ಅಕ್ಕಿನೇನಿ ನಾಗಾರ್ಜುನ ರಾವ್ (ಜನನ ೨೯ ಆಗಸ್ಟ್ ೧೯೫೯) ಇವರು ನಾಗಾರ್ಜುನ ಎಂದು ಕರೆಯಲ್ಪಡುವ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಉದ್ಯಮಿಯಾಗಿದ್ದಾರೆ. ನಾಗಾರ್ಜುನರವರು ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ನಟಿಸಿದ್ದಾರೆ ಹಾಗೂ ಕೆಲವು ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಗಾರ್ಜುನರವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳೆಂದರೆ, ನಿನ್ನೆ ಪೆಲ್ಲದಾಟ (೧೯೯೬), ಇದು ಅವರು ನಿರ್ಮಿಸಿದ ತೆಲುಗಿನ ಅತ್ಯುತ್ತಮ ಚಲನಚಿತ್ರವಾಗಿದೆ ಮತ್ತು ಅನ್ನಮಯ್ಯ (೧೯೯೭) ಈ ಚಿತ್ರದಲ್ಲಿ ನಟನಾಗಿ ವಿಶೇಷ ಉಲ್ಲೇಖವನ್ನು ಗಳಿಸಿದರು. ಇವರು ಹತ್ತು ರಾಜ್ಯ ನಂದಿ ಪ್ರಶಸ್ತಿಗಳು ಮತ್ತು ಮೂರು ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.[]

ನಾಗಾರ್ಜುನ
ಬಿಗ್ ಬಾಸ್ ಸೀಸನ್ ೭ ರ ಮುಕ್ತಾಯ ಸಮಾರಂಭದಲ್ಲಿ ನಾಗಾರ್ಜುನ‌ರವರು.
ಜನನ
ಅಕ್ಕಿನೇನಿ ನಾಗಾರ್ಜುನ ರಾವ್[][]

(1959-08-29) ೨೯ ಆಗಸ್ಟ್ ೧೯೫೯ (ವಯಸ್ಸು ೬೫)[]
ಶಿಕ್ಷಣ ಸಂಸ್ಥೆಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯ (ಬಿ.ಎಸ್.)
ವೃತ್ತಿs
ಸಕ್ರಿಯ ವರ್ಷಗಳುಪ್ರಸ್ತುತ ೧೯೮೬
ಇತರ ಕೆಲಸಗಳುನಾಗಾರ್ಜುನ‌ರವರ ಫಿಲ್ಮೋಗ್ರಫಿ
ಸಂಗಾತಿs
ಲಕ್ಷ್ಮಿ ದಗ್ಗುಬಾಟಿ
(m. ೧೯೮೪; div. ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)
ಮಕ್ಕಳು
ಪೋಷಕ
ಕುಟುಂಬನೋಡಿ ದಗ್ಗುಬಾಟಿ-ಅಕ್ಕಿನೇನಿ ಕುಟುಂಬ
ಪ್ರಶಸ್ತಿಗಳುನಾಗಾರ್ಜುನ‌ರವರು ಸ್ವೀಕರಿಸಿದ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ ಪಟ್ಟಿ

