ಒನ್ ಪ್ಲಸ್
ಒನ್ ಪ್ಲಸ್ ಎಂಬುದು ಶೆನ್ಜೆನ್ ಮೂಲದ ಚೀನೀ ಸ್ಮಾರ್ಟ್ಫೋನ್ ಉತ್ಪಾದಕರಾಗಿದ್ದು ಡಿಸೆಂಬರ್ 2013 ರಲ್ಲಿ ಪೀಟ್ ಲೌ (ಸಿಇಒ) ಮತ್ತು ಕಾರ್ಲ್ ಪಿಯರಿಂದ ಸ್ಥಾಪಿಸಲ್ಪಟ್ಟಿದೆ. ಇದರ ಪ್ರಧಾನ ಕಾರ್ಯಾಲಯವು ಗೌನ್ಡಾಂಗ್ ನಲ್ಲಿದೆ. ಮಾರ್ಚ್ 2016 ರವರೆಗೆ ಕಂಪನಿಯು ವಿಶ್ವದಾದ್ಯಂತ 42 ದೇಶಗಳು ಮತ್ತು ಪ್ರದೇಶಗಳಿಗೆ ಸೇವೆ ಸಲ್ಲಿಸಿದೆ. ಅವರು ಇತರ ಉತ್ಪನ್ನಗಳ ಪೈಕಿ 6 ಫೋನ್ಗಳನ್ನು ಬಿಡುಗಡೆ ಮಾಡಿದ್ದಾರೆ.
ಸಂಸ್ಥೆಯ ಪ್ರಕಾರ | ಖಾಸಗಿ |
---|---|
ಸ್ಥಾಪನೆ | 16 ಡಿಸೆಂಬರ್ 2013 |
ಸಂಸ್ಥಾಪಕ(ರು) | ಪೀಟ್ ಲೌ, ಕಾರ್ಲ್ ಪೇ |
ಮುಖ್ಯ ಕಾರ್ಯಾಲಯ | Shenzhen, Guangdong, China[೧] |
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಪೀಟ್ ಲೌ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಕಾರ್ಲ್ ಪೇ (ಸಹ ಸಂಸ್ಥಾಪಕ) |
ಉದ್ಯಮ | ಮೊಬೈಲ್ ಫೋನ್ಗಳು |
ಉತ್ಪನ್ನ | ಒನ್ ಪ್ಲಸ್ ಒನ್ (2014) ಒನ್ ಪ್ಲಸ್ ಟು (2015) ಒನ್ ಪ್ಲಸ್ ಎಕ್ಸ್ (2015) ಒನ್ ಪ್ಲಸ್ ತ್ರೀ (2016) ಒನ್ ಪ್ಲಸ್ ತ್ರೀಟಿ (2016) ಒನ್ ಪ್ಲಸ್ ಫೈವ್ (2017) OnePlus Icons OnePlus Bullets (& v2) OnePlus Powerbank OxygenOS (Overseas) HydrogenOS (China) Phone cases Shirts and bags |
ಆದಾಯ | US$300 million (2014) |
ಪೋಷಕ ಸಂಸ್ಥೆ | Oppo Electronics (smartphone subsidiary of BBK Electronics) |
ಜಾಲತಾಣ | OnePlus Global OnePlus China |
ಇತಿಹಾಸ
ಬದಲಾಯಿಸಿಒನ್ ಪ್ಲಸ್ ಅನ್ನು 16 ಡಿಸೆಂಬರ್ 2013 ರಂದು ಸ್ಥಾಪಿಸಲಾಯಿತು, ಒಪ್ಪೋ ಕಂಪನಿಯ ಮಾಜಿ ಉಪಾಧ್ಯಕ್ಷ ಪೀಟ್ ಲೌ ಮತ್ತು ಕಾರ್ಲ್ ಪೀರವರು ಸ್ಥಾಪಿಸಿದರು. ಕಂಪನಿಯ ಮೂಲ ಗುರಿ- ಕಡಿಮೆ ಬೆಲೆಯೊಂದಿಗೆ ಉನ್ನತ ಗುಣಮಟ್ಟದ ಸ್ಮಾರ್ಟ್ಫೋನ್ಗಳನ್ನು ವಿನ್ಯಾಸಗೊಳಿಸುವುದು.
