ರಾಜೀನಾಮೆ
ರಾಜೀನಾಮೆ ಎಂದರೆ ಒಬ್ಬರ ಹುದ್ದೆ ಅಥವಾ ಸ್ಥಾನವನ್ನು ಬಿಟ್ಟುಕೊಡುವ ಅಥವಾ ತ್ಯಜಿಸುವ ಔಪಚಾರಿಕ ಕ್ರಿಯೆ. ಚುನಾವಣೆ ಅಥವಾ ನೇಮಕಾತಿ ಮೂಲಕ ಪಡೆದಿರುವ ಒಂದು ಸ್ಥಾನವನ್ನು ಹೊಂದಿರುವ ವ್ಯಕ್ತಿಯು ಆ ಸ್ಥಾನದಿಂದ ಕೆಳಗಿಳಿದಾಗ ರಾಜೀನಾಮೆ ಆಗಬಹುದು. ಆದರೆ ಆ ಅವಧಿಯ ಮುಕ್ತಾಯದ ನಂತರ ಆ ಸ್ಥಾನವನ್ನು ತ್ಯಜಿಸುವುದನ್ನು, ಅಥವಾ ಹೆಚ್ಚುವರಿ ಅವಧಿಯನ್ನು ಕೋರುವುದನ್ನು ಇಷ್ಟಪಡದಿರುವುದನ್ನು ರಾಜೀನಾಮೆ ಎಂದು ಪರಿಗಣಿಸಲಾಗುವುದಿಲ್ಲ.
ಒಬ್ಬ ಉದ್ಯೋಗಿಯು ಒಂದು ಸ್ಥಾನವನ್ನು ಬಿಡಲು ಇಷ್ಟಪಟ್ಟರೆ ಅದನ್ನು ರಾಜೀನಾಮೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಅನೈಚ್ಛಿಕ ಸಮಾಪ್ತಿಯಿಂದ ಭಿನ್ನವಾಗಿದೆ. ಒಬ್ಬ ಉದ್ಯೋಗಿಯು ರಾಜೀನಾಮೆ ನೀಡಿದನೆ ಅಥವಾ ಅವನನ್ನು ವಜಾಗೊಳಿಸಲಾಯಿತೇ ಎಂಬುದು ಕೆಲವೊಮ್ಮೆ ವಿವಾದದ ವಿಷಯವಾಗಿರುತ್ತದೆ, ಏಕೆಂದರೆ ಅನೇಕ ಸಂದರ್ಭಗಳಲ್ಲಿ ವಜಾಗೊಂಡ ಉದ್ಯೋಗಿಯು ಬೇರ್ಪಡಿಕೆ ವೇತನ ಮತ್ತು/ಅಥವಾ ನಿರುದ್ಯೋಗ ಸಹಾಯಗಳಿಗೆ ಅರ್ಹನಾಗಿರುತ್ತಾನೆ. ಆದರೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುವವನು ಅರ್ಹನಾಗಿಲ್ಲದಿರಬಹುದು.
ಹೆಚ್ಚಿನ ಓದಿಗೆ
ಬದಲಾಯಿಸಿ- "6 Questions to Ask Before You Quit". Vanna. Archived from the original on 2020-08-06. Retrieved 2020-04-21.
- Barclay, Theo (February 5, 2018). Fighters And Quitters: Great Political Resignations. London: Biteback Publishing. ISBN 9781785903540.
- Frenchwood, Fancy (December 13, 2014). The Perfect Resignation Letter: I Fired My Boss. Infinite Momemtum. ISBN 978-0578154640.
- Kumar, Harbans Lal; Kumar, Gaurav (2009). Law Relating to Resignation and VRS. Delhi: Universal Law Pub. Co. ISBN 978-8175347304.
- The Bird of Wifdom (January 1, 1755) Remarks on the Resignation of a Noble Lord [A satire on John Perceval, Earl of Egmont]