ಮಾರ್ಕೋನಿ (ಗುಗ್ಲಿಯೆಲ್ಮೋ) (25 ಎಪ್ರಿಲ್ 1874 – 20 ಜುಲೈ 1937) ರೇಡಿಯೋದ ಸಂಶೋಧಕನೆಂದೇ ಖ್ಯಾತಿಗಳಿಸಿದವರು. ಇವರು ಇಟೆಲಿಯಲ್ಲಿ ಜನಿಸಿದರು.ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ನಡೆಯುತ್ತಿರುವ ಘಟನೆಯ ವಿವರ ನಮಗೆ ಇಂದು ಒಡನೆಯೇ ಗೊತ್ತಾಗುವಂತೆ ಮಾಡುತ್ತದೆ ಬಾನುಲಿ ವ್ಯವಸ್ಥೆ. ಸಣ್ಣ ಸಣ್ಣ ಮಕ್ಕಳೂ ಟ್ರಾನ್ಸಿಸ್ಟರ್ ನ ಬಟನ್‌ ತಿರುವಿ ಬಾನುಲಿ ಕಾರ್ಯಕ್ರಮವನ್ನು ಆಲಿಸುತ್ತಾರೆ. ಇಂಥ ಒಂದು ಅದ್ಭುತ ಸಾಧನೆ ಸಾಧ್ಯವಾಗುವಂತೆ ಮಾಡಿದ ವಿಜ್ಞಾನಿಯೇ ಗುಗ್ಲಿಯೆಲ್ಮೊ ಮಾರ್ಕೋನಿ.

ಮಾರ್ಕೋನಿ
ಮಾರ್ಕೋನಿ
ಜನನ25 ಎಪ್ರಿಲ್ 1874
ಇಟೆಲಿ
ಮರಣ20 ಜುಲೈ 1937
ರೋಮ್,ಇಟೆಲಿ
ರಾಷ್ಟ್ರೀಯತೆಇಟೆಲಿ
ಪ್ರಸಿದ್ಧಿಗೆ ಕಾರಣರೇಡಿಯೋ
ಗಮನಾರ್ಹ ಪ್ರಶಸ್ತಿಗಳುನೋಬೆಲ್ ಪ್ರಶಸ್ತಿ

ಬಾಲ್ಯ ಮತ್ತು ಶಿಕ್ಷಣ

ಬದಲಾಯಿಸಿ

ಇವರು ಲೆಗ್ ಹಾಂನ ತಾಂತ್ರಿಕ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಣ ಪಡೆದರು. ಈತ ಸುಂದರ, ಪ್ರತಿಭಾವಂತ ಮತ್ತು ವ್ಯವಹಾರ ನಿಪುಣ ಯುವಕನಾಗಿದ್ದರು. ಬೊಲೋನ್ ನಲ್ಲಿಯ ತನ್ನ ತಂದೆಯ ಎಸ್ಟೇಟಿನಲ್ಲಿ ಪ್ರಯೋಗಗಳನ್ನು ಮಾಡುವುದರಲ್ಲಿ ಮಗ್ನರಾಗಿರುತ್ತಿದ್ದರು.

