ಒರ್ಲ್ಯಾಂಡೊ, ಫ್ಲೋರಿಡಾ
| nickname = The City Beautiful | settlement_type = City | motto = | image_skyline = | imagesize = | image_caption = Images from top, left to right: Downtown Orlando Skyline, Cinderella Castle, Amway Center, Citrus Bowl, Lake Eola Fountain, Fireworks at Lake Eola, Orlando Bridge, Orlando International Airport. | image_flag = Flag of Orlando, Florida.png | flag_size ht = | image_seal = Seal of Orlando, Florida.svg | seal_size = | image_blank_emblem = | blank_emblem_type = | blank_emblem_size = | image_map = Orange_County_Florida_Incorporated_and_Unincorporated_areas_Orlando_Highlighted.svg | mapsize = | map_caption = Location in Orange County and the state of Florida |pushpin_map =USA |pushpin_map_caption = Location in the United States | coordinates_region = US-FL | subdivision_type = Country | subdivision_name = ಅಮೇರಿಕ ಸಂಯುಕ್ತ ಸಂಸ್ಥಾನ | subdivision_type1 = State | subdivision_name1 = ಫ್ಲಾರಿಡ | subdivision_type2 = County | subdivision_name2 = Orange | government_footnotes = | government_type = | leader_title = Mayor | leader_name = Buddy Dyer (D) | leader_title1 = | leader_name1 = | leader_title2 = | leader_name2 = | established_title = Settled | established_date = 1875 | established_title2 = | established_date2 = | established_title3 = | established_date3 = | area_magnitude = 1 E8 | unit_pref = Imperial | area_footnotes = | area_total_km2 = 261.5 | area_land_km2 = 242.2 | area_water_km2 = 19.3 | area_total_sq_mi = 101.0 | area_land_sq_mi = 93.5 | area_water_sq_mi = 7.5 | area_water_percent = | area_urban_km2 = | area_urban_sq_mi = | area_metro_km2 = | area_metro_sq_mi = | area_blank1_sq_mi = | population_as_of = 2009 | population_footnotes = [೧][೨] | population_note = 2009 estimates | population_total = 235,860 (80th) | population_density_km2 = 951.77 | population_density_sq_mi = 2282.36 | population_metro = 2,082,628 | population_density_metro_km2 = | population_density_metro_sq_mi = | population_urban = | population_density_urban_km2 = | population_density_urban_sq_mi = | population_blank1_title = | population_blank1 = | population_density_blank1_km2 = | population_density_blank1_sq_mi = | timezone = EST | utc_offset = -5 | timezone_DST = EDT | utc_offset_DST = -4 | latd = 28 |latm = 32 |lats = 37 |latNS = N | longd = 81 |longm = 22 |longs = 22 |longEW = W | elevation_footnotes = | elevation_m = 34 | elevation_ft = 98 | postal_code_type = ZIP code | postal_code = 32801-32899 | area_code = 321, 407 | blank_name = FIPS code | blank_info = 12-53000GR2 | blank1_name = GNIS feature ID | blank1_info = 0288240GR3 | website = www.cityoforlando.net | footnotes = }}-->
ಯು.ಎಸ್. ಸ್ಟೇಟ್‌ನ ಫ್ಲೋರಿಡಾದ ಕೇಂದ್ರಭಾಗದಲ್ಲಿ ಒರ್ಲ್ಯಾಂಡೊ (pronounced /ɔrˈlændoʊ/) ಒಂದು ಪ್ರಮುಖ ನಗರ ವಾಗಿದೆ. ಈ ನಗರವು ಆರೇಂಜ್ ಕೌಂಟಿಯ ಕೌಂಟಿ ಸ್ಥಾನವಾಗಿದೆ ಮತ್ತು ಗ್ರೇಟರ್ ಒರ್ಲ್ಯಾಂಡೊ ಮಹಾನಗರಪಾಲಿಕೆ (ಮೆಟ್ರೋಪಾಲಿಟನ್) ಪ್ರದೇಶದ ಕೇಂದ್ರಭಾಗವೂ ಆಗಿದೆ. ಒರ್ಲ್ಯಾಂಡೊ ಮಹಾನಗರಪಾಲಿಕೆ ಪ್ರದೇಶವು 2,082,628 ಜನಸಂಖ್ಯೆ ಹೊಂದಿದೆ. ಇದು ಸಂಯುಕ್ತ ಸಂಸ್ಥಾನದಲ್ಲಿ 27ನೇ ಅತಿದೊಡ್ಡ ಮಹಾನಗರಪಾಲಿಕೆ ಪ್ರದೇಶವಾಗಿದೆ ಮತ್ತು ಆಗ್ನೇಯ ಸಂಯುಕ್ತ ಸಂಸ್ಥಾನದಲ್ಲಿ 5ನೇ ಅತಿದೊಡ್ಡ ಮಹಾನಗರಪಾಲಿಕೆ ಪ್ರದೇಶವಾಗಿದೆ. ಜೊತೆಗೆ , ಫ್ಲೋರಿಡಾದಲ್ಲಿ 3ನೇ ಅತಿದೊಡ್ಡ ಮೆಟ್ರೋ ಪ್ರದೇಶವಾಗಿದೆ. ನಗರದೊಳಗಿನ ಜನಸಂಖ್ಯೆ 235,860 ಆಗಿದ್ದು, ಒರ್ಲ್ಯಾಂಡೊವನ್ನು ಸಂಯುಕ್ತ ಸಂಸ್ಥಾನದ 80ನೇ ಅತಿದೊಡ್ಡ ನಗರವನ್ನಾಗಿಸಿದೆ.[೧] ಜನಸಂಖ್ಯೆ ದೃಷ್ಟಿಯಿಂದ ಇದು ಫ್ಲೋರಿಡಾದ ಐದನೇ ದೊಡ್ಡ ನಗರವಾಗಿದೆ. ಒರ್ಲ್ಯಾಂಡೊವನ್ನು 1875ರ ಜುಲೈ 31ರಂದು ಸಂಯೋಜಿಸಲಾಯಿತು ಮತ್ತು ಅದು 1885ರಲ್ಲಿ ನಗರವಾಯಿತು.
ಒರ್ಲ್ಯಾಂಡೊ ಮತ್ತು ಆರೇಂಜ್ ಕೌಂಟಿ ಗಳು ಮೂಲತಃ ಕಿತ್ತಳೆ ಬೆಳೆಯುವ ಪ್ರಮುಖ ನಗರಗಳ ಕೇಂದ್ರಗಳಾದವು. ಜೊತೆಗೆ 1890ರ ಕೊನೆಯಭಾಗದಲ್ಲಿ ಫ್ಲೋರಿಡಾವು ಅತಿದೊಡ್ಡ ಒಳಾಂತರ ನಗರವಾಗಿತ್ತು. ವಿವಿಧ ಉದ್ಯಮಗಳಿಂದ ಕೂಡಿ ಅಪಾರ ನಗರೀಕರಣಗೊಂಡ ಒರ್ಲ್ಯಾಂಡೊ ಈಗ ಒಂದು ವರ್ಲ್ಡ್ ಸಿಟಿ (ವಿಶ್ವ ನಗರ) ಆಗಿದೆ. ಈ ಪ್ರದೇಶವು ಪ್ರಮುಖ ಪ್ರವಾಸೀ ತಾಣವಾಗಿದೆ ಯುನಿವರ್ಸಲ್ ಒರ್ಲ್ಯಾಂಡೊ ರೆಸಾರ್ಟ್, ಮತ್ತು ಸೀವರ್ಲ್ಡ್ ಒರ್ಲ್ಯಾಂಡೊ ಇಲ್ಲಿಯೇ ಇವೆ. ಡೌನ್‌ಟೌನ್ ಒರ್ಲ್ಯಾಂಡೊದ ನೈರುತ್ಯಕ್ಕಿರುವ ಲೇಕ್ ಬ್ಯೂನ ವಿಸ್ತಾ, ಫ್ಲೋರಿಡಾದಲ್ಲಿ21 miles (34 km) ವಾಲ್ಟ್ ಡಿಸ್ನಿ ವರ್ಲ್ಡ್ ಇದೆ. ಈ ಎಲ್ಲ ಆಕರ್ಷಣೆಗಳು ಒರ್ಲ್ಯಾಂಡೊದ ಪ್ರವಾಸೋದ್ಯಮದ ಆಧಾರವಾಗಿವೆ. ಇವೆಲ್ಲ ಸೇರಿ ನಗರವನ್ನು 2007ರಲ್ಲಿ ಅತಿಹೆಚ್ಚು ಜನರು ಭೇಟಿ ನೀಡಿದ ಅಮೆರಿಕನ್ ನಗರವನ್ನಾಗಿಸಿತ್ತು.[೩] ಸನ್ ಬೆಲ್ಟ್‌ನಲ್ಲಿರುವ ಇತರೆ ಪ್ರಮುಖ ನಗರಗಳಂತೆ, ಒರ್ಲ್ಯಾಂಡೊ ಕೂಡ 1980ರ ಸುಮಾರಿಗೆ ಮತ್ತು 21ನೇ ಶತಮಾನದ ಆರಂಭದ ದಶಕದಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದಿತು. ತಾಣಗಳ ಪ್ರವಾಸೋದ್ಯಮ (ಡೆಸ್ಟಿನೇಶನ್ ಟೂರಿಸಂ) 1970ರ ಸುಮಾರಿಗೆ ಆರಂಭಗೊಂಡಿದ್ದರಿಂದ, ಸ್ಥಳೀಯ ಆರ್ಥಿಕತೆಯು ವೈವಿಧ್ಯಗೊಂಡಿತು ಮತ್ತು ಇಂದು ಈ ಪ್ರದೇಶವು ಸೆಂಟ್ರಲ್ ಫ್ಲೋರಿಡಾಗೆ ಸೇವೆ ನೀಡುತ್ತಿರುವ ಕಂಪನಿಗಳ ಕಾರ್ಯನಿರ್ವಹಣೆಗೆ ಕೇಂದ್ರವಾಗಿದೆ. ಒರ್ಲ್ಯಾಂಡೊದಲ್ಲಿಯೇ ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯ (ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೋರಿಡಾ) ಇದೆ. ವಿದ್ಯಾರ್ಥಿಗಳ ದಾಖಲಾತಿ ದೃಷ್ಟಿಯಿಂದ ಇದು ಫ್ಲೋರಿಡಾ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಕ್ಯಾಂಪಸ್ ಮತ್ತು ಸಂಯುಕ್ತ ಸಂಸ್ಥಾನದಲ್ಲಿ 2ನೇ ಅತ್ಯಂತ ದೊಡ್ಡ ಕ್ಯಾಂಪಸ್ ಆಗಿದೆ.[೪]
ಇತಿಹಾಸ
ಬದಲಾಯಿಸಿಪೂರ್ವ ಐರೋಪ್ಯ ಇತಿಹಾಸ
ಬದಲಾಯಿಸಿ1836ರಲ್ಲಿ ಐರೋಪ್ಯ ವಸಾಹತುಗಾರರು ಆಗಮಿಸುವ ಮೊದಲು, ಒರ್ಲ್ಯಾಂಡೊದಲ್ಲಿ ಕ್ರೀಕ್ ಮತ್ತು ಇನ್ನಿತರ ಅಮೆರಿಕದ ಮೂಲನಿವಾಸಿಗಳ ಬುಡಕಟ್ಟಿನವರು ಇದ್ದರು. ಈ ಪ್ರದೇಶದಲ್ಲಿ ಇಂದು ಕೆಲವೇ ಪುರಾತತ್ವ ನೆಲೆಗಳು ಇವೆ. ಡೌನ್‌ಟೌನ್ ಒರ್ಲ್ಯಾಂಡೊದ ದಕ್ಷಿಣಕ್ಕೆ ಇರುವ ಆಧುನಿಕ ಕಾಲದ ಲೇಕ್ ಗ್ಯಾಟ್ಲಿನ್ ದಡಗಳ ಉದ್ದಕ್ಕೆ ಇರುವ ಗ್ಯಾಟ್ಲಿನ್ ಕೋಟೆಗಳ ಹೊರತಾಗಿ ಮತ್ತೇನೂ ಉಳಿದಿಲ್ಲ. ನಿರ್ಮಾಣ ಕಾಮಗಾರಿ ಸಮಯದಲ್ಲಿ ಬಾಣದ ತುದಿ ಅಥವಾ ಹಗುರು ಬಂದೂಕಿನ ಗುಂಡುಗಳು ಉತ್ಖನನದ ಸಮಯದಲ್ಲಿ ಸಿಕ್ಕಿರುವ ಉದಾಹರಣೆಗಳು ಇವೆ.
ಸಮಾನನಾಮಕಗಳು
ಬದಲಾಯಿಸಿಇಂದು ಕರೆಯಲಾಗುವಂತೆ ಒರ್ಲ್ಯಾಂಡೊ ಎಂದು ಕರೆಯುವ ಮೊದಲು ಜರ್ನಿಗನ್ ಎಂದು ಕರೆಯಲಾಗುತ್ತಿತ್ತು. ಇದು ಇಲ್ಲಿ ಮೊಟ್ಟಮೊದಲ ಶಾಶ್ವತ ವಸಾಹತುಗಾರನಾದ ಆರೊನ್ ಜೆರ್ನಿಗನ್ ಎಂಬ ದನಗಾಹಿಯ ಹೆಸರಿನಿಂದ ಹುಟ್ಟಿದ್ದು. ಆತ ಹೋಲ್ಡನ್ ಸರೋವರದ ಉದ್ದಕ್ಕೆ 1842ರ ಸಶಸ್ತ್ರ ಆಕ್ರಮಣ ಕಾಯಿದೆ (ಆರ್ಮ್‌ಡ್ ಅಕ್ಯುಪೇಶನ್ ಆಕ್ಡ್) ಮೂಲಕ ಭೂಮಿಯನ್ನು ಆಕ್ರಮಿಸಿಕೊಂಡಿದ್ದನು.
ಸ್ಥಳೀಯ ದಂತಕಥೆಗಳು ಹೇಳುವಂತೆ ಒರ್ಲ್ಯಾಂಡೊ ಎಂಬ ಹೆಸರು ಒರ್ಲ್ಯಾಂಡೊ ರೀವ್ಸ್ ಎಂಬ ಸೈನಿಕನ ಹೆಸರಿನಿಂದ ಬಂದಿದ್ದು, ಆತ ಎರಡನೇ ಸೆಮಿನೋಲ್ ಯುದ್ಧ (ಫ್ಲೋರಿಡಾದಲ್ಲಿ ಸೆಮಿನೋಲ್‌ಗಳೆಂದು ಕರೆಯಲಾಗುವ ಅಮೆರಿಕದ ವಿವಿಧ ಮೂಲ ನಿವಾಸಿ ಬುಡಕಟ್ಟುಗಳಿಗೆ ಮತ್ತು ಸಂಯುಕ್ತ ಸಂಸ್ಥಾನಕ್ಕೆ ಆದ ಯುದ್ಧ)ದ ಸಮಯದಲ್ಲಿ ಈ ಪ್ರದೇಶದಲ್ಲಿ ತೀರಿಕೊಂಡಿದ್ದ. ಹೀಗೆ ಪರಸ್ಪರ ವಿರುದ್ಧವಾದ ದಂತಕಥೆಗಳಿವೆ. ಅದೇನೆ ಇದ್ದರೂ, ರೀವ್ಸ್ (ಕೆಲವೊಮ್ಮೆ ರೀಸ್ ಎಂದು ಕರೆಯುತ್ತಾರೆ) ಒಂದು ಸಕ್ಕರೆ ಕಾರ್ಖಾನೆ ಮತ್ತು ಪ್ಲಾಂಟೇಶನ್‌ಅನ್ನು ವೊಲುಸಿಯ ಕೌಂಟಿ ಯ ಸ್ಪ್ರಿಂಗ್ ಗಾರ್ಡನ್ ನ ಉತ್ತರಕ್ಕೆ ಸುಮಾರು 30 ಮೈಲಿಗಳ ದೂರದಲ್ಲಿ (50 ಕಿ.ಮೀ.) ಹೊಂದಿದ್ದನು. ಮೊದಲ ವಸಾಹತುಗಾರರು ಆತನ ಹೆಸರು ಒಂದು ಮರದ ಮೇಲೆ "ಒರ್ಲ್ಯಾಂಡೊ ಅಕೋಸ್ಟ" ಎಂದು ಕೆತ್ತಿದ್ದನ್ನು ಕಂಡರು ಮತ್ತು ಅದು ಆತನ ಗೋರಿ ಇರುವ ಜಾಗಕ್ಕೆ ಗುರುತು ಎಂದು ಭಾವಿಸಿದರು. ನಂತರ ಅವರು ಆ ಪ್ರದೇಶಕ್ಕೆ "ಒರ್ಲ್ಯಾಂಡೊನ ಗೋರಿ ಎಂದು ಕರೆಯಲಾರಂಭಿಸಿದರು ಮತ್ತು ನಂತರದಲ್ಲಿ ಬರಿಯ ಒರ್ಲ್ಯಾಂಡೊ ಆಗಿ ಉಳಿಯಿತು. ಲಿಖಿತ ದಾಖಲೆಗಳ ಪ್ರಕಾರ, ಒರ್ಲ್ಯಾಂಡೊ ಅಕೋಸ್ಟ ಕೂಡ ಒಬ್ಬ ಸೈನಿಕನಾಗಿದ್ದ. ಆದರೆ ಆತನ ಬದುಕಿನ ಕುರಿತು ಹೆಚ್ಚಿನ ವಿವರಗಳು ಅನಿಶ್ಚಿತ ಇವೆ. ಎಒಲ ಸರೋವರದ ಪಕ್ಕದಲ್ಲಿ ಇರುವ ಒಂದು ಸ್ಮಾರಕವು ಆ ಸ್ಥಳವನ್ನು ಗುರುತಿಸುತ್ತದೆ, ಇದರಿಂದಲೇ ನಗರದ ವಿವಿಧ ಹೆಸರುಗಳು ಹುಟ್ಟಿವೆ.
ಇನ್ನೊಂದು ಜನಪ್ರಿಯ ಸ್ಥಳೀಯ ದಂತಕತೆ ಎಂದರೆ ನಗರಕ್ಕೆ ಈ ಹೆಸರನ್ನು ಶೆಕ್ಸ್‌ಪಿಯರ್‌ನ ನಾಟಕ ಆಸ್ ಯು ಲೈಕ್ ಇಟ್ ನ ಒಂದು ಮುಖ್ಯ ಪಾತ್ರಧಾರಿಯ ಹೆಸರಿನಲ್ಲಿ ಇಡಲಾಗಿದೆ. ಡೌನ್‌ಟೌನ್ ಒರ್ಲ್ಯಾಂಡೊದಲ್ಲಿರುವ ಮುಖ್ಯ ರಸ್ತೆಗಳಲ್ಲಿ ಒಂದರ ಹೆಸರು ರೊಸಲಿಂಡ್ ಅವೆನ್ಯೂ, ಎಂದಿಡಲಾಗಿದೆ. ಆ ನಾಟಕದ ನಾಯಕಿ ರೊಸಲಿಂಡ್ ಹೆಸರನ್ನು ಇಡಲಾಗಿದೆ.
ಎರಡನೇ ಸೆಮಿನೋಲ್ ಯುದ್ಧದ ಸಮಯದಲ್ಲಿ, ಯು.ಎಸ್. ಸೈನ್ಯವು ಫೋರ್ಟ್ ಗ್ಯಾಟ್ಲಿನ್‌ನಲ್ಲಿ 1838ರಲ್ಲಿ ಒಂದು ಔಟ್‌ಪೋಸ್ಟ್ ಸ್ಥಾಪಿಸಿತು. ಅದು ಇಂದಿನ ಡೌನ್‌ಟೌನ್‌ನಿಂದ ಕೆಲವೇ ಮೈಲುಗಳ ದೂರದಲ್ಲಿತ್ತು. ಆದರೆ ಯುದ್ಧ ನಿಲುಗಡೆಗೆ ಬರುತ್ತಿದ್ದಂತೆ ಅದನ್ನು ತ್ಯಜಿಸಲಾಯಿತು. ಹೆಚ್ಚಿನ ಆರಂಭಿಕ ವಸಾಹತುಗಾರರು 1850ರ ಮೂರನೇ ಸೆಮಿನೋಲ್ ಯುದ್ಧ ಆಗುವವರೆಗೂ ಇಲ್ಲಿಗೆ ಬಂದಿರಲಿಲ್ಲ. ಹೆಚ್ಚಿನ ಆರಂಭಿಕ ನಿವಾಸಿಗಳು ದನಗಳನ್ನು ವಿಶಾಲ ಪ್ರದೇಶದಲ್ಲಿ ಸಾಕುವ ಮೂಲಕ ಜೀವನೋಪಾಯ ಮಾಡಿಕೊಂಡಿದ್ದರು.
ಏಕೀಕೃತ ಸಂಘಟನೆಗಳು
ಬದಲಾಯಿಸಿಮಾಸ್ಕ್ವಿಟೋ ಕೌಂಟಿ ಯನ್ನು 1845ರಲ್ಲಿ ವಿಭಜಿಸಿದ ನಂತರ, ಒರ್ಲ್ಯಾಂಡೊ ನಗರವು ಹೊಸ ಆರೇಂಜ್ ಕೌಂಟಿಗೆ 1856ರಲ್ಲಿ ಒಂದು ಕೌಂಟಿ ಸ್ಥಾನವಾಯಿತು. ಅಂತರ್ಯುದ್ಧ/ನಾಗರಿಕ ಯುದ್ಧದ ಸಮಯದಲ್ಲಿ ಗ್ರಾಮೀಣ ತಟಸ್ಥಸ್ಥಿತಿಯಲ್ಲಿತ್ತು. ಜೊತೆಗೆ , ಯೂನಿಯನ್ ಬ್ಲಾಕೇಡ್ ಸಮಯದಲ್ಲಿ ತೀವ್ರ ಹಾನಿಗೊಳಗಾಯಿತು. ಪುನರ್‌ನಿರ್ಮಾಣದ ಕಾಲಘಟ್ಟ ದಲ್ಲಿ ಜನಸಂಖ್ಯೆ ಹೆಚ್ಚಳವಾಯಿತು. ಇದರಿಂದಾಗಿ ಒರ್ಲ್ಯಾಂಡೊವನ್ನು 1875ರ ಜುಲೈ 31ರಂದು ಒಂದು ಪಟ್ಟಣವನ್ನಾಗಿ ರಚಿಸಲಾಯಿತು ಮತ್ತು 1885ರಲ್ಲಿ ನಗರವನ್ನಾಗಿ ರೂಪಿಸಲಾಯಿತು.[೫]
1875ರಿಂದ 1895ರವರೆಗಿನ ಅವಧಿಯನ್ನು ಒರ್ಲ್ಯಾಂಡೊದ ಸ್ವರ್ಣಯುಗವೆಂದು ನೆನಪಿಸಿಕೊಳ್ಳಲಾಗುತ್ತದೆ. ಆಗ ಈ ನಗರವು ಫ್ಲೋರಿಡಾದ ಕಿತ್ತಳೆ ಉದ್ಯಮದ ನೆಲೆಯಾಯಿತು. ಆದರೆ 1894-95ರ ಗ್ರೇಟ್ ಫ್ರೀಜ್ ಅವಧಿಯು ಅನೇಕ ಮಾಲೀಕರಿಗೆ ತಮ್ಮ ಸ್ವತಂತ್ರ ತೋಪು/ತೋಟಗಳನ್ನು ಕೈಬಿಡುವಂತೆ ಮಾಡಿತು. ಇದರಿಂದಾಗಿ ಜಮೀನು ಕೆಲವೇ "ಸಿಟ್ರಸ್ ಬ್ಯಾರನ್(ಕಿತ್ತಳೆ ಬೆಳೆಯುವ ಶ್ರೀಮಂತ ಜಮೀನ್ದಾರರು)" ಗಳ ಕೈ ಸೇರುವಂತಾಗಿ, ಅವರು ತಮ್ಮ ಕಾರ್ಯಾಚರಣೆಗಳನ್ನು ದಕ್ಷಿಣಕ್ಕೆ, ಮುಖ್ಯವಾಗಿ ಪೋಕ್ ಕೌಂಟಿಯಲ್ಲಿರುವ ವೇಲ್ಸ್ ಸರೋವರದ ಸುತ್ತಮುತ್ತಲಿನ ಪ್ರದೇಶಕ್ಕೆ ಸ್ಥಳಾಂತರಿಸಿದರು.
ಈ ಪ್ರದೇಶದಲ್ಲಿ ನೆಲೆನಿಂತ ಕುಟುಂಬಗಳಲ್ಲಿ ಕರ್ರಿ ಕುಟುಂಬವೂ ಒಂದು. ಅವರ ಆಸ್ತಿಯು ಪೂರ್ವ ಒರ್ಲ್ಯಾಂಡೊದಲ್ಲಿ ಎಕೊನ್ಲೊಕಶೆ ನದಿ ಯುದ್ದಕ್ಕೂ ಇದೆ. ಈ ನದಿಯನ್ನು ಪ್ರವಾಸಿಗರು ಹಾಗೆಯೇ ವಾಹನದಲ್ಲಿ ದಾಟಿಕೊಂಡು ಅಂದರೆ ಫೋರ್ಡಿಂಗ್ ಮಾಡಿಕೊಂಡು ಹೋಗುತ್ತಾರೆ. ಅವರ ನೆನಪಿಗಾಗಿಯೇ ಒಂದು ರಸ್ತೆಗೆ ಕರ್ರಿ ಫೋರ್ಡ್ ರಸ್ತೆ ಎಂದು ಹೆಸರಿಡಲಾಗಿದೆ. ಬಾಗ್ಗಿ ಕ್ರೀಕ್ ಪ್ರದೇಶದಲ್ಲಿ ವಿಮಾನನಿಲ್ದಾಣದ ಸ್ವಲ್ಪ ದಕ್ಷಿಣದಲ್ಲಿ 150 acres (0.61 km2), 19ನೇ ಶತಮಾನದ ಕೊನೆಯಲ್ಲಿ ವಾರ್ಡ್ ಕುಟುಂಬದ ವಸತಿನಿವೇಶನ ಆಸ್ತಿ ಇದ್ದಿತು. ಈ ಆಸ್ತಿಯು ಈಗಲೂ ವಾರ್ಡ್ ಕುಟುಂಬದ ಒಡತನದಲ್ಲಿದೆ. ಇದನ್ನು SR-417ದ ದಕ್ಷಿಣ ಭಾಗಕ್ಕೆ ಇರುವುದನ್ನು MCO ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಡುವ ವಿಮಾನಗಳಿಂದ ನೋಡಬಹುದು.
ಕೈಗಾರಿಕಾ ಕ್ರಾಂತಿಯ ನಂತರ
ಬದಲಾಯಿಸಿಫ್ಲೋರಿಡಾದ ದೊಡ್ಡ ಒಳಾಂತರ ನಗರವಾಗಿರುವ ಒರ್ಲ್ಯಾಂಡೊ, ಸ್ಪ್ಯಾನಿಶ್ -ಅಮೆರಿಕನ್ ಯುದ್ಧದ ಮತ್ತು ವಿಶ್ವ ಸಮರ Iರ ಸಮಯದಲ್ಲಿ ಜನಪ್ರಿಯ ರೆಸಾರ್ಟ್ ಆಗಿದ್ದಿತು. 1920ರಲ್ಲಿ ಫ್ಲೋರಿಡಾ ಲ್ಯಾಂಡ್ ಬೂಮ್ ಸಮಯದಲ್ಲಿ ಒರ್ಲ್ಯಾಂಡೊ ವ್ಯಾಪಕ ಗೃಹನಿರ್ಮಾಣ ಅಭಿವೃದ್ಧಿಯನ್ನು ಕಂಡಿತು. ಭೂಮಿಯ ಬೆಲೆ ಗಗನಕ್ಕೇರಿತು. ಈ ಸಮಯದಲ್ಲಿ ಡೌನ್‌ಟೌನಿನಲ್ಲಿ ಹಲವಾರು ನೆರೆಹೊರೆ (ನೈಬರ್‌ಹುಡ್) ನಿರ್ಮಾಣಗೊಂಡವು. ಅವುಗಳಲ್ಲಿ ಅನೇಕ ದೊಡ್ಡ ಬಂಗಲೆಗಳಾಗಿದ್ದವು. ಫ್ಲೋರಿಡಾವನ್ನು 1920ರ ಕೊನೆಯ ಭಾಗದಲ್ಲಿ ಹಲವಾರು ಹರಿಕೇನ್‌ಗಳು ಅಪ್ಪಳಿಸಿದಾಗ, ಜೊತೆಗೆ ಗ್ರೇಟ್ ಡಿಪ್ರೆಶನ್ ಆರ್ಥಿಕ ಹಿಂಜರಿಕೆ ನಂತರ ಈ ಪ್ರಗತಿ ಕೊನೆಗೊಂಡಿತು.
ವಿಶ್ವ ಸಮರ IIರ ಸಮಯದಲ್ಲಿ, ಅನೇಕ ಸೇನಾ ಸಿಬ್ಬಂದಿಗಳು ಒರ್ಲ್ಯಾಂಡೊ ಸೈನ್ಯ ವಾಯು ನೆಲೆಯಲ್ಲಿ ಮತ್ತು ಹತ್ತಿರದ ಪೈನ್‌ಕಾಸೆಲ್ ಆರ್ಮಿ ಏರ್ ಫೀಲ್ಡ್‌ನಲ್ಲಿ ನೆಲೆಸಿದ್ದರು. ಇವರಲ್ಲಿ ಅನೇಕ ಸಿಬ್ಬಂದಿಗಳು ಒರ್ಲ್ಯಾಂಡೊದಲ್ಲಿ ನೆಲೆನಿಂತು, ಕುಟುಂಬವನ್ನು ಬೆಳೆಸಿದರು. 1956ರಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಕಂಪನಿಯಾಗಿದ್ದ ಮಾರ್ಟಿನ್ ಮರೈಟ (ಈಗ ಲಾಕ್‌ಹೀಡ್ ಮಾರ್ಟಿನ್ ) ನಗರದಲ್ಲಿ ಒಂದು ಘಟಕವನ್ನು ಸ್ಥಾಪಿಸಿತು. 1947ರಲ್ಲಿ ಸಂಯುಕ್ತ ಸಂಸ್ಥಾನ ವಾಯು ಪಡೆ ಪ್ರತ್ಯೇಕ ಸೇವೆಯಾಗಿ ರೂಪುಗೊಂಡಾಗ, ಒರ್ಲ್ಯಾಂಡೊ ಎಎಬಿ ಮತ್ತು ಪೈನ್‌ಕ್ಯಾಸೆಲ್ ಎಎಎಫ್‌ಗಳು ಅದಕ್ಕೆ ವರ್ಗಾವಣೆಗೊಂಡವು. ಅದನ್ನು ಏರ್ ಫೋರ್ಸ್ ಬೇಸಸ್ (ವಾಯು ಪಡೆ ನೆಲೆಗಳು) (AFB) ಎಂದು ಮರುವಿನ್ಯಾಸಗೊಳಿಸಲಾಯಿತು. 1958ರಲ್ಲಿ, ಪೈನ್‌ಕ್ಯಾಸಲ್ ಎಎಫ್‌ಬಿಯನ್ನು ಮೆಕ್‌ಕಾಯ್ ಏರ್‌ಫೊರ್ಸ್ ಬೇಸ್ ಎಂದು ಕರ್ನಲ್ ಮೈಕೆಲ್ ಎನ್. ಡಬ್ಲ್ಯು.ಮೆಕ್‌ಕಾಯ್ ನೆನಪಿಗೆ ಮರುನಾಮಕರಣ ಮಾಡಲಾಗಿತ್ತು. ಆತ a 320ನೇ ಬಂಬಾರ್ಡ್‌ಮೆಂಟ್ ವಿಂಗ್‌ನ ಕಮಾಂಡರ್ ಆಗಿದ್ದ ಮತ್ತು ಒರ್ಲ್ಯಾಂಡೊದ ಉತ್ತರಕ್ಕೆ B-47 ಸ್ಟ್ರಾಟೊಜೆಟ್ ಬಾಂಬರ್ ವಿಮಾನ ಅಪಘಾತವಾದಾಗ ಮರಣಿಸಿದ್ದ. 1960ರಲ್ಲಿ, ಈ ನೆಲೆಯು ಸ್ಟ್ರಾಟೆಜಿಕ್ ಏರ್ ಕಮಾಂಡ್ (SAC)ನ 306ನೇ ಬಂಬಾರ್ಡ್‌ಮೆಂಟ್ ವಿಂಗ್‌ಗೆ ನೆಲೆಯಾಯಿತು. B-52 ಸ್ಟ್ರಾಟೋಫೋರ್ಟೆಸ್ ಮತ್ತು KC-135 ಸ್ಟ್ರಾಟೋಟ್ಯಾಂಕರ್ ವಿಮಾನಗಳ ಕಾರ್ಯನಿರ್ವಹಣೆಯೊಂದಿಗೆ EC-121 ಮತ್ತು U-2 ವಿಮಾನಗಳ ಬೇರ್ಪಡಿಸುವ ಕಾರ್ಯಾಚರಣೆಗಳೂ ಇಲ್ಲಿ ನಡೆಯುತ್ತಿದ್ದವು.
