ಫಾತಿಮತ್ ಧಿಯಾನಾ ಸಯೀದ್


ಫಾತಿಮತ್ ಧಿಯಾನಾ ಸಯೀದ್ (೨೨ ನವೆಂಬರ್ ೧೯೭೪) ಇವರು ಮಾಲ್ಡೀವ್ಸ್‌ನ ರಾಜತಾಂತ್ರಿಕರಾಗಿದ್ದು, ಸೌತ್ ಏಷಿಯನ್ ಅಸೋಸಿಯೇಷನ್ ಫೊರ್ ರಿಜಿಯನಲ್ ಕೊರ್ಪೊರೇಷನ್(ಎಸ್‌ಎ‌ಎಅರ್‌ಸಿ) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೫ ರಲ್ಲಿ, ಸಂಸ್ಥೆ ಪ್ರಾರಂಭವಾದಾಗಿನಿಂದ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಇವರಾಗಿದ್ದಾರೆ. ಫೆಬ್ರವರಿ ೨೦೧೧ ರಲ್ಲಿ, ಸಾರ್ಕ್ ಮಂತ್ರಿಮಂಡಲದ ಮೂವತ್ತಮೂರನೇ ಅಧಿವೇಶನದಲ್ಲಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ಮಾರ್ಚ್ ೧, ೨೦೧೧ ರಂದು ಕಠ್ಮಂಡುವಿನಲ್ಲಿ ಅಧಿಕಾರ ವಹಿಸಿಕೊಂಡರು. ಅವರು ಭಾರತದ ಶೀಲ್ ಕಾಂತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿದ್ದರು. ಅವರ ಅಧಿಕಾರಾವಧಿ ಫೆಬ್ರವರಿಯಲ್ಲಿ ಕೊನೆಗೊಂಡಿತು.

ಫಾತಿಮತ್ ಧಿಯಾನಾ ಸಯೀದ್
ފާތިމަތު ދިޔާނާ ސައީދު
೨೦೧೨ ರಲ್ಲಿ, ಧಿಯಾನಾ ಸಯೀದ್.

ಲಿಂಗ, ಕುಟುಂಬ ಮತ್ತು ಮಾನವ ಹಕ್ಕುಗಳ ಸಚಿವರು.
ಅಧಿಕಾರ ಅವಧಿ
೭ ಮೇ ೨೦೧೨ – ೧೯ ನವೆಂಬರ್ ೨೦೧೨
ರಾಷ್ಟ್ರಪತಿ ಮೊಹಮ್ಮದ್ ವಹೀದ್
ಪೂರ್ವಾಧಿಕಾರಿ ಸಚಿವಾಲಯ ರಚನೆ
ಉತ್ತರಾಧಿಕಾರಿ ಮರಿಯಮ್ ಶಕೀಲಾ

ಅಧಿಕಾರ ಅವಧಿ
೧ ಮಾರ್ಚ್ ೨೦೧೧ – ೨೪ ಜನವರಿ ೨೦೧೨
ಪೂರ್ವಾಧಿಕಾರಿ ಶೀಲ್ ಕಾಂತ್ ಶರ್ಮಾ
ಉತ್ತರಾಧಿಕಾರಿ ಅಹ್ಮದ್ ಸಲೀಂ

ಅಧಿಕಾರ ಅವಧಿ
೧೨ ನವೆಂಬರ್ ೨೦೦೮ – ೧೯ ಮೇ ೨೦೦೯
ರಾಷ್ಟ್ರಪತಿ ಮೊಹಮ್ಮದ್ ನಶೀದ್
ಪೂರ್ವಾಧಿಕಾರಿ ಅಜೀಮಾ ಶುಕೂರ್
ಉತ್ತರಾಧಿಕಾರಿ ಹುಸ್ನು ಅಲ್ ಸೂದ್
ವೈಯಕ್ತಿಕ ಮಾಹಿತಿ
ಜನನ (1974-11-22) ೨೨ ನವೆಂಬರ್ ೧೯೭೪ (ವಯಸ್ಸು ೫೦)[ಸಾಕ್ಷ್ಯಾಧಾರ ಬೇಕಾಗಿದೆ]
ಹಿತಧೂ, ಅಡ್ಡು ನಗರ, ಸೀನು ಅಟಾಲ್, ಮಾಲ್ಡೀವ್ಸ್
ರಾಷ್ಟ್ರೀಯತೆ ಮಾಲ್ಡೀವಿಯನ್
ಅಭ್ಯಸಿಸಿದ ವಿದ್ಯಾಪೀಠ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯ (ಎಲ್.ಎಲ್.ಬಿ)
ಒಸಾಕಾ ವಿಶ್ವವಿದ್ಯಾಲಯ (ಎಮ್.ಎಲ್.ಎಮ್.)[]

