ತಿರುವರೂರು
ತಿರುವರೂರು ತಮಿಳುನಾಡಿನ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ತಿರುವರೂರು ಜಿಲ್ಲೆ ಮತ್ತು ತಿರುವರೂರು ತಾಲ್ಲೂಕಿನ ಆಡಳಿತ ಕೇಂದ್ರವಾಗಿದೆ.[೧] ಈ ಪಟ್ಟಣವು ಚೋಳ ಸಾಮ್ರಾಜ್ಯದ ಐದು ಸಾಂಪ್ರದಾಯಿಕ ರಾಜಧಾನಿಗಳಲ್ಲಿ ಒಂದಾಗಿತ್ತು. ಈ ಪಟ್ಟಣವು ಪ್ರಾಚೀನವಾದುದು ಎಂದು ನಂಬಲಾಗಿದೆ. ಮಧ್ಯಕಾಲೀನ ಚೋಳರು, ನಂತರದ ಚೋಳರು, ಪಾಂಡ್ಯರು, ವಿಜಯನಗರ ಸಾಮ್ರಾಜ್ಯ, ಮರಾಠರು ಮತ್ತು ಬ್ರಿಟೀಷರು ಈ ಪಟ್ಟಣವನ್ನು ಆಳಿದ್ದಾರೆ.[೨] ಈ ಪಟ್ಟಣವು ತ್ಯಾಗರಾಜ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ವಾರ್ಷಿಕ ರಥ ಉತ್ಸವವು ಎಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ತಿರುವರೂರ್ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿಗಳ ಜನ್ಮಸ್ಥಳವಾಗಿದೆ, ಇವರನ್ನು ಕ್ರಿ.ಶ 18 ನೇ ಶತಮಾನದಲ್ಲಿ 'ಕರ್ನಾಟಕ ಸಂಗೀತದ ತ್ರಿಮೂರ್ತಿಗಳು' ಎಂದು ಕರೆಯಲಾಗುತ್ತಿತ್ತು.[೩]
ವ್ಯುತ್ಪತ್ತಿ
ಬದಲಾಯಿಸಿಪಟ್ಟಣದ ಐತಿಹಾಸಿಕ ಹೆಸರು ಅರೂರ್ ಮತ್ತುಇದನ್ನು 7 ನೇ ಶತಮಾನದ ಶೈವ ಪಂಥಕ್ಕೆ ಅಂಗೀಕೃತ ಕೆಲಸವಾದ ತೆವರಮ್ ನಲ್ಲಿ ಉಲ್ಲೇಖಿಸಲಾಗಿದೆ. ತಿರುವರೂರಿನ ಮತ್ತೊಂದು ಹೆಸರು ಕಮಲಾಲಯಸೆತ್ರ, ಅಂದರೆ "ಕಮಲಗಳ ವಾಸಸ್ಥಾನವಾದ ಪವಿತ್ರ ಸ್ಥಳ".[೪][೫]ತಿರುವರೂರಿನ ಪುರಾತನ ತ್ಯಾಗರಾಜ ದೇವಸ್ಥಾನವು ಶಿವನ ಸೋಮಸ್ಕಂದ ಅಂಶಕ್ಕೆ ಸಮರ್ಪಿತವಾಗಿದೆ. ತ್ಯಾಗರಾಜ ಸೋಮಸ್ಕಂಡದ ಅಪ್ರತಿಮ ರೂಪವಾಗಿದೆ. ತ್ಯಾಗರಾಜಸ್ವಾಮಿ ದೇವಾಲಯದ ವಾರ್ಷಿಕ ರಥೋತ್ಸವವನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ರಥ ಉತ್ಸವದ ನಂತರ "ತೆಪ್ಪಮ್", ಅಂದರೆ ಫ್ಲೋಟ್ ಹಬ್ಬವನ್ನು ಆಚರಿಸುತ್ತಾರೆ. ಪ್ರತಿವರ್ಷ ಆಚರಿಸುವ ಕರ್ನಾಟಕ ಸಂಗೀತ ಉತ್ಸವವು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಪಟ್ಟಣವು 10 ಉದ್ಯಾನವನಗಳನ್ನು ಹೊಂದಿದ್ದು, ಪನಾಗಲ್ ರಸ್ತೆಯ ಸೋಮಸುಂದರಂ ಉದ್ಯಾನವನ ಮತ್ತು ತೆಂಡ್ರಲ್ ನಗರದ ಮುನಿಸಿಪಲ್ ಪಾರ್ಕ್ ಅವುಗಳಲ್ಲಿ ಪ್ರಮುಖವಾದವು.
