ಪ್ರಕೃತಿ ಸರಣಿಯ ಭಾಗ
ಹವಾಮಾನ
 
ಋತುಗಳು
ವಸಂತ · ಬೇಸಿಗೆಕಾಲ

ಶರತ್ಕಾಲ · ಚಳಿಗಾಲ

ಒಣ ಋತು · ತಂಪು ಋತು

ಚಂಡಮಾರುತ ಗಳು

ಗುಡುಗುಮಳೆ · ಮಹಾ ಗುಡುಗುಮಳೆ
ಕೆಳಬಿರಿತ · ಮಿಂಚು
ಸುಂಟರಗಾಳಿ · ನೀರಸುಳಿಗಂಬ
ಉಷ್ಣವಲಯದ ಸುಂಟರಗಾಳಿ(ಚಂಡಮಾರುತ)
ಹೆಚ್ಚುವರಿ ಉಷ್ಣವಲಯದ ಸುಂಟರಗಾಳಿ
ಶರತ್ಕಾಲಚಂಡಮಾರುತ  · ಹಿಮಗಾಳಿ · ಮಂಜುಗಡ್ಡೆಚಂಡಮಾರುತ
ಧೂಳು ಚಂಡಮಾರುತ  · ಅಗ್ನಿ ಬಿರುಗಾಳಿ  · ಮೋಡ

ಅವಕ್ಷೇಪನ

ಸೋನೆ ಮಳೆ  · ಮಳೆ  · ಹಿಮ · ಗ್ರೌಪುಲ್
ಘನೀಕೃತ ಮಳೆ · ಹಿಮ ತುಣುಕುಗಳು · ಆಲಿಕಲ್ಲು

ವಿಷಯಗಳು

ಪವನ ವಿಜ್ಞಾನ · ಹವಾಮಾನ
ಹವಾಮಾನ ಮುನ್ಸೂಚನೆ
ತಾಪ ಅಲೆ · ವಾಯು ಮಾಲಿನ್ಯ

ಹವಾಮಾನ ಪೋರ್ಟಲ್

ಚಂಡಮಾರುತಗಳು ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆ. ವಿಷುವದ್ರೇಖೆಯಿಂದ ಸುಮಾರು ೧೦° ದೂರದಲ್ಲಿ ಹೆಚ್ಚಾಗಿ ಇವು ಉಂಟಾಗುತ್ತವೆ.