ಅವರು ಈ ಹಿಂದೆ ಮಾಲ್ಡೀವ್ಸ್‌ನ ಅಟಾರ್ನಿ ಜನರಲ್ ಆಗಿದ್ದರು ಮತ್ತು ದಕ್ಷಿಣ ಏಷ್ಯಾಕ್ಕಾಗಿ ಮಾಲ್ಡೀವ್ಸ್ ಸರ್ಕಾರದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಲಾ ಅಂಡ್ ಪಾಲಿಟಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಆರಂಭಿಕ ವರ್ಷಗಳು ಮತ್ತು ಶಿಕ್ಷಣ

ಬದಲಾಯಿಸಿ

ಧಿಯಾನಾ ಸಯೀದ್‌ರವರು ಮಾಲ್ಡೀವ್ಸ್‌ನ ಹಿತಧೂ (ಆಧುನಿಕ ಅಡ್ಡು ನಗರ) ನಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾಲ್ಡೀವ್ಸ್‌ನಲ್ಲಿ ಪಡೆದರು. ೨೦೦೦ ರಲ್ಲಿ, ಅವರು ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ಸ್ ಡಿಗ್ರಿ ಇನ್ ಲಾ (ಎಲ್ಎಲ್‌ಬಿ) ಪಡೆದರು. ೨೦೦೪ ರಲ್ಲಿ, ಅವರು ಜಪಾ‌ನ್‌ನ ಒಸಾಕಾ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಲಾ ಅಂಡ್ ಪಾಲಿಟಿಕ್ಸ್‌ನಿಂದ ಮಾಸ್ಟರ್ಸ್ ಡಿಗ್ರಿ ಇನ್ ಲಾ (ಎಲ್ಎಲ್ಎಂ) ಪಡೆದರು.[]

ರಾಜಕೀಯ

ಬದಲಾಯಿಸಿ

ಧಿಯಾನಾ ಸಯೀದ್‌ರವರು ಧಿವೇಹಿ ರಯಿತುಂಗೆ ಪಕ್ಷದ ಸ್ಥಾಪಕ ಸದಸ್ಯರಾಗಿದ್ದಾರೆ ಮತ್ತು ಅದರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ, ಅವರು ಜುಮ್ಹೋರಿ ಪಕ್ಷಕ್ಕೆ ಸೇರಿದರು ಮತ್ತು ಅದರ ಮಹಿಳಾ ವಿಭಾಗದ ನಾಯಕಿಯಾಗಿ ಆಯ್ಕೆಯಾದರು. ಈ ರಾಜಕೀಯ ಅವಧಿಗಳಲ್ಲಿ, ಅವರು ಕಾನೂನು ಸುಧಾರಣೆಗಳು, ಮಾನವ ಹಕ್ಕುಗಳು ಮತ್ತು ಲಿಂಗ ಸಮಸ್ಯೆಗಳು ಮತ್ತು ಮಾಲ್ಡೀವ್ಸ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತದ ಬಲವರ್ಧನೆಗಾಗಿ ಧ್ವನಿ ಎತ್ತಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ಧಿಯಾನಾ ಸಯೀದ್‌ರವರು ೨೦೦೦ ರಲ್ಲಿ, ಅಟಾರ್ನಿ ಜನರಲ್ ಕಚೇರಿಯಲ್ಲಿ ರಾಜ್ಯ ಅಟಾರ್ನಿಯಾಗಿ ತಮ್ಮ ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಜ್ಯ ಅಟಾರ್ನಿಯಾಗಿ, ಅವರು ಸರ್ಕಾರಕ್ಕೆ ಅದರ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಕಾನೂನು ಅಭಿಪ್ರಾಯವನ್ನು ಒದಗಿಸುವ ಕರಡು ಕಾನೂನುಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಅವರು ೨೦೦೫ ರಲ್ಲಿ, ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದರು. ಅದೇ ವರ್ಷದ ಆರಂಭದಲ್ಲಿ, ಅವರು ಪೀಪಲ್ಸ್ ಮಜ್ಲಿಸ್ (ಸಂಸತ್ತು) ಗೆ ನೇಮಕಗೊಂಡರು ಮತ್ತು ಆ ನೇಮಕಾತಿಯ ಕಾರಣದಿಂದಾಗಿ, ಅವರು ಪೀಪಲ್ಸ್ ಸ್ಪೆಷಲ್ ಮಜ್ಲಿಸ್ (ಸಾಂವಿಧಾನಿಕ ಅಸೆಂಬ್ಲಿ) ಸದಸ್ಯರಾದರು. ಸಂಸತ್ತು ಮತ್ತು ಸಾಂವಿಧಾನಿಕ ಅಸೆಂಬ್ಲಿಯ ಸದಸ್ಯರಾಗಿ, ಮಾಲ್ಡೀವ್ಸ್‌ಗೆ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಪರಿಚಯಿಸುವಲ್ಲಿ ಮತ್ತು ಸಾಂವಿಧಾನಿಕ ಮತ್ತು ಕಾನೂನು ಸುಧಾರಣೆಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಸಂವಿಧಾನವನ್ನು ಪೂರ್ಣಗೊಳಿಸಲು ಗಡುವು ಮತ್ತು ಉದ್ದೇಶಿತ ಗಡುವನ್ನು ಪೂರೈಸಲು ಕಾಲಮಿತಿ ವೇಳಾಪಟ್ಟಿಯನ್ನು ಪ್ರಸ್ತಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅಟಾರ್ನಿ ಜನರಲ್

