ಜಿ.ಎಂ.ಹೆಗಡೆ
ಜಿ.ಎಂ.ಹೆಗಡೆ ಅವರು ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕರಲ್ಲೊಬ್ಬರು.ಜಿ.ಎಂ.ಹೆಗಡೆ ಅವರು ಸಹಿತ್ಯ ವಿಮರ್ಶೆ,ಸಂಶೋಧನೆ,ಅಧ್ಯಯನಗಳಲ್ಲಿ ಸತತ ಕ್ರಿಯಾಶೀಲರಗಿದ್ಧಾರೆ.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಹಿತ್ಯ ವಿಚಾರ ಸಂಕೀರಣಗಳಲ್ಲಿ ನಿರಂತರವಾಗಿ ಪ್ರಬಂಧ ಮಂಡಿಸಿದ್ದಾರಲ್ಲದೆ ಹಲವೆಡೆ ಸಂಪನ್ಮೂಲ ವ್ಯಕ್ತಿಯಾಗಿ ಹೆಸರು ಗಳಿಸಿದ್ದಾರೆ.ಕನ್ನಡ ಪ್ರಾಧ್ಯಾಪಕರಗಿ ನಿವ್ರುತರಾಗಿದ್ದರು ಹೆಗಡ ಅವರು ಸಹಿತ್ಯ ಸೆವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಡಾ.ಜಿ.ಎಂ.ಹೆಗಡೆ | |
---|---|
Born | ಡಿಸೆಂಬರ್ ೧೨, ೧೯೫೨ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕು |
Occupation(s) | ನಿವೃತ್ತ ಪ್ರಾಧ್ಯಾಪಕರು, ಲೇಖಕಕರು, ಕನ್ನಡ ಸಾಹಿತ್ಯ ವಿಮರ್ಶಕರು |
ಜೀವನ
ಬದಲಾಯಿಸಿಜಿ.ಎಂ.ಹೆಗಡೆ ಅವರು ೧೯೫೨ (೧೨. ೧೨. ೧೯೫೨) ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದವರು.ಶಾಲಾ ಕಾಲೇಜ್ ವಿದ್ಯಾಭ್ಯಾಸ ಶಿರಸಿಯಲ್ಲಿ ಮುಗಿಸಿ ಬಿ.ಎ(ಕನ್ನಡ ಮೇಜರ್) ಪದವಿ ಪಡೆದರು.ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎರಡನೆಯ ರಿಯಾಂಕ್ ನಲ್ಲಿ ಎಂ.ಎ(ಕನ್ನಡ)ಪದವಿ ಪಡೆದರು. ೧೯೮೨ರಲ್ಲಿ ಮಾಸ್ತಿಯವರ ವಿಮರ್ಶೆ ಒಂದು ಅಧ್ಯಯನ ಸಂಶೊಧನಾ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.ಕನ್ನಡ ಪ್ರಾಧ್ಯಪಕರಗಿ ಮತ್ತು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಗಿ ಧಾರವಾಡದ ಕಿಟೆಲ್ ಮಹಾವಿಧ್ಯಾಲಯದಲ್ಲಿ ಸೆವೆ ಸಲ್ಲಿಸಿ ನಿವ್ರುತ್ತರಾಗಿದ್ದರೆ.ಧಾರವಾಡದ ಸಹಿತ್ಯ ಪರಿಸರದಲ್ಲಿ,ಖ್ಯಾತ ಸಹಿತಿಗಳ ಮತ್ತು ಕವಿಗಳ ಪ್ರಿತಿಯೊಂದಿಗೆ ಜಿ.ಎಂ.ಹೆಗಡೆ ಅವರು ತಮ್ಮ ಪತ್ನಿ ಸರಸ್ವತಿಯೊಂದಿಗೆ ಧಾರವಾಡದಲ್ಲಿ ವಾಸವಗಿದ್ದಾರೆ.