ಬಾಹ್ಯಾಕಾಶದಿಂದ ಒಂದು ಚಂಡಮಾರುತದ ದೃಷ್ಯ

ಚಂಡಮಾರತದ ರಚನೆ

ಬದಲಾಯಿಸಿ
  • ಚoಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆಯಾಗಿದ್ದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶದತ್ತ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಇಲ್ಲಿ ಗಾಳಿಯು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ತಿರುಗುತ್ತಿರುತ್ತದೆ. ಕಡಿಮೆ ಒತ್ತಡವೆಂದರೆ ಆ ಪ್ರದೇಶದಲ್ಲಿ ಗಾಳಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಲ್ಲಿ ಸಾಂದ್ರತೆ ಕಡಿಮೆಯಾಗಿ ತೂಕ (ಮಾಸ್) ಕಡಿಮೆಯಾಗುವುದು. ಆಗ ಉಳಿದಕಡೆಯಿಂದ ಗಾಳಿ ಅಲ್ಲಿಗೆ ರಭಸದಲ್ಲಿ ನುಗ್ಗುವುದು. ಗಾಳಿಯ ಚಲನೆ ಸುರುಳಿಯಾಕಾರ ಹೊಂದುವುದು.
  • ಚಂಡಮಾರತದ ಕೇಂದ್ರ ಅಥವಾ ಕಣ್ಣು:ಚಂಡಮಾರುತದಲ್ಲಿ ಗಾಳಿಯು ರಭಸದಿಂದ ಸುತ್ತುವಾಗ ಸುರಳಿಯ ಮಧ್ಯದಲ್ಲಿ ನಿರ್ವಾತ ಪ್ರದೇಶ ಅಥವಾ ಶೂನ್ಯ ಪ್ರದೇಶ ಉಂಟಾಗುವುದು. ಅದು ಸುಂಟರಗಾಳಿಯ ಕೇಂದ್ರ ಅಥವಾ ಕಣ್ಣು. ಸುರುಳಿಯಲ್ಲಿ ಗಾಳಿಯು ೩೦ ಕಿ.ಮೀ. ನಿಂದ ೩೫೦ ಕಿ.ಮೀ.ವೇಗದವರೆಗೂ ಚಲಿಸುವುದು. ಈ ರಭಸದಲ್ಲಿ ಸಿಕ್ಕಿದ ವಸ್ತುಗಳು ಪುಡಿಯಾಗಿ ನಾಶವಾಗುವವು. ಕೇಂದ್ರದ ಕಣ್ಣಿನಲ್ಲಿ ಸಿಕ್ಕಿದ ವಸ್ತುವು ನಿರ್ವಾಣದಲ್ಲಿ ಮೇಲ್ಮುಖವಾಗಿ ಚಲಿಸುವುದರಿಂದ ಆ ವಸ್ತುಗಳು ಆಕಾಶಕ್ಕೆ ಚಿಮ್ಮಿ ಎಲ್ಲಿಯೋ ಬೀಳಬಹುದು. ಕೇಂದ್ರ ಮತ್ತು ಕೇಂದ್ರದ ಹತ್ತಿರವಿರುವ ಬಿರುಗಾಳಿಗೆ ಸಿಕ್ಕಿದ ಮನೆಮಠ ಮರ ವಸ್ತುಗಳು ನಾಶವಾಗುವವು, ಅಲ್ಲದೆ ಜೀವಹಾನಿಯಾಗುವುದು. ಉಷ್ಣವಲಯದ ವಾತಾವರಣದಲ್ಲಿ ಸಮುದ್ರದಿಂದ ಆವಿಯಾದ ತೇವಾಂಶವಿರುವುದರಿಂದ ಬಿರುಗಾಳಿಯ ಜೊತೆ ಮಳೆಯೂ ಸುರಿಯುವುದು.[]
  • ಚಂಡಮಾರುತವನ್ನು ಸೈಕ್ಲೋನ್‌, ಹರಿಕೇನ್‌, ಟೈಫೂನ್‌ (ತೂಫಾನು) ಎಂದೆಲ್ಲ ಕರೆಯಲಾಗುತ್ತದೆ. ವಾಸ್ತವದಲ್ಲಿ ಮೂರು ಪದಗಳ ಅರ್ಥ ಒಂದೇ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್‌ ಪ್ರದೇಶದಲ್ಲಿ ಹರಿಕೇನ್‌ ಎಂದೂ, ಪೆಸಿಫಿಕ್‌ ತೀರದಲ್ಲಿ ಟೈಫೂನ್‌ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್‌ ಎಂದೂ ಕರೆಯುವ ಪದ್ಧತಿ ಇದೆ.[]

ಚಂಡಮಾರುತದ ವಿಧ

ಬದಲಾಯಿಸಿ
  • ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ ಗಾಳಿಯ ವೇಗದ ತೀವ್ರತೆಯನ್ನು ಆಧಾರವಾಗಿಟ್ಟುಕೊಂಡು ಚಂಡಮಾರುತವನ್ನು ಹಲವು ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ.
  • 1.ವಾಯುಭಾರ ಕುಸಿತ: ಕಡಿಮೆ ವೇಗದ ಬಿರುಗಾಳಿಗೆ[] ಈ ರೀತಿ ಕರೆಯುತ್ತಾರೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 31ರಿಂದ 49 ಕಿ.ಮೀ. ವರೆಗೆ ಇರುತ್ತದೆ.
  • 2.ತೀವ್ರ ವಾಯುಭಾರ ಕುಸಿತ: ವಾಯುಭಾರ ಕುಸಿತ ತೀವ್ರಗೊಂಡಾಗಿನ ಸ್ಥಿತಿ. ಈ ಸ್ಥಿತಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50ರಿಂದ 61 ಕಿ.ಮೀ ನಷ್ಟಿರುತ್ತದೆ.
  • 3. ಚಂಡಮಾರುತ: ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾದರೆ (ಗಾಳಿಯ ವೇಗ ಪ್ರತಿಗಂಟೆಗೆ 62ರಿಂದ 88 ಕಿ.ಮೀ ನಷ್ಟು) ಅದನ್ನು ಚಂಡಮಾರುತ ಎನ್ನುತ್ತಾರೆ.
  • 4.ತೀವ್ರ ಚಂಡಮಾರುತ(ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಗಾಳಿಯ ವೇಗ ಪ್ರತಿ ಗಂಟೆಗೆ 89 ರಿಂದ117 ಕಿ.ಮೀ. ನಷ್ಟಿರುತ್ತದೆ.
  • 5.ಉಗ್ರ ಚಂಡಮಾರುತ (ವೆರಿ ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಪ್ರತಿ ಗಂಟೆಗೆ ಗಾಳಿಯ ವೇಗ 118ರಿಂದ 166 ಕಿ.ಮೀ. ವರೆಗೆ ಇರುತ್ತದೆ.
  • 6.ಅತ್ಯುಗ್ರ ಚಂಡಮಾರುತ: (ಎಕ್ಸ್‌ಟ್ರೀಮ್‌ಲಿ ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಇಲ್ಲಿ ಗಾಳಿಯು ಪ್ರತಿ ಗಂಟೆಗೆ 166 ರಿಂದ 221 ಕಿ.ಮೀ ವೇಗದಲ್ಲಿ ಬೀಸುತ್ತದೆ.
  • 7.ಸೂಪರ್‌ ಚಂಡಮಾರುತ: ಚಂಡಮಾರುತಗಳ ವರ್ಗೀಕರಣದಲ್ಲಿ ಇದು ಕೊನೆಯ ವಿಧ. ಪ್ರತಿ ಗಂಟೆಗೆ 222 ಕಿ.ಮೀ. ಗಿಂತ ಹೆಚ್ಚು ವೇಗದ ಚಂಡಮಾರುತ ಈ ವರ್ಗಕ್ಕೆ ಸೇರುತ್ತದೆ.

