ಹನುಮಾನ್ ಗಢಿ ದೇವಾಲಯ
ಹನುಮಾನ್ ಗಢಿ ಭಾರತದ ಉತ್ತರಪ್ರದೇಶ ರಾಜ್ಯದಲ್ಲಿರುವ ಹನುಮಂತನ ಒಂದು 10 ನೇ ಶತಮಾನದ ದೇವಸ್ಥಾನವಾಗಿದೆ. ಅಯೋಧ್ಯೆಯಲ್ಲಿ ನೆಲೆಗೊಂಡಿರುವ ಇದು ಇತರ ದೇವಾಲಯಗಳಾದ ನಾಗೇಶ್ವರ ನಾಥ್ ಮತ್ತು ನಿರ್ಮಾಣದ ಹಂತದಲ್ಲಿರುವ ರಾಮ ದೇವಾಲಯದ ಜೊತೆಗೆ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.[೧] ಅಯೋಧ್ಯೆಯ ಮಧ್ಯದಲ್ಲಿ ನೆಲೆಗೊಂಡಿರುವ ಇದು 76 ಮೆಟ್ಟಿಲುಗಳನ್ನು ಹೊಂದಿದ್ದು ಉತ್ತರ ಭಾರತದಲ್ಲಿರುವ ಹನುಮಂತನ ಅತ್ಯಂತ ಜನಪ್ರಿಯ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿದೆ. ರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬುದು ಒಂದು ಪದ್ಧತಿಯಾಗಿದೆ.[೨][೩][೪] ಈ ದೇವಾಲಯದಲ್ಲಿ ಹನುಮಂತನ ತಾಯಿ ಅಂಜನಿ, ಮತ್ತು ಅವಳ ಮಡಿಲಲ್ಲಿ ಬಾಲ ಹನುಮಂತನ ಮೂರ್ತಿ ಇದೆ.[೫]
ಹನುಮಾನ್ ಗಢಿ ದೇವಾಲಯವು ರಾಮ ಜನ್ಮಭೂಮಿ ಬಳಿ ಇದೆ. 1855 ರಲ್ಲಿ , ಅವಧ್‍ನ ನವಾಬನು ಮುಸ್ಲಿಮರಿಂದ ವಿನಾಶವಾಗದಂತೆ ಈ ದೇವಾಲಯವನ್ನು ರಕ್ಷಿಸಿದನು. ಹನುಮಾನ್ ಗಢಿಯನ್ನು ಮಸೀದಿಯ ಮೇಲೆ ನಿರ್ಮಿಸಲಾಗಿದೆ ಎಂದು ಮುಸ್ಲಿಮರು ಭಾವಿಸಿದ್ದರು.[೬][೭] 1855 ರ ವಿವಾದವು ಬಾಬರಿ ಮಸೀದಿ - ರಾಮ್ ದೇವಾಲಯದ ಸ್ಥಳಕ್ಕೆ ಇರಲಿಲ್ಲ, ಬದಲಾಗಿ ಹನುಮಾನ್ ಗಢಿ ದೇವಸ್ಥಾನಕ್ಕೆ ಆಗಿತ್ತು ಎಂದು ಇತಿಹಾಸಕಾರ ಸರ್ವೆಪಲ್ಲಿ ಗೋಪಾಲ್ ಹೇಳಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ Lutgendorf, Philip (2007-01-11). Hanuman's Tale: The Messages of a Divine Monkey (in ಇಂಗ್ಲಿಷ್). Oxford University Press. p. 244. ISBN 978-0-19-804220-4.
- ↑ "Hanuman Garhi". Times of India Travel. Retrieved 2020-07-28.
- ↑ "Hanuman Garhi". www.uptourism.gov.in. Archived from the original on 2020-07-28. Retrieved 2020-07-28.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Incredible India | The Hanuman Garhi". www.incredibleindia.org. Retrieved 2020-07-28.
- ↑ "Hanuman Garhi | Ayodhya | UP Tourism". www.ayodhya.gov.in. Archived from the original on 2020-07-05. Retrieved 2020-07-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Dutta, Prabhash K (7 December 2017). "Ayodhya: When Wajid Ali Shah saved Hanuman temple from Muslims near Babri Masjid". India Today (in ಇಂಗ್ಲಿಷ್). Retrieved 2020-07-28.
- ↑ Pillai, Manu S. (2017-12-06). "When a temple was besieged in Ayodhya". Livemint (in ಇಂಗ್ಲಿಷ್). Retrieved 2020-07-29.