ತ್ರಿಶೂರ್ ಪೂರಂ : ತ್ರಿಶೂರಿನ ಅತಿದೊಡ್ಡ ಉತ್ಸವ. ಇದೊಂದು ಕೇರಳದ ಹಿಂದೂಗಳ ಪ್ರಮುಖ ಉತ್ಸವವಾಗಿದೆ. ಈ ಉತ್ಸವವನ್ನು ಮೊದಲಿಗೆ ವಡಕ್ಕುನ್ನಾಥನ್ ದೇವಾಲಯದಲ್ಲಿ ಪ್ರಾರಂಭಿಸಿದ್ದರು. ಹಾಗೆಯೇ ಈ ಉತ್ಸವವನ್ನು ಪ್ರತೀ ವರ್ಷವು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ತಿರ್‌ಸುರ್‌ ಪೂರಂವೆಂದು ಕರೆಯುತ್ತಾರೆ.[೧] ಇದು ಪ್ರತಿವರ್ಷ ಚೈತ್ರ ಮಾಸ ಪೂರ್ವ ನಕ್ಷತ್ರದಲ್ಲಿ ಬರುತ್ತದೆ. ಈ ಉತ್ಸವವನ್ನು ನೋಡಲು ಕೇವಲ ಕೇರಳದಿಂದ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳು ಹೆಚ್ಚಿನ ಜನಸಂಖೈಯಲ್ಲಿ ಬರುತ್ತಾರೆ. ಈ ಹಬ್ಬವನ್ನು ತ್ರಿಶೂರಿನ ವಡಕ್ಕುನ್ನಾಥನ್‌ ದೇವಾಲಯದ ಸುತ್ತಲಿನ ಮೈದಾನದಲ್ಲಿ ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಇದು ಅಲ್ಲಿನ ೧೦ ದೇವಸ್ಥಾನಗಳು ಭಾಗವಹಿಸುವ ಉತ್ಸವವಾಗಿದ್ದರೂ ಮುಖ್ಯವಾಗಿ ಎರಡು ದೇವಸ್ಥಾನಗಳಾದ ತಿರುವಂಬಾಡಿ ಮತ್ತು ಪರಮೆಕಾವು ಬಾಗವತ ಪ್ರಮೂಖ ಪಾತ್ರ ವಹಿಸುತ್ತದೆ.


ಇತಿಹಾಸ ಬದಲಾಯಿಸಿ

ರಾಜ ರಾಮ ವರ್ಮನ ಕಾಲದಲ್ಲಿ ಕೇರಳದ ಮುಖ್ಯ ಉತ್ಸವ ಎಂದರೆ ಅರ್ಟ್ಟುಪುಳ ಪೂರಂ ಉತ್ಸವ. ಅಲ್ಲಿಗೆ ಆರಾಜ್ಯದ ಎಲ್ಲಾ ದೇವಾನುದೇವತೆಯರು ಬರುತ್ತಾರೆ ಎಂಬುವುದು ಅವರ ನಂಬಿಕೆ. ಒಮ್ಮೆ ಆ ಉತ್ಸವದ ಸಮಯದಲ್ಲಿ ಅತೀಯಾದ ಮಳೆ-ಗಾಳಿ ನಿಲ್ಲದೆ, ಒಂದೇ ಸಮನೆ ಬರುತ್ತಿತ್ತು. ಆ ಕಾರಣದಿಂದ ಪಾರಮೆಕಾವ್ ಭಗವತಿ, ತಿರುವಂಬಾಡಿ ಭಗವತಿ, ಚೆಂಬುಂಗಾವ್ ಭಗವತಿ, ಕಾರಮುಕ್ಕ ಭಗವತಿ, ಲಾಲೂರ್ ಭಗವತಿ, ಅಯ್ಯನ್‌ಥೊಲೇ ಭಗವತಿ, ಚೂರಕಟ್ಟುಕಾರ ಭಗವತಿ, ನಿಥಿಲಕ್ಕಾವೂ ಭಗವತಿ, ಪನಿಮುಕ್ಕುಂಪಿಲ್ಲಿ ಸಾಸ್‌ತ್ಶ್ ಭಗವತಿ ಎಂಬ ಊರುಗಳ ಉತ್ಸವಕ್ಕೆ ಹೋಗಲು ಸಾದ್ಯವಾಗಲಿಲ್ಲ. ಉತ್ಸವಕ್ಕೆ ಹೋಗದೆ ಇರುವ ಕಾರಣದಿಂದ ಈ ಊರುಗಳನ್ನು ನಿರಂತರವಾಗಿ ಅಲ್ಲಿನ ಉತ್ಸವದಿಂದ ಬಹಿಷ್ಕರಿಸಲಾಗಿತ್ತು ಎಂದು ಹೇಳುತ್ತಾರೆ. ಅದು ಸೆಕ್ಷನ್‌ ತಂಬುರಾನ್ ಮಹಾರಾಜನ ಆಳ್ವಿಕೆಗೆ ಒಳಪಟ್ಟಿತು. ಈ ವಿಷಯವನ್ನು ತಿಳಿದ ರಾಜನು ಕೋಪಗೊಂಡು ಅಲ್ಲಿನ ವಡಕ್ಕುನಾಥ ಕ್ಷೇತ್ರದಲ್ಲಿ ೧೭೯೮ ಚೈತ್ರ ಮಾಸ ಪೂರ್ವ ನಕ್ಷತ್ರದಲ್ಲಿ ತ್ರಿಶೂರ್ ಪೂರಂ ಎಂಬ ಉತ್ಸವವನ್ನು ಪ್ರಾರಂಬಿಸಿದನು. ಆ ಉತ್ಸವದ ಪ್ರಧಾನ ಭಾಗಿಗಳಾಗಿ ಆ ನಗರದ ಪರಮಕಾವೂ ಮತ್ತು ತಿರುವಂಬಾಡಿ ಕ್ಷೆತ್ರಗಳಿದ್ದವು.