ಹೆಸರು ಇಡುವ ಪ್ರಕ್ರಿಯೆ

ಬದಲಾಯಿಸಿ
  • ಪ್ರತಿ ಚಂಡಮಾರುತಕ್ಕೂ ಹೆಸರು ಇಡಲಾಗುತ್ತದೆ. ಪ್ರಸ್ತುತ, ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ- World Meteorological Organization) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೂ ಒಂದು ಕೇಂದ್ರ ಅಧಿಕೃತ ಹೆಸರು ಇಡುತ್ತದೆ. ಮೊದಲು ಚಂಡಮಾರುತಕ್ಕೆ ಇಡಬಹುದಾದ ಎಲ್ಲ ಸಂಭಾವ್ಯ ಹೆಸರುಗಳನ್ನು ಪೆಸಿಫಿಕ್‌ ಪ್ರದೇಶದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಗೆ ಸಲ್ಲಿಸಬೇಕು.
  • ಈ ಸಮಿತಿಯು ಹೆಸರುಗಳನ್ನು ತಿರಸ್ಕರಿಸಬಹುದು ಅಥವಾ ಅದರಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಬಹುದು ಅಥವಾ ತಾನೇ ಹೆಸರು ಇಡಬಹುದು. ಆ ಪ್ರದೇಶದಲ್ಲಿರುವ ವಿವಿಧ ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಅಂತಿಮವಾಗಿ ಹೆಚ್ಚು ಮತ ಗಳಿಸಿದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇಂಗ್ಲಿಷ್‌ ವರ್ಣಮಾಲೆಯ ಅನುಕ್ರಮದಲ್ಲಿ ಹೆಸರು ಇಡಲಾಗುತ್ತದೆ. ಉದಾಹರಣೆಗೆ ವರ್ಷದಲ್ಲಿ ಮೊದಲು ಅಪ್ಪಳಿಸುವ ಚಂಡಮಾರುತಕ್ಕೆ ‘ಎ’ ಅಕ್ಷರದಿಂದ ಆರಂಭವಾಗುವ ಹೆಸರು ಇಡುತ್ತಾರೆ.
  • ಚಂಡಮಾರುತವು ಅಪಾರ ಹಾನಿ ಮಾಡಿದರೆ, ಡಬ್ಲ್ಯುಎಂಒದ ಹರಿಕೇನ್‌, ಟೈಫೋನ್‌ ಮತ್ತು ಸೈಕ್ಲೋನ್‌ ಸಮಿತಿಯ ಸದಸ್ಯರು, ಈಗಾಗಲೇ ಇಟ್ಟಿರುವ ಹೆಸರನ್ನು ವಾಪಸ್‌ ಪಡೆಯಲು ಮನವಿ ಮಾಡಬಹುದು. ಸಂಬಂಧಿಸಿದ ಸಮಿತಿಗೆ ಪರ್ಯಾಯ ಹೆಸರನ್ನು ಸೂಚಿಸಬೇಕು. ನಂತರ ಮತದಾನದ ಮೂಲಕ ಹೆಸರು ಆಯ್ಕೆ ಮಾಡಲಾಗುತ್ತದೆ.
  • ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸದಸ್ಯ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌, ಮ್ಯಾನ್ಮಾರ್‌, ಮಾಲ್ಡೀವ್ಸ್‌, ಒಮನ್‌ ಒಟ್ಟಾಗಿ ಚಂಡಮಾರುತಗಳಿಗೆ ಹೆಸರು ಇಡುವ ನಿರ್ಧಾರವನ್ನು ಕೈಗೊಳ್ಳುತ್ತವೆ. ಈ ತಿಂಗಳ ಆರಂಭದಲ್ಲಿ ತಮಿಳುನಾಡು ಮತ್ತು ಕೇರಳ ಕರಾವಳಿಗೆ ಅಪ್ಪಳಿಸಿದ್ದ ಚಂಡಮಾರುತಕ್ಕೆ ‘ನಾದಾ’ ಎಂಬ ಹೆಸರನ್ನು ಒಮನ್‌ ರಾಷ್ಟ್ರ ಇಟ್ಟಿತ್ತು. ಸ್ಪ್ಯಾನಿಷ್‌ ಮತ್ತು ಪೋರ್ಚುಗೀಸ್‌ ಭಾಷೆಯಲ್ಲಿ ‘ನಾದಾ’ ಎಂದರೆ ‘ಏನೂ ಇಲ್ಲ’ ಎಂದರ್ಥ. ರಷ್ಯಾ ಭಾಷೆಯಲ್ಲಿ ‘ಭರವಸೆ’ ಎಂದರ್ಥ. ಈ ೨೦೧೬ರ ಡಿಸೆಂಬರ್‍ನಲ್ಲಿ ಭಾರತದ ಪೂರ್ವ ತೀರಕ್ಕೆ ಅಪ್ಪಳಿಸಿರುವ ಚಂಡಮಾರುತಕ್ಕೆ ‘ವಾರ್ದಾ’ ಎಂದು ಹೆಸರಿಟ್ಟಿದ್ದು ಪಾಕಿಸ್ತಾನ. ಇದರ ಅರ್ಥ ‘ಕೆಂಪು ಗುಲಾಬಿ’.

