ರಕ್ತಸಾರ
ರಕ್ತದಲ್ಲಿ, ರಕ್ತಸಾರವು ರಕ್ತಕಣವೂ ಅಲ್ಲದ, ಘನೀಕರಣ ಅಂಶವೂ ಅಲ್ಲದ ಅಂಶ; ಅದು ಫೈಬ್ರಿನಜನ್‌ಗಳನ್ನು ತೆಗೆದ ರಕ್ತದ ಪ್ಲ್ಯಾಸ್ಮಾ. ರಕ್ತಸಾರವು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಬಳಕೆಯಾಗದ ಎಲ್ಲ ಪ್ರೋಟೀನ್‌ಗಳು ಮತ್ತು ಎಲ್ಲ ವಿದ್ಯುದ್ವಿಚ್ಛೇದ್ಯಗಳು, ಪ್ರತಿಜೀವಿಗಳು, ಪ್ರತಿಜನಕಗಳು, ಹಾರ್ಮೋನ್‌ಗಳು, ಹಾಗೂ ಯಾವುದೇ ಬಹಿರ್ಜಾತ ಪದಾರ್ಥಗಳನ್ನು (ಉದಾಹರಣೆಗೆ ಮದ್ದುಗಳು ಮತ್ತು ಸೂಕ್ಷ್ಮಜೀವಿಗಳು) ಒಳಗೊಂಡಿರುತ್ತದೆ. ರಕ್ತಸಾರ ಶಾಸ್ತ್ರವು ರಕ್ತಸಾರದ ಅಧ್ಯಯನ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |