ಒನ್ ಇಂಡಿಯಾ.ಇನ್

Oneindia.in
Oneindiain.png
Typeಖಾಸಗಿ ಕಂಪನಿ
Foundation date2006
Headquartersಬೆಂಗಳೂರು, ಭಾರತ
Industryಇಂಟರ್ನೆಟ್ ಸೇವೆ
Revenueಸದ್ಯಕ್ಕೆ ಲಭ್ಯವಿಲ್ಲ
WebsiteOneindia.in
Type of site[web portal]
Registrationoptional
Available inEnglish, Hindi, Kannada, Tamil, Telugu, Malayalam

ಒನ್ ಇಂಡಿಯಾ.ಇನ್ಸಂಪಾದಿಸಿ

ಒನ್ ಇಂಡಿಯಾ.ಇನ್ ಭಾರತದ ಆನ್ ಲೈನ್ ವೆಬ್ ಪೋರ್ಟಲ್ ಆಗಿದೆ. ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ., ಸಂಸ್ಥೆ ಒಡೆತನದಲ್ಲಿರುವ ಈ ವೆಬ್ ಪೋರ್ಟಲ್ ಸುದ್ದಿ ವಿಶ್ಲೇಷಣೆ, ಕ್ರೀಡೆ, ಮನರಂಜನೆ, ವಿಡಿಯೋ ಹಾಗೂ ವರ್ಗೀಕೃತ ಜಾಹೀರಾತು ನೀಡುತ್ತದೆ. ಅಲೆಕ್ಸಾ ಟ್ರಾಫಿಕ್ ಶ್ರೇಯಾಂಕದಲ್ಲಿ ಒನ್ ಇಂಡಿಯಾ.ಇನ್ ವಿಶ್ವದಲ್ಲಿ 525ನೇ ಸ್ಥಾನದಲ್ಲಿದೆ. ಗೂಗಲ್ ಪುಟ ಶ್ರೇಯಾಂಕದಲ್ಲಿ ಒನ್ ಇಂಡಿಯಾ.ಇನ್ 7ನೇ ಸ್ಥಾನದಲ್ಲಿದೆ. ಅಲೆಕ್ಸಾದ 'ಭಾರತದ ಶ್ರೇಷ್ಠ ವೆಬ್ ತಾಣಗಳು' ಪಟ್ಟಿಯಲ್ಲಿ ಒನ್ ಇಂಡಿಯಾ 34ನೇ ಪುಟದಲ್ಲಿದೆ.

ಪೋರ್ಟಲ್ ಗಳುಸಂಪಾದಿಸಿ

ಒನ್ ಇಂಡಿಯಾ ಭಾರತದ ಹಲವು ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಒನ್ ಇಂಡಿಯಾ ಹಿಂದಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ, ಒನ್ ಇಂಡಿಯಾ ತಮಿಳು,ಒನ್ ಇಂಡಿಯಾ ಕನ್ನಡ,ಒನ್ ಇಂಡಿಯಾ ತೆಲುಗು,ಒನ್ ಇಂಡಿಯಾ ಮಲೆಯಾಳಂ,

ಒನ್ ಇಂಡಿಯಾ.ಇನ್ ಸಮೂಹದಲ್ಲಿ ಆನ್ ಲೈನ್ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಪ್ರಮುಖವಾಗಿದೆ. ಸಮುದಾಯ ಆಧಾರಿತ ಕ್ಲಿಕ್.ಇನ್ ವೆಬ್ ತಾಣದಲ್ಲಿ ಆನ್ ಲೈನ್ ವರ್ಗೀಕೃತ ಜಾಹೀರಾತುಗಳು, ಉದ್ಯೋಗ, ಮಾರಾಟ, ಸೇವೆಗಳು, ಸ್ಥಳೀಯ ಸಮುದಾಯ, ಕಾರ್ಯಕ್ರಮಗಳ ವಿವರಗಳು ಲಭ್ಯವಿರುತ್ತದೆ.[೧]

ವಾಹಿನಿಗಳುಸಂಪಾದಿಸಿ

ಆನ್ ಲೈನ್ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯ ಶ್ರೇಣಿಯಲ್ಲಿ ಮಾಹಿತಿ ಮತ್ತು ಮನರಂಜನೆ ಒದಗಿಸಲು ಒನ್ ಇಂಡಿಯಾ.ಇನ್ ನ ಈ ತಾಣಗಳು ಲಭ್ಯವಿದೆ

ಪರಾಮರ್ಶನೆಸಂಪಾದಿಸಿ

೧. ‌‌[[೧]] "Oneindia.in". Neatstat.com.