ಇತಿಹಾಸದಲ್ಲಿ ಪ್ರವಾಸೋದ್ಯಮ
ಬದಲಾಯಿಸಿಒರ್ಲ್ಯಾಂಡೊ ಆರ್ಥಿಕತೆಗೆ ಸಂಭವಿಸಿದ ಅತ್ಯಂತ ನಿರ್ಣಾಯಕ ಘಟನೆ ಎಂದರೆ 1965ರಲ್ಲಿ ವಾಲ್ಟ್ ಡಿಸ್ನಿಯು ವಾಲ್ಟ್ ಡಿಸ್ನಿ ವರ್ಲ್ಡ್ ನಿರ್ಮಿಸುವುದಾಗಿ ಪ್ರಕಟಿಸಿದ್ದು. ಡಿಸ್ನಿಯು ಮಿಯಾಮಿ ಮತ್ತು ತಾಂಪ ಪ್ರದೇಶಗಳನ್ನು ತನ್ನ ಪಾರ್ಕ್ ನಿರ್ಮಾಣಕ್ಕೆ ಪರಿಗಣಿಸಿದ್ದರೂ, ಆತನ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎಂದರೆ ಅಲ್ಲಿ ಹರಿಕೇನ್ ಗಳು ಅಪ್ಪಳಿಸಬಹುದು ಎಂಬುದಾಗಿತ್ತು — ಒರ್ಲ್ಯಾಂಡೊ ಸ್ವಲ್ಪ ಒಳಾಂತರದಲ್ಲಿದ್ದುದು, ಇಲ್ಲಿ ಹರಿಕೇನ್ ಹಾನಿ ಇದ್ದರೂ, ಕರಾವಳಿ ಪ್ರದೇಶಗಳಿಗಿಂತ ಕಡಿಮೆ ಹಾನಿಯಾಗುತ್ತಿತ್ತು ಎಂಬ ಕಾರಣಕ್ಕೆ ಒರ್ಲ್ಯಾಂಡೊವನ್ನು ಆಯ್ಕೆ ಮಾಡಿಕೊಂಡಿದ್ದ. ವೆಕೇಶನ್ ರೆಸಾರ್ಟ್ ಅನ್ನು 1971ರ ಅಕ್ಟೋಬರ್‌ನಲ್ಲಿ ಆರಂಭಿಸಲಾಯಿತು. ಅದು ಒರ್ಲ್ಯಾಂಡೊ ಮಹಾನಗರಪಾಲಿಕೆ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಳ ಮತ್ತು ಆರ್ಥಿಕ ಬೆಳವಣಿಗೆಯಾಗುವ ಭರವಸೆಯನ್ನು ನೀಡಿತ್ತು. ಈಗ ಅದು ಆರೇಂಜ್ , ಸೆಮಿನೋಲ್, ಓಸ್ಕೆಯೊಲ, ಮತ್ತು ಲೇಕ್ ಕೌಂಟಿಗಳನ್ನು ಒಳಗೊಂಡಿದೆ. ಇದರಿಂದಾಗಿ, ಪ್ರವಾಸೋದ್ಯಮವು ಈ ಪ್ರದೇಶದ ಆರ್ಥಿಕತೆಗೆ ಬಹುಮುಖ್ಯ ಅಂಶವಾಯಿತು. ಒರ್ಲ್ಯಾಂಡೊ ನಗರವನ್ನು ಸತತವಾಗಿ ವಿಶ್ವದ ಟಾಪ್ ರಜೆಯ ತಾಣವನ್ನಾಗಿ ಶ್ರೇಣಿ ನೀಡಲಾಗಿದೆ. ಜೊತೆಗೆ ಈಗ ವಿಶ್ವದಲ್ಲಿ ಬೇರೆಲ್ಲ ಕಡೆಗಳಿಂತ ಹೆಚ್ಚು ಥೀಮ್ ಪಾರ್ಕ್‌ಗಳು ಮತ್ತು ಮನೋರಂಜನಾ ಆಕರ್ಷಣೆಗಳನ್ನು ಹೊಂದಿದೆ.
ಒರ್ಲ್ಯಾಂಡೊದ ಪ್ರಗತಿಗೆ ಮಹತ್ವದವಾದ ಒಂದು ಘಟನೆ 1962ರಲ್ಲಿ ನಡೆಯಿತು. ಅದೆಂದರೆ ಹೊಸ ಒರ್ಲ್ಯಾಂಡೊ ಜೆಟ್‌ಪೋರ್ಟ್ ಅನ್ನು ಇಂದಿನ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲು ಆರಂಭಿಸಲಾಯಿತು. ಅದನ್ನು ಮೆಕ್‌ಕಾಯ್ ವಾಯು ಪಡೆ ನೆಲೆ ಪ್ರದೇಶದ ಭಾಗದಿಂದ ನಿರ್ಮಿಸಲಾಯಿತು. 1970ರ ಸುಮಾರಿಗೆ, ಇಲ್ಲಿಗೆ ನಾಲ್ಕು ಪ್ರಮುಖ ಏರ್‌ಲೈನ್‌ಗಳು (ಡೆಲ್ಟಾ ಏರ್‌ಲೈನ್ಸ್ , ನ್ಯಾಶನಲ್ ಏರ್‌ಲೈ್ನ್ಸ್, ಈಸ್ಟರ್ನ್ ಏರ್‌ಲೈ್ನ್ಸ್ ಮತ್ತು ಸೌದರ್ನ್ ಏರ್‌ಲೈ್ನ್ಸ್ )ಗಳು ನಿಯಮಿತವಾದ ವಿಮಾನಯಾನ ಸೇವೆ ಒದಗಿಸುತ್ತಿವೆ. ಮೆಕ್‌ಕಾಯ್ ವಾಯು ಪಡೆ ನೆಲೆಯನ್ನು ಅಧಿಕೃತವಾಗಿ 1975ರಲ್ಲಿ ಮುಚ್ಚಲಾಯಿತು. ಅದರ ಬಹುತೇಕ ಭಾಗ ಈಗ ವಿಮಾನನಿಲ್ದಾಣದ ಭಾಗವಾಗಿದೆ. ವಿಮಾನನಿಲ್ದಾಣವು ಈಗಲೂ ಮೊದಲಿನ ವಾಯು ಪಡೆ ವಿಮಾನನಿಲ್ದಾಣ ಸಂಕೇತ (MCO)ವನ್ನು ಉಳಿಸಿಕೊಂಡಿದೆ.
ಪ್ರಸಕ್ತ ದಿನಗಳು
ಬದಲಾಯಿಸಿಇಂದು, "ಹಳೆಯ ಒರ್ಲ್ಯಾಂಡೊ"ದ ಐತಿಹಾಸಿಕ ಕೇಂದ್ರವು ಡೌನ್‌ಟೌನ್ ಒರ್ಲ್ಯಾಂಡೊದಲ್ಲಿ, ಚರ್ಚ್ ಸ್ಟ್ರೀಟ್ ಉದ್ದಕ್ಕೆ, ಆರೇಂಜ್ ಅವೆನ್ಯೂ ಮತ್ತು ಗಾರ್ಲೆಂಡ್ ಅವೆನ್ಯೂ ಮಧ್ಯೆ ಇದೆ. ಐತಿಹಾಸಿಕ ಜಿಲ್ಲೆ (ಹಿಸ್ಟಾರಿಕ್ ಡಿಸ್ಟ್ರಿಕ್ಟ್) ಮುಖ್ಯವಾಗಿ ಎಒಲ ಸರೋವರ ದ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೆ. ಇಲ್ಲಿ ಶತಮಾನದಷ್ಟು ಹಳೆಯ ಓಕ್ ಮರಗಳ ಸಾಲಿನ ಇಟ್ಟಿಗೆ ರಸ್ತೆಗಳಿವೆ. ಈ ನೆರೆಹೊರೆಗಳನ್ನು "ಲೇಕ್ ಎಒಲ ಹೈಟ್ಸ್ " ಮತ್ತು "ಥೊರ್ನ್‌ಟನ್ ಪಾರ್ಕ್" ಎಂದು ಕರೆಯಲಾಗುತ್ತಿದ್ದು, ಇಲ್ಲಿ ಒರ್ಲ್ಯಾಂಡೊದ ಅತ್ಯಂತ ಹಳೆಯ ಕೆಲವು ಮನೆಗಳಿವೆ.
ಭೌಗೋಳಿಕತೆ ಮತ್ತು ಮತ್ತು ನಗರದೃಶ್ಯ
ಬದಲಾಯಿಸಿಭೌಗೋಳಿಕವಾಗಿ ಒರ್ಲ್ಯಾಂಡೊ ಹೆಚ್ಚಿನದಾಗಿ ಜೌಗು ಭೂಮಿ ಯನ್ನು ಹೊಂದಿದ್ದು, ಅನೇಕ ಸರೋವರಗಳು ಮತ್ತು ಜವುಗುಗುಂಡಿಗಳನ್ನು ಹೊಂದಿದೆ. ಭೂಪ್ರದೇಶವು ಸಾಮಾನ್ಯವಾಗಿ ಸಮತಟ್ಟಾಗಿದೆ, ಹೀಗಾಗಿ ಈ ಪ್ರದೇಶವು ಸ್ವಲ್ಪ ಕೆಳಕ್ಕಿದ್ದು, ಜವುಗಾಗಿರುತ್ತದೆ. ಈ ಪ್ರದೇಶದಲ್ಲಿ ನೂರಾರು ಸರೋವರಗಳಿವೆ, ಇವುಗಳಲ್ಲಿ ದೊಡ್ಡದು ಎಂದರೆ ಅಪೊಪ್ಕ ಸರೋವರ. ಕೇಂದ್ರ ಫ್ಲೋರಿಡಾದ ಆಧಾರಶಿಲೆಯು ಮುಖ್ಯವಾಗಿ ಸುಣ್ಣದಕಲ್ಲು ಆಗಿದ್ದು, ಬಹಳ ರಂಧ್ರಯುತವಾಗಿದೆ. ಹೀಗಾಗಿ ಒರ್ಲ್ಯಾಂಡೊ ಪ್ರದೇಶವು ಬತ್ತುಕುಳಿಗಳಿಗೆ (ಸಿಂಕ್ ಹೋಲ್ -ಹಳ್ಳಗಳನ್ನು ತನ್ನೊಳಗೆ ಸೆಳೆದುಕೊಂಡು, ಕಣ್ಮರೆ ಮಾಡಿಬಿಡಬಲ್ಲ ಸುಣ್ಣದಕಲ್ಲಿನ ಕುಳಿಗಳು) ಸುಲಭವಾಗಿ ಆಸ್ಪದ ನೀಡುತ್ತದೆ. ಹೀಗೆ ಬತ್ತು ಕುಳಿಯನ್ನು (ಸಿಂಕ್ ಹೋಲ್) ಒಳಗೊಂಡ ಅತ್ಯಂತ ಪ್ರಖ್ಯಾತ ಘಟನೆ ಎಂದರೆ 1981ರಲ್ಲಿ ವಿಂಟರ್ ಪಾರ್ಕ್‌ನಲ್ಲಿ ನಡೆದಿದ್ದು. ಡೌನ್‌ಟೌನ್ ಒರ್ಲ್ಯಾಂಡೊದ ಉತ್ತರಕ್ಕಿರುವ ಪಟ್ಟಣವನ್ನು "ವಿಂಟರ್ ಪಾರ್ಕ್ ಸಿಂಕ್ ಹೋಲ್ " ಏಕಾಏಕಿ ಹೆಸರಿಸಲಾಯಿತು.
ಒರ್ಲ್ಯಾಂಡೊ ನಗರ ಮಿತಿಯಲ್ಲಿ 115 ನೆರೆಹೊರೆ(ನೈಬರ್‌ಹುಡ್)ಗಳಿವೆ ಮತ್ತು ಮಹಾನಗರಪಾಲಿಕೆಗೆ ಸೇರದೇ ಇರುವ ಹಲವಾರು ಪ್ರದೇಶಗಳಿವೆ. ಒರ್ಲ್ಯಾಂಡೊದ ನಗರ ಮಿತಿಗಳು ಒಂದು ಚೆಕ್‌ಬೋರ್ಡ್ ಅನ್ನು ಹೋಲುತ್ತವೆ. ನಗರ ಮಿತಿಯಲ್ಲಿ ಸುತ್ತಲೂ ಮಹಾನನಗರ ಪಾಲಿಕೆ ವ್ಯಾಪ್ತಿಗೆ ಸೇರದೇ ಇರುವ ಆರೇಂಜ್ ಕೌಂಟಿಯ ಕೆಲವು ಭಾಗಗಳಿವೆ. ಇದು ಕೆಲವೊಮ್ಮೆ ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ. ಏಕೆಂದರೆ ಕೆಲವು ಪ್ರದೇಶಗಳಿಗೆ ಆರೇಂಜ್ ಕೌಂಟಿ ಮತ್ತು ಒರ್ಲ್ಯಾಂಡೊ ನಗರ ಎರಡೂ ಕಡೆಯಿಂದ ಕೆಲವು ಸೇವೆಗಳನ್ನು ಒದಗಿಸಲಾಗುತ್ತದೆ. ಒರ್ಲ್ಯಾಂಡೊದ ನಗರ ಜನಸಂಖ್ಯೆಯು ಅದರ ಮಹಾನಗರಪಾಲಿಕೆ ಜನಸಂಖ್ಯೆಗೆ ಹೋಲಿಸಿದಾಗ ಏಕೆ ಕಡಿಮೆ ಇದೆ ಎಂಬುದನ್ನು ಇದು ವಿವರಿಸುತ್ತದೆ. ನಗರ ಮತ್ತು ಕೌಂಟಿ ಈಗ ಒಟ್ಟುಸೇರಿ, ನಗರದ ಮಿತಿಗಳನ್ನು "ಗುರುತಿಸಲು" ಪ್ರಯತ್ನಿಸುತ್ತಿವೆ. ಒರ್ಲ್ಯಾಂಡೊಗೆ ಉಪಭಾಗವಾಗಿ ಸೇರಿರುವ ಭೂಮಿಯು ಈಗಾಗಲೇ ಸದ್ಯದ ನಗರ ಮಿತಿಗಳನ್ನು ಗಡಿಯಾಗಿ ಹೊಂದಿವೆ.[೬]
ಹವಾಮಾನ
ಬದಲಾಯಿಸಿಒರ್ಲ್ಯಾಂಡೊ ಬೆಚ್ಚಗಿನ ಮತ್ತು ಆರ್ದ್ರ ಉಪ-ಉಷ್ಣಪ್ರದೇಶದ ಹವಾಮಾಣ (ಹ್ಯುಮಿಡ್ ಸಬ್‌ಟ್ರಾಪಿಕಲ್ ಕ್ಲೈಮೇಟ್) ಹೊಂದಿದೆ. ಜೊತೆಗೆ ಕೋಪಿಯನ್ ಕ್ಲೈಮೇಟ್ ವರ್ಗೀಕರಣವನ್ನು ಹೊಂದಿದೆ Cfb, ಮತ್ತು ಇಲ್ಲಿ ವರ್ಷಕ್ಕೆ ಎರಡು ಪ್ರಮುಖ ಋತುಗಳಿರುತ್ತವೆ. ಒಂದು ತುಂಬ ಬೇಸಿಗೆ ಮತ್ತು ಇನ್ನೊಂದು ಮಳೆಗಾಲ, ಜೂನ್‌ನಿಂದ ಶುರುವಾಗಿ ಸೆಪ್ಟೆಂಬರ್ ಕೊನೆಯವರೆಗೆ ಇರುತ್ತದೆ. (ಸುಮಾರಾಗಿ ಅಟ್ಲಾಂಟಿಕ್ ಹರಿಕೇನ್ ಋತುವಿನೊಂದಿಗೆ ಹೊಂದಿಕೆಯಾಗುತ್ತದೆ)). ಇನ್ನೊಂದು ಶುಷ್ಕ ಋತು (ಅಕ್ಟೋಬರ್‌ನಿಂದ ಮೇ ವರೆಗೆ), ಈ ಸಮಯದಲ್ಲಿ ಹೆಚ್ಚು ಉಷ್ಣತೆಯಿರುತ್ತದೆ ಮತ್ತು ಮಳೆ ಆಗೀಗ ಮಾತ್ರ ಬರುತ್ತಿರುತ್ತದೆ. ಈ ಪ್ರದೇಶದ ಬೆಚ್ಚಗಿನ ಮತ್ತು ಆರ್ದ್ರತೆಯ ಹವಾಮಾನವು ಪ್ರಮುಖವಾಗಿ ಕಡಿಮೆ ಎತ್ತರದಲ್ಲಿರುವುದು (ಲೋ ಎಲಿವೇಶನ್),ಟ್ರಾಪಿಕ್ ಆಫ್ ಕ್ಯಾನ್ಸರ್ ಗೆ ಸ್ವಲ್ಪ ಹತ್ತಿರದಲ್ಲಿರುವುದು ಮತ್ತು ಪ್ರಸ್ಥಭೂಮಿಯ ಕೇಂದ್ರದಲ್ಲಿ ಇರುವುದು, ಈ ಎಲ್ಲವೂ ಸೇರಿ ಉಂಟಾಗಿದೆ. ಈ ಹವಾಮಾನದ ಅನೇಕ ಲಕ್ಷಣಗಳು ಗಲ್ಫ್ ಸ್ಟ್ರೀಮ್ ಗೆ ಹತ್ತಿರದಲ್ಲಿರುವುದರಿಂದ ಉಂಟಾಗಿದೆ. ಈ ಗಲ್ಫ್ ಸ್ಟ್ರೀಮ್ ಫ್ಲೋರಿಡಾ ಪರ್ಯಾಯಭೂಮಿಯ ಸುತ್ತಲೂ ಹರಿಯುತ್ತಿರುತ್ತದೆ.
ಒರ್ಲ್ಯಾಂಡೊದ ಆರ್ದ್ರ ಬೇಸಿಗೆ ಋತುವಿನ ಪರಾಕಾಷ್ಠೆಯಲ್ಲಿ, ಉಷ್ಣತೆಯು ಅಪರೂಪಕ್ಕೊಮ್ಮೆ 21 ಡಿಗ್ರಿ ಸೆಂಟಿಗ್ರೇಡ್ (70 °F)ಗಿಂತ ಕೆಳಗಿಳಿಯುತ್ತದೆ 70 °F (21 °C), ಮತ್ತು ಹಗಲಿನ ವೇಳೆಯಲ್ಲಿ ಗರಿಷ್ಠ ಸರಾಸರಿ ಉಷ್ಣತೆಯು 90 °F ಹತ್ತಿರವಿರುತ್ತದೆ(32-37 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ). ಈ ಪ್ರದೇಶದ ಆರ್ದ್ರತೆಯು ಉಭಯರಕ್ಷೆಯ ಹಾಗೆ ಅಂದರೆ ಬಫರ್ ಆಗಿ ಕೆಲಸ ಮಾಡುತ್ತದೆ, ಅದು ನೈಜ ಉಷ್ಣತೆಯು 100 °F ಗಿಂತ (38 ಡಿಗ್ರಿ ಸೆಂಟಿಗ್ರೇಡ್)ಗಿಂತ ಅಧಿಕಗೊಳ್ಳುವುದನ್ನು ತಡೆಯುತ್ತದೆ, 100 °F (38 °C) ಜೊತೆಗೆ, ಉಷ್ಣತೆ ಸೂಚ್ಯಂಕ (ಹೀಟ್ ಇಂಡೆಕ್ಸ್) 110 °F (43 ಡಿಗ್ರಿ ಸೆಂಟಿಗ್ರೇಡ್) ದಾಟುವಂತೆ ಮಾಡುತ್ತದೆ. 110 °F (43 °C). ನಗರದ ಅತ್ಯಧಿಕ ದಾಖಲೆಯಾದ ಉಷ್ಣತೆ ಎಂದರೆ 101 °F (38 ಡಿಗ್ರಿ ಸೆಂಟಿಗ್ರೇಡ್),101 °F (38 °C), 1998 ಜುಲೈ 2ರಂದು ದಾಖಲಾಗಿತ್ತು. ಈ ತಿಂಗಳುಗಳಲ್ಲಿ ಹೆಚ್ಚು ಕಡಿಮೆ ಪ್ರತಿದಿನ ಮಧ್ಯಾಹ್ನದ ಗುಡುಗು ಮಳೆ ಬಲವಾಗಿ ಆಗುತ್ತಿರುತ್ತದೆ. ಈ ಬಿರುಮಳೆಗಳು ಗಲ್ಫ್ ಆಫ್ ಮೆಕ್ಸಿಕೋ ಮತ್ತು ಅಟ್ಲಾಂಟಿಕ್ ಸಮುದ್ರದ ಏರ್ ಮಾಸ್‌ಗಳು ಸೆಂಟ್ರಲ್ ಫ್ಲೋರಿಡಾದ ಮೇಲೆ ಡಿಕ್ಕಿಹೊಡೆಯುವುದರಿಂದ ಉಂಟಾಗುತ್ತದೆ. ಈ ಮಳೆಯು ಮನಮೋಹಕ ಮಿಂಚುಗಳಿಂದ ಕೂಡಿದ್ದು, ಮತ್ತಷ್ಟು ಬಿರುಸಾಗಿರುತ್ತದೆ ಮತ್ತು ಕೆಲವೊಮ್ಮೆ ಅತ್ಯಧಿಕ ಮಳೆಯನ್ನೂ ಉಂಟು ಮಾಡಬಹುದು (ಕೆಲವೊಮ್ಮೆ ಪ್ರತಿಗಂಟೆಗೆ ಹಲವಾರು ಇಂಚುಗಳಷ್ಟು ಮಳೆ). ಜೊತೆಗೆ ಬಲವಾಗಿ ಬೀಸುವ ಗಾಳಿ ಇರುತ್ತದೆ ಮತ್ತು ಆಗೀಗ ಹಾನಿಕಾರಕ ರೀತಿಯ ಆಲಿಕಲ್ಲು ಕೂಡ ಬೀಳುತ್ತದೆ.
ತಂಪಾದ ಋತುವಿನಲ್ಲಿ, ಆರ್ದ್ರತೆಯು ಕಡಿಮೆ ಇರುತ್ತದೆ ಮತ್ತು ಉಷ್ಣತೆಯು ಹೆಚ್ಚು ಮಧ್ಯಮವಾಗಿರುತ್ತದೆ. ಜೊತೆಗೆ ತ್ವರಿತಗತಿಯಲ್ಲಿ ಏರುಪೇರು ಆಗುತ್ತಿರುತ್ತದೆ. ಸರಾಸರಿ ರಾತ್ರಿಯ ಉಷ್ಣತೆಯು ಸುಮಾರು 50 °F (10 ಡಿಗ್ರಿ ಸೆಂಟಿಗ್ರೇಡ್) 50 °F (10 °C) ಇರುತ್ತದೆ. ಹಗಲಿನ ವೇಳೆ ಸರಾಸರಿ ಗರಿಷ್ಠ ಉಷ್ಣತೆಯು ಸುಮಾರು 72 °F (22 ಡಿಗ್ರಿ ಸೆಂಟಿಗ್ರೇಡ್) ಇರುತ್ತದೆ.72 °F (22 °C). ಉಷ್ಣತೆಯು ಬಹಳ ಅಪರೂಕ್ಕೊಮ್ಮೆ 32 °F (0 ಡಿಗ್ರಿ ಸೆಂಟಿಗ್ರೇಡ್)ಗಿಂತ ಕೆಳಗಿಳಿಯುತ್ತದೆ. ಚಳಿಗಾಲವು ಶುಷ್ಕವಾಗಿರುತ್ತದೆ ಮತ್ತು ಅಪರೂಪದಲ್ಲಿ ಕೋಲ್ಡ್ ಫ್ರಂಟ್ ಬಂದ ನಂತರ ಹಿಮಗಟ್ಟುವ ಉಷ್ಣತೆ ಇರುವುದರಿಂದ (ಮತ್ತು ಅವುಗಳ ಜೊತೆಗೆ ಪ್ರಕ್ಷೇಪ), ಒರ್ಲ್ಯಾಂಡೊದಲ್ಲಿ ಹೆಚ್ಚೇನೂ ಹಿಮಪಾತವಾಗುವುದಿಲ್ಲ. (1948ರಲ್ಲಿ ವಿಮಾನನಿಲ್ದಾಣದಲ್ಲಿ ದಾಖಲಿಸುವುದನ್ನು ಆರಂಭಿಸಿದ ನಂತರ ಒಮ್ಮೆ ಮಾತ್ರ ಅಪಾರ ಪ್ರಮಾಣದ ಹಿಮವು ಸಂಗ್ರಹಗೊಂಡಿತ್ತು). ಬಹಳ ಅಪರೂಪದಕ್ಕೆ ಪ್ರಬಲವಾಗಿ ಗಾಳಿಬೀಸುವಿಕೆ ಉಂಟಾಗುತ್ತದೆ. ಒರ್ಲ್ಯಾಂಡೊದ ಸುತ್ತಲಿನ ಪ್ರದೇಶವು 1977ರ ಹಿಮಬಿರುಗಾಳಿಯ ಸಮಯದಲ್ಲಿ 6" (15 ಸೆ.ಮೀ.)ನಷ್ಟು ದಾಖಲಿಸಿತ್ತು. ಒರ್ಲ್ಯಾಂಡೊ 1989ರ ಡಿಸೆಂಬರ್ 23ರಂದು ಮತ್ತು , 2010ರ ಜನವರಿ 9ರಂದು ಜೋರಾದ ಬಿರುಗಾಳಿ ಬೀಸಿತ್ತು. ಒರ್ಲ್ಯಾಂಡೊದ ಕರಾವಳಿ ತೀರದ ಸುತ್ತಲಿನಲ್ಲಿ ಸಮುದ್ರ ಪರಿಣಾಮದಿಂದ ಉಂಟಾದ ಹಿಮ (ಓಶನ್ ಇಫೆಕ್ಟ್ ಸ್ನೋ) ಆಗೀಗ ಆಗುತ್ತಲೇ ಇರುತ್ತದೆ.
ಒರ್ಲ್ಯಾಂಡೊದಲ್ಲಿ ಸರಾಸರಿ ವಾರ್ಷಿಕ ಮಳೆ ಪ್ರಮಾಣವು 48.35 ಇಂಚುಗಳು (122.8 ಸೆ.ಮೀ.)48.35 inches (122.8 cm) ಆಗಿದೆ. ಇದರಲ್ಲಿ ಬಹುತೇಕವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಆಗುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇವರೆಗೆ ಒರ್ಲ್ಯಾಂಡೊದಲ್ಲಿ ಅತ್ಯಂತ ಶುಷ್ಕ ಋತು ಇರುತ್ತದೆ. ಈ ಅವಧಿಯಲ್ಲಿ, (ವಿಶೇಷವಾಗಿ ಇದರ ಕೊನೆಯ ತಿಂಗಳುಗಳಲ್ಲಿ), ಸಾಮಾನ್ಯವಾಗಿ ಕಾಡ್ಗಿಚ್ಚು ಅನಾಹುತಗಳಿದ್ದೇ ಇರುತ್ತವೆ. ಕೆಲವು ವರ್ಷಗಳಲ್ಲಿ, ಕಾಡ್ಗಿಚ್ಚು ಬಹಳ ತೀವ್ರವಾಗಿತ್ತು. 1998ರಲ್ಲಿ, ಬಹಳ ತೀವ್ರವಾದ ಎಲ್ ನಿನೊ ಚಂಡಮಾರುತದಿಂದಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಅಸ್ವಾಭಾವಿಕವಾದ ತಂಪು ಇತ್ತು. ನಂತರ ವಸಂತ ಋತು ಮತ್ತು ಬೇಸಿಗೆಯ ಆಂರಂಭದಲ್ಲಿ ಬರ ಉಂಟಾಯಿತು. ಜೊತೆಗೆ ಆ ಸಮಯದಲ್ಲಿ ಅತ್ಯಧಿಕ ಕಾಡ್ಗಿಚ್ಚು ದಾಖಲಾಗಿದೆ. ಅದು ಒರ್ಲ್ಯಾಂಡೊದ ವಾಯು ಗುಣಮಟ್ಟದಲ್ಲಿ ಎಚ್ಚರಿಕೆ ಉಂಟಾಗುವಂತೆ ಮಾಡಿತು. ಜೊತೆಗೆ ಸಾಮಾನ್ಯ ದೈನಂದಿನ ಬದುಕಿಗೂ ಸಾಕಷ್ಟು ಹಾನಿಯುಂಟುಮಾಡಿತು. ಇದರಿಂದಾಗಿ ಹತ್ತಿರದ ಡೇಟೊನ ಬೀಚ್ ನಲ್ಲಿ ನಡೆಯಬೇಕಿದ್ದ ಆ ವರ್ಷದ ಪೆಪ್ಸಿ 400(Pepsi 400) ಎನ್‌ಎಎಸ್‌ಸಿಎಆರ್(NASCAR) ರೇಸ್‌ಅನ್ನು ಮುಂದೂಡಲಾಯಿತು.
