ಜಲಶುದ್ಧೀಕರಣ
ಜಲಶುದ್ಧೀಕರಣ ವೆಂಬುದು, ಮೂಲ ಸ್ಥಿತಿಯ ನೀರಿನಲ್ಲಿರುವ ಬೇಡವಾದ ರಾಸಾಯನಿಕಗಳನ್ನು, ವಸ್ತುಗಳನ್ನು ಮತ್ತು ಜೈವಿಕ ಕಶ್ಮಲಗಳನ್ನು ತೆಗೆಯುವ ಕ್ರಿಯೆಯಾಗಿದೆ. ನಿರ್ದಿಷ್ಟ ಉದ್ದೇಶಕ್ಕೆ ಹೊಂದಿಕೊಳ್ಳುವ ನೀರನ್ನು ಉತ್ಪಾದಿಸುವುದು ಇದರ ಗುರಿಯಾಗಿದೆ. ಮಾನವರ ಬಳಕೆಗಾಗಿ ಬಹುಪಾಲು ನೀರನ್ನು ಶುದ್ಧೀಕರಿಸಲಾಗುತ್ತದೆ (ಕುಡಿಯುವ ನೀರು), ಆದರೆ ಜಲಶುದ್ಧೀಕರಣವನ್ನು ವೈದ್ಯಕೀಯ, ಔಷಧ ವಿಜ್ಞಾನ, ರಾಸಾಯನಿಕ ಮತ್ತು ಕೈಗಾರಿಕಾ ಬಳಕೆಗಳ ಬೇಡಿಕೆಗಳನ್ನು ಈಡೇರಿಸುವುದು ಒಳಗೊಂಡಂತೆ ವಿವಿಧ ಉದ್ದೇಶಗಳಿಗಾಗಿ ಮಾಡಬಹುದಾಗಿದೆ. ಸಾರ್ವತ್ರಿಕವಾಗಿ ಬಳಸುವ ವಿಧಾನಗಳು ಶೋಧನೆ ಮತ್ತು ಸಂಚಯದಂತಹ ಭೌತಿಕ ಪ್ರಕ್ರಿಯೆಗಳು, ನಿಧಾನವಾಗಿ ಮರಳಿನ ಸೋಸುವಿಕೆ ಅಥವಾ ಕ್ರಿಯಾಶೀಲ ಕೆಸರಿನಂತಹ ಜೈವಿಕ ಕಾರ್ಯವಿಧಾನಗಳು, ಕುಚ್ಚಾಗುವಿಕೆ ಮತ್ತು ಕ್ಲೋರಿನೀಕರಣದಂತಹ ರಾಸಾಯನಿಕ ಕಾರ್ಯವಿಧಾನಗಳು ಹಾಗೂ ನೇರಳಾತೀತ ಬೆಳಕಿನಂತಹ ವಿದ್ಯುತ್ಕಾಂತೀಯ ವಿಕಿರಣಗಳ ಬಳಕೆಯನ್ನು ಒಳಗೊಂಡಿದೆ.
ನೀರಿನ ಶುದ್ಧೀಕರಣ ವಿಧಾನವು, ತೇಲಾಡುತ್ತಿರುವ ಕಣಗಳು, ಪರಾವಲಂಬಿಗಳು, ಬ್ಯಾಕ್ಟೀರಿಯ, ಅಲ್ಗೆ, ವೈರಸ್ ಗಳು, ಶಿಲೀಂಧ್ರವನ್ನು ಒಳಗೊಂಡಂತೆ ಪೃಥಕಣಗಳ ರೂಪದಲ್ಲಿರುವ ವಸ್ತುವಿನ ಸಾಂದ್ರತೆಯನ್ನು ಕಡಿಮೆಮಾಡಬಹುದು; ಅಲ್ಲದೇ ಮಳೆಬಿದ್ದ ನಂತರ ನೀರಿನ ಮೇಲ್ಮೆನಲ್ಲಿರುವ ಪೃಥಕಣರೂಪದ ಮತ್ತು ದ್ರವರೂಪದಲ್ಲಿರುವ ವಸ್ತುಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಕುಡಿಯುವ ನೀರಿನ ಗುಣಮಟ್ಟವನ್ನು ಸಾಮಾನ್ಯವಾಗಿ ಸರ್ಕಾರ ನಿರ್ಧರಿಸುತ್ತದೆ; ಅಥವಾ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಕ ನಿರ್ಧರಿಸಲಾಗುತ್ತದೆ. ಈ ಗುಣಮಟ್ಟಗಳು ಸಾಮಾನ್ಯ ಬಳಸುವ ನೀರಿನಲ್ಲಿ ಸಾಮಾನ್ಯವಾಗಿ ಕಲ್ಮಶದ ಕನಿಷ್ಠ ಮತ್ತು ಗರಿಷ್ಠ ಸಾಂದ್ರತೆ ಎಷ್ಟಿರಬೇಕೆಂಬುದನ್ನು ನಿರ್ಧರಿಸುತ್ತವೆ.
ಕೇವಲ ವೀಕ್ಷಣೆಯ ಮೂಲಕ ನೀರು ಸರಿಯಾದ ಗುಣಮಟ್ಟವನ್ನು ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಕುದಿಸುವಿಕೆ ಅಥವಾ ಮನೆಯಲ್ಲಿ ಬಳಸುವ ಸಕ್ರಿಯ ಇಂಗಾಲದ ಬಳಕೆಯಂತಹ ಸರಳವಾದ ವಿಧಾನಗಳ ಮೂಲಕ ಬೇರೆಡೆಯಿಂದ ತಂದಂತಹ ನೀರಿನಲ್ಲಿರಬಹುದಾದ ಎಲ್ಲಾ ಕಲ್ಮಶಗಳನ್ನು ಶುದ್ಧೀಕರಿಸಿ ತೆಗೆಯುವುದು ಸಾಧ್ಯವಿಲ್ಲ. ನೈಸರ್ಗಿಕವಾಗಿ ದೊರೆಯುವ ನೀರನ್ನು – 1800ರ ಹೊತ್ತಿನಲ್ಲಿ ಎಲ್ಲಾ ರೀತಿಯ ಪ್ರಾಯೋಗಿಕ ಉದ್ದೇಶಗಳಿಗೆ ಸೂಕ್ತವಾಗಿದೆ ಎಂದು ಪರಿಗಣಿಸಲಾಗುತ್ತಿತ್ತು – ಆದರೂ ಈಗ ಯಾರಾದರೂ ಕುಡಿಯಲು ಬಯಸಿದರೆ ಅವರು ಅದನ್ನು ಕುಡಿಯುವ ಮೊದಲು ಅದು ಏನನ್ನು ಒಳಗೊಂಡಿದೆ ಎಂಬುದನ್ನು ಪರೀಕ್ಷಿಸಬೇಕಾಗಿದೆ. ರಾಸಾಯನಿಕ ವಿಶ್ಲೇಷಣೆ ದುಬಾರಿಯಾದರೂ ಕೂಡ ಶುದ್ಧೀಕರಣದ ಸರಿಯಾದ ವಿಧಾನಗಳ ಮೇಲೆ ನಿರ್ಧರಿಸುವುದಕ್ಕಾಗಿ ಬೇಕಾದ ಮಾಹಿತಿ ಪಡೆಯಲು ಇರುವ ಏಕೈಕ ಮಾರ್ಗವಾಗಿದೆ.
2007 ರ ವಿಶ್ವ ಆರೋಗ್ಯ ಸಂಸ್ಥೆ ಯ ವರದಿಯ ಪ್ರಕಾರ, 1.1 ಬಿಲಿಯನ್ ನಷ್ಟು ಜನರು , ಅಭಿವೃದ್ಧಿ ಪಡಿಸಲಾದ ಕುಡಿಯುವ ನೀರಿನ ಸರಬರಾಜನ್ನು ಪಡೆಯಲಾಗುತ್ತಿಲ್ಲ, ಅತಿಸಾರ ಕಾಯಿಲೆಯ 4 ಬಿಲಿಯನ್ ವಾರ್ಷಿಕ ಪ್ರಕರಣಗಳಲ್ಲಿ 88 ಪ್ರತಿಶತದಷ್ಟು, ಸುರಕ್ಷಿತವಲ್ಲದ ನೀರನ್ನು ಹಾಗೂ ಅಸಮರ್ಪಕ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಚಿತ್ರಿಸುತ್ತವೆ. ಅಲ್ಲದೇ ಪ್ರತಿವರ್ಷ 1.8 ಮಿಲಿಯನ್ ನಷ್ಟು ಜನರು ಅತಿಸಾರದಿಂದ ಪ್ರಾಣಕಳೆದುಕೊಳ್ಳುತ್ತಾರೆ. ಈ ಅತಿಸಾರದ ಪ್ರಕರಣಗಳಲ್ಲಿ 94 ಪ್ರತಿಶತದಷ್ಟು, ಶುದ್ಧನೀರಿನ ಸರಬರಾಜು ಮಾಡುವಿಕೆಯನ್ನು ಒಳಗೊಂಡಂತೆ ಪರಿಸರದಲ್ಲಿ ಕೆಲವೊಂದು ಬದಲಾವಾಣೆ ತರುವ ಮೂಲಕ ಇದನ್ನು ತಡೆಯಬಹುದಾಗಿದೆ ಎಂದು WHO ಅಂದಾಜುಮಾಡಿದೆ. [೧] ಮನೆಯಲ್ಲೆ ನೀರನ್ನು ಶುದ್ಧೀಕರಿಸಲು ಇರುವ ಸುಲಭ ವಿಧಾನಗಳು ಈ ಕೆಳಕಂಡಂತಿವೆ. ಉದಾಹರಣೆಗೆ; ಕ್ಲೋರಿನೀಕರಣ, ಸೋಸುವಿಕೆ,ಮತ್ತು ಸೌರ ಸೋಂಕುನಿವಾರಣೆ, ಹಾಗೂ ಸುರಕ್ಷಿತವಾದ ಧಾರಕದಲ್ಲಿ ಸಂಗ್ರಹಿಸಿಡುವುದರಿಂದ ಪ್ರತಿವರ್ಷ ಹಲವು ಜೀವಗಳನ್ನು ಉಳಿಸಬಹುದಾಗಿದೆ.[೨] ಜಲವಾಹಿತ ಕಾಯಿಲೆಗಳಿಂದ ಉಂಟಾಗುವ ಜೀವ ಹಾನಿ ತಪ್ಪಿಸುವುದು ಅಭಿವೃದ್ಧಿಶೀಲ ರಾಷ್ಟ್ರಗಳ ಸಾರ್ವಜನಿಕ ಆರೋಗ್ಯವ್ಯವಸ್ಥೆಯ ಪ್ರಧಾನ ಗುರಿಯಾಗಿದೆ.
ನೀರಿನ ಮೂಲಗಳು
ಬದಲಾಯಿಸಿ- ಅಂತರ್ಜಲ: ಇದು ಆಳದಲ್ಲಿರುವ ಅಂತರ್ಜಲದಿಂದ ದೊರೆಯುವಂತಹ ನೀರಾಗಿದ್ದು, ಇದು ಹತ್ತು, ನೂರು, ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಮಳೆ ನೀರಾಗಿದೆ. ಅಂತರ್ಜಲವನ್ನು ಸಂಸ್ಕರಣ ಘಟಕಗಳಿಂದ ಶೋಧಿಸುವ ಮೊದಲು ಮಣ್ಣು ಮತ್ತು ಕಲ್ಲಿನ ಪದರಗಳು ಸಹಜವಾಗಿ ಅದನ್ನು ಅತ್ಯಂತ ಸ್ವಚ್ಛವಾಗಿ ಶೋಧಿಸಿರುತ್ತವೆ. ಇಂತಹ ನೀರು ಚಿಲುಮೆಯಾಕಾರದಲ್ಲಿ, ಬುಗ್ಗೆ ಚಿಲುಮೆಗಳಾಗಿ ಹೊರಬರಬಹುದು ಅಥವಾ ಇಂತಹ ನೀರನ್ನೇ ಬೋರ್ವೆಲ್ ಅಥವಾ ಬಾವಿಗಳಿಂದ ಹೊರತೆಯಬಹುದು. ಆಳದ ಅಂತರ್ಜಲವು ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಬ್ಯಾಕ್ಟೀರಿಯ ವಿಜ್ಞಾನದ ಗುಣವನ್ನು ಹೊಂದಿರುತ್ತದೆ. (ಉದಾಹರಣೆಗೆ ,ರೋಗಕಾರಕ ಬ್ಯಾಕ್ಟೀರಿಯ ಅಥವಾ ರೋಗಕಾರಕ ಪ್ರೋಟೋಸೋವ ಸಾಮಾನ್ಯವಾಗಿ ಇರುವುದಿಲ್ಲ), ಆದರೆ ನೀರು ವಿಶೇಷವಾಗಿ ದ್ರವರೂಪದಲ್ಲಿರುವ ಘನವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ವಿಶೇಷವಾಗಿ ಕಾರ್ಬನೇಟ್ ಗಳು ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಲ್ಫೆಟ್ ಗಳನ್ನು ಹೆಚ್ಕಿನ ಪ್ರಮಾಣದಲ್ಲಿ ಹೊಂದಿರುತ್ತದೆ. ನೀರು ಯಾವ ಪದರದ ಮೂಲಕ ಹರಿಯುತ್ತದೋ ಆ ಪದರವನ್ನು ಆಧರಿಸಿ ನೀರಿನಲ್ಲಿ ಕ್ಲೋರೈಡ್, ಮತ್ತು ಬೈಕಾರ್ಬನೇಟ್ ಅನ್ನು ಒಳಗೊಂಡಂತೆ ಇತರ ಅಯಾನುಗಳು ಇರುತ್ತವೆ. ಈ ನೀರನ್ನು ಕುಡಿಯುವುದಕ್ಕೆ, ಅಡುಗೆ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ ಬಳಸುವಂತೆ ಮಾಡಲು ಇದರಲ್ಲಿರುವ ಕಬ್ಬಿಣ ಅಥವಾ ಮ್ಯಾಂಗನೀಸ್ ಅಂಶವನ್ನು ಕಡಿಮೆ ಮಾಡಬೇಕಾಗಿರುತ್ತದೆ . ಸೋಂಕು ಕಳೆವ ಅವಶ್ಯಕತೆ ಇದೆ. ಅಂತರ್ಜಲವನ್ನು ಪುನರ್ಭರ್ತಿಮಾಡುವ ಕಾರ್ಯ ನಡೆಯುತ್ತದೆಯೋ ಅಲ್ಲಿ; ಈ ಕ್ರಿಯೆಯಲ್ಲಿ ಅಧಿಕವಾಗಿ ನೀರಿದ್ದಾಗ ನದಿಯ ನೀರನ್ನು ಬರಗಾಲದ ಸಮಯದಲ್ಲಿ ಸಹಾಯವಾಗಲೆಂದು ನೀರು ಪೊಟರೆಯಲ್ಲಿ ಸಂಸ್ಕರಿಸಿಡಲಾಗುತ್ತದೆ; ಸಂಸ್ಕರಣ ಉದ್ದೇಶಕ್ಕಾಗಿ ಇದು ತಗ್ಗು ಪ್ರದೇಶದ ಮೇಲ್ಮೈ ನೀರಿಗೆ ಸಮನಾಗಿರುತ್ತದೆ.
- ಮಲೆನಾಡಿನ ಸರೋವರಗಳು ಮತ್ತು ಜಲಾಶಯಗಳು: ಇವು ಸಾಮಾನ್ಯವಾಗಿ ನದಿ ನೀರು ಸಂಗ್ರಹಣದ ವ್ಯವಸ್ಥೆಯ ಕೇಂದ್ರಗಳಲ್ಲಿ ಇರುತ್ತವೆ. ಮಲೆನಾಡಿನ ಜಲಾಶಯಗಳು ಸಾಮಾನ್ಯವಾಗಿ ಮಾನವನ ವಾಸವಿರುವೆಡೆ ಕಂಡು ಬರುತ್ತದೆ. ಅಲ್ಲದೇ ಕಲ್ಮಶವಾಗುವುದನ್ನು ತಡೆಗಟ್ಟಲು ಸುರಕ್ಷಿತ ವಲಯದಿಂದ ಆವರಿಸಲ್ಪಟ್ಟಿರುತ್ತದೆ. ಇಲ್ಲಿ ಬ್ಯಾಕ್ಟೀರಿಯದ ಮತ್ತು ರೋಗಕಾರಕದ ಮಟ್ಟಗಳು ಸಾಮಾನ್ಯವಾಗಿ ಕಡಿಮೆ ಇರುತ್ತದೆ, ಆದರೆ ಕೆಲವು ಬ್ಯಾಕ್ಟೀರಿಯ, ಪ್ರೋಟೋಸೋವ ಅಥವಾ ಅಲ್ಗೆ (ಪಾಚಿ)ಗಳಿರುತ್ತವೆ. ಮಲೆನಾಡಿನ ಕಾಡುಗಳು ಅಥವಾ ಸಸ್ಯಾಗಾರ, ನೆಲಗೊಬ್ಬರದ ಆಮ್ಲಗಳು ನೀರನ್ನು ವರ್ಣರಂಜಿತವಾಗಿಸಬಲ್ಲವು. ಅನೇಕ ಮಲೆನಾಡಿನ ಮೂಲಗಳು ಹೊಂದಿಕೆಯ ಅಗತ್ಯವಿರುವ ಕಡಿಮೆ pH ಅನ್ನು ಹೊಂದಿರುತ್ತದೆ.
- ನದಿಗಳು, ಕಾಲುವೆಗಳು ಮತ್ತು ತಗ್ಗುಪ್ರದೇಶದ ಜಲಾಶಯಗಳು: ತಗ್ಗುಪ್ರದೇಶದ ಮೇಲ್ಮೆ ನೀರು ಗಣನೀಯ ಪ್ರಮಾಣದ ಬ್ಯಾಕ್ಟೀರಿಯವನ್ನು ಹೊಂದಿರುತ್ತದೆ. ಅಲ್ಲದೇ ಅಲ್ಗಿ, ತೇಲಾಡುತ್ತಿರುವ ಘನಪದಾರ್ಥಗಳನ್ನು ಹಾಗೂ ದ್ರವರೂಪದಲ್ಲಿರುವ ವಿವಿಧ ಘಟಕಗಳನ್ನು ಒಳಗೊಂಡಿರಬಹುದು.
- ಅಟ್ಮೋಸ್ಫರಿಕ್ ವಾಟರ್ ಜನರೇಷನ್, ಎಂಬುದು ಹೊಸ ತಂತ್ರಜ್ಞಾನವಾಗಿದ್ದು, ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸುತ್ತದೆ. ಇಲ್ಲಿ, ಗಾಳಿಯನ್ನು ತಣ್ಣಗಾಗಿಸುವ ಮೂಲಕ ಹಾಗೂ ನೀರಿನ ಹಬೆಯನ್ನು ಬಾಷ್ಪೀಕರಿಸುವ ಮೂಲಕ ಗಾಳಿ ಶಕ್ತಿಯಿಂದ ನೀರನ್ನು ಪಡೆಯಲಾಗುತ್ತದೆ.
- ಮಳೆ ನೀರಿನ ಶೇಖರಣೆ ಅಥವಾ ಹಿಮ ಶೇಖರಣೆ, ಇದು ವಾತಾವರಣದ ಮೂಲಕ ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯಾಗಿದ್ದು, ಇದು ವಿಶೇಷವಾಗಿ ಗಮನಾರ್ಹ ಬೇಸಿಗೆಕಾಲದ ಸಂದರ್ಭದಲ್ಲಿ ಆಯಾ ಪ್ರದೇಶಗಳಲ್ಲಿ ಬಳಸಬಹುದು. ಅಲ್ಲದೇ ಇದನ್ನು ಸ್ವಲ್ಪ ಮಳೆ ಇದ್ದರೂ ಸಹ ಹಿಮ ಬೀಳುವ ಪ್ರದೇಶಗಳಲ್ಲಿ ಬಳಸಬಹುದು.
- ಶುದ್ಧೀಕರಣ ಅಥವಾ ವ್ಯತಿರಿಕ್ತ ಆಸ್ಮೋಸಿಸ್ ನ ಮೂಲಕ ಸಮುದ್ರದ ನೀರಿನ
ಡಿಸಾಲಿನೋಷನ್(ಉಪ್ಪುತೆಗೆಯುವುದು.)
ಸಂಸ್ಕರಣ
ಬದಲಾಯಿಸಿಕೆಳಕೊಟ್ಟಿರುವ ವಿಧಾನಗಳು ಜಲಶುದ್ಧೀಕರಣ ಘಟಕಗಳಲ್ಲಿ ಸಾಮಾನ್ಯವಾಗಿ ಬಳಸುವಂತಹ ವಿಧಾನಗಳಾಗಿವೆ. ಕೆಲವು ಅಥವಾ ಬಹುಪಾಲು ವಿಧಾನಗಳನ್ನು ಘಟಕದ ಉದ್ದೇಶ ಮತ್ತು ನೀರಿನ ಗುಣಮಟ್ಟವನ್ನು ಆಧರಿಸಿ ಬಳಸದೇ ಇರಬಹುದು.
