ಪರಿಚರ್ಯೆ ಎಂದರೆ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಕೇಂದ್ರೀಕರಿಸುವಆರೋಗ್ಯ ರಕ್ಷಣಾ ವಲಯದಲ್ಲಿನ ಒಂದು ವೃತ್ತಿ. ಇದರ ಉದ್ದೇಶ ಇವರುಗಳು ತಕ್ಕಮಟ್ಟದ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಪಡೆಯುವುದು, ಕಾಪಾಡಿಕೊಳ್ಳುವುದು ಅಥವಾ ಮರುಪಡೆಯುವುದು. ರೋಗಿಯ ಆರೈಕೆಯೆಡೆಗೆ ಅವರ ದೃಷ್ಟಿಕೋನ, ತರಬೇತಿ, ಮತ್ತು ವೃತ್ತಿಯ ವ್ಯಾಪ್ತಿಯಿಂದ ದಾದಿಯರನ್ನು ಇತರ ಆರೋಗ್ಯ ರಕ್ಷಣೆ ನೀಡುಗರಿಂದ ವ್ಯತ್ಯಾಸ ಮಾಡಬಹುದು. ದಾದಿಯರು ಭಿನ್ನ ಮಟ್ಟದ ಲಿಖಿತ ಸಲಹಾ ಅಧಿಕಾರದ ಅನೇಕ ಪರಿಣತಿಯ ಕ್ಷೇತ್ರಗಳಲ್ಲಿ ಅಭ್ಯಾಸ ನಡೆಸುತ್ತಾರೆ. ಅನೇಕ ದಾದಿಯರು ವೈದ್ಯರ ಆದೇಶ ವ್ಯಾಪ್ತಿಯಲ್ಲಿ ಆರೈಕೆ ನೀಡುತ್ತಾರೆ, ಮತ್ತು ಈ ಸಾಂಪ್ರದಾಯಿಕ ಪಾತ್ರವು ಆರೈಕೆ ನೀಡುಗರಾಗಿ ದಾದಿಯರ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಿದೆ. ಆದರೆ, ಬಹುತೇಕ ಕಾನೂನುವ್ಯಾಪ್ತಿಗಳಲ್ಲಿ, ದಾದಿಯರಿಗೆ ವಿವಿಧ ಪರಿಸರಗಳಲ್ಲಿ ಸ್ವತಂತ್ರವಾಗಿ ವೃತ್ತಿ ನಡೆಸಲು ಅನುಮತಿ ನೀಡಲಾಗಿರುತ್ತದೆ. ಯುದ್ಧಾನಂತರದ ಅವಧಿಯಲ್ಲಿ, ದಾದಿಯರ ಶಿಕ್ಷಣವು ಮುಂದುವರಿದ ಮತ್ತು ಪರಿಣತ ಅರ್ಹತೆಗಳತ್ತ ವೈವಿಧ್ಯೀಕರಣದ ಪ್ರಕ್ರಿಯೆಗೆ ಒಳಗಾಗಿದೆ, ಮತ್ತು ಅನೇಕ ಸಾಂಪ್ರದಾಯಿಕ ನಿಬಂಧನೆಗಳು ಹಾಗೂ ನೀಡುಗ ಪಾತ್ರಗಳು ಬದಲಾಗುತ್ತಿವೆ.[]