ಒರ್ಲ್ಯಾಂಡೊ ಒಂದು ಬಹಳ ಜನಸಂಖ್ಯೆಯಿರುವ ಕೇಂದ್ರವಾಗಿದೆ ಮತ್ತು ಇಲ್ಲಿ ಹರಿಕೇನ್ (ಚಂಡಮಾರುತ) ಅಪಾಯ ತುಂಬ ಇದೆ. ಆದರೂ ದಕ್ಷಿಣ ಫ್ಲೋರಿಡಾದ ನಗರ ಪ್ರದೇಶ ಅಥವಾ ಇನ್ನಿತರ ಕರಾವಳಿ ಪ್ರದೇಶಗಳಲ್ಲಿದ್ದಷ್ಟು ಅಪಾಯವಿಲ್ಲ. ನಗರವು 42 miles (68 km) ಅಟ್ಲಾಂಟಿಕ್‌ನಿಂದ ಒಳಾಂತರದಲ್ಲಿ ಮತ್ತು 77 miles (124 km) ಗಲ್ಫ್ ಆಫ್ ಮೆಕ್ಸಿಕೋದಿಂದ ಒಳಾಂತರದಲ್ಲಿ ಇರುವುದರಿಂದ,[೭] ಇಲ್ಲಿಗೆ ಹರಿಕೇನ್‌ಗಳು ಅಪ್ಪಳಿಸುವ ಮೊದಲೇ ಅವು ದುರ್ಬಲವಾಗಿರುತ್ತವೆ. ಈ ಪ್ರದೇಶವು 100 feet (30 m) ಸಮುದ್ರ ಮಟ್ಟದಿಂದ ಮೇಲೆ ಇರುವುದರಿಂದ ಬಿರುಗಾಳಿಯ ಹೊಡೆತಗಳು ಅಷ್ಟು ಆತಂಕದ ವಿಚಾರವೇನಲ್ಲ. ಹೀಗೆ ಇದ್ದಾಗ್ಯೂ ಕೂಡ, ನಗರವು ಹಲವು ಪ್ರಬಲವಾದ ಹರಿಕೇನ್‌ಗಳನ್ನು ಕಂಡಿದೆ. ಕುಖ್ಯಾತ 2004ರ ಹರಿಕೇನ್ ಋತುವಿನ ಸಮಯದಲ್ಲಿ, ಒರ್ಲ್ಯಾಂಡೊಗೆ ಮೂರು ಹರಿಕೇನ್‌ಗಳು ಅಪ್ಪಳಿಸಿ, ಅಪಾರ ಹಾನಿ ಮಾಡಿದ್ದವು. ಅವುಗಳಲ್ಲಿ ಹರಿಕೇನ್ ಚಾರ್ಲಿ ಅತ್ಯಂತ ತೀವ್ರವಾದ ಹಾನಿಯುಂಟು ಮಾಡಿತ್ತು. ನಗರವು ಹರಿಕೇನ್ ಡೊನಾ ಸಮಯದಲ್ಲಿಯೂ ಅಪಾರ ನಷ್ಟವನ್ನು ಅನುಭವಿಸಿತ್ತು.
ಟೊರ್ನಡೊಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಲವಾದ ಗುಡುಗುಮಳೆಯಿಂದ ಕೂಡಿರುತ್ತವೆ. ಚಳಿಗಾಲದಲ್ಲಿ ಬಿರುಗಾಳಿ ಬೀಸುವಾಗ ಮತ್ತು ಹರಿಕೇನ್‌ಗಳು ಇಲ್ಲಿಂದ ದಾಟಿ ಹೋಗುವಾಗ ಆಗೀಗ ಗುಡುಗು ಮಳೆಯಾಗುವುದು ಸಾಮಾನ್ಯ. ಈ ಪ್ರದೇಶದ ಇತಿಹಾಸದಲ್ಲಿ ಎರಡು ಅತಿಕೆಟ್ಟ ಚಂಡಮಾರುತ ಅಪ್ಪಳಿಸಿದ್ದು ಎಂದರೆ 1998ರಲ್ಲಿ ಅಪ್ಪಳಿಸಿದ ಕಿಸ್ಸಿಮೀ, ಅದರಿಂದಾಗಿ 42 ಜನರು ಸತ್ತರು. ನಂತರ ಸಮ್ಟರ್, ಲೇಕ್ ಮತ್ತು ವೊಲುಸಿಯ ಕೌಂಟಿಗಳಿಗೆ 2007ರಲ್ಲಿ ಅಪ್ಪಳಿಸಿದ ಚಂಡಮಾರುತ, ಆಗ 21 ಜನರು ಸತ್ತರು. ಈ ಎರಡೂ ದುರ್ಘಟನೆಗಳು ಫೆಬ್ರವರಿಯಲ್ಲಿ ನಡೆದಿದ್ದವು.
ಒರ್ಲ್ಯಾಂಡೊದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °F (°C) | 87 (31) |
90 (32) |
92 (33) |
96 (36) |
100 (38) |
100 (38) |
101 (38) |
100 (38) |
98 (37) |
95 (35) |
89 (32) |
90 (32) |
101 (38) |
ಅಧಿಕ ಸರಾಸರಿ °F (°C) | 72 (22) |
74 (23) |
79 (26) |
83 (28) |
88 (31) |
91 (33) |
92 (33) |
92 (33) |
90 (32) |
85 (29) |
79 (26) |
73 (23) |
83.2 (28.4) |
ಕಡಮೆ ಸರಾಸರಿ °F (°C) | 50 (10) |
51 (11) |
56 (13) |
60 (16) |
66 (19) |
71 (22) |
73 (23) |
73 (23) |
72 (22) |
65 (18) |
59 (15) |
53 (12) |
62.4 (16.9) |
Record low °F (°C) | 19 (−7) |
26 (−3) |
25 (−4) |
38 (3) |
48 (9) |
60 (16) |
64 (18) |
64 (18) |
56 (13) |
43 (6) |
29 (−2) |
20 (−7) |
19 (−7) |
Average precipitation inches (mm) | 2.429 (61.7) |
2.35 (59.7) |
3.539 (89.9) |
2.421 (61.5) |
3.74 (95.0) |
7.35 (186.7) |
7.15 (181.6) |
6.252 (158.8) |
5.76 (146.3) |
2.728 (69.3) |
2.319 (58.9) |
2.311 (58.7) |
೪೮.೩೫ (೧,೨೨೮.೧) |
Source: The Weather Channel |
ಗಗನಚುಂಬಿಗಳು
ಬದಲಾಯಿಸಿಮೆಟ್ರೋ ಒರ್ಲ್ಯಾಂಡೊದಲ್ಲಿ ಒಟ್ಟು 71 ಪೂರ್ಣಗೊಂಡಿರುವ ಗಗನಚುಂಬಿ ಕಟ್ಟಡಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ಡೌನ್‌ಟೌನ್ ಒರ್ಲ್ಯಾಂಡೊದಲ್ಲಿ ಇವೆ ಮತ್ತು ಇನ್ನುಳಿದವು ಡೌನ್‌ಟೌನಿನ ನೈರುತ್ಯದ ಪ್ರವಾಸೀ ಜಿಲ್ಲೆಯಲ್ಲಿವೆ.[೮] ಡೌನ್‌ಟೌನ್ ಒರ್ಲ್ಯಾಂಡೊದಲ್ಲಿ ನಿರ್ಮಿಸಿರುವ ಗಗನಚುಂಬಿ ಕಟ್ಟಡಗಳ ಸಂಖ್ಯೆ 441 ft (134 m) 1988ರಿಂದ ಅಂದರೆ ಸನ್‌ಟ್ರಸ್ಟ್ ಸೆಂಟರ್ ಪೂರ್ಣಗೊಂಡಾಗಿನಿಂದ ಹೆಚ್ಚಾಗಿಲ್ಲ. ಒರ್ಲ್ಯಾಂಡೊ ಎಕ್ಸ್‌ಕ್ಯುಟಿವ್ ವಿಮಾನನಿಲ್ದಾಣವು ಡೌನ್‌ಟೌನ್ ಒರ್ಲ್ಯಾಂಡೊದಿಂದ ನಾಲ್ಕು ಮೈಲುಗಳ (6 ಕಿ.ಮೀ) ದೂರದಲ್ಲಿದೆ. ಆದರೂ ಸಂಯುಕ್ತ ವಾಯುಯಾನ ಆಡಳಿತ (ಫೆಡರಲ್ ಏವಿಯೇಶನ್ ಆಡಳಿತ)ವು ಸ್ಥಳೀಯ ವಾಸ್ತುಶಿಲ್ಪಿಗಳಿಗೆ ಈ ಕುರಿತು ಏಕೆ ನಿರ್ಬಂಧಗಳನ್ನು ಹೇರಿದೆ ಎಂಬುದಕ್ಕೆ ಯಾವುದೇ ಅಧಿಕೃತ ಕಾರಣಗಳು ಇಲ್ಲ.
ಡೌನ್‌ಟೌನ್ ಒರ್ಲ್ಯಾಂಡೊ
ಬದಲಾಯಿಸಿ- 1988ರಲ್ಲಿ ನಿರ್ಮಾಣಗೊಂಡ ಸನ್‌ಟ್ರಸ್ಟ್ ಸೆಂಟರ್, 441 ft (134 m), ಸೆಂಟ್ರಲ್ ಫ್ಲೋರಿಡಾದಲ್ಲಿ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡವಾಗಿದೆ.
- ಎಒಲ ಸರೋವರದಲ್ಲಿರುವ ವಿಯುಇ (VUE )2008ರಲ್ಲಿ ನಿರ್ಮಾಣಗೊಂಡಿದ್ದು, ಎತ್ತರವಿದೆ. 426 ft (130 m) 35 ಮಹಡಿಗಳಿರುವ ಇದು ಸನ್‌ಟ್ರಸ್ಟ್ ಸೆಂಟರ್‌ಗಿಂತ ಹೆಚ್ಚು ಮಹಡಿಗಳನ್ನು ಹೊಂದಿದೆ.[೯][೧೦]
- ಆರೇಂಜ್ ಕೌಂಟಿ ಕೋರ್ಟ್‌ಹೌಸ್, 1997, 416 ft (127 m).
- ಬ್ಯಾಂಕ್ ಆಫ್ ಅಮೆರಿಕಾ ಕೇಂದ್ರ (ಮೊದಲು ಬರ್ನೆಟ್ ಪ್ಲಾಜಾ),1988, 409 ft (125 m)
- ಎಸ್‌ಪ್ಲನೇಡ್‌ನಲ್ಲಿರುವ 55 ವೆಸ್ಟ್, 2009, 377 ft (115 m)
- ಸೊಲೈರೆ ಅಟ್ ದಿ ಪ್ಲಾಜಾ, 2006, 359 ft (109 m)
- ಡೈನ್‌ಟೆಕ್ ಸೆಂಟರ್, 2009, 357 ft (109 m)
- ಸಿಟ್ರಸ್ ಸೆಂಟರ್, 1971, 258 ft (79 m) ಇದು ಒರ್ಲ್ಯಾಂಡೊದಲ್ಲಿ ನಿರ್ಮಾಣಗೊಂಡ ಮೊದಲ ಗಗನಚುಂಬಿ ಕಟ್ಟಡ.
- ಪ್ರೀಮಿಯರ್ ಟ್ರೇಡ್ ಪ್ಲಾಜಾ ಒರ್ಲ್ಯಾಂಡೊ, 2006, 256 ft (78 m)
- ಸಿಎನ್‌ಎಲ್(CNL) ಸೆಂಟರ್ ಸಿಟಿ ಕಾಮನ್ಸ್, 1999, 250 ft (76 m)
ಡೌನ್‌ಟೌನ್ ಒರ್ಲ್ಯಾಂಡೊದಿಂದ ಹೊರಗೆ
ಬದಲಾಯಿಸಿ- ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ATC ಗೋಪುರ, 2002, 346 ft (105 m)
- ಸೀವರ್ಲ್ಡ್ ಸ್ಕೈಟವರ್ 400 ft (122 m), ಒರ್ಲ್ಯಾಂಡೊದ ನಗರ ಮಿತಿಗಳಲ್ಲಿ ಆರೇಂಜ್ ಕೌಂಟಿಯಲ್ಲಿರುವ ಅತ್ಯಂತ ಎತ್ತರದ ಗೋಪುರವಾಗಿದೆ.
- ಪೀಬಾಡಿ ಒರ್ಲ್ಯಾಂಡೊ ವಿಸ್ತರಣಾ ಗೋಪುರ, ಚಳಿಗಾಲ 2010, 428 ft (130 m) ಇದರ ನಿರ್ಮಾಣ ಪೂರ್ಣಗೊಂಡಾಗ ಒರ್ಲ್ಯಾಂಡೊದ ನಗರ ಮಿತಿಗಳಲ್ಲಿ ಆರೇಂಜ್ ಕೌಂಟಿಯಲ್ಲಿರುವ ಅತ್ಯಂತ ಎತ್ತರದ ಗೋಪುರವಾಗುತ್ತದೆ.
ಜನಸಂಖ್ಯಾಶಾಸ್ತ್ರ
ಬದಲಾಯಿಸಿHistorical population | |||
---|---|---|---|
Census | Pop. | %± | |
1890 | ೨,೮೫೬ | — | |
1900 | ೨,೪೮೧ | −೧೩.೧% | |
1910 | ೩,೮೯೪ | ೫೭�೦% | |
1920 | ೯,೨೮೨ | ೧೩೮.೪% | |
1930 | ೨೭,೩೩೦ | ೧೯೪.೪% | |
1940 | ೩೬,೭೩೬ | ೩೪.೪% | |
1950 | ೫೨,೩೬೭ | ೪೨.೫% | |
1960 | ೮೮,೧೩೫ | ೬೮.೩% | |
1970 | ೯೯,೦೦೬ | ೧೨.೩% | |
1980 | ೧,೨೮,೨೫೧ | ೨೯.೫% | |
1990 | ೧,೬೪,೬೯೩ | ೨೮.೪% | |
2000 | ೧,೯೪,೧೯೪ | ೧೭.೯% | |
2010 | ೨,೪೫,೮೬೦ | ೨೬.೬% | |
Population 1890–2000.[೧೧] |
ಯು.ಎಸ್. ಸೆನ್ಸಸ್ ಬ್ಯೂರೋ ನಡೆಸಿದ 2006-2008ರ ಅಮೆರಿಕನ್ ಕಮ್ಯುನಿಟಿ ಸರ್ವೆಯ ಪ್ರಕಾರ ಒರ್ಲ್ಯಾಂಡೊದ ಜನಾಂಗೀಯ ಸಂಯೋಜನೆ ಈ ರೀತಿಯಾಗಿದೆ :
- ಹಿಸ್ಪಾನಿಕ್ರಲ್ಲದ ಬಿಳಿಯರು: 44.7%
- ಹಿಸ್ಪಾನಿಕ್ರಲ್ಲದ ಕರಿಯರು: 26.9%
- ಅಮೆರಿಕನ್ ಇಂಡಿಯನ್ನರು (ಅಮೆರಿಕದ ಮೂಲನಿವಾಸಿಗಳು ಅಥವಾ ರೆಡ್ಇಂಡಿಯನ್ನರು): 0.7%
- ಏಷಿಯನ್ನರು: 3.2%
- ಸ್ಥಳೀಯ ಹವಾಯಿಯನ್ ಹಾಗೂ ಇತರೆ ಪೆಸಿಫಿಕ್ ಸಾಗರ ದ್ವೀಪದವರು: 0.1%
- ಇತರೆ ಜನಾಂಗದವರು: 10.2%
- ಎರಡು ಅಥವಾ ಹೆಚ್ಚಿನ ಜನಾಂಗಗಳು: 2.1%
- ಹಿಸ್ಪಾನಿಕ್ ಅಥವಾ (ಯಾವುದೇ ಜನಾಂಗದ)ಲ್ಯಾಟಿನೋ : 22.2%
[೧೨] ಮೂಲ
GR22000ದಲ್ಲಿ ಮಾಡಿದ ಗಣತಿಯ ಪ್ರಕಾರ, 185,951 ಜನರಿದ್ದಾರೆ. (2008 ಅಂದಾಜು 230,514 ಜನರಿದ್ದಾರೆ ಎಂದು ಲೆಕ್ಕಹಾಕಿದ). ಜೊತೆಗೆ 80,883 ಮನೆಗಳು, ಮತ್ತು 42,382 ಕುಟುಂಬಗಳು ನಗರದಲ್ಲಿ ಇವೆ. ಜನಸಂಖ್ಯೆ ಸಾಂದ್ರತೆಯು 767.9 ಕಿ.ಮೀ.² (1,988.9/ಮೈಲು²) ಆಗಿದೆ. ಸುಮಾರು 188,486 ಮನೆ ಘಟಕಗಳು 365.4/ಕಿ.ಮೀ.² (946.4/ಮೈಲು²)ಸರಾಸರಿ ಸಾಂದ್ರತೆಯಲ್ಲಿದ್ದವು. . ನಗರದ ಜನಾಂಗೀಯ ಸಂಯೋಜನೆಯು ಹೀಗಿದೆ : 61.10% ಬಿಳಿಯರು, 26.70% ಆಫ್ರಿಕನ್ ಅಮೆರಿಕನ್, 1.43% ಏಷಿಯನ್ನರು, 0.34% ಅಮೆರಿಕದ ಮೂಲನಿವಾಸಿಗಳು , 0.08% ಪೆಸಿಫಿಕ್ ದ್ವೀಪದವರು , 5.41% ಬೇರೆ ಜನಾಂಗಗಳು, ಮತ್ತು 2.54% ಎರಡು ಅಥವಾ ಹೆಚ್ಚು ಜನಾಂಗದವರು. ಶೇ. 17.79ರಷ್ಟು ಜನಸಂಖ್ಯೆಯು ಹಿಸ್ಪ್ಯಾನಿಕ್ ಅಥವಾ ಯಾವುದೇ ಜನಾಂಗದ ಲ್ಯಾಟಿನೋ ಆಗಿತ್ತು.
ನಗರಲ್ಲಿ 80,883 ಮನೆಗಳಿವೆ, ಅದರಲ್ಲಿ ಶೇ. 24.5 ನಷ್ಟು 18ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿದವರಾಗಿದ್ದಾರೆ, ಶೇ.32.4 ಜನರು ಒಟ್ಟಿಗೆ ವಾಸಿಸುತ್ತಿರುವ ಮದುವೆಯಾದ ಜೋಡಿಗಳು, ಶೇ.15.4% ಗಂಡನಿಲ್ಲದೆ ಹೆಂಗಸು ನೋಡಿಕೊಳ್ಳುತ್ತಿರುವ ಮನೆಗಳು, ಮತ್ತು ಶೇ.43.0% ಜನರು ಕುಟುಂಬವಿಲ್ಲದೆ ಇರುವವರು. ಶೇ. 35.0 ಕುಟುಂಬಗಳಲ್ಲಿ ಒಬ್ಬರೇ ಇದ್ದರು ಹಾಗೂ ಶೇ. 8.5ರಷ್ಟು ಮನೆಗಳಲ್ಲಿ 65 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರು ಒಂಟಿಯಾಗಿಯೇ ಬದುಕುತ್ತಿದ್ದರು. ಒಂದು ಮನೆಯ ಸರಾಸರಿ ಗಾತ್ರವು 2.25ರಷ್ಟಿದ್ದರೆ, ಕುಟುಂಬದ ಸರಾಸರಿ ಗಾತ್ರವು 2.97ರಷ್ಟಿತ್ತು.
ಮಹಾನಗರದಲ್ಲಿನ ಜನಸಂಖ್ಯೆಯಲ್ಲಿ 18ರೊಳಗಿನವರು 22.0%, 18ರಿಂದ 24 ವರ್ಷದವರು 10.7%, 25ರಿಂದ 44 ವರ್ಷದವರು 37.3%, 45ರಿಂದ 64 ವರ್ಷದವರು 18.6%, ಹಾಗೂ 65 ಹಾಗೂ ಮೇಲ್ಪಟ್ಟ ವಯಸ್ಸಿನವರು 11.3% ಜನರಿದ್ದಾರೆ. ಇಲ್ಲಿನ ಸರಾಸರಿ ವಯಸ್ಸು 33 ವರ್ಷವಾಗಿತ್ತು. ಪ್ರತಿ 100 ಮಂದಿ ಸ್ತ್ರೀಯರಿಗೆ ಅಲ್ಲಿ 94.0 ಪುರುಷರಿದ್ದರು. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿ 100 ಮಂದಿ ಸ್ತ್ರೀಯರಿಗೆ 91.3 ಪುರುಷರಿದ್ದರು.
ನಗರದಲ್ಲಿನ ಮನೆಮಂದಿಗೆ ಸಂಬಂಧಿಸಿದಂತೆ ಇದ್ದ ಸರಾಸರಿ ಆದಾಯವು $35,732ನಷ್ಟಿದ್ದರೆ, ಕುಟುಂಬವೊಂದಕ್ಕೆ ಸಂಬಂಧಿಸಿದ ಸರಾಸರಿ ಆದಾಯವು $40,648 ಆಗಿತ್ತು. ಗಂಡಸರ 30,866 ಡಾಲರ್ ತಲಾ ಆದಾಯಕ್ಕೆ ಪ್ರತಿಯಾಗಿ ಮಹಿಳೆಯರು 25,267 ಡಾಲರ್ ತಲಾ ಆದಾಯ ಹೊಂದಿದ್ದರು. ನಗರದ ವ್ಯಕ್ತಿಯ ತಲಾ ಆದಾಯ 21,216 ಡಾಲರ್ ಇತ್ತು. ಸುಮಾರು 13.3%ನಷ್ಟು ಕುಟುಂಬಗಳು ಮತ್ತು 15.9%ರಷ್ಟು ಜನಸಂಖ್ಯೆಯು ಬಡತನ ರೇಖೆಗಿಂತಲೂ ಕೆಳಗಿದೆ. ಇದರಲ್ಲಿ 18 ವರ್ಷ ವಯಸ್ಸಿಗಿಂತಲೂ ಕಡಿಮೆ ಇರುವ 27.0% ಮತ್ತು 65 ಅಥವಾ ಅದಕ್ಕಿಂತಲೂ ಹೆಚ್ಚಿರುವ 12.6% ಜನರು ಸೇರಿದ್ದಾರೆ.
ಒರ್ಲ್ಯಾಂಡೊ, ದೇಶದ ಎಲ್‌ಜಿಬಿಟಿ(LGBT) ಜನರ ಒಂದು ಅತ್ಯಧಿಕ ಶೇಕಡಾವಾರು ಜನಸಂಖ್ಯೆ ಹೊಂದಿದೆ. ಯುಸಿಎಲ್‌ಎ(UCLA) ನಡೆಸಿದ ಒಂದು ಅಧ್ಯಯನದ ಪ್ರಕಾರ, ಒರ್ಲ್ಯಾಂಡೊದ ಜನಸಂಖ್ಯೆ ಶೇ.7.7ರಷ್ಟು ಸಲಿಂಗಕಾಮಿಗಳು, ಲೆಸ್ಬಿಯನ್ ಅಥವಾ ದ್ವಿಲಿಂಗಿಗಳು(ಬೈಸೆಕ್ಸುವಲ್) ಆಗಿದ್ದಾರೆ. ಅಲ್ಲದೇ ಇಡೀ ಮಹಾನಗರಪಾಲಿಕೆಯ ಶೇ. 5.7ರಷ್ಟು ಜನರು ಎಲ್‌ಜಿಬಿಟಿ ಜನರಾಗಿದ್ದು, ಈ ವಿಚಾರದಲ್ಲಿ ಇದು ದೇಶದ 9ನೇ ಶ್ರೇಣಿಯಲ್ಲಿದೆ.[೧೩]
ಫ್ಲೋರಿಡಾದಲ್ಲಿ ಪ್ಯುರ್ಟೊ ರಿಕನ್ಸ್ದವರ ಜನಸಂಖ್ಯೆ ಅತ್ಯಂತ ಅಧಿಕವಿರುವುದು ಒರ್ಲ್ಯಾಂಡೊ. ಹೀಗಾಗಿ ಸೆಂಟ್ರಲ್ ಫ್ಲೋರಿಡಾ ಮೇಲೆ ಅವರ ಸಾಂಸ್ಕೃತಿಕ ಪ್ರಭಾವವು ದಕ್ಷಿಣ ಫ್ಲೋರಿಡಾದಲ್ಲಿ ಅಧಿಕವಿರುವ ಕ್ಯೂಬಾದ ಜನರು ಬೀರುವ ಪ್ರಭಾವಕ್ಕೆ ಸಮನಾಗಿದೆ.[೧೪] ದೇಶದಲ್ಲಿ ತ್ವರಿತಗತಿಯಲ್ಲಿ ಬೆಳವಿಗೆಯಾಗುತ್ತಿರುವ ಪ್ಯುರ್ಟೊ ರಿಕನ್ಸ್ ಸಮುದಾಯಕ್ಕೆ ಒರ್ಲ್ಯಾಂಡೊ ನೆಲೆಯಾಗಿದೆ. ಒರ್ಲ್ಯಾಂಡೊವು ಅಧಿಕ ಮತ್ತು ತ್ವರಿತಗತಿಯಲ್ಲಿ ಬೆಳೆಯುತ್ತಿರುವ ವೆಸ್ಟ್ ಇಂಡಿಯನ್‌ರು ಮತ್ತು ಜಮೈಕಾದವರ ಜನಸಂಖ್ಯೆಯನ್ನು ಹೊಂದಿದೆ.
ಅಪರಾಧಗಳು
ಬದಲಾಯಿಸಿಒರ್ಲ್ಯಾಂಡೊ ಅಧಿಕಾರಿಗಳು ಸೆಕ್ಯುರಿಟಿ ಕೆಮರಾಗಳನ್ನು ಅಳವಡಿಸುವ ಮೂಲಕ ಅಪರಾಧಗಳನ್ನು ಉದ್ದೇಶಿಸಲು ಯತ್ನಿಸುತ್ತಿದ್ದಾರೆ. ಟ್ರಾಫಿಕ್ ಲೈಟ್‌ಗಳಲ್ಲಿಯೇ ಕೆಮರಾಗಳನ್ನು ಅಳವಡಿಸಿದ್ದು, ಸಾಮಾನ್ಯ ಚಟುವಟಿಕೆಗಳಿಗಿಂತ ಹೊರತಾದ ಚಟುವಟಿಕೆಗಳನ್ನು ಅದು ಪತ್ತೆ ಹಚ್ಚುತ್ತದೆ. ಇಂತಹ ಅಸ್ವಾಭಾವಿಕ ಚಟುವಟಿಕೆಗಳನ್ನು ಕೆಮರಾ ಪತ್ತೆ ಹಚ್ಚಿದ ನಂತರ, ಅದು ಸಂಬಂಧಿಸಿದ ಕುತೂಹಲಕರ ವ್ಯಕ್ತಿಯನ್ನು ಜೂಮ್ ಮಾಡಿ, ಗುರುತಿಸಲು ಪ್ರಯತ್ನಿಸುತ್ತದೆ, ಅಲ್ಲದೆ ವಾಹನದ ಲೈಸೆನ್ಸ್ ಪ್ಲೇಟ್‌ಅನ್ನು ಕೂಡ ಜೂಮ್ ಮಾಡಿ ನೋಡುವುದು.[ಸೂಕ್ತ ಉಲ್ಲೇಖನ ಬೇಕು]
ಭಾಷೆಗಳು
ಬದಲಾಯಿಸಿ2000ರ ಪ್ರಕಾರ, ಶೇ. 75.43ರಷ್ಟು ನಿವಾಸಿಗಳು ಇಂಗ್ಲಿಶ್ ಅನ್ನು ತಮ್ಮ ಪ್ರಥಮ ಭಾಷೆಯಾಗಿ ಮಾತನಾಡುತ್ತಾರೆ. ಶೇ. 16.60ರಷ್ಟು ಜನರು ಸ್ಪ್ಯಾನಿಶ್ ಮಾತನಾಡುತ್ತಾರೆ. ಶೇ. 1.93ರಷ್ಟು ಜನರು ಹೈಟಿಯನ್ ಕ್ರೆಯೊಲ್ ಮಾತನಾಡುತ್ತಾರೆ. 1.33ರಷ್ಟು ಜನರು ಫ್ರೆಂಚ್ಮಾತನಾಡುತ್ತಾರೆ ಮತ್ತು 0.99ರಷ್ಟು ಜನರು ಪೋರ್ಚುಗೀಸ್ ಮಾತನಾಡುತ್ತಾರೆ. ಇವರೆಲ್ಲ ಆಯಾ ಭಾಷೆಗಳನ್ನು ಅನುಕ್ರಮವಾಗಿ ತಮ್ಮ ಮಾತೃ ಭಾಷೆಯಾಗಿ ಹೊಂದಿದ್ದಾರೆ.[೧೫]
ಅಮೆರಿಕನ್ ಕಮ್ಯುನಿಟಿ ಸಮೀಕ್ಷೆ ಪ್ರಕಾರ, ಐದಕ್ಕಿಂತ ಹೆಚ್ಚಿನ ವಯಸ್ಸಿನ ಶೇ. 69.3ರಷ್ಟು ಒರ್ಲ್ಯಾಂಡೊದ ನಿವಾಸಿಗಳು ಮನೆಯಲ್ಲಿ ಕೇವಲ ಇಂಗ್ಲಿಶ್ ಮಾತನಾಡುತ್ತಾರೆ. ಒರ್ಲ್ಯಾಂಡೊದ ಜನಸಂಖ್ಯೆಯ ಶೇ. 19.2ರಷ್ಟು ಸ್ಪ್ಯಾನಿಶ್ ಮಾತನಾಡುವವರು. ಬೇರೆ ಇಂಡೋ-ಅಮೆರಿಕನ್ ಭಾಷೆಗಳನ್ನು ಮಾತನಾಡುವವರು ನಗರದ ಜನಸಂಖ್ಯೆಯ ಶೇ. 9.0 ಇದ್ದಾರೆ. ಯಾವುದಾದರೊಂದು ಏಷಿಯನ್ ಭಾಷೆ ಮಾತನಾಡುವವರು ಜನಸಂಖ್ಯೆಯ ಶೇ. 1.9ರಷ್ಟಿದ್ದಾರೆ. ಬೇರೆ ಭಾಷೆಗಳನ್ನಾಡುವವರು ಇನ್ನುಳಿದ ಜನಸಂಖ್ಯೆಯ ಶೇ.0.6ರಷ್ಟಿದ್ದಾರೆ.[೧೬]
ಮಹಾನಗರಪಾಲಿಕೆ ಸಂಖ್ಯಾಶಾಸ್ತ್ರೀಯ ಪ್ರದೇಶ (ಸ್ಟಾಟಸ್ಟಿಕಲ್ ಏರಿಯಾ)
ಬದಲಾಯಿಸಿಒರ್ಲ್ಯಾಂಡೊ ಒರ್ಲ್ಯಾಂಡೊ-ಕಸಸಿಮೀ, ಫ್ಲೋರಿಡಾ, ಮಹಾನಗರಪಾಲಿಕೆ ಸಂಖ್ಯಾಶಾಸ್ತ್ರೀಯ ಪ್ರದೇಶ ( ಸ್ಟಾಟಸ್ಟಿಕಲ್ ಏರಿಯಾ) ದ ಹಬ್ ಸಿಟಿ ಆಗಿದ್ದು, ಇದನ್ನು ಆಡುಮಾತಿನಲ್ಲಿ, "ಅತಿಕೆಟ್ಟ ಒರ್ಲ್ಯಾಂಡೊ" ಅಥವಾ "ಮೆಟ್ರೋ ಒರ್ಲ್ಯಾಂಡೊ" ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಾಲ್ಕು ಕೌಂಟಿಗಳನ್ನು ಹೊಂದಿದೆ(ಆರೇಂಜ್ , ಒಸ್ಕೆಯೊಲ, ಸೆಮಿನೋಲ್ ಮತ್ತು ಲೇಕ್ ). ಪ್ರಸ್ತುತ ಇದು ಸಂಯುಕ್ತ ಸಂಸ್ಥಾನದಲ್ಲಿ 27ನೇ ಅತಿದೊಡ್ಡ ಮೆಟ್ರೋ ಪ್ರದೇಶ ವಾಗಿದ್ದು, 2007ರ ಗಣತಿ-ಅಂದಾಜಿನಂತೆ 2,032,496 ಜನಸಂಖ್ಯೆ ಇದೆ.[೧೭]
2000ರಲ್ಲಿ, ಒರ್ಲ್ಯಾಂಡೊದ ನಗರ ಪ್ರದೇಶದ ಜನಸಂಖ್ಯೆಯು 1,157,431 ಆಗಿತ್ತು. ಇದು ಫ್ಲೋರಿಡಾದ 3ನೇ ಅತಿದೊಡ್ಡ ಹಾಗೂ ಸಂಯುಕ್ತ ಸಂಸ್ಥಾನ ದಲ್ಲಿ 35ನೇ ಅತಿದೊಡ್ಡ ನಗರಪ್ರದೇಶವಾಗಿತ್ತು. 2002ರಲ್ಲಿ, ಒರ್ಲ್ಯಾಂಡೊದ ಅಂದಾಜು ನಗರ ಪ್ರದೇಶದ ಜನಸಂಖ್ಯೆ 1,377,342 ಆಗಿತ್ತು.
