ನಿರ್ವಹಣೆ, ಕಲೆ ಮತ್ತು ವಿಜ್ಞಾನ

ನಿರ್ವಹಣೆ ಕಲೆ ಮತ್ತು ವಿಜ್ಞಾನ ಎರಡೂ ಆಗಿದೆ. ಕೆಳಗೆ ತಿಳಿಸಿದ ಅಂಕಗಳನ್ನು ಸ್ಪಷ್ಟವಾಗಿ ಗಮನಿಸಿದರೆ ನಿರ್ವಹಣೆಯ ಎರಡು ವಿಜ್ಞಾನದ ವೈಶಿಷ್ಟ್ಯಗಳ ಜೊತೆಗೆ ಕಲೆ ರಚಿಸಿರುವ ಬಹಿರಂಗ ಎಂದು ತಿಳಿಯಲಾಗಿದೆ. ಇದು ಸಾರ್ವತ್ರಿಕ ಸತ್ಯ ಹೊಂದಿರುವ ಜ್ಞಾನದ ಸಂಘಟಿತ ದೇಹದ ರಚಿತವಾಗಿದೆ. ವ್ಯವಸ್ಥಾಪಕರಿಗೆ ವೈಯಕ್ತಿಕ ಆಸಕ್ತಿ ಹಾಗು ಕೆಲವು ಕೌಶಲ್ಯಗಳ ಅಗತ್ಯವಿದೆ ಏಕೆಂದರೆ ಇದು ಅವರ ಕಲೆಯನ್ನು ಬಿಂಬಿಸುತ್ತದೆ. ವಿಜ್ಞಾನದ ಜ್ಞಾನ ಮತ್ತು ಪರಿಣತಿಗಳನ್ನು ಪ್ರಯೋಗಿಸಲು ಜ್ಞಾನ ಮತ್ತು ಕಲೆ ವ್ಯವಹರಿಸುತ್ತದೆ ಹಾಗು ಒದಗಿಸುತ್ತದೆ.[]

ನಿರ್ವಾಹಕನು ವಿಜ್ಞಾನ ಹಾಗು ಅದನ್ನು ಅನ್ವಯಿಸುವ ಕಲೆ ಜ್ಞಾನ ಪಡೆಯಬೇಕು ಆಗ ಅವನು ತನ್ನ ವೃತ್ತಿಯಲ್ಲಿ ಯಶಸ್ಸನ್ನು ಕಾಣುತ್ತಾನೆ. ತತ್ವಗಳನ್ನು ಅನ್ವಯಿಸುವ ರೀತಿಯಲ್ಲಿ ಕಲೆ ವಿಶೇಷವಾಗಿದೆ. ಆದ್ದರಿಂದ ನಿರ್ವಹಣೆ ವಿಜ್ಞಾನದ ಒಂದು ಹೆಚ್ಚು ತೀರ್ಪು ಸಂಯೋಜನೆಯನ್ನು ಹಾಗೂ ಒಂದು ಕಲೆ ಸಮನ್ವಹಿಸುತ್ತದೆ. ವಿಜ್ಞಾನ 'ಗೊತ್ತಿಲ್ಲ' ಎಂಬುದನ್ನು ಬೋಧಿಸುತ್ತದೆ ಮತ್ತು ಕಲೆ 'ಏನು' ಎಂಬುದನ್ನು ಬೋಧಿಸುತ್ತದೆ. ಉದಾಹರಣೆಗೆ ಅವರು ವಿವಿಧ ರಾಗಗಳ ಬಗ್ಗೆ ಅರಿವು ಮತ್ತು ಅವರು ಹಾಡುವ ಕಲೆಯು ತನ್ನ ವೈಯಕ್ತಿಕ ಕೌಶಲ್ಯವನ್ನು ಅನ್ವಯಿಸುತ್ತದೆ ಹೊರತು ವ್ಯಕ್ತಿಯ ಉತ್ತಮ ಗಾಯಕ ಆಗಲು ಸಾಧ್ಯವಿಲ್ಲ. ಮ್ಯಾನೇಜರ್ ಮೊದಲು ತತ್ವಗಳನ್ನು ತಿಳಿಯಲು ಬೇಕು ಆದರೆ ಅವರು ಏಕೆ, ವಿಜ್ಞಾನ ಮತ್ತು ಕಲೆಯ ಪರಸ್ಪರ ವಿಶೇಷತೆಯನ್ನು ತಿಳಿಯಬೇಕು ಏಕೆಂದರೆ ಅದು ಚಹಾ ಮತ್ತು ಬಿಸ್ಕತ್ತು, ಬ್ರೆಡ್ ಮತ್ತು ಹಾಗೆ ಪರಸ್ಪರ ಪೂರಕವಾಗಿರುತ್ತವೆ. ನಾವು ವಿಜ್ಞಾನ ಮೂಲ ಮತ್ತು ಕಲೆ ಹಣ್ಣು ಎಂದು ಹೇಳಬಹುದು .

ನಿರ್ವಹಣೆ, ಕಲೆ ಮತ್ತು ವಿಜ್ಞಾನ

ವಿಜ್ಞಾನವಾಗಿ ನಿರ್ವಹಣೆ.

