ದೆಹಲಿ - ಕಠ್ಮಂಡು ಬಸ್

ದೆಹಲಿ-ಕಠ್ಮಂಡು ಬಸ್ ಭಾರತ ಮತ್ತು ನೇಪಾಳದ ರಾಜಧಾನಿಗಳನ್ನು ಕ್ರಮವಾಗಿ ದೆಹಲಿ ಹಾಗೂ ಕಠ್ಮಂಡುವನ್ನು ಸಂಪರ್ಕಿಸುವ ಗಡಿರೇಖೆಯ ಬಸ್ ಸೇವೆಯಾಗಿದೆ. ಈ ಸೇವೆಯನ್ನು ದೆಹಲಿ ಸಾರಿಗೆ ಸಂಸ್ಥೆ (ಡಿಟಿಸಿ) ನಿರ್ವಹಿಸುತ್ತದೆ. ಈ ಸೇವೆಯನ್ನು ೨೦೧೪ ರಲ್ಲಿ ಆರಂಭಿಸಲಾಯಿತು. [೧]

ದೆಹಲಿ-ಕಠ್ಮಂಡು ಬಸ್
ಸ್ಥಾಪಿಸಿದ ಸಿನ೨೫ ನವೆಂಬರ್ ೨೦೧೪
ನಿಲ್ದಾಣಗಳುಆಗ್ರಾ, ಕಾನ್ಪುರ್, ಅಯೋಧ್ಯೆ, ಫೈಜಾಬಾದ್, ಗೋರಖ್‌ಪುರ, ಸೋನೌಲಿ, ಬೂತವಾಲ್ & ನಾರಾಯಣಗಡ
ನಿರ್ಧಿಷ್ಟ ಸ್ಥಳಗಳುದೆಹಲಿ, ಕಠ್ಮಂಡು
ನಿರ್ವಾಹಕರುದೆಹಲಿ ಸಾರಿಗೆ ಸಂಸ್ಥೆ

ದೆಹಲಿಯ ಸಾರಿಗೆ ನಿಗಮ(ಡಿಟಿಸಿ), ಈ ಸರ್ಕಾರಿ ಸಂಸ್ಥೆಯು ಭಾರತದ ಕಡೆಯಿಂದ ಬಸ್ ಸೇವೆಯನ್ನು ಒದಗಿಸುತ್ತದೆ, ನೇಪಾಳಿ ರಾಷ್ಟ್ರೀಯ ಸಾರಿಗೆ ಉದ್ಯಮಿಗಳ ಒಕ್ಕೂಟವು(ಎಫ್ಎನ್ಎನ್ಟಿಇ) ಭೌತಿಕ ಮೂಲಸೌಕರ್ಯ ಮತ್ತು ಸಾರಿಗೆ ಮೋಪಿಐಟಿ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಬಸ್ ಸೇವೆಯನ್ನು ನಿರ್ವಹಿಸುತ್ತಿದೆ. [೨] ಅಂತೆಯೇ, ದೆಹಲಿಯಿಂದ ಕಠ್ಮಂಡುವಿಗೆ ತಲುಪಲು ನೇಪಾಳದಲ್ಲಿ ಬಸ್ ಸೇವೆಯನ್ನು ಒದಗಿಸಲು ಬೇರೆ ಖಾಸಗಿ ಸಂಸ್ಥೆಗಳಿವೆ.

ಈ ಬಸ್ ಸೇವೆಯು ೨*೨ ಆಸನ ವ್ಯವಸ್ಥೆಯನ್ನು ಹೊಂದಿದೆ ಹಾಗೂ ಇದು ವಾತಾನುಕೂಲಿತ ಬಸ್ ಸೇವೆಯಾಗಿದೆ. ಈ ಸೇವೆಯು ದೆಹಲಿ ಗೇಟ್ ಬಳಿಯ ಡಾ.ಅಂಬೇಡ್ಕರ್ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ. ಈ ಬಸ್ ಆಗ್ರಾ ( ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ), ಫಿರೋಜಾಬಾದ್, ಕಾನ್ಪುರ, ಲಕ್ನೋ ಮತ್ತು ಗೋರಖ್‌ಪುರದ ಮೂಲಕ ಪ್ರಯಾಣಿಸುತ್ತದೆ. ಇದು ಯಾವುದೇ ನಿಲ್ದಾಣವಿಲ್ಲದ ನೇರ ಬಸ್ ಸೇವೆಯಾಗಿದೆ. ಈ ಬಸ್ ಸೊನೌಲಿ ಗಡಿಯನ್ನು ದಾಟಿದ ನಂತರ ಅಲ್ಲಿ ಕಸ್ಟಮ್ಸ್ ತಪಾಸಣೆ ನಡೆಸಲಾಗುತ್ತದೆ. ೧೨೫೦ ಕಿಲೋ.ಮೀಟರಗಳಷ್ಟು(೭೮೦ ಮೈಲುಗಳು) ದೀರ್ಘ ಪ್ರಯಾಣವನ್ನು ೩೦ ಗಂಟೆಗಳಲ್ಲಿ ಕ್ರಮಿಸುತ್ತದೆ.[೩] ೨೦ ಫೆಬ್ರವರಿ ೧೯೯೯ ರಲ್ಲಿ ಅಟಲ್ ಬಿಹಾರಿ ವಾಜಪೇಯಿ [೪] ಯವರು ಉದ್ಘಾಟಿಸಿದ ದೆಹಲಿ ಸಾರಿಗೆ ನಿಗಮವು(ಡಿಟಿಸಿ) [೫] ದೆಹಲಿ-ಲಾಹೋರ್ ಸೇವೆಯ ನಂತರದಲ್ಲಿ ಇದು ಎರಡನೇ ಅಂತರರಾಷ್ಟ್ರೀಯ ಬಸ್ ಸೇವೆಯಾಗಿದೆ. ಭಾರತದ ಎಲ್ಲಾ ನೆರೆಯ ದೇಶಗಳಿಗೂ ಇದೇ ರೀತಿಯ ಬಸ್ ಸೇವೆಗಳನ್ನು ಆರಂಭಿಸುವ ಯೋಜನೆ ಇದೆ.

ದೆಹಲಿಯಿಂದ ಕಠ್ಮಂಡುವಿಗೆ ಬಸ್ ಸೇವೆ ಆರಂಭ ಬದಲಾಯಿಸಿ

ಭಾರತದಿಂದ ನೇಪಾಳಕ್ಕೆ ಮೊದಲ ಬಸ್ ಸೇವೆಯನ್ನು ಮಂಗಳವಾರ, ೨೫ ನವೆಂಬರ್ ೨೦೧೪ ರಂದು ಆರಂಭಿಸಲಾಯಿತು. ನವೆಂಬರ್ ೨೬-೨೭ ರಿಂದ ೧೮ ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಕಠ್ಮಂಡುವಿಗೆ ಭೇಟಿ ನೀಡಿದಸಂದರ್ಭದಲ್ಲಿ, ನವದೆಹಲಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಂದ ಬಸ್ ಸೇವೆಯನ್ನು ಬಾವುಟ ನಿಶಾನೆ ತೋರಿಸುವುದರ ಮೂಲಕ ಪ್ರಾರಂಭಿಸಲಾಯಿತು. [೬] ಅಂತೆಯೇ, ಪ್ರಧಾನಮಂತ್ರಿ ಸುಶೀಲ್ ಕೊಯಿರಾಲ ಮತ್ತು ಭಾರತದ ಪರವಾಗಿ ನರೇಂದ್ರ ಮೋದಿಯವರು ಜಂಟಿಯಾಗಿ, ನೇಪಾಳದಲ್ಲಿ ಅದೇ ದಿನ ಕಠ್ಮಂಡು-ದೆಹಲಿ-ಕಠ್ಮಂಡು ಬಸ್ ಸೇವೆಗೆ ಬಾವುಟ ನಿಶಾನೆ ತೋರಿಸಿ ಆರಂಭಿಸಿದರು. [೭]

ದೆಹಲಿ-ಕಠ್ಮಂಡು ಬಸ್ ಸೇವೆಯ ಮಹತ್ವ ಬದಲಾಯಿಸಿ

ದೆಹಲಿ-ಕಠ್ಮಂಡು ಬಸ್ ಎರಡು ರಾಷ್ಟ್ರಗಳ ನಡುವೆ ಅಪೇಕ್ಷೆಯ ಸ್ನೇಹದ ಸಂಕೇತವಾಗಿದೆ. ಬಸ್ ಸೇವೆ ಆರಂಭವಾದಾಗಿನಿಂದ ಯಾತ್ರಾರ್ಥಿಗಳನ್ನು, ಪ್ರವಾಸಿಗರನ್ನು, ವಿದೇಶಿ ಪ್ರತಿನಿಧಿಗಳನ್ನು ಮತ್ತು ಎರಡೂ ರಾಷ್ಟ್ರಗಳ ಸಾರ್ವಜನಿಕರನ್ನು ಕರೆದೊಯ್ಯುತ್ತಿತ್ತು. ಅಂತೆಯೇ, ಇದು ದುಬಾರಿ ವಿಮಾನಗಳು ಮತ್ತು ವ್ಯಾಪಕವಾಗಿ ಕಿಕ್ಕಿರಿದ ರೈಲು ಸಾರಿಗೆಗೆ ಪರ್ಯಾಯವಾಗಿ ತನ್ನ ಜನಪ್ರಿಯತೆಯನ್ನು ಪಡೆಯಲಾರಂಭಿಸಿತು. ಈ ಬಸ್ ಸೇವೆ ಎರಡೂ ರಾಷ್ಟ್ರಗಳ ವ್ಯಾಪಾರ ಮತ್ತು ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಂತೆಯೇ, ಈ ಸೇವೆಯು ಎರಡು ರಾಷ್ಟ್ರಗಳ ನಡುವಿನ ಸಾರಿಗೆ ಸೇವೆಯಲ್ಲಿ ಆರ್ಥಿಕ ಸುಸ್ಥಿರತೆಯನ್ನು ಒದಗಿಸುತ್ತದೆ. ಎರಡೂ ದೇಶಗಳು ಬಲವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೊಂದಿರುವುದರಿಂದ ಬಸ್ ಸೇವೆಯ ಆರಂಭವು ನೇಪಾಳದೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುವುದು ವಿಮಾನಗಳು ಮತ್ತು ವ್ಯಾಪಕ ಜನದಟ್ಟಣೆಯ ರೈಲುಗಳಿಗೆ ಉತ್ತಮ ಪರ್ಯಾಯವಾಗಿದೆ. ಅಂತರ-ದೇಶೀಯ ಬಸ್ ಸೇವೆಯು ಜನಪ್ರಿಯತೆಯನ್ನು ಪಡೆಯುವುದಕ್ಕೆ ಕಾರಣವೆಂದರೆ ಬಸ್ಸಿನಲ್ಲಿ ಪ್ರಯಾಣಿಸುವ ಆರ್ಥಿಕ ಕಾರ್ಯಸಾಧ್ಯತೆ. ನೇಪಾಳ ಮತ್ತು ಭಾರತದ ಪ್ರವಾಸ ಸಂಸ್ಥೆಗಳು ಎರಡು ರಾಷ್ಟ್ರಗಳನ್ನು ಬಸ್ ಮೂಲಕ ಸಂಪರ್ಕಿಸುವ ಅತ್ಯುತ್ತಮ ಪ್ರಯಾಣ ಸೇವೆಯನ್ನು ಒದಗಿಸಲು ಸಹಯೋಗ ನೀಡುತ್ತಿವೆ. ಅಂತರ ಗಡಿ ಬಸ್ ಮಾರ್ಗ ಜಾಲಗಳು ಮತ್ತು ಉತ್ತಮ ದರದಲ್ಲಿ ಬಸ್ ಸೇವೆಗಳು ಎರಡೂ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ಮತ್ತು ನೆರೆಹೊರೆಯ ಸಂಬಂಧವನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ.

