ಪಿರಮಿಡ್ (ಗ್ರೀಕ್ ಭಾಷೆಯಲ್ಲಿ "πυραμίς" - ಪಿರಾಮಿಸ್ []) ಒಂದು ಕಟ್ಟಡವಾಗಿದ್ದು, ಹೊರಗಿನ ಮೇಲ್ಭಾಗ ತ್ರಿಕೋನಾಕಾರ ಹೊಂದಿದ್ದು,ಒಂದು ಸ್ಥಳದಲ್ಲಿ ಸೇರಲ್ಪಡುತ್ತದೆ. ಪಿರಮಿಡ್ಡಿನ ತಳಭಾಗವು ತ್ರಿಕೋಣ ಪಾರ್ಶ್ವವನ್ನು, ಚತುಷ್ಟ ಪಾರ್ಶ್ವವನ್ನು, ಅಥವಾ ಯಾವುದಾದರೂ ಬಹುಭುಜಾಕೃತಿ ಆಕಾರ ಹೊಂದಿದ್ದು, ಪಿರಮಿಡ್ಡು ಅಂದರೆ ; ಕಡೆ ಪಕ್ಷ ಮೂರು ಹೊರಗಿನ ಪಾರ್ಶ್ವವನ್ನು , (ಕಡೆ ಪಕ್ಷ ನಾಲ್ಕು ಮುಖ/ಪಾರ್ಶ್ವ ಗಳು ,ತಳಪಾಯವೂ ಸೇರಿದಂತೆ ). ಚೌಕಾಕಾರದ ಪಿರಮಿಡ್ದು,ಚೌಕಾಕಾರದ ತಳವನ್ನು ಹೊಂದಿದ್ದು,ತ್ರಿಕೋನಾಕಾರದ ಹೊರಗಿನ ಮೇಲ್ಭಾಗವನ್ನು ಹೊಂದಿರುವುದು ಸಾಮಾನ್ಯ ವಿಷಯವಾಗಿದೆ.

The Egyptian pyramids of the Giza Necropolis, as seen from the air
Pyramid of the Moon, Teotihuacan
Candi Sukuh in Java, ಇಂಡೋನೇಷ್ಯಾ
Prasat Thom temple at Koh Ker (Cambodia)
Pyramids of Güímar, Tenerife (Spain)
ಖಾಫ್ರದ ಪಿರಮಿಡ್
ಚಂದ್ರನ ಪಿರಮಿಡ್ , ತೆಯೋತಿ ಹುಕಾನ್
ಗುಜ್ಮಾರ್ ನ ಪಿರಮಿಡ್ ಗಳು

ಪಿರಮಿಡ್ಡಿನ ಮುಖ್ಯ ರೂಪ ಮತ್ತು ಅದರ ಬಹಳಷ್ಟು ತೂಕ ನೆಲದ ಕಡೆಗೆ ಕೇಂದ್ರೀಕರಿಸಿದೆ/ಹತ್ತಿರವಾಗಿದೆ ,[] ಅಂದರೆ ಕಡಿಮೆಯ ವಸ್ತುಗಳು ಪಿರಮಿಡ್ಡಿನ ಎತ್ತರದಲ್ಲಿ ,ಮೇಲಿನಿಂದ ಕೆಳಭಾಗಕ್ಕೆ ತಳ್ಳಲ್ಪಡುತ್ತವೆ  : ಈ ರೀತಿಯಾಗಿ ತೂಕದ ಸಮಾನಾಂತರ ಬಿಡುಗಡೆಯು,'ಪ್ರಾಚೀನ ನಾಗರೀಕತೆಯ',ಒಂದು ಶಾಶ್ವತವಾದ ಸ್ಮರಣ ಕಟ್ಟಡಗಳನ್ನು ಸೃಷ್ಟಿಸಲು ಸಕಾರಿಯಾಯಿತು.

ಸಾವಿರಾರು ವರ್ಷಗಳ ಕಾಲದಲ್ಲಿ , ಭೂಮಿ ಯ ಮೇಲೆ ಪಿರಮಿಡ್ದುಗಳು ದೊಡ್ಡ ಕಟ್ಟಡಗಳಾಗಿ ಇದ್ದವು  : ಮೊದಲು ಕೆಂಪು ಪಿರಮಿಡ್ಡು, ದಶುರ್ ನೆಕ್ರೋಪೋಲಿಸ್ ನಲ್ಲಿದ್ದು, ನಂತರ ಖುಫುದೊಡ್ಡ ಪಿರಮಿಡ್ಡು, ಈ ಎರಡೂ 'ಈಜಿಪ್ಟ್ ' ದೇಶದಲ್ಲಿವೆ. ಅದರಲ್ಲಿ ಎರಡನೆಯ 'ಕುಫ್ತು' ಪಿರಮಿಡ್ ಒಂದೇ ಪ್ರಾಚೀನ ಪ್ರಪಂಚದ ಏಳು ಅದ್ಭುತ ಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಇಂದಿಗೂ ಅದು ಎತ್ತರದ ಪಿರಮಿಡ್ ಆಗಿದೆ. ಪ್ರಪಂಚದಲ್ಲಿಯೇ ಎತ್ತರದ ಪಿರಮಿಡ್ ಅನ್ನು ಈವರೆವಿಗೂ ನಿರ್ಮಾಣ ಮಾಡದೆ ಇದ್ದು, ದೊಡ್ಡ ಚೋಲುಲ ಪಿರಮಿಡ್ ಹೆಚ್ಚಿನ ತನ್ನ ಗಾತ್ರ /ವಿಸ್ತಾರ ಕ್ಕೆ ಹೆಸರುವಾಸಿಯಾಗಿದೆ.ಇದು ಮೆಕ್ಸಿಕನ್ ರಾಜ್ಯದ ಪ್ಯುಬ್ಲ ದಲ್ಲಿ ಇದೆ. ಈ ಪಿರಮಿಡ್ ಅನ್ನು ಇನ್ನೂ ಸಂಶೋಧಿಸಲಾಗುತ್ತಿದೆ

ಪ್ರಾಚೀನ ಸ್ಮಾರಕಗಳು

ಬದಲಾಯಿಸಿ

ಪಿರಮಿಡ್ - ರೂಪದ /ಆಕಾರದ ಕಟ್ಟಡಗಳನ್ನು ಪ್ರಾಚೀನ ನಾಗರೀಕತೆಯಿಂದ ಕಟ್ಟಲ್ಪಟ್ಟಿದೆ.

ಮೆಸಪಟೋಮಿಯಾ

ಬದಲಾಯಿಸಿ

ಪ್ರಾಥಮಿಕ ದಿನಗಳಲ್ಲಿ, ಮೆಸೊಪೊಟಮಿಯಾ ಜನರು ನಿರ್ಮಿಸಿದ ಪಿರಮಿಡ್ ಮಾದರಿಯ ಕಟ್ಟಡಗಳನ್ನು ಜಿಗ್ಗುರತ್ಸ ಎಂದು ಕರೆಯಲಾಗುತ್ತದೆ . ಪ್ರಾಚೀನ ಕಾಲದಲ್ಲಿ , ಇವುಗಳಿಗೆ ಗಾಢವಾದ ಬಣ್ಣಗಳನ್ನು ಬಳಿಯಲಾಗುತ್ತಿತ್ತು. ಅಲ್ಲಿಯವರೆಗೂ ಸೂರ್ಯನ ಬಿಸಿಲಿನಲ್ಲಿ ಒಣಗಿಸಲ್ಪಟ್ಟ ಮಣ್ಣಿನ -ಇಟ್ಟಿಗೆಯನ್ನು ಇದಕ್ಕೆ ಬಳಸಲಾಗುತ್ತಿತ್ತು.