ಬದಲಾಯಿಸಿ

ನಿರ್ವಹಣೆ ವಿಜ್ಞಾನವೆ ಅಥವಾ ಅಲ್ಲವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ, ವಿಜ್ಞಾನ ವೆಂದರೇನು ಎಂದು ತಿಳಿದುಕೊಳ್ಳುವುದು ಅತಿ ಅವಶ್ಯ. ಪ್ರಯೋಗ ಅಥವಾ ವಿಚಾರಣೆಯ ಮೂಲಕ ವಿಷಯಗಳನ್ನು ಕ್ರಮಬದ್ಧವಾಗಿ ಸಂಗ್ರಯಿಸಿ, ವಿಶ್ಲೇಷಿಸಿ, ಸಾಮಾನ್ಯ ಅಳವಡಿಕೆಗೆ ಬರುವಂತೆ ಮಾಡುವ ಜ್ಞಾನಕ್ಕೆ "ವಿಜ್ಞಾನ " ಎಂದು ಹೆಸರು. ಅಂದರೆ, ವಿಜ್ಞಾನ ಕೆಳಕಂಡ ಲಕ್ಷಣಗಳನ್ನು ಹೊಂದಿದೆ.

ವಿಜ್ಞಾನದ ಲಕ್ಷಣಗಳು.

ಬದಲಾಯಿಸಿ

೧. ವೈಜ್ಞಾನ ಕಾರಣ ಮತ್ತು ಪರಿಣಾಮಗಳು ನಡುವಿನ ಸಂಬಂಧವನ್ನು ತಿಳಿಸುವಲ್ಲಿ ಸಹಾಯಮಾಡುತ್ತದೆ.

೨. ವೈಜ್ಞಾನಿಕ ವಿಚಾರಣೆ ಅವುಗಳ ಆಧರ.

೩. ವಿಜ್ಞಾನದ ನಿಯಮಗಳು ನಿರ್ದಿಷ್ಟ ಹಾಗೂ ವಿಶ್ವವ್ಯಾಪ್ತಿ.

೪. ನಿರ್ದಿಷ್ಟವಾದ ಫಲಿತಾಂಶವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ.[]

ವಿಜ್ಞಾನದ ಅನೇಕ ಲಕ್ಷಣಗಳನ್ನು ಹೊಂದಿರುವ ನಿರ್ವಹಣೆಯನ್ನು ಸಹ ವಿಜ್ಞಾನವೆಂದು ಪರಿಗಣಿಸಲಾಗಿದೆ.

ಬದಲಾಯಿಸಿ

೧. ಕಾರಣ ಪರಿಣಾಮ ಸಂಬಂಧ.

ಬದಲಾಯಿಸಿ

ನಿರ್ವಹಣ ನಿಯಮಗಳಿಗೂ ಮತ್ತು ಆವುಗಳನ್ನು ನಿಗದಿತ ಸಮಸ್ಯೆಗಳಿಗೆ ಅಳವಡಿಸಿ ಗಳಿಸದ ಫಲಿತಾಂಶಗಳಿಗೂ ಇರುವ ಸಂಬಂಧವನ್ನು ತಿಳಿಯಲು ನಿರ್ವಹಣ ವಿಜ್ಞಾನವು ಸಹಾಯ ಮಾಡುತ್ತದೆ. ಜೊತೆಗೆ, ಸಂದರ್ಭಕ್ಕನುಗುಣವಾಗಿ ನಿಯಮಗಳನ್ನು ಮಾರ್ಪಾಡು ಮಾಡಲು ಆವಕಾಶವಿದೆ.

೨. ವೈಜ್ಞಾನಿಕ ವಿಚಾರಣೆ.

ಬದಲಾಯಿಸಿ

ವೈಜ್ಞಾನಿಕ ನಿಯಮಗಳು ವೈಜ್ಞಾನಿಕ ವಿಚಾರಣೆ ಮತ್ತು ಅವಲೋಕನದ ಮೇಲೆ ಆಧಾರಗೊಂಡಿವೆ. ಅದೇ ರೀತಿ, ನಿರ್ವಹಣಾ ನಿಯಮಗಳುನ್ನು[ಶಾಶ್ವತವಾಗಿ ಮಡಿದ ಕೊಂಡಿ] ಸಹ ಪರೀಕ್ಷಿಸಿ, ಸಿದ್ಥಾಂತಗಳನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ. ಸಾಲದೆ ಅಧ್ಯಯನ, ಚಲನೆಯ ಅಧ್ಯಯನ ಮುಂತಾದವು ವೈಜ್ಞಾನಿಕ ವಿಚಾರಣೆ ಉದಾಹರಣೆಗಳಾಗಿವೆ.

೩. ವಿಶ್ವವ್ಯಾಪ್ತಿ ಅನ್ವಯತೆ.

ಬದಲಾಯಿಸಿ

ನಿರ್ವಹಣ ಸಿದ್ಥಾಂತಗಳು ವಿಶ್ವವ್ಯಾಪಿಯಾಗಿವೆ. ವೈಜ್ಞಾನಿಕ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳು ಅಂದರೆ ಮಾರುಕಟ್ಟೆ, ಹಣಕಾಸು, ಸಿಬ್ಬಂದಿ, ಉತ್ಪಾದನಾ ನಿರ್ವಹಣೆ ಮುಂತಾದವು ಎಲ್ಲ ನಿರ್ವಹಕರೂ ತೀರ್ಮಾನತೆಗೆದುಕೊಳ್ಳುವಲ್ಲಿ ಅವುಗಳನ್ನು ಅನ್ವಯಿಸುತ್ತಾರೆ. ವೈಜ್ಞಾನಿಕ ನಿಯಮಗಳಂತೆ, ನಿರ್ವಹಣಾ ನಿಯಮಗಳನ್ನು ಪರೀಕ್ಷಿಸಿ ವಿವಿಧ ನಿಯಮಗಳು ಫಲಿತಾಂಶವನ್ನು ಮೊದಲೇ ಅಂದಾಜು ಮಾಡಲು ಅವಕಾಶವಿದೆ. ನಿರ್ವಹಣಾ ತಂತ್ರಗಳು ಯಶಸ್ಸು ನಿರ್ವಹಕನ ಸಾಮರ್ಥ್ಯ ಮತ್ತು ದಕ್ಷತೆಯನ್ನು ಅವಲಂಬಿಸಿದೆ.