ಪೂರ್ವಭಾವಿ ಸಂಸ್ಕರಣೆ
ಬದಲಾಯಿಸಿ- ಪಂಪ್ ಮಾಡುವುದು ಮತ್ತು ಕಲ್ಮಶಕಾರಕ - ಬಹುಪಾಲು ಪ್ರಮಾಣದ ನೀರನ್ನು ಅದರ ಮೂಲದಿಂದ ಪಂಪ್ ಮಾಡಿ ತೆಗೆಯಲಾಗುತ್ತದೆ ಅಥವಾ ಪೈಪ್ ಗೆ ಅಥವಾ ಕಪ್ಪು ಟ್ಯಾಂಕ್ ಗೆ ಅದನ್ನು ಹಾಯಿಸಲಾಗುತ್ತದೆ. ನೀರಿಗೆ ಕಲ್ಮಶಗಳು ಸೇರುವುದನ್ನು ತಡೆಯಲು ಈ ಭೌತಿಕ ಆಧಾರ ರಚನೆಯನ್ನು ಸರಿಯಾದ ವಸ್ತುಗಳಿಂದ ಮಾಡಲಾಗಿರುತ್ತದೆ. ಅಲ್ಲದೇ ಇದನ್ನು ಆಕಸ್ಮಿಕ ಕಲ್ಮಶೀಕರಣವು ನಡೆಯದಂತೆ ರಚಿಸಲಾಗಿರುತ್ತದೆ.
- ಶೋಧನೆ (ಸ್ಕ್ರೀನ್ ಫಿಲ್ಟರ್ ಅನ್ನು ಕೂಡ ನೋಡಿ ) - ಮೇಲ್ಮೈನಲ್ಲಿರುವ ನೀರನ್ನು ಶುದ್ಧೀಕರಿಸುವ ಮೊದಲ ಹಂತವೆಂದರೆ , ಕಡ್ಡಿ, ಎಲೆಗಳು, ಕಸದಂತಹ ದೊಡ್ಡ ಭಗ್ನಾವಶೇಷಗಳು ಹಾಗೂ ಇತರ ಬೃಹತ್ ಪ್ರಮಾಣದ ಕಣಗಳನ್ನು ತೆಗೆದುಹಾಕುವುದು. ಏಕೆಂದರೆ ಇವು ಅನಂತರದ ಶುದ್ಧೀಕರಣ ಹಂತಗಳಲ್ಲಿ ತೊಡಕಾಗಬಹುದು. ಇತರ ಶುದ್ಧೀಕರಣ ಹಂತಗಳ ಮೊದಲು ಬಹುಪಾಲು ಆಳದ ಅಂತರ್ಜಲವನ್ನು ಶೋಧಿಸುವ ಅಗತ್ಯವಿರುವುದಿಲ್ಲ.
- ಶೇಖರಣೆ - ನದಿಯ ನೀರನ್ನು ಕೆಲವು ದಿನಗಳ ವರೆಗೆ ,ಮತ್ತು ಅನೇಕ ತಿಂಗಳುಗಳ ವರೆಗೆ ಸಹಜವಾದ ಜೈವಿಕ ಶುದ್ಧೀಕರಣಕ್ಕೆ ಅವಕಾಶ ನೀಡುವುದಕ್ಕಾಗಿ ಜಲಾಶಯಗಳಲ್ಲಿಯೂ ಕೂಡ ಸಂಗ್ರಹಿಸಿಡಬಹುದು. ಸಂಸ್ಕರಣವನ್ನು ನಿಧಾನವಾದ ಮರಳಿನ ಶೋಧನೆಗಳಿಂದ ಮಾಡುವುದಾದರೆ ಇದು ಅತ್ಯಂತ ಮುಖ್ಯವಾಗಿದೆ. ನೀರು ಸಂಗ್ರಹದ ಜಲಾಶಯಗಳು ಅಲ್ಪಕಾಲಾವಾಧಿಯ ಬರಗಾಲದ ಸಂದರ್ಭದಲ್ಲಿ ರಕ್ಷೆಯನ್ನು ಒದಗಿಸುತ್ತದೆ ಅಥವಾ ಮೂಲ ನದಿಯಲ್ಲಿ ನೀರು ಕ್ಷಣಿಕ ಕಾಲದವರೆಗೆ ಕಲುಷಿತವಾದಾಗ ಅದನ್ನು ನಿಭಾಯಿಸಲು ನೀರಿನ ಸರಬರಾಜಿಗೆ ಅವಕಾಶ ನೀಡುತ್ತವೆ.
- ಪೂರ್ವ-ಸ್ಥಿತಿ- ಗಡುಸಾದ ಉಪ್ಪುಗಳಲ್ಲಿರುವ ಅಧಿಕ ನೀರನ್ನು ಸೋಡಾ-ಆಶ್ (ಸೋಡಿಯಂ ಕಾರ್ಬನೇಟ್)ನೊಂದಿಗೆ ಸಂಸ್ಕರಿಸಲಾಗುತ್ತದೆ. ಇದನ್ನು ಅಯಾನುವಿನ ಸಾಮಾನ್ಯ ಪ್ರಭಾವ ಬಳಸದೇ ಕ್ಯಾಲ್ಸಿಯಂ ಕಾರ್ಬೊನೇಟ್ ಅನ್ನು ಅವಕ್ಷೇಪಿಸಲು(ಇಬ್ಬನಿ ರೂಪಾಂತರ) ಮಾಡಲಾಗುತ್ತದೆ.
- ಪೂರ್ವ-ಕ್ಲೋರಿನೀಕರಣ - ಅನೇಕ ಘಟಕಗಳಲ್ಲಿ, ಪೈಪ್ ಗಳಲ್ಲಿ ಮತ್ತು ಟ್ಯಾಂಕ್ ಗಳಲ್ಲಿ ಮಲಿನಕಾರಿ ಜೀವಿಗಳು ಬೆಳೆಯದಿರಲೆಂದು ಒಳಬರುವ ನೀರಿಗೆ ಕ್ಲೋರೀನ್ ಸೇರಿಸಲಾಗುತ್ತದೆ. ಪ್ರತಿಕೂಲ ಪ್ರಭಾವ ಬೀರಬಹುದಾದ ಸಾಧ್ಯತೆಗಳಿಂದಾಗಿ (ಕೆಳಗೆ ಕ್ಲೋರೀನ್ ಅನ್ನು ನೋಡಿ), ಇದನ್ನು ಹೆಚ್ಚಾಗಿ ಮುಂದುವರೆಸಲಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಕೈಗೆ ಸಿಕ್ಕುವ ಘನಪದಾರ್ಥಗಳನ್ನು, ಸೂಕ್ಷ್ಮ ಜೀವಿಗಳನ್ನು ಹಾಗೂ ಕೆಲವು ದ್ರವರೂಪದಲ್ಲಿರುವ ಅಕಾರ್ಬನಿಕ ಮತ್ತು ಕಾರ್ಬನಿಕ ವಸ್ತುಗಳನ್ನು ತೆಗೆದು ಹಾಕಲು ಅನೇಕ ವಿಭಿನ್ನ ವಿಧಾನಗಳಿವೆ. ವಿಧಾನಗಳ ಆಯ್ಕೆ ಸಂಸ್ಕರಿಸುವಂತಹ ನೀರಿನ ಗುಣಮಟ್ಟವನ್ನು ಆಧರಿಸಿರುತ್ತದೆ. ನೀರನ್ನು ಶುದ್ಧೀಕರಿಸಲು ಶುದ್ಧೀಕರಣ ಕಾರ್ಯವಿಧಾನದ ಖರ್ಚು ಮತ್ತು ಗುಣಮಟ್ಟದ ಅಗತ್ಯವಿರುತ್ತದೆ.
pH ನೀರಿನಲ್ಲಿನ ಆಮ್ಲೀಯ ಪ್ರಮಾಣದ ಹೊಂದಿಕೆ
ಬದಲಾಯಿಸಿಶುದ್ಧವಾದ ನೀರು 7 pH ಅನ್ನು ಹೊಂದಿರುತ್ತದೆ ( ಕ್ಷಾರೀಯವೂ ಅಲ್ಲ ಆಮ್ಲೀಯವೂ ಅಲ್ಲ) ಹಾಗೂ ಸಮುದ್ರದ ನೀರು ಸರಿಸುಮಾರು 8.3 pH ಅನ್ನು ಹೊಂದಿರುತ್ತದೆ. (ಸ್ವಲ್ಪ ಮಟ್ಟಿಗೆ ಕ್ಷಾರೀಯ) ನೀರು ಆಮ್ಲೀಯವಾಗಿದ್ದರೆ (7ಕ್ಕಿಂತ ಕಡಿಮೆ), pH ಅನ್ನು ಹೆಚ್ಚಿಸಲು ಅದಕ್ಕೆ ಕ್ಯಾಲ್ಸಿಯಂ ಆಕ್ಸೈಡ್, ಸೋಡಿಯಂ ಕಾರ್ಬೊನೇಟ್, ಅಥವಾ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಸೇರಿಸಬೇಕು. ಸ್ವಲ್ಪ ಮಟ್ಟಿಗೆ ಆಮ್ಲೀಯ, ಕ್ಷಾರೀಯವಾಗಿರುವ ನೀರುಗಳನ್ನು ( 6.5ಕ್ಕಿಂತ ಕಡಿಮೆ)[ಸೂಕ್ತ ಉಲ್ಲೇಖನ ಬೇಕು], ಅನಿಲ ಹೊರಹಾಕುವಂತೆ ಒತ್ತಾಯಿಸಲಾಗುತ್ತದೆ. ಇದು ನೀರಿನಲ್ಲಿ ಕರಗಿಹೋಗಿರುವ ಇಂಗಾಲದ ಡೈಆಕ್ಸೈಡ್ ಅನ್ನು (ಕಾರ್ಬಾನಿಕಾಮ್ಲ ಆಮ್ಲ ) ನೀರಿನಿಂದ ತೆಗೆಯುವ ಮೂಲಕ pH ಅನ್ನು ಹೆಚ್ಚಿಸುವ ವಿಧಾನಗಳಲ್ಲಿ ಅತ್ಯಂತ ಅಗ್ಗದ ವಿಧಾನವಾಗಿದೆ. ಕ್ಯಾಲ್ಸಿಯಂ ಆಕ್ಸೈಡ್ ಅನ್ನು pH ಹೊಂದಿಸುವಿಕೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಅಥವಾ ಶುದ್ಧೀಕರಿಸುವ ನೀರಿಗಾಗಿ ಸಂಸ್ಕರಣ ಘಟಕದ ಪ್ರಾರಂಭದಲ್ಲಿ ಬಳಸಲಾಗುತ್ತದೆ. ಏಕೆಂದರೆ ಇದು ಅಗ್ಗವಾಗಿದೆ. ಆದರೆ ಇದು ನೀರಿನ ಗಡಸುತನವನ್ನು ಹೆಚ್ಚಿಸುವ ಮೂಲಕ ಅಯಾನಿಕ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನೀರನ್ನು ಸ್ವಲ್ಪಮಟ್ಟಿಗೆ ಕ್ಷಾರೀಯವಾಗಿಸುವಿಕೆ , ಘನೀಕರಣ ಮತ್ತು ಕುಚ್ಚಾಗುವಿಕೆ ಕಾರ್ಯ ವಿಧಾನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ. ಅಲ್ಲದೇ ಸೀಸದ ಪೈಪ್ ಗಳಿಂದ ಮತ್ತು ಪೈಪ್ ಫಿಟ್ಟಿಂಗ್ ನಲ್ಲಿ ಸೀಸಸ ಬೆಸುಗೆಗಳಿಂದ ಸೀಸವು ಕರಗಬಹುದಾದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಂದು ಸಂದರ್ಭದಲ್ಲಿ pH ಅನ್ನು ಕಡಿಮೆ ಮಾಡಲು ಆಮ್ಲ (HCl ಅಥವಾ H2SO4)ವನ್ನು ಕ್ಷಾರೀಯ ನೀರಿಗೆ ಸೇರಿಸಬಹುದು. ಕ್ಷಾರೀಯ ನೀರನ್ನು ಹೊಂದಿರುವುದರಿಂದ ಕೊಳಾಯಿ ವ್ಯವಸ್ಥೆಯಲ್ಲಿ ಸೀಸ ಅಥವಾ ತಾಮ್ರ ನೀರಿನೊಳಗೆ ಕರಗಿ ಸೇರುವುದಿಲ್ಲ ಎನ್ನುವಂತಿಲ್ಲ, ಆದರೆ ಸಾಮಾನ್ಯವಾಗಿ, ಭಾರವಾದ ಲೋಹಗಳನ್ನು 7 ಕ್ಕಿಂತ ಹೆಚ್ಚು pH ಇರುವ ನೀರು , 7 ಕ್ಕಿಂತ ಕಡಿಮೆ pH ಇರುವ ನೀರಿಗಿಂತ ಕಡಿಮೆ ಪ್ರಮಾಣದಲ್ಲಿ ಕರಗುವಂತೆ ಮಾಡುತ್ತದೆ.
ಕುಚ್ಚಾಗುವಿಕೆ (ಕದಡುವಿಕೆ)
ಬದಲಾಯಿಸಿಕುಚ್ಚಾಗುವಿಕೆಯು ನೀರನ್ನು ತಿಳಿಗೊಳಿಸುವ ಕಾರ್ಯವಿಧಾನವಾಗಿದೆ. ತಿಳಿಗೊಳಿಸುವುದೆಂದರೆ, ನೀರಿನಿಂದ ರಾಡಿಯನ್ನು ಅಥವಾ ಬಣ್ಣವನ್ನು ತೆಗೆದುಹಾಕುವುದು. ಇದರಿಂದಾಗಿ ನೀರು ಸ್ವಚ್ಛವಾಗುತ್ತದೆ, ಅಲ್ಲದೇ ಬಣ್ಣರಹಿತವಾಗುತ್ತದೆ. ತಿಳಿಗೊಳಿಸುವಿಕೆಯನ್ನು , ನೀರಿನಲ್ಲಿ ಅವಕ್ಷೇಪವಾಗುವಂತೆ ಮಾಡುವ ಮೂಲಕ ಮಾಡಲಾಗುತ್ತದೆ. ಇದನ್ನು ಸರಳವಾದ ಭೌತಿಕ ವಿಧಾನಗಳನ್ನು ಬಳಸುವ ಮೂಲಕ ತೆಗೆದುಹಾಕಬಹುದು. ಪ್ರಾರಂಭದಲ್ಲಿ , ಅವಕ್ಷೇಪದ ರೂಪಗಳು ಅತ್ಯಂತ ಸಣ್ಣ ಕಣಗಳಾಗಿರುತ್ತವೆ. ಆದರೆ ನೀರನ್ನು ನಿಧಾನವಾಗಿ ಕದಡಿದಂತೆಲ್ಲಾ , ಈ ಕಣಗಳು ದೊಡ್ಡ ಕಣಗಳನ್ನು ರೂಪಿಸಲು ಪರಸ್ಪರ ಅಂಟಿಕೊಳ್ಳುತ್ತವೆ. ಈ ಕಾರ್ಯವಿಧಾನವನ್ನು ಕೆಲವೊಮ್ಮೆ ಕುಚ್ಚಾಗುವಿಕೆ ಎಂದು ಕರೆಯಲಾಗುತ್ತದೆ. ಮೂಲ ಸ್ಥಿತಿಯ ನೀರಿನಲ್ಲಿರುವ ಅನೇಕ ಸಣ್ಣ ಕಣಗಳನ್ನು ಈ ಸಣ್ಣ ಅವಕ್ಷೇಪ ಕಣಗಳ ಮೇಲ್ಮೈ ಮೇಲೆ ಸೆಳೆದಿಟ್ಟುಕೊಳ್ಳಲಾಗುತ್ತದೆ. ಇದರಿಂದಾಗಿ ಅವು ಘನೀಕರಣವನ್ನು ಉಂಟುಮಾಡುವ ದೊಡ್ಡ ಕಣಗಳಾಗಿ ಸಂಘಟಿತವಾಗುತ್ತವೆ. ಈ ರೀತಿಯಾಗಿ ಘನೀಕರಣಗೊಂಡ ಅವಕ್ಷೇಪವು ತೇಲಾಡುತ್ತಿರುವ ಬಹುಪಾಲು ವಸ್ತುಗಳನ್ನು ನೀರಿನಿಂದ ಹೊರತೆಗೆಯುತ್ತದೆ. ಅಲ್ಲದೇ ನಂತರ ಕಳಪೆ ಮರಳಿನ ಶೋಧನೆಯ ಮೂಲಕ ಸಾಮಾನ್ಯವಾಗಿ ಮಿಶ್ರಣವನ್ನು ಹಾಕುವುದರಿಂದ ಅಥವಾ ಕೆಲವೊಮ್ಮೆ ಮರಳು ಮತ್ತು ಹರಳು ಹರಳಾಗಿರುವ ಆಂತ್ರಸೈಟ್(ಗಟ್ಟಿಕಲ್ಲಿದ್ದಲು) (ಹೆಚ್ಚು ಇಂಗಾಲ ಮತ್ತು ಬಾಷ್ಪಶೀಲ ಕಲ್ಲಿದ್ದಲು)ನ ಮಿಶ್ರಣವನ್ನು ನೀರಿಗೆ ಹಾಕುವುದರಿಂದ ಶುದ್ಧೀಕರಿಸಲಾಗುತ್ತದೆ. ಬಳಸುವಂತಹ ಗರಣೆಕಾರಿ/ ಕುಚ್ಚುಮಾಡುವ ಕಾರಕಗಳು ಈ ಕೆಳಕಂಡವುಗಳನ್ನು ಒಳಗೊಂಡಿದೆ:
- ಕಬ್ಬಿಣದ(III) ಹೈಡ್ರಾಕ್ಸೈಡ್. ಇದು ಕಬ್ಬಿಣ(III)ದ ಕ್ಲೋರೈಡ್ ನಂತಹ ಕಬ್ಬಿಣದ (III) ಸಂಯುಕ್ತದ ದ್ರಾವಣವನ್ನು ಪೂರ್ವ ಸಂಸ್ಕರಿಸಲಾದ ನೀರಿಗೆ 7 ಅಥವಾ ಅದಕ್ಕಿಂತ ಹೆಚ್ಚಿನ pH ನೊಂದಿಗೆ ಸೇರಿಸಿದಾಗ ಉಂಟಾಗುತ್ತದೆ. ಕಬ್ಬಿಣ(III)ದ ಹೈಡ್ರಾಕ್ಸೈಡ್, ಅದ್ರಾವ್ಯವಾಗಿದ್ದು, 7 ಕ್ಕಿಂತ ಕಡಿಮೆ pH ನಲ್ಲಿಯೂ ರೂಪುಗೊಳ್ಳಬಲ್ಲದು. ಸಂಸ್ಕರಿಸದೇ ಮಾಡಲಾದ ಕಬ್ಬಿಣದ ಉಪ್ಪುನ್ನು UK ಯಲ್ಲಿ ಕುಪ್ರಸ್ ಎಂಬ ಹೆಸರಿನಡಿ ಸಾಂಪ್ರದಾಯಿಕವಾಗಿ ಮಾರಲಾಗುತ್ತದೆ.
- ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಅನ್ನು ಹೆಚ್ಚಾಗಿ ಕುಚ್ಚುಮಾಡುವ ಅವಕ್ಷೇಪವಾಗಿ ಬಳಸಿದರೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ. ಅಲ್ಲದೇ 1988 ರಲ್ಲಿ ನೈಋತ್ಯ UK ಯ ಕ್ಯಾಮೆಲ್ ಫೋರ್ಡ್ ನಲ್ಲಿ ಇದನ್ನು ತಪ್ಪಾಗಿ ಬಳಸಿದ್ದರಿಂದ ಕ್ಯಾಮೆಲ್ ಫೋರ್ಡ್ ಜಲಮಾಲಿನ್ಯ ಘಟನೆ ನಡೆಯಿತು. ಜಲಾಶಯದ ಅಂತಿಮವಾಗಿ ಸಂಸ್ಕರಿಸಲಾದ ನೀರಿಗೆ ನೇರವಾಗಿ ಹೆಪ್ಪುಕಾರಿಯನ್ನು ಹಾಕಿದಾಗ ಕ್ಯಾಮೆಲ್ ಫೋರ್ಡ್ ನ ಜಲಮಾಲಿನ್ಯದ ಪ್ರಕರಣ ಸಂಭವಿಸಿತು.
- PolyDADMAC ಎಂಬುದು ಕೃತಕವಾಗಿ ತಯಾರಿಸಲಾದ ಪಾಲಿಮರ್ ಆಗಿದೆ. ಅಲ್ಲದೇ ಪ್ರಸ್ತುತದಲ್ಲಿ ಹೆಚ್ಚಾಗಿ ಬಳಸುತ್ತಿರುವ ಸಿಂಥಟಿಕ್ ಪಾಲಿಮರ್ ನ ಒಂದು ವರ್ಗವಾಗಿದೆ. ಈ ಪಾಲಿಮರ್ ಗಳು ಅಣುವಿನ ಅತ್ಯಂತ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಅಲ್ಲದೇ ಸ್ಥಿರವಾದ ಮತ್ತು ತಕ್ಷಣವೇ ತೆಗೆದುಹಾಕುವಂತಹ ಕುಚ್ಚುಗಳನ್ನು ರೂಪಿಸುತ್ತದೆ. ಆದರೆ ಇದರ ಬಳಕೆಯು,ಅಕಾರ್ಬನಿಕ ವಸ್ತುಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿಯಾಗಿದೆ. ವಸ್ತುಗಳು ಕೂಡ ಜೈವಿಕ ವಿಘಟನೀಯಗಳಾಗಿರಬಹುದು.
