ಎರಡನೇ ಮಹಾರಾಜಾ ಜೈ ಸಿಂಗ್

ಮಹಾರಾಜ ಸವಾಯಿ ಜೈ ಸಿಂಗ್ (ನವೆಂಬರ್ ೩, ೧೬೮೮ - ಸೆಪ್ಟೆಂಬರ್ ೨೧, ೧೭೪೩) ಅಂಬರ್ ರಾಜ್ಯದ ಆಡಳಿತಗಾರರಾಗಿದ್ದರು.(ಇದು ನಂತರದಲ್ಲಿ ಜೈಪುರ್ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು.) . ಇವರು ಕಚ್ವಾಹ್ಸು ವಿನ ರಾಜಧಾನಿಯಾದ ಅಂಬರ್ ನಲ್ಲಿ ಜನಿಸಿದರು. ನಂತರ ಇವರು ೩೧ ಡಿಸೆಂಬರ್ ೧೬೯೯ರಲ್ಲಿ ತಮ್ಮ ತಂದೆ ಮಹಾರಾಜ ಬಿಷನ್ ಸಿಂಗ್ ರ ನಿಧನದ ನಂತರ ೧೧ನೇ ವಯಸ್ಸಿನಲ್ಲಿ ಅಂಬರ್ ನ ಆಡಳಿತಗಾರರಾದರು. ಆಗ ೨೧ ಏಪ್ರಿಲ್ ೧೭೨೧ರಲ್ಲಿ, ಮುಘಲ್ ದೊರೆ ಮೊಹಮ್ಮದ್ ಶಾ, ಇವರಿಗೆ ಸರಾಮದ್-ಇ-ರಜಹ್-ಇ-ಹಿಂದ್ ಎಂಬ ಬಿರುದು ನೀಡಿದ. ಅದಲ್ಲದೇ ೨ ಜೂನ್ ೧೭೨೩ರಲ್ಲಿ ಮುಘಲ್ ದೊರೆ, ಇವರಿಗೆ ರಾಜ ರಾಜೇಶ್ವರ , ಶ್ರೀ ರಾಜಾಧಿರಾಜ ಹಾಗು ಮಹಾರಾಜ ಸವಾಯಿ ಎಂಬ ಮತ್ತಷ್ಟು ಬಿರುದುಗಳನ್ನು ನೀಡಿ ಗೌರವಿಸಿದ.[] "ಸವಾಯಿ" ಎಂದರೆ ತನ್ನ ಸಮಕಾಲೀನರಿಗಿಂತ ಒಂದು ಕಾಲು ಪಟ್ಟು ಉನ್ನತ ಸ್ಥಾನದಲ್ಲಿರುವವನೆಂಬ ಅರ್ಥ ನೀಡುತ್ತದೆ. ಇಂದಿಗೂ ಅವರ ವಂಶಸ್ಥರು ಈ ಬಿರುದುಗಳಿಂದ ಅಲಂಕೃತರಾಗುತ್ತಾರೆ.

ಎರಡನೇ ಮಹಾರಾಜಾ ಜೈ ಸಿಂಗ್
ಮಹಾರಾಜ ಸವಾಯಿ ಜೈ ಸಿಂಗ್

Reign ೧೬೯೯ - ೧೭೪೩
Predecessor Bishan ಸಿಂಗ್
Successor Isrisingh
Spouse Bikaner princess
Sheopur princess
Udaipur princess
Issue
Kunwar Shiv ಸಿಂಗ್(d. ೧೭೨೪)
Kunwar Ishwari Singh
Kunwar Madho ಸಿಂಗ್
Born (೧೬೮೮-೧೧-೦೩)೩ ನವೆಂಬರ್ ೧೬೮೮
Amber, India
Died September 21, 1743(1743-09-21) (aged 54)