೪. ನಿರ್ವಹಣೆ ಅನಿರ್ದಿಷ್ಟ ವಿಜ್ಞಾನ.

ಬದಲಾಯಿಸಿ

ಭೌತಶಾಸ್ತ್ರ, ರಸಾಯನಶಾಸ್ತ್ರಗಳಂತೆ, ನಿರ್ವಹಣೆ ನಿರ್ಧಿಷ್ಟ ವಿಜ್ಞಾನವಲ್ಲ, ಏಕೆಂದರೆ ನಿರ್ವಹಣೆ ಸದಾ ಬದಲಾಗುವ ಮತ್ತು ಊಹಿಸಲುಸಾಧ್ಯವಾದ ಮಾನವನ ನಡುವಳಿಕೆಯನ್ನವಲಂಭಿಸಿದೆ. ಆದುದರಿಂದ, ನಿರ್ವಹಣೆ ನಿಯಮಗಳು ನಿರ್ದಿಷ್ಟವಾದುವಲ್ಲ ಮತ್ತು ಅವುಗಳ ಅನುಸರಣೆಯಿಂದ ನಿರ್ಧಿಷ್ಟ ಫಲಿತಾಂಶ ಸದಾಕಾಲವು ದೊರೆಯುವುದಿಲ್ಲ. ಅವು ಸ್ಧಳದಿಂದ ಸ್ಧಳಕ್ಕೆ ಮನುಷ್ಯರಿಂದ ಮನುಷ್ಯರಿಗೆ ಬದಲಾಗುತ್ತಾ ಹೋಗುತ್ತವೆ. ಈ ದೃಷ್ಟಿಯಿಂದ ನಿರ್ವಹಣೆ ಶಾಸ್ತ್ರ ವಿಜ್ಞಾನವಾದರು ಅದು ನಿರ್ಧಿಷ್ಟ ವಿಜ್ಞಾನವಲ್ಲ. ಆದುದರಿಂದ, ನಿರ್ವಹಣೆಯನ್ನು ನಡುವಳಿಕೆ ವಿಜ್ಞಾನವೆಂದು ಕರೆಯಬಹುದು. thumbnail|left|ತಂತ್ರಜ್ಞಾನ

ನಿರ್ವಹಣೆ - ಒಂದು ಕಲೆ.

ಬದಲಾಯಿಸಿ

ನಿರ್ವಹಣೆ ಕಲೆಯೇ ಅಲ್ಲವೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ಕಲೆ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಅತಿ ಅವಶ್ಯ. ಕಲೆ ಎಂದರೆ ನೈಪುಣ್ಯತೆಯಿಂದ ಅನ್ವಯಿಸುವುದೆಂದು ಅರ್ಥ. ಉದಾಹರಣೆಗೆ ಸಂಗೀತ ಒಂದು ಕಲೆ. ನಿರಂತರ ಅಭ್ಯಾಸದಿಂದ ಸಂಗೀತವನ್ನು ಕಲಿಯಲು ಸಾಧ್ಯ. ಕಲೆ ಉದ್ದೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಅಂದರೆ, ಕಲೆ ಕೆಳಕಂಡ ಲಕ್ಷಣಗಳನ್ನು ಹೊಂದಿದೆ.[]

೧. ವ್ಯವಹಾರಿಕ ಜ್ಞಾನ.

೨. ವ್ಯಕ್ತಿಗತ ನೈಪುಣ್ಯತೆ.

೩. ನಿರ್ದಿಷ್ಟ ಫಲಿತಾಂಶಗಳು.

೪. ಸೃಜನಶೀಲತೆ.

೫. ಅಭ್ಯಾಸದ ಮೂಲಕ ಸುಧಾರಣೆ.

ಕಲೆಯಾಗಿ ನಿರ್ವಹಣೆ.

ಬದಲಾಯಿಸಿ

೧. ವ್ಯವಹಾರಿಕ ಜ್ಞಾನ.

ಬದಲಾಯಿಸಿ

ಪ್ರತಿ ಕಲೆಯೂ ಸೈದ್ಥಾಂತಿಕ ಹಾಗು ಪ್ರಾಯೋಗಿಕ ಅಂಶಗಳನ್ನೊಳಗೊಂಡಿದೆ. ಕಲೆ ಒಂದು ಕೆಲಸವನ್ನು ಹೇಗೆ ಮಾಡಬಹುದೆಂಬುದನ್ನು ತಿಳಿಸುತ್ತದೆ. ಅದು ಪಡೆದಿರುವ ಜ್ಞಾನವನ್ನು ಹೇಗೆ ಸೃಜನಾತ್ಮಕವಾಗಿ ಉಪಯೋಗಿಸಬಹುದೆಂಬುದನ್ನು ತಿಳಿಸುತ್ತದೆ. ನಿರ್ವಹಣಾ ಪ್ರಕ್ರಿಯೆ ಒಂದು ಕಲೆ. ಏಕೆಂದರೆ, ಅದು ವ್ಯಾಪಾರದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಡೆದಿರುವ ಜ್ಞಾನ ಅಥವ ಕುಶಲತೆಯನ್ನು ಸಮರ್ಥ್ಯಯವಾಗಿ ಉಪಯೋಗಿಸುವಲ್ಲಿ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಉದ್ದೇಶಿತ ಗುರಿಗಳನ್ನು ಸಾಧಿಸುವ ಕಲೆ ನಿರ್ವಹಣಾಶಾಸ್ತ್ರದಾಗಿದೆ.

