ಆಯುರ್ವೇದದಲ್ಲಿ ಭಸ್ಮವನ್ನು[] ಭಸ್ಮೀಕರಣದಿಂದ ಪಡೆದ ಪದಾರ್ಥವೆಂದು ವ್ಯಾಖ್ಯಾನಿಸಲಾಗಿದೆ.

ಭಸ್ಮ ಮತ್ತು ಪಿಷ್ಟಿಯನ್ನು (ಪುಡಿಮಾಡಿದ ರತ್ನ ಅಥವಾ ಲೋಹ) ಮೂಲಿಕೆಗಳೊಂದಿಗೆ ಆಯುರ್ವೇದದಲ್ಲಿ ಔಷಧೀಯ ವಸ್ತುವಾಗಿ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ, ಸ್ವಲ್ಪ ಮಟ್ಟಿಗೆ ಯುನಾನಿ ವೈದ್ಯ ಪದ್ಧತಿಯಲ್ಲಿ ಕೂಡ. ಈ ಔಷಧಿಗಳನ್ನು ತಯಾರಿಸುವ ವಿಧಾನಗಳು ಸಮಯ ತೆಗೆದುಕೊಳ್ಳುತ್ತವೆ ಮತ್ತು ಸಂಕೀರ್ಣವಾಗಿವೆ.

ಭಸ್ಮವು ರತ್ನ ಅಥವಾ ಲೋಹವನ್ನು ಬೂದಿಯಾಗಿ ಪರಿವರ್ತಿಸಿದಾಗ ತಯಾರಾದ ಪದಾರ್ಥವಾಗಿರುತ್ತದೆ. ರತ್ನಗಳು ಅಥವಾ ಲೋಹಗಳನ್ನು ಶುದ್ಧೀಕರಿಸಿ, ಪೇಷಣದ ಪ್ರಕ್ರಿಯೆಗೆ ಒಳಪಡಿಸಿ, ಮೂಲಿಕೆ ಸಾರಗಳಲ್ಲಿ ನೆನೆಸಿ ಮೆದುವಾಗಿಸಲಾಗುತ್ತದೆ. ಅದರಿಂದ ಪಡೆದ ಕಣಕವನ್ನು ಭಸ್ಮೀಕರಿಸಿ ಬೂದಿಯನ್ನು ಪಡೆಯಲಾಗುತ್ತದೆ.[]

ಭಸ್ಮದ ತಯಾರಿಕೆಯಲ್ಲಿ ಸೇರಿದ ವಿವಿಧ ಹಂತಗಳೆಂದರೆ: ಶೋಧನ, ಮಾರಣ, ಚಲನ, ಧಾವನ, ಗಲನ, ಪುಟ್ಟನ, ಮರ್ದನ, ಭವನ, ಅಮೃತೀಕರಣ ಮತ್ತು ಸಂಧಾರಣ.

ಟಿಪ್ಪಣಿಗಳು

ಬದಲಾಯಿಸಿ
  1. Ayurvedic formulary of India , 1978a
  2. Major Herbs of Ayurveda, Elizabeth M. Williamson.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಭಸ್ಮ&oldid=1129568" ಇಂದ ಪಡೆಯಲ್ಪಟ್ಟಿದೆ