ನಾಗಮ್ಮ ವೀರನಗೌಡ ಪಾಟೀಲ್

ನಾಗಮ್ಮ ವೀರನಗೌಡ ಪಾಟೀಲ್ ಅವರು ಕರ್ನಾಟಕದ ಹರಿಜನ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಸಮಾಜ ಸೇವಕಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಮಹಾತ್ಮ ಗಾಂಧಿಯವರ ಕರೆಯ ಮೇರೆಗೆ ಅವರು ಸ್ವಾತಂತ್ರ್ಯ ಚಳವಳಿಗೆ ಸೇರಿದರು. ಗಾಂಧಿವಾದಿ ಚಳುವಳಿಯನ್ನು ಕರ್ನಾಟಕಕ್ಕೆ ತಂದರು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯದ ನಂತರ 'ಅವ್ವ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಾಗಮ್ಮ ವೀರನಗೌಡ ಪಾಟೀಲ್ ಅವರು ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. []

ಬಾಲ್ಯ ಜೀವನ

ಬದಲಾಯಿಸಿ

ನಾಗಮ್ಮ ವೀರನಗೌಡ ಪಾಟೀಲ್ ರವರು ಡಿಸೆಂಬರ್ ೧೬,೧೯೦೫ ರಂದು ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ೧೯೨೩ರಲ್ಲಿ ಮುಗಿಸಿದರು. ಕರ್ನಾಟಕ ಲಿಬರಲ್ ಎಜುಕೇಶನ್ ಸೊಸೈಟಿಯ ಸ್ಥಾಪಕರಾದ ಹಾಗೂ ಹಿರಿಯ ನಾಯಕರಾದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರನ್ನು ವಿವಾಹವಾದರು. ಪತಿ ಪದ್ಮಶ್ರೀ ಸರ್ದಾರ್ ವೀರನಗೌಡರು ನಾಗಮ್ಮ ಅವರ ಸಾಮಾಜಿಕ ಕಾರ್ಯಗಳಿಗೆ ಸ್ಫೂರ್ತಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರೂ, ಸಮಾಜ ಸೇವಕರೂ ಆದ ನಾಗಮ್ಮ ವೀರನಗೌಡ ಪಾಟೀಲ್‌ರವರೂ ಕರ್ನಾಟಕದ ಹರಿಜನ ಎಂಬ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳ ವಿಕಾಸಕ್ಕೆ ಹಾಗೂ ಅವರ ಏಳಿಗೆಗೆ ಶ್ರಮಿಸಿದ್ದಾರೆ. []