ಈ ಉತ್ಸವದಲ್ಲಿ ವಡಕ್ಕುನಾಥನ್ ದೇವರಿಗೆ ಸೇವೆಸಲ್ಲಿಸಲು ದೇವತೆಗಳೂ ಸಹ ಜನರ ಜೊತೆಯಲ್ಲಿ ಬರುತ್ತಾರೆಂಬ ನಂಬಿಕೆಯಿದೆ. ಈ ಉತ್ಸವವನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಆಚರಿಸಲಾಗುತ್ತದೆ. ಅವುಗಳು ಏನೆಂದರೆ ಪರಮೆಕಾವೂ ಮತ್ತು ತಿರುವಂಬಾಡಿ ಎಂಬೂದಾಗಿ, ಮೊದಲಿಗೆ ಪಾರಮೆಕಾವಿನಲ್ಲಿ ಪರಮೇಕಾವು ಭಗವತಿ ದೇವಾಲಯ ಪ್ರಮುಖವಾಗಿದ್ದು. ಇದಕ್ಕೆ ಪೂಕಾಟ್ಟಿಕ್ಕರ-ಕಾರಮುಕ್ಕು ಭಗವತಿ, ಚೂರಕಟ್ಟುಕರ ಭಗವತಿ , ಚೆಂಪುಕಾವು ಭಗವತಿ, ಪಾನೆಮುಕ್ಕುಂಪಿಲ್ಲಿ ಸಸ್ತಾ ಎಂಬ ದೇವಾಲಯಗಳು ಒಳಪಟ್ಟಿರುತ್ತವೆ. ತಿರುವಂಬಾಡಿಯಲ್ಲಿ ಅಯ್ಯಾನ್‌ಥೋಳೆ ಭಗವತಿ, ನೆಥಿಲಕಾವು ಭಗವತಿ, ಲಾಲೂರ್ ಭಗವತಿ, ಕನಿಮಂಗಲಮ್ ಸಸ್ತಾ ಎಂಬ ದೇವಾಲಯಗಳು ಉತ್ಸವದಲ್ಲಿ ಭಾಗವಹಿಸುತ್ತಾವೆ. ಈ ಮಾಹಿತಿಯಿಂದ ತಿಳಿದು ಬರುವುದೇನೆಂದರೆ ಎಲ್ಲಾ ಹಬ್ಬಗಳಿಗಿಂತ ಈ ಉತ್ಸವವು ತುಂಬಾ ಅದ್ಭುತವಾಗಿ ನಡೆಯುತ್ತದೆ ಎಂಬುದು.

