ಎಸ್. ಸುರೇಶ್ ಕುಮಾರ್

ಕರ್ನಾಟಕದ ಬಿಜೆಪಿ ನೇತಾರ, ರಾಜಾಜಿನಗರದ ಶಾಸಕ, ಮಾಜಿ ಮಂತ್ರಿ

ಎಸ್. ಸುರೇಶ್ ಕುಮಾರ್ (ಜನನ ೧೧ ನವೆಂಬರ್ ೧೯೫೫) ಇವರು ಒಬ್ಬ ಭಾರತೀಯ ಜನತಾ ಪಕ್ಷದ ರಾಜಕಾರಣಿಯಾಗಿದ್ದು, [] ೨೦ ಆಗಸ್ಟ್ ೨೦೧೯ ರಿಂದ ೨೬ ಜುಲೈ ೨೦೨೧ ರವರೆಗೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾನೂನು ಮತ್ತು ರಾಜ್ಯ ಸಚಿವರಾಗಿದ್ದರು ಹಾಗೂ ಇವರು ೭ ಜೂನ್ ೨೦೦೮ ರಿಂದ ೧೩ ಮೇ ೨೦೧೩ ರವರೆಗೆ ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. []


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೨೦ ಆಗಸ್ಟ್ ೨೦೧೯ – ೨೮ ಜುಲೈ ೨೦೨೧
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಪೂರ್ವಾಧಿಕಾರಿ ಎಸ್. ಆರ್. ಶ್ರೀನಿವಾಸ್
ಉತ್ತರಾಧಿಕಾರಿ ಬಿ. ಸಿ.ನಾಗೇಶ್

ಕಾರ್ಮಿಕ ಸಚಿವರು
ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೨೭ ಸೆಪ್ಟೆಂಬರ್ ೨೦೧೯ – ೧೦ ಫೆಬ್ರವರಿ ೨೦೨೦
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಪೂರ್ವಾಧಿಕಾರಿ ವೆಂಕಟರಮಣಪ್ಪ
ಉತ್ತರಾಧಿಕಾರಿ ಅರಬೈಲ್ ಶಿವರಾಮ ಹೆಬ್ಬಾರ್

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು
ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೩೦ ಮೇ ೨೦೦೮ – ೧೩ ಮೇ ೨೦೧೩
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಸದಾನಂದ ಗೌಡ
ಜಗದೀಶ್ ಶೆಟ್ಟರ್
ಪೂರ್ವಾಧಿಕಾರಿ ಎಂ. ಪಿ. ಪ್ರಕಾಶ್
ಉತ್ತರಾಧಿಕಾರಿ ಟಿ. ಬಿ. ಜಯಚಂದ್ರ

ನಗರಾಭಿವೃದ್ಧಿ ಸಚಿವರು
ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೩೦ ಮೇ ೨೦೦೮ – ೧೩ ಮೇ ೨೦೧೩
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಸದಾನಂದ ಗೌಡ
ಜಗದೀಶ್ ಶೆಟ್ಟರ್
ಪೂರ್ವಾಧಿಕಾರಿ ಎಚ್. ಡಿ. ಕುಮಾರಸ್ವಾಮಿ
ಉತ್ತರಾಧಿಕಾರಿ ವಿನಯ್ ಕುಮಾರ್ ಸೊರಕೆ

ಹಾಲಿ
ಅಧಿಕಾರ ಸ್ವೀಕಾರ 
೨೦೦೮
ಪೂರ್ವಾಧಿಕಾರಿ ಎನ್ ಎಲ್ ನರೇಂದ್ರ ಬಾಬು
ಮತಕ್ಷೇತ್ರ ರಾಜಾಜಿ ನಗರ (ವಿಧಾನಸಭಾ ಕ್ಷೇತ್ರ)
ಅಧಿಕಾರ ಅವಧಿ
೧೯೯೪ – ೨೦೦೪
ಉತ್ತರಾಧಿಕಾರಿ ಎನ್ ಎಲ್ ನರೇಂದ್ರ ಬಾಬು
ಮತಕ್ಷೇತ್ರ ರಾಜಾಜಿ ನಗರ (ವಿಧಾನಸಭಾ ಕ್ಷೇತ್ರ)
ವೈಯಕ್ತಿಕ ಮಾಹಿತಿ
ಜನನ (1955-11-11) ೧೧ ನವೆಂಬರ್ ೧೯೫೫ (ವಯಸ್ಸು ೬೯)
ಬೆಂಗಳೂರು, ಮೈಸೂರು ರಾಜ್ಯ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವಾಸಸ್ಥಾನ ಚಾಮರಾಜನಗರ

ಬೆಂಗಳೂರಿನಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದರು. [] ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಪದವಿ ಮುಗಿಸಿದರು. ತುರ್ತು ಪರಿಸ್ಥಿತಿಯನ್ನು ಸಕ್ರಿಯವಾಗಿ ವಿರೋಧಿಸಿದ ಕಾರಣ, ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಯಿತು. [] ನಂತರ, ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರನ್ನು ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ೧೯೭೭-೧೯೮೦ ರ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. [] ಅವರು ೧೯೮೧ ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮನ್ನು ಬಾರ್ ಕೌನ್ಸಿಲ್‌ಗೆ ದಾಖಲಿಸಿಕೊಂಡರು ಮತ್ತು ಸಕ್ರಿಯ ರಾಜಕೀಯಕ್ಕೆ ಧುಮುಕುವ ಮೊದಲು ಸ್ವಲ್ಪ ಸಮಯದವರೆಗೆ ಕಾನೂನಿನ ಅಭ್ಯಾಸ ಮಾಡಿದರು. []

ಅವರು ೧೯೮೩ ರಲ್ಲಿ, ಬಿಜೆಪಿ ಪಕ್ಷದಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು ಸತತ ೨ ಅವಧಿಗೆ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. ೧೯೯೪ ಮತ್ತು ೧೯೯೯ ರಲ್ಲಿ, ೨ ಅವಧಿಗೆ ರಾಜಾಜಿನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಮಾದರಿ ಶಾಸಕರಾಗಿ ಮುಂದುವರಿದರು. ಅವರು ೨೦೦೮ ಮತ್ತು ೨೦೧೩ ರ ಚುನಾವಣೆಗಳಲ್ಲಿ ಕರ್ನಾಟಕ ವಿಧಾನಸಭೆಗೆ ಮರು ಆಯ್ಕೆಯಾದರು.

ಸುರೇಶ್ ಕುಮಾರ್‌ರವರು ೨೦೦೮ ರಲ್ಲಿ, ಮೂರನೇ ಅವಧಿಗೆ ಆಯ್ಕೆಯಾದರು ಮತ್ತು ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಕಾನೂನು, ನಗರಾಭಿವೃದ್ಧಿ, ಸಂಸದೀಯ ವ್ಯವಹಾರಗಳು ಮತ್ತು ಬಿಡ್ಬ್ಲ್ಯೂಎಸ್‌ಎಸ್‌ಬಿ ಸಚಿವರಾಗಿ ನೇಮಕಗೊಂಡರು.

ಪಡೆದ ಸ್ಥಾನಮಾನಗಳು

ಬದಲಾಯಿಸಿ

ರಾಜಕೀಯ ಸಮಯ

ಬದಲಾಯಿಸಿ
  • ೨೦೧೯ - ೨೦೨೧:

ಕರ್ನಾಟಕ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಪ್ರತಿನಿಧಿಸಿದ್ದಾರೆ.

  • ೨೦೧೯ - ೨೦೨೦:

ಕರ್ನಾಟಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

  • ೨೦೦೮ - ೨೦೧೩:

ಕರ್ನಾಟಕ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು.

  • ೨೦೦೮ - ಪದಾಧಿಕಾರಿ:

ರಾಜಾಜಿ ನಗರ ಕ್ಷೇತ್ರದಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ೨೦೨೩ ರ, ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಐಎನ್‌ಸಿ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಸೋಲಿಸಿ ಆಯ್ಕೆಯಾದರು.

  • ೧೯೯೪–೨೦೦೪

ರಾಜಾಜಿ ನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. Aji, Sowmya (15 April 2017). "Indian Politician". The Economic Times. Retrieved 3 April 2018.
  2. "Government of Karnataka, Department of Parliamentary Affairs & Legislation Ministers" (PDF). Department of Parliamentary Affairs & Legislation. dpal.kar.nic.in. Retrieved 3 February 2018.
  3. https://bpac.in/election-habba-2013/candidate-endorsement/s-suresh-kumar/
  4. https://www.news18.com/assembly-elections-2023/karnataka/s-suresh-kumar-rajajinagar-candidate-s10a165c003/
  5. https://www.newindianexpress.com/topic/s-suresh-kumar
  6. "BJP leader Suresh Kumar". International Business Times. 28 March 2018. Retrieved 3 April 2018.