ಕಂಪನಿಯು ತನ್ನ ಮೊದಲ ಸಾಧನವಾದ ಒನ್ಪ್ಲಸ್ ಒನ್ನನ್ನು 23 ಏಪ್ರಿಲ್ 2014 ರಂದು ಅನಾವರಣಗೊಳಿಸಿತು, ಜೊತೆಗೆ ಅಮೆಜಾನ್ ಮೂಲಕ ಪ್ರತ್ಯೇಕವಾಗಿ ಭಾರತದಲ್ಲಿ ಒನ್ ಪ್ಲಸ್ ಒನ್ ನ ಬಿಡುಗಡೆಯಾಯಿತು.
ಏಪ್ರಿಲ್ 2014 ರಲ್ಲಿ, ಮುಖ್ಯ ಚೀನಾದಲ್ಲಿ ಉತ್ಪಾದಕ ರಾಯಭಾರಿಯಾಗಿ ಹ್ಯಾನ್ ಹಾನ್ನನ್ನು ಒನ್ ಪ್ಲಸ್ ನೇಮಿಸಿತು.
ಮಾರ್ಚ್ 2016 ರವರೆಗೆ, ಒನ್ ಪ್ಲಸ್ ಈ ಕೆಳಗಿನ ದೇಶಗಳು ಮತ್ತು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದೆ: ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕೆನಡಾ, ಮೈನ್ಲ್ಯಾಂಡ್ ಚೀನಾ, ಕ್ರೊಯೆಶಿಯ, ಸೈಪ್ರಸ್, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್, ಈಜಿಪ್ಟ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಾಂಗ್ಕಾಂಗ್, ಹಂಗೇರಿ, ಭಾರತ, ಐರ್ಲೆಂಡ್, ಇಸ್ರೇಲ್, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೆಂಬರ್ಗ್ ಮಾಲ್ಟಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸೌದಿ ಅರೇಬಿಯಾ, ಸಿಂಗಪುರ್, ಸ್ಪೇನ್, ಸ್ಲೋವಾಕಿಯಾ, ಸ್ಲೊವೇನಿಯ, ಸ್ವೀಡನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
ಉತ್ಪನ್ನಗಳು
ಬದಲಾಯಿಸಿಒನ್ ಪ್ಲಸ್ ಈವರೆಗೆ ೬ ಸಾಧನಗಳನ್ನು ಮಾರಾಟ ಮಾಡಿದೆ.
- ಒನ್ ಪ್ಲಸ್ ಒನ್
- ಒನ್ ಪ್ಲಸ್ ಟು
- ಒನ್ ಪ್ಲಸ್ ಎಕ್ಸ್
- ಒನ್ ಪ್ಲಸ್ ತ್ರೀ
- ಒನ್ ಪ್ಲಸ್ ತ್ರೀಟಿ
- ಒನ್ ಪ್ಲಸ್ ಫೈವ್
ಉಲ್ಲೇಖಗಳು
ಬದಲಾಯಿಸಿ- ↑ Xiang, Tracey (13 January 2014). "Chinese Smartphone Startup OnePlus Aims at Developed Markets". TechNode. Archived from the original on 23 ಏಪ್ರಿಲ್ 2014. Retrieved 2 May 2014.
{{cite web}}
: Unknown parameter|dead-url=
ignored (help)
ಬಾಹ್ಯ ಸಂಪರ್ಕ
ಬದಲಾಯಿಸಿ- ಅಧಿಕೃತ ಜಾಲತಾಣ (ಜಾಗತಿಕ) Archived 2017-09-30 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ಜಾಲತಾಣ(ಚೀನಾ)