೧೯೮೯ ರಲ್ಲಿ, ನಾಗಾರ್ಜುನರವರು ಮಣಿರತ್ನಂ ಅವರ ನಿರ್ದೇಶನದ ಪ್ರಣಯ ನಾಟಕ ಚಿತ್ರವಾದ ಗೀತಾಂಜಲಿಯಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಅದೇ ವರ್ಷ, ಅವರು ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ ಯಶಸ್ವಿಯಾದ ಶಿವ ಎಂಬ ಕಾರ್ಯತಂತ್ರದ ಚಿತ್ರದಲ್ಲಿ ಹಾಗೂ ೧೩ ನೇ ಐಎಫ್ಎಫ್ಐ '೯೦ ರಲ್ಲಿ ಕಾಣಿಸಿಕೊಂಡರು. ನಾಗಾರ್ಜುನರವರು ೧೯೯೦ ರ ಶಿವ ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.[] ಅನ್ನಮಯ್ಯ (೧೯೯೭) ಚಿತ್ರದಲ್ಲಿ, ೧೫ ನೇ ಶತಮಾನದ ಸಂಗೀತ ಸಂಯೋಜಕರಾದ ಅನ್ನಮಾಚಾರ್ಯ ಮೂಲಕ, ಅಗ್ನಿ ವರ್ಷ (೨೦೦೨) ಚಿತ್ರದಲ್ಲಿ ಯವಕ್ರಿಯಾಗಿ (ಸಂನ್ಯಾಸಿ ಭಾರದ್ವಾಜ ಅವರ ಮಗ), ಎಲ್ಒಸಿ: ಕಾರ್ಗಿಲ್ (೨೦೦೩) ಯುದ್ಧ ಚಿತ್ರದಲ್ಲಿ ಮೇಜರ್ ಪದ್ಮಪಾಣಿ ಆಚಾರ್ಯರಾಗಿ, ೧೭ ನೇ ಶತಮಾನದ ಶ್ರೀ ರಾಮದಾಸು (೨೦೦೬) ಚಿತ್ರದಲ್ಲಿ ಸಂಗೀತ ಸಂಯೋಜಕ ಕಂಚೆರ್ಲಾ ಗೋಪಣ್ಣನಾಗಿ, ರಾಜಣ್ಣ (೨೦೧೧) ಚಿತ್ರದಲ್ಲಿ ಸುದ್ದಲ ಹನ್ಮಂತು ಎಂಬ ಪಾತ್ರದಲ್ಲಿ, ಶಿರಡಿ ಸಾಯಿಯಲ್ಲಿ ಶಿರಡಿಯ ಸಾಯಿಬಾಬಾನಾಗಿ (೨೦೧೨), ಜಗದ್ಗುರು ಆದಿಶಂಕರ (೨೦೧೩) ಚಿತ್ರದಲ್ಲಿ ಚಂಡಾಲುಡು ಎಂಬ ಪಾತ್ರದಲ್ಲಿ ಮತ್ತು ಓಂ ನಮೋ ವೆಂಕಟೇಶಾಯ (೨೦೧೭) ಚಿತ್ರದಲ್ಲಿ ಹಾಥಿರಾಮ್ ಭಾವಾಜಿ ಪಾತ್ರದಲ್ಲಿ ಹೀಗೆ, ಹಲವಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[]

ನಾಗಾರ್ಜುನರವರು ಹೆಚ್ಚಾಗಿ ಕಾರ್ಯತಂತ್ರದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳೆಂದರೆ: ಆಖಾರಿ ಪೊರಟಮ್ (೧೯೮೮), ವಿಕ್ಕಿ ದಾದಾ (೧೯೮೯), ಶಿವ (೧೯೮೯), ನೇತಿ ಸಿದ್ಧಾರ್ಥ (೧೯೯೦), ಚೈತನ್ಯ (೧೯೯೧), ನಿರ್ನಾಯಂ (೧೯೯೧), ಅಂತಮ್ (೧೯೯೨), ಕಿಲ್ಲರ್ (೧೯೯೨), ಖುದಾ ಗವಾ (೧೯೯೨), ರಕ್ಷಣಾ (೧೯೯೩), ಹಲೋ ಬ್ರದರ್ (೧೯೯೪), ಗೋವಿಂದ ಗೋವಿಂದ (೧೯೯೪), ಕ್ರಿಮಿನಲ್ (೧೯೯೪), ರಚ್ಚಗನ್ (೧೯೯೭), ಆಜಾದ್ (೨೦೦೦), ಶಿವಮಣಿ (೨೦೦೩), ಮಾಸ್ (೨೦೦೪), ಸೂಪರ್ (೨೦೦೫), ಮತ್ತು ಡಾನ್ (೨೦೦೭).[]

೨೦೧೩ ರಲ್ಲಿ, ದೆಹಲಿ ಚಲನಚಿತ್ರೋತ್ಸವದ ಭಾರತೀಯ ಸಿನೆಮಾದ ೧೦೦ ವರ್ಷಗಳ ಆಚರಣೆಯಲ್ಲಿ ಅವರು ಬಾಲಿವುಡ್‌ನ ರಮೇಶ್ ಸಿಪ್ಪಿ ಮತ್ತು ವಿಶಾಲ್ ಭಾರದ್ವಾಜ್ ಅವರೊಂದಿಗೆ ದಕ್ಷಿಣ ಭಾರತದ ಸಿನೆಮಾವನ್ನು ಪ್ರತಿನಿಧಿಸಿದರು.[] ೧೯೯೫ ರಲ್ಲಿ, ಅವರು ಸೀಶೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಣ ಘಟಕದೊಂದಿಗೆ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟರು ಮತ್ತು ಹಾರ್ಟ್ ಅನಿಮೇಷನ್ ಎಂಬ ಎಮ್ಮಿ ಪ್ರಶಸ್ತಿ ವಿಜೇತ ಚಲನಚಿತ್ರ ಅನಿಮೇಷನ್ ಕಂಪನಿಯ ಸಹ-ನಿರ್ದೇಶಕರಾಗಿದ್ದರು.[] ನಾಗಾರ್ಜುನರವರು ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯ ಸಹ ಮಾಲೀಕರಾಗಿದ್ದಾರೆ. ಅವರು ಹೈದರಾಬಾದ್ ಮೂಲದ ಲಾಭರಹಿತ ಚಲನಚಿತ್ರ ಶಾಲೆ ಅನ್ನಪೂರ್ಣ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಫಿಲ್ಮ್ ಅಂಡ್ ಮೀಡಿಯಾದ ಅಧ್ಯಕ್ಷರಾಗಿದ್ದಾರೆ.[೧೦]

ಆರಂಭಿಕ ಜೀವನ ಮತ್ತು ಕುಟುಂಬ

ಬದಲಾಯಿಸಿ

ನಾಗಾರ್ಜುನರವರು ೨೯ ಆಗಸ್ಟ್ ೧೯೫೯ ರಂದು ಮದ್ರಾಸ್‌ನಲ್ಲಿ (ಇಂದಿನ ಚೆನ್ನೈ) ತೆಲುಗು ಕುಟುಂಬದಲ್ಲಿ ಹಿರಿಯ ನಟರಾದ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಅವರ ಪತ್ನಿ ಅನ್ನಪೂರ್ಣ ದಂಪತಿಗಳಿಗೆ ಮಗನಾಗಿ ಜನಿಸಿದರು.[೧೧] ಅವರ ಕುಟುಂಬವು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ರಾಮಪುರಂ ಮೂಲದವರು. ಅವರ ತಂದೆ ನಟನಾಗಿ ಅವರ ವೃತ್ತಿಜೀವನವನ್ನು ಹುಡುಕಿಕೊಂಡು ಮದ್ರಾಸ್‌ಗೆ ತೆರಳಿದರು.[೧೨]

ನಂತರ ಕುಟುಂಬವು ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಹೈದರಾಬಾದ್‌ನ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು ಮತ್ತು ಹೈದರಾಬಾದ್‌ನ ಲಿಟಲ್ ಫ್ಲವರ್ ಜೂನಿಯರ್ ಕಾಲೇಜಿನಲ್ಲಿ ಮಧ್ಯಂತರ ಶಿಕ್ಷಣವನ್ನು ಪಡೆದರು.[೧೩] ಅವರು ಮದ್ರಾಸ್‌ನ ಅಣ್ಣಾ ವಿಶ್ವವಿದ್ಯಾಲಯದ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಒಂದು ವರ್ಷವನ್ನು ಪೂರ್ಣಗೊಳಿಸಿದರು.[೧೪] ಮಾಜಿ ಭಾರತೀಯ ಕ್ರಿಕೆಟಿಗರಾದ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ ಎಂಜಿನಿಯರಿಂಗ್ ವಿದ್ಯಾಭ್ಯಾಸದ ದಿನಗಳಲ್ಲಿ ಅವರ ಕಾಲೇಜು ಸಹಪಾಠಿಯಾಗಿದ್ದರು ಮತ್ತು ಮಿಚಿಗನ್‌ನ ಯಿಪ್ಸಿಲಾಂಟಿಯಲ್ಲಿರುವ ಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ ಪದವಿ ಪಡೆದರು.

ಫೆಬ್ರವರಿ ೧೯೮೪ ರಲ್ಲಿ,[೧೫] ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರಾದ ಡಿ.ರಾಮಾನಾಯ್ಡು ಅವರ ಪುತ್ರಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ವಿವಾಹವಾದರು. ಇವರು ನಟ ವೆಂಕಟೇಶ್ ಮತ್ತು ನಿರ್ಮಾಪಕ ಸುರೇಶ್ ಬಾಬು ಅವರ ಸಹೋದರಿ. ಲಕ್ಷ್ಮಿ ಮತ್ತು ನಾಗಾರ್ಜುನ ದಂಪತಿಗೆ ನಟ ನಾಗಚೈತನ್ಯ ಇವರು (೨೩ ನವೆಂಬರ್ ೧೯೮೬) ರಂದು ಜನಿಸಿದರು. ಆದಾಗ್ಯೂ, ದಂಪತಿಗಳು ೧೯೯೦ ರಲ್ಲಿ ವಿಚ್ಛೇದನ ಪಡೆದರು. ನಾಗಾರ್ಜುನರವರು ನಂತರ ೧೧ ಜೂನ್ ೧೯೯೨ ರಂದು ನಟಿ ಅಮಲಾ ಅವರನ್ನು ವಿವಾಹವಾದರು ಮತ್ತು ಈ ದಂಪತಿಗೆ ನಟ ಅಖಿಲ್ (೮ ಏಪ್ರಿಲ್ ೧೯೯೪) ಇವರು ಮಗನಾಗಿ ಜನಿಸಿದರು.