ಚಂಡಮಾರುತಕ್ಕೆ ಹೆಸರಿಡುವ ಬಗೆ

ಬದಲಾಯಿಸಿ
  • ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ಸೂಚಿಸುತ್ತವೆ. ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು.
  • ಈ ಮೇಲಿನ ಎಂಟು ರಾಷ್ಟ್ರಗಳು ಚಂಡಮಾರುತಗಳಿಗೆ ಹೆಸರಿಡಲು ಈಗಾಗಲೇ 64 ಹೆಸರಿನ ಪಟ್ಟಿ ಸಿದ್ಧಪಡಿಸಿವೆ. ಪ್ರತಿ ರಾಷ್ಟ್ರ ಎಂಟು ಹೆಸರು ಸೂಚಿಸುವ ಅವಕಾಶ ಪಡೆದುಕೊಂಡಿವೆ.[]

ಭಾರತದ ಕರಾವಳಿಗೆ ಅಪ್ಪಳಿಸಿರುವ ಪ್ರಮುಖ ಚಂಡಮಾರುತಗಳು

ಬದಲಾಯಿಸಿ
 
ತೀವ್ರ ನಷ್ಟವುಂಟುಮಾಡಿದ ಹುಡ್ ಹುಡ್ ಚಂಡಮಾರುತ: 12 Oct 2014
  • 2014 ರಿಂದ 2016:
  • ಹುಡ್‌ಹುಡ್‌ (2014):2014ರ ಅಕ್ಟೋಬರ್‌ ತಿಂಗಳಲ್ಲಿ ಒಡಿಶಾ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅಪ್ಪಳಿಸಿದ್ದ ಹುಡ್‌ ಹುಡ್‌ ಚಂಡಮಾರುತ ಮೇ ತಿಂಗಳಲ್ಲಿ ಅಂಡಮಾನ್‌ ಸಮುದ್ರದಲ್ಲಿ ಸೃಷ್ಟಿಯಾಗಿತ್ತು. ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣದಲ್ಲೇ 124 ಮಂದಿ ಮೃತಪಟ್ಟಿದ್ದರು. ಅಂದಾಜು ರೂ.21 ಸಾವಿರ ಕೋಟಿ ನಷ್ಟ ಉಂಟು ಮಾಡಿತ್ತು.
  • ಎಆರ್‌ಬಿ–02 (2015):ಜೂನ್‌ನಲ್ಲಿ ‘ಎಆರ್‌ಬಿ–02’ ಗುಜರಾತ್‌ಗೆ ಅಪ್ಪಳಿಸಿತ್ತು. ನಂತರ ಸುರಿದ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. 70ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದರು.
  • ರೋನು (2016):ಈ ವರ್ಷದ ಮೇ ತಿಂಗಳಲ್ಲಿ ದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆ ಸುರಿಯಲು ರೋನು ಚಂಡಮಾರುತ ಕಾರಣವಾಗಿತ್ತು.ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು.
  • ಕ್ಯಾಂಟ್‌ (2016):ಬಂಗಾಳಕೊಲ್ಲಿಯ ಪೂರ್ವ–ಕೇಂದ್ರ ಭಾಗದಲ್ಲಿ ಅಕ್ಟೋಬರ್‌ನಲ್ಲಿ ಹುಟ್ಟಿದ್ದ ಚಂಡಮಾರುತ ಹೆಚ್ಚು ಹಾನಿ ಮಾಡಿಲ್ಲ.
  • ನಾದಾ (2016):ಈ ತಿಂಗಳ ಆರಂಭದಲ್ಲಿ ಕೇರಳ ಮತ್ತು ತಮಿಳುನಾಡಿಗೆ ಅಪ್ಪಳಿಸಿದ ಚಂಡಮಾರುತ. ಎರಡೂ ರಾಜ್ಯಗಳಲ್ಲಿ ಸ್ವಲ್ಪ ಮಳೆಸುರಿಸಿತು. ಹಾನಿ ಮಾಡಲಿಲ್ಲ.