೨. ವ್ಯಕ್ತಿಗತೆ ನೈಪುಣ್ಯತೆ.

ಬದಲಾಯಿಸಿ
 
ಸಂಶೋಧನೆ

ಎಲ್ಲಾ ಕಲೆಗಳಂತೆ, ಉದ್ದೇಶಿತ ಗುರಿಗಳನ್ನು ಸಾಧಿಸಲು ಉಪಯೋಗಿಸುವ ವ್ಯಯಕ್ತಿಕ ಕ್ರಿಯೆ ನಿರ್ವಹಣೆ. ಸರಿಯದ ತೀರ್ಮಾನ ಕೈಗೊಳ್ಳುವಲ್ಲಿ ನಿರ್ವಾಹಕನು ತನ್ನದೇ ಆದ ಜ್ಞಾನ ಹಾಗು ಕುಶಲತೆಯನ್ನು ಅಭಿವೃದ್ದಿಪಡಿಸಿಕೊಳ್ಳುತ್ತಾನೆ. ಪೂರ್ವನಿರ್ಧರಿತ ಗುರಿಗಳ ಸಾಧನೆಗಾಗಿ ಪ್ರತಿ ನಿರ್ವಾಹಕನೂ ತನ್ನದೇ ಆದ ಮಾರ್ಗ ಮತ್ತು ರೀತಿಯನ್ನು ಅನುಸರಿಸುತ್ತಾನೆ.

೩. ನಿರ್ಧಿಷ್ಟ ಫಲಿತಾಂಶಗಳು.

ಬದಲಾಯಿಸಿ

ಕಲೆ ಗುರಿಸಾಧನೆಗೆ ಸಂಬಂಧಿಸಿದೆ. ಅದೇರೀತಿ ನಿರ್ವಹಣಾ ಪ್ರಕ್ರಿಯೆಯು ಸಹನಿರ್ದಿಷ್ಟ ಫಲಿತಾಂಶಗಳನ್ನು ಪಡೆಯುವುದರ ಕಡೆ ತನ್ನ ಗಮನ ಹರಿಸುತ್ತದೆ.

೪. ಸೃಜನ ಶೀಲತೆ.

ಬದಲಾಯಿಸಿ

ಪ್ರತಿ ಕಲೆಯೂ ತನ್ನದೇ ಆದ ಸೃಜನ ಶೀಲತೆಯನ್ನು ಹೊಂದಿದೆ. ನಿರ್ವಹಣೆ ಸೃಜನ ಶೀಲ ಕಲೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಏಕೆಂದರೆ, ನಿರ್ವಹಣೆಯು ಗರಿಷ್ಟ ಲಾಭವನ್ನು ಕನಿಷ್ಟ ವೆಚ್ಚದಿಂದ ಹೇಗೆ ಪಡೆಯಬಹುದೆಂಬುದನ್ನು ತಿಳಿಸುತ್ತದೆ. ಹೊಸ ವಿಧಾನಗಳನ್ನು ಸೃಷ್ಟಿಸುವುದರ ಮೂಲಕ ಅಧಿಕ ಫಲಿತಾಂಶವನ್ನು ಪಡೆಯಲು ಶ್ರಮಿಸುವ ಕಲೆ, ನಿರ್ವಹಣೆ ಎಂದು ಹೇಳಬಹುದು.

೫. ಅಭ್ಯಾಸದ ಮೂಲಕ ಸುಧಾರಣೆ.

ಬದಲಾಯಿಸಿ

ಅಭ್ಯಾಸದಿಂದ ನೈಪುಣ್ಯತೆಯನ್ನು ಪಡೆಯಬಹುದು. ನಿರ್ವಾಹಕನು ವ್ಯಾಪಾರವನ್ನು ನಿರ್ವಹಿಸುವ ಕಲೆಯನ್ನು ಅಭ್ಯಸಿಸಿ ನಿರಂತರ ಪರಿಶ್ರಮದ ಮೂಲಕ ನಿಪುಣತೆಯನ್ನು ಸಂಪಾದಿಸುತ್ತಾನೆ.

ನಿರ್ವಹಣೆ ಕಲೆ ಮತ್ತು ವಿಜ್ಞಾನಗಳ ಸಂಯೋಜನೆ.

