ವನವಾಸ ಎಂಬುದು ಸಂಸ್ಕೃತ ಪದವಾಗಿದ್ದು, ಇದರರ್ಥ ವನ/ಕಾಡು/ಅರಣ್ಯದಲ್ಲಿನ ವಾಸ. ಇದನ್ನು ಸ್ವಇಚ್ಛೆಯಿಂದ ಕೈಗೊಳ್ಳಬಹುದಾದರೂ, ಇದು ಸಾಮಾನ್ಯವಾಗಿ ಶಿಕ್ಷೆಯ ರೂಪದ ಬಲವಂತದ ಗಡೀಪಾರು ಎಂಬ ಅರ್ಥವನ್ನು ತೆಗೆದುಕೊಳ್ಳುತ್ತದೆ. (ರಾಮಾಯಣ ಹಾಗೂ ಮಹಾಭಾರತದಂತಹ) ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ನಿಗದಿಪಟ್ಟ ಪ್ರಾಚೀನ ಹಿಂದೂ ಮಹಾಕಾವ್ಯಗಳಲ್ಲಿ, ಇದು ಸಾಮಾನ್ಯವಾಗಿ ಕಠಿಣ ಶಿಕ್ಷೆಯಾಗಿ ಚಿತ್ರಿಸಲ್ಪಡುತ್ತದೆ. ಆಗ ಭಾರತೀಯ ಉಪಖಂಡದ ಬಹಳಷ್ಟು ಭಾಗವು ಕಾಡಾಗಿತ್ತು.[]

ವನವಾಸವು ಸ್ವಯಂ ವಿಹಿತವಾಗಿದ್ದಾಗ, ಅದು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಪ್ರಾಪಂಚಿಕ ವ್ಯವಹಾರಗಳಿಂದ ಏಕಾಂತತೆಯನ್ನು ಸೂಚಿಸಬಹುದು, ಉದಾಹರಣೆಗೆ ಪ್ರಾಚೀನ ಋಷಿಗಳು ಸ್ಥಾಪಿಸಿಕೊಂಡ ಆಶ್ರಮಗಳು. ಶಿಕ್ಷೆಯಾಗಿ ಹೇರಿದಾಗ, ಇದು ಸಮಾಜದಿಂದ ಬಲವಂತದ ಪ್ರತ್ಯೇಕೀಕರಣ ಮತ್ತು ಮಾರಣಾಂತಿಕ ಪರಿಸ್ಥಿತಿಗಳಿಗೆ (ಪ್ರಾಕೃತಿಕ ಶಕ್ತಿಗಳು ಮತ್ತು ವನ್ಯಜೀವಿಗಳು) ಒಡ್ಡಿಕೆ ಎಂಬ ಸೂಚ್ಯಾರ್ಥವನ್ನು ತೆಗೆದುಕೊಳ್ಳುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Gilbert Pollet, "Indian Epic Values: Ramayana and Its Impact: Proceedings of the 8th International Ramayana Conference, Leuven, 6-8 July 1991"; Peeters Publishers, 1995, ISBN 90-6831-701-6, ISBN 978-90-6831-701-5.
"https://kn.wikipedia.org/w/index.php?title=ವನವಾಸ&oldid=948992" ಇಂದ ಪಡೆಯಲ್ಪಟ್ಟಿದೆ