ಭಾರತದಲ್ಲಿ ಚಂಡಮಾರತಗಳು

ಬದಲಾಯಿಸಿ

ಫಾಯಿಲಿನ್ ತೂಫಾನು -ಸುಂಟರಗಾಳಿ

ಬದಲಾಯಿಸಿ
  • ಫಾಯಿಲಿನ್ ಚಂಡ ಮಾರುತ
 
ಒಡಿಶಾದಲ್ಲಿ ಅನಾಹುತ ಮಾಡಿದ ಚಂಡಮಾರತ 'ಫಯಲಿನ್' ಬಂಗಾಳಾ ಕೊಲ್ಲಿ 2/3-10-2013
  • ಬಂಗಾಳಾ ಕೊಲ್ಲಿಯಲ್ಲಿ ಆರಂಭವಾದ ಶತೂಫಾನು / ಸೈಕ್ಲೋನು ೧೨/೧೩-೧೦-೨೦೧೩ ರಲ್ಲಿ ಒಡಿಶಾ, ಆಂಧ್ರದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸೂಚನೆಯನ್ನು ಹವಾಮಾನ ಇಲಾಖೆಯವರು ಪದೇ ಪದೇ ಟಿ.ವಿ ಯಲ್ಲಿ ಹೇಳುತ್ತಿದ್ದರು. ಅದು ಸುಮಾರು ೨೩೦- ೨೦೦ ಕಿ.ಮೀ. ವೇಗದಲ್ಲಿ ಒಡಿಶಾ, ಆಂಧ್ರದ ತೀರ ಪ್ರದೇಶಗಳನ್ನು ಸಮೀಪಿಸುತ್ತಿತ್ತು. ಸುಮಾರು ೨೦,೦೦೦ ಸೈನ್ಯ ಪಡೆ ಸ್ಥಳೀಯ ಪೋಲೀಸ್ ಪಡೆ ಹಗಲು ರಾತ್ರಿ ಎನ್ನದೆ ಶ್ರಮಿಸಿ ೯.೧ ಲಕ್ಷ ಕರಾವಳಿ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದರು. ಇದು ದಾಖಲೆ ಕಾರ್ಯ ಎನಿಸಿದೆ. ಅಲ್ಲಿಯ ಜಿಲ್ಲಾ ಧಿಕಾರಿಗಳು ೯೬ ಗಂಟೆಗಳ ಕಾಲ ಅವಿರತ ನಿದ್ದೆ ಬಿಟ್ಟು ಕೆಲಸ ಮಾಡಿದರೆಂದು ಮಾಧ್ಯಮಗಳು ಹೊಗಳಿವೆ (ಒಡಿಶಾದ ಗಂಜಾಮ್ ಜಿಲ್ಲೆಯ ಕ್ರಿಶನ್ ಕುಮಾರ್ ಅಲ್ಲಿಯ ಪೊಲೀಸ್ ಅಧಿಕಾರಿಗಳ ಜೊತೆ ಹಗಲುರಾತ್ರಿಯೆನ್ನದೆ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರ ಕೈ ಗೊಂಡರೆಂದು ವರದಿ ).
  • ಆದರೆ ಸಾವಿನ ಸಂಖ್ಯೆ ಕೇವಲ ೩೭ ಆದರೂ, ತೂಫಾನು ಬಂದಾಗ ಸುರಿದ ಮಳೆ ಭೀಕರ ಪ್ರವಾಹ ಉಂಟುಮಾಡಿ ಆ ಕರಾವಳಿಯ ಮನೆ ಗುಡಿಸಲುಗಳನ್ನು ನಾಶ ಮಾಡಿತು. ತಮ್ಮ ಊರಿಗೆ ಹಿಂತಿರುಗಿದ ೨.೫ ಲಕ್ಷ ಜನ ಮನೆ-ಮಠ, ಆಹಾರವಿಲ್ಲದೆ, ಅತೀವ ತೊಂದರೆಗೆ ಒಳ ಗಾದರು. ಪ್ರವಾಹದಲ್ಲಿ ಮನೆ-ರಸ್ತೆಗಳಲ್ಲಿ ನೀರು ನಿಂತು ೧೫-೧೦-೨೦೧೩ ಆದರೂ ಇಳಿದಿರಲಿಲ್ಲ. ಒಡಿಶಾ, ಆಂಧ್ರ, ಕೇಂದ್ರ ಸರ್ಕಾರಗಳು ತಮ್ಮ ಪೂರ್ಣ ಶಕ್ತಿಯನ್ನು ಉಪಯೋಗಿಸಿ ಜನರ ಸಂಕಷ್ಟ ನಿವಾರಣೆಗೆ ಶ್ರಮಿಸುತ್ತಿರುವುದಾಗಿ ಹೇಳುತ್ತಿವೆ- ಸುದ್ದಿ ಮಾಧ್ಯಮಗಳೂ ಹಾಗೆಯೇ ಹೇಳುತ್ತಿವೆ.[]

