ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 2004

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 2004 ಏಪ್ರಿಲ್ 20 ಮತ್ತು ಏಪ್ರಿಲ್ 26, 2004ರಂದು ಎಲ್ಲಾ 224 ಕ್ಷೇತ್ರಗಳಿಗೂ ನಡೆಯಿತು ಮತ್ತು ಪಲಿತಾಂಶಗಳನ್ನು ಮೇ 13, 2004ರ ಎಣಿಕೆಯ ನಂತರ ಪ್ರಕಟಿಸಲಾಯಿತು. ಯಾವ ಪಕ್ಷಕ್ಕೂ ಸರಕಾರ ರಚಿಸಲು ಅಗತ್ಯ ಬಹುಮತ ಬರಲಿಲ್ಲ. ಭಾರತೀಯ ಜನತಾ ಪಕ್ಷ 79 ಸ್ಥಾನಗಳನ್ನು ಗಳಿಸುವ ಮೂಲಕ ಸ್ಥಾನಗಳಿಕೆಯಲ್ಲಿ ಮೊದಲು, 65 ಸ್ಥಾನ ಗಳಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿಯೂ ಮತ್ತು 58 ಸ್ಥಾನ ಗಳಿಸಿದ ಜನತಾ ದಳ (ಜಾತ್ಯಾತೀತ) ಮೂರನೆಯ ಸ್ಥಾನವನ್ನೂ ಪಡೆದವು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಮಿಶ್ರ ಸರಕಾರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ನಡುವೆ ಏರ್ಪಟ್ಟು ಧರಮ್ ಸಿಂಗ್ 28 ಮೇ. 2004ರಂದು ಮುಖ್ಯಮಂತ್ರಿಯಾದರು.

ಕರ್ನಾಟಕ ವಿಧಾನ ಸಭೆ ಚುನಾವಣೆಗಳು
2004
ಭಾರತ
1999 ಏಪ್ರಿಲ್ 20, 2004
ಏಪ್ರಿಲ್ 26, 2004
2008
ಎಲ್ಲಾ ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಮೊದಲನೆಯ ಪಕ್ಷ ಎರಡನೆಯ ಪಕ್ಷ ಮೂರನೆಯ ಪಕ್ಷ
ನಾಯಕ ಬಿ.ಎಸ್. ಯಡಿಯೂರಪ್ಪ ಎಸ್ ಎಮ್ ಕೃಷ್ಣ ಸಿದ್ದರಾಮಯ್ಯ
ಪಕ್ಷ ಭಾಜಪ ಕಾಂಗ್ರೆಸ್ ಜೆಡಿ (ಎಸ್)
ನಾಯಕನ ಕ್ಷೇತ್ರ ಶಿಕಾರಿಪುರ ಚಾಮರಾಜಪೇಟೆ ಚಾಮುಂಡೇಶ್ವರಿ
ಹಿಂದಿನ ಸ್ಥಾನಗಳು 44 132 10
ಈಗ ಗೆದ್ದ ಸ್ಥಾನಗಳು 79 65 58
ಸ್ಥಾನ ಬದಲಾವಣೆ Increase35 Decrease67 Increase48
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಎಸ್ ಎಮ್ ಕೃಷ್ಣ ಧರಮ್ ಸಿಂಗ್

ಪಕ್ಷಗಳು ಗಳಿಸಿದ ಸ್ಥಾನಗಳು ಮತ್ತು ಶೇಕಡವಾರು ಮತ

ಬದಲಾಯಿಸಿ

ಪಡೆದ ಸ್ಥಾನಗಳಲ್ಲಿ ಭಾಜಪ ಮುಂದಿದ್ದರೆ ಪಡೆದ ಶೇಕಡವಾರು ಮತಗಳಲ್ಲಿ ಕಾಂಗ್ರೆಸ್ ಮುಂದಿದೆ. ಹಿಂದಿನ ವಿಧಾನ ಸಭೆ ಚುನಾವಣೆಗಳಿಗೆ ಹೋಲಿಸಿದರೆ ಭಾಜಪ ಮತ್ತು ಜೆಡಿ (ಎಸ್) ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡರೆ ಕಾಂಗ್ರೆಸ್‌ನ ಸ್ಥಾನಗಳು ಕಡಿಮೆಯಾಗಿವೆ.

ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಭಾರತೀಯ ಜನತಾ ಪಕ್ಷ 198 79 42 7 118 658 28.33
ಭಾರತ ರಾಷ್ಟ್ರೀಯ ಕಾಂಗ್ರೆಸ್ 224 65 7 8 861 959 35.27
ಜನತಾ ದಳ (ಜಾತ್ಯಾತೀತ) 220 58 104 5 220 121 20.77
ಜನತಾ ದಳ (ಯು) 26 9 14 517 904 2.06
ಕನ್ನಡ ನಾಡು ಪಕ್ಷ 188 1 187 330 547 1.32
ಸಿಪಿಐ (ಎಂ) 5 1 3 92 081 0.37
ಕನ್ನಡ ಚಳುವಳಿ ವಾಟಾಳ್ ಪಕ್ಷ 5 1 4 38 687 0.15
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 3 1 2 25 379 0.10
ಬಹುಜನ ಸಮಾಜ ಪಕ್ಷ 102 0 100 437 564 1.74
ಒಟ್ಟು ಇತರ ಪಕ್ಷಗಳು 307 0 297 761 686 3.03
ಪಕ್ಷೇತರರು 442 13 405 1724 480 6.86
ಮೊತ್ತ 1715 224 1165 25 129 066 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ನಂತರದ ಬೆಳವಣಿಗೆಗಳು

ಬದಲಾಯಿಸಿ

42 ವಿಧಾನ ಸಭಾ ಸದಸ್ಯರೊಂದಿಗೆ ಸಮಿಶ್ರ ಸರಕಾರದಿಂದ ಹೆಚ್ ಡಿ ಕುಮಾರಸ್ವಾಮಿ ಹೊರನಡೆಯುವದರೊಂದಿಗೆ ಧರಮ್ ಸಿಂಗ್ ನೇತೃತ್ವದ ಸರಕಾರ ಬೀಳುತ್ತದೆ. ರಾಜ್ಯಪಾಲ ಟಿ ಎನ್ ಚತುರ್ವೇದಿಯವರು ಹೆಚ್ ಡಿ ಕುಮಾರಸ್ವಾಮಿಯನ್ನು ತಾ 28 ಜನವರಿ, 2006ರಕ್ಕೆ ಆಹ್ವಾನಿಸುತ್ತಾರೆ. ಭಾಜಪ ಮತ್ತು ಜೆಡಿ(ಎಸ್) ನಡುವಿನ ಒಪ್ಪದವೇರ್ಪಟ್ಟು ಹೆಚ್‌ ಡಿ ಕುಮಾರಸ್ವಾಮಿ 4 ಫೆಬ್ರವರಿ, 2006 ರಿಂದ 9 ಅಕ್ಟೋಬರ್, 2007ರ ವರೆಗೂ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರ ಅವಧಿಯ 20 ತಿಂಗಳ ನಂತರ ಅಧಿಕಾರ ವರ್ಗಾವಣೆಗೆ ನಿರಾಕರಿಸುತ್ತಾರೆ. ನಂತರದಲ್ಲಿ ಮತ್ತೆ ಭಾಜಪದೊಂದಿಗೆ ಒಪ್ಪಂದಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಅಧಿಕಾರ ಹಂಚಿಕೆಯ ಭಿನ್ನಾಭಿಪ್ರಾಯದಲ್ಲಿ ಜೆಡಿ (ಎಸ್) ಮತ್ತೆ ಬೆಂಬಲ ವಾಪಾಸು ಪಡೆಯುತ್ತದೆ.