ಆರ್ಥಿಕತೆ
ಬದಲಾಯಿಸಿತಿರುವರೂರು ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿದೆ ಮತ್ತು ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳ ಮುಖ್ಯ ಉದ್ಯೋಗವೆಂದರೆ ಕೃಷಿ. 70% ಕ್ಕಿಂತ ಹೆಚ್ಚು ಉದ್ಯೋಗಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭತ್ತವನ್ನು ಕುರುವಾಯ್ (ಜೂನ್-ಆಗಸ್ಟ್), ಸಾಂಬಾ (ಆಗಸ್ಟ್-ಜನವರಿ) ಮತ್ತು ಥಲಾಡಿ (ಜನವರಿ-ಮಾರ್ಚ್) ಎಂಬ ಮೂರು ಋತುಗಳಲ್ಲಿ ಬೆಳೆಸಳಾಗುತ್ತದೆ. ತಿರುವರೂರ್ ಕೃಷಿ ಆಧಾರಿತ ಪಟ್ಟಣವಾಗಿರುವುದರಿಂದ, ಇಲ್ಲಿನ ಜನರು ಅಕ್ಕಿ ಗಿರಣಿ, ತಾಳೆ ಸಂಸ್ಕರಣೆ, ಕೋಳಿ ಸಾಕಾಣಿಕೆಯನ್ನು ಆಧಾರಿಸಿದೆ. ರಾಷ್ಟ್ರೀಕೃತ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್‌ನಂತಹ ಖಾಸಗಿ ಬ್ಯಾಂಕುಗಳು ತಿರುವರೂರಿನಲ್ಲಿ ತಮ್ಮ ಶಾಖೆಗಳನ್ನು ಹೊಂದಿವೆ. ಕುಂಭಕೋಣಂ ಕೋ-ಆಪರೇಟಿವ್ ಬ್ಯಾಂಕ್, ತಿರುವರೂರು ಕೋ-ಆಪರೇಟಿವ್ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಬ್ಯಾಂಕ್ ಸಹಕಾರಿ ಬ್ಯಾಂಕುಗಳು ಪಟ್ಟಣದಲ್ಲಿ ತಮ್ಮ ಶಾಖೆಗಳನ್ನು ಹೊಂದಿವೆ. ಈ ಎಲ್ಲಾ ಬ್ಯಾಂಕುಗಳು ತಮ್ಮ ಸ್ವಯಂಚಾಲಿತ ಎಟಿಎಂ ಯಂತ್ರಗಳನ್ನು ಪಟ್ಟಣದ ವಿವಿಧ ಭಾಗಗಳಲ್ಲಿ ಹೊಂದಿವೆ.[೬]
ಶಿಕ್ಷಣ ಸಂಸ್ಥೆಗಳು
ಬದಲಾಯಿಸಿ2001ರಲ್ಲಿ, ತಿರುವರೂರನ್ನು ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಸಾಕ್ಷರತೆಯನ್ನು ಹೊಂದಿತ್ತು. ಪಟ್ಟಣದ ಒಟ್ಟು 15 ಶಾಲೆಗಳಲ್ಲಿ, ಮೂರು ಸರ್ಕಾರಿ ಪ್ರೌಢ ಶಾಲೆಗಳು ಕೂಡ ಸೇರಿದೆ. 2009 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಸ್ಥಾಪಿಸಲಾದ ತಮಿಳುನಾಡಿನ ಕೇಂದ್ರ ವಿಶ್ವವಿದ್ಯಾಲಯವು ಕಲೆ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಒದಗಿಸುತ್ತದೆ. ಪಟ್ಟಣದಲ್ಲಿ ಇನ್ನೂ ಐದು ಕಲಾ ಮತ್ತು ವಿಜ್ಞಾನ ಕಾಲೇಜುಗಳು, ಒಂದು ಶಿಕ್ಷಕರ ತರಬೇತಿ ಸಂಸ್ಥೆ, ಮೂರು ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ಎರಡು ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ಇವೆ.[೭]
ಉಲ್ಲೇಖಗಳು
ಬದಲಾಯಿಸಿ- ↑ "Tiruvarur District, Government of Tamil Nadu | Land of Agriculture | India". Retrieved 11 January 2020.
- ↑ "History | Tiruvarur District, Government of Tamil Nadu | India". Retrieved 11 January 2020.
- ↑ "Festivals, Culture & Heritage | Tiruvarur District, Government of Tamil Nadu | India". Retrieved 11 January 2020.
- ↑ "Thiagarajar Temple : Thiagarajar Temple Details | Thiagarajar - Tiruvarur | Tamilnadu Temple". temple.dinamalar.com. Retrieved 11 January 2020.
- ↑ "Thiruvarur Thiyagarasar Temple | Tiruvarur District, Government of Tamil Nadu | India". Retrieved 11 January 2020.
- ↑ "Agriculture Tiruvarur District, Government of Tamil Nadu | India". Retrieved 11 January 2020.
- ↑ "School Education Department | Tiruvarur District, Government of Tamil Nadu | India". Retrieved 11 January 2020.