ಬದಲಾಯಿಸಿ

ನಿರ್ವಹಣೆ ಕಲೆ ಮತ್ತು ವಿಜ್ಞಾನಗಳ ಸಂಯೋಜನೆ. ನಿರ್ವಹಕ ಒಬ್ಬ ವಿಜ್ಞಾನಿಯೂ ಹೌದು, ಕಲೆಗಾರನೂ ಹೌದು. ನಿರ್ವಹಣೆ ವಿಜ್ಞಾನ ಏಕೆಂದೆರೆ ಅದು ವಿಶ್ವವ್ಯಾಪ್ತಿಯಾದ ನಿಯಮಗಳನ್ನು ಹೊಂದಿದೆಯಲ್ಲದೆ ಅವುಗಳನ್ನು ಉಪಯೋಗಿಸುತ್ತದೆ. ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ನಿರಂತರ ಅಭ್ಯಾಸ ಅವಶ್ಯವಾದುದರಿಂದ ನಿರ್ವಹಣೆಯನ್ನು ಕಲೆಯೆಂದು ಪರಿಗಣಿಸಲಾಗಿದೆ. ನಿರ್ವಾಹಕನು ಕೌಶಲ್ಯತೆ ಫಲಿತಾಂಶಗಳನ್ನು ನಿರ್ಧರಿಸುತ್ತದೆ. ಒಳ್ಳೆಯ ನಿರ್ವಹಣೆಗೆ ಸಿದ್ದಾಂತ ಆಚರಣೆ ಎರಡು ಸಮಾನ ಉಪಯೋಗಕಾರಿ. ಯೋಜನೆ, ಗುರಿ, ತೀರ್ಮಾನ ಮತ್ತು ನಿಯಂತ್ರಣಗಳ ವಿಷಯವಾಗಿ ಎಷ್ಟೇ ತಿಳುವಳಿಕೆ ಇದ್ದರು ಅವುಗಳನ್ನು ಅಳವಡಿಸುವ ಶಾಸ್ತ್ರ ಒಂದು ಕಲೆಯಾಗಿದೆ. ನಿರ್ವಹಣಾ ಕ್ಷೇತ್ರದಲ್ಲಿ ಕಲೆ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ನಿರೀಕ್ಷಿತ ಗುರಿಯನ್ನು ಅತ್ಯುತ್ತಮವಾಗಿ ಸಾಧಿಸಲು ಕಲೆ ಮತ್ತು ವಿಜ್ಞಾನ ಎರಡು ಗುಣಗಳನ್ನು ಹೊಂದಿರುವ ಪ್ರಕ್ರಿಯೆ, ನಿರ್ವಹಣೆ ಅತಿ ಅವಶ್ಯ.

ಉದ್ಯೋಗ ( ವೃತ್ತಿಯಾಗಿ) ನಿರ್ವಹಣೆ.

ಬದಲಾಯಿಸಿ
 
ಉದ್ಯೋಗ ನಿರ್ವಹಣೆ

ವ್ಯಾಪಾರ ಕ್ಷೇತ್ರ ಅಭಿವೃದ್ಥಿ ಮತ್ತು ಕಂಪನಿ ವ್ಯಾಪಾರ ಸಂಘಟನೆಯಲ್ಲಿ ನಿರ್ವಹಣೆಗಿರುವ ಮಹತ್ವ, ನಿರ್ವಹಣೆ ಒಂದು ನಿರ್ದಿಷ್ಟ ವೃತ್ತಿಯಾಗಿ ಬೆಳೆಯಲು ಅವಕಾಶಮಾಡಿಕೊಟ್ಟಿದೆ. ವ್ಯವಸ್ದಿತ ತಂತ್ರ, ವಿಶೇಷಜ್ಞಾನ, ಕುಶಲತೆ ಮತ್ತು ತರಬೇತಿಗಳನ್ನೊಳಗೊಂಡ ವೃತ್ತಿ ಕ್ರಿಯೆಗೆ, ವೃತ್ತಿಯೆಂದು ಹೆಸರು. ಈ ಕುಶಲತೆ ಮತ್ತು ತರಬೇತಿಗಳನ್ನು ಸ್ವಂತ ತೃಪ್ತಿಗಾಗಿ ಉಪಯೋಗಿಸುವುದರ ಬದಲಾಗಿ ಸಮಾಜದ ಒಳಿತಿಗಾಗಿ ಉಪಯೋಗಿಸಲಾಗುವುದು.

೧. ವಿಶೇಷ ಜ್ಞಾನ.

ಬದಲಾಯಿಸಿ

ಉದ್ಯೋಗ ವ್ಯವಸ್ದಿತ ತಂತ್ರ ಮತ್ತು ತತ್ವಗಳನ್ನೊಳಗೊಂಡ ಒಂದು ವಿಶೇಷ ಜ್ಞಾನ. ಸಫಲ ವೃತ್ತಿಯನಾಗಲು ಈ ಜ್ಞಾನವನ್ನು ಅವಶ್ಯವಾಗಿ ಪಡೆಯಲೇ ಬೇಕು. ಇದು ಎಲ್ಲ ವೃತ್ತಿಗಳಂತೆ ನಿರ್ವಹಣೆಗೂ ಅತಿ ಅವಶ್ಯ. ಉತ್ತಮ ನಿರ್ವಹಕನಾಗ ಬೇಕಾದರೆ, ನಿರ್ವಹಣಾ ತತ್ವಗಳನ್ನು ಅಧ್ಯಯನ ಮಾಡಲೇ ಬೇಕು. ವ್ಯಾಪಾರದ ಜಟಿಲ ಸಮಸ್ಯೆಗಳನ್ನು ನಿವಾರಿಸಲು ವಿಶೇಷ ಜ್ಞಾನ ಮತ್ತು ಅರ್ಹತೆಯನ್ನು ಸಂಪಾದಿಸಲು ನಿರ್ವಾಹಕರು ಪ್ರಯತ್ನಿಸುತ್ತಾರೆ.