ಶೇಖರಣೆ(ಸೆಡಿಮೆಂಟೇಷನ್)
ಬದಲಾಯಿಸಿಕುಚ್ಚಾದ ಬೇಸಿನ್ ನಿಂದ ಹೊರಬರುವ ನೀರು ಶೇಖರಣೆಯ ಬೇಸಿನ್ ಅನ್ನು ಪ್ರವೇಶಿಸಬಹುದು. ಶೇಖರಣೆಯ ಬೇಸಿನ್ ಅನ್ನು ಸ್ವಚ್ಚಕಾರಿ ಅಥವಾ ನೆಲೆ ಬೇಸಿನ್ ಎಂದು ಕೂಡ ಕರೆಯಲಾಗುತ್ತದೆ. ಇದು ನಿಧಾನವಾಗಿ ಹರಿಯುವ ಒಂದು ದೊಡ್ಡ ಟ್ಯಾಂಕ್ ಆಗಿದ್ದು, ಕುಚ್ಚು ತಳದಲ್ಲಿ ನಿಲ್ಲುವಂತೆ ಮಾಡುತ್ತದೆ. ಅತ್ಯುತ್ತಮ ಸ್ಥಳದಲ್ಲಿರುವ ಶೇಖರಣೆಯ ಬೇಸಿನ್ ಕುಚ್ಚಾಗುವಿಕೆಯ ಬೇಸಿನ್ ನ ಸಮೀಪದಲ್ಲಿರುತ್ತದೆ. ಆದ್ದರಿಂದ ಅವುಗಳ ನಡುವಿನ ಸಾಗಣೆ ತಳದಲ್ಲಿ ನಿಲ್ಲಲು ಅಥವಾ ಕುಚ್ಚು ವಿಭಜನೆಯಾಗಲು ಅವಕಾಶ ನೀಡುವುದಿಲ್ಲ. ಶೇಖರಣೆಯ ಬೇಸಿನ್ ಗಳು ಆಯಾತಾಕಾರದಲ್ಲಿರಬಹುದು, ಇಲ್ಲಿ ಒಂದು ಕೊನೆಯಿಂದ ಇನ್ನೊಂದರೆಡೆಗೆ ನೀರು ಹರಿಯುತ್ತದೆ ಅಥವಾ ವೃತ್ತಾಕಾರದಲ್ಲಿರಬಹುದು,ಇಲ್ಲಿ ಮಧ್ಯದ ಹೊರಗಣದಿಂದ ನೀರು ಹರಿಯುತ್ತದೆ. ಶೇಖರಣೆಯ ಬೇಸಿನ್ ನ ಹೊರಹರಿವು ಸಾಂಪ್ರದಾಯಿಕವಾಗಿ ಅಡ್ಡ ಕಟ್ಟೆಯ ಮೇಲಿರುತ್ತದೆ. ಆದ್ದರಿಂದ ಕೇವಲ ತೆಳುವಾದ ಮೇಲಿನ ಪದರ ಮಾತ್ರ ಅಂತಿಮವಾಗಿ ಕೆಸರು ಹೊರಹೊದ ನಂತರ ಹರಿಯುತ್ತದೆ. ನೀರಿನ ಹೊರಗಿರುವಂತಹ ಕಣಗುಚ್ಛದ ಮೊತ್ತವು ಬೇಸಿನ್ ನ ಧಾರಣ ಕಾಲ ಮತ್ತು ಬೇಸಿನ್ ನ ಆಳವನ್ನು ಆಧರಿಸುತ್ತದೆ. ಆದ್ದರಿಂದ ನೀರು ತುಂಬುವ ಸಮಯ , ದೊಡ್ಡ ಬೇಸಿನ್ ನ ಬೆಲೆಯನ್ನು ಸರಿದೂಗಿಸುವಂತಿರಬೇಕು. ಸ್ವಚ್ಛಕಾರ ಧಾರಣದ ಕನಿಷ್ಠ ಸಮಯ ಸಾಮಾನ್ಯವಾಗಿ 4 ಗಂಟೆಗಳಾಗಿರುತ್ತದೆ. ಆಳವಾದ ಬೇಸಿನ್, ಆಳವಿಲ್ಲದ ಬೇಸಿನ್ ಗಳಿಗಿಂತ ಅಧಿಕ ಕಣಗುಚ್ಛ ತಳದಲ್ಲಿ ಕೂರಲು ಅವಕಾಶ ನೀಡುತ್ತವೆ. ಏಕೆಂದರೆ ಚಿಕ್ಕ ಕಣಗಳಿಗಿಂತ ದೊಡ್ಡ ಕಣಗಳು ಬೇಗ ಕೂರುತ್ತವೆ. ಆದ್ದರಿಂದ ದೊಡ್ಡ ಕಣಗಳು ತಳದಲ್ಲಿ ಸೇರಿದಂತೆಲ್ಲಾ ಸಣ್ಣ ಕಣಗಳಿಗೆ ಡಿಕ್ಕಿ ಹೊಡೆದು ಅವುಗಳೊಂದಿಗೆ ಸೇರಿಕೊಳ್ಳುತ್ತವೆ. ಬೇಸಿನ್ ನ ಮೂಲಕ ದೊಡ್ಡ ಕಣಗಳನ್ನು ಲಂಬವಾಗಿ ಗುಡಿಸಿಹಾಕಲಾಗುತ್ತದೆ ಹಾಗು ಹಾಗೇಯೇ ಕೆಳಗೆ ಗುಡಿಸುವಾಗ ಸಣ್ಣ ಕಣಗಳನ್ನು ತೆಗೆದುಹಾಕಲಾಗುತ್ತದೆ.
ಕಣಗಳು ಬೇಸಿನ್ ನ ತಳದಲ್ಲಿ ಕೂತಂತೆಲ್ಲಾ , ಟ್ಯಾಂಕ್ ನ ನೆಲದ ಮೇಲೆ ಕೆಸರಿನ ಪದರು ರೂಪುಗೊಳ್ಳುತ್ತದೆ. ಈ ಕೆಸರಿನ ಪದರವನ್ನು ತೆಗೆದು ಹಾಕಬೇಕು ಮತ್ತು ಸಂಸ್ಕರಿಸಬೇಕು. ಸಂಚಯಗೊಂಡ ಕೆಸರಿನ ಪ್ರಮಾಣವು ಪ್ರಮುಖವಾಗಿರುತ್ತದೆ. ಇದು ಹೆಚ್ಚಾಗಿ ಸಂಸ್ಕರಿಸಲಾದ ಒಟ್ಟು ನೀರಿನ ಪ್ರಮಾಣದಲ್ಲಿ 3 ರಿಂದ 5 ಪ್ರತಿಶತದ ವರೆಗಿರುತ್ತದೆ. ಕೆಸರನ್ನು ಸಂಸ್ಕರಿಸಲು ಮತ್ತು ಹೊರಹಾಕಲು ಆಗುವ ವೆಚ್ಚವು ನೀರು ಸಂಸ್ಕರಣ ಘಟಕದ ಕಾರ್ಯನಿರ್ವಹಿಸುವ ವೆಚ್ಚದ ಪ್ರಮುಖ ಭಾಗವಾಗಿರಬಹುದು. ಟ್ಯಾಂಕ್ ನಲ್ಲಿ ಯಾಂತ್ರಿಕವಾಗಿ ಸ್ವಚ್ಛಗೊಳಿಸುವ ಸಾಧನವನ್ನು ಅಳವಡಿಸಲಾಗಿರುತ್ತದೆ. ಅದು ನಿರಂತರವಾಗಿ ಟ್ಯಾಂಕ್ ನ ತಳಭಾಗವನ್ನು ಸ್ವಚ್ಛ ಮಾಡುತ್ತಿರುತ್ತದೆ ಅಥವಾ ತಳಭಾಗವನ್ನು ಸ್ವಚ್ಛಮಾಡಬೇಕಿದ್ದಾಗ ಟ್ಯಾಂಕ್ ಅನ್ನು ತೆಗೆದಿಡಲಾಗುತ್ತದೆ.
ಶೋಧಿಸುವಿಕೆ
ಬದಲಾಯಿಸಿಬಹುಪಾಲು ಕಣಗುಚ್ಛವನ್ನು ಬೇರ್ಪಡಿಸಿದ ನಂತರ, ನೀರನ್ನು ಕೊನೆಯ ಹಂತವೆಂಬಂತೆ ಶುದ್ಧೀಕರಿಸಲಾಗುತ್ತದೆ. ಈ ಕೊನೆಯ ಹಂತದಲ್ಲಿ ತೇಲಾಡುತ್ತಿರುವ ಉಳಿದ ಕಣಗಳನ್ನು ಮತ್ತು ತಳದಲ್ಲಿ ಕೂತಿರದ ಕಣಗುಚ್ಛವನ್ನು ತೆಗೆದುಹಾಕಲಾಗುತ್ತದೆ.
ಕ್ಷಿಪ್ರಗತಿಯ ಮರಳು ಶೋಧಕಗಳು
ಬದಲಾಯಿಸಿಕ್ಷಿಪ್ರಗತಿಯ ಮರಳು ಶೋಧಕವು ಅತ್ಯಂತ ಸಾಮಾನ್ಯ ವಿಧದ ಶೋಧಕವಾಗಿದೆ. ನೀರು ಮರಳಿನ ಮೂಲಕ ಲಂಬವಾಗಿ ಹರಿಯುತ್ತದೆ. ಇದು ಮರಳಿನ ಮೇಲೆ ಹೆಚ್ಚಾಗಿ ಸಕ್ರಿಯ ಇಂಗಾಲದ ಅಥವಾ ಆಂತ್ರಸೈಟ್(ಗಟ್ಟಿಕಲ್ಲಿದ್ದಲು) ಕಲ್ಲಿದ್ದಲುನ ಪದರವನ್ನು ಹೊಂದಿರುತ್ತದೆ. ಮೇಲಿನ ಪದರವು ಕಾರ್ಬನಿಕ ಸಂಯುಕ್ತಗಳನ್ನು ತೆಗೆದುಹಾಕುತ್ತದೆ. ಈ ಕಾರ್ಬನಿಕ ಸಂಯುಕ್ತಗಳು ರುಚಿ ಮತ್ತು ಸುವಾಸನೆಯನ್ನು ನೀಡುತ್ತವೆ. ಮರಳಿನ ಕಣಗಳ ನಡುವೆ ಇರುವ ಅಂತರವು ತೇಲಾಡುತ್ತಿರುವ ಸಣ್ಣ ಸಣ್ಣ ಕಣಗಳ ನಡುವಿನ ಅಂತರಕ್ಕಿಂತ ದೊಡ್ಡದಾಗಿರುತ್ತದೆ. ಆದ್ದರಿಂದ ಸರಳವಾದ ಶೋಧನೆ ಸಾಕಾಗುವುದಿಲ್ಲ. ಬಹುಪಾಲು ಕಣಗಳು ಮೇಲಿನ ಪದರದ ಮೂಲಕ ಹಾದುಹೋಗುತ್ತವೆ. ಆದರೆ ಇವು ಸೂಕ್ಷ್ಮ ರಂಧ್ರಗಳಿರುವ ಸ್ಥಳಗಳಲ್ಲಿ ಉಳಿದುಬಿಡುತ್ತವೆ ಅಥವಾ ಮರಳಿನ ಕಣಗಳಿಗೆ ಅಂಟಿಕೊಳ್ಳುತ್ತವೆ. ಪರಿಣಾಮಕಾರಿ ಶೋಧನೆಯನ್ನು ಶೋಧಕದ ಆಳದವರೆಗೆ ವಿಸ್ತರಿಸಲಾಗುತ್ತದೆ. ಶೋಧಕದ ಈ ಗುಣಲಕ್ಷಣಗಳು ಅದರ ಕಾರ್ಯ ನಿರ್ವಹಿಸುವಿಕೆಯ ಕೀಲಿಕೈಗಳಾಗಿವೆ: ಮರಳಿನ ಮೊದಲನೆಯ ಪದರವು ಎಲ್ಲಾ ಕಣಗಳನ್ನು ತಡೆದರೆ, ಶೋಧಕ ತಕ್ಷಣವೇ ತಡೆಯೊಡ್ಡತ್ತದೆ.
ಶೋಧಕವನ್ನು ಸ್ವಚ್ಛಗೊಳಿಸಲು, ಶೋಧಕದ ಮೂಲಕ ಮೇಲಿನ ಭಾಗಕ್ಕೆ ರಭಸವಾಗಿ ನೀರನ್ನು ಹಾಕಬೇಕು. ಕೂತಿರುವ ಕಣಗಳನ್ನು ತೆಗೆದುಹಾಕಲು ಸಹಜವಾದ ದಿಕ್ಕಿನ ವಿರುದ್ಧವಾಗಿ ನೀರನ್ನು ಹಾಕಬೇಕು. ( ಇದನ್ನು ಬ್ಯಾಕ್ ಫ್ಲಷಿಂಗ್ ಅಥವಾ ಬ್ಯಾಕ್ ವಾಷಿಂಗ್ ಎಂದು ಕೂಡ ಕರೆಯಲಾಗುತ್ತದೆ.) ಇದಕ್ಕೂ ಮೊದಲು, ಸಂಪೀಡಿತ ಗಾಳಿಯನ್ನು ಶೋಧಕದ ತಳಭಾಗದ ಮೂಲಕ ಹೊರಕಳಿಸಬೇಕು. ಏಕೆಂದರೆ ಬ್ಯಾಕ್ ವಾಷಿಂಗ್ ಕ್ರಿಯೆಯನ್ನು ನಡೆಸಲು ಸ್ಥಿರಗೊಳಿಸಿದ ಶೋಧಕದ ಮಾಧ್ಯಮವನ್ನು ಮುರಿಯಬೇಕಾಗುತ್ತದೆ; ಇದನ್ನು ಏರ್ ಸ್ಕೌರಿಂಗ್ ಎಂದು ಕರೆಯಲಾಗುತ್ತದೆ. ಶೇಖರಣೆಯ ಬೇಸಿನ್ ನಿಂದ ಕಲುಷಿತಗೊಂಡ ನೀರನ್ನು ಕೆಸರಿನೊಂದಿಗೆ ಹೊರಹಾಕಲಾಗುತ್ತದೆ ಅಥವಾ ಘಟಕವನ್ನು ಪ್ರವೇಶಿಸುವ ಮೂಲ ಸ್ಥಿತಿಯಲ್ಲಿರುವ ನೀರಿನೊಂದಿಗೆ ಬೆರೆಸುವ ಮೂಲಕ ಅದನ್ನು ಮರುಬಳಕೆ ಮಾಡಬಹುದು.
ಕೆಲವು ನೀರು ಸಂಸ್ಕರಣ ಘಟಕಗಳು, ಒತ್ತಡ ಶೋಧಕಗಳನ್ನು ಬಳಸುತ್ತವೆ. ಕ್ಷಿಪ್ರಗತಿಯ ಗುರುತ್ವ ಶೋಧಕಗಳ ಇದೇ ತತ್ವಗಳ ಮೇಲೆ ಮಾಡಲಾಗುವ ಈ ಕೆಲಸಗಳು ಬೇರೆ ಬೇರೆಯಾಗಿರುತ್ತವೆ. ಏಕೆಂದರೆ ಶೋಧಕದ ಮಾಧ್ಯಮವು ಕಬ್ಬಿಣದ ಪಾತ್ರೆಯಿಂದ ಕೂಡಿದ್ದರೆ ಹಾಗು ನೀರು ಒತ್ತಡದ ಮೂಲಕ ಹೊರಹಾಕಲ್ಪಟ್ಟಾಗ ಈ ಕೆಲಸಗಳು ಬೇರೆ ಬೇರೆಯಾಗಿರುತ್ತವೆ.
ಪ್ರಯೋಜನಗಳು
- ಶೋಧಕಗಳು ಮರಳಿನ ಮತ್ತು ಕಾಗದದ ಶೋಧಕಗಳಿಗಿಂತ ಹೆಚ್ಚು ಸಣ್ಣ ಸಣ್ಣ ಕಣಗಳನ್ನು ಹೊರಹಾಗುತ್ತವೆ.
- ಶೋಧಕವು ವಾಸ್ತವವಾಗಿ ಎಲ್ಲಾ ಕಣಗಳನ್ನು ಅವುಗಳ ನಿರ್ದಿಷ್ಟ ಸೂಕ್ಷ್ಮ ರಂಧ್ರಗಳಿಗಿಂತ ದೊಡ್ಡ ಗಾತ್ರದಲ್ಲಿ ಹೊರಹಾಕುತ್ತದೆ.
- ಅವುಗಳು ತೆಳುವಾಗಿರುತ್ತವೆ . ಆದ್ದರಿಂದ ಅವುಗಳ ಮೂಲಕ ದ್ರವವು ಅತಿ ವೇಗವಾಗಿ ಹರಿಯುತ್ತದೆ.
- ಅವುಗಳು ಗಟ್ಟಿಯಾಗಿರುತ್ತವೆ, ಆದ್ದರಿಂದ 2-5 ವಾತಾವರಣದಲ್ಲಿ ಅವುಗಳ ಸುತ್ತಲೂ ಇರುವಂತಹ ಒತ್ತಡದ ವಿಭಿನ್ನತೆಯನ್ನು ತಡೆದುಕೊಳ್ಳಬಲ್ಲವು.
- ಅವುಗಳನ್ನು ಸ್ವಚ್ಛಗೊಳಿಸಬಹುದು (ಬ್ಯಾಕ್ ಫ್ಲಷ್ಡ್) ಮತ್ತು ಮರು ಬಳಕೆ ಮಾಡಬಹುದು.
ತೊಗಲಹಾಳೆಯ ಶೋಧಕಗಳನ್ನು ಹೆಚ್ಚಾಗಿ ಕುಡಿಯುವ ನೀರು ಮತ್ತು ರೊಚ್ಚುನ್ನು(ಮರು ಬಳಕೆಗೆ) ಶುದ್ಧೀಕರಿಸಲು ಬಳಸಲಾಗುತ್ತದೆ. ತೊಗಲಿನ ಶೋಧಕಗಳು ಕುಡಿಯುವ ನೀರಿನಲ್ಲಿ ಗಿಯಾರ್ಡಿಯ ಮತ್ತು ಕ್ರಿಪ್ಟೊಸ್ಪೋರ್ಡಿಯಂ ಅನ್ನು ಒಳಗೊಂಡಂತೆ 0.2 um ಕ್ಕಿಂತ ದೊಡ್ಡ ಗಾತ್ರದ ಎಲ್ಲಾ ಕಣಗಳನ್ನು ತೆಗೆದುಹಾಕಬಲ್ಲದು. ಚರ್ಮದ ಪೊರೆಯ ಶೋಧಕಗಳು, ಮೂರನೆ ಶ್ರೇಣಿಯ ಸಂಸ್ಕರಣದ ಪರಿಣಾಮಕಾರಿ ರೂಪವಾಗಿವೆ. ಕೈಗಾರಿಕೆಗಾಗಿ ಮತ್ತು ಪರಿಮಿತಿಯ ಗೃಹಬಳಕೆಗಾಗಿ ನೀರಿನ ಮರುಬಳಕೆ ಮಾಡುವ ಉದ್ದೇಶವಿದ್ದಲ್ಲಿ ಇದನ್ನು ಬಳಸಲಾಗುತ್ತದೆ ಅಥವಾ ನಗರಗಳು ಬಳಸಿದ ನೀರನ್ನು ನದಿಗೆ ಬಿಡುವ ಮೊದಲು ಈ ಶೋಧಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಇದನ್ನು ಪಾನೀಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.( ಬಾಟಲ್ ನೀರನ್ನು ಒಳಗೊಂಡಂತೆ) ಆದರೂ ಯಾವುದೇ ಶೋಧನೆ ನೀರಿನಲ್ಲಿ ವಾಸ್ತವವಾಗಿ ಕರಗಿರಬಹುದಾದ ವಸ್ತುಗಳನ್ನು ತೆಗೆಯಲಾರದು, ಉದಾಹರಣೆಗೆ ರಂಜಕ, ನೈಟ್ರೇಟ್ ಮತ್ತು ಭಾರವಾದ ಲೋಹದ ಅಯಾನುಗಳು.
