಾನದ ಕೊನೆಯಲ್ಲಿ ನಾಟಿಂಗಮ್ಶೈರ್ನ ಕ್ಯಾವ್ಸ್ಟನ್ನಲ್ಲಿ ಫುಟ್‌ಬಾಲ್ ಆಡಿರುವುದರ ಬಗ್ಗೆ ಲ್ಯಾಟಿನ್‌ನಲ್ಲಿ ಉಲ್ಲೇಖವಿದೆ. "ಕಿಕ್ಕಿಂಗ್ ಆಟ" ಮತ್ತು ಚೆಂಡನ್ನು ಸ್ವಲ್ಪಸ್ವಲ್ಪವಾಗಿ ಉರುಳಿಸುತ್ತಾ ಮುಂದುವರಿಯುವುದಕ್ಕೆ ಮೊದಲ ವಿವರಣೆ ಹೀಗಿದೆ: "ಸಾಮಾನ್ಯ ವಿನೋದಕ್ಕಾಗಿ ಸೇರಿದ ಸಂದರ್ಭದಲ್ಲಿ ಎಲ್ಲರೂ ಸೇರಿ ಆಡಿದ ಆಟವನ್ನು ಕೆಲವರು ಫುಟ್-ಬಾಲ್ ಎಂದು ಕರೆದರು.
- ಯುವಕರಿಂದ ಕೂಡಿದ ಈ ಸ್ಥಳೀಯ ಕ್ರೀಡೆಯಲ್ಲಿ, ದೊಡ್ಡ ಚೆಂಡನ್ನು ಕೈಯಲ್ಲಿ ಮುಟ್ಟದೆ ಗಾಳಿಯಲ್ಲಿ ಎಸೆಯುವುದರ ಬದಲು ಕಾಲನ್ನು ಬಳಸಿ ನೆಲದಲ್ಲಿ ಚೆಂಡನ್ನು (ಎದುರಾಳಿ ತಂಡದೆಡೆಗೆ) ಒದೆಯುವುದು ಮತ್ತು ಉರುಳಿಸುವುದಾಗಿದೆ". ಚರಿತ್ರೆ ಲೇಖಕರು ಫುಟ್‌ಬಾಲ್ ಮೈದಾನಕ್ಕೆ ಮೊದಲು ಉಲ್ಲೇಖವನ್ನು ನೀಡಿದ್ದಾರೆ, ಆದರ ಸಾಲು ಹೀಗೆ ಪ್ರಾರಂಭವಾಗುವುದು: "ಗಡಿಗಳನ್ನು ಗುರುತಿಸಲಾಗಿದೆ ಮತ್ತು ಆಟ ಪ್ರಾರಂಭವಾಗಿದೆ.[೮]
- ಮಧ್ಯಕಾಲೀನ ಮತ್ತು ಆಧುನಿಕ ಯುಗದ ಆರಂಭದಲ್ಲಿ ಇತರೆ ಪ್ರಥಮಗಳು:
- "ಫುಟ್‌ಬಾಲ್" ಆಟಕ್ಕಿಂತ ಹೆಚ್ಚಾಗಿ ಚೆಂಡಿನ ಒಂದು ಕಲ್ಪನೆಯಾಗಿದೆ ಎನ್ನುವುದನ್ನು 1486ರಲ್ಲಿ ಪ್ರಸ್ತಾಪಿಸಲಾಗಿದೆ.[೯] ಈ ಉಲ್ಲೇಖವು ಡ್ಯಾಮ್ ಜುಲಿಯನಾ ಬರ್ನೆರ್‍ರವರ ಬುಕ್ ಆಫ್ ಸೈಂಟ್ ಅಲ್ಬಾನ್ಸ್ ನಲ್ಲಿದೆ. ಈ ಉಲ್ಲೇಖವು ಹೀಗೆ ತಿಳಿಸುವುದು: "ನಿರ್ದಿಷ್ಟ ವೃತ್ತಾಕಾರದ ಸಾಧನದಿಂದ ಇದನ್ನು ಆಡಲಾಗುತ್ತದೆ. ಈ ಸಾಧನವನ್ನು ಕಾಲಿನಿಂದ ಆಡಲಾಗುವುದು ಮತ್ತು ಫುಟ್‌ಬಾಲ್‌ನ್ನು ಲ್ಯಾಟಿನ್‌ನಲ್ಲಿ 'ಪಿಲಾ ಪೆಡಲಿಸ್' ಎಂದು ಕರೆಯುತ್ತಾರೆ." [೮]
- 1526ರಲ್ಲಿ ರಾಜ ಇಂಗ್ಲೆಂಡ್‌ನ VIIIನೇ ಹೆನ್ರಿ ಒಂದು ಜೋಡಿ ಫುಟ್‌ಬಾಲ್ ಬೂಟುಗಳಿಗೆ ಆದೇಶಿಸಿದ್ದನು.[೧೦]
- 1580ರಲ್ಲಿ ಮಹಿಳೆಯರು ಫುಟ್‌ಬಾಲ್‌ನ ಒಂದು ಪ್ರಕಾರವನ್ನು ಆಡುತ್ತಿದ್ದರು ಎನ್ನುವುದನ್ನು ಸರ್ ಫಿಲಿಪ್ ಸಿಡ್ನಿ ತನ್ನ ಒಂದು ಕವನಗಳಲ್ಲಿ ಹೀಗೆ ವಿವರಿಸಿದ್ದಾನೆ: "ಎಲ್ಲರಿಗೂ ಒಳ್ಳೆಯ ಸಮಯ ಬಂದೇ ಬರುತ್ತದೆ, ಲಂಗ ಧರಿಸಿ ಫುಟ್‌ಬಾಲ್ ಆಡುತ್ತಿದ್ದ ಹುಡುಗಿಯರ ಪೈಕಿ ಅವರು ಎತ್ತರವಾಗಿದ್ದರು ಎಂದು ಕೆಲವೊಮ್ಮೆ ತಾಯಿ ನನಗೆ ಹೇಳುತ್ತಿದ್ದಳು." [೧೧]
- 16ನೇ ಶತಮಾನದ ಕೊನೆಯಲ್ಲಿ ಮತ್ತು 17ನೇ ಶತಮಾನದ ಆರಂಭದಲ್ಲಿ ಗೋಲುಗಳ ಬಗ್ಗೆ ಮೊದಲು ಉಲ್ಲೇಖಿಸಲಾಗಿದೆ. 1584 ಮತ್ತು 1602ರಲ್ಲಿ ಕ್ರಮವಾಗಿ ಜಾನ್ ನೋರ್ಡನ್ ಮತ್ತು ರಿಚರ್ಡ್ ಕೆರೊರವರು ಕಾರ್ನಿಷ್ ಹರ್ಲಿಂಗ್‌ನಲ್ಲಿ "ಗೋಲುಗಳು" ಬಗ್ಗೆ ಉಲ್ಲೇಖಿಸಿದ್ದಾರೆ.
- ಗೋಲುಗಳನ್ನು ಹೇಗೆ ಬಾರಿಸುವುದೆಂದು ಕೆರೊ ಹೀಗೆ ವಿವರಿಸಿದ್ದಾರೆ: "ಎರಡು ಪೊದೆಗಳನ್ನು ಹೊಂದಿರುವ ಮೈದಾನದಲ್ಲಿ ಎಂಟು ಅಥವಾ ಹತ್ತು ಫುಟ್‌ಬಾಲ್ ಆಟಗಾರರು ಹತ್ತು ಅಥವಾ ಹನ್ನೆರಡು ಜನರಿರುವ ಎದುರಾಳಿ ತಂಡವನ್ನು ಗೋಲುಗಳಿಂದ ಸೋಲಿಸಿದರು".[೧೨] ಗೋಲ್‌ಕೀಪರ್‌ಗಳು ಮತ್ತು ಆಟಗಾರರ ನಡುವೆ ಚೆಂಡನ್ನು ವರ್ಗಾಯಿಸುವುದರ ಬಗ್ಗೆ ಸಹ ಇವರು ಮೊದಲ ಬಾರಿ ವಿವರಿಸಿದ್ದಾರೆ.
- ಗೋಲನ್ನು ಗಳಿಸುವುದರ ಕುರಿತು ಜಾನ್ ಡೇರದಿ ಬ್ಲೈಂಡ್ ಬೆಗ್ಗರ್ ಆಫ್ ಬೆತ್ನಲ್ ಗ್ರೀನ್ ನಲ್ಲಿ ಮೊದಲ ಬಾರಿದೆ ನೇರವಾಗಿ ಉಲ್ಲೇಖಿಸಲಾಗಿದೆ (ಸುಮಾರು 1600ರ ಹೊತ್ತಿಗೆ ಆಡಿ ತೋರಿಸಲಾಯಿತು; 1659ರಲ್ಲಿ ಪ್ರಕಟಿಸಲಾಯಿತು): "ನಾನು ಕ್ಯಾಂಪ್-ಬಾಲ್‌ನಲ್ಲಿ ಗೋಲನ್ನು ಆಡಿದೆನು" (ಅತ್ಯಂತ ಹಿಂಸಾತ್ಮಕ ಫುಟ್‌ಬಾಲ್‌ನ ವಿಧವಾದ ಇದು ಪೂರ್ವ ಅಂಜಿಲಿಯಾದಲ್ಲಿ ಜನಪ್ರಿಯವಾಗಿದೆ).
- ಹಾಗೆಯೇ 1613ರಲ್ಲಿ ಮೈಕಲ್ ಡ್ರ್ಯಾಟನ್ ತನ್ನ ಕವನದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ "ಚೆಂಡನ್ನು ಎಸೆದಾಗ ಮತ್ತು ತಂಡಗಳು ಮುನ್ನುಗ್ಗಿ ಅದನ್ನು ಗೋಲಿನೆಡೆಗೆ ಕೊಂಡೊಯ್ಯುತ್ತಿದ್ದವು".
ಕ್ಯಾಲ್ಸಿಯೊ ಫಿಯೊರೆಂಟಿನೊ
ಬದಲಾಯಿಸಿ- 16ನೇ ಶತಮಾನದಲ್ಲಿ ಪಿಯಾಜಾ ಡೆಲ್ಲಾ ನೊವರ್ ಅಥವಾ ಪಿಯಾಜಾ ಸ್ಯಾಂಟಾ ಕೊರ್ಸ್‌ನಲ್ಲಿ "ಕ್ಯಾಲ್ಸಿಯೊ ಸ್ಟೋರಿಕೊ " ("ಐತಿಹಾಸಿಕ ಕಿಕ್‌ಬಾಲ್") ಆಟವು ಎಪಿಫನಿ ಮತ್ತು ಲೆಂಟ್ ನಡುವೆ ಪಂದ್ಯ ನಡೆಯುವ ಅವಧಿಯಲ್ಲಿ ಫ್ಲೋರೆನ್ಸ್ ನಗರವು ಪ್ರಸಿದ್ಧವಾಗಿತ್ತು. ನಗರದ ಯುವ ಶ್ರೀಮಂತರು ರೇಷ್ಮೆ ಬಟ್ಟೆಗಳನ್ನು ಧರಿಸಿಕೊಳ್ಳುತ್ತಿದ್ದರು ಮತ್ತು ಹಿಂಸಾತ್ಮಕವಾದ ಫುಟ್‌ಬಾಲ್ ಪ್ರಕಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಉದಾಹರಣೆಗೆ, ಕ್ಯಾಲ್ಸಿಯೊ ಆಟಗಾರರು ಎದುರಾಳಿಗಳಿಗೆ ಹೊಡೆಯಬಹುದು, ಭುಜದಿಂದ ಹೊಡೆಯಬಹುದು ಮತ್ತು ಒದೆಯಬಹುದು. ಬೆಲ್ಟಿನಿಂದ ಕೆಳಗಿನ ದೇಹದ ಭಾಗಗಳಿಗೆ ಹೊಡೆಯುವುದಕ್ಕೆ ಇದರಲ್ಲಿ ಅನುಮತಿ ಇಲ್ಲ.
- ಈ ಆಟವು ಸೈನಿಕ ತರಬೇತಿಯಂತೆ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. 1580ರಲ್ಲಿ ಕೌಂಟ್ ಜಿಯೊವನ್ನಿ ಡೆ ಬರ್ದಿ ಡೀ ವೆರ್ನಿಯೊರವರು ಆಟದ ಬಗ್ಗೆ ಹೀಗೆ ಬರೆದಿದ್ದಾರೆ: Discorso sopra 'l giuoco del ಕ್ಯಾಲ್ಸಿಯೊ ಫಿಯೊರೆಂಟಿನೊ . ಇದನ್ನು ಯಾವುದೇ ಫುಟ್‌ಬಾಲ್ ಆಟದ ಮೊದಲ ನಿಯಮಗಳು ಎಂದು ಕೆಲವೊಮ್ಮೆ ಕರೆಯಲಾಗುತ್ತದೆ. ಈ ಆಟವನ್ನು ಜನವರಿ 1739ರ ನಂತರ ಆಡಲಿಲ್ಲ (ಮೇ 1930ರಲ್ಲಿ ಮತ್ತೆ ಆಡುವವರೆಗೆ).
ಫುಟ್‌ಬಾಲ್ ನಿಷೇಧಕ್ಕೆ ಪ್ರಯತ್ನಗಳು ಮತ್ತು ಅಧಿಕೃತ ಅಸಮ್ಮತಿ
ಬದಲಾಯಿಸಿ- ಫುಟ್‌ಬಾಲ್ ಆಟಗಳನ್ನು ಅದರಲ್ಲೂ ವಿಶೇಷವಾಗಿ ಗಲಭೆಯುಂಟು ಮಾಡುವ ಮತ್ತು ಒಡಕುಂಟು ಮಾಡುವ ಫುಟ್‌ಬಾಲ್ ಇತರ ಪ್ರಕಾರಗಳನ್ನು ನಿಷೇಧಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ವಿಶೇಷವಾಗಿ ಮಧ್ಯ ಕಾಲೀನ ಯುಗ ಮತ್ತು ಆಧುನಿಕ ಯುಗದ ಪ್ರಾರಂಭ ಕಾಲದಲ್ಲಿ ಇಂಗ್ಲೆಂಡ್ ಮತ್ತು ಯುರೋಪ್‌ನ ಇತರ ಭಾಗಗಳಲ್ಲೂ ಇಂತಹ ಪ್ರಯತ್ನಗಳು ನಡೆದವು.
- 1324 ಮತ್ತು 1667ರ ನಡುವಿನ ಅವಧಿಯಲ್ಲಿ 30ಕ್ಕಿಂತಲೂ ಹೆಚ್ಚು ರಾಯಲ್ ಮತ್ತು ಸ್ಥಳೀಯ ಕಾನೂನುಗಳನ್ನು ಬಳಸಿ ಫುಟ್‌ಬಾಲ್ ಅನ್ನು ಇಂಗ್ಲೆಂಡ್‌ನಲ್ಲಿ ನಿಷೇಧಿಸಲಾಯಿತು. ಜನಪ್ರಿಯ ಆಟಗಳ ಮೇಲೆ ನಿಷೇಧ ಹೇರುವುದರಲ್ಲಿರುವ ಜಟಿಲತೆಯನ್ನು ಇಂತಹ ಕಾನೂನುಗಳು ಪದೇ ಪದೇ ಶ್ರುತಪಡಿಸಿವೆ.
- ರಾಜ IIನೇ ಎಡ್ವರ್ಡ್ ಲಂಡನ್‌ನಲ್ಲಿ ಫುಟ್‌ಬಾಲ್ ಹತೋಟಿ ತಪ್ಪಿ ತೊಂದರೆಗೊಳಗಾದ್ದರಿಂದ, 13 ಎಪ್ರಿಲ್ 1314ರಲ್ಲಿ ಅವನು ಫುಟ್‌ಬಾಲ್‌ನ್ನು ನಿಷೇಧಿಸುವ ಘೋಷಣೆಯನ್ನು ಹೀಗೆ ಹೊರಡಿಸಿದನು: "ಸಾರ್ವಜನಿಕ ಮೈದಾನಗಳಲ್ಲಿ ದೊಡ್ಡ ಫುಟ್ ಬಾಲ್‌ಗಳನ್ನು ಒದೆಯುವುದರಿಂದ ನಗರದಲ್ಲಿ ದೊಡ್ಡ ಪ್ರಮಾಣದ ಶಬ್ದ ಉಂಟಾಗುತ್ತದೆ. ಇದು ದೇವರು ನಿಷೇಧಿಸಿದ ದುಷ್ಟಶಕ್ತಿಗಳ ಉದ್ಭವಕ್ಕೆ ಎಡೆಮಾಡಿಕೊಡಬಹುದು. ಹಾಗಾಗಿ ಇನ್ನು ಈ ನಗರದಲ್ಲಿ ಅಂತಹ ಆಟವನ್ನು ಆಡಿದಲ್ಲಿ ಕಠಿಣ ಶಿಕ್ಷೆಯನ್ನು ನೀಡುವುದಾಗಿ ನಾವು ರಾಜನ ಪರವಾಗಿ ಆದೇಶಿಸುತ್ತೇವೆ ಮತ್ತು ಆಟವನ್ನು ನಿಷೇಧಿಸುತ್ತೇವೆ."
- ಫುಟ್‌ಬಾಲ್ ಮತ್ತು ಇತರ ಆಟಗಳು ಯುದ್ಧಕ್ಕೆ ಅಗತ್ಯವಿರುವ ಬಿಲ್ಲುಗಾರಿಕೆಯನ್ನು ಅಭ್ಯಸಿಸುವುದರಿಂದ ಜನರ ಮನಸ್ಸನ್ನು ಬೇರೆಡೆಗೆ ಹರಿಸುವಂತೆ ಮಾಡುತ್ತದೆ ಎಂಬ ಕಾರಣಕ್ಕಾಗಿ IIIನೇ ಎಡ್ವರ್ಡ್ 12 ಜೂನ್ 1349ರಲ್ಲಿ ಫುಟ್‌ಬಾಲ್ ನ್ನು ನಿಷೇಧಿಸಿದನು.
- 1424ರಲ್ಲಿ ಸ್ಕಾಟ್‌ಲೆಂಡ್‌ನ ಸಂಸತ್ತು ಫುಟ್‌ಬಾಲ್ ಕಾಯಿದೆಯನ್ನು ಅಂಗೀಕರಿಸಿತು. ಪೇನೆ ಆಫ್ ಈಜ್ ಡ ಅಡಿಯಲ್ಲಿ ಫುಟ್‌ಬಾಲ್ ಆಡುವುದನ್ನು ನಿಷೇಧಿಸಲಾಗಿದೆ ಮತ್ತು ಫುಟ್‌ಬಾಲ್ ಆಟ ಆಡದಂತೆ ಕಾನೂನು ಮಾಡಲಾಗಿದೆ - ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಫುಟ್‌ಬಾಲ್ ಆಡುವುದು ಕಾನುನೂಬಾಹಿರವಾಗಿದೆ ಮತ್ತು ಆಡಿದಲ್ಲಿ ನಾಲ್ಕು ಪೆನ್ಸ್‌ನಷ್ಟು ದಂಡ ವಿಧಿಸಬಹುದಾಗಿದೆ ಎಂದು ಈ ಕಾಯಿದೆಯು ತಿಳಿಸುವುದು.
- 1608ರಿಂದ ಮ್ಯಾನ್‌ಚೆಸ್ಟರ್‌ನಲ್ಲಿರುವ ಸ್ಥಳೀಯ ಪ್ರಾಧಿಕಾರಗಳು ಹೀಗೆ ತಮ್ಮ ಅಸಮಾಧಾನವನ್ನು ಪ್ರದರ್ಶಿಸಿವೆ: "ಫುಟ್‌ಬಾಲ್‌ನಿಂದಾಗಿ ಮ್ಯಾನ್‌ಚೆಸ್ಟರ್ ನಗರದಲ್ಲಿ ದೊಡ್ಡ ಗಲಭೆ ಸಂಭವಿಸಿದೆ ಮತ್ತು ನೀಚ ಹಾಗೂ ಅಶಿಸ್ತಿನಿಂದ ಕೂಡಿದ ವ್ಯಕ್ತಿಗಳ ಗುಂಪು ಕಿಟಕಿ ಗಾಜುಗಳನ್ನು ಒಡೆದಿದೆ." [೧೩] ಅದೇ ವರ್ಷ
- ವಿಲಿಯಮ್ ಶೇಕ್ಸ್‌ಪಿಯರ್ ಅಸಮ್ಮತಿ ಸೂಚಕವಾಗಿ "ಫುಟ್‌ಬಾಲ್" ಪದವನ್ನು ಬಳಸಿದ್ದಾರೆ. ಶೇಕ್ಸ್‌ಪಿಯರ್‌ನ ನಾಟಕ ಕಿಂಗ್ ಲಿಯರ್ ನಲ್ಲಿ "ನಾರ್ ಟ್ರಿಪ್ಪಡ್ ನೈದರ್, ಯು ಬೇಸ್ ಫುಟ್‌ಬಾಲ್ ಪ್ಲೇಯರ್" ಎಂಬ ಸಾಲು ಬರುವುದು (ಅಂಕ I, ದೃಶ್ಯ 4). ಶೇಕ್ಸ್‌ಪಿಯರ್ ಎ ಕಾಮಿಡಿ ಆಫ್ ಎರರ್ಸ್ ನಲ್ಲಿ ಈ ಆಟದ ಬಗ್ಗೆ ಪ್ರಸ್ತಾಪಿಸಿದ್ದಾರೆ (ಅಂಕ II, ದೃಶ್ಯ 1):
Am I so round with you as you with me,
That like a football you do spurn me thus? You spurn me hence, and he will spurn me hither:
If I last in this service, you must case me in leather.
- "ಸ್ಪರ್ನ್" ಎನ್ನುವುದು ಪದಶಃ ದೂರಕ್ಕೆ ಒದೆ ಎಂದಾಗುತ್ತದೆ. ಆದ್ದರಿಂದ ಆಟಗಾರರ ನಡುವೆ ಚೆಂಡನ್ನು ಒದೆಯುವ ಆಟವನ್ನು ಇದು ಸೂಚಿಸುತ್ತದೆ.
- ರಾಜ ಇಂಗ್ಲೆಂಡ್‌ನ Iನೇ ಜೇಮ್ಸ್ರ ಬುಕ್ ಆಫ್ ಗೇಮ್ಸ್ ನಲ್ಲಿ (1618) ಕ್ರೈಸ್ತರು ಭಾನುವಾರ ಮಧ್ಯಾಹ್ನ ಪೂಜೆಯ ನಂತರ ಫುಟ್‌ಬಾಲ್ ಆಡುತ್ತಿದ್ದರು ಎನ್ನುವುದನ್ನು ಸೂಚಿಸಲಾಗಿದೆ.[೧೪]
- ಪ್ಯೂರಿಟನ್‌ರು ಸ್ಯಾಬತ್‌ನಲ್ಲಿ ಇಟ್ಟ ನಿಷ್ಠೆಯನ್ನು ಹಾಳುಮಾಡುವ ಪ್ರಯತ್ನದಂತೆ ಪುಸ್ತಕವು ಕಾಣುವುದು.[೧೫]
ಆಧುನಿಕ ನಿಯಮಾವಳಿಗಳ ರಚನೆ
ಬದಲಾಯಿಸಿಇಂಗ್ಲೀಷ್ ಪಬ್ಲಿಕ್ ಶಾಲೆಗಳು
ಬದಲಾಯಿಸಿ- ಬ್ರಿಟನಿನಾದ್ಯಂತ ನಿರಂತರವಾಗಿ ವಿವಿಧ ಪ್ರಕಾರಗಳಲ್ಲಿ ಫುಟ್‌ಬಾಲ್ ಆಡಲಾಗುತ್ತಿರುವುದರಿಂದ, ಬ್ರಿಟನ್‌ನ ಪಬ್ಲಿಕ್ ಶಾಲೆಗಳು (ಇತರ ದೇಶಗಳಲ್ಲಿ ಖಾಸಗಿ ಶಾಲೆಗಳು ಎಂದು ಕರೆಯಲಾಗುವ) ಆಧುನಿಕ ಫುಟ್‌ಬಾಲ್ ನಿಯಮಾವಳಿಗಳ ರಚನೆಯಲ್ಲಿ ನಾಲ್ಕು ಪ್ರಮುಖ ಸಾಧನೆಗಳನ್ನು ಮಾಡಿದ ಗೌರವವನ್ನು ಪಡೆದುಕೊಂಡಿವೆ.
- ಮೊದಲನೆಯದಾಗಿ ಈ ಶಾಲೆಗಳು ಫುಟ್‌ಬಾಲ್‌ನ್ನು ಸಾಮೂಹಿಕವಾಗಿ ಆಡುವ ಪ್ರಕಾರದಿಂದ ಸಂಘಟಿತ ತಂಡದ ಆಟವಾಗಿ ಬದಲಾಯಿಸಿದರು ಎನ್ನುವುದನ್ನು ವಾಸ್ತವಾಂಶಗಳು ವಿವರಿಸುತ್ತವೆ.
- ಎರಡನೆಯದಾಗಿ ಫುಟ್‌ಬಾಲ್‌ನ ಹಿಂದಿನ ಹಲವು ವಿವರಣೆಗಳು ಮತ್ತು ಉಲ್ಲೇಖಗಳನ್ನು ಈ ಶಾಲೆಗಳಲ್ಲಿ ಓದಿದವರಿಂದ ದಾಖಲಿಸಲಾಗಿದೆ.
- ಮೂರನೆಯದಾಗಿ, ಈ ಶಾಲೆಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಮೊದಲ ಕ್ರೋಡೀಕೃತ ಫುಟ್‌ಬಾಲ್ ಆಟಗಳನ್ನು ಆಡಿರುವುದರಿಂದ, ಶಾಲೆಗಳ ನಡುವೆ ಪಂದ್ಯಗಳನ್ನು ಪ್ರಾರಂಭವಾಗಲು ಕಾರಣವಾಯಿತು.
- ಕೊನೆಯದಾಗಿ, ಇಂಗ್ಲಿಷ್ ಪಬ್ಲಿಕ್ ಶಾಲೆಗಳು ಆಟದಲ್ಲಿ "ಒದೆಯುವುದು" ಮತ್ತು "ಓಡುವುದರ" (ಅಥವಾ "ಕೊಂಡೊಯ್ಯುವುದು") ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದವು.
- ಫುಟ್‌ಬಾಲ್ ಹೋಲುವ ಆಟಗಳನ್ನು ಇಂಗ್ಲಿಷ್ ಪಬ್ಲಿಕ್ ಶಾಲೆಗಳಲ್ಲಿ ಆಡುತ್ತಿದ್ದರು. ಅವರಲ್ಲಿ ಮುಖ್ಯವಾಗಿ ಇದನ್ನು ಮೇಲ್ವರ್ಗ, ಮೇಲ್ಮಧ್ಯಮ ವರ್ಗ ಮತ್ತು ವೃತ್ತಿಪರದವರು ಆಡುತ್ತಿದ್ದರು ಎಂದು 1519ರಲ್ಲಿ ವಿಲಿಯಮ್ ಹಾರ್ಮನ್ರ ವಲ್ಗಾರಿಯಾ ಪುಸ್ತಕದಲ್ಲಿ ಫುಟ್‌ಬಾಲ್ ಕುರಿತು ಬರೆದ ಅತ್ಯಂತ ಹಳೆಯ ಸಾಕ್ಷ್ಯಗಳನ್ನು ಕಾಣಬಹುದು.
- ಹಾರ್‌ಮನ್‌ರವರು ಎಟನ್ ಮತ್ತು ವಿನ್‌ಚೆಸ್ಟರ್ ಕಾಲೇಜುಗಳಲ್ಲಿ ಮುಖ್ಯಶಿಕ್ಷಕರಾಗಿದ್ದರು ಮತ್ತು ಅವರ ಲ್ಯಾಟಿನ್ ಪಠ್ಯಪುಸ್ತಕದಲ್ಲಿ ಭಾಷಾಂತರ ಅಭ್ಯಾಸಕ್ಕಾಗಿ "ನಾವು ಗಾಳಿ ತುಂಬಿದ ಚೆಂಡಿನೊಂದಿಗೆ ಆಡುತ್ತೇವೆ" ಎಂಬ ವಾಕ್ಯವನ್ನು ಪ್ರಸ್ತಾಪಿಸಲಾಗಿದೆ.
- 16ನೇ ಶತಮಾನದ ಆದಿಯಲ್ಲಿ ಎಟನ್ ಕಾಲೇಜಿನ ವಿದ್ಯಾರ್ಥಿಯಾಗಿರುವ, ನಂತರ ಇತರ ಇಂಗ್ಲಿಷ್ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾದ ರಿಚರ್ಡ್ ಮುಲ್‌ಕಸ್ಟರ್ರ್ "ಶ್ರೇಷ್ಠ ಹದಿನಾರನೇ ಶತಮಾನವು ಫುಟ್‌ಬಾಲ್‌ನ್ನು ಜಗತ್ತಿಗೆ ಎತ್ತಿ ತೋರಿಸಿತು" ಎಂದು ವಿವರಿಸಿದ್ದಾರೆ.[೧೬] ಇದು ಸಂಘಟಿತ ತಂಡದ ಫುಟ್‌ಬಾಲ್ ಆಟದ ಬಗ್ಗೆ ಇರುವ ಅತ್ಯಂತ ಹಳೆಯ ಪುರಾವೆ ಇವರು ನೀಡಿದ ಕೊಡುಗೆಗಳಲ್ಲಿ ಒಂದಾಗಿದೆ.