2000ದಲ್ಲಿ ಒಟ್ಟುಗೂಡಿದ ಸಂಖ್ಯಾಶಾಸ್ತ್ರೀಯ ಪ್ರದೇಶಗಳನ್ನು ರಚಿಸಿದಾಗ, ಒರ್ಲ್ಯಾಂಡೊ ಮೊದಲು ಫ್ಲೋರಿಡಾದ ಗ್ರಾಮಗಳು ಮತ್ತು ಮೈಕ್ರೋಪಾಲಿಟನ್ ಸಂಖ್ಯಾಶಾಸ್ತ್ರೀಯ ಪ್ರದೇಶದೊಂದಿಗೆ ಸೇರಿ, ಒರ್ಲ್ಯಾಂಡೊ-ಗ್ರಾಮಗಳು, ಫ್ಲೋರಿಡಾ, ಒಟ್ಟುಗೂಡಿದ ಸಂಖ್ಯಾಶಾಸ್ತ್ರೀಯ ಪ್ರದೇಶವಾಗಿ ರೂಪುಗೊಂಡಿತು. 2006ರಲ್ಲಿ,ಡೆಲ್ಟೋನ (ವೊಲುಸಿಯ ಕೌಂಟಿ ) ಪಾಮ್ ಕೋಸ್ಟ್ (ಫ್ಲಾಗ್ಲರ್ ಕೌಂಟಿ )ಗಳ ಮಹಾನಗರಪಾಲಿಕೆ ಪ್ರದೇಶಗಳನ್ನು ಸೇರಿಸಿ, ಒರ್ಲ್ಯಾಂಡೊ-ಡೆಲ್ಟೋನ - ಡೆಲ್ಟೋನ ಬೀಚ್, ಫ್ಲೋರಿಡಾ, ಒಟ್ಟುಗೂಡಿದ ಸಂಖ್ಯಾಶಾಸ್ತ್ರೀಯ ಪ್ರದೇಶ ವನ್ನು ರಚಿಸಲಾಯಿತು.[೧೮] ಈ ಹೊಸ ದೊಡ್ಡ ಸಿಎಸ್‌ಎ(CSA)ಯು ಒಟ್ಟು (2007ರ ಪ್ರಕಾರ) 2,693,552 ಜನಸಂಖ್ಯೆ ಹೊಂದಿತ್ತು[೧೯]. ಜೊತೆಗೆ ದೇಶದಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ೨೫ ಕೌಂಟಿಗಳಲ್ಲಿ 3 ಕೌಂಟಿಗಳನ್ನು ಹೊಂದಿತ್ತು; ಅವೆಂದರೆ ಫ್ಲಾಗ್ಲರ್ 1ನೇ ಶ್ರೇಣಿ(rank); ಒಸ್ಕೆಯೊಲ, 17ನೇಯದು; ಮತ್ತು ಲೇಕ್ 23ನೇಯದು.[೨೦]
ಆರ್ಥಿಕತೆ
ಬದಲಾಯಿಸಿಉದ್ಯಮ
ಬದಲಾಯಿಸಿಒರ್ಲ್ಯಾಂಡೊ ಒಂದು ಪ್ರಮುಖ ಕೈಗಾರಿಕೋದ್ಯಮಗಳು ಮತ್ತು ಹೈ-ಟೆಕ್ ಕೇಂದ್ರವಾಗಿದೆ. ಮೆಟ್ರೋ ಪ್ರದೇಶವು ಸುಮಾರು 13.4 ಬಿಲಿಯನ್ ಡಾಲರ್ ಮೌಲ್ಯದ ತಂತ್ರಜ್ಞಾನ ಉದ್ಯಮವನ್ನು ಹೊಂದಿದ್ದು, ಸುಮಾರು 53,000 ಜನರು ಉದ್ಯೋಗಿಗಳಾಗಿದ್ದಾರೆ. ಅಲ್ಲದೆ ಇದು ರಾಷ್ಟ್ರೀಯ ಮಟ್ಟದಲ್ಲಿಯೂ ಡಿಜಿಟಲ್ ಮೀಡಿಯಾ, ಕೃಷಿ ತಂತ್ರಜ್ಞಾನ, ವೈಮಾನಿಕ ಸೇವೆ, ಏರೋಸ್ಪೇಸ್ ಮತ್ತು ಸಾಫ್ಟ್‌ವೇರ್ ಡಿಸೈನ್‌ಗಳಲ್ಲಿ ವಿನೂತನ ಆವಿಷ್ಕಾರದ ಕ್ಲಸ್ಟರ್ ಆಗಿ ಗುರುತಿಸಲಾಗಿದೆ. ಸುಮಾರು 20 ದೇಶಗಳನ್ನು ಪ್ರತಿನಿಧಿಸುವ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳು, ಮೆಟ್ರೋ ಒರ್ಲ್ಯಾಂಡೊದಲ್ಲಿ ಸಂಸ್ಥೆಗಳನ್ನು ಹೊಂದಿವೆ.
ಒರ್ಲ್ಯಾಂಡೊ ನಗರವು ದೇಶದಲ್ಲಿ 7ನೇ ಅತಿದೊಡ್ಡ ಸಂಶೋಧನಾ ಪಾರ್ಕ್ ಅನ್ನು ಹೊಂದೆ. ಸೆಂಟ್ರಲ್ ಫ್ಲೋರಿಡಾ ಸಂಶೋಧನಾ ಪಾರ್ಕ್ 1,025 ಎಕರೆಗಳಿಗೂ (4.15 km2) ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದೆ. 1,025 acres (4.15 km2) ಸುಮಾರು 120 ಕಂಪನಿಗಳು ಇಲ್ಲಿವೆ ಮತ್ತು ಈ ಕಂಪನಿಗಳಲ್ಲಿ 8,500 ಜನ ಉದ್ಯೋಗಿಗಳಿದ್ದಾರೆ. ಜೊತೆಗೆ ದೇಶದ ಮಿಲಿಟರಿ ಸಿಮುಲೇಶನ್ ಹಾಗೂ ತರಬೇತಿ ಕಾರ್ಯಕ್ರಮಗಳ ನೆಲೆಯಾಗಿದೆ. ಮೆಟ್ರೋ ಒರ್ಲ್ಯಾಂಡೊವು ಯು.ಎಸ್. ಸೈನ್ಯ, ನೌಕಾದಳ, ವಾಯುಪಡೆ ಮತ್ತು ಮರೀನ್ಸ್ ಮತ್ತು ಕರಾವಳಿ ರಕ್ಷಣಾಪಡೆಗಳ ಸಿಮುಲೇಶನ್ ಸಂಗ್ರಹಣೆ ತುಕಡಿಗಳ (ಪ್ರೊಕರ್‌ಮೆಂಟ್ ಕಮಾಂಡ್) ನೆಲೆಯಾಗಿದೆ.
ಲಾಕ್‌ಹೀಡ್ ಮಾರ್ಟಿನ್ ಕ್ಷಿಪಣಿ ವ್ಯವಸ್ಥೆಗಳು, ಏರೋನಾಟಿಕಲ್ ಕ್ರಾಫ್ಟ್ಸ್ ಮತ್ತು ಅದಕ್ಕೆ ಸಂಬಂಧಿತ ಹೈಟೆಕ್ ಸಂಸೋಧನೆಯ ಹಲವಾರು ದೊಡ್ಡ ತಯಾರಿಕಾ ಘಕಟಗಳನ್ನು ಹೊಂದಿದೆ. ಮೆಟ್ರೋ ಒರ್ಲ್ಯಾಂಡೊದಲ್ಲಿ ಕಚೇರಿ ಅಥವಾ ಪ್ರಯೋಗಾಲಯಗಳನ್ನು ಹೊಂದಿರುವ ಬೇರೆ ಗಮನಾರ್ಹ ಎಂಜಿನಿಯರಿಂಗ್ ಸಂಸ್ಥೆಗಳು ಎಂದರೆ : ಕೆಡಿಎಫ್, ಜನರಲ್ ಡೈನಮಿಕ್ಸ್ , ಹ್ಯಾರಿಸ್ , ಮಿತ್ಸುಬಿಶಿ ಪವರ್ ಸಿಸ್ಟಮ್ಸ್, ಸಿಮೆನ್ಸ್ , ವೆರಿಟಸ್ /ಸೀಗೇಟ್ , ಮಲ್ಟಿಪಲ್ ಯುಎಸ್‌ಎಎಫ್ (USAF) ಸಂಸ್ಥೆಗಳು, , ನೇವಲ್ ಏರ್ ವಾರ್‌ಫೇರ್ ಸೆಂಟರ್ ತರಬೇತಿ ವ್ಯವಸ್ಥೆಗಳು (ಎನ್‌ಎಡಬ್ಲ್ಯುಸಿಟಿಎಸ್‌ಡಿ(NAWCTSD)), ಡೆಲ್ಟಾ ಕನೆಕ್ಷನ್ ಅಕಾಡೆಮಿ, ಎಂಬ್ರಿ-ರಡಲ್ ಏರೋನಾಟಿಕಲ್ ಯುನಿವರ್ಸಿಟಿ , ಜಿಇ(GE), ಏರ್ ಫೋರ್ಸ್ ಏಜೆನ್ಸಿ ಫಾರ್ ಮಾಡೆಲಿಂಗ್ ಆಂಡ್ ಸಿಮುಲೇಶನ್ (ಎಎಫ್‌ಎಎಂಎಸ್ (AFAMS)), ಯು.ಎಸ್. ಆರ್ಮಿ ಪ್ರೋಗ್ರಾಮ್ ಎಕ್ಸ್‌ಕ್ಯೂಟಿವ್ ಆಫೀಸ್ ಫಾರ್ ಸಿಮುಲೇಶನ್, ತರಬೇತಿ ಮತ್ತು ಇನ್‌ಸ್ಟ್ರುಮೆಂಟೇಶನ್ (PEO STRI), ಸಂಯುಕ್ತ ಸಂಸ್ಥಾನದ ಸೇನಾ ಸಂಶೋಧನೆ, ಅಭಿವೃದ್ಧಿ ಮತ್ತು ಇಂಜಿನಿಯರಿಂಗ್ ದಳ ಸಂಯುಕ್ತ ಸಂಸ್ಥಾನ ಸೇನಾ ಸಿಮುಲೇಶನ್ ಮತ್ತು ತರಬೇತಿ ತಂತ್ರಜ್ಞಾನ ಸೆಂಟರ್ (STTC), ಎಟಿ & ಟಿ (AT&T), ಬೋಯಿಂಗ್, ಸಿಎಇ ಸಿಸ್ಟಮ್ಸ್ & ಸಿಮುಲೇಶನ್ ತರಬೇತಿ, ಹ್ಯುಲೆಟ್-ಪಕರ್ಡ್, ಸಿಮುಲೇಶನ್ ಮತ್ತು ತರಬೇತಿ ಸಂಸ್ಥೆ, ಸಿಮುಲೇಶನ್ ರಾಷ್ಟ್ರೀಯ ಕೇಂದ್ರ , ನಾರ್ತ್‌ರಾಪ್ ಗ್ರುಮನ್ , ಮತ್ತು ರೇತಿಯನ್ ಸಿಸ್ಟಮ್ಸ್. ನೌಕಾ ತರಬೇತಿ ಕೇಂದ್ರವು ಕೆಲವರ್ಷಗಳ ಹಿಂದಿನವರೆಗೂ ಯುಎಸ್ ನೌಕಾದಳಕ್ಕೆ ಅಣು ಇಂಜಿನಿಯರ್‌ಗಳು ತರಬೇತಿ ಹೊಂದುತ್ತಿದ್ದ ಎರಡು ಕೇಂದ್ರಗಳಲ್ಲಿ ಒಂದಾಗಿತ್ತು. ಈಗ ಆ ಜಾಗವನ್ನು ಬಾಲ್ಡ್‌ವಿನ್ ಪಾಕ್ ಡೆವಲಪ್‌ಮೆಂಟ್ ಆಗಿ ಪರಿವರ್ತಿಸಲಾಗಿದೆ. ಒರ್ಲ್ಯಾಂಡೊ ಪ್ಯಾಟ್ರಿಕ್ ಏರ್ ಫೋರ್ಸ್ ಬೇಸ್ , ಕೇಫ್ ಕನವೆರಲ್ ಏರ್‌ಫೋರ್ಸ್ ಸ್ಟೇಶನ್ , ಮತ್ತು ಕೆನಡಿ ಸ್ಪೇಸ್ ಸೆಂಟರ್ ಗೆ ಸಾಕಷ್ಟು ಹತ್ತಿರವಿದೆ. ಹೀಗಾಗಿ ಈ ನಗರದ ಉಪನಗರದಿಂದ ಪ್ರತಿದಿನ ನಿವಾಸಿಗಳು ಅಲ್ಲಿಗೆ ಕೆಲಸಕ್ಕೆ ಪ್ರಯಾಣಿಸುತ್ತಾರೆ. ಇಲ್ಲಿಂದ ವಿಹಾರಯಾನದ ಹಡಗುಗಳ ಟರ್ಮಿನಲ್ ಆಗಿರುವ ಪೋರ್ಟ್ ಕನವೆರಲ್ ಗೆ ಸುಲಭವಾಗಿ ಹೋಗಬಹುದಾಗಿದೆ.
ರೆಡ್ ಲೋಬ್ಸ್ಟರ್ ಮತ್ತು ಆಲಿವ್ ಗಾರ್ಡನ್ ನ ಮೂಲ ಕಂಪನಿಯಾದ ಡಾರ್ಡೆನ್ ರೆಸ್ಟುರಾಂಟ್ಸ್‌ನ ಮೂಲನೆಲೆ ಒರ್ಲ್ಯಾಂಡೊ. ಇದು ವಿಶ್ವದಲ್ಲಿ ಆದಾಯದ ದೃಷ್ಟಿಯಿಂದ ಅತಿದೊಡ್ಡ ರೆಸ್ಟುರಾಂಟ್ ಕಂಪನಿಯಾಗಿದೆ. 2009ರ ಸೆಪ್ಟೆಂಬರ್‌ನಲ್ಲಿ ಅದು ಹೊಸ ಕೇಂದ್ರಕಾರ್ಯಾಲಯಕ್ಕೆ ಮತ್ತು ಕೇಂದ್ರೀಯ ವಿತರಣಾ ವ್ಯವಸ್ಥೆಗೆ ಸ್ಥಳಾಂತರಗೊಂಡಿತು.[೨೧]
ಚಲನಚಿತ್ರ, ದೂರದರ್ಶನ ಮತ್ತು ಮನೋರಂಜನೆ
ಬದಲಾಯಿಸಿಮತ್ತೊಂದು ಪ್ರಮುಖ ವಲಯ ಎಂದರೆ ಚಲನಚಿತ್ರ, ದೂರದರ್ಶನ ಮತ್ತು ಎಲೆಕ್ಟ್ರಾನಿಕ್ ಗೇಮಿಂಗ್ ಉದ್ಯಮಗಳು. ಇದಕ್ಕೆ ಸಹಾಯವಾಗುವಂತೆ ಯುನಿವರ್ಸಲ್ ಸ್ಡುಡಿಯೋಸ್ , ಡಿಸ್ನಿ'ಸ್ ಹಾಲಿವುಡ್ ಸ್ಟುಡಿಯೋಸ್ , ಫುಲ್ ಸೈಲ್ ಯುನಿವರ್ಸಿಟಿ , ಫ್ಲೋರಿಡಾ ಇಂಟರ್ಯಾಆಕ್ಟೀವ್ ಎಂಟರ್‌ಟೈನ್‌ಮೆಂಟ್ ಅಕಾಡೆಮಿ , ಮತ್ತು ಇನ್ನಿತರ ಮನೋರಂಜನಾ ಕಂಪನಿಗಳು ಮತ್ತು ಸ್ಕೂಲ್‌ಗಳು ಇವೆ. ದೊಡ್ಡ ದೊಡ್ಡ ಕಾರ್ಪೊರೇಶನ್‌ಗಳ ಹಲವಾರು ಕಚೇರಿ ಸಂಕೀರ್ಣಗಳು ಒರ್ಲ್ಯಾಂಡೊದ ಉತ್ತರದಲ್ಲಿರುವ ಇಂಟರ್‌ಸ್ಟೇಟ್ 4 ಕಾರಿಡಾರ್‌ನ ಉದ್ದಕ್ಕೂ ತುಂಬಿವೆ. ವಿಶೇಷವಾಗಿ ಮೈಟ್‌ಲ್ಯಾಂಡ್ , ಲೇಕ್ ಮೇರಿ ಮತ್ತು ಹೀಥ್ರೋ ದಲ್ಲಿ ಬಹಳ ಇವೆ. ಯು.ಎಸ್. ಮಾಡೆಲಿಂಗ್, ಸಿಮುಲೇಶನ್ ಮತ್ತು ಟ್ರೈನಿಂಗ್ (ಎಂಎಸ್&ಟಿ) ಉದ್ಯಮವು ಒರ್ಲ್ಯಾಂಡೊ ಪ್ರದೇಶದ ಸುತ್ತಮುತ್ತ ಇವೆ. ಅದರಲ್ಲಿಯೂ ಮುಖ್ಯವಾಗಿ ಸೆಂಟ್ರಲ್ ಫ್ಲೋರಿಡಾ ಯುನಿವರ್ಸಿಟಿ(UCF)ಯ ಪಕ್ಕದಲ್ಲಿರುವ ಸೆಂಟ್ರಲ್ ಫ್ಲೋರಿಡಾ ರಿಸರ್ಚ್ ಪಾರ್ಕ್ ನಲ್ಲಿ ಬಹಳವಿದೆ. ಹತ್ತಿರದಲ್ಲಿಯೇ ಇರುವ ಮೈಟ್‌ಲ್ಯಾಂಡ್‌ನಲ್ಲಿ ಎಲೆಕ್ಟ್ರಾನಿಕ್ ಆರ್ಟ್ಸ್ ಕಂಪನಿಯ ವಿಡಿಯೋ ಗೇಮ್ ವಿಭಾಗದ ಟಿಬ್ಯುರಾನ್ ಕಂಪನಿಯಿದೆ. ಮೊದಲು ಟಿಬ್ಯುರಾನ್ ಎಂಟರ್‌ಟೈನ್‌ಮೆಂಟ್ ಎಂದು ಇದ್ದಿದ್ದು, ನಂತರ 1998ರಲ್ಲಿ ಹಲವಾರು ವರ್ಷಗಳಿಂದ ಪಾಲುದಾರ ಕಂಪನಿಯಾಗಿದ್ದ ಇಎ(EA) ಇದನ್ನು ಸ್ವಾದೀನಪಡಿಸಿಕೊಂಡಿತು. ಮುಖ್ಯವಾಗಿ ಮ್ಯಾಡನ್ ಸೀರೀಸ್ ಮತ್ತು ಎನ್‌ಸಿಎಎ (NCAA)ಫುಟ್‌ಬಾಲ್ ಸೀರೀಸ್ ವಿಡಿಯೋಗೇಮ್ಸ್‌ಗಳಲ್ಲಿ ಪಾಲುದಾರಿಕೆ ಇದ್ದಿತು.
ಆರೋಗ್ಯರಕ್ಷಣೆ
ಬದಲಾಯಿಸಿಒರ್ಲ್ಯಾಂಡೊ ಎರಡು ಲಾಭ-ರಹಿತ ಆಸ್ಪತ್ರೆ ವ್ಯವಸ್ಥೆಯನ್ನು ಹೊಂದಿದೆ : ಒರ್ಲ್ಯಾಂಡೊ ಹೆಲ್ತ್ ಮತ್ತು ಫ್ಲೋರಿಡಾ ಆಸ್ಪತ್ರೆ. ಒರ್ಲ್ಯಾಂಡೊ ಹೆಲ್ತ್‌ನ ಒರ್ಲ್ಯಾಂಡೊ ರೀಜನಲ್ ಮೆಡಿಕಲ್ ಸೆಂಟರ್ ಸೆಂಟ್ರಲ್ ಫ್ಲೋರಿಡಾದ ಏಕೈಕ ಹಂತ I ಟ್ರೌಮಾ ಸೆಂಟರ್ ಆಗಿದೆ. ಇಲ್ಲಿರುವ ವಿನ್ನಿ ಪಾಮರ್ ಹಾಸ್ಪಿಟಲ್ ಫಾರ್ ವುಮನ್ ಆಂಡ್ ಬೇಬೀಸ್ ಮತ್ತು ಫ್ಲೋರಿಡಾ ಹಾಸ್ಪಿಟಲ್ ಒರ್ಲ್ಯಾಂಡೊಗಳು ಈ ಪ್ರದೇಶದ ಏಕೈಕ ಹಂತ III ನವಜಾತ ಶಿಶು ಆರೈಕೆ ಘಟಕ ಗಳನ್ನು ಹೊಂದಿದೆ. ಫ್ಲೋರಿಡಾ ಆಸ್ಪತ್ರೆಯ ಮುಖ್ಯ ಕ್ಯಾಂಪಸ್ ದೇಶದಲ್ಲಿಯೇ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದೆಂದು ಶ್ರೇಣಿ ಪಡೆದಿದೆ. ಜೊತೆಗೆ ಹೆಸರಾಂತ ಸ್ಟ್ರೋಕ್/ಆಘಾತ (ಮಿದುಳು ಆಘಾತ) ಸೌಲಭ್ಯವನ್ನೂ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ಸೆಂಟ್ರಲ್ ಫ್ಲೋರಿಡಾ ಯುನಿವರ್ಸಿಟಿಯ ಕಾಲೇಜ್ ಆಫ್ ಮೆಡಿಸಿನ್ ಮತ್ತು ಒಂದು ಹೊಸ VA ಆಸ್ಪತ್ರೆ ಪೂರ್ಣಗೊಂಡ ನಂತರ ವೈದ್ಯಕೀಯ ರಂಗದಲ್ಲಿ ಒರ್ಲ್ಯಾಂಡೊ ಮತ್ತಷ್ಟು ಮುಂಚೂಣಿಗೆ ಸಾಗಲಿದೆ. ಈ ಎರಡೂ ಆಸ್ಪತ್ರೆಗಳು ನಗರದ ನೋನಾ ಸರೋವರ ಪ್ರದೇಶ ಮೆಡಿಕಲ್ ಡಿಸ್ಟ್ರಿಕ್ಟ್‌ನಲ್ಲಿ ಇವೆ.[೨೨]
ನಿರುದ್ಯೋಗ
ಬದಲಾಯಿಸಿಚಾರಿತ್ರಿಕವಾಗಿ, ಗ್ರೇಟರ್ ಒರ್ಲ್ಯಾಂಡೊದಲ್ಲಿ ನಿರುದ್ಯೋಗ ದರ ಕಡಿಮೆ ಇತ್ತು. ಇದರಿಂದಾಗಿ ಆ ಪ್ರದೇಶದ ಸುತ್ತಲಿನಲ್ಲಿ ನಗರದ ಯದ್ವಾತದ್ವ ಬೆಳವಣಿಗೆಗೆ ಕಾರಣವಾಯಿತು. ನಂತರ 2007 ಸಬ್‌ಪ್ರೈಮ್ ಮಾರ್ಟ್‌ಗೇಜ್ ಆರ್ಥಿಕ ಹಿಂಜರಿಕೆ ಯೂ ಜೊತೆಸೇರಿ, ಮನೆಗಳ ಬೆಲೆ ಅಧಿಕಗೊಂಡಿತು. ಮೆಟ್ರೋ ಒರ್ಲ್ಯಾಂಡೊದ 2010ರ ಜೂನ್‌ನಲ್ಲಿ ನಿರುದ್ಯೋಗ ದರ ಶೇ. 11.1 ಆಗಿತ್ತು. ಏಪ್ರಿಲ್ 2010ರಲ್ಲಿ ಇದು 11.4 ಆಗಿತ್ತು ಮತ್ತು 2009ರ ಅದೇ ಸಮಯದಲ್ಲಿ ಸುಮಾರು ಶೇ. 10ರಷ್ಟಿತ್ತು.[೨೩] ಗ್ರೇಟರ್ ಒರ್ಲ್ಯಾಂಡೊದಲ್ಲಿ ಮನೆ ದರಗಳು ಒಂದೇ ವರ್ಷದಲ್ಲಿ ಶೇ. 34ಕ್ಕೇರಿತು. ಆಗಸ್ಟ್ 2004 ಸರಾಸರಿ 182,000 ಡಾಲರ್ ಇದ್ದಿದ್ದು, ಆಗಸ್ಟ್ 2005ರಲ್ಲಿ 245,000 ಡಾಲರ್‌ಗೆ ಏರಿಕೆಯಾಗಿ, ನಂತರ ಫೆಬ್ರವರಿ 2007ರಲ್ಲಿ 255,000 ಡಾಲರ್‌ಗಳ ದಾಖಲೆ ಏರಿಕೆ ಕಂಡಿತು. ಪುನಾ ಏಪ್ರಿಲ್ 2008ರಲ್ಲಿ 211,000 ಡಾಲರ್‌ಗಳಿಗೆ ಇಳಿಯಿತು.[೨೪]
ಪ್ರವಾಸೋದ್ಯಮ
ಬದಲಾಯಿಸಿ- ಪ್ರವಾಸೀ ಮಾಹಿತಿಗಳಿಗಾಗಿ, ನೋಡಿWikivoyage:Orlando.
ಒರ್ಲ್ಯಾಂಡೊ ಪ್ರದೇಶದ ಆರ್ಥಿಕತೆಯ ಒಂದು ಮುಖ್ಯ ಭಾಗವೆಂದರೆ ಪ್ರವಾಸೋದ್ಯಮ. ಒರ್ಲ್ಯಾಂಡೊದಲ್ಲಿ ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್, ಯುನಿವರ್ಸಲ್ ಒರ್ಲ್ಯಾಂಡೊ ರೆಸಾರ್ಟ್, ಮತ್ತು ಸೀ ವರ್ಲ್ಡ್ ಒರ್ಲ್ಯಾಂಡೊ ಇವೆ. 2004ರಲ್ಲಿ 48 ದಶಲಕ್ಷ ಪ್ರವಾಸಿಗರು ಒರ್ಲ್ಯಾಂಡೊ ಪ್ರದೇಶಕ್ಕೆ ಬಂದಿದ್ದರು. ಕನ್ವೆನ್ಷನ್ ಉದ್ಯಮ (ಸಮ್ಮೇಳನಗಳನ್ನು ನಡೆಸುವ ಉದ್ಯಮ) ಕೂಡ ಈ ಪ್ರದೇಶದ ಆರ್ಥಿಕತೆಗೆ ನಿರ್ಣಾಯಕವಾದ ಅಂಶವಾಗಿದೆ. ಆರೇಂಜ್ ಕೌಂಟಿ ಕನ್ವೆನ್ಷನ್ ಕೇಂದ್ರವು 2004ರಲ್ಲಿ ವಿಸ್ತೃತಗೊಂಡು, ಸುಮಾರು ಎರಡು ದಶಲಕ್ಷ ಚದುರಡಿಯ (200,000 m²) ಪ್ರದರ್ಶನ ಸ್ಥಳವನ್ನು ಹೊಂದಿದೆ. ಈಗ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳಾವಕಾಶದ ಅರ್ಥದಲ್ಲಿ ಇದು ಎರಡನೇ ಅತಿದೊಡ್ಡ ಕನ್ವೆನ್ಷನ್ ಸಂಕೀರ್ಣವಾಗಿದೆ. ಇದನ್ನು ಬಿಟ್ಟರೆ ಚಿಕಾಗೋದಲ್ಲಿರುವ ಮೆಕ್‌ಕಾರ್ಮಿಕ್ ಪ್ಲೇಸ್ ದೊಡ್ಡದಿದೆ. ಸಂಯುಕ್ತ ಸಂಸ್ಥಾನದಲ್ಲಿ ಅತಿಹೆಚ್ಚು ಕನ್ವೆನ್ಷನ್‌ಗಳನ್ನು ನಡೆಸುವುದರಲ್ಲಿ ಚಿಕಾಗೋ ಮತ್ತು ಲಾಸ್ ವೇಗಾಸ್ ನೊಂದಿಗೆ ಒರ್ಲ್ಯಾಂಡೋ ನಗರವು ಸ್ಪರ್ಧಿಸುವಂತಿದೆ.[೨೫]
ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್ ಈ ಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ. ಅದು ಮ್ಯಾಜಿಕ್ ಕಿಂಗ್‌ಡಮ್, ಎಪ್ಕಾಟ್, ಡಿಸ್ನೀಸ್ ಹಾಲಿವುಡ್ ಸ್ಟುಡಿಯೋಸ್ ಹಾಲಿವುಡ್ ಸ್ಟುಡಿಯೋಸ್ , ಡಿಸ್ನೀಸ್ ಅನಿಮಲ್ ಕಿಂಗ್‌ಡಮ್, ಟೈಫೂನ್ ಲಗೂನ್ , ಬ್ಲಿಜಾರ್ಡ್ ಬೀಚ್, ಮತ್ತು ಡೌನ್‌ಟೌನ್ ಡಿಸ್ನಿ ಇತ್ಯಾದಿಗಳನ್ನು ಹೊಂದಿದ್ದು, ಬಹುಮುಖಿ ಆಸಕ್ತಿಯನ್ನು ಹುಟ್ಟಿಸುವಂತಿದೆ. ಸೀವರ್ಲ್ಡ್ ಒರ್ಲ್ಯಾಂಡೊ ಒಂದು ಅತಿದೊಡ್ಡ ಪಾರ್ಕ್ ಆಗಿದ್ದು, ಅಲ್ಲಿ ಹಲವಾರು ಪ್ರಾಣಿಗಳ ಮತ್ತು ಸಮುದ್ರ ಪ್ರಾಣಿಗಳ ಪ್ರತಿಕೃತಿ ಪ್ರದರ್ಶನವಿದೆ. ಜೊತೆಗೆ ರೋಲರ್ ಕೋಸ್ಟರ್ಸ್ ಮತ್ತು ವಾಟರ್ ಪಾರ್ಕ್ ಇನ್ನಿತರ ಮನೋರಂಜನಾ ಪಾರ್ಕ್ ಕೂಡ ಇದೆ. ಯುನಿವರ್ಸಲ್ ಒರ್ಲ್ಯಾಂಡೊ ಕೂಡ ವಾಲ್ಟ್ ಡಿಸ್ನಿ ವರ್ಲ್ಡ್ ಹಾಗೆಯೇ ಬಹುವಿಧದ ರೆಸಾರ್ಟ್ ಆಗಿದ್ದು, ಇಲ್ಲಿ ಯುನಿವರ್ಸಲ್ ಸ್ಟುಡಿಯೋಸ್ ಫ್ಲೋರಿಡಾ, ಸಿಟಿವಾಕ್, ಮತ್ತು ಐಲ್ಯಾಂಡ್ಸ್ ಆಫ್ ಅಡ್ವೆಂಚರ್ ಗಳು ಇವೆ. ವೆಟ್ ಎನ್ ವೈಲ್ಡ್ ಒಂದು ವಾಟರ್ ಪಾರ್ಕ್ ಆಗಿದ್ದು, ಇಲ್ಲಿಯ ಮತ್ತೊಂದು ಆಕರ್ಷಣೆಯಾಗಿದೆ. ಸೀವರ್ಲ್ಡ್ ಒರ್ಲ್ಯಾಂಡೊ ಕೂಡ ಒಂದಕ್ಕಿಂತ ಹೆಚ್ಚು ಪಾರ್ಕ್‌ಗಳನ್ನು ಹೊಂದಿದೆ. ಇದರೊಂದಿಗೆ ಅಕ್ವಾಟಿಕಾ ಮತ್ತು ಡಿಸ್ಕವರಿ ಕೇವ್ ಕೂಡ ಇಲ್ಲಿವೆ. ಮನೆಯ ಸಮೀಪದಲ್ಲಿಯೇ ಆನಂದಿಸಲು ಬಯಸುವ ಅನೇಕ ಸ್ಥಳೀಯರಿಗೆ ಒರ್ಲ್ಯಾಂಡೊದ ಆಕರ್ಷಣೆಗಳು ಬಹುಪ್ರಿಯವಾಗುತ್ತವೆ.
