ಕುಂಭಕೋಣಂ ತಮಿಳುನಾಡಿನ, ತಂಜಾವೂರಿನಲ್ಲಿ ಇರುವ ಒಂದು ಪಟ್ಟಣ. ತಂಜಾವೂರಿನಿಂದ ೪೦ ಕಿಲೋಮೀಟರ್ ದೂರದಲ್ಲಿದೆ ಮತ್ತು ಚೆನೈನಿಂದ ೨೭೩ ಕಿಲೋಮೀಟರ್ ದೂರದಲ್ಲಿದೆ. ಕುಂಭಕೋಣಂನಲ್ಲಿ ಮಹಾಮಹಂ ಎಂಬ ಹಬ್ಬ ಪ್ರಸಿದ್ಧವಾಗಿದ್ದು, ದೇವಾಲಯಗಳ ನಾಡು ಎಂದು ಕರೆಯುವ ವಾಡಿಕೆ ಇದೆ.

ಕುಂಭಕೋಣಂ ಸಂಗಮರ ಕಾಲಕ್ಕಿಂತಲೂ ಹಳೆಯದಾಗಿದೆ ಮತ್ತು ಆರಂಭಿಕ ಚೋಳರು, ಪಲ್ಲವರು, ಮಧ್ಯಕಾಲೀನ ಚೋಳರು, ತಂಜಾವೂರು ನಾಯಕರು, ಮಧುರೈನ ನಾಯಕರು, ವಿಜಯನಗರ ಸಾಮ್ರಾಜ್ಯದ ಅರಸರಿಂದ ಆಳ್ವಿಕೆಗೆ ಒಳಪಟ್ಟಿತ್ತು.

ಇತಿಹಾಸಸಂಪಾದಿಸಿ

ಸಂಗಮರ ಕಾಲದಲ್ಲಿ, ಈ ಪ್ರದೇಶದಲ್ಲಿ ಜನರು ವಾಸಿಸುತಿದ್ದರು. ಆರಂಭಿಕ ಚೋಳರಾಜನಾದ ಕರಿಕಾಳನ ಆಸ್ಥಾನವು ಕುಡವಾಯಿಲ್‌ನಲ್ಲಿತ್ತು, ಹಾಗಾಗಿ ಕುಡವಾಯಿಲ್ ಪಟ್ಟಣವೇ ಈಗಿನ ಕುಂಭಕೋಣಂ ಎಂದು ಅಲ್ಲಿನ ಜನರು ನಂಬಿದ್ದಾರೆ. ಮಧ್ಯಕಾಲಿನ ಚೋಳರ ಆಳ್ವಿಕೆ ಸಂದರ್ಭದಲ್ಲಿ (೯ರಿಂದ ೧೨ನೇ ಶತಮಾನ) ಕುಂಭಕೋಣಂ ಪ್ರಸಿದ್ಧತೆಯನ್ನು ಪಡೆಯಿತು. ಪಳಯಾರೈ ಎಂಬ ನಗರವು ಚೋಳರ ರಾಜಧಾನಿ ಆಗಿತ್ತು. ಇದು ಕುಂಭಕೋಣಂ ನಿಂದ ೮ ಕಿಲೋಮೀಟರ್ ದೂರದಲ್ಲಿದೆ.