೨. ಜ್ಞಾನ ಸಂಪಾದನೆ.

ಬದಲಾಯಿಸಿ

ಒಬ್ಬ ವ್ಯಕ್ತಿ ಒಂದು ವೃತ್ತಿಯಲ್ಲಿ ತೊಡಗಬೇಕಾದರೆ ಜ್ಞಾನ ಸಂಪಾದನೆ ಮತ್ತು ಕುಶಲತೆಯನ್ನು ತರಬೇತಿಯ ಮೂಲಕ ಪಡೆಯುವುದು ಅತಿ ಅವಶ್ಯಕವಾಗಿದೆ. ಈ ದೃಷ್ಟಿಯಿಂದ ನಿರ್ವಹಣೆ ಉದ್ಯೋಗವಲ್ಲ ಏಕೆಂದೆರೆ, ವಿಶೇಷ ಶಿಕ್ಷಣವನ್ನು ನೀಡಲು ಇಂದು ವಿಶ್ವದಾದ್ಯಂತ ಅನೇಕ ಸಂಸ್ಧೆಗಳನ್ನು ಸ್ಧಾಪಿಸಲಾಗಿದೆ. ನಿರ್ವಹಣ ಶಾಸ್ತ್ರದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುವ ಕಲೇಜು ಮತ್ತು ಸಂಸ್ಧೆಗಳನ್ನು ಸ್ಧಾಪಿಸಲಾಗಿದೆ. ಭಾರತದಲ್ಲಿ ನಿರ್ವಹಣೆ ಶಿಕ್ಷಣವನ್ನು ಮೂರು ರಾಷ್ಟ್ರೀಯ ನಿರ್ವಹಣಾ ಸಂಸ್ಧೆಗಳು ಅಂದರೆ ಅಹ್ಮದಾಬಾದ್, ಕಲ್ಕತ್ತ ಮತ್ತು ಬೆಂಗಳೂರಿನಲ್ಲಿರುವ ನಿರ್ವಹಣಾ ಸಂಸ್ಧೆಗಳು ನೀಡುತ್ತಿವೆ. ಜೊತೆಗೆ ಸುಮಾರು ೩೦ ವಿಶ್ವವಿದ್ಯಾನಿಲಯಗಳು ನಿರ್ವಹಣಾ ಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತವೆ. ಇವುಗಳಲ್ಲದೆ ಅನೇಕ ಖಾಸಗಿ ಹಾಗು ಸರ್ಕಾರಿ ಸಂಸ್ಧೆಗಳು, ಸಂಘಗಳು ಮತ್ತು ಸಂಘಟನೆಗಳು ಅಲ್ಪಾವಧಿ ಕೋರ್ಸುಗಳನ್ನು ನಡೆಸುತ್ತಿವೆ.

೩. ನೈತಿಕ ಸಂಹೆತೆ

ಬದಲಾಯಿಸಿ

ವೃತ್ತಿಯೊಂದು ವೃತ್ತಿಗೂ, ನೈತಿಕ ಮಟ್ಟವನ್ನು ನಿರ್ಧರಿಸಲಾಗಿದ್ದು ಆ ವೃತ್ತಿ ಸೇರಿದ ಪ್ರತಿ ವ್ಯಕ್ತಿಯೂ ಆ ಗುಣ ಮಟ್ಟಕ್ಕೆ ಅನುಗುಣವಾಗಿ ವರ್ತಿಸಬೇಕಾದುದು ಅತಿ ಅವಶ್ಯ. ನಿರ್ವಹಣೆಯಲ್ಲಿಯೂ ಔದ್ಯೋಗಿಕ ನಡುವಳಿಕೆ ರೂಪಿಸಲಾಗಿದೆ. ನಿರ್ವಹಣೆಗಾರರಿಗೆ ಸಂಬಂಧಿಸಿದಂತೆ, ವಿಶ್ವವ್ಯಾಪಿ ನೈತಿಕ ಸಂಹಿತೆಗಳು ಇಲ್ಲದಿದ್ದರೂ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಿರ್ವಹಣೆಗಾರರ ನೈತಿಕ ಜವಬ್ದಾರಿ ಹೆಚ್ಚಿದ್ದು, ಒಂದೆ ಸಂಸ್ಧೆಗೆ ಸಂಬಂಧಿಸಿದ ಎಲ್ಲಾ ವರ್ಗಗಳ ಹಿತಾಶಕ್ತಿಯನ್ನು ಕಾಪಾಡುವುದು ನಿರ್ವಹಣೆಗಾರರ ಮುಖ್ಯ ಕರ್ತವ್ಯವಾಗಿದೆ.

೪. ವೃತ್ತಿ ಸಂಘಗಳು.