- ಮುಲ್‌ಕಸ್ಟರ್‌ರ ಬರಹಗಳಲ್ಲಿ ತಂಡಗಳು ("ಸೈಡ್ಸ್" ಮತ್ತು "ಪಾರ್ಟಿಸ್"), ಸ್ಥಾನಗಳು ("ಸ್ಟ್ಯಾಂಡಿಂಗ್ಸ್"), ರೆಫರಿ ("ಜಡ್ಜ್ ಒವರ್ ಪಾರ್ಟಿಸ್") ಮತ್ತು ತರಬೇತುದಾರ "(ಟ್ರೈನಿಂಗ್ ಮಾಸ್ಟರ್)" ಎಂದು ಉಲ್ಲೇಖಿಸಲಾಗಿವೆ. ಮುಲ್‌ಕಸ್ಟರ್‌ರ "ಫುಟ್‌ಬಾಲ್" ಪುಸ್ತಕವು ಸಾಂಪ್ರದಾಯಿಕ ಫುಟ್‌ಬಾಲ್‌ನ ಅಸಂಬದ್ಧ ಮತ್ತು ಹಿಂಸಾತ್ಮಕ ಪ್ರಕಾರಗಳಿಂದ ವಿಕಸನವಾಗಿರುವುದರ ಕುರಿತ ವಿಷಯಗಳನ್ನು ಹೊಂದಿದೆ:
{{quote|[s]ome smaller number with such overlooking, sorted into sides and standings, not meeting with their bodies so boisterously to trie their strength: nor shouldring or shuffing one an other so barbarously ... may use footeball for as much good to the body, by the chiefe use of the legges.|
- 1633ರಲ್ಲಿ ಅಬೆರ್‌ದೀನ್‌ನ ಶಿಕ್ಷಕರಾಗಿರುವ ಡೇವಿಡ್ ವೆಡ್ಡರ್ಬರ್ನ್‌ರ "ವೊಕ್ಯಬುಲಾ" ಎಂದು ಕರೆಯಲ್ಪಡುವ ಚಿಕ್ಕ ಲ್ಯಾಟಿನ್ ಪಠ್ಯಪುಸ್ತಕದಲ್ಲಿ ಆಧುನಿಕ ಫುಟ್‌ಬಾಲ್ ಆಟಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ವೆಡ್ಡರ್ಬರ್ನ್ ಉಲ್ಲೇಖಿಸಿದ್ದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ "ಗೋಲನ್ನು ಬಾರಿಸುವುದು" ಮತ್ತು ಚೆಂಡನ್ನು ವರ್ಗಾಯಿಸುವಂತೆ ಸೂಚಿಸುವುದು ("ಅದನ್ನು ಇಲ್ಲಿ ಬಾರಿಸುವುದು") ಎಂದಾಗುತ್ತದೆ. ಚೆಂಡನ್ನು ಕೈಯಿಂದ ಮುಟ್ಟುವುದಕ್ಕೆ ಅನುಮತಿ ಸೂಚಿಸುವ "ಚೆಂಡನ್ನು ಹಿಡಿದುಕೊ" ಎಂಬರ್ಥದಲ್ಲಿ ಉಲ್ಲೇಖಿಸಲಾಗಿದೆ. ಎದುರಾಳಿ ಆಟಗಾರನಿಗೆ ಹೊಡೆಯುವುದು ಮತ್ತು ಅವನನ್ನು ತಡೆಯುವಿಕೆ ಸೇರಿದಂತೆ ತಡೆಹಿಡಿಯುವುದನ್ನು ಅನುಮತಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ("ಹಿಂದಕ್ಕೆ ತಳ್ಳು").
- ಫ್ರಾನ್ಸಿಸ್ ವಿಲ್ಲುಗ್ಬಿರವರು 1660ರ ಹೊತ್ತಿಗೆ ಬರೆದ ಬುಕ್ ಆಫ್ ಗೇಮ್ಸ್ ನಲ್ಲಿ ಫುಟ್‌ಬಾಲ್‌ನ ಕುರಿತು ಹೆಚ್ಚಿನ ವಿವರಣೆಯನ್ನು ನೀಡಲಾಗಿದೆ.[೧೭]
- ಸುಟ್ಟನ್ ಕೋಲ್ಡ್‌ಫೀಲ್ಡ್ ಶಾಲೆಯಲ್ಲಿ ಓದಿದ ವಿಲ್ಲುಗ್ಬಿ ಗೋಲುಗಳು ಮತ್ತು ಅಸಮವಾದ ಆಟದ ಮೈದಾನವನ್ನು ಮೊದಲು ಹೀಗೆ ವಿವರಿಸಿದರು : "ಸಮೀಪದ ಎರಡು ತುದಿಗಳಲ್ಲೂ ಗೇಟುಗಳಿದ್ದವು. ಗೇಟುಗಳನ್ನು ಗೋಲುಗಳು ಎಂದು ಕರೆದರು." ಅವರ ಪುಸ್ತಕವು ಸಚಿತ್ರ ಫುಟ್‌ಬಾಲ್ ಮೈದಾನದ ನಕ್ಷೆಯನ್ನು ಒಳಗೊಂಡಿತ್ತು. ಅವರು ಟ್ಯಾಕ್ಟಿಕ್ಸ್ ("ಗೋಲನ್ನು ರಕ್ಷಿಸುವ ಜವಬ್ದಾರಿಯನ್ನು ತಂಡದ ಉತ್ತಮ ಆಟಗಾರರಿಗೆ ವಹಿಸುವುದು"), ಗೋಲು ಗಳಿಸುವುದು ("ಎದುರಾಳಿಯ ಕಡೆಯಿರುವ ಗೋಲಿನ ಸ್ಥಳಕ್ಕೆ ಚೆಂಡನ್ನು ಒದೆಯುವುದರ ಮೂಲಕ ಗೋಲನ್ನು ಗಳಿಸಿ, ಮೊದಲ ಜಯ ಸಾಧಿಸುವುದು") ಮತ್ತು ತಂಡಗಳನ್ನು ಆಯ್ಕೆ ಮಾಡುವ ಮಾರ್ಗವನ್ನೂ ("ಆಟಗಾರರ ಬಲ ಮತ್ತು ಚುರುಕುತನದಿಂದ ಅವರನ್ನು ಸಮನಾಗಿ ವಿಂಗಡಿಸುವುದು") ಸಹ ಪ್ರಸ್ತಾಪಿಸಿದ್ದಾರೆ.
- ವಿಲ್ಲುಗ್ಬಿಯವರು ಫುಟ್‌ಬಾಲ್ ನಿಯಮವನ್ನು ಮೊದಲ ಬಾರಿಗೆ ಹೀಗೆ ವಿವರಿಸಿದರು: "ಆಟಗಾರರು ಚೆಂಡು ಇರುವುದಕ್ಕಿಂತ ಎತ್ತರ ಒದೆಯಬಾರದು [ಎದುರಾಳಿ ಆಟಗಾರನ ಕಾಲು]".
- ಇಂಗ್ಲಿಷ್ ಪಬ್ಲಿಕ್ ಶಾಲೆಗಳು ಮೊದಲು ಫುಟ್‌ಬಾಲ್ ಆಟಕ್ಕೆ ವ್ಯವಸ್ಥಿತವಾದ ಸಂಹಿತೆಯನ್ನು ರಚಿಸಿದವು (ಮುಖ್ಯವಾಗಿ ಎಟನ್ (1815) [೧೮] ಮತ್ತು ಅಲ್ದೆನ್ಹಾಮ್‌ನಲ್ಲಿ (1825) [೧೮]) 18ನೇ ಶತಮಾನದ ಕೊನೆಯಲ್ಲಿ ಮೊದಲ ಆಫ್‌ಸೈಡ್ ನಿಯಮಗಳನ್ನು ರಚಿಸಲಾಯಿತು.[೧೯]
- ಗೋಲು ಆಗುವುದನ್ನು ತಪ್ಪಿಸಲು ಚೆಂಡು ಮತ್ತು ಗೋಲಿನ ನಡುವೆ, ಚೆಂಡು ಸ್ಥಳಕ್ಕೆ ಬರುವ ಮೊದಲೇ ನಿಂತುಕೊಳ್ಳುವುದಕ್ಕೆ ಆಟಗಾರರಿಗೆ ಅನುಮತಿಯಿಲ್ಲ ಎಂದು ಈ ನಿಯಮಗಳ ಕುರಿತು ದೊರೆತ ಅತ್ಯಂತ ಹಳೆಯ ಪುರಾವೆಗಳು ತಿಳಿಸುತ್ತದೆ. ಆಟಗಾರರು ಚೆಂಡನ್ನು ಕಾಲಿನಿಂದ ಅಥವಾ ಕೈಯಿಂದ ಮುಂದೆ ಸಾಗಿಸುವಂತಿಲ್ಲ. ಆಟಗಾರರು ಕಾಲಿನಿಂದ ಚೆಂಡನ್ನು ಸ್ವಲ್ಪ ಸ್ವಲ್ಪವಾಗಿ ಉರುಳಿಸುತ್ತಾ ಮುಂದುವರಿಯುವುದು ಅಥವಾ ಗುಂಪು ಅಥವಾ ಅಂತಹ ತಂಡ ದಲ್ಲಿ ಚೆಂಡನ್ನು ಮುಂದಕ್ಕೆ ಹೋಗುವಂತೆ ಮಾತ್ರ ಮಾಡಬಹುದು. ಆದಾಗ್ಯೂ, 1810–1850ರ ಅವಧಿಯಲ್ಲಿ ವಿನ್‌ಚೆಸ್ಟರ್, ರಗ್ಬಿ, ಹ್ಯಾರೊವ್ ಮತ್ತು ಚೆಲ್ಟನ್‌ಹ್ಯಾಮ್ ತಂಡಗಳ ಫುಟ್‌ಬಾಲ್ ನಿಯಮಗಳಂತೆ, ಪ್ರತಿ ಶಾಲೆಯಲ್ಲಿ ಆಫ್‌ಸೈಡ್ ನಿಯಮವು ವಿಭಿನ್ನವಾಗಿ ವಿಸ್ತರಿಸಿತು ಮತ್ತು ವಿಕಸನವಾಯಿತು.[೧೯]
- 19ನೇ ಶತಮಾನದ ಪ್ರಾರಂಭದಲ್ಲಿ , (1850ನ ಕಾರ್ಖಾನೆ ಕಾಯಿದೆ ಮೊದಲು), ಬ್ರಿಟನ್‌ನಲ್ಲಿರುವ ಹೆಚ್ಚಿನ ಕಾರ್ಮಿಕ ವರ್ಗದ ಜನರು ವಾರದಲ್ಲಿ ಆರು ದಿನ, ಕೆಲವೊಮ್ಮೆ ದಿನಕ್ಕೆ ಹನ್ನೆರಡು ಗಂಟೆಗಳಷ್ಟು ಕೆಲಸ ಮಾಡುತ್ತಿದ್ದರು. ವಿನೋದಕ್ಕಾಗಿ ಆಟದಲ್ಲಿ ತೊಡಗಿಸಿಕೊಳ್ಳಲು ಅವರಲ್ಲಿ ಸಮಯವಿರಲ್ಲಿಲ್ಲ ಮತ್ತು ಆಡುವ ಒಲವೂ ಇರಲಿಲ್ಲ ಮತ್ತು ಆದಾಗಲೇ ಹಲವು ಮಕ್ಕಳು ಕಾರ್ಮಿಕ ವರ್ಗಕ್ಕೆ ಸೇರ್ಪಡೆಯಾಗಿದ್ದರು. ಹಬ್ಬದ ದಿನಗಳಲ್ಲಿ ರಸ್ತೆಯಲ್ಲಿ ಫುಟ್‌ಬಾಲ್ ಆಡುವುದು ಕಡಿಮೆಯಾಗುತ್ತಾ ಬಂದಿತ್ತು. ಕೆಲಸದಿಂದ ಸ್ವಲ್ಪ ಬಿಡುವಿದ್ದಾಗ ಪಬ್ಲಿಕ್ ಶಾಲೆ ಹಡುಗರು ಕ್ರಮಬದ್ಧ ನಿಯಮಗಳೊಂದಿಗೆ ಸಂಘಟಿತ ಫುಟ್‌ಬಾಲ್ ಆಟಗಳ ಸೃಷ್ಟಿಕರ್ತರಾಗುತ್ತಿದ್ದರು.
- ಸ್ಪರ್ಧಾತ್ಮಕತೆಯನ್ನು ಪ್ರೋತ್ಸಾಹಿಸುವ ಮತ್ತು ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವ ವಿಧಾನದಂತೆ ಫುಟ್‌ಬಾಲ್‌ನ್ನು ಪಬ್ಲಿಕ್ ಶಾಲೆಗಳು ಅಳವಡಿಸಿಕೊಂಡಿವೆ. ಪ್ರತಿ ಶಾಲೆಯು ತನ್ನದೇ ಆದ ನಿಯಮಾವಳಿಗಳನ್ನು ರಚಿಸಿಕೊಂಡಿತ್ತು. ಈ ನಿಯಮಗಳು ಶಾಲೆಯಿಂದ ಶಾಲೆಗೆ ಬೇರೆಯಾಗಿತ್ತು ಮತ್ತು ಪ್ರತಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಂಡಂತೆ ಕಾಲಕ್ರಮೇಣ ಈ ನಿಯಮಾವಳಿಗಳಲ್ಲಿ ಬದಲಾವಣೆಯಾಗುತ್ತಿತ್ತು. ನಿಯಮಗಳ ಕುರಿತು ಎರಡು ವಿಭಿನ್ನ ವಿಚಾರಧಾರೆಗಳನ್ನು ಹೊಂದಿರುವ ಪಂಥಗಳು ಅಭಿವೃದ್ಧಿಯಾಗಿವೆ.
- ಕೆಲವು ಪಂಥಗಳು ಚೆಂಡನ್ನು ಕೊಂಡೊಯ್ಯುವ ಆಟವನ್ನು ನೆಚ್ಚಿಕೊಂಡಿದ್ದರೆ (ರಗ್ಬಿ, ಮಾರ್ಲ್‌ಬೊರೊಹ್‌ಮತ್ತು ಚೆಲ್ಟೆನ್‌ಹ್ಯಾಮ್‌ನಲ್ಲಿರುವಂತೆ), ಇನ್ನೂ ಕೆಲವು ಪಂಥಗಳು ಚೆಂಡನ್ನು ಒದೆಯುವುದು ಮತ್ತು ತಳ್ಳಿಕೊಂಡು ಹೋಗುವುದನ್ನು ಪ್ರೋತ್ಸಾಹಿಸಿದವು (ಎಟನ್, ಹಾರೊವ್, ವೆಸ್ಟ್‌ಮಿನಿಸ್ಟರ್ ಮತ್ತು ಚಾರ್ಟರ್‌ಹೌಸ್‌ರಲ್ಲಿರುವಂತೆ). ಆಟ ಆಡುವ ಸಂದರ್ಭದಲ್ಲಿದ್ದ ಪರಿಸ್ಥಿತಿಯಿಂದಾಗಿ ಈ ಎರಡು ಪಂಥಗಳಲ್ಲಿ ಒಡಕು ಮೂಡಿದೆ. ಉದಾಹರಣೆಗೆ, ಆ ಅವಧಿಯಲ್ಲಿ ಚಾರ್ಟರ್‌ಹೌಸ್ ಮತ್ತು ವೆಸ್ಟ್‌ಮಿನಿಸ್ಟರ್ ಆಟ ನಿರ್ಬಂಧಿತ ಪ್ರದೇಶಗಳನ್ನು ಹೊಂದಿವೆ. ಹುಡುಗರಿಗೆ ಶಾಲೆ ಆವರಣಗಳೊಳಗೆ ಮಾತ್ರ ಚೆಂಡಿನ ಆಟವನ್ನು ಆಡಲು ಮಾತ್ರ ಮಿತಗೊಳಿಸಲಾಗಿತ್ತು. ಇದರಿಂದಾಗಿ ಕಠಿಣವಾದ ಮತ್ತು ಅಡ್ಡಾದಿಡ್ಡ ಓಡುವ ಆಟಗಳನ್ನು ಆಡುವುದು ಕಷ್ಟವಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]
- 1823ರಲ್ಲಿ ರಗ್ಬಿ ಶಾಲೆಯ ವಿದ್ಯಾರ್ಥಿಯಾಗಿರುವ ವಿಲಿಯಮ್ ವೆಬ್ ಎಲ್ಲಿಸ್‌ರು ಹೀಗೆ ಹೇಳುತ್ತಾರೆ "ಫುಟ್‌ಬಾಲ್ ನಿಯಮಗಳನ್ನು ನಿರ್ಲಕ್ಷಿಸಿ ಚೆಂಡನ್ನು ಕೈನಲ್ಲಿ ಹಿಡಿದು ಓಡುತ್ತಿದ್ದರು, ಅವರ ಕಾಲದಲ್ಲಿ ಹೀಗೆ ಆಡು ತ್ತಿದ್ದುದರಿಂದ [ಮಾತಿನಲ್ಲಿ ಒತ್ತು ನೀಡಲಾಗಿದೆ] ರಗ್ಬಿ ಆಟದ ವಿಶೇಷ ವೈಶಿಷ್ಟ್ಯಗಳು ರಚನೆಯಾದವು.
- " ಸಾಮಾನ್ಯವಾಗಿ ಈ ಕ್ರಿಯೆಯು ರಗ್ಬಿ ಫುಟ್‌ಬಾಲ್‌ನ ಆರಂಭಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಪುರಾವೆಗಳು ಸಾಕಷ್ಟಿಲ್ಲ ಮತ್ತು ಹಲವು ಕ್ರೀಡಾ ಇತಿಹಾಸಕಾರರು ಆ ಪುರಾವೆಗಳು ವಿಶ್ವಾಸನೀಯವಲ್ಲ ಎಂದು ನಂಬಿದ್ದಾರೆ. ವೆಬ್ ಎಲ್ಲಿಸ್‌ರವರು ಚೆಂಡನ್ನು ಕೈಯಲ್ಲಿ ಹಿಡಿದುಕೊಂಡಂತೆ ಎಂದು ಬರೆದಿರುವುದನ್ನು ಆಧುನಿಕ ಸಾಕ್ಕರ್‌ನಲ್ಲಿ 'ಕ್ರೈಮ್' ಎನ್ನಲಾಗಿದೆ. 'ಕೈಗಳಿಂದ ಚೆಂಡನ್ನು ತೆಗೆದುಕೊಳ್ಳುವ' ಕ್ರಿಯೆಯನ್ನು ಕೆಲವೊಮ್ಮೆ 'ಚೆಂಡನ್ನು ಎತ್ತಿಕೊಳ್ಳುವುದು' ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆದಾಗ್ಯೂ ಆ ಅವಧಿಯಲ್ಲಿ ಚೆಂಡನ್ನು ಕೈಯಲ್ಲಿ ಹಿಡಿದು ಕೊಳ್ಳುವುದನ್ನು ಅನುಮತಿಸಲಾಗಿತ್ತು ಮತ್ತು ಕೆಲವು ಸಂದರ್ಭಗಳಲ್ಲಿ ಅದು ಕಡ್ಡಾಯವಾಗಿತ್ತು ಎನ್ನುವುದನ್ನು [೨೦]
- ಹಿಂದೆಡೆಗೆ ಓಡಲು ಮತ್ತು ಮುಂದೆ ಒದೆಯಲು ಆಟಗಾರರಿಗೆ ಅನುಮತಿ ಇರುವ ಅವಧಿಯಲ್ಲಿ ವೆಬ್ ಎಲ್ಲಿಸ್‌ರ ನಿಯಮಗಳಂತೆ ಚೆಂಡಿನೊಂದಿಗೆ ಮುಂದೆ ಓಡುವುದು ನಿಯಮವನ್ನು ವೆಬ್ ಎಲ್ಲಿಸ್ ನಿರ್ಲಕ್ಷಿಸಿದರು.
- 1840ರ ಹೊತ್ತಿಗೆ ಬ್ರಿಟನ್‌ನಲ್ಲಿ ರೈಲು ಸಾರಿಗೆಯಲ್ಲಾದ ಅಭಿವೃದ್ಧಿಜನರ ಪ್ರಯಾಣಕ್ಕೆ ಇನ್ನಷ್ಟು ಸಹಕಾರಿಯಾಯಿತು ಮತ್ತು ಪ್ರಯಾಣದಲ್ಲಿ ಹಿಂದೆಯಿದ್ದ ಅಡಚಣೆಗಳು ಬಹುಮಟ್ಟಿಗೆ ಬಗೆಹರಿದವು. ಇದರಿಂದಾಗಿ ಅಂತರ್-ಶಾಲೆಯ ಕ್ರೀಡಾ ಸ್ಪರ್ಧೆಗಳು ಪ್ರಾರಂಭವಾಗಲು ಕಾರಣವಾಯಿತು. ಆದರೂ ಪ್ರತಿ ಶಾಲೆಯು ತನ್ನದೇ ಆದ ನಿಯಮಗಳನ್ನು ಅನುಸರಿಸುವುದರಿಂದ, ಶಾಲೆಗಳ ನಡುವೆ ಫುಟ್‌ಬಾಲ್ ಆಟವನ್ನು ಆಡುವುದು ಕಷ್ಟವಾಯಿತು. ಈ ಸಮಸ್ಯೆಗೆ ಪರಿಹಾರವಾಗಿ, ಪಂದ್ಯವನ್ನು ಎರಡು ಅವಧಿಗಳಾಗಿ ವಿಭಾಗಿಸಲಾಯಿತು. ಮೊದಲರ್ಧ ಅವಧಿಯಲ್ಲಿ ಅತಿಥೇಯ ಶಾಲೆಯ ನಿಯಮದಡಿಯಲ್ಲಿ ಆಡಲಾಗುತ್ತಿತ್ತು ಮತ್ತು ದ್ವಿತೀಯಾರ್ಧ ಅವಧಿಯನ್ನು ಭೇಟಿ ನೀಡಿದ ದೂರದ ಶಾಲೆಯ ನಿಯಮದಡಿಯಲ್ಲಿ ಆಡಲಾಗುತ್ತಿತ್ತು.
- ರಗ್ಬಿ ಫುಟ್‌ಬಾಲ್ ಹೊರತುಪಡಿಸಿ ಇತರೆ ಆಟಗಳನ್ನು ಶಾಲೆಯ ಆಟದ ಮೈದಾನಗಳನ್ನು ಮೀರಿ ಆಡುವ ನಿಟ್ಟಿನಲ್ಲಿ ಪಬ್ಲಿಕ್ ಶಾಲಾ ನಿಯಮಾವಳಿಗಳು ಸಾಕಷ್ಟು ಪೂರಕವಾಗಿಲ್ಲ. ಆದರೂ ಶಾಲೆಗಳಲ್ಲಿ ಈ ಆಟಗಳನ್ನು ಆಡಲಾಗುತ್ತಿದೆ (ಅಸ್ತಿತ್ವ ಉಳಿಸಿಕೊಂಡಿರುವ UK ಶಾಲಾ ಆಟಗಳನ್ನು ಕೆಳಗೆ ನೋಡಿ).
ಪ್ರಥಮಗಳು
ಬದಲಾಯಿಸಿಕ್ಲಬ್ಗಳು
ಬದಲಾಯಿಸಿ- ಫುಟ್‌ಬಾಲ್ ಆಡುವುದಕ್ಕೆಂದೆ ಇರುವ ಕ್ರೀಡಾ ಕ್ಲಬ್‌ಗಳು ಹದಿನೆಂಟನೇ ಶತಮಾನದಲ್ಲಿ ಹುಟ್ಟಿಕೊಂಡವು. ಉದಾಹರಣೆಗೆ ಲಂಡನ್‌ನ ಜಿಮ್ನ್ಯಾಸ್ಟಿಕ್ ಸಂಸ್ಥೆಯು ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಸ್ಥಾಪಿಲ್ಪಟ್ಟಿತು ಮತ್ತು 1796ರಲ್ಲಿ ಪಂದ್ಯಗಳನ್ನು ಆಡುವುದನ್ನು ನಿಲ್ಲಿಸಿದರು [೨೧][೨೨]. 1824-41ರ ಅವಧಿಯಲ್ಲಿ ಸ್ಕಾಟ್‌ಲೆಂಡ್‌ನ ಎಡಿನ್ಬರ್ಗ್ನಲ್ಲಿ, "ಫುಟ್‌ಬಾಲ್ ಕ್ಲಬ್" ಎಂಬ ಹೆಸರಿನ ಕ್ಲಬ್ ದಾಖಲಿಸಲ್ಪಟ್ಟ ಮೊದಲ ಕ್ಲಬ್ ಆಗಿದೆ.[೨೩][೨೪] ಕಾಲು ಕೊಟ್ಟು ಎಡವಿ ಬೀಳುವಂತೆ ಮಾಡುವುದನ್ನು ಈ ಕ್ಲಬ್ ನಿಷೇಧಿಸಿದೆ. ಆದರೆ ಚೆಂಡನ್ನು ತಳ್ಳುವುದು, ಹಿಡಿದುಕೊಳ್ಳುವುದು ಮತ್ತು ಕೈಯಲ್ಲಿ ಎತ್ತಿಕೊಳ್ಳುವುದನ್ನು ಅನುಮತಿಸಲಾಗಿತ್ತು.[೨೫]
- 1839ರಲ್ಲಿ ಸ್ಥಾಪಿಸಲಾದ ಬ್ಯಾರ್ನೆಸ್ ಕ್ಲಬ್ ಮತ್ತು 1843ರಲ್ಲಿ ಸ್ಥಾಪಿಸಲಾದ ಗೈಸ್ ಹಾಸ್ಪಿಟಲ್ ಫುಟ್‌ಬಾಲ್ ಕ್ಲಬ್ ಯಾವುದೇ ಶಾಲೆ ಅಥವಾ ವಿಶ್ವವಿದ್ಯಾನಿಲಯ ಭಾಗವಾಗಿರದೆ, ಜಗತ್ತಿನ ಅತ್ಯಂತ ಹಳೆಯ, ಅಸ್ತಿತ್ವದಲ್ಲಿರುವ ಫುಟ್‌ಬಾಲ್ ಕ್ಲಬ್ ಎಂದು ಕರೆಯಲಾಗುವ ಈ ಎರಡು ಕ್ಲಬ್‌ಗಳು ರಗ್ಬಿ ಫುಟ್‌ಬಾಲ್‌ನ ಮೇಲೆ ಪ್ರಭುತ್ವವನ್ನು ಹೊಂದಿವೆ. ಆದರೆ ಅವು ಆಡಿದ ದಿನಾಂಕ ಮತ್ತು ಫುಟ್‌ಬಾಲ್‌ನ ವಿವಿಧ ಪ್ರಕಾರಗಳ ಬಗ್ಗೆ ಸರಿಯಾದ ದಾಖಲೆಯಿಲ್ಲ. ಆದರೆ ಆಧುನಿಕ ನಿಯಮಾವಳಿಗಳು ಹುಟ್ಟುವ ಮೊದಲೇ ರಗ್ಬಿಯು ಜನಪ್ರಿಯವಾಗಿತ್ತು.
- 1845ರಲ್ಲಿ ರಗ್ಬಿ ಶಾಲೆಯಲ್ಲಿರುವ ಮೂರು ಹುಡುಗರಿಗೆ ನಿಯಮಾವಳಿಗಳನ್ನು ಕ್ರೋಡೀಕರಿಸುವ ಕೆಲಸ ನೀಡಲಾಯಿತು. ನಂತರ ಆ ನಿಯಮಗಳನ್ನು ಶಾಲೆಯಲ್ಲಿ ಬಳಸಲಾಯಿತು. ಇವು ಫುಟ್‌ಬಾಲ್‌ನ ಯಾವುದೇ ಪ್ರಕಾರಕ್ಕೆ ಇರುವ ಮೊದಲ ಲಿಖಿತ ನಿಯಮಾವಳಿಗಳಾಗಿವೆ.[೨೬]
- ನಂತರ ಈ ನಿಯಮಾವಳಿಗಳು ರಗ್ಬಿ ಆಟದ ವಿಸ್ತರಣೆಗೆ ನೆರವಾಯಿತು. ಉದಾಹರಣೆಗೆ, 1854ರಲ್ಲಿ ಡಬ್ಲಿನ್‌ನ ಟ್ರಿನಿಟಿ ಕಾಲೇಜಿನಲ್ಲಿ ಡಬ್ಲಿನ್ ವಿಶ್ವವಿದ್ಯಾನಿಲಯ ಫುಟ್‌ಬಾಲ್ ಕ್ಲಬ್‌ನ್ನು ಸ್ಥಾಪಿಸಲಾಯಿತು ಮತ್ತು ನಂತರ ರಗ್ಬಿ ಶಾಲೆ ಆಟದ ಸುಭದ್ರ ನೆಲೆಯೆಂದು ಅದು ಖ್ಯಾತವಾಯಿತು- ಇದು ಯಾವುದೇ ನಿಯಮಾವಳಿಗಳಿಗೆ ಹೊಂದಿಕೊಂಡಿರುವ ಅತ್ಯಂತ ಹಳೆಯ ದಾಖಲಿತ ಫುಟ್‌ಬಾಲ್ ಕ್ಲಬ್ ಆಗಿದೆ.
ಸ್ಪರ್ಧೆಗಳು
ಬದಲಾಯಿಸಿ- ದೀರ್ಘಾವಧಿಯಲ್ಲಿ ನಡೆದ ಫುಟ್‌ಬಾಲ್ ಫಿಕ್ಸ್ಚರ್ ಕಾರ್ಡ್ನರ್-ಈಗಲ್ಸ್ಟನ್ ಕ ಪ್ ಆಗಿದೆ. 1858ರಲ್ಲಿಂದ ಪ್ರತಿ ವರ್ಷ ಮೆಲ್ಬರ್ನ್ ಗ್ರಾಮರ್ ಶಾಲೆ ಮತ್ತು ಮೆಲ್ಬರ್ನ್‌ನ ಸ್ಕಾಟ್ಚ್ ಕಾಲೇಜು ನಡುವೆ ಸ್ಪರ್ಧೆ ನಡೆಯುವುದು.