ಈಜಿಪ್ಟ್

ಬದಲಾಯಿಸಿ
 
ಈಜಿಪ್ಟಿನ ಪ್ರಾಚೀನ ಪಿರಮಿಡ್ಡು ಗಳು

ತುಂಬಾ ಜನಪ್ರಿಯತೆಯನ್ನು ಹೊಂದಿರುವ ಪಿರಮಿಡ್ದುಗಳೆಂದರೆ ಈಜಿಪ್ತಿಯನ್ ಪಿರಮಿಡ್ ಗಳು — ದೊಡ್ಡ ದೊಡ್ಡ ಕಟ್ಟಡಗಳನ್ನು ,ಇಟ್ಟಿಗೆ ಅಥವಾ ಕಲ್ಲಿನಿಂದ ಕಟ್ಟಲ್ಪಟ್ಟಿದೆ ,ಅದರಲ್ಲಿ ಕೆಲವು ಪ್ರಪಂಚದಲ್ಲೇ ದೊಡ್ಡದಾದ ಕಟ್ಟಡಗಳಾಗಿವೆ . ಪಿರಮಿಡ್ ಗಳು ತನ್ನ ಉನ್ನತ ಸಮಯವನ್ನು ತಲುಪಿದ ಉಚ್ಚ ಸಮಯ ' ಗೀಜ'ದಲ್ಲಿ , 2575-2150 ಬಿ .ಸಿ ಕಾಲದಲ್ಲಿ .[] 2008 ರ ಸುಮಾರಿನಲ್ಲಿ,ಈಜಿಫ್ತಿನಲ್ಲಿ ಸುಮಾರು 138 ಪಿರಮಿಡ್ ಗಳನ್ನು ಸಂಶೋಧಿಸಲಾಯಿತು .[][] 'ಗೀಜಾ'ದ ದೊಡ್ಡ ಪಿರಮಿಡ್,'ಈಜಿಫ್ತಿನಲ್ಲೇ' ದೊಡ್ಡದಾಗಿದ್ದು ,ಪ್ರಪಂಚದಲ್ಲಿಯೇ ಒಂದು ದೊಡ್ಡದಾದ ಪಿರಮಿಡ್ ಆಗಿದೆ. 1400 ರಲ್ಲಿ ನಿರ್ಮಿಸಲಾದ , ಲಿಂಕಾಲ್ನ್ ಆರಾಧನಾ ಮಂದಿರ ಕಟ್ಟಲ್ಪಡುವವರೆಗೆ ,ಇದು ವಿಶ್ವದಲ್ಲೇ ಅತ್ಯಂತ ಎತ್ತರವಾದ ಕಟ್ಟಡಗಳಲ್ಲಿ ಒಂದಾಗಿತ್ತು. ಇದರ ತಳಪಾಯವೇ 52,600 ಚದರ ಮೀಟರ್ ಗಳಷ್ಟು ಪ್ರದೇಶವನ್ನು ಹೊಂದಿತ್ತು. ಪಿರಮಿಡ್ ಗಳು 'ಈಜಿಫ್ಟ್' ಗ ಸೇರಿದಂತೆ ಇದ್ದು , 'ಸುಡಾನ್' 220 ವಿಸ್ತರಿಸಿದ ಪಿರಮಿಡ್ ಗಳನ್ನು ಹೊಂದಿದ್ದು ,ವಿಶ್ವದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಪಿರಮಿಡ್ಡುಗಳಿರುವ ದೇಶವಾಗಿದೆ.[]

ಪ್ರಾಚೀನ ಪ್ರಪಂಚದ ಏಳು ಅದ್ಭುತಗಳಲ್ಲಿ , ಗೀಜಾದಲ್ಲಿರುವ ಮಹಾನ್ ಪಿರಮಿಡ್ಡು ಕೂಡ ಒಂದಾಗಿದೆ. ಇತ್ತೀಚಿನ ದಿನಗಳವರೆಗೂ ಉಳಿದಿರುವ ಪಿರಮಿಡ್ಡು ಇದಾಗಿದೆ. ಪ್ರಾಚೀನ ಈಜಿಫ್ಟಿಯನ್ ಪಿರಮಿಡ್ಡುಗಳ ಮುಖವನ್ನು ಬಿಳಿ ಸುಣ್ಣಕಲ್ಲು ಗಳಿಂದ ಮೆರಗು ಕೊಡಲಾಗಿದೆ, ಹಾಗು ಇದರೊಳಗೆ ಹೆಚ್ಚಿನ ಪ್ರಮಾಣದ ಪಳಿಯುಳಿಕೆಗಳಾದ ಸಮುದ್ರ-ಚಿಪ್ಪುಗಳು [] ಇವೆ . ಹಲವು ಪಿರಮಿಡ್ಡಿನ ಮೇಲ್ಭಾಗದ ಕಲ್ಲುಗಳನ್ನು ತೆಗೆದು,ಅಥವಾ ಬಿದ್ದ ಕಲ್ಲುಗಳನ್ನು ಉಪಯೋಗಿಸಿಕೊಂಡು ,ಕೈರೋಮಸೀದಿ ಗಳನ್ನು ಕಟ್ಟಲಾಗಿದೆ.

ಸುಡಾನ್

ಬದಲಾಯಿಸಿ
 
ಮೆರೋಯಿ ಯಲ್ಲಿನ ನುಬಿಯನ್ ಪಿರಮಿಡ್ ಗಳು

ನುಬಿಯನ್ ಪಿರಮಿಡ್ ಗಳನ್ನು (ಸಮಾರಾಗಿ 220 ರಷ್ಟು ) 'ಸುಡಾನ್' ನ ಮೂರು ಸ್ಥಳಗಳಲ್ಲಿ ನಿರ್ಮಿಸಲಾಗಿದ್ದು,ನಪಟ ಮತ್ತು ಮೆರೋಯಿ ಯ 'ರಾಜ' ಮತ್ತು 'ರಾಣಿ'ಯರ ಸಮಾಧಿಗೆ ಬಳಸಲಾಗಿದೆ . 'ಕುಶ್' ನ ಪಿರಮಿಡ್ಡುಗಳನ್ನು , 'ನುಬಿಯನ್ ಪಿರಮಿಡ್ಡುಗಳು' ಎಂದೂ ಸಹ ಕರೆಯಲಾಗಿದ್ದು,ಈಜಿಫ್ಟಿನ ಪಿರಮಿಡ್ಡುಗಳಿಗಿಂತ ಭಿನ್ನವಾಗಿದೆ. ನುಬಿಯನ್ ಪಿರಮಿಡ್ ಗಳನ್ನು ಈಜಿಫ್ಟಿಯನ್ ಪಿರಮಿಡ್ಡುಗಳಿಗಿಂತ ಭಿನ್ನವಾಗಿ 'ಜಾರು-ಕೋನ'ದಲ್ಲಿ ರಚಿಸಲಾಗಿದೆ. ಅವುಗಳು ಸತ್ತ ರಾಜ ಮತ್ತು ರಾಣಿಯರ ಸಮಾಧಿಗಳಾಗಿವೆ .[] ಸುಡಾನ್ ನಲ್ಲಿ ಇತ್ತೀಚಿನವರೆವಿಗೂ, ಅಂದರೆ 300 ಎ.ಡಿ ವರೆವಿಗೂ ಪಿರಮಿಡ್ಡುಗಳ ನಿರ್ಮಾಣವಾಗಿದೆ.