ಪಾಂಡ್ಯರು ಚೋಳರ ಅವನತಿಯ ನಂತರ, ೧೨೯೦ರಲ್ಲಿ ಕುಂಭಕೋಣಂನನ್ನು ವಶಪಡಿಸಿಕೊಂಡರು. ಪಾಂಡ್ಯರ ಅವನತಿಯ ನಂತರ ಕುಂಭಕೋಣಂನನ್ನು ವಿಜಯನಗರದ ಅರಸರು ವಶಪಡಿಸಿಕೊಂಡು ಆಳ್ವಿಕೆ ಪ್ರಾರಂಭಿಸಿದರು. ೧೫೨೪ರಲ್ಲಿ ವಿಜಯನಗರದ ಅರಸನಾಗಿದ್ದ ಶ್ರೀ ಕೃಷ್ಣದೇವರಯನು ಕುಂಭಕೋಣಂಗೆ, ಮಹಾಮಹಂ ಹಬ್ಬದ ಸಂದರ್ಭದಲ್ಲಿ ಬಂದು, ಮಹಾಮಹಂನ ತೊಟ್ಟಿಯಲ್ಲಿ ಸ್ನಾನ ಮಾಡಿದ್ದಾನೆ ಎಂದು ನಂಬಲಾಗಿದೆ. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದಾಗ ವಿಜಯನಗರದ ವಿದ್ವಾಂಸರು, ಕವಿಗಳು, ಕಲಾವಿದರು ಕುಂಭಕೋಣಂಗೆ ಬಂದು ನೆಲೆಸಿದ್ದರು. ೧೫೩೫ ರಿಂದ ೧೬೭೩ರವರೆಗೆ ಕುಂಭಕೋಣಂನಲ್ಲಿ ಮಧುರೈ ನಾಯಕರು ಮತ್ತು ತಂಜಾವೂರು ನಾಯಕರು ಆಳ್ವಿಕೆ ನೆಡೆಸಿದ್ದರು.

ಹೈದರಾಲಿಯು ಕಾಂಚೀಪುರಂನಲ್ಲಿ ಆಕ್ರಮಣ ಮಾಡಿದ ನಂತರ ಕಂಚಿ ಮಠವನ್ನು ಕುಂಭಕೋಣಂಗೆ ವರ್ಗಾಯಿಸಲಾಯಿತು. ೧೭೮೪ರಲ್ಲಿ ಟಿಪ್ಪುಸುಲ್ತಾನನು ದಕ್ಷಿಣ ಭಾರತದ ಪೂರ್ವ ಕರಾವಳಿಯ ಮೇಲೆ ಆಕ್ರಮಣ ಮಾಡಿದ್ದಾಗ ಕುಂಭಕೋಣಂ ನಶಿಸಿಹೋಗುವ ಪರಿಸ್ಥಿತಿಯಲ್ಲಿತ್ತು. ಇದು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ನೀಡಿತ್ತು. ೧೯ನೇ ಶತಮಾನದವರೆಗೂ ಈ ಪರಿಸ್ಥಿತಿ ಬದಲಾಗಲಿಲ್ಲ.

೧೭೯೯ರಲ್ಲಿ ತಂಜಾವೂರಿನ ಮರಾಠ ರಾಜನಾದ ಎರಡನೇ ಸರ್ಫೋಜಿಯು ಕುಂಭಕೋಣಂನನ್ನು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಒಪ್ಪಿಸಿದರು.ವಿದರ ನಂತರದಲ್ಲಿ (೧೯ನೇ ಶತಮಾನದ ಅಂತಿಮದಿಂದ ೨೦ನೇ ಶತಮಾನದ ಆರಂಭಕಾಲ) ಕುಂಭಕೋಣಂ ಸಮೃದ್ಧಿಯನ್ನು ಕಂಡಿತ್ತು ಮತ್ತು ಹಿಂದೂ ಧರ್ಮ ಮತ್ತು ಯೂರೋಪ್ ಶಿಕ್ಷಣ ಪದ್ಧತಿಗಳಿಗೆ ಕುಂಭಕೋಣಂನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಪ್ರಮುಖ ಕೇಂದ್ರವಾಗಿತ್ತು. ಯುನೈಟೆಡ್ ಕಿಂಗ್‌ಡಂನೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಲು, ೧೮೬೯ರಲ್ಲಿ ಸುಯೆಜ್ ಕಾಲುವೆಯು ಆರಂಭವಾಗಿತ್ತು. ೧೮೭೭ರಲ್ಲಿ ಕುಂಭಕೋಣಂ ಮದ್ರಾಸ್, ನಾಗಪಟ್ಟಣ ಮತ್ತು ತೂತುಕುಡಿ ಪ್ರದೇಶಗಳಿಗೆ ರೈಲ್ವೆ ಮಾರ್ಗವನ್ನು ಹೊಂದಿತು. ಕುಂಬಕೋಣಂನಲ್ಲಿ ತಂಜಾವೂರು ಜಿಲ್ಲಾ ನ್ಯಾಯಾಲಯವನ್ನು 1806ರಲ್ಲಿ ಸ್ಥಾಪಿಸಲಾಯಿತು ಮತ್ತು 1806 ರಿಂದ 1863ರವರೆಗೆ ಕಾರ್ಯನಿರ್ವಹಿಸಿತು.

