ದುರ್ವಾಸನೆ ಮರವು ಸ್ಥಳೀಯವಾಗಿ ನಾರ್ಕ ಅಥವಾ ಅಮೃತ ಎಂದು ಕರೆಯಲಾಗುತ್ತದೆ. ಈ ಸಸ್ಯವು ಭಾರತದಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ಯಗಳ ಜಾತಿಯಾಗಿದೆ. ಇದು ಸಾಮನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಮಾಫಿಯಾ ಫೋಟಿಡಾ.[]

ದುರ್ವಾಸನೆ ಮರ

ಇತರೆಹೆಸರುಗಳು

ಬದಲಾಯಿಸಿ
ವಿವರಣೆ:
  • ಇದು ಸಾಮನ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡುಬರುತ್ತದೆ. ಈ ಸಸ್ಯವು ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಸ್ಯವು 4 ರಿಂದ 8 ಅಡಿ ಎತ್ತರ ಬೆಳೆಯುತ್ತದೆ. ಇದನ್ನು ಒಳಾಂಗಣದಲ್ಲಿ ಅಥವಾ ವರ್ಷಪೂರ್ತಿ ಮನೆಯಲ್ಲಿ ಟಬ್ಬುಗಳಲ್ಲಿ ಇವುಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಇವು ಚಿಕ್ಕ ಗಿಡಗಳಿರುವಾಗ ಚಳಿಗಾಲದ ಪೂರ್ತಿ ಅವಧಿಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಈ ಸಸ್ಯದ ಹೂವಿನ ಬಣ್ಣವು ನೇರಳೆ, ಗುಲಾಬಿ ಅಥವಾ ಬಿಳಿ ಬಣ್ಣದಾಗಿರುತ್ತದೆ. ಈ ಗಿಡಗಳನ್ನು ಸುಲಭವಾಗಿ ಆರೈಕೆ ಮಾಡಬಹುದು.[]
  • ಆ ಮರದ ತುಂಡನ್ನು ಸುಟ್ಟಾಗ ಕೆಟ್ಟ ವಾನೆ ಬರುತ್ತದೆ.

ಬೆಳೆಯುವ ಪ್ರದೇಶಗಳು

ಬದಲಾಯಿಸಿ

ಮಹಾರಾಷ್ಟ್ರ,ಕೇರಳ,ಕರ್ನಾಟಕ, ಸತಾರಾ, ಕೋಲ್ಲಾಪುರ್, ಪುಣೆ ಜಿಲ್ಲೆಯ ಪಶ್ಛಿಮಘಟ್ಟಗಳಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಾತಾರದಲ್ಲಿ, ಪಂಚಗಣಿ, ಮಹಾಬಲೇಶ್ವರ ಗಿರಿಧಾಮದ ಅರಣ್ಯದಲ್ಲಿ ಕಾಣಬಹುದು. ಇದು ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸುಮಾರು ೫೦೦ಮೀ ಎತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಮುದ್ರದ ಮೇಲ್ಭಾಗದಲ್ಲಿ ೫೫೦ಮೀ ಎತ್ತರಕ್ಕಿಂತಲೂ ಹೆಚ್ಚು ಬೆಳೆಯುತ್ತದೆ.[]

ಸಸ್ಯದ ಗುಣಕರ್ಮಗಳು

ಬದಲಾಯಿಸಿ
  • ಈ ಸಸ್ಯವು 4-8 ಅಡಿ ಎತ್ತರಕ್ಕೆ ಬೆಳೆಯುತ್ತದೆ.
  • ಈ ಸಸ್ಯಗಳು ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಅಥವಾ ನೆರಳುಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು.
  • ಈ ಸಸ್ಯವು ತಾಪಮಾನದಲ್ಲಿ ೫೦ ಡಿಗ್ರಿ ಸೆಲ್ಸಿಯಸ್‍ವರೆಗೆ ಬದುಕಬಲ್ಲದು.
  • ಹೂವುಗಳು ಕೆನ್ನಾಲಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ.[]
  • ಇವುಗಳು ಕಾಂಡದತುದಿಯ ಹತ್ತಿರ ಸಣ್ಣ ಸಮೂಹಗಳಲ್ಲಿ ಕಂಡುಬರುತ್ತದೆ.

ಸಸ್ಯದಆರೈಕೆ

ಬದಲಾಯಿಸಿ

ಈ ಗಿಡಕ್ಕೆ ಮಧ್ಯಮ ನೀರಿನಅಗತ್ಯವಿದ್ದು, ಮಣ್ಣು ಮಧ್ಯಮ ಫಲವತ್ತಾಗಿರಬೇಕು. ಈ ಸಸ್ಯಕ್ಕೆ ಯಾವುದೇ ರೀತಿಯ ಸಾವಯವ ಗೊಬ್ಬರಗಳು ಸೂಕ್ತವಾಗುತ್ತವೆ. ಹೊಸ ಬೆಳವಣಿಗೆಗಳು ಕಂಡುಬರುವ ಮೊದಲು ವಸಂತಕಾಲದಲ್ಲಿ ಸಸ್ಯವನ್ನು ಫಲವತ್ತಾಗಿಸಬೇಕು. ಸಸ್ಯಆರೈಕೆಗೆ ಜಾಗರೂಕತೆ ಅಗತ್ಯವಿರುತ್ತದೆ.

ಉಪಯೋಗಗಳು

ಬದಲಾಯಿಸಿ

ಈ ಸಸ್ಯವು ಕ್ಯಾನ್ಸರ್ ಪರಿಣಾಮಕಾರಿ ಪರಿಹಾರವಾಗಿದೆ. ಇವುಗಳನ್ನು ಅಲಂಕಾರಿಕ ಉದ್ದೇಶಗಳಿಗೂ ಸಹ ಬಳಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://nurserylive.com/buy-medicinal-plants-online-in-india/mappia-foetida-kalagaura-narkya-plants-in-india
  2. http://poweroflower.com/mappiafoetidakalagauranarkya.php
  3. "ಆರ್ಕೈವ್ ನಕಲು". Archived from the original on 2018-09-15. Retrieved 2018-09-30.
  4. http://mbox.nurserylive.com/index.php?option=com_virtuemart&view=productdetails&virtuemart_product_id=2293&virtuemart_category_id=31