ಕೀರ್ವಾಣಿ

(ಕಿರ್ವಾಣಿ ಇಂದ ಪುನರ್ನಿರ್ದೇಶಿತ)
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಕಿರ್ವಾಣಿ ವಿಶೇಷವಾಗಿ ವಾದ್ಯಗಳ ಸಂಗೀತಕ್ಕೆ ಸೂಕ್ತವಾಗಿರುವ ಒಂದು ಹಿಂದುಸ್ತಾನಿ ಸಂಗೀತದ ಒಂದು ರಾಗ ವಾಗಿದೆ. ಕಿರ್ವಾಣಿ ರಾಗದಲ್ಲಿ ಪಿಲೂ ರಾಗದ ಛಾಯೆಗಳಿವೆ.

ಆರೋಹಣ ಮತ್ತು ಅವರೋಹಣ

ಬದಲಾಯಿಸಿ

ಆರೋಹಣ ಸ ರಿ ಗ ಮ ಪ ದ ನಿ ಸ


ಅವರೋಹಣ ಸ ನಿ ದ ಪ ಮ ಗ ರೀ ಸ

  • ಸ್ವರಗಳ ಏರಿಕೆಗೆ ಆರೋಹಣವೆಂದೂ ಇಳಿಯುವಿಕೆಗೆ ಅವರೋಹಣವೆಂದೂ ಸಂಗೀತದಲ್ಲಿ ಸಂಜ್ಞೆ. ಜಗತ್ತಿನ ಎಲ್ಲ ಸಂಗೀತ ಪದ್ಧತಿಗಳಲ್ಲೂ ಇವು ಮೌಲಿಕ ತತ್ತ್ವಗಳೂ ತಂತ್ರಗಳೂ ಆಗಿವೆ. ಗೇಯ ಸಾಧ್ಯವಾದುದನ್ನೆಲ್ಲ ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಲು ಮತ್ತು ಶಾಸ್ತ್ರೀಯ ಪ್ರಮಾಣ ಗಳೊಡನೆ ಹೋಲಿಸಲು ಇವು ಅಗತ್ಯವಾಗುತ್ತವೆ. ರೂಢಿಯಲ್ಲಿರುವ ಸಮಗ್ರ ಸ್ವರಸ್ಥಾನಗಳನ್ನು ಪ್ರತಿನಿಧಿಸುವ ಏಳು ಸ್ವರಗಳಲ್ಲಿ ಹಿಂದಿನದಕ್ಕಿಂತ ಮುಂದಿನದು ಧ್ವನಿ ಮಟ್ಟದಲ್ಲಿ ಕ್ರಮವಾಗಿ ಏರುವಂತೆ ವ್ಯವಸ್ಥೆಗೊಳಿಸಿರುವುದನ್ನು ಸ್ವರಸಪ್ತಕವೆಂದೂ, ಸ್ವರಸಪ್ತಕದ ಕೊನೆಯಲ್ಲಿ ಮೊದಲನೆಯ ಸ್ವರದ ಪ್ರಥಮ ಊ‍ರ್ಧ್ವಾವರ್ತನವನ್ನು ಸೇರಿಸಿಕೊಂಡರೆ, ಬರುವುದನ್ನು ಸ್ವರಾಷ್ಟಕವೆಂದೂ ಕರೆಯಲಾಗುತ್ತದೆ.
  • ಮೊದಲನೆಯದು ಸ್ವರಚಲನೆ, ಮೇಳತ್ವ ಮೊದಲಾದುವುಗಳಿಗೆ ಮಾತೃಕೆಯಾದರೆ ಎರಡನೆಯದು ಅವುಗಳಲ್ಲಿ ರಂಜಕಾಂಶಗಳಾದ ಹಿತಾಹಿತ ಸಂಬಂಧಗಳು, ಇತರ ಸ್ಥಾನಗಳ ಪ್ರಾಪ್ತಿ ಮುಂತಾದವುಗಳಿಗೆ ತಾಯಿಯಾಗುತ್ತದೆ. ಇವೆರಡೂ ಸೇರಿ ರಾಗತತ್ವದ, ಅದರಿಂದ ಗೀತತತ್ತ್ವದ ಹುಟ್ಟಿಗೆ ಕಾರಣವಾಗುತ್ತವೆ.
  • ಏಳು ಸ್ವರಗಳನ್ನೂ ಕ್ರಮವಾಗಿ ಆರೋಹಿಸುವುದು, ಅನಂತರ ಕ್ರಮವಾಗಿ ಅವರೋಹಿಸುವುದು-ಇಂಥ ಚಲನೆಗೆ ನಮ್ಮ ಪ್ರಾಚೀನರು ಮೂರ್ಛನೆಯೆಂಬ ಹೆಸರಿಟ್ಟಿದ್ದರು. ಇವುಗಳನ್ನು ಸಮ ಸಾಮಯಿಕ ರಾಗಗಳ ಹೋಲಿಕೆಗಾಗಿ ಬಳಸುತ್ತಿದ್ದರು. ಹೀಗೆ ಒಂದು ರಾಗದ ಆರೋಹಣ-ಅವರೋಹಣಗಳನ್ನು ಮೂರ್ಛನೆಯೆಂದು ಕರೆಯುವ ವಾಡಿಕೆ ಕರ್ನಾಟಕ ಸಂಗೀತದಲ್ಲಿ ಇಂದಿಗೂ ಉಳಿದು ಬಂದಿದೆ. ಮೂರ್ಛನೆಯಲ್ಲಿ ಒಂದು ಅಥವಾ ಎರಡು ಸ್ವರಗಳನ್ನು ಕಳೆದರೆ ಉಳಿಯುವ ಸ್ವರಸಮುಚ್ಚಯಕ್ಕೆ ತಾನವೆಂದು ಹೆಸರು.