ಸಂಶೋಧನೆ

ಬದಲಾಯಿಸಿ

ಈತನ ಪ್ರಯೋಗಗಳು ಅವನ ತಂದೆಗೆ ಹಿಡಿಸಿರಲಿಲ್ಲ. ತಾಯಿ ಮಾತ್ರ ಪ್ರೋತ್ಸಾಹ ಕೊಡುತ್ತಿದ್ದಳಾದರೂ ಈತ ಮಾಡುತ್ತಿದ್ದ ಪ್ರಯೋಗಗಳ ಮಹತ್ವ ಆಕೆಗೆ ತಿಳಿದಿರಲಿಲ್ಲ. ಕಾಂತಿಯ ತರಂಗಗಳ ಬಗ್ಗೆ ಪ್ರಯೋಗ ಮಾಡುತ್ತಿದ್ದಾಗ ಈತನಿಗೆ ಸೋದರ ಅಲ್ಫಾಂಗೊ ಸಹಕರಿಸಿ ಪ್ರೋತ್ಸಾಹ ನೀಡಿದ. ಮಾರ್ಕೋನಿ ೧೮೮೪ರಲ್ಲಿ ತಂತಿಯ ಸಹಾಯವಿಲ್ಲದೆ ಸಂದೇಶ (ವೈರ್ ಲೆಸ್ ಟೆಲಿಗ್ರಾಫಿ) ರವಾನಿಸಲು ಸಾಧ್ಯ ಎಂಬುದನ್ನು ಪ್ರಯೋಗಗಳಿಂದ ಅರಿತರು. ೧೮೮೫ರಲ್ಲಿ ಮೊತ್ತ ಮೊದಲನೆಯ ತಂತಿರಹಿತ ಸಂದೇಶಗಳನ್ನು ರವಾನಿಸುವಲ್ಲಿ ಸಫಲರಾದರು. ಆದರೆ ಇವರ ಸಂಶೋಧನೆಗೆ ಪೇಟೆಂಟ್ ಕೊಡಲು ಇಟಲಿಯ ಅಧಿಕಾರಿಗಳು ನಿರಾಕರಿಸಿದರು. ಇಂಗ್ಲೆಂಡಿನಲ್ಲಿ ಸಾಕಷ್ಟು ಸಂಪರ್ಕಗಳನ್ನು ಹೊಂದಿದ್ದ ಇವರ ಐರಿಷ್ ತಾಯಿಯೇ ಕೊನೆಗೆ ಈತನ ನೆರವಿಗೆ ಬರಬೇಕಾಯಿತು. ಅಷ್ಟು ಹೊತ್ತಿಗೆ ಆಕೆಗೆ ತನ್ನ ಮಗನ ಸಂಶೋಧನೆ ಎಷ್ಟು ಅದ್ಭುತವಾದದ್ದೆಂಬುದು ತಿಳಿದಿತ್ತು. ಆಕೆಯ ಪ್ರಭಾವದಿಂದ ಮಾರ್ಕೋನಿ ಇಂಗ್ಲೆಂಡಿಗೆ ಹೋಗಿ ಅಗತ್ಯವಾ ಹಣ ಸಂಗ್ರಹಿಸಿ ಮಾರ್ಕೋನಿ ಕಂಪನಿಯನ್ನು ಆರಂಭಿಸಿದರು. ಮೋರ್ಸ್ ಸಂಕೇತಗಳನ್ನು ರವಾನಿಸಲು ತಂತಿಯ ಅಗತ್ಯವಿತ್ತು. ಆದರೆ ಇವರ ತಂತಿಯ ಅಗತ್ಯವಿಲ್ಲದೆಯೇ ಸಂದೇಶ ರವಾನಿಸುವ ಪದ್ಧತಿಯನ್ನೂ ಕಂಡು ಹಿಡಿದದ್ದು ಜಗತ್ತಿನಲ್ಲಿ ಒಂದು ದೊಡ್ಡ ಸುದ್ದಿಯಾಯಿತು.ಇವರು ಸಂಶೋಧಿಸಿದ ತಂತಿರಹಿತ ಟೆಲೆಗ್ರಾಫ್‍ ಮುಂದೆ ರೇಡಿಯೋ ಪ್ರಸಾರ ಪ್ರಾರಂಭವಾಗಲು ಕಾರಣವಾಯಿತು.

ಪ್ರಶಸ್ತಿಗಳು

ಬದಲಾಯಿಸಿ

ಇವರಿಗೆ ೧೯೧೯ರಲ್ಲಿ ಕಾರ್ಲ್ ಫರ್ಡಿನಾಂಡ್ ಬ್ರೌನ್‍ರವರೊಂದಿಗೆ ಭೌತಶಾಸ್ತ್ರನೋಬೆಲ್ ಪ್ರಶಸ್ತಿ ದೊರೆಯಿತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
Foundations and academics
Multimedia and books
Transatlantic "signals" and radio
Keys and "signals"
Priority of invention

vs Tesla

Personal
Other