ಕಳ್ಳರ ಸಂತೆ (ಚಲನಚಿತ್ರ)
ಕಳ್ಳರ ಸಂತೆ ಸುಮನಾ ಕಿತ್ತೂರ್ ನಿರ್ದೇಶಿಸಿದ ೨೦೦೯ ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ . ಚಿತ್ರದಲ್ಲಿ ಯಶ್, ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ವ್ಯವಸ್ಥೆಯಿಂದ ನಿರಾಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ಯುವಕನ ಸುತ್ತ ಚಿತ್ರ ಸುತ್ತುತ್ತದೆ. ಈ ವಿಷಯ ಮಾಧ್ಯಮಗಳಿಗೆ ಮತ್ತು ಸರ್ಕಾರಕ್ಕೆ ಹರಡಿದಾಗ, ಅವನು ಜೀವನವನ್ನು ಬದಲಾಯಿಸುವ ಘಟನೆಗೆ ಒಳಗಾಗುತ್ತಾನೆ.
ಕಳ್ಳರ ಸಂತೆ | |
---|---|
ಚಿತ್ರ:Kallara Santhe.jpg | |
ನಿರ್ದೇಶನ | ಸುಮನಾ ಕಿತ್ತೂರ್ |
ನಿರ್ಮಾಪಕ | ರವೀಂದ್ರ ಸಯ್ಯದ್ ಅಮಾನ್ ಬಚ್ಚನ್ |
ಲೇಖಕ | ಅಗ್ನಿ ಶ್ರೀಧರ್ |
ಪಾತ್ರವರ್ಗ | ಯಶ್ ಹರಿಪ್ರಿಯಾ |
ಸಂಗೀತ | ವಿ. ಮನೋಹರ್ |
ಛಾಯಾಗ್ರಹಣ | ಸುಂದರನಾಥ್ ಸುವರ್ಣ |
ಸಂಕಲನ | ಎಸ್. ಕೆ. ನಾಗೇಂದ್ರ ಅರಸ್ |
ಸ್ಟುಡಿಯೋ | ಮೇಘಾ ಮೂವೀಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ತಾರಾಗಣ
ಬದಲಾಯಿಸಿಪ್ರತಿಕ್ರಿಯೆ
ಬದಲಾಯಿಸಿಟೈಮ್ಸ್ ಆಫ್ ಇಂಡಿಯಾದ ವಿಮರ್ಶಕರು ಚಿತ್ರಕ್ಕ ಐದು ನಕ್ಷತ್ರಗಳಲ್ಲಿ ೩.೫ ರೇಟಿಂಗ್ ನೀಡಿ, "ರಾಜಕೀಯ ವಿಡಂಬನೆಗೆ ಹಾಸ್ಯಮಯ ತಿರುವನ್ನು ನೀಡುವ ನಿರ್ದೇಶಕಿ ಡಿ ಸುಮನಾ ಕಿತ್ತೂರ್ ಅವರದ್ದು ಉತ್ತಮ ಪ್ರದರ್ಶನ, ಉತ್ಸಾಹಭರಿತ ನಿರೂಪಣೆ ಮತ್ತು ಸೂಕ್ತವಾದ ದೃಶ್ಯಗಳು" ಎಂದು ಬರೆಯುತ್ತಾರೆ. [೧] ಡೆಕ್ಕನ್ ಹೆರಾಲ್ಡ್‌ನ ವಿಮರ್ಶಕರು "ಯಶ್ ಮತ್ತು ಹರಿಪ್ರಿಯಾ ತೆರೆಯ ಮೇಲೆ ಉತ್ತಮ ಜೋಡಿಯಾಗಿದ್ದಾರೆ. ರಂಗಾಯಣ ರಘು ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಮನೋಹರ್ ಅವರ ಸಂಗೀತವು ರಿಫ್ರೆಶಿಂಗ್ ಆಗಿದೆ. [೨] ರೆಡಿಫ್ ನ ವಿಜಯಸಾರಥಿ ಹೀಗೆ ಬರೆದಿದ್ದಾರೆ: " ಕಳ್ಳರ ಸಂತೆಯಲ್ಲಿ ಹೆಚ್ಚು ಮನರಂಜನೆ ಇಲ್ಲ. ಆದರೆ, ರಾಜಕೀಯ-ಪ್ರಜ್ಞೆಯ ಚಲನಚಿತ್ರ ಅಭಿಮಾನಿಗಳಿಗೆ ನೋಡಬಹುದಾದ ಚಲನಚಿತ್ರವಾಗಿದೆ". [೩] ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವಿಮರ್ಶಕರೊಬ್ಬರು ಹೀಗೆ ಬರೆದಿದ್ದಾರೆ: "ಹರಿಪ್ರಿಯಾ ಆಕರ್ಷಕವಾಗಿದ್ದಾರೆ. ಯಶ್ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದಾರೆ. ಹರಿಪ್ರಿಯಾ ಡೈಲಾಗ್ ಡೆಲಿವರಿಯಲ್ಲಿ ಸಾಕಷ್ಟು ಸುಧಾರಿಸಿದ್ದಾರೆ. ೬೦x೪೦ ಬಿಡಿಎ ನಿವೇಶನ, ೨೦ ಎಕರೆ ಕೃಷಿ ಭೂಮಿ ಹಾಗೂ ೨೦ ಲಕ್ಷ ನೀಡುವಂತೆ ಮುಖ್ಯಮಂತ್ರಿಯವರಿಗೆ ಕೇಳುವಂತೆ ಯಶ್‌ಗೆ ಹೇಳುವ ದೃಶ್ಯ ನೋಡುವುದಕ್ಕೆ ಸೊಗಸಾಗಿದೆ. ಕಿಶೋರ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆಯನ್ನು ಗರಿಗರಿಯಾಗಿಸಲು ನಿರ್ದೇಶಕರು ಮತ್ತು ಚಿತ್ರಕಥೆಗಾರ ಹೆಚ್ಚಿನ ಕಾಳಜಿ ವಹಿಸಿದ್ದರೆ, ಈ ಚಿತ್ರವು ಆ ದಿನಗಳು ಚಿತ್ರದಂತೆ ಮೂಡಿಬರುತ್ತಿತ್ತು" [೪]
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು [೫]
- ಅತ್ಯುತ್ತಮ ಸಿನಿಮಾಟೋಗ್ರಾಫರ್ ... ಸುಂದರನಾಥ ಸುವರ್ಣ
- ತೀರ್ಪುಗಾರರ ವಿಶೇಷ ಪ್ರಶಸ್ತಿ ... ಸುಮನಾ ಕಿತ್ತೂರು
- ನಾಮನಿರ್ದೇಶಿತ - ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ - ಹರಿಪ್ರಿಯಾ
ಉಲ್ಲೇಖಗಳು
ಬದಲಾಯಿಸಿ- ↑ "Kallara Santhe Movie Review {3.5/5}". ದಿ ಟೈಮ್ಸ್ ಆಫ್ ಇಂಡಿಯಾ. Retrieved 2020-01-17.
- ↑ "Kallara Santhe". ಡೆಕ್ಕನ್ ಹೆರಾಲ್ಡ್. Archived from the original on 15 January 2020. Retrieved 15 January 2020.
- ↑ ವಿಜಯಸಾರಥಿ, ಆರ್. ಜಿ. (21 December 2009). "Review: Kallara Sante is watchable". ರೆಡಿಫ್.
- ↑ "Slow and not quite steady". ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್. 19 December 2009.
- ↑ "Vishnuvardhan Anu Prabhakar Karnataka State Film Awards Aaptha Rakshaka Pareekshe". ಫಿಲ್ಮಿಬೀಟ್. Archived from the original on 2021-06-24. Retrieved 2017-01-18.