ಆಂಧ್ರದಲ್ಲಿ

ಬದಲಾಯಿಸಿ
  • ದಿ.27,ಅಕ್ಟೋಬರ್ 2013
  • ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿದೆ. ಸುಮಾರು 30 ಜಿಲ್ಲೆಗಳ ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಪ್ರವಾಹದಿಂದ ರಸ್ತೆಹಾಗೂ ರೈಲು ಮಾರ್ಗಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದೆ. ಪಶ್ಚಿಮ ಬಂಗಾಳದಲ್ಲೂ ಮಳೆ ಸಂಬಂಧಿ ಅವಘಡಗಳಿಂದ ಮೂವರು ಮೃತಪಟ್ಟಿದ್ದಾರೆ.ಕೋಲ್ಕೊತಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
  • ಆಂಧ್ರ ಪ್ರದೇಶದಲ್ಲಿ ಮಳೆಗೆ 29 ಮಂದಿ ಬಲಿಯಾಗಿದ್ದರೆ, ಒಡಿಶಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಆಂಧ್ರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ತಗ್ಗು ಪ್ರದೇಶದ ಸುಮಾರು 72 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 3,230 ಗ್ರಾಮಗಳು ಜಲಾವೃತಗೊಂಡಿದ್ದು, ಮಳೆಯಿಂದ ಸುಮಾರು 6.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಹಾಗೂ 6,597 ಮನೆಗಳಿಗೆ ಹಾನಿ ಉಂಟಾಗಿದೆ. ವಿಜಯವಾಡ-ಹೈದರಾಬಾದ್ ಹೆದ್ದಾರಿಯುದ್ದಕ್ಕೂ ನೀರು ನಿಂತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.[]

ಸಂಕಷ್ಟದಲ್ಲಿ 5.32 ಲಕ್ಷ ಜನರು

ಬದಲಾಯಿಸಿ
  • ಒಡಿಶಾದ 13 ಜಿಲ್ಲೆಗಳು ಪ್ರವಾಹ ಹಾಗೂ ಮಳೆಯಿಂದ ನಲುಗಿಹೋಗಿವೆ. ರುಸಿಕುಲ್ಯಾ, ವನ್ಸಧಾರಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 2 ಸಾವಿರಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. 5.32 ಲಕ್ಷ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಕಾರ ಈವರೆಗೆ ತಗ್ಗು ಪ್ರದೇಶದಲ್ಲಿ ವಾಸಿಸುವ 1.74 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

[]