  • ತಾನಗಳಲ್ಲಿ ಕ್ರಮ ಸಂಚಾರದಿಂದಾಗುವ 'ಶುದ್ಧತಾನ', ಸ್ವರಗಳ ವಕ್ರಸಂಚಾರದಿಂದಾಗುವ 'ಕೂಟತಾನ' ಎಂದು ಎರಡು ಬಗೆ. ಕೂಟತಾನಗಳಲ್ಲಿ ಸ್ವರಸಂಚಾರದ ವಕ್ರತೆಯೇ ಎಲ್ಲ ಸಾಧ್ಯತೆಗಳನ್ನು, ಎಂದರೆ ಸ್ವರ ವ್ಯುತ್ಕ್ರಮ ಪ್ರಕ್ರಿಯೆಯಿಂದ ಉಂಟಾಗುವ ರೀತಿಗಳನ್ನು ಗಾಢವಾದ ಗಣಿತತತ್ತ್ವದ ಆಧಾರದ ಮೇಲೆ ಏರ್ಪಡಿಸಿರುವ ವೈಜ್ಞಾನಿಕ ವ್ಯವಸ್ಥೆ ವಿಶ್ವಸಂಗೀತಕ್ಕೆ ಭಾರತೀಯ ಸಂಗೀತ ಕೊಟ್ಟ ಹಿರಿಯ ಕಾಣಿಕೆಯಾಗಿದೆ. ಶುದ್ಧತಾನಗಳಲ್ಲಿ ಸ್ವರಗಳ ಕ್ರಮಸಂಚಾರದಿಂದಲೂ ವಕ್ರಸಂಚಾರದಿಂದಲೂ ಗೇಯಸಾಧ್ಯವಾದ ಎಲ್ಲ ಜನ್ಯರಾಗಗಳನ್ನೂ ಎಲ್ಲ ಮೇಳಗಳಲ್ಲೂ ಶಾಸ್ತ್ರೀಯವಾಗಿ ಪಡೆಯಬಹುದು.
  • ರಾಗವೊಂದರಲ್ಲಿ ಬರುವ ಎಲ್ಲ ಬಗೆಯ ಸ್ವರಸಂಚಾರಗಳನ್ನು, ನಿಂತು ನಿಂತು ಮುಂದುವರಿಯುವ ಸ್ಥಾಯೀ ಕ್ರಮವಾಗಿ ಏರುವ ಆರೋಹಿ ಕ್ರಮವಾಗಿ ಇಳಿಯುವ ಅವರೋಹೀ ಇವೆಲ್ಲದರ ಮಿಶ್ರವಾದ ಸಂಚಾರಿ ಎಂಬ ನಾಲ್ಕು ವಿಧದ ವರ್ಣಗಳಲ್ಲಿ ಅಡಗಿಸಿದೆ. ಇವುಗಳನ್ನೂ ತಜ್ಜನ್ಯವಾದ ೬೩ ಅಲಂಕಾರಗಳನ್ನೂ ಶಾಸ್ತ್ರ ವರ್ಣಿಸುತ್ತದೆ. ಇವುಗಳನ್ನು ಆದಿತಾಳದಲ್ಲಿ ಅಳವಡಿಸಿ ರಚಿಸಿರುವ ಸರಳ ವರಸೆ, ಜಂಟಿ ವರಸೆ, ಹೆಚ್ಚು ಸ್ಥಾಯಿ ವರಸೆ, ತಗ್ಗುಸ್ಥಾಯಿ ವರಸೆ ಇತ್ಯಾದಿಗಳೂ ಸುಳಾದಿ ಸಪ್ತತಾಳಗಳಿಗೆ ಅಳವಡಿಸಿ ರಚಿಸಿರುವ ತಾಳಾಲಂಕಾರಗಳು. ಇವುಗಳನ್ನು ರಾಗಗಳಿಗೆ ಅಳವಡಿಸಿ ರಚಿಸಿರುವ ಸಂಚಾರೀ ಗೀತೆಗಳೂ ಕರ್ಣಾಟಕ ಸಂಗೀತದ ಶಿಕ್ಷಣ ಕ್ರಮಕ್ಕೆ ಅಡಿಪಾಯವಾಗಿವೆ.
  • ಆರೋಹಣ-ಅವರೋಹಣ ರಾಗಸ್ವರೂಪವನ್ನು ಬೋಧಿಸುವ ಭೌತಿಕ ಸೂತ್ರವೂ ಹೌದು. ಆಯಾ ರಾಗದಲ್ಲಿ ಬರುವ ಸ್ವರಗಳನ್ನೂ ಪ್ರಾರಂಭ, ಮುಕ್ತಾಯ ಮೊದಲಾದ ಸ್ವರಗಳನ್ನೂ ಇಂಥದೇ ವಕ್ರಗತಿಯಲ್ಲಿ ಸ್ವರಗಳು ಬರಬೇಕೆಂಬ ವಿಶೇಷ ನಿಯಮಗಳನ್ನೂ ಅದು ತಿಳಿಸುವುದರಿಂದ ಅದು ಭಾರತೀಯ ಸಂಗೀತದ ಅತ್ಯಂತ ಪ್ರಾಥಮಿಕ ತತ್ತ್ವಗಳಲ್ಲಿ ಒಂದಾಗಿದೆ.