ಭೌಗೋಳಿಕತೆಸಂಪಾದಿಸಿ

ಚೆನೈಯಿಂದ ೨೭೩ ಕಿಲೋಮೀಟರ್ ದಕ್ಷಿಣದಲ್ಲಿ ಕುಂಭಕೋಣಂ ಇದೆ. ತಿರುಚ್ಚಿರಾಪಳ್ಳಿಯ ಪೂರ್ವಕ್ಕೆ ೯೬ ಕಿಲೋಮೀಟರ್ ಅಂತರದಲ್ಲಿ ಕುಂಭಕೋಣಂ ಬರುತ್ತದೆ ಮತ್ತು ಇದು ತಂಜಾವೂರಿನಿಂದ ೪೦ ಕಿಲೋಮೀಟರ್ ಅಂತರದಲ್ಲಿ ಈಶಾನ್ಯ ದಿಕ್ಕಿನಲ್ಲಿದೆ.

ದೇವಾಲಯಗಳುಸಂಪಾದಿಸಿ

ಕುಂಭಕೋಣಂ ದೇವಾಲಯ ಮತ್ತು ಮಠಗಳಿಗೆ ಪ್ರಸಿದ್ಧವಾಗಿದೆ. ಕುಂಬಕೋಣಂ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೧೮೮ ಹಿಂದೂ ದೇವಾಲಯಗಳಿವೆ. ಪಟ್ಟಣದ ಸುತ್ತಮುತ್ತಲು ದೇವಾಲಯಗಳು ಇರುವುದರಿಂದ ದೇವಾಲಯಗಳ ನಗರ ಎಂದು ಕರೆಯುತ್ತಾರೆ.

ಆದಿ ಕುಂಬೇಶ್ವರ ದೇವಸ್ಥಾನಸಂಪಾದಿಸಿ

ಆದಿ ಕುಂಬೇಶ್ವರ ದೇವಸ್ಥಾನವು ಶಿವನ ದೇವಸ್ಥಾನ. ಶಿವನನ್ನು ಲಿಂಗದ ರೂಪದಲ್ಲಿ ಆದಿ ಕುಂಬೇಶ್ವರ ಎಂದು ಪೂಜಿಸಲಾಗುತ್ತದೆ ಮತ್ತು ಪಾರ್ವತಿಯನ್ನು ಮಂಗಳಾಂಬಿಕೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಮಹಾಮಹಂ ಉತ್ಸವವು ೧೨ ವರ್ಷಗಳಿಗೊಮ್ಮೆ ನೆಡೆಯುತ್ತದೆ.[೧]

ಸಾರಂಗಪಾಣಿ ದೇವಸ್ಥಾನಸಂಪಾದಿಸಿ

ಸಾರಂಗಪಾಣಿ ದೇವಸ್ಥಾನವು ವಿಷ್ಣುವಿನ ದೇವಸ್ಥಾನವಾಗಿದೆ. ಇದು ಪಂಚರಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತನಾಟ್ಯದಲ್ಲಿ ಬರುವ ೧೦೮ ಕರಣಗಳಲ್ಲಿ ಕೆಲವು ಕರಣಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಾಣಬದುದಾಗಿದೆ. ಇಲ್ಲಿ ೧೨ ವರ್ಷಗಳಿಗೊಮ್ಮೆ ಮಹಾಮಹಂ ಉತ್ಸವವು ನೆಡೆಯುತ್ತದೆ.

