ದೂರಸಂವಹನ ವ್ಯವಸ್ಥೆ

ಸಂವಹನ ಕಲ್ಪಿಸುವ ಉದ್ದೇಶಕ್ಕಾಗಿ ಗಮನಾರ್ಹವಾದ ದೂರದ ಆಚೆಯಿಂದ ಮಾಹಿತಿಯ ಪ್ರಸಾರಣವೇ ದೂರಸಂವಹನ ವ್ಯವಸ್ಥೆ . ಮುಂಚಿನ ದಿನಗಳಲ್ಲಿ, ದೂರಸಂವಹನ ವ್ಯವಸ್ಥೆಗಾಗಿ ದೃಗ್ಗೋಚರ ಸಂಕೇತಗಳಾದ ಮಾರ್ಗದರ್ಶಕ ದೀಪಗಳು, ಹೊಗೆ, ಸಂಕೇತಕಂಬ ತಂತಿ ಸಂದೇಶಗಳು, ಸಂಕೇತ ಧ್ವಜಗಳು, ದ್ಯುತಿ ಸೌರಲೇಖಿಗಳನ್ನು ಬಳಸಿ ಅಥವಾ ಶಾಬ್ಧಿಕ ಸಂದೇಶಗಳಾದ ಡ್ರಮ್ ಬಾರಿಸುವ ಮೂಲಕ ಸಂಕೇತ ಕಳುಹಿಸುವುದು, ಕೊಂಬು ಊದುವ ಮೂಲಕ, ಅಥವಾ ದೊಡ್ಡದಾದ ಸಿಳ್ಳು ಹಾಕುವುದು ಇವುಗಳನ್ನು ಬಳಸಲಾಗುತ್ತಿತ್ತು. ವಿದ್ಯುಚ್ಛಕ್ತಿ ಮತ್ತು ವಿದ್ಯುಜ್ಜನಿತಗಳ ಆಧುನಿಕ ಯುಗದಲ್ಲಿ ದೂರಸಂವಹನ ವ್ಯವಸ್ಥೆಗಾಗಿ ವಿದ್ಯುತ್ ಉಪಕರಣಗಳಾದ ತಂತಿ ಸಂದೇಶಗಳು, ದೂರವಾಣಿ, ಟೆಲೆಗ್ರಾಫ್ ಯಂತ್ರಗಳು, ರೇಡಿಯೋ ಮತ್ತು ಸೂಕ್ಷ್ಮತರಂಗ ಸಂವಹನಗಳ ಬಳಕೆ ಹಾಗೆಯೆ ಫೈಬರ್ ಆಪ್ಟಿಕ್ಸ್ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯುಜ್ಜನಿತಗಳು, ಮತ್ತು ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳು ಮತ್ತು ಅಂತರಜಾಲ ಬಳಸಿಕೊಳ್ಳುತ್ತಿದ್ದೇವೆ.

ಪ್ಯಾರಿಸ್‌ನಲ್ಲಿನ ಮುಸೀ ಡಸ್ ಆರ್ಟ್ಸ್ ಎಟ್ ಮೆಟೈರ್ಸ್‍‌ನಲ್ಲಿನ ಗೊವರ್ ದೂರವಾಣಿ

೧೮೩೦ರಲ್ಲಿ ತಂತಿ ಸಂದೇಶದ ಸಂಪೂರ್ಣ ಬೆಳವಣಿಗೆಯಾಗುತ್ತಿದ್ದಂತೆ ಆಧುನಿಕ ವಿದ್ದುಜ್ಜನಿತ ದೂರಸಂವಹನ ವ್ಯವಸ್ಥೆಯಲ್ಲಿ ಮೊದಲಬಾರಿಗೆ ಹೊಸ ಬೆಳವಣಿಗೆ ಆರಂಭವಾಯಿತು. ಹತ್ತೊಂಭತ್ತನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಖಂಡಗಳಲ್ಲೂ ಸಂವಹನದಲ್ಲಿ ವಿದ್ಯುತ್ತಿನ ಬಳಕೆಯು ಹೆಚ್ಚಾಯಿತು, ಮತ್ತು ಸಮುದ್ರದ ನೆಲದಲ್ಲಿ ಕೇಬಲ್ ಎಳೆಯುವ ಮೂಲಕ ಖಂಡಗಳ ನಡುವೆ ಸಂವಹನ ಕಲ್ಪಿಸಲಾಗುತ್ತಿದೆ. ವಿದ್ಯುತ್ತಿನ ದೂರಸಂವಹನ ವ್ಯವಸ್ಥೆಯಲ್ಲಿ ಬಳಸಲಾಗುವ ಪ್ರಸಿದ್ಧ ಮೂರು ಪದ್ಧತಿಗಳು, ತಂತಿ ಸಂದೇಶ, ದೂರವಾಣಿ ಮತ್ತು ಟೆಲೆಗ್ರಾಫ್ ಯಂತ್ರಗಳು, ಇವೆಲ್ಲವುಗಳಿಗೂ ವಾಹಕ ಲೋಹ ತಂತಿಯ ಬಳಕೆ ಅಗತ್ಯ.

ಇಪ್ಪನೇಯ ಶತಮಾನದ ಆರಂಭದ ದಶಕದಲ್ಲಿ ನಿಸ್ತಂತು ದೂರಸಂವಹನ ವ್ಯವಸ್ಥೆಯ ಕ್ರಾಂತಿ ಶುರುವಾಯಿತು. ಮಾರ್ಕೋನಿ ಗುಗ್ಲಿಯೆಲ್ಮೊ ನಿಸ್ತಂತು ರೇಡಿಯೋ ಸಂವಹನದ ಪ್ರಾರಂಭಿಕ ಬೆಳವಣಿಗೆಗಾಗಿ ೧೯೦೯ರಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಪಡೆದುಕೊಂಡರು. ವಿದ್ಯುತ್ ಸಂಬಂಧಿ ಮತ್ತು ವಿದ್ಯುಜ್ಜನಕ ಕ್ಷೇತ್ರದಲ್ಲಿ ಅತಿ ಹೆಚ್ಚು ಗುರುತಿಸಲ್ಪಡುವ ಇತರೆ ಮೂಲ ಪ್ರವರ್ತಕರು ಮತ್ತು ಅಭಿವೃದ್ಧಿ ಪಡಿಸಿದವರು: ಚಾರ್ಲ್ಸ್ ವೀಟ್‌ಸ್ಟೋನ್, ಮತ್ತು ಸ್ಯಾಮ್ಯುಯೆಲ್ ಮೋರ್ಸ್ (ತಂತಿ ಸಂದೇಶ), ಅಲೆಗ್ಸಾಂಡರ್ ಗ್ರಹಾಂ ಬೆಲ್ (ದೂರವಾಣಿ), ನಿಕೊಲಾ ಟೆಸ್ಲಾ, ಎಡ್ವಿನ್ ಆರ್ಮ್‌ಸ್ಟ್ರಾಂಗ್, ಮತ್ತು ಲೀ ಡೆ ಫಾರೆಸ್ಟ್ (ರೇಡಿಯೋ) ಜಾನ್ ಲಾಗಿ ಬೇರ್ಡ್ ಮತ್ತು ಫಿಲೊ ಫಾರ್ನ್ಸ್‌‌ವರ್ತ್ (ದೂರದರ್ಶನ).

ದೂರಸಂವಹನ ವ್ಯವಸ್ಥೆಯು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ೨೦೦೮ರಲ್ಲಿ ಜಗತ್ತಿನ ದೂರಸಂವಹನ ವ್ಯವಸ್ಥೆ ಉದ್ಯಮದ ಅಂದಾಜು ಆದಾಯ $೩.೮೫ ಟ್ರಿಲಿಯನ್‌ಗಳು.[] ೨೦೦೮ರಲ್ಲಿ ಜಾಗತಿಕ ದೂರಸಂವಹನ ವ್ಯವಸ್ಥೆ ಸೇವೆಯ ಅಂದಾಜು ಆದಾಯ $೧.೭ ಟ್ರಿಲಿಯನ್‌ಗಳು, ೨೦೧೩ರಲ್ಲಿ ಇದು $೨.೭ ಟ್ರಿಲಿಯನ್‌ಗಳಿಗೆ ಮುಟ್ಟುವ ನಿರೀಕ್ಷೆಯಿದೆ.[]

ಇತಿಹಾಸ

ಬದಲಾಯಿಸಿ

ಪ್ರಾರಂಭಿಕ ದೂರಸಂವಹನ ವ್ಯವಸ್ಥೆಗಳು

ಬದಲಾಯಿಸಿ
 
ನೆಲ್ಬಾಕ್‌ನಲ್ಲಿನ ಚಪ್ಪೆಸ್ ಸೆಮಫೋರ್ ಶಿಖರಗಳಲ್ಲಿನ ಪ್ರತಿಕೃತಿಗಳಲ್ಲೊಂದು

ಮಧ್ಯಯುಗದ ಸಮಯದಲ್ಲಿ ಸಂಕೇತಗಳನ್ನು ಮರುಪ್ರಸಾರ ಮಾಡಲು ಸಾಮಾನ್ಯವಾಗಿ ಬೆಟ್ಟದ ತುದಿಯಲ್ಲಿ ಮಾರ್ಗದರ್ಶಕ ದೀಪಗಳ ಸಾಲನ್ನು ಬಳಸಲಾಗುತ್ತಿತ್ತು. ಮಾರ್ಗದರ್ಶಕ ದೀಪ ಸಾಲುಗಳು ಕೇವಲ ಒಂದೇ ಮಾಹಿತಿಯನ್ನು ಬಿತ್ತರಿಸುವ ನ್ಯೂನ್ಯತೆ ಹೊಂದಿದ್ದವು. ಉದಾಹರಣೆಗೆ " ಶತ್ರುಗಳು ಕಾಣಿಸಿಕೊಂಡಿದ್ದಾರೆ" ಎಂಬರ್ಥದ ಮಾಹಿತಿಯನ್ನು ಇದರ ಮೂಲಕ ತಿಳಿಸಬಹುದಾಗಿತ್ತು. ಸ್ಪ್ಯಾನಿಷ್ ಆರ್ಮಡಾ ಸಮಯದಲ್ಲಾದ ಗುರುತಿಸಬಹುದಾದ ಒಂದು ಘಟನೆಯು ಇವುಗಳ ಉಪಯೋಗದ ಬಗ್ಗೆ ತಿಳಿಸುತ್ತದೆ. ಮಾರ್ಗದರ್ಶಕ ದೀಪ ಸಾಲುಗಳು ಪ್ಲೇಮೌತ್‌ನಿಂದ ಲಂಡನ್ನಿಗೆ ಮರುಪ್ರಸಾರ ಮಾಡಿದ ಸಂಕೇತವು ಸ್ಪ್ಯಾನಿಷ್ ಸಮರ ನೌಕೆ ಆಗಮಿಸುವುದನ್ನು ತಿಳಿಸಿದ್ದವು.[]

೧೭೯೨ರಲ್ಲಿ, ಕ್ಲಾಡ್ ಶಾಪ್ ಎಂಬ ಫ್ರೆಂಚ್ ಇಂಜಿನೀಯರ್, ಲಿಲ್ಲೆ ಮತ್ತುಪ್ಯಾರಿಸ್ ನಡುವೆ ಮೊಟ್ಟ ಮೊದಲ ಬಾರಿಗೆ ಸ್ಥಿರ ದೃಗ್ಗೋಚರ ತಂತಿ ಸಂದೇಶ ವ್ಯವಸ್ಥೆಯನ್ನು(ಅಥವಾ ಸಂಕೇತಕಂಬ ಸಾಲು) ನಿರ್ಮಾಣ ಮಾಡಿದನು.[] ಆದರೆ ಸಂಕೇತ ಕಂಬ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ನುರಿತ ಕೆಲಸಗಾರರ ಕೊರತೆ ಮತ್ತು ಹತ್ತರಿಂದ ಮೂವತ್ತು ಕಿಲೋಮೀಟರ್(ಆರರಿಂದ ಇಪ್ಪತ್ತು ಮೈಲು) ಮಧ್ಯದಲ್ಲಿ ಗೋಪುರ ನಿರ್ಮಾಣಕ್ಕೆ ಹೆಚ್ಚು ವೆಚ್ಚವಾಗುತ್ತಿತ್ತು. ವಿದ್ಯುತ್ತಿನ ತಂತಿ ಸಂದೇಶದ ಸ್ಪರ್ಧೆಯಿಂದಾಗಿ ೧೮೮೦ರಲ್ಲಿ ಕೊನೆಯ ವಾಣಿಜ್ಯ ಬಳಕೆಯ ಸಂಕೇತಕಂಬ ಸಾಲುಗಳನ್ನು ಕೈಬಿಡಲಾಯಿತು.[]

ತಂತಿ ಸಂದೇಶ ಮತ್ತು ದೂರವಾಣಿ

ಬದಲಾಯಿಸಿ

ಸರ್ ಚಾರ್ಲ್ಸ್ ವೀಟ್‌ಸ್ಟೋನ್ ಮತ್ತು ಸರ್ ವಿಲಿಯಂ ಪೋದರ್‌ಗ್ರಿಲ್ ಕುಕ್ ಎಂಬುವವರು ವಾಣಿಜ್ಯ ಬಳಕೆಯ ಮೊಟ್ಟ ಮೊದಲ ವಿದ್ಯುತ್ತಿನ ತಂತಿ ಸಂದೇಶ ನಿರ್ಮಾಣ ಮಾಡಿದರು, ಏಪ್ರಿಲ್ ೯, ೧೮೩೯ರಿಂದ ಇದರ ಉಪಯೋಗ ಪ್ರಾರಂಭವಾಯಿತು. ವೀಟ್‌ಸ್ಟೋನ್ ಮತ್ತು ಕುಕ್ ಇಬ್ಬರು ತಮ್ಮ ಉಪಕರಣವನ್ನು "ಹೊಸ ಉಪಕರಣವಾಗಿ ತಿಳಿಯದೆ(ಈಗಾಗಲೇ ಅಸ್ತಿತ್ವದಲ್ಲಿರುವ)ವಿದ್ಯುತ್ಕಾಂತೀಯ ತಂತಿ ಸಂದೇಶದ ಸುಧಾರಿತ" ಉಪಕರಣ ಎಂಬ ಅಭಿಪ್ರಾಯ ಹೊಂದಿದ್ದರು.[]

ಅಮೇರಿಕಾ ಸಂಯುಕ್ತ ಸಂಸ್ಥಾನದ ಸ್ಯಾಮ್ಯುಯೆಲ್ ಎಫ್.ಬಿ ಮೋರ್ಸ್ ಎಂಬ ವ್ಯಾಪಾರಿ ಮತ್ತು ಜೋಸೆಫ್ ಹೆನ್ರಿ ಎಂಬ ಭೌತವಿಜ್ಞಾನಿ ತಮ್ಮದೇ ಆದ ಸ್ವಂತ ವಿದ್ಯುತ್ತಿನ ತಂತಿ ಸಂದೇಶದ ಉಪಕರಣದ ಸರಳವಾದ ಆವೃತ್ತಿಯನ್ನು ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿದರು. ಮೋರ್ಸ್ ಸೆಪ್ಟೆಂಬರ್ ೨, ೧೮೩೭ರಂದು ಈ ಪದ್ಧತಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಈ ತಂತಿ ಸಂದೇಶಕ್ಕೆ ಮೋರ್ಸ‌ರ ಪ್ರಮುಖ ತಾಂತ್ರಿಕ ಕೊಡುಗೆ ಎಂದರೆ ಸರಳ ಮತ್ತು ಉತ್ತಮ ದಕ್ಷತೆ ಹೊಂದಿದ ಮೋರ್ಸ್ ಕೋಡ್(ಮೋರ್ಸ್ ಸಂಕೇತ) ಇದು ವೀಟ್‌ಸ್ಟೋನ್‌ರ ಜಟಿಲವಾದ ತಂತಿ ಸಂದೇಶದ ವ್ಯವಸ್ಥೆಗಿಂತ ಹೆಚ್ಚು ಮುಂದುವರೆದಿತ್ತು. ಮೋರ್ಸ್ ಕೋಡ್‌ನ ಸಂವಹನ ಕಾರ್ಯಪಟುತ್ವವು ಮುಂದಿನ ೧೦೦ ವರ್ಷಗಳಲ್ಲಿ ಡಿಜಿಟಲ್ ಸಂವಹನದ ಹಫ್‌ಮನ್ ಕೋಡ್ ಬರುವುದನ್ನ ನಿರೀಕ್ಷಿಸಿತ್ತು. ಮೋರ್ಸ್ ತನ್ನ ಕೋಡ್‌ನ್ನು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಿದ್ದರು. ಆದರೆ ಹಫ್‌ಮನ್ ಇದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಸೈದ್ಧಾಂತಿಕವಾಗಿ ವಿವರವಾದ ಸ್ಪಷ್ಟೀಕರಣ ನೀಡಿದ್ದರು.

ಜುಲೈ ೨೭ ೧೮೬೬ರಂದು ಯಶಸ್ವಿಯಾಗಿ ಮೊದಲ ಸ್ಥಿರ ತಂತಿ ಸಂದೇಶ ಕೇಬಲ್ ಅಟ್ಲಾಂಟಿಕ್ ಸಮುದ್ರ ದಾಟಿತು, ಮತ್ತು ಮೊದಲ ಬಾರಿಗೆ ವಿದ್ಯುತ್ತಿನ ಸಂವಹನವು ಅಟ್ಲಾಂಟಿಕ್ ಸಮುದ್ರ ದಾಟಲು ಅನುವು ಮಾಡಿಕೊಟ್ಟಿತು.[] ೧೮೫೯ರಲ್ಲಿ ಕೆಲವು ತಿಂಗಳು ಮೊದಲ ಅಟ್ಲಾಂಟಿಕ್ ಸಮುದ್ರ ದಾಟಿದ ಕೇಬಲ್ ನಿರ್ವಹಣೆ ಮಾಡಲಾಯಿತು, ಮತ್ತು ಇತರೆ ವಿಷಯಗಳ ನಡುವೆ ಅಮೆರಿಕಾದ ಅಧ್ಯಕ್ಷ ಜೇಮ್ಸ್ ಬುಚನನ್ ಮತ್ತು ಯುನೈಟೆಡ್ ಕಿಂಗ್‌ಡಮ್ ರಾಣಿ ವಿಕ್ಟೋರಿಯಾ ನಡುವೆ ಶುಭ ಸಂದೇಶಗಳು ವಿನಿಮಯವಾಗುತ್ತಿದ್ದವು.

ಆದರೆ ಈ ಅಟ್ಲಾಂಟಿಕ್ ದಾಟಿದ ಕೇಬಲ್ ಬೇಗನೆ ವೈಫಲ್ಯ ಹೊಂದಿತು, ಇದಕ್ಕೆ ಬದಲಿ ಮಾರ್ಗವನ್ನು ಸ್ಥಾಪಿಸುವ ಯೋಜನೆಯು ಅಮೆರಿಕಾದ ಅಂತರ್ಯುದ್ಧದಿಂದ ಐದು ವರ್ಷ ನಿಧಾನವಾಯಿತು. ಅಟ್ಲಾಂಟಿಕ್ ದಾಟಿದ ಕೇಬಲ್‌ಗಳು ಈಗಾಗಲೇ ಸಂಶೋಧನೆಯಾಗಿದ್ದ ದೂರವಾಣಿ ಕರೆಯನ್ನು ಕೂಡ ಒಯ್ಯಲು ಅಸಮರ್ಥವಾಗಿತ್ತು. ಮೊದಲ ಬಾರಿಗೆ ಅಟ್ಲಾಂಟಿಕ್ ದಾಟಿದ ದೂರವಾಣಿ ತಂತಿಗಳು(ನೂರಾರು ವಿದ್ಯುಜ್ಜನಕ ಧ್ವನಿವರ್ಧಕಗಳನ್ನು ಒಟ್ಟುಸೇರಿಸಲಾಗಿದ್ದ)1956ರ ವರೆಗೂ ಕಾರ್ಯ ನಿರ್ವಹಿಸಲಿಲ್ಲ.[]

ಈಗ ಪ್ರಪಂಚದಾದ್ಯಂತ ಬಳಸುತ್ತಿರುವ ಸಾಂಪ್ರದಾಯಿಕ ದೂರವಾಣಿಗೆ ಅಲೆಗ್ಸಾಂಡರ್ ಗ್ರಹಾಂ ಬೆಲ್ ೧೮೭೬ ಮಾರ್ಚ್‌ನಲ್ಲಿ ಮೊದಲು ಪೇಟೆಂಟ್ ಪಡೆದುಕೊಂಡರು.[] ಬೆಲ್ ಪಡೆದುಕೊಂಡ ಮೊದಲ ಪೇಟೆಂಟ್ ದೂರವಾಣಿಯ ಮಾಸ್ಟರ್ ಪೇಟೆಂಟ್ , ವಿದ್ಯುತ್ ದೂರವಾಣಿ ಉಪಕರಣಗಳು ಮತ್ತು ಲಕ್ಷಣಗಳಿಗಾಗಿ ಇತರೆ ಹಲವಾರು ಪೇಟೆಂಟ್‌ಗಳು ಬಂದವು. ವಿದ್ಯುತ್ ದೂರವಾಣಿ ಸಂಶೋಧನೆಯ ಕೀರ್ತಿಯು ಪದೆ ಪದೇ ವಿವಾದಕ್ಕೊಳಗಾಗುತ್ತಿದ್ದು ಕಾಲದಿಂದ ಕಾಲಕ್ಕೆ ಈ ವಿಷಯದ ಮೇಲೆ ಹೊಸದಾದ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದರ ಜೊತೆಗೆ ರೇಡಿಯೋ, ದೂರದರ್ಶನ ಬೆಳಕಿನ ಬಲ್ಬ್ ಮತ್ತು ಡಿಜಿಟಲ್ ಗಣಕಯಂತ್ರದಂತಹ ಪ್ರಮುಖ ಸಂಶೋಧನೆಯಾದವು. ಹಲವಾರು ಸಂಶೋಧಕರು ತಂತಿ ಮೂಲಕ ಧ್ವನಿ ಪ್ರಸಾರಣ ದ ಮೇಲೆ ಪ್ರಮುಖ ಪ್ರಯೋಗಗಳನ್ನು ನಡೆಸಿದರು. ನಂತರ ಪ್ರತಿಯೊಬ್ಬರ ಕಲ್ಪನೆಯ ಮೂಲಕ ಇವುಗಳು ಸುಧಾರಿತಗೊಂಡವು. ಪ್ರಮುಖ ಸಂಶೋಧಕರಾದ ಅಲೆಗ್ಸಾಂಡರ್ ಗ್ರಹಾಂ ಬೆಲ್ ಮತ್ತು ಗಾರ್ಡಿನರ್ ಗ್ರೀನ್ ಹಬ್ಬಾರ್ಡ್ ಮೊದಲ ದೂರವಾಣಿ ಕಂಪನಿಯನ್ನು ಹುಟ್ಟು ಹಾಕಿದರು. ಇದನ್ನು ಬೆಲ್ ಟೆಲಿಫೋನ್ ಕಂಪನಿ ಎಂದು ಕರೆಯಲಾಯಿತು ಇದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿತ್ತು. ನಂತರ ಅಮೆರಿಕನ್ ಟೆಲಿಫೋನ್& ಟೆಲಿಗ್ರಾಫ್(ಎಟಿ&ಟಿ) ಕಂಪನಿಯಾಗಿ ಬೆಳೆಯಿತು.

೧೮೭೮ ಮತ್ತು ೧೮೭೯ರಲ್ಲಿ ಮೊಟ್ಟ ಮೊದಲ ವಾಣಿಜ್ಯ ಬಳಕೆಯ ದೂರವಾಣಿಯನ್ನು ಅಟ್ಲಾಂಟಿಕ್ ಸಮುದ್ರದ ಎರಡು ಭಾಗಗಳಾದ ಕನೆಕ್ಟಿಕಟ್‌ನ ನ್ಯೂಹೆವನ್ ಮತ್ತು ಲಂಡನ್, ಇಂಗ್ಲೆಂಡ್‌‍ನಲ್ಲಿ ಸ್ಥಾಪಿಸಲಾಯಿತು.[][೧೦]

ರೇಡಿಯೋ ಮತ್ತು ದೂರದರ್ಶನ

ಬದಲಾಯಿಸಿ

೧೮೩೨ರಲ್ಲಿ ಜೇಮ್ಸ್ ಲಿಂಡ್ಸೆಯವರು ತರಗತಿಯಲ್ಲಿ ವಾಹಕ ಜಲದ ಮೂಲಕ ನಿಸ್ತಂತು ತಂತಿ ಸಂದೇಶದ ಪ್ರದರ್ಶನ ನೀಡಿದರು. ೧೮೫೪ರಲ್ಲಿ ಸ್ಕಾಟ್‌ಲ್ಯಾಂಡಿನ ಡಂಡಿಯ ಫಿರ್ಥ್ ಆಫ್ ಟೇಯಿಂದ ವುಡ್‌ಹ್ಯಾವನ್ ವರೆಗೆ ಪ್ರಸಾರವಾಗುವುದನ್ನು ಪ್ರದರ್ಶಿಸಲು ಸಮರ್ಥರಾದರು ಇದರ ದೂರ ಸುಮಾರು ಎರಡು ಮೈಲಿ(ಮೂರು ಕಿಮೀ)ಮತ್ತೆ ನೀರನ್ನೆ ಪ್ರಸಾರಣ ಮಾಧ್ಯಮವಾಗಿ ಬಳಸಿಕೊಂಡಿದ್ದರು.[೧೧] ಡಿಸೆಂಬರ್ ೧೯೦೧ರಲ್ಲಿ ಗುಗ್ಲಿಯೆಲ್ಮೊ ಮಾರ್ಕೋನಿ ಸೇಂಟ್ ಜಾನ್ಸ್ ನ್ಯೂಫೌಂಡ್‌‍ಲ್ಯಾಂಡ್ ಮತ್ತು ಪೋಲ್ಡು ಕಾರ್ನವಾಲ್(ಇಂಗ್ಲೆಂಡ್)‌, ನಡುವೆ ನಿಸ್ತಂತು ಸಂವಹನ ಸ್ಥಾಪಿಸಿದರು, ಇದಕ್ಕಾಗಿ ೧೯೦೯ರಲ್ಲಿ ಭೌತಶಾಸ್ತ್ರದಲ್ಲಿನ ನೋಬೆಲ್ ಬಹುಮಾನವನ್ನು ಕಾರ್ಲ್ ಬ್ರೌನ್ ಜೊತೆ ಹಂಚಿಕೊಂಡರು.[೧೨] ನ್ಯಾಷನಲ್ ಎಲೆಕ್ಟ್ರಿಕಲ್ ಲೈಟ್ ಅಸೋಸಿಯೇಶನ್‌ಗಿಂತ ಮೊದಲೆ ೧೮೯೩ರಲ್ಲಿ ನಿಕೋಲಾ ಟೆಸ್ಲಾ ಎಂಬುವವರು ಸಣ್ಣ ಪ್ರಮಾಣ ದ ರೇಡಿಯೋ ಸಂವಹನವನ್ನು ಪ್ರದರ್ಶಿಸಿದ್ದರು.[೧೩]

ಮಾರ್ಚ್ ೨೫, ೧೯೨೫ರಂದು ಇಂಗ್ಲೆಂಡಿನ ಜಾನ್ ಲೂಗಿ ಬೀಯರ್ಡ್ ಲಂಡನ್,ಇಂಗ್ಲೆಂಡ್‌ನಲ್ಲಿನ ಸೆಲ್ಫ್ರಿಡ್ಜ್‌ನ ಸಕಲವಸ್ತು ಮಳಿಗೆಯಲ್ಲಿ ಚಲಿಸುವ ಚಿತ್ರಗಳ ಪ್ರಸಾರವನ್ನು ಪ್ರದರ್ಶನ ಮಾಡಿದನು. ಬೇರ್ಡ್‌ನ ಪದ್ಧತಿಯು ವೇಗವಾಗಿ ತಿರುಗುವ ನಿಪ್ಕೊ ಡಿಸ್ಕ್ ಬಳಸಿಕೊಂಡು ಪ್ರಸಾರವಾಯಿತು, ಮತ್ತು ನಂತರ ಇದೆ ವಿದ್ಯುದ್ಯಾಂತ್ರಿಕ ದೂರದರ್ಶನ ಎಂದು ಕರೆಯಲ್ಪಟ್ಟಿತು. ಪ್ರಯೋಗಾತ್ಮಕ ಆಧಾರದಲ್ಲಿ ರೂಪಿಸಲಾಗಿದ್ದನ್ನು ಸೆಪ್ಟೆಂಬರ್ ೩೦, ೧೯೨೯ರಿಂದ ಬ್ರಿಟೀಷ್ ಬ್ರಾಡ್‌ಕ್ಯಾಸ್ಟಿಂಗ್ ಕಾರ್ಪೋರೇಶನ್‌ ಪ್ರಸಾರಣ ಮಾಡಿತು.[೧೪] ಇಪ್ಪತ್ತನೇಯ ಶತಮಾನದ ಬಹುತೇಕ ದೂರದರ್ಶನ ವ್ಯವಸ್ಥೆಗಳು ಕ್ಯಾಥೋಡ್ ರೇ ಟ್ಯೂಬ್ ವಿನ್ಯಾಸ ಹೊಂದಿದ್ದವು. ಇದನ್ನು ಕಾರ್ಲ್ ಬ್ರೌನ್ ಸಂಶೋಧಿಸಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಫಿಲೊ ಫಾರ್ನ್ಸ್‌‌ವರ್ತ್ ಇಲೆಕ್ಟ್ರಾನಿಕ್ ದೂರದರ್ಶನದ ಮೊದಲ ಆವೃತ್ತಿಯನ್ನು ನೀಡುವ ಭರವಸೆ ನೀಡಿದ್ದರು ಮತ್ತು ಸೆಪ್ಟೆಂಬರ್ ೭, ೧೯೨೭ರಂದು ಇಡಾಹೊನಲ್ಲಿ ತಮ್ಮ ಕುಟುಂಬಕ್ಕೆ ಇದನ್ನು ತೋರಿಸಿದರು.[೧೫]

ಗಣಕಯಂತ್ರ ಜಾಲಗಳು ಮತ್ತು ಅಂತರಜಾಲ

ಬದಲಾಯಿಸಿ

ಸೆಪ್ಟೆಂಬರ್ ೧೧ ೧೯೪೦ರಂದು ಜಾರ್ಜ್ ಸ್ಟಿಬಿಟ್ಜ್ ಎಂಬುವವರು ನ್ಯೂಯಾರ್ಕ್‌ನಲ್ಲಿ ದೂರಮುದ್ರಕ ಯಂತ್ರ ಬಳಸಿಕೊಂಡು ತನ್ನ ಕಾಂಪ್ಲೆಕ್ಸ್ ನಂಬರ್ ಕ್ಯಾಲ್ಕ್ಯುಲೇಟರ್‌ಗೆ ತೊಂದರೆಗಳನ್ನು ಕಳುಹಿಸಿದರು ಮತ್ತು ನ್ಯೂ ಹ್ಯಾಂಪ್‌ಶಾಯರ್‌ನ ಡಾರ್ತ್‌ಮೌತ್ ಕಾಲೇಜ್‌ನಲ್ಲಿ ಕಂಪ್ಯೂಟೆಡ್ ಪರಿಣಾಮವನ್ನು ವಾಪಸ್ಸು ಪಡೆದುಕೊಂಡರು.[೧೬] ೧೯೫೦ ಮತ್ತು ೬೦ರ ದಶಕದಲ್ಲಿ ದೂರನಿಯಂತ್ರಿತ ಕೇಂದ್ರೀಕೃತ ಗಣಕಯಂತ್ರ ಅಥವಾ ಮೇನ್‌ಫ್ರೇಮ್ ಗಣಕಯಂತ್ರವು " ಡಂಬ್ ಟರ್ಮಿನಲ್ಸ್" ಆಗಿ ಪ್ರಸಿದ್ಧವಾಗಿದ್ದವು. ೧೯೬೦ರ ನಂತರ ಸಂಶೋಧಕರು ಪಾಕೇಟ್ ಸ್ವಿಚ್ಚಿಂಗ್( ಡಿಜಿಟಲ್ ಸಂವಹನ ಜಾಲ) ಎಂಬ ತಂತ್ರಜ್ಞಾನವನ್ನು ಕಂಡುಹಿಡಿಯಲು ಆರಂಭಿಸಿದರು, ಇದು ಅಪಾರ ಪ್ರಮಾಣದ ಮಾಹಿತಿಯನ್ನು ಯಾವುದೇ ಕೇಂದ್ರಿಕೃತ ಮುಖ್ಯಚೌಕಟ್ಟಿಲ್ಲದೆ ಎರಡು ಗಣಕಯಂತ್ರಗಳ ನಡುವೆ ನೇರವಾಗಿ ಮಾಹಿತಿಯನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಡಿಸೆಂಬರ್ ೫, ೧೯೬೯ರಂದು ಫೋರ್-ನೋಡ್ ಜಾಲವು ಉಗಮವಾಯಿತು. ಶೀಘ್ರವೇ ಈ ಸಂವಹನಜಾಲವು ಆರ್ಪಾನೆಟ್(ದ ಅಡ್ವಾನ್ಸ್ಡ್ ರಿಸರ್ಚ್ ಪ್ರೊಜೆಕ್ಟ್ಸ್ ಏಜನ್ಸಿ ನೆಟ್‌ವರ್ಕ್ ಆಯಿತು, ೧೯೮೧ರಿಂದ ೨೧೩ ಜಾಲಘಟಕ ಹೊಂದಿತು[೧೭]

ಆರ್ಪಾನೆಟ್ ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಸುತ್ತ ಕೇಂದ್ರಿಕೃತವಾಗುತ್ತವೆ ಮತ್ತು ಏಪ್ರಿಲ್ ೭ ೧೯೬೯, ಆರ್‌ಎಫ್‌ಸಿ ೧ ಪ್ರಕಟವಾಯಿತು. ಆರ್ಪಾನೆಟ್ ಪ್ರಮುಖವಾದ ಪ್ರಕ್ರಿಯೆ ಆಗಿದೆ ಏಕೆಂದರೆ ಇದು ಕೊನೆಯಲ್ಲಿ ಇತರೆ ಸಂವಹನ ಜಾಲದ ಜೊತೆಗೆ ಅಂತರಜಾಲ ರೂಪದಲ್ಲಿ ಸೇರಿಕೊಳ್ಳುತ್ತದೆ, ಮತ್ತು ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಮೂಲಕ ಇಂದಿನ ದಿನದಲ್ಲಿ ಅಂತರಜಾಲದ ಸಂವಹನದ ಹಲವಾರು ನಿಯಮಾವಳಿಗಳು ಪ್ರಸಾರವಾಗುತ್ತಿವೆ. ಸೆಪ್ಟೆಂಬರ್ ೧೯೮೧ರಲ್ಲಿ ಆರ್‌ಎಫ್‌ಸಿ ೭೯೧ ಅಂತರಜಾಲ ನಿಯಮಾವಳಿ ಆವೃತ್ತಿ ೪(ಐಪಿv೪)ನ್ನು ಪರಿಚಯಿಸಿತು ಮತ್ತು ಆರ್‌ಎಫ್‌ಸಿ ೭೯೩ ಪ್ರಸಾರಣ ನಿಯಂತ್ರಣ ನಿಯಮಾವಳಿ(ಟಿಸಿಪಿ) ಪರಿಚಯಿಸಿತು — ಹಾಗೆಯೇ ಟಿಸಿಪಿ/ಐಪಿ ನಿಯಮಾವಳಿಗಳನ್ನು ರಚಿಸಿದ್ದು ಇಂದು ಇವುಗಳು ಹೆಚ್ಚಿನ ಅಂತರಜಾಲ ಪ್ರಸಾರ ಮಾಡಿತ್ತಿದೆ.

ಹೀಗಿದ್ದರೂ, ರಿಕ್ವೆಸ್ಟ್ ಫಾರ್ ಕಮೆಂಟ್ ಪ್ರಕ್ರಿಯೆಯ ಮೂಲಕವೇ ಪ್ರಮುಖವಾದ ಎಲ್ಲಾ ಸುಧಾರಣೆಗಳನ್ನು ಮಾಡಲಾಗುತ್ತಿಲ್ಲ. ಪ್ರಾದೇಶಿಕ ಸಂವಹನಜಾಲ(ಲ್ಯಾನ್‌ಗಳು)ಕ್ಕಾಗಿ ೧೯೭೦ರಲ್ಲಿ ಪ್ರಸಿದ್ಧವಾದ ಎರಡು ಜೋಡಣಾ ಪ್ರಕಾರಗಳು (link protocols) ಕಂಡುಬಂದವು. ಅಕ್ಟೋಬರ್ ೨೯, ೧೯೭೪ರಂದು ಉಲೂಫ್ ಸೊಡರ್‌ಬ್ಲೊಮ್ಟೋಕನ್ ರಿಂಗ್ ನಿಯಮಾವಳಿಯ ಪೇಟೆಂಟ್‌ಗಾಗಿ ಅರ್ಜಿ ಹಾಕಿದರು ಮತ್ತು ಇಥರ್ನೆಟ್ನಿಯಮಾವಳಿಗಳ ಮೇಲಿನ ಪೇಪರ್‌ನ್ನು ರಾಬರ್ಟ್ ಮೆಟ್ಕಾಫ್ ಮತ್ತು ಡೇವಿಡ್ ಬಾಗ್ಸ್ ೧೯೭೬ರ ಕಮ್ಯೂನಿಕೇಶನ್ಸ್ ಆಫ್ ದ ಎಸಿಎಂ ನ ಜುಲೈ ಸಂಚಿಕೆಯಲ್ಲಿ ಪ್ರಕಟಿಸಿದರು.[೧೮][೧೯] ಹವಾಯಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಸಂಶೋಧಕರು ಅಭಿವೃದ್ಧಿ ಪಡಿಸಿದ ಅಲೊಹಾನೆಟ್ ನಿಯಮಾವಳಿಯಿಂದ ಇಥರ್ನೆಟ್ ನಿಯಮಾವಳಿ ಸ್ಫೂರ್ತಿ ಪಡೆದಿತ್ತು.

ಪ್ರಮುಖ ಪರಿಕಲ್ಪನೆಗಳು

ಬದಲಾಯಿಸಿ
ವ್ಯುತ್ಪತ್ತಿ
ದೂರಸಂವಹನ ವ್ಯವಸ್ಥೆ ಎಂಬ ಶಬ್ದವನ್ನು ಫ್ರೆಂಚ್‌ನ ಟೆಲಿಕಮ್ಯೂನಿಕೇಶನ್ ಎಂಬುದರಿಂದ ಅಳವಡಿಸಿಕೊಳ್ಳಲಾಗಿದೆ. ಇದು ಗ್ರೀಕ್‌ನ ಶಬ್ದ ಟೆಲಿ- ಯ ಉಪಸರ್ಗ (τηλε-), ಅಂದರೆ "ದೂರದ", ಮತ್ತು ಲ್ಯಾಟಿನ್‌ನ ಕಮ್ಯೂನಿಕೇರ್ ,ಅಂದರೆ "ಹಂಚಿಕೊಳ್ಳುವುದು".[೨೦] ಎಂಬುದರ ಸಂಯೋಗ ಶಬ್ದವಾಗಿದೆ. ಎಡೊವಾರ್ಡ್ ಎಸ್ಟಾನೈ ಎಂಬ ಫ್ರೆಂಚ್ ಇಂಜಿನೀಯರ್ ಮತ್ತು ಕಾಂಬರಿಕಾರ 1904ರಲ್ಲಿ ಫ್ರೆಂಚ್‌ನ ಟೆಲಿಕಮ್ಯೂನಿಕೇಶನ್ ಶಬ್ದವನ್ನು ಹುಟ್ಟುಹಾಕಿದನು.[೨೧]

ಸಾಹಿತ್ಯದಲ್ಲಿ ಆಧುನಿಕ ದೂರಸಂವಹನ ವ್ಯವಸ್ಥೆಯ ಕುರಿತಾಗಿ ಹಲವಾರು ಪ್ರಮುಖ ಕಲ್ಪನೆಗಳು ಮತ್ತೆ ಮತ್ತೆ ಕಂಡುಬರುತ್ತವೆ. ಕೆಲವು ಪರಿಕಲ್ಪನೆಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

ಮೂಲ ಅಂಶಗಳು

ಬದಲಾಯಿಸಿ

ಮೂಲ ದೂರಸಂವಹನ ವ್ಯವಸ್ಥೆಯು ಮೂರು ಬಗೆಯ ಪ್ರಾಥಮಿಕ ಅಂಶಗಳನ್ನು ಹೊಂದಿದ್ದು ಅವುಗಳು ಕೆಲವೊಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

  • ಪ್ರಸಾರ ಯಂತ್ರವು ಮಾಹಿತಿಯನ್ನು ತೆಗೆದುಕೊಂಡು ಸಂಕೇತಗಳಾಗಿ ಪರಿವರ್ತಿಸುತ್ತದೆ.
  • ಪ್ರಸಾರಣ ಮಾಧ್ಯಮವನ್ನು "ಭೌತಿಕ ಉಪಕರಣ" ಎಂದು ಕರೆಯುತ್ತಾರೆ ಇದು ಸಂಕೇತಗಳನ್ನು ಒಯ್ಯುತ್ತದೆ. ಇದಕ್ಕೊಂದು ಉದಾಹರಣೆ "ಮುಕ್ತ ಮಾರ್ಗ ಪ್ರಸಾರಕ"(free space channel) .
  • ಪ್ರಸಾರಕ ಮಾರ್ಗದಿಂದ ಸಂಕೇತವನ್ನು ಗ್ರಾಹಕವು ಪಡೆದುಕೊಂಡು ಇದನ್ನು ಬಳಸಬಲ್ಲ ಮಾಹಿತಿಯಾಗಿ ಪರಿವರ್ತಿಸುತ್ತದೆ.

ಉದಾಹರಣೆಗೆ ರೇಡಿಯೋ ಪ್ರಸಾರಣ ಕೇಂದ್ರದಲ್ಲಿ ಪ್ರಸಾರ ಯಂತ್ರವೇ ಕೇಂದ್ರದ ಅತಿದೊಡ್ಡ ಪವರ್ ಆ‍ಯ್‌೦ಪ್ಲಿಫೈಯರ್; ಮತ್ತು ಪ್ರಸಾರಣ ಆ‍ಯ್‌೦ಟೆನಾವು ಪವರ್ ಆ‍ಯ್‌೦ಪ್ಲಿಫೈಯರ್ ಮತ್ತು "ಮುಕ್ತ ಪ್ರಸಾರದ ನಡುವಿನ ಅಂತರ್‌‍ಸಂವಹನ ಸಾಧನವಾಗಿರುತ್ತದೆ. ಮುಕ್ತ ಮಾರ್ಗ ಪ್ರಸಾರಕ ಇದು ಮಾಧ್ಯಮವಾಗಿರುತ್ತದೆ; ಮತ್ತು ಗ್ರಾಹಕ ಆ‍ಯ್‌೦ಟೆನಾವು ಮುಕ್ತ ಪ್ರಸಾರ ಮತ್ತು ಗ್ರಾಹಕದ ನಡುವಿನ ಅಂತರ್ಸಂವಹನ ಸಾಧನವಾಗಿರುತ್ತದೆ. ಮುಂದೆ ರೇಡಿಯೋ ಸಂಕೇತವು ತಲುಪಬೇಕಾದ ಸ್ಥಳವೇ ರೇಡಿಯೋ ಗ್ರಾಹಕ, ಜನರಿಗೆ ಕೇಳಿಸುವಂತೆ ಮಾಡಲು ಇಲ್ಲಿ ಇವುಗಳನ್ನು ವಿದ್ಯುತ್ತಿನಿಂದ ಶಬ್ದವಾಗಿ ಪರಿವರ್ತಿಸುತ್ತದೆ.

ಕೆಲವೊಮ್ಮೆ, ದೂರಸಂವಹನ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್‌ನ ಒಂದೇ ಪೆಟ್ಟಿಗೆಯು ಪ್ರಸಾರ ಯಂತ್ರ ಮತ್ತು ಗ್ರಾಹಕ ಅಥವಾ ಟ್ರಾನ್ಸ್‌ರಿಸೀವರ್‌ ನೊಂದಿಗೆ "ದ್ವಿಮುಖ"ವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಸೆಲ್ಯುಲರ್ ಫೋನ್ ಟ್ರಾನ್ಸ್‌ರಿಸೀವರ್ ಆಗಿದೆ.[೨೨] ಟ್ರಾನ್ಸ್‌ರಿಸೀವರ್‌ನಲ್ಲಿ ಪ್ರಸಾರಣೆ ಇಲೆಕ್ಟ್ರಾನಿಕ್ಸ್ ಮತ್ತು ಗ್ರಾಹಕ ಇಲೆಕ್ಟ್ರಾನಿಕ್ಸ್ ಸ್ವತಂತ್ರವಾಗಿರುತ್ತದೆ. ರೇಡಿಯೋ ಪ್ರಸಾರ ಯಂತ್ರವು ಪವರ್ ಆ‍ಯ್‌೦ಪ್ಲಿಫೈಯರ್ ಹೊಂದಿದ್ದು ವ್ಯಾಟ್ಸ್ ಅಥವಾ ಕಿಲೋವ್ಯಾಟ್‌ಗಳಲ್ಲಿ ವಿದ್ಯುತ್ ಶಕ್ತಿಯನ್ನು ಅಳೆಯಲಾಗುತ್ತದೆ, ಆದರೆ ರೇಡಿಯೋ ಗ್ರಾಹಕವು ರೇಡಿಯೋ ಪವರ್ ಪ್ರಸಾರ ಮಾಡುವುದನ್ನು ಮೈಕ್ರೋವ್ಯಾಟ್ ಅಥವಾ ನ್ಯಾನೊವ್ಯಾಟ್‌ನಿಂದ ಅಳೆಯಲಾಗುತ್ತದೆ. ಆದ್ದರಿಂದ ಟ್ರಾನ್ಸ್‌ರಿಸೀವರ್‌ನ ಹೆಚ್ಚು ಪ್ರಮಾಣದ ಶಕ್ತಿ ಮತ್ತು ಕಡಿಮೆ ಪ್ರಮಾಣದ ಶಕ್ತಿಯ ವಿದ್ಯುತ್ ಸಂಚಾರ ಮಾರ್ಗವನ್ನು ಬೇರೆ ಬೇರೆಯಾಗಿ ತುಂಬಾ ಜಾಗೃತವಾಗಿ ವಿನ್ಯಾಸ ಮಾಡಲಾಗಿರುತ್ತದೆ.

ದೂರಸಂವಹನ ವ್ಯವಸ್ಥೆಗೆ ದೂರವಾಣಿ ತಂತಿಗಳನ್ನು ಬಳಸಿಕೊಳ್ಳಗಾಗುತ್ತದೆ ಇದನ್ನು ಬಿಂದುವಿನಿಂದ-ಬಿಂದು ಸಂವಹನ ಎಂದು ಕರೆಯಲಾಗುತ್ತದೆ ಏಕೆಂದರೆ ಒಂದು ಪ್ರಸಾರ ಯಂತ್ರ ಮತ್ತು ಒಂದು ಗ್ರಾಹಕದ ನಡುವೆ ಇರುತ್ತದೆ. ರೇಡಿಯೋ ಪ್ರಸಾರಣದ ಮೂಲಕ ಮಾಡುವ ದೂರಸಂವಹನ ವ್ಯವಸ್ಥೆಯನ್ನು ಪ್ರಸಾರಣ ಸಂವಹನ ಎಂದು ಕರೆಯಲಾಗುತ್ತದೆ ಏಕೆಂದರೆ ಒಂದು ಶಕ್ತಿಶಾಲಿಯಾದ ಪ್ರಸಾರ ಯಂತ್ರ ಮತ್ತು ಹಲವಾರು ಕಡಿಮೆ ಶಕ್ತಿಯ ಸೂಕ್ಷ್ಮವಾದ ರೇಡಿಯೋ ಗ್ರಾಹಕದ ನಡುವಿರುತ್ತದೆ.[೨೨]

ದೂರಸಂವಹನ ವ್ಯವಸ್ಥೆಯಲ್ಲಿ ಬಹುವಿಧ ಪ್ರಸಾರ ಯಂತ್ರಗಳು ಮತ್ತು ಬಹುವಿಧ ಗ್ರಾಹಕಗಳು ಒಂದೇ ಭೌತಿಕ ಉಪಕರಣವನ್ನು ಸಹವರ್ತಿಸಲು ಮತ್ತು ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗುಂತೆ ರೂಪಿಸಲಾಗಿದೆ ಇದನ್ನು ಬಹುವಿಧ ವ್ಯವಸ್ಥೆ ಎಂದು ಕರೆಯುತ್ತಾರೆ.