ವೃತ್ತಿಜೀವನ

ಬದಲಾಯಿಸಿ

ನಾಗಾರ್ಜುನರವರು ೧೯೬೭ ರಲ್ಲಿ, ಅದುರ್ತಿ ಸುಬ್ಬರಾವ್ ಅವರ ನಿರ್ದೇಶನದ ತೆಲುಗು ಚಿತ್ರವಾದ ಸುಡಿಗುಂಡಲು ಇದರಲ್ಲಿ ಬಾಲ ಕಲಾವಿದನಾಗಿ ನಟಿಸಲು ಪ್ರಾರಂಭಿಸಿದರು. ಶ್ರೀ ಶ್ರೀ ಅವರು ಬರೆದ ವೇಲುಗು ನೀಡಲು ಚಿತ್ರದಲ್ಲಿ ಅವರು ಶಿಶುವಿನ ಪಾತ್ರದಲ್ಲಿ ಕಾಣಿಸಿಕೊಂಡರು.[೧೬] ನಾಗಾರ್ಜುನರವರ ಎರಡೂ ಚಲನಚಿತ್ರಗಳಲ್ಲಿ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.[೧೭] ಅವರು ೧೯೮೬ ರಲ್ಲಿ, ವಿ.ಮಧುಸೂದನ ರಾವ್ ಅವರ ನಿರ್ದೇಶನದ ತೆಲುಗು ಚಿತ್ರವಾದ ವಿಕ್ರಮ್ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.[೧೮] ಈ ಚಿತ್ರವು ೧೯೮೩ ರ, ಹಿಂದಿ ಚಿತ್ರವಾದ ಹೀರೋ ಇದರ ರಿಮೇಕ್ ಆಗಿದೆ. ನಂತರ, ಈ ಚಿತ್ರವು ಯಶಸ್ವಿಯಾಯಿತು ಹಾಗೂ ನಾಗಾರ್ಜುನರವರಿಗೆ ಉತ್ತಮ ಆರಂಭವನ್ನು ನೀಡಿತು.[೧೯] ನಂತರ, ಅವರು ದಾಸರಿ ನಾರಾಯಣ ರಾವ್ ಅವರ ನಿರ್ದೇಶನದ ಮಜ್ನು ಎಂಬ ಚಿತ್ರದಲ್ಲಿ ಹಾಗೂ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದರು.[೨೦] ಈ ಚಿತ್ರವು ಇದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಹೃದಯ ಒಡೆದ ಮನುಷ್ಯನ ಪಾತ್ರದಲ್ಲಿ ನಾಗಾರ್ಜುನರವರು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದರು. ನಂತರ, ಅವರು ಇಳಯರಾಜಾ ಅವರ ಸಂಗೀತದೊಂದಿಗೆ ಗೀತಾ ಕೃಷ್ಣ ನಿರ್ದೇಶನದ ಸರಾಸರಿಗಿಂತ ಕಡಿಮೆ ಗಳಿಕೆಯ ಸಂಕೀರ್ತನ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ವಿಷಯ ಮತ್ತು ಸಂಗೀತಕ್ಕಾಗಿ ಮೆಚ್ಚುಗೆಯನ್ನು ಪಡೆಯಿತು.[೨೧]