ಗ್ರೀಸ್‌

ಬದಲಾಯಿಸಿ
 
ಹೆಲ್ಲಿನಿ ಕೋನ್ ನ ಪಿರಮಿಡ್

ಭೂಮಿಯ ಮೇಲ್ಮೈಮೇಲೆ ಚುಕ್ಕೆಗಳ ರೀತಿಯಲ್ಲಿ ಗುರುತಿಸಲ್ಪಟ್ಟ ಸ್ಥಳಗಳನ್ನು ಅಂದಿನ ಕಾಲದ ಪ್ರಾಚೀನ ಪ್ರಯಾಣಿಕರು'ಪಿರಮಿಡ್ ' ಎಂದು ಕರೆಯುತ್ತಿದ್ದರು. 1900 ಮತ್ತು 1960 ರಲ್ಲಿ ಇವುಗಳನ್ನು ಮೊದಲು ಕಂಡುಹಿಡಿದವರು ಅಮೆರಿಕನ್ನರು ಹಾಗು ಜರ್ಮನಿಯನ್ನರು.

ಗ್ರೀಕ್ ಪ್ರಯಾಣಿಕ ಪೌಸನಿಯಸ್, ಎರಡನೇ ಶತಮಾನದ (ಎಡಿ ) ಸುಮಾರಿನಲ್ಲಿ ಪಿರಮಿಡ್ಡಿನ ಕಟ್ಟಡಗಳ ಬಗ್ಗೆ ವಿವರಿಸಿದ್ದಾನೆ. ಅವುಗಳಲ್ಲಿ ಒಂದು ಪಿರಮಿಡ್ ಹೆಲ್ಲೇನಿಕೋನ್ (Ελληνικό ಗ್ರೀಕ್ ಭಾಷೆಯಲ್ಲಿ ) ನ , ಹಳ್ಳಿಯಲ್ಲಿ ಅರ್ಗೋಸ್ ಬಳಿ ,ಟೈರ್ಯ್ನ್ಸ್ [] ಎಂಬ ಹಳೆಯ ಪಳೆಯುಳಿಕೆಗಳ ಬಳಿ ಪತ್ತೆಯಾಗಿದೆ. ಈ ಸಮಾಧಿಯ ಸುತ್ತ ಹೆಣೆದ ಕತೆಯನ್ವಯ ಸ್ಮಾರಕವನ್ನು ಬಹುಮುಖದ / ಪೊಲ್ಯನ್ದ್ರಿಯಾ ಕಟ್ಟಡವನ್ನಾಗಿ ನಿರ್ಮಿಸಲಾಗಿದೆ.ಇದು ಒಂದು ಸಾಮಾನ್ಯ ಸಮಾಧಿಯಾಗಿದೆ. 14 ನೇ ಶತಮಾನದಲ್ಲಿ , ಅರ್ಗೋಸ್ ರವರನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ,ಹೋರಾಡಿ ಮಡಿದ ಸೈನಿಕರುಗಳ ಸಮಾಧಿಗಳಾಗಿವೆ. ಈ ಕಟ್ಟಡಗಳು ಪಿರಮಿಡ್ ಗಳ ಹೋಲಿಕೆಯಲ್ಲಿದ್ದು,ಅರ್ಗೊಲಿಕ್ ಶೀಲ್ಡ್ ಗಳಿಂದ ಅಲಂಕರಿಸಲ್ಪಟ್ಟಿದ್ದು,ಸೈನಿಕರೊಂದಿಗೆ ಇದ್ದ ಸಂಬಂಧವನ್ನು ಬೆಸೆಯುತ್ತದೆ. ಪೌಸನಿಯಸ್ ನು ತನ್ನ ಪ್ರಯಾಣದಲ್ಲಿ ಕಂಡುಕೊಂಡ ಇನ್ನೊಂದು ಕೆಂಚರಿಯ ಪಿರಮಿಡ್,ಬಹುಮುಖದ ರೂಪವನ್ನು ಹೊಂದಿದ್ದು,ಇದನ್ನು ಅರ್ಗಿವೆಸ್ ಮತ್ತು ಸ್ಪಾರ್ಟನ್ಸ್ ರವರಿಗೆ ಮೀಸಲಾಗಿರಿಸಿದ್ದು ,ಇವರು 699 ರಲ್ಲಿ ಹೈಸಿಯಾಯಿ ಯುದ್ಧದಲ್ಲಿ, ಪ್ರಾಣ ಕಳೆದುಕೊಂಡವರಾಗಿದ್ದಾರೆ. ಈಜಿಪ್ಟ್ ನ ಪಿರಮಿಡ್ ಗಳಿಗೆ ಹೋಲಿಸಿ ನೋಡಲು ಇಂದು ಈ ಪಿರಮಿಡ್ ಗಳು ಇಲ್ಲದಿರುವುದು ದುರದೃಷ್ಟಕರ ಜೊತೆಗೆ ಯಾವುದೇ ರೀತಿಯ ಆಧಾರಗಳೂ ಸಹ ಇಲ್ಲದೆ ಇರುವುದು ಈಜಿಪ್ತಿಯನ್ನರ ಪಿರಮಿಡ್ಡು ಗಳಿಗೆ ಇದ್ದ ಹೋಲಿಕೆಯನ್ನು ತೋರಿಸಲಾಗುವುದಿಲ್ಲ.