ಸ್ತ್ರೀಯರ ಏಳಿಗೆಯಲ್ಲಿ ಪಾತ್ರ

ಬದಲಾಯಿಸಿ

ನಾಗಮ್ಮ ಮತ್ತು ಅವರ ಪತಿ ಸರ್ದಾರ್ ವೀರಣ್ಣಗೌಡ ರವರು ಕರ್ನಾಟಕದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಹಾಗೂ  ಆರ್ಥಿಕವಾಗಿ ಹಿಂದುಳಿದ ಸ್ತ್ರೀಯರ ಏಳಿಗೆಗೆ ಜೊತೆಯಾಗಿ ಶ್ರಮಿಸಿದ್ದಾರೆ. ೧೯೨೩ ರಲ್ಲಿ ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಹರಿಜನ ಬಾಲಕಿಯರಿಗಾಗಿ ನಾಗಮ್ಮ ಆಶ್ರಮವನ್ನು ಪ್ರಾರಂಭಿಸಿದವರು. ಹರಿಜನ ವರ್ಗ ಒಂದು ಹಿಂದುಳಿದ ವರ್ಗ. ಅವರು ಸಾಂಪ್ರದಾಯಿಕವಾಗಿ ಗುಡಿಸುವವರು, ಬಟ್ಟೆ ಒಗೆಯುವವರು, ಚರ್ಮದ ಕೆಲಸ ಮಾಡುವವರು ಮತ್ತು ಪ್ರಾಣಿಗಳನ್ನು ಕೊಲ್ಲುವುದು ಅವರ ಉದ್ಯೋಗವಾಗಿತ್ತು. ಮೂಲತಃ ಅಸ್ಪೃಶ್ಯರು ಅಥವಾ ಪರಿಚಾರಕರು ಎಂದು ಕರೆಯಲ್ಪಡುವ ಅವರಿಗೆ ಭಾರತೀಯ ರಾಜಕೀಯ ಮತ್ತು ಧಾರ್ಮಿಕ ಮುಖಂಡರಾದ ಮಹಾತ್ಮ ಗಾಂಧಿಯವರು "ಹರಿಜನರು" ಎಂಬ ಹೆಸರನ್ನು ನೀಡಿದರು. ಅವರು ತಮ್ಮ ಜೀವನವನ್ನು ಸುಧಾರಿಸಲು ಹಲವು ವರ್ಷಗಳ ಕಾಲ ಶ್ರಮಿಸಿದರು. ನಾಗಮ್ಮ ಅವರು ಹರಿಜನ ವರ್ಗದ ಹುಡುಗಿಯರಿಗೆ "ಹರಿಜನ ಬಾಲಿಕ" ಎಂಬ ಆಶ್ರಮವನ್ನು ಹುಬ್ಬಳ್ಳಿಯಲ್ಲಿ ೧೯೨೩ ರಂದು  ಸ್ಥಾಪಿಸಿದರು. [] ಅವರು ಎಲ್ಲಾ ನೆರೆಯ ಜಿಲ್ಲೆಗಳ ಹರಿಜನ ಬಾಲಕಿಯರಿಗೆ ಆಶ್ರಯ ನೀಡಿದ್ದಾರೆ. ಈ ಆಶ್ರಮದಲ್ಲಿ ಎಲ್ಲರೂ ಗಾಂಧಿಯ ತತ್ವಗಳನ್ನು ಪಾಲಿಸುತ್ತಿದ್ದರು ಮತ್ತು ಇದು ಹರಿಜನ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮವನ್ನು ಹೊರತುಪಡಿಸಿದ ಏಕೈಕ ಸ್ಥಳವಾಗಿದೆ. ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರುರವರು ೧೯೫೧ರಲ್ಲಿ ಆಶ್ರಮಕ್ಕೆ ಭೇಟಿ ನೀಡಿದಾಗ, ಅವರು ಈ ಸ್ಥಳವನ್ನು "ಕಸ್ತೂರಬಾ ಬಾಲಿಕಾಶ್ರಮ" ಎಂದು ಮರುನಾಮಕರಣ ಮಾಡಿದರು. ಇದು ರಾಜ್ಯದಲ್ಲಿ ಒಂದು ಮಾದರಿಯಾಯಿತು. ನಂತರ, ಅವರು ತಮ್ಮ ಪತಿಯೊಂದಿಗೆ  ಹುಬ್ಬಳ್ಳಿಯಲ್ಲಿ ಮಹಿಳಾ ವಿದ್ಯಾಪೀಠವನ್ನು ಸ್ಥಾಪಿಸಿದರು. ಅವರು ಆಶ್ರಮದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರು, ಅವರಿಗೆ ಆಹಾರವನ್ನು ತಯಾರಿಸುತ್ತಿದ್ದರು, ಅವರೊಂದಿಗೆ ಕುಳಿತು ತಿನ್ನುತ್ತಿದ್ದರು ಮತ್ತು ಅವರ ಕೂದಲನ್ನು ಸಹ ಬಾಚುತ್ತಿದ್ದರು ಎಂದು ವರದಿಯಾಗಿದೆ.

ಸೇವೆಗಳು

ಬದಲಾಯಿಸಿ

೧೯೩೮ ರಲ್ಲಿ, ಅವರು ತಮ್ಮ ಪತಿಯೊಂದಿಗೆ ಕೈಜೋಡಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯದ ನಂತರ, ಅವರು ಸಾಮಾಜಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು ಮತ್ತು ಶಿಕ್ಷಣದ ಬಗ್ಗೆ ವಿಶೇಷ ಗಮನವನ್ನು ನೀಡಿದರು. ರಾಜ್ಯಗಳ ಮರುಸಂಘಟನೆಯ ಮೊದಲು ರಾಣೇಬೆನ್ನೂರು ಕ್ಷೇತ್ರದಿಂದ ನಾಗಮ್ಮ ಅವರು ಮುಂಬೈ ವಿಧಾನಸಭೆಗೆ ಆಯ್ಕೆಯಾದರು. ಭೂದಾನ ಚಳುವಳಿಯಿಂದ ಆಕರ್ಷಿತರಾದ ನಾಗಮ್ಮ ಈ ಪ್ರದೇಶದಿಂದ ವಿನೋಬಾ ಭಾವೆಗೆ ಸೇರಿದ ಮೊದಲ ವ್ಯಕ್ತಿ. ಅವರ ಸೇವೆಗಳಿಗಾಗಿ ಅವರನ್ನು "ಅವ್ವ" ಎಂದೇ ಜನ ಅವರನ್ನು ಗುರುತಿಸಿದ್ದರು. ಅಂದು ೧೯೩೩ ರಲ್ಲಿ ಮಹಾತ್ಮ ಗಾಂಧೀಜಿಯವರು ಎರಡನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದಾಗ ಅಸ್ಪೃಶ್ಯತೆಯ ವಿರುದ್ಧ ಜನರಿಗೆ ಶಿಕ್ಷಣ ನೀಡಲು ಅವರ ದೇಶಾದ್ಯಂತ ಪ್ರವಾಸ ಮಾಡುವಾಗ ಅದರಲ್ಲಿ ಭಾಗವಹಿಸಿದ್ದರು. []

ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಮತ್ತು ಜೈಲು ವಾಸ

ಬದಲಾಯಿಸಿ

ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು, ನಾಗಮ್ಮ ಮತ್ತು ಅವರ ಪತಿ ಇಬ್ಬರೂ ೧೯೩೮ ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ನಾಗಮ್ಮ ತನ್ನ ರಾಜೀನಾಮೆಯನ್ನು ಶಾಸಕಾಂಗಕ್ಕೆ ಸಲ್ಲಿಸಿ, ಸ್ವಾತಂತ್ರ್ಯ ಚಳುವಳಿಗೆ ಪ್ರವೇಶಿಸಿದರು ಮತ್ತು ಬ್ರಿಟಿಷ್ ವಿರೋಧಿ ನಿಲುವನ್ನು ತೆಗೆದುಕೊಂಡರು ಹೀಗಾಗಿ ಅವರನ್ನು ೧೯೩೮ರಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ೩ ತಿಂಗಳು ಇರಿಸಲಾಯಿತು. ಹಾಗೂ ೧೯೪೨ ರಲ್ಲಿ ಅವರನ್ನು ಬಂಧಿಸಿ ಯರವಾಡ ಸೆಂಟ್ರಲ್‌ನಲ್ಲಿ ೧೩ ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು. ನಾಗಮ್ಮ ಹಾಗೂ ಅವರಂತಹ ಇತರ ಪ್ರಸಿದ್ಧ ಮಹಿಳೆಯರಾದ ಕೃಷ್ಣಬಾಯಿ ಪಂಜಿಕರ್ ಮತ್ತು ಇತರರ ಜೊತೆ ೧೩ ತಿಂಗಳು ಜೈಲುವಾಸಮಾಡಿದರು. ನಾಗಮ್ಮ ಅವರು ಬೈದಗಿಯಲ್ಲಿ ನಡೆದ ಸಭೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸರ್ಕಾರ ಮತ್ತು ಯಾವುದೇ ಸಹಕಾರವನ್ನು ವಿಸ್ತರಿಸದಂತೆ ಜನರಿಗೆ ಕರೆ ನೀಡಿದರು ಆದರೆ ಸರ್ಕಾರ ಅದೇ ದಿನ ಅವರನ್ನು ಬಂಧಿಸಿತು. ಆಶ್ರಮದ ಹುಡುಗಿಯರು ಅವರ ದೇಶಭಕ್ತಿ ಚಟುವಟಿಕೆಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಪ್ರತಿಭಟನೆಗಳಲ್ಲಿ ಭಾಗವಹಿಸಿದರು.

ನಾಗಮ್ಮ ಅವರು ಕಸ್ತೂರಬಾ ನಿಧಿಗಾಗಿ ಸಂಗ್ರಹ ಮಾಡುವ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರ ಸ್ವಂತ ಚಿನ್ನದ ಉಂಗುರವನ್ನು ದಾನ ಮಾಡುವ ಮೂಲಕ ಇತರರನ್ನು ಪ್ರೇರೇಪಿಸಿದರು. ಕಸ್ತೂರಬಾ ಗಾಂಧೀರವರಂತೆ, ನಾಗಮ್ಮ ಪಾಟೀಲ್ ಅವರು ತಮ್ಮ ಪತಿಯೊಂದಿಗೆ ಹರಿಜನ ವರ್ಗದ ಜನರ ಒಳಿತಿಗಾಗಿ, ಅನಾಥ ಮಕ್ಕಳ ವಿಕಾಸಕ್ಕಾಗಿ ಆಶ್ರಮಗಳನ್ನು ಸ್ಥಾಪಿಸಿ, ಚಳುವಳಿಗಳು ನಡೆಸಿ, ಇನ್ನಿತರ ಸತ್ಕಾರ್ಯಗಳನ್ನು ಮಾಡುವ ಮೂಲಕ ಇತರರನ್ನು ಪ್ರೇರೇಪಿಸಿದ್ದಾರೆ. ೨೩ ಮೇ ೨೦೦೨ ರಂದು ನಾಗಮ್ಮ ಪಾಟೀಲ್ ರವರು ದೈವಾದೀನರದರು. []

ಉಲ್ಲೇಖಗಳು

ಬದಲಾಯಿಸಿ