ಅನಲಾಗ್ ಅಥವಾ ಡಿಜಿಟಲ್ ಸಂವಹನ

ಬದಲಾಯಿಸಿ

ಸಂವಹನ ಸಂಕೇತಗಳು ಅನಲಾಗ್ ಸಂಕೇತಗಳು ಅಥವಾ ಡಿಜಿಟಲ್ ಸಂಕೇತಗಳಾಗಿ ಇರಬಹುದು. ಅದೇ ರೀತಿ ಅನಲಾಗ್ ಸಂವಹನ ವ್ಯವಸ್ಥೆ ಮತ್ತು ಡಿಜಿಟಲ್ ಸಂವಹನವ್ಯವಸ್ಥೆ ಎಂಬ ಎರಡು ಪ್ರಕಾರಗಳಿವೆ. ಅನಲಾಗ್ ಸಂಕೇತದಲ್ಲಿ, ಮಾಹಿತಿಗಳಿಗೆ ಅನುಗುಣವಾಗಿ ಸಂಕೇತಗಳು ಸತತವಾಗಿ ಬದಲಾಗುತ್ತಿರುತ್ತದೆ. ಡಿಜಿಟಲ್ ಸಂಕೇತದಲ್ಲಿ, ಮಾಹಿತಿಗಳು ಪ್ರತ್ಯೇಕ ಮೌಲ್ಯಗಳಾಗಿ ಎನ್‌ಕೋಡ್ ಆಗಿರುತ್ತವೆ (ಉದಾಹರಣೆಗೆ, ಜೋಡಿ ೧ ಮತ್ತು ೦ ). ಮಾಹಿತಿಯು ಪ್ರಸಾರ ಮತ್ತು ಪಡೆದುಕೊಳ್ಳುವ ಸಮಯದಲ್ಲಿ ಅನಲಾಗ್ ಸಂಕೇತಗಳ ರೂಪದಲ್ಲಿರುತ್ತದೆ. ಅನಪೇಕ್ಷಿತ ಅಡೆತಡೆ{/0ಯಿಂದ ಇದರ ಗುಣಮಟ್ಟ ಕಡಿಮೆ ಆಗುತ್ತದೆ ಇದನ್ನು ದೂರಮಾಡಲು ಸಾಧ್ಯವಿಲ್ಲ. (ಕಾರ್ಯೋಪಯೋಗಕ್ಕಾಗಿ ಪ್ರಸಾರ ಯಂತ್ರದಿಂದ ಹೊರಹೋಗುವ ಪ್ರಸಾರವು ಅಡೆತಡೆಯಿಂದ ಮುಕ್ತವಾಗಿರುತ್ತದೆ.) ಯಾದೃಚ್ಛಿಕ ದಾರಿಯಲ್ಲಿ ಅಪೇಕ್ಷಣೀಯ ಸಂಕೇತದಿಂದ ಸಂವಹನದಲ್ಲಿ ಅಡೆತಡೆಯು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಈ ರೀತಿಯ ಅಡೆತಡೆಯನ್ನು "ಮಿಶ್ರ ಅಡೆತಡೆ " ಎಂದು ಕರೆಯುತ್ತಾರೆ. ಬೇರೆ ಬೇರೆ ಸಮಯದಲ್ಲಿ ಅಡೆತಡೆಯು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ’ಮಿಶ್ರ ಅಡೆತಡೆ’ಯಲ್ಲದ ತಡೆಯನ್ನು ವಿವರಿಸುವುದು ಅಥವಾ ವಿಶ್ಲೇಷಿಸುವುದು ಕಷ್ಟಕರ ಮತ್ತು ಈ ರೀತಿಯ ಬೇರೆ ಬೇರೆ ಅಡೆತಡೆಗಳನ್ನು ಇಲ್ಲಿ ಕಡಿಮೆಗೊಳಿಸಲಾಗುವುದು.

ಇನ್ನೊಂದು ರೀತಿಯಲ್ಲಿ ಹೇಳುವುದಾರರೆ ಎಡಿಟಿವ್ ಅಡೆತಡೆ ತೊಂದರೆಯು ಸ್ಪಲ್ಪಮಟ್ಟಿನ ಮಿತಿಯನ್ನು ಆಕ್ರಮಿಸಿಕೊಳ್ಳುತ್ತದೆ, ಮಾಹಿತಿಗಳು ಡಿಜಿಟಲ್ ಸಂಕೇತಗಳ ರೂಪದಲ್ಲಿದ್ದು ಹಾಗೆಯೇ ಉಳಿದಿರುತ್ತವೆ. ಅಡೆತಡೆಯನ್ನು ಪ್ರತಿರೋಧಿಸುವುದರಿಂದ ಡಿಜಿಟಲ್ ಸಂಕೇತಗಳು ಅನಲಾಗ್ ಸಂಕೇತಗಳಿಗಿಂತ ಅನುಕೂಲತೆಗಳನ್ನು ಹೊಂದಿದೆ.[೨೩]

ಸಂವಹನ ಜಾಲಗಳು ಜಾಲಗಳು

ಬದಲಾಯಿಸಿ

ಸಂವಹನ ಜಾಲಗಳೆಂದರೆ ಪ್ರಸಾರ ಯಂತ್ರಗಳು, ಗ್ರಾಹಕಗಳು ಮತ್ತು ಸಂವಹನ ವಾಹಿನಿಗಳ ಮೊತ್ತವಾಗಿದ್ದು ಒಂದರಿಂದ ಇನ್ನೊಂದಕ್ಕೆ ಸಂದೇಶವನ್ನು ರವಾನಿಸುತ್ತವೆ. ಕೆಲವು ಡಿಜಿಟಲ್ ಸಂವಹನ ಜಾಲಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮಾರ್ಗಗಳನ್ನು ಹೊಂದಿದ್ದು, ಮಾಹಿತಿಯನ್ನು ಸರಿಯಾದ ಬಳಕೆದಾರರಿಗೆ ಪ್ರಸಾರ ಮಾಡಲು ಜೊತೆಯಾಗಿ ಕೆಲಸ ನಿರ್ವಹಿಸುತ್ತವೆ. ಅನಲಾಗ್ ಸಂವಹನ ಜಾಲವು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸ್ವಿಚ್‌ಗಳನ್ನು ಹೊಂದಿದ್ದು, ಎರಡು ಅಥವಾ ಅದಕ್ಕಿಂತ್ ಹೆಚ್ಚಿನ ಬಳಕೆದಾರರ ನಡುವೆ ಸಂವಹನ ಸಾಧಿಸಲು ಬಳಸಲಾಗುತ್ತದೆ. ತುಂಬಾ ದೂರದಿಂದ ಪ್ರಸಾರ ಮಾಡಬೇಕಾದಾಗ ವಿಸ್ತರಿಸಲು ಅಥವಾ ಪುನಃ ಸಂಕೇತ ಪಡೆಯಲು ಈ ಎರಡು ವಿಧದ ಜಾಲದಲ್ಲೂ ಪುನರಾವರ್ತಕ ಅವಶ್ಯಕವಾಗಿದೆ. ಇದನ್ನು ಸಂಕೇತಗಳ ನಡುವೆ ಘರ್ಷಣೆ ಏರ್ಪಡಿಸುವುದರ ಮೂಲಕ ಅಡೆತಡೆಯನ್ನು ಕಡಿಮೆಗೊಳಿಸಿ ಬೇರ್ಪಡಿಸಲು ಬಳಸಲಾಗುತ್ತದೆ.[೨೪]

ಸಂವಹನ ವಾಹಿನಿಗಳು

ಬದಲಾಯಿಸಿ

"ಚಾನೆಲ್" ಎಂಬ ಶಬ್ದವು ಎರಡು ವಿಭಿನ್ನ ಅರ್ಥಗಳನ್ನು ಹೊಂದಿದೆ. ಪ್ರಸಾರ ಯಂತ್ರ ಮತ್ತು ಗ್ರಾಹಕದ ನಡುವೆ ಸಂಕೇತಗಳನ್ನು ಒಯ್ಯುವ ಭೌತಿಕ ಮಾಧ್ಯಮ. ಇದನ್ನು ಒಳಗೊಂಡಿರುವ ಕೆಲವು ಉದಾಹರಣೆಗಳು: ಧ್ವನಿ ಸಂವಹನಕ್ಕಾಗಿ ವಾತಾವರಣ, ಕೆಲವೊಂದು ವಿಧವಾದ ಆಪ್ಟಿಕಲ್ ಸಂವಹನಕ್ಕಾಗಿ ಗ್ಲಾಸ್ ಆಪ್ಟಿಕಲ್ ಫೈಬರ್‌ಗಳು, ವೋಲ್ಟೇಜ್ಸ್ ಮತ್ತು ಎಲೆಕ್ಟ್ರಿಕ್ ಕರೆಂಟ್‌ನ್ನು ತನ್ನ ಮೂಲಕ ಹರಿಯಲು ಬಿಡುವುದರ ಮೂಲಕ ಸಂವಹನ ಸಾಧಿಸುವುದಕ್ಕಾಗಿ ಕೊಆ‍ಯ್‌ಕ್ಸಿಯಲ್ ಫೈಬರ್, ದೃಗ್ಗೋಚರ ಬೆಳಕು, ಅತಿಗೆಂಪು ಅಲೆಗಳು, ಅತಿನೇರಳೆ ಕಿರಣ, ಮತ್ತು ರೇಡಿಯೋ ಅಲೆಗಳನ್ನು ಬಳಸಿ ಸಂವಹನ ಸಾಧಿಸುವುದಕ್ಕಾಗಿ ಮುಕ್ತ ಮಾರ್ಗ. ಈ ಕೊನೆಯ ವಾಹಿನಿಯನ್ನು "ಮುಕ್ತ ಪ್ರಸಾರಕ ಮಾರ್ಗ " ಎಂದು ಕರೆಯಲಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರೇಡಿಯೋ ಅಲೆಗಳನ್ನು ಕಳುಹಿಸುವಾಗ ಎರಡರ ನಡುವೆ ವಾತಾವರಣವು ಇರಬಹುದು ಅಥವಾ ಇಲ್ಲದೆ ಇರಬಹುದು. ರೇಡಿಯೋ ಅಲೆಗಳು ಸಂಪೂರ್ಣವಾದ ನಿರ್ವಾತ ಪ್ರದೇಶದಲ್ಲಿ ಚಲಿಸುತ್ತದೆ ಉದಾಹರಣೆಗೆ ವಾಯು, ಹೊಗೆ,ಮೋಡ ಅಥವಾ ಗಾಳಿಯಲ್ಲಿರುವ ಯಾವುದೇ ಅನಿಲದ ಮೂಲಕ ಸುಲಭವಾಗಿ ಚಲಿಸುತ್ತದೆ.

ದೂರಸಂವಹನ ವ್ಯವಸ್ಥೆಯಲ್ಲಿ "ಚಾನೆಲ್" ಎಂಬುದರ ಇನ್ನೊಂದು ಆರ್ಥವು ಸಂವಹನ ಚಾನೆಲ್ ಪದಗುಚ್ಛದಲ್ಲಿ ಕಂಡುಬರುತ್ತದೆ, ಇದು ಪ್ರಸಾರಣ ಮಾಧ್ಯಮದ ಉಪವಿಭಾಗವಾಗಿದ್ದು, ಏಕಕಾಲದಲ್ಲಿಯೇ ಹಲವಾರು ವಿಧವಾದ ಮಾಹಿತಿಗಳನ್ನು ಕಳುಹಿಸಲು ಬಳಸಬಹುದು. ಉದಾಹರಣೆಗೆ, ಒಂದು ರೇಡಿಯೋ ಕೇಂದ್ರವು ಒಂದು ಮುಕ್ತ ವಾತಾವರಣದಲ್ಲಿ ೯೪.೫ MHz(megahertz)ಕಂಪನಾಂಕದ ಆಸುಪಾಸಿನಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡುತ್ತದೆ, ಇದೇ ಸಮಯದಲ್ಲಿಯೆ ಇನ್ನೊಂದು ರೇಡಿಯೋ ಕೇಂದ್ರವು ೯೬.೧ MHz ಕಂಪನಾಂಕದ ಆಸುಪಾಸಿನಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡುತ್ತದೆ,ಪ್ರತಿಯೊಂದು ರೇಡಿಯೋ ಕೇಂದ್ರವು ರೇಡಿಯೋ ಅಲೆಗಳನ್ನು ೧೮೦ kHz(kilohertz), ಕಂಪನಾಂಕದ ಆವರ್ತನ ಶ್ರೇಣಿ ಮೂಲಕ ಪ್ರಸಾರ ಮಾಡುತ್ತದೆ. ಕಂಪನಾಂಕಗಳು ಈ ಮೇಲಿನಂತೆ ಕೇಂದ್ರಿಕೃತವಾಗುತ್ತದೆ. ಇದನ್ನು "ವಾಹಕ ಕಂಪನಾಂಕ" ಎಂದು ಕರೆಯಲಾಗುತ್ತದೆ. ಈ ಉದಾಹರಣೆಯಲ್ಲಿರುವ ಪ್ರತಿಯೊಂದು ಕೇಂದ್ರಗಳು ಇದರ ಪಕ್ಕದ ೨೦೦ kHzನಿಂದ ಬೇರ್ಪಟ್ಟಿರುತ್ತದೆ ಮತ್ತು ಸಂವಹನ ವ್ಯವಸ್ಥೆಯಲ್ಲಿನ ನ್ಯೂನತೆಗಾಗಿ ೨೦೦ kHz ಮತ್ತು ೧೮೦ kHz (೨೦ kHz) ನಡುವಿನ ವ್ಯತ್ಯಾಸವನ್ನು ಅನುಮತಿಸಲಾಗುತ್ತದೆ.

ಈ ಮೇಲಿನ ಉದಾಹರಣೆಗಳಲ್ಲಿ "ಮುಕ್ತ ಮಾರ್ಗ ವಾಹಿನಿ"ಯನ್ನು ಕಂಪನಾಂಕಗಳ ಅಧಾರದ ಮೇಲೆ ಸಂವಹನ ವಾಹಿನಿಗಳನ್ನು ವಿಭಾಗಿಸಲಾಗುತ್ತದೆ, ಮತ್ತು ರೇಡಿಯೋ ಅಲೆಗಳನ್ನು ಪ್ರಸಾರ ಮಾಡಲು ಪ್ರತಿಯೊಂದು ವಾಹಿನಿಗೂ ಪ್ರತ್ಯೇಕವಾದ ಆವರ್ತನ ಶ್ರೇಣಿಯನ್ನು ನೀಡಲಾಗಿರುತ್ತದೆ. ವಾಹಿನಿಯಲ್ಲಿ ಕಂಪನಾಂಕದ ಆಧಾರದ ಮೇಲೆ ಈ ಮಾಧ್ಯಮವನ್ನು ವಿಭಾಗಿಸುವ ವ್ಯವಸ್ಥೆಗೆ "ಫ್ರಿಕ್ವೆನ್ಸಿ-ಡಿವಿಜನ್‌ ಮಲ್ಟಿಫ್ಲೆಕ್ಸಿಂಗ್" (ಎಫ್‌ಡಿಎಂ ) ಎಂದು ಕರೆಯಲಾಗುತ್ತದೆ.

ವಾಹಿನಿಯಲ್ಲಿ ಸಂವಹನ ಮಾಧ್ಯಮವನ್ನು ವಿಭಾಗಿಸುವ ಇನ್ನೊಂದು ವಿಧಾನವೆಂದರೆ ಪ್ರಸಾರ ಮಾಡುವ ಪ್ರತಿಯೊಬ್ಬರಿಗು ಪುನರಾವರ್ತಕ ಸಮಯ ನಿಗದಿಗೊಳಿಸುವುದು(ಉದಾಹರಣೆಗೆ "ನಿಗದಿತ ಸಮಯ" ಪ್ರತಿಯೂಂದು ಸೆಕೆಂಡಿನ ೨೦ ಮಿಲಿಸೆಕೆಂಡ್ಸ್), ಮತ್ತು ಪ್ರಸಾರ ಮಾಡುವ ಪ್ರತಿಯೊಬ್ಬರಿಗು ಕೇವಲ ಅವದಿಗೆ ನಿಗದಿಪಡಿಸಿದ ಸಮಯದಲ್ಲೆ ಮಾಹಿತಿ ಕಳುಹಿಸಲು ಅನುವುಮಾಡಿಕೊಡುವುದು. ಸಂವಹನ ವಾಹಿನಿಯಲ್ಲಿ ಈ ಆಧಾರದ ಮೇಲೆ ಈ ಮಾಧ್ಯಮವನ್ನು ವಿಭಾಗಿಸುವ ವ್ಯವಸ್ಥೆಗೆ "ಟೈಮ್ ಡಿವಿಜನ್ ಮಲ್ಟಿಫ್ಲೆಕ್ಸಿಂಗ್"(ಟಿಡಿಎಂ ) ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಆಪ್ಟಿಕಲ್ ಫೈಬರ್ ಸಂವಹನದಲ್ಲಿ ಬಳಸುತ್ತಾರೆ. ಕೆಲವೊಂದು ರೇಡಿಯೋ ಸಂವಹನ ವ್ಯವಸ್ಥೆಗಳು ಎಫ್‌ಡಿಎಂ ವಾಹಿನಿ ನಿಗದಿಪಡಿಸಿದ ಟಿಡಿಎಮ್ ಬಳಸಿಕೊಳ್ಳುತ್ತಿವೆ. ಆದ್ದರಿಂದ ಈ ಪದ್ಧತಿಗಳು ಟಿಡಿಎಂ ಮತ್ತು ಎಫ್‌ಡಿಎಂನ ಸಂಯೋಗವಾಗಿ ಬಳಕೆಯಾಗುತ್ತಿವೆ.

ಸಮನ್ವಯತೆ

ಬದಲಾಯಿಸಿ

ಸಂಕೇತವನ್ನು ಒಂದು ರೂಪಕ್ಕೆ ಬದಲಾಯಿಸಿ ಮಾಹಿತಿಯನ್ನು ರವಾನಿಸುವುದೇ ಸಮನ್ವಯತೆ. ಡಿಜಿಟಲ್ ಸಂದೇಶವನ್ನು ಅನಲಾಗ್ ಅಲೆಗಳ ರೂಪದಲ್ಲಿ ಪ್ರತಿ ಬಿಂಬಿಸಲು ಸಮನ್ವಯತೆಯನ್ನು ಬಳಸಬಹುದು. ದೂರ ಸಂವಹನ ವ್ಯವಸ್ಥೆಯಲ್ಲಿ ಮೋರ್ಸ್ ಕೋಡ್‌ನಲ್ಲಿ ಬಳಸಲಾದ ಹಳೆಯ ಶಬ್ದದಿಂದಲೆ ಇದನ್ನು ತೆಗೆದುಕೊಳ್ಳಲಾಗಿದ್ದು ಇದನ್ನು ಕೀಯಿಂಗ್ ಎಂದು ಕರೆಯಲಾಗುತ್ತದೆ ಮತ್ತು ಹಲವಾರು ಕೀಯಿಂಗ್ ತಂತ್ರಗಳು ಬಳಕೆಯಲ್ಲಿವೆ(ಇವುಗಳು ಫೇಸ್-ಶಿಫ್ಟ್ ಕೀಯಿಂಗ್, ಫ್ರೀಕ್ವೆನ್ಸಿ ಶಿಫ್ಟ್ ಕೀಯಿಂಗ್, ಮತ್ತು ಆ‍ಯ್‌೦ಪ್ಲಿಟ್ಯೂಡ್ ಶಿಫ್ಟ್ ಕೀಯಿಂಗ್ ಒಳಗೊಂಡಿವೆ). ಉದಾಹರಣೆಗೆ "ಬ್ಯ್ಲೂಟೂತ್" ವ್ಯವಸ್ಥೆ, ಫೇಸ್-ಶಿಫ್ಟ್ ಕೀಯಿಂಗ್ ಬಳಸಿಕೊಂಡು ಹಲವಾರು ಉಪಕರಣಗಳ ನಡುವೆ ಮಾಹಿತಿಯನ್ನು ವಿನಿಮಯ ಮಾಡಲಾಗುತ್ತದೆ.[೨೫][೨೬] ಇದಲ್ಲದೆ, ಫೇಸ್-ಶಿಫ್ಟ್ ಕೀಯಿಂಗ್ ಮತ್ತು ಆ‍ಯ್‌೦ಪ್ಲಿಟ್ಯೂಡ್ ಶಿಫ್ಟ್ ಕೀಯಿಂಗ್ ಸಂಯೋಜನೆಯನ್ನು "ಕ್ವಾಡ್ರೆಚರ್ ಆ‍ಯ್‌೦ಪ್ಲಿಟ್ಯೂಡ್ ಮಾಡ್ಯೂಲೇಶನ್" ಎಂದು ಕರೆಯಲಾಗುತ್ತದೆ,(QAM) ಇವುಗಳನ್ನು ಉನ್ನತ ಕಾರ್ಯಸಾಮರ್ಥ್ಯದ ಡಿಜಿಟಲ್ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದೆ.

ಹೆಚ್ಚಿನ ಕಂಪನಾಂಕಗಳಲ್ಲಿ ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳ ಮಾಹಿತಿಯನ್ನು ಪ್ರಸಾರ ಮಾಡಲು ಕೂಡ ಸಮನ್ವಯತೆ ಬಳಸಿಕೊಳ್ಳಲಾಗುತ್ತಿದೆ. ಮುಕ್ತ ವಾತಾವರಣದಲ್ಲಿ ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳು ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡದೆ ಇರುವುದರಿಂದ ಇದು ತುಂಬಾ ಉಪಯುಕ್ತವಾಗಿದೆ. ಆದ್ದರಿಂದಲೆ, ಪ್ರಸಾರಣವಾಗುವುದಕ್ಕಿಂತ ಮೊದಲಿಗೆ("ಒಯ್ಯುವ ಅಲೆಗಳು" ಎಂದು ಕರೆಯುವ) ಕಡಿಮೆ ಕಂಪನಾಂಕದ ಅನಲಾಗ್ ಸಂಕೇತಗಳಿಂದ ಮಾಹಿತಿಯು ಉನ್ನತ ಕಂಪನಾಂಗದ ಸಂಕೇತಕ್ಕೆ ತಲುಪಿಯೆ ಸಾಗಬೇಕು. ಇವುಗಳನ್ನು ಸಾಧಿಸಲು ಹಲವಾರು ವಿಧವಾದ ಸಮನ್ವಯತೆ ಕಾರ್ಯಯೋಜನೆಗಳು ಲಭ್ಯವಿದೆ( ಈಗಿರುವ ಪ್ರಮುಖವಾದ ಎರಡು ಸಮನ್ವಯತೆಗಳು ಆ‍ಯ್‌೦ಪ್ಲಿಟ್ಯೂಡ್ ಸಮನ್ವಯತೆ (AM) ಮತ್ತು ಕಂಪನಾಂಕ ಸಮನ್ವಯತೆ (FM)] ಈ ಪ್ರಕ್ರಿಯೆಗೆ ಒಂದು ಉದಾಹರಣೆ, ಕಂಪನಾಂಕ ಸಮನ್ವಯತೆ ಬಳಸಿಕೊಂಡು ಡಿಸ್ಕ್ ಜಾಕಿಯ ಧ್ವನಿಯನ್ನು ೯೬ MHz ಒಯ್ಯುವ ಅಲೆಗಳಾಗಿ ಬದಲಾಯಿಸಲಾಗುತ್ತದೆ(ನಂತರ ಈ ಧ್ವನಿಯನ್ನು "೯೬ FM" ರೇಡಿಯೋ ವಾಹಿನಿಯಲ್ಲಿ ಪಡೆದುಕೊಳ್ಳಬಹುದು).[೨೭] ಇದಲ್ಲದೆ, ಸಮನ್ವಯತೆಯು ಫ್ರಿಕ್ವೆನ್ಸಿ-ಡಿವಿಜನ್ ಮಲ್ಟಿಫ್ಲೆಕ್ಸಿಂಗ್‌ನ(FDM) ಅನುಕೂಲತೆಯನ್ನು ಹೊಂದಿದೆ.

ಸಮಾಜ ಮತ್ತು ದೂರಸಂವಹನ ವ್ಯವಸ್ಥೆ

ಬದಲಾಯಿಸಿ

ಆಧುನಿಕ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಆರ್ಥಿಕತೆಯ ಮೇಲೆ ದೂರಸಂವಹನ ವ್ಯವಸ್ಥೆಯು ಗಮನಾರ್ಹವಾದ ಪರಿಣಾಮ ಬೀರಿದೆ. ೨೦೦೮ರಲ್ಲಿ, ದೂರಸಂವಹನ ಉದ್ಯಮದ ಅಂದಾಜು ಆದಾಯ $೩.೮೫ ಟ್ರಿಲಿಯನ್ (ಯುಎಸ್‌ಡಿ(ಯುನೈಟೆಡ್ ಸ್ಟೇಟ್ಸ್ ಡಾಲರ್) ಅಥವಾ ಜಾಗತಿಕ ನಿವ್ವಳ ಉತ್ಪನ್ನದ ಶೇಕಡಾ ೩.೦ರಷ್ಟು [] ಸಾಮಾಜದ ಮೇಲೆ ದೂರಸಂವಹನ ವ್ಯವಸ್ಥೆಯು ಉಂಟುಮಾಡಿರುವ ಪರಿಣಾಮದ ಕುರಿತಾಗಿ ಈ ಕೆಳಗೆ ಚರ್ಚಿಸಲಾಗಿದೆ.