೧೯೮೮ ರಲ್ಲಿ, ನಾಗಾರ್ಜುನರವರು ಬ್ಲಾಕ್ಬಸ್ಟರ್ ಆಕಾರಿ ಪೊರಾಟಮ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಚಿತ್ರಕಥೆಯನ್ನು ಯಂಡಮೂರಿ ವೀರೇಂದ್ರನಾಥ್ ಅವರು ಹಾಗೂ ನಿರ್ದೇಶನವನ್ನು ಕೆ. ರಾಘವೇಂದ್ರ ರಾವ್ ಅವರು ಮಾಡಿದರು.[೨೨] ಅಲ್ಲಿ ಅವರು ಶ್ರೀದೇವಿ ಮತ್ತು ಸುಹಾಸಿನಿಯೊಂದಿಗೆ ಜೋಡಿಯಾದರು. ೧೯೮೮ ರಲ್ಲಿ, ಅವರು ವಿಜಯಶಾಂತಿ ಅವರೊಂದಿಗೆ ಜಾನಕಿ ರಾಮುಡು ಚಿತ್ರದಲ್ಲಿ ನಟಿಸಿದರು. ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರವೂ ಪ್ರಖ್ಯಾತಿಯಾಗಿತ್ತು. ೧೯೮೯ ರಲ್ಲಿ, ಅವರು ಮಣಿರತ್ನಂ ಅವರ ನಿರ್ದೇಶನದ ಪ್ರಣಯ ನಾಟಕವಾದ ಗೀತಾಂಜಲಿಯಲ್ಲಿ ನಟಿಸಿದರು.[೨೩] ಈ ಚಿತ್ರವು ೧೯೯೦ ರಲ್ಲಿ, ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಕ್ಷಣ, ಅವರು ಶಿವ ಚಿತ್ರದಲ್ಲಿ ಮತ್ತೊಂದು ಯಶಸ್ಸನ್ನು ನೋಡಿದರು. ಈ ಚಿತ್ರದ ಮೂಲಕ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ನಾಗಾರ್ಜುನ ಅವರನ್ನು ಸೂಪರ್ಸ್ಟಾರ್ ಆಗಿ ಮಾಡಿತು. ೧೯೯೦ ರಲ್ಲಿ, ಅವರು ಅದೇ ಚಿತ್ರದ ಹಿಂದಿ ರಿಮೇಕ್ ಶಿವದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು..[೨೪] ಹಿಂದಿ ಆವೃತ್ತಿ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು. ನಂತರ ಅವರು ಜೈತ್ರ ಯಾತ್ರೆ ಚಿತ್ರದಲ್ಲಿ ನಟಿಸಿದರು. ಇದಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ನಂತರ, ಪ್ರೇಮಯುದ್ಧಮ್ ಮತ್ತು ಇಡ್ಡಾರು ಇಡ್ಡಾರೆ ಹೀಗೆ ಮುಂತಾದ ಉಪಚಿತ್ರಗಳ ಮೂಲಕ ಅವರು ಮೆಚ್ಚುಗೆ ಪಡೆದರು ಹಾಗೂ ಅಮಲಾ ಅವರೊಂದಿಗೆ ಮತ್ತೆ ನಟಿಸಿದ ನಿರ್ನಾಯಂ ಚಿತ್ರವು ಯಶಸ್ವಿಯಾಯಿತು.[೨೫]

ತೆರೆ-ಮರೆಯಲ್ಲಿ ಮತ್ತು ಇತರ ಕೆಲಸಗಳು

ಬದಲಾಯಿಸಿ
 
೨೦೧೩ ರಲ್ಲಿ, ನಡೆದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಮುಂಬೈ ಮಾಸ್ಟರ್ಸ್ ಪಂದ್ಯದ ಸಹ ಮಾಲೀಕರಾಗಿ ನಾಗಾರ್ಜುನರವರು ಕಾಣಿಸಿಕೊಂಡ ದೃಶ್ಯ.