ಪಿರಮಿಡ್ - ರೀತಿಯ ಹೋಲಿಕೆಯ ಎರಡು ಕಟ್ಟಡಗಳು ಅಧ್ಯಯನ ದೃಷ್ಟಿಯಿಂದ ಉಳಿದಿದ್ದು,ಒಂದು ಹೆಲ್ಲೆನಿಕೊನ್ ಮತ್ತೊಂದು ಲಿಗೌರಿಯನ್ ಹಳ್ಳಿಗಳ ಬಳಿ , ಪ್ರಾಚೀನ ಕಾಲದ 'ಥಿಯೇಟರ್ ಎಪಿದೌರಸ್' ಹತ್ತಿರ ಇವೆ. ಈ ಎರಡು ಪಿರಮಿಡ್ ಗಳ ತಳಪಾಯದ ಕಲ್ಲುಗಳು ಉಳಿದಿದ್ದು,ಇದರಿಂದ ಗ್ರೀಶಿಯಸ್ ಪಿರಮಿಡ್ ಗಳು ಅಸ್ಥಿತ್ವದಲ್ಲಿದ್ದವು ಎಂದು ಹೇಳಬಹುದಾಗಿದೆ. ಈ ಕಟ್ಟಡಗಳನ್ನು ಈಜಿಪ್ಟ್ ನ ಪಿರಮಿಡ್ಡುಗಳ ಮಾದರಿಯ ಹೋಲಿಕೆಯಲ್ಲಿ ಕಟ್ಟಿರುವುದಿಲ್ಲ. ಹೆಲ್ಲೇನಿಕೋನ್ ಮತ್ತು ಲಿಗೌರಿಯನ್ ಕಟ್ಟಡಗಳು 70 ಮೀಟರ್ ಎತ್ತರದಲ್ಲಿದ್ದು,ಮತ್ತು ಸುತ್ತಲೂ ಗೋಡೆಗಳಿಂದ ಮುಚ್ಚಲ್ಪಟ್ಟಿದೆ. ಹೆಲ್ಲೆನಿಕೋ ಪಿರಮಿಡ್ ನ ತಳವು , 9ಮೀಟರ್ ಅಗಲ ಮತ್ತು 7 ಮೀಟರ್ ಉದ್ದದಿಂದ ಕೂಡಿವೆ. ಸ್ಥಳೀಯ ಗಣಿಗಳಲ್ಲಿ ದೊರೆಯುವ ಸುಣ್ಣದ ಕಲ್ಲುಗಳನ್ನೂ ಬಳಸಿ ,ಬೇಕಾದ ಆಕಾರದಲ್ಲಿ ಕತ್ತರಿಸಿ ಪಿರಮಿಡ್ ಗಳನ್ನೂ ಕಟ್ಟಲಾಗಿದೆ. ಗೀಜಾದ ಮಹಾನ್ ಪಿರಮಿಡ್ ಗಳಲ್ಲಿ ಇರುವಂತೆ ಬಿಡಿ ಬಿಡಿ ಇಟ್ಟಿಗೆಗಳನ್ನು ಇಲ್ಲಿ ಉಪಯೋಗಿಸಲಾಗಿರುವುದಿಲ್ಲ. ಈಜಿಪ್ತಿಯನ್ ಪಿರಮಿಡ್ ಗಳಲ್ಲಿರುವಂತೆ, ಚಚ್ಚೌಕವಲ್ಲದ ಆಯತಾಕಾರದ ತಳಪಾಯವನ್ನು ನಿರ್ಮಿಸಲಾಗಿದೆ. ಈ ಸರಳ ರಚನೆಯ ಮಾದರಿಯಲ್ಲಿ ,ಪಿರಮಿಡ್ಡಿನ ತುದಿ ಭಾಗಗಳು ಒಟ್ಟಾಗಿ ಒಂದೆಡೆ ಸೇರುವಂತೆ ನಿರ್ಮಿಸುವುದು ಕಷ್ಟವಾಗಿದೆ. ಇದರಿಂದಾಗಿ ಈ ಪಿರಮಿಡ್ಡಿನ ತುದಿಯು ಮೇಲ್ಚಾವಣಿಯಂತೆ ಅಥವಾ ನಿಲ್ದಾಣ ಕಟ್ಟೆಯಂತೆ ನಿರ್ಮಿಸಲ್ಪಟ್ಟಿದೆ.

ಈ ಕಟ್ಟಡಗಳ ಬಳಿ ಅಥವಾ ಹತ್ತಿರದಲ್ಲಿ ಯಾವುದೇ ಸಮಾಧಿಗಳು ಇರುವುದಿಲ್ಲ. ಬದಲಿಗೆ,ಕೊಠಡಿಗಳು ಇದ್ದು ,ಅದರ ಗೋಡೆಗಳನ್ನು ಒಳಗಿನಿಂದ ಬೀಗ ಹಾಕುವಂತೆ ಕಟ್ಟಲ್ಪಟ್ಟಿವೆ . ಇದರಿಂದ ಮೇಲು ಚಾವಣಿಯ ಜೊತೆಗೆ ಹೊಂದಿಕೊಂಡಂತೆ ಇದ್ದು ,ಈ ಕಟ್ಟಡ ನಿರ್ಮಾಣದಿಂದ ಗಡಿಯಾರ ಸ್ಥಂಭಗಳ ರೀತಿಯಲ್ಲಿ ಉಪಯೋಗಿಸಲ್ಪಟ್ಟಿದೆ. ಮತ್ತೊಂದು ಸಾಧ್ಯ ಸಾಧ್ಯತೆಯ ಪ್ರಕಾರ ಈ ಕಟ್ಟಡಗಳನ್ನು ಪ್ರಾಚೀನ ಕಾಲದ ವೀರಯೋಧರ ನೆನಪಿನ ಸ್ಮಾರಕಗಳಾಗಿ ಕಟ್ಟಲ್ಪಟ್ಟಿವೆ. ಆದರೆ ಒಳಗಿನಿಂದ ಬೀಗ ಹಾಕುವುದರಲ್ಲಿ ಯಾವುದೇ ಉದ್ದೇಶ ಈಡೇರಿದಂತೆ ಆಗಿಲ್ಲ.

ಈ ‘ಪಿರಮಿಡ್ದು ’ಗಳ ಕಾಲವನ್ನು ಗುರುತಿಸಲು,ಅಲ್ಲಿಯ ತಳ ಮಹಡಿಯಲ್ಲಿ ಹಾಗೂ ನೆಲದಲ್ಲಿ ದೊರೆತ ಮಡಿಕೆ ಚೂರು ಪಳಿಯುಳಿಕೆಗಳನ್ನು ಆಧರಿಸಿ ಗುರುತಿಸಲಾಗಿದೆ. ವೈಜ್ಞಾನಿಕ ಪದ್ಧತಿಯನ್ವಯ ಪಿರಮಿಡ್ಡುಗಳ ಕಾಲವು 4 ಹಾಗು 5 ನೇ ಶತಮಾನದ್ದಾಗಿದೆ. ಕೆಲವು ಸಂಶೋಧಕರು ಗುರುತಿಸಿರುವ ದಾಖಲೆಯ ಅನ್ವಯ ಗೀಜಾ ಪಿರಮಿಡ್ ಗಳ ಕಾಲಕ್ಕಿಂತ ಹಳೆಯ ಪಿರಮಿಡ್ದುಗಳು ಪತ್ತೆಯಾಗಿವೆ. ಆದರೆ ಇದರ ಕಾಲವನ್ನು ಕಂಡುಹಿಡಿಯಲು 'ಥರ್ಮಲುಮಿನೆಸ್ಸೆನ್ಸ್'ಕಲ್ಲಿನ [ಸೂಕ್ತ ಉಲ್ಲೇಖನ ಬೇಕು] ಪರೀಕ್ಷೆಯ ಪದ್ಧತಿಯನ್ನು ಅನುಸರಿಸಲಾಗಿದೆ. ಸಾಮಾನ್ಯವಾಗಿ ಈ ಪದ್ಧತಿಯನ್ನು ಮಡಿಕೆ-ಕುಡಿಕೆಗಳ ಕಾಲ ವನ್ನು ಕಂಡುಹಿಡಿಯಲು ಬಳಸಲಾಗುತ್ತದೆ.ಆದರೆ ಇಲ್ಲಿ ಸಂಶೋಧಕರು ಗೋಡೆಗಳ ಸದರಗಳನ್ನು ತೆಗೆದು ಕಾಲವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ವಿಫುಲ ಚರ್ಚೆಗಲಾಗಿದ್ದು,ಈ ‘ಪಿರಮಿಡ್ ’ಗಳು ಈಜಿಪ್ಟ್ ನ ಪಿರಮಿಡ್ಡುಗಳಿಗಿಂತ ಹಳೆಯದೇ ಅಲ್ಲವೇ ಎಂದು ವಿಮರ್ಶೆಗಳಾಗಿದ್ದು ,'ಬ್ಲಾಕ್ ಅಥೆನ 'ವಿವಾದವಾಗಿಯೇ ಉಳಿದಿದೆ. [ಸೂಕ್ತ ಉಲ್ಲೇಖನ ಬೇಕು] ಥೆರ್ಮಲುಮಿನೆಸ್ಸೆನ್ಸ್ ಪದ್ಧತಿಯು ,ಹೊಸ ಪದ್ಧತಿಯಾಗಿದ್ದು,ಅದರ ಅನ್ವಯ ಕಾಲದ ಗುರುತನ್ನು ನಿಗದಿಸುವ ಪ್ರಯತ್ನವಾಗಿದ್ದು ,ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚಿನ ಸಂಶೋಧಕರು ಇದಕ್ಕಾಗಿಯೇ ಪ್ರಯೋಗಾಲಯದ ವೈದ್ಯರುಗಳನ್ನು ಬಾಡಿಗೆ ಪಡೆದಿರುತ್ತಾರೆ. ಅಥೆನ್ಸ್ ನ ಶೈಕ್ಷಣಿಕ ಪದ್ಧತಿ ಯು ತಿಳುವಳಿಕೆ ನೀಡಿದ ಅನ್ವಯ ,ಕಲ್ಲಿನ ಒಳಭಾಗದ ಮೇಲ್ಮಯ್ ಮೇಲೆ ಎಲೆಕ್ಟ್ರಾನ್ಸ್ ಗಳನ್ನೂ ಹಿಡಿದು ,ಆ ಮೂಲಕ ಆ ಕಲ್ಲಿನ ಕಾಲವನ್ನು ಪತ್ತೆ ಹಚ್ಚಲು ಸಾಧ ಸಾಧ್ಯತೆಯನ್ನು ಹೇಳಿದ್ದಾರೆ.