ತೇನುಪುರಿಶ್ವರ ದೇವಸ್ಥಾನಸಂಪಾದಿಸಿ

ತೇನುಪುರಿಶ್ವರ ದೇವಸ್ಥಾನವು ಪಟ್ಟೀಸ್ವರಂ ಗ್ರಾಮದಲ್ಲಿರುವ, ಹಿಂದೂ ದೇವಸ್ಥಾನ. ಈ ದೇವಾಲಯವೂ ತಂಜಾವೂರಿನಿಂದ ೦೮ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಯ ಆರಾಧ್ಯದೇವನಾದ ಶಿವನನ್ನು ಲಿಂಗ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.ಇಲ್ಲಿ ಪಾರ್ವತಿಯನ್ನು ಸೋಮಕಮಲಾಂಬುಕೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ನಾಲ್ಕು ಗೋಪುರಗಳನ್ನು ಐದು ಶ್ರೇಣಿಕೃತಗಲ್ಲಿ ಮತ್ತಿ ಒಂದು ಗೋಪುರವನ್ನು ಏಳು ಶ್ರೇಣಿಕೃತಗಳಲ್ಲಿ ಕಾಣಬಹುದು. ಈ ಎಲ್ಲಾ ಗೋಪುರಗಳೂ ಪೂರ್ವ ದಿಕ್ಕಿನಲ್ಲಿದೆ.

ಆರ್ಥಿಕತೆಸಂಪಾದಿಸಿ

೧೯೯೧ರಲ್ಲಿ ಶೇಖಡ ೩೦ರಷ್ಟು ಜನರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅಕ್ಕಿ ಇಲ್ಲಿನ ಪ್ರಮುಖ ಉತ್ಪಾದನೆಯಾಗಿದೆ. ಕಂಚು, ಹಿತ್ತಾಳೆ, ತಾಮ್ರ, ಸಕ್ಕರೆ,ರೇಷ್ಮೆ ಮತ್ತು ಹತ್ತಿ ಬಟ್ಟೆಗಳು ಇಲ್ಲಿನ ಕೆಲವು ಪ್ರಮುಖ ಉತ್ಪಾದನೆಗಳಾಗಿವೆ. ಕುಂಭಕೋಣಂ ತಂಜಾವೂರಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕುಂಭಕೋಣಂನಲ್ಲಿ ೧೯೪ ಕೈಗಾರಿಕಾ ಘಟಕಗಳಿವೆ, ಅದರಲ್ಲಿ ೫೭ ಅಕ್ಕಿ ಮತ್ತು ಹಿಟ್ಟು ಗಿರಣಿಗಳಾಗಿವೆ. ಕುಂಭಕೋಣಂನಲ್ಲಿ ರಸಗೊಬ್ಬರದ ಉತ್ಪಾದನೆಯನ್ನು ಕೂಡ ಮಾಡಲಾಗುತ್ತದೆ. ಲೋಹದ ಕೆಲಸಗಳಿಗೆ ಕುಂಭಕೋಣಂ ಪ್ರಸಿದ್ಧವಾಗಿದೆ. ಕಂಚಿನ ಕುಶಲಕರ್ಮಿಗಳಿ ತರಬೇತಿ ನೀಡುವುದಕ್ಕಾಗಿ, ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮವನ್ನು ಸ್ವಾಮಿಮಲೈ ಪಟ್ಟಣದಲ್ಲಿ ಸ್ಥಾಪಿಸಲಾಯಿತು.

ಕುಂಭಕೋಣಂನ ಆರ್ಥಿಕತೆಯು ಪ್ರವಾಸೋದ್ಯಮವನ್ನೂ ಅವಲಂಬಿಸಿದೆ. ಅನೇಕ ಹಿಂದೂ ದೇವಾಲಯಗಳು ಮತ್ತಿ ವಸಹಾತು ಕಾಲದ ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.ಕುಂಭಕೋಣಂನ ಹತ್ತಿರದಲ್ಲಿರುವ ದರುಸುರಂ ಪಟ್ಟಣದಲ್ಲಿ ವ ಐರಾವತೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ. ಕೈಮಗ್ಗದ ಬಟ್ಟೆಗಳಲ್ಲಿ ಆಸಕ್ತಿ ಹೊಂದಿರುವ ಕಲಾವಿದರು ಕುಂಭಕೋಣಂಗೆ ಭೇಟಿ ನೀಡುತ್ತಾರೆ.