ವಿಮರ್ಶಾ ಕ್ಷೇತ್ರದಲ್ಲಿ
ಬದಲಾಯಿಸಿಜಿ.ಎಂ.ಹೆಗಡೆ ಅವರು ಸುಮಾರು ೪೦ ದಶಕಗಲಿಗೂ ಮೀರಿ ನಿರಂತರವಗಿ ಸಹಿತ್ಯ ವಿಮರ್ಶೆಯ ಕಾರ್ಯ ಮಾಡುತ್ತಿದ್ದಾರೆ.ಅವರ ವಿಮರ್ಶೆ ಪುಟಗಳಲ್ಲಿ ಕನ್ನಡ ನವೋದಯ,ನವ್ಯ,ದಲಿತ ಬಂಡಾಯ,ಮಹಿಳಾ ಸಹಿತ್ಯದ ಕುರಿತಾದ ಲೇಖನಗಳಿವೆ ಎಂಬುದನ್ನು ಕಾಣಬಹುದಾಗಿದೆ.ಹತ್ತು ವರ್ಷಗಳ ಕಾಲ ಸತತವಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಸಾಹಿತ್ಯ ಸಂಸ್ಕೃತಿಗಳ,ಪುಸ್ತಕ ವಿಮರ್ಶೆಗಳನ್ನು ಬರೆದಿದ್ದಾರೆ.ಅವು ಮುಂದೆ ಪುಸ್ತಕ ಲೋಕ ಮತ್ತು ಪುಸ್ತಕ ಪ್ರಪಂಚ ಎಂಬ ಎರಡು ಸಂಕಲನಗಳಲ್ಲಿ ಪ್ರಕಟವಗಿವೆ.
ಜಿ.ಎಂ.ಹೆಗಡೆ ಅವರ ಕೃತಿಗಳು
ಬದಲಾಯಿಸಿಸುಮರು ೬೦ ಕ್ಕೂ ಹೆಚ್ಚು ಗ್ರಂಥಗಳು ಪ್ರಕಟಿತವಾಗಿವೆ.ವಿಶೇಷವಾಗಿ
- ಇಪ್ಪತ್ತು ವಿಮರ್ಶಾ ಗ್ರಂಥಗಳ ಪ್ರಕಟಣೆ
- ಮೂವತ್ತೈದು ಸಂಪಾದಿತ ಕೃತಿಗಳ ಪ್ರಕಟಣೆ
- ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕ ವಿಮರ್ಶೆ,ಸಂಶೋಧನೆ,ವಿಮರ್ಶೆಯ ಲೇಖನಗಳ ಪ್ರಕಟಣೆ
ಪ್ರಮುಖ ಹಾಗು ಖ್ಯಾತ ಕೃತಿಗಳು
ಬದಲಾಯಿಸಿ- ಮಾಸ್ತಿಯವರ ವಿಮರ್ಶೆ(ಕನ್ನಡ ಪಿ.ಎಚ್.ಡಿ) ಇಂಗ್ಲಿಷ್ನ ನಲ್ಲಿಯೂ ಪ್ರಕಟವಗಿದೆ(೧೯೯೫)
- ಸಾಹಿತ್ಯ ಮತ್ತು ಸಹೃದಯತೆ
- ಪುಸ್ತಕ ಲೋಕ
- ಕವಿ ಕಣವಿ
- ಪುಸ್ತಕ ಪ್ರಪಂಚ
ಪ್ರಶಸ್ತಿ/ಪುರಸ್ಕಾರಗಳು
ಬದಲಾಯಿಸಿ- ಸ.ಸ.ಮಾಳವಾಡ ಪ್ರಶಸ್ತಿ “ಸಾಹಿತ್ಯ ಮತ್ತು ಸಹೃದಯತೆ” ಕೃತಿಗೆ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೧೦
- ವರ್ಧಮಾನ ಸಹಿತ್ಯ ಪ್ರಶಸ್ತಿ ೨೦೨೦
- ವಿ.ಕೃ.ಗೋಕಾಕ್ ಪ್ರಶಸ್ತಿ ೨೦೨೨
ಸಹಿತ್ಯಕ ಮತ್ತು ಸಹಿತಿ ಒಡನಾಟ
ಬದಲಾಯಿಸಿ- ಧಾರವಾಡದ ಸಹಿತ್ಯಕ ಪರಿಸರದೊಂದಿಗೆ ಜಿ.ಎಂ.ಹೆಗಡೆ ಅವರು ಕನ್ನಡ ಸಹಿತ್ಯ, ಸಹಿತ್ಯೇತರ ಚಟುವಟಿಕೆಗಳಲ್ಲಿ ಸದಾ ನೇರವಾಗಿ ಇಲ್ಲಾವೇ ಪರ್ಯಾಯವಾಗಿ ಪಾಲ್ಗೊಂಡಿದ್ದಾರೆ.
- ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿಯಾಗಿ ನಿರ್ವಹಿಸಿದ್ದಾರೆ.
- ಹನ್ನೆರಡು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿದ್ದರು.
- ಅಲ್ಲದೆ,೧೦ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪಿ.ಎಚ್.ಡಿ ಮಾರ್ಗದರ್ಶನ ಮಡಿದ್ದಾರೆ.
- ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದು-೨೫೦ (ಭಾಷಣ/ಪ್ರಬಂಧ ಮಂಡನೆ) ಮಡಿದ್ದಾರೆ.
ಸಾಹಿತ್ಯ ಸಲಹೆಗಾರ
ಬದಲಾಯಿಸಿ- ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ
- ಸ್ವರ್ಣವಲ್ಲಿ ಮಠದ ಭಗವತ್ಪಾದ ಪ್ರಕಾಶನ
ಹಿರಿಯ ಸಹಿತಿ ಮತ್ತು ಕವಿಗಳ(ಚನ್ನವೀರ ಕಣವಿ,ಹಾಮಾನಾ,ಜಿ.ಎಸ್.ಆಮೂರ,ಪಾಟೀಲ ಪುಟ್ಟಪ್ಪ,ಎಚ್.ವಿ.ನಾಗೇಶ್,ಪ್ರೊ.ಕಿರ್ತಿನಾಥ್ ಕುರ್ತಕೋಟಿ,ಡಾ.ವಾಮನ ಬೇಂದ್ರೆ, ಎಂ.ಎಂ.ಕಲಬುರ್ಗಿ ಮತ್ತು ಹಲವು ಸಾಹಿತಿ/ಸ್ನೆಹಿತರ) ಪ್ರಿತಿ ವಿಶ್ವಾಸ ಜಿ.ಎಂ.ಹೆಗಡೆ ಅವರ ಕನ್ನಡ ಸಾಹಿತ್ಯ ಕರ್ಯಗಳಿಗೆ ನೀರೆರೆದು ಪೋಷಿಸಿ ಪ್ರೊಥ್ಸಹಿಸುತ್ತಬಂದಿವೆ.ಹೆಗಡೆಯವರಿಗೆ ಆತ್ಮೀಯರಗಿದ್ದ ಡಾ.ಹಾ.ಮಾ.ನಾಯಕರು ಪ್ರಕಟಿಸಿದ ಕೊನೆಯ ಕೃತಿ ಸುರಗಿಯನ್ನು ಹೆಗಡೆಯವರಿಗೆ ಅಂಕಿತಗೊಳಿಸಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ
- ↑ "ಚೆಂಬಳಕಿನ ಕವಿಯ ಪರಿಮಳವ ಮೊಗೆದು..." Varthabharati.
- ↑ "ಎನಗಿಂತ ಕಿರಿಯರಿಲ್ಲ ಎಂಬ ಸದ್ವಿನಯದ ಹಿರಿಯರು ಪ್ರೊ.ಜಿ.ಎಂ.ಹೆಗಡೆ". www.bookbrahma.com (in ಇಂಗ್ಲಿಷ್).
- ↑ "ಜಿ. ಎಂ. ಹೆಗಡೆಯವರಿಗೆ 2022ನೆಯ ಸಾಲಿನ ವಿ.ಕೃ. ಗೋಕಾಕ್ ಪ್ರಶಸ್ತಿ". www.bookbrahma.com (in ಇಂಗ್ಲಿಷ್).