ಬದಲಾಯಿಸಿ

ಉದ್ಯೋಗವೆಂದು ಪರಿಗಣಿಸಲ್ಪಡುವ ಎಲ್ಲಾ ವೃತ್ತಿಗಳಿಗೂ ಒಂದು ಸಂಘವಿರಬೇಕು. ತಮ್ಮ ವೃತ್ತಿಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ವೃತ್ತಿಯ ವ್ಯಕ್ತಿಗಳಿಗೆ ಒಂದು ಸಂಘವಿರಬೇಕು. ಅಂದರೆ, ನಿರ್ವಾಹಕರು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಭಾರತದಲ್ಲಿ ರಾಷ್ಟ್ರೀಯ ಮಟ್ಟದ ನಿರ್ವಹಣೆ ಸಂಸ್ಧೆ ಇದೆ. ಇದೇ ರೀತಿ, ವಿದೇಶಗಳಲ್ಲಿಯೂ ಸಹ ನಿರ್ವಹಣೆಗಾರರ ಸಂಘಗಳನ್ನು ಸ್ಧಾಪಿಸಲಾಗಿದೆ. ಆದರೆ, ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರಿಗೆ ವೈದ್ಯಕೀಯ ಪರಿಷತ್ತು ಇರುವಂತೆ, ನಿರ್ವಹಣೆಗಾರರ ಏಕ ಮಾತ್ರ ವಿಶೇಷ ಸಂಸ್ಧೆ ಇಲ್ಲ. ಈ ದೃಷ್ಟಿಯಿಂದ ನಿರ್ವಹಣೆಯನ್ನು ಉದ್ಯೋಗವೆಂದು ಪರಿಗಣಿಸಲಾಗುವುದಿಲ್ಲ.

೫. ಸೇವಾ ಮನೋಭಾವ.

ಬದಲಾಯಿಸಿ

ಯಾವುದೇ ವೃತ್ತಿಯಲ್ಲಿ ಯಶಸ್ಸನ್ನು ಹಣದ ರೂಪದಲ್ಲಿ ಅಳೆಯುವುದರ ಬದಲಿಗೆ, ಅದು ಸಲ್ಲಿಸುವ ಸೇವೆಯ ಮೇಲೆ ಅಳೆಯಲಾಗುತ್ತದೆ. ಇದು ನಿರ್ವಹಣೆಗೂ ಅನ್ವಯಿಸುತ್ತದೆ. ಒಟ್ಟಿನಲ್ಲಿ ನಿರ್ವಹಣೆಯನ್ನು ಒಂದು ವೃತ್ತಿಯಂದು ಕರೆಯಲಾಗದಿದ್ದರೂ, ವೈದ್ಯಕೀಯ, ಕಾನೂನು ಮುಂತಾದವುಗಳಂತೆ ಉದ್ಯೋಗದ ಎಲ್ಲಾ ಲಕ್ಷಣಗಳೂ ನಿರ್ವಹಣೆಗೆ ಇವೆ. ನಿರ್ವಹಣೆಯು ಹೊಸ ಕ್ಷೇತ್ರವಾಗಿದ್ದು, ಇದನ್ನು ಕೈಗಾರಿಕಾ ಕ್ರಾಂತಿಯ ನಂತರ ಅಭಿವೃದ್ಧಿಗೊಳಿಸಲಾಗಿದೆ. ಇತ್ತೀಚೆಗೆ, ನಿರ್ವಹಣೆಯನ್ನು ವೃತ್ತಿಯೆಂದು ಪರಿಗಣಿಸಲಾಗಿದ್ದು, ಇಂದು ವ್ಯಾಪಾರ ಸಂಸ್ಧೆಗಳ ಜಟಿಲ ಸಮಸ್ಯಗಳನ್ನು ಪರಿಹರಿಸಲು ನಿರ್ವಹಣಾ ಕುಶಲತೆಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.[]

ರೈಯಿಸ್ ಉದ್ಯೋಗಗಳನ್ನು ೫ ಭಾಗಗಳಾಗಿ ವಿಂಗಡಿಸಿ, ನಿರ್ವಹಣೆಯನ್ನು ವೃತ್ತಿಯೆಂದು ಪರಿಗಣಿಸಬಹುದೆಂದು ಸೂಚಿಸಿದ್ದಾನೆ. ಅವನ ಪ್ರಕಾರ ಸಮಕಾಲೀನ ಕೈಗಾರಿಕಾ ಸಮಾಜದಲ್ಲಿ ೫ ವಿಧವಾದ ಉದ್ಯೋಗಗಳಿವೆ. ಅವುಗಳು ಯಾವುವೆಂದರೆ:

ಬದಲಾಯಿಸಿ

೧. ಈಗಾಗಲೇ ವೃತ್ತಿಯೆಂದು ಪರಿಗಣಿಸಲ್ವಟ್ಟಿರುವುವು - ಉದಾಹರಣೆಗೆ ವೈದ್ಯಕೀಯ ವೃತ್ತಿ.

೨. ಹೊಸ ಉದ್ಯೋಗಗಳು - ಹೊಸ ಜ್ಞಾನದ ಆಧಾರದ ಮೇಲೆ ಪ್ರತಿಷ್ಟಾಪಿಸಿರುವುದು ರಾಸಾಯನ ಶಾಸ್ತ್ರ, ಸಮಾಜ ವಿಜ್ಞಾನಗಳು.

೩. ಅರೆ - ಉದ್ಯೋಗಗಳು - ತಾಂತ್ರಿಕ ಜ್ಞಾನ ಮತ್ತು ಆಚರಣೆಯ ಮೇಲೆ ಆಧಾರಗೊಂಡಿರುವುವು. ಉದಾ: ದಾದಿಯರು, ಉಪಾಧ್ಯಾಯರು ಸಮಾಜ ಸೇವಕರು.

೪. ಉದ್ಯೋಗವೆಂದು ಪರಿಗಣಿಸಲ್ಪಟ್ಟಿರುವುವು ಉದಾ: ಸಿಬ್ಬಂದಿ ಹಾಗು ಮಾರಾಟ ನಿರ್ದೇಶಕರು, ಇಂಜಿನಿಯರುಗಳು.