ಈ ಪದ್ಧತಿಯನ್ನು ಅನುಸರಿಸಿ ,ಪಿರಮಿಡ್ಡುಗಳ ಕಾಲವನ್ನು 700 ವರ್ಷಗಳೆಂದು ಹೇಳಬಹುದಾಗಿದೆ. ಇದರಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದರೂ ಅದನ್ನು ಕಡೆಗಣಿಸಬಹುದಷ್ಟೇ ಆಗಿದೆ. ಈ ಪದ್ಧತಿಯನ್ವಯ ಹೆಲ್ಲೆನಿಕೋ ಪಿರಮಿಡ್ ನ ಆಯಸ್ಸನ್ನು 2730 ಬಿಸಿ ಎಂದು ಹೇಳಬಹುದಾಗಿದ್ದು,ಹೆಚ್ಚು ಕಡಿಮೆ ತಪ್ಪುಗಳನ್ನು ಪರಿಗಣಿಸಿದ್ದಲ್ಲಿ '+ 'ಅಥವಾ '-'720 ವರ್ಷದ ವ್ಯತ್ಯಾಸವಿರುತ್ತದೆ. ಲಿಗೌರಿಯಾ ಪಿರಮಿಡ್ ನ ಆಯಸ್ಸು 2260 ಬಿಸಿ ಯಾಗಿದ್ದು,ಅಂದಾಜು ತಪ್ಪು-ಸರಿಯನ್ನು ಪರಿಗಣಿಸುವುದಾದರೆ 714 ವರ್ಷಗಳ ವ್ಯತ್ಯಾಸವಿರುತ್ತದೆ. ಅಂದರೆ ಗೀಜಾದಲ್ಲಿ ಕಾಣಬಹುದಾದ ಸಾಲು ಸಾಲು ಪಿರಮಿಡ್ಡುಗಳ ಕಾಲಕ್ಕಿಂತ ಹಿಂದಿನ ಕಾಲಕ್ಕೆ ಇವು ಬಂದು ನಿಲ್ಲುತ್ತವೆ.ಹಾಗೆಯೇ ಖುಫು ನ ಮಹಾನ್ ಪಿರಮಿಡ್ಡುಗಳ ನಿರ್ಮಾಣದ ನಂತರ ಈ ಪಿರಮಿಡ್ಡುಗಳ ರಚನೆ ಆಗಿರಬಹುದಾಗಿದೆ. ಕೆಲವೊಂದು ಭೂ ತಜ್ಞರ ಪ್ರಕಾರ ,ಕಲ್ಲುಗಳ ಆಯ್ಕೆಯ ಮೂಲಕ ಈ ಸಂಶೋಧನೆ ಮಾದರಿಯಾಗಿವೆ. ಹೆಲ್ಲೆನಿಕೋ ಪಿರಮಿಡ್ಡುಗಳ ಉತ್ಖನನ ಮುಂದುವರಿಸಿದಂತೆ ತಿಳಿಯುವುದೇನೆಂದರೆ , ಈಗಾಗಲೇ ಇದ್ದ ಪಿರಮಿಡ್ಡುಗಳ ಪಳೆಯುಳಿಕೆಗಳ ಮೇಲೆ ಇದನ್ನು ಕಟ್ಟಲಾಗಿದ್ದು,ಹೊಸ ಪದ್ಧತಿಯನ್ನು ಅನುಸರಿಸಿ,ಕಾಲವನ್ನು ಕಂಡುಹಿಡಿಯುವ ಪ್ರಯತ್ನವನ್ನು ತಪ್ಪಾಗಿ, ತರ್ಕಿಸಿದಂತಾಗುತ್ತದೆ.

ಈ 5 ಕಟ್ಟಡಗಳ ಜೊತೆಗೆ , 14 ಕ್ಕಿಂತ ಹೆಚ್ಚು ಪಿರಮಿಡ್-ರೀತಿಯ ಕಟ್ಟಡಗಳಿದ್ದು,ಅಥವಾ ಅದರ ಅವಶೇಷಗಳು ಇದ್ದು,ಗ್ರೀಸಿನ ದೇಶದಾದ್ಯಂತ ಇವು ಹರಡಿಕೊಂಡಿವೆ. ಪ್ರಾಚೀನ ಕಾಲದ ಪ್ರಯಾಣಿಕರ ಮನಸ್ಸಿನಲ್ಲಿ, ಹೆಲ್ಲೆನಿಕೋ ಮತ್ತು ಲಿಗೌರಿಯಾ ಪಿರಮಿಡ್ಡುಗಳು ಮಾತ್ರ ಉಳಿದುಕೊಂಡಂತೆ ಕಂಡು ಬಂದಿದ್ದು,ಇನ್ನುಳಿದ ಯಾವುದೂ ಅದರ ಗಮನಕ್ಕೆ ಬಂದಿರುವುದಿಲ್ಲ.

ಚೀನಾದಲ್ಲಿ ಹಲವಾರು ಚೌಕಾಕಾರದ ಚಪ್ಪಟೆಯಾಕಾರದ -ಶಿರಭಾಗ ವನ್ನು ಹೊಂದಿರುವ ಸಮಾಧಿಗಳು ಇವೆ. ಚೀನಾದ ಮೊದಲನೇ ರಾಜ (ಸಿರ್ಕಾ 221 ಬಿ ಸಿ , ಹಿಂದಿನ 7 ರಾಜಧಾನಿಗಳನ್ನು ಒಂದುಗೂಡಿಸಿದವನು ), ಕ್ವಿನ್ ನ ಮೊದಲನೇ ರಾಜ , ಇವರನ್ನು ಈ ಸಮಾಧಿಗಳಲ್ಲಿ ಎಕ್ಸಿಯನ್ ಮಣ್ಣು ಮಾಡಲಾಗಿದೆ ತದನಂತರದ ಶತಮಾನಗಳಲ್ಲಿ 'ಹ್ಯಾನ್' ವಂಶದ ರಾಜರನ್ನು ಈ ಚಪ್ಪಟೆಯಾಕಾರದ -ಮಾಳಿಗೆ ಪಿರಮಿಡ್/ಸಮಾಧಿಗಳಲ್ಲಿ ಹೂಳಲಾಗಿದೆ .