ಹೆಲೆನ್ ಚಂಡಮಾರುತ

ಬದಲಾಯಿಸಿ
  • ೧೧-೩-೨೦೧೪-ಸುದ್ದಿ
  • ಅಕಾಲಿಕ ಮಳೆ - ಮಾರ್ಚಿ ೨೦೧೪ರಲ್ಲಿ ಆದ ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆಯೊಂರಲ್ಲಿಯೇ ಬಿದ್ದ ಅಕಾಲಿಕ ಆಲಿಕಲ್ಲಿನಿಂದ ಕೂಡಿದ ಉತ್ಪಾತ ಮಳೆಯಿಂದಾಗಿ ಸುಮಾರು ೧..೨೨ ಲPಕರೆ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಿದ್ದಾರೆ. ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ ನೀರುಳ್ಳಿ ಮತ್ತಿತರ ಬೆಳೆಗಳು ೧.೮೨ ಟನ್ ಗಳಷ್ಟು ಸುಮಾರು ರೂ.೩೩೭ಕೋಟಿ ಬೆಲೆಯದು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಹೇಳಿಕೆ.(ಪ್ರಜಾವಾಣಿ ೧೨-೩-೨೦೧೪) ಈ ಮಳೆಯಿಂದ, ಬೆಳಗಾವಿ ,ವಿಭಾಗದ ೯ ಜಿಲ್ಲೆಗಳಲ್ಲಿ ಹನ್ನೊಂದು ಜನ ಸತ್ತಿದ್ದಾರೆ. ೧೫೭ ಜಾನುವಾರುಗಳು ಸತ್ತಿವೆ. ೫೫೧ ಮನೆಗಳು ಹಾನಿಗೊಳಗಾಗಿವೆ. ಇನ್ನೂ ಹೆಚ್ಚಿನ ಹಾನಿಯಾಗಿದ್ದು ಪೂರ್ಣಮಹಿತಿ ಪಡೆಯಲು ಪ್ರಯತ್ನ ನಡೆದಿದೆ.
  • ಬಾಗಲಕೋಟೆ, ಬೆಳಗಾವಿ, ಬೀದರ್‌, ವಿಜಾಪುರ, ಗುಲ್ಬರ್ಗಾ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಒಟ್ಟು 1.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಇದರಿಂದ ರೂ. 691 ಕೋಟಿಯಷ್ಟು ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಮಾಡಿದೆ.[]

ವಾರ್ದಾ’ ಚಂಡಮಾರುತ

ಬದಲಾಯಿಸಿ
  • 12 Dec, 2016;ತಮಿಳುನಾಡು
  • ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ಅಪ್ಪಳಿಸಿದ ‘ವಾರ್ದಾ’ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆಂದು ತಮಿಳುನಾಡು ಸರ್ಕಾರ ಅಧೀಕೃತವಾಗಿ ಘೋಷಿಸಿದೆ. ಭಾರೀ ಮಳೆ ಮತ್ತು ಬಿರುಗಾಳಿಗೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಮಹಾಬಲಿಪುರಂನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಮನೆಗಳ ಮೇಲ್ಛಾವಣಿಗಳು ಗಾಳಿಗೆ ಹಾರಿ ಹೋಗಿವೆ.[]
  • ವಾರ್ಧಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಭೀಕರ ಪರಿಣಾಮವನ್ನು ಬೀರಿದೆ. ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಬಿರುಗಾಳಿಯ ವೇಗ 150 ಕಿಲೋ ಮೀಟರ್ ಗಿಂತ ಹೆಚ್ಚಿದೆ ಹವಾಮಾನ ಇಲಾಖೆಯ ಸೂಚನೆಯಂತೆ ಬಂಗಾಳ ಕೊಲ್ಲಿಯಲ್ಲಿ ವಾರ್ಧಾ ಚಂಡಮಾರುತ ಹುಟ್ಟಿ ತಮಿಳುನಾಡಿಗೆ ಸೋಮವಾರ ಮಧ್ಯಾಹ್ನ 1.30 ಬಂದಿದೆ. ಹಾಗು ಮಧ್ಯಾಹ್ನ 2 ಗಂಟೆಗೆ ಆಂಧ್ರ ಪ್ರದೇಶಕ್ಕೆ ಚಂಡಮಾರುತ ಪ್ರವೇಶಿಸಿದೆ..ತಮಿಳುನಾಡಿನಲ್ಲಿ ಚಂಡಮಾರುತ ತನ್ನ ರುದ್ರ ನರ್ತನ ಮಾಡುತ್ತಿದ್ದು ಹಲವಾರು ದುಷ್ಪರಿಣಾಮವನ್ನು ಬೀರಿದೆ. ತಮಿಳುನಾಡಿನಲ್ಲಿ ಚಂಡಮಾರುತದ ಭೀಕರತೆ ಕಡಿಮೆಯಾಗುತ್ತಿದೆ. ಸುಮಾರು 3 ಗಂಟೆಗಳ ಕಾಲ ವಾರ್ಧಾ ಅನಾಹುತಗಳನ್ನು ಮಾಡಿದೆ. ಸಾರಿಗೆ, ವಿದ್ಯುತ್, ವ್ಯಾಪಾರ ವಹಿವಾಟುಗಳು ಸ್ಥಬ್ಧಗೊಂಡಿದೆ. * ಆಂಧ್ರದಲ್ಲಿ ವಾರ್ಧಾ ಅಬ್ಬರ ಪ್ರಾರಂಭವಾಗಿದೆ. ಆಂಧ್ರದ ಜನತೆಗೆ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಮನೆಯಿಂದ ಹೊರಬರದಂತೆ ತಿಳಿಸಿದೆ. ಆಂಧ್ರದಲ್ಲಿ 12 ಗಂಟೆ ವರೆಗೂ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[೧೦]
  • ವಾರ್ಧಾ ಚಂಡಮಾರುತದ ಅನಾಹುತ:ಫೋಟೋ:ಭಾರಿ ಮಳೆ, ಬಿರುಸಿನ ಗಾಳಿಗೆ ಹೋರ್ಡಿಂಗ್ ಗಳು, 4 ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ. [೧]
  • ೧೩-೧೨-೨೦೧೬;ಭಾರಿ ವೇಗದ ಗಾಳಿ ಮತ್ತು ಮಳೆಯ ಅಬ್ಬರದ ವಾರ್ದಾ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಇಲ್ಲಿಯವರೆಗೂ ಹತ್ತು ಜನರು ಮೃತಪಟ್ಟಿದ್ದಾರೆ. ವಾರ್ದಾ ಆರ್ಭಟಕ್ಕೆ ನಲುಗಿರುವ ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ತಾಸಿಗೆ ನೂರು ಕಿಲೋಮೀಟರ್‌ಗೂ ಹೆಚ್ಚು ವೇಗದಲ್ಲಿ ಬೀಸುತ್ತಿದ್ದ ಗಾಳಿ ಸಾವಿರಾರು ಮರಗಳನ್ನು ಬುಡಮೇಲುಗೊಳಿಸಿದೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ, ವಿಮಾನ ಸೇವೆಯೂ ಸೇರಿ ಎಲ್ಲ ಸಂಚಾರ ವ್ಯವಸ್ಥೆ ಸ್ತಬ್ಧವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.[೧೧]