- ಆಸ್ಟ್ರೇಲಿಯನ್ ಫುಟ್‌ಬಾಲ್ ನಿಯಮಗಳಡಿ ಆಡಲಾದ ಮೊದಲ ಪಂದ್ಯವೆಂದು ಅನೇಕ ನಂಬಿದ್ದರೂ, ಮೊದಲ ವರ್ಷ ಈ ಪಂದ್ಯವನ್ನು ಪ್ರಾಯೋಗಿಕ ನಿಯಮಗಳಡಿಯಲ್ಲಿ ಆಡಲಾಗಿತ್ತು.ಮೊದಲ ಫುಟ್‌ಬಾಲ್ ಟ್ರೋಫಿ ಪಂದ್ಯಾ ವಳಿಯು ಕಲೆಡೋನಿಯನ್ ಚಾಲೆಂಜ್ ಕಪ್ ಆಗಿದೆ. ಮೆಲ್ಬರ್ನ್‌ನ ರಾಯಲ್ ಕಲೆಡೋನಿಯನ್ ಸಂಸ್ಥೆಯು ಪ್ರಾಯೋಜಿಸುವ ಈ ಪಂದ್ಯಾವಳಿಯನ್ನು 1861ರಲ್ಲಿ ಮೆಲ್ಬರ್ನ್ ನಿಯಮಗಳಡಿಯಲ್ಲಿ ಆಡಲಾಗಿದೆ.[೨೭]
- ಅತ್ಯಂತ ಹಳೆಯ ಫುಟ್‌ಬಾಲ್ ಲೀಗ್ ರಗ್ಬಿ ಫುಟ್‌ಬಾಲ್ ಸ್ಪರ್ಧೆಯು ಯುನೈಟೆಡ್ ಹಾಸ್ಪಿಟಲ್ಸ್ ಚಾಲೆಂಜ್ ಕಪ್ (1874) ಆಗಿದೆ. ಅತ್ಯಂತ ಹಳೆಯ ರಗ್ಬಿ ಟ್ರೋಫಿಯು ರಗ್ಬಿ ಲೀಗ್ ಚಾಲೆಂಜ್ ಕಪ್ (1897) ಆಗಿದೆ. ದಕ್ಷಿಣ ಆಸ್ಟ್ರೇಲಿಯನ್ ಫುಟ್‌ಬಾಲ್ ಅಸೊಸಿಯೇಷನ್ (30 ಏಪ್ರಿಲ್ 1877) ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್ ಸ್ಪರ್ಧೆಯಾಗಿದೆ.
- ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಸಾಕ್ಕರ್ ಟ್ರೋಫಿಯು ಯೋಡನ್ ಕಪ್ (1867) ಆಗಿದೆ ಮತ್ತು ಅತ್ಯಂತ ಹಳೆಯ ರಾಷ್ಟ್ರೀಯ ಸಾಕ್ಕರ್ ಸ್ಪರ್ಧೆಯು ಇಂಗ್ಲಿಷ್ FA ಕಪ್ (1871) ಆಗಿದೆ. ದಿ ಫುಟ್‌ಬಾಲ್ ಲೀಗ್ (1888) ದೀರ್ಘ ಕಾಲ ನಡೆದ ಅಸೋಸಿಯೇಷನ್ ಫುಟ್‌ಬಾಲ್ ಲೀಗ್ ಎಂದು ಗುರುತಿಸಲ್ಪಟ್ಟಿದೆ.
- ಮೊತ್ತ ಮೊದಲ ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯ FA ಅಧಿಕಾರದಲ್ಲಿ ಒವಲ್ನಲ್ಲಿ 5 ಮಾರ್ಚ್ 1870ರಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ ನೆಡೆಯಿತು. ಮೊದಲು ಅಂತರರಾಷ್ಟ್ರೀಯ ರಗ್ಬಿ ಪಂದ್ಯವು 1871ರಲ್ಲಿ ನೆಡೆಯಿತು.
ಆಧುನಿಕ ಚೆಂಡುಗಳು
ಬದಲಾಯಿಸಿ- ಯುರೋಪ್‌ನಲ್ಲಿ ಹಿಂದೆ ಫುಟ್‌ಬಾಲ್‌ಗಳನ್ನು ಪ್ರಾಣಿಗಳ ಮೂತ್ರಕೋಶಗಳಿಂದ, ಅದರಲ್ಲೂ ವಿಶೇಷವಾಗಿ ಗಾಳಿ ತುಂಬಿದ ಹಂದಿಯ ಮೂತ್ರಕೋಶಗಳಿಂದ ಮಾಡುತ್ತಿದ್ದರು. ಕ್ರಮೇಣ ಚೆಂಡಿನ ಆಕಾರವನ್ನು ಕಾಪಾಡಲು ಚರ್ಮದ ಹೊದಿಕೆಗಳನ್ನು ಪರಿಚಯಿಸಲಾಯಿತು.[೨೮]
- ಆದಾಗ್ಯೂ, 1851ರಲ್ಲಿ ರಗ್ಬಿ ನಗರ (ಶಾಲೆಯ ಬಳಿ)ದ ರಿಚರ್ಡ್ ಲಿಂಡನ್ ಮತ್ತು ವಿಲಿಯಮ್ ಗಿಲ್ಬರ್ಟ್ಟ್ ಎಂಬ ಇಬ್ಬರು ಚಮ್ಮಾರರು ಲಂಡನ್‌ನ ಪ್ರಸಿದ್ಧ ವಸ್ತುಪ್ರದರ್ಶನದಲ್ಲಿ ವೃತ್ತಾಕಾರದ ಮತ್ತು ಅಂಡಾಕಾರದ ಚೆಂಡನ್ನು ಪ್ರದರ್ಶಿಸಿದರು. ಹಂದಿಯ ಮೂತ್ರಕೋಶವನ್ನು ಊದಿದ ಪರಿಣಾಮ ಶ್ವಾಸಕೋಶ ರೋಗಕ್ಕೆ ತುತ್ತಾಗಿ ರಿಚರ್ಡ್ ಲಿಂಡನ್‌ರ ಪತ್ನಿಯು ಮರಣ ಹೊಂದಿದಳು ಎನ್ನಲಾಗಿದೆ.[೨೯] "ರಬ್ಬರ್ ಅನ್ನು ಊದಿ ಉಬ್ಬಿಸಲು ನೆರವಾಗುವ ಬುರುಡೆ" ಮತ್ತು "ಹಿತ್ತಾಳೆಯ ಕೈ ಪಂಪು" ಅನ್ವೇಷಿಸಿದಕ್ಕಾಗಿ ಲಿಂಡನ್ ಪದಕಗಳನ್ನು ಗೆದ್ದುಕೊಂಡನು.
- 1855ರಲ್ಲಿ U.S. ಅನ್ವೇಷಕರಾದ ಚಾರ್ಲ್ಸ್ ಗುಡ್‌ಇಯರ್ ವಲ್ಕನೀಕರಿಸಿದ ರಬ್ಬರ್‌ಗೆ ಪೇಟೆಂಟನ್ನು ಪಡೆದರು ಮತ್ತು ಪ್ಯಾರಿಸ್‌ನ ಎಕ್ಸಿಬ್ಯುಷನ್ ಯುನಿವರ್ಸಲ್‌ನಲ್ಲಿ ವಲ್ಕನೀಕರಿಸಿದ ರಬ್ಬರ್ ಫಲಕಗಳ ಮೇಲ್ಮೈ ಹೊಂದಿರುವ ಗೋಲಾಕಾರದ ಫುಟ್‌ಬಾಲ್‌ನ್ನು ಪ್ರದರ್ಶಿಸಿದರು.
- U.S.Aಯ ಹಿಂದಿನ ಫುಟ್‌ಬಾಲ್ ಪ್ರಕಾರಗಳಲ್ಲಿ ಈ ಚೆಂಡು ಸಾಕಷ್ಟು ಜನಪ್ರಿಯವಾಗಿತ್ತು.[೩೦]
ಚೆಂಡನ್ನು ವರ್ಗಾಯಿಸುವ ಆಧುನಿಕ ತಂತ್ರಗಳು
ಬದಲಾಯಿಸಿ- "ವೈಜ್ಞಾನಿಕ" ಫುಟ್‌ಬಾಲ್ 1839ರಲ್ಲಿ ಲ್ಯಾಂಕ್‌ಷೈರ್‌ನಲ್ಲಿ ಮೊದಲು ದಾಖಲಾಗಿದೆ[೩೧] ಮತ್ತು ಅಂತೆಯೇ 1862ರಲ್ಲಿ ರಗ್ಬಿ ಫುಟ್‌ಬಾಲ್‌ನ ಆಧುನಿಕ ರೂಪ ಲ್ಯಾಂಕ್‌ಷೈರ್ ನಲ್ಲಿ ಮತ್ತು [೩೨] ಮತ್ತು 1865ರ ಆರಂಭದ ಹೊತ್ತಿಗೆ ಷೆಫ್‌ಫೀಲ್ಡ್ FCಯಲ್ಲೂ ದಾಖಲಾಗಿತ್ತು.[೩೩][೩೪] .
- 1869/70ರಲ್ಲಿ ರಾಯಲ್ ಇಂಜಿನಿಯರ್ಸ್ AFC ವರ್ಗಾಯಿಸುವ ಸಂಯೋಜಿತ ಆಟ ಆಡಿದ ಮೊದಲ ತಂಡವಾಗಿದೆ.[೩೫][೩೬][೩೭]
- 1869ರಿಂದ ಅವರು "ಜೊತೆಗೂಡಿ ಉತ್ತಮ ಕೆಲಸ", "ಬೆಂಬಲಿಸುವುದು" ಮತ್ತು "ಸಹಕಾರ"ಗಳಿಂದ ಪ್ರಯೋಜನ ಪಡೆದರು [೩೮]. 1870ರಿಂದ ಇಂಜಿನಿಯರ್‌ಗಳು ಚೆಂಡನ್ನು ವರ್ಗಾಯಿಸುತ್ತಿದ್ದರು: "ಲೇಫ್ಟ್. ಕ್ರೆಸ್ವೆಲ್‌ರವರು ಚೆಂಡನ್ನು ಮೇಲೆತ್ತಿ ಇನ್ನೊಂದು ಕಡೆಯ ಮಧ್ಯ ಭಾಗದಲ್ಲಿಗೆ ಒದೆದರು ಮತ್ತು ವಿರಾಮ ಘೋಷಿಸುವ ಸ್ವಲ್ಪ ಮೊದಲು ಕಂಬಗಳ ಮಧ್ಯದ ಮೂಲಕ ಒದೆದರು" [೩೯] ಚೆಂಡನ್ನು ವರ್ಗಾಯಿಸುವುದು ಅವರು ಆಟದಲ್ಲಿ ಸಾಮಾನ್ಯ ಶೈಲಿಯಾಗಿತ್ತು [೪೦] 1872ರ ಆದಿಯಲ್ಲಿ "ಒಗ್ಗೂಡಿ ಉತ್ತಮವಾಗಿ ಆಡು"ವುದರಲ್ಲಿ ಇಂಜಿನಿಯರ್‌ಗಳ ಫುಟ್‌ಬಾಲ್ ತಂಡ ಪ್ರಸಿದ್ಧವಾಗಿತ್ತು [೪೧] 1872 ಮಾರ್ಚ್‌ನಲ್ಲಿ ನಾಟಿಂಗ್‌ಹ್ಯಾಮ್ ಫಾರೆಸ್ಟ್ ವಿರುದ್ಧದ ಪಂದ್ಯದಲ್ಲಿ ಡರ್ಬಿ ಶಾಲೆ ಡಬಲ್ ಪಾಸ್ ಮಾಡಿದ್ದು ಈ ಸಂಬಂಧ ಮೊದಲ ಬಾರಿ ವರದಿಯಾಗಿದೆ.
- ಇದು ನಿಯಮಾವಳಿಗಳನ್ನು ಉಲ್ಲಂಘಿಸದ ಮೊದಲ ಶಾರ್ಟ್ ಪಾಸ್: "ಅಬ್ಸಿ ಅವರು ಮೈದಾನದ ಅರ್ಧ ಭಾಗದವರೆಗೆ ಚೆಂಡನ್ನು ಸ್ವಲ್ಪ ಸ್ವಲ್ಪವಾಗಿ ಉರುಳಿಸಿಕೊಂಡು ಹೋಗಿ ವಿಲ್ಲಿಸ್‌ಗೆ ತಲುಪಿಸಿದನು. ವಿಲ್ಲಿಸ್ ಚೆಂಡನ್ನು ಗೋಲ್‌ಗೆ ಎದುರಾಗಿ ಒದೆದು ನಾಯಕನಿಗೆ ತಲುಪಿಸಿದ. ಅವನು ಅದನ್ನು ನೋಟ್ಟಿಂಗ್‌ಹ್ಯಾಮ್ ಗೋಲು ಕಂಬಗಳ ಮಧ್ಯಕ್ಕೆ ತಳ್ಳಿದನು" [೪೨].
- ಕೇಂಬ್ರಿಡ್ಜ್ ವಿಶ್ವವಿದ್ಯಾಲಯ AFCಯವರು ಆಟದ ಕುರಿತ ಆಧುನಿಕ ರಚನೆಗಳಿಗೆ ಮೊದಲು ಹೊಂದಿಕೊಂಡರು[೪೩][೪೪][೪೫] ಮತ್ತು 2-3-5 ಎಂಬ "ಪಿರಾಮಿಡ್" ರಚನೆಯನ್ನೂ ಪರಿಚಯಿಸಿದರು [೪೬][೪೭].
ಕೇಂಬ್ರಿಡ್ಜ್ ನಿಯಮಗಳು
ಬದಲಾಯಿಸಿ- 1848ರಲ್ಲಿ ಎಚ್. ಡಿ ವಿನ್‌ಟನ್ ಮತ್ತು ಜೆ.ಸಿ. ಥ್ರಿಂಗ್ ಇಬ್ಬರೂ ಮೊದಲು ಶ್ರೀವ್ಸ್‌ಬರಿ ಶಾಲೆಯಲ್ಲಿ ಇದ್ದರು. ಇವರು ಟ್ರಿನಿಟಿ ಕಾಲೇಜು, ಕೇಂಬ್ರಿಡ್ಜ್‌ನಲ್ಲಿ ಎಟನ್, ಹಾರೊ, ರಗ್ಬಿ, ವಿನ್‌ಚೆಸ್ಟರ್ ಮತ್ತು ಶ್ರೀವ್ಸ್‌ಬರಿಗಳಿಂದ ಬಂದ ಇನ್ನಿತರ 12 ಪ್ರತಿನಿಧಿಗಳೊಂದಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸೇರಿ ಸಭೆ ನಡೆಸಿದರು. ಎಂಟು ಗಂಟೆಗಳ ಸುಧೀರ್ಘ ಸಭೆಯಲ್ಲಿ ಕೇಂಬ್ರಿಡ್ಜ್ ನಿಯಮಗಳು ಎಂದೇ ಪ್ರಖ್ಯಾತವಾಗಿರುವ ಆಧುನಿಕ ನಿಯಮಗಳ ಪ್ರಥಮ ಸಂಕಲನವನ್ನು ಹೊರತರಲಾಯಿತು. ಈ ನಿಯಮಗಳು ಈಗೆಲ್ಲೂ ಆಚರಣೆಯಲ್ಲಿಲ್ಲ.
- ಆದರೆ ಸರಿಸುಮಾರು 1856ನೇ ಇಸವಿಯಲ್ಲಿ ಶ್ರೀವ್ಸ್‌ಬರಿ ಶಾಲೆಯ ಲೈಬ್ರರಿಯಲ್ಲಿ ಅದರ ಪರಿಷ್ಕೃತ ಆವೃತ್ತಿಯನ್ನು ಹೊರತರಲಾಯಿತು. ಈ ನಿಯಮಗಳು ಸ್ಪಷ್ಟವಾಗಿ ಕಿಕ್ಕಿಂಗ್ ಆಟವನ್ನು ಸಮರ್ಥಿಸುತ್ತವೆ. ಯಾವುದೇ ಆಟಗಾರ ಕೈಯನ್ನು ಕ್ಲೀನ್ ಕ್ಯಾಚ್ ಮಾಡಲು ಮಾತ್ರ ಬಳಸಬಹುದಾಗಿತ್ತು ಆದರೆ ಅದು ಫ್ರೀ ಕಿಕ್‌ಗೆ ಅನುವುಮಾಡಿ ಕೊಟ್ಟಂತಾಗುತಿತ್ತು ಮತ್ತು ಆಟಗಾರರು ಎದುರಾಳಿ ಗೋಲಿನ ಸಮೀಪದಲ್ಲಿ "ಜಮಾವಣೆ"ಯಾಗುವುದನ್ನು ನಿರ್ಬಂಧಿಸುವಂತಹ ಹಳೆಯ ಆಫ್‌ಸೈಡ್ ನಿಯಮವಿದೆ.
- ಕೇಂಬ್ರಿಡ್ಜ್ ನಿಯಮಗಳು ಇಂಗ್ಲೀಷ್ ಪಬ್ಲಿಕ್ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಹೊರತುಪಡಿಸಿದರೆ ಬೇರೆಡೆ ಅಂಗೀಕೃತವಾಗಿಲ್ಲ (ಆದರೆ ಅಸೋಸಿಯೇಷನ್ ಫುಟ್‌ಬಾಲ್‌ನ ನಿಯಮಗಳನ್ನು ರಚಿಸುವುದಕ್ಕೆ ಕಾರಣಕರ್ತರಾಗಿರುವ ಫುಟ್‌ಬಾಲ್ ಅಸೋಸಿಯೇಷನ್ ಸಮಿತಿ ಸದಸ್ಯರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ವಾದವಿಲ್ಲದೆಯೇ ಒಪ್ಪಿಕೊಳ್ಳಬಹುದಾಗಿದೆ).
ಷೆಫ್‌ಫೀಲ್ಡ್ ನಿಯಮಗಳು
ಬದಲಾಯಿಸಿ- 1850ರ ನಂತರ ಇಂಗ್ಲೀಷ್ ಭಾಷಿಕ ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ಹುಟ್ಟಿಕೊಂಡಿದ್ದ ಸಾಕಷ್ಟು ಫುಟ್‌ಬಾಲ್ ಕ್ಲಬ್‌ಗಳು ಹಲವು ಬಗೆಯ ಫುಟ್‌ಬಾಲ್ ನಿಯಮಾವಳಿಗಳನ್ನು ಪಾಲಿಸುತ್ತಿವೆ.
- 1857ರಲ್ಲಿ ಷೆಫ್‌ಫೀಲ್ಡ್ ಇಂಗ್ಲೀಷ್ ನಗರದಲ್ಲಿ ನಥಾನಿಯೇಲ್ ಕ್ರೆಸ್‌ವಿಕ್ ಮತ್ತು ವಿಲಿಯಮ್ ಪ್ರೆಸ್ಟ್‌ರಿಂದ ಸ್ಥಾಪಿತವಾದ ಷೆಫ್‌ಫೀಲ್ಡ್ ಫುಟ್‌ಬಾಲ್ ಕ್ಲಬ್, ಜಗತ್ತಿನ ಹಳೆಯ ಅಸೋಸಿಯೇಷನ್ ಫುಟ್‌ಬಾಲ್ ಆಡುವ ಕ್ಲಬ್ ಎಂದು ಗುರುತಿಸಲ್ಪಟ್ಟಿತು.[೪೮]
- ಆದರೂ ಈ ಕ್ಲಬ್ ಆಟದಲ್ಲಿ ತನ್ನದೇ ಸ್ವಂತ ಫುಟ್‌ಬಾಲ್ ನಿಯಮಗಳಾದ ಷೆಫ್‌ಫೀಲ್ಡ್ ನಿಯಮ ಗಳನ್ನು ಅನುಸರಿಸುತಿತ್ತು. ಈ ನಿಯಮಾವಳಿಗಳು ಯಾವುದೇ ಪಬ್ಲಿಕ್ ಶಾಲೆಗಳ ನಿಯಮಗಳಿಗಿಂತ ಸ್ವತಂತ್ರವಾಗಿದ್ದು ಇದರ ಒಂದು ಪ್ರಮುಖ ವ್ಯತ್ಯಾಸವೆಂದರೆ ಯಾವುದೇ ರೀತಿಯ ಆಫ್‌ಸೈಡ್ ನಿಯಮಗಳು ಇಲ್ಲದೇ ಇರುವುದು.
- ಈ ನಿಯಮಾವಳಿಗಳು ಹೊಸ ಆವಿಷ್ಕಾರಗಳಿಗೆ ಕಾರಣವಾಗಿ ತದನಂತರ ಅವುಗಳು ಅಸೋಸಿಯೇಷನ್ ಫುಟ್‌ಬಾಲ್‌ಗೂ ಹಬ್ಬಿದವು. ಅವುಗಳೆಂದರೆ ಫ್ರೀ ಕಿಕ್‌ಗಳು[82], ಕಾರ್ನರ್ ಕಿಕ್‌ಗಳು, ಹ್ಯಾಂಡ್‌ಬಾಲ್, ಥ್ರೋ-ಇನ್‌ಗಳು ಮತ್ತು ಗಡಿರೇಖೆ.[೪೯]
- 1870ರ ವೇಳೆಗೆ ಆ ನಿಯಮಾವಳಿಗಳು ಉತ್ತರ ಮತ್ತು ಮಧ್ಯ ಇಂಗ್ಲೆಂಡ್‌ನಲ್ಲಿ ಪ್ರಭುತ್ವ ಸಾಧಿಸಿದವು. ಇದೇ ಸಮಯದಲ್ಲಿ ಲಂಡನ್ ಮತ್ತು ಷೆಫ್‌ಫೀಲ್ಡ್ FAಗಳು ತಮ್ಮ ಆಟದ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆಗಳನ್ನು ತಂದು ಎರಡೂ ಆಟಗಳ ನಡುವೆಯಿದ್ದ ಭಿನ್ನತೆಗಳನ್ನು ಅಳಿಸಿಹಾಕಿ 1877ರ ಹೊತ್ತಿಗೆ ಸಮಾನ ನಿಯಮಗಳನ್ನು ಮೈಗೂಡಿಸಿಕೊಂಡವು.
ಆಸ್ಟ್ರೇಲಿಯನ್ ನಿಯಮಗಳು
ಬದಲಾಯಿಸಿ- ವಿಕ್ಟೋರಿಯನ್ ಗೋಲ್ಡ್ ರಶ್ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಫುಟ್‌ಬಾಲ್‌ನ ವಿವಿಧ ಪ್ರಕಾರಗಳನ್ನು ಆಡಲಾಗುತ್ತಿತ್ತು. ಅಲ್ಲಿಂದ ಇದು ವಿಭಿನ್ನ ಮತ್ತು ಪ್ರಾದೇಶಿಕವಾಗಿ ಜನಪ್ರಿಯ ಆಟವಾಗಿ ಉಗಮವಾಯಿತು. ಇಂದಿಗೂ ಟಾಮ್ ವಿಲ್ಸ್‌ರು ರೂಪಿಸಿದರು ಎನ್ನಲಾದ ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್, ನಿಯಮಗಳ ಮೂಲದ ವಿಚಾರದಲ್ಲಿ ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
- ಚಳಿಗಾಲದಲ್ಲಿ ಕ್ರಿಕೆಟಿಗರ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ತನ್ನದೆ ಆದ "ಫುಟ್‌ಬಾಲ್ ನಿಯಮಾವಳಿ"ಗಳನ್ನು ಹೊಂದಿರುವ "ಫುಟ್-ಬಾಲ್ ಕ್ಲಬ್" ರಚನೆಗೆ ಆಹ್ವಾನಿಸಿ 10 ಜುಲೈ 1858ರಲ್ಲಿ ವಿಲ್ಸ್ ರವರು ಬೆಲ್ಸ್ ಲೈಫ್ ಇನ್ ವಿಕ್ಟೋರಿಯಾ & ಸ್ಪೋರ್ಟಿಗ್ ಕ್ರಾನಿಕಲ್‌ಗೆ ಪತ್ರವನ್ನು ಬರೆದಿದ್ದಾರೆ[೫೦].
- ಇದನ್ನು ಇತಿಹಾಸಕಾರರು ಹೊಸ ಆಟದ ರಚನೆಯ ಸಂದರ್ಭವನ್ನು ವಿವರಿಸುವ ದಾಖಲೆಯಾಗಿ ಪರಿಗಣಿಸಿದ್ದಾರೆ. ವಿಲ್ಸ್ ರವರು ಜನಪ್ರಿಯತೆ ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ ಮೆಲ್ಬರ್ನ್‌ನಲ್ಲಿ 31 ಜುಲೈ 1858ರಲ್ಲಿ ಫುಟ್‌ಬಾಲ್ ಪಂದ್ಯಗಳನ್ನು ಸಂಘಟಿಸಿದರು ಎಂದು ದಾಖಲಾಗಿದೆ. ಆ ಪಂದ್ಯಗಳಲ್ಲಿ ವಿವಿಧ ನಿಯಮಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಯಿತು[೫೧].
- 7 ಆಗಸ್ಟ 1858ರಲ್ಲಿ ದಾಖಲಾದ ಮೆಲ್ಬರ್ನ್ ಗ್ರಾಮರ್ ಶಾಲೆ ಮತ್ತು ಸ್ಕಾಟ್ಚ್ ಕಾಲೇಜು ನಡುವೆ ನಡೆದ ಪಂದ್ಯಕ್ಕೆ ವಿಲ್ಸ್ ತೀರ್ಪುಗಾರರಾಗಿದ್ದರು.ತೀವ್ರಗತಿಯಲ್ಲಿ ಜನಪ್ರಿಯಗೊಂಡ ಸಂಘಟಿತ ಫುಟ್‌ಬಾಲ್ ಪಂದ್ಯಗಳು ಈ ಕೆಳಗಿನಂತಿವೆ.
- 17 ಮೇ 1859ರಲ್ಲಿ ವಿಲ್ಸ್ ಮತ್ತು ಇತರರು ತೊಡಗಿಕೊಂಡಿರುವ ಮೆಲ್ಬರ್ನ್ ಫುಟ್‌ಬಾಲ್ ಕ್ಲಬ್‌ನಡಿಯಲ್ಲಿ (ಅಸ್ತಿತ್ವದಲ್ಲಿರುವ ಹಳೆಯ ಆಸ್ಟ್ರೇಲಿಯನ್ ಫುಟ್‌ಬಾಲ್ ಕ್ಲಬ್) ಆರಂಭಿಕ ಪಂದ್ಯಗಳನ್ನು ನಡೆಸಲಾಗಿತ್ತು. ವಿಲ್ಸ್ ಸೇರಿದಂತೆ ವಿಲಿಯಮ್ ಹ್ಯಾಮರ್ಸ್‌ಲಿ, ಜೆ.ಬಿ. ಥಾಂಪ್ಸನ್ ಮತ್ತು ಥಾಮಸ್ ಎಚ್. ಸ್ಮಿತ್ ಈ ಕ್ಲಬಿನ ಮೊದಲ ಸದಸ್ಯರಾಗಿದ್ದಾರೆ. ಇತರ ಕ್ಲಬ್‌ಗಳು ಕೂಡ ವ್ಯಾಪಕವಾಗಿ ಒಪ್ಪಿಕೊಳ್ಳಬಹುದಾದ ನಿಯಮಗಳ ಸಂಕಲನವನ್ನು ರಚಿಸುವ ನಿಟ್ಟಿನಲ್ಲಿ ಈ ಸದಸ್ಯರು ಒಟ್ಟು ಸೇರಿದರು. ಮೂಲ ನಿಯಮ ರಚಿಸಿದವರ ಹಿನ್ನೆಲೆಗಳು ಹೊಸ ನಿಯಮಗಳ ಮೇಲೂ ಪ್ರಭಾವ ಬೀರಬಹುದೆಂಬ ಆಸಕ್ತಿದಾಯಕ ಊಹೆಗಳಿದ್ಜವು.
- ಆಸ್ಟ್ರೇಲಿಯಾದ ಮೂಲದ ವಿಲ್ಸ್ ಇಂಗ್ಲೆಂಡ್‌ನಲ್ಲಿ ಶಿಕ್ಷಣವನ್ನು ಪಡೆದರು. ಅವರು ರಗ್ಬಿ ಫುಟ್‌ಬಾಲ್ ಆಟಗಾರ ಮತ್ತು ಕ್ರಿಕೆಟಿಗರಾಗಿದ್ದ ಇವರು ಸ್ಥಳೀಯ ಆಸ್ಟ್ರೇಲಿಯನ್ನರೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು. ಇವರು ಮೊದಲು ರಗ್ಬಿ ಶಾಲೆ ನಿಯಮಗಳನ್ನು ಪರಿಚಯಿಸಿದರು.
- ಕ್ರಿಕೆಟಿಗ ಮತ್ತು ಪತ್ರಕರ್ತರಾಗಿರುವ ಹ್ಯಾಮರ್ಸ್‌ಲಿರವರು ಇಂಗ್ಲೆಂಡ್‌ನಿಂದ ವಲಸೆ ಬಂದಿದ್ದರು. ಥೋಮಸ್ ಸ್ಮಿತ್‌ರವರು ಐರ್ಲೆಂಡ್‌ನಿಂದ ವಲಸೆ ಬಂದ ಶಾಲಾ ಶಿಕ್ಷಕರು. ಸಮಿತಿಯ ಸದಸ್ಯರು ಇಂಗ್ಲಿಷ್ ಪಬ್ಲಿಕ್ ಶಾಲಾ ಆಟಗಳ ನಿಯಮಗಳೂ ಸೇರಿದಂತೆ ಹಲವು ನಿಯಮಗಳ ಬಗ್ಗೆ ಚರ್ಚಿಸಿದರು. ಫುಟ್‌ಬಾಲ್‌ನ ಇತರ ಪ್ರಕಾರಗಳಿಗೆ ಸಮಾನವಾಗುವ ಅಂಶಗಳು ಸೇರಿದಂತೆ, ಯಾವುದೇ ಅಂಶಗಳ ಪ್ರಭಾವವನ್ನು ತೋರಿಸಲು ಯಾವುದೇ ನಿರ್ಣಾಯಕ ಪುರಾವೆಯಿಲ್ಲ.
- ಆಸ್ಟ್ರೇಲಿಯಾದ ಪರಿಸ್ಥಿತಿಗೆ ಯಾವ ಆಟ ಹೊಂದಿಕೊಳ್ಳುತ್ತದೆ ಎಂದು ಸಮಿತಿ ನಿರ್ಧರಿಸುವ ಬದಲಿಗೆ, ವಿಲ್ಸ್ ತಾನಾಗಿಯೇ "ಇಲ್ಲ, ನಾವು ನಮಗಾಗಿ ಆಟವನ್ನು ರಚಿಸುತ್ತೇವೆ" ಎಂದು ಘೋಷಿಸಿದ್ದಾಗಿ ದಾಖಲೆಗಳು ಹೇಳುತ್ತವೆ.[೫೨]
- ಮಾರ್ಕ್, ಫ್ರೀ ಕಿಕ್, ತಡೆಹಿಡಿಯುವುದು, ಆಫ್‌ಸೈಡ್ ನಿಯಮದ ಕೊರತೆ ಮತ್ತು ವಿಶೇಷವಾಗಿ ಆಟಗಾರರು ಚೆಂಡನ್ನು ಎಸೆದಕ್ಕಾಗಿ ದಂಡಕ್ಕೆ ಒಳಗಾಗುವ ನಿಯಮಗಳ ವ್ಯಾಪಿಸುವಿಕೆಯಲ್ಲಿ ವಿಲ್ಸ್‌ರವರ ನಿಯಮದ ಪಾತ್ರವು ವಿಭಿನ್ನವಾಗಿತ್ತು.
- ಮೆಲ್ಬರ್ನ್ ಫುಟ್‌ಬಾಲ್ ನಿಯಮಗಳು ವಿಶಾಲವಾಗಿ ವ್ಯಾಪಿಸಿತು. ನಂತರ ಕ್ರಮೇಣ ಇತರ ವಿಕ್ಟೋರಿಯನ್ ಕ್ಲಬ್‌ಗಳಿಂದ ಇದನ್ನು ಅಳವಡಿಸಿಕೊಳ್ಳಲಾಯಿತು. 1860ರ ಹೊತ್ತಿಗೆ ಇತರ ಪ್ರಭಾವಶಾಲಿ ವಿಕ್ಟೋರಿಯನ್ ಫುಟ್‌ಬಾಲ್ ಕ್ಲಬ್‌ಗಳ ನಿಯಮಗಳನ್ನು ಸರಿಪಡಿಸಲು ಹಲವಾರು ಬಾರಿ ಮರುರಚಿಸಲಾಯಿತು.
- 1866ರಲ್ಲಿ ಎಚ್ ಸಿ ಎ ಹ್ಯಾರಿಸನ್ರವರ ಸಮಿತಿಯು ಗೀಲಾಂಗ್ ಫುಟ್‌ಬಾಲ್ ಕ್ಲಬ್ ಆಡುವ ಆಟದ ನಿಯಮಗಳನ್ನು ಪರಿಷ್ಕರಿಸಿತು. ಈ ನಿಯಮವು ಇತರ ನಿಯಮಗಳಿಗಿಂತ ಹೆಚ್ಚು ವಿಭಿನ್ನವಾಗಿದ್ದು, ಇದನ್ನು "ವಿಕ್ಟೋರಿಯನ್ ನಿಯಮಗಳು" ಎಂದು ಕರೆಯಲಾಗುತ್ತದೆ. ಈ ನಿಯಮದ ಪ್ರಕಾರ ಮೈದಾನವು ಕ್ರಿಕೆಟ್ ಮೈದಾನದಂತಿದ್ದು, ರಗ್ಬಿ ಚೆಂಡನ್ನು ಬಳಸಲಾಗುತ್ತದೆ. ಇದರಲ್ಲಿ ಕಂಬಗಳ ಹಿಂದ ವಿಶೇಷ ಗೋಲು ಇರುವುದು ಮತ್ತು ಆಟಗಾರನು ಓಡುವಾಗ ಚೆಂಡನ್ನು ಪುಟಿದೆಳುವಂತೆ ಮಾಡಬೇಕು ಮತ್ತು ನಂತರ ಅದ್ಭುತ ಎತ್ತರದ ಮಾರ್ಕಿಂಗ್ ಮಾಡಬೇಕು. ಈ ಫುಟ್‌ಬಾಲ್‌ನ ಪ್ರಕಾರವು ಕ್ಷಿಪ್ರಗತಿಯಲ್ಲಿ ಆಸ್ಟ್ರೇಲಿಯಾದ ಇತರ ಬಡಾವಣೆಗಳಿಗೆ ಹರಡಿತು.
- ಮೊದಲನೆ ಮಹಾಯುದ್ದದ ನಂತರ ದಕ್ಷಿಣ ಆಸ್ಟ್ರೇಲಿಯಾದ ಹಾರ್ಟ್‌ಲ್ಯಾಂಡನ್ನು ಬಿಟ್ಟು ಉಳಿದೆಡೆ ನಿಯಮಾವಳಿಗಳ ಅಭಿವೃದ್ಧಿಯಲ್ಲಿ ಇಳಿಮುಖವಾಯಿತು. ಆದರೆ ಕ್ರೀಡಾ ಹವ್ಯಾಸಿಗಳಿಂದ ಫುಟ್‌ಬಾಲ್ ನಿಯಮಾವಳಿಗಳು ಜಗತ್ತಿನ ಇತರ ಭಾಗಗಳಲ್ಲಿ ಬೆಳೆಯಿತು ಮತ್ತು ಆಸ್ಟ್ರೇಲಿಯನ್ ಫುಟ್‌ಬಾಲ್ ಲೀಗ್ ಪ್ರಧಾನ ವೃತ್ತಿಪರ ಸ್ಪರ್ಧೆಯಂತೆ ಉದಯಿಸಿತು.
ಫುಟ್‌ಬಾಲ್ ಅಸೋಷಿಯೇಷನ್
ಬದಲಾಯಿಸಿ- 1860ರ ದಶಕದ ಆರಂಭದಲ್ಲಿ, ವಿವಿಧ ಪಬ್ಲಿಕ್ ಶಾಲೆಗಳ ಆಟಗಳನ್ನು ಸರಿಹೊಂದಿಸಿ ಒಗ್ಗೂಡಿಸುವ ಯತ್ನಗಳು ಇಂಗ್ಲೆಂಡ್‌ನಲ್ಲಿ ಹೆಚ್ಚಾಗಿ ನಡೆದಿದ್ದವು. ಮೂಲತಃ ಕೇಂಬ್ರಿಡ್ಜ್ ರೂಲ್ಸ್‌ನ ಹರಿಕಾರರಲ್ಲೊಬ್ಬರಾದ ಜೆ. ಸಿ. ಥ್ರಿಂಗ್ ಅಪಿಂಗ್‌ಹ್ಯಾಂ ಶಾಲೆಯಲ್ಲಿ ಬೋಧಕರಾಗಿದ್ದರು. ಈ ಆಟವನ್ನು 'ಅತಿ ಸರಳ ಆಟ'ವೆಂದ ಇವರು ತಮ್ಮದೇ ನಿಯಮಗಳನ್ನು 1862ರಲ್ಲಿ ಪ್ರಕಟಿಸಿದರು. (ಇವಕ್ಕೆ 'ಅಪಿಂಗ್‌ಹ್ಯಾಂ ನಿಯಮಗಳು' ಎಂದೂ ಹೇಳಲಾಗಿದೆ.)
- ಹ್ಯಾರೊ, ಶ್ರೂಸ್‌ಬ್ಯೂರಿ, ಎಟನ್, ರಗ್ಬಿ, ಮಾರ್ಲ್‌ಬೊರೋ ಮತ್ತು ವೆಸ್ಟ್‌ಮಿನ್‌ಸ್ಟರ್ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಏಳು ಸದಸ್ಯರ ಸಮಿತಿಯು, ಕೇಂಬ್ರಿಡ್ಜ್ ನಿಯಮಗಳ ಹೊಸ ಪರಿಷ್ಕೃತ ಆವೃತ್ತಿಯನ್ನು 1863ರ ಅಕ್ಟೋಬರ್ ತಿಂಗಳ ಆರಂಭದಲ್ಲಿ ಸಿದ್ಧಪಡಿಸಿತು.
- ಲಂಡನ್ ನಗರದ ಗ್ರೇಟ್ ಕ್ವೀನ್ ಸ್ಟ್ರೀಟ್‌ನಲ್ಲಿರುವ ಫ್ರೀಮೇಸನ್ಸ್ ಟೆವೆರ್ನ್‌ನಲ್ಲಿ ಲಂಡನ್ ಮಹಾನಗರ ವಲಯದಲ್ಲಿರುವ ಹಲವಾರು ಫುಟ್‌ಬಾಲ್ ಕ್ಲಬ್‌ಗಳ ಪ್ರತಿನಿಧಿಗಳು, 1863 ಅಕ್ಟೋಬರ್ ತಿಂಗಳ 26ರ ಸಂಜೆ, ಫುಟ್‌ಬಾಲ್ ಅಸೋಷಿಯೇಷನ್(FA)ನ ಆರಂಭಿಕ ಸಭೆಯಲ್ಲಿ ಸೇರಿದರು. ಒಗ್ಗೂಡಿಸುವಂತಹ ಏಕ ನಿಯಮವನ್ನು ಜಾರಿಗೊಳಿಸಿ, ಸದಸ್ಯರ ನಡುವಿನ ಪಂದ್ಯಗಳನ್ನು ನಿಯಂತ್ರಿಸುವುದು ಈ ಅಸೋಸಿಯೇಷನ್‌ನ ಉದ್ದೇಶವಾಗಿತ್ತು.
- ಮೊದಲ ಸಭೆಯ ನಂತರ, ಅಸೋಷಿಯೇಷನ್ ಸೇರಲು ಪಬ್ಲಿಕ್ ಶಾಲೆಗಳನ್ನು ಆಮಂತ್ರಿಸಲಾಯಿತು. ಚಾರ್ಟರ್‌ಹೌಸ್ ಮತ್ತು ಅಪಿಂಗ್‌ಹ್ಯಾಂ ಹೊರತುಪಡಿಸಿ, ಉಳಿದೆಲ್ಲ ಕ್ಲಬ್‌ಗಳು ಇದನ್ನು ನಿರಾಕರಿಸಿದವು. 1863ರಲ್ಲಿ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ತಿಂಗಳ ವರೆಗೆ FAದ ಒಟ್ಟು ಆರು ಸಭೆಗಳು ನಡೆದವು. ಮೂರನೆಯ ಸಭೆಯ ನಂತರ, ನಿಯಮಗಳ ಕರಡು ಆವೃತ್ತಿಯನ್ನು ಪ್ರಕಟಿಸಲಾಯಿತು.
- ಆದಾಗ್ಯೂ, ನಾಲ್ಕನೆಯ ಸಭೆಯ ಆರಂಭದಲ್ಲಿ, 1863ರಲ್ಲಿ ಆಗ ತಾನೇ ಪ್ರಕಟಿಸಲಾಗಿದ್ದ ಕೇಂಬ್ರಿಡ್ಜ್ ನಿಯಮಗಳತ್ತ ಗಮನ ಸೆಳೆಯಲಾಗಿತ್ತು. ಕೇಂಬ್ರಿಡ್ಜ್ ನಿಯಮಗಳು, ಕರಡು FA ನಿಯಮಗಳಿಗಿಂತಲೂ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭಿನ್ನವಾಗಿದ್ದವು; ಅವು ಯಾವುವೆಂದರೆ, ಚೆಂಡನ್ನು ಕೈಯಲ್ಲಿ ಹಿಡಿದು ಓಡುವುದು (ಕ್ಯಾರಿಯಿಂಗ್), ಹಾಗೂ, ಎದುರಾಳಿ ತಂಡದ ಆಟಗಾರನ ಮೊಣಗಾಲಿಗೆ ಒದೆಯುವುದು (ಹ್ಯಾಕಿಂಗ್). ಎರಡು ವಿವಾದಾಸ್ಪದ FA ನಿಯಮಗಳು ಕೆಳಕಂಡಂತಿವೆ:
IX. A player shall be entitled to run with the ball towards his adversaries' goal if he makes a fair catch, or catches the ball on the first bound; but in case of a fair catch, if he makes his mark he shall not run. X. If any player shall run with the ball towards his adversaries' goal, any player on the opposite side shall be at liberty to charge, hold, trip or hack him, or to wrest the ball from him, but no player shall be held and hacked at the same time.
- ಐದನೆಯ ಸಭೆಯಲ್ಲಿ ಈ ಎರಡು ನಿಯಮಗಳನ್ನು ತೆರವುಗೊಳಿಸುವ ಪ್ರಸ್ತಾಪವಾಗಿತ್ತು. ಪ್ರತಿನಿಧಿಗಳಲ್ಲಿ ಬಹುತೇಕರು ಇದಕ್ಕೆ ಬೆಂಬಲ ಸೂಚಿಸಿದರು, ಆದರೆ ಬ್ಲ್ಯಾಕ್‌ಹೀತ್‌ನ ಪ್ರತಿನಿಧಿ ಹಾಗೂ ಮೊದಲ FA ಖಜಾಂಚಿ F. M. ಕ್ಯಾಂಪ್‌ಬೆಲ್ ಆಕ್ಷೇಪಿಸಿದರು. ಅವರ ಪ್ರಕಾರ, "ಹ್ಯಾಕಿಂಗ್ ಎಂಬುದು ವಾಸ್ತವವಾದ ಫುಟ್‌ಬಾಲ್." ಆದಾಗ್ಯೂ, 'ಚೆಂಡನ್ನು ಕೈಯಲ್ಲಿ ಹಿಡಿದು ಓಡುವುದು' ಮತ್ತು 'ಹ್ಯಾಕಿಂಗ್'ನ್ನು ಬಹಿಷ್ಕರಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು.
- ಹಾಗಾಗಿ ಬ್ಲ್ಯಾಕ್‌ಹೀಥ್ FAಯಿಂದ ಹಿಂದೆ ಸರಿಯಿತು. ಡಿಸೆಂಬರ್ ತಿಂಗಳ 8ರಂದು ನಡೆದ ಅಂತಿಮ ಸಭೆಯಲ್ಲಿ, ಫುಟ್‌ಬಾಲ್ ಎಂದು (ಇನ್ನು ಕೆಲವೆಡೆ ಸಾಕ್ಕರ್ ಎಂದು) ಆ ನಂತರ ಖ್ಯಾತವಾದ ಆಟದ ವ್ಯಾಪಕ ನಿಯಮಗಳ ಪಟ್ಟಿಯಾದ ಫುಟ್‌ಬಾಲ್ ನಿಯಮಗಳನ್ನು FA ಪ್ರಕಟಿಸಿತು.
- ಅಸೋಷಿಯೇಷನ್ ಫುಟ್‌ಬಾಲ್‌ನ ಅಂಶವಾಗಿ ಉಳಿಯದಿದ್ದ ಕೆಲವು ನಿಯಮಗಳನ್ನು FAದ ಮೊದಲ ನಿಯಮಗಳು ಇನ್ನೂ ಹೊಂದಿದ್ದವು; (ಉದಾಹರಣೆಗೆ, ಆಸ್ಟ್ರೇಲಿಯನ್ ಫುಟ್‌ಬಾಲ್ ಸೇರಿದಂತೆ) ಇತರೆ ಆಟಗಳಲ್ಲಿ ಪರಿಗಣಿಸಬಹುದಾದಂತಹ ನಿಯಮಗಳು: ಆಟಗಾರನೊಬ್ಬನು 'ಫೇರ್ ಕ್ಯಾಚ್' ಮಾಡಿ ಮಾರ್ಕ್ ಸಾಧಿಸಿ, 'ಫ್ರೀ ಕಿಕ್'ನ ಅವಕಾಶ ಪಡೆಯಲು ಅರ್ಹನಾಗುತ್ತಾನೆ; ಹಾಗೂ ಎದುರಾಳಿ ತಂಡದ ಗೋಲು ರೇಖೆಯ ಹಿಂದೆ ಚೆಂಡನ್ನು ಮುಟ್ಟಿದ್ದಲ್ಲಿ, ಗೋಲು ರೇಖೆಯಿಂದ 15 ಗಜಗಳ (13.5 ಮೀಟರ್‌ಗಳ) ದೂರದಲ್ಲಿ ಗೋಲ್‌ನತ್ತ ಒಂದು ಫ್ರೀ ಕಿಕ್ ನ ಅವಕಾಶ ಆತನ ತಂಡಕ್ಕೆ ನೀಡಲಾಗುತ್ತಿತ್ತು.
ರಗ್ಬಿ ಫುಟ್‌ಬಾಲ್
ಬದಲಾಯಿಸಿ- 1870ರಷ್ಟರಲ್ಲಿ ಬ್ರಿಟನ್‌ನಲ್ಲಿ ಸುಮಾರು 75 ಕ್ಲಬ್‌ಗಳು ಶಾಲಾ ರಗ್ಬಿ ಆಟದ ಬದಲಾವಣೆಗಳನ್ನು ಆಧರಿಸಿ ಆಟವಾಡುತ್ತಿದ್ದವು. ಐರ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿಯೂ ಸಹ ರಗ್ಬಿ ಕ್ಲಬ್‌ಗಳಿದ್ದವು. ಆದಾಗ್ಯೂ, ಲಂಡನ್‌ನ 21 ಕ್ಲಬ್‌ಗಳು ಒಟ್ಟು ಸೇರಿ 1871ರಲ್ಲಿ ರಗ್ಬಿ ಫುಟ್‌ಬಾಲ್ ಒಕ್ಕೂಟವನ್ನು (RFU) ರಚಿಸುವ ತನಕ, ರಗ್ಬಿಗಾಗಿ ಯಾವುದೇ ಸಾಮಾನ್ಯವಾಗಿ ಸ್ವೀಕೃತವಾದ ನಿಯಮ< /span>ಗಳಿರಲಿಲ್ಲ. (ವಿಪರ್ಯಾಸವೆಂದರೆ, ಬ್ಲ್ಯಾಕ್‌ಹೀಥ್ ಈಗ 'ಹ್ಯಾಕಿಂಗ್'ನ್ನು ನಿಷೇಧಿಸಲು ಒತ್ತಾಯ ಮಾಡಿತು. [neutrality is disputed])
- ಮೊದಲ ಅಧಿಕೃತ RFU ನಿಯಮಗಳನ್ನು ಜೂನ್ 1871ರಲ್ಲಿ ಅಂಗೀಕರಿಸಲಾಯಿತು. ಈ ನಿಯಮಗಳಡಿ ಚೆಂಡನ್ನು ವರ್ಗಾಯಿಸಲು ಅವಕಾಶ ನೀಡಲಾಯಿತು. ಮಾರ್ಕ್ ಹಾಗೂ ಸಾಮಾನ್ಯ ಆಟಗಳಿಂದ ಡ್ರಾಪ್-ಗೋಲುಗಳು ಮತ್ತು ಪೆನಾಲ್ಟಿ ಕನ್ವರ್ಷನ್‌ಗಳು ಇನ್ನೂ ಪಂದ್ಯದ ಮುಖ್ಯ ರೀತಿಯಾಗಿದ್ದರೂ, 'ಟ್ರೈ' ಅರ್ಥಾತ್, ಗೋಲು ಗಳಿಸುವ ಯತ್ನಕ್ಕೆ ಅವಕಾಶವನ್ನು ನೀಡುವಂತಹ, ರೇಖೆಯ ಮೇಲೆ ಚೆಂಡನ್ನು ಮುಟ್ಟಿಸುವ ತಂತ್ರವನ್ನು ಸೇರಿಸಿಕೊಂಡಿತು.
ರಗ್ಬಿ ಲೀಗ್
ಬದಲಾಯಿಸಿ- 1895ರಲ್ಲಿ, RFU ಸದಸ್ಯರ ನಡುವಿನ ತಕರಾರುಗಳು ತನ್ನದೇ ಆದ ನೀತಿ-ನಿಯಮಗಳು ಹಾಗೂ ಪಂದ್ಯಾವಳಿಗಳನ್ನು ನಡೆಸುವಂತಹ ಪ್ರತ್ಯೇಕ ಬಣದ ರಚನೆಗೆ ನಾಂದಿಯಾಯಿತು.
- ಕಾಲಾನಂತರದಲ್ಲಿ ಇದು ರಗ್ಬಿ ಲೀಗ್ ಎಂಬ ಭಿನ್ನವಾದ ಪ್ರಕಾರದ ನಿಯಮಾವಳಿಯಾಗಿ ವಿಕಸನಗೊಂಡಿತು.
ಉತ್ತರ ಅಮೆರಿಕಾದ ಫುಟ್‌ಬಾಲ್ ನಿಯಮಾವಳಿಗಳು
ಬದಲಾಯಿಸಿ- ಬ್ರಿಟನ್‌ನಂತೆ, 19ರ ಶತಮಾನದ ಆರಂಭದಷ್ಟರಲ್ಲಿ, ಉತ್ತರ ಅಮೆರಿಕಾದ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳುಳ್ಳ ತಂಡಗಳ ನಡುವೆ ತಮ್ಮದೇ ಆದ ಸ್ಥಳೀಯ ಆಟಗಳನ್ನು ಆಡಿದವು. 1820ರ ದಶಕದಷ್ಟು ಮುಂಚಿತವಾಗಿಯೇ, ನ್ಯೂ ಹ್ಯಾಂಪ್‌ಷೈರ್‌ನಲ್ಲಿರುವ ಡಾರ್ಟ್‌ಮೌತ್ ಕಾಲೇಜ್‌ನ ವಿದ್ಯಾರ್ಥಿಗಳು, ಅಸೋಷಿಯೇಷನ್ ಫುಟ್‌ಬಾಲ್ ನಿಯಮಾವಳಿಯ ಭಿನ್ನರೂಪ ಹೊಂದಿರುವ ಓಲ್ಡ್ ಡಿವಿಷನ್ ಫುಟ್‌ಬಾಲ್‌ನ ಆಟವನ್ನು ಆಡಿದರು.
- ಕೆನಡಾದಲ್ಲಿ ಮೊದಲನೆಯ ರಗ್ಬಿ ಆಟವು 1865ರಲ್ಲಿ ಬ್ರಿಟಿಷ್ ಭೂಸೇನೆಯ ಅಧಿಕಾರಿಗಳ ಹಾಗೂ ಸ್ಥಳೀಯ ನಾಗರೀಕರ ನಡುವೆ ಮಾಂಟ್ರಿಯಾಲ್‌ನಲ್ಲಿ ನಡೆಯಿತೆಂದು ಸಾಮಾನ್ಯವಾಗಿ ಹೇಳಲಾಗಿದೆ. ಈ ಆಟವು ನಿಧಾನವಾಗಿ ಜನಪ್ರಿಯತೆ ಗೊಂಡು, 1868ರಲ್ಲಿ ಮಾಂಟ್ರಿಯಾಲ್ ಫುಟ್‌ಬಾಲ್ ಕ್ಲಬ್‌ನ್ನು ರಚಿಸಲಾಯಿತು, ಇದು ಕೆನಡಾದಲ್ಲಿ ದಾಖಲಿತ ಮೊದಲ ಫುಟ್‌ಬಾಲ್ ಕ್ಲಬ್ ಆಗಿತ್ತು.
- 1869ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ, FA ನಿಯಮಗಳಡಿ ಪ್ರಿನ್ಸ್‌ಟನ್ ಮತ್ತು ರುಟ್ಜರ್ಸ್ ತಂಡಗಳ ನಡುವೆ ಮೊದಲ ಪಂದ್ಯವನ್ನು ಆಡಲಾಯಿತು. ಇದನ್ನೇ U.S.ನಲ್ಲಿ ನಡೆದ ಮೊದಲ ಕಾಲೇಜ್ ಫುಟ್‌ಬಾಲ್ ಪಂದ್ಯವೆಂದು ಆಗಾಗ್ಗೆ ಪರಿಗಣಿಸಲಾಗಿದ್ದು, ಒಂದು ಅರ್ಥದಲ್ಲಿ ಕಾಲೇಜ್‌ಗಳ ನಡುವಿನ ಒಂದು ಪಂದ್ಯವಿದು (ಆದಾಗ್ಯೂ, ಅಂತಿಮವಾಗಿ ಅಮೆರಿಕನ್ ಫುಟ್‌ಬಾಲ್ ರಗ್ಬಿಯಿಂದ ಜನಿಸಿರುವುದು, ಅಸೋಸಿಯೇಷನ್ ಪುಟ್‌ಬಾಲ್‌ನಿಂದಲ್ಲ).
- ಆಧುನಿಕ ಅಮೆರಿಕನ್ ಫುಟ್‌ಬಾಲ್ ಬೆಳೆದದ್ದು 1874ರಲ್ಲಿ ಮಾಂಟ್ರಿಯಾಲ್‌ನ ಮೆಕ್‌ಗಿಲ್ ವಿಶ್ವವಿದ್ಯಾನಿಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ನಡುವೆ ನಡೆದ ಪಂದ್ಯವೊಂದರಿಂದ. ಆ ವೇಳೆಯಲ್ಲಿ, U.S. ವಿಶ್ವವಿದ್ಯಾನಿಲಯಗಳು ಒಲವು ತೋರುತ್ತಿದ್ದ FA-ಆಧಾರಿತ ಕಿಕಿಂಗ್ ಆಟಗಳ ಬದಲಿಗೆ, ಹಾರ್ವರ್ಡ್ ವಿದ್ಯಾರ್ಥಿಗಳು ಬೊಸ್ಟನ್ ಆಟವನ್ನು ರನಿಂಗ್ ನಿಯಮಾವಳಿಯ ಪ್ರಕಾರ ಆಟವಾಡಿರುವುದು ವರದಿಯಾಗಿದೆ.
- ಇದರಿಂದ ಮೆಕ್‌ಗಿಲ್ ಆಟವಾಡಿದ ರಗ್ಬಿ-ಆಧಾರಿತ ಆಟಕ್ಕೆ ಹೊಂದಿಕೊಳ್ಳಲು ಹಾರ್ವರ್ಡ್‌ಗೆ ಸುಲಭವಾಗಿ, ಉಭಯ ತಂಡಗಳು ತಮ್ಮ ನಿಯಮಗಳನ್ನು ಪರಸ್ಪರ ಬದಲಿಸಿಕೊಂಡರು. ಆದಾಗ್ಯೂ, ಕೆಲವೇ ವರ್ಷಗಳಲ್ಲಿ, ಹಾರ್ವರ್ಡ್ ಮೆಕ್‌ಗಿಲ್‌ನ ರಗ್ಬಿ ನಿಯಮಗಳನ್ನು ಆಯ್ದುಕೊಂಡು, ಇತರೆ U.S. ವಿಶ್ವವಿದ್ಯಾನಿಲಯಗಳೂ ಈ ನಿಯಮಾವಳಿಗಳನ್ನು ಆಯ್ದುಕೊಳ್ಳಲು ಒತ್ತಾಯಿಸಿತು.
- 1876ರಲ್ಲಿ ನಡೆದ ಮೆಸಾಸೊಯಿಟ್ ಸಮ್ಮೇಳನದಲ್ಲಿ, ರಗ್ಬಿ ಫುಟ್‌ಬಾಲ್ ಒಕ್ಕೂಟದ ನಿಯಮಗಳನ್ನು ಕೆಲವು ಬದಲಾವಣೆಗಳೊಂದಿಗೆ ಆಯ್ದುಕೊಳ್ಳಲು ಈ ವಿಶ್ವ ವಿದ್ಯಾನಿಲಯಗಳು ಒಪ್ಪಿಕೊಂಡಿದ್ದವು.
- ಹಾರ್ವರ್ಡ್ ಮತ್ತು ಅದರ ಪ್ರತಿಸ್ಪರ್ಧಿಗಳ ರಗ್ಬಿ-ಆಧಾರಿತ ನಿಯಮಗಳನ್ನು ಆಯ್ದುಕೊಳ್ಳುವ ಕೆಲ ವರ್ಷಗಳ ಮುಂಚೆ, ಪ್ರಿನ್ಸ್‌ಟನ್, ರುಟ್ಜರ್ಸ್ ಮತ್ತು ಇತರೆ ತಂಡಗಳು, ಸಾಕ್ಕರ್-ಆಧಾರಿತ ನಿಯಮಗಳನ್ನು ಬಳಸಿ ಕೆಲವು ವರ್ಷಗಳ ಕಾಲ ಸ್ಪರ್ಧಿಸುವುದನ್ನು ಮುಂದುವರೆಸಿದವು. 20ನೆಯ ಶತಮಾನದ ಆರಂಭದ ತನಕ U.S. ಕಾಲೇಜ್‌ಗಳು ಸಾಕ್ಕರ್‌ನತ್ತ ವಾಪಸಾಗಲಿಲ್ಲ.
- 1880ರಲ್ಲಿ, ಯೇಲ್‌ನ ತರಬೇತುದಾರ ವಾಲ್ಟರ್ ಕ್ಯಾಂಪ್ ಅಮೆರಿಕನ್ ಆಟಕ್ಕೆ ಹಲವಾರು ಪ್ರಮುಖ ಬದಲಾವಣೆಗಳನ್ನು ಯೋಜಿಸಿದರು. ಇದುವರೆಗೂ ಆಧಾರವಾಗಿದ್ದ ರಗ್ಬಿ ಫುಟ್‌ಬಾಲ್ ಆಟಗಳಿಗಿಂತ ಅಮೆರಿಕನ್ ಫುಟ್‌ಬಾಲ್‌ನ್ನು ಭಿನ್ನವಾಗಿಸಲು, ಕ್ಯಾಂಪ್‌ರವರ ಎರಡು ಅತಿ ಮುಖ್ಯ ನಿಯಮ ನವೀನತೆಗಳು ಯಾವುವೆಂದರೆ ಸ್ಕ್ರಿಮೇಜ್ ಹಾಗೂ ಡೌನ್-ಅಂಡ್-ಡಿಸ್ಟನ್ಸ್ ನಿಯಮಗಳು.
- ಸ್ಕ್ರಿಮೇಜ್ ಎಂದರೆ ಒಬ್ಬ ಆಟಗಾರನು ಚೆಂಡನ್ನು ನೆಲದಿಂದ ಇನ್ನೊಬ್ಬ ಆಟಗಾರನ ಕೈಗೆ ರವಾನಿಸಿ ಆಟವನ್ನು ಆರಂಭಿಸುವ ರೀತಿ. ಚೆಂಡನ್ನು ಕೇವಲ ಕಾಲಿನ ಮೂಲಕ ರವಾನಿಸಬೇಕೆಂಬುದು ಕ್ಯಾಂಪ್‌ನ ಮೂಲತಃ ನಿಯಮವು ಸಾರಿತ್ತು; ಆದರೆ ಕೈಯಿಂದ ಚೆಂಡನ್ನು ರವಾನಿಸಲು ಅನುಕೂಲವಾಗುವಂತೆ ಈ ನಿಯಮವನ್ನು ಬದಲಿಸಲಾಯಿತು. ಈ ನಿಯಮವು ಎರಡೂ ತಂಡಗಳನ್ನು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲೆಂದು ವಿಶಿಷ್ಟವಾದ ಒಂದು ಸ್ಕ್ರಿಮೇಜ್ ರೇಖೆಯನ್ನು ಸಹ ಸ್ಥಾಪಿಸಿತು. ಆಟಗಾರನೊಬ್ಬ 'ಟ್ಯಾಕ್‌ಲ್' ಆದಾಗ, ನಿಯಮಗಳಡಿ ಆತನ ಸ್ಥಿತಿಯನ್ನು ಡೌನ್ ಎನ್ನಲಾಗುತ್ತದೆ. ಅದೇ ಸಮಯಕ್ಕೆ ಎರಡೂ ತಂಡಗಳು ಸ್ಕ್ರಿಮೇಜ್ ರೇಖೆಯ ಮೇಲೆ ಪುನಃ ಸಜ್ಜಾಗುತ್ತವೆ. ಚೆಂಡನ್ನು ರವಾನಿಸುವುದರೊಂದಿಗೆ ಆಟವು ಪುನರಾರಂಭಗೊಳ್ಳುತ್ತದೆ.
- ನಿಗದಿತ (ಯಾವಾಗಲೂ ಗಜಗಳಲ್ಲಿ ಅಳೆಯಲಾದ) ದೂರವನ್ನು ಸಾಧಿಸಲು ತಂಡಗಳಿಗೆ 'ಡೌನ್'ಗಳನ್ನು ನಿಯಮಿತ ಸಂಖ್ಯೆಗಳಲ್ಲಿ ನೀಡಲಾಗುವುದು. ಅಮೆರಿಕನ್ ಫುಟ್‌ಬಾಲ್‌ನಲ್ಲಿ, ಚೆಂಡನ್ನು ಹತ್ತು ಗಜ ಮುಂದೆ ಸಾಗಿಸಲು, ತಂಡಗಳಿಗೆ ನಾಲ್ಕು 'ಡೌನ್'ಗಳನ್ನು ನೀಡಲಾಗುತ್ತದೆ. ಆ ನಂತರ ಚೆಂಡಿನ ವಶ ಬದಲಾಗುತ್ತದೆ. ಕೆನಡಿಯನ್ ಫುಟ್‌ಬಾಲ್‌ನಲ್ಲಿ, ಹತ್ತು ಗಜ ಮುಂದೆ ಸಾಗಲು, ತಂಡಗಳಿಗೆ ಮೂರು 'ಡೌನ್'ಗಳಿಗೆ ಅವಕಾಶವಿದೆ.
- ಈ ನಿಯಮಾವಳಿಗಳು ಉತ್ತರ ಅಮೆರಿಕನ್ ನಿಯಮಗಳು ಹಾಗೂ ರಗ್ಬಿ ನಿಯಮಾವಳಿಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವನ್ನು ಸೃಷ್ಡಿಸಿದವು. ಸ್ಕ್ರಿಮೇಜ್‌ನಿಂದ ಚೆಂಡನ್ನು ರವಾನಿಸುವುದರೊಂದಿಗೆ ಆರಂಭಿಸಿ, 'ಡೌನ್' ನೊಂದಿಗೆ ಅಂತ್ಯಗೊಳ್ಳುವಂತಹ ಬಿಡಿಬಿಡಿಯಾದ ಆಟಗಳ ಸುತ್ತ, ಉತ್ತರ ಅಮೆರಿಕನ್ ನಿಯಮಾವಳಿಗಳನ್ನು ಹೆಣೆಯಲಾಗಿದ್ದರೆ, ರಗ್ಬಿಯು ಇನ್ನೂ ಮೂಲಭೂತವಾಗಿ ನಿರಂತರ-ಕ್ರಿಯೆ ಹೊಂದಿರುವ ಕ್ರೀಡೆಯಾಗಿದೆ.
- ಅಮೆರಿಕನ್ ಫುಟ್‌ಬಾಲ್ ಆಟ ತನ್ನ ಆರಂಭಿಕ ವರ್ಷಗಳಲ್ಲಿ ಮಿತಿಮೀರಿದ ಹಿಂಸಾರೂಪದಲ್ಲಿದ್ದುದರಿಂದ, ಪ್ರತಿವರ್ಷವೂ ಹಲವು ಸಾವುಗಳು ಮತ್ತು ಜೀವನಪಥವನ್ನೇ ಬದಲಿಸುವಂತಹ ಗಾಯಗಳು ಸಂಭವಿಸುತ್ತಿದ್ದವು. ಈ ಹಿಂಸೆ ಬಹಳ ತೀಕ್ಷ್ಣವಾಗಿ, ಆಟದ ಬಿರುಸನ್ನು ಕನಿಷ್ಠಗೊಳಿಸಲು ನಿಯಮಗಳನ್ನು ಬದಲಿಸದಿದ್ದಲ್ಲಿ ಆಟವನ್ನೇ ನಿಲ್ಲಿಸಿಬಿಡುವುದಾಗಿ ರಾಷ್ಟ್ರಪತಿ ಥಿಯೋಡರ್ ರೂಸ್ವೆಲ್ಟ್ 1905ರಲ್ಲಿ ಬೆದರಿಕೆ ಹಾಕಿದ್ದರು. ಆ ವರ್ಷ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಯಿತು, ಇವುಗಳಲ್ಲಿ ಬಹಳ ಸಹಿಸಿ ಕೊಳ್ಳುವಂತಹದ್ದು ನ್ಯಾಯಸಮ್ಮತವಾದ ಫಾರ್ವರ್ಡ್ ಪಾಸ್; 1880ರ ದಶಕದಲ್ಲಿ ನಡೆದ ಕ್ಯಾಂಪ್‌ನ ನಿಯಮಗಳ ಬದಲಾವಣೆಯಂತೆಯೇ ಇದೂ ಸಹ ಈ ಆಟದ ಸ್ವಭಾವವನ್ನೇ ಬದಲಾಯಿಸಿತು. ಚೆಂಡನ್ನು ಮುಂದಕ್ಕೆ ಬಿಸಾಡುವುದು ನ್ಯಾಯಸಮ್ಮತವಾದಾಗ, ಚೆಂಡನ್ನು ಮುಂದೆ ಸಾಗಿಸುವ ಹೊಚ್ಚ ಹೊಸ ವಿಧಾನವೇ ಹೊರಹೊಮ್ಮಿತು. ಇದರ ಪರಿಣಾಮವಾಗಿ, ತಂಡದಲ್ಲಿ ವಿವಿಧ ಸ್ಥಾನಗಳಿಗಾಗಿ ವಿವಿಧ ನೈಪುಣ್ಯತೆಗಳ ಅಗತ್ಯವಿದ್ದ ಕಾರಣ, ಆಟಗಾರರು ತಮ್ಮ-ತಮ್ಮ ಪಾತ್ರಗಳಲ್ಲಿ ಇನ್ನಷ್ಟು ಪರಿಣತರಾದರು.
- ಹಾಗಾಗಿ, ಕೆಲವು ಆಟಗಾರರು ಚೆಂಡಿನೊಂದಿಗೆ ಓಡುವುದರಲ್ಲಿ (ರನಿಂಗ್ ಬ್ಯಾಕ್) ಪ್ರಾಥಮಿಕವಾಗಿ ತೊಡಗಿಕೊಂಡಿದ್ದರೆ, ಇತರರು ಚೆಂಡನ್ನು ಎಸೆಯುವುದರಲ್ಲಿ (ಕ್ವಾರ್ಟರ್‌ಬ್ಯಾಕ್), ಹಿಡಿಯುವುದರಲ್ಲಿ (ವೈಡ್ ರಿಸೀವರ್), ಅಥವಾ ತಡೆಗಟ್ಟುವುದರಲ್ಲಿ (ಆಫೆನ್ಸಿವ್ ಲೈನ್) ಪರಿಣತಿ ಹೊಂದಿರುವರು. 1940 ಮತ್ತು 1950ರ ದಶಕಗಳಲ್ಲಿ ಮುಕ್ತ (ಆಟಗಾರರನ್ನು) ಬದಲಿಸುವುದರ ನಿಯಮಗಳ ಆಗಮನದೊಂದಿಗೆ, ತಂಡಗಳು ಪ್ರತ್ಯೇಕ ಅಕ್ರಮಣಕಾರಿ ಮತ್ತು ಸ್ವರಕ್ಷಣಾ ಪಡೆಗಳನ್ನು ಸ್ಥಾಪಿಸಿದವು, ಇದರಿಂದಾಗಿ ಇನ್ನಷ್ಟು ಹೆಚ್ಚಿನ ಪ್ರಾವೀಣ್ಯಕ್ಕೆ ಕಾರಣವಾಯಿತು.
- ನಂತರದ ವರ್ಷಗಳಲ್ಲಿ, ಅಮೆರಿಕನ್ ಫುಟ್‌ಬಾಲ್‌ನಲ್ಲಿನ ಕೆಲವು ಬೆಳವಣಿಗೆಗಳನ್ನು ಕೆನಡಿಯನ್ ಫುಟ್‌ಬಾಲ್ ಮೈಗೂಡಿಸಿಕೊಂಡರೂ, ತನ್ನದೇ ಆದ ಅನನ್ಯ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿತು. ಇವುಗಳಲ್ಲಿ ಒಂದು ವಿಚಾರವೇನೆಂದರೆ, ಹಲವು ವರ್ಷಗಳ ಕಾಲ ಕೆನಡಿಯನ್ ಫುಟ್‌ಬಾಲ್ ರಗ್ಬಿಯಿಂದ ಅಧಿಕೃತವಾಗಿ ಪ್ರತ್ಯೇಕಿತವಾಗಿರಲಿಲ್ಲ. ಉದಾಹರಣೆಗೆ, ರಗ್ಬಿ ಒಕ್ಕೂಟ ಮಂಡಳಿಗಿಂತಲೂ ಹೆಚ್ಚಾಗಿ, 1884ರಲ್ಲಿ ಸ್ಥಾಪಿಸಲಾದ ಕೆನಡಿಯನ್ ರಗ್ಬಿ ಫುಟ್‌ಬಾಲ್ ಒಕ್ಕೂಟ ವು, ಕೆನಡಿಯನ್ ಫುಟ್‌ಬಾಲ್ ಲೀಗ್‌ನ ಮುನ್ಸೂಚಕವಾಗಿತ್ತು. (ಈಗ ರಗ್ಬಿ ಕೆನಡಾ ಎಂದು ಕರೆಯಲಾಗುವ ಕೆನಡಿಯನ್ ರಗ್ಬಿ ಒಕ್ಕೂಟವು 1965ರ ತನಕವೂ ರಚಿತವಾಗಿರಲಿಲ್ಲ.) 1880ರ ದಶಕದಲ್ಲಿ ಅಮೆರಿಕನ್ ಫುಟ್‌ಬಾಲ್‌ನ್ನು ವಾಡಿಕೆಯಂತೆ "ರಗ್ಬಿ" ಎನ್ನಲಾಗುತ್ತಿತ್ತು.
ಗೇಲಿಕ್ ಫುಟ್‌ಬಾಲ್
ಬದಲಾಯಿಸಿ- 19ನೆಯ ಶತಮಾನದ ಮಧ್ಯದಲ್ಲಿ, ಸಾಮೂಹಿಕವಾಗಿ ಕೇಯ್ಡ್ ಎಂದು ಕರೆಯಲಾದ ವಿವಿಧ ಸಾಂಪ್ರದಾಯಿಕ ಫುಟ್‌ಬಾಲ್ ಆಟಗಳು ಐರ್ಲೆಂಡ್‌ನಲ್ಲಿ, ಅದರಲ್ಲೂ ವಿಶೇಷವಾಗಿ ಕೌಂಟಿ ಕೆರಿಯಲ್ಲಿ ಜನಪ್ರಿಯವಾಗಿ ಉಳಿದುಕೊಂಡಿದ್ದವು. ಫಾಧರ್ ಡಬ್ಲ್ಯೂ ಫೆರಿಸ್ ಎಂಬ ಒಬ್ಬ ವೀಕ್ಷಕರು ಈ ಅವಧಿಯಲ್ಲಿ ಕೇಯ್ಡ್ ನ ಎರಡು ಮುಖ್ಯ ರೂಪಗಳನ್ನು ವಿವರಿಸಿದರು: ಎರಡು ಮರಗಳ ಶಾಖೆಗಳಿಂದ ಮೂಡಿದ ಕಮಾನಿನಂತಹ ಗೋಲುಗಳ ಮೂಲಕ ಚೆಂಡನ್ನು ರವಾನಿಸುವ ಉದ್ದೇಶವುಳ್ಳ "ಕ್ಷೇತ್ರದ ಆಟ"; ರವಿವಾರದ ಹಗಲಿನಲ್ಲಿ ಬಹಳಷ್ಟು ಹೊತ್ತು ಆಡಿ, ಹೋಬಳಿಯ ಸರಹದ್ದಿನಾಚೆ ಚೆಂಡನ್ನು ಒಯ್ಯುವ ತಂಡವು ಆಟವನ್ನು ಗೆಲ್ಲುವಂತಹ "ಮಹಾ ಹಳ್ಳಿಗಾಡಿನ ಆಟ". ಎದುರಾಳಿ ತಂಡದ ಆಟಗಾರರೊಂದಿಗೆ "ಕುಸ್ತಿಯಾಡುವುದು", ಅವರನ್ನು "ಹಿಡಿದುಕೊಳ್ಳುವುದು" ಮತ್ತು ಚೆಂಡನ್ನು ಕೈಯಲ್ಲಿ ಹಿಡಿದು ಓಡುವುದು - ಇವೆಲ್ಲಕ್ಕೂ ಅವಕಾಶವಿತ್ತು.
- 1870ರ ದಶಕದಲ್ಲಿ, ರಗ್ಬಿ ಮತ್ತು ಅಸೋಸಿಯೇಷನ್ ಫುಟ್‌ಬಾಲ್‌ನ ಜನಪ್ರಿಯತೆ ಐರ್ಲೆಂಡ್‌ನಲ್ಲಿ ಹೆಚ್ಚಾಗತೊಡಗಿತು. ಡಬ್ಲಿನ್‌ನ ಟ್ರಿನಿಟಿ ಕಾಲೇಜ್ ಆರಂಭ ಕಾಲದಲ್ಲಿ ರಗ್ಬಿಯ ಪ್ರಬಲ ಕೇಂದ್ರವಾಗಿತ್ತು (1850ರ ದಶಕದಲ್ಲಿನ ಬೆಳವಣಿಗೆಗಳು - ಇದನ್ನು ನೋಡಿ). ಇಂಗ್ಲಿಷ್ FAದ ನಿಯಮಗಳನ್ನು ವ್ಯಾಪಕವಾಗಿ ಹಂಚಲಾಯಿತು. ಕೇಯ್ಡ್ ನ ಸಾಂಪ್ರದಾಯಿಕ ರೂಪವು, (ಎದುರಾಳಿ ತಂಡದ ಆಟಗಾರರನ್ನು) ಎಡವಿಸಲು ಅವಕಾಶ ನೀಡುವ, "ಒರಟು-ಮತ್ತು-ಉರುಳು"ವಂತಹ ಆಟಕ್ಕೆ ಸ್ಥಾನ ಕೊಟ್ಟಿತ್ತು.
- 1884ರಲ್ಲಿ ಗೇಲಿಕ್ ಅಥ್ಲೆಟಿಕ್ ಅಸೊಷಿಯೇಷನ್(GAA) ಸ್ಥಾಪನೆಯಾಗುವವರೆಗೂ, ಫುಟ್‌ಬಾಲ್‌ನ ಐರಿಷ್ ವಿವಿಧತೆಗಳನ್ನು ಒಗ್ಗೂಡಿಸಿ ನಿಯಮಾವಳಿ-ಸಂಹಿತೆಗಳನ್ನು ರಚಿಸಲು ಯಾವುದೇ ಗಂಭೀರವಾದ ಯತ್ನವಿರಲಿಲ್ಲ. ಹರ್ಲಿಂಗ್‌ನಂತಹ ಸಾಂಪ್ರದಾಯಿಕ ಐರಿಷ್ ಆಟಗಳನ್ನು ಉತ್ತೇಜಿಸಿ, ರಗ್ಬಿ ಮತ್ತು ಅಸೋಷಿಯೇಷನ್ ಫುಟ್‌ಬಾಲ್‌ನಂತಹ ಆಮದಾದ ಆಟಗಳನ್ನು ತಿರಸ್ಕರಿಸಲು GAA ಯತ್ನಿಸಿತು.
- 1887ರ ಫೆಬ್ರುವರಿ 7ರಂದು ಮೊದಲ ಗೇಲಿಕ್ ಫುಟ್‌ಬಾಲ್ ನಿಯಮಗಳನ್ನು ಮೌರೀಸ್ ಡೆವಿನ್‌ರವರಿಂದ ರಚಿಸಲಾಗಿ, ಅವುಗಳನ್ನು ಯುನೈಟೆಡ್ ಐರ್ಲೆಂಡ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.
- ಹರ್ಲಿಂಗ್‌ನಂತಹ ಆಟಗಳ ಪ್ರಭಾವ ಹಾಗೂ ಸ್ಪಷ್ಟವಾದ ಐರಿಷ್ ನಿಯಮಗಳುಳ್ಳ ಫುಟ್‌ಬಾಲ್‌ಗೆ ನಿರ್ದಿಷ್ಟ ರೂಪವನ್ನು ನೀಡುವ ಹಂಬಲವನ್ನು ಡೇವಿನ್‌ರ ನಿಯಮಗಳು ಎತ್ತಿ ತೋರಿಸಿದವು. ಆಫ್‌ಸೈಡ್ ನಿಯಮದ ಕೊರತೆಯು ಈ ವಿಭಿನ್ನತೆಯ ಮುಖ್ಯ ಉದಾಹರಣೆಯಾಗಿತ್ತು. (ಹರ್ಲಿಂಗ್‌ನಂತಹ ಇತರೆ ಕೇವಲ ಐರಿಷ್ ಆಟಗಳು ಮತ್ತು ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್‌ನೊಂದಿಗೆ ಬಹಳ ವರ್ಷಗಳು ಕಾಲ ಹಂಚಿಕೊಂಡಿದ್ದ ಲಕ್ಷಣವಿದು.)
ರಗ್ಬಿ ಫುಟ್‌ಬಾಲ್‌ನಲ್ಲಿ ಇಬ್ಭಾಗ
ಬದಲಾಯಿಸಿ!"
- ಮಿಲ್ಲರ್: "ಹೌದು, ಇದು ಖಚಿತವಾಗಿಯೂ ನೀನೇ; ನೀನು ಮಾಡಬಲ್ಲೆ, ಲಕ್ಷಾಧಿಪತಿಯಲ್ಲದವನ ಮಗ ಕೂಡ ನಿಜಕ್ಕೂ ಸಬಲ ತಂಡದಲ್ಲಿ ಆಡಲು ಸಾಧ್ಯ ಎಂಬುದು ಇಲ್ಲಿ ಸಾಬೀತಾಗಲಿ" ನನ್ನ ಮಟ್ಟಿಗೆ, ಹಣಗಳಿಸುವವರು ಅದನ್ನು ಖರ್ಚು ಮಾಡುವಲ್ಲಿ ಯಾಕೆ ತಮ್ಮ ಪಾಲೂ ಯಾಕಿರಬಾರದೆಂಬ ಕಾರಣವನ್ನು ನಾನು ಕಾಣೆನು."]]
- ಅಂತರರಾಷ್ಟ್ರೀಯ ರಗ್ಬಿ ಫುಟ್‌ಬಾಲ್ ಮಂಡಳಿ (IRFB) 1886ರಲ್ಲಿ ಸ್ಥಾಪಿತವಾಯಿತು, ಆದರೆ ನಿಯಮಾವಳಿಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗತೊಡಗಿದವು.ಫುಟ್‌ಬಾಲ್‌ನ ವಿವಿಧ ನಿಯಮಾವಳಿಗಳಲ್ಲಿ ವೃತ್ತಿಪರತೆಯು ಕ್ರಮೇಣವಾಗಿ ಹೆಚ್ಚಾಗತೊಡಗಿತು.
- 1890ರ ದಶಕದೊಳಗೆ, ಇಂಗ್ಲೆಂಡ್‌ನಲ್ಲಿ, ರಗ್ಬಿ ಫುಟ್‌ಬಾಲ್ ಒಕ್ಕೂಟವು ದೀರ್ಘಕಾಲದಿಂದ ಹೇರಿದ್ದ ವೃತ್ತಿಪರ ಆಟಗಾರರ ಮೇಲಿನ ನಿಷೇಧವು ರಗ್ಬಿ ಫುಟ್‌ಬಾಲ್ ಸಮುದಾಯದೊಳಗೆ ಪ್ರಾದೇಶಿಕ ಉದ್ವಿಗ್ನತೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ, ಉತ್ತರ ಐರ್ಲೆಂಡ್‌ನಲ್ಲಿ ಹಲವು ಆಟಗಾರರು ಕಾರ್ಮಿಕ ವರ್ಗಕ್ಕೆ ಸೇರಿದ್ದು, ತರಬೇತಿ, ಪ್ರಯಾಣ, ಆಟ ಮತ್ತು ಗಾಯಗಳಿಂದ ಚೇತರಿಸಿಕೊಳ್ಳಲು ಸಮಯ ಬಿಡುವು ಮಾಡಿಕೊಳ್ಳಲು ಶಕ್ತರಾಗಿರಲಿಲ್ಲ. ಇದಕ್ಕೆ ಹತ್ತು ವರ್ಷಗಳ ಹಿಂದೆ, ಉತ್ತರ ಇಂಗ್ಲೆಂಡ್ ಸಾಕ್ಕರ್‌ನಲ್ಲಿ ಸಂಭವಿಸಿದ್ದಕ್ಕಿಂತಲೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಆದರೆ ಅಧಿಕಾರಿಗಳು RFUನಲ್ಲಿ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ, ಉತ್ತರ ಇಂಗ್ಲೆಂಡ್‌ನಲ್ಲಿ ಕಾರ್ಮಿಕ ವರ್ಗದ ಬೆಂಬಲವನ್ನು ದೂರ ಮಾಡಲು ಯತ್ನಿಸಿತು.
- 1895ರಲ್ಲಿ, ಆಟಗಾರನು ರಗ್ಬಿ ಆಡಿದ್ದರಿಂದಾಗಿ ವೇತನದಲ್ಲಾದ ನಷ್ಟವನ್ನು ತುಂಬಲು ಆತನಿಗೆ ವಿಚ್ಛಿನ್ನ-ಕಾಲದಲ್ಲಿ ಹಣ ಸಂದಾಯ ಮಾಡಿದ್ದು ವಿವಾದಕ್ಕೀಡಾದ ಪರಿಣಾಮ, ಉತ್ತರದ ಕ್ಲಬ್‌ಗಳ ಪ್ರತಿನಿಧಿಗಳು ಹಡರ್ಸ್‌ಫೀಲ್ಡ್‌ನಲ್ಲಿ, ಉತ್ತರ ರಗ್ಬಿ ಫುಟ್‌ಬಾಲ್ ಒಕ್ಕೂಟ(NRFU)ವನ್ನು ರಚಿಸಲು ಸಭೆ ಸೇರಿದರುಹೊಸ ಮಂಡಳಿಯು ಆರಂಭದಲ್ಲಿ, ಅನೇಕ ಶೈಲಿಯ ಆಟಗಾರರ ವೇತನ ಬದಲಿಸಲು ಮಾತ್ರ ಅನುಮತಿ ನೀಡಿತು. ಆದಾಗ್ಯೂ, NRFU ಆಟಗಾರರಿಗೆ ಎರಡು ವರ್ಷಗಳಲ್ಲಿ ಹಣ ಸಂದಾಯ ವಾಗಬಹುದಾದರೂ, ಅವರು ಕ್ರೀಡೇತರ ಕ್ಷೇತ್ರದಲ್ಲಿ ನೌಕರಿಯನ್ನು ಹುಡುಕಿಕೊಳ್ಳಬೇಕಾಗಿತ್ತು.
- ವೃತ್ತಿಪರ ಲೀಗ್‌ನ ಬೇಡಿಕೆಗಳಂತೆ, ರಗ್ಬಿ ಒಂದು ಉತ್ತಮ 'ಪ್ರೇಕ್ಷಕ' ಆಟವಾಗಬೇಕಾಗಿತ್ತು. ಕೆಲವೇ ವರ್ಷಗಳಲ್ಲಿ, ಅತ್ಯಂತ ಗಮನಾರ್ಹವಾಗಿ ಲೈನ್-ಔಟ್ ನಿಯಮದ ರದ್ಧತಿಯೊಂದಿಗೆ, NRFU ನಿಯಮಗಳು RFUದಿಂದ ದಿಕ್ಚ್ಯುತಿಯಾಗಲಾರಂಭಿಸಿದವು. ಇದಾದ ನಂತರ ರಕ್ ನ ಬದಲಿಗೆ "ಪ್ಲೇ-ದಿ-ಬಾಲ್ ರಕ್" ನಿಯಮವನ್ನು ಜಾರಿಗೊಳಿಸಿಲಾಯಿತು. ಇದರನ್ವಯ, ಇಬ್ಬರು ಆಟಗಾರರ ನಡುವೆ - ಅಂದರೆ, ಮಾರ್ಕರ್‌ನಲ್ಲಿರುವ ಟ್ಯಾಕ್ಲರ್ ಹಾಗೂ ಟ್ಯಾಕ್‌ಲ್ ಆಗಿರುವ ಆಟಗಾರನ ನಡುವೆ - ರಕ್ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಚೆಂಡನ್ನು ಕೈಯಲ್ಲಿ ಒಯ್ಯುವಾತನನ್ನು ಹಿಡಿದೊಡನೆ ಮಾವ್ಲ್ ಗಳನ್ನು ನಿಲ್ಲಿಸಲಾಗಿ, ಇದರ ಬದಲಿಗೆ ಪ್ಲೇ-ದಿ-ಬಾಲ್-ರಕ್ ನಿಯಮವನ್ನು ಜಾರಿಗೊಳಿಸಲಾಯಿತು.
- NRFUನ ಪ್ರತ್ಯೇಕ ಪಂದ್ಯಾವಳಿಗಳಾಗಿದ್ದ ಲ್ಯಾಂಕಷೈರ್ ಮತ್ತು ಯಾರ್ಕ್‌ಷೈರ್ ಪಂದ್ಯಗಳನ್ನು 1901ರಲ್ಲಿ ವಿಲೀನಗೊಳಿಸಿ, ನಾರ್ದರ್ನ್ ರಗ್ಬಿ ಲೀಗ್ ಆಸ್ತಿತ್ವಕ್ಕೆ ಬಂದಿತು. ಇಂಗ್ಲೆಂಡ್‌ನಲ್ಲಿ ಅಧಿಕೃತವಾಗಿ ರಗ್ಬಿ ಲೀಗ್ ಎಂಬ ಹೆಸರನ್ನು ಬಳಸಿದ್ದು ಇದೇ ಮೊದಲು.
- IRFBನ ಸದಸ್ಯರಾಗಿ ಉಳಿದ ಕ್ಲಬ್‌ಗಳು ಆಡಿದ ರಗ್ಬಿಯ RFU ಪಂದ್ಯಗಳನ್ನು ಕಾಲಾನಂತರದಲ್ಲಿ ರಗ್ಬಿ ಒಕ್ಕೂಟ ಎನ್ನಲಾಯಿತು.