ಮೆಸೋ ಅಮೆರಿಕ

ಬದಲಾಯಿಸಿ

ಮೆಸೋ ಅಮೆರಿಕ ನ್ ಸಂಸ್ಕೃತಿಯವರುಸಹ ' ಪಿರಮಿಡ್ '-ರೀತಿಯ ಕಟ್ಟಡಗಳನ್ನು ಕಟ್ಟಿರುತ್ತಾರೆ. ಮೆಸೋ ಅಮೆರಿಕನ್ ಪಿರಮಿಡ್ ಗಳು ಸಾಮಾನ್ಯವಾಗಿ ಹಂತಗಳನ್ನು ಹೊಂದಿದ್ದು,ತುದಿಯಲ್ಲಿ ದೇವಸ್ಥಾನಗಳನ್ನು ಹೊಂದಿದೆ.ಇವುಗಳು ಹೋಲಿಕೆಯಲ್ಲಿ ಈಜಿಫ್ಟಿನ ಪಿರಮಿಡ್ ಗಳಿಗಿಂತ ಭಿನ್ನವಾಗಿದ್ದು, ಮೆಸೋಪೊಟಮಿಯನ್ ನ 'ಜಿಗ್ಗುರತ್' ನಂತೆ ಇವೆ.

ಅತಿ ದೊಡ್ಡ ಸುತ್ತಳತೆ ಹೊಂದಿದ ಪಿರಮಿಡ್ದು ಚೋಲುಲ ಮಹಾನ್ ಪಿರಮಿಡ್ ಆಗಿದ್ದು , ಇದು ಮೆಕ್ಸಿಕನ್ ರಾಜ್ಯದ ಪ್ಯುಬ್ಲ ದಲ್ಲಿದೆ . ಈ ಪಿರಮಿಡ್ ಅನ್ನು ಪ್ರಪಂಚದ ದೊಡ್ಡ ದೊಡ್ಡ ಸ್ಮಾರಕ ಎಂದು ತಿಳಿಯಲಾಗಿದೆ, ಹಾಗೂ ಇನ್ನೂ ಉತ್ಖನನದ ಹಾದಿಯಲ್ಲಿದೆ. ಪ್ರಪಂಚದ ಮೂರನೇ ದೊಡ್ಡ ಪಿರಮಿಡ್ ಆಗಿದೆ . ಮೆಕ್ಸಿಕೋ ದಲ್ಲಿನ ತೆಯೋಟಿ ಹೊಕಾನ್ ಎಂಬ ಸ್ಥಳದಲ್ಲಿ ಸೂರ್ಯ ಪಿರಮಿಡ್ ಇದೆ . ಇದು ಸಾಮಾನ್ಯ ಪಿರಮಿಡ್ಡಿನಂತೆ ಇರದೆ'ಸುತ್ತು' ಅಳತೆಯ ರೂಪವನ್ನು ಹೊಂದಿದ್ದು, ಕ್ಯುಯಿ ಕ್ಯುಯಿಲ್ಕೋ ಎಂಬ ಸ್ಥಳದಲ್ಲಿದೆ.ಈಗ ಇದು ಮೆಕ್ಸಿಕೋ ನಗರ ದ ಒಳಗಡೆ ಇದ್ದು,ಮೊದಲನೇ ಶತಮಾನದಲ್ಲಿ, ಕ್ಸಿಟ್ಲ್ ಅಗ್ನಿಪರ್ವತದಲ್ಲಿನ ಸ್ಪೋಟದ 'ಲಾವಾ' ರಸದಿಂದ ಸುತ್ತುವರಿಯಲ್ಪಟ್ಟಿದೆ. ತಿಯುಚಿತ್ಲಾನ್ , ಜಲಿಸ್ಕೋ ಮುಂತಾದ ಕಡೆಗಳಲ್ಲಿ ಹಲವಾರು ವರ್ತುಲಾಕಾರ ಹಂತಗಳನ್ನು ಹೊಂದಿರುವ ಗೌಚಿಮಾನ್ತೋನ್ಸ್ ಎಂಬ ಪಿರಮಿಡ್ಡುಗಳು ಇವೆ . ಮೆಕ್ಸಿಕೋದ ಪಿರಮಿಡ್ ಗಳನ್ನು ಸಾಮಾನ್ಯವಾಗಿ ಮನುಷ್ಯನ ತ್ಯಾಗಕ್ಕೆ ಸಂಕೇತವಾಗಿ ಉಪಯೋಗಿಸಲಾಗಿದೆ.

ಉತ್ತರ ಅಮೇರಿಕ

ಬದಲಾಯಿಸಿ

ಪ್ರಾಚೀನ ಉತ್ತರ ಅಮೆರಿಕ ದ ಹಲವಾರು ಸಮಾಧಿ -ಕಟ್ಟಡ ಸಮಾಜದಲ್ಲಿ ದೊಡ್ಡ ದೊಡ್ಡ ಪಿರಮಿಡ್ ಕಟ್ಟಡಗಳನ್ನು ನಿಲ್ದಾಣ ಸಮಾಧಿ ಮಾದರಿಯಲ್ಲಿ ಕಟ್ಟಿರುತ್ತಾರೆ. ಇವುಗಳಲ್ಲಿಯೆ ದೊಡ್ಡದಾದ ಮತ್ತು ಒಳ್ಳೆಯ ಹೆಸರಾಗಿರುವ ಪಿರಮಿಡ್ ಕಟ್ಟಡವು ಮಾಂಕ್ಸ್ ಸಮಾಧಿ ಯು ಕಾಹೋಕಿಯ ಸ್ಥಳದಲ್ಲಿ ಇದ್ದು, ಗೀಜಾದ ಪಿರಮಿಡ್ ನ ತಳಪಾಯಕ್ಕಿಂತ ದೊಡ್ಡದಾದ ನೆಲ ಪ್ರದೇಶವನ್ನು ಹೊಂದಿದೆ. ಈ ಉತ್ತರ ಅಮೇರಿಕಾದ ಸಮಾಧಿಗಳ ನಿಖರವಾದ ಕಾರ್ಯ ಏನೊಂದು ಗೊತ್ತಿರುವದಿಲ್ಲ,ಆದರೆ ಅಲ್ಲಿನ ಜನರ ದಾರ್ಮಿಕ ಜೀವನದಲ್ಲಿ , ಸಮಾಧಿ-ಕಟ್ಟಡಗಳನ್ನು ಕಟ್ಟುವ ನಿಟ್ಟಿನಲ್ಲಿ ಪ್ರಧಾನ ಪಾತ್ರವನ್ನು ವಹಿಸಲಾಗಿದೆ.