ಆರ್ಥಿಕ ಪರಿಣಾಮ

ಬದಲಾಯಿಸಿ

ಸೂಕ್ಷ್ಮ ಅರ್ಥಶಾಸ್ತ್ರ

ಬದಲಾಯಿಸಿ

ಸೂಕ್ಷ್ಮ ಅರ್ಥಶಾಸ್ತ್ರದ ಮಾನದಂಡದಂತೆ ಅನೇಕ ಸಂಸ್ಥೆಗಳು ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುವ ದೆಸೆಯಿಂದ ದೂರಸಂವಹನ ಸಂಪರ್ಕ ಸಾಧನವನ್ನು ಬಳಸಿಕೊಂಡವು. ಇದು ಆನ್‌ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆಯಾದ ಅಮೇಜಾನ್.ಕಾಮ್ ವಿಷಯದಲ್ಲಿ ಸ್ಪಷ್ಟವಾಗಿದೆ. ಆದರೆ ಶಿಕ್ಷಣ ತಜ್ಞ ಎಡ್ವರ್ಡ್ ಲೆನರ್ಟ್‌ರ ಪ್ರಕಾರ ಸಾಂಪ್ರದಾಯಿಕ ರೀತಿಯ ಮಾರಾಟದ ವಾಲ್-ಮಾರ್ಟ್ ಉತ್ತಮ ದೂರಸಂವಹನ ಸಂಪರ್ಕ ಸಾಧನದ ವ್ಯವಸ್ಥೆಯಿಂದ ಅದರ ಇನ್ನಿತರ ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಹೆಚ್ಚು ಲಾಭವನ್ನು ಕಂಡಿದೆ.[೨೮] ಪ್ರಪಂಚದಾದ್ಯಂತ ಎಲ್ಲಾ ನಗರಗಳಲ್ಲಿನ ಮನೆ ಮಾಲಿಕರು ತಮ್ಮ ದೂರವಾಣಿ ಸಾಧನವನ್ನು ಪಿಡ್ಜಾ ತರಿಸಿಕೊಳ್ಳುವುದರಿಂದ ಹಿಡಿದು ವಿದ್ಯುತ್‌ ಕಾರ್ಮಿಕರವರೆಗಿನ ಮನೆ ಸೇವೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯಕ್ಕೂ ಬಳಸಿಕೊಳ್ಳುತ್ತಾರೆ. ಈ ವಿಷಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಸಹ ತಮ್ಮ ಅನುಕೂಲಕ್ಕಾಗಿ ದೂರ ಸಂವಹನ ಸಾಧನ ಬಳಸಿಕೊಳ್ಳುವುದನ್ನು ಮನಗಂಡಿದ್ದಾರೆ. ಬಾಂಗ್ಲದೇಶದ ನರಸಿಂಗಡಿ ಜಿಲ್ಲೆಯಲ್ಲಿನ ಪ್ರತ್ಯೇಕಿತ ಹಳ್ಳಿಗರೂ ಸಹ ತಮ್ಮ ಸರಕಿನ ಉತ್ತಮ ಮೌಲ್ಯದ ಬಗ್ಗೆ ನೇರವಾಗಿ ಸಗಟು ವ್ಯಾಪಾರಿಯೊಂದಿಗೆ ಮೊಬೈಲ್‌ಗಳನ್ನು ಬಳಸಿ ಮಾತನಾಡುತ್ತಾರೆ. ಕೊರ್ಟ್‌ಡೆಲ್‌ವೈರ್‌ನಲ್ಲಿನ ಕಾಫಿ ಬೆಳೆಗಾರರು ಕಾಫಿ ಬೆಲೆಯಲ್ಲಿನ ಮಾರುಕಟ್ಟೆಯ ಏರಿಳಿತಗಳನ್ನು ಮತ್ತು ತಮ್ಮ ಸರಕನ್ನು ಮಾರಲು ಉತ್ತಮ ಮೌಲ್ಯವನ್ನು ಮೊಬೈಲ್ ಫೋನ್ ಬಳಕೆಯ ಮೂಲಕವೇ ತಿಳಿದುಕೊಳ್ಳುತ್ತಾರೆ.[೨೯]

ಸಮಗ್ರ ಅರ್ಥಶಾಸ್ತ್ರ

ಬದಲಾಯಿಸಿ

ಸಮಗ್ರ ಅರ್ಥಶಾಸ್ತ್ರದ ಪ್ರಕಾರ ಉತ್ತಮ ದೂರಸಂವಹನ ಸಂವಹನ ಸಾಧನದ ಮೂಲಭೂತ ವ್ಯವಸ್ಥೆ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಕಾರಣಾರ್ಥ ಸಂಬಂಧವಿರುವುದಾಗಿ ಹೆಂಡ್ರಿ ಕ್ರೊಲ್ಲರ್‌ ಮತ್ತು ಲಿಯೊನಾರ್ಡ್ ವೆವರ್‌ಮ್ಯಾನ್ ಸೂಚಿಸುತ್ತಾರೆ.[೩೦] ಈ ಹೇಳಿಕೆಯ ಬಗ್ಗೆ ಅನೇಕ ವಿವಾದಗಳಿದ್ದು ಕೆಲವು ವಾದಗಳು ಇದು ತಪ್ಪು ಹಾಗೆ ಕಾರಣಾರ್ಥ ಸಂಬಂಧವನ್ನು ಕಲ್ಪಿಸಬಾರದು ಎಂದಿವೆ.[೩೧]

ದೂರ ಸಂವಹನ ಸಾಧನದ ಸೌಕರ್ಯಾಧಾರಿತ ಆರ್ಥಿಕ ಆದಾಯವು ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಅಸಮರ್ಪಕ ಸೌಲಭ್ಯದಿಂದಾಗಿ ತೊಂದರೆಗಳನ್ನು ಹೆಚ್ಚಾಗಿಸುತ್ತವೆ, ಇದನ್ನು ನಾವು ಡಿಜಿಟಲ್ ಡಿವೈಡ್ ಎಂಬುದಾಗಿ ಅರ್ಥೈಸಬಹುದು. ೨೦೦೩ರ ಅಂತರಾಷ್ಟ್ರೀಯ ದೂರಸಂವಹನ ಸಂಪರ್ಕ ಒಕ್ಕೂಟ (ಐಟಿಯು) ನಡೆಸಿದ ಸಮೀಕ್ಷೆಯಂತೆ ಪ್ರಪಂಚದ ಮೂರನೇ ಒಂದು ಭಾಗದಷ್ಟು ದೇಶಗಳಲ್ಲಿ ಪ್ರತಿ ೨೦ ಮಂದಿಯಲ್ಲಿ ಒಬ್ಬ ಮಾತ್ರ ಮೊಬೈಲ್ ಚಂದಾದಾರನಾಗಿದ್ದಾನೆ. ಹಾಗೆಯೇ ಮೂರನೇ ಒಂದು ಭಾಗದ ರಾಷ್ಟ್ರಗಳಲ್ಲಿ ಪ್ರತಿ ೨೦ ಜನರಲ್ಲಿ ಒಬ್ಬರು ಮಾತ್ರ ಸ್ಥಿರ ದೂರವಾಣಿ ಹೊಂದಿರುವುದನ್ನು ಕಾಣಬಹುದೆಂದು ತಿಳಿಸಿದೆ. ಅಂತರಜಾಲ ಬಳಕೆಯ ವಿಷಯವಾಗಿಯು ಸಹ ಅರ್ಧದಷ್ಟು ರಾಷ್ಟ್ರಗಳು ಪ್ರತಿ ಇಪ್ಪತ್ತು ಜನರಲ್ಲಿ ಒಬ್ಬರು ಮಾತ್ರ ಅಂತರಜಾಲ ಬಳಸುತ್ತಿದ್ದಾರೆ. ಐಟಿಯು‌ವಿನ ಈ ಲಬ್ದ ಮಾಹಿತಿ ಮತ್ತು ಶೈಕ್ಷಣಿಕ ದತ್ತಾಂಶಗಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯನ್ನು ಜನರು ಎಷ್ಟರ ಮಟ್ಟಿಗೆ ಸಮರ್ಥವಾಗಿ ಉಪಯೋಗಿಸಬಲ್ಲರು ಎಂಬುದರ ಸೂಚಿಯಾಗಿದೆ.[೩೨] ಈ ಮಾನದಂಡದ ಪ್ರಕಾರ ಸ್ವಿಡನ್, ಡೆನ್ಮಾರ್ಕ್, ಮತ್ತು ಐಸ್‌ಲ್ಯಾಂಡ್ ಉತ್ತಮ ಸ್ಥಾನದಲ್ಲಿದ್ದರೆ ಕೊನೆಯ ಸ್ಥಾನಗಳಲ್ಲಿ ಆಫ್ರಿಕನ್ ದೇಶಗಳಾದ ನೈಜೇರಿಯಾ, ಬರ್ಕಿನಾ ಫಾಸೊ, ಮತ್ತು ಮಲಿ ದೇಶಗಳಿವೆ.[೩೩]

ಸಾಮಾಜಿಕ ಪರಿಣಾಮ

ಬದಲಾಯಿಸಿ

ಸಾಮಾಜಿಕ ಬಾಂಧವ್ಯದಲ್ಲಿ ದೂರಸಂವಹನ ಸಂಪರ್ಕವು ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದೇನೆ ಇದ್ದರೂ ದೂರವಾಣಿ ಸಾಧನವು ಮೂಲತಃ ನೈಜವಾಗಿ ತನ್ನ ಜಾಹೀರಾತಿನಲ್ಲಿನ ಅದರ ಪ್ರಾಮುಖ್ಯತೆಯು (ವ್ಯಾಪಾರ ಮತ್ತು ಮನೆ ಸೇವೆಗೆ ಸಂಬಂಧಿಸಿದಂತೆ ಎರಡಕ್ಕೂ ಬಳಸಿಕೊಳ್ಳುವುದು)ಸಾಮಾಜಿಕ ಆಯಾಮಕ್ಕೆ ವಿರುದ್ದವಾಗಿದೆ. ಕಳೆದ ೧೯೨೦ ಮತ್ತು ೧೯೩೦ರಲ್ಲಿ ಸಾಧನಗಳ ಸಾಮಾಜಿಕ ದೃಷ್ಟಿಕೋನವು ದೂರವಾಣಿ ಜಾಹೀರಾತುಗಳಿಗಿಂತ ಪ್ರಸಿದ್ಧವಾಗಿವೆ. ಈ ಹೊಸ ಅಭಿವೃದ್ಧಿಯ ಆವೃತ್ತಿಯು ಸಾರ್ವಜನಿಕರ ಭಾವೋದ್ವೇಗ, ಸಾಮಾಜಿಕ ಮಾತುಕತೆಯ ಬಗ್ಗೆ ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿರಂತರ ಬಾಂಧವ್ಯ ಕಲ್ಪಿಸುವುದರ ಮೂಲಕ ಗ್ರಾಹಕರನ್ನು ಸೆಳೆಯಲಾರಂಭಿಸಿತು.[೩೪]

ಅಲ್ಲಿಂದ ದೂರಸಂವಹನ ಸಂವಹನವು ಸಾಮಾಜಿಕ ಬಾಂಧವ್ಯದ ಅಭಿವೃದ್ಧಿಯತ್ತ ಗಮನಹರಿಸಿತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ನಾಟಕೀಯ ರೀತಿಯಲಿ ಹೆಚ್ಚು ಪ್ರಸಿದ್ದಿ ಹೊಂದಿದವು. ಈ ತಾಣಗಳು ಅವುಗಳ ಬಳಕೆದಾರರಿಗೆ ಭಾವಚಿತ್ರಗಳು, ಕಾರ್ಯಕ್ರಮಗಳು ಹಾಗೂ ತಮ್ಮ ಬಗ್ಗೆಯ ಕಿರು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಸಂವಹನದಲ್ಲಿ ತೊಡಗಿಕೊಳ್ಳಲು ಅವಕಾಶಗಳನ್ನು ನೀಡುತ್ತವೆ. ಆ ಕಿರು ಮಾಹಿತಿಯು ವ್ಯಕ್ತಿಯ ವಯಸ್ಸು, ಆಸಕ್ತಿ, ಸಾಂಸಾರಿಕ ಸ್ಥಾನಗಳು ಸೇರಿದಂತೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತವೆ. ಈ ವಿಧದಲ್ಲಿ ಸಾಮಾಜಿಕ ಜಾಲತಾಣವು ಸಾಮಾಜಿಕ ಬೆಸುಗೆಯನ್ನು ರೂಪಿಸುವುದರಿಂದ ಹಿಡಿದು ಪ್ರೇಮಯಾಚನೆಯವರೆಗಿನ ಎಲ್ಲಾ ವಿಧದಲ್ಲೂ ಮಹತ್ತರ ಪಾತ್ರವನ್ನು ವಹಿಸುತ್ತದೆ.[೩೫]

ಸಾಮಾಜಿಕ ಸಂವಹನದಲ್ಲಿ ಎಸ್‌ಎಮ್‌ಎಸ್‌ನಂತಹ ತಂತ್ರಜ್ಞಾನ ಮತ್ತು ದೂರವಾಣಿ ಸಹ ಮಹತ್ತರ ಪಾತ್ರವನ್ನು ವಹಿಸುತ್ತವೆ. ೨೦೦೦ರಲ್ಲಿ ಮಾರುಕಟ್ಟೆ ಸಂಶೋಧನ ತಂಡ ಇಪ್ಸೊಸ್ ಎಮ್‌ಓಆರ್‌ಐಯು ನಡೆಸಿದ ಸಮೀಕ್ಷೆಯಂತೆ ಶೇ ೮೧ರಷ್ಟು ದೂರಸಂವಹನ ಗ್ರಾಹಕರಲ್ಲಿ ೧೫ ರಿಂದ ೨೪ ವರ್ಷದ ವಯೋಮಾನದವರು ಎಸ್‌ಎಮ್‌ಎಸ್ ಅನ್ನು ಬಳಕೆ ಮಾಡುತ್ತಿರುವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿದ್ದಾರೆ. ಅವರು ಸಾಮಾಜಿಕ ಸಂವಹನಕ್ಕಾಗಿ ಮತ್ತು ಶೇಕಡ ೪೨ರಷ್ಟು ಜನರು ಚೆಲ್ಲಾಟವಾಡಲು ಬಳಸಿದ್ದಾರೆ.[೩೬]

ಇನ್ನಿತರ ಪರಿಣಾಮಗಳು

ಬದಲಾಯಿಸಿ

ಸಾಂಸ್ಕೃತಿಕವಾಗಿ ಹೇಳುವುದಾದರೆ ದೂರಸಂಪರ್ಕ ಸಂವಹನ ಸಾಧನವು ಸಂಗೀತ ಮತ್ತು ಚಲನಚಿತ್ರಗಳ ಕುರಿತಾಗಿ ಸಾರ್ವಜನಿಕರ ಆಸಕ್ತಿಯನ್ನು ಹೆಚ್ಚಿಸಿತು. ದೂರದರ್ಶನದಿಂದ ಜನರಿಗೆ ತಮ್ಮ ಮನೆಯಲ್ಲಿಯೇ ತಮ್ಮ ಇಷ್ಟದ ಸಿನಿಮಾಗಳನ್ನು ಯಾವ ಚಿತ್ರ ಮಂದಿರಗಳಿಗೂ ಹೋಗದೆ ನೋಡುವಂತಾಯಿತು. ರೇಡಿಯೋ ಮತ್ತು ಅಂತರಜಾಲದ ಸಹಾಯದಿಂದ ಜನರು ತಾವು ಈ ಹಿಂದೆ ಕೇಳಿರದಿದ್ದ ಸಂಗೀತವನ್ನು ನಿರ್ಧಿಷ್ಟ ಸ್ಥಳಗಳಿಗೆ ಹೋಗದೆ ಕೇಳಬಹುದಾಯಿತು.

ಜನರು ಸುದ್ದಿ ಸಮಾಚಾರಗಳನ್ನು ಸ್ವೀಕರಿಸುವಲ್ಲಿಯೂ ಸಹ ದೂರಸಂಪರ್ಕ ಸಂವಹನ ಸಾಧನವು ಹೊಸ ಹಾದಿಯನ್ನು ಕಲ್ಪಿಸಿತು. ಪೆವ್ ಅಂತರಜಾಲ ಮತ್ತು ಪ್ಯೂ ಇಂಟರ್‌ನೆಟ್ ಆಂಡ್ ಅಮೇರಿಕನ್ ಲೈಫ್ ಪ್ರೊಜೆಕ್ಟ್‌ನಲ್ಲಿ ಕಂಡುಕೊಂಡಂತೆ ಯುನೈಟೆಡ್ ಸ್ಟೇಟ್‌ನಲ್ಲಿನ ಮೂರು ಸಾವಿರ ಜನರಲ್ಲಿ ’ನಿನ್ನೆಯ ಸುದ್ದಿಯನ್ನು ಎಲ್ಲಿ ಕೇಳಲ್ಪಟ್ಟಿರಿ?’ ಎಂದು ಕೇಳಲಾದ ಪ್ರಶ್ನೆಗೆ ಅತಿ ಹೆಚ್ಚು ಜನರು ವೃತ್ತ ಪತ್ರಿಕೆಗಿಂತ ಹೆಚ್ಚಾಗಿ, ರೇಡಿಯೋ, ವೃತ್ತಪತ್ರಿಕೆಗಳನ್ನು ಹೆಸರಿಸಿದರು. ಆ ಫಲಿತಾಂಶವನ್ನು ಕೆಳಕಂಡ ಪಟ್ಟಿಯಲ್ಲಿ ನೋಡಬಹುದಾಗಿದೆ. (ಶೇಕಡವಾರು ಪ್ರಮಾಣವು ಶೇಕಡ ನೂರಕ್ಕಿಂತ ಹೆಚ್ಚಿದೆ ಕಾರಣ ಜನರು ಒಂದಕ್ಕಿಂತ ಹೆಚ್ಚು ಮೂಲದಿಂದ ಸುದ್ದಿಯನ್ನು ಗ್ರಹಿಸುವಲ್ಲಿ ಸಶಕ್ತರಾಗಿದ್ದಾರೆ).[೩೭]

ಸ್ಥಳಿಯ ವಾಹಿನಿ ರಾಷ್ಟ್ರೀಯ ವಾಹಿನಿ ರೇಡಿಯೋ ಸ್ಥಳಿಯ ಪತ್ರಿಕೆಗಳು ಅಂತರಜಾಲ ರಾಷ್ಟ್ರೀಯ ವೃತ್ತ ಪತ್ರಿಕೆಗಳು
59% 47% 44% 38% 23% 12%

ದೂರಸಂವಹನ ವ್ಯವಸ್ಥೆಯು ಜಾಹೀರಾತು ಮಾರುಕಟ್ಟೆಯ ಮೇಲೂ ಕೂಡ ಮಹತ್ತರ ಪರಿಣಾಮವನ್ನು ಬೀರಿದೆ. ಟಿಎನ್‌ಎಸ್ ಮೀಡಿಯಾ ಇಂಟಲಿಜೆನ್ಸ್‌ ೨೦೦೭ರಲ್ಲಿ ವರದಿ ಮಾಡಿದಂತೆ ಶೇಕಡ ೫೮ರಷ್ಟು ಜಾಹೀರಾತು ವೆಚ್ಚವು ದೂರಸಂಪರ್ಕ ಸಂವಹನ ಮಾಧ್ಯಮಕ್ಕೆ ಸಂಬಂಧಿಸಿರುತ್ತದೆ ಎಂದು ತಿಳಿಸಿದೆ.[೩೮] ಈ ಫಲಿತಾಂಶ ಸಾರಾಂಶವನ್ನು ಕೆಳಗೆ ನೀಡಲಾಗಿದೆ.

ಅಂತರಜಾಲ ರೇಡಿಯೋ ಕೇಬಲ್ ಟಿವಿ ಸಿಂಡಿಕೇಟೆಡ್ ದೂರದರ್ಶನ ಸ್ಪಾಟ್ (ಅಂತರಜಾಲ ತಾಣ)ದೂರದರ್ಶನ ನೆಟ್‌ವರ್ಕ್ ದೂರದರ್ಶನ ವೃತ್ತ ಪತ್ರಿಕೆ ನಿಯತಕಾಲಿಕೆ ಹೊರಾಂಗಣ ಒಟ್ಟು
ಶೇಕಡಾವಾರು 7.6% 7.2% 12.1% 2.8% 11.3% 17.1% 18.9% 20.4% 2.7% 100%
ಡಾಲರ್‌ಗಳಲ್ಲಿ $11.31 ಬಿಲಿಯನ್ $10.69 ಬಿಲಿಯನ್ $18.02 ಬಿಲಿಯನ್ $4.17 ಬಿಲಿಯನ್ $16.82 ಬಿಲಿಯನ್ $25.42 ಬಿಲಿಯನ್ $28.22 ಬಿಲಿಯನ್ $30.33 ಬಿಲಿಯನ್ $4.02 ಬಿಲಿಯನ್ $149 ಬಿಲಿಯನ್

ದೂರಸಂವಹನ ವ್ಯವಸ್ಥೆ ಮತ್ತು ಸರ್ಕಾರ

ಬದಲಾಯಿಸಿ

ಹಲವು ರಾಷ್ಟ್ರಗಳು ಈಗಾಗಲೇ ಅಂತರಾಷ್ಟ್ರೀಯ ದೂರಸಂವಹನ ವ್ಯವಸ್ಥೆಯ ಕಾನೂನನ್ನು ಜಾರಿಗೆ ತಂದಿದ್ದು ಇದು ಅಂತರಾಷ್ಟ್ರೀಯ ದೂರಸಂವಹನ ಒಕ್ಕೂಟ(ಐಟಿಯು)ದಿಂದ ಸ್ಥಾಪಿಸಲ್ಪಟ್ಟಿದೆ. ಅಲ್ಲದೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಷಯವಾಗಿ ಯುನೈಟೆಡ್ ರಾಷ್ಟ್ರಗಳಲ್ಲೇ ಮುಂಚೂಣಿ ಸಂಸ್ಥೆಯಾಗಿದೆ.[೩೯] ೧೯೪೭ರ ಅಟ್ಲಾಂಟಿಕ್ ನಗರದಲ್ಲಿ ನಡೆದ ಸಭೆಯಲ್ಲಿ ಐಟಿಯು ತನ್ನ ಎಲ್ಲ ನೊಂದಣಿದಾರರನ್ನು ನೂತನ ಅಂತರಾಷ್ಟ್ರೀಯ ಆವರ್ತನಕ್ಕೆ ಮರು ನೊಂದಣಿಯಾಗುವ ಮತ್ತು ಈ ಒಪ್ಪಂದವು ರೇಡಿಯೋ ವಿಧೆಯಕದ ಪ್ರಕಾರ ಒಪ್ಪಿತವಾಗಿರುತ್ತದೆ ಎಂಬ ನಿರ್ಧಾರವನ್ನು ತೆಗೆದುಕೊಂಡರು. ಐಟಿಯುನ ಪ್ರಕಾರ ಅಟ್ಲಾಂಟಿಕ ನಗರದಲ್ಲಿ ರೇಡಿಯೋ ಶಾಸನ ವನ್ನು ಅಳವಡಿಸಿಕೊಳ್ಳಲಾಯಿತು. ಈ ಸಂಬಂಧವಾಗಿ ಅಂತರಾಷ್ಟ್ರೀಯ ಆವರ್ತನ ನೋಂದಣಿ ಸಮಿತಿ ಯಲ್ಲಿ ಎಲ್ಲಾ ಆವರ್ತನಗಳನ್ನು ಶಿಫಾರಸು ಮಾಡಲಾಯಿತು. ಅಂತರಾಷ್ಟ್ರೀಯ ಆವರ್ತನಗಳ ಪಟ್ಟಿ ಯಲ್ಲಿನ ನೋಂದಣಿ ಮೂಲಕ ಸಮಿತಿ ಪರಿಕ್ಷೆಯನ್ನು ಮಾಡಿತ್ತು. ಅಂತರಾಷ್ಟ್ರೀಯ ಸಂರಕ್ಷಣಾ ದೃಷ್ಟಿಯಿಂದ ಅಪಾಯಕರ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿ ಈ ನೋಂದಣಿ ವ್ಯವಸ್ಥೆಯನ್ನು ಮಾಡಲಾಗಿತ್ತು.[೪೦]

ಜಾಗತಿಕ ದೃಷ್ಟಿಕೋನದಿಂದ ಗಮನಿಸಿದಾಗ ದೂರಸಂವಹನ ವ್ಯವಸ್ಥೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಇಲ್ಲೂ ಸಹ ರಾಜಕೀಯ ವಾದವಿವಾದ ಮತ್ತು ಕಾನೂನು ರಚನೆಗಳಿವೆ. ಪ್ರಸಾರಣದ ಇತಿಹಾಸವನ್ನು ಗಮನಿಸಿದಾಗ ಮುದ್ರಣ, ಮತ್ತು ರೇಡಿಯೋ ಪ್ರಾಸಾರದಂತಹ ದೂರಸಂವಹನ ವ್ಯವಸ್ಥೆಗಳ ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹಲವು ಸಭೆಗಳಲ್ಲಿ ಚರ್ಚಿಸಿದೆ.[೪೧] ಎರಡನೇ ಪ್ರಪಂಚ ಯುದ್ದದ ಆಕ್ರಮಣವು ಮೊದಲಬಾರಿಗೆ ಅಂತರಾಷ್ಟ್ರೀಯ ಪ್ರಸರಣದ ಪ್ರಚಾರದ ಬಗ್ಗೆ ಬೆಳಕು ಚೆಲ್ಲಿತು.[೪೧] ರಾಷ್ಟ್ರಗಳು ಮತ್ತು ಅಲ್ಲಿನ ಸರ್ಕಾರಗಳು, ಬಂಡಾಯಗಾರರು, ಭಯೋತ್ಪಾದಕರು,ನಾಗರಿಕ ಸೇನೆಯವರೆಲ್ಲರೂ ದೂರಸಂವಹನ ವ್ಯವಸ್ಥೆ ಮತ್ತು ಪ್ರಸರಣಾ ತಂತ್ರಜ್ಞಾನವನ್ನು ಪ್ರಚಾರಕ್ಕಾಗಿ ಬಳಸಿಕೊಂಡರು.[೪೧][೪೨] ೧೯೩೦ರ ಮಧ್ಯ ಭಾಗದಲ್ಲಿ ಪ್ರಾರಂಭವಾದ ರಾಜಕೀಯ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಪ್ರಚಾರ ಶುರುವಾಯಿತು. ೧೯೩೬ರಲ್ಲಿ ಬಿಬಿಸಿ ಇಟಲಿಯಿಂದಲೆ ಅರಬ್ ವರ್ಲ್ಡ್‌‌‍ಗೆ ಭಾಗಶಃ ಪ್ರತಿರೋಧದ ನಡುವೆಯೂ ಸದೃಶ್ಯ ಪ್ರಸಾರಣಾ ಮಾಡಿತು. ಉತ್ತರ ಆಫ್ರಿಕಾ ಸಹ ವಸಹಾತಿನ ಬಗ್ಗೆ ಉತ್ಸಾಹವನ್ನು ತೋರಿತ್ತು.[೪೧]

ಆಧುನಿಕ ಯುದ್ಧದಲ್ಲಿ ದೂರಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಉದಾಹರಣೆಗೆ ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದವರು ದೂರವಾಣಿ ಕರೆಗಳ ಮೂಲಕ ಹಾಗೂ ಎಸ್‌ಎಮ್‌ಎಸ್ ಮತ್ತು ದಾಳಿಮಾಡಿದ ಪರಿಸ್ಕೃತ ವಿಡಿಯೋಗಳ ಹಂಚಿಕೆಯನ್ನು ಕಾರ್ಯಾಚರಣೆಯ ಘಂಟೆಯೊಳಗೆ ಕಳುಹಿಸಲು ಬಳಸಿಕೊಂಡರು. ಸುನ್ನಿ ದಂಗೆಕೋರರು ಈಗಲೂ ಸಹ ತಮ್ಮದೇ ಆದ ಸ್ವತಃ ದೂರದರ್ಶನ ಕೇಂದ್ರ ಅಲ್‌-ಝವಾರವನ್ನು ಹೊಂದಿದ್ದಾರೆ ಇದು ಇರಾಕಿ ಸರ್ಕಾರದ ನಿರ್ಬಂದನೆಗೆ ಒಳಪಟ್ಟಿದ್ದರೂ ಇರಾಕಿ ಕುರ್ದಿಸ್ತಾನ್‌ನ ಎರ್ಬಿಲ್‌ನಿಂದ ಈಗಲೂ ಪ್ರಸಾರವಾಗುತ್ತಿದೆ. ಆದಾಗ್ಯೂ ಉಪಗ್ರಹ ಉಡಾವಣೆಗೆ ಜಂಟಿಯಾಗಿ ಹಲವು ಬಾರಿ ಪ್ರಯತ್ನಿಸಿವೆ.[೪೨]

ಆಧುನಿಕ ಕಾರ್ಯಾಚರಣೆ

ಬದಲಾಯಿಸಿ

ದೂರವಾಣಿ

ಬದಲಾಯಿಸಿ
 
ಆಪ್ಟಿಕಲ್ ಫೈಬರ್ ಹೆಚ್ಚಿನ ಅಂತರದ ಸಂವಹನಕ್ಕಾಗಿ ಅಗ್ಗದ ಆವರ್ತನ ಶ್ರೇಣಿಯನ್ನು ಓದಗಿಸುತ್ತದೆ.