ಹೋಟೆಲ್‌ಗಳು
ಬದಲಾಯಿಸಿಒರ್ಲ್ಯಾಂಡೊ ಅನೇಕ ಹೊಟೆಲ್‌ಗಳನ್ನು ಹೊಂದಿದೆ. ದೇಶದಲ್ಲಿ (ಲಾಸ್ ವೇಗಾಸ್ , ನೆವಡಾ ನಗರಗಳ ನಂತರ) ಎರಡನೇ ಅತಿ ಹೆಚ್ಚು ಸಂಖ್ಯೆಯ ಹೋಟೆಲ್ ಕೊಠಡಿಗಳನ್ನು ಹೊಂದಿದ ನಗರವಾಗಿದೆ. ಜೊತೆಗೆ ಬಿಡುವಿಲ್ಲದೇ ವಿಚಾರಸಂಕಿರಣಗಳು ಮತ್ತು ಸಮ್ಮೇಳನಗಳಲ್ಲಿ ಮಗ್ನವಾಗಿರುವ ಅಮೆರಿಕನ್ ನಗರಗಳಲ್ಲಿ ಇದೂ ಒಂದಾಗಿದೆ. ಒರ್ಲ್ಯಾಂಡೊದಲ್ಲಿ ವಸತಿಗಳು ಚಾರಿತ್ರಿಕವಾಗಿ ಆಯವ್ಯಯ-ಪ್ರಜ್ಞೆ ಇರುವ ಕುಟುಂಬಕ್ಕೆಂದು ಇವೆ ಮತ್ತು ಕೆಲವು ಐಷಾರಾಮಿ ಹೊಟೆಲ್‌ಗಳು ವಾಲ್ಟ್ ಡಿಸ್ನಿ ವರ್ಲ್ಡ್ ಸಂಕೀರ್ಣದ ಆಚೆಗೆ ಇವೆ. 2004ರಲ್ಲಿ ಆರೇಂಜ್ ಕೌಂಟಿ ಕನ್ವೆನ್ಷನ್ ಕೇಂದ್ರದ ವಿಸ್ತರಣೆಯೊಂದಿಗೆ, ಐಷಾರಾಮಿ ಹೊಟೆಲ್‌ಗಳು ನಗರದಲ್ಲಿ ಆರಂಭಗೊಳ್ಳತೊಡಗಿದವು. ಇದು ಗ್ರಾಂಡ್ ಸರೋವರದ ಬಳಿ ಜೆಡಬ್ಲ್ಯು ಮಾರಿಯಟ್ ಒರ್ಲ್ಯಾಂಡೊ ಮತ್ತು ರಿಟ್ಜ್-ಕಾರ್ಲಟನ್ ಒರ್ಲ್ಯಾಂಡೊ ಸ್ಥಾಪನೆಯಾಗುವುದರೊಂದಿಗೆ ಶುರುವಾಯಿತು. 2010ರ ಪ್ರಕಾರ, ಒರ್ಲ್ಯಾಂಡೊ ಮಾರ್ಕೆಟ್ ಪ್ರದೇಶದಲ್ಲಿ ಹಲವಾರು 4 ಸ್ಟಾರ್ ಹೊಟೆಲ್‌ಗಳನ್ನು ಹೊಂದಿದೆ. ಒರ್ಲ್ಯಾಂಡೊದಲ್ಲಿ ಆರಂಭಗೊಳ್ಳಲಿರುವ ಅತ್ಯಂತ ಹೊಸದಾದ ಐಷಾರಾಮಿ ಹೊಟೆಲ್ ಎಂದರೆ 2010ರಲ್ಲಿ ಪೂರ್ಣಗೊಂಡಿರುವ ವಾಲ್ಡ್ರಾಫ್ ಆಸ್ಟೊರಿಯ -ಒರ್ಲ್ಯಾಂಡೊ. ಪ್ರಪ್ರಥಮ ಹೊಟೆಲ್ ನ್ಯೂಯಾರ್ಕ್ ನಗರದಲ್ಲಿ 1931ರಲ್ಲಿ ಸ್ತಾಪನೆಗೊಂಡಾಗಿನಿಂದ, ಇದು ಬೇರೆಡೆ ಮೊದಲಿನಿಂದ ಆರಂಭಿಸಿದ ಪ್ರಪ್ರಥಮ ಹೊಟೆಲ್ ಆಗಿದೆ.
ಗಾಲ್ಫ್
ಬದಲಾಯಿಸಿನಗರದಲ್ಲಿ ಹಲವಾರು ಗಾಲ್ಫ್ ಕೋರ್ಸ್‌ಗಳನ್ನು ಕಾಣಬಹುದು. ಅವುಗಳಲ್ಲಿ ಬಹಳ ಪ್ರಸಿದ್ಧವಾಗಿರುವುದು ಅರ್ನಾಲ್ಡ್ ಪಾಮರ್ ಇನ್ವಿಟೇಶನಲ್ ಗೆ ನೆಲೆಯಾಗಿರುವ ಬೇ ಹಿಲ್ ಕ್ಲಬ್ ಆಂಡ್ ಲಾಡ್ಜ್ . ಜನರು ಎಲ್ಲಿ ವಾಸಮಾಡಬಯಸುತ್ತಾರೆ ಎಂಬುದನ್ನು ಆಧರಿಸಿ, ಪ್ಯು ಸಂಶೋಧನಾ ಕೇಂದ್ರದ 2009ರ ಅಧ್ಯಯನದ ಪ್ರಕಾರ ಒರ್ಲ್ಯಾಂಡೊ ನಾಲ್ಕನೇ ಅತ್ಯಂತ ಜನಪ್ರಿಯ ನಗರವಾಗಿದೆ.[೨೬]
ಸಂಸ್ಕೃತಿ
ಬದಲಾಯಿಸಿಮನರಂಜನೆ ಮತ್ತು ಪ್ರದರ್ಶನ ಕಲೆಗಳು
ಬದಲಾಯಿಸಿಹಿಪ್ ಹಾಪ್ ಸಂಗೀತ , ಮೆಟಲ್ , ರಾಕ್ ಸಂಗೀತ , ರೆಗ್ಗೇಟನ್ ಮತ್ತು ಲ್ಯಾಟಿನೋ ಸಂಗೀತ ಕಾರ್ಯಕ್ರಮಗಳು ನಗರದೆಲ್ಲೆಡೆ ಕ್ರಿಯಾಶೀಲವಾಗಿವೆ. ಇದು ಫ್ಲೋರಿಡಾ ಬ್ರೇಕ್‌ಬೀಟ್ ಆಂದೋಲನಕ್ಕೆ ನೆಲೆಯಾಗಿದೆ. ಒರ್ಲ್ಯಾಂಡೊವನ್ನು "ಹಾಲಿವುಡ್ ಈಸ್ಟ್" ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಭಾಗದಲ್ಲಿ ಹಲವಾರು ಸ್ಟುಡಿಯೋಗಳು ಇವೆ. ಪ್ರಮುಖ ಚಲನಚಿತ್ರ ನಿರ್ಮಾಣವು ನಗರದಲ್ಲಿ 1990ರ ಮಧ್ಯಭಾಗದಿಂದ-ಕೊನೆಯ ಭಾಗದವರೆಗೆ ಕ್ರಿಯಾಶೀಲವಿತ್ತು. ಆದರೆ ಕಳೆದ ದಶಕದಲ್ಲಿ ಅದು ಕ್ರಮೇಣ ನಿಧಾನಗೊಂಡಿದೆ. ನಗರದ ಇತಿಹಾಸದಲ್ಲಿ ಪ್ರಾಯಶಃ ಅತ್ಯಂತ ಪ್ರಸಿದ್ಧ ಚಲನಚಿತ್ರ-ನಿರ್ಮಾಣ ಘಟನೆ ಎಂದರೆ ಲೆಥಲ್ ವೆಪನ್ 3 ಸಿನಿಮಾಗಾಗಿ ಒರ್ಲ್ಯಾಂಡೊದ ಮೊದಲಿನ ಸಿಟಿಹಾಲ್‌ನ ಅಂತಃಸ್ಫೋಟ ನಡೆಸಿದ್ದು. ಇಂದು ಒರ್ಲ್ಯಾಂಡೊ ದೂರದರ್ಶನ ಕಾರ್ಯಕ್ರಮಗಳು, ನೇರ-ವಿಡಿಯೋ ಕಾರ್ಯಕ್ರಮಗಳು ಮತ್ತು ವಾಣಿಜ್ಯ ತಯಾರಿಕೆಗಳ ಬಹುದೊಡ್ಡ ನಿರ್ಮಾಣ ಕೇಂದ್ರವಾಗಿದೆ.[೨೭]
ಇತ್ತೀಚಿನವರೆಗೂ, ವಾಲ್ಟ್ ಡಿಸ್ನಿ ಫೀಚರ್ ಅನಿಮೇಶನ್ ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್‌ನಲ್ಲಿರುವ ಡಿಸ್ನೀಯವರ ಹಾಲಿವುಡ್ ಸ್ಟುಡಿಯೋಸ್ ನ ಒಂದು ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಫೀಚರ್ ಅನಿಮೇಶನ್ -ಫ್ಲೋರಿಡಾ ಮುಖ್ಯವಾಗಿ ಮುಲಾನ್, ಲಿಲೊ & ಸ್ಟಿಚ್ ಚಲನಚಿತ್ರಗಳು, ಮತ್ತು ಬ್ರದರ್ ಬೀರ್ಚಲನಚಿತ್ರದ ಆರಂಭಿಕ ಹಂತಗಳನ್ನು ನಿರ್ಮಿಸಿತ್ತು. ಜೊತೆಗೆ ವಿವಿಧ ಬೇರೆ ಯೋಜನೆಗಳಿಗೂ ಕೊಡುಗೆ ನೀಡಿತ್ತು. ಟಿಎನ್‌ಎ(TNA) ರಗ್ಲಿಂಗ್‌ನ ಮೊದಲ ಪ್ರದರ್ಶನ ಟಿಎನ್‌ಎ(TNA) ಇಂಪಾಕ್ಟ್! ಯುನಿವರ್ಸಲ್ ಸ್ಟುಡಿಯೋಸ್ ಫ್ಲೋರಿಡಾದ ಸೌಂಡ್‌ಸ್ಟೇಜ್ 21ದಲ್ಲಿ ಸಿದ್ಧಗೊಂಡಿದೆ. ನಿಕೆಲೊಡಿಯನ್ ಸ್ಟುಡಿಯೋಸ್ , 1990ರ ಭಾಗದಲ್ಲಿ ನೂರಾರು ಗಂಟೆಗಳ ಜಿಎಕೆ-ಫಿಲ್‌ಡ್ ಗೇಮ್ ಶೋಗಳನ್ನು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ತಯಾರಿಸಿತ್ತು. ಆದರೆ ಈಗ ಯುನಿವರ್ಸಲ್ ಸ್ಟುಡಿಯೋಸ್ ಫ್ಲೋರಿಡಾದ ಹೊರಗೆ ಕಾರ್ಯನಿರ್ವಹಿಸುತ್ತಿಲ್ಲ. ಈ ಪ್ರದೇಶದಲ್ಲಿ ನಡೆಯುವ ಫ್ಲೋರಿಡಾ ಚಲನಚಿತ್ರ ಉತ್ಸವ ವು ದೇಶದಲ್ಲಿಯೇ ಅತ್ಯಂತ ಮನ್ನಣೆಯ ಪ್ರಾದೇಶಿಕ ಚಿತ್ತ್ರೋತ್ಸವವಾಗಿದೆ ಮತ್ತು ವಿಶ್ವದೆಲ್ಲೆಡೆಯ ಯುವ ಚಲನಚಿತ್ರ ತಯಾರಕರನ್ನು ಆಕರ್ಷಿಸುತ್ತದೆ. ಸ್ವತಂತ್ರ ಅಥವಾ ಕಲಾತ್ಮಕ ಚಲನಚಿತ್ರ ನಿರ್ಮಾಪಕರಲ್ಲಿ ಒರ್ಲ್ಯಾಂಡೊ ಅತ್ಯಂತ ಜನಪ್ರಿಯವಾಗಿದೆ. ಒರ್ಲ್ಯಾಂಡೊದ ಕಲಾತ್ಮಕ ಚಲನಚಿತ್ರ ಕ್ಷೇತ್ರವು ಹ್ಯಾಕ್ಸನ್ ಫಿಲ್ಮ್ಸ್ ನವರ ದಿ ಬ್ಲೇರ್ ವಿಚ್ ಪ್ರಾಜೆಕ್ಟ್ (1999) ನಂತರ ಕ್ರಿಯಾಶೀಲವಾಗಿದೆ. ಕೆಲವು ವರ್ಷಗಳ ನಂತರ ಚಾರ್ಲಿಜ್ ಥರಾನ್ ತನ್ನ ಮಾನ್ಸ್‌ಟರ್ ಸಿನಿಮಾಕ್ಕೆ (2003)ಅಕಾಡೆಮಿ ಅವಾರ್ಡ್ಸ ಗೆದ್ದುಕೊಂಡಳು. ಫ್ಲೋರಿಡಾ ಸ್ಟೇಟ್ ನೀಡುವ ಒಂದು ಚಲನಚಿತ್ರ ಉತ್ತೇಜಕವೂ ಒರ್ಲ್ಯಾಂಡೊ ಮತ್ತು ಸ್ಟೇಟ್‌ನ ಇನ್ನುಳಿದ ಭಾಗದಲ್ಲಿ ಚಲನಚಿತ್ರಗಳು ನಿರ್ಮಾಣಗೊಳ್ಳುವುದನ್ನು ಅಧಿಕಗೊಳಿಸಲು ಸಹಾಯ ಮಾಡಿದೆ.
ಒರ್ಲ್ಯಾಂಡೊ ಮಹಾನಗರಪಾಲಿಕೆ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯ ರಂಗಕರ್ಮಿಗಳೂ ಇದ್ದಾರೆ. ಹಲವಾರು ವೃತ್ತಿಪರ ಮತ್ತು ಅರೆ-ವೃತ್ತಿಪರ ಕಲಾಮಂದಿರಗಳು ಮತ್ತು ಅನೇಕ ಸಮುದಾಯ ರಂಗಮಂದಿರಗಳು ಈ ಪ್ರದೇಶದಲ್ಲಿ ಇವೆ. ಇವುಗಳಲ್ಲಿ ಸೆಂಟ್ರಲ್ ಫ್ಲೋರಿಡಾ ಬ್ಯಾಲೆ, ಒರ್ಲ್ಯಾಂಡೊ ಶೇಕ್ಸ್‌ಪಿಯರ್ ಥಿಯೇಟರ್ , ಒರ್ಲ್ಯಾಂಡೊ ರೆಪರ್ಟರಿ ಥಿಯೇಟರ್ , ಒರ್ಲ್ಯಾಂಡೊ ಥಿಯೇಟರ್ ಪ್ರಾಜೆಕ್ಟ್, ಮ್ಯಾಡ್ ಕೌ ಥಿಯೇಟರ್ , ಥಿಯೇಟರ್ ಡೌನ್‌ಟೌನ್, ವಿಂಟರ್ ಪಾರ್ಕ್ ಪ್ಲೇಹೌಸ್, ಥಿಯೇಟರ್ ವಿಂಟರ್ ಹೆವೆನ್ ಮತ್ತು ಮೌಂಟ್ ಡೋರಾದಲ್ಲಿರುವ ಐಸ್‌ಹೌಸ್ ಥಿಯೇಟರ್ ಇವುಗಳಲ್ಲಿ ಮುಖ್ಯವಾದವುಗಳು. ವಾಲ್ಟ್ ಡಿಸ್ನಿ ವರ್ಲ್ಡ್ ಒಂದು ವಾಲಂಟೀರ್ ಎಂಪ್ಲಾಯಿ ಥೀಯೇಟರ್ ಕಂಪನಿಯನ್ನು ಹೊಂದಿದ್ದು, ಅದನ್ನು S.T.A.G.E. ಮತ್ತು ಎಂಕೋರ್ ಎಂದು ಕರೆಯಲಾಗುತ್ತದೆ. ಇದು ಒಂದು ಸ್ವಯಂಸೇವಾ ನೌಕರರ ನರ್ತನತಂಡ ಮತ್ತು ವಾದ್ಯತಂಡ(ಆರ್ಕೆಸ್ಟ್ರಾ)ವಾಗಿದ್ದು, ದಾನದಿಂದ ಹಣವನ್ನು ಸಂಗ್ರಹಿಸುತ್ತದೆ. ಇದರೊಂದಿಗೆ ಸೆಂಟ್ರಲ್ ಫ್ಲೋರಿಡಾ ಯುನಿವರ್ಸಿಟಿ ಮತ್ತು ರೋಲಿನ್ಸ್ ಕಾಲೇಜ್ (ವಿಂಟರ್ ಪಾರ್ಕ್)ಗಳಲ್ಲಿ ರಂಗಭೂಮಿಯ ವಿಭಾಗಗಳಿವೆ. ಅವು ಆ ಪ್ರದೇಶದ ಯುವ ಕಲಾವಿದರನ್ನು ಆಕರ್ಷಿಸುತ್ತವೆ.
ಬಾಬ್ ಕಾರ್ ಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ರಾಷ್ಟ್ರೀಯ ಬ್ರಾಡ್‌ವೇ ಪ್ರವಾಸಗಳನ್ನು ನಿಯಮಿತವಾಗಿ ನಡೆಸುತ್ತದೆ. ಈ ಸ್ಥಳವನ್ನು 1926ರಲ್ಲಿ ನಿರ್ಮಿಸಲಾಗಿದ್ದು, 2012ರಲ್ಲಿ ಈ ಜಾಗದಲ್ಲಿ ಇದರ ಬದಲಿಗೆ ಡಾ. ಫಿಲಿಪ್ಸ್ ಸೆಂಟರ್ ಫಾರ್ ಪರ್‌ಪಾರ್ಮಿಂಗ್ ಆರ್ಟ್ಸ್ ಬರಲಿದೆ.
2007ರಲ್ಲಿ, ಒರ್ಲ್ಯಾಂಡೊ ವಿಶ್ವ ಬ್ಯಾಲೆ ಸ್ಪರ್ಧೆ (ವರ್ಲ್ಡ್ ಬ್ಯಾಲೆ ಕಾಪಿಟಿಶನ್)ಯನ್ನು ಏರ್ಪಡಿಸಿದ ನಗರವಾಗಿತ್ತು. ಇದು ಪ್ರತಿ ವರ್ಷ ನಡೆಯುವ ವಿಶ್ವ-ಪ್ರಸಿದ್ಧ ಕಾರ್ಯಕ್ರಮವಾಗಿದ್ದು, ವಿಶ್ವದೆಲ್ಲೆಡೆಯ ನೃತ್ಯಗಾರರು ಇದರಲ್ಲಿ ಸ್ಪರ್ಧಿಸಲು ಸೇರುತ್ತಾರೆ. ಈ ಸ್ಪರ್ಧೆಯು ಜಾಗತಿಕ ಮನೋರಂಜನಾ ಉದ್ಯಮದಿಂದ ಪ್ರಮುಖ ಪ್ರಸಿದ್ಧ ವ್ಯಕ್ತಿಗಳನ್ನು ಆಕರ್ಷಿಸುತ್ತದೆ. ಜೊತೆಗೆ ವಿಶ್ವದೆಲ್ಲೆಡೆ ಇರುವ ಭಾವೀ ತಲೆಮಾರಿನ ಕಲಾ ಪ್ರತಿಭೆಯುಳ್ಳವರನ್ನು ಗುರುತಿಸಿ, ಗೌರವಿಸುತ್ತದೆ. ಈ ವಾರ್ಷಿಕ ಕಾರ್ಯಕ್ರಮಕ್ಕೆ ಪ್ರಮುಖ ಅಂತಾರಾಷ್ಟ್ರೀಯ ನೃತ್ಯ ವಿಮರ್ಶಕರು ಬರುತ್ತಾರೆ. ಜೊತೆಗೆ ಭಾಗವಹಿಸುವ ದೇಶಗಳಿಗೆ ಜಾಗತಿಕ ಇಂಟರ್‌ನೆಟ್ ಮೂಲಕ ಮತ್ತು ದೂರದರ್ಶನದ ಸಹಸ್ರಾರು ಪ್ರೇಕ್ಷಕರಿಗೆ ಪ್ರಸಾರ ಮಾಡಲಾಗುವುದು.[೨೮]
ಒರ್ಲ್ಯಾಂಡೊ ಅಂತಾರಾಷ್ಟ್ರೀಯ ಫ್ರಿಂಜ್ ಥಿಯೇಟರ್ ಫೆಸ್ಟಿವಲ್ ಒಂದು ರಂಗಭೂಮಿ ಉತ್ಸವವಾಗಿದ್ದು, ವಿಶ್ವದೆಲ್ಲೆಡೆಯ ಪ್ರವಾಸೀ ರಂಗಭೂಮಿ ಕಂಪನಿಗಳು ಇಲ್ಲಿಗೆ ಆಗಮಿಸುತ್ತವೆ. ಪ್ರತಿ ವಸಂತಕಾಲದಲ್ಲಿ ಡೌನ್‌ಟೌನ್ ಒರ್ಲ್ಯಾಂಡೊದ ಅನೇಕ ಸ್ಥಳಗಳಲ್ಲಿ ಈ ಉತ್ಸವದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಉತ್ಸವದಲ್ಲಿ, ಸ್ಥಳೀಯ ಕಲಾವಿದರಿಂದ ಹೊಸ ಮತ್ತು ಇನ್ನೂ ಪ್ರದರ್ಶಿತಗೊಳ್ಳದ ನಾಟಕಗಳ ಪೂರ್ಣ ರಂಗಪ್ರದರ್ಶನ ಮತ್ತು ಅವುಗಳ ಓದುವಿಕೆ ಇರುತ್ತದೆ [೨೯] ಜೊತೆಗೆ ವಸಂತಕಾಲದಲ್ಲಿ, ಹ್ಯಾರಿಯೆಟ್ ಲೇಕ್ ಫೆಸ್ಟಿವಲ್ ಆಫ್ ನ್ಯೂ ಪ್ಲೇಸ್ ಎಂಬ ಹೊಸ ನಾಟಕಗಳ ಇನ್ನೊಂದು ರಂಗ ಉತ್ಸವ ಇರುತ್ತದೆ. ಇದನ್ನು ಒರ್ಲ್ಯಾಂಡೊ ಶೇಕ್ಸ್‌ಪಿಯರ್ ಥಿಯೇಟರ್ ನಡೆಸುತ್ತದೆ.[೩೦]
ವ್ಯಾಪಾರ ಮಳಿಗೆಗಳು (ಶಾಪಿಂಗ್ ಮಾಲ್ಸ್)
ಬದಲಾಯಿಸಿಒರ್ಲ್ಯಾಂಡೊ ಆಕರ್ಷಣೀಯ ರಿಟೈಲ್ ಮಾರುಕಟ್ಟೆಯನ್ನು ಹೊಂದಿದೆ, ಕನಿಷ್ಠ ಐದು ಬಹುದೊಡ್ಡ ಡಿಪಾರ್ಟಮೆಂಟ್ ಸ್ಟೋರ್‌ಗಳು ಮತ್ತು ಮತ್ತು 50,000,000 square feet (4,650,000 m2) 50,000,000 ಚದುರಡಿಗಳಿಗೂ ಹೆಚ್ಚು(4,650,000 m2) ಶಾಪಿಂಗ್ ಸ್ಥಳಾವಕಾಶವನ್ನು ಸೆಂಟ್ರಲ್ ಫ್ಲೋರಿಡಾದಲ್ಲಿ ಹೊಂದಿದೆ.[೩೧]
- ದಿ ಫ್ಲೋರಿಡಾ ಮಾಲ್ ಒರ್ಲ್ಯಾಂಡೊದಲ್ಲಿ ಒಂದು ಬಹುದೊಡ್ಡ ಮಾಲ್ ಆಗಿದ್ದು, 1,849,000 ಚದುರಡಿ (171,800 m2) ಸ್ಥಳಾವಕಾಶ ಹೊಂದಿದ್ದು, ಅಮೆರಿಕದಲ್ಲಿ ಏಕ-ಮಹಡಿಯ ಅತಿದೊಡ್ಡ ಮಳಿಗೆಗಳಲ್ಲಿ ಒಂದಾಗಿದೆ.1,849,000 sq ft (171,800 m2). ಇಲ್ಲಿ ಸುಮಾರು 250ಕ್ಕೂ ಹೆಚ್ಚು ಅಂಗಡಿಮಳಿಗೆಗಳಿದ್ದು, ಏಳು ಆಂಕರ್ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳು, ಫ್ಲೋರಿಡಾ ಮಾಲ್ ಹೊಟೆಲ್ ಮತ್ತು ಕಾನ್‌ಫರೆನ್ಸ್ ಸೆಂಟರ್ ಟವರ್ ಇದೆ. ಇದು ನಗರದ ಹೊರಗೆ, ಮಹಾನಗರಪಾಲಿಕೆಗೆ ಇನ್ನೂ ಸೇರಿರದ ಆರೇಂಜ್ ಕೌಂಟಿಯಲ್ಲಿದೆ.
- ದಿ ಮಾಲ್ ಅಟ್ ಮಿಲೆನಿಯ ಒಂದು ಸಮಕಾಲೀನ ಎರಡು ಅಂತಸ್ತುಗಳ ಶಾಪಿಂಗ್ ಮಾಲ್ ಆಗಿದ್ದು, ಇದರಲ್ಲಿ ಬ್ಲೂಮಿಂಗ್‌ಡೇಲ್ಸ್ , ಮ್ಯಾಕೆಸ್ , ಮತ್ತು ನೈಮನ್ ಮರ್ಕಸ್ ಇನ್ನಿತರ ವಿಶ್ವಪ್ರಸಿದ್ಧ ಮಳಿಗೆಗಳು ಇವೆ. ಮಾಲ್ ಸುಮಾರು 1,118,000 ಚದುರಡಿಗಳನ್ನು (103,866 m²) ಹೊಂದಿದೆ. ಈ ಮಾಲ್‌ಗೆ ಪಕ್ಕದಲ್ಲಿಯೇ ಐಕೆಇಎ ಒರ್ಲ್ಯಾಂಡೊ 2007ರ ನವೆಂಬರ್ 14ರಂದು ಆಂಭಗೊಂಡಿದೆ.
- ಡೌನ್‌ಟೌನ್ ಒರ್ಲ್ಯಾಂಡೊಗೆ ಹತ್ತಿರದಲ್ಲಿಯೇ ಇರುವ ಒರ್ಲ್ಯಾಂಡೊ ಫ್ಯಾಶನ್ ಸ್ಕ್ವೇರ್ ಒಂದು ಒಳಾಂಗಣ ವ್ಯಾಪಾರ ಮಳಿಗೆಯಾಗಿದ್ದು, ನಗರದಲ್ಲಿ ಆರಂಭಗೊಂಡ ಮೊದಲ ಮಳಿಗೆಗಳಲ್ಲಿ ಒಂದಾಗಿದೆ. ಈ ಮಾಲ್‌ನಲ್ಲಿ 4 ಆಂಕರ್ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳು ಇವೆ ಮತ್ತು ಒಂದು 14-ಸ್ಕ್ರೀನ್ ಪ್ರೀಮಿಯರ್ ಸಿನಿಮಾ ಥಿಯೇಟರ್ ಇದೆ.
- ಇಂಟರ್‌ನ್ಯಾಶನಲ್ ಡ್ರೈವ್ ನಲ್ಲಿ ಇರುವ ಫೆಸ್ಟಿಬಲ್ ಬೇ ಮಾಲ್ ನಲ್ಲಿ ಅಂಗಡಿಗಳು, ಒಂದು ಸ್ಕೇಟ್ ಪಾರ್ಕ್ ಮತ್ತು ಒಂದು ರಂಗಮಂದಿರ ಇದೆ.
