ಖಾಕಿ ಪಂಥ
ಖಾಕಿ ಪಂಥ ಎನ್ನುವುದು ಉತ್ತರ ಭಾರತದ ವೈಷ್ಣವ ಪಂಥದಲ್ಲಿನ ಒಂದು ಉಪಪಂಥ. ಪಾರ್ಸಿ ಭಾಷೆಯಲ್ಲಿ ಖಾಕಿ ಎಂದರೆ ಬೂದಿ ಎಂದರ್ಥ.
ವೈಶಿಷ್ಟ್ಯಗಳು
ಬದಲಾಯಿಸಿಈ ಜನ ಬೂದಿಯನ್ನು ಧಾರಣೆ ಮಾಡುತ್ತಾರಾಗಿ ಇವರಿಗೆ ಖಾಕಿ ಪಂಥದವರೆಂದು ಹೆಸರು ಬಂತು. ಇವರು ವೈಷ್ಣವರಾದರೂ ಕೆಲವು ಶೈವ ಪದ್ಧತಿಗಳನ್ನು ಅನುಸರಿಸುತ್ತಾರೆ. ಶೈವರಂತೆ ತಲೆಯ ಕೂದಲನ್ನು ಜಟೆಯಾಗಿ ಕಟ್ಟಿಕೊಳ್ಳುತ್ತಾರೆ. ಮೈಗೆಲ್ಲ ಬೂದಿ ಬಳಿದುಕೊಂಡು ಒಂದು ಲಂಗೋಟಿ ವಿನಾ ಬೇರೇನನ್ನೂ ಧರಿಸದೆ ಬರಿಮೈಯಲ್ಲಿ ತಿರುಗಾಡುತ್ತಾರೆ; ಲಕ್ಷ್ಮಣನ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ರಾಮ ವನವಾಸ ಕೈಗೊಂಡಾಗ ಲಕ್ಷ್ಮಣ ಶೋಕಗೊಂಡು ಮೈಗೆಲ್ಲ ಬೂದಿ ಬಳಿದುಕೊಂಡನೆಂದೂ ಅವನ ಅನುಯಾಯಿಗಳಾದವರು ಅಂದಿನಿಂದ ಭಸ್ಮಧಾರಣೆ ಮಾಡುತ್ತ ಬಂದರೆಂದೂ ಈ ಪಂಥದವರು ಹೇಳಿಕೊಳ್ಳುತ್ತಾರೆ.
ಇವರ ಪಂಥ ಹದಿನಾರನೆಯ ಶತಮಾನದಲ್ಲಿ ಹುಟ್ಟಿಕೊಂಡಿತು. ಕೃಷ್ಣದಾಸನ ಶಿಷ್ಯನಾದ ಕಿಲ್ಹ ಎಂಬಾತ ಇದರ ಸ್ಥಾಪಕ. ರಾಮಾನಂದನ ಶಿಷ್ಯ ಅನಂತಾನಂದ ಈ ಪಂಥವನ್ನು ಬೆಳೆಸಲು ಶ್ರಮಿಸಿದ. ಈ ಪಂಥದ ಮುಖ್ಯ ಕೇಂದ್ರ ಅಯೋಧ್ಯೆ. ಇಲ್ಲಿ ದಯಾರಾಮನೆಂಬುವನಿಂದ ಸ್ಥಾಪಿತವಾದ ಒಂದು ಮಠವಿದೆ. ಅಯೋಧ್ಯೆಯ ಹನುಮಾನ್ ದೇವಸ್ಥಾನದ ಅರ್ಚಕರು ಖಾಕಿಗಳು.[೧] ಗುಜರಾತಿನ ಲವಾವಾಡ ಎಂಬ ಸ್ಥಳದಲ್ಲೂ, ಅಹಮದಾಬಾದಿನಲ್ಲೂ ಖಾಕಿಗಳ ಮಠಗಳಿವೆ.
ಉಲ್ಲೇಖಗಳು
ಬದಲಾಯಿಸಿ- ↑ A Sketch of the Religious Sects of the Hindus - Horace Hayman Wilson, Asiatic Society, 1828