ರೊಮನ್ ಸಾಮ್ರಾಜ್ಯ

ಬದಲಾಯಿಸಿ
 
ರೋಮ್ ನಲ್ಲಿನ ಸೇಸ್ತಿಯಸ್ ಪಿರಮಿಡ್

27-ಮೀಟರ್ -ಎತ್ತರದ ಸೆಸ್ ಶಿಯಸ್ ಪಿರಮಿಡ್ ಅನ್ನು ಮೊದಲನೇ ಶತಮಾನದ ಕೊನೆಯಲ್ಲಿ ಕಟ್ಟಲ್ಪಟ್ಟಿದ್ದು , ಇಂದಿಗೂ ಅಸ್ಥಿತ್ವದಲ್ಲಿದ್ದೂ, ಇದು ಪೋರ್ಟ ಸ್ಯಾನ್ ಪೋಲೋ ಹತ್ತಿರದಲ್ಲಿದೆ . ಮತ್ತೊಂದು, ಮೆಟಾ ರೋಮುಲಿ , ಅಜರ್ ವ್ಯಾಟಿಕಾನಾಸ್ (ಇಂದಿನ ಬೋರ್ಗೋ) ಬಳಿ ಇದ್ದು , 15 ನೇ ಶತಮಾನದ ಅಂತ್ಯದಲ್ಲಿ ನಾಶವಾಗಿದೆ.

ರೋಮನ್ ಯುಗದಲ್ಲಿ ಫ್ರಾನ್ಸ್ ನ ಫಾಲಿಕಾನ್ ಎಂಬಲ್ಲಿ [೧೦]ಪಿರಮಿಡ್ ಕಟ್ಟಲ್ಪಟ್ಟಿದೆ . ಈ ಅವಧಿಯಲ್ಲಿ ಫ್ರಾನ್ಸ್ ನಲ್ಲಿ ಹಲವಾರು ಪಿರಮಿಡ್ಡುಗಳನ್ನು ಕಟ್ಟಲಾಗಿದೆ.

ಮಧ್ಯಯುಗದ ಯುರೋಪ್

ಬದಲಾಯಿಸಿ

ಫ್ಯೂಡಲ್ ಯುಗದಲ್ಲಿ ಕ್ರಿಶ್ಚಿಯನ್ ವಾಸ್ತು ತಜ್ಞರು ಪಿರಮಿಡ್ಡುಗಳನ್ನು, ಯಾವಾಗದಲಾದರೂ ಒಮ್ಮೆ ಎನ್ನುವಂತೆ ಬಳಸುತ್ತಿದ್ದರು. ಉದಾಹರಣೆಗೆ; ಸ್ಯಾನ್ ಸಾಲ್ವಡೋರ್ ನ , ಓವಿಡೋಸ್ ಗೋಥಿಕ್ ಪ್ರಾರ್ಥನಾ ಮಂದಿರದ ಗೋಪುರವೆ ಆಗಿದೆ . ಇದು ಕಲ್ಲುಕುಟಿಕನಿಗೆ ಸಂಬಂಧಿಸಿದ ಕೆಲವು ಕಾರಣಗಳಿಗಾಗಿ ಅಥವಾ ಇತರ ಸೂಚ್ಯ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸುವ ಊಹಾಪೋಹ ಇದೆ.

 
ತಂಜಾವೂರ್ ಪಿರಮಿಡ್ ದೇವಸ್ಥಾನದ ಮುಖ್ಯ ಗೋಪುರ.

ಚೋಳರ ಸಾಮ್ರಾಜ್ಯ ಕಾಲದಲ್ಲಿ ,ದಕ್ಷಿಣ ಭಾರತ ಹಲವು ದೊಡ್ಡದಾದ ಗ್ರಾನೈಟ್ ಶಿಲೆಯ ದೇವಸ್ಥಾನ ಪಿರಮಿಡ್ ಗಳು ಇದ್ದು,ಇಂದಿಗೂ ಅದರಲ್ಲಿ ಕೆಲವು ಧಾರ್ಮಿಕ ಕಾರ್ಯಕ್ಕೆ ಉಪಯೋಗವಾಗುತ್ತಿದೆ. ಉದಾಹರಣೆಗೆ , ತಂಜಾವೂರ್ಬೃಹದೇಶ್ವರ ದೇವಸ್ಥಾನ, ದಾರಸುರಮ್ ನಲ್ಲಿನ, ಗಂಗೈಕೊಂಡಚೋಳಪುರಂ ದೇವಾಲಯ ಮತ್ತು ಐರಾವ ತೇಶ್ವರ ದೇವಸ್ಥಾನ ಗಳು , ಪಿರಮಿಡ್ ದೇವಾಲಯಗಲಾಗಿವೆ. ಆದರೆ ತಮಿಳು ನಾಡಿನ, ಶ್ರೀ ರಂಗಂನಲ್ಲಿರುವ ಶ್ರೀ ರಂಗಂ ಪಿರಮಿಡ್ ದೇವಾಲಯವು ತುಂಬಾ ದೊಡ್ಡದಾಗಿದೆ. ಯುನೆಸ್ಕೋ, ಬೃಹದೇಶ್ವರ ದೇವಾಲಯವನ್ನು 1987 ರಲ್ಲಿ ವಿಶ್ವ ಪ್ರಾಚೀನ /ಪರಂಪರೆ ಪ್ರದೇಶ ಎಂದು ಘೋಷಿಸಿದೆ ; ಹಾಗೆಯೇ 2004[೧೧] ರಲ್ಲಿ ಗಂಗೈಕೊಂಡಚೋಳಪುರಂ ದೇವಾಲಯ ಮತ್ತು ದಾರ ಸುರಮ್ ನಲ್ಲಿನ ಐರಾವತೇಶ್ವರ ದೇವಾಲಯಗಳು ಸಹ ಪರಂಪರೆಯ ರಕ್ಷಿತ ಕಟ್ಟಡಗಳ ಸಾಲಿಗೆ ಸೇರಿವೆ.

ಇಂಡೋನೇಷಿಯ

ಬದಲಾಯಿಸಿ
 
ಬೋರೋ ಬುದರ್ , ಸೆಂಟ್ರಲ್ ಜಾವ .
 
ಸುಕುಹ್ ದೇವಸ್ಥಾನ , ಸೆಂಟ್ರಲ್ ಜಾವ .

ಮೆನ್ಹಿರ್ ನಂತರದ ,ಕಲ್ಲಿನ ಮೇಜು , ಕಲ್ಲಿನ ವಿಗ್ರಹ ; ಆಸ್ಟ್ರೋನಿಶಿಯನ್ ಮೆಗಾಲಿಥಿಕ್ ಸಂಸ್ಕೃತಿಯು ಇಂಡೋನೇಶಿಯ ದಲ್ಲಿ ,ಭೂಮಿ ಮತ್ತು ಕಲ್ಲು ಹಂತ- ಪಿರಮಿಡ್ ಕಟ್ಟಡಗಳನ್ನು ಪುನ್ದೆನ್ ಬೇರುನ್ಡಕ್ ಎಂದು , ಪಂಗ್ಗುಯಂಗನ್ ನಲ್ಲಿ ಸಂಶೋಧಿಸಲಾಗಿದೆ. , ಸಿಸೋಲೋಕ್ ಮತ್ತು ಗುನುಂಗ್ ಪದಂಗ್, ಪಶ್ಚಿಮ ಜಾವ ಗಳಲ್ಲಿದೆ . ಈ ರೀತಿಯ ಕಲ್ಲಿನ ಪಿರಮಿಡ್ ಗಳು,ಸ್ಥಳೀಯ ನಂಬಿಕೆಗಳನ್ವಯ ಬೆಟ್ಟ ಮತ್ತು ಎತ್ತರದ ಪ್ರದೇಶಗಳು ಪೂರ್ವಿಕರ ಒಂದು ಉತ್ಸಾಹದ ವಾಸಸ್ಥಾನಗಳಗಿವೆ.