ಮರಳಿನ ಮಂದಗತಿಯ ಶೋಧಕಗಳು
ಬದಲಾಯಿಸಿಮರಳಿನ ಮಂದಗತಿಯ ಶೋಧಕಗಳನ್ನು ಸಾಕಷ್ಟು ಸ್ಥಳವಿರುವ ನೆಲದಲ್ಲಿ ಮತ್ತು ಜಾಗಗಳಲ್ಲಿ ಬಳಸಬಹುದು. ಏಕೆಂದರೆ ನೀರು ಶೋಧಕಗಳ ಮೂಲಕ ಅತ್ಯಂತ ನಿಧಾನವಾಗಿ ಹರಿಯಬೇಕಿರುತ್ತದೆ. ಈ ಶೋಧಕಗಳು ಅವುಗಳ ಕಾರ್ಯಕ್ಕಾಗಿ, ಭೌತಿಕ ಶೋಧನೆಗಿಂತ ಹೆಚ್ಚಾಗಿ ಜೈವಿಕ ಸಂಸ್ಕರಣ ಕಾರ್ಯ ವಿಧಾನಗಳ ಮೇಲೆ ಅವಲಂಬಿಸಿರುತ್ತವೆ. ಈ ಶೋಧಕಗಳನ್ನು , ತಳಭಾಗದಲ್ಲಿ ಜಲ್ಲಿ ಸ್ತರದೊಂದಿಗೆ, ಮೇಲ್ಭಾಗದಲ್ಲಿ ಅತ್ಯುತ್ತಮ ಮರಳಿನೊಂದಿಗೆ, ಮರಳಿನ ಪದರಗಳನ್ನು ಬಳಸಿಕೊಂಡು ಎಚ್ಚರಿಕೆಯಿಂದ ನಿರ್ಮಿಸಲಾಗುತ್ತದೆ. ಮಧ್ಯದಲ್ಲಿ ಕಾಲುವೆಯನ್ನು ನಿರ್ಮಿಸಲಾಗುತ್ತದೆ. ಈ ಕಾಲುವೆಯನ್ನು ಸೋಂಕುಗಳೆತದಿಂದ ಸಂಸ್ಕರಿಸಲಾದ ನೀರನ್ನು ದೂರಕ್ಕೆ ಕೊಂಡೊಯ್ಯಲು ಬಳಸಲಾಗುತ್ತದೆ. ಶೋಧನೆಯು , ತೆಳುವಾದ ಜೈವಿಕ ಪದರದ ವಿಕಸನದ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಶೋಧಕದ ಮೇಲ್ಮೈನಲ್ಲಿರುವ ಜೂಗ್ಲಿಯಲ್ ಪದರ ಅಥವಾ Schmutzdecke (ಮರಳಿನ ಶೋಧಕದ ಮೇಲೆ ಉಂಟಾಗುವ ತೆಳುವಾದ ಪೊರೆ)ಎಂದು ಕರೆಯಲಾಗುತ್ತದೆ . ಪರಿಣಾಮಕಾರಿಯಾದ ಮರಳಿನ ಮಂದಗತಿಯ ಶೋಧಕದ ಕಾರ್ಯವು ಅನೇಕ ವಾರಗಳ ಕಾಲ ಅಥವಾ ತಿಂಗಳುಗಳ ಕಾಲ ನಡೆಯುತ್ತದೆ. ಪೂರ್ವ ಸಂಸ್ಕರಣವನ್ನು ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ್ದಲ್ಲಿ ಮತ್ತು ಕೆಲವೊಮ್ಮೆ ಸಂಸ್ಕರಣದ ಭೌತಿಕ ವಿಧಾನಗಳನ್ನು ಮುಟ್ಟಿದಾಗ ಅತ್ಯಂತ ಕಡಿಮೆ ಪೌಷ್ಟಿಕಾಂಶವಿರುವ ನೀರನ್ನು ಉತ್ಪಾದಿಸಿದಲ್ಲಿ ಈ ಶೋಧಕದ ಕಾರ್ಯಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಪೌಷ್ಟಿಕಾಂಶದ ಮಟ್ಟವು ಅತ್ಯಂತ ಕಡಿಮೆ ಇದ್ದಲ್ಲಿ ಅದು ನೀರನ್ನು ಸೋಂಕುಗಳೆಕ ಮಟ್ಟದೊಂದಿಗೆ ವಿಂಗಡಣಾ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಸಾಗಿಸಲು ಅವಕಾಶ ನೀಡುತ್ತದೆ. ಮರಳಿನ ಮಂದಗತಿಯ ಶೋಧಕಗಳನ್ನು ಹಿಂಭಾಗದಿಂದ ತೊಳೆಯಲಾಗುವುದಿಲ್ಲ; ಅವುಗಳನ್ನು ಮರಳ ಮೇಲ್ಮೈ ಪದರದ ಮೂಲಕ ನೋಡಿಕೊಳ್ಳಲಾಗುತ್ತದೆ. ಜೈವಿಕ ಬೆಳವಣಿಗೆಗಳು ಸಾಂದರ್ಭಿಕವಾಗಿ ಹರಿವಿಗೆ ತಡೆಯೊಡ್ಡಿದಾಗ ಮರಳಿನ ಪದರನ್ನು ಉಜ್ಜಿ ತೆಗೆಯಲಾಗುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಮರಳಿನ ಮಂದಗತಿಯ ಶೋಧಕದ ನಿರ್ದಿಷ್ಟವಾದ "ಬೃಹತ್ ಪ್ರಮಾಣದ" ರೂಪವು, ಬ್ಯಾಂಕ್ ಶೋಧನೆಯ ಕಾರ್ಯವಿಧಾನವಾಗಿದೆ. ಇದರಲ್ಲಿ ನದಿತೀರದಲ್ಲಿರುವ ನೈಸರ್ಗಿಕ ಕೆಸರನ್ನು , ಕಲ್ಮಶ ಶೋಧನೆಯ ಮೊದಲ ಹಂತವನ್ನು ಒದಗಿಸಲು ಬಳಸಲಾಗುತ್ತದೆ. ಆದಾಗ್ಯೂ, ವಿಶೇಷವಾಗಿ ಸಾಕಷ್ಟು ಮಟ್ಟಿನ ಸ್ವಚ್ಛತೆ , ಕುಡಿಯುವ ನೀರಿಗೆ ನೇರವಾಗಿ ಬಳಸಲು ಸಾಕಾಗುವುದಿಲ್ಲ. ಬಾವಿಯಿಂದ ಪಡೆದಂತಹ ನೀರು, ಪ್ರಧಾನ ತೊರೆಗಳಿಂದ ನೇರವಾಗಿ ತೆಗೆದುಕೊಂಡ ನದಿ ನೀರಿಗಿಂತ ಕಡಿಮೆ ಸಮಸ್ಯಾತ್ಮಕವಾಗಿರುತ್ತದೆ. ನದಿನೀರಿನ ಶುದ್ಧೀಕರಣದಲ್ಲಿ ದಂಡೆ ಕಟ್ಟು ಶೋಧನೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಲಾವಾಾ(ಶಿಲಾದ್ರವದ) ಶೋಧಕಗಳು
ಬದಲಾಯಿಸಿಲಾವಾ ಶೋಧಕಗಳು ಮರಳ ಶೋಧಕಗಳಿಗೆ ಹೊಂದಿಕೆಯಾಗುತ್ತವೆ. ಅಲ್ಲದೇ ಇವುಗಳನ್ನು ಕೇವಲ ಸಾಕಷ್ಟು ಮಟ್ಟಿನ ಭೂಮಿ ಮತ್ತು ಸ್ಥಳವಿರುವ ಕಡೆಯಲ್ಲಿ ಮಾತ್ರ ಬಳಸಲಾಗುತ್ತದೆ. ಮರಳಿನ ಮಂದಗತಿಯ ಶೋಧಕಗಳಂತೆ, ಲಾವಾ ಶೋಧಕಗಳು , ಅವುಗಳ ಕ್ರಿಯೆಗೆ ಭೌತಿಕ ಶೋಧನೆಯ ಬದಲಿಗೆ ಜೈವಿಕ ಸಂಸ್ಕರಣ ಕಾರ್ಯವಿಧಾನಗಳ ಮೇಲೆ ಹೆಚ್ಚಾಗಿ ಅವಲಂಬಿಸಿರುತ್ತವೆ. ಆದರೂ, ಮರಳಿನ ಮಂದಗತಿಯ ಶೋಧಕಗಳಂತೆ, ಅವು ಲಾವಾ ಶಿಲಾಸ್ಫಟಿಕಗಳ 2 ಪದರಗಳಿಂದ ಮತ್ತು ಪೌಷ್ಟಿಕ-ರಹಿತ ಮಣ್ಣಿನ(ಸಸ್ಯಗಳ ಬೇರುಗಳಲ್ಲಿ ಮಾತ್ರ) ಮಲ್ಮೈ ಪದರರಿಂದ ರಚಿತವಾಗಿದೆ. ನೀರು-ಶುದ್ಧೀಕರಣ ಘಟಕ (ಉದಾಹರಣೆಗೆ Iris pseudacorus(ಐರಿಶ್ ನ ಜೈವಿಕ ಸಸ್ಯ) ಮತ್ತು Sparganium erectum)(ವಿವಿಧ ಜಾತಿ ಹೂ ಬಿಡುವ ಉತ್ತರ-ದಕ್ಷಿಣ ಅಕ್ಷಾಂಶದಲ್ಲಿ ಸಾಮಾನ್ಯವಾಗಿರುವ ಸಸ್ಯದ ಕಾಂಡ)ಗಳನ್ನು ಶೋಧಿಸಲು ಮೇಲಿರಿಸಲಾಗಿರುತ್ತದೆ. ಸಾಮಾನ್ಯವಾಗಿ, ಲಾವಾ ಕಲ್ಲಿನ ಸುಮಾರು 1/4 ವ್ಯಾಸವು ನೀರಿನ ಶುದ್ಧೀಕರಣಕ್ಕೆ ಅಗತ್ಯವಾಗಿದೆ. ಅಲ್ಲದೇ ಮರಳಿನ ಮಂದಗತಿಯ ಶೋಧಕಗಳಂತೆ, ವಂಕಿ ವಿನ್ಯಾಸದ ಕಾಲುವೆಗಳ ಸರಣಿಗಳು ಕೂಡ ಇರುತ್ತವೆ. (ಲಾವಾ ಶೋಧಕಗಳೊಡನೆ ಇವುಗಳು ತಳ ಭಾಗದ ಪದರದಗಳಲ್ಲಿರುತ್ತವೆ).[೩]
ಅಯಾನುಗಳ ಮತ್ತು ಕರಗಿರುವ ಇತರ ವಸ್ತುಗಳನ್ನು ತೆಗೆದುಹಾಕುವುದು
ಬದಲಾಯಿಸಿಅತಿಯಾದಶೋಧನೆಯ ತೆಳುಚರ್ಮದರಂಧ್ರಗಳು, ರಾಸಾಯನಿಕವಾಗಿ ರಚಿಸಲಾದ ಅತ್ಯಂತ ಚಿಕ್ಕ ಸೂಕ್ಷ್ಮ ಕಣಗಳೊಂದಿಗೆ, ಪಾಲಿಮರ್ ಚರ್ಮವನ್ನು ಬಳಸುತ್ತದೆ. ಇದನ್ನು , ನೀರಿನಲ್ಲಿ ಕರಗಿ ಹೋಗಿರುವ ವಸ್ತುಗಳನ್ನು ಶೋಧಿಸಿ ತೆಗೆಯಲು ಬಳಸುವ ಗರಣೆಕಾರಿಯ ಬಳಕೆ ತಡೆಯಲು ಬಳಸಲಾಗುತ್ತದೆ. ತೊಗಲಿನ ಮಾಧ್ಯಮದ ವಿಧವು, ನೀರನ್ನು ಸಾಗಿಸಲು ಎಷ್ಟು ಒತ್ತಡದ ಅಗತ್ಯವಿದೆ ಹಾಗು ಯಾವ ಗಾತ್ರದ ಸೂಕ್ಷ್ಮ ಜೀವಿಗಳನ್ನು ಶೋಧಿಸಿ ಹೊರಹಾಕಬೇಕು ಎಂಬುದನ್ನು ನಿರ್ಧರಿಸುತ್ತದೆ.
ಅಯಾನ್ ವಿನಿಮಯ:[೪][೫][೬][೭][೮] ಅಯಾನ್ ವಿನಿಮಯ ವ್ಯವಸ್ಥೆ , ಅಯಾನ್ ವಿನಿಮಯ ರಾಳ- ಅಥವಾ ಸಿಯೊಲೈಟ್ಅನ್ನು ಬಳಸುತ್ತದೆ. ಇವು ಬೇಡವಾದ ಅಯಾನ್ ಗಳನ್ನು ಬದಲಾಯಿಸುವ ಸಾಲುಗಳಾಗಿವೆ. ಅತ್ಯಂತ ಸಾಮಾನ್ಯ ಉದಾಹರಣೆಯೆಂದರೆ , ನೀರನ್ನು ಮೆದುಗೊಳಿಸುವಿಕೆಯಲ್ಲಿ ,Ca2+ ಮತ್ತು Mg2+ ಅಯಾನ್ ಗಳನ್ನು ತೆಗೆದುಹಾಕಿ ಅವುಗಳ ಬದಲಿಗೆ ಸೌಮ್ಯವಾದ (ಸ್ನೇಹಪೂರ್ವಕವಾಗಿ ಸೋಪ್) Na+ ಅಥವಾ K+ ಅಯಾನ್ ಗಳನ್ನು ಸೇರಿಸಲಾಗುತ್ತದೆ. ಅಯಾನು ವಿನಿಮಯ ರಾಳಗಳನ್ನು ವಿಷಪೂರಿತ ಅಯಾನುಗಳನ್ನು ತೆಗೆದುಹಾಕಲು ಕೂಡ ಬಳಸಲಾಗುತ್ತದೆ. ಉದಾಹರಣೆಗೆ, ನೈಟ್ರೇಟ್, ನೈಟ್ರೈಟ್, ಸೀಸ, ಪಾದರಸ, ಆರ್ಸನಿಕ್ ಮತ್ತು ಇತರೇ.
ಎಲೆಕ್ಟ್ರೋಡಿಐಯನೈಸೇಷನ್:[೮][೪](ವಿದ್ಯುತ್ ಹರಿಸಿದ ಸರಳುಗಳ ಮೂಲಕ ಜಲಶುದ್ದೀಕರಣ) ನೀರನ್ನು ಧನಾತ್ಮಕ ವಿದ್ಯುದ್ವಾರ ಮತ್ತು ಋಣಾತ್ಮಕ ವಿದ್ಯುದ್ವಾರಗಳ ನಡುವೆ ಹರಿಯ ಬಿಡಲಾಗುತ್ತದೆ. ಅಯಾನ್ ವಿನಿಮಯ ರಂಧ್ರದ ತೆಳು ಚರ್ಮಗಳು, ಸಂಸ್ಕರಿಸಲಾದ ನೀರಿನಿಂದ ಕೇವಲ ಧನಾತ್ಮಕ ಅಯಾನುಗಳನ್ನು ಋಣಾತ್ಮಕ ವಿದ್ಯುದ್ವಾರದ ಕಡೆಗೆ ಹಾಗು ಋಣಾತ್ಮಕ ಅಯಾನುಗಳನ್ನು ಧನಾತ್ಮಕ ವಿದ್ಯುದ್ವಾರದ ಕಡೆಗೆ ಹೋಗಲು ಮಾತ್ರ ಅವಕಾಶ ನೀಡುತ್ತದೆ. ಅಯಾನು ವಿನಿಮಯ ಸಂಸ್ಕರಣದೊಂದಿಗೆ ಹೋಲಿಸಿದಾಗ, ಅತ್ಯಂತ ಶುದ್ಧವಾದ ನಿರಯಾನೀಕರಿಸಿದ ನೀರನ್ನು ಸ್ವಲ್ಪ ಕೆಳಮಟ್ಟದ ಶೋಧನೆಯಿಂದ ಉತ್ಪಾದಿಸಲಾಗಿರುತ್ತದೆ. ನೀರಿನಿಂದ ಸಂಪೂರ್ಣವಾಗಿ ಅಯಾನುಗಳನ್ನು ತೆಗೆದುಹಾಕುವುದಕ್ಕೆ ವಿದ್ಯುದ್ವಿಗಲನ ಎಂದು ಕರೆಯುತ್ತಾರೆ. ನೀರನ್ನು ಹೆಚ್ಚಾಗಿ ರಿವರ್ಸ್ ಒಸ್ಮೊಸಿಸ್ ನೊಂದಿಗೆ ಪೂರ್ವಸಜ್ಜಿತಗೊಂಡ ಕ್ರಮದಲ್ಲಿ ಸಂಸ್ಕರಿಸಲಾಗುತ್ತದೆ. ಇದು ಅಯಾನುರಹಿತ ಕಾರ್ಬನಿಕ ಮಲಿನಕಾರಿ ಗಳನ್ನು ತೆಗೆದುಹಾಕುವ ಘಟಕವಾಗಿದೆ.
ಇತರ ಯಾಂತ್ರಿಕ ಮತ್ತು ಜೈವಿಕ ವಿಧಾನಗಳು
ಬದಲಾಯಿಸಿಬೃಹತ್ ಪ್ರಮಾಣದ ನೀರು ಸಂಸ್ಕರಣೆಯಲ್ಲಿ ಬಳಸಲಾದ ಅನೇಕ ವಿಧಾನಗಳ ಜೊತೆಯಲ್ಲಿ, ಕಲುಷಿತ ನೀರನ್ನು ಸಂಸ್ಕರಿಸಲು ಅನೇಕ ಅಲ್ಪ ಪ್ರಮಾಣದ ಕಡಿಮೆ (ಅಥವಾ ಸಂಸ್ಕರಿತ)-ಕಲ್ಮಶಗೊಳಿಸುವ ವಿಧಾನಗಳನ್ನೂ ಕೂಡ ಬಳಸಲಾಗುತ್ತದೆ. ಈ ವಿಧಾನಗಳು ಯಾಂತ್ರಿಕ ಮತ್ತು ಜೈವಿಕ ಕ್ರಿಯೆಯನ್ನು ಆಧರಿಸಿರುವ ವಿಧಾನಗಳನ್ನು ಒಳಗೊಂಡಿವೆ. ಸಾಮಾನ್ಯ ಅವಲೋಕನ:
- ಯಾಂತ್ರಿಕ ವ್ಯವಸ್ಥೆಗಳು: ಮರಳಿನ ಶೋಧನೆ, ಲಾವಾ ಶೋಧಕ ವ್ಯವಸ್ಥೆಗಳು ಮತ್ತು UV-ವಿಕಿರಣವನ್ನು ಆಧರಿಸಿರುವ ವ್ಯವಸ್ಥೆಗಳು)
- ಜೈವಿಕ ವ್ಯವಸ್ಥೆಗಳು
- ಘಟಕ ವ್ಯವಸ್ಥೆಗಳು, ನಿರ್ಮಿಸಲಾದ ನೀರು ಬಸಿಯುವ ಪ್ರದೇಶಗಳು ಮತ್ತು ಸಂಸ್ಕರಣ ಕೊಳಗಳು (ಕೆಲವೊಮ್ಮೆ ತಪ್ಪಾಗಿ ಜೊಂಡು ಹುಲ್ಲು ಅಥವಾ ಹಸಿರು ಗೋಡೆಗಳು ಎಂದು ಕರೆಯಲಾಗುತ್ತದೆ) ಹಾಗು
- ಘನೀಕರಿಸುವ ವ್ಯವಸ್ಥೆಗಳು , ಸಕ್ರಿಯ ಕೆಸರು ವ್ಯವಸ್ಥೆಗಳು, ಬಯೋ ರೋಟರ್(ತ್ಯಾಜ್ಯ ನೀರಿನ ಶುದ್ದೀಕರಣ ತಂತ್ರಜ್ಞಾನ)ಗಳು, ಏರೋಬಿಕ್ ಬಯೋ ಫಿಲ್ಟರ್ಸ್ ಮತು ಆನ್ ಏರೋಬಿಕ್ ಬಯೋ ಫಿಲ್ಟರ್ಸ್ (ಕೈಗಾರಿಕೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ವಿಧಾನಗಳು), ಮುಳುಗಿಸಿ ಗಾಳಿಗೊಡ್ಡಲಾದ ಶೋಧಕಗಳು, ಮತ್ತು ಬಯೋ ರೋಲ್ ಸ್ [೯]
ಸಂಪರ್ಪಕವಾಗಿ ನೀರನ್ನು ಶುದ್ಧಗೊಳಿಸಲು ಸಾಮಾನ್ಯವಾಗಿ ಇವುಗಳಲ್ಲಿ ಅನೇಕ ವ್ಯವಸ್ಥೆಗಳು ಒಟ್ಟಿಗೆ ಸೇರಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ವ್ಯವಸ್ಥೆಗಳ ಜೊತೆಗೂಡಿಸುವಿಕೆಯು ಎರಡು ಅಥವಾ ಮೂರು ಹಂತಗಳಲ್ಲಿ ಮಾಡಲಾಗುತ್ತದೆ. ಇದನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶೋಧನೆ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ತೃತೀಯ ವರ್ಗದ ಶೋಧನೆಯನ್ನು ಕೂಡ ಸೇರಿಸಲಾಗುತ್ತದೆ.