೫. ಅಂಚಿನಲ್ಲಿ ಉದ್ಯೋಗಗಳು - ತಾಂತ್ರಿಕ ಕುಶಲತೆ ಮೇಲೆ ಆಧಾರಗೊಂಡಿರುವುವು ಉದಾ: ತಂತ್ರಜ್ಞರು, ನಕ್ಷೆಗಾರರು, ಇತ್ಯಾದಿ.

ನಿರ್ವಹಣೆಯನ್ನು ಉದ್ಯೋಗವೆಂದು ಪರಿಗಣಿಸಲ್ಪಟ್ಟಿದ್ದು ಅದು ಈ ದಿಸೆಯಲ್ಲಿ ಶೀಘ್ರವಾಗಿ ಸಾಗುತ್ತದೆ. ನಿರ್ವಹಣೆಯು ೫ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಹೊಂದುತ್ತಿದೆ. ಅವುಗಳೆಂದರೆ,

ಬದಲಾಯಿಸಿ

thumbnail|left|ನಿರ್ವಹಣೆ,ಕಲೆ ಮತ್ತು ವಿಜ್ಞಾನ

೧. ಸಂಘಟಿತ ಹಾಗು ವ್ಯವಸ್ಧಿತ ಜ್ಞಾನ ಶಾಖೆಯಾಗಿ.

೨. ನಿರ್ವಹಣಾ ಶಿಕ್ಷಣವನ್ನು ನೀಡುವ ಸಂಸ್ಧೆಗಳ ಸ್ಥಾಪನೆ.

೩. ನಿರ್ವಹಣೆಗಾರರ ನೈತಿಕ ನಡುವಳಿಕೆಯ ಬಗ್ಗೆ ಒತ್ತು ನೀಡಲಾಗುತ್ತಿರುವುದು.

೪. ವೃತ್ತಿ ಸಮಾಲೋಚಕರ ಸಂಖ್ಯೆಯ ಹೆಚ್ಚಳ ಹಾಗು ಅವರ ಸೇವೆಯ ಬಳಕೆ.

೫. ಬಹು ಸಂಖ್ಯಾತ ನಿರ್ವಹಣಾ ಸಂಘಗಳ ಸ್ಥಾಪನೆ.

ನಿರ್ವಹಣೆ ಕಲೆ ಮತ್ತು ವಿಜ್ಞಾನ ಎರಡೂ ಎಂದು ಕಲ್ಪನೆ. ಕಲೆ ಮತ್ತು ವಿಜ್ಞಾನ ನಿರ್ವಹಣೆಯನ್ನು ಒಳಗೊಂಡ ಒಂದು ಕ್ಲಿಷ್ಟಕರವಾದ ರಿಯಾಲಿಟಿ ಸೂಚಿಸುವ ಒಂದು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿಜ್ಞಾನ ಅನೇಕ ನಿಯಮಗಳನ್ನು ಹೊಂದಿದೆ. ಇದು ಸತ್ಯ ಮತ್ತು ಕಾರಣ ಕೆಲಸವನ್ನು ಉತ್ಪಾದಿಸುತ್ತದೆ - ಅದು ತಂತ್ರಜ್ಞಾನ - ಸ್ವತಂತ್ರ ಫಲಿತಾಂಶಗಳ ಮೂಲಕ ಅಪ್ಲಿಕೇಶನ್ ಪಡೆಯುತ್ತದೆ. ಇದಕ್ಕೆ ವಿರುದ್ಧವಾಗಿ, ಕಲೆಯ ಅತ್ಯಂತ ವೈಯಕ್ತಿಕ ಮತ್ತು ವೈಯಕ್ತಿಕ ಭಾವನೆಗಳನ್ನು ಮತ್ತು ವ್ಯಕ್ತಿಗಳು ಸಮುದಾಯಗಳ ನಡುವೆ ಪರಸ್ಪರ ಕೆಲಸವನ್ನು ಗುರುತಿಸುತ್ತದೆ. ನಿರ್ವಹಣೆ ಎಂಬದು ಕಲ್ಪನೆ ಸಾರ್ವತ್ರಿಕತೆಯಾಗಿದ್ದು ಮತ್ತು ಬಹಳ ಹಳೆಯದಾಗಿದೆ. ವಿವಿಧ ದೃಷ್ಟಿಕೋನಗಳನ್ನು ಕಾಲಕಾಲಕ್ಕೆ ವಿವಿಧ ಬರಹಗಾರರು ಅದರ ಸ್ವರೂಪದ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ ಏಕೆಂದರೆ ನಿರ್ವಹಣಾ ತತ್ವಗಳು ಮತ್ತು ಸಂಸ್ಥೆಗಳ ಆಚರಣೆಗಳ ನಿರಂತರ ಮತ್ತು ಕ್ಷಿಪ್ರ ಅಭಿವೃದ್ಧಿ ನಿರ್ವಹಣೆಯ ಸ್ವರೂಪಗಳು ಬದಲಾಗುತ್ತಿರುತ್ತವೆ.

ಇವುಗಳನ್ನು ನೋಡಿ

ಬದಲಾಯಿಸಿ

ಉಲ್ಲೇಖನ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-04-21. Retrieved 2015-01-28.
  2. http://www.yourarticlelibrary.com/management/6-different-techniques-of-scientific-management/887/
  3. http://www.managementstudyguide.com/management_science.htm
  4. "ಆರ್ಕೈವ್ ನಕಲು". Archived from the original on 2015-02-06. Retrieved 2015-01-28.