ಬ್ಯಾಂಕ್‌ಗಳುಸಂಪಾದಿಸಿ

ಕುಂಭಕೋಣಂನ ಕೆಲವು ಪ್ರಮುಖ ಬ್ಯಾಂಕ್ ಶಾಖೆಗಳೆಂದರೆ, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಶನ್ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಎನ್‌ಜಿ ವೈಶ್ಯ ಬ್ಯಾಂಕ್, ಕರುರು ವೈಶ್ಯ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್.[೨] ೧೯೦೪ರಲ್ಲಿ ಸಿಟಿ ಯೂನಿಯನ್ ಬ್ಯಾಂಕ್‌ನನ್ನು ಕುಂಭಕೋಣಂ ಬ್ಯಾಂಕ್ ಲಿಮಿಟೆಡ್ ಎಂದು ಸ್ಥಾಪಿಸಲಾಯಿತು. ಈ ಬ್ಯಾಂಕಿನ ಪ್ರಧಾನ ಕಛೇರಿ ಕುಂಭಕೋಣಂನಲ್ಲಿದೆ.

ಶಿಕ್ಷಣ ಪದ್ಧತಿಸಂಪಾದಿಸಿ

1542 ರಲ್ಲಿ ಕುಂಬಕೋಣಂನಲ್ಲಿ ಗೋವಿಂದ ದೀಕ್ಷಿತರ್ ರಾಜ ವೇದ ಪಾಠಶಾಲೆಯನ್ನು ಸ್ಥಾಪಿಸಿದರು.ಇಲ್ಲಿ ಸಂಸ್ಕೃತ ವೇದಪಾಠಗಳನ್ನು ಹೇಳಿಕೊಡಲಾಗುತ್ತಿತ್ತು. ಕುಂಭಕೋಣಂನ ಶಿಕ್ಷಣ ಪದ್ಧತಿಯೂ ೧೯ನೇ ಶತಮಾನದಲ್ಲಿ ಪ್ರಸಿದ್ದಿಯನ್ನು ಪಡೆದಿತ್ತು ಮತ್ತು "ಕೇಂಬ್ರಿಡ್ಜ್ ಆಫ್ ಸೌತ್ ಇಂಡಿಯಾ" ಎಂದು ಕರೆಯಲ್ಪಡುತ್ತಿತ್ತು. ೧೮೬೭ರಲ್ಲಿ ಸರ್ಕಾರಿ ಕಲಾ ಕಾಲೇಜು ಆರಂಭವಾಗಿತ್ತು. ಈ ಕಾಲೇಜು ಮದ್ರಾಸ್ ಪ್ರೆಸಿಡೆನ್ಸಿಯಲ್ಲೇ ಅತ್ಯಂತ ಹಳೆಯ ಕಾಲೇಜಾಗಿದೆ. ೧೮೫೪ ಅಕ್ಟೋಬರ್ ೧೦ರಂದು ಈ ಕಾಲೇಜು ಪ್ರಾಂತೀಯ ಶಾಲೆಯಾಗಿತ್ತು. ನಂತರ ೧೮೬೭ರಲ್ಲಿ ಸರ್ಕಾರಿ ಕಾಲೇಜಾಗಿ ಮಾರ್ಪಟ್ಟಿತು. ಈ ಕಾಲೇಜನ್ನು ೧೮೭೭ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸೇರಿಸಲಾಯಿತು. ವಿಲಿಯಂ ಆರ್ಚರ್ ಪೋರ್ಟರ್ ಈ ಕಾಲೇಜಿನ ಮೊದಲ ಪ್ರಾಂಶುಪಾಲರು. ಕೇಂಬ್ರಿಡ್ಜ್ ರಾಂಗ್ಲರ್ ಮತ್ತು ಟಿ. ಗೋಪಾಲ ರಾವ್‌ರವರು ಇಲ್ಲಿ ಪ್ರಾಧ್ಯಾಪಕರಾಗಿದ್ದರು. ೧೮೮೧ರಲ್ಲಿ ಇದು ಪೂರ್ಣ ಪ್ರಮಾಣದ ಕಾಲೇಜಾಗಿ ಮಾರ್ಪಟ್ಟಿತು ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನಿಲ್ಲಿಸಲಾಯಿತು.