ತಮಿಳುನಾಡನಲ್ಲಿ ನಷ್ಟ

ಬದಲಾಯಿಸಿ
  • 14 Dec, 2016
  • ತಮಿಳುನಾಡಿನ ಮೂರು ಜಿಲ್ಲೆಗಳನ್ನು ಹಾದು ಹೋದ ವಾರ್ದಾ ಚಂಡಮಾರುತದಿಂದಾಗಿ ರಾಜ್ಯದಲ್ಲಿ ರೂ.6,750 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘ (ಅಸೋಚಾಂ) ಅಂದಾಜಿಸಿದೆ. ಚಂಡಮಾರುತದಿಂದಾಗಿ ಮರಗಳು ಉರುಳಿವೆ, ಕಟ್ಟಡಗಳು ಹಾನಿಯಾಗಿವೆ. ಬಾಳೆ ತೋಟ, ಪಪ್ಪಾಯಿ, ಭತ್ತ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಸ್ಸೊಚಾಮ್‌ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ತಿಳಿಸಿದ್ದಾರೆ.ಗಜ ಚಂಡಮಾರುತ[೧೨]

ಉಲ್ಲೇಖ

ಬದಲಾಯಿಸಿ
  1. What is a Cyclone?
  2. "ಚಂಡಮಾರುತದ ಹಿಂದು ಮುಂದು.;ಪ್ರಜಾವಾಣಿ;13 Dec, 2016". Archived from the original on 2016-12-13. Retrieved 2016-12-13.
  3. https://www.eartheclipse.com/geography/thunderstorm-formation-types-effects.html
  4. ಚಂಡಮಾರುತಕ್ಕೆ ನಾಮಕರಣ- ;12 Dec, 2016
  5. ೧೫-೧೦-೨೦೧೩ ರ ಪ್ರಜಾವಾಣಿ ಮತ್ತು ಟಿ.ಒ.ಐ.ಸುದ್ದಿ ಮಾಧ್ಯಮದಿಂದ
  6. ವಿಜಯಕರ್ನಾಟಕ ಸುದ್ದಿ/Oct 27, 2013)
  7. ವಿಜಯಕರ್ನಾಟಕ ಸುದ್ದಿ/Oct 27, 2013
  8. ೧೧-೩-೨೦೧೪ ಪ್ರಜಾವಾಣಿ
  9. ವಾರ್ದಾ’ ಚಂಡಮಾರುತಕ್ಕೆ ಎರಡು ಬಲಿ
  10. ವಾರ್ಧಾ ಅಬ್ಬರ: ಆಂಧ್ರದಲ್ಲಿ ಹೆಚ್ಚು
  11. ವಾರ್ದಾ ಅಬ್ಬರಕ್ಕೆ ತಮಿಳುನಾಡಿನಲ್ಲಿ 10 ಸಾವು;13 Dec, 2016
  12. "ವಾರ್ದಾದಿಂದ ₹6,750 ಕೋಟಿ ನಷ್ಟ;14 Dec, 2016". Archived from the original on 2016-12-14. Retrieved 2016-12-14.