ದೂರವಾಣಿ ಯಾವುದೇ ಶಬ್ದವನ್ನು (ಸಾಮಾನ್ಯವಾಗಿ ಮಾತು) ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಯೂ ಒಂದು. ೨೦೦೬ ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ಒಟ್ಟು ೪೦೦ ಕೋಟಿ ಜನರು ದೂರವಾಣಿಯನ್ನು ಉಪಯೋಗಿಸುತ್ತಿದ್ದರು. ಬಹುಪಾಲು ದೂರವಾಣಿ ಯಂತ್ರಗಳು ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಮಾರ್ಪಡಿಸಿ ಇವುಗಳನ್ನು ದೂರವಾಣಿ ಜಾಲದ (telephone network) ಮೂಲಕ ಕಳಿಸುತ್ತವೆ.

ಸಾಧಾರಣ ದೂರವಾಣಿ ಯಂತ್ರ

ದೂರವಾಣಿಯ ಆವಿಷ್ಕರ್ತರು ಯಾರು ಎಂಬುದರ ಬಗ್ಗೆ ಅನೇಕ ವಿವಾದಗಳಿವೆ. ೧೯ ನೆ ಯ ಶತಮಾನದಲ್ಲಿ ಈ ಯಂತ್ರದ ಬಗ್ಗೆ ಯೋಚಿಸಿ, ಅದನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕರು ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪ್ರಮುಖರಾದವರು ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಥಾಮಸ್ ಎಡಿಸನ್, ಎಲಿಷಾ ಗ್ರೇ ಮೊದಲಾದವರು.

ಆರಂಭಿಕ ಬೆಳವಣಿಗೆಸಂಪಾದಿಸಿ

 
೧೮೯೬ ರ ಒಂದು ದೂರವಾಣಿ ಯಂತ್ರ
  • ೧೮೪೪: ಇನ್ನೊಸೆನ್ಜೊ ಮಾನ್ಜೆಟ್ಟಿ "ಮಾತನಾಡುವ ತಂತಿ ಯಂತ್ರ" ದ ಪ್ರಸ್ತಾಪವನ್ನು ಮುಂದಿಟ್ಟನು.
  • ೧೮೫೪: ಫ್ರಾನ್ಸ್ ನ ಚಾರ್ಲ್ಸ್ ಬೋರ್ಸೀಲ್ "ವಿದ್ಯುತ್ ಶಕ್ತಿಯ ಮೂಲಕ ಧ್ವನಿಯ ರವಾನೆ" ಎಂಬ ಲೇಖನ ಪ್ರಕಟಿಸಿದನು.
  • ೧೮೭೧-೧೮೭೬: ಅನೇಕ ಆವಿಷ್ಕರ್ತರು ದೂರವಾಣಿ ಯಂತ್ರದ ವಿನ್ಯಾಸದ ಬಗ್ಗೆ ಪ್ರಸ್ತಾಪಗಳನ್ನು ಮುಂದಿಟ್ಟರು. ಹಲವರು ತಮ್ಮ ವಿನ್ಯಾಸಗಳಿಗೆ ಪೇಟೆಂಟ್ ಪಡೆದರು.
  • ಮಾರ್ಚ್ ೧೦, ೧೮೭೬: ಮೊದಲ ಯಶಸ್ವಿ ದೂರವಾಣಿ ಸಂಭಾಷಣೆ. ಅಲೆಕ್ಸಾಂಡರ್ ಗ್ರಹಾಮ್ ಬೆಲ್ ತಮ್ಮ ದೂರವಾಣಿ ಯಂತ್ರದ ಮೂಲಕ ಮಾತನಾಡಿದ ಪದಗಳು ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿ ಬಂದವು.
  • ೧೮೮೩: ಮೊದಲ ಬಾರಿಗೆ ಎರಡು ನಗರ ಮಧ್ಯೆ ಸಂಪರ್ಕ ಏರ್ಪಡಿಸುವ ದೂರವಾಣಿ ಜಾಲ ಸ್ಥಾಪನೆ (ಅಮೆರಿಕದ ನ್ಯೂ ಯಾರ್ಕ್ ಮತ್ತು ಬಾಸ್ಟನ್ ನಗರಗಳ ಮಧ್ಯೆ).