ಅಸೋಷಿಯೇಷನ್ ಫುಟ್‌ಬಾಲ್‌ನ ಜಾಗತೀಕರಣ
ಬದಲಾಯಿಸಿ- 20ನೆಯ ಶತಮಾನದ ಆರಂಭದಲ್ಲಿ, ಅಂತರರಾಷ್ತ್ರೀಯ ಫುಟ್‌ಬಾಲ್ ಪಂದ್ಯಗಳ ಪಂದ್ಯಗಳ ಜನಪ್ರಿಯತೆ ಹೆಚ್ಚಿದ್ದರಿಂದಾಗಿ ಅಸೋಷಿಯೇಷನ್ ಫುಟ್‌ಬಾಲ್ ಪಂದ್ಯಗಳ ಉಸ್ತುವಾರಿಗಾಗಿ ಏಕರೂಪ ಮಂಡಳಿಯ ರಚನೆ ಅವಶ್ಯವಾಯಿತು.
- ಅಂತರರಾಷ್ಟ್ರೀಯ ಮಂಡಳಿಯ ರಚನೆಯ ಕುರಿತು ಇಂಗ್ಲಿಷ್ ಫುಟ್‌ಬಾಲ್ ಅಸೋಷಿಯೇಷನ್ ಹಲವು ಚರ್ಚೆಗಳ ಅಧ್ಯಕ್ಷತೆ ವಹಿಸಿತ್ತಾದರೂ, ಯಾವುದೇ ಪ್ರಗತಿಯನ್ನು ಗಳಿಸದಿದ್ದದ್ದು ಕಂಡು ಬಂದಿತ್ತು. ಅಂತರರಾಷ್ಟ್ರೀಯ ಅಸೋಷಿಯೇಷನ್‌ನ್ನು ರಚಿಸುವುದು ಇತರೆ ಏಳು (ಫ್ರಾನ್ಸ್, ಬೆಲ್ಜಿಯಂ, ಡೆನ್ಮಾರ್ಕ್, ನೆದರ್ಲೆಂಡ್ಸ್, ಸ್ಪೇನ್, ಸ್ವೀಡೆನ್ ಮತ್ತು ಸ್ವಿಟ್ಜರ್‌ಲೆಂಡ್) ಯುರೋಪ್ ದೇಶಗಳ ಅಸೋಷಿಯೇಷನ್‌ಗಳ ಜವಾಬ್ದಾರಿಯಾಯಿತು.
- 1904ರ ಮೇ 21ರಂದು ಫೆಡೆರೇಷನ್ ಇಂಟರ್ನ್ಯಾಷನೇಲ್ ಡಿ ಫುಟ್‌ಬಾಲ್ ಅಸೋಷಿಯೇಷನ್ (FIFA) ಪ್ಯಾರಿಸ್‌ನಲ್ಲಿ ಸ್ಥಾಪಿತವಾಯಿತು. ರಾಬರ್ಟ್ ಗುಯೆರಿನ್ ಇದರ ಮೊದಲ ಅಧ್ಯಕ್ಷರಾಗಿದ್ದರು. ಫ್ರೆಂಚ್-ಭಾಷಿಕ ರಾಷ್ಟ್ರಗಳ ಹೊರಗೂ ಕೂಡ ಫ್ರೆಂಚ್ ಹೆಸರು ಮತ್ತು ಪ್ರಥಮಾಕ್ಷರಿಯು ಉಳಿದುಕೊಂಡಿವೆ.
ಅಮೆರಿಕನ್ ಫುಟ್‌ಬಾಲ್‌ನ ಸುಧಾರಣೆ
ಬದಲಾಯಿಸಿ- ಆ ಕಾಲದಲ್ಲಿ, ತೀವ್ರವಾದ ಗಾಯಗಳು ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಆಟಗಾರರ ಸಾವುಗಳಿಗೆ ರಗ್ಬಿ ಮತ್ತು ಅಮೆರಿಕನ್ ಫುಟ್‌ಬಾಲ್‌ನ ಎರಡೂ ರೂಪಗಳು ಖ್ಯಾತವಾಗಿದ್ದವು. 20ನೆಯ ಶತಮಾನದ ಆರಂಭದ ಹೊತ್ತಿಗೆ, U.S.A.ದಲ್ಲಿ ಇದು ದೇಶವ್ಯಾಪಿ ವಿವಾದವಾಗಿ, ಅಮೆರಿಕನ್ ಫುಟ್‌ಬಾಲ್ ಹಲವಾರು ಕಾಲೇಜ್‌ಗಳಿಂದ ನಿಷೇಧಕ್ಕೊಳಗಾಯಿತು. ಇದರ ಪರಿಣಾಮವಾಗಿ,1905-06ರಲ್ಲಿ 19 ಕಾಲೇಜ್‌ಗಳಿಂದ ಸಭೆಗಳ ಸರಣಿಯು ಆಯೋಜಿತವಾಯಿತು.
- ರಾಷ್ಟ್ರಪತಿ ಥಿಯೋಡರ್ ರೂಸ್ವೆಲ್ಟ್ ಅವರ ಆಜ್ಞೆಯ ಮೇರೆಗೆ ಈ ಸಭೆಗಳ ಸರಣಿಯನ್ನು ಆಯೋಜಿಸಲಾಯಿತು.ಅವರನ್ನು ಕೂಡ ಈ ಆಟದ ಅಭಿಮಾನಿಯೆಂದು ಪರಿಗಣಿಸಲಾಗಿತ್ತು; ಆದರೆ, ಸಾವುಗಳು ಮತ್ತು ಗಾಯಗಳಿಂದಾಗುವ ದೈಹಿಕ ಅಸಾಮರ್ಥ್ಯಗಳನ್ನು ಕಡಿಮೆಗೊಳಿಸಲು ನಿಯಮಗಳನ್ನು ಬದಲಿಸದಿದ್ದಲ್ಲಿ, ಆಟದ ಮೇಲೆ ನಿಷೇಧವನ್ನು ಹೇರುವುದಾಗಿ ಅವರು ಬೆದರಿಕೆಯನ್ನು ಹಾಕಿದ್ದರು.ಈ ಸಭೆಗಳನ್ನು ನ್ಯಾಷನಲ್ ಕಾಲೇಜಿಯಟ್ ಅಥ್ಲೆಟಿಕ್ ಅಸೋಷಿಯೇಷನ್‌ನ ಮೂಲವೆಂದು ಪರಿಗಣಿಸಲಾಗಿವೆ.
- ಒಂದು ಪ್ರಸ್ತಾಪಿತ ಬದಲಾವಣೆಯೆಂದರೆ ಆಟದ ಅಂಕಣದ ಅಗಲವನ್ನು ವಿಸ್ತರಿಸುವುದು. ಆದಾಗ್ಯೂ, ಹಾರ್ವರ್ಡ್ ವಿಶ್ವವಿದ್ಯಾನಿಲಯವು ಆಗ ತಾನೆ ಒಂದು ಕಾಂಕ್ರೀಟ್ ಕ್ರೀಡಾಂಗಣವನ್ನು ನಿರ್ಮಿಸಿತ್ತು. ಹಾಗಾಗಿ, ಆಟದ ಅಂಕಣದ ವಿಸ್ತರಣೆಗೆ ಆಕ್ಷೇಪಿಸಿ, ಇದರ ಬದಲಿಗೆ ಫಾರ್ವರ್ಡ್ ಪಾಸ್ ನ್ನು ಸಕ್ರಮಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಸಭೆಗಳ ವರದಿಯು ಟ್ಯಾಕ್ಲಿಂಗ್ ಮೇಲೆ ಹಲವು ನಿರ್ಬಂಧಗಳನ್ನು, ಹಾಗೂ ರಗ್ಬಿಯಿಂದ ಇನ್ನೂ ಎರಡು ದಿಕ್ಚ್ಯುತಿಗಳನ್ನು ಜಾರಿಗೆ ತಂದಿತು: ಫಾರ್ವರ್ಡ್ ಪಾಸ್ ಮತ್ತು ಮಾಸ್ ಫಾರ್ಮೇಷನ್ ಪ್ಲೇಯ್ಸ್ ನ ಮೇಲೆ ನಿಷೇಧ. ಈ ಬದಲಾವಣೆಗಳು ಕೂಡಲೇ ಅಪೇಕ್ಷಿತ ಪ್ರಭಾವವನ್ನು ಬೀರಲಿಲ್ಲ; 1908ರಲ್ಲೇ 33 ಅಮೆರಿಕನ್ ಫುಟ್‌ಬಾಲ್ ಆಟಗಾರರು ಹತರಾದರು. ಆದಾಗ್ಯೂ, ಸಾವು-ಗಾಯಗಳ ಸಂಖ್ಯೆಯು ನಿಧಾನವಾಗಿ ಇಳಿಮುಖವಾಯಿತು.
ಎರಡು ರಗ್ಬಿ ನಿಯಮಾವಳಿಗಳಲ್ಲಿ ಇನ್ನೂ ಹೆಚ್ಚಿನ ದಿಕ್ಚ್ಯುತಿ
ಬದಲಾಯಿಸಿ- ತಂಡದಲ್ಲಿನ ಆಟಗಾರರನ್ನು 15ರಿಂದ 13ಕ್ಕೆ ಇಳಿಸುವುದರೊಂದಿಗೆ, 1906ರಲ್ಲಿ ರಗ್ಬಿ ಒಕ್ಕೂಟದಿಂದ ರಗ್ಬಿ ಲೀಗ್ ನಿಯಮಗಳು ಗಮನಾರ್ಹವಾಗಿ ದಿಕ್ಷ್ಯುತಿಯಾದವು.
- 1907ರಲ್ಲಿ ನ್ಯೂಜೀಲೆಂಡ್‌ನ ವೃತ್ತಿಪರ ರಗ್ಬಿ ತಂಡವೊಂದು ಆಸ್ಟ್ರೇಲಿಯಾ ಮತ್ತು ಬ್ರಿಟನ್ ದೇಶಗಳ ಪ್ರವಾಸವನ್ನು ಕೈಗೊಂಡು, ಉತ್ಸಾಹಶೀಲ ಪ್ರತಿಕ್ರಿಯೆಯನ್ನು ಸ್ವೀಕರಿಸಿತು. ತರುವಾಯ ವರ್ಷ ಆಸ್ಟ್ರೇಲಿಯಾದಲ್ಲಿ ವೃತ್ತಿಪರ ರಗ್ಬಿ ಲೀಗ್‌ಗಳನ್ನು ಆಯೋಜಿಸಲಾಯಿತು. ಆದಾಗ್ಯೂ, ವ್ರತ್ತಿಪರ ಆಟಗಳಿಗಾಗಿ ನಿಯಮಗಳು ಒಂದು ದೇಶದಿಂದ ಇನ್ನೊಂದಕ್ಕೆ ವ್ಯತ್ಯಾಸವಾಗುತ್ತಿತ್ತು. ಹಾಗಾಗಿ, ವಿವಿಧ ರಾಷ್ಟ್ರಮಟ್ಟದ ಮಂಡಳಿಗಳ ನಡುವಿನ ಮಾತುಕತೆಗಳ ಪ್ರಕಾರ, ಪ್ರತಿಯೊಂದು ಅಂತರರಾಷ್ಟ್ರೀಯ ಪಂದ್ಯಕ್ಕೂ ನಿಖರ ನಿಯಮಗಳನ್ನು ನಿಗದಿಪಡಿಸುವುದು ಅಗತ್ಯವಾಯಿತು. ಈ ಪರಿಸ್ಥಿತಿಯು 1948ರ ತನಕ ಮುಂದುವರೆದಿತ್ತು. ಆ ವರ್ಷ ಫ್ರೆಂಚ್ ಲೀಗ್‌ನ ಪ್ರಚೋದನೆಯ ಮೇರೆಗೆ, ಬಾರ್ಡೋದಲ್ಲಿ ನಡೆದ ಸಭೆಯಲ್ಲಿ ರಗ್ಬಿ ಲೀಗ್ ಇಂಟರ್ನ್ಯಾಷನಲ್ ಫೆಡೆರೇಷನ್ ರಚನೆಯಾಯಿತು.
- 20ನೆಯ ಶತಮಾನದ ಉತ್ತರಾರ್ಧದಲ್ಲಿ, ನಿಯಮಗಳು ಇನ್ನಷ್ಟು ಬದಲಾದವು. 1966ರಲ್ಲಿ, ಅಮೆರಿಕನ್ ಫುಟ್‌ಬಾಲ್‌ನ ಕಲ್ಪನೆಯಾದ ಡೌನ್ಸ್ ನ್ನು ರಗ್ಬಿ ಲೀಗ್ ಅಧಿಕಾರಿ ಗಳು ಎರವಲು ಪಡೆದರು. ಇದರನ್ವಯ, ತಂಡವೊಂದು ಕೇವಲ ನಾಲ್ಕು ಟ್ಯಾಕ್‌ಲ್‌ಗಳ ವರೆಗೆ ಮಾತ್ರ ಚೆಂಡನ್ನು ತನ್ನ ವಶದಲ್ಲಿಟ್ಟುಕೊಳ್ಳಬಹುದಾಗಿತ್ತು. ಆ ನಂತರ, 1971ರಲ್ಲಿ ಗರಿಷ್ಠ ಟ್ಯಾಕ್‌ಲ್‌ಗಳನ್ನು ಆರಕ್ಕೆ ಏರಿಸಲಾಯಿತು; ಹಾಗಾಗಿ ರಗ್ಬಿ ಲೀಗ್‌ನಲ್ಲಿ ಇದನ್ನು "ಸಿಕ್ಸ್ ಟ್ಯಾಕ್‌ಲ್ ರೂಲ್" ಎನ್ನಲಾಯಿತು.
- 1990ರ ದಶಕದ ಆರಂಭದಲ್ಲಿ, ಪೂರ್ಣಕಾಲಿಕ ವೃತ್ತಿಪರರ ಆಗಮನದ ಪರಿಣಾಮವಾಗಿ ಆಟದ ವೇಗವನ್ನು ಹೆಚ್ಚಿಸಿ, ಎರಡೂ ತಂಡಗಳ ನಡುವಿನ ಐದು ಮೀಟರಿನ ಆಫ್-ಸೈಡ್ ಅಂತರವನ್ನು ಹತ್ತು ಮೀಟರ್‌ಗಳಿಗೆ ವಿಸ್ತರಿಸಲಾಯಿತು. ಇತರೆ ಬದಲಾವಣೆಗಳಲ್ಲಿ, ಬದಲಿ ನಿಯಮವನ್ನು ರದ್ದುಗೊಳಿಸಿ ಅದರ ಸ್ಥಾನದಲ್ಲಿ ವಿವಿಧ ಅದಲು-ಬದಲು ನಿಯಮಗಳನ್ನು ಜಾರಿಗೊಳಿಸಲಾಯಿತು.
- 20ನೆಯ ಶತಮಾನದಲ್ಲಿ ರಗ್ಬಿ ಯೂನಿಯನ್‌ನ ನಿಯಮಾವಳಿಗಳೂ ಸಹ ಗಮನಾರ್ಹವಾಗಿ ಬದಲಾದವು. ವಿಶೇಷವಾಗಿ, ಮಾರ್ಕ್ ಗಳಿಂದ ಗೋಲುಗಳನ್ನು ರದ್ದುಗೊಳಿಸಲಾಯಿತು. 22-ಮೀಟರ್ ರೇಖೆಯಿಂದ ನೇರವಾಗಿ ಇಂಟು ಟಚ್ ಗೆ ಕೊಟ್ಟ ಕಿಕ್‌ಗಳನ್ನು ದಂಡನೀಯವೆಂದು ಘೋಷಿಸಲಾಯಿತು. ಅನಿರ್ಣಾಯಕ ರಕ್ ಅಥವಾ ಮಾವ್ಲ್ ನಂತರ ಯಾವ ತಂಡವು ಚೆಂಡ ನ್ನು ತನ್ನ ವಶದಲ್ಲಿರಿಸಿಕೊಂಡಿತ್ತೆಂಬುದನ್ನು ನಿರ್ಧರಿಸಲು ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಯಿತು. ಲೈನ್-ಔಟ್ ಗಳಲ್ಲಿ ಆಟಗಾರರನ್ನು ಎತ್ತುವುದನ್ನು ಸಕ್ರಮಗೊಳಿಸಲಾಯಿತು.
- 1995ರಲ್ಲಿ, ರಗ್ಬಿ ಒಕ್ಕೂಟವು, ವೃತ್ತಿಪರ ಆಟಗಾರರಿಗೆ ಅವಕಾಶ ನೀಡುವಂತಹ ಒಂದು "ಮುಕ್ತ" ಆಟವಾಯಿತು. ಇವೆರಡೂ ನಿಯಮಗಳ ನಡುವಿನ ಮೂಲ ವ್ಯಾಜ್ಯವು ಇದೀಗ ಮಾಯವಾಗಿದ್ದರೂ ಹಾಗೂ ರಗ್ಬಿ ಫುಟ್‌ಬಾಲ್‌ನ ಎರಡೂ ರೀತಿಗಳ ಅಧಿಕಾರಿಗಳು ಕೆಲವೊಮ್ಮೆ ಪುನರ್ವಿಲೀನದ ಸಾಧ್ಯತೆಯನ್ನು ಸೂಚಿಸಿದ್ದರೂ - ಎರಡು ಸೂತ್ರಸಂಗ್ರಹಗಳ ನಿಯಮಗಳು ಮತ್ತು ಅವುಗಳ ಸಂಸ್ಕೃತಿಗಳು ಪುನರ್ವಿಲೀನಗೊಳ್ಳವ ಸಾಧ್ಯತೆ ತೀರಾ ಕಡಿಮೆಯೆನ್ನುವಷ್ಟು ದಿಕ್ಚ್ಯುತಿಗೊಂಡಿವೆ.
ಇಂದಿನ ಫುಟ್‌ಬಾಲ್
ಬದಲಾಯಿಸಿಇಂಗ್ಲಿಷ್-ಭಾಷಿಕ ರಾಷ್ಟ್ರಗಳಲ್ಲಿ "ಫುಟ್‌ಬಾಲ್" ಪದದ ಬಳಕೆ
ಬದಲಾಯಿಸಿ- ಫುಟ್‌ಬಾಲ್ ಎಂಬ ಪದವನ್ನು ವಿಶಿಷ್ಟ ಆಟವೊಂದಕ್ಕೆ ಉಲ್ಲೇಖಿಸಿದಾಗ ಮೇಲೆ ವಿವರಿಸಲಾದ ಆಟಗಳ ಪೈಕಿ ಯಾವುದಾದರೊಂದಕ್ಕೆ ಅನ್ವಯವಾಗುತ್ತದೆ.ಇದರಿಂದಾಗಿ, ಫುಟ್‌ಬಾಲ್ ಎಂಬ ಪದದ ಕುರಿತು ಬಹಳಷ್ಟು ಸ್ನೇಹ-ಪ್ರವೃತ್ತಿಯ ವಿವಾದಗಳು ಸಂಭವಿಸಿವೆ. ಪ್ರಾಥಮಿಕ ಕಾರಣವೇನೆಂದರೆ ಇಂಗ್ಲಿಷ್-ಭಾಷಿಕ ಪ್ರಪಂಚದ ವಿವಿಧೆಡೆ ವಿವಿಧ ರೀತಿಗಳಲ್ಲಿ ಅದನ್ನು ಬಳಸಲಾಗಿದೆ. ಆಗಿಂದಾಗ್ಗೆ, "ಫುಟ್‌ಬಾಲ್" ಎಂಬ ಪದವು, ಒಂದು ನಿರ್ದಿಷ್ಟ ವಲಯದಲ್ಲಿ ಪ್ರಬಲವೆಂದು ಪರಿಗಣಿಸಲಾದ ಫುಟ್‌ಬಾಲ್‌ನ ನಿಯಮಾವಳಿಗಳನ್ನು ಉಲ್ಲೇಖಿಸಿ ಬಳಸಲಾಗುತ್ತದೆ. ಆದ್ದರಿಂದ, ಸಂಪೂರ್ಣವಾಗಿ ಹೇಳುವುದಾದರೆ, "ಫುಟ್‌ಬಾಲ್" ಎಂಬ ಪದವು, ಅದನ್ನು ಎಲ್ಲಿ ಉಲ್ಲೇಖಿಸಲಾಗುತ್ತದೋ ಅದರ ಮೇಲೆ ರೂಢಿಯಂತೆ ಅವಲಂಬಿಸುತ್ತದೆ.
- ಫುಟ್‌ಬಾಲ್‌ನ ಇತರೆ ನಿಯಮಾವಳಿಗಳು ಪ್ರಾಬಲ್ಯವಿರುವಂತಹ ದೇಶಗಳಾದ ಯುನೈಟೆಡ್ ಸ್ಟೇಟ್ಸ್, ಕೆನಡಾ, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ಗಳಲ್ಲಿ ಅಸೋಷಿಯೇಷನ್ ಫುಟ್‌ಬಾಲ್‌ಗೆ "ಸಾಕ್ಕರ್" ಎನ್ನುವುದು ರೂಢಿ. ಆದರೆ, "ಸಾಕ್ಕರ್" ಎಂಬ ಹೆಸರು (ಅಥವಾ "ಸಾಕ್ಕರ್ ಫುಟ್‌ಬಾಲ್") ಮೂಲತ: "ಅಸೋಷಿಯೇಷನ್" ಎಂಬ ಪದದ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಯಾಗಿರುವ 45 ರಾಷ್ಟ್ರೀಯ FIFA ಸದಸ್ಯರ ಗ್ರಾಮ್ಯ ಸಂಕ್ಷೇಪಣವಾಗಿದೆ. ಕೇವಲ ಮೂರು ದೇಶಗಳು - ಕೆನಡಾ, ಸಮೊವಾ ಮತ್ತು ಯುನೈಟೆಡ್ ಸ್ಟೇಟ್ಸ್ - "ಸಾಕ್ಕರ್" ಎಂಬುದನ್ನು ತಮ್ಮ ಸಂಘಗಳ ಅಧಿಕೃತ ಹೆಸರುಗಳಲ್ಲಿ ಬಳಸುತ್ತವೆ. ಉಳಿದವು ಫುಟ್‌ಬಾಲ್ ಪದವನ್ನು ಬಳಸುತ್ತವೆ (ಆದರೂ ಸಹ, ಸಮೊವನ್ ಫೆಡೆರೇಷನ್ ಎರಡನ್ನೂ ಬಳಸುತ್ತದೆ, ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್ ದೇಶಗಳಲ್ಲಿ ಸಾಕ್ಕರ್ ಮಂಡಳಿಗಳು ಕೂಡ "ಫುಟ್‌ಬಾಲ್" ಪದ ಬಳಸುತ್ತಿರುವುದು ಇತ್ತೀಚೆಗಿನ ಬದಲಾವಣೆ.
ಇಂಗ್ಲಿಷೇತರ ಭಾಷಿಕ ದೇಶಗಳಲ್ಲಿ "ಫುಟ್‌ಬಾಲ್" ಪದದ ಬಳಕೆ
ಬದಲಾಯಿಸಿ- ಸಾಮಾನ್ಯವಾಗಿ, ಫುಟ್‌ಬಾಲ್ ಎಂಬ ಪದ ಹಾಗೂ ಸ್ಪ್ಯಾನಿಷ್ (ಫುಟ್‌ಬೋಲ್ ) ಮತ್ತು ಜರ್ಮನ್ (Fußball/ಫುಸ್‌ಬಾಲ್ )ಗಳಿಂದ ನೇರ ಭಾಷಾಂತರಗೊಂಡು ಅಸೋಷಿಯೇಷನ್ ಫುಟ್‌ಬಾಲ್‌ನ ಹೆಸರಿನಲ್ಲಿ ಇಂದು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿವೆ. ಕೆನಡಿಯನ್ ಫುಟ್‌ಬಾಲ್ ಹೆಚ್ಚು ಜನಪ್ರಿಯವಾಗಿರುವ ಕ್ಯೂಬೆಕ್‌ನ ಫ್ರಾಂಕೋಫೋನ್‌ನಲ್ಲಿ, ಅಸೋಷಿಯೇಷನ್ ಫುಟ್‌ಬಾಲ್ ಆಟ ಲೆ ಸಾಕ್ಕರ್ ಎಂದು ಮತ್ತು ಕೆನಡಿಯನ್ ನಿಯಮಾವಳಿ ಲೆ ಫುಟ್‌ಬಾಲ್ ಎಂದು ಖ್ಯಾತವಾಗಿದೆ.
ಪ್ರಸಕ್ತ ದಿನದ ನಿಯಮಾವಳಿಗಳು ಮತ್ತು ಕುಟುಂಬಗಳು
ಬದಲಾಯಿಸಿಅಸೋಷಿಯೇಷನ್ ಫುಟ್‌ಬಾಲ್ ಮತ್ತು ವಂಶಜರು
ಬದಲಾಯಿಸಿ- ಫುಟ್‌ಬಾಲ್, ಸಾಕ್ಕರ್, ಫುಟಿ ಮತ್ತು ಫುಟೀ ಎಂದು ಕರೆಯಲಾದ ಅಸೋಷಿಯೇಷನ್ ಫುಟ್‌ಬಾಲ್
- ಫುಟ್‌ಬಾಲ್‌ನ ಒಳಾಂಗಣ/ಬ್ಯಾಸ್ಕೆಟ್ಬಾಲ್ ಅಂಕಣ ವಿವಿಧಗಳು:
- ಫೈವ್-ಎ-ಸೈಡ್ ಫುಟ್‌ಬಾಲ್ - ಕೆಳಕಂಡವುಗಳನ್ನು ಸೇರಿಸಿ, ವಿಶ್ವಾದ್ಯಂತ ವಿವಿಧ ನಿಯಮಗಳಡಿ ಆಡಲಾಗಿದೆ:
- ಫುಟ್ಸಾಲ್ - FIFA- ಅಂಗೀಕೃತ, ತಂಡಕ್ಕೆ ಐದು ಆಟಗಾರರಿರುವ ಪಂದ್ಯ.
- ಮಿನಿವೋಟ್ಬಾಲ್ — ಪೂರ್ವ ಮತ್ತು ಪಶ್ವಿಮ ಫ್ಲ್ಯಾಂಡರ್ಸ್ನಲ್ಲಿ ಆಡಲಾದ ತಂಡಕ್ಕೆ ಐದು ಆಟಗಾರರಿರುವ, ಬಹಳ ಜನಪ್ರಿಯ ಪಂದ್ಯ.
- ಪಾಪಿ ಫುಟ್ - ಮಧ್ಯ ಅಮೆರಿಕಾದಲ್ಲಿ, ಹೊರಾಂಗಣ ಬ್ಯಾಸ್ಕೆಟ್ಬಾಲ್ ಅಂಕಣದಲ್ಲಿ, ಗೋಲು ಪೆಟ್ಟಿಗೆಗಳನ್ನು ನಿರ್ಮಿಸಿ ಆಡಲಾದ, ತಂಡಕ್ಕೆ ಐದು ಆಟಗಾರರಿರುವ ಪಂದ್ಯ.
- ಒಳಾಂಗಣ ಸಾಕ್ಕರ್ - ಲ್ಯಾಟಿನ್ ಅಮೆರಿಕದಲ್ಲಿ ಫುಟ್‌ಬೋಲ್ ರಾಪಿಡೊ ("ಫಾಸ್ಟ್ ಫುಟ್‌ಬಾಲ್") ಎನ್ನಲಾಗಿರುವ, ತಂಡಕ್ಕೆ ಆರು ಆಟಗಾರರಿರುವ ಈ ಪಂದ್ಯವನ್ನು ಹೊರಾಂಗಣದಲ್ಲಿ ಆಡಲಾಗುತ್ತದೆ.
- ಮಾಸ್ಟರ್ಸ್ ಫುಟ್‌ಬಾಲ್ - ಯುರೋಪ್‌ನಲ್ಲಿ ಆಡಲಾದ, ತಂಡಕ್ಕೆ ಆರು ಆಟಗಾರರಿರುವ, ಪರಿಪಕ್ವವಾದ 35 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ವೃತ್ತಿಪರರು ಆಡುವ ಪಂದ್ಯ.
- ಫೈವ್-ಎ-ಸೈಡ್ ಫುಟ್‌ಬಾಲ್ - ಕೆಳಕಂಡವುಗಳನ್ನು ಸೇರಿಸಿ, ವಿಶ್ವಾದ್ಯಂತ ವಿವಿಧ ನಿಯಮಗಳಡಿ ಆಡಲಾಗಿದೆ:
- ಫ್ಯಾರಾಲಿಂಪಿಕ್ ಫುಟ್‌ಬಾಲ್ - ಅಸಾಮರ್ಥ್ಯ ಹೊಂದಿರುವ ಆಟಗಾರರಿಗಾಗಿ ಪರಿವರ್ತಿತ ಫುಟ್‌ಬಾಲ್.[೫೫] ಇವನ್ನು ಒಳಗೊಂಡಿದೆ:
- ಫುಟ್‌ಬಾಲ್ 5-ಎ-ಸೈಡ್ — ದೃಷ್ಟಿಹೀನ ಆಟಗಾರರಿಗಾಗಿ
- ಫುಟ್‌ಬಾಲ್ 7-ಎ-ಸೈಡ್ — ಮೆದುಳ ಲಕ್ವ ಪೀಡಿತ ಆಟಗಾರರಿಗಾಗಿ
- ಆಂಪ್ಯೂಟೀ ಫುಟ್‌ಬಾಲ್ — ಅಂಗವಿಚ್ಛೇದಿತ ಆಟಗಾರರಿಗಾಗಿ
- ಡೆಫ್ ಫುಟ್‌ಬಾಲ್ - ಶ್ರವಣ ಮಾಂದ್ಯತೆಯಿರುವ ಆಟಗಾರರಿಗಾಗಿ.
- ವಿದ್ಯುತ್ ಗಾಲಿಕುರ್ಚಿ ಸಾಕ್ಕರ್
- ಬೀಚ್ ಸಾಕ್ಕರ್ — ಮರಳಿನ ಮೇಲೆ ಆಡಲಾಗುವ ಫುಟ್‌ಬಾಲ್, ಬೀಚ್ ಫುಟ್‌ಬಾಲ್ ಮತ್ತು ಸ್ಯಾಂಡ್ ಸಾಕ್ಕರ್ ಎಂದೂ ಕರೆಯಲಾಗುತ್ತದೆ.