ರೋಗಾಣುಮುಕ್ತಗೊಳಿಸುವಿಕೆ
ಬದಲಾಯಿಸಿರೋಗಾಣು ಮುಕ್ತಗೊಳಿಸುವಿಕೆಯನ್ನು, ನೀರಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಶೋಧಿಸಿ ತೆಗೆದುಹಾಕುವ ಮೂಲಕ ಮತ್ತು ಕುಡಿಯುವ ನೀರಿನ ಶುದ್ಧಿಕರಣದ ಕೊನೆಯ ಹಂತದಲ್ಲಿ, ನೀರಿಗೆ ರೋಗಾಣು ಮುಕ್ತಗೊಳಿಸುವ ರಾಸಾಯನಿಕಗಳನ್ನು ಸೇರಿಸುವ ಮೂಲಕ ಮಾಡಬಹುದಾಗಿದೆ. ನೀರು ಶೋಧಕಗಳ ಮೂಲಕ ಬರಬಹುದಾದ ಯಾವುದೇ ರೋಗಕಾರಕವನ್ನು ಕೊಲ್ಲುವ ಸೊಂಕುಗಳೆಕವಾಗಿರುತ್ತದೆ. ಸಂಭಾವ್ಯ ರೋಗಕಾರಕಗಳು , ಎಸ್ಚರೀಶಿಯ ಕೋಲಿ , ಕ್ಯಾಂಪಿಲೊಬ್ಯಾಕ್ಟರ್ ಮತ್ತು ಶಿಗೆಲಾ , ಮತ್ತು ಪ್ರೋಟೋಸೋವ ಗಳನ್ನು ಒಳಗೊಂಡಂತೆ, ಗಿಯಾರ್ಡಿಯ ಲ್ಯಾಮ್ಲಿಯ ಮತ್ತು ಇತರ ಕ್ರಿಪ್ಟೊಸ್ಪೋರ್ಡಿಯ ವನ್ನು ಒಳಗೊಂಡಂತೆ, ವೈರಸ್ ಗಳನ್ನು, ಬ್ಯಾಕ್ಟೀರಿಯಗಳನ್ನು ಒಳಗೊಂಡಿದೆ. ಅಭಿವೃದ್ಧಿ ಹೊಂದಿರುವ ಬಹುಪಾಲು ರಾಷ್ಟ್ರಗಳಲ್ಲಿ, ಸಾರ್ವಜನಿಕ ನೀರು ಸರಬರಾಜುಗಳು , ವಿತರಿಸುವ ವ್ಯವಸ್ಥೆಯುದ್ದಕ್ಕೂ ಉಳಿದ ಸೊಂಕುಗಳೆಕ ಕಾರಕಗಳನ್ನು ಹೊಂದಿರಬೇಕು. ನೀರು ಗ್ರಾಹಕನನ್ನು ತಲುಪುವ ಮೊದಲು ಕೆಲವು ದಿನಗಳ ವರೆಗೆ ಈ ವ್ಯವಸ್ಥೆಯಲ್ಲಿ ಉಳಿದುಕೊಂಡಿರುತ್ತದೆ. ಯಾವುದೇ ರಾಸಾಯನಿಕ ಸೋಂಕು ನಿವಾರಣಾಕಾರಿಯ ಪರಿಚಯವನ್ನು ಅನುಸರಿಸಿ, ನೀರನ್ನು ಸಾಮಾನ್ಯವಾಗಿ ತಾತ್ಕಾಲಿಕ ಸಂಗ್ರಹಣೆಯಲ್ಲಿ ಇರಿಸಲಾಗುತ್ತದೆ - ಇದನ್ನು ಹೆಚ್ಚಾಗಿ ಕಾಂಟ್ಯಾಕ್ಟ್ ಟ್ಯಾಂಕ್ ಅಥವಾ ಸ್ವಚ್ಛವಾದ ಬಾವಿ ಎಂದು ಕರೆಯಲಾಗುತ್ತದೆ. ಇದು ಸೋಂಕು ನಿವಾರಣ ಕ್ರಿಯೆ ಸಂಪೂರ್ಣವಾಗಲು ಅವಕಾಶ ನೀಡುತ್ತದೆ.
ಕ್ಲೋರೀನ್ ಸೋಂಕುನಿವಾರಣ
ಬದಲಾಯಿಸಿಅತ್ಯಂತ ಸಾಮಾನ್ಯವಾದ ಸೋಂಕು ನಿವಾರಣ ವಿಧಾನವು, ಕ್ಲೋರೀನ್ ನ ಕೆಲವು ರೂಪವನ್ನು ಅಥವಾ ಅದರ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ , ಕ್ಲೋರಮೈನ್ ಅಥವಾ ಕ್ಲೋರೀನ್ ಡೆಆಕ್ಸೈಡ್. ಕ್ಲೋರೀನ್ , ಎಂಬುದು ಪ್ರಬಲವಾದ ಆಕ್ಸಿಡೀಕಾರಕವಾಗಿದ್ದು, ಇದು ಅತಿ ವೇಗವಾಗಿ ಅನೇಕ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ. ಕ್ಲೋರೀನ್ ವಿಷ ಅನಿಲವಾಗಿರುವುದರಿಂದ , ಅದರ ಬಳಕೆಯೊಂದಿಗೆ ವಿಷವನ್ನು ಬಿಡುಗಡೆಮಾಡುವ ಅಪಾಯವಿರುತ್ತದೆ. ಈ ಸಮಸ್ಯೆಯನ್ನು ಸೋಡಿಯಂ ಹೈಪೊಕ್ಲೋರೈಟ್ ನ ಬಳಕೆಯಿಂದ ತಡೆಗಟ್ಟಬಹುದು. ಹೋಲಿಕೆಯ ದೃಷ್ಟಿಯಿಂದ ಇದು ಅಗ್ಗದ ದ್ರಾವಣವಾಗಿದ್ದು, ನೀರಿನಲ್ಲಿ ಕರಗಿದಾಗ ಅಸಂಯುಕ್ತ ಕ್ಲೋರೀನ್ ಅನ್ನು ಬಿಡುಗಡೆಮಾಡುತ್ತದೆ. ಸಾಮಾನ್ಯ ಉಪ್ಪಿನ ದ್ರಾವಣಗಳನ್ನು ವಿದ್ಯುದ್ವಿಚ್ಛೇದನಕ್ಕೆ ಒಳಪಡಿಸುವ ಮೂಲಕ ನೆಲದ ಮೇಲೆ ಕ್ಲೋರೀನ್ ದ್ರಾವಣಗಳನ್ನು ಉತ್ಪಾದಿಸಬಹುದಾಗಿದೆ. ಕ್ಲೋರೀನ್ ಅನ್ನು ನೀರಿನೊಂದಿಗೆ ಸಂಪರ್ಕಿಸಿದಾಗ ಬಿಡುಗಡೆಯಾಗುವ ಅನಿಲವನ್ನು, ಘನರೂಪದಲ್ಲಿರುವ ಕ್ಯಾಲ್ಸಿಯಂ ಹೈಪೊಕ್ಲೋರೈಟ್ ಹೊರಹಾಕುತ್ತದೆ. ಆದರೂ, ಘನರೂಪದಲ್ಲಿರುವ ವಸ್ತುಗಳನ್ನು ತೆಗೆದುಹಾಕುವಾಗ, ತೆರೆಯುವ ಬ್ಯಾಗ್ ಗಳ ಮೂಲಕ ಕೈಗಳಿಂದ ತಿರುಗಿಸುತ್ತಿರಬೇಕು. ಅಲ್ಲದೇ ಗ್ಯಾಸ್ ಸಿಲಿಂಡರ್ ನ ಬಳಕೆಯ ಬದಲು ಸುರಿಯಬೇಕು ಅಥವಾ ಸುಲಭವಾಗಿ ಸ್ವಯಂಕಾರ್ಯ ನಿರ್ವಹಿಸಬಲ್ಲವನ್ನು ಬಿಳಿದಾಗಿಸಬೇಕು. ದ್ರವರೂಪದ ಸೋಡಿಯಂ ಹೈಪೊಕ್ಲೋರೈಟ್ ನ ಉತ್ಪತ್ತಿಯು ಅಗ್ಗವಾಗಿದೆ. ಅದಲ್ಲದೇ ಅನಿಲ ಅಥವಾ ಘನರೂಪದ ಕ್ಲೋರೀನ್ ನ ಬಳಕೆಗಿಂತ ಸುರಕ್ಷಿತವಾಗಿರುತ್ತದೆ. ಕ್ಲೋರೀನ್ ನ ಎಲ್ಲಾ ರೂಪಗಳನ್ನು ಅವುಗಳ ನ್ಯೂನತೆಯ ಹೊರತಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಒಂದು ಕೊರತೆಯೆಂದರೆ, ಯಾವುದೇ ಮೂಲದಿಂದ ಪಡೆದ ಕ್ಲೋರೀನ್, ಪ್ರಬಲವಾದ ಹಾನಿಕಾರಕ ರಾಸಾಯನಿಕ ಉಪವಸ್ತುಗಳಾದ ಟ್ರಿಹ್ಯಾಲೊಮಿಥೇನ್ (THMs) ಮತ್ತು ಹಾಲೊಆಕ್ಟಿಕ್ ಆಮ್ಲs (HAAs) ಅನ್ನು ನಿರ್ಮಿಸಲು ನೀರಿನಲ್ಲಿ ಸಹಜವಾದ ಕಾರ್ಬನಿಕ ಸಂಯುಕ್ತಗಳೊಡನೆ ಪ್ರತಿಕ್ರಿಯಿಸುತ್ತದೆ. ಇವುಗಳೆರೆಡು ದೊಡ್ಡ ಮಟ್ಟದಲ್ಲಿ ಕ್ಯಾನ್ಸರ್ ಜನಕವಾಗಿವೆ. ಅಲ್ಲದೇ ಅಮೇರಿಕ ಸಂಯುಕ್ತ ಸಂಸ್ಥಾನದ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (EPA) ಮತ್ತು UK ಯಲ್ಲಿ ಕುಡಿಯುವ ನೀರಿನ ಪರೀಕ್ಷಾಧಿಕಾರಿಯಿಂದ ನಿಯಂತ್ರಿಸಲ್ಪಡುತ್ತದೆ. ನೀರಿಗೆ ಕ್ಲೋರೀನ್ ಅನ್ನು ಸೇರಿಸುವ ಮೊದಲೇ ಅನೇಕ ಸೂಕ್ಷ್ಮ ಜೀವಿಗಳನ್ನು ತೆಗೆದುಹಾಕುವ ಮೂಲಕ , THMs ಹೈಡ್ರಾಲಿನ್ ಬದಲಾಗಿ ಹಾಲ್ಜಿನ್ ಮತ್ತು ಹಾಲೊಆಕ್ಟಿಕ್ ಆಮ್ಲದ ಉತ್ಪತ್ತಿ ಕಡಿಮೆಮಾಡಬಹುದಾಗಿದೆ. ಕ್ಲೋರೀನ್, ಬ್ಯಾಕ್ಟೀರಿಯವನ್ನು ಕೊಲ್ಲುವುದರಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೂ ಕೂಡ, ನೀರಿನಲ್ಲಿರುವ ಪ್ರೋಟೋಸೋವದ ರೂಪಗಳ ವಿರುದ್ಧ ಸೀಮಿತ ಪರಿಣಾಮ ಹೊಂದಿದೆ. (ಗಿಯಾರ್ಡಿಯ ಲ್ಯಾಂಬ್ಲಿಯ ಮತ್ತು ಕ್ರಿಪ್ಟೊಸ್ಪೋರ್ಡಿಯಂ , ಇವೆರೆಡು ರೋಗಕಾರಕಗಳಾಗಿವೆ).
ಕ್ಲೋರೀನ್ ಡಯಾಕ್ಸೈಡ್ ಸೋಂಕುಗಳೆತ
ಬದಲಾಯಿಸಿಕ್ಲೋರೀನ್ ಡಯಾಕ್ಸೈಡ್, ಧಾತುರೂಪದ ಕ್ಲೋರೀನ್ ಗಿಂತ ಅತ್ಯಂತ ವೇಗವಾದ ಸೋಂಕುನಿವಾರಣಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೂ, ಹೋಲಿಕೆಯ ದೃಷ್ಟಿಯಿಂದ ಇದನ್ನು ವಿರಳವಾಗಿ ಬಳಸಲಾಗುತ್ತದೆ. ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಅಧಿಕ ಮೊತ್ತದ ಕ್ಲೋರೈಟ್ ಅನ್ನು ಸೃಷ್ಟಿಸಬಹುದು. ಕ್ಲೋರೈಟ್ ಉಪ ಉತ್ಪನ್ನವಾಗಿದ್ದು, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕಡಿಮೆ ಅವಕಾಶ ಮಟ್ಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಕ್ಲೋರೀನ್ ಡಯಾಕ್ಸೈಡ್ ಅನ್ನು ಜಲೀಯ ದ್ರಾವಣದ ರೂಪದಲ್ಲಿ ಸರಬರಾಜು ಮಾಡಲಾಗುತ್ತದೆ.ಅಲ್ಲದೇ ಇದನ್ನು ಅನಿಲದಿಂದ ಉಂಟಾಗಬಹುದಾದ ಸಮಸ್ಯೆಯನ್ನು ತಡೆಗಟ್ಟಲು ನೀರಿಗೆ ಸೇರಿಸಲಾಗುತ್ತದೆ; ಕ್ಲೋರೀನ್ ಡಯಾಕ್ಸೈಡ್ ಅನಿಲದ ಶೇಖರಣೆ ಸಹಜವಾಗಿ ಸಿಡಿಯಬಹುದು.
ಕ್ಲೋರಮೈನ್ ಸೋಂಕುಗಳೆತ
ಬದಲಾಯಿಸಿಕ್ಲೋರಮೈನ್ ಅನ್ನು ಸೋಂಕುನಿವಾರಣಕಾರಿಯಂತೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಕ್ಲೋರಮೈನ್ , ಆಕ್ಸಿಡೀಕಾರಕದಷ್ಟು ಪ್ರಬಲವಾಗಿಲ್ಲದಿದ್ದರೂ ಕೂಡ ಇದು ಅಸಂಯುಕ್ತ ಕ್ಲೋರೀನ್ ಗಿಂತ ದೀರ್ಘಕಾಲದ ಉಳಿಕೆಯನ್ನು ಒದಗಿಸುತ್ತದೆ. ಅಲ್ಲದೇ THMs ಅಥವಾ ಹಾಲೊಆಕ್ಟಿಕ್ ಆಮ್ಲಗಳನ್ನು ಬಿಡುಗಡೆಮಾಡುವುದಿಲ್ಲ. ನೀರಿಗೆ ಕ್ಲೋರೀನ್ ಅನ್ನು ಹಾಕಿದ ನಂತರ ಅದಕ್ಕೆ ಅಮೋನಿಯವನ್ನು ಸೇರಿಸುವ ಮೂಲಕ ಕ್ಲೋರೀನ್ ಅನ್ನು ಕ್ಲೋರಮೈನ್ ಆಗಿ ಬದಲಾಯಿಸಬಹುದು. ಕ್ಲೋರೀನ್ ಮತ್ತು ಅಮೋನಿಯ, ಕ್ಲೋರಮೈನ್ ಅನ್ನು ಸೃಷ್ಟಿಸಲು ಪ್ರತಿಕ್ರಿಯಿಸುತ್ತವೆ. ನೀರು ಹಂಚಿಕೆ ವ್ಯವಸ್ಥೆಗಳು, ಕ್ಲೋರಮೈನ್ ಗಳೊಂದಿಗೆ ನೈಟ್ರೀಟಿಕರಣವಾಗುವ ಮೂಲಕ ಸೋಂಕುರಹಿತವಾಗಿರುತ್ತವೆ. ಅಮೋನಿಯವನ್ನು ಬ್ಯಾಕ್ಟೀರಿಯ ಬೆಳವಣಿಗೆಗೆ ಪೌಷ್ಟಿಕಾಂಶದಂತೆ ಬಳಸಲಾಗುತ್ತದೆ, ಇದರ ಜೊತೆಯಲ್ಲಿ ನೈಟ್ರೇಟ್ ಉಪ ವಸ್ತುವಿನಂತೆ ಉತ್ಪತ್ತಿಯಾಗುತ್ತದೆ.
ಓಸೋನ್ ಸೋಂಕುಗಳೆತ
ಬದಲಾಯಿಸಿO3 ಎಂಬುದು ಅಸ್ಥಿರವಾದ ಅಣುವಾಗಿದ್ದು, ತಕ್ಷಣವೇ ಪ್ರಬಲವಾದ ಆಕ್ಸಿಡೀಕಾರಕವನ್ನು ಒದಗಿಸುವ ಮೂಲಕ ಆಮ್ಲಜನದ ಒಂದು ಪರಮಾಣುವನ್ನು ನೀಡುತ್ತದೆ. ಇದು ಬಹುಪಾಲು ಜಲವಾಹಿತ ಜೀವಿಗಳಿಗೆ ವಿಷವಾಗಿದೆ. ಇದು ಯುರೋಪ್ ನಲ್ಲಿ ಹೆಚ್ಚಾಗಿ ಬಳಸುವಂತಹ ಅತ್ಯಂತ ಪ್ರಬಲ, ಸಂಪೂರ್ಣ ರೋಹಿತ ಸೋಂಕುನಿವಾರಕವಾಗಿದೆ. ಇದು ಕೋಶದ ರೂಪದಲ್ಲಿರುವ ಹಾನಿಕಾರಕ ಪ್ರೋಟೋಸೋವ ಗಳನ್ನು ಕಾರ್ಯನಿರ್ವಹಿಸದಂತೆ ಮಾಡುವ ಪ್ರಭಾವಶಾಲಿ ವಿಧಾನವಾಗಿದೆ. ಅಲ್ಲದೇ ಇದು ಬಹುಪಾಲು ಎಲ್ಲಾ ಇತರ ರೋಗಕಾರಕಗಳ ವಿರುದ್ಧವು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಓಸೋನ್ ಅನ್ನು ನೇರಳಾತೀತ ಬೆಳಕಿನ ಮೂಲಕ ಆಮ್ಲಜನಕವನ್ನು ಸಾಗಿಸುವುದರಿಂದ ಮಾಡಲಾಗುತ್ತದೆ ಅಥವಾ "ತಣ್ಣನೆಯ" ವಿದ್ಯುತ್ ಹರಿಬಿಡುವ ಮೂಲಕ ಮಾಡಲಾಗುತ್ತದೆ. ಓಸೋನ್ ಅನ್ನು ಸೋಂಕುನಿವಾರಕವಾಗಿ ಬಳಸಲು ಅದನ್ನು ಭೂಮಿಯ ಮೇಲೆ ನಿರ್ಮಿಸಬೇಕು ಹಾಗು ಅದನ್ನು ಗುಳ್ಳೆಗಳ ಮೂಲಕ ನೀರಿಗೆ ಸೇರಿಸಬೇಕು. ಓಸೋನ್ ನ ಪ್ರಯೋಜನಗಳು, ಕೆಲವು ಅಪಾಯಕಾರಿ ಉಪ ಉತ್ಪನ್ನಗಳ ಉತ್ಪಾದನೆಯನ್ನು (ಕ್ಲೋರಿನೀಕರಣ ದೊಂದಿಗೆ ಹೋಲಿಸಿದಾಗ) ಹಾಗು ಓಸೋನೀಕರಣ ದಿಂದ ಉತ್ಪಾದಿಸಲಾಗುವ ರುಚಿ ಮತ್ತು ಸುವಾಸನೆ ಒಳಗೊಂಡಿರುತ್ತದೆ. ಓಸೋನೀಕರಣದಿಂದ ಕೆಲವು ಉಪ ಉತ್ಪನ್ನಗಳು ಹುಟ್ಟಿಕೊಂಡರೂ ಕೂಡ, ಓಸೋನ್ ನ ಬಳಕೆಯು ನಿರೀಕ್ಷಿತ ಕ್ಯಾನ್ಸರ್ ಜನಕವಾದ ಬ್ರೋಮೇಟ್ಅನ್ನು ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ ಎಂಬುದನ್ನು ಕಂಡು ಹಿಡಿಯಲಾಗಿದೆ. ಆದರು ಸಂಸ್ಕರಿಸಲಾದ ನೀರಿನಲ್ಲಿ ಸ್ವಲ್ಪ ಪ್ರಮಾಣದ ಬ್ರೋಮೈನ್ ಇರುತ್ತದೆ. ಓಸೋನ್ ನ ಮತ್ತೊಂದು ಪ್ರಮುಖ ಅನಾನುಕೂಲವೆಂದರೆ, ಅದು ಸೋಂಕುನಿವಾರಕವನ್ನು ನೀರಿನಲ್ಲಿ ಉಳಿಯಲು ಬಿಡುವುದಿಲ್ಲ. ಓಸೋನ್ ಅನ್ನು 1906 ರಿಂದ ಕುಡಿಯುವ ನೀರು ಘಟಕಗಳಲ್ಲಿ ಮೊದಲನೆ ಕೈಗಾರಿಕ ಓಸೋನೀಕರಿಸುವ ಘಟಕವನ್ನು ಫ್ರಾನ್ಸ್ ನ ನೈಸ್ ನಲ್ಲಿ ನಿರ್ಮಿಸಿದಾಗಿನಿಂದ ಬಳಸಲಾಗುತ್ತಿದೆ. U.S ನ ಆಹಾರ ಮತ್ತು ಔಷಧಿ ಆಡಳಿತವು ಓಸೋನ್ ಅನ್ನು ಸುರಕ್ಷಿತ ಎಂದು ಒಪ್ಪಿಕೊಂಡಿದೆ; ಅಲ್ಲದೇ ಇದನ್ನು ಸಂಸ್ಕರಣೆ, ಶೇಖರಣೆ ಮತ್ತು ಆಹಾರದ ಕಾರ್ಯ ವಿಧಾನಗಳಲ್ಲಿ ಪ್ರತಿ ಸೂಕ್ಷ್ಮ ಜೀವಿ ವಿಜ್ಞಾನದಂತೆ ಬಳಸಲಾಗುತ್ತಿದೆ.