ನಾಗಾರ್ಜುನರವರು ೨೦೦೯ ರಲ್ಲಿ, ಯುವ ಧಾರಾವಾಹಿಯ ಮೂಲಕ ದೂರದರ್ಶನ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು.[೨೬] ಸ್ಟಾರ್ ನೆಟ್ವರ್ಕ್‌ಗೆ ಮಾರಾಟವಾಗುವ ಮೊದಲು ಅವರು ದೂರದರ್ಶನ ಚಾನೆಲ್ ಆಗಿದ್ದ ಮಾ ಟಿವಿಯ ಪ್ರಮುಖ ಷೇರುದಾರರಾಗಿದ್ದರು.[೨೭] ನಾಗಾರ್ಜುನ ಅವರು ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್‌? ನ ಭಾರತೀಯ ತೆಲುಗು ಭಾಷೆಯ ಆವೃತ್ತಿಯನ್ನು ನಡೆಸಿದರು ಹಾಗೂ ಇದಕ್ಕೆ ಮೀಲೋ ಎವರು ಕೋಟೀಶ್ವರಡು ಎಂದು ಹೆಸರಿಡಲಾಗಿದೆ.[೨೮] ಈ ಕಾರ್ಯಕ್ರಮದ ಮೊದಲ ಭಾಗವನ್ನು ಮಾ ಟಿವಿಯಲ್ಲಿ ೯ ಜೂನ್ ೨೦೧೪ ರಿಂದ ೭ ಆಗಸ್ಟ್ ೨೦೧೪ ರವರೆಗೆ (೪೦ ಕಂತುಗಳು) ಪ್ರಸಾರ ಮಾಡಲಾಯಿತು. ಎರಡನೇ ಭಾಗವನ್ನು ೯ ಡಿಸೆಂಬರ್ ೨೦೧೪ ರಿಂದ ೨೭ ಫೆಬ್ರವರಿ ೨೦೧೫ ರವರೆಗೆ (೫೫ ಕಂತುಗಳು) ಮಾ ಟಿವಿಯಲ್ಲಿ ಪ್ರದರ್ಶಿಸಲಾಯಿತು.[೨೯] ೨೦೧೫ ರಲ್ಲಿ, ಟಿವಿ ೫ ಬಿಸಿನೆಸ್ ಲೀಡರ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನದಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಮನರಂಜನಾ ನಾಯಕ ಪ್ರಶಸ್ತಿ (ದೂರದರ್ಶನ) ನೀಡಿ ಗೌರವಿಸಲಾಯಿತು. ಅವರು ೨೦೧೯, ೨೦೨೦, ೨೦೨೧, ೨೦೨೨ ಮತ್ತು ೨೦೨೩ ರಲ್ಲಿ, ಬಿಗ್ ಬಾಸ್‌ನ ಮೂರನೇ, ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಭಾಗವನ್ನು ಮತ್ತು ೨೦೨೨ ರಲ್ಲಿ, ಬಿಗ್ ಬಾಸ್‌ನ ಮೊದಲ ಭಾಗವನ್ನು ತಡೆರಹಿತವಾಗಿ ಆಯೋಜಿಸಿದ್ದರು.[೩೦]

ಮಾಲೀಕತ್ವ, ಅನುಮೋದನೆ ಮತ್ತು ಗಳಿಕೆಗಳು

ಬದಲಾಯಿಸಿ

೨೦೧೩ ರಿಂದ, ನಾಗಾರ್ಜುನರವರು ಸುನಿಲ್ ಗವಾಸ್ಕರ್ ಮತ್ತು ಎಂಎಸ್ ಧೋನಿ ಅವರೊಂದಿಗೆ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ ಮುಂಬೈ ಮಾಸ್ಟರ್ಸ್‌ನ ಸಹ ಮಾಲೀಕರಾಗಿದ್ದರು.[೩೧] ನಾಗಾರ್ಜುನರವರು ಪ್ರಸ್ತುತ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಅನುಮೋದಿಸುತ್ತಿದ್ದಾರೆ.[೩೨] ೨೦೧೨ ಮತ್ತು ೨೦೧೩ ನೇ ಸಾಲಿನ ಫೋರ್ಬ್ಸ್ ಇಂಡಿಯಾದ ಮೊದಲ ೧೦೦ ಖ್ಯಾತಿ ಪಡೆದವರ ಪಟ್ಟಿಯಲ್ಲಿ ಅವರು ೩೬ ಮತ್ತು ೪೩ ನೇ ಸ್ಥಾನ ಪಡೆದಿದ್ದಾರೆ. ಅವರು ಇಂಡಿಯನ್ ಸೂಪರ್ ಲೀಗ್ ಕ್ಲಬ್ ಕೇರಳ ಬ್ಲಾಸ್ಟರ್ಸ್ ಎಫ್‌ಸಿಯ ಸಹ ಮಾಲೀಕರಲ್ಲಿ ಒಬ್ಬರಾಗಿದ್ದಾರೆ.[೩೩][೩೪]

ಎನ್‌೩ ರಿಯಾಲ್ಟಿ ಎಂಟರ್ಪ್ರೈಸಸ್

ಬದಲಾಯಿಸಿ

ನಾಗಾರ್ಜುನರವರು ಎನ್‌೩ ರಿಯಾಲ್ಟಿ ಎಂಟರ್ಪ್ರೈಸಸ್‌ನ ಸ್ಥಾಪಕ ಪಾಲುದಾರರಾಗಿದ್ದಾರೆ. ಇದು ಎನ್ ಸಮಾವೇಶ ಕೇಂದ್ರ, ಎನ್-ಗ್ರಿಲ್ ಮತ್ತು ಡಿಸ್ಟ್ರಿಕ್ಟ್ ಎನ್‌ನ ಮೂಲ ಘಟಕವಾಗಿದೆ. ನಂತರದ, ಎರಡು ಸಂಸ್ಥೆಗಳು ಈಗ ಅಸ್ತಿತ್ವದಲ್ಲಿಲ್ಲ.[೩೫] ೨೦೧೪ ರಲ್ಲಿ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಎನ್ ಸಮಾವೇಶ ವ್ಯಾಜ್ಯ ಆವರಣವನ್ನು ಅತಿಕ್ರಮಿಸಿದೆ ಎಂದು ಗುರುತಿಸಿತು. ತರುವಾಯ, ಕಾನೂನು ಅಭಿಪ್ರಾಯಗಳ ಮೂಲಕ, ಸ್ಥಳೀಯ ಆಡಳಿತಗಾರರು ಭೂಮಿಯ ತಿದ್ದುಪಡಿ ಮಾರ್ಗವನ್ನು ಪ್ರಾರಂಭಿಸಿದರು.[೩೬]