ಧ್ವಜಾರೋಹಣ ಬದಲಾಯಿಸಿ

ಈ ಉತ್ಸವವನ್ನು ಏಳು(೭) ದಿನಗಳ ಕಾಲ ಆಚರಿಸಲಾಗುತ್ತದೆ. ಧ್ವಜಾರೋಹಣದಿಂದ ಈ ಉತ್ಸವ ಪ್ರಾರಂಭವಾಗುತ್ತದೆ. ಈ ಧ್ವಜಾರೋಹಣವು ಆ ದೇವಸ್ಥಾನದಲ್ಲಿ ಅಲ್ಲದೆ ನಾಡುವಿಲಾಲ್ ಮತ್ತು ನೈರನಾಲ್ ಎಂಬ ನಗರಳಲ್ಲೂ ನಡುಯುತ್ತದೆ. ದಕ್ಷಿಣದ ಗೋಪುರವನ್ನು ತ್ರಿಶೂರ್ ಪೂರಂ ಉತ್ಸವದ ದಿನದಂದು ಮಾತ್ರ ತೆರೆಯಾಲಾಗುತ್ತದೆ.

ಪಟಾಕಿ ಸಿಡಿಸುವುದು ಬದಲಾಯಿಸಿ

ಈ ಉತ್ಸವದ ಇನ್ನೂಂದು ಆಕರ್ಷಣೆ ಏನೆಂದರೆ ದೊಡ್ಡಗಾತ್ರದ ಪಟಾಕಿಗಳನ್ನು ಜಾತ್ರೆಯ ನಾಲ್ಕನೆಯ ದಿನ ಸಿಡಿಸುವುದು. ಇದು ಒಂದು ಗೂಂಬೆಗಳ ಆಚರಣೆಯಾಗಿದ್ದು ಇದನ್ನು ಸ್ವರಾಜ್ ವ್ರತ್ತದಲ್ಲಿ ಸಂಜೆ 7-15ಕ್ಕೆ ಸರಿಯಾಗಿ ಪ್ರಾರಂಭಿಸಲಾಗುತ್ತದೆ. ಈ ಆಚರಣೆಯು ವಿಶೇಷವಾಗಿ ವೈವಿವಿಧ್ಯತೆಯಿಂದ ಕೂಡಿರುತ್ತದೆ.

ಅಲಂಕೃತ ಬದಲಾಯಿಸಿ

ಈ ಉತ್ಸವದ ಕೇಂದ್ರ ಬಿಂದುವೇ ಅಲಂಕೃತ ಆನೆಗಳ ಪ್ರದರ್ಶನ. ಇಲ್ಲಿ ಬಂಗಾರದ ಒಡವೆ. ಬೆಲೆಬಾಳುವ ವಸ್ತುಗಳು, ಛತ್ರ-ಚಾಮರಗಳು, ಪ್ರತ್ಯೇಕವಾಗಿ ಮಾಡಿದ ಪವಿತ್ರ ಘಂಟೆಗಳು, ಹೀಗೆ ಅನೇಕ ಅಲಂಕಾರಗಳಿಂದ ಆನೆಯು ದೇವಲೋಕದ ಐರಾವತದಂತೆ ಕಂಗೊಳಿಸುತ್ತಿರುತ್ತದೆ. ಅಲಂಕಾರಗೊಂಡ ಆನೆಯನ್ನು ಮೊದಲಿಗೆ ತ್ರಿಶೂರು ನಗರದ 'ಚರ್ಚ್ ವಿಷನ್ ಸೊಸೈಟಿ ಪ್ರೌಡಶಾಲೆ'ಯಲ್ಲಿ ಮೊದಲಿಗೆ ಪ್ರದರ್ಶಿಸುತ್ತಾರೆ. ನಂತರ ತ್ರಿಶೂರಿನ ಅಗ್ರಸಾಲಾ, ಹಾಗು ತಿರುವಂಬಾಡಿ ದೇವಸ್ಥಾನಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಂತರದ ದಿನಗಳಲ್ಲಿ ಅಂದರೆ ೨೦೧೪ ಮತ್ತು ೨೦೧೫ ರಲ್ಲಿ ಶೋರ್ನರ್‌ ರಸ್ತೆಯ ಕೌಸ್ತುಭಂ ಹಾಲ್ ನಲ್ಲಿ ಪ್ರದರ್ಶಿಸಲಾಯಿತು.