ದೂರಸಂವಹನದ ಅನಲಾಗ್‌ನಲ್ಲಿಕರೆ ಮಾಡುವವನು ತಾನು ಬಯಸಿದ ವ್ಯಕ್ತಿಯೊಂದಿಗೆ ಮಾತನಾಡಲು ಒತ್ತುಗುಂಡಿಗಳ ಮೂಲಕ ಹಲವು ದೂರಸಂವಹನ ವಿನಿಮಯಳಿಂದ ಸಂವಹನವನ್ನು ಸಾಧಿಸಿರುತ್ತಾನೆ. ಒತ್ತುಗುಂಡಿಗಳು ಈ ಇಬ್ಬರು ಬಳಕೆದಾರರ ನಡುವಿನ ವಿದ್ಯುತ್ ಸಂವಹನವನ್ನು ಹೊಂದಿರುತ್ತವೆ ಮತ್ತು ಕರೆಮಾಡುವವ ನಿರ್ಧಿಷ್ಟ ಸಂಖ್ಯೆಗಳನ್ನು ಒತ್ತಿದಾಗ ಈ ವಿದ್ಯುತ್‌ಪ್ರೇರಿತ ಒತ್ತುಗುಂಡಿಗಳು ಕಾರ್ಯನಿರತವಾಗುತ್ತವೆ. ಒಮ್ಮೆ ಸಂಪರ್ಕ ಕಲ್ಪಿಸಲ್ಪಟ್ಟಾಗ ಕರೆಮಾಡಿದವನ ದನಿಯು ಆತನ ಹ್ಯಾಂಡ್‌ಸೆಟ್‌ನಲ್ಲಿರುವ ಸೂಕ್ಷ್ಮಧ್ವನಿವರ್ಧಕದ ಸಹಾಯದಿಂದ ವಿದ್ಯುತ್ ತರಂಗವಾಗಿ ಮಾರ್ಪಡುತ್ತದೆ. ಈ ವಿದ್ಯುತ್ ತರಂಗವು ನೆಟ್‌ವರ್ಕ್‌ನ ಸಹಾಯದಿಂದ ಕಲುಹಿಸಲ್ಪಟ್ಟು ಇನ್ನೊಂದು ತುದಿಯ ಕರೆಯ ಸ್ವೀಕೃತಿದಾರನಿಗೆ ಕೇಳಲ್ಪಡುತ್ತದೆ ಮತ್ತು ಪ್ರತ್ಯುತ್ತರವು ಸಣ್ಣ ಧ್ವನಿವರ್ಧಕದ ಮೂಲಕ ಕರೆಮಾಡಲ್ಪಟ್ಟವನಿಗೆ ಕೇಳಲ್ಪಡುತ್ತದೆ. ಬಳಕೆದಾರರು ಪರಸ್ಪರ ಸಂಭಾಷಣೆಯಲ್ಲಿ ತೊಡಗಿಕೊಂಡಾಗ ಅಲ್ಲಿನ ಪ್ರತ್ಯೇಕ ವಿದ್ಯುತ್ ಸಂವಹನಗಳು ಪರಸ್ಪರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ.[೪೩][೪೪]

ಸ್ಥಿರ ದೂರವಾಣಿಯಿರುವ ಬಹುತೇಕ ಎಲ್ಲಾ ಮನೆಗಳಲ್ಲಿನ ಅನಲಾಗ್ ಧ್ವನಿವರ್ಧಕದ ಶಬ್ಧವು ನೇರವಾಗಿ ಸಿಗ್ನಲ್‌ನ ವಿದ್ಯುತ್ ಶಕ್ತಿಯ ಪ್ರಮಾಣವನ್ನು ನಿರ್ಧರಿಸುತ್ತದೆ. ಆದಾಗ್ಯೂ ಕಡಿಮೆ ಅಂತರದ ಕರೆಗಳು ಬಹುಶಃ ಅನಲಾಗ್ ಸಂಕೇತಗಳಂತೆ ಕೊನೆಯಿಂದ ಕೊನೆಗೆ ನಿಯಂತ್ರಿಸಲ್ಪಡುತ್ತವೆ. ದೂರಸಂವಹನ ಸೇವೆಗಳ ಉದ್ದಿಮೆದಾರರು ಬೆಳೆಯುತ್ತ ಸಂಕೇತಗಳು ಸ್ವೀಕೃತಿದಾರರಿಗೆ ಮರಳುವ ಮುನ್ನ ಪಾರದರ್ಶಕವಾಗಿ ಅವುಗಳನ್ನು ಡಿಜಿಟಲ್‌ಗೆ ಪರಿವರ್ತಿಸಲಾಯಿತು. ಇದರ ಪ್ರಯೋಜನವೇನೆಂದರೆ ಡಿಜಿಟಲ್‌ ಆದ ಧ್ವನಿ ಸಂಕೇತಗಳು ಅಂತರಜಾಲದಲ್ಲಿ ದತ್ತಾಂಶಗಳ ಜೊತೆಗೆ ಸಾಗಬಲ್ಲವು ಮತ್ತು ದೂರ ಸಂವಹನದಲ್ಲೂ ಸಹ ಮರುಧ್ವನಿಸಬಲ್ಲವುಗಳಾಗಿದ್ದವು (ಆದರೆ ಅನಲಾಗ್ ಸಂಕೇತಗಳಿಗೆ ವಿರೋಧವಾದಾಗ ಅನಿವಾರ್ಯವಾಗಿ ಅವು ಅಡಚಣೆಗೆ ಒಳಗಾಗುತ್ತಿದ್ದವು)

ಮೊಬೈಲ್‌ಗಳು ದೂರಸಂವಹನ ನೆಟ್‌ವರ್ಕ್‌ನ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದೆ. ಹಲವು ಮಾರುಕಟ್ಟೆಗಳಲ್ಲಿ ಮೊಬೈಲ್ ಫೋನ್ ಚಂದಾದಾರಿಕೆಯು ಸ್ಥಿರ ದೂರಸಂವಹನವನ್ನೂ ಮೀರಿಸಿವೆ. ೨೦೦೫ರಲ್ಲಿ ಮಾರಾಟವಾದ ಮೊಬೈಲ್‌ಗಳ ಸಂಖ್ಯೆ ಒಟ್ಟು ೮೧೬.೬ಮಿಲಿಯನ್. ಅವುಗಳ ಕ್ಷೇತ್ರಗಳನ್ನು ಈ ಕೆಳಕಂಡಂತೆ ಕಾಣಬಹುದು. ಏಷ್ಯಾ/ ಫೆಸಿಫಿಕ್(೨೦೪ ಮಿಲಿಯನ್), ಪಶ್ಚಿಮಾತ್ಯ ಯೂರೋಪ್( ೧೬೪ಮಿಲಿಯನ್),ಸಿಇಮ್‌ಇಎ (ಮಧ್ಯ ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ)(೧೫೩.೫ಮಿಲಿಯನ್) ಉತ್ತರ ಅಮೆರಿಕ(೧೪೮ ಮಿಲಿಯನ್) ಮತ್ತು ಲ್ಯಾಟಿನ್ ಅಮೆರಿಕ (೧೦೨ಮಿಲಿಯನ್).[೪೫] ೧೯೯೯ರಿಂದ ೫ವರ್ಷಗಳಿಂದೀಚೆಗೆ ಹೊಸದಾಗಿ ಚಂದದಾರರಾದವರಲ್ಲಿ ಶೇಕಡ ೫೮.೨ರಷ್ಟು ಬೆಳವಣಿಗೆಯನ್ನು ಹೊಂದಿದ್ದು ಎಲ್ಲಾ ಮಾರುಕಟ್ಟೆಗಿಂತಲು ಮುಂದಿದೆ.[೪೬] ಇಂತಹ ಫೋನ್‌ಗಳ ಅತಿಯಾದ ಬಳಕೆಯಿಂದ ಬಹಳಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲ್ಪಟ್ಟವು ಅಂದರೆ ಧ್ವನಿಯು ಡಿಜಿಟಲ್‌ಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಜಿಎಸ್‌ಎಮ್ ಅಥವಾ ಡಬ್ಲ್ಯು-ಸಿಡಿಎಮ್‌ಎ ಕಡಿಮೆ ಮೌಲ್ಯದ ಅನಲಾಗ್‌ ಆದ ಎಮ್‌ಪಿಎಸ್‌ ಅನ್ನು ಬಳಸಲಾಯಿತು.[೪೭]

ಆದಾಗ್ಯೂ ದೂರಸಂವಹನ ಸಂವಹನದಲ್ಲಿ ಅನಿರೀಕ್ಷಿತವಾದ ಬದಲಾವಣೆಗಳಾದವು. ಟಿಎಟಿ-೮ ಕಾರ್ಯಚರಣೆಯನ್ನು ೧೯೮೮ರಲ್ಲಿ ಪ್ರಾರಂಭಿಸುವ ಮೂಲಕ ೧೯೯೦ರಲ್ಲಿ ಆಪ್ಟಿಕ್ ಫೈಬರ್ಸ್ ಅವಲಂಬಿತ ವಿಸ್ಮೃತ ವ್ಯವಸ್ಥೆಯನ್ನು ಕಾಣಬಹುದಾಯಿತು. ಆಪ್ಟಿಕ್ ಫೈಬರ್‌ಗಳ ಮೂಲಕ ಸಂವಹನ ಕ್ರಿಯೆ ನಡೆಸುವುದರಿಂದ ದತ್ತಾಂಶ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಳೆದ ಟಿಎಟಿ-೮ ವ್ಯವಸ್ಥೆಯಲ್ಲಿ ಕಾಪರ್ ತಂತಿಯ ಮುಖೇನ ಒಂದೇ ಬಾರಿಗೆ ೧೦ ದೂರವಾಣಿ ಕರೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿತ್ತು ಆದರೆ ಇವತ್ತಿನ ಆಪ್ಟಿಕ್ ಫೈಬರ್ಸ್‌ನಲ್ಲಿ ಒಂದೇ ಸಮಯಕ್ಕೆ ೨೫ಬಾರಿ ವಿವಿಧ ದೂರವಾಣಿಗಳ ಕರೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳದ್ದಾಗಿದೆ.[೪೮] ಇದು ದತ್ತಾಂಶದ ಸಾಮರ್ಥ್ಯವನ್ನು ಹೆಚ್ಚಿಸಿತು ಅಲ್ಲದೆ ಮೊದಲ ಆಪ್ಟಿಕ್ ಫೈಬರ್ ಆಕಾರದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನಕ್ಕಿಂತ ಚಿಕ್ಕದಾಗಿತ್ತು. ಎರಡನೆಯದಾಗಿ ಅವರೆಂದಿಗೂ ಅಡ್ಡ ಸಂಭಾಷಣೆಯಿಂದಾಗಿ (crosstalk) ತೊಂದರೆಗೀಡಾಗಲಿಲ್ಲ. ಇದರರ್ಥ ಅವರು ಒಂದೇ ಕೇಬಲ್‌ನಲ್ಲಿ ಹಲವು ಆಫ್ಟಿಕ್ ಫೈಬರ‍್ಅನ್ನು ಸುಲಭವಾಗಿ ತುಂಬಿದ್ದರು.[೪೯] ಕೊನೆಯದಾಗಿ ಒಂದೇ ಫೈಬರ್‌ನ ದತ್ತಾಂಶ ಸಾಮಾರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಮಲ್ಟಿಪ್ಲಕ್ಸಿಂಗ್‌ ಅನ್ನು(ಒಂದೇ ವಾಹಕದಲ್ಲಿ ಒಮ್ಮೆಲೆ ಹಲವು ಸಂವಹನ ಸಂಕೇತಗಳನ್ನು ರವಾನಿಸುವ)ಅಭಿವೃದ್ಧಿಪಡಿಸಲಾಯಿತು.[೫೦][೫೧]

ಆಧುನಿಕ ಆಪ್ಟಿಕ್ ಫೈಬರ್ ನೆಟ್‌ವರ್ಕ್‌ಗಳಲ್ಲಿ ಸಹಾಯಕ ಸಂವಹನವು ಶಿಷ್ಟಾಚಾರದ ನಿಯಮಾವಳಿಯದಾಗಿದ್ದು ಇದು ಎಸಿಂಕ್ರೊನಸ್ ಟ್ರಾನ್ಸ್‌ಫರ್ ಮೊಡ್ (ಎಟಿಎಮ್‌) ಎಂದೇ ಜನಪ್ರಿಯವಾಗಿದೆ. ಎಟಿಎಮ್‌ನ ನಿಯಮವಾಳಿಯು ಎರಡನೇ ಪರಿಚ್ಛೇದದ ಅಕ್ಕಪಕ್ಕದಲ್ಲಿ ದತ್ತಾಂಶ ಪ್ರಸಾರಕ್ಕೆ ಅನುವು ಮಾಡುತ್ತದೆ. ಇದು ಸಾರ್ವಜನಿಕ ದೂರಸಂವಹನ ನೆಟ್‌ವರ್ಕ್‌ಗೆ ಹೇಳಿಮಾಡಿಸಿದಂತಿದೆ, ಏಕೆಂದರೆ ನೆಟ್‌ವರ್ಕ್ ಮೂಲಕ ದತ್ತಾಂಶಗಳ ವಿಲೆವಾರಿಗೆ ಮಾರ್ಗವನ್ನು ರೂಪಿಸುತ್ತದೆ, ಮತ್ತು ಆ ಹಾದಿಯೊಂದಿಗಿನ ಟ್ರಾಫಿಕ್ ಕಾಂಟ್ರಾಕ್ಟ್ ಒಪ್ಪಂದ ನಿರ್ವಹಣೆಯೊಂದಿಗೆ ಅಡಚಣೆಗಳುಂಟಾಗದಂತೆ ನಿಗಾವಹಿಸುತ್ತದೆ. ಈ ಟ್ರಾಫಿಕ್ ಕಾಂಟ್ರಾಕ್ಟ್ ಮೂಲಭೂತವಾಗಿ ಗ್ರಾಹಕ ಮತ್ತು ನೆಟ್‍ವರ್ಕ್‌ ನಡುವೆ ಏರ್ಪಟ್ಟ ಒಪ್ಪಂದವಾಗಿದೆ ಇದು ನೆಟ್‌ವರ್ಕ್ ಹೇಗೆ ದತ್ತಾಂಶಗಳ ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತಾಗಿದೆ. ಒಂದು ವೇಳೆ ನೆಟ್‌ವರ್ಕ್ ಟ್ರಾಫಿಕ್ ಕಾಂಟ್ರಾಕ್ಟ್‌ಅನ್ನು ತಲುಪದಿದ್ದ ಪಕ್ಷದಲ್ಲಿ ಸಂಪರ್ಕವು ಅಲಭ್ಯವಾಗುತ್ತದೆ. ಇದು ಬಹಳ ಮುಖ್ಯವಾಗುತ್ತದೆ ಏಕೆಂದರೆ ದೂರವಾಣಿ ಕರೆಗಳು ಕಾಂಟ್ರಾಕ್ಟ್ ಮೂಲಕ ಸಂವಹನ ಸಾಧಿಸುತ್ತವೆ ಆದ್ದರಿಂದ ಅವರು ತಮ್ಮ ಬಿಟ್ ರೇಟ್ (ನಿರ್ಧಿಷ್ಟ ಪ್ರಮಾಣದ)ಬಗ್ಗೆ ಅಚಲ ನಂಬಿಕೆ ಇರುತ್ತದೆ. ಕೆಲವು ವೇಳೆ ಕರೆ ಮಾಡಿದವನ ಧ್ವನಿಯು ಆ ಭಾಗದಲ್ಲಿ ವಿಳಂಬವಾಗಿ ಕೇಳುತ್ತಿರುತ್ತದೆ ಅಥವಾ ಸಂಪೂರ್ಣವಾಗಿ ತಡೆಹಿಡಿಯಲ್ಪಟ್ಟಿರುತ್ತದೆ.[೫೨] ಎಟಿಎಮ್‌ಗೂ ಮಲ್ಟಿ ಪ್ರೊಟೊಕಾಲ್ ಲೇಬಲ್ ಸ್ವಿಟ್ಚಿಂಗ್ (ಎಮ್‌ಪಿಎಲ್‌ಎಸ್)ನಂತಹ ಪ್ರತಿಸ್ಪರ್ಧಿಗಳಿದ್ದು ಅವು ಒಂದೇ ಸಮನಾದ ಕೆಲಸ ನಿರ್ವಹಿಸುತ್ತವೆ, ಅಲ್ಲದೆ ಭವಿಷ್ಯದ ಉತ್ತಮ ಎಟಿಎಮ್‌ ಸ್ಥಾನವನ್ನು ಹೊಂದುವುದೆಂದು ಭಾವಿಸಲಾಗಿದೆ.[೫೩]

ರೇಡಿಯೋ ಮತ್ತು ದೂರದರ್ಶನ

ಬದಲಾಯಿಸಿ
 
ಅಂಕೀಯ ದೂರಸಂವಹನ ಮಾನಕಗಳು ಮತ್ತು ಅವರ ಪ್ರಪಂಚದಾದ್ಯಂತ ಅಳವಡಿಕೆ.

ಪ್ರಸರಣಾ ವ್ಯವಸ್ಥೆಯಲ್ಲಿ ಉಚ್ಚ ಶಕ್ತಿಯ ಪ್ರಸರಣಾ ಗೋಪುರವು ಉಚ್ಚ ಆವರ್ತನದ ವಿದ್ಯುತ್ಕಾಂತೀಯ ತರಂಗಗಳನ್ನು ಕಡಿಮೆ ಶಕ್ತಿ ಸ್ವೀಕರಿಸುವ ಗ್ರಾಹಕ ಕೇಂದ್ರಕ್ಕೆ ಕಳುಹಿಸುತ್ತದೆ. ಗೋಪುರದಿಂದ ಕಳುಹಿಸಲ್ಪಟ್ಟ ಉಚ್ಚ ಆವರ್ತನದ ತರಂಗಗಳಲ್ಲಿ ದೃಷ್ಯ ಮತ್ತು ಶ್ರವ್ಯ ಮಾಹಿತಿಯನ್ನು ಒಳಗೊಂಡ ಸಂಕೇತಗಳಿರುತ್ತವೆ. ನಂತರದಲ್ಲಿ ಸಂಕೇತಗಳ ಸ್ವಿಕೃತಿದಾರ ಉಚ್ಚ ಆವರ್ತನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ, ಸಂಕೇತಗಳಲ್ಲಿರುವ ದೃಷ್ಯ ಮತ್ತು ಶ್ರವ್ಯ ಮಾಹಿತಿಗಳನ್ನು ಹುಡುಕಿ ಬೇರ್ಪಡಿಸಲು ಡಿಮೊಡ್ಯುಲೆಟರ್ ಅನ್ನು ಬಳಸಲಾಗುತ್ತದೆ. ಪ್ರಸರಣಾ ಸಂಕೇತಗಳು ಅನಲಾಗ್ (ಮಾಹಿತಿಯ ಆಧಾರದ ಮೇಲೆ ಬದಲಾವಣೆಯಾಗುವ ಸಂಕೇತ) ಅಥವಾ ಡಿಜಿಟಲ್ (ಮಾಹಿತಿಯು ಪ್ರತ್ಯೇಕಿತ ಮೌಲ್ಯದ ಸಂಕೇತಕ್ಕೆ ಮಾರ್ಪಡುವ) ಯಾವುದಾದರೂ ಒಂದು ಗುಂಪಿಗೆ ಸೇರುತ್ತವೆ.[೨೨][೫೪]

