ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1999

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1999 ಕರ್ನಾಟಕದ 224 ಅಸೆಂಬ್ಲಿ ಸ್ಥಾನಗಳಿಗೆ ಅಕ್ಟೋಬರ್ 1999ರಲ್ಲಿ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 132 ಸ್ಥಾನ ಪಡೆಯುವ ಮೂಲಕ ಮೆಜಾರಿಟಿ ಪಡೆಯಿತು. ಭಾರತೀಯ ಜನತಾ ಪಾರ್ಟಿ ಮತ್ತು ಜನತಾ ದಳ (ಯುನೈಡ್) ಗಳು ಇದ್ದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 63 ಸ್ಥಾನಗಳನ್ನಷ್ಟೇ ಪಡೆಯಿತು. ಹೆಚ್‌. ಡಿ. ದೇವಗೌಡ ನೇತೃತ್ವದ ಜನತಾ ದಳ (ಜಾತ್ಯಾತೀತ) ಕೇವಲ 10 ಸ್ಥಾನಗಳನ್ನು ಪಡೆಯುವ ಮೂಲಕ ನೆಲಕಚ್ಚಿತು. ವಿಧಾನಸಭೆಯ ಚುನಾವಣೆ ಲೋಕಸಭಾ ಚುನಾವಣೆಗಳೊಂದಿಗೆ ನಡೆಯಿತು. ಹಿಂದಿನ ವಿಧಾನಸಬೆಯ ಚುನಾವಣೆಗಳು ನವೆಂಬರ್ 26 ಮತ್ತು ಡಿಸೆಂಬರ್ 1 1994 ನಡೆದಿದ್ದು ಜನತಾದಳ ಅಧಿಕಾರಕ್ಕೆ ಬಂದಿತ್ತು (ನೋಡಿ). ಆದರೆ 5 ವರುಷಗಳ ಅವಧಿ ಮುಗಿಯುವ ಮುನ್ನವೇ ಜನತಾ ದಳದ ವಿಭನೆಯಿಂದಾಗಿ ಚುನಾವಣೆ ಎದುರಿಸ ಬೇಕಾಯಿತು. ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ಗುಂಪು ಜನತಾ ದಳ (ಯುನೈಟೆಡ್) ಸೇರಿತು ಮತ್ತು ದೇವೇಗೌಡ ನೇತೃತ್ವದ ಜನತಾ ದಳ ಗುಂಪು ಜನತಾ ದಳ (ಜಾತ್ಯಾತೀತ) ಎಂದು ಹೆಸರು ಪಡೆಯಿತು. ಎರಡೂ ಜನತಾ ದಳಗಳ ವಿರುದ್ಧದ ಅಧಿಕಾರ ವಿರೋಧಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಮತ್ತು ಅಕ್ಟೋಬರ್ 11 1999ರಂದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1999
ಭಾರತ
1994 ಏಪ್ರಿಲ್ 20, 2004
ಏಪ್ರಿಲ್ 26, 2004
2004
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ಎಸ್ ಎಮ್ ಕೃಷ್ಣ ಬಿ.ಎಸ್. ಯಡಿಯೂರಪ್ಪ
ಪಕ್ಷ ಕಾಂಗ್ರೆಸ್ ಭಾಜಪ
ನಾಯಕನ ಕ್ಷೇತ್ರ ಮದ್ದೂರು ಶಿಕಾರಿಪುರ
ಹಿಂದಿನ ಸ್ಥಾನಗಳು 34 40
ಈಗ ಗೆದ್ದ ಸ್ಥಾನಗಳು 132 44
ಸ್ಥಾನ ಬದಲಾವಣೆ Increase98 Increase4
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಜೆ ಹೆಚ್ ಪಟೇಲ್ ಜೆಡಿ (ಯು) ಎಸ್ ಎಮ್ ಕೃಷ್ಣ ಕಾಂಗ್ರೆಸ್

ಪಲಿತಾಂಶ

ಬದಲಾಯಿಸಿ
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಭಾರತ ರಾಷ್ಟ್ರೀಯ ಕಾಂಗ್ರೆಸ್ 222 132 8 9 077 815 40.84
ಭಾರತೀಯ ಜನತಾ ಪಕ್ಷ 149 44 37 4 598 741 20.69
ಜನತಾ ದಳ (ಯು) 112 18 38 3 006 253 13.53
ಜನತಾ ದಳ (ಜಾತ್ಯಾತೀತ) 203 10 148 2 316 885 10.42
ಎಡಿಎಮ್‌ಕೆ 13 1 12 39 865 0.18
ಇತರ ಪಕ್ಷಗಳು 166 0 159 519 496 2.33
ಪಕ್ಷೇತರರು 476 19 416 2 666 444 12.00
ಮೊತ್ತ 1341 224 818 22 225 499 99.99
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

ಬದಲಾಯಿಸಿ