ನಾಗಾರ್ಜುನರವರು ಮತ್ತು ಅವರ ಪತ್ನಿ ಅಮಲಾ ಅವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿದಿಂದ ಮಾನ್ಯತೆ ಪಡೆದ ಹೈದರಾಬಾದ್‌ನ ಬ್ಲೂ ಕ್ರಾಸ್‌ನ ಸಹ ಸಂಸ್ಥಾಪಕರಾಗಿದ್ದಾರೆ.[೩೭] ಇದು ಹೈದರಾಬಾದ್‌ನ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಆಗಿದ್ದು, ಇದು ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ.[೩೮] ನಾಗಾರ್ಜುನ ಅವರು ಮಾ ಟಿವಿ ಅಸೋಸಿಯೇಷನ್ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಪ್ರಸ್ತುತ ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನಗಳ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.[೩೯] ೨೦೧೦ ರಲ್ಲಿ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಲಾಭರಹಿತ ಸಂಸ್ಥೆಯಾದ ಟೀಚ್ಏಡ್ಸ್ ರಚಿಸಿದ ಎಚ್ಐವಿ/ಏಡ್ಸ್ ಅನಿಮೇಟೆಡ್ ಸಾಫ್ಟ್ವೇರ್ ಟ್ಯುಟೋರಿಯಲ್‌ನಲ್ಲಿ ನಾಗಾರ್ಜುನರವರು ನಟಿಸಿದ್ದಾರೆ.[೪೦]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ನಾಗಾರ್ಜುನರವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ನಂದಿ ಪ್ರಶಸ್ತಿಗಳು ಮತ್ತು ಮೂರು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.[೪೧]