ಪ್ರಸರಣಾ ಮಾಧ್ಯಮ ಉದ್ಯಮವು ಇದರ ಅಭಿವೃದ್ಧಿಯ ಸಂದಿಗ್ಧ ತಿರುವಿನಲ್ಲಿದೆ. ಅನೇಕ ರಾಷ್ಟ್ರಗಳು ಅನಲಾಗ್‌ನಿಂದ ಡಿಜಿಟಲ್ ಪ್ರಸರಣಾದತ್ತ ಹೆಜ್ಜೆ ಹಾಕಿವೆ. ಈ ಬೆಳವಣಿಗೆಯನ್ನು ಕಡಿಮೆ ಬಂಡವಾಳ, ಶೀಘ್ರ ಮತ್ತು ಹೆಚ್ಚು ಸಾಮರ್ಥ ಏಕೀಕೃತ ಪರಿಧಿಯಲ್ಲಿ ನಿರ್ಮಾಣಮಾಡುವುದರಿಂದ ಯಶಸ್ವಿಯಾಗಿಸಬಹುದು. ಈ ಡಿಜಿಟಲ್‌ ಪ್ರಸಾರದ ಪ್ರಧಾನ ಅನುಕೂಲವೇನೆಂದರೆ ಸಾಂಪ್ರದಾಯಿಕ ಅನಲಾಗ್ ಪ್ರಸಾರದಲ್ಲಿದ್ದ ದೂರುಗಳನ್ನು ನಿವಾರಿಸಿದ್ದಾರೆ. ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ಗೋಸ್ಟಿಂಗ್ (ಚುಕ್ಕಿಗಳಿಂದ ಆವೃತವಾದ ಟಿವಿ ಪರದೆ),ಅಸ್ಪಷ್ಟ ಚಿತ್ರ, ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡಿತ್ತು. ಇವೆಲ್ಲವು ಸ್ವಭಾವತಃ ಅನಲಾಗ್ ಪ್ರಸರಣದಿಂದ ಸಾಮಾನ್ಯವಾಗಿ ಕಂಡು ಬರುತ್ತಿತ್ತು.ಈ ಸಂಬಂಧವಾಗಿ ಕಾರ್ಯಕ್ರಮದ ಕೊನೆಯಲ್ಲಿ ಬಹಳಷ್ಟು ಗದ್ದಲ ಕೇಳಿಬರುತ್ತಿತ್ತು. ಡಿಜಿಟಲ್ ಪ್ರಸಾರವು ಈ ತೊಂದರೆಯಿಂದ ಸಂಪೂರ್ಣ ಹೊರತಾಗಿದೆ ಏಕೆಂದರೆ ಪ್ರತ್ಯೇಕಿತ ಮೌಲ್ಯವನ್ನು ಸ್ವೀಕೃತಿ ಆಧಾರಿತವಾಗಿ ಕಡಿಮೆಗೊಳಿಸುತ್ತದೆ ಇದರಿಂದ ಉತ್ಪನ್ನದ ಕೊನೆಯ ಹಂತದಲ್ಲಿ ಯಾವುದೇ ಪರಿಣಾಮಗಳಾಗುವುದಿಲ್ಲ. ಸರಳ ಉದಾಹರಣೆಯಲ್ಲಿ ತಿಳಿಸುವುದಾರೆ ಒಂದು ವೇಳೆ ಬೈನರಿ ಮಾಹಿತಿಯಾದ ೧೦೧೧ ಸಂಖ್ಯೆಯು ಕಳುಹಿಸಲ್ಪಟ್ಟಾಗ ಅದು ಸಾಂಕೇತಿಕವಾಗಿ[1.0 0.0 1.0 1.0]ಎಂದು ವಿಸ್ತರಣೆಗೊಳ್ಳುತ್ತದೆ. ಇದು [0.9 0.2 1.1 0.9] ಎಂದು ಸ್ವೀಕೃತಿಯಾಗಿರುತ್ತದೆ ಆದರೆ ಅದು ಬಳಕೆಯ ಭಾಷೆಗೆ ಪರಿವರ್ತಿಸಲ್ಪಟ್ಟು ಈಗಲೂ ಅದು ಬೈನರಿ ಭಾಷೆಯಲ್ಲಿ ೧೦೧೧ ಎಂದೇ ದಾಖಲಾಗಿರುತ್ತದೆ. ಇದು ಸಂಪೂರ್ಣ ಯಶಸ್ವಿಯಾಗಿ ರವಾಣಿಸಲ್ಪಟ್ಟ ಮಾಹಿತಿಯಾಗಿರುತ್ತದೆ. ಈ ಉದಾಹರಣೆಯಿಂದ ಡಿಜಿಟಲ್ ಪ್ರಸಾರದ ತೊಂದರೆಯ ಬಗೆಗೂ ತಿಳಿದಂತಾಯಿತು ಈ ಹಂತದಲ್ಲಿ ಒಂದು ವೇಳೆ ಸಂದೇಶದಲ್ಲಿ ಎಲ್ಲಾದರೂ ಗದ್ದಲಗಳಿದ್ದಲ್ಲಿ ಅದೂ ಸಹ ಬಳಸಲ್ಪಡಬಹುದಾದ ಭಾಷೆಯ ಸಂದೇಶವಾಗಿ ಮಾರ್ಪಡುತ್ತದೆ. ಪುನರ್‌ಸಂದೇಶದಲ್ಲಿ ಫಾರ್ವರ್ಡ್ ಎರರ್ ಕರೆಕ್ಷನ್ ಬಳಸಿಕೊಂಡು ಗ್ರಾಹಕವು ಕೆಲವೊಂದು ಎರರ್‌ಗಳನ್ನು ಮಾತ್ರ ಸರಿಪಡಿಸಬಹುದು ಆದರೆ ಶಬ್ದವು ಹೆಚ್ಚಾಗಿರುವುದರಿಂದ ಹೊರಪ್ರಸಾರವಾಗುವ ಸಂದೇಶವು ಅಸ್ಪಷ್ಟವಾಗಿರುತ್ತದೆ ಇದರಿಂದ ಪ್ರಸಾರಣವು ತೊಂದರೆಗೊಳಗಾಗುತ್ತದೆ.[೫೫][೫೬]

ಡಿಜಿಟಲ್ ಟಿವಿ ಪ್ರಸಾರದಲ್ಲಿ, ಜಾಗತ್ತಿನಾದ್ಯಂತ ಮೂರು ವಿಧವಾದ ಮಾನಕ ಪ್ರತಿಸ್ಪರ್ಧೆಗಳಿವೆ. ಇವುಗಳೆಂದರೆ ಎಟಿಎಸ್‌ಸಿ, ಡಿವಿಬಿ ಮತ್ತು ಐಎಸ್‌ಡಿಬಿ ಮಾನಕಗಳು; ಈ ಮಾನಕಗಳ ಬಳಕೆಯನ್ನು ಈ ವರೆಗೆ ಕ್ಯಾಪ್ಶನ್‌ಡ್ ಮ್ಯಾಪ್‌ಗಳಲ್ಲಿ ಬಳಸಲಾಗಿದೆ. ವಿಡಿಯೋ ಸಂಕ್ಷೇಪಿಸಲು ಈ ಮೂರು ಮಾನಕಗಳು MPEG-೨ ಬಳಸಿಕೊಳ್ಳುತ್ತವೆ. ಆಡಿಯೋ ಸಂಕ್ಷೇಪಿಸಲು ಎಟಿಎಸ್‌ಸಿಯು ಡೋಲ್ಬಿ ಡಿಜಿಟಲ್ ಎಸಿ-೩ ಬಳಸಿಕೊಳ್ಳುತ್ತದೆ, ಐಎಸ್‌ಡಿಬಿಯು ಅಡ್ವಾನ್ಸ್ಡ್ ಆಡಿಯೋ ಕೋಡಿಂಗ್ (MPEG-೨ ಭಾಗ ೭)ಬಳಸಿಕೊಳ್ಳುತ್ತದೆ ಮತ್ತು ಆಡಿಯೋ ಸಂಕ್ಷೇಪಿಸಲು ಡಿವಿಬಿ ಯಾವುದೇ ಮಾನಕ ಹೊಂದಿಲ್ಲ ಆದರೆ ಕೆಲವೊಮ್ಮೆ MPEG-೧ ಭಾಗ ೩ ಲೇಯರ್ ೨ ಬಳಸಿಕೊಳ್ಳುತ್ತದೆ.[೫೭][೫೮] ಸಮನ್ವಯತೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರ್ಯಯೋಜನೆಗಳ ನಡುವೆ ವ್ಯತ್ಯಾಸವಿದೆ. ಡಿಜಿಟಲ್ ಆಡಿಯೋ ಪ್ರಸಾರಣದಲ್ಲಿ, ಎಲ್ಲಾ ದೇಶಗಳು ಏಕೀಕೃತವಾಗಿ ಡಿಜಿಟಲ್ ಆಡಿಯೋ ಪ್ರಸಾರಣ ಮಾನಕವನ್ನು ಅಳವಡಿಸಿಕೊಂಡಿವೆ ( ಯುರೆಕಾ ೧೪೭ ಮಾನಕ ಎಂದು ಕರೆಯಲಾಗುತ್ತದೆ). ಅಮೆರಿಕಾ ಸಂಯುಕ್ತ ಸಂಸ್ಥಾನ ಹೊರತು ಪಡಿಸಿ, ಇದು ಎಚ್‌ಡಿ ರೇಡಿಯೋ ಅಳವಡಿಸಿಕೊಂಡಿದೆ. ಎಚ್‌ಡಿ ರೇಡಿಯೋ, ಯುರೆಕಾ ೧೪೭ ನಂತಲ್ಲದೇ, ಪ್ರಸಾರಣೆ ಇನ್ ಬ್ಯಾಂಡ್ ಆನ್ ಚಾನೆಲ್ ಆಧಾರದ ಪ್ರಸಾರಣೆ ವಿಧಾನ ಹೊಂದಿದ್ದು, ಇದು ಡಿಜಿಟಲ್ ಮಾಹಿತಿಯನ್ನು ಸಾಮಾನ್ಯ AM ಅಥವಾ FM ಅನಲಾಗ್ ಪ್ರಸಾರಗಳಲ್ಲಿ ರವಾನಿಸುತ್ತದೆ.[೫೯]

ಆದರೆ, ಡಿಜಿಟಲ್‌ಗೆ ಹೋಗುವ ಬದಲು ಹೆಚ್ಚಿನ ಎಲ್ಲಾ ದೇಶಗಳಲ್ಲಿ ಅನಲಾಗ್ ಟೆಲಿವಿಶನ್ ಹೆಚ್ಚಿನ ದೇಶಗಳಲ್ಲಿ ಇನ್ನೂ ಬಳಕೆಯಾಗುತ್ತಿದೆ. ಅಮೆರಿಕಾವನ್ನು ಹೊರತುಪಡಿಸಿ, ಜೂನ್ ೧೨ ೨೦೦೯ರಿಂದ ಅನಲಾಗ್ ಟಿವಿ ಪ್ರಸಾರಣೆಯನ್ನು ಬಂದು ಮಾಡಿ ಡಿಜಿಟಲ್ ಬಳಸಲಾರಂಭಿಸಿದೆ(ಎಲ್ಲಾ ಕಡೆಯಲ್ಲೂ ಆದರೆ ಕಡಿಮೆ ಶಕ್ತಿಯ ಟಿವಿ ಕೇಂದ್ರ ಹೊರತುಪಡಿಸಿ), ಆದರೆ ಇದಕ್ಕೂ ಮೊದಲು ಎರಡು ಬಾರಿ ಬದಲಾವಣೆಯ ಗಡುವನ್ನ ಮೀರಲಾಗಿತ್ತು[೬೦]. ಅನಲಾಗ್ ಟಿವಿ ಪ್ರಸಾರಣಕ್ಕಾಗಿ, ಬಣ್ಣದ ಟಿವಿಯಲ್ಲಿ ಪ್ರಸಾರ ಮಾಡಲು ಮೂರು ಮಾನಕಗಳನ್ನು ಬಳಸಲಾಗುತ್ತದೆ (ಅಳವಡಿಸಿಕೊಂಡಿರುವ ನಕ್ಷೆಗಾಗಿ ಇಲ್ಲಿ ನೋಡಿ). ಇವುಗಳೆಂದರೆ ಪಿಎ‌ಎಲ್ (ಬ್ರಿಟೀಷ್ ವಿನ್ಯಾಸಗೊಳಿಸಿದ್ದು), ಎನ್‌ಟಿಎಸ್‌ಸಿ (ಉತ್ತರ ಅಮೆರಿಕಾ ವಿನ್ಯಾಸಗೊಳಿಸಿದ್ದು), ಮತ್ತು ಎಸ್‌ಇಸಿಎ‌ಎಂ (ವಿನ್ಯಾಸಗೊಳಿಸಿದ್ದು). (ಬಣ್ಣದ ಟಿವಿಗೆ ಕಳುಹಿಸಲು ಇವುಗಳು ಒಂದು ಮಾರ್ಗವಾಗಿವೆ ಮತ್ತು ಈ ಮಾನಕಗಳು ಕಪ್ಪು ಬಿಳುಪಿನ ಟಿವಿಗಳಿಗೆ ಅನ್ವಯಿಸುವುದಿಲ್ಲ, ಇವುಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ). ಅನಲಾಗ್ ರೇಡಿಯೋದಿಂದ ಡಿಜಿಟಲ್ ರೇಡಿಯೋಗೆ ಬದಲಾಯಿಸುವುದು ಸ್ವಲ್ಪ ಕಷ್ಟವೇ ಆಯಿತು, ಏಕೆಂದರೆ ಅನಲಾಗ್ ಗ್ರಾಹಕಗಳು ಡಿಜಿಟಲ್ ಗ್ರಾಹಕಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.[೬೧][೬೨] ಅನಲಾಗ್ ರೇಡಿಯೋಗಾಗಿ ಸಮನ್ವಯತೆ ಆ‍ಯ್‌೦ಪ್ಲಿಟ್ಯೂಡ್ ಸಮನ್ವಯತೆ(AM ) ಅಥವಾ ಕಂಪನಾಂಕ ಸಮನ್ವಯತೆ(FM )ಆಯ್ಕೆ ಮಾಡಿಕೊಳ್ಳಬೇಕು. ಸ್ಟಿರೀಯೋ ಎಫ್‌ಎಂಗಾಗಿ ಸ್ಟಿರೀಯೋ ಪ್ಲೇಬ್ಯಾಕ್ ಸಾಧಿಸಲು, ಆ‍ಯ್‌೦ಪ್ಲಿಟ್ಯೂಡ್ ಸಮನ್ವಯತೆ ಹೊಂದಿದ ಸಬ್‌ಕ್ಯಾರಿಯರ್ ಬಳಸಿಕೊಳ್ಳಲಾಗುತ್ತದೆ.

ಅಂತರಜಾಲ

ಬದಲಾಯಿಸಿ
 
ಓಎಸ್‍‌ಐ ಪರಾಮರ್ಶನ ಮಾದರಿ

ಅಂತರಜಾಲವೆಂಬುದು ಪ್ರಪಂಚಾದದ್ಯಂತ ಇರುವ ಗಣಕಯಂತ್ರಗಳ ಜಾಲವಾಗಿದೆ ಮತ್ತು ಅಂತರಜಾಲ ನಿಯಮಾವಳಿಗಳನ್ನು ಬಳಸಿಕೊಂಡು ಗಣಕಯಂತ್ರದ ಜಾಲಗಳ ಸಂವಹನ ಸಾಧಿಸಬಹುದಾಗಿದೆ.[೬೩] ಅಂತರಜಾಲದಲ್ಲಿರುವ ಪ್ರತಿಯೊಂದು ಗಣಕಯಂತ್ರ ಸಹ ತನ್ನದೇ ಆದ ಐಪಿ ವಿಳಾಸವನ್ನು ಹೊಂದಿರುತ್ತದೆ ಅದನ್ನು ಇನ್ನೊಂದು ಗಣಕಯಂತ್ರವು ಅದಕ್ಕೆ ಮಾಹಿತಿಯನ್ನು ಕಳುಹಿಸಲು ಬಳಸಬಹುದಾಗಿದೆ. ಇದರಿಂದಾಗಿ, ಯಾವುದೇ ಗಣಕಯಂತ್ರವು ಅಂತರಜಾಲದ ಮೂಲಕ ಇನ್ನೊಂದು ಗಣಕಯಂತ್ರದ ಐಪಿ ವಿಳಾಸವನ್ನು ಬಳಸಿಕೊಂಡು ಸಂದೇಶವನ್ನು ಕಳುಹಿಸಬಹುದಾಗಿದೆ. ದ್ವಿಮುಖ ಸಂವಹನ ಸಾಧಿಸಲು, ಕಳುಹಿಸಿದ ಸಂದೇಶವು ತನ್ನೊಡನೆ ಕಳುಹಿಸಿದ ಮೂಲ ಗಣಕಂತ್ರದ ಐಪಿ ವಿಳಾಸವನ್ನೂ ಹೊತ್ತೊಯ್ದಿರುತ್ತದೆ. ಹೀಗೆ ಅಂತರಜಾಲವು ಗಣಕಯಂತ್ರಗಳ ನಡುವೆ ಸಂದೇಶಗಳನ್ನು ವಿನಿಮಯ ಮಾಡುತ್ತದೆ.[೬೪]

As of 2008[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]], ಸುಮಾರು ೨೧.೯%ರಷ್ಟು ಪ್ರಪಂಚದ ಜನಸಂಖ್ಯೆಯು ಹೆಚ್ಚಿನ ಪ್ರವೇಶ ಪ್ರಮಾಣದೊಂದಿಗೆ ಅಂತರಜಾಲವನ್ನು ಬಳಸುತ್ತಿದೆ (ಜನಸಂಖ್ಯೆಯ ಪ್ರತಿಶತದ ಮೂಲಕ ಅಳೆಯಲಾಗಿದೆ) ಇದು ಉತ್ತರ ಅಮೇರಿಕಾದಲ್ಲಿ (೭೩.೬%), ಒಶಿಯೆನಿಯಾ/ಆಸ್ಟ್ರೇಲಿಯಾದಲ್ಲಿ (೫೯.೫%) ಮತ್ತು ಯುರೋಪಿನಲ್ಲಿ (೪೮.೧%)ರಷ್ಟಿದೆ.[೬೫] ಬ್ರಾಡ್‌ಬ್ಯಾಂಡ್‌ ಪ್ರವೇಶದಲ್ಲಿ, ಐಸ್‌ಲ್ಯಾಂಡ್ (೨೬.೭%), ದಕ್ಷಿಣ ಕೊರಿಯಾ (೨೫.೪%) ಮತ್ತು ನೆದರ್‌ಲ್ಯಾಂಡ್ಸ್ (೨೫.೩%)ರಷ್ಟನ್ನು ಹೊಂದಿದ್ದು ಪ್ರಪಂಚದ ಮುಂಚೂಣಿಯಲ್ಲಿದೆ.[೬೬]

ಅಂತರಜಾಲವು ಭಾಗವಾಗಿ ಕಾರ್ಯ ನಿರ್ವಹಿಸುತ್ತದೆ, ಏಕೆಂದರೆ ನಿಯಮಾವಳಿಗಳು ಗಣಕಯಂತ್ರ ಮತ್ತು ರೂಟರ್‌ಗಳು ಪರಸ್ಪರ ಸಂವಹನ ಸಾಧಿಸುವುದನ್ನು ನಿಯಂತ್ರಿಸುತ್ತದೆ. ಗಣಕಯಂತ್ರ ಅಂತರಜಾಲ ಸಂವಹನವು ಅನೇಕ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ, ಇಲ್ಲಿ ನಿಯಮಾವಳಿ ಸಂಗ್ರಹಗಳಲ್ಲಿನ ಪ್ರತ್ಯೇಕ ನಿಯಮಾವಳಿಗಳು ಇತರ ನಿಯಮಾವಳಿಗಳಿಂದ ಹೆಚ್ಚುಕಡಿಮೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಇದರಂದಾಗಿ ಉನ್ನತ ಹಂತದ ನಿಯಮಾವಳಿಗಳ ಕಾರ್ಯದಲ್ಲಿ ಬದಲಾವಣೆಯಾಗದಂತೆ ಜಾಲ ಸಂದರ್ಭಕ್ಕೆ ತಕ್ಕಂತೆ ಕೆಳ ಹಂತದ ನಿಯಮಾವಳಿಗಳನ್ನು ಗ್ರಾಹಕೀಯಗೊಳಿಸಲು ಅನುವು ಮಾಡಿಕೊಡುತ್ತದೆ. ಗಣಕಯಂತ್ರವು ಇಥರ್ನೆಟ್‌ ಅಥವಾ ವೈ-ಫೈಯ ಮೂಲಕ ಅಂತರಜಾಲ ನಿರ್ವಹಿಸಲ್ಪಡುತ್ತಿದ್ದರೂ ಅಂತರಜಾಲವನ್ನು ಶೋಧಿಸುವ ತಂತ್ರಾಂಶವು ಒಂದೇ ಸಂಕೇತವನ್ನು ಅನುವು ಮಾಡಿಕೊಡುವುದರಿಂದ ಇದು ಮುಖ್ಯವಾಗಿದೆ. ಪ್ರೊಟೊಕಾಲ್‌ಗಳನ್ನು ಕೆಲವೊಮ್ಮೆ ಒಎಸ್‌ಐ ಪರಾಮರ್ಶನ ಮಾದರಿಯಲ್ಲಿನ ಅದರ ಸ್ಥಾನದ ಮೂಲಕ ಗುರುತಿಸಲಾಗುತ್ತದೆ (ಬಲಗಡೆಯಲ್ಲಿರುವ ಚಿತ್ರದಂತೆ), ಇದು ೧೯೮೩ರಲ್ಲಿ ಮೊದಲ ಯಶಸ್ವಿಯಾಗದ ಸಾರ್ವತ್ರಿಕವಾಗಿ ಅಂಗೀಕರಿಸಬಹುದಾದ ಜಾಲದ ನಿಯಮಾವಳಿಯ ಪ್ರಯತ್ನದ ನಂತರ ಉಗಮವಾಯಿತು.[೬೭]

ಅಂತರಜಾಲಕ್ಕಾಗಿ ಭೌತಿಕ ಮಾಧ್ಯಮ ಮತ್ತು ದತ್ತಾಂಶವನ್ನು ಸಂವಹನಿಸುವ ನಿಯಮಾವಳಿಗಳು ವಿಶ್ವದಲ್ಲಿ ಹಣ ಚಲಿಸುವ ಹಾಗೆ ಅನೇಕ ಬಾರಿ ಬದಲಾಗುತ್ತವೆ. ಅಂತರಜಾಲ ಸ್ಥಳಗಳು ಭೌತಿಕ ಮಾಧ್ಯಮ ಅಥವಾ ದತ್ತಾಂಶವನ್ನು ಬಳಸುವ ನಿಯಮಾವಳಿಗಳ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಇದು ಸ್ಥಳೀಯ ಜಾಲ ಸಂದರ್ಭಕ್ಕೆ ಉತ್ತಮವಾದ ಮಾಧ್ಯಮ ಮತ್ತು ನಿಯಮಾವಳಿಗಳನ್ನು ಸ್ವೀಕರಿಸಲು ಪ್ರೆರೇಪಿಸುತ್ತದೆ. ಹೆಚ್ಚಿನ ಖಂಡಾಂತರದ ಸಂವಹನಕ್ಕಾಗಿ ಆಪ್ಟಿಕ್ ಫೈಬರ್‌ನಲ್ಲಿನ ಶ್ರೇಷ್ಟವಾದ ಅಸಿಂಕ್ರೊನಸ್ ಟ್ರಾನ್ಸಫರ್ ಮೋಡ್‌ (ಎಟಿಎಮ್‌) ನಿಯಮಾವಳಿಯನ್ನು (ಅಥವಾ ಸಮಾನವಾದ ಆಧುನಿಕವಾಗಿದ್ದು) ಬಳಸುತ್ತಾರೆ. ಇದಕ್ಕೆ ಕಾರಣವೆಂದರೆ ಸಾರ್ವಜನಿಕ ವಿನಿಮಯ ದೂರವಾಣಿ ಸಂವಹನದಂತೆ ಹೆಚ್ಚಿನ ಸಂವಹನ ಜಾಲವು ಒಂದೇ ರಚನೆಯನ್ನು ಹಂಚುತ್ತವೆ.

ಜಾಲ ಹಂತದಲ್ಲಿ, ವಸ್ತುಗಳು ಲಾಜಿಕಲ್ ಅಡ್ರೆಸಿಂಗ್‌ನ್ನು ಅಂಗೀಕರಿಸುವುದರಿಂದ ಅಂತರಜಾಲ ನಿಯಮಾವಳಿ(ಐಪಿ)ಯೊಂದಿಗೆ ಗುಣಮಟ್ಟದವಾಗುತ್ತಿದೆ. ವರ್ಲ್ಡ್ ವೈಡ್ ವೆಬ್‌ಗಾಗಿ, ಡೊಮೈನ್ ನೇಮ್ ಸಿಸ್ಟಮ್‌ನ್ನು ಬಳಸಿಕೊಂಡು ಮಾನವ ಓದುವ ರೂಪವಾದ ಈ "ಐಪಿ ವಿಳಾಸಗಳು" ಉದ್ಭವಿಸಿದೆ (ಉದಾ www.google.com ನಿಂದ 72.14.207.99 Archived 2006-08-22 ವೇಬ್ಯಾಕ್ ಮೆಷಿನ್ ನಲ್ಲಿ. ಉದ್ಭವಿಸಿದೆ). ಈ ಸಮಯದಲ್ಲಿ ಹೆಚ್ಚಾಗಿ ಬಳಸುವ ಆವೃತ್ತಿಯಾದ ಅಂತರಜಾಲ ನಿಯಮಾವಳಿಯು ನಾಲ್ಕನೇ ಅವೃತ್ತಿಯಾಗಿದೆ ಆದರೆ ಆರನೇ ಆವೃತ್ತಿಗೆ ಸಾಗುವುದು ಸಧ್ಯದಲ್ಲಿ ಆಗಲಿದೆ.[೬೮]

ಪ್ರಸಾರ ಹಂತದಲ್ಲಿ, ಹೆಚ್ಚಿನ ಸಂವಹನವು ಪ್ರಸಾರಣೆ ನಿಯಂತ್ರಣ ನಿಯಮಾವಳಿ (ಟಿಸಿಪಿ) ಅಥವಾ ಬಳಕೆದಾರ ಡಾಟಾಗ್ರಾಂ ನಿಯಮಾವಳಿ (ಯುಡಿಪಿ)ಯನ್ನು ಬಳಸುತ್ತದೆ. ಕಳುಹಿಸಿದ ಪ್ರತಿಯೊಂದೂ ಸಂದೇಶವು ಇನ್ನೊಂದು ಗಣಕವನ್ನು ತಲುಪಬೇಕಾಗಿದ್ದಲ್ಲಿ ಟಿಸಿಪಿಯನ್ನು ಬಳಸುವರು, ಇದು ವಿಹಿತವಾಗಿದ್ದಲ್ಲಿ ಯುಡಿಪಿಯನ್ನು ಬಳಸುವರು. ಟಿಸಿಪಿಯಲ್ಲಿ ಪ್ಯಾಕೆಟ್ಟುಗಳು ಕಳೆದುಹೋದಲ್ಲಿ ಮರುಪ್ರಸಾರವಾಗುತ್ತದೆ ಮತ್ತು ಇದು ಉನ್ನತ ಹಂತಕ್ಕೆ ಕಳುಹಿಸುವ ಮೊದಲು ಶ್ರೇಣಿಯಲ್ಲಿ ಜೋಡಿಸಲ್ಪಡುತ್ತದೆ. ಯುಡಿಪಿಯಲ್ಲಿ ಉನ್ನತ ಹಂತಕ್ಕೆ ಕಳುಹಿಸುವ ಮೊದಲು ಶ್ರೇಣಿಯಲ್ಲಿ ಜೋಡಿಸಲ್ಪಡುವುದಿಲ್ಲ ಮತ್ತು ಪ್ಯಾಕೆಟ್ಟುಗಳು ಕಳೆದುಹೋದಲ್ಲಿ ಮರುಪ್ರಸಾರವಾಗುವುದಿಲ್ಲ. ಟಿಸಿಪಿ ಮತ್ತು ಯುಡಿಪಿ ಪ್ಯಾಕೆಟ್ಟುಗಳು ತಮ್ಮನ್ನು ನಿರ್ವಹಿಸುವ ಅನ್ವಯಿಕಗಳು ಅಥವಾ ವಿಧಾನವನ್ನು ಸೃಷ್ಟೀಕರಿಸಲು ಪೋರ್ಟ್‌ ಸಂಖ್ಯೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತದೆ.[೬೯] ಕೆಲವು ನಿರ್ಧಿಷ್ಟ ಅನ್ವಯಿಕ ಹಂತದ ನಿಯಮಾವಳಿಗಳು ನಿರ್ಧಿಷ್ಟ ಪೋರ್ಟ್‌ಗಳನ್ನು ಬಳಸುತ್ತವೆ, ಜಾಲ ಆಡಳಿತಾಧಿಕಾರಿಗಳು ನಿರ್ಧಿಷ್ಟ ಅವಶ್ಯಕತೆಗೆ ತಕ್ಕಂತೆ ದಟ್ಟಣೆಯನ್ನು ನಿರ್ವಹಿಸುತ್ತವೆ. ಅಂತರಜಾಲ ಪ್ರವೇಶವನ್ನು ನಿರ್ಬಂಧಿಸಲು ನಿರ್ಧಿಷ್ಟ ಪೋರ್ಟ್‌ನಲ್ಲಿ ದಟ್ಟಣೆಯನ್ನು ನಿರ್ಬಂಧಿಸಬೇಕು ಅಥವಾ ನಿರ್ಧಿಷ್ಟ ಅನ್ವಯಿಕಗಳ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರಲು ಪ್ರಾಶಸ್ತ್ಯವನ್ನು ನಿಗದಿಪಡಿಸಬೇಕು.