ಬದಲಾಯಿಸಿ

೨೦೦೮ ರಲ್ಲಿ, ಅವರು ಮಾಲ್ಡೀವ್ಸ್‌ನ ಮೊದಲ ಬಹುಪಕ್ಷೀಯ ಸರ್ಕಾರದ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು. ಅಟಾರ್ನಿ ಜನರಲ್ ಆಗಿ, ಮಾಲ್ಡೀವ್ಸ್‌ನಲ್ಲಿ ಹೊಸ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣವನ್ನು ಉಳಿಸಿಕೊಳ್ಳಲು ಅವರು ಪ್ರಮುಖ ಪಾತ್ರ ವಹಿಸಿದರು.[]

೧೮ ಮೇ ೨೦೦೯ ರಂದು, ಅಟಾರ್ನಿ ಜನರಲ್ ಆಗಿ ೬ ತಿಂಗಳ ನಂತರ, ಅಧ್ಯಕ್ಷ ಮೊಹಮ್ಮದ್ ನಶೀದ್ ಅಧಿಕೃತವಾಗಿ ಧಿಯಾನಾ ಸಯೀದ್ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಿದರು. ಪ್ರತಿಪಕ್ಷ ಆಡಳಿತದ ಸಂಸತ್ತಿನಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿರುವ ಕ್ಯಾಬಿನೆಟ್ ಅನ್ನು ಒಟ್ಟುಗೂಡಿಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರ ಕಚೇರಿ ನಂತರ ಹೇಳಿದೆ. ಆದಾಗ್ಯೂ, ಈ ಕ್ರಮವನ್ನು ಆಡಳಿತಾರೂಢ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಕ್ಷ ಮತ್ತು ಧಿಯಾನಾ ಸಯೀದ್‌ರವರು ಸದಸ್ಯರಾಗಿದ್ದ ಜುಮ್ಹೂರಿ ಪಕ್ಷದ ನಡುವಿನ ಮೈತ್ರಿಯನ್ನು ಮುರಿಯುವ ನಿರೀಕ್ಷೆಯಿದೆ ಎಂದು ಸಾಬೀತುಪಡಿಸಿದೆ.

ದಕ್ಷಿಣ ಏಷ್ಯಾದ ರಾಯಭಾರಿ

ಬದಲಾಯಿಸಿ

ಆಗಸ್ಟ್ ೪, ೨೦೧೦ ರಂದು, ಅಧ್ಯಕ್ಷ ಮೊಹಮ್ಮದ್ ನಶೀದ್ ಸಯೀದ್ ಅವರನ್ನು ಮಾಲ್ಡೀವ್ಸ್ ಸರ್ಕಾರದ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ನೇಮಿಸಿದರು. ಅವರು ಮಾರ್ಚ್ ೧, ೨೦೧೧ ರವರೆಗೆ ಈ ಹುದ್ದೆಯನ್ನು ಉಳಿಸಿಕೊಂಡರು.