ಭಾರತದ ಗಣಿತತಜ್ಞರಾದ ಶ್ರೀನಿವಾಸ ರಾಮಾನುಜರವರು ೧೯೦೪ ರಿಂದ ೧೯೦೬ರವರೆಗೆ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಭಾರತೀಯ ರಾಜಕಾರಣಿ ಮತ್ತು ಆಡಳಿತಗಾರ ವಿ.ಎಸ್. ಶ್ರೀನಿವಾಸ ಶಾಸ್ತ್ರಿಯವರೂ ಕೂಡ ಇಲ್ಲಿನ ವಿದ್ಯಾರ್ಥಿಯಾಗಿದ್ದರು.

೧೯೬೩ರಲ್ಲಿ ಸರ್ಕಾರಿ ಮಹಿಳಾ ಕಾಲೇಜು ಆರಂಭವಾಯಿತು.[೩] ಫೆಬ್ರವರಿ ೨೦೦೬ರಲ್ಲಿ ಒಟ್ಟು ೨೫೯೭ ವಿದ್ಯಾರ್ಥಿನಿಯರು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾಗುತ್ತದೆ.

ಕುಂಭಕೋಣಂನ ಇತರ ಕಾಲೇಜುಗಳೆಂದರೆ,ಇಧ್ಯ ಕಲಾ ಮತ್ತು ವಿಜ್ಞಾನ ಕಾಲೇಜು,ಅನ್ನೈ ಕಲಾ ಮತ್ತಿ ವಿಜ್ಞಾನ ಕಾಲೇಜು,ಸರ್ಕಾರಿ ಲಲಿತ ಕಲಾ ಕಾಲೇಜುಮತ್ತುಅರಸು ಎಂಜಿನಿಯರಿಂಗ್ ಕಾಲೇಜು. ೧೮೭೬ರಲ್ಲಿ ಸ್ಥಳಿಯ ಪ್ರೌಢಶಾಲೆ ಆರಂಭವಾಗಿತ್ತು. ಇದೆ ಸಮಯದಲ್ಲಿ ಟೌನ್ ಹೈಯರ್ ಸೆಕೆಂಡರಿ ಶಾಲೆ ಕೂಡ ಆರಂಭವಾಗಿತ್ತು. ಇಲ್ಲಿ ಶ್ರೀನಿವಾಸ ರಾಮಾನುಜರವರು ಅಭ್ಯಯಿಸಿದ್ದರು. ಈ ಎರಡು ಶಾಲೆಗಳು ಕುಂಭಕೋಣಂನ ಹಳೆಯ ಶಾಲೆಗಳಾಗಿವೆ. ಪ್ರಸ್ತುತ ಕುಂಭಕೋಣಂನಲ್ಲಿ ಒಟ್ಟು ೩೬ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಕುಂಭಕೋಣಂನಲ್ಲಿದೆ.

ನೋಡಿಸಂಪಾದಿಸಿ

  1. ಆದಿ ಕುಂಬೇಶ್ವರ ದೇವಸ್ಥಾನ
  2. ಸಾರಂಗಪಾಣಿ ದೇವಸ್ಥಾನ
  3. ತೇನುಪುರಿಶ್ವರ ದೇವಸ್ಥಾನ

ಉಲ್ಲೇಖಗಳುಸಂಪಾದಿಸಿ

  1. https://www.oyorooms.com/travel-guide/best-temples-to-visit-in-kumbakonam/#2
  2. http://www.kumbakonam.com/banks.htm
  3. http://www.gcwk.ac.in/