ನೇರಳಾತೀತ ಸೋಂಕುಗಳೆತ
ಬದಲಾಯಿಸಿನೀರು ಕಡಿಮೆ ಮಟ್ಟದ ಬಣ್ಣವನ್ನು ಹೊಂದಿರುವ ವರೆಗು ನೇರಳಾತೀತ ಬೆಳಕು , ಕೋಶಗಳನ್ನು ಕಾರ್ಯನಿರ್ವಹಿಸದಂತೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಿಂದಾಗಿ ನೀರಿನಲ್ಲಿರುವ ಬಣ್ಣವನ್ನು ಹೀರಿಕೊಳ್ಳದೇ UV ಸಾಗಬಹುದಾಗಿದೆ. UV ವಿಕಿರಣಗಳ ಬಳಕೆಯ ಪ್ರಮುಖ ಅನಾನುಕೂಲತೆಯೆಂದರೆ, ಓಸೋನ್ ಸಂಸ್ಕರಣದಂತೆ ಇದು ನೀರಿನಲ್ಲಿ ಸೋಂಕುನಿವಾರಕವನ್ನು ಉಳಿಯಲು ಬಿಡುವುದಿಲ್ಲ. ಓಸೋನ್ ಮತ್ತು UV ವಿಕಿರಣಗಳು ನೀರಿನಲ್ಲಿ ಸೋಂಕುನಿವಾರಕವನ್ನು ಉಳಿಯಲು ಬಿಡುವುದಿಲ್ಲವಾದ್ದರಿಂದ ಕೆಲವೊಮ್ಮೆ ಅನಿವಾರ್ಯವಾಗಿ ಅವುಗಳನ್ನು ಬಳಸಿದ ನಂತರ ಉಳಿಯುವ ಸೋಂಕುನಿವಾರಕವನ್ನು ಸೇರಿಸಬೇಕಾಗುತ್ತದೆ. ಇದನ್ನು ಹೆಚ್ಚಾಗಿ ಕ್ಲೋರಮೈನ್ ಗಳನ್ನು ಸೇರಿಸುವ ಮೂಲಕ ಮಾಡಲಾಗುತ್ತದೆ. ಇದು ಮೇಲೆ ಚರ್ಚಿಸಲಾಗಿರುವ ಪ್ರಮುಖ ಸೋಂಕುನಿವಾರಕವಾಗಿದೆ. ಈ ರೀತಿಯಲ್ಲಿ ಬಳಸಿದಾಗ ಕ್ಲೋರಮೈನ್, ಪರಿಣಾಮಕಾರಿಯಾಗಿ ಉಳಿಯುವ ಸೋಂಕುನಿವಾರಕವನ್ನು ಒದಗಿಸುತ್ತದೆ. ಅಲ್ಲದೇ ಇದರ ಜೊತೆಯಲ್ಲಿ ಕ್ಲೋರಿನೀಕರಣದ ಕೆಲವು ಋಣಾತ್ಮಕ ಪ್ರಭಾವವನ್ನು ಮಾತ್ರ ಬೀರುತ್ತದೆ.
ಹೈಡ್ರೊಜನ್ ಪರಾಕ್ಸೈಡ್ ಸೋಂಕುಗಳೆತ
ಬದಲಾಯಿಸಿಇದು ಕೂಡ ಓಸೋನ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಫಾರ್ಮಿಕ್ ಆಮ್ಲ ದಂತಹ ಸಕ್ರಿಯಕಾರಿಗಳನ್ನು ಹೆಚ್ಚಾಗಿ ಸೋಂಕುಗಳೆತದ ಸಾಮರ್ಥ್ಯ ಹೆಚ್ಚಿಸಲು ಸೇರಿಸಲಾಗುತ್ತದೆ. ಇದರ ಅನಾನುಕೂಲತೆಯೆಂದರೆ, ಇದು ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ, ಅಧಿಕ ಡೋಸೇಜ್ ನಲ್ಲಿ ಸಸ್ಯವಿಷಕರವಾಗಿರುತ್ತದೆ. ಅಲ್ಲದೇ ಇದು ಶುದ್ಧೀಕರಿಸುವ ನೀರಿನಲ್ಲಿ pH ಅನ್ನು ಕಡಿಮೆ ಮಾಡುತ್ತದೆ.
ಸೋಂಕುಗಳೆತವನ್ನು ಸಾಗಿಸುವ ವಿವಿಧ ವಿಧಾನಗಳು
ಬದಲಾಯಿಸಿತುರ್ತುಪರಿಸ್ಥಿತಿಯಲ್ಲಿ ಸೋಂಕುಗಳೆತಕ್ಕಾಗಿ ಲಭ್ಯವಿರುತ್ತವೆ ಅಥವಾ ದೂರದ ಪ್ರದೇಶಗಳಲ್ಲಿ ಲಭ್ಯವಿರುತ್ತವೆ. ರುಚಿ, ಸುವಾಸನೆ, ರೂಪ ದಂತಹ ಸದಭಿರುಚಿಯ ಪರಿಗಣನೆಗಳಿಗಿಂತ ಸೋಂಕುಗಳೆತ ಪ್ರಮುಖ ಗುರಿಯಾಗಿದೆ. ಅಲ್ಲದೇ ರಾಸಾಯನಿಕ ಮಾಲಿನ್ಯವನ್ನು ಕಂಡುಹಿಡಿಯುವಿಕೆ, ಕುಡಿಯುವ ನೀರಿನ ಅಲ್ಪಾವಧಿಯ ಸುರಕ್ಷೆಗೆ ತೊಂದರೆ ಮಾಡುವುದಿಲ್ಲ.
ಸೌರ ನೀರು ಸೋಂಕುಗಳೆತ
ಬದಲಾಯಿಸಿನೀರನ್ನು ಸೋಂಕುರಹಿತವಾಗಿಸುವ ಒಂದು ಅಗ್ಗದ ವಿಧಾನವನ್ನು ಹೆಚ್ಚಾಗಿ ಸ್ಥಳೀಯವಾಗಿ ದೊರಕುವ ಸೌರ ಸೋಂಕುಗಳೆತ (SODIS)ದೊಂದಿಗೆ ಮಾಡಬಹುದಾಗಿದೆ.[೧೦][೧೧][೧೨][೧೩] ಇದು ಉರುವಲನ್ನು ಆಧರಿಸಿರುವಂತಹ ವಿಧಾನಗಳಂತಿಲ್ಲದೇ, ವಾತಾವರಣದ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ.
ಸೌರ ಸೋಂಕುರಹಿತ ನೀರನ್ನು ಕತ್ತಲೆಯಲ್ಲಿ ಶೇಖರಿಸುವಾಗ ಸಹಜಸ್ಥಿತಿಯ ಸಾಲ್ಮೊನೆಲಾ ಎಂಬ ಬ್ಯಾಕ್ಟೀರೀಯಗಳು ಅತಿವೇಗವಾಗಿ ಪುನರ್ಪುತ್ಪಾದಿಸಲ್ಪಡುತ್ತವೆ. ಇದನ್ನು ಪ್ರತಿ ಮಿಲಿಯನ್ ಗೆ ಹೈಡ್ರೊಜನ್ ಪರಾಕ್ಸೈಡ್ ನ 10 ಭಾಗವನ್ನು ಸೇರಿಸುವ ಮೂಲಕ ನಿಯಂತ್ರಿಸಬಹುದಾಗಿದೆ ಎಂಬುದನ್ನು ಇತ್ತೀಚಿನ ಒಂದು ಅಧ್ಯಯನ ಕಂಡುಕೊಂಡಿದೆ.[೧೪]
ಇತರೇ ಸಂಸ್ಕರಣ ಆಯ್ಕೆಗಳು
ಬದಲಾಯಿಸಿ- ಜಲ ಫ್ಲೋರೈಡೀಕರಣ: ಅನೇಕ ಪ್ರದೇಶಗಳಲ್ಲಿ ದಂತ ಕ್ಷಯ ವನ್ನು ತಡೆಗಟ್ಟಲು ನೀರಿಗೆ ಫ್ಲೋರೈಡ್ಅನ್ನು ಸೇರಿಸಲಾಗುತ್ತದೆ.[೧೫] ಫ್ಲೋರೈಡ್ ಅನ್ನು ಸಾಮಾನ್ಯವಾಗಿ ಸೋಂಕುಗಳೆತ ಕ್ರಿಯೆಯ ನಂತರ ಸೇರಿಸಲಾಗುತ್ತದೆ. U.S. ನಲ್ಲಿ ಫ್ಲೋರೈಡೀಕರಣವನ್ನು ಸಾಮಾನ್ಯವಾಗಿ ಹೆಕ್ಸಫ್ಲೋರೋಸಿಲಿಕ್ ಆಮ್ಲವನ್ನು ಸೇರಿಸುವ ಮೂಲಕ ಮಾಡಲಾಗುತ್ತದೆ,[೧೬]. ಇದು ಫ್ಲೋರೈಡ್ ಅಯಾನುಗಳನ್ನು ನಮ್ಯವಾಗಿಸುವ ಮೂಲಕ ನೀರಿನಲ್ಲಿ ಬೇರ್ಪಡುತ್ತದೆ.[೧೭]
- ನೀರನ್ನು ಸಮಸ್ಥಿತಿಗೆ ತರುವುದು: ಇದು ಗಡಸು ನೀರಿನ ಪ್ರಭಾವವನ್ನು ಕಡಿಮೆ ಮಾಡುವ ವಿಧಾನವಾಗಿದೆ. ನೀರನ್ನು ಕುದಿಯಲು ಇಟ್ಟು ಅದರೊಳಗೆ ಗಡುಸಾದ ಉಪ್ಪನ್ನು ಹಾಕಬೇಕು. ಏಕೆಂದರೆ ಬೈಕಾರ್ಬನೇಟ್ ಅಯಾನುಗಳ ವಿಭಜನೆಯು ಕಾರ್ಬೋನೇಟ್ ಅಯಾನುಗಳನ್ನು ಸೃಷ್ಟಿಸುತ್ತದೆ. ಇದು ಶುದ್ಧವಾದ ಕ್ಯಾಲ್ಸಿಯಂ ನ ದ್ರಾವಣದಿಂದ ಅಥವಾ ಮೆಗ್ನೀಸಿಯಮ್ ಕಾರ್ಬನೇಟ್ ಅನ್ನು ಹರಳಾಗಿಸುತ್ತದೆ. ಗಡುಸಾದ ಉಪ್ಪಿನ ಅತ್ಯಂತ ಹೆಚ್ಚು ಸಾಂದ್ರತೆಯೊಂದಿಗೆ ನೀರನ್ನು, ಸೋಡಿಯಂ ಕಾರ್ಬೊನೇಟ್ (ಸೋಡಿಯಂ ಕಾರ್ಬನೇಟ್) ನಿಂದ ಸಂಸ್ಕರಿಸಬಹುದಾಗಿದೆ. ಇದು ಅಯಾನುವಿನ ಸಾಮಾನ್ಯ ಪ್ರಭಾವದ ಮೂಲಕ ಅತ್ಯಂತ ಶುದ್ಧವಾದ ಕ್ಯಾಲ್ಸಿಯಂ ಕಾರ್ಬನೇಟ್ ಅನ್ನು ಬಿಡುಗಡೆ ಮಾಡಿ ಅಧಿಕ ಉಪ್ಪನ್ನು ಅವಕ್ಷೇಪಿಸುತ್ತದೆ. ಅವಕ್ಷೇಪಿಸಲಾದ ಕ್ಯಾಲ್ಸಿಯಂ ಕಾರ್ಬನೇಟ್ ಅನ್ನು ಸಾಂಪ್ರದಾಯಕವಾಗಿ ದಂತ ಮಂಜನ ತಯಾರಕರಿಗೆ ಮಾರಲಾಗುತ್ತದೆ. ಕೈಗಾರಿಕೆ ಮತ್ತು ಗೃಹಬಳಕೆ ಉದ್ದೇಶದಿಂದ ನೀರನ್ನು ಸಂಸ್ಕರಣ ಮಾಡುವ ಅನೇಕ ವಿಧಾನಗಳು, ಗಡಸು ನೀರಿನ ಪರಿಣಾಮವನ್ನು ಕಡಿಮೆ ಮಾಡಲು (ಸಾಮಾನ್ಯವಾದ ವೈಜ್ಞಾನಿಕ ಒಪ್ಪಿಗೆಯ ಹೊರತಾಗಿ) ಅಯಸ್ಕಾಂತ ಅಥವಾ/ಮತ್ತು ವಿದ್ಯುತ್ ಕ್ಷೇತ್ರಗಳ ಬಳಕೆಯನ್ನು ಒಳಗೊಳ್ಳಬೇಕೆನ್ನಲಾಗಿದೆ. [ಸೂಕ್ತ ಉಲ್ಲೇಖನ ಬೇಕು]
- ಪ್ಲಮ್ ಸಾಲೊವೆನ್ಸಿ ಇಳಿಕೆ: ಸಹಜವಾಗಿ ಕಡಿಮೆ ವಾಹಕತೆ ಇರುವಂತಹ ಆಮ್ಲೀಯ ನೀರಿನ ಪ್ರದೇಶಗಳಲ್ಲಿ (ಉದಾಹರಣೆಗೆ, ಅಗ್ನಿಜನ್ಯ ಶಿಲೆಯ ಮಲೆನಾಡಿನ ಪರ್ವತಗಳ ಮೇಲೆ ಬೀಳುವ ಮಳೆ), ಸೀಸವನ್ನು ನೀರು, ಅದನ್ನು ಸಾಗಿಸುವ ಯಾವುದೇ ಸೀಸದ ಪೈಪಿನಿಂದ ಕರಗಿಸುವಂತಹ ಸಾಮರ್ಥ್ಯ ಹೊಂದಿರಬಹುದು. ಅಲ್ಪ ಪ್ರಮಾಣದ ಫಾಸ್ಫೇಟ್ ಅಯಾನುವನ್ನು ಸೇರಿಸುವುದರಿಂದ ಮತ್ತು pH ಅನ್ನು ಹೆಚ್ಚಿಸುವುದರಿಂದ, ನಿಧಾನವಾಗಿ ಎರಡು , ಪೈಪ್ ನ ಒಳಗೆ ಕರಗದಂತಹ ಸೀಸದ ಉಪ್ಪನ್ನು ಸೃಷ್ಟಿಸುವ ಮೂಲಕ ಪ್ಲಮ್ ಸಾಲ್ವೆನ್ಸಿಯನ್ನು ಕಡಿಮೆ ಮಾಡುತ್ತದೆ.
- ರೇಡಿಯಮ್ ತೆಗೆಯುವಿಕೆ: ಕೆಲವು ಅಂತರ್ಜಲ ಮೂಲಗಳು ರೇಡಿಯಮ್ ಅನ್ನು ಒಳಗೊಂಡಿರುತ್ತವೆ. ಇದು ವಿಕಿರಣಶೀಲ ರಾಸಾಯನಿಕ ಘಟಕವಾಗಿದೆ. ವಿಶಿಷ್ಟ ಮೂಲಗಳು ಅನೇಕ ಅಂತರ್ಜಲ ಮೂಲಗಳನ್ನು ಒಳಗೊಂಡಿರುತ್ತವೆ. ಇಲಿನಾಯ್ಸ್ ನಲ್ಲಿರುವ ಇಲಿನಾಯ್ಸ್ ನದಿಯ ಉತ್ತರದ ಭಾಗ. ಅಯಾನು ವಿನಿಮಯದ ಮೂಲಕ ಅಥವಾ ನೀರನ್ನು ಸಮಸ್ಥಿತಿಗೆ ತರುವ ಮೂಲಕ ರೇಡಿಯಮ್ ಅನ್ನು ತೆಗೆದುಹಾಕಬಹುದು. ಆದರೂ, ಬ್ಯಾಕ್ ಫ್ಲಶ್ ಅಥವಾ ಉತ್ಪಾದಿಸಲಾದ ಕೆಸರು ಕೆಳ ಮಟ್ಟದ ವಿಕಿರಣಶೀಲ ತ್ಯಾಜ್ಯವಾಗಿದೆ.
- ಫ್ಲೋರೈಡ್ ಅನ್ನು ತೆಗೆಯುವಿಕೆ: ಅನೇಕ ಪ್ರದೇಶಗಳಲ್ಲಿ ಫ್ಲೋರೈಡ್ ಅನ್ನು ನೀರಿಗೆ ಬೆರೆಸಿದರೂ ಕೂಡ , ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಮೂಲ ನೀರಿನಲ್ಲಿಯೇ ಸಹಜವಾಗಿ ಅಧಿಕ ಪ್ರಮಾಣದ ಫ್ಲೋರೈಡ್ ಇರುತ್ತದೆ. ಅಧಿಕ ಪ್ರಮಾಣವು ವಿಷವಾಗಬಹುದು ಅಥವಾ ಅನಪೇಕ್ಷಿತ ಸೌಂದರ್ಯವರ್ಧಕ ಸಮಸ್ಯೆಗಳನ್ನು ಉಂಟು ಮಾಡಬಹುದು, ಉದಾಹರಣೆಗೆ ಹಲ್ಲಿನ ಮೇಲೆ ಕಲೆಯುಂಟು ಮಾಡಬಹುದು. ಫ್ಲೋರೈಡ್ ಅನ್ನು ಕ್ಯಾನ್ಸರ್ ಜನಕ ಎಂದು ಕೂಡ ಕರೆಯಲಾಗುತ್ತದೆ. ಸಕ್ರಿಯ ಅಲ್ಯೂಮೀನಿಯಂ ಆಕ್ಸೈಡ್ ನೊಂದಿಗೆ ಸಂಸ್ಕರಣದ ಮೂಲಕ ಫ್ಲೋರೈಡ್ ಮಟ್ಟವನ್ನು ಕಡಿಮೆ ಮಾಡುವುದು ಒಂದು ವಿಧಾನವಾಗಿದೆ.
ಇತರ ಜಲಶುದ್ಧೀಕರಣ ವಿಧಾನಗಳು
ಬದಲಾಯಿಸಿವಿಶೇಷವಾಗಿ ಸ್ಥಳೀಯ ಖಾಸಗಿ ಸರಬರಾಜುಗಳಿಗೆ ನೀರನ್ನು ಶುದ್ಧೀಕರಿಸುವ ಇತರ ಪ್ರಸಿದ್ದ ವಿಧಾನಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. ಕೆಲವು ರಾಷ್ಟ್ರಗಳಲ್ಲಿ ಬೃಹತ್ ಪ್ರಮಾಣದ ಪಾಲಿಕೆ ಸರಬರಾಜಿಗೆ ಈ ವಿಧಾನಗಳಲ್ಲಿರುವ ಕೆಲವು ವಿಧಾನಗಳನ್ನು ಕೂಡ ಬಳಸಲಾಗುತ್ತದೆ. ವಿಶೇಷವಾಗಿ ಶುದ್ಧೀಕರಣ (ಸಮುದ್ರದನೀರಿನಲ್ಲಿ ಉಪ್ಪನ್ನು ತೆಗೆಯುವುದು) ಮತ್ತು ಹಿಮ್ಮೊಗ ಆಸ್ಮೋಸಿಸ್ (ದ್ರಾವಣವು ಶುದ್ದಗೊಂಡು ಹರಿಯುವುದು)ಪ್ರಮುಖವಾಗಿವೆ.