8 ನೇ ಶತಮಾನದಲ್ಲಿ ಸೆಂಟ್ರಲ್ ಜಾವಬೋರೋ ಬುದುರ್ ಬುದ್ಧಿಸ್ಟ್ ಗಳ ಸ್ಮಾರಕ ನಿರ್ಮಾಣ ಹಂತ ಪಿರಮಿಡ್ಡು ಗಳ ಮೂಲ ವಾಸ್ತುಶಿಲ್ಪವಾಗಿದೆ. ನಂತರ ಜಾವದಲ್ಲಿ ನಿರ್ಮಾಣವಾದ ದೇವಸ್ಥಾನಗಳು ಭಾರತೀಯ ಹಿಂದೂ ವಾಸ್ತು ಶಿಲ್ಪಿಗಳ ಪ್ರಭಾವಕ್ಕೊಳಗಾಗಿದೆ. ಉದಾಹರಣೆಗೆ ,ಪ್ರಂಬನನ್ ದೇವಾಲಯದ ಶಿಖರ ಗೋಪುರ. 15 ನೇ ಶತಮಾನದಲ್ಲಿ , ಜಾವದಲ್ಲಿ ಮಜಾಪಹಿತ್ ಪೂರ್ವ ಕಾಲದಲ್ಲಿ ಆಸ್ಟ್ರೋನೆಶಿಯನ್ ಸ್ವದೇಶ ನಿರ್ಮಿತ ಕಟ್ಟಡಗಳು ಪುನರುಜ್ಜೀವಗೊಂಡಿವೆ. ಇದನ್ನು ಸುಕುಹ್ ದೇವಸ್ಥಾನದಲ್ಲಿ ಕಾಣಬಹುದಾಗಿದ್ದು, ಒಂದು ರೀತಿಯಲ್ಲಿ ಮೆಸೋ ಅಮೆರಿಕನ್ ಪಿರಮಿಡ್ ಅನ್ನು ಹೋಲುತ್ತದೆ .

ಆಧುನಿಕ ಪಿರಮಿಡ್ಡುಗಳು

ಬದಲಾಯಿಸಿ

ಆಧುನಿಕ ಪಿರಮಿಡ್ ಗಳಿಗೆ ಉದಾಹರಣೆಗಳೆಂದರೆ  :

ಚಿತ್ರಸಂಪುಟ

ಬದಲಾಯಿಸಿ

ಇವನ್ನೂ ಗಮನಿಸಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. πυραμίς, ಹೆನ್ರಿ ಜಾರ್ಜ್ ಲಿದ್ದೆಲ್ , ರೋಬರ್ಟ್ ಸ್ಕಾಟ್ , ಎ ಗ್ರೀಕ್ -ಇಂಗ್ಲಿಷ್ ಲೆಕ್ಸಿಕಾನ್ , ಆನ್ ಪೆರ್ಸುಸ್ ಡಿಜಿಟಲ್ ಲೈಬ್ರರಿ
  2. ಸೆಂಟರ್ ಆಫ್ ವಾಲ್ಯೂಮ್ ಇಸ್ ಒನ್ ಥರ್ಡ್ ಆಫ್ ದಿ ವೇ ಅಪ್ – ನೋಡಿ ಸೆಂಟರ್ ಆಫ್ ಮಸ್ಸ್
  3. http://www.ನ್ಯಾಷನಲ್ ಜಿಯಾಗ್ರಾಫಿಕ್ .ಕಾಮ್ /ಪಿರಮಿಡ್ಸ್ /ಟೈಮ್ ಲೈನ್ .html
  4. Slackman, Michael (2008-11-17). "In the Shadow of a Long Past, Patiently Awaiting the Future". The New York Times. Retrieved 2010-04-12. Some Egyptologists, notably Mark Lehner, state that the Ancient Egyptian word for pyramid was mer. {{cite news}}: Cite has empty unknown parameter: |coauthors= (help)
  5. Mark Lehner (2008). The Complete Pyramids: Solving the Ancient Mysteries. p. 34. Thames & Hudson.
  6. "Sudan's past uncovered". BBC News. 2004-09-09. Retrieved 2010-04-12.
  7. ವೀಗಾಸ್ , ಜೆ ., ಪಿರಮಿಡ್ಸ್ ಪ್ಯಾಕಡ್ ವಿಥ್ ಫಾಸ್ಸಿಲ್ ಶೆಲ್ಲ್ಸ್ , ಎಬಿಸಿ ನ್ಯೂಸ್ ಇನ್ ಸೈನ್ಸ್ , <www.abc.net.au/ಸೈನ್ಸ್ /ಆರ್ಟಿಕಲ್ಸ್ /2008/04/28/2229383.htm>
  8. Necia Desiree Harkless (2006). Nubian Pharaohs and Meroitic Kings: The Kingdom of Kush. AuthorHouse. ISBN 1425944965.
  9. ಹೆಲ್ಲೆನಿಕೋ ಪಿರಮಿಡ್ http://www.ಗ್ರೆಕೋರ್ ಪೋರ್ಟ್ .ಕಾಮ್ /ಪಿರಮಿಡ್ಸ್ _ಇನ್ _ಎನ್ಸಿಯಂಟ್ _ಗ್ರೀಸ್ .htm
  10. ಹೆನ್ರಿ ಬ್ರೋಚ್ (1976), ಲ ಮಿಸ್ಟರೀಯೂಸ್ ಪಿರಮಿಡೆ ದೇ ಫಾಲಿಕಾನ್ , ಎಡಿಶನ್ಸ್ ಫ್ರಾನ್ಸ್ -ಎಂಪೈರ್ , ಐ ಎಸ್ ಬಿ ಎನ್ ಬಿ 0000E80 ಜೆ ಡಬ್ಲ್ಯು
  11. http://whc.ಯುನೆಸ್ಕೋ .org/archive/2004/whc04-28com-inf14ae.pdf
  12. http://www.ದಿ ಡಿಜಿಟಲ್ ಗ್ರೂಪ್ .ಕಾಮ್


ಆಕರಗಳು

ಬದಲಾಯಿಸಿ
  • ಪತ್ರಿಸಿಯ ಬ್ಲಾಕ್ ವೆಲ್ ಗಾರಿ ಅಂಡ್ ರಿಚರ್ಡ್ ತಲ್ಕಾತ್ತ್ , "ಸ್ಟಾರ್ ಗೇಜಿಂಗ್ ಇನ್ ಎನ್ಸಿಯಂಟ್ ಈಜಿಪ್ಟ್ ," ಅಸ್ತ್ರೋನೋಮಿ , ಜೂನ್ 2006, ಪು.ಪು. 62–67.
  • ಫಾಗನ್ , ಗರ್ರೆತ್ತ್ . " ಆರ್ಕ್ಯಾಲಜಿಕಾಲ್ ಫ್ಯಾಂಟಸೀಸ್ ." ರೌತ್ಲ್ಎಡ್ಗೆ ಫಾಲ್ಮೆರ್ . 2006
"https://kn.wikipedia.org/w/index.php?title=ಪಿರಮಿಡ್&oldid=1253606" ಇಂದ ಪಡೆಯಲ್ಪಟ್ಟಿದೆ