- ಸ್ಟ್ರೀಟ್ ಫುಟ್‌ಬಾಲ್ — ಹಲವಾರು ಅನೌಪಚಾರಿಕ ವಿವಿಧ ಫುಟ್‌ಬಾಲ್‌ಗಳನ್ನು ಒಳಗೊಂಡಿದೆ.
- ರಷ್ ಗೋಲೀ — ಫುಟ್‌ಬಾಲ್‌ನ ಈ ಮಾರ್ಪಾಡಿನಲ್ಲಿ ಗೋಲ್ಕೀಪರ್ನ ಪಾತ್ರವು ಸಾಮಾನ್ಯಕ್ಕಿಂತಲೂ ಸಂದರ್ಭಕ್ಕೆ ತಕ್ಕಂತೆ ಹೊಂದುವಂತಹದ್ದಾಗಿದೆ.
- ಹೆಡರ್ಸ್ ಅಂಡ್ ವೊಲೀಸ್ — ಗೋಲ್ಕೀಪರ್ ವಿರುದ್ದ ಕೇವಲ ಹೆಡರ್ಗಳು ಮತ್ತು ವೊಲೀಗಳ ಮೂಲಕವೇ ಗೋಲು ಹೊಡೆಯಬಹುದಾಗಿದೆ.
- ಕ್ರ್ಯಾಬ್ ಫುಟ್‌ಬಾಲ್ — ಆಟಗಾರರು ಎಂದಿನಂತೆ ಫುಟ್‌ಬಾಲ್ ಆಡುತ್ತಾರೆ, ಆದರೆ ಅವರು ತಮ್ಮ ಕೈ-ಕಾಲುಗಳ ಮೇಲೆ ನಿಂತು ಬೆನ್ನಿನ ಮೇಲೆಯೆ ಸಂಚರಿಸುವರು.
- ಸ್ವಾಂಪ್ ಸಾಕ್ಕರ್ — ಜೌಗು ಅಥವಾ ಕೆಸರುಳ್ಳ ಮೈದಾನದಲ್ಲಿ ಆಡಲಾಗುತ್ತದೆ.
ರಗ್ಬಿ ಶಾಲೆ ಫುಟ್‌ಬಾಲ್ ಮತ್ತು ವಂಶಜರು
ಬದಲಾಯಿಸಿ- ರಗ್ಬಿ ಫುಟ್‌ಬಾಲ್
- ರಗ್ಬಿ ಲೀಗ್ — ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ಲೆಂಡ್ ರಾಜ್ಯಗಳಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ಕೆಲವು ಆಸಕ್ತರಿಂದ, ಸಾಮಾನ್ಯವಾಗಿ ಸರಳವಾಗಿ "ಫುಟ್‌ಬಾಲ್" ಅಥವಾ "ಫುಟಿ" ಎನ್ನಲಾಗುತ್ತದೆ. ಆಗಿಂದಾಗ್ಗೆ, ಸರಳವಾಗಿ "ಲೀಗ್" ಎನ್ನಲಾಗುತ್ತದೆ.
- ರಗ್ಬಿ ಲೀಗ್ ನೈನ್ಸ್ (ಅಥವಾ ಸೆವೆನ್ಸ್)
- ಟಚ್ ಫುಟ್‌ಬಾಲ್ (ರಗ್ಬಿ ಲೀಗ್) — ರಗ್ಬಿ ಲೀಗ್‌ನ ತಗಲಿಕೆ-ರಹಿತ ಆವೃತ್ತಿ. ದಕ್ಷಿಣ ಆಫ್ರಿಕಾದಲ್ಲಿ ಇದಕ್ಕೆ ಸಿಕ್ಸ್ ಡೌನ್ ಎನ್ನಲಾಗುತ್ತದೆ.
- ಟ್ಯಾಗ್ ರಗ್ಬಿ — ರಗ್ಬಿ ಲೀಗ್‌ನ ತಗಲಿಕೆ-ರಹಿತ ಆವೃತ್ತಿ, ಇದರಲ್ಲಿ ಟ್ಯಾಕ್ಲ್ನ್ನು ಸೂಚಿಸಲು ಒಂದು ವೆಲ್ಕ್ರೋ ಟ್ಯಾಗ್ನ್ನು ತೆಗೆಯಲಾಗುತ್ತದೆ.
- ರಗ್ಬಿ ಯೂನಿಯನ್
- ರಗ್ಬಿ ಸೆವೆನ್ಸ್
- ಟ್ಯಾಗ್ ರಗ್ಬಿ — ವೆಲ್ಕ್ರೋ ಟ್ಯಾಗ್ ಬಳಸುವಂತಹ ರಗ್ಬಿ ಯೂನಿಯನ್
- ಬೀಚ್ ರಗ್ಬಿ — ಮರಳಿನಲ್ಲಿ ಆಡಲಾಗುವ ರಗ್ಬಿ
- ಟಚ್ ರಗ್ಬಿ — ಟ್ಯಾಕ್‌ಲ್ ತಂತ್ರವನ್ನು ಒಳಗೊಂಡಿರದ ರಗ್ಬಿ ಫುಟ್‌ಬಾಲ್ ಆಟಗಳಿಗೆ ವಿಶಿಷ್ಟವಲ್ಲದ ಹೆಸರು.
- ರಗ್ಬಿ ಲೀಗ್ — ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ಲೆಂಡ್ ರಾಜ್ಯಗಳಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ಕೆಲವು ಆಸಕ್ತರಿಂದ, ಸಾಮಾನ್ಯವಾಗಿ ಸರಳವಾಗಿ "ಫುಟ್‌ಬಾಲ್" ಅಥವಾ "ಫುಟಿ" ಎನ್ನಲಾಗುತ್ತದೆ. ಆಗಿಂದಾಗ್ಗೆ, ಸರಳವಾಗಿ "ಲೀಗ್" ಎನ್ನಲಾಗುತ್ತದೆ.
- ಗ್ರಿಡ್‌ಐರನ್ ಫುಟ್‌ಬಾಲ್
- ಅಮೆರಿಕನ್ ಫುಟ್‌ಬಾಲ್ — ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ದೇಶಗಳಲ್ಲಿ "ಫುಟ್‌ಬಾಲ್"; ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ "ಗ್ರಿಡ್‌ಐರನ್" ಎನ್ನಲಾಗುತ್ತದೆ. ಟಚ್ ಆವೃತ್ತಿಗಳಿಂದ ಭಿನ್ನವಾಗಿ ಪರಿಗಣಿಸಲು, ಕೆಲವೊಮ್ಮೆ "ಟ್ಯಾಕ್‌ಲ್ ಫುಟ್‌ಬಾಲ್" ಎಂದೂ ಕರೆಯಲಾಗುತ್ತದೆ.
- ಇಂಡೋರ್ ಫುಟ್‌ಬಾಲ್, ಅರೇನಾ ಫುಟ್‌ಬಾಲ್ — ಅಮೆರಿಕನ್ ಫುಟ್‌ಬಾಲ್‌ನ ಒಳಾಂಗಣ ಆವೃತ್ತಿ
- ನೈನ್-ಮ್ಯಾನ್ ಫುಟ್‌ಬಾಲ್, ಏಟ್-ಮ್ಯಾನ್ ಫುಟ್‌ಬಾಲ್, ಸಿಕ್ಸ್-ಮ್ಯಾನ್ ಫುಟ್‌ಬಾಲ್ — ಟ್ಯಾಕ್‌ಲ್ ಫುಟ್‌ಬಾಲ್‌ನ ಆವೃತ್ತಿಗಳು,ಪೂರ್ಣಪ್ರಮಾಣದ 11-ಮಂದಿ ಆಟಗಾರರಿರುವ ತಂಡವನ್ನು ಆಡಿಸಲು ಸಾಕಷ್ಟು ಆಟಗಾರರನ್ನು ಹೊಂದಿರದ ಕಿರುಪ್ರಮಾಣದ ಪ್ರೌಢಶಾಲೆಗಳು ಪ್ರಾಥಮಿಕವಾಗಿ ಆಡುವ ಆಟವಿದು
- ಟಚ್ ಫುಟ್‌ಬಾಲ್ (ಅಮೆರಿಕನ್) — ಟ್ಯಾಕ್‌ಲ್-ರಹಿತ ಅಮೆರಿಕನ್ ಫುಟ್‌ಬಾಲ್
- ಫ್ಲ್ಯಾಗ್ ಫುಟ್‌ಬಾಲ್ — ಇದು ಟಚ್ ಫುಟ್ಬಾಲ್ನಂತೆಯೇ, ವೆಲ್ಕ್ರೋ ಮೂಲಕ (ಎದುರಾಳಿ ತಂಡದ ಆಟಗಾರನ) ಸೊಂಟಕ್ಕೆ ಕಟ್ಟಿರುವ ಬಾವುಟವನ್ನು ಡಿಫೆಂಡರ್ಗಳು ಎಳೆಯುವುದರ ಮೂಲಕ ಟ್ಯಾಕ್‌ಲ್ ಎಂದು ಸೂಚಿಸುವುದು.
- ಸ್ಟ್ರೀಟ್ ಫುಟ್‌ಬಾಲ್ (ಅಮೆರಿಕನ್) — ಸೂಕ್ತ ಉಪಕರಣಗಳಿಲ್ಲದೆ ಹಾಗೂ ಸರಳಗೊಳಿಸಿದ ನಿಯಮಗಳೊಂದಿಗೆ, ಹಿತ್ತಲಿನಲ್ಲಿ ಆಡಲಾದ ಆಟ
- ಕೆನಡಿಯನ್ ಫುಟ್‌ಬಾಲ್ — ಕೆನಡಾದಲ್ಲಿ ಸರಳವಾಗಿ "ಫುಟ್‌ಬಾಲ್" ಎಂದು ಕರೆಯಲಾಗುತ್ತದೆ; ಸಂದರ್ಭವನ್ನು ಅವಲಂಬಿಸಿ ಅದನ್ನು ಕೆನಡಿಯನ್ ಅಥವಾ ಅಮೆರಿಕನ್ ಫುಟ್‌ಬಾಲ್ ಎಂದೂ ಕರಯಬಹುದಾಗಿದೆ
- ಕೆನಡಿಯನ್ ಫ್ಲ್ಯಾಗ್ ಫುಟ್‌ಬಾಲ್ — ಟ್ಯಾಕ್‌ಲ್-ರಹಿತ ಕೆನಡಿಯನ್ ಫುಟ್‌ಬಾಲ್
- ನೈನ್-ಮ್ಯಾನ್ ಫುಟ್‌ಬಾಲ್ - ಅಮೆರಿಕನ್ ನೈನ್-ಮ್ಯಾನ್ ಫುಟ್‌ಬಾಲ್‌ನ್ನು ಹೋಲುತ್ತದೆ; ಆದರೆ, ಪೂರ್ಣ ಪ್ರಮಾಣದ 12-ಮಂದಿ ಆಟಗಾರರಿರುವ ತಂಡವನ್ನು ಆಡಿಸಲು ಸಾಕಷ್ಟು ಆಟಗಾರರನ್ನು ಹೊಂದಿರದ ಸಾಸ್ಕ್ಯಾಚವನ್ ಕಿರುಪ್ರಮಾಣದ ಶಾಲೆಗಳು ಕೆನಡಿಯನ್ ನಿಯಮಗಳನ್ನು ಬಳಸಿ ಆಡುವ ಆಟ
ಐರಿಷ್ ಮತ್ತು ಆಸ್ಟ್ರೇಲಿಯನ್ ವೈವಿಧ್ಯತೆಗಳು
ಬದಲಾಯಿಸಿ- ಈ ನಿಯಮಗಳಲ್ಲಿ ಸಾಮಾನ್ಯವೇನೆಂದರೆ, ಆಫ್-ಸೈಡ್ ನಿಯಮದ ಕೊರತೆ, ಓಡುವಾಗ ಚೆಂಡನ್ನು ಪುಟಿಸಲು ಅಥವಾ ಸೊಲೊ (ಟೋ-ಕಿಕ್) ಮಾಡಬೇಕಾದ ಅಗತ್ಯ; ಎಸೆಯುವುದಕ್ಕಿಂತ ಹೆಚ್ಚಾಗಿ ಚೆಂಡನ್ನು ಗುದ್ದುವುದು ಅಥವಾ ತಟ್ಟುವುದು ಮತ್ತು ಇತರೆ ಸಂಪ್ರದಾಯಗಳು.
- ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್ — ಅಧಿಕೃತವಾಗಿ "ಆಸ್ಟ್ರೇಲಿಯನ್ ಫುಟ್‌ಬಾಲ್", ಮತ್ತು ಅನೌಪಚಾರಿಕವಾಗಿ "ಫುಟ್‌ಬಾಲ್", "ಫುಟಿ" ಅಥವಾ "ಆಸ್ಸೀ ರೂಲ್ಸ್". ಕೆಲವಡೆ ಅದನ್ನು (ತಪ್ಪಾಗಿ) ಅದನ್ನು "AFL" ಎನ್ನಲಾಗಿದ್ದು, ಅದು ಆಯೋಜಿಸುವ ಪ್ರಮುಖ ಮಂಡಳಿ ಮತ್ತು ಪಂದ್ಯಾವಳಿಯ ಹೆಸರಾಗಿದೆ
- ಆಸ್‌ಕಿಕ್ — ಪುಟ್ಟ ಮಕ್ಕಳಿಗಾಗಿ AFL ರೂಪಿಸಿದ ಆಸ್ಟ್ರೇಲಿಯನ್ ನಿಯಮಗಳ ಒಂದು ಆವೃತ್ತಿ
- ಮೆಟ್ರೊ ಫೂಟಿ (ಅಥವಾ ಮೆಟ್ರೊ ನಿಯಮಗಳ ಫೂಟಿ) - ರೂಢಿಯಂತಿನ ಆಸ್ಟ್ರೇಲಿಯನ್ ನಿಯಮಗಳ ಪಂದ್ಯಗಳನ್ನು ನಡೆಸಲು ಸಾಕಷ್ಟು ದೊಡ್ಡದಾದ ಮೈದಾನಗಳನ್ನು ಹೊಂದಿರದ ಉತ್ತರ ಅಮೆರಿಕನ್ ನಗರಗಳ ಗ್ರಿಡ್‌ಐರನ್ ಮೈದಾನಗಳಲ್ಲಿ ಆಡಲು, USAFLನವರು ಸೃಷ್ಟಿಸಿದ ಪರಿವರ್ತಿತ ಆವೃತ್ತಿ.
- ಕಿಕ್-ಟು-ಕಿಕ್
- 9-ಎ-ಸೈಡ್-ಫುಟಿ - ಆಸ್ಟ್ರೇಲಿಯನ್ ನಿಯಮಗಳಲ್ಲಿನ ಇನ್ನಷ್ಟು ಮುಕ್ತ, ಓಡುವಂತಹ ವೈವಿಧ್ಯ. ಇದಕ್ಕೆ ಒಟ್ಟು 18 ಆಟಗಾರರ ಮತ್ತು ಸೂಕ್ತ ಪ್ರಮಾಣದಲ್ಲಿ ಇನ್ನಷ್ಟು ಕಿರಿದಾದ ಆಟದ ಅಂಕಣದ ಅಗತ್ಯವಿದೆ (ತಗಲಿಕೆ ಮತ್ತು ತಗಲಿಕೆ-ರಹಿತ ಆವೃತ್ತಿಗಳನ್ನು ಒಳಗೊಂಡಿದೆ)
- ರೆಕ್ ಫುಟಿ - "ರಿಕ್ರಿಯೇಷನಲ್ ಫುಟ್‌ಬಾಲ್", AFL ರಚಿಸಿದ, ಟ್ಯಾಕ್‌ಲ್‌ಗಳನ್ನು ಟ್ಯಾಗ್‌ಗಳೊಂದಿಗೆ ಬದಲಾಯಿಸುವ, ಆಸ್ಟ್ರೇಲಿಯನ್ ನಿಯಮಗಳ ಪರಿವರ್ತಿತ, ತಗಲಿಕೆ-ರಹಿತ ಟಚ್ ಆವೃತ್ತಿ
- ಟಚ್ ಆಸ್ಸೀ ನಿಯಮಗಳು - ಕೇವಲ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಆಡಲಾದ ಆಸ್ಟ್ರೇಲಿಯನ್ ನಿಯಮಗಳ ತಗಲಿಕೆ-ರಹಿತ ಆವೃತ್ತಿ
- ಸಮೋವಾ ನಿಯಮಗಳು - ಸಮೋವಾ ಪರಿಸ್ಥಿತಿಗಳಿಗೆ ಹೊಂದುವಂತೆ (ಉದಾಹರಣೆಗೆ ರಗ್ಬಿ ಫುಟ್‌ಬಾಲ್ ಮೈದಾನಗಳ ಬಳಕೆ) ರಚಿಸಲಾದ ಸ್ಥಳೀಯ ಆವೃತ್ತಿ
- ಮಾಸ್ಟರ್ಸ್ ಆಸ್ಟ್ರೇಲಿಯನ್ ಫುಟ್‌ಬಾಲ್ (ಸೂಪರ್‌ರೂಲ್ಸ್ ಎಂದೂ ಕರೆಯಲಾದ) - ಕಡಿಮೆಗೊಳಿಸಿದ ತಗಲಿಕೆಯ ಈ ಆವೃತ್ತಿಯು 30 ವರ್ಷ ವಯಸ್ಸಿನ ಮೇಲ್ಪಟ್ಟ ಆಟಗಾರರು ಆಡುವ ಪಂದ್ಯಗಳಿಗೆ ಮಾತ್ರ
- ಮಹಿಳೆಯರ ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್ - ಮಹಿಳೆಯರ ಪಂದ್ಯಾವಳಿಗಾಗಿ, ಸ್ವಲ್ಪ ಕಿರುಗಾತ್ರದ ಚೆಂಡು ಬಳಸುವ ಮತ್ತು (ಕೆಲವೊಮ್ಮೆ) ಕಡಿಮೆಗೊಳಿಸಿದ ತಗಲಿಕೆಯುಳ್ಳ ಆವೃತ್ತಿ
- ಗೇಲಿಕ್ ಫುಟ್‌ಬಾಲ್ — ಪ್ರಧಾನವಾಗಿ ಐರ್ಲೆಂಡ್‌ನಲ್ಲಿಯೇ ಆಡಲಾಗಿದೆ. ಕೆಲವೊಮ್ಮೆ "ಫುಟ್‌ಬಾಲ್" ಅಥವಾ "ಗಾಹ್" (ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್‌ನ ಪ್ರಥಮಾಕ್ಷರಿ)
- ಅಂತರರಾಷ್ಟ್ರೀಯ ನಿಯಮಗಳ ಫುಟ್‌ಬಾಲ್ — ಗೇಲಿಕ್ ಮತ್ತು ಆಸ್ಟ್ರೇಲಿಯನ್ ನಿಯಮಗಳ ಆಟಗಾರರ ನಡುವನಿ ಪಂದ್ಯಗಳಿಗೆ ಒಂದು ಹೊಂದಾಣಿಕೆಯ ನಿಯಮ ಬಳಸಲಾಗಿದೆ.
ಉಳಿದಿರುವ ಮಧ್ಯಯುಗದ ಚೆಂಡಿನ ಆಟಗಳು
ಬದಲಾಯಿಸಿUKನಲ್ಲಿ
ಬದಲಾಯಿಸಿ- ಲಿಂಕನ್ಷೈರ್ನ ಹಾಕ್ಸೆನಲ್ಲಿರುವ ಇಪಿಫನಿಯಲ್ಲಿ ಆಡಲಾದ ಹಾಕ್ಸೆ ಹುಡ್
- ಷ್ರೋವ್ ಟ್ಯೂಸ್ಡೇ ಆಟಗಳು
- ನಾರ್ಥಂಬರ್ಲೆಂಡ್ ನ ಆಲ್ನ್ವಿಕ್ನಲ್ಲಿ ಸ್ಕೋರಿಂಗ್ ದಿ ಹೇಲ್ಸ್
- ಡರ್ಬಿಷೈರ್ನ ಆಷ್ಬೊರ್ನ್ನಲ್ಲಿ ರಾಯಲ್ ಶ್ರೋವ್ಟೈಡ್ ಫುಟ್‌ಬಾಲ್
- ವಾರ್ವಿಕ್ಶೈರ್ನ ಅತೆರ್ಸ್ಟೋನ್ನಲ್ಲಿ ಶ್ರೋವ್ಟೈಡ್ ಚೆಂಡಿನ ಆಟ
- ಡಾರ್ಸೆಟ್ನ ಕಾರ್ಫ್ ಕ್ಯಾಸ್ಲ್ನಲ್ಲಿ ದಿ ಶ್ರೋವ್ ಟ್ಯೂಸ್ಡೇ ಫುಟ್‌ಬಾಲ್ ಪರ್ಬೆಕ್ ಮಾರ್ಬ್ಲರ್ಸ್ ಸಮಾರಂಭ
- ಕಾರ್ನ್ವಾಲ್ನ ಸೇಂಟ್ ಕೊಲಂಬ್ ಮೇಜರ್ನಲ್ಲಿ ಹರ್ಲಿಂಗ್ ದಿ ಸಿಲ್ವರ್ ಬಾಲ್
- ಡರ್ಹಮ್ ಕೌಂಟಿಯ ಸೆಡ್ಜ್ಫೀಲ್ಡ್ನಲ್ಲಿ ಚೆಂಡಿನ ಆಟ
- ಸ್ಕಾಟ್‌ಲೆಂಡ್‌ನ ಕೆಳಕಂಡ ಸ್ಥಳಗಳಲ್ಲಿ ಬಾ ಗೇಮ್ ("ಚೆಂಡಿನ ಆಟ") ಕ್ರಿಸ್ಮಸ್ ಮತ್ತು ಹಾಗ್ಮನೆ ಹಬ್ಬಗಳಂದು ಇಂದಿಗೂ ಜನಪ್ರಿಯವಾಗಿದೆ:
- ಡನ್ಸ್, ಬರ್ವಿಕ್ಶೈರ್
- ಸ್ಕೋನ್, ಪರ್ತ್ಶೈರ್
- ಆರ್ಕ್ನೇ ದ್ವೀಪಗಳಲ್ಲಿನ ಕಿರ್ಕ್ವಾಲ್
UKಯ ಹೊರಗೆ
ಬದಲಾಯಿಸಿ- ಕ್ಯಾಲ್ಸಿಯೊ ಫಿಯೊರೆಂಟಿನೊ — 16ನೆಯ ಶತಮಾನದ ಫ್ಲಾರೆನ್ಸ್ನಿಂದ ನವೋದಯ ಫುಟ್‌ಬಾಲ್‌ನ ಆಧುನಿಕ ಪುನರುತ್ಥಾನ
ಉಳಿದಿರುವ UK ಶಾಲೆ ಆಟಗಳು
ಬದಲಾಯಿಸಿUK ಪಬ್ಲಿಕ್ (ಸ್ವಾವಲಂಬಿ) ಶಾಲೆಗಳಲ್ಲಿ ಇನ್ನೂ ಆಡಲಾದ ಆಟಗಳು:
ಇತ್ತೀಚೆಗಿನ ಆವಿಷ್ಕರಗಳು ಮತ್ತು ಮಿಶ್ರಿತ ಆಟಗಳು
ಬದಲಾಯಿಸಿ- ಕೀಪೀ ಅಪ್ಪೀ (ಕೀಪ್ ಅಪ್)
- ಪಾದ, ಮಂಡಿ, ಎದೆ, ಭುಜ ಮತ್ತು ತಲೆಯನ್ನು ಬಳಸಿ ಫುಟ್‌ಬಾಲ್‌ನ್ನು ಕುಶಲತೆಯಿಂದ ಪುಟಿಸುವ ಕಲೆ.
- ಫುಟ್ಬ್ಯಾಗ್
- ಹ್ಯಾಕಿ ಸ್ಯಾಕ್ (ಇದು ಸರಕು ಮುದ್ರೆ) ಸೇರಿದಂತೆ ಹಲವಾರು ಕೀಪೀ-ಅಪ್ಪೀ ವೈವಿಧ್ಯತೆಗಳಲ್ಲಿ ಒಂದು ಕಿರುಗಾತ್ರದ ಮರಳಿನ ಚೀಲವನ್ನು ಚೆಂಡಿನಂತೆ ಬಳಸುವುದು.
- ಫ್ರೀಸ್ಟೈಲ್ ಫುಟ್‌ಬಾಲ್
- ಕೀಪೀ ಅಪ್ಪೀ ಬಗ್ಗೆ ಒಂದು ಆಧುನಿಕ ಪರಿಗ್ರಹಿಕೆಯ ಪ್ರಕಾರ, ತಮ್ಮ ಮನರಂಜನಾ ಮೌಲ್ಯ ಮತ್ತು ನೈಪುಣ್ಯತೆಯ ಆಧಾರದ ಮೇಲೆ ಫ್ರೀಸ್ಟೈಲರ್‌ಗಳಿಗೆ ದರ್ಜೆಗಳನ್ನು ನೀಡಲಾಗುತ್ತದೆ.
FA ನಿಯಮಗಳ ಆಧಾರದ ಮೇಲೆ
ಬದಲಾಯಿಸಿರಗ್ಬಿಯ ಆಧಾರದ ಮೇಲೆ
ಬದಲಾಯಿಸಿ- ಸ್ಕಫಲ್ಬಾಲ್
- ಫೋರ್ಸ್ ’ಎಮ್ ಬ್ಯಾಕ್ಸ್ ಅಥವಾ ಪೋರ್ಸಿಂಗ್ ಬ್ಯಾಕ್ , ಫೋರ್ಸ್ಮ್ಯಾನ್ಬ್ಯಾಕ್ ಇತ್ಯಾದಿ.
ಮಿಶ್ರಿತ ಆಟಗಳು
ಬದಲಾಯಿಸಿ- ಆಸ್ಟಸ್
- ಆಸ್ಟ್ರೇಲಿಯನ್ ನಿಯಮಗಳು ಮತ್ತು ಅಮೆರಿಕನ್ ಫುಟ್‌ಬಾಲ್ ನಡುವಣ ಸಮನ್ವಯದ ಪ್ರಕಾರ ಎರಡನೆಯ ಮಹಾಯುದ್ಧದ ಕಾಲದಲ್ಲಿ ಮೆಲ್ಬರ್ನ್‌ನಲ್ಲಿ ಆವಿಷ್ಕರಣಗೊಂಡ ಆಟವಿದು
- ಬಾಸ್ಸಾಬಾಲ್
- ಅಸೋಷಿಯೇಷನ್ ಫುಟ್‌ಬಾಲ್, ವಾಲಿಬಾಲ್ ಮತ್ತು ಜಿಮ್ನ್ಯಾಸ್ಟಿಕ್ಸ್ ಆಟದ ಶೈಲಿಗಳನ್ನು ಮಿಶ್ರಣ ಮಾಡಿ, ಊದಬಹುದಾದವುಗಳ ಹಾಗೂ ಟ್ರ್ಯಾಂಪೊಲೀನ್ಗಳ ಮೇಲೆ ಆಡಬಹುದಾಗಿದೆ.
- ಫುಟ್ವಾಲಿ
- ಅಸೋಷಿಯೇಷನ್ ಫುಟ್‌ಬಾಲ್ ಮತ್ತು ಬೀಚ್ ವಾಲಿಬಾಲ್ ಬೆರೆಸಿ ಮರಳಿನ ಮೇಲೆ ಆಡಲಾದ ಆಟ
- ಕಿಕ್‌ಬಾಲ್
- ಅಸೋಷಿಯೇಷನ್ ಫುಟ್‌ಬಾಲ್ ಮತ್ತು ಬೇಸ್ಬಾಲ್ನ ಮಿಶ್ರಣ, 1942ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆವಿಷ್ಕಾರವಾಯಿತು.
- ಸ್ಪೀಡ್ಬಾಲ್ (ಅಮೆರಿಕನ್)
- 1912ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಮೆರಿಕನ್ ಫುಟ್‌ಬಾಲ್, ಸಾಕ್ಕರ್ ಮತ್ತು, ಬ್ಯಾಸ್ಕೆಟ್ ಬಾಲ್ ಆಟಗಳನ್ನು ಒಗ್ಗೂಡಿಸಿ, ರಚಿಸಲಾದ ಆಟ.
- ಯೂನಿವರ್ಸಲ್ ಫುಟ್‌ಬಾಲ್
- ಆಸ್ಟ್ರೇಲಿಯನ್ ನಿಯಮಗಳ ಫುಟ್‌ಬಾಲ್ ಮತ್ತು ರಗ್ಬಿ ಲೀಗ್ಗಳ ಮಿಶ್ರಣವಿದು, 1933ರಲ್ಲಿ ಸಿಡ್ನಿಯಲ್ಲಿ ಈ ಆಟವನ್ನು ಪ್ರಾಯೋಗಿಕವಾಗಿ ನಡೆಸಲಾಯಿತು.[೫೬]
- ವೋಲಾಟ
- ಇಟಾಲಿಯನ್ ಫ್ಯಾಸಿಸ್ಟ್ ಮುಖಂಡ ಆಗಸ್ಟೊ ಟುರಾಟಿ 1920ರ ದಶಕದಲ್ಲಿ ಯೋಜಿಸಿದ, ಅಸೋಷಿಯೇಷನ್ ಫುಟ್‌ಬಾಲ್ ಮತ್ತು ಯೂರೋಪಿಯನ್ ಹ್ಯಾಂಡ್ಬಾಲ್ನ್ನು ಹೋಲುವಂತಹ ಆಟವಿದು.