ವಾದಿ ಮತ್ತು ಸಂವಾದಿ

ಬದಲಾಯಿಸಿ

ಇಲ್ಲಿ ಕಟ್ಟುನಿಟ್ಟಾದ ವಾದಿ ಸಂವಾದಿ ಇಲ್ಲ ಆದರೆ ರಿ ಗ ಮತ್ತು ದ ಪ್ರಮುಖವಾದುದು.

ಪಕಡ್ ಅಥವಾ ಚಲನ

ಬದಲಾಯಿಸಿ

ಕ್ರಮಬದ್ದ ಸಂಯೋಜನೆ ಸಂಸ್ಥೆ ಮತ್ತು ಸಂಬಂಧಗಳು

ಬದಲಾಯಿಸಿ

ಸಂಬಂಧಿಸಿದ ರಾಗಗಳು : ಪಿಲೂ

ಥಾಟ್:ಕಿರ್ವಾಣಿ ಭಾತ್ಕಂಡೆ ಯವರ ಥಾಟ್ ಗಳಿಗೆ ಸರಿಹೊಂದಬೇಕು ಎಂಬುದು ಸಾಧ್ಯವಿಲ್ಲ; ಸ್ವತಃ ಭಾತ್ಕಂಡೆ ಯವರು ಹಾಗಾಗಿ ಇದನ್ನು ಪಟ್ಟಿ ಮಾಡಿಲ್ಲ [] .

ಸ್ವಭಾವ

ಬದಲಾಯಿಸಿ

ಮಧ್ಯರಾತ್ರಿ

ಋತುಮಾನ

ಬದಲಾಯಿಸಿ

ಹಲವು ರಾಗಗಳು ಋತುಮಾನ ಸ್ವಭಾವವನ್ನು ಹೊಂದಿರುತ್ತವೆ.

ಚಾರಿತ್ರಿಕ ಮಾಹಿತಿ

ಬದಲಾಯಿಸಿ

ಇದು "ಇತ್ತೀಚೆಗೆ" ದಕ್ಷಿಣದವರಿಂದ ಸ್ವೀಕರಿಸಲ್ಪಟ್ಟಿದೆ. ಆದರೆ ಪಿಲೂ ರಾಗದ ಪುರಾತನ ಆವೃತ್ತಿಗೆ ಸರಿಸಮವಾಗಿದೆ []

ಮೂಲಗಳು

ಬದಲಾಯಿಸಿ

ಪ್ರಾಮುಖ್ಯ ದ್ವನಿಮುದ್ರಿಕೆಗಳು

ಬದಲಾಯಿಸಿ

ಉಲ್ಲೇಖಗಳು‌‌

ಬದಲಾಯಿಸಿ
  1. Jairazbhoy (1995)
  2. ಬೊರ್ ಪುಟ. 102

ಬಾಹ್ಯ ಕೊಂಡಿಗಳು‌‌

ಬದಲಾಯಿಸಿ

ಉದಾಹರಣೆಗಳು

ಸಾಹಿತ್ಯ

ಬದಲಾಯಿಸಿ

Bor, Joep (1997?), The Raga Guide, Charlottesville, Virginia: Nimbus Records, archived from the original on 2009-07-15, retrieved 2012-03-25 {{citation}}: Check date values in: |year= (help)CS1 maint: year (link)
Jairazbhoy, N.A. (1995), The Rags of North Indian Music: Their Structure & Evolution, Bombay: Popular Prakashan .
Patwardham, Narayan Rao (1972), Tarala Prabandhavali, Rajasthan: Vanasthali Vidyapith .
6
[7].