ಒಬ್ಬಳು ದಾದಿ ಶಿಶುವಿನ ಆರೈಕೆ ಮಾಡುತ್ತಿದ್ದಾಳೆ

ದಾದಿಯರು ಆರೈಕೆಯ ಒಂದು ಯೋಜನೆಯನ್ನು ಅಭಿವೃದ್ಧಿಪಡಿಸುತ್ತಾರೆ, ಮತ್ತು ವೈದ್ಯರು, ಚಿಕಿತ್ಸಕರು, ರೋಗಿ, ರೋಗಿಯ ಕುಟುಂಬ ಹಾಗೂ ಇತರ ತಂಡ ಸದಸ್ಯರ ಸಹಯೋಗದಲ್ಲಿ ಕೆಲಸಮಾಡುತ್ತಾರೆ. ಈ ವೃತ್ತಿಯು ಜೀವನ ಮಟ್ಟವನ್ನು ಸುಧಾರಿಸಲು ಕಾಯಿಲೆಗೆ ಚಿಕಿತ್ಸೆ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಅಮೇರಿಕ ಮತ್ತು ಯುನೈಟಡ್ ಕಿಂಗ್ಡಮ್‍ನಲ್ಲಿ, ಚಿಕಿತ್ಸಕ ದಾದಿ ತಜ್ಞೆಯರು ಮತ್ತು ದಾದಿ ವೃತ್ತಿಗರಂತಹ ಉನ್ನತ ಅಭ್ಯಾಸದ ದಾದಿಯರು, ಪ್ರತ್ಯೇಕ ರಾಜ್ಯ ನಿಯಂತ್ರಣಗಳನ್ನು ಆಧರಿಸಿ ಆರೋಗ್ಯ ಸಮಸ್ಯೆಗಳನ್ನು ನಿದಾನ ಮಾಡುತ್ತಾರೆ ಮತ್ತು ಔಷಧಿಗಳು ಹಾಗೂ ಇತರ ಚಿಕಿತ್ಸೆಗಳನ್ನು ವಿಧಿಸುತ್ತಾರೆ. ದಾದಿಯರು ಚಿಕಿತ್ಸಕರು, ವೈದ್ಯ ವೃತ್ತಿಯವರು ಮತ್ತು ಪೌಷ್ಟಿಕತಜ್ಞರಂತಹ ಬಹುವಿಷಯಕ ಆರೋಗ ರಕ್ಷಣೆ ತಂಡದ ಇತರ ಸದಸ್ಯರು ನಡೆಸುವ ರೋಗಿ ಆರೈಕೆಯನ್ನು ಸಮನ್ವಯ ಮಾಡುವಲ್ಲಿ ನೆರವಾಗುತ್ತಾರೆ. ದಾದಿಯರು ಪರಸ್ಪರಾವಲಂಬಿತವಾಗಿ, ಉದಾಹರಣೆಗೆ ವೈದ್ಯರೊಂದಿಗೆ, ಮತ್ತು ಸ್ವತಂತ್ರವಾಗಿ ಪರಿಚರ್ಯಾ ವೃತ್ತಿಗರಾಗಿ ಎರಡೂ ರೀತಿ ಆರೈಕೆ ನೀಡುತ್ತಾರೆ.

ಫ್ಲಾರೆನ್ಸ್ ನೈಟಿಂಗೇಲ್ ಕ್ರೀಮಿಯನ್ ಯುದ್ಧದ ನಂತರ ವೃತ್ತಿಪರ ಪರಿಚರ್ಯೆಯ ಅಡಿಪಾಯ ಹಾಕಿದಳು. ಅವಳ ನೋಟ್ಸ್ ಆನ್ ನರ್ಸಿಂಗ್ ಗ್ರಂಥ ಜನಪ್ರಿಯವಾಯಿತು.ವೃತ್ತಿಪರ ಶಿಕ್ಷಣದ ನೈಟಿಂಗೇಲ್ ಮಾದರಿಯು ೧೮೪೦ರ ನಂತರ ಯೂರೋಪ್ ಹಾಗೂ ಉತ್ತರ ಅಮೇರಿಕಾದಲ್ಲಿ ವ್ಯಾಪಕವಾಗಿ ಪ್ರಸರಿಸಿತು.

ಉಲ್ಲೇಖಗಳು

ಬದಲಾಯಿಸಿ
  1. Dunphy L. M., Winland-Brown J. E. (2011): Primary care: The art and science of advanced practice nursing. F.A. Davis. ISBN 9780803626478.