- ಎಸ್‌ಆರ್ 408ನ ಸ್ವಲ್ಪ ಉತ್ತರಕ್ಕೆ ಇರುವ ಎಸ್. ಅಲಫಯ ಟ್ರೈಲಲ್‌ನಲ್ಲಿ ವಾಟರ್‌ಫೋರ್ಡ್ ಲೇಕ್ಸ್ ಟೌನ್ ಸೆಂಟರ್ ಇದೆ. ಇದು ಓಪನ್-ಏರ್ ಮಾಲ್ ಆಗಿದ್ದು, ಇಲ್ಲಿ ಅನೇಕ ಸರಣಿ ಮಳಿಗೆಗಳು, ಸಣ್ಣ ಅಂಗಡಿಗಳು, ರೆಸ್ಟುರಾಂಟ್‌ಗಳು, ವೈದ್ಯರ ಕ್ಲಿನಿಕ್‌ಗಳು ಮತ್ತು 3ಡಿ ಇರುವ ರೀಗಲ್ ವಾಟರ್‌ಫೋರ್ಡ್ ಲೇಕ್ಸ್ ಸ್ಟೇಡಿಯಂ 20 ಮತ್ತು ಐಮಾಕ್ಸ್(IMAX) ಡಿಜಿಟಲ್ ಇತ್ಯಾದಿ ಇವೆ. ಇದು ನಗರದ ಹೊರಭಾಗದಲ್ಲಿ, ಮಹಾನಗರಪಾಲಿಕೆಗೆ ಸೇರದ ಆರೇಂಜ್ ಕೌಂಟಿಯಲ್ಲಿದೆ.
ಕ್ರೀಡೆಗಳು
ಬದಲಾಯಿಸಿಒರ್ಲ್ಯಾಂಡೊ ನಗರದಲ್ಲಿ ಒರ್ಲ್ಯಾಂಡೊ ಮ್ಯಾಜಿಕ್ NBA ತಂಡ, ಒರ್ಲ್ಯಾಂಡೊ ಪ್ರೆಡೇಟರ್ಸ್ ಅರೀನ ಫುಟ್‌ಬಾಲ್ ಲೀಗ್ ತಂಡ, ದಿ ದಒರ್ಲ್ಯಾಂಡೊ ಟೈಟನ್ಸ್ ಎನ್‌ಎಲ್‌ಎಲ್(NLL) ಇಂಡೋರ್ ಲ್ಯಾಕ್ರೋಸ್ ತಂಡ, ದಿ ಫ್ಲೋರಿಡಾ ಟಸ್ಕರ್ಸ್ ಯುಎಫ್‌ಎಲ್(UFL) ತಂಡ, ದಿ ಒರ್ಲ್ಯಾಂಡೊ ಫ್ಯಾಂಟಸಿ ಎಲ್‌ಎಫ್‌ಎಲ್ (LFL) ತಂಡ ಮತ್ತು ದಿ ಯುಸಿಎಫ್(UCF) ನೈಟ್ಸ್ ಕಾಲೇಜ್ ಅಥ್ಲೆಟಿಕ್ಸ್ ತಂಡಗಳು. ನಗರವು 2012 ಎನ್‌ಬಿಎ (NBA) ಅಲ್-ಸ್ಟಾರ್ ಗೇಮ್ ಅನ್ನು ಹೊಸ ಆಮ್‌ವೇ ಕೇಂದ್ರದಲ್ಲಿ ಆಯೋಜಿಸಲಿದ್ದು, ಈ ಕೇಂದ್ರವು 2010ರ ಕೊನೆಯಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ಜೊತೆಗೆ ನಗರದಲ್ಲಿ ಹಲವಾರು ಮೈನರ್ ಲೀಗ್ ಕ್ರೀಡಾ ತಂಡಗಳಿವೆ. ಅವು ಎರಡು ಅರೀನಾ ಬೌಲ್‌ಗಳನ್ನು, ಐಸ್ ಹಾಕಿಯಲ್ಲಿ ಎರಡು ಪ್ರಶಸ್ತಿಗಳನ್ನು, ಮೈನರ್ ಲೀಗ್ ಬೇಸ್‌ಬಾಲ್‌ನಲ್ಲಿ ಮೂರು ಪ್ರಶಸ್ತಿಗಳನ್ನು, ಸಾಕರ್‌ನಲ್ಲಿ ಒಂದು ಪ್ರಶಸ್ತಿಯನ್ನು, ಅರೀನಾ ಫುಟ್ಬಾಲ್‌ನಲ್ಲಿ ಒಂದು ಪ್ರಶಸ್ತಿಯನ್ನು ಮತ್ತು ರೋಲರ್ ಹಾಕಿಯಲ್ಲಿ ಒಂದು ಪ್ರಶಸ್ತಿಯನ್ನು ಗಳಿಸಿವೆ.
ಅನೇಕ ಪ್ರಮುಖ ಕ್ರೀಡಾಳುಗಳು ಒರ್ಲ್ಯಾಂಡೊದಿಂದ ಬಂದವರಾಗಿದ್ದಾರೆ. ಉದಾಹರಣೆಗೆ; ಬೇಸ್‌ಬಾಲ್ ಆಟಗಾರರಾದ ಎ.ಜೆ. ಪಿಯರ್‌ಜಿನ್ಸ್ಕಿ ಮತ್ತು ಜಾನಿ ಡೆಮನ್ , ಫುಟ್ಬಾಲ್ ಆಟಗಾರರಾದ ವಾರೆನ್ ಸಾಪ್ , ಡಾಮಿನಿಕ್ ರೋಜರ್ಸ್ ಕ್ರೊಮರ್ಟಿ , ಡಾಂಟೆ ಕಲ್‌ಪೆಪ್ಪರ್ , ಕ್ರಿಸ್ ಜಾನ್ಸನ್ , ಬ್ರಾಂಡನ್ ಮೆರಿವೆದರ್ , ಡೆಕನ್ ಜೋನ್ಸ್ , ಬ್ರಾಂಡನ್ ಸಿಲೆರ್ , ಮೈಕ್ ಸಿಮ್ಸ್ ವಾಕರ್ , ಬ್ರಾಂಡನ್ ಮಾರ್ಶಲ್ , ಮತ್ತು ಕೆವಿನ್ ಸ್ಮಿತ್ , ಬಾಸ್ಕೆಟ್‌ಬಾಲ್ ಆಟಗಾರರಾದ ಡ್ವಿಟ್ ಹೊವರ್ಡ್ , ಅಮರೆ ಸ್ಟೊಡೆಮಿರೆ ಮತ್ತು ಡೆರಿಸ್ ವಾಶಿಂಗ್ಡನ್ , ಮತ್ತು ಸಾಕರ್ ಆಟಗಾರರಾದ ಮೈಕೆಲ್ ಅಕೆರ್ಸ್ ಇನ್ನಿತರರು. ಒರ್ಲ್ಯಾಂಡೊದಲ್ಲಿ ಬಹಳ ಜನ ಮಾಜಿ ಆಟಗಾರರು ಇದ್ದಾರೆ. ಅವರೆಂದರೆ, ಬೇಸ್‌ಬಾಲ್ ಆಟಗಾರರಾದ ಕಾರ್ಲೊಸ್ ಪೆನಾ, ಫ್ರಾಂಕ್ ವಯೊಲ , ಕೆನ್ ಗ್ರಿಫಿ ಜ್ಯೂನಿಯರ್ , ಶಕ್ವಿಲ್ ಒ ನೀಲ್ ಮತ್ತು ಜೋನಾಥನ್ ಆಲ್ಡ್ರಿಜ್ , ಮತ್ತು ಗಾಲ್ಫ್ ಆಟಗಾರರಾದ ಟೈಗರ್ ವುಡ್ಸ್ , ಮಾರ್ಕ್ ಒ ಮೆಅರ ಮತ್ತು ಅರ್ನಾಲ್ಡ್ ಪಾಮರ್ ಇನ್ನಿತರರು ಇಲ್ಲಿಯವರು.
ಮಾಧ್ಯಮಗಳು
ಬದಲಾಯಿಸಿವೃತ್ತ ಪತ್ರಿಕೆಗಳು
ಬದಲಾಯಿಸಿ- ಒರ್ಲ್ಯಾಂಡೊ ಸೆಂಟಿನೆಲ್
- ಒರ್ಲ್ಯಾಂಡೊ ಬ್ಯುಸಿನೆಸ್ ಜರ್ನಲ್
ರೇಡಿಯೊ
ಬದಲಾಯಿಸಿಕಿರುತೆರೆ
ಬದಲಾಯಿಸಿಸರ್ಕಾರ
ಬದಲಾಯಿಸಿಮೇಯರ್-ಕೌನ್ಸಿಲ್ ವ್ಯವಸ್ಥೆಯು ಒರ್ಲ್ಯಾಂಡೊದ ಆಡಳಿತವನ್ನು ನಡೆಸುತ್ತದೆ. ನಗರದೆಲ್ಲೆಡೆಯ ಮತದಿಂದ ಮೇಯರ್ ಆಯ್ಕೆಯಾಗುತ್ತಾರೆ. ಸಿಟಿ ಕೌನ್ಸಿಲ್‌ನ ಆರು ಸದಸ್ಯರನ್ನು ಪ್ರತಿ ಜಿಲ್ಲೆ/ಡಿಸ್ಟ್ರಿಕ್ಟ್‌ನಿಂದ ಆಯ್ಕೆ ಮಾಡಲಾಗುತ್ತದೆ.
ಸ್ಟೇಟ್ ಮತ್ತು ಫೆಡರಲ್ ಪ್ರತಿನಿಧಿತ್ವ
ಬದಲಾಯಿಸಿಅಮೆರಿಕ ಸಂಯುಕ್ತ ಸಂಸ್ಥಾನ ಅಂಚೆ ಸೇವೆಯು ಒರ್ಲ್ಯಾಂಡೋದಲ್ಲಿ ಅಂಚೆಕಚೇರಿಗಳ ಕಾರ್ಯನಿರ್ವಹಣೆಯನ್ನು ನಡೆಸುತ್ತದೆ. ಒರ್ಲ್ಯಾಂಡೊ ಮುಖ್ಯ ಅಂಚೆ ಕಚೇರಿಯು ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಪಕ್ಕದಲ್ಲಿರುವ 10401,ಬೌಲೆವರ್ಡ್, ಪೋಸ್ಟ್ ಆಫೀಸಿನಲ್ಲಿ ಕಾರ್ಯನಿರ್ವಹಿಸುತ್ತದೆ.[೩೨]
ಶಿಕ್ಷಣ
ಬದಲಾಯಿಸಿಸರ್ಕಾರಿ ಪ್ರಾಥಮಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಆರೇಂಜ್ ಕೌಂಟಿ ಪಬ್ಲಿಕ್ ಸ್ಕೂಲ್ಸ್ ನಡೆಸುತ್ತದೆ. ಕೆಲವು ಖಾಸಗಿ ಶಾಲೆಗಳು ಇವೆ; ಅವೆಂದರೆ ಒರ್ಲ್ಯಾಂಡೊ ಲ್ಯುಥೆರನ್ ಅಕಾಡೆಮಿ , ಫಾರೆಸ್ಟ್ ಲೇಕ್ ಸರೋವರ ಅಕಾಡೆಮಿ, ದಿ ಫರ್ಸ್ಟ್ ಅಕಾಡೆಮಿ, ಟ್ರಿನಿಟಿ ಪ್ರಿಪರೇಟರಿ ಸ್ಕೂಲ್ , ಲೇಕ್ ಹೈಲ್ಯಾಂಡ್ ಸರೋವರ ಪ್ರಿಪರೇಟರಿ ಸ್ಕೂಲ್ , ಬಿಶಪ್ ಮೂರ್ ಹೈಸ್ಕೂಲ್ ಮತ್ತು ಒರ್ಲ್ಯಾಂಡೊ ಕ್ರಿಶ್ಚಿಯನ್ ಪ್ರಿಪ್ .
ಉನ್ನತ ಶಿಕ್ಷಣದ ಪ್ರದೇಶ ಸಂಸ್ಥೆಗಳು
ಬದಲಾಯಿಸಿರಾಜ್ಯ ವಿಶ್ವವಿದ್ಯಾಲಯ
ಬದಲಾಯಿಸಿ- ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯ
- ಫ್ಲೋರಿಡಾ ಎ&ಎಂ ಯುನಿವರ್ಸಿಟಿ ಕಾಲೇಜ್ ಆಫ್ ಲಾ
ರಾಜ್ಯ ಕಾಲೇಜ್‌ಗಳು
ಬದಲಾಯಿಸಿ- ವೆಲೆನಿಕಾ ಕಮ್ಯುನಿಟಿ ಕಾಲೇಜ್
- ಸೆಮಿನೋಲ್ ಸ್ಟೇಟ್ ಕಾಲೇಜ್ ಆಫ್ ಫ್ಲೋರಿಡಾ (ಸ್ಯಾನ್‌ಫೋರ್ಡ್ , ಒವೈಡೊ , ಮತ್ತು ಅಲ್ಟಮೊಂಟೆ ಸ್ಪ್ರಿಂಗ್ಸ್ )
ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜ್‌ಗಳು, ಮತ್ತು ಇತರೆ
ಬದಲಾಯಿಸಿ- ಆಂಥಮ್ ಕಾಲೇಜ್, ಒರ್ಲ್ಯಾಂಡೊ ಕ್ಯಾಂಪಸ್
- ಆಸ್‌ಬರಿ ಥಿಯಾಲಾಜಿಕಲ್ ಸೆಮಿನರಿ , ಒರ್ಲ್ಯಾಂಡೊ ಕ್ಯಾಂಪಸ್
- ಬೆಲ್‌ಹೆವೆನ್ ವಿಶ್ವವಿದ್ಯಾಲಯ , ಒರ್ಲ್ಯಾಂಡೊ ಕ್ಯಾಂಪಸ್
- ಕೊಲಂಬಿಯಾ ಕಾಲೇಜ್, ಒರ್ಲ್ಯಾಂಡೊ ಕ್ಯಾಂಪಸ್
- ಡೆವ್ರಿ ವಿಶ್ವವಿದ್ಯಾಲಯ , ಒರ್ಲ್ಯಾಂಡೊ ಕ್ಯಾಂಪಸ್
- ಡ್ವಯ್ನೆ ಪ ಆಂಡ್ರೆಯಸ್ ಸ್ಕೂಲ್ ಆಫ್ ಲಾ, , ಬ್ಯಾರ್ರಿ ವಿಶ್ವವಿದ್ಯಾಲಯ
- ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, , ಒರ್ಲ್ಯಾಂಡೊ ಕ್ಯಾಂಪಸ್
- ಫ್ಲೋರಿಡಾ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
- ಫುಲ್ ಸೈಲ್ ವಿಶ್ವವಿದ್ಯಾಲಯ ( ವಿಂಟರ್ ಪಾರ್ಕ್ ನಲ್ಲಿದೆ.)
- ಹೆರ್ಜಿಂಗ್ ಕಾಲೇಜ್ ( ವಿಂಟರ್ ಪಾರ್ಕ್‌ನಲ್ಲಿದೆ.)
- ಅಮೆರಿಕದ ಹಿಂದೂ ವಿಶ್ವವಿದ್ಯಾಲಯ
- ಅಂತಾರಾಷ್ಟ್ರೀಯ ವಿನ್ಯಾಸ ತಂತ್ರಜ್ಞಾನ & ಅಕಾಡೆಮಿ -ಒರ್ಲ್ಯಾಂಡೊ
- ಐಟಿಟಿ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ , ಲೇಕ್ ಮೇರಿ ಕ್ಯಾಂಪಸ್
- ಕೈಸರ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
- ಮೆಕ್‌ಬರ್ನಿ ಕಾಲೇಜ್ (ಒರ್ಲ್ಯಾಂಡೊ ಕ್ಯಾಂಪಸ್)
- ನೊವ ಸೌತ್‌ಈಸ್ಟರ್ನ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
- ಪಾಮ್ ಬೀಚ್ ಅಟ್ಲಾಂಟಿಕ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
- ರಿಫಾರ್ಮಡ್ ಥಿಯಾಲಾಜಿಕಲ್ ಸೆಮಿನರಿ , ಒರ್ಲ್ಯಾಂಡೊ ಕ್ಯಾಂಪಸ್
- ರೆಮಿಂಗ್ಟನ್ ಕಾಲೇಜ್ ಆಫ್ ನರ್ಸಿಂಗ್, ಲೇಕ್ ಮೇರಿ, ಎಫ್‌ಎಲ್
- ರೋಲಿನ್ಸ್ ಕಾಲೇಜ್ ವಿಂಟರ್ ಪಾರ್ಕ್‌ನಲ್ಲಿದೆ.
- ಸ್ಟ್ರೇಯರ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
- ವಿಶ್ವವಿದ್ಯಾಲಯ ಆಫ್ ಫ್ಲೋರಿಡಾ ಕಾಲೇಜ್ ಆಫ್ ಫಾರ್ಮಸಿ ( ಅಪೊಪ್ಕದಲ್ಲಿದೆ)
- ಫೀನಿಕ್ಸ್ ವಿಶ್ವವಿದ್ಯಾಲಯ , ಒರ್ಲ್ಯಾಂಡೊ ಕ್ಯಾಂಪಸ್
- ವೆಬ್ಸ್ಟರ್ ವಿಶ್ವವಿದ್ಯಾಲಯ, ಒರ್ಲ್ಯಾಂಡೊ ಕ್ಯಾಂಪಸ್
ಮೂಲಭೂತ ಸೌಕರ್ಯ
ಬದಲಾಯಿಸಿವಿಮಾನ ನಿಲ್ದಾಣಗಳು
ಬದಲಾಯಿಸಿ- ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (MCO) ವು ಒರ್ಲ್ಯಾಂಡೊದ ಮುಖ್ಯ ವಿಮಾನನಿಲ್ದಾಣ ಮತ್ತು ಈಗ ಫ್ಲೋರಿಡಾದಲ್ಲಿ ಎರಡನೇ ಅತಿಹೆಚ್ಚು ಜನನಿಬಿಡ ವಿಮಾನನಿಲ್ದಾಣವಾಗಿದೆ.[೩೩] ಈ ವಿಮಾನನಿಲ್ದಾಣವು ಸೆಕೆಂಡರಿ ಹಬ್ ಆಗಿ ಸೇವೆ ಸಲ್ಲಿಸುತ್ತದೆ. ಜೊತೆಗೆ ಏರ್‌ಟ್ರಾನ್ ಏರ್‌ವೇಸ್ ನ ಕಾರ್ಪೊರೇಟ್ ಮುಖ್ಯಕಾರ್ಯಾಲಯವನ್ನು ಹೊಂದಿದೆ. ಅಲ್ಲದೆ ಸೌತ್‌ವೆಸ್ಟ್ ಏರ್‌ಲೈನ್ಸ್ ಮತ್ತು ಜೆಟ್‌ಬ್ಲ್ಯೂ ಏರ್‌ವೇಸ್ ನ ಫೋಕಸ್ ಹಬ್ ಸಿಟಿ ಕೂಡ ಹೌದು. ವಿಮಾನನಿಲ್ದಾಣವು ಮೆಟ್ರೋ ಒರ್ಲ್ಯಾಂಡೊ ಪ್ರದೇಶಕ್ಕೆ ಪ್ರಮುಖ ಅಂತಾರಾಷ್ಟ್ರೀಯ ನೆಲೆಯಾಗಿಯೂ ಸೇವೆ ಸಲ್ಲಿಸುತ್ತದೆ. ಇಲ್ಲಿ ಲುಫ್ತಾನ್ಸಾ, ಬ್ರಿಟಿಶ್ ಏರ್‌ವೇಸ್ , ವರ್ಜಿನ್ ಅಟ್ಲಾಂಟಿಕ್, ಏರ್ ಲಿಂಗುಸ್ , ಟಿಎಎಂ(TAM), ಮತ್ತು ಎರೊಮೆಕ್ಸಿಕೋ ಒಳಗೊಂಡಂತೆ ಪ್ರಮುಖ ವಿದೇಶೀ ವಿಮಾನಗಳ ಸೇವೆಯೂ ಲಭ್ಯವಿದೆ.
- ಒರ್ಲ್ಯಾಂಡೊ ಸ್ಯಾನ್‌ಫೋರ್ಡ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (SFB) ವು ಹತ್ತಿರದ ಉಪನಗರವಾದ ಸ್ಯಾನ್‌ಫೊರ್ಡ್ ದಕ್ಷಿಣದಲ್ಲಿ ಇದೆ. ಇದು ಒಂದು ಸೆಕೆಂಡರಿ ವಿಮಾನನಿಲ್ದಾಣವಾಗಿದ್ದು, ಮುಖ್ಯವಾಗಿ ಐರೋಪ್ಯ ವಿನಾಯಿತಿ ವಿಮಾನಗಳಿಗೆ ಮತ್ತು ಚಾರ್ಟರ್ಸ್‌ಗಳಿಗೆ ಮತ್ತು ಅಲ್ಲಿಜೈಅಂಟ್ ಏರ್‌ಲೈನ್ಸ್‌ಗಳಿಗಾಗಿ ಇದೆ.
- ಡೌನ್‌ಟೌನ್ ಒರ್ಲ್ಯಾಂಡೊದ ಬಳಿಯಿರುವ ಒರ್ಲ್ಯಾಂಡೊ ಎಕ್ಸ್‌ಕ್ಯೂಟಿವ್ ವಿಮಾನನಿಲ್ದಾಣ (ಒಆರ್‌ಎಲ್) ವು ಎಕ್ಸ್‌ಕ್ಯೂಟಿವ್ ಜೆಟ್‌ಗಳು, ಫ್ಲೈಟ್ ಟ್ರೈನಿಂಗ್ ಸ್ಕೂಲ್‌ಗಳು ಮತ್ತು ಸಾಮಾನ್ಯವಾದ ಚಿಕ್ಕ-ಏರ್‌ಕ್ರಾಫ್ಟ್ ವಿಮಾನಗಳಿಗಾಗಿ ಇದೆ.
ರಸ್ತೆಗಳು
ಬದಲಾಯಿಸಿಪ್ರಮುಖ ಹೆದ್ದಾರಿಗಳು
ಬದಲಾಯಿಸಿ- ಇಂಟರ್‌ಸ್ಟೇಟ್ 4 ಒರ್ಲ್ಯಾಂಡೊದ ಪ್ರಮುಖ ಇಂಟರ್‌ಸ್ಟೇಟ್ ಹೆದ್ದಾರಿಯಾಗಿದೆ. ಒರ್ಲ್ಯಾಂಡೊ ನಗರವು ಏಕ ಇಂಟರ್‌ಸ್ಟೇಟ್‌ನ ಸೇವೆ ಹೊಂದಿರುವ ಎರಡನೇ ದೊಡ್ಡ ನಗರವಾಗಿದೆ. ಮೊದಲನೆಯದು ಎಂದರೆ ಆಸ್ಟಿನ್, ಟೆಕ್ಸಾಸ್ . ಜೊತೆಗೆ ಯುಎಸ್‌ನಲ್ಲಿ ಏಕ ಇಂಟರ್‌ಸ್ಟೇಟ್ ಸೇವೆ ಹೊಂದಿರುವ ಅತಿದೊಡ್ಡ ಮಹಾನಗರಪಾಲಿಕೆ ಪ್ರದೇಶವಾಗಿದೆ. ಇಂಟರ್‌ಸ್ಟೇಟ್ ತಾಂಪಾ, ಫ್ಲೋರಿಡಾದಲ್ಲಿ ಆರಂಭಗೊಳ್ಳುತ್ತದೆ. ಇದು ರಾಜ್ಯದ ಮಧ್ಯಭಾಗದಿಂದ ನೇರವಾಗಿ ಒರ್ಲ್ಯಾಂಡೊ ಮೂಲಕ ಈಶಾನ್ಯದಿಕ್ಕಿನ ಮೂಲಕ ಸಾಗಿ ಡೇಟೊನ ಬೀಚ್‌ನಲ್ಲಿ ಕೊನೆಗೊಳ್ಳುತ್ತದೆ. ಇದು ಒರ್ಲ್ಯಾಂಡೊ ಉಪನಗರಕ್ಕೆ, ಡೌನ್‌ಟೌನ್ ಪ್ರದೇಶದ ಆಕರ್ಷಣೆಗಳು ಮತ್ತು ಎರಡೂ ಕರಾವಳಿಗಳಿಗೆ ಮುಖ್ಯ ಸಂಪರ್ಕವಾಗಿದೆ. ಹೀಗಾಗಿ I-4 ಸಾಮಾನ್ಯವಾಗಿ ಅತ್ಯಧಿಕ ಟ್ರಾಫಿಕ್ ಮತ್ತು ದಟ್ಟಣೆಯಿಂದ ಕೂಡಿರುತ್ತದೆ. I-4 ಅನ್ನು ಸ್ಟೇಟ್ ರೋಡ್ 400 ಎಂದೂ ಕರೆಯುತ್ತಾರೆ.
- ಈಸ್ಟ್-ವೆಸ್ಟ್ ಎಕ್ಸ್‌ಪ್ರೆಸ್‌ವೇ (ಟೋಲ್ 408) ಪೂರ್ವದಿಂದ ಪಶ್ಚಿಮ ಹೆದ್ದಾರಿಗೆ ಪ್ರಮುಖ ಮಾರ್ಗವಾಗಿದ್ದು, ಇದನ್ನು ಒರ್ಲ್ಯಾಂಡೊ ಆರೇಂಜ್ ಕೌಂಟಿ ಎಕ್ಸ್‌ಪ್ರೆಸ್‌ವೇ ಅಥಾರಿಟಿ ಯು ನಿರ್ವಹಣೆ ಮಾಡುತ್ತದೆ. ಈ ಹೆದ್ದಾರಿ I-4 ಅನ್ನು ಡೌನ್‌ಟೌನ್ ಒರ್ಲ್ಯಾಂಡೊದಲ್ಲಿ ಸಂಧಿಸುತ್ತದೆ. ಇದು ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯ ಪ್ರದೇಶವನ್ನೂ ಒಳಗೊಂಡಂತೆ ಪೂರ್ವ ಮತ್ತು ಪಶ್ಚಿಮದ ಉಪನಗರಗಳಿಂದ ಬರುವ ನಿವಾಸಿಗಳಿಗೆ ಮುಖ್ಯ ಸಂಪರ್ಕವಾಗಿದೆ. ಈ ಹೆದ್ದಾರಿಯು ಸೆಂಟ್ರಲ್ ಫ್ಲೋರಿಡಾ ಗ್ರೀನ್‌ವೇ (ಟೋಲ್ 417) ಮತ್ತು ಫ್ಲೋರಿಡಾಸ್ ಟರ್ನ್‌ಪೈಕ್ ಅನ್ನು ಮಾರ್ಗಮಧ್ಯದಲ್ಲಿ ಸಂಧಿಸುತ್ತದೆ. 2006ರ ಕೊನೆಯ ಭಾಗದಲ್ಲಿ I-4/408 ಇಂಟರ್‌ಚೇಂಜ್ ಹೆಚ್ಚುಕಡಿಮೆ ಪೂರ್ಣಗೊಂಡಿತ್ತು. ಇಲ್ಲಿ ಅಪಾರ ವಾಹನ ದಟ್ಟಣೆಯನ್ನು ಸ್ವಲ್ಪ ಕಡಿಮೆ ಮಾಡಲು ಅನೇಕ ಮೇಲು ಸೇತುವೆಗಳನ್ನು ಮತ್ತು ಕನೆಕ್ಟರ್‌ಗಳನ್ನು ನಿರ್ಮಿಸಲಾಗುತ್ತಿತ್ತು. ಏಜೆನ್ಸಿಯು ಇತ್ತೀಚೆಗಷ್ಟೆ ಲೇನ್ ವಿಸ್ತರಣೆಗಳು ಹೊಸ ಟೋಲ್ ಪ್ಲಾಜಾಗಳು ಮತ್ತು ಸೌಂಡ್ ಬ್ಯಾರಿಯರ್‌ಗಳನ್ನು ರಸ್ತೆಯುದ್ದಕ್ಕೂ ನಿರ್ಮಿಸಿದೆ. ಇವುಗಳಲ್ಲಿ ಇನ್ನೂ ಅನೇಕ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ.
- ಬೀಚ್‌ಲೈನ್ ಎಕ್ಸ್‌ಪ್ರೆಸ್‌ವೇ (ಟೋಲ್ 528)ಯು ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮುಖ್ಯ ಸಂಪರ್ಕವನ್ನು ಕಲ್ಪಿಸುತ್ತದೆ. ಜೊತೆಗೆ ಅಟ್ಲಾಂಟಿಕ್ ಕೋಸ್ಟ್‌ಗೆ, ವಿಶೇಷವಾಗಿ ಕೋಕೊವ ಬೀಚ್‌ಕೇಪ್ ಕನವರೆಲ್‌ಗೆ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ.
- ಸೆಂಟ್ರಲ್ಫ್ಲೋ ರಿಡಾ ಗ್ರೀನ್‌ವೇ (ಟೋಲ್ 417) ಪೂರ್ವ ಒರ್ಲ್ಯಾಂಡೊಗೆ ಮುಖ್ಯ ಹೆದ್ದಾರಿಯಾಗಿದೆ. ಈ ಹೆದ್ದಾರಿಯನ್ನು ಒರ್ಲ್ಯಾಂಡೊ ಆರೇಂಜ್ ಕೌಂಟಿ ಎಕ್ಸ್‌ಪ್ರೆಸ್‌ವೇ ಅಥಾರಿಟಿಯು ನಿರ್ವಹಣೆ ಮಾಡುತ್ತದೆ. ಜೊತೆಗೆ ಇದು ಒರ್ಲ್ಯಾಂಡೊದ ಪೂರ್ವದ ಬೆಲ್ಟ್‌ವೇ ಆಗಿದೆ. ಈ ಹೆದ್ದಾರಿಯು ಈಸ್ಟ್-ವೆಸ್ಟ್ ಎಕ್ಸ್‌ಪ್ರೆಸ್‌ವೇಯನ್ನು ಮತ್ತು ಬೀಚ್‌ಲೈನ್ ಎಕ್ಸ್‌ಪ್ರೆಸ್‌ವೇ (ಟೋಲ್ 528), ಸಂಧಿಸುತ್ತದೆ (ಟೋಲ್ 408), ಹಾಗೂ ಇಂಟರ್‌ಸ್ಟೇಟ್ 4ನಲ್ಲಿ ಆರಂಭಗೊಂಡು, ಅಲ್ಲಿಯೇ ಮುಕ್ತಾಯಗೊಳ್ಳುತ್ತದೆ.
- ಡೇನಿಯಲ್ ವೆಸ್ಟರ್ನ್ ಬೆಲ್ಟ್‌ವೇ (ಟೋಲ್429) ಒರ್ಲ್ಯಾಂಡೊದ ಪಶ್ಚಿಮದ ಬೆಲ್ಟ್‌ವೇ ಆಗಿ ಸೇವೆ ಒದಗಿಸುತ್ತದೆ. ಈ ಹೆದ್ದಾರಿಯು ವಾಲ್ಟ್ ಡಿಸ್ನಿ ವರ್ಲ್ಡ್ ಗೆ ಒರ್ಲ್ಯಾಂಡೊದ ವಾಯವ್ಯದ ಉಪನಗರಗಳಿಂದ ಅಪೋಪ್ಕ ಮಾರ್ಗವಾಗಿ ಫ್ಲೋರಿಡಾದ ಟರ್ನ್‌ಪೈಕ್‌ಅನ್ನೂ ಒಳಗೊಂಡು, "ಹಿಂಭಾಗದ ಪ್ರವೇಶ"ವನ್ನು ಒದಗಿಸುತ್ತದೆ.