- ಕುದಿಸುವಿಕೆ: ಕೊಠಡಿಯ ತಾಪಮಾನದಲ್ಲಿ ನೀರಿನಲ್ಲಿ ಸಹಜವಾಗಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಅಥವಾ ಕಾರ್ಯನಿರ್ವಹಿಸದಂತೆ ಮಾಡಲು ನೀರನ್ನು ಕುದಿಯುವವರೆಗೂ ಮತ್ತು ಅಧಿಕ ಸಮಯದ ವರೆಗೂ ಬಿಸಿಮಾಡಲಾಗುತ್ತದೆ. ಸಮುದ್ರ ಮಟ್ಟದ ವರೆಗೆ ಜೋರಾದ ಉರಿಯಲ್ಲಿ ಕುದಿಸಬೇಕು. ಈ ಮಟ್ಟದಲ್ಲಿ ಒಂದು ನಿಮಿಷದವರೆಗೆ ಕುದಿಸಿದರೆ ಸಾಕು. ಅತ್ಯಂತ ಹೆಚ್ಚು ಎತ್ತರದಲ್ಲಿ (ಎರಡು ಕಿಲೋಮೀಟರ್ ಗಳಿಗಿಂತ ಹೆಚ್ಚು ಅಥವಾ 5000 ಅಡಿ) ಮೂರು ನಿಮಿಷದ ವರೆಗೆ ಕುದಿಸಬೇಕೆಂದು ಹೇಳಲಾಗುತ್ತದೆ.[೧೮] ನೀರು "ಗಡುಸಾಗಿರುವ" ಪ್ರದೇಶಗಳಲ್ಲಿ (ವಿಲೀನವಾಗಿರುವ ಕ್ಯಾಲ್ಸಿಯಂ ಉಪ್ಪನ್ನು ಒಳಗೊಂಡಿರುವ ಪ್ರದೇಶ), ಕುದಿಸುವಿಕೆಯು, ಕ್ಯಾಲ್ಸಿಯಂ ಕಾರ್ಬನೇಟ್ ಅನ್ನು ಪ್ರಬಲವಾದ ಅವಕ್ಷೇಪನದಂತೆ ನೀಡುವ ಮೂಲಕ ಬೈಕಾರ್ಬನೇಟ್ ಅಯಾನುಗಳನ್ನು ಬೇರ್ಪಡಿಸುತ್ತದೆ. ಇದು ಗಡಸುನೀರಿನ ಪ್ರದೇಶಗಳಲ್ಲಿ ನೀರು ಕುದಿಸುವ ಪಾತ್ರೆ ಇತ್ಯಾದಿಗಳ ಮೇಲೆ ಉಂಟಾಗುವ "ಪೊರೆ"ಯಾಗಿದೆ. ಕ್ಯಾಲ್ಸಿಯಂ ಅನ್ನು ಹೊರತುಪಡಿಸಿ ಕುದಿಸುವಿಕೆಯು ,ನೀರಿಗಿಂತ ಕುದಿಯುವ ಬಿಂದುವಿನ ದ್ರವ್ಯವನ್ನು ಹೆಚ್ಚು ತೆಗೆದುಹಾಕುವುದಿಲ್ಲ, ಬದಲಿಗೆ ಅದರ ಸಾಂದ್ರತೆಯನ್ನು ಹೆಚ್ಚಿಸುತ್ತದೆ. (ನೀರಿನಿಂದಾಗಿ ಹಬೆಯ ರೂಪದಲ್ಲಿ ಸ್ವಲ್ಪ ನಷ್ಟವಾಗುತ್ತದೆ.) ಕುದಿಸುವಿಕೆಯು ,ನೀರಿನಲ್ಲಿ ಸೋಂಕುನಿವಾರಕವನ್ನು ಉಳಿಯಲು ಬಿಡುವುದಿಲ್ಲ. ಆದ್ದರಿಂದ, ಕಾಯಿಸಿ ನಂತರ ಎಷ್ಟೇ ಸಮಯದ ವರೆಗಾದರೂ ಶೇಖರಿಸಿ ಇಟ್ಟಂತಹ ನೀರು ಹೊಸ ರೋಗಕಾರಗಳನ್ನು ಹೊಂದಬಹುದು.
- ಹರಳಿನಂತಹ ಸಕ್ರಿಯ ಇಂಗಾಲದ ಶೋಧನೆ: ಅಧಿಕ ಮೇಲ್ಮೈ ಪ್ರದೇಶದೊಂದಿಗೆ ಸಕ್ರಿಯ ಇಂಗಾಲದ ರೂಪಗಳು, ಅನೇಕ ವಿಷಕಾರಿ ಸಂಯುಕ್ತಗಳನ್ನು ಒಳಗೊಂಡಂತೆ ಅನೇಕ ಸಂಯುಕ್ತಗಳನ್ನು ಹೀರಿಕೊಳ್ಳುತ್ತದೆ. ಕಾರ್ಬನಿಕ ಮಾಲಿನ್ಯ , ರುಚಿ ಮತ್ತು ಸುವಾಸನೆ ಯೊಂದಿಗೆ ಸಕ್ರಿಯ ಇಂಗಾಲದ ಮೂಲಕ ನೀರು ಹರಿಯಬಿಡುವುದನ್ನು, ಸಾಮಾನ್ಯವಾಗಿ ಪುರಸಭೆಯ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಗೃಹಬಳಕೆಯ ಅನೇಕ ಜಲ ಶೋಧಕಗಳು ಮತ್ತು ಮೀನಿನ ಟ್ಯಾಂಕ್ ಗಳು, ಮುಂದೆ ನೀರನ್ನು ಶುದ್ಧೀಕರಿಸಲು ಸಕ್ರಿಯ ಇಂಗಾಲದ ಶೋಧಕಗಳನ್ನು ಬಳಸುತ್ತವೆ. ಕುಡಿಯುವ ನೀರಿನ ಗೃಹಬಳಕೆಯ ಶೋಧಕಗಳು ಕೆಲವೊಮ್ಮೆ ಬೆಳ್ಳಿಯನ್ನು , ಬೆಳ್ಳಿಯ ಲೋಹದ ನ್ಯಾನೋಕಣದ ರೂಪದಲ್ಲಿ ಒಳಗೊಂಡಿರುತ್ತದೆ. ನೀರನ್ನು ಇಂಗಾಲದ ವಿಭಾಗದಲ್ಲಿ ದೀರ್ಘಕಾಲದ ವರೆಗೆ ಶೇಖರಿಸಿಟ್ಟರೆ ,ಅದರೊಳಗೆ ಸೂಕ್ಷ್ಮ ಜೀವಿಗಳು ಬೆಳೆದು ನೀರನ್ನು ಮಲಿನ ಮಾಡಬಹುದು ಮತ್ತು ಕಲುಷಿತಗೊಳಿಸಬಹುದು. ಬೆಳ್ಳಿಯ ನ್ಯಾನೋ ಕಣಗಳು, ಅತ್ಯುತ್ತಮವಾದ ಪ್ರತಿ-ಬ್ಯಾಕ್ಟೀರಿಯಾ ವಸ್ತುವಾಗಿದ್ದು, ಅವು ವಿಷದ ಪ್ರಭಾವಿರುವ ಕಾರ್ಬನಿಕ ಸಂಯುಕ್ತಗಳನ್ನು ಬೇರ್ಪಡಿಸುತ್ತವೆ. ಉದಾಹರಣೆಗೆ, ಕೀಟನಾಶಗಳನ್ನು ವಿಷರಹಿತ ಕಾರ್ಬನಿಕ ಉತ್ಪನ್ನಗಳಾಗಿ ಬದಲಾಯಿಸುತ್ತದೆ[ಸೂಕ್ತ ಉಲ್ಲೇಖನ ಬೇಕು].
- ಶುದ್ಧೀಕರಣವು, ನೀರಿನ ಹಬೆಯನ್ನು ಉಂಟಾಗುವಂತೆ ಮಾಡಲು ನೀರಿನ ಕುದಿಸುವಿಕೆಯನ್ನು ಒಳಗೊಂಡಿದೆ. ಹಬೆಯು ತಣ್ಣಗಿನ ಮೇಲ್ಮೈನ ಮೇಲೆ ಬರುತ್ತದೆ. ಅಲ್ಲಿ ಅದು ದ್ರವವಾಗಿ ಸಾಂದ್ರೀಕರಿಸುತ್ತದೆ. ದ್ರಾವ್ಯಗಳು ಸಾಮಾನ್ಯವಾಗಿ ಆವಿಯಾಗದ ಕಾರಣ ಅವು ಕುದಿಯುತ್ತಿರುವ ದ್ರಾವಣದಲ್ಲಿ ಉಳಿದುಕೊಂಡಿರುತ್ತವೆ. ಶುದ್ಧೀಕರಣವು, ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದಿಲ್ಲ. ಏಕೆಂದರೆ ಒಂದೇ ರೀತಿಯ ಕುದಿಯುವ ಬಿಂದುಗಳೊಂದಿಗೆ ಕಲ್ಮಶಕಾರಕಗಳನ್ನು ಮತ್ತು ಆವಿಯಾಗದಂತಹ ದ್ರವದ ಸಣ್ಣ ಹನಿಗಳನ್ನು, ಆವಿಯ ಮೂಲಕ ಕೊಂಡೊಯ್ಯುತ್ತದೆ. ಆದರೂ, ಶುದ್ಧೀಕರಣದ ಮೂಲಕ 99.9 ಪ್ರತಿಶತದಷ್ಟು ಶುದ್ಧ ನೀರನ್ನು ಪಡೆಯಬಹುದಾಗಿದೆ.
- ಹಿಮ್ಮೊಗ ಆಸ್ಮೋಸಿಸ್: ಅರ್ಧ ಪ್ರವೇಶ್ಯದಂತಹ ತೊಗಲಿನ ಮೂಲಕ ಶುದ್ಧವಾದ ನೀರು ಹೊರಬರುವಂತೆ , ಅಶುದ್ಧ ದ್ರಾವಣದ ಮೇಲೆ ಯಾಂತ್ರಿಕ ಒತ್ತಡವನ್ನು ಹಾಕಲಾಗುತ್ತದೆ. ಹಿಮ್ಮೊಗ ಆಸ್ಮೋಸಿಸ್ ಎಂಬುದು ಸೈದ್ಧಾಂತಿಕವಾಗಿ ಬೃಹತ್ ಪ್ರಮಾಣದ ಜಲ ಶುದ್ಧೀಕರಣಕ್ಕೆ ಇರುವಂತಹ ಅತ್ಯುತ್ತಮ ವಿಧಾನವಾಗಿದೆ. ಆದರೂ ಸರಿಯಾದ ಅರ್ಧ ಪ್ರವೇಶ್ಯದ ತೊಗಲನ್ನು ನಿರ್ಮಿಸುವುದು ಕಷ್ಟ. ತೊಗಲುಗಳನ್ನು ಸರಿಯಾಗಿ ಇಟ್ಟುಕೊಳ್ಳದಿದ್ದಲ್ಲಿ, ತೊಗಲಿನ ಮೇಲೆ ಅಲ್ಗೆ ಮತ್ತು ಇತರ ಜೀವಿಗಳು ಬೆಳೆಯಬಹುದು.
- ನೀರಿಂದ ಆರ್ಸನಿಕ್ ಅನ್ನು ತೆಗೆಯುವಲ್ಲಿ ಕಬ್ಬಿಣದ ಬಳಕೆ. ಅಂತರ್ಜಲದ ಆರ್ಸನಿಕ್ ಮಲಿನವನ್ನು ನೋಡಿ.
- ನೇರ ಸಂಪರ್ಕದ ತೊಗಲು ಶುದ್ಧೀಕರಣ(ಡೈರೆಕ್ಟ್ ಕಾಂಟ್ಯಾಕ್ಟ್ ಮೆಂಬ್ರೇನ್ ಡಿಸ್ಟಿಲಾಇಷನ್) (DCMD). ಉಪ್ಪನ್ನು ತೆಗೆಯುವ ಕ್ರಿಯೆಗೆ ಅನ್ವಯಿಸಬಹುದಾಗಿದೆ. ಕುದಿಸಿದ ಸಮುದ್ರದನೀರನ್ನು , ದುರಾದ್ರೀಯ(ಸುಲಭವಾಗಿ ಒದ್ದೆ ಮಾಡಲಾಗದ) ಪಾಲಿಮರ್ ತೊಗಲಿನ ಮೇಲ್ಮೈನ ಮೂಲಕ ಹರಿಯಬಿಡುವುದು. ಆವಿಯಾದ ನೀರು, ತೊಗಲಿನ ಸೂಕ್ಷ್ಮ ರಂಧ್ರಗಳ ಮೂಲಕ ಬಿಸಿಯಾದ ಕಡೆಯಿಂದ , ಮತ್ತೊಂದು ಬದಿಯಲ್ಲಿರುವ ಶುದ್ಧವಾದ ತಣ್ಣೀರಿನ ಹಬೆಯಲ್ಲಿಗೆ ಸಾಗುತ್ತದೆ. ಬಿಸಿ ಮತ್ತು ತಣ್ಣಗಿನ ಬದಿಗಳ ನಡುವಿನ ಹಬೆಯ ಒತ್ತಡದಲ್ಲಿ ಇರುವಂತಹ ವ್ಯತ್ಯಾಸ ಅಣುಗಳ ಮೂಲಕ ನೀರನ್ನು ತಳ್ಳುತ್ತದೆ.
- ಹೈಡ್ರೇಟ್ ಅನಿಲದ ಸ್ಫಟಿಕ ಅಪಕೇಂದ್ರಕ ವಿಧಾನ. ಇಂಗಾಲದ ಡಯಾಕ್ಸೈಡ್ ಅನಿಲವು, ಅಧಿಕ ಒತ್ತಡದಲ್ಲಿ ಮತ್ತು ಕಡಿಮೆ ತಾಪಮಾನದಲ್ಲಿ ಕಲುಷಿತ ನೀರಿನೊಂದಿಗೆ ಸೇರಿಕೊಂಡರೆ, ಹೈಡ್ರೇಟ್ ಅನಿಲದ ಸ್ಫಟಿಕಗಳು ಸ್ವಚ್ಛವಾದ ನೀರನ್ನು ಮಾತ್ರ ಒಳಗೊಂಡಿರುತ್ತವೆ. ಏಕೆಂದರೆ ನೀರಿನ ಅಣುಗಳು, ಅನಿಲದ ಅಣುಗಳೊಂದಿಗೆ ಅಣುವಿನ ಮಟ್ಟದಲ್ಲಿ ಬಂಧಿಸಲ್ಪಡುತ್ತವೆ. ಕಲುಷಿತ ನೀರು ದ್ರವರೂಪದಲ್ಲಿರುತ್ತದೆ. ಅಪಕೇಂದ್ರಕವನ್ನು ಸ್ಫಟಿಕಗಳು ಮತ್ತು ಸಾಂದ್ರೀಕರಣಗೊಂಡ ಕಲುಷಿತ ನೀರನ್ನು ಬೇರ್ಪಡಿಸಲು ಬಳಸಬಹುದಾಗಿದೆ.
ಜಲಜನಕದ ಉತ್ಪತ್ತಿ
ಬದಲಾಯಿಸಿಅಲ್ಪ ಪ್ರಮಾಣದ ಜಲಜನಕ ಉತ್ಪತ್ತಿಗಾಗಿ ಜಲ ಶುದ್ಧಿಕಾರಿಗಳನ್ನು ಅಳವಡಿಸಲಾಗುತ್ತದೆ. ಇವು ವಿದ್ಯುದ್ವಾರಗಳ ಮೇಲೆ ಖನಿಜಗಳು ರೂಪುಗೊಳ್ಳುವುದನ್ನು ತಡೆಗಟ್ಟುತ್ತವೆ. ಅಲ್ಲದೇ ಬಳಸುವ ನೀರಿನಿಂದ ಜೀವಿಗಳನ್ನು ಮತ್ತು ಕ್ಲೋರೀನ್ ತೆಗೆಯುತ್ತವೆ. ಮೊದಲು ಮರಳು ಮತ್ತು ಧೂಳಿನ ಕಣಗಳನ್ನು ತೆಗೆದುಹಾಕಲು ನೀರನ್ನು 20 ಮೈಕ್ರೋ ಮೀಟರ್ ಪರದೆಯ (ಜಾಲರಿ ಅಥವಾ ಪರದೆ ಶೋಧಕ) ಶೋಧಕದ ಮೂಲಕ ಹರಿಯಬಿಡಲಾಗುತ್ತದೆ. ಅನಂತರ ಸೂಕ್ಷ್ಮ ಜೀವಿಗಳನ್ನು ಮತ್ತು ಕ್ಲೋರೀನ್ ಅನ್ನು ತೆಗೆದುಹಾಕಲು ಸಕ್ರಿಯ ಇಂಗಾಲವನ್ನು ಬಳಸಿಕೊಂಡು ಇದ್ದಿಲು ಶೋಧಕದ ಮೂಲಕ ಹರಿಯಬಿಡಲಾಗುತ್ತದೆ. ಅಂತಿಮವಾಗಿ ಲೋಹದ ಅಯಾನುಗಳನ್ನು ತೆಗೆದುಹಾಕಲು ಅಯಾನೀಕರಿಸುವ ಶೋಧಕದ ಮೂಲಕ ಹರಿಯಬಿಡಲಾಗುತ್ತದೆ. ಶುದ್ದೀಕರಿಸಲಾದ ನೀರಿನಲ್ಲಿ , ಬೇರಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸೋಡಿಯಂ ಮತ್ತು ಸಿಲಿಕ ಸರಿಯಾಗಿ ಹೋಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಶುದ್ಧೀಕರಣದ ನಂತರ ಅಥವಾ ಮೊದಲು ಪರೀಕ್ಷೆಯನ್ನು ಮಾಡಬಹುದಾಗಿದೆ.
ಹಿಮ್ಮೊಗ ಆಸ್ಮೋಸಿಸ್ , ಬಳಸಲಾದ ಮತ್ತೊಂದು ವಿಧಾನವಾಗಿದೆ.
