ಕೆ. ಎಸ್. ನಿಸಾರ್ ಅಹಮದ್
ಭಾರತೀಯ ಕವಿ
ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.
ಪ್ರೊ. ಕೆ. ಎಸ್. ನಿಸಾರ್ ಅಹಮದ್ | |
---|---|
ಜನನ | ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ | ೫ ಫೆಬ್ರವರಿ ೧೯೩೬
ಮರಣ | 3 May 2020[೧] ಬೆಂಗಳೂರು, yelahanka | (aged 84)
ವೃತ್ತಿ | ಸಾಹಿತಿ, ಪ್ರಾಧ್ಯಾಪಕ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಾವ್ಯ ಮತ್ತು ವಿಮರ್ಶೆ |
ಸಾಹಿತ್ಯ ಚಳುವಳಿ | ನವ್ಯ ಕಾವ್ಯ |
ಪ್ರಮುಖ ಕೆಲಸ(ಗಳು) | ಮನಸು ಗಾಂಧಿ ಬಜಾರು(1960) ನಿತ್ಯೋತ್ಸವ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧) |
ಪ್ರಭಾವಗಳು |
ಜೀವನ
ಬದಲಾಯಿಸಿನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು
ಸಾಹಿತ್ಯ
ಬದಲಾಯಿಸಿನಿಸಾರ್ ಅಹಮದ್ [೨] ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
- ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.[೩]
- ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು.
- ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ
- ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
- ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ಕೃತಿಗಳು
ಬದಲಾಯಿಸಿಕವನ ಸಂಕಲನಗಳು
ಬದಲಾಯಿಸಿ- ಮನಸು ಗಾಂಧಿ ಬಜಾರು (೧೯೬೦)[೪]
- ನೆನೆದವರ ಮನದಲ್ಲಿ (೧೯೬೪)
- ಸುಮುಹೂರ್ತ (೧೯೬೭)
- ಸಂಜೆ ಐದರ ಮಳೆ (೧೯೭೦)
- ನಾನೆಂಬ ಪರಕೀಯ (೧೯
- ನಿತ್ಯೋತ್ಸವ (೧೯೭೬)
- ಸ್ವಯಂ ಸೇವೆಯ ಗಿಳಿಗಳು (೧೯೭೭)
- ಅನಾಮಿಕ ಆಂಗ್ಲರು(೧೯೮೨),
- ಬಹಿರಂತರ (೧೯೯೦)
- ಸಮಗ್ರ ಕವಿತೆಗಳು (೧೯೯೧)
- ನವೋಲ್ಲಾಸ (೧೯೯೪)
- ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
- ಅರವತ್ತೈದರ ಐಸಿರಿ(೨೦೦೧)
- ಸಮಗ್ರ ಭಾವಗೀತೆಗಳು(೨೦೦೧)
- ಪ್ರಾತಿನಿಧಿಕ ಕವನಗಳು(೨೦೦೨)
- ನಿತ್ಯೋತ್ಸವ ಕವಿತೆ [೫]
ಗದ್ಯ ಸಾಹಿತ್ಯ
ಬದಲಾಯಿಸಿ- ಅಚ್ಚುಮೆಚ್ಚು
- ಇದು ಬರಿ ಬೆಡಗಲ್ಲೊ ಅಣ್ಣ
- ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
- ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿ- ೨೦೦೬ರ ಮಾಸ್ತಿ ಪ್ರಶಸ್ತಿ.
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಗೊರೂರು ಪ್ರಶಸ್ತಿ
- ಅನಕೃ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ಪಂಪ ಪ್ರಶಸ್ತಿ
- ೧೯೮೧ರ ರಾಜ್ಯೋತ್ಸವ ಪ್ರಶಸ್ತಿ
- ೨೦೦೩ರ ನಾಡೋಜ ಪ್ರಶಸ್ತಿ
- ೨೦೦೬ರ ಅರಸು ಪ್ರಶಸ್ತಿ
- ೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ "ಕೆ ಎಸ್ ನಿಸಾರ್ ಅಹಮದ್ ನಿಧನ". ಪ್ರಜಾವಾಣಿ. Retrieved 3 May 2020.
- ↑ ಕೆ. ಎಸ್. ನಿಸಾರ್ ಅಹಮದ್
- ↑ ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು
- ↑ 'ಮಾಸ್ತಿ': ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು
- ↑ ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