- ಜಾನ್ ಲ್ಯಾಂಡ್ ಅಪೋಪ್ಕ ಎಕ್ಸ್‌ಪ್ರೆಸ್‌ವೇ(ಟೋಲ್414) ಇದು ಪೂರ್ವದಿಂದ ಪಶ್ಚಿಮಕ್ಕೆ ಒಂದು ಹೊಸ ಟೋಲ್‌ವೇ ಆಗಿದ್ದು, ಒರ್ಲ್ಯಾಂಡೊದ ಉತ್ತರ ಭಾಗಕ್ಕೆ ಸೇವೆ ಒದಗಿಸುತ್ತದೆ. ಇದರ ಮೊದಲನೇ ಹಂತವನ್ನು , 2009ರ ಫೆಬ್ರವರಿ 14ರಂದು ಆರಂಭಿಸಲಾಗಿದೆ. ಇದು US 441ದಿಂದ ಫ್ಲೋರಿಡಾ ಸ್ಟೇಟ್ ರೋಡ್ 429ವರೆಗೆ ವಿಸ್ತರಿಸಿದೆ. ಎರಡನೇ ಹಂತವು SR 429 ಅನ್ನು ಈಗಿನ ಇಂಟರ್‌ಸೆಕ್ಷನ್‌ನಿಂದ ಸಾಕಷ್ಟು ಮೈಲಿ ಪಶ್ಚಿಮದಲ್ಲಿ US 441ಗೆ ಜೋಡಿಸುತ್ತದೆ.
- ಫ್ಲೋರಿಡಾದ ಟರ್ನ್‌ಪೈಕ್ (ಟೋಲ್91) ಒಂದು ಪ್ರಮುಖವಾದ ಹೆದ್ದಾರಿಯಾಗಿದ್ದು, ಉತ್ತರ ಫ್ಲೋರಿಡಾವನ್ನು ಒರ್ಲ್ಯಾಂಡೊದೊಂದಿಗೆ ಸಂಪರ್ಕಿಸುತ್ತದೆ ಮತ್ತು ಮಿಯಾಮಿಯಲ್ಲಿ ಕೊನೆಗೊಳ್ಳುತ್ತದೆ.
ಭರಾಟೆಯ (ರಶ್) ಗಂಟೆಗಳು ಮತ್ತು ಟ್ರಾಫಿಕ್/ವಾಹನದಟ್ಟಣೆ
ಬದಲಾಯಿಸಿಒರ್ಲ್ಯಾಂಡೊ, ಬೇರೆ ಪ್ರಮುಖ ನಗರಗಳಂತೆ, ಪ್ರತಿದಿನ ಗ್ರಿಡ್‌ಲಾಕ್ ಮತ್ತು ಟ್ರಾಫಿಕ್ ಜಾಮ್‌ಗಳನ್ನು ಅನುಭವಿಸುತ್ತದೆ; ವಿಶೇಷವಾಗಿ ಸೆಮಿನೋಲ್ ಕೌಂಟಿ ಉತ್ತರದ ಉಪನಗರಗಳಿಂದ ಡೌನ್‌ಟೌನ್ನ ದಕ್ಷಿಣಕ್ಕೆ ಮತ್ತು ಆರೇಂಜ್ ಕೌಂಟಿಯ ಪೂರ್ವದ ಉಪನಗರಗಳಿಂದ ಡೌನ್‌ಟೌನಿಗೆ ವಾಹನದಟ್ಟಣೆ ಇರುತ್ತದೆ. ಡೌನ್‌ಟೌನ್‌ನ ದಕ್ಷಿಣ ಪ್ರವಾಸೀ ಜಿಲ್ಎಲಯಲ್ಲಿ ಕೂಡ ಅಪಾರ ವಾಹನ ದಟ್ಟಣೆ ಸಾಮಾನ್ಯವಾಗಿರುತ್ತದೆ. ಪೀಕ್ ಟ್ರಾಫಿಕ್ ಸಮಯವು ಹೆಚ್ಚಾಗಿ ವಾರದ ದಿನಗಳಲ್ಲಿ ಬೆಳಗ್ಗೆ (ಬೆಳಗ್ಗೆ ಏಳು ಗಂಟೆ ನಂತರ) ಮತ್ತು ಮಧ್ಯಾಹ್ನ (ನಾಲ್ಕು ಗಂಟೆ ನಂತರ) ಇರುತ್ತದೆ. ಪ್ರಯಾಣಿಕರಿಗೆ ವಿವಿಧ ಟ್ರಾಫಿಕ್ ಸಲಹಾ ಸಂಪನ್ಮೂಲಗಳು ಲಭ್ಯವಿವೆ. ಅವುಗಳಲ್ಲಿ 5-1-1ಗೆ ದೂರವಾಣಿ ಮಾಡುವುದೂ ಒಂದು (ಇದು ಉಚಿತ ಸ್ವಯಂಚಾಲಿತ ಟ್ರಾಫಿಕ್ ಸಲಹಾ ವ್ಯವಸ್ಥೆಯಾಗಿದ್ದು, ಇದನ್ನು ಫ್ಲೋರಿಡಾ ಡಿಪಾರ್ಟ್‌ಮೆಂಟ್ ಆಫ್ ಟ್ರಾನ್ಸ್‌ಪೋರ್ಟೇಶನ್ ಒದಗಿಸುತ್ತದೆ (ಎಫ್‌ಡಿಒಟಿ). ಇದನ್ನು 511ಕ್ಕೆ ಡಯಲ್ ಮಾಡುವ ಮೂಲಕ ಪಡೆಯಬಹುದು). ಅಥವಾ ಫ್ಲೋರಿಡಾ 511 ವೆಬ್ ಸೈಟ್‌ಗೆ ಭೇಟಿ ನೀಡಿ ಮಾಹಿತಿ ನೋಡಬಹುದು ಅಥವಾ ಮುಖ್ಯ ರೇಡಿಯೋ ಸ್ಟೇಶನ್‌ಗಳಲ್ಲಿ ಟ್ರಾಫಿಕ್ ವರದಿಯನ್ನು ಕೇಳುವುದರ ಮೂಲಕ ಪಡೆಯಬಹುದು. ಅಲ್ಲದೆ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿ ಪ್ರದರ್ಶಿಸುವ ಎಲೆಕ್ಟ್ರಾನಿಕ್ ಟ್ರಾಫಿಕ್ ಸಲಹೆ ಡಿಸ್‌ಪ್ಲೇ ಓದುವ ಮೂಲಕವೂ ಪಡೆಯಬಹುದು, (ಇವುಗಳನ್ನು ಡೈನಮಿಕ್ ಮೆಸೇಜ್ ಸೈನ್ ಎನ್ನುತ್ತಾರೆ, ಈ ಮಾಹಿತಿಯನ್ನೂ ಎಫ್‌ಡಿಒಟಿ ಒದಗಿಸುತ್ತದೆ).
ಒರ್ಲ್ಯಾಂಡೊ ಪ್ರಾದೇಶಿಕ ಟ್ರಾಫಿಕ್ ನಿರ್ವಹಣಾ ಕೇಂದ್ರ (ಅಥವಾ ಸಂಕ್ಷಿಪ್ತವಾಗಿ ಒರ್ಲ್ಯಾಂಡೊ ಆರ್‌ಟಿಎಂಸಿ) ಈ ಪ್ರದೇಶದಲ್ಲಿ ಟ್ರಾಫಿಕ್ ಕಾರ್ಯನಿರ್ವಹಣೆಗಳ ಕೇಂದ್ರೀಯ ಹಬ್ ಹಾಗೆ ಕೆಲಸ ಮಾಡುತ್ತದೆ. ಅದು ಇಂಟರ್‌ಸ್ಟೇಟ್ 4, ಇಂಟರ್‌ಸ್ಟೇಟ್ 95, OOCEA ಟೋಲ್ ರೋಡ್ಸ್ ಮತ್ತು ಡಿಒಟಿ'ಸ್ ಡಿಸ್ಟ್ರಿಕ್ಟ್ 5 ಉದ್ದಕ್ಕೆ ಇರುವ ಇನ್ನಿತರ ಪ್ರಮುಖ ರಸ್ತೆಗಳಲ್ಲಿರುವ ಟ್ರಾಫಿಕ್ ಪರಿಸ್ಥಿತಿಗಳನ್ನು ನಿರ್ವಹಣೆ ಮಾಡುತ್ತದೆ. ನಂತರ ಡೈನಮಿಕ್ ಮೆಸೇಜ್ ಸೈನ್ಸ್ ಹಾಗೂ ಫ್ಲೋರಿಡಾ 5-1-1 ವ್ಯವಸ್ಥೆ ಮೂಲಕ ವಾಹನ ಚಾಲಕರಿಗೆ ಮಾಹಿತಿಯನ್ನು ರವಾನಿಸುತ್ತದೆ.
ಜೊತೆಗೆ ಇಂಟರ್‌ಸ್ಟೇಟ್ 4 ನಲ್ಲಿ I-4 ರೋಡ್ ರೇಂಜರ್ಸ್ ಎಂದು ಕರೆಯಲಾಗುವ LYNX ಸಹಾಯ ವ್ಯವಸ್ಥೆಯನ್ನು ರಸ್ತೆಬದಿಯಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ. ಈ ರಸ್ತೆ ರೇಂಜರ್ಸ್‌ಗಳು ವಾರದ ದಿನಗಳಲ್ಲಿ ಟೈರ್ ಬದಲಿಸಲು, ಅಥವಾ ಮತ್ತೇನಾದರೂ ವಾಹನಕ್ಕೆ ಸಹಾಯ ಬೇಕಿರುವ ವಾಹನಸವಾರರಿಗೆ ಸಹಾಯ ಮಾಡಲೆಂದು ಗಸ್ತು ತಿರುಗುತ್ತಿರುತ್ತಾರೆ. ಈ ರೋಡ್ ರೇಂಜರ್‌ಗಳು ವಾಹನಗಳ ಅಪಘಾತವಾದಾಗ ಹೆದ್ದಾರಿಯಲ್ಲಿ ಪೊದೆಗಳನ್ನು ತೆಗೆದುಹಾಕಲು ಮತ್ತು ಟ್ರಾಫಿಕ್‌ಅನ್ನು ಬೇರೆಡೆ ತಿರುಗಿಸಲು ಸಹಾಯ ಮಾಡುತ್ತಾರೆ. ಈ ಟ್ರಕ್‌ಗಳಿಗೆ ಕೆಂಪು ಮತ್ತು ಬಿಳಿಯ ಬಣ್ಣವನ್ನು ಬಳಿದಿರುತ್ತಾರೆ ಮತ್ತು ಅದರ ಮೇಲೆ FDOT ಸೀಲ್‌ಗಳಿರುತ್ತವೆ, ಇದರಿಂದ ತುಂಬ ದೂರದಿಂದಲೂ ಈ ಟ್ರಕ್‌ಗಳನ್ನು ತಕ್ಷಣ ಗುರುತಿಸಬಹುದು. ಇತ್ತೀಚೆಗೆ, ಸ್ಟೇಟ್ ಫಾರ್ಮ್ ಇನ್ಷುರೆನ್ಸ್ ಕಂಪನಿಯು ಇದಕ್ಕೆ ಹಣಕಾಸು ನೀಡುವುದನ್ನು ಮತ್ತು ಪ್ರಾಯೋಜಕತ್ವ ಯೋಜನೆಯನ್ನು ತೆಗೆದುಕೊಂಡಿದೆ.[೩೪] ಪ್ರತಿ ಟ್ರಕ್‌ನ ಮೇಲುಭಾಗದಲ್ಲಿ ಒಂದು ಬಾಣದ ಗುರುತು ಅಥವಾ ತುರ್ತು ಸಂದೇಶವನ್ನು ಸಾರುವ ದೊಡ್ಡ ಲೈಟ್ ಹಾಕಿದ ಮೆಸೇಜ್ ಬೋರ್ಡ್ ಇರುತ್ತದೆ. ಟೋಲ್ ರೋಡ್‌ಗಳು ಇದೇ ಬಗೆಯ ಸೇವೆಯನ್ನು ಹೊಂದಿವೆ. ಅದನ್ನು ಒಒಸಿಇಎ (OOCEA)ಯು ಟೋಲ್ ಶುಲ್ಕದ ಮೂಲಕ ಈ ಸೌಲಭ್ಯ ಒದಗಿಸುತ್ತದೆ.
ಫ್ಲೋರಿಡಾದ ಟರ್ನ್‌ಪೈಕ್ ಎಂಟರ್‌ಪ್ರೈಸ್ ತನ್ನದೇ ಸ್ವಂತ ರೋಡ್ ಮ್ಯಾನೇಜರ್ ವ್ಯವಸ್ಥೆಯನ್ನು ಹೊಂದಿದೆ. I-4 ಅಥವಾ ಒಒಸಿಇಎ ಟೋಲ್ ರೋಡ್ ನೆಟ್‌ವರ್ಕ್‌ನ ರೋಡ್‌ರೇಂಜರ್‌ಗಳು ಫ್ಲೋರಿಡಾದ ಟರ್ನ್‌ಪೈಕ್ ಎಂದು ಕರೆಯಲಾಗುವ ಸ್ಟೇಟ್ ರೋಡ್ 91ನಲ್ಲಿರುವ ವಾಹನಚಾಲಕರಿಗೆ ಪ್ರತಿಕ್ರಿಯಿಸುವುದಿಲ್ಲ.
ರೈಲು
ಬದಲಾಯಿಸಿಒರ್ಲ್ಯಾಂಡೊ ಪ್ರದೇಶಕ್ಕೆ ಒಂದು ರೈಲುಮಾರ್ಗವು ಸೇವೆ ಒದಗಿಸುತ್ತದೆ. ಅದೆಂದರೆ ಸಿಎಸ್‌ಎಕ್ಸ್(CSX) ಟ್ರಾನ್ಸ್‌ಪೋರ್ಟೇಶನ್ ನ ಎ ಲೈನ್ (ಮೊದಲಿನ ಅಟ್ಲಾಂಟಿಕ್ ಕೋಸ್ಟ್ ಲೈನ್ ರೈಲ್‌ರೋಡ್ನ ಮುಖ್ಯ ಮಾರ್ಗ), ಮತ್ತು ಫ್ಲೋರಿಡಾ ಸೆಂಟ್ರಲ್ ರೈಲ್‌ರೋಡ್ ಸೇವೆ ಒದಗಿಸುವ ಕೆಲವು ರೈಲುಗಳು. ಆಮ್‌ಟ್ರಾಕ್ ಪ್ರಯಾಣಿಕ ಸೇವೆಯು ಸಿಎಸ್‌ಎಕ್ಸ್ ಎ ಮಾರ್ಗದಲ್ಲಿ ಸಾಗುತ್ತದೆ. ಈ ರೈಲುಮಾರ್ಗಗಳ ನಕಾಶೆ ಯನ್ನು ಕೂಡ ನೋಡಿ.
ಆಮ್‌ಟ್ರಾಕ್ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಸೇವೆಯು ಡೌನ್‌ಟೌನಿನ್ ದಕ್ಷಿಣಕ್ಕಿರುವ ಒರ್ಲ್ಯಾಂಡೊ ಆಮ್‌ಟ್ರಾಕ್ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ. ಮಿಶನ್ ರಿವೈವಲ್-ಸ್ಟೈಲ್ ಸ್ಟೇಶನ್ ಅನ್ನು 1927ರಿಂದ ನಿರಂತರವಾಗಿ ಬಳಸಲಾಗುತ್ತದೆ.[೩೫] ಮೊದಲಿಗೆ ಅಟ್ಲಾಂಟಿಕ್ ಕೋಸ್ಟ್ ಮಾರ್ಗಕ್ಕಾಗಿ, ನಂತರ ಸೀಬೋರ್ಡ್ ಕೋಸ್ಟ್ ಲೈನ್ ರೈಲ್‌ರೋಡ್ ಗಾಗಿ ಬಳಸಲಾಗುತ್ತಿತ್ತು. (ಇದರ ಸಂಕೇತವನ್ನು ಇನ್ನೂ ನಿಲ್ದಾಣದ ಮುಖ್ಯ ಪ್ರವೇಶದಲ್ಲಿ ಪ್ರದರ್ಶಿಸಲಾಗುತ್ತಿದೆ) ಆಮ್‌ಟ್ರಾಕ್‌ನ ಸಿಲ್ವರ್ ಮೆಟೆರ್ ಮತ್ತು ಸಿಲ್ವರ್ ಸ್ಟಾರ್ ಒರ್ಲ್ಯಾಂಡೊಗೆ ದಿನಕ್ಕೆ ನಾಲ್ಕು ಬಾರಿ ಸೇವೆ ಒದಗಿಸುತ್ತವೆ. ನ್ಯೂಯಾರ್ಕ್ ನಗರಕ್ಕೆ ಉತ್ತರದಲ್ಲಿರುವ ಸ್ಥಳಗಳಿಗೆ ಎರಡು ಬಾರಿ ಮತ್ತು ಮಿಯಾಮಿಗೆ ದಕ್ಷಿಣದಲ್ಲಿರುವ ಸ್ಥಳಗಳಿಗೆ ಎರಡು ಬಾರಿ ಈ ರೈಲುಗಳು ಸೇವೆ ಒದಗಿಸುತ್ತವೆ. ಒರ್ಲ್ಯಾಂಡೊ ಆಮ್‌ಟ್ರಾಕ್ ಥ್ರುವೆ ಮೋಟಾರ್‌ಕೋಚ್ ಬಸ್ ಸೇವೆಯ ಟ್ರಾನ್ಸ್‌ಫರ್ ಹಬ್ ಕೂಡ ಆಗಿದೆ. ರಾಜ್ಯದಲ್ಲಿ ಒರ್ಲ್ಯಾಂಡೊ ಸ್ಟೇಶನ್ ಅತಿಹೆಚ್ಚು ಸಂಖ್ಯೆಯ ಆಮ್‌ಟ್ರಾಕ್ ಸೇವೆಯನ್ನು ಹೊಂದಿದೆ. ಇದಕ್ಕೆ ಅಪವಾದವೆಂದರೆ ಹತ್ತಿರದ ಸ್ಯಾನ್‌ಫೋರ್ಡ್‌ನಲ್ಲಿರುವ ಆಟೋ ಟ್ರೈನ್ ಡಿಪೋ.[೩೬]
ಚಾರಿತ್ರಿಕವಾಗಿ, ಒರ್ಲ್ಯಾಂಡೊದ ಪ್ರಮುಖ ರೈಲುಮಾಗ್ ನಿಲ್ದಾಣಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ :
- ಅಟ್ಲಾಂಟಿಕ್ ಕೋಸ್ಟ್ ಲೈನ್ ರೈಲ್‌ರೋಡ್ ಒರ್ಲ್ಯಾಂಡೊ ಸ್ಟೇಶನ್ (ಈಗ ಚರ್ಚ್ ಸ್ಟ್ರೀಟ್ ಸ್ಟೇಶನ್, ಇದೊಂದು ವ್ಯಾಪಾರವಹಿವಾಟು ಬೆಳವಣಿಗೆ )
- ಸೀಬೋರ್ಡ್ ಏರ್‌ಲೈನ್ ರೈಲ್‌ರೋಡ್ ಒರ್ಲ್ಯಾಂಡೊ ಸ್ಟೇಶನ್ (ಸೆಂಟ್ರಲ್ ಅವೆನ್ಯೂ ಸ್ಟೇಶನ್; 1898-1955.)
ಪ್ರಯಾಣಿಕ ರೈಲುಗಳು (ಕಮ್ಯೂಟರ್ ರೈಲ್)
ಬದಲಾಯಿಸಿ2005ರಲ್ಲಿ, ಒಕ್ಕೂಟ ಮತ್ತು ರಾಜ್ಯ ಹಣಕಾಸು ಸನ್‌ರೈಲ್ ಸ್ಥಾಪನೆಗೆ ಅನುದಾನ ನೀಡಿವೆ. ಇದು ಒಂದು ಸ್ಥಳೀಯ ಪ್ರಯಾಣಿಕ ರೈಲು ಸೇವೆಯಾಗಿದ್ದು, ಡೆಲ್ಯಾಂಡ್ ಮತ್ತು ಪೊಯಿನ್ಸಿಯನ ಮಧ್ಯದ ಸಿಎಸ್‌ಎಕ್ಸ್(CSX) A ಮಾರ್ಗದ ಹಳಿಗಳ ಮೇಲೆ ಸಾಗುತ್ತದೆ. ಇದು ಡೌನ್‌ಟೌನ್ ಪ್ರದೇಶ ಮತ್ತು ಸುತ್ತಲಿನ ನಗರ ನೆರೆಹೊರೆ ಪ್ರದೇಶದ ಮೂಲಕ ಸಾಗುತ್ತದೆ. ಈ ಸೇವೆಯು I-4 ಕಾರಿಡಾರ್‌ನಲ್ಲಿ ವಾಹನದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಡೌನ್‌ಟೌನ್ ಒರ್ಲ್ಯಾಂಡೊ ಮತ್ತು ಸೆಮಿನೋಲ್ ಮತ್ತು ವೊಲುಸಿಯ ಕೌಂಟಿಗಳ ಉಪನಗರ ಸಮುದಾಯಗಳ ಮಧ್ಯೆ ವಾಹನದಟ್ಟಣೆ ಕಡಿಮೆಯಾಗಬಹುದು. ಒಕ್ಕೂಟ ಮತ್ತು ರಾಜ್ಯ ಹಣಕಾಸು ಅನುದಾನವು ಹಳಿಗಳ ನವೀಕರಣ ಮತ್ತು ಮಾರ್ಗದಲ್ಲಿ ಸ್ಟೇಶನ್‌ಗಳ ನಿರ್ಮಾಣಕ್ಕಾಗಿ ಅಂದಾಜು 400 ಮಿಲಿಯನ್ ಡಾಲರ್‌ಗಳಲ್ಲಿ ಸುಮಾರು ಶೇ. 80ರಷ್ಟನ್ನು ಈಗಾಗಲೇ ಖರ್ಚು ಮಾಡಿದೆ. ಇದರಲ್ಲಿ ಭಾಗಿಯಾಗಿರುವ ಕೌಂಟಿಗಳು ಸ್ಥಳೀಯ ಹೊಂದಾಣಿಕೆ ಅನುದಾನವನ್ನು 2007ರಲ್ಲಿ ಬಿಡುಗಡೆ ಮಾಡಿವೆ ಮತ್ತು ಈ ಮಾರ್ಗವು 2011ರಲ್ಲಿ ಕಾರ್ಯರಂಭ ಮಾಡಬೇಕೆಂದು ಯೋಜಿಸಲಾಗಿದೆ.[೩೭] ಆದರೆ, ಅಂತಿಮವಾಗಿ ಯೋಜನೆಯನ್ನು ಫ್ಲೋರಿಡಾ ಸ್ಟೇಟ್ ಸೆನೆಟ್ 2008ರಲ್ಲಿ ಮತಗಳ ಮೂಲಕ ಕೈಬಿಟ್ಟಿತು. ಪುನಾ 2009ರಲ್ಲಿ ಒಂದು ತಿದ್ದುಪಡಿಯನ್ನು ಮಾಡಿ, ರೈಲುವ್ಯವಸ್ಥೆಗೆ 200 ಮಿಲಿಯನ್ ಡಾಲರ್ ವಿಮೆ ಪಾಲಿಸಿಯನ್ನು ಮಾಡಿ, ಮಂಜೂರಾತಿ ನೀಡಲಾಯಿತು. ಯೋಜನೆ ನಿಷ್ಪ್ರಯೋಜಕವಾದೀತು ಎಂಬ ಆತಂಕ ಹೆಚ್ಚುತ್ತಿದ್ದರೂ, ಗಡುವು ವಿಸ್ತರಣೆ ಮತ್ತು ಸಿಎಸ್‌ಎಕ್ಸ್‌ನೊಂದಿಗೆ ಹೊಸ ವಿಮೆ ವ್ಯವಸ್ಥೆ ಮಾಡಿರುವುದು ಸನ್‌ರೈಲ್‌ಅನ್ನು ಕೊನೆಗೂ ಪೂರ್ಣಗೊಳಿಸಲಾಗುತ್ತದೆ ಎಂಬ ಹೊಸ ಭರವಸೆಯನ್ನು ಹುಟ್ಟಿಸಿದೆ.[೩೮] 2009ರ ಡಿಸೆಂಬರ್‌ನಲ್ಲಿ ನಡೆದ ವಿಶೇಷ ಅಧಿವೇಶದಲ್ಲಿ, ಫ್ಲೋರಿಡಾ ಲೆಜಿಸ್ಲೇಚರ್ ಫ್ಲೋರಿಡಾಗೆ ಒಂದು ಪ್ರಯಾಣಿಕ ರೈಲನ್ನು ಮಂಜೂರು ಮಾಡಿದೆ. ಇದಕ್ಕೆ ತ್ವರಿತಗತಿಯ ಒಕ್ಕೂಟದ ಹಣಕಾಸು ಸಹಾಯವೂ ದೊರೆಲಿದೆ.
ಒರ್ಲ್ಯಾಂಡೊ ಪ್ರದೇಶಕ್ಕೆ ಚಿಕ್ಕ ಹಗುರು ರೈಲು ಸೇವೆಯನ್ನು ಒದಗಿಸುವ ಪ್ರಯತ್ನಗಳನ್ನು ಒಮ್ಮೆ ಪರಿಗಣಿಸಲಾಗಿತ್ತು, ಆದರೆ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು.
ಅತಿವೇಗದ ರೈಲುಗಳು
ಬದಲಾಯಿಸಿ2010ರ ಜನವರಿ 28ರಂದು, ಅಧ್ಯಕ್ಷ ಒಬಾಮಾ ಫ್ಲೋರಿಡಾ ರಾಜ್ಯಾದ್ಯಂತ ಅತಿವೇಗದ ರೈಲು ವ್ಯವಸ್ಥೆಯನ್ನು ಕಲ್ಪಿಸಲು ಮತ್ತು ಒರ್ಲ್ಯಾಂಡೊ ಅದರ ಸೆಂಟ್ರಲ್ ಹಬ್ ಆಗಿ ನಿರ್ಮಿಸಲು, 1.25 ಬಿಲಿಯನ್ ಡಾಲರ್ ನೀಡುವುದಾಗಿ ಪ್ರಕಟಿಸಿದರು. ಮೊದಲ ಹಂತವು ಒರ್ಲ್ಯಾಂಡೊ ಮತ್ತು ತಾಂಪಾ, ಫ್ಲೋರಿಡಾವನ್ನು ಜೋಡಿಸುತ್ತದೆ ಮತ್ತು 2014ಗೆ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡನೇ ಹಂತವು ಒರ್ಲ್ಯಾಂಡೊ ಮತ್ತು ಮಿಯಾಮಿ, ಫ್ಲೋರಿಡಾವನ್ನು ಜೋಡಿಸಲಿದೆ.[೩೯]
ಬಸ್ಸು
ಬದಲಾಯಿಸಿಪ್ರಾದೇಶಿಕ
ಬದಲಾಯಿಸಿಒರ್ಲ್ಯಾಂಡೊ ನಗರದಲ್ಲಿ ಎಲ್‌ವೈಎನ್‌ಎಕ್ಸ್ (LYNX) ಬಸ್ ಸೇವೆಯಿದೆ; ಇವು ಸ್ಥಳೀಯ ಪ್ರಯಾಣಿಕ ಸೇವೆಯನ್ನು ಒದಗಿಸುತ್ತಿದ್ದು, ಐದು-ಕೌಂಟಿ ಪ್ರದೇಶಗಳನ್ನು ಒಳಗೊಳ್ಳುತ್ತದೆ: ಆರೇಂಜ್ , ಸೆಮಿನೋಲ್, ಒಸ್ಕೆಯೊಲ, ಸರೋವರ, ಮತ್ತು ವೊಲುಸಿಯ.[೪೦] ಬಸ್ಸಿನ ಮಾರ್ಗ ವೇಳಾಪಟ್ಟಿಯನ್ನು ಮತ್ತು ನಕಾಶೆಗಳನ್ನು LYNX Official Website ನಲ್ಲಿ ನೋಡಬಹುದು.
ರಾಷ್ಟ್ರೀಯ
ಬದಲಾಯಿಸಿಗ್ರೇಹೌಂಡ್ ಲೈನ್ಸ್ ಇಂಟರ್‌ಸಿಟಿ ಬಸ್ ಸೇಎವಗಳನ್ನು ಒರ್ಲ್ಯಾಂಡೊದಿಂದ ದೇಶದ ಬೇರೆ ಬೇರೆ ಸ್ಥಳಗಳಿಗೆ ಒದಗಿಸುತ್ತದೆ. ಒರ್ಲ್ಯಾಂಡೊ ಗ್ರೇಹೌಂಡ್ ಸ್ಟೇಶನ್ ಡೌನ್‌ಟೌನ್ ಒರ್ಲ್ಯಾಂಡೊದ ಪಶ್ಚಿಮಕ್ಕಿದೆ.
ಅವಳಿ ನಗರಗಳು
ಬದಲಾಯಿಸಿಒರ್ಲ್ಯಾಂಡೊ ಒಂಬತ್ತು ಅಂತಾರಾಷ್ಟ್ರೀಯ ಸಹನಗರಗಳನ್ನು ಹೊಂದಿದೆ. ಅವುಗಳನ್ನು ನಗರ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವ್ಯವಹಾರಗಳ ಕಚೇರಿಯಲ್ಲಿ ಪಟ್ಟಿ ಮಾಡಲಾಗಿದೆ. [೨] Archived 2010-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ವಲ್ಲಡೊಲಿಡ್, , ಸ್ಪೈನ್
- ಕ್ಯುರಿಟಿಬ, ಬ್ರೆಜಿಲ್
- ಗಿಲಾನ್ , ಚೀನಾ
- ಒರೆನ್‌ಬರ್ಗ್ , ರಷ್ಯಾ
- ರೆಕ್ಜನೆಸ್ಬೆಯರ್ , ಐಸ್‍ಲ್ಯಾಂಡ್ಐಸ್‌ಲ್ಯಾಂಡ್ /2}
- ಮರ್ನೆ-ಲ-ವಲ್ಲೆ , ಫ್ರಾನ್ಸ್
- ತಿಯಾನನ್ ಸಿಟಿ , ತೈವಾನ್
- ಉರಯಸು , ಜಪಾನ್
- ಮಾಂಟೆರ್ರಿ, ಮೆಕ್ಸಿಕೋ
- ಬೆತ್ಲೆಹೆಮ್ , ಪ್ಯಾಲಸ್ಟೈನ್
- ವಿಯೆಂಟಿಯನೆ , ಲಾವೋಸ್
- ಬೆತ್ಲೆಹೆಮ್ , ಪ್ಯಾಲಸ್ಟೈನ್
- ಮಾಂಟೆರ್ರಿ, ಮೆಕ್ಸಿಕೋ
- ಉರಯಸು , ಜಪಾನ್
- ತಿಯಾನನ್ ಸಿಟಿ , ತೈವಾನ್
- ಮರ್ನೆ-ಲ-ವಲ್ಲೆ , ಫ್ರಾನ್ಸ್
- ರೆಕ್ಜನೆಸ್ಬೆಯರ್ , ಐಸ್‍ಲ್ಯಾಂಡ್ಐಸ್‌ಲ್ಯಾಂಡ್ /2}
- ಒರೆನ್‌ಬರ್ಗ್ , ರಷ್ಯಾ
- ಗಿಲಾನ್ , ಚೀನಾ
- ಕ್ಯುರಿಟಿಬ, ಬ್ರೆಜಿಲ್
ಮರ್ನೆ-ಲ-ವಲ್ಲೆ, ಅನಹೈಮ್, ಮತ್ತು ಉರಯಸು ಒರ್ಲ್ಯಾಂಡೊಗೆ ಇನ್ನಿತರ ಡಿಸ್ನಿ ಥೀಮ್ ಪಾಕ್‌ಗಳ ಹಾಗೆ ಸಂಬಂಧ ಹೊಂದಿವೆ. (ಇವು ಅನುಕ್ರಮವಾಗಿ ಡಿಸ್ನಿಲ್ಯಾಂಡ್ ರೆಸಾರ್ಟ್ ಪ್ಯಾರಿಸ್, ಡಿಸ್ನಿಲ್ಯಾಂಡ್ ರೆಸಾರ್ಟ್, ಮತ್ತು ಟೋಕ್ಯೋ ಡಿಸ್ನಿಲ್ಯಾಂಡ್ ). ಸ್ವಿಂಡನ್ ಟೌನ್, ಯುಕೆ, ಕೂಡ ಒರ್ಲ್ಯಾಂಡೊ ಜೊತೆ ಅವಳಿ ನಗರದ ಸಂಬಂಧ ಹೊಂದಿದೆ.