ಸುರಕ್ಷತೆ ಮತ್ತು ವಿವಾದಗಳು
ಬದಲಾಯಿಸಿ2007 ರ ಏಪ್ರಿಲ್ ನಲ್ಲಿ ,ಮಸ್ಚುಸೆಟ್ಸ್ ನ ಸ್ಪೆನ್ಸರ್ ನ ನೀರು ಸರಬರಾಜು, ಅದರ ಸಂಸ್ಕರಣ ಸಾಧನ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾರಣ ಅಧಿಕ ಸೋಡಿಯಂ ಹೈಡ್ರಾಕ್ಸೈಡ್ (ಲೈ) ನಿಂದ ಕಲುಷಿತಗೊಂಡಿತು.[ಸೂಕ್ತ ಉಲ್ಲೇಖನ ಬೇಕು]
ಅನೇಕ ಪುರಸಭೆಗಳು, ಸೋಂಕುಗಳೆತ ಕಾರಕವಾಗಿ ಅಸಂಯುಕ್ತ ಕ್ಲೋರೀನ್ ಅನ್ನು ಬಿಟ್ಟು ಕ್ಲೋರಮೈನ್ ಅನ್ನು ಬಳಸುತ್ತಿದ್ದಾರೆ. ಆದರೂ ಕೆಲವು ನೀರಿನ ವ್ಯವಸ್ಥೆಗಳಲ್ಲಿ, ಕ್ಲೋರಮೈನ್ ನಾಶಕಾರಿಯಾಗಿ ಕಂಡುಬಂದಿದೆ. ಹಿಂದಿನ ಸೇವಾ ದಿಶೆಯಲ್ಲಿ ಕ್ಲೋರಮೈನ್,ಒಳಗಿನ "ರಕ್ಷಕ" ಪೊರೆಯನ್ನು ಕರಗಿಸಬಲ್ಲದು. ಅಲ್ಲದೇ ಇದರ ಜೊತೆಯಲ್ಲಿ, ಗೃಹಬಳಕೆಯ ನಲ್ಲಿಗಳಲ್ಲಿ ಸೀಸವನ್ನು ತೊಟ್ಟಿಕ್ಕುವಂತೆ ಮಾಡಬಹುದು. ಇದರಿಂದಾಗಿ , ಸೀಸವು ಹಾನಿಕಾರಿಯಾಗಬಲ್ಲದು. ಅಲ್ಲದೇ ರಕ್ತದ ಮಟ್ಟವನ್ನು ಹೆಚ್ಚಿಸಬಲ್ಲದು. ಸೀಸವನ್ನು ನರವಿಷಕಾರಿ ಎಂದು ಕರೆಯಲಾಗುತ್ತದೆ.[೧೯]
ಖನಿಜರಹಿತವಾಗಿರಿಸಿದ ನೀರು
ಬದಲಾಯಿಸಿಶುದ್ಧೀಕರಣವು ನೀರಿನಿಂದ ಎಲ್ಲಾ ಖನಿಜಗಳನ್ನು ತೆಗೆದುಹಾಕುತ್ತದೆ. ಅಲ್ಲದೇ ಹಿಮ್ಮೊಗ ಆಸ್ಮೋಸಿಸ್ ನ ತೊಗಲಿನಲ್ಲಿ ಶೋಧಿಸುವ ವಿಧಾನ ಮತ್ತು ನ್ಯಾನೋ ಶುದ್ಧೀಕರಣ, ನೀರಿನಲ್ಲಿರುವ ಬಹುಪಾಲು ಎಲ್ಲಾ ಖನಿಜಗಳನ್ನು ತೆಗೆದುಹಾಕುತ್ತವೆ. ಇದರಿಂದಾಗಿ ವಿಖನಿಜೀಕರಿಸಿದ ನೀರು ದೊರೆಯುತ್ತದೆ. ಇದನ್ನು ಅತ್ಯುತ್ತಮ ಕುಡಿಯುವ ನೀರೆಂದು ಪರಿಗಣಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ , 1980 ರಲ್ಲಿ ವಿಖನಿಜೀಕರಿಸಿದ ನೀರು ಆರೋಗ್ಯದ ಮೇಲೆ ಬೀರಬಹುದಾದ ಪ್ರಭಾವವನ್ನು ಕುರಿತು ಪರೀಕ್ಷಿಸಿತು.[೨೦] ಮಾನವರ ಮೇಲೆ ಮಾಡಲಾದ ಪ್ರಯೋಗದಲ್ಲಿ, ವಿಖನಿಜೀಕರಿಸಿದ ನೀರು, ಅತಿ ಮೂತ್ರದ ಮತ್ತು ವಿದ್ಯುದ್ವಿಚ್ಛೇದ್ಯಗಳ ಹೊರಹಾಕುವಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರ ಜೊತೆಯಲ್ಲಿ , ರಕ್ತಸಾರದ ಪೊಟ್ಯಾಸಿಯಮ್ ಸಾಂದ್ರತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ. ನೀರಿನಲ್ಲಿರುವ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳು ಪೌಷ್ಟಿಕತೆಯ ಕೊರತೆಯನ್ನು ನೀಗಿಸುವಲ್ಲಿ ಸಹಾಯಮಾಡುತ್ತವೆ. ವಿಖನಿಜೀಕರಿಸಿದ, ನೀರು ವಿಷಕಾರಿ ಲೋಹಗಳಿಂದ ಅಪಾಯದ ಸಾಧ್ಯತೆಯನ್ನು ಕೂಡ ಹೆಚ್ಚಿಸಬಹುದಾಗಿದೆ. ಏಕೆಂದರೆ ಇದು ಅತಿವೇಗವಾಗಿ ಪೈಪ್ ನಿಂದ ಸೀಸ ಮತ್ತು ಕ್ಯಾಡ್ಮಿಯಂ ನಂತಹ ವಸ್ತುಗಳನ್ನು ತೊಟ್ಟಿಕ್ಕುವಂತೆ ಮಾಡುತ್ತದೆ. ಇದನ್ನು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತರ ದ್ರವೀಕರಣಗೊಂಡ ಖನಿಜಗಳಿಂದ ತಡೆಯಬಹುದಾಗಿದೆ. ಕಡಿಮೆ ಖನಿಜಗಳ್ಳುಳ್ಳ ನೀರನ್ನು , ಸೀಸ ದಿಂದ ವಿಷದ ಪರಿಣಾಮಕ್ಕೆ ಒಳಗಾಗು ಎಳೆಮಕ್ಕಳಂತಹ ನಿರ್ದಿಷ್ಟ ವಿಷಗಳಲ್ಲಿ ಬಳಸಬಹುದಾಗಿದೆ. ಪೈಪ್ ಗಳಿಂದ ಸೀಸವು ತೊಟ್ಟಿಕ್ಕುವ ಮೂಲಕ ಅಧಿಕ ಪ್ರಮಾಣದಲ್ಲಿ ನೀರಿಗೆ ಸೇರಿದಂತಹ ಸಂದರ್ಭದಲ್ಲಿ ಈ ನೀರನ್ನು ಬಳಸಬಹುದಾಗಿದೆ. ಮೆಗ್ನೀಸಿಯಮ್ ಅನ್ನು ಕನಿಷ್ಠ 10 mg/L ನಿಂದ ಅನುಕೂಲಕರವಾದ 20–30 mg/L ನಷ್ಟು ಹಾಕಬೇಕು; ಕ್ಯಾಲ್ಸಿಯಂ ಕನಿಷ್ಠ 20 mg/L ಮತ್ತು ಅತ್ಯುತ್ತಮ 40–80 mg/L ನಷ್ಟು ಹಾಕಬೇಕೆಂದು ಸೂಚಿಸಲಾಗಿದೆ. ಅಲ್ಲದೇ 2 ರಿಂದ 4 mmol/L ನ ನೀರಿನ ಒಟ್ಟು ಗಡಸುತನ (ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಸೇರಿಸಿ)ವಿದ್ದಲ್ಲಿ ಹಾಗು 5 mmol/L ಗಿಂತ ಹೆಚ್ಚು ನೀರಿನ ಗಡಸುತನ ವಿದ್ದಲ್ಲಿ , ಇವುಗಳನ್ನು ಸೇರಿಸುವುದರಿಂದ ಇವು ಪಿತ್ತಗಲ್ಲುಗಳು, ಮೂತ್ರಪಿಂಡ ಕಲ್ಲುಗಳು, ಮೂತ್ರಾಂಗದ ಕಲ್ಲುಗಳು, ಅಸ್ಥಿಸಂದಿವಾತ, ಮತ್ತು ಕೀಲುರೋಗಗಳನ್ನು ತಡೆಗಟ್ಟುತ್ತವೆ.[೨೧] ಇದರಜೊತೆಗೆ, ಉಪ್ಪನ್ನು ತೆಗೆಯುವ ಕ್ರಿಯೆಯು ಬ್ಯಾಕ್ಟೀರಿಯ ಕಲ್ಮಶೀಕರಣದ ಅಪಾಯವನ್ನು ಹೆಚ್ಚಿಸಬಹುದು.[೨೧]
ನೀರನ್ನು ಶುದ್ಧೀಕರಿಸುವ ಗೃಹಬಳಕೆಯ ಬಟ್ಟಿಯಂತ್ರದ ತಯಾರಕರು, ನೀರಿನಲ್ಲಿರು ಖನಿಜಗಳು ಅನೇಕ ಕಾಯಿಲೆಗಳನ್ನು ಉಂಟು ಮಾಡುತ್ತವೆ. ಅಲ್ಲದೇ ಅತ್ಯಂತ ಉಪಯುಕ್ತವಾದ ಬಹುಪಾಲು ಖನಿಜಗಳು ಆಹಾರದಿಂದ ಬರುತ್ತದೆಯೇ ಹೊರತು ನೀರಿನಿಂದಲ್ಲ ಎಂದು ಮೇಲಿನ ವಿವರಣೆಗೆ ವಿರುದ್ಧವಾಗಿ ವಾದಿಸಿದ್ದಾರೆ.[೨೨][೨೩][೨೪] ಅವರು ಅಮೇರಿಕಾದ ವೈದ್ಯಕೀಯ ಸಂಸ್ಥೆ ಹೇಳಿರುವ " ದೇಹಕ್ಕೆ ಬೇಕಿರುವ ಖನಿಜದ ಪೂರೈಕೆ ಹೆಚ್ಚಾಗಿ ಆಹಾರದಿಂದ ಆಗುತ್ತದೆಯೇ ಹೊರತು ಕುಡಿಯುವ ನೀರಿನಿಂದಲ್ಲ" ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. [೨೫] WHO ನ ವರದಿಯು, "ಕೆಲವನ್ನು ಮಾತ್ರ ಹೊರತುಪಡಿಸಿ, ಕುಡಿಯುವ ನೀರು ಮಾನವರಿಗೆ ಬೇಕಿರುವಂತಹ ಅತ್ಯಗತ್ಯ ಅಗತ್ಯಗಳನ್ನು ಪೂರೈಸುವ ಪ್ರಮುಖ ಮೂಲವಲ್ಲ" ಅಲ್ಲದೇ ಇದು " ನಮ್ಮ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಪೂರೈಕೆಯ ಪ್ರಧಾನ ಮೂಲವಲ್ಲ" ಎಂಬುದನ್ನು ಒಪ್ಪಿಕೊಂಡಿದೆಯಾದರೂ, ವಿಖನಿಜೀಕರಿಸಿದ ನೀರು ಹನಿಕಾರಕ ಎಂಬುದನ್ನು ಕೂಡ ತಿಳಿಸಿದೆ. "ಅಧಿಕ ಪುರಾವೆಗಳು ಅನೇಕ ರಾಷ್ಟ್ರಗಳಲ್ಲಿ ಮಾಡಲಾದ ಪ್ರಾಣಿಗಳ ಪ್ರಯೋಗ ಮತ್ತು ಪ್ರಾಯೋಗಿಕ ವೀಕ್ಷಣೆಯಿಂದ ಬಂದಿವೆ. ಕುಡಿಯುವ ನೀರಿನಲ್ಲಿ ಸತು ಅಥವಾ ಮೆಗ್ನೀಸಿಯಮ್ ಅನ್ನು ಸೇರಿಸಿ ಕೆಲವು ಪ್ರಾಣಿಗಳಿಗೆ ಕುಡಿಯಲು ಕೊಡಲಾಯಿತು. ಈ ಖನಿಜಗಳನ್ನು ಇತರ ಕೆಲವು ಪ್ರಾಣಿಗಳಿಗೆ ಆಹಾರದಲ್ಲಿ ಸೇರಿಸಿ ಕೊಡಲಾಯಿತು ಮತ್ತು ಅವುಗಳಿಗೆ ಕುಡಿಯಲು ಕನಿಷ್ಠ ಖನಿಜವಿರುವ ನೀರನ್ನು ಕೊಡಲಾಯಿತು. ಕುಡಿಯುವ ನೀರಿನಲ್ಲಿ ಖನಿಯಗಳನ್ನು ಸೇರಿಸಿಕೊಟ್ಟಂತಹ ಪ್ರಾಣಿಗಳು , ಆಹಾರದಲ್ಲಿ ಸೇರಿಸಿಕೊಟ್ಟ ಪ್ರಾಣಿಗಳಿಗಿಂತ ಹೆಚ್ಚು ಪ್ರಮಾಣದ ಖನಿಜಗಳನ್ನು ಹೊಂದಿದ್ದವು.
ಶುದ್ಧವಾದ_ನೀರು#ಟೀಕೆ ನೋಡಿ
ಇವನ್ನೂ ಗಮನಿಸಿ
ಬದಲಾಯಿಸಿ- ಜಲವಾಸಿ ವಿಷವೈದ್ಯಶಾಸ್ತ್ರ
- ಬ್ಯಾಕ್ಟೀರಿಯ ವಿಜ್ಞಾನದ ನೀರಿನ ವಿಶ್ಲೇಷಣೆ
- ಕಾರ್ಲ್ ರಾಜರ್ಸ್ ಡರ್ನಲ್
- ಪರಿಸರ ನೈರ್ಮಲ್ಯ
- ಪರಿಸರದ ನಿರ್ವಹಣೆ
- ಪರಿಸರದ ಶಿಲ್ಪವಿಜ್ಞಾನ
- ERDLator , ಎಂಬುದು 1940-1950ರ "ಜಲಶುದ್ಧೀಕರಣ ಘಟಕದ ಹೆಸರಾಗಿದೆ. ವ್ಯಾನ್ ವಿಧದ, ಭೌತಿಕ ಆಕಾರ ಎತ್ತರವಿದ್ದು, ವಿದ್ಯುತ್ ಮೂಲಕ ಚಲಿಸುತ್ತದೆ.
- ವ್ಯರ್ಥವಾದ ನೀರನ್ನು ಸಂಸ್ಕರಿಸುವ ವಿಧಾನಗಳ ಪಟ್ಟಿ
- ಸೂಕ್ಷ್ಮಶೋಧನೆ
- ಜಲಶುದ್ಧೀಕರಣದಲ್ಲಿ ಬಳಸುವ ಜೀವಿಗಳು
- ಕೊಳಚೆನೀರು ಸಂಸ್ಕರಣೆ
- ಈಜುಕೊಳದ ನೈರ್ಮಲ್ಯ
- ಪರಿಸರೀಯ ವ್ಯವಸ್ಥೆ
- ಕೊಳದ ಸಂಸ್ಕರಣೆ
- ಜಲ ಸಂರಕ್ಷಣೆ
- ನೀರಿನ ಮರುಬಳಕೆ
- ಜಲ ಚಿಕಿತ್ಸೆ
ಉಲ್ಲೇಖಗಳು
ಬದಲಾಯಿಸಿ- ಮಾಸ್ಟರ್ಸ್, ಗಿಲ್ಬರ್ಟ್ M. ಇಂಟರ್ಡಕ್ಷನ್ ಟು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್. 2ನೇ ed. ಅಪ್ಪರ್ ಸ್ಯಾಡಲ್ ರಿವರ್ , NJ: ಪ್ರೆಂಟೈಸ್ ಹಾಲ್ , 1998.
- ಯುನೈಟೆಡ್ ಸ್ಟೇಟ್ಸ್ EPA ಗ್ರೌಂಡ್ ಅಂಡ್ ಡ್ರಿಂಕಿಂಗ್ ವಾಟರ್ ಹೋಮ್ ಪೇಜ್. EPA ಗ್ರೌಂಡ್ ಅಂಡ್ ಡ್ರಿಂಕಿಂಗ್ ವಾಟರ್ ಹೋಮ್ ಪೇಜ್ ವೀಕ್ಷಿಸಲಾಯಿತು 12/13/05
- ↑ Combating Waterborne Diseases at the Household Level (PDF). World Health Organization. 2007. Part 1. ISBN 9789241595223.
- ↑ Water for Life: Making it Happen (PDF). World Health Organization and UNICEF. 2005. ISBN 9241562935.
- ↑ ಪಿಕ್ಚರ್ಸ್ ಅಂಡ್ ಸ್ಮಾಲ್ ಒವರ್ ವ್ಯೂ ಆಫ್ ಲಾವಫಿಲ್ಟರ್ಸ್(ಇನ್ ಡಚ್)[ಶಾಶ್ವತವಾಗಿ ಮಡಿದ ಕೊಂಡಿ]
- ↑ ೪.೦ ೪.೧ F. ಹೆಲ್ಫ್ಫ್ರಿಕ್, ಅಯಾನ್ ಎಕ್ಸ್ ಚೆಂಜ್, ಮ್ಯಾಕ್ ಗ್ರಾವ್ ಹಿಲ್, ನ್ಯೂಯಾರ್ಕ್, 1962.
- ↑ ಅಯಾನ್ ಎಕ್ಸ್ ಚೆಂಜರ್ಸ್(K. ಡಾರ್ಫ್ನರ್, ed.), ವಾಲ್ಟರ್ ದೆ ಗ್ರೈಟರ್, ಬರ್ಲಿನ್, 1991.
- ↑ C. E. ಹಾರ್ಲ್ಯಾಂಡ್, ಅಯಾನ್ ಎಕ್ಸ್ ಚೆಂಜ್: ಥಿಯರಿ ಅಂಡ್ ಪ್ರಾಕ್ಟೀಸ್, ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಕೇಂಬ್ರಿಡ್ಜ್, 1994.
- ↑ ಅಯಾನ್ ಎಕ್ಸ್ ಚೆಂಜ್ (D. ಮುರಾವೈವ್, V. ಗೊರ್ಶ್ಕೊ, A. ವಾರ್ಶೌಸ್ಕಿ), M. ಡೆಕರ್, ನ್ಯೂಯಾರ್ಕ್, 2000.
- ↑ ೮.೦ ೮.೧ A. A. ಜಾಗಾರ್ಡ್ನಿ, ಅಯಾನ್ ಎಕ್ಸ್ ಚೆಂಜ್ ಮೆಟೀರಿಯಲ್ಸ್: ಪ್ರಾಪರ್ಟೀಸ್ ಅಂಡ್ ಅಲ್ಪಿಕೇಷನ್ಸ್ ಎಲ್ಸ್ ವಿಯರ್, ಆಮ್ ಸ್ಟರ್ಡ್ಯಾಮ್, 2006 Archived 2007-10-24 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಓವರ ವ್ಯೂ ಆಫ್ ಬಯೋಲಾಜಿಕಲ್ ಸಿಸ್ಟಮ್ಸ್ ವಿತ್ ಪಿಕ್ಚರ್ಸ್[ಶಾಶ್ವತವಾಗಿ ಮಡಿದ ಕೊಂಡಿ]
- ↑ Conroy RM, Meegan ME, Joyce T, McGuigan K, Barnes J (1999 October). "Solar disinfection of water reduces diarrhoeal disease, an update". Arch Dis Child. 81 (4): 337–8. doi:10.1136/adc.81.4.337. PMC 1718112. PMID 10490440.
{{cite journal}}
: Check date values in:|date=
(help); Unknown parameter|pmcid=
ignored (|pmc=
suggested) (help)CS1 maint: multiple names: authors list (link) - ↑ Conroy RM, Meegan ME, Joyce TM, McGuigan KG, Barnes J (2001). "Use of solar disinfection protects children under 6 years from cholera". Arch Dis Child. 85 (4): 293–5. doi:10.1136/adc.85.4.293. PMC 1718943. PMID 11567937.
{{cite journal}}
: Unknown parameter|pmcid=
ignored (|pmc=
suggested) (help)CS1 maint: multiple names: authors list (link) - ↑ Rose A. at al. (2006 February). "Solar disinfection of water for diarrhoeal prevention in southern India". Arch Dis Child. 91 (2): 139–41. doi:10.1136/adc.2005.077867. PMC 2082686. PMID 16403847.
{{cite journal}}
: Check date values in:|date=
(help); Unknown parameter|pmcid=
ignored (|pmc=
suggested) (help) - ↑ ಹಾಬಿನ್ಸ್ M. (2003). ದಿ SODIS ಹೆಲ್ತ್ ಇಂಪ್ಯಾಕ್ಟ್ ಸ್ಟಡಿ, Ph.D. ಥೀಸಿಸ್, ಸ್ವಿಸ್ ಟ್ರಾಪಿಕಲ್ ಇನ್ ಸ್ಟಿಟ್ಯೂಟ್ ಬ್ಯಾಸೆಲ್
- ↑ Sciacca F, Rengifo-Herrera JA, Wéthé J, Pulgarin C (2010-01-08). "Dramatic enhancement of solar disinfection (SODIS) of wild Salmonella sp. in PET bottles by H(2)O(2) addition on natural water of Burkina Faso containing dissolved iron". Chemosphere (epub ahead of print). 78 (9): 1186–91. doi:10.1016/j.chemosphere.2009.12.001. PMID 20060566.
{{cite journal}}
:|format=
requires|url=
(help)CS1 maint: multiple names: authors list (link) - ↑ Centers for Disease Control and Prevention (2001). "Recommendations for using fluoride to prevent and control dental decay caries in the United States". MMWR Recomm Rep. 50 (RR-14): 1–42. PMID 11521913.
{{cite journal}}
: Unknown parameter|laydate=
ignored (help); Unknown parameter|laysource=
ignored (help); Unknown parameter|laysummary=
ignored (help) - ↑ Division of Oral Health, National Center for Prevention Services, CDC (1993). "Fluoridation census 1992" (PDF). Retrieved 2008-12-29.
{{cite journal}}
: Cite journal requires|journal=
(help)CS1 maint: multiple names: authors list (link) - ↑ Reeves TG (1986). "Water fluoridation: a manual for engineers and technicians" (PDF). Centers for Disease Control. Archived from the original (PDF) on 2008-10-07. Retrieved 2008-12-10.
- ↑ US EPA ಎಮರ್ಜೆನ್ಸಿ ಡಿಸ್ ಇನ್ಫೆಕ್ಷನ್ ರೆಕಮೆಂಡೇಷನ್ಸ್
- ↑ " ಮಿರಾಂಡ, ಕಿಮ್, ಹುಲ್, et.a. " ನೀರು ಸಂಸ್ಕರಣ ವ್ಯವಸ್ಥೆಗಳಲ್ಲಿ ಕ್ಲೋರಮೈನ್ ನ ಬಳಕೆಯಿಂದ ರಕ್ತದಲ್ಲಿರುವ ಸೀಸದ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆ" 03/13/2007. ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟೀವ್ .
- ↑ "ಆರ್ಕೈವ್ ನಕಲು" (PDF). Archived from the original (PDF) on 2009-02-05. Retrieved 2010-10-22.
- ↑ ೨೧.೦ ೨೧.೧ ಕಾಸಿಸೆಕ್ F. (2004). Health risks from drinking demineralised water. WHO.
- ↑ http://www.naturalsolutions1.com/ecodist2.htm
- ↑ "ಆರ್ಕೈವ್ ನಕಲು". Archived from the original on 2010-09-30. Retrieved 2010-10-22.
- ↑ http://www.shockeyspurewater.com/Distillation.htm
- ↑ "ಆರ್ಕೈವ್ ನಕಲು". Archived from the original on 2010-08-22. Retrieved 2010-10-22.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಮೇರಿಕನ್ ವಾಟರ್ ವರ್ಕ್ಸ್ ಅಸೋಸಿಯೇಷನ್
- NSF ಇಂಟರ್ ನ್ಯಾಷನಲ್ AND WATER ವೀಕ್ಷಿಸಲಾಯಿತು 06/22/08
- ಕೋಡ್ ಆಫ್ ಫೆಡರಲ್ ರೆಗ್ಯುಲೇಷನ್ಸ್, ಟೈಟಲ್ 40, ಪಾರ್ಟ್ 141 Archived 2009-02-08 ವೇಬ್ಯಾಕ್ ಮೆಷಿನ್ ನಲ್ಲಿ. - U.S. ನ್ಯಾಷನಲ್ ಪ್ರೈಮರಿ ಡ್ರಿಂಕಿಂಗ್ ವಾಟರ್ ರೆಗ್ಯುಲೇಷನ್ಸ್,
- ಕೋಡ್ ಆಫ್ ಫೆಡರ್ಲ್ ರೆಗ್ಯುಲೇಷನ್ಸ್, ಟೈಟಲ್ 21, ಪಾರ್ಟ್ 129 - U.S. ಫುಡ್ ಅಂಡ್ ಡ್ರಗ್ ಅಡ್ಮಿಸ್ಟ್ರೇಷನ್ ರೆಗ್ಯುಲೇಷನ್ ಆನ್ ಬಾಟಲ್ಡ್ ವಾಟರ್