- ವೀಲ್ಚೇರ್ ರಗ್ಬಿ
- ಇದನ್ನು ಮರ್ಡರ್ಬಾಲ್ ಎಂದೂ ಕರೆಯಲಾಗಿದೆ; 1977ರಲ್ಲಿ ಕೆನಡಾದಲ್ಲಿ ಆವಿಷ್ಕರಿಸಲಾಯಿತು. ರಗ್ಬಿಗಿಂತಲೂ ಹೆಚ್ಚಾಗಿ ಹಿಮ ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳನ್ನು ಆಧರಿಸಿ ರಚಿಸಲಾದದ್ದು.
ಮೇಜಿನ ಮೇಲಿನ ಆಟಗಳು ಮತ್ತು ಇತರೆ ವಿನೋದಗಳು
ಬದಲಾಯಿಸಿಫುಟ್ಬಾಲ್ (ಸಾಕ್ಕರ್) ಆಧಾರಿತ
ಬದಲಾಯಿಸಿ- ಸುಬ್ಬುಟಿಯೊ
- ಬ್ಲೋ ಫುಟ್‌ಬಾಲ್
- ಟೇಬಲ್ ಫುಟ್‌ಬಾಲ್ — ಫುಸ್‌ಬಾಲ್, ಟೇಬಲ್ ಸಾಕ್ಕರ್, ಬೇಬಿಫುಟ್, ಬಾರ್ ಫುಟ್‌ಬಾಲ್ ಅಥವಾ ಗೆಟ್ಟೋನ್ ಎಂದೂ ಕರೆಯಲಾಗಿದೆ
- ಫ್ಯಾಂಟೆಸಿ ಫುಟ್‌ಬಾಲ್ (ಸಾಕ್ಕರ್)
- ಬಟನ್ ಫುಟ್‌ಬಾಲ್ — ಫುಟ್ಬೊಲ್ ಡಿ ಮೆಸಾ, ಜೊಗೊ ಡಿ ಬೊಟೊಎಸ್
- ಪೆನ್ನಿ ಫುಟ್‌ಬಾಲ್
ರಗ್ಬಿ ಆಧಾರಿತ
ಬದಲಾಯಿಸಿಅಮೆರಿಕನ್ ಫುಟ್‌ಬಾಲ್ ಆಧಾರಿತ
ಬದಲಾಯಿಸಿಆಸ್ಟ್ರೇಲಿಯನ್ ಫುಟ್‌ಬಾಲ್ ಆಧಾರಿತ
ಬದಲಾಯಿಸಿಇದನ್ನು ನೋಡಿರಿ
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ https://www.britannica.com/place/England
- ↑ *ಕ್ರೀಡಾ ಇತಿಹಾಸಕಾರರಾದ ಬಿಲ್ ಮುರ್ರೆಯವರು, ದಿ ಸ್ಪೋರ್ಟ್ಸ್ ಫ್ಯಾಕ್ಟರ್, "ಟೈ ಮಿ ಕಾಂಗರೂ ಡೌನ್, ಸ್ಪೋರ್ಟ್" ಅನ್ನು (ರೇಡಿಯೋ ನ್ಯಾಷಿನಲ್, ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್, ಮೇ 31, 2002) ಪ್ರಸ್ತಾಪಿಸಿದ್ದಾರೆ ಮತ್ತು ಮೈಕಲ್ ಸ್ಕಾಟ್ಟ್ ಮೂರಿ, "ನೇಮಿಂಗ್ ದಿ ಬ್ಯೂಟಿಫುಲ್ ಗೇಮ್: ಇಟ್ಸ್ ಕಾಲ್ಡ್ ಸಾಕ್ಕರ್" (ದೆರ್ ಸ್ಪೈಜೆಲ್ , ಜೂನ್ 7, 2006). ಇದನ್ನು ನೋಡಿರಿ: ICONS ಜಾಲತಾಣದಲ್ಲಿರುವ (ದಿನಾಂಕ ತಿಳಿದುಬಂದಿಲ್ಲ) "ಹಿಸ್ಟರಿ ಆಫ್ ಫುಟ್‌ಬಾಲ್"; ಮತ್ತು ವೃತ್ತಿಪರ ಫುಟ್‌ಬಾಲ್ ಸಂಶೋಧಕರ ಸಂಘ, (ದಿನಾಂಕ ತಿಳಿದುಬಂದಿಲ್ಲ) "ಎ ಫ್ರೆಂಡ್ಲಿ ಕೈಂಡ್ ಆಫ್ ಫೈಟ್: ದಿ ಆರಿಜಿನ್ಸ್ ಆಫ್ ಫುಟ್‌ಬಾಲ್ ಟು 1633" Archived 2010-09-29 ವೇಬ್ಯಾಕ್ ಮೆಷಿನ್ ನಲ್ಲಿ..
- ಎಲ್ಲಾ ಪರಾಮರ್ಶನಗಳನ್ನು ದಿನಾಂಕ: ಫೆಬ್ರವರಿ 11, 2007ರಂದು ಪಡೆಯಲಾಗಿದೆ.
- ↑ E. ನಾರ್ಮನ್ ಗಾರ್ಡಿನೆರ್: "ಅಥ್ಲೆಟಿಕ್ಸ್ ಇನ್ ದಿ ಏನ್ಸಿಯೆಂಟ್ ವರ್ಲ್ಡ್", ಕೊರಿಯರ್ ಡೊವರ್ ಪಬ್ಲಿಕೇಷನ್ಸ್, 2002, ISBN 0-486-42486-3, p.229
- ↑ ವಿಲಿಯಮ್ ಸ್ಮಿತ್: "ಡಿಕ್ಷನರಿ ಆಫ್ ಗ್ರೀಕ್ ಅಂಡ್ ರೋಮನ್ ಆಂಟಿಕ್ವಿಟಿಸ್", 1857, p.777
- ↑ ಹೆ, ಜಿನ್ (2001).
- ಆನ್ ಅನಾಲಿಸಿಸ್ ಆಫ್ ಝಾನ್ ಗುವೋ ಸೆ . ಬೀಜಿಂಗ್: ಪೈಕಿಂಗ್ ಯೂನಿವರ್ಸಿಟಿ ಪ್ರೆಸ್. ISBN 7-301-05101-8, p. 59-82
- ↑ ರಿಚರ್ಡ್ ಹಕ್ಲುಯುತ್, ವಯೇಜಸ್ ಇನ್ ಸರ್ಜ್ ಆಫ್ ನಾರ್ಥ್-ವೆಸ್ಟ್ ಪ್ಯಾಸೇಜ್, ಅಡೆಲೈಡ‌್ ವಿಶ್ವವಿದ್ಯಾನಿಲಯ , ಡಿಸೆಂಬರ್ 29, 2003
- ↑ ಸ್ಟೀಪನ್ ಆಲ್ಸ್‌ಫರ್ಡ್, ~tristan/towns/florilegium/ introduction/intro01.html#p25 ಫಿಟ್ಜ್‌ಸ್ಟೀಪನ್ಸ್ ಡಿಸ್ಕ್ರಿಪ್ಶನ್ ಆಫ್ ಲಂಡನ್, ಫ್ಲೋರಿಲೆಜಿಯಮ್ ಅರ್ಬನಮ್ , ಏಪ್ರಿಲ್ 5, 2006
- ↑ ೮.೦ ೮.೧ ೮.೨ ೮.೩ ೮.೪ ಫ್ರಾನ್ಸಿಸ್ ಪೀಬಾಡಿ ಮಗೌನ್, 1929, "ಫುಟ್‌ಬಾಲ್ ಇನ್ ಮಿಡೆವಲ್ ಇಂಗ್ಲೆಂಡ್ ಅಂಡ್ ಮಿಡ್ಲ್-ಇಂಗ್ಲಿಷ್ ಲಿಟರೇಚರ್" (ದಿ ಅಮೇರಿಕನ್ ಹಿಸ್ಟಾರಿಕಲ್ ರಿವ್ಯೂ , v. 35, No. 1).
- ↑ ೯.೦ ೯.೧ ಆನ್‌ಲೈನ್ ಎಟಿಮಾಲಜಿ ಡಿಕ್ಷನರಿ (ದಿನಾಂಕ ತಿಳಿದು ಬಂದಿಲ್ಲ), "ಫುಟ್‌ಬಾಲ್"
- ↑ ವಿವೇಕ್ ಚೌದರಿ, “ಹೂಸ್ ದಿ ಫ್ಯಾಟ್ ಬ್ಲೋಕ್ ಇನ್ ದಿ ನಂಬರ್ ಎಯ್ಟ್ ಶರ್ಟ್?” (ದಿ ಗಾರ್ಡಿಯನ್ , ಫೆಬ್ರವರಿ 18, 2004.)
- ↑ ಅನ್ನೀಯೆ ಜೊಕಿನೆನ್, ಸರ್ ಫಿಲಿಪ್ ಸಿಡ್ನಿ."ಎ ಡೈಲಾಗ್ ಬಿಟ್ವಿನ್ ಟೂ ಶೆಪರ್ಡ್ಸ್" (Luminarium.org.org , ಜುಲೈ 2006)
- ↑ Richard Carew. "EBook of The Survey of Cornwall". Project Gutenberg. Retrieved 2007-10-03.
- ↑ "ಇಂಟರ್‌ನ್ಯಾಷಿನಲ್ ಓಲಂಪಿಕ್ ಅಕಾಡೆಮಿ (I.O.A.) (ದಿನಾಂಕ ತಿಳಿದು ಬಂದಿಲ್ಲ), "ಮಿನಿಟ್ಸ್ 7ತ್ ಇಂಟರ್‌ನ್ಯಾಷಿನಲ್ ಪೋಸ್ಟ್ ಗ್ರಾಜುಯೇಟ್ ಸೆಮಿನಾರ್ ಆನ್ ಓಲಂಪಿಕ್ ಸ್ಟಡೀಸ್"". Archived from the original on 2008-04-29. Retrieved 2009-10-26.
- ↑ co.uk/ books?vid=LCCN25014901&id=sHrejZJVc80C&pg=RA3-PA412&dq=football&as_brr=1 ಜಾನ್ ಲಾರ್ಡ್ ಕ್ಯಾಂಪ್‌ಬೆಲ್, ದಿ ಲೈವ್ಸ್ ಆಫ್ ದಿ ಲಾರ್ಡ್ಸ್ ಚಾನ್ಸೆಲರ್ಸ್ ಅಂಡ್ ಕೀಪರ್ಸ್ ಆಫ್ ದಿ ಗ್ರೇಟ್ ಸೀಲ್ ಇಂಗ್ಲೆಂಡ್, vol. 2, 1851, p. Archived 2013-07-31 ವೇಬ್ಯಾಕ್ ಮೆಷಿನ್ ನಲ್ಲಿ.412
- ↑ William Maxwell Hetherington, 1856, History of the Westminster Assembly of Divines, Ch.1 (Third Ed.) Archived 2010-01-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಫುಟ್‌ಬಾಲ್network.org , 2003, "ರಿಚರ್ಡ್ ಮಲ್‌ಕಸ್ಟರ್"". Archived from the original on 2010-04-15. Retrieved 2009-10-26.
- ↑ &id=P-io9DcBllkC&pg=PA168&lpg=PA168&vq=football&dq=willughby+book+of+sports&sig=qfpFofLjtqtwe0Y13Av4KZHvSA8 ಫ್ರಾನ್ಸಿಸ್ ವಿಲುಭಿ, 1660–72, ಬುಕ್ ಆಫ್ ಗೇಮ್ಸ್
- ↑ ೧೮.೦ ೧೮.೧ Richard William Cox (2002). Encyclopedia of British Football. Routledge. p. 243. ISBN 9780714652498.
{{cite book}}
: Unknown parameter|coauthors=
ignored (|author=
suggested) (help) - ↑ ೧೯.೦ ೧೯.೧ ಜೂಲಿಯನ್ ಕರೋಸಿ, 2006, "ದಿ ಹಿಸ್ಟರಿ ಆಫ್ ಆಫ್‌ಸೈಡ್"
- ↑ 1825 ಅಥವಾ 1826ರಲ್ಲಿ ವಿಲಿಯಮ್ ಹಾನೆ ಇಂಗ್ಲಿಷ್ ಲೇಖಕ ಹಿಂದಿನ ಫುಟ್‌ಬಾಲ್‌ನಲ್ಲಿ ಚೆಂಡನ್ನು ಕೈಯಲ್ಲಿ ಹಿಡಿಯುವ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ.
- ಸಾಮಾಜಿಕ ವಿಮರ್ಶಕ ಸರ್ ಫ್ರೆಡ್ರಿಕ್ ಮಾರ್ಟನ್ ಎಡೆನ್ರವರು ಸ್ಕೋನ್, ಸ್ಕಾಟ್ಲೆಂಡ್ನಲ್ಲಿ ಆಡುವ ಫುಟ್‌ಬಾಲ್‌ನ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ:
- ಈ ಆಟವು ಹೀಗಿತ್ತು: ಆಟಗಾರನ ಕೈಯಲ್ಲಿ ಚೆಂಡು ದೊರೆತಾಕ್ಷಣ, ಎದುರಾಳಿ ತಂಡದವರನ್ನು ದಾಟುವ ತನಕ ಅವನು ಚೆಂಡನ್ನು ಹಿಡಿದುಕೊಂಡು ಓಡಬೇಕು [sic]; ಮತ್ತು ನಂತರ ಒಂದು ವೇಳೆ ಎದುರಾಳಿ ಆಟಗಾರರಿಂದ ನಿಲ್ಲಿಸಲ್ಪಟ್ಟರೂ ಆಟಗಾರನು ಅವರನ್ನು ಭೇದಿಸಿ ಮುನ್ನುಗ್ಗಬೇಕು. ಅದು ಸಾಧ್ಯವಾಗದೆ ಎದುರಾಳಿ ಆಟಗಾರರಿಂದ ತಡೆಯಲ್ಪಟ್ಟರೆ, ಆತನಿಂದ ಚೆಂಡನ್ನು ಇನ್ನೊಂದು ತಂಡದವರು ಕಿತ್ತುಕೊಳ್ಳದಿದ್ದರೆ, ತಡೆಯಲ್ಪಟ್ಟ ಆಟಗಾರನು ಚೆಂಡನ್ನು ಎಸೆಯಬೇಕು . ಆದರೆ ಯಾವುದೇ ಆಟಗಾರರಿಗೆ ಅದನ್ನು ಒದೆಯುವ ಅನುಮತಿಯಿಲ್ಲ. (ವಿಲಿಯಮ್ ಹೋನ್, 1825–26, ದಿ ಎವರಿ-ಡೇ ಬುಕ್, "ಫೆಬ್ರವರಿ 15." ಪ್ರವೇಶಿಸಿದ ದಿನಾಂಕ: ಮಾರ್ಚ್ 15, 2007.)
- ↑
- THE SURREY ಕ್ಲಬ್ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್ (ಲಂಡನ್, ಇಂಗ್ಲೆಂಡ್), ಭಾನುವಾರ, ಅಕ್ಟೋಬರ್ 07, 1849; pg. [6]ನ್ಯೂ ರೀಡರ್‌ಶಿಪ್
- ↑ ಫುಟ್‌ಬಾಲ್: ದಿ ಫರ್ಸ್ಟ್ ಹಂಡ್ರೆಡ್ ಇಯರ್ಸ್. ದಿ ಅನ್‌ಟೋಲ್ಡ್ ಸ್ಟೋರಿ. ಆಡ್ರಿನ್ ಹಾರ್‌ವೇ. 2005.ರೌಟ್‌ಲೆಡ್ಜ್, ಲಂಡನ್
- ↑
- ಜಾನ್ ಹೋಪ್, ಅಕೌಂಟ್ಸ್ ಅಂಡ್ ಪೇಪರ್ಸ್ ಆಫ್ ದಿ ಫುಟ್‌ಬಾಲ್ ಕ್ಲಬ್ ಕೆಪ್ಟ್ ಬೈ ಜಾನ್ ಹೋಪ್, WS, ಅಂಡ್ ಸಮ್ ಹೋಪ್ ಕರೆಸ್ಪಾಂಡೆನ್ಸ್ 1787-1886 (ನ್ಯಾಷಿನಲ್ ಆರ್ಚೀವ್ಸ್ ಆಫ್ ಸ್ಕಾಟ್‌ಲೆಂಡ್, GD253/183)
- ↑ http://www. nas.gov.uk/about/071112.asp
- ↑ "gov.uk/about/071112.asp ದಿ ಫುಟ್-ಬಾಲ್ ಕ್ಲಬ್ ಎಡಿನ್‌ಬರ್ಗ್, 1824-1841 - ದಿ ನ್ಯಾಷಿನಲ್ ಆರ್ಚೀವ್ಸ್ ಆಫ್ ಸ್ಕಾಟ್ಲೆಂಡ್". Archived from the original on 2013-07-11. Retrieved 2021-09-07.
- ↑ §ionTitle=World+Rugby+Chronology "Rugby chronology". Museum of Rugby. Retrieved April 24, 2006.
{{cite web}}
: Check|url=
value (help)[ಶಾಶ್ವತವಾಗಿ ಮಡಿದ ಕೊಂಡಿ] - ↑ electricscotland.com/history/australia/melbourne.htm ಮೆಲ್ಬರ್ನ್‌ನಲ್ಲಿರುವ ದಿ ರಾಯಲ್ ಕಲೆಡೋನಿಯನ್ ಸೊಸೈಟಿಯ ಇತಿಹಾಸ
- ↑ ಸಾಕ್ಕರ್ ಬಾಲ್ ವಿಶ್ವದ - ಪೂರ್ವ ಇತಿಹಾಸ (Accessed June 9, 2006)
- ↑ *Mr ಲಿಂಡನ್‌ರ ಸರಿಯಾದ ಹೆಸರು ಮತ್ತು ಹಂದಿಯ ಮೂತ್ರಕೋಶ ಚೀಲಗಳನ್ನು ಬಳಸಿಕೊಳ್ಳಲಾದ ಸರಿಯಾದ ಸಮಯಗಳು ಚರ್ಚಾಸ್ಪದವಾಗಿದ್ದು, ಇದನ್ನು ಅವರು ಅಸೋಸಿಯೇಷನ್ ಮತ್ತು ರಗ್ಬಿ ಫುಟ್‌ಬಾಲ್ ಆಟಗಳಿಗಾಗಿ ಬಳಕೆ ಮಾಡಿದರೆಂದು ತಿಳಿದು ಬಂದಿದೆ. ಆದರೂ ಫುಟ್‌ಬಾಲ್ ತಾಣಗಳು ಅವರನ್ನು ರಿಚರ್ಡ್ ಲಿಂಡನ್‌ನ ಮಗ HJ ಲಿಂಡನ್ ಎಂದು ಗುರುತಿಸಿ ಈ ಚೆಂಡನ್ನು ಅವರು 1862ರಲ್ಲಿ ಬಳಕೆ ಮಾಡಿದರು (ref: ಸಾಕ್ಕರ್ ಬಾಲ್ ವರ್ಲ್ಡ್) ಎಂದು ತಿಳಿಸಿದರೆ, ರಗ್ಬಿ ತಾಣಗಳು ಅವರನ್ನು ರಿಚರ್ಡ್ ಲಿಂಡನ್ ಎಂದೇ ಗುರುತಿಸಿ ಅವರು 1870ರಲ್ಲಿ ಈ ಚೆಂಡನ್ನು ಬಳಕೆಮಾಡಿದರು ಎಂದು ತಿಳಿಸುತ್ತವೆ (ref: co.uk/osm/ story/ 0,,1699545,00.html ಗಾರ್ಡಿಯನ್ ಲೇಖನ[ಶಾಶ್ವತವಾಗಿ ಮಡಿದ ಕೊಂಡಿ]).
- ಆದರೆ ಅವರ ಮಡದಿಯು ಹಂದಿಯ ಮೂತ್ರಚೀಲಗಳಿಗೆ ಗಾಳಿ ತುಂಬುವಾಗ ಸತ್ತಳೆಂದು ಎರಡೂ ಕಡೆಯವರು ಒಪ್ಪಿಕೊಳ್ಳುತ್ತಾರೆ. ಈ ಮಾಹಿತಿಗಳು ನಂಬಿಕೆಗೆ ಅರ್ಹವಲ್ಲದ ಜಾಲತಾಣಗಳಿಂದ ಜನ್ಮಪಡೆದಿವೆ ಮತ್ತು ಇದಕ್ಕೆ ಕೇವಲ ಕೇಂದ್ರ ಗ್ರಂಥಾಲಯಗಳಲ್ಲಿರುವ ಸಂಶೋಧನಾತ್ಮಕ ಪುಸ್ತಕಗಳಲ್ಲಿ ಮಾತ್ರ ಉತ್ತರ ಸಿಗಬಹುದು ಎನಿಸುತ್ತದೆ.
- ↑ soccerballworld.com, (ದಿನಾಂಕ ತಿಳಿದುಬಂದಿಲ್ಲ) "ಚಾರ್ಲ್ಸ್ ಗುಡ್‍ಇಯರ್‌ನ ಸಾಕ್ಕರ್ ಬಾಲ್" 30/11/06ರಂದು ಡೌನ್‌ಲೋಡ್ ಮಾಡಲಾಗಿದೆ.
- ↑ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್ (ಲಂಡನ್, ಇಂಗ್ಲೆಂಡ್), ಭಾನುವಾರ, ಜನವರಿ 13, 1839.ನ್ಯೂ ರೀಡರ್‌ಶಿಪ್ಸ್
- ↑
- W. ಬ್ಲ್ಯಾಕ್‌ವುಡ್‌ರಿಂದ ಪ್ರಕಟವಾದ ಬ್ಲ್ಯಾಕ್‌ವುಡ್‌ರ ನಿಯತಕಾಲಿಕ, 1862, page 563
- ↑ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್ (ಲಂಡನ್, ಇಂಗ್ಲೆಂಡ್), ಶನಿವಾರ, ಜನವರಿ 07, 1865; ಸಂಚಿಕೆ 2,229: "ಆದರೂ,, Mr J ವೈಲ್ಡ್‌ರವರ ಕೆಲವು ವೈಜ್ಞಾನಿಕ ಚಲನೆಗಳ ಸಹಾಯದಿಂದ ಷೆಫ್‌ಫೀಲ್ಡ್ ತಂಡವು ಗೋಲು ಗಳಿಸಿ ಮುನ್ನಡೆ ಸಾಧಿಸಿದ ರೀತಿ ಹರ್ಷೋದ್ಗಾರಕ್ಕೆ ಕಾರಣವಾಯಿತು"
- ↑
- ಬೆಲ್ಸ್ ಲೈಫ್ ಇನ್ ಲಂಡನ್, ನವೆಂಬರ್ 26ರ 1865, ಸಂಚಿಕೆ 2275: "ನಿಜವಾಗಿಯೂ ಷೆಫ್‌ಫೀಲ್ಡ್ ತಂಡದ ವೈಜ್ಞಾನಿಕ ಆಟದ ರೀತಿ ಮತ್ತು ಆಟಗಾರರ ಚಾಕಚ್ಯಕ್ಯತೆಗಳು ನಮ್ಮನ್ನು ಅಸಹಾಯಕರನ್ನಾಗಿ ಮಾಡಿದವು.
- ↑ Wall, Sir Frederick (2005). 50 Years of Football, 1884-1934. Soccer Books Limited. ISBN 1-8622-3116-8.
- ↑ [Cox, ರಿಚರ್ಡ್ (2002) ದಿ ಎನ್ಸೈಕ್ಲೊಪಿಡಿಯಾ ಆಫ್ ಬ್ರಿಟಿಷ್ ಫುಟ್‌ಬಾಲ್, ರಾಟ್ಲೆಡ್ಜ್, ಯುನೈಟೆಡ್ ಕಿಂಗ್‌ಡಮ್]
- ↑ "ಫುಟ್‌ಬಾಲ್‌ನ ಇತಿಹಾಸ". Archived from the original on 2007-10-18. Retrieved 2009-10-26.
- ↑ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್, 18 ಡಿಸೆಂಬರ್ 1869
- ↑
- ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್, 5 ನವೆಂಬರ್1870,ಸಂಚಿಕೆ 2
- ↑ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್, 18 ನವೆಂಬರ್ 1871,ಸಂಚಿಕೆ 2, 681
- ↑ ಬೆಲ್ಸ್ ಲೈಫ್ ಇನ್ ಲಂಡನ್ ಅಂಡ್ ಸ್ಪೋರ್ಟಿಂಗ್ ಕ್ರಾನಿಕಲ್, 17 ಫೆಬ್ರವರಿ 1872,ಸಂಚಿಕೆ 2694
- ↑ ದಿ ಡರ್ಬಿ ಮರ್ಕ್ಯುರಿ (ಡರ್ಬಿ, ಇಂಗ್ಲೆಂಡ್), ಬುಧವಾರ, ಮಾರ್ಚ್ 20, 1872; ಸಂಚಿಕೆ 8226
- ↑ Murphy, Brendan (2007). From Sheffield with Love. Sports Book Limited. p. 59. ISBN 978-1-899807-56-7.
- ↑ ಅಸೋಸಿಯೇಷನ್ ಫುಟ್‌ಬಾಲ್, CW ಅಲ್‌ಕಾಕ್‌ರ ಅಧ್ಯಾಯ, ಆಂಗ್ಲ ಸಚಿತ್ರ ನಿಯತಕಾಲಿಕ 1891, ಪುಟ 287
- ↑ Harvey, Adrian (2005). [http ://books.google.com/books?id=TxoZ0S-GC7MC Football, the First Hundred Years]. Routledge. pp. 273, ref 34–119. ISBN 0-415-35019-0.
{{cite book}}
: Check|url=
value (help) - ↑ ಸ್ಸನಾಡಿ ಅರ್ಪದ್, ಹಂಗೇರಿಯನ್ ಕೋಚಿಂಗ್ ಮ್ಯಾನುಯೆಲ್ "ಸಾಕ್ಕರ್", ಕಾರ್ವಿನ, ಬುಡಾಪೆಸ್ಟ್ 1965
- ↑ ವಿಲ್ಸನ್ ಜಾನ್‌ಹಟನ್, ಇನ್ವರ್ಟಿಂಗ್ ದಿ ಪಿರಮಿಡ್: ಎ ಹಿಸ್ಟರಿ ಆಫ್ ಫುಟ್‌ಬಾಲ್ ಟ್ಯಾಕ್ಟಿಕ್ಸ್ , ಒರಿಯನ್, 2008
- ↑ Harvey, Adrian (2005). Football, the First Hundred Years. Routledge. pp. 95–99. ISBN 0415350190.
- ↑ Murphy, Brendan (2007). From Sheffield with Love. Sports Book Limited. pp. 41–43. ISBN 9781899807 56 7.
- ↑ "Letter from Tom Wills". MCG website. Archived from display&articleid=37 the original on 2006-07-11. Retrieved 2006-07-14.
{{cite web}}
: Check|url=
value (help) - ↑ "The Origins of Australian Rules Football". MCG website. Archived from [http ://www.mcg.org.au/default.asp?pg=footballdisplay&articleid=36 the original] on 2007-06-11. Retrieved 2007-06-22.
{{cite web}}
: Check|url=
value (help) - ↑ net.au/rn/ deakin/stories/s291489.htm ಸ್ಪೋರ್ಟ್: ಟಚ್‌ಸ್ಟೋನ್ ಆಫ್ ಆಸ್ಟ್ರೇಲಿಯನ್ ಲೈಫ್ Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ. ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಮಿಷನ್. ಪ್ರಥಮ ಬಾರಿಗೆ ಗುರುವಾರ 17/05/01ರಂದು ಪ್ರಸಾರ ಮಾಡಿತು
- ↑ Peter Shortell. Hacking - a history Archived 2008-04-03 ವೇಬ್ಯಾಕ್ ಮೆಷಿನ್ ನಲ್ಲಿ., Cornwall Referees Society Archived 2008-03-03 ವೇಬ್ಯಾಕ್ ಮೆಷಿನ್ ನಲ್ಲಿ., 2 October 2006
- ↑ John Simkin. Ebenezer Cobb Morley Archived 2008-05-14 ವೇಬ್ಯಾಕ್ ಮೆಷಿನ್ ನಲ್ಲಿ., Spartacus Educational. Accessed 22 May 2008
- ↑ Summers, Mark. "The Disability Football Directory". Archived from the original on 2018-10-09. Retrieved 2021-08-09.
- ↑ ಸೇನ್ ಫಂಜೆನ್, ಬ್ರೇಕಿಂಗ್ ದಿ ಕೋಡ್ಸ್ Archived 2006-10-21 ವೇಬ್ಯಾಕ್ ಮೆಷಿನ್ ನಲ್ಲಿ., RL1908.com , 2006
ಆಕರಗಳು
ಬದಲಾಯಿಸಿ- ಮ್ಯನ್‌ಡೆಲ್‌ಬಾಮ್, ಮೈಕಲ್ (2004); ದಿ ಮೀನಿಂಗ್ ಆಫ್ ಸ್ಪೋರ್ಟ್ಜ್ ; ಪಬ್ಲಿಕ್ ಅಫೇರ್ಸ್, ISBN 1-58648-252-1
- ಗ್ರೀನ್, ಜೆಫ್ರಿ (1953); ದಿ ಹಿಸ್ಟರಿ ಆಫ್ ದಿ ಫುಟ್‌ಬಾಲ್ ಅಸೋಸಿಯೇಶನ್ ; ನಲ್‌ಡ್ರೆತ್ತ್ ಪ್ರೆಸ್, ಲಂಡನ್
- ವಿಲಿಯಮ್ಸ್, ಗ್ರಹಮ್ (1994); ದಿ ಕೋಡ್ ವಾರ್ ; ಯೋರ್ ಪಬ್ಲಿಕೇಷನ್ಸ್, ISBN 1-874427-65-8
ಹೊರಗಿನ ಕೊಂಡಿಗಳು
ಬದಲಾಯಿಸಿFind more about Football at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |