ಪಶುಪತಿನಾಥ ಮಂದಿರ
ಪಶುಪತಿನಾಥ ಮಂದಿರ ಅಂದರೆ ಶಿವ ನೇಪಾಳಿಗಳ ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.[೧][೨] ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. ಕಠ್ಮಂಡುವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.[೩]
ಪಶುಪತಿನಾಥ ದೇವಸ್ಥಾನ | |
---|---|
पशुपतिनाथ मन्दिर | |
ಭೂಗೋಳ | |
ಕಕ್ಷೆಗಳು | 27°42′35″N 85°20′55″E / 27.70972°N 85.34861°E |
ದೇಶ | ನೇಪಾಳ |
Province | ರಾಜ್ಯ 3 |
ಜಿಲ್ಲೆ | ಕಠ್ಮಂಡು |
ಸ್ಥಳ | ಕಠ್ಮಂಡುu |
ಸ್ಥಳ | ಗೌಶಾಲ, ಕಠ್ಮಂಡು |
ಸಂಸ್ಕೃತಿ | |
ಮುಖ್ಯ ದೇವರು | ಶಿವ |
ಪ್ರಮುಖ ಉತ್ಸವಗಳು | ಶಿವರಾತ್ರಿ, ಟೀಜ್, ಬಾಲಾ ಚತುರ್ದಶಿ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | ಪಗೋಡಾ |
ದೇವಾಲಯಗಳ ಸಂಖ್ಯೆ | 492 |
ಶಾಸನಗಳು | ಅಜ್ಞಾತ |
ಇತಿಹಾಸ ಮತ್ತು ಆಡಳಿತ | |
ನಿರ್ಮಾಣ | 16 ನೇ ಶತಮಾನ |
ಸೃಷ್ಟಿಕರ್ತ | ಅಜ್ಞಾತ |
ಅಧೀಕೃತ ಜಾಲತಾಣ | pashupati.org.np |
ಉಲ್ಲೇಖಗಳು
ಬದಲಾಯಿಸಿ- ↑ "Hindu Shrine: Pashupatinath in Nepal". Newsblaze.com. 2009-01-08. Archived from the original on 2016-03-04. Retrieved 2011-10-30.
- ↑ "SAARC tourism". Nepal.saarctourism.org. Archived from the original on 2010-07-22. Retrieved 2011-10-30.
- ↑ "Pashupatinath Temple expects over 7 Lakhs Devotees on Mahashivratri". IANS. news.biharprabha.com. Retrieved 23 February 2014.
Pashupatinath temple ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.