ಉಲ್ಲೇಖಗಳು

ಬದಲಾಯಿಸಿ
  1. Prasad, B. Krishna (18 May 2012). "Actor Nagarjuna has 2 lakh shares in Vanpic holding Company". The Times of India (in ಇಂಗ್ಲಿಷ್). Retrieved 4 January 2021.
  2. "Board of Directors". Maa TV. Archived from the original on 28 May 2014. Retrieved 25 July 2021.
  3. "Akkineni Nagarjuna rings in 56th birthday in Thailand". The Indian Express. 29 August 2015. Retrieved 8 June 2019.
  4. "International Film Festival of India 1990" (PDF). Directorate of Film Festivals. Archived from the original (PDF) on 20 April 2016. Retrieved 17 April 2016.
  5. Suresh Krishnamoorthy (30 April 2013). "At the end of the day, Nag wants to feel good". The Hindu. Chennai, India. Retrieved 25 August 2013.
  6. "NDTV Movies". ndtv.com. Archived from the original on 2013-12-22. Retrieved 2024-06-21.
  7. "45th National Film Awards" (PDF). Directorate of Film Festivals. Archived from the original (PDF) on 29 October 2013. Retrieved 11 March 2012.
  8. "I need a break: Nagarjuna". The Times of India. 20 April 2012. Archived from the original on 21 May 2013.
  9. "Nagarjuna is brand ambassador for Kalyan Jewellers". Business Line. 1 December 2010. Archived from the original on 20 November 2012. Retrieved 24 October 2012.
  10. "Swept away by 'Nag' magic". The Hindu. Chennai, India. 11 July 2011.
  11. "'Prince' and 'King' add Kamma Flavour to Congress". greatandhra.com. Archived from the original on 27 May 2014. Retrieved 27 May 2014.
  12. Naidu, T. Appala; Varma, P. Sujatha (22 January 2014). "Visitors throng ANR's home at Ramapuram". The Hindu. ISSN 0971-751X. Retrieved 23 July 2022.
  13. Vidya Raja (31 July 2018). "India's Oldest Engineering College Turns 225: 6 Alumni Who Have Made Guindy Proud!". The Better India.
  14. Vidya Raja (31 July 2018). "India's Oldest Engineering College Turns 225: 6 Alumni Who Have Made Guindy Proud!". The Better India.
  15. "I chose life over Bollywood: Nagarjuna". The Times of India. 11 July 2010. Archived from the original on 6 November 2012.
  16. "Sri Ramadasu floors them all". The Hindu. Chennai, India. 15 April 2006. Archived from the original on 15 May 2006. Retrieved 2 March 2010.
  17. "Nagarjuna Rajanna movie details". Archived from the original on 15 April 2011. Retrieved 7 May 2011.
  18. Nagarjuna's Love Story Archived 2012-12-31 ವೇಬ್ಯಾಕ್ ಮೆಷಿನ್ ನಲ್ಲಿ. ifilmish.com
  19. "Nagarjuna Saibaba Movie Titled As 'Shirdi Sai' | Currentweek Cinema". Cinema.currentweek.net. Archived from the original on 16 March 2012. Retrieved 24 October 2012.
  20. AndhraBoxOffice.com. "Soggade Chinni Nayana Final Total WW Collections| AndhraBoxOffice.com". andhraboxoffice.com. Retrieved 29 October 2018.
  21. AndhraBoxOffice.com. "Oopiri (Thozha) Final Total WW Collections| AndhraBoxOffice.com". andhraboxoffice.com. Retrieved 29 October 2018.
  22. AndhraBoxOffice.com. "Om Namo Venkatesaya Final Total WW Collections| AndhraBoxOffice.com". andhraboxoffice.com. Retrieved 29 October 2018.
  23. AndhraBoxOffice.com. "Raju Gari Gadhi 2 Final Total WW Collections| AndhraBoxOffice.com". andhraboxoffice.com. Retrieved 29 October 2018.
  24. Sistu, Suhas (17 December 2023). "'Naa Saami Ranga' teaser: Nagarjuna at his best". Hans India. Retrieved 19 December 2023.
  25. "Chiranjeevi, Nagarjuna to co-own Sachin's Kerala Blasters". @businessline. 1 June 2016. Retrieved 18 August 2019.
  26. "Nagarjuna launches 'Yuva'". The Hindu. Chennai, India. 20 November 2007. Archived from the original on 3 December 2007. Retrieved 2 March 2010.
  27. "Actor Nagarjuna to focus on entertainment biz". Business Line. 20 December 2007. Retrieved 2 March 2010.
  28. "Nagarjuna to host Telugu KBC". The Hindu (in Indian English). 19 April 2014. Retrieved 28 February 2021.
  29. "Entertainment Leader Award to Actor Nagarjuna". The New Indian Express. 26 April 2015. Retrieved 28 February 2021.
  30. "Bigg Boss Telugu Season 5 new promo: Nagarjuna promises an end to boredom, watch". The Indian Express (in ಇಂಗ್ಲಿಷ್). 15 August 2021. Retrieved 15 August 2021.
  31. "Sunil Gavaskar and actor Nagarjuna buy Mumbai franchise of IBL". The Times of India. 18 July 2013. Archived from the original on 21 July 2013.
  32. "After Megastar its now Superstar". cinesprint.com. Archived from the original on 8 August 2014. Retrieved 7 August 2014.
  33. "Nagarjuna". forbesindia.com. Archived from the original on 29 January 2013. Retrieved 4 May 2013.
  34. "Pawan Kalyan tops Forbes list in Tollywood". The Times of India. 15 January 2017.
  35. "N Convention Centre: Legal opinion sought". Deccan Chronicle. 3 July 2014.
  36. Singh, T. Lalith (14 July 2014). "N Convention on 'correction' path?". The Hindu.
  37. "Our Team – Blue Cross Of Hyderbad". bluecrosshyd.in. Archived from the original on 4 August 2008. Retrieved 26 January 2011.
  38. "Blue Cross of Hyderabad – The Team". Blue Cross of Hyderabad. 26 January 2011. Archived from the original on 4 August 2008. Retrieved 26 January 2011.
  39. "Maa Tv associationTeam". The Hindu. Chennai, India. 26 January 2011. Archived from the original on 28 January 2011. Retrieved 26 January 2011.
  40. "Animation lessons on HIV/AIDS awareness released". The Hindu. Chennai, India. 27 November 2010. Archived from the original on 4 December 2010. Retrieved 1 December 2010.
  41. "Nagarjuna Akkineni". India Today (in ಇಂಗ್ಲಿಷ್). Archived from the original on 7 ಏಪ್ರಿಲ್ 2020. Retrieved 7 April 2020.

ಬಾಹ್ಯ ಕೊಂಡಿ

ಬದಲಾಯಿಸಿ