ಮುಖ್ಯ ಪೂರಂ ಬದಲಾಯಿಸಿ

ಪೂರಂ ಊರಿನಲ್ಲಿ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತು ತರುತ್ತಾರೆ. ಈ ಪ್ರಮುಖ ಆಚರಣೆಯ ದಿನ ಸುಮಾರು ೬ ದೇವಾಲಯಗಳು ಭಾಗವಹಿಸುತ್ತವೆ. ಇದು ೨೦೦ ಜನ ಕಲಾವಿದರು ಭಾಗವಹಿಸುವ ಪಂಚವಾದ್ಯ ಮೇಳವೂ ಕೂಡ ಆಗಿದೆ. ಹಾಗೆಯೇ ತ್ರಿಶೂರ್ ಪೂರಂ ಮೇಳದಲ್ಲಿ 'ಮಾದತಿ ಮೇಳ' ಸಹ ಪ್ರಮುಖವಾಗಿದೆ. ಈ ಮೇಳದಲ್ಲಿ ತಬಲ, ತುತ್ತೂರಿ. ಟ್ರಂಪೆಟ್‌ ಹಾಗು ಪೈಪುಗಳನ್ನು ಅಳವಡಿಸಲಾಗಿದೆ. ಆನೆಗೆ ನೆಟ್ಟಿಪಟ್ಟಂ ಎಂಬ ಅಲಂಕಾರ ಸಾಧನವನ್ನೂ ಸಹ ಹಾಕಿ ಅಲಂಕರಿಸಲಾಗುತ್ತದೆ.

ಒಡವೆ ಹಾಗು ಘಂಟೆಗಳಿಂದ ಅಲಂಕರಿಸಲಾಗಿದೆ. ಆನೆಗಳ ಎರಡು ಗುಂಪುಗಳಾದ ಪರಮೆಕಾವೂ - ತಿರುವಂಬಾಡಿ ದೇವಾಲಯ ಗುಂಪುಗಳು ಸ್ಪರ್ಧಾತ್ಮಕವಾಗಿ ಉತ್ತರದ್ವಾರ ಮತ್ತು ದಕ್ಷಿಣದ್ವಾರಗಳ ಮುಂದೆ ಮೇಳವನ್ನು ನುಡಿಸುತ್ತಾರೆ. ಇಲ್ಲಿನ ಇನ್ನೊಂದು ಆಕರ್ಷಣೆ ಏನೆಂದರೆ ಸರ್ವಧರ್ಮದವರೂ ಈ ಉತ್ಸವದಲ್ಲಿ ಭಾಗವಹಿಸುವುದು. ಅದೇನೆಂದರೆ ಪೂರಂನ ಪಶ್ಚಿಮ ಗೋಪುರದಲ್ಲಿ ಮುಸಲ್ಮಾನರು ರಚಿಸಿರುವ ಚಪ್ಪರಾಕೃತಿಯ ಅಲಂಕಾರ ಹಾಗು ಚರ್ಚುಗಳಿಂದ ಕುಡಮಾಟಾಂಮ್‌ ಛತ್ರಿ ವಸ್ತುಗಳನ್ನು ತೆಗೆದುಕೊಳ್ಳಲಾಗುತಿತ್ತು. ಈ ಕಾರಣದಿಂದಲೇ ಇದನ್ನು ಜಾತ್ಯತೀತ ಉತ್ಸವ ಎಂದರೆ ತಪ್ಪಾಗುವಿದಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಈ ಪದ್ದತಿ ಕೆಡುತ್ತಾ ಬರುತ್ತಿದೆ.[೨]


ಸಿಡಿ ಮದ್ದು ಪ್ರದರ್ಶನ ಬದಲಾಯಿಸಿ

ಪಟಾಕಿಗಳನ್ನು ಸಿಡಿಸುವುದು ಅಥವಾ ಅದರ ಪ್ರದರ್ಶನವು ತ್ರಿಶೂರ್ ಪೂರಂನ ಪ್ರಮುಖ ಭಾಗವಾಗಿದೆ. ಈ ಪ್ರದರ್ಶನವು ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಹಾಗೂ ವರ್ಣರಂಜಿತವಾಗಿ ಪ್ರದರ್ಶನಗೊಳ್ಳುತ್ತದೆ. ಇದೊಂದು ಭಾವೋದ್ವೇಗದ ಪ್ರದರ್ಶನವಾಗಿದೆ. ಪೂರಂ ಆಚರೆಣೆಯ ದಿನದಂದು ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂದೆ 'ಮಾದರಿ ಪಟಾಕಿ'ಯನ್ನು ಸಿಡಿಸಲಾಗುತ್ತದೆ. ಈ ಪಟಾಕಿಯು ಆಕಾಶದಲ್ಲಿ ಬಣ್ಣ-ಬಣ್ಣಗಳ ನಕ್ಷತ್ರದಂತೆ ಕಾಣುತ್ತವೆ. ಘಂಟೆಗಳ ಅಲಂಕಾರವೂ ಸಹ ಹಾಗೆಯೇ ಇರುತ್ತದೆ. ಪೂರಂನ ಕೊನೆಯ ದಿನ ಸಂಜೆಯಲ್ಲಿ ಅಂತ್ಯವನ್ನು ಗುರ್ತಿಸಲು ಪರಸ್ಪರ ದೇವತೆಗಳ ಬೀಳ್ಕೊಡುಗೆಯನ್ನು ಇದರಿಂದ ಮಾಡುತ್ತಾರೆ.[೩]

