ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994 ಕರ್ನಾಟಕದ ಹತ್ತನೆಯ ವಿಧಾನಸಬೆಗೆ ನಡೆದ ಚುನಾವಣೆ. ಎರಡು ಹಂತಗಳಲ್ಲಿ ನವೆಂಬರ್ 26 ಮತ್ತು ಡಿಸೆಂಬರ್ 1 1994ರಲ್ಲಿ 224 ವಿಧಾನಸಭೆಯ ಸ್ಥಾನಗಳಿಗೆ ಮತದಾನ ನಡೆಯಿತು ಮತ್ತು ಜನತಾ ದಳವು ಅಧಿಕಾರಕ್ಕೆ ಬಂದು ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಇದು ಹತ್ತನೆಯ ಕರ್ನಾಟಕ ವಿಧಾನಸಬೆಯಾಗಿದ್ದು 25 ಡಿಸೆಂಬರ್ 1994 ರಿಂದ 22 ಜೂಲೈ 1999ರವರೆಗೂ ಆಸ್ತಿತ್ವದಲ್ಲಿತ್ತು ಮತ್ತು ಕೊನೆಯಲ್ಲಿ ವಿಸರ್ಜಿಸಲ್ಪಟ್ಟಿತು. ಇದರ ಕಾಲಮಾನದಲ್ಲಿ ಹೆಚ್. ಡಿ. ದೇವೇಗೌಡ ಮತ್ತು ಜೆ. ಹೆಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದರು.

ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1994
ಭಾರತ
1989 1999
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ಹೆಚ್. ಡಿ. ದೇವೇಗೌಡ ಬಿ.ಎಸ್. ಯಡಿಯೂರಪ್ಪ
ಪಕ್ಷ ಜನತಾ ದಳ ಭಾಜಪ
ನಾಯಕನ ಕ್ಷೇತ್ರ ರಾಮನಗರ ಶಿಕಾರಿಪುರ
ಹಿಂದಿನ ಸ್ಥಾನಗಳು 24 4
ಈಗ ಗೆದ್ದ ಸ್ಥಾನಗಳು 115 40
ಸ್ಥಾನ ಬದಲಾವಣೆ Increase81 Increase36
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ವೀರಪ್ಪ ಮೊಯ್ಲಿ ಕಾಂಗ್ರೆಸ್ ಹೆಚ್. ಡಿ .ದೇವೇಗೌಡ ಜನತಾ ದಳ
ಕರ್ನಾಟಕ ವಿಧಾನಸಭೆ ಚುನಾವಣೆ, 1994
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಜನತಾ ದಳ 221 115 36 6,944,464 33.54
ಭಾರತೀಯ ಜನತಾ ಪಕ್ಷ 223 40 135 3,517,119 16.99
ಕಾಂಗ್ರೆಸ್ 221 34 38 5,580,473 26.95
ಕರ್ನಾಟಕ ಕಾಂಗ್ರೆಸ್ ಪಕ್ಷ 218 10 185 1,513,290 7.31
ಕರ್ನಾಟಕ ರಾಜ್ಯ ರೈತ ಸಂಘ 88 1 79 468,109 2.26
ಬಹುಜನ ಸಮಾಜ ಪಕ್ಷ 77 1 76 160,607 0.78
ಭಾರತೀಯ ಕಮ್ಯುನಿಷ್ಟ್ ಪಕ್ಷ
(ಮಾರ್ಕ್ಸವಾದಿ)
13 1 10 101,982 0.49
ಇಂಡಿಯನ್ ನ್ಯಾಶನಲ್ ಲೀಗ್ 2 1 1 60,802 0.29
ಅಣ್ಣಾ ಡಿಎಂಕೆ 4 1 2 50,696 0.24
ಕನ್ನಡ ಚಳುವಳಿ ವಾಟಳ್ ಪಕ್ಷ 42 1 41 36,252 0.18
ಭಾರತೀಯ ರಿಪಬ್ಲಿಕನ್ ಪಕ್ಷ 2 1 1 27,390 0.13
ಇತರ ಪಕ್ಷಗಳು 130 0 127 244,301 1.18
ಪಕ್ಷೇತರರು 1256 18 1212 1,999,718 9.66
ಮೊತ್ತ 2497 224 1 943 20,705,203 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.