ಎಸ್‌ಎ‌ಎಆರ್‌ಸಿಯ ಪ್ರಧಾನ ಕಾರ್ಯದರ್ಶಿ

ಬದಲಾಯಿಸಿ

ಎಸ್‌ಎ‌ಎಆರ್‌ಸಿಯ ೧೦ನೇ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ದಿಯಾನಾ ಸಯೀದ್‌ರವರು ಮಾಲ್ಡೀವ್ಸ್‌ನಿಂದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು.[] ಫೆಬ್ರವರಿ ೧೦, ೨೦೧೧ ರಂದು, ಭೂತಾನ್‌ನ ಥಿಂಫುವಿನಲ್ಲಿ ನಡೆದ ಎಸ್‌ಎ‌ಎಆರ್‌ಸಿಯ ಮಂತ್ರಿಮಂಡಲದ ಮೂವತ್ತಮೂರನೇ ಅಧಿವೇಶನದಲ್ಲಿ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು. ಅವರು ಮಾರ್ಚ್ ೧, ೨೦೧೧ ರಂದು ಕಠ್ಮಂಡುವಿನಲ್ಲಿ ಅಧಿಕಾರ ವಹಿಸಿಕೊಂಡರು. ಅಹ್ಮದ್ ತಸ್ಮೀನ್ ಅಲಿ ಮತ್ತು ಖಾಸಿಮ್ ಇಬ್ರಾಹಿಂ ಅವರೊಂದಿಗೆ ಮಾಲ್ಡೀವ್ಸ್ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ರಾಷ್ಟ್ರದ ಆಂತರಿಕ ರಾಜಕೀಯದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರು ೨೪ ಜನವರಿ ೨೦೧೨ ರಂದು ರಾಜೀನಾಮೆ ನೀಡಿದರು.[] ೧೯೮೫ ರಲ್ಲಿ, ಎಸ್‌ಎ‌ಎಆರ್‌ಸಿಯ ಸ್ಥಾಪನೆಯಾದ ನಂತರ, ಅದರ ಪ್ರಧಾನ ಕಾರ್ಯದರ್ಶಿಯೊಬ್ಬರು ತಮ್ಮ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿದ್ದು ಇದೇ ಮೊದಲು ಎಂದು ಸೂಚಿಸಿದೆ.[]

ಲಿಂಗ, ಕುಟುಂಬ ಮತ್ತು ಮಾನವ ಹಕ್ಕುಗಳ ಸಚಿವರು

ಬದಲಾಯಿಸಿ

ಲಿಂಗ, ಕುಟುಂಬ ಮತ್ತು ಮಾನವ ಹಕ್ಕುಗಳ ಸಚಿವಾಲಯದ ರಚನೆಯ ನಂತರ, ಅಧ್ಯಕ್ಷ ಮೊಹಮ್ಮದ್ ವಹೀದ್ ಹಸನ್ ಮಾಣಿಕ್ ಅವರು ಧಿಯಾನಾ ಸಯೀದ್ ಅವರನ್ನು ಸಚಿವರನ್ನಾಗಿ ನೇಮಿಸಿದರು.[] ೧೯ ನವೆಂಬರ್ ೨೦೧೨ ರಂದು, ಅಧ್ಯಕ್ಷ ವಹೀದ್ ದಿಯಾನಾ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಿದರು ಮತ್ತು ಮರಿಯಮ್ ಶಕೀಲಾ ಅವರನ್ನು ಹಂಗಾಮಿ ಮಂತ್ರಿಯಾಗಿ ನೇಮಿಸಿದರು.[][]

ವೈಯಕ್ತಿಕ ಜೀವನ

ಬದಲಾಯಿಸಿ

ಧಿಯಾನಾ ಸಯೀದ್‌ರವರು ಅಬ್ದುಲ್ಲಾ ಜಬೀರ್ ಅವರನ್ನು ವಿವಾಹವಾದರು ಮತ್ತು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Choden, Kuenzang (6 February 2011). "SAARC's council of ministers summit kicks off". Bhutan Times. Archived from the original on 24 July 2011. Retrieved 17 August 2011.
  2. "Secretary General of SAARC". SAARC. Archived from the original on 2011-12-31.
  3. "Dhiyana Saeed dismissed by the President". Dhivehi Observer. 18 May 2009. Retrieved 19 July 2024.
  4. "SAARC appoints Maldivian as first female Secretary General". Haveeru Daily. 10 February 2011. Archived from the original on 14 February 2011. Retrieved 21 March 2011.
  5. "Dhiyana resigns from post of SAARC Secretary General". Sun. 19 January 2012. Archived from the original on 27 February 2022. Retrieved 27 February 2022.
  6. "SAARC Secretary General Fathimath Dhiyana Saeed's resignation accepted". The Economic Times. Press Trust of India. 24 January 2012. Retrieved 19 July 2024.
  7. "President Waheed establishes Ministry of Gender, Family and Human Rights". The President's Office. 7 May 2012. Retrieved 19 July 2024.
  8. "Minister of Gender, Family and Human Rights Dismissed". The President's Office. 19 November 2012. Retrieved 19 July 2024.
  9. "Acting Gender Minister Appointed". The President's Office. 21 November 2012. Retrieved 19 July 2024.


ಬಾಹ್ಯ ಕೊಂಡಿ

ಬದಲಾಯಿಸಿ