ಬಸ್ ಸೇವೆಯ ವಿವರಗಳು ಬದಲಾಯಿಸಿ

ಈ ಬಸ್ ಸೇವೆಯು ರಾಷ್ಟ್ರದ ರಾಜಧಾನಿ ದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದ ಬಸ್ ನಿಲ್ದಾಣದಿಂದ ಪ್ರಾರಂಭವಾಗುತ್ತದೆ. ಅಂದರೆ ಭಾರತದ ದಹಲಿಯಿಂದ ಪ್ರಾರಂಭವಾಗಿ ಮತ್ತು ಕಠ್ಮಂಡುವಿಗೆ ಕೊನೆಗೊಳ್ಳುತ್ತದೆ. ಈ ಮಾರ್ಗವು ಭಾರತದ ಆಗ್ರಾ, ಕಾನ್ಪುರ, ಫೈಜಾಬಾದ್, ಗೋರಖ್ ಪುರದ ಮೂಲಕ ಹೋಗುತ್ತದೆ. ನಂತರ ಬಸ್ ಸೊನೌಲಿ ಗಡಿಯನ್ನು ದಾಟಿ ಅಲ್ಲಿ ಕಸ್ಟಮ್ಸ್ ತಪಾಸಣೆ ನಡೆಸಲಾಗುತ್ತದೆ. ಅದೇ ರೀತಿ, ಬಸ್ ತಿಲೋತ್ತಮ, ರೂಪಂದೇಹಿ, ಕವಾಸೋಟಿ, ನಾರಾಯಣಗಡ ಮತ್ತು ಅಂತಿಮವಾಗಿ ಕಠ್ಮಂಡುವಿಗೆ ಹೋಗುವ ಮಾರ್ಗವನ್ನು ಅನುಸರಿಸುತ್ತದೆ. ನೇಪಾಳದಲ್ಲಿ, ಬಸ್ ನಿಲ್ದಾಣವು ಗೌಶಾಲ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯದ ಬಳಿ ಇದೆ. ಅಂತೆಯೇ, ಕಠ್ಮಂಡುವಿನ ಸುತ್ತಲೂ ವಿವಿಧ ಬಸ್ ನಿಲ್ದಾಣಗಳಿವೆ. ಕಠ್ಮಂಡುವಿನ ಸುತ್ತಲೂ ನಿಮಗೆ ಅನುಕೂಲಕರವಾದ ಬಸ್ ನಿಲ್ದಾಣವನ್ನು ನೀವು ಆಯ್ಕೆ ಮಾಡಬಹುದು. ಬಸ್ ನಿಲ್ದಾಣಗಳು: ಚಕ್ರಪಥ, ಗೊಂಗಬು ಹೊಸ ಬಸ್ ಪಾರ್ಕ್, ಸ್ವಯಂಭುನಾಥ ಹಾಮಾದ ಪೆಟ್ರೋಲ್ ಪಂಪ್ / ಕಲಂಕಿ ಬಾಬಾ ಪೆಟ್ರೋಲ್ ಪಂಪ್ ಅಂತೆಯೇ ನೀವು ನಾರಾಯಣನಾಥ, ಬುಟ್ವಾಲ್, ಮತ್ತು ಸುನೌಲಿಯಿಂದ ಬಸ್ ಪಡೆಯಬಹುದು. [೮]

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Now, a DTC bus to Kathmandu for Rs 2300". India Today. No. 25 November 2014. Retrieved 18 November 2018.
  2. ".: Ministry of Physical Infrastructure and Transport :". www.mopit.gov.np. Retrieved 20 May 2019.
  3. "Now, a DTC bus to Kathmandu for Rs 2300". India Today. No. 25 November 2014. Retrieved 18 November 2018."Now, a DTC bus to Kathmandu for Rs 2300". India Today (25 November 2014). Retrieved 18 November 2018.
  4. "Kuldip Nayar and the bus ride with Atal Bihari Vajpayee". Deccan Herald (in ಇಂಗ್ಲಿಷ್). 27 August 2018. Retrieved 20 May 2019.
  5. "Delhi Transport Corporation". www.dtcbooking.in. Retrieved 20 May 2019.
  6. "New Delhi-Kathmandu bus service launched". India Today (in ಇಂಗ್ಲಿಷ್). 25 November 2014. Retrieved 19 October 2019.
  7. Republica. "Ktm-Delhi bus service begins". My Republica (in ಇಂಗ್ಲಿಷ್). Retrieved 20 May 2019.[ಶಾಶ್ವತವಾಗಿ ಮಡಿದ ಕೊಂಡಿ]
  8. "Kathmandu to Delhi Bus". Vivaan Adventure. Retrieved 20 May 2019.