ವಿಮರ್ಷೆ ಬದಲಾಯಿಸಿ

ಎರಡು ಭಾಗಗಳಾದ ತಿರುವಂಬಾಡಿ, ಮತ್ತು ಪರಮೆಕ್ಕಾವು ಭಗವತಿ ಊರಿನಲ್ಲಿ ಪೂರಂನ ದಿನ ಸಿಡಿಸುವ ಸಿಡಿಮದ್ದುಗಳಿಗೆ ಬಳಸುವ ರಾಸಾಯನಿಕಗಳಿಂದ ಪರಿಸರ ಮಾಲಿನ್ಯ ಹಾಗು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆಂದು ಪರಿಸರವಾದಿಗಳು ವಿಮರ್ಷಿಸುತ್ತಾರೆ. ಈ ಸಿಡಿಮದ್ದುಗಳನ್ನು ತಯಾರಿಸುವಾಗ ರಾಸಾಯನಿಕಗಳ ಪ್ರಭಾವದಿಂದ ಕೆಲಸಗಾರರ ಸಮಯ ಕೂಡ ಸಂಭವಿಸಬಹುದೆಂಬುದು ಕೆಲವರ ಅಭಿಪ್ರಾಯವಾಗಿದೆ. ವಿಮರ್ಷಕರ ಇನ್ನೊಂದು ಅಭಿಪ್ರಾಯವೆನೆಂದರೆ 'ಆನೆಗಳ ಬಳಕೆ'. ಆನೆಗಳಿಗೆ ಸ್ಪರ್ಧಾತ್ಮಕ ಮನೋಭಾವವನ್ನು ಉಂಟುಮಾಡಲಾಗುತ್ತದೆ. ಹಾಗೂ ಅತಿಯಾಗಿ ಅವುಗಳನ್ನು ಬಳಸಿ ಕೊಳ್ಳಲಾಗುತ್ತದೆಂಬುದು ಅವರ ಅಭಿಪ್ರಾಯವಾಗಿದೆ. ಸ್ಪರ್ಧೆಗಳಿಗೆ ಆನೆಗಳನ್ನು ಬಳಸುವಾಗ ಕೆಲವು ನೀತಿ-ನಿಯಮ ಹಾಗು ಕಟ್ಟು ಪಾಡುಗಳಿರುತ್ತವೆ. ಆದರೆ ಕೇರಳದ ೧೯೧೫ರ ಮುಖ್ಯಮಂತ್ರಿಗಳು ಆನೆಗಳ ರಕ್ಷಣೆಗೆ ಬೇಕಾದ ತಯಾರಿ ಹಾಗು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಭೇಕಾಗಿದೆ ಎಂದು ತಿಳಿಸಿದ್ದಾರೆ.[೪]

ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಪ್ರಭಾವಗಳು ಬದಲಾಯಿಸಿ

ಪ್ರಸಿದ್ದ ಕೇರಳದ ಹಿಂದೂ ಉತ್ಸವವಾದ ಪೂರಂನಲ್ಲಿ ಅನೇಕ ಸಮಾಜ-ಸಮುದಾಯದ ಜನರು ಭಾಗವಹಿಸುತ್ತಾರೆ. ಇದರಲ್ಲಿ ಮುಖ್ಯವಾಗಿ ದೇವತೆಗಳ ಅಲಂಕೃತಕ್ಕೆ ಹಲವಾರು ಪ್ರತಿಕೃತಿಗಳನ್ನು ಕೇರಳದ ಒಳಗೆ ಮತ್ತು ರಾಜ್ಯದ ಹೊರಗೆ ಪ್ರದರ್ಶಿಸಲಾಗುತ್ತದೆ. ಈ ಉತ್ಸವವು ಏಷ್ಯಾದಲ್ಲೇ ಒಂದು ಮಹಾ ಉತ್ಸವವೆಂದು ಪರಿಗಣಿಸಲಾಗುತ್ತದೆ. ಭಾರತಕ್ಕೆ ಆಗಮಿಸುವ ವಿದೇಶೀಯರಿಗೆ ಕೇರಳದ ಪೂರಂ ಉತ್ಸವವು, ಎಣಿಸಲು ಸಾಧ್ಯವಾಗದಷ್ಟು ಆಶ್ಚರ್ಯಾನಂದಗಳನ್ನು ನೀಡುವ ಹಾಗೂ ಶೇಕಡ ನೂರರಷ್ಟು ಮನೋರಂಜನೆ ನೀಡುವ ಆಕರ್ಷಣೀಯಾದಂತಯ ಒಂದು ಕಾರ್ಯಕ್ರಮವಾಗಿದೆ. ಇದರಿಂದ ದೇಶದ, ರಾಜ್ಯದ ಗೌರವವು ಹೆಚ್ಚಾಗುತ್ತದೆ. ವಿದೇಶೀ ವಿನಿಮಯವೂ ಸಹ ಹೆಚ್ಚಾಗಿ, ದೇಶದ ಆರ್ಥಿಕತೆಯೂ ಸಹ ಅಭಿವೃದ್ಧಿ ಹೊಂದುತ್ತದೆ. ಭಾರತದ ಪರಂಪರೆಯೂ ಸಹ ಎಲ್ಲರಿಗೂ ಪರಿಚಯಿಸಲಾಗುತ್ತದೆ.

ಬೀಳ್ಕೊಡುಗೆ ಸಮಾರಂಭ ಬದಲಾಯಿಸಿ

ಪೂರಂನ ಏಳನೆಯ ದಿನ ಉತ್ಸವ ಕೊನೆಗೊಳ್ಳುವ ಸಂದರ್ಭವಿದು. ಆ ದಿನ ಮಧ್ಯಾಹ್ನದಲ್ಲಿ ಮತ್ತೆ ಪಟಾಕಿಗಳನ್ನು ಸಿಡಿಸುತ್ತಾ ಹರ್ಷೋದ್ಗಾರಗಳನ್ನು ಕೂಗುತ್ತಾ ಜನರೆಲ್ಲಾ ಪರಮೆಕಾವು ಹಾಗು ತಿರುವಂಬಾಡಿಯ ದೇವರುಗಳನ್ನು ಗೌರವಾನ್ವಿತವಾಗಿ ಅವುಗಳ ಸ್ವಸ್ಥಾನಕ್ಕೆ ಅಂದರೆ ದೇವಾಲಯಕ್ಕೆ ಬೀಳ್ಕೊಡಿಗೆ ನೀಡುತ್ತಾರೆ. ಇದನ್ನು ಸ್ವರಾಜ್ ವೃತ್ತದಿಂದ ಸ್ವಗೃಹಕ್ಕೆ ಕಳುಹಿಸುವ, ಒಂದು ಅತ್ಯಂತ ಕುತೂಹಲವಾದ ಕೊನೆಯ ಹಾಗು ಭಾವೋಧ್ವೇಗದ ಕಾರ್ಯಕ್ರಮ. ಪೂರಂ ಎಂಬ ಸಾಂಸ್ಕೃತಿಕ ಹಾಗು ಧಾರ್ಮಿಕ ಉತ್ಸವವು ಕೊನೆಗೊಂಡು ಮುಂದಿನ ವರ್ಷದ ಉತ್ಸವಕ್ಕೆ ಜಾತಕ ಪಕ್ಷಿಯು ಕಾಯುತ್ತಿರುವಂತೆ ಜನರನ್ನು ಸಜ್ಜುಗೊಳಿಸುತ್ತದೆ. ಅದೇನೇ ಇರಲಿ, ಹಿಂದೂಧರ್ಮದಲ್ಲಿ ಇಂತಹ ಉತ್ಬವ ಹಬ್ಬಗಳು ಆಚರಣೆಯಾಗುವುದರಿಂದ ಧಾರ್ಮಿಕ ಜಾಗೃತಿ, ಸಮನಾ ಮನೋಭಾವನೆ ಹಾಗು ಒಳ್ಳೆಯ ಸದ್ಭಾವನೆ ಜನಮನಗಳಲ್ಲಿ ಬಡಿದೆಬ್ಬಿಸುತ್ತದೆ.

ಹೊರಗಿನ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಪೂರಂ".
  2. "ಮುಖ್ಯ ಪುರಂ". Archived from the original on 2013-03-26. Retrieved 2015-11-04.
  3. "ಸಿಡಿ ಮುದ್ದು ಪ್ರದರ್ಶನ".
  4. "ಆನಗಳ ಬಳಕೆ".