ತಾಂತ್ರಿಕ ಸುಧಾರಣೆಗಳುಸಂಪಾದಿಸಿ

೧೮೭೭ ರಲ್ಲಿ ಮೊದಲ ದೂರವಾಣಿ ಎಕ್ಸ್ ಚೇಂಜ್ ಸ್ಥಾಪನೆಯಾಯಿತು. ಮೊದಲಿನ ಎಕ್ಸ್ ಚೇಂಜ್ ಗಳಲ್ಲಿ ಪ್ರತಿ ಕರೆಯನ್ನು ಒಬ್ಬರು ಆಪರೇಟರ್ ಸರಿಯಾದ ಸಂಪರ್ಕ ತಂತುವಿಗೆ ಜೋಡಿಸುವ ಮೂಲಕ ಸಂಪರ್ಕವನ್ನು ಸಾಧಿಸಬೇಕಾಗುತ್ತಿತ್ತು. ಸ್ವಯಂಚಾಲಿತ ಎಕ್ಸ್ ಚೇಂಜ್ ಗಳು ೧೮೯೨ ರಿಂದ ಮುಂದಕ್ಕೆ ಬಳಕೆಗೆ ಬಂದವು. ಆದರೂ ಮಾನವಚಾಲಿತ ಎಕ್ಸ್ ಚೇಂಜ್ ಗಳ ಉಪಯೋಗ ಇಪ್ಪತ್ತನೆಯ ಶತಮಾನದ ಮಧ್ಯದ ವರೆಗೆ ಮುಂದುವರಿದಿತು. ನಾಣ್ಯವನ್ನು ಹಾಕಿ ಉಪಯೋಗಿಸಬಹುದಾದಂಥ ಪೇ ಫೋನ್ ಗಳು ೧೮೮೯ ರಿಂದ ಬಳಕೆಗೆ ಬಂದವು. ಡಯಲ್ ಮಾಡಬೇಕಾದ ಸಂಖ್ಯೆಯನ್ನು ತಿಳಿಸಲು ತಿರುಗಿಸುವ "ರೋಟರಿ ಡಯಲ್" ೧೯೨೩ ರಿಂದ ಬಳಕೆಗೆ ಬಂದಿತು. ಈಗಿನ ಲಕಾಲದ ಯಂತ್ರಗಳಲ್ಲಿ ಸಾಮಾನ್ಯವಾಗಿ ಈ ಡಯಲ್ ಮಾಯವಾಗಿ ಗುಂಡಿಗಳನ್ನು ಒತ್ತುವ ಮೂಲಕ ಕರೆ ಮಾಡಲಾಗುತ್ತದೆ - ಈ ರೀತಿಯ ಯಂತ್ರಗಳು ೧೯೪೧ ರಲ್ಲಿ ಕೆಲವೆಡೆ ಚಾಲನೆಗೆ ಬಂದಿದ್ದವು.

ಮೊಬೈಲ್ ಫೋನ್ ಗಳುಸಂಪಾದಿಸಿ

 
ಮೊಬೈಲ್ ಫೋನ್ ಗಳು

ಬೆಲ್ ದೂರವಾಣಿ ಸಂಸ್ಥೆ ೧೯೨೪ ರಲ್ಲಿಯೇ ಪೊಲೀಸರು ಬಳಸುವುದಕ್ಕಾಗಿ ಮೊಬೈಲ್ ಯಂತ್ರಗಳನ್ನು ತಯಾರಿಸುವ ಪ್ರಯತ್ನ ಮಾಡಿತು. ೧೯೪೬ ರಲ್ಲಿ ಅಮೆರಿಕದ ಮಿಸ್ಸೋರಿ ರಾಜ್ಯದಲ್ಲಿ ಮೊಬೈಲ್ ದೂರವಾಣಿ ಸೇವೆ ಆರಂಭವಾದರೂ ಸಹ ಜನಪ್ರಿಯವಾಗಲಿಲ್ಲ. ಮೊಬೈಲ್ ಫೋನ್ ಗಳ ಬಳಕೆ ೧೯೮೦ ರ ದಶಕದ ನಂತರವಷ್ಟೇ ಜನಪ್ರಿಯವಾದದ್ದು. ಈಗ ಪ್ರಪಂಚದ ಎಲ್ಲೆಡೆ ಮೊಬೈಲ್ ಫೋನ್ ಗಳು ಜನಪ್ರಿಯವಾಗಿವೆ.

ದೂರವಾಣಿ ಮತ್ತು ಅಂತರ್ಜಾಲಸಂಪಾದಿಸಿ

ಇತ್ತೀಚಿನ ದಿನಗಳಲ್ಲಿ ದೂರವಾಣಿ ಜಾಲಗಳ ಜೊತೆಗೆ, ಅಂತರಜಾಲದ ಮೂಲಕ ಧ್ವನಿ ಸಂಕೇತಗಳನ್ನು ರವಾನಿಸುವ "ಅಂತರ್ಜಾಲ ದೂರವಾಣಿ ಯಂತ್ರಗಳು" (IP telephony) ಬಳಕೆಗೆ ಬಂದಿವೆ. ಈ ತಂತ್ರಜ್ಞಾನಕ್ಕೆ "Voice over IP (VoIP)" ಎಂದು ಕರೆಯಲಾಗುತ್ತದೆ.

"https://kn.wikipedia.org/w/index.php?title=ದೂರವಾಣಿ&oldid=1094689" ಇಂದ ಪಡೆಯಲ್ಪಟ್ಟಿದೆ