ಪ್ರಸಾರ ಹಂತದ ಮೇಲೆ ಕೆಲವು ನಿಯಮಾವಳಿಗಳಿವೆ, ಅವುಗಳನ್ನು ಕೆಲವೊಮ್ಮೆ ಬಳಸುತ್ತಾರೆ ಮತ್ತು ಸೆಷನ್ನಿನಲ್ಲಿ ಮತ್ತು ಪ್ರದರ್ಶನ ಹಂತಗಳಲ್ಲಿ ಸಡಿಲವಾಗಿ ಹೊಂದಿಸಲಾಗುತ್ತದೆ, ಅವುಗಳಲ್ಲಿ ಹೆಚ್ಚು ಗುರುತಿಸಬಹುದಾಗಿರುವುದೆಂದರೆ ಸುರಕ್ಷಿತ ಸಾಕೆಟ್‌ ಹಂತ (ಎಸ್‌ಎಸ್‌ಎಲ್‌) ಮತ್ತು ಪ್ರಸಾರ ಹಂತದ ರಕ್ಷಣಾ (ಟಿಎಲ್ಎಸ್‌‌) ನಿಯಮಾವಳಿಗಳು. ಈ ನಿಯಮಾವಳಿಗಳು ಇಬ್ಬರ ನಡುವೆ ಪ್ರಸಾರವಾದ ದತ್ತಾಂಶಗಳು ಸಂಪೂರ್ಣವಾಗಿ ರಹಸ್ಯವಾಗಿರುತ್ತದೆ ಮತ್ತು ಇತರರು ಬಳಸುತಿದ್ದಲ್ಲಿ ಶೋಧಕದ ವಿಳಾಸಪಟ್ಟಿಯಲ್ಲಿ ಬೀಗ ಮುದ್ರೆಯು ಗೋಚರವಾಗುತ್ತದೆ.[೭೦] ಕೊನೆಗೆ ಅನ್ವಯಿಕ ಹಂತದಲ್ಲಿ ಅನೇಕ ಬಳಕೆದಾರರಿಗೆ ಪರಿಚಯವಿರುವ ನಿಯಮಾವಳಿಗಳಿವೆ, ಅವೆಂದರೆ ಹೆಚ್‌ಟಿಟಿಪಿ (ವೆಬ್ ಶೋದನೆ), ಪಾಪ್‌೩ (ಮಿಂಚಂಚೆ), ಎಫ್‌ಟಿಪಿ (ಕಡತ ವರ್ಗಾವಣೆ), ಐಆರ್‌ಸಿ (ಅಂತರಜಾಲ ಚಾಟ್‌), ಬಿಟ್‌ಟೊರೆಂಟ್‌ (ಕಡತ ಹಂಚುವಿಕೆ) ಮತ್ತು ಆಸ್ಕರ್‌(ತುರ್ತು ಸಂದೇಶ).

ಪ್ರಾದೇಶಿಕ ಸಂವಹನಜಾಲಗಳು ಮತ್ತು ವಿಸ್ತಾರವಾದ ಸಂವಹನಜಾಲಗಳು

ಬದಲಾಯಿಸಿ

ಅಂತರಜಾಲವು ಅಭಿವೃದ್ಧಿಯಾದರೂ, ಪ್ರಾದೇಶಿಕ ಸಂವಹನಜಾಲಗಳ ("ಲ್ಯಾನ್‌ಗಳು" - ಗಣಕಯಂತ್ರದ ಜಾಲಗಳು ಕೆಲವು ಕಿಲೋಮೀಟರುಗಳನ್ನು ನಂತರ ವಿಸ್ತರಿಸಲು ಬರುವುದಿಲ್ಲ) ಗುಣಗಳು ಭಿನ್ನವಾಗಿ ಉಳಿಯಿತು. ಸಣ್ಣ ಪ್ರಮಾಣದ ಜಾಲವು ದೊಡ್ಡ ಪ್ರಮಾಣದ ಜಾಲವು ಬಯಸುವ ಎಲ್ಲ ಫೀಚರ್‌ಗಳನ್ನೂ ಬಯಸುವುದಿಲ್ಲ ಮತ್ತು ಕಡಿಮೆ ಹಣವನ್ನು ಬಯಸುತ್ತದೆ ಮತ್ತು ಅವುಗಳಿಲ್ಲದೆ ಪರಿಣಾಮಕಾರಿಯಾಗಿರುತ್ತದೆ. ಅವು ಅಂತರಜಾಲಕ್ಕೆ ಸಂವಹನವನ್ನು ಹೊಂದದಿದ್ದರೆ ಗೌಪ್ಯ ಮತ್ತು ಸುರಕ್ಷಿತವಾಗಿರುತ್ತದೆ. ಅಂತರಜಾಲದೊಂದಿಗೆ ಉದ್ದೇಶಪೂರ್ವಕವಾಗಿ ಸಂವಹನರಹಿತವಾಗಿದ್ದರೂ ಮಾಹಿತಿ ಚೋರರು, ಸೈನ್ಯ, ಅಥವಾ ಆರ್ಥಿಕ ಶಕ್ತಿಗಳಿಂದ ೧೦೦% ರಕ್ಷಣೆಯನ್ನು ಒದಗಿಸಲಾಗುವುದಿಲ್ಲ. ಯಾವುದೇ ವಿಧಾನದಿಂದ ಪ್ರತ್ಯೇಕವಾಗಿ ಲ್ಯಾನ್‌ಗೆ ಸಂವಹನ ಕಲಿಸಿದರೆ ಈ ಅಪಾಯಗಳನ್ನೆರಿಸಬೇಕಾಗುತ್ತದೆ.

ಸ್ವತಂತ್ರ ವಿಸ್ತಾರವಾದ ಸಂವಹನಜಾಲಗಳು ಅಸ್ಥಿತ್ವದಲ್ಲಿದೆ("ವ್ಯಾನ್‌ಗಳು" - ಖಾಸಗೀ ಗಣಕಯಂತ್ರ ಜಾಲಗಳು ಸಾವಿರಾರು ಕಿಲೋಮೀಟರುಗಳಷ್ಟು ದೊರ ಸಂವಹನ ಕಲ್ಪಿಸಬಲ್ಲುದಾಗಿದೆ.) ಇವುಗಳಲ್ಲೂ ಸಹ ಗೌಪ್ಯತೆ, ರಕ್ಷಣೆ ಮತ್ತು ಸಂಪೂರ್ಣವಾಗಿ ಮಾಹಿತಿ ಚೋರರನ್ನು- ಯಾರು ಅವುಗಳನ್ನು "ತಲುಪುವರು" ಅವರಿಂದ ದೂರವೊಡಬಹುದು. ಖಾಸಗೀ ಲ್ಯಾನ್‌ಗಳು ಮತ್ತು ವ್ಯಾನ್‌ಗಳ ಪ್ರಧಾನ ಬಳಕೆದಾರರಾದ ಶಸ್ತ್ರಾಸ್ತ್ರ ಪಡೆಗಳು ಮತ್ತು ಗುಪ್ತ ಮಾಹಿತಿ ದಳಗಳು ತಮ್ಮ ಮಾಹಿತಿಯನ್ನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಗೌಪ್ಯವಾಗಿಡಬೇಕಾಗುತ್ತದೆ.

೧೯೮೦ರ ದಶಕದ ಮಧ್ಯದಲ್ಲಿ ಅನೇಕ ಸಂವಹನ ನಿಯಾಮಾವಳಿಗಳ ಗುಂಪುಗಳು ಒಎಸ್‌ಐ ಪರಾಮರ್ಶನ ಮಾದರಿಯ ದತ್ತಾಂಶ-ಸಂಪರ್ಕ ಹಂತ ಮತ್ತು ಆನ್ವಯಿಕ ಹಂತದ ನಡುವಿನ ಸ್ಥಳವನ್ನು ತುಂಬಲು ಉದ್ಭವಿಸಿದವು. ಇವುಗಳು ಪ್ರಧಾನ ನಿಯಮಾವಳಿ ಗುಂಪುಗಳೊಂದಿಗೆ ಆ‍ಯ್‌ಪಲ್‌ಟಾಕ್, ಐಪಿಎಕ್ಸ್, ಮತ್ತು ನೆಟ್‌ಬಯೋಸ್‌ಗಳನ್ನು ಹೊಂದಿದ್ದವು, ೧೯೯೦ರ ದಶಕದ ಪ್ರಾರಂಭದಲ್ಲಿ ಎಮ್‌ಎಸ್-ಡಾಸ್‌ನೊಂದಿಗಿನ ಐಪಿಎಕ್ಸ್‌ ಬಳಕೆದಾರರಿಂದಾಗಿ ಜನಪ್ರಿಯಗೊಂಡಿತ್ತು. ಈ ಸಂದರ್ಭದಲ್ಲಿ ಟಿಸಿಪಿ/ಐಪಿಯು ಅಸ್ಥಿತ್ವಕ್ಕೆ ಬಂದಿತು, ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಸರ್ಕಾರ ಮತ್ತು ಸಂಶೋಧನಾ ಸುಲಭ್ಯಗಳು ಮಾತ್ರ ಬಳಸಿಕೊಂಡವು.[೭೧]

ಅಂತರಜಾಲವು ಜನಪ್ರಿಯವಾಗಿ ಬೆಳೆದು ದೊಡ್ಡ ಪ್ರಮಾಣದ ಅಂತರಜಾಲ ಸಂಬಂಧಿತ ದಟ್ಟಣೆಯು ಹೆಚ್ಚಾದಂತೆಲ್ಲಾ ಲ್ಯಾನ್‌ಗಳು ಮತ್ತು ವ್ಯಾನ್‌ಗಳು ನಿಧಾನವಾಗಿ ಟಿಸಿಪಿ/ಐಪಿ ನಿಯಮಾವಳಿಗಳಿಗೆ ಬದಲಾಯಿಸಿಕೊಂಡವು, ಮತ್ತು ಇಂದಿನ ಜಾಲಗಳು ಟಿಸಿಪಿ/ಐಪಿ ದಟ್ಟಣೆಗೆ ಮೀಸಲಾಗಿರುವುದು ಸಾಮಾನ್ಯವಾಗಬಹುದು. ಟಿಸಿಪಿ/ಐಪಿಗೆ ಬದಲಾಯಿಸಿಕೊಂಡಿದ್ದು ತಂತ್ರಜ್ಞಾನಗಳಾದ ಟಿಸಿಪಿ/ಐಪಿ ಕ್ಲೈಂಟ್‌ಗಳಿಗೆ ಅನುವು ಮಾಡಿಕೊಡುತ್ತಿದ್ದ ಡಿಹೆಚ್‌ಸಿಪಿಗಳಿಗೆ ತಮ್ಮದೇ ಆದ ಆ‍ಯ್‌ಪಲ್ ಟಾಕ್‌/ ಐಪಿಎಕ್ಸ್/ ನೆಟ್‌ಬಯೋಸ್‌ ನಿಯಮಾವಳಿ ಗುಂಪುಗಳ ಮಾನಕಗಳೊಂದಿಗೆ ಬಂದ ಕಾರ್ಯಗಳಾದ ಜಾಲದ ವಿಳಾಸವನ್ನು ಕಂಡುಕೊಳ್ಳಲು ಸಹಾಯಕವಾಯಿತು.[೭೨]

ಇದು ದತ್ತಾಂಶ-ಸಂಪರ್ಕ ಹಂತದಲ್ಲಿದ್ದರೂ ಹೆಚ್ಚಿನ ಆಧುನಿಕ ಲ್ಯಾನ್‌ಗಳು ಅಂತರಜಾಲದಿಂದ ಬೇರೆಯಾಗಿವೆ. ಅಸಿಂಕ್ರೊನೊಸ್ ಟ್ರಾನ್ಸಫರ್ ಮೋಡ್‌ (ಎಟಿಎಮ್‌) ಅಥವಾ ಮಲ್ಟಿಪ್ರೊಟೊಕಾಲ್ ಲೇಬಲ್ ಸ್ವಿಚ್ಚಿಂಗ್ (ಎಮ್‌ಪಿಎಲ್‌ಎಸ್‌)ಗಳು ವ್ಯಾನ್‌ಗಳಂತಹ ದೊಡ್ಡ ಸಂವಹನಜಾಲಗಳಿಗೆ ವಿಶಿಷ್ಟವಾದ ದತ್ತಾಂಶ-ಸಂಪರ್ಕ ನಿಯಮಾವಳಿಗಳನ್ನೊದಗಿಸುತ್ತದೆ: ಈಥರ್ನೆಟ್‌ ಮತ್ತು ಟೋಕನ್‌ ರಿಂಗ್‌ಗಳು ಲ್ಯಾನ್‌ಗಳಿಗೆ ದತ್ತಾಂಶ-ಸಂಪರ್ಕ ನಿಯಮಾವಳಿಗಳನ್ನೊದಗಿಸುತ್ತದೆ. ಈ ನಿಯಮಾವಳಿಗಳು ಹಳೆಯ ನಿಯಮಾವಳಿಗಳಿಗಿಂತ ಭಿನ್ನವಾಗಿವೆ, ಅವುಗಳು ಸರಳವಾಗಿವೆ (ಉದಾ: ಅವುಗಳು ಸೇವೆಯ ಗುಣಮಟ್ಟದ ಖಾತರಿಗಳ ವೈಶಿಷ್ಟ್ಯವನ್ನು ಹೊಂದಲ್ಲ) ಮತ್ತು ಸಂಘರ್ಷ ನಿವಾರಣೆಯನ್ನೊದಗಿಸುತ್ತವೆ. ಈ ಎರಡೂ ವ್ಯತ್ಯಾಸಗಳು ಹೆಚ್ಚಿನ ಆರ್ಥಿಕ ವ್ಯವಸ್ಥೆಗಳಿಗೆ ಅನುವುಮಾಡಿಕೊಡುತ್ತದೆ.[೭೩]

೧೯೮೦ರ ಮತ್ತು ೯೦ರ ದಶಕಗಳಲ್ಲಿನ ಆಧುನಿಕ ಐಬಿಎಮ್‌ ಟೋಕನ್ ರಿಂಗ್‌ ಜನಪ್ರಿಯತೆಯನ್ನು ಹೊರತುಪಡಿಸಿದರೆ ಎಲ್ಲಾ ಲ್ಯಾನ್‌ಗಳು ಈಗ ತಂತು ಅಥವಾ ನಿಸ್ತಂತು ಈಥರ್ನೆಟ್‌ಗಳನ್ನು ಬಳಸುತ್ತಿವೆ. ಭೌತಿಕ ಹಂತದಲ್ಲಿ, ಹೆಚ್ಚಿನ ತಂತು ಇಥರ್ನೆಟ್‌ ಅಳವಡಿಕೆಗಳು ತಾಮ್ರದ ತಿರುಚಿದ-ಜೋಡಿ ಕೇಬಲ್‌ಗಳನ್ನು ಬಳಸುತ್ತವೆ (ಸಾಮಾನ್ಯವಾದ ೧೦BASE-T ಜಾಲವನ್ನೊಳಗೊಂಡಂತೆ). ಕೆಲವು ಮೊದಲಿನ ಅಳವಡಿಕೆಗಳು ಭಾರವಾದ ಕೊಆ‍ಯ್‌ಕ್ಸಿಯಲ್ ಕೇಬಲ್‌ಗಳನ್ನು ಮತ್ತು ಕೆಲವು ಇತ್ತೀಚಿನ ಅಳವಡಿಕೆಗಳು (ವಿಶೇಷವಾಗಿ ಹೆಚ್ಚಿನ ವೇಗದವು) ಆಪ್ಟಿಕಲ್ ಫೈಬರ್‌ಗಳನ್ನು ಬಳಸುತ್ತವೆ.[೭೪] ಆಪ್ಟಿಕಲ್ ಫೈಬರ್‌ಗಳನ್ನು ಬಳಸಿದಾಗ ಮೈಲ್ಟಿಮೋಡ್‌ ಫೈಬರ್‌ ಮತ್ತು ಸಿಂಗಲ್‌‌ಮೋಡ್‌ ಫೈಬರ್‌ಗಳನ್ನು ಬೇರೆಯಾಗಿಡಬೇಕಾಗುತ್ತದೆ. ಮೈಲ್ಟಿಮೋಡ್‌ ಫೈಬರ್ಗಳನ್ನು ದಪ್ಪದ ಆಪ್ಟಿಕಲ್ ಫೈಬರ್‌ಗಳೆಂದು ತಿಳಿಯಬಹುದು, ಅವುಗಳನ್ನು ತಯಾರಿಸುವ ಸಾಧನಗಳು ಅಗ್ಗವಾಗಿವೆ, ಆದರೆ ಅವುಗಳು ಕಡಿಮೆ ಬಳಸಬಹುದಾದ ಆವರ್ತನ ಶ್ರೇಣಿಯನ್ನು ಮತ್ತು ಕೆಳದರ್ಜೆಯ ಹೆಚ್ಚಿನ ಅಂತರದ ಸಾಮರ್ಥ್ಯವನ್ನು ಹೊಂದಿರುವ ಕೆಟ್ಟ ದೌರ್ಬಲ್ಯತೆಗಳನ್ನು ಹೊಂದಿದೆ.[೭೫]