ವಿದೇಶಾಂಗ ಕಾನ್ಸುಲೇಟ್‌ಗಳು
ಬದಲಾಯಿಸಿಒರ್ಲ್ಯಾಂಡೊ ಅತ್ಯಂತ ನಿಬಿಡವಾದ ಅಂತಾರಾಷ್ಟ್ರೀಯ ಪ್ರವಾಸೀ ತಾಣವಾಗಿದ್ದು, ಬೆಳೆಯುತ್ತಿರುವ ಉದ್ಯಮಗಳು ಮತ್ತು ವಾಣಿಜ್ಯದ ನೆಲೆಯಾಗಿರುವುರಿಂದ, ಮೆಕ್ಸಿಕೋ ಮತ್ತು ಬ್ರಿಟನ್ ಇಲ್ಲಿ ತಮ್ಮ ಕಾನ್ಸುಲೇಟ್‌ಗಳನ್ನು ತೆರೆದಿವೆ.[೪೧][೪೨] ಬೇರೆ ದೇಶಗಳ ಕಾನ್ಸುಲೇಟ್‌ಗಳು ಕೂಡ ಒರ್ಲ್ಯಾಂಡೊದಲ್ಲಿ ಕಾರ್ಯನಿರ್ವಹಿಸುತ್ತಿವೆ; ಅವೆಂದರೆ ಅರ್ಜಂಟೀನಾ, ಹೈಟಿ, ಫ್ರಾನ್ಸ್, ಪೋರ್ಚುಗಲ್, ನೆದರ್‌ಲ್ಯಾಂಡ್ಸ್, ಐವರಿಕೋಸ್ಟ್ , ಮತ್ತು ಜಮೈಕಾ. ಇದರಿಂದಾಗಿ, ಒರ್ಲ್ಯಾಂಡೊ ಈಗ ಫ್ಲೋರಿಡಾದಲ್ಲಿ ಮಿಯಾಮಿಯ ನಂತರ ಅತ್ಯಧಿಕ ಸಂಖ್ಯೆಯ ವಿದೇಶಾಂಗ ಕಾನ್ಸುಲೇಟ್‌ಗಳನ್ನು ಹೊಂದಿದ ಎರಡನೇ ನಗರವಾಗಿದೆ.[೪೩]
ಜನಪ್ರಿಯ ಸಂಸ್ಕೃತಿಯಲ್ಲಿ
ಬದಲಾಯಿಸಿ1950ರ ಅಮೆರಿಕದ ಕಾದಂಬರಿಯ ಕೆಲವು ಭಾಗಗಳು, ಪ್ಯಾಟ್ ಫ್ರಾಂಕ್ ಬರೆದಿರುವ ಅಲಾಸ್, ಬೆಬಿಲಾನ್ ಒರ್ಲ್ಯಾಂಡೊದಲ್ಲಿ ನಡೆಯುತ್ತವೆ. ಅದರಲ್ಲಿ (ಈಗ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣ)ವಾಗಿರುವ ಮೆಕಾಯ್ ವಾಯುಪಡೆ ನೆಲೆ ಯ ಚಿತ್ರಣವೂ ಇದೆ. ನಂತರದಲ್ಲಿ ಒರ್ಲ್ಯಾಂಡೊ ಎರಡು ಅಣು ಬಾಂಬ್ ಸ್ಫೋಟಕ್ಕೆ, ಒಂದು ಡೌನ್‌ಟೌನಿನಲ್ಲಿ ಮತ್ತು ಒಂದು ವಾಯುಪಡೆ ನೆಲೆಯಲ್ಲಿ ಎರಡು ಸ್ಫೋಟಕ್ಕೆ ಸಿಕ್ಕು ನಾಶವಾದಂತೆ ಚಿತ್ರಿಸಲಾಗಿದೆ. ಸೀರೀಸ್‌ನಲ್ಲಿರುವ ಮುಖ್ಯ ಪಟ್ಟಣವೆಂದರೆ, ಫೋರ್ಟ್ ರಿಪೋಸ್, ಅದು ಹತ್ತಿರದ ಮೌಂಟ್ ಡೋರಾದಲ್ಲಿದೆ.
ಕಡಿಮೆ ಬಜೆಟ್ ಚಲನಚಿತ್ರಗಳಾದ ಅರ್ನೆಸ್ಟ್ ಸೇವ್ಸ್ ಕ್ರಿಸ್‌ಮಸ್ , Larry the Cable Guy: Health Inspector , ಮತ್ತು ನೆವರ್ ಬ್ಯಾಕ್ ಡೌನ್ ಸಿನಿಮಾಗಳು ಒರ್ಲ್ಯಾಂಡೊದಲ್ಲಿಯೇ ನಡೆಯುತ್ತವೆ ಮತ್ತು ಇಲ್ಲಿಯೇ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಒರ್ಲ್ಯಾಂಡೊದಲ್ಲಿ ಚಿತ್ರೀಕರಣಗೊಂಡ ಇನ್ನಿತರ ಮುಖ್ಯ ಚಲನಚಿತ್ರಗಳು ಎಂದರೆ ಪ್ಯಾಸೆಂಜರ್ 57 , ಡಿ.ಎ.ಆರ್.ವೈ.ಎಲ್.(D.A.R.Y.L.) , ಜಾಸ್ 3 , ಮೈ ಗರ್ಲ್ , ಪೇರೆಂಟ್‌ಹುಡ್ , ಪ್ರಾಬ್ಲೆಮ್ ಚೈಲ್ಡ್ 2 , ಲೆಥಲ್ ವೆಪನ್ 3 , ಡೆಡ್ ಪ್ರೆಸಿಡೆಂಟ್ಸ್ , ದಿ ವಾಟರ್‌ಬಾಯ್ , ಆಲಿವ್ ಜ್ಯೂಸ್ , ಮತ್ತು ಮಾನ್ಸ್‌ಟರ್ .
ತೆರೆಕಾಣಬೇಕಿರುವಟ್ರಾನ್ಸ್‌ಫಾರ್ಮರ್ಸ್ 3 ಸರಣಿಯ ಕೆಲವು ದೃಶ್ಯಗಳನ್ನು ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ 2010ರ ಅಕ್ಟೋಬರ್ ಆರಂಭದಲ್ಲಿ ಚಿತ್ರೀಕರಿಸಲಾಗಿದೆ.[೪೪]
ದೂರದರ್ಶನ ಸರಣಿ ಕೋಚ್ ನಲ್ಲಿ ಒರ್ಲ್ಯಾಂಡೊದ ಫ್ಲೋರಿಡಾ ಬೌಲ್ ಸ್ಟೇಡಿಯಂನ ಹೊರಾಂಗಣದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ, ಸಿಟ್ರಸ್ ಬೌಲ್ ಕಾಲ್ಪನಿಕ ಒರ್ಲ್ಯಾಂಡೊ ಬ್ರೆಕರ್ಸ್ ಫ್ರಾಂಚೈಸ್‌ನ ಸರಣಿಯ ಅಂತಿಮ ಎರಡು ಋತುಗಳಿಗೆ ಸ್ಟೇಡಿಯಂ ಆಗಿತ್ತು.
ಒರ್ಲ್ಯಾಂಡೊ ಅನೇಕ ರೆಕಾರ್ಡಿಂಗ್ ಸ್ಟುಡಿಯೋಗಳು ಮತ್ತು ಚಿತ್ರನಿರ್ಮಾಪಕರಿಗೆ ನೆಲೆಯಾಗಿದೆ. ಇದು 1990ರ ಮಧ್ಯಭಾಗದ ಬಾಯ್ ಬ್ಯಾಂಡ್ ಹುಚ್ಚಿಗೂ ಕಾರಣವಾಗಿತ್ತು. ದಿ ಬ್ಯಾಕ್‌ಸಟ್ರೀಟ್ ಬಾಯ್ಸ್ , ಎನ್‌ಸಿಂಕ್(NSync), ಮತ್ತು ಒ-ಟೌನ್ (O-Town) ದೇಶದೆಲ್ಲೆಡೆ ಯಶಸ್ಸು ಗಳಿಸುವ ಮೊದಲು ಒರ್ಲ್ಯಾಂಡೊದಲ್ಲಿ ಆರಂಭಗೊಂಡಿದ್ದವು. ಪರ್ಯಾಯ ಗುಂಪುಗಳಾದ ಮ್ಯಾಚ್‌ಬಾಕ್ಸ್ ಟ್ವೆಂಟಿ ಮತ್ತು ಸೆವೆನ್ ಮೇರಿ ಥ್ರೀ ಗುಂಪುಗಳು ಮತ್ತು ಕ್ರಿಶ್ಚಿಯನ್ ಹಿಪ್-ಹಾಪ್ ಪ್ರದರ್ಶನ ಬ್ರೂಪ್ 1 ಕ್ರ್ಯೂಗಳು ಒರ್ಲ್ಯಾಂಡೊ ಮೂಲದವು. ಫ್ಲೋರಿಡಾ ಬ್ರೇಕ್‌ಬೀಟ್ ಇಲ್ಲಿಯೇ ಹುಟ್ಟಿದ್ದು, ಜೊತೆಗೆ ಪ್ರಮುಖ ಡಿಜೆಗಳಾದ ಡಿಜೆ ಐಸೆ ಮತ್ತು ಡಿಜೆ ಬೇಬಿ ಆನ್ನೆ ಒರ್ಲ್ಯಾಂಡೊದವರಾಗಿದ್ದಾರೆ. ಅವರು ಇನ್ನೂ ಒರ್ಲ್ಯಾಂಡೊ ಕ್ಲಬ್‌ಗಳಲ್ಲಿ ಸುತ್ತಾಡುತ್ತಿರುತ್ತಾರೆ. ಒರ್ಲ್ಯಾಂಡೊ ಬಹಳ ಪ್ರಬಲವಾದ ಮೆಟಲ್ ದೃಶ್ಯಾವಳಿಯನ್ನೂ ಹೊಂದಿದೆ, ಉದಾಹರಣೆಗೆ ಡೆತ್ (ಮೆಟಲ್ ಬ್ಯಾಂಡ್)ನಂತಹ ಬ್ಯಾಂಡ್‌ಗಳು.
ಅಗ್ಲಿ ಅಮೆರಿಕನ್ಸ್ ತಂಡದ "ಒರ್ಲ್ಯಾಂಡೊ" ಹಾಡುಗಳು , ಕಿಲೊವ್ಯಾಟ್‌ಅವರ್ಸ್ ತಂಡದ "ವೆಲ್‌ಕಮ್ ಟು ಒರ್ಲ್ಯಾಂಡೊ" ಮತ್ತು ಸ್ಮೈಲ್ಜ್ & ಸೌತ್‌ಸ್ಟಾರ್ ತಂಡದ "ಒರ್ಲ್ಯಾಂಡೊ", ಈ ಎಲ್ಲವೂ ಒರ್ಲ್ಯಾಂಡೊ ನಗರವನ್ನು ಆಧರಿಸಿವೆ. ವೈಕ್ಲೆಫ್ ಜೀನ್ ಅವರ "ಥಗ್ ಏಂಜೆಲ್ಸ್" ಮತ್ತು "ಪರ್‌ಫೆಕ್ಟ್ ಜಂಟಲ್‌ಮನ್" ಹಾಡಿನಲ್ಲಿ, ಲ್ಯುಡಕ್ರಿಸ್ ಅವರ "ಏರಿಯಾ ಕೋಡ್ಸ್ ", ಟಿರಿಯಲ್ (TReal)ಅವರ "ಐಆಮ್ ನಾಟ್ ಲಾಕ್ಡ್ ಡೌನ್" ಹಾಡುಗಳಲ್ಲಿ ಒರ್ಲ್ಯಾಂಡೊ ಪ್ರಸ್ತಾಪವಾಗಿದೆ. ಜೊತೆಗೆ , "ವೂಟ್! ದೇರ್ ಇಟ್ ಈಸ್!" ಎಂಬ 95 ಸೌತ್ ನವರ ಹಾಡಿನಲ್ಲಿ ಹಾಗೂ ಡಿಜೆ ಮ್ಯಾಜಿಕ್ ಮೈಕ್ ಇನ್ನೂ ಅನೇಕ ಹಾಡುಗಳಲ್ಲಿ ಈ ನಗರದ ಉಲ್ಲೇಖವಿದೆ.
ಶೆವರ್ಲೆ ಒರ್ಲ್ಯಾಂಡೊ ವನ್ನು ಈ ನಗರದ ನೆನಪಿನಿಂದಲೇ ಹೆಸರಿಸಲಾಗಿದೆ.
ಮನ್ನಣೆ
ಬದಲಾಯಿಸಿ2008ರಲ್ಲಿ, ಒರ್ಲ್ಯಾಂಡೊವನ್ನು ಒಂದು "ಹೈ ಸಫಿಶಿಯೆನ್ಸಿ (ಅಧಿಕ ಅನುಕೂಲಗಳ" ವರ್ಲ್ಡ್-ಸಿಟಿ ಎಂದು ಲೋಫ್‌ಬರೋ ವಿಶ್ವವಿದ್ಯಾಲಯದ ವರ್ಲ್ಡ್ ಸಿಟೀಸ್ ಸ್ಟಡಿ ಗ್ರೂಪ್‌ನ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಜೊತೆಗೆ ಇದು ಗ್ಯಾಮಾ ವರ್ಲ್ಡ್ ಸಿಟಿ ಆಗುವುದಕ್ಕೆ ಒಂದು ವರ್ಗ ಹಿಂದಿತ್ತು ಅಷ್ಟೆ. ಲೋಫ್‌ಬರೋ ಪ್ರಕಾರ, ಒರ್ಲ್ಯಾಂಡೊ ಈಗ ಒಸಾಕ, ಗ್ಲಾಸ್ಗೋ, ಮತ್ತು ಬಾಲ್ಟಿಮೋರ್[೪೫] ಇತ್ಯಾದಿ ನಗರಗಳ ಶ್ರೇಣಿಯಲ್ಲಿದೆ.
ಇವನ್ನೂ ಗಮನಿಸಿ
ಬದಲಾಯಿಸಿ- ಒರ್ಲ್ಯಾಂಡೊದ ಮೇಯರ್‌ಗಳ ಪಟ್ಟಿ
- ಒರ್ಲ್ಯಾಂಡೊ, ಫ್ಲೋರಿಡಾದ ಜನರ ಪಟ್ಟಿ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Annual Estimates of the population for the Incorporated Places Over 100,000" (XLS). US Census Bureau. Retrieved August 1, 2010.
- ↑ "Annual Estimates of the Population of Metropolitan and Micropolitan Statistical Areas:April 1, 2000 to July 1, 2009". U.S. Census Bureau. Retrieved August 1, 2010.
- ↑ "ಅಮೆರಿಕದ 30 ಅತಿಹೆಚ್ಚು ಭೇಟಿನೀಡುವ ನಗರಗಳು". Archived from the original on 2009-05-15. Retrieved 2010-11-19.
- ↑ Zaragosa, Luis (October 14, 2009). "UCF now largest university in Florida". Orlando Sentinel. Archived from the original on 2009-10-16. Retrieved 2009-10-14.
- ↑ ಅಬೌಟ್ ಒರ್ಲ್ಯಾಂಡೊ Archived 2014-03-14 ವೇಬ್ಯಾಕ್ ಮೆಷಿನ್ ನಲ್ಲಿ. ಒರ್ಲ್ಯಾಂಡೊ ನಗರದ ವೆಬ್‌ಸೈಟ್‌ನಿಂದ, 2008ರ ಜೂನ್ 17ರಂದು ಪಡೆಯಲಾಗಿದೆ
- ↑ http://www.cityoforlando.net/gis/pdf/GeneralCityMaps/Annexations%20Map%2034x44.pdf
- ↑ ಒರ್ಲ್ಯಾಂಡೊ ಸಿಟಿ ಹಾಲ್‌ನಿಂದ ಹತ್ತಿರದ ಅಟ್ಲಾಂಟಿಕ್ ಕೋಸ್ಟ್‌ಲೈನ್‌ಗೆ, ಓಕ್ ಹಿಲ್ , ಬ್ರೆವರ್ಡ್ ಕೌಂಟಿ ಗೆ , ಮತ್ತು ಹತ್ತಿರದ ಗಲ್ಫ್ ಕೋಸ್ಟ್‌ಲೈನ್‌ಗೆ, ಪೈನ್ ಐಲ್ಯಾಂಡ್ , ಹೆರ್ನಡೋ ಕೌಂಟಿ ಗಳಿಗೆ ಇರುವ ದೂರವನ್ನು, ಗೂಗಲ್ ಅರ್ಥ್ ನ ರೂಲರ್ ಸಾಧನ ಬಳಸಿ ಅಳತೆಮಾಡಿರುವುದು.
- ↑ [೧]
- ↑ "OCLS - ಫಾಸ್ಟ್ ಫ್ಯಾಕ್ಟ್ಸ್ - ಟಾಲೆಸ್ಟ್ ಬಿಲ್ಡಿಂಗ್ಸ್ ಇನ್ ಒರ್ಲ್ಯಾಂಡೊ". Archived from the original on 2014-07-14. Retrieved 2022-10-15.
- ↑ ಬಿಲ್ಡಿಂಗ್ಸ್ ಆಫ್ f ಒರ್ಲ್ಯಾಂಡೊ / Emporis.com
- ↑ "Census Of Population And Housing". U.S. Census Bureau. Retrieved 2008-10-25.
- ↑ "ಆರ್ಕೈವ್ ನಕಲು". Archived from the original on 2011-06-07. Retrieved 2021-08-09.
- ↑ ಗ್ಯಾರಿ ಜೆ. ಗೇಟ್ಸ್ Same-sex Couples and the Gay, Lesbian, Bisexual Population: New Estimates from the American Community Survey PDF (2.07 MiB). ದಿ ವಿಲಿಯಮ್ಸ್ ಇನ್‌ಸ್ಟಿಟ್ಯೂಟ್ ಆನ್ ಸೆಕ್ಸುಯಲ್ ಓರಿಯೆಂಟೇಶನ್ ಲಾ ಅಂಡ್ ಪಬ್ಲಿಕ್ ಪಾಲಿಸಿ, UCLA ಸ್ಕೂಲ್ ಆಫ್ ಲಾ, ಅಕ್ಟೋಬರ್ 2006. 2007ರ ಏಪ್ರಿಲ್ 8ರಂದು ಮರುಸಂಪಾದಿಸಲಾಗಿದೆ.
- ↑ http://www.npr.org/templates/story/story.php?storyId=105691084
- ↑ "ಮಾಡರ್ನ್ ಲಾಂಗ್ವೇಜ್ ಅಸೋಸಿಯೇಶನ್ ಡಾಟಾ ಸೆಂಟರ್, ರಿಸಲ್ಟ್ಸ್ ಆಫ್ ಒರ್ಲ್ಯಾಂಡೊ, FL". Archived from the original on 2015-05-15. Retrieved 2022-10-20.
- ↑ "ಆರ್ಕೈವ್ ನಕಲು". Archived from the original on 2020-02-11. Retrieved 2021-08-09.
- ↑ "Annual Estimates of the Population of Metropolitan and Micropolitan Statistical Areas: April 1, 2000 to July 1, 2007" (XLS). U.S. Census Bureau. Retrieved 2008-07-11.
- ↑ "ಅಪ್‌ಡೇಟ್ ಆಫ್ ಸ್ಟಾಟಸ್ಟಿಕಲ್ ಏರಿಯಾ ಡೆಫಿನಿಶನ್ಸ್ ಆಂಡ್ ಗೈಡೆನ್ಸ್ ಆನ್ ದೆಯರ್ ಯೂಸಸ್" (PDF). Archived from the original (PDF) on 2009-09-16. Retrieved 2021-07-21.
- ↑ "Annual Estimates of the Population of Combined Statistical Areas: April 1, 2000 to July 1, 2007" (.xls). U.S. Census Bureau. March 27, 2008. Retrieved March 15, 2008.
- ↑ http://www.census.gov/Press-Release/www/releases/archives/cb07-42tbl3.xls
- ↑ "ಡಾರ್ಡೆನ್ ಹೆಡ್‌ಕ್ವಾರ್ಟರ್ಸ್ ಟು ಓಪನ್ ವೆನ್ಸ್‌ಡೇ ಇನ್ ಒರ್ಲ್ಯಾಂಡೊ". Archived from the original on 2010-02-11. Retrieved 2010-11-19.
- ↑ "Lake Nona Is Site Of New VA Hospital". Internet Broadcasting Systems/WKMG-TV. 2 March 2007. Archived from the original on 2009-02-12. Retrieved 2008-07-15.
- ↑ ಸ್ಟ್ರಾಟನ್, ಜಿಮ್. "ಫ್ಲೋರಿಡಾ ಜಾಬ್‌ಲೆಸ್ ರೇಟ್ಸ್ ಡ್ರಾಪ್ಸ್ ಟು 11.7 ಪರ್ಸೆಂಟ್", ಒರ್ಲ್ಯಾಂಡೊ ಸೆಂಟಿನೆಲ್ l , 18 ಜೂನ್ 2010.
- ↑ "ಮೆಟ್ರೋಪಾಲಿಟನ್ ಒರ್ಲ್ಯಾಂಡೊ ಹೌಸಿಂಗ್ ಟ್ರೆಂಡ್ಸ್ ಸಮ್ಮರಿ Archived 2010-10-11 ವೇಬ್ಯಾಕ್ ಮೆಷಿನ್ ನಲ್ಲಿ.." ಒರ್ಲ್ಯಾಂಡೊ ರೀಜನಲ್ ರೀಯಲ್ಟರ್ ಅಸೋಸಿಯೇಶನ್. ಮೇ 9, 2007. ಮೇ 24, 2007ರಂದು ಮರುಸಂಪಾದಿಸಲಾಗಿದೆ.
- ↑ ಬರ್ಜನ್, ಕ್ಯಾಥಿ. ಲಾಸ್ ವೇಗಾಸ್ ಮತ್ತು ಒರ್ಲ್ಯಾಂಡೊ ಬ್ರ್ಯೂಸಿಂಗ್ ಸಿಕಾಗೋಸ್ ಶೋ ಬ್ಯುಸಿನೆಸ್ . ದಿ ಚಿಕಾಗೋ ಟ್ರಿಬ್ಯೂನ್ , 11 ಸೆಪ್ಟೆಂಬರ್ 2003
- ↑ ಫಾರ್ ನೀಯರ್ಲಿ ಹಾಫ್ ಆಫ್ ಅಮೆರಿಕಾ, ಗ್ರಾಸ್ ಈಸ್ ಗ್ರೀನರ್ ಸಮ್‌ವೇರ್‌ಎಲ್ಸ್ , ಪ್ಯೂ ಸಂಶೋಧನಾ ಕೇಂದ್ರದ ವೆಬ್‌ಸೈಟ್, 2009ರ ಏಪ್ರಿಲ್ 17ರಂದು ಪಡೆಯಲಾಗಿದೆ
- ↑ "ವಾಟ್ ಹ್ಯಾಪನ್ಡ್ ಟು ಹಾಲಿವುಡ್ ಈಸ್ಟ್?" ಸೌತ್‌ವೆಸ್ಟ್ ಒರ್ಲ್ಯಾಂಡೊ ಬುಲೆಟಿನ್ , 17 ಜುಲೈ 2004
- ↑ "ಆರ್ಕೈವ್ ನಕಲು". Archived from the original on 2022-03-31. Retrieved 2010-11-19.
- ↑ http://orlandofringe.org/
- ↑ "ಆರ್ಕೈವ್ ನಕಲು". Archived from the original on 2010-08-21. Retrieved 2010-11-19.
- ↑ ಶಾಪಿಂಗ್ ಇನ್ ಒರ್ಲ್ಯಾಂಡೊ - ಒರ್ಲ್ಯಾಂಡೊ ವಿಲ್ಲಾ ಗೈಡ್ - ದಿ ಎಸೆನ್ಷಿಯಲ್ ಗೈಡ್ ಟು ಫ್ಲೋರಿಡಾ ವಕೇಶನ್ ರೆಂಟಲ್ ಹೋಮ್ಸ್ ಆಂಡ್ ಹಾಲಿಡೇ ವಿಲ್ಲಾಸ್ ಇನ್ ಒರ್ಲ್ಯಾಂಡೊ, ಫ್ಲೋರಿಡಾ
- ↑ "ಪೋಸ್ಟ್ ಆಫೀಸ್ ಲೊಕೇಶನ್ - ಒರ್ಲ್ಯಾಂಡೊ." ಅಮೆರಿಕಾ ಸಂಯುಕ್ತ ಸಂಸ್ಥಾನ ಅಂಚೆ ಸೇವೆ . 5 ಮೇ, 2009ರಂದು ಪುನಾಸಂಪಾದಿಸಲಾಗಿದೆ.
- ↑ "ಆರ್ಕೈವ್ ನಕಲು". Archived from the original on 2011-11-16. Retrieved 2010-11-19.
- ↑ Tracy, Dan (March 31, 2009). "State farm to pay for Road Rangers on Interstate 4". Orlando Sentinel. Archived from the original on March 27, 2009. Retrieved March 31, 2009.
{{cite news}}
: Italic or bold markup not allowed in:|publisher=
(help) - ↑ ಮುಲ್ಲಿಗನ್, ಎಂ. "ರೈಲ್‌ರೋಡ್ ಡಿಪೋಸ್ ಆಫ್ ಸೆಂಟ್ರಲ್ ಫ್ಲೋರಿಡಾ", ಪುಟ 42. ಅರ್ಕಡಿಯ ಪ್ರಕಟಣೆ, 2008.
- ↑ "ಆಮ್‌ಟ್ರಾಕ್ ಫ್ಯಾಕ್ಟ್ ಶೀಟ್, ಫಿಸ್ಕಲ್ ಈಯರ್ 2009". ಆಮ್‌ಟ್ರ್ಯಾಕ್ . ಫೆಬ್ರವರಿ 2, 2010ರಂದು ಮರುಸಂಪಾದಿಸಲಾಗಿದೆ.
- ↑ ಸನ್‌ರೈಲ್ ಅಧಿಕೃತ ವೆಬ್‌ಸೈಟ್
- ↑ https://web.archive.org/web/20090704013658/http://www.orlandosentinel.com/news/local/orl-sunrail-commuter-legislature-070209,0,7151760.story
- ↑ http://orlando.bizjournals.com/orlando/stories/2010/01/25/daily33.html?surround=lfn
- ↑ ದಿ ಸೆಂಟ್ರಲ್ ಫ್ಲೋರಿಡಾ ರೀಜನಲ್ ಟ್ರಾನ್ಸ್‌ಪೋರ್ಟೇಶನ್ ಅಥಾರಿಟಿ —LYNX
- ↑ "ಒರ್ಲ್ಯಾಂಡೊ". Archived from the original on 2010-02-15. Retrieved 2010-11-19.
- ↑ "ಕಾನಸುಲಡೊ ಮೆಕ್ಸಿಕೊ ಎನ್ ಒರ್ಲ್ಯಾಂಡೊ". Archived from the original on 2006-12-12. Retrieved 2010-11-19.
- ↑ "ಆರ್ಕೈವ್ ನಕಲು". Archived from the original on 2010-04-29. Retrieved 2010-11-19.
- ↑ "WFTV.com -'ಟ್ರಾನ್ಸ್‌ಫಾರ್ಮರರ್ಸ್ 3' ಬಿಗಿನ್ಸ್ ಫಿಲ್ಮಿಂಗ್ ಇನ್ ಸೆಂಟ್ರಲ್ ಫ್ಲಾ". Archived from the original on 2010-10-03. Retrieved 2010-11-19.
- ↑ http://www.lboro.ac.uk/gawc/world2008t.html
ಬಾಹ್ಯ ಕೊಂಡಿಗಳು
ಬದಲಾಯಿಸಿFind more about Orlando, Florida at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಸಿಟಿ ಆಫ್ ಒರ್ಲ್ಯಾಂಡೊ ಅಫಿಶಿಯಲ್ ವೆಬ್‌ಸೈಟ್
- ಮೆಟ್ರೋ ಒರ್ಲ್ಯಾಂಡೊ ಎಕಾನಾಮಿಕ್ ಡೆವಲಪ್‌ಮೆಂಟ್ ಕಮಿಶನ್
- ಒರ್ಲ್ಯಾಂಡೊ ರೀಜನಲ್ ಚೇಂಬರ್ ಆಫ್ ಕಾಮರ್ಸ್
- ಸೆಂಟ್ರಲ್ ಫ್ಲೋರಿಡಾ ಮೆಮೊರಿ ಒಂದು ವಿಶಿಷ್ಟವಾದ ಡಿಜಿಟಲ್ ಸಂಗ್ರಹವಾಗಿದ್ದು, ಇಲ್ಲಿಗೆ ಭೇಟಿ ನೀಡುವವರು ಒರ್ಲ್ಯಾಂಡೊದ ಮತ್ತು ಸೆಂಟ್ರಲ್ ಫ್ಲೋರಿಡಾದ ಸುತ್ತಲಿನ ಪ್ರದೇಶದ ಇತಿಹಾಸವನ್ನು ತಾವೇ ಕಂಡುಕೊಳ್ಳುತ್ತಾರೆ.
- ಒರ್ಲ್ಯಾಂಡೊ, ಫ್ಲೋರಿಡಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
28°32′1″N 81°22′33″W / 28.53361°N 81.37583°WInvalid arguments have been passed to the {{#coordinates:}} function