ಪ್ರಾದೇಶಿಕವಾಗಿ ದೂರಸಂವಹನ ವ್ಯವಸ್ಥೆ

ಬದಲಾಯಿಸಿ

ಟೆಂಪ್ಲೇಟು:Telecommunications by region

ಇವನ್ನೂ ಗಮನಿಸಿ

ಬದಲಾಯಿಸಿ

ಟೆಂಪ್ಲೇಟು:Portal

  • ಬ್ಯುಸಿ ಓವರ್‌ರೈಡ್
  • ದೂರಸಂವಹನ ವ್ಯವಸ್ಥೆಯ ಬಾಹ್ಯರೇಖೆ
  • ದೂರಸಂವಹನ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ
  • ವೇವ್‌ಲೆಂತ್-ಡಿವಿಶನ್ ಮಲ್ಟಿಪ್ಲೆಕ್ಸಿಂಗ್‌(ಡಬ್ಲುಡಿಎಮ್‌)
  • ತಂತು ಸಂವಹನ
  • ಕ್ರಿಯಾಶೀಲ ಜಾಲಗಳು
  • ನ್ಯಾನೊಸ್ಕೇಲ್ ಜಾಲಗಳು
  • ಡ್ಯೂಯಲ್‌-ಟೋನ್ ಮಲ್ಟಿ-ಆವರ್ತನ ಸಂಕೇತಗಳು
  • ಒತ್ತುಗುಂಡಿ ದೂರವಾಣಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ವರ್ಲ್ಡ್‌ವೈಡ್‌ ಟೆಲಿಕಮ್ಯುನಿಕೇಶನ್ಸ್ ಇಂಡಸ್ಟ್ರಿ ರೆವೆನ್ಯೂಸ್ Archived 2010-03-28 ವೇಬ್ಯಾಕ್ ಮೆಷಿನ್ ನಲ್ಲಿ., ಇಂಟರ್ನೆಟ್ ಇಂಜಿನಿಯರಿಂಗ್ ಟಾಸ್ಕ್ ಫೋರ್ಸ್‌, ಜೂನ್‌ ೨೦೧೦.
  2. ಡೇವಿಡ್ ರೋಸ್, ದ ಸ್ಪ್ಯಾನಿಷ್ ಆರ್ಮಡ, ಬ್ರಿಟನ್‌ಎಕ್ಸ್‌ಪ್ರೆಸ್‌, ಅಕ್ಟೋಬರ್ ೨೦೦೮.
  3. Les Télégraphes Chappe Archived 2011-03-17 ವೇಬ್ಯಾಕ್ ಮೆಷಿನ್ ನಲ್ಲಿ., Cédrick Chatenet, l'Ecole Centrale de Lyon, ೨೦೦೩.
  4. ಸಿಸಿಐಟಿ/ಐಟಿಯು-ಟಿ 50 ಇಯರ್ಸ್ ಎಕ್ಸಲೆನ್ಸ್, ಅಂತರಾಷ್ಟ್ರೀಯ ದೂರಸಂವಹನ ವ್ಯವಸ್ಥೆ ಒಕ್ಕೂಟ, ೨೦೦೬.
  5. ದ ಎಲೆಕ್ಟ್ರಾನಿಕ್ ಟೆಲಿಗ್ರಾಫ್, ಜೆ. ಬಿ. ಕಾಲ್ವರ್ಟ್‌, ೧೯ ಮೇ ೨೦೦೪.
  6. ದಿ ಅಟ್ಲಾಂಟಿಕ್ ಕೇಬಲ್, ಬೆರ್ನ್ ಡಿಬ್ನರ್, ಬರ್ನ್ಡಿ ಲೈಬ್ರರಿ ಇಂಕ್., ೧೯೫೯
  7. ಸರ್ ಆರ್ಥರ್ ಸಿ. ಕ್ಲಾರ್ಕೆ. ವಾಯ್ಸ್ ಅಕ್ರಾಸ್ ಸೀ, ಹಾರ್ಪರ್& ಬ್ರದರ್ಸ್, ನ್ಯೂ ಯಾರ್ಕ್ ಸಿಟಿ, ೧೯೫೮.
  8. Brown, Travis (1994). Historical first patents: the first United States patent for many everyday things (illustrated ed.). University of Michigan: Scarecrow Press. p. 179. ISBN 9780810828988.
  9. ಕನೆಕ್ಟೆಡ್ ಅರ್ತ್: ದ ಟೆಲಿಫೋನ್ Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ., ಬಿಟಿ, ೨೦೦೬.
  10. ಹಿಸ್ಟರಿ ಆಫ್ ಎಟಿ&ಟಿ Archived 2008-09-06 ವೇಬ್ಯಾಕ್ ಮೆಷಿನ್ ನಲ್ಲಿ., ಎಟಿ&ಟಿ, ೨೦೦೬.
  11. ಡುಂಡೀ ಸಿಟಿ ಕೌನ್ಸಿಲ್. ಬಯೊಗ್ರಫಿ: ಜೇಮ್ಸ್ ಬೌಮನ್ ಲಿಂಡ್ಸೆ 1799 – 1862 Archived 2011-02-09 ವೇಬ್ಯಾಕ್ ಮೆಷಿನ್ ನಲ್ಲಿ., ಮ್ಯಾಕ್‌ಡೊನಾಲ್ಡ್ ಬ್ಲಾಕ್, ಡುಂಡೀ ಸಿಟಿ ಕೌನ್ಸಿಲ್ ವೆಬ್‌ಸೈಟ್‌. ಸೆಪ್ಟೆಂಬರ್ ೯, ೨೦೧೦ರಲ್ಲಿ ಮರುಸಂಪಾದಿಸಲಾಗಿದೆ.
  12. ಟೆಲ್ಸ ಬಯೊಗ್ರಫಿ, ಜುಬೊ ವುಜೊವಿಕ್, ಟೆಲ್ಸ ಮೆಮೊರಿಯಲ್ ಸೊಸೈಟಿ ಆಫ್ ನ್ಯೂಯಾರ್ಕ್, ೧೯೯೮.
  13. ಟೆಲ್ಸಸ್ ರೇಡಿಯೋ ಕಂಟ್ರೋಲ್ಡ್ ಬೋಟ್‌, ಟ್ವೆಂಟಿ ಫಸ್ಟ್‌ ಸೆಂಚುರಿ ಬುಕ್ಸ್‌, ೨೦೦೭.
  14. ದ ಪಯೋನಿಯರ್ಸ್ Archived 2013-05-14 ವೇಬ್ಯಾಕ್ ಮೆಷಿನ್ ನಲ್ಲಿ., ಎಂಝಡ್‌ಟಿವಿ ಮ್ಯೂಸಿಯಮ್ ಆಫ್ ಟೆಲಿವಿಶನ್, ೨೦೦೬.
  15. ಫಿಲೊ ಫಾರ್ನ್ಸ್‌‌ವರ್ತ್ Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ., ನೈಲ್‌ಪೋಸ್ಟ್‌ಮನ್, ಟೈಮ್‌ ನಿಯತಕಾಲಿಕೆ, ೨೯ ಮಾರ್ಚ್‌ ೧೯೯೯.
  16. ಜಾರ್ಜ್ ಸ್ಟ್ಲಿಬೆಜ್‌, ಕೆರಿ ರೆಡ್‌ಶಾ, ೧೯೯೬.
  17. Hafner, Katie (1998). Where Wizards Stay Up Late: The Origins Of The Internet. Simon & Schuster. ISBN 0-684-83267-4.
  18. ಡಾಟಾ ಟ್ರಾನ್ಸ್‌ಫರ್‌ ಸಿಸ್ಟಮ್‌ Archived 2016-12-31 ವೇಬ್ಯಾಕ್ ಮೆಷಿನ್ ನಲ್ಲಿ., ಊಲ್ಫ್ ಸೊಲ್ಜರ್‌ಬ್ಲೊಮ್, ಪಿಎನ್‌ ೪,೨೯೩,೯೪೮, ಅಕ್ಟೋಬರ್ ೧೯೭೪.
  19. ಇಥರ್ನಟ್‌: ಡಿಸ್ಟ್ರಿಬ್ಯೂಟೆಡ್ ಪಾಕೆಟ್‌ ಸ್ವಿಚಿಂಗ್‌ ಫಾರ್ ಕಂಪ್ಯೂಟರ್‌ ನೆಟ್‌ವರ್ಕ್ಸ್‌ Archived 2007-08-07 ವೇಬ್ಯಾಕ್ ಮೆಷಿನ್ ನಲ್ಲಿ., ರಾಬರ್ಟ್‌ ಎಮ್‌. ಮೆಟ್‌ಕಾಲ್ಫೆ ಮತ್ತು ಡೇವಿಡ್‌ ಆರ್‌. ಬಾಗ್ಸ್, ಎಸಿಎಮ್‌ನ ಸಂವಹನಗಳು (ಪುಪು ೩೯೫-೪೦೪, ಆವೃತ್ತಿ ೧೯, ಸಂಖ್ಯೆ ೫), ಜುಲೈ‌ ೧೯೭೬.
  20. ದೂರಸಂವಹನ ವ್ಯವಸ್ಥೆ , ಟೆಲಿ- ಆ‍ಯ್‌೦ಡ್‌ ಕಮ್ಯುನಿಕೇಶನ್‌ , ನ್ಯೂ ಆಕ್ಸ್‌ಫರ್ಡ್‌ ಡಿಕ್ಷನರಿ (2ನೇ ಆವೃತ್ತಿ), 2005.
  21. ಜೀನ್-ಮಾರಿ ಡಿಲ್ಹಾಕ್, ಫ್ರಂ ಟೆಲಿಕಮ್ಯೊನಿಕೇರ್ ಟು ಟೆಲಿಕಮ್ಯುನಿಕೇಶನ್ಸ್, ೨೦೦೪.
  22. ೨೨.೦ ೨೨.೧ ೨೨.೨ Haykin, Simon (2001). Communication Systems (4th ed.). John Wiley & Sons. pp. 1–3. ISBN 0-471-17869-1.
  23. Ambardar, Ashok (1999). Analog and Digital Signal Processing (2nd ed.). Brooks/Cole Publishing Company. pp. 1–2. ISBN 0-534-95409-X.
  24. ಎಟಿಐಎಸ್ ಟೆಲಿಕಾಂ ಗ್ಲಾಸರಿ 2000 Archived 2008-03-02 ವೇಬ್ಯಾಕ್ ಮೆಷಿನ್ ನಲ್ಲಿ., ಎಟಿಐಎಸ್ ಕಮಿಟಿ ಟಿ೧ಎ೧ ಪರ್ಫಾರ್ಮೆನ್ಸ್ ಆ‍ಯ್‌೦ಡ್ ಸಿಗ್ನಲ್ ಪ್ರೋಸೆಸಿಂಗ್(ಅಮೇರಿಕಾ ನ್ಯಾಶನಲ್ ಸ್ಟಾಂಡರ್ಡ್ಸ್ ಇನ್‌ಸ್ಟಿಟ್ಯೂಟ್ಸ್), ೨೮ ಫೆಬ್ರವರಿ ೨೦೦೧.
  25. ಹೈಕಿನ್‌, ಪುಪು ೩೪೪-೪೦೩.
  26. ಬ್ಲೂಟೂತ್ ಸ್ಪೆಸಿಫಿಕೇಶನ್ ವರ್ಶನ್ 2.0 + ಇಡಿಆರ್ Archived 2014-08-14 ವೇಬ್ಯಾಕ್ ಮೆಷಿನ್ ನಲ್ಲಿ. (ಪು ೨೭), ಬ್ಲೂಟೂತ್, ೨೦೦೪.
  27. ಹೈಕಿನ್, ಪುಪು ೮೮-೧೨೬.
  28. Lenert, Edward (10.1111/j.1460-2466.1998.tb02767.x). "A Communication Theory Perspective on Telecommunications Policy". Journal of Communication. 48 (4): 3–23. doi:10.1111/j.1460-2466.1998.tb02767.x. {{cite journal}}: Check date values in: |date= (help); Unknown parameter |month= ignored (help)
  29. Mireille Samaan (April 2003). "The Effect of Income Inequality on Mobile Phone Penetration". Boston University Honors thesis. Archived from the original (PDF) on February 14, 2007. Retrieved 2007-06-08. {{cite journal}}: Cite journal requires |journal= (help)
  30. Röller, Lars-Hendrik (2001). "Telecommunications Infrastructure and Economic Development: A Simultaneous Approach". American Economic Review. 91 (4): 909–923. doi:10.1257/aer.91.4.909. ISSN 0002-8282. {{cite journal}}: Unknown parameter |coauthor= ignored (|author= suggested) (help)
  31. Riaz, Ali (10.1177/016344397019004004). "The role of telecommunications in economic growth: proposal for an alternative framework of analysis". Media, Culture & Society. 19 (4): 557–583. doi:10.1177/016344397019004004. {{cite journal}}: Check date values in: |date= and |year= / |date= mismatch (help)
  32. "Digital Access Index (DAI)". itu.int. Retrieved 2008-03-06.
  33. ವರ್ಲ್ಡ್ ಟೆಲಿಕಮ್ಯುನಿಕೇಶನ್ ಡೆವಲಪ್‌ಮೆಂಟ್‌ ರಿಪೋರ್ಟ್‌2003, ಇಂಟರ್ನ್ಯಾಶನಲ್ ಟೆಲಿಕಮ್ಯುನಿಕೇಶನ್ ಸಿಸ್ಟಮ್ ಯೂನಿಯನ್, ೨೦೦೩.
  34. ಫಿಶರ್, ಕ್ಲೌಡ್ ಎಸ್.. "'ಟಚ್ ಸಮ್‌ಒನ್': ದ ಟೆಲಿಫೋನ್ ಇಂಡಸ್ಟ್ರಿ ಡಿಸ್ಕವರ್ಸ್ ಸೋಶಿಯೆಬಲಿಟಿ." ಟೆಕ್ನಾಲಜಿ ಆ‍ಯ್‌೦ಡ್‌ ಕಲ್ಚರ್ ೨೯.೧ (ಜನವರಿ‌ ೧೯೮೮): ೩೨-೬೧. ಜೀಸ್‌ಟಿಒಆರ್. ವೆಬ್. ೪ ಅಕ್ಟೋಬರ‍್ ೨೦೦೯
  35. "How do you know your love is real? Check Facebook". CNN. 2008-04-04.
  36. ಐ ಜಸ್ಟ್ ಟೆಕ್ಸ್ಟ್ ಟೊ ಸೆ ಲವ್‍ ಯು, Ipsos ಮೊರಿ, ಸೆಪ್ಟೆಂಬರ್‌ ೨೦೦೫.
  37. "Online News: For many home broadband users, the internet is a primary news source" (PDF). Pew Internet Project. 2006-03-22. Archived from the original (PDF) on 2006-04-05.
  38. "100 Leading National Advertisers" (PDF). Advertising Age. 2008-06-23. Retrieved 2009-06-21.
  39. ಇಂಟರ್ನ್ಯಾಶನಲ್ ಟೆಲಿಕಮ್ಯುನಿಕೇಶನ್ ಸಿಸ್ಟಮ್ ಯೂನಿಯನ್ : ಎಬೌಟ್ ಐಟಿಯು Archived 2009-07-15 ವೇಬ್ಯಾಕ್ ಮೆಷಿನ್ ನಲ್ಲಿ.. ಐಟಿಯು. ೨೧ ಜುಲೈ‌ ೨೦೦೯ರಂದು ನೋಡಲಾಗಿದೆ. (PDF Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ. of regulation)
  40. ಕೊಡ್ದಿಂಗ್, ಜಾರ್ಜ್ ಎ.ಜೂನಿಯರ್‌.. "ಜಾಮಿಂಗ್ ಆ‍ಯ್೦ಡ್ ದ ಪ್ರೊಟೆಕ್ಷನ್ ಆಫ್ ಫ್ರೀಕ್ವೆನ್ಸಿ ಅಸ್ಸೈನ್‌ಮೆಂಟ್ಸ್ ". ದ ಅಮೇರಿಕನ್ ಜರ್ನಲ್ ಆಫ್ ಇಂಟರ್ನ್ಯಾಶನಲ್ ಲಾ, ಆವೃತ್ತಿ ೪೯, ಸಂಖ್ಯೆ ೩ (ಜುಲೈ., ೧೯೫೫), ಪ್ರಕಾಶಕರು: ಅಮೇರಿಕನ್ ಸೊಸೈಟಿ ಆಫ್ ಇಂಟರ್ನ್ಯಾಶನಲ್ ಲಾ. ಪುಪು. ೩೮೪-೩೮೮. ಮರುಪ್ರಕಾಶನ ಮಾಡಿದವರು JSTOR.org ದ ಅಮೇರಿಕನ್ ಜರ್ನಲ್ ಆಫ್ ಇಂಟರ್ನ್ಯಾಶನಲ್ ಲಾ". ೨೯ ಜುಲೈ ೨೦೦೮ರಂದು ಪಡೆಯಲಾಗಿದೆ.
  41. ೪೧.೦ ೪೧.೧ ೪೧.೨ ೪೧.೩ ವುಡ್‌, ಜೇಮ್ಸ್ & ಸೈನ್ಸ್ ಮ್ಯೂಸಿಯಮ್ (ಗ್ರೇಟ್ ಬ್ರಿಟನ್) "ಹಿಸ್ಟರಿ ಆಫ್ ಇಂಟರ್ನ್ಯಾಶನಲ್ ಬ್ರಾಡ್‌ಕಾಸ್ಟಿಂಗ್ ". ಐಇಟಿ ೧೯೯೪, ಆವೃತ್ತಿ ೧,೨೫೮ರ ಪು.೨ ISBN ೦-೮೬೩೪೧-೩೦೨-೧, ISBN ೯೭೮-೦-೮೬೩೪೧-೩೦೨-೫. ಗೂಗಲ್‌ಬುಕ್‌ನವರು ಮರುಪ್ರಕಾಶಿಸಿದ್ದಾರೆ. ೨೧ ಜುಲೈ ೨೦೦೯ರಂದು ಪಡೆಯಲಾಗಿದೆ.
  42. ೪೨.೦ ೪೨.೧ ಗರ್ಫೀಲ್ಡ್, ಆ‍ಯ್‌೦ಡ್ರ್ಯೂ. "ದ ಯು.ಎಸ್ ಕಂಪ್ಯೂಟರ್-ಪ್ರಾಪಗಂಡ ಫೈಲ್ಯೂರ್ ಇನ್ ಇರಾಕ್ ", ಫಾಲ್ ೨೦೦೭, ದ ಮಿಡ್ಲ್ ಈಸ್ಟ್ ಕ್ವಾರ್ಟರ್ಲೀ, ಆವೃತ್ತಿ XIV: ಸಂಖ್ಯೆ ೪, ೨೧ ಜುಲೈ‌ ೨೦೦೯ರಂದು ನೋಡಲಾಗಿದೆ.
  43. ಟೆಲಿಫೋನ್ ಟೆಕ್ನಾಲಜಿ ಪೇಜ್,ಈಪನೋರ್ಮ, ೨೦೦೬.
  44. ಹಒ ಟೆಲಿಫೋನ್ ವರ್ಕ್ಸ್, HowStuffWorks.com, ೨೦೦೬.
  45. ಗಾರ್ಟ್‌ನರ್‌‌ ಸೇಸ್ ಟಾಪ್ ಸಿಕ್ಸ್ ವೆಂಡರ್ಸ್ ಡ್ರೈವ್ ವರ್ಲ್ಡ್‌ವೈಡ್ ಮೊಬೈಲ್ ಫೋನ್ ಸೇಲ್ಸ್ ಟು 21% ಗ್ರೋತ್ ಇನ್ 2005, gartner.com, ೨೮ ಫೆಬ್ರವರಿ ೨೦೦೬.
  46. ಆಫ್ರಿಕಾ ಕಾಲಿಂಗ್, ವಿಕ್ಟರ್ ಆ‍ಯ್‌೦ಡ್ ಐರೆನೆ ಮಾರಿಕ, ಐಇಇಇ ಸ್ಪೆಕ್ಟ್ರಮ್‌, ಮೇ ೨೦೦೬.
  47. ಟೆನ್ ಇಯರ್ಸ್ ಆಫ್ ಜಿಎಸ್‌ಎಮ್ ಇನ್ ಆಸ್ಟ್ರೇಲಿಯಾ Archived 2008-04-17 ವೇಬ್ಯಾಕ್ ಮೆಷಿನ್ ನಲ್ಲಿ., ಆಸ್ಟ್ರೇಲಿಯಾ ಟೆಲಿಕಮ್ಯೂನಿಕೇಶನ್ಸ್ ಅಸೋಸಿಯೇಶನ್, ೨೦೦೩.
  48. ಮಲಿಸ್ಟೋನ್ಸ್ ಇನ್ ಎಟಿ&ಟಿ ಹಿಸ್ಟರಿ Archived 2008-09-06 ವೇಬ್ಯಾಕ್ ಮೆಷಿನ್ ನಲ್ಲಿ., ಎಟಿ&ಟಿ ಕಾಲೆಜ್ ವೆಂಚರ್ಸ್, ೨೦೦೬.
  49. ಆಪ್ಟಿಕಲ್ ಫೈಬರ್ ವೇವ್‍‌ಲೆಂತ್ Archived 2006-05-24 ವೇಬ್ಯಾಕ್ ಮೆಷಿನ್ ನಲ್ಲಿ., ಸೇಲಮ್ ಬಟ್ಟಿ, ೧೯೯೫.
  50. ರಿಪೋರ್ಟ್: ಡಿಡಬ್ಲುಡಿಎಮ್‌ ನೊ ಮ್ಯಾಚ್ ಫಾರ್ ಸಾನೆಟ್‌, ಮಾರಿ ಜಂಡರ್, ಲೈಟ್‌ ರೀಡಿಂಗ್, ೨೦೦೬.
  51. ಫಂಡಮೆಂಟಲ್ಸ್ ಆಫ್ ಡಿಡಬ್ಲುಡಿಎಮ್‌ ಟೆಕ್ನಾಲಜಿ Archived 2012-08-09 ವೇಬ್ಯಾಕ್ ಮೆಷಿನ್ ನಲ್ಲಿ., ಸಿಸ್ಕೊ ಸಿಸ್ಟಮ್ಸ್, ೨೦೦೬.
  52. Stallings, William (2004). Data and Computer Communications (7th edition (intl) ed.). Pearson Prentice Hall. pp. 337–366. ISBN 0-13-183311-1.
  53. ಎಮ್‌ಪಿಎಲ್‍‌ಎಸ್ ಇಸ್ ದ ಫೂಚರ್, ಬಟ್ ಎಟಿಎಮ್‌ ಹ್ಯಾಂಗ್ಸ್ ಆನ್ Archived 2007-07-06 ವೇಬ್ಯಾಕ್ ಮೆಷಿನ್ ನಲ್ಲಿ., ಜಾನ್ ಡಿಕ್ಸ್, ನೆಟ್‌ವರ್ಕ್ ವರ್ಲ್ಡ್‌, ೨೦೦೨
  54. ಹೌ ರ‍ೇಡಿಯೋ ವರ್ಕ್ಸ್, HowStuffWorks.com, ೨೦೦೬.
  55. ಡಿಜಿಟಲ್ ಟೆಲಿವಿಶನ್ ಇನ್ ಆಸ್ಟ್ರೇಲಿಯಾ, ಡಿಜಿಟಲ್ ಟೆಲಿವಿಶನ್ ನ್ಯೂಸ್ ಆಸ್ಟ್ರೇಲಿಯಾ, ೨೦೦೧.
  56. Stallings, William (2004). Data and Computer Communications (7th edition (intl) ed.). Pearson Prentice Hall. ISBN 0-13-183311-1.
  57. ಹೆಚ್‌ಡಿವಿ ಟೆಕ್ನಾಲಜಿ ಹ್ಯಾಂಡ್‌ಬುಕ್, ಸೋನಿ, ೨೦೦೪.
  58. ಆಡಿಯೋ, ಡಿಜಿಟಲ್ ವಿಡಿಯೋ ಬ್ರಾಡ್‌ಕಾಸ್ಟಿಂಗ್ ಪ್ರಾಜೆಕ್ಟ್, ೨೦೦೩.
  59. ಸ್ಟೇಟಸ್ ಆಫ್ ಡಿಎಬಿ (ಯುಎಸ್‌ಎ) Archived 2006-07-21 ವೇಬ್ಯಾಕ್ ಮೆಷಿನ್ ನಲ್ಲಿ., ವರ್ಲ್ಡ್‌ ಡಿಎಬಿ ಫೋರಮ್, ಮಾರ್ಚ್‌ ೨೦೦೫.
  60. Brian Stelter (June 13, 2009). "Changeover to Digital TV Off to a Smooth Start". New York Times.
  61. ಜಿಇ 72664 ಪೋರ್ಟೆಬಲ್/ಎಫ್‌ಎಮ್ ರೇಡಿಯೋ, Amazon.com, ಜೂನ್‌ ೨೦೦೬.
  62. ಡಿಎಬಿ ಪ್ರಾಡಕ್ಟ್ಸ್ Archived 2006-06-21 ವೇಬ್ಯಾಕ್ ಮೆಷಿನ್ ನಲ್ಲಿ., ವರ್ಲ್ಡ್ ಡಿಎಬಿ ಫೋರಮ್‌, ೨೦೦೬.
  63. ರಾಬರ್ಟ್‌ ಇ. ಕಾನ್ ಆ‍ಯ್‌೦ಡ್ ವಿಂಟಾನ್ ಜಿ. ಸೆರ್ಫ್,ವಾಟ್ ಈಸ್ ದ ಇಂಟರ್ನೆಟ್ (ಆ‍ಯ್‌‍೦ಡ್ ವಾಟ್ ಮೇಕ್ಸ್ ಇಟ್ ವರ್ಕ್ಸ್), ಡಿಸೆಂಬರ್ ೧೯೯೯. (ವಿಶೇಷವಾಗಿ xvರಲ್ಲಿನ ಕೆಳಬರಹವನ್ನು ನೋಡಿ)
  64. ಹೌ ಇಂಟರ್ನೆಟ್ ಇನ್ಫ್ರಾಸ್ಟ್ರಕ್ಚರ್ ವರ್ಕ್, HowStuffWorks.com, ೨೦೦೭.
  65. ವರ್ಲ್ಡ್ ಇಂಟರ್ನೆಟ್ ಯೂಸರ್ಸ್ ಅ‍ಯ್‌೦ಡ್ ಪಾಪ್ಯುಲೇಶನ್ ಸ್ಟ್ಯಾಟಿಸ್ಟಿಕ್ಸ್ Archived 2011-06-23 ವೇಬ್ಯಾಕ್ ಮೆಷಿನ್ ನಲ್ಲಿ., ಇಂಟರ್ನೆಟ್worldstats.com, ೧೯ ಮಾರ್ಚ್‌ ೨೦೦೭.
  66. ಒಇಸಿಡಿ ಬ್ರಾಡ್‌ಬ್ಯಾಂಡ್ ಸ್ಟ್ಯಾಟಿಸ್ಟಿಕ್ಸ್, ಆರ್ಗನೈಸೇಶನ್ ಫಾರ್ ಇಕನಾಮಿಕ್ ಕೋ-ಆಪರೇಶನ್ ಆ‍ಯ್‌೦ಡ್ ಡೆವಲಪ್ಮೆಂಟ್,ಡಿಸೆಂಬರ್ ೨೦೦೫.
  67. ಹಿಸ್ಟರಿ ಆಫ್ ದ ಒಎಸ್‌ಐ ರೆಫರೆನ್ಸ್ ಮಾಡೆಲ್, ದ ಟಿಸಿಪಿ/ಐಪಿ ಗೈಡ್ ಆವೃತ್ತಿ ೩.೦, ಚಾರ್ಲ್ಸ್ ಎಂ ಕೊಜಿಯರೊಕ್, ೨೦೦೫.
  68. ಇಂಟರ್‌ಡಕ್ಷನ್ ಟು ಐಪಿವಿ6, ಮೈಕ್ರೋಸಾಫ್ಟ್ ಕಾರ್ಪೋರೇಶನ್, ಫೆಬ್ರವರಿ ೨೦೦೬.
  69. ಸ್ಟ್ಯಾಲಿಂಗ್ಸ್, ಪುಪು ೬೮೩-೭೦೨.
  70. ಟಿ. ಡೈರ್ಕ್ಸ್ ಮತ್ತು ಸಿ. ಅಲೆನ್, ದ ಟಿಎಲ್ಎಸ್‌‌ ಪ್ರೊಟೋಕಾಲ್ ವರ್ಷನ್ ೧.೦, ಆರ್‌ಎಫ್‌ಸಿ ೨೨೪೬, ೧೯೯೯.
  71. ಮಾರ್ಟೀನ್, ಮೈಕೆಲ್ (೨೦೦೦). ಅಂಡರ್‌ಸ್ಟ್ಯಾಂಡಿಂಗ್ ದ ನೆಟ್‌ವರ್ಕ್ (ದ ನೆಟ್‌ವರ್ಕರ್ಸ್ ಗೈಡ್ ಟು ಆ‍ಯ್‌ಪಲ್ ಟಾಕ್‌, ಐಪಿಎಕ್ಸ್, ಆ‍ಯ್‌೦ಡ್ ನೆಟ್‌ಬಯೋಸ್‌), ಎಸ್‌ಎ‌ಎಂ‌ಎಸ್ ಪಬ್ಲಿಷಿಂಗ್, ISBN ೦-೭೩೫೭-೦೯೭೭-೭.
  72. ರಾಲ್ಫ್ ಡ್ರೋಮ್ಸ್, ರಿಸೋರ್ಸ್ ಫಾರ್ ಡಿಎಚ್‌ಸಿಪಿ Archived 2007-07-04 ವೇಬ್ಯಾಕ್ ಮೆಷಿನ್ ನಲ್ಲಿ., ನವೆಂಬರ್ ೨೦೦೩.
  73. ಸ್ಟ್ಯಾಲಿಂಗ್ಸ್, ಪುಪು ೫೦೦-೫೨೬.
  74. ಸ್ಟ್ಯಾಲಿಂಗ್ಸ್, ಪುಪು ೫೧೪-೫೧೬.
  75. ಫೈಬರ್ ಆಪ್ಟಿಕ್ ಕೇಬಲ್ ಟ್ಯೂಟೊರಿಯಲ್, ಎಆರ್‌ಸಿ ಇಲೆಕ್ಟ್ರಾನಿಕ್ಸ್. ೨೦೦೭ರ ಜೂನ್‌ನಲ್ಲಿ ಮರುಸಂಪಾದಿಸಲಾಯಿತು.


ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