ಅವರು ಅಧಿಕಾರಕ್ಕೆ ಬಂದಾಗ ಇದ್ದ ಪರಿಸ್ಥಿತಿ

ಬದಲಾಯಿಸಿ

ಸವಾಯಿ ಜೈ ಸಿಂಗ್ ಅಂಬರ್ ನಲ್ಲಿ ತಮ್ಮ ಪೂರ್ವಜರ ಗದ್ದುಗೆಯನ್ನೇರಿದಾಗ, ಕೇವಲ ೧೦೦೦ ಅಶ್ವಸೈನ್ಯವನ್ನು ಮಾತ್ರ ಪೋಷಿಸುವಷ್ಟು ಸಂಪತ್ತು ಹೊಂದಿದ್ದರು-ಇಂತಹ ತೀರ ಹದಗೆಟ್ಟ ಪರಿಸ್ಥಿತಿಯು, ಕಳೆದ ೩೨ ವರ್ಷಗಳಲ್ಲಿ ಉಂಟಾಗಿತ್ತು, ಇದು ಮುಘಲ್ ದೊರೆ ಔರಂಗಜೇಬನ ಆಳ್ವಿಕೆಯೊಂದಿಗೆ ಅದಕ್ಕೆ ಪೂರಕ ಸಂಘಟನೆ ಹೊಂದಿತ್ತು. ಜೈಪುರದ ರಾಜರುಗಳು ಮುಘಲರೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಸಂಧಾನ ಪ್ರಕ್ರಿಯೆಗೆ ಹೆಚ್ಚು ಒಲವು ತೋರುತ್ತಿದ್ದರು, ಏಕೆಂದರೆ ಅವರ ರಾಜ್ಯವು ಮುಘಲರ ಆಳ್ವಿಕೆಯ ಪ್ರಮುಖ ನಗರಗಳಾದ ದೆಹಲಿ ಹಾಗು ಆಗ್ರಾಕ್ಕೆ ಸಮೀಪದಲ್ಲಿ ಸ್ಥಿತವಾಗಿತ್ತು. ಔರಂಗಜೇಬನ ಆಳ್ವಿಕೆಯಲ್ಲಿ, ರಾಮಸಿಂಗ್ I ಅವಧಿಯ ಯಶಸ್ವೀ ಕಚ್ವಾಹ ರಾಜರುಗಳಿಗೆ ವಾಸ್ತವವಾಗಿ ಅವರ ಪದವಿಗಳಿಂದ ಪದಚ್ಯುತಗೊಳಿಸಲಾಗಿತ್ತು ಜೊತೆಗೆ ದೆಹಲಿಯ ಸಾಮ್ರಾಟರೊಂದಿಗೆ ಹಲವಾರು ವರ್ಷಗಳ ಅವರ ನಿಕಟ ಸಂಬಂಧದ ಹೊರತಾಗಿಯೂ ಅವರು ಕಂದಾಯ ಸಲ್ಲಿಸಬೇಕಿತ್ತು. ಅವರ ಇಬ್ಬರು ನಾಯಕರುಗಳಾದ, ಜೈ ಸಿಂಗ್ I ಹಾಗು ಕುವರ್ ಕಿಶನ್ ಸಿಂಗ್, ಡೆಕ್ಕನ್ ಪ್ರದೇಶದಲ್ಲಿ ದಂಡಯಾತ್ರೆ ಕೈಗೊಂಡ ಸಂದರ್ಭದಲ್ಲಿ ಇಬ್ಬರೂ ನಿಗೂಢ ಪರಿಸ್ಥಿತಿಗಳಲ್ಲಿ ಮರಣ ಹೊಂದುತ್ತಾರೆ. ಸಿಂಹಾಸನಕ್ಕೇರಿದ ಆರು ತಿಂಗಳ ನಂತರ, ಔರಂಗಜೇಬ್ ತನ್ನ ವಿನಾಶಕಾರಿ ಡೆಕ್ಕನ್ ಯುದ್ಧಗಳಲ್ಲಿ ಜೈ ಸಿಂಗ್ ತನಗೆ ನೆರವಾಗಬೇಕೆಂದು ಆದೇಶಿಸುತ್ತಾನೆ. ಅವನ ಈ ಆದೇಶಕ್ಕೆ ಪ್ರತಿಕ್ರಿಯಿಸಲು ಜೈಸಿಂಗ್ ಒಂದು ವರ್ಷ ತೆಗೆದುಕೊಳ್ಳುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ, ತಮ್ಮ ಮನ್ಸಬ್ ಗೆ ಅಗತ್ಯವಿರುವ ದತ್ತದಳಕ್ಕಿಂತ ಹೆಚ್ಚುವರಿಯಾಗಿ ಒಂದು ದೊಡ್ಡ ಸೇನೆಯನ್ನು ನೇಮಕ ಮಾಡಿಕೊಳ್ಳಲು ಇವರಿಗೆ ಆದೇಶಿಸಲಾಗಿರುತ್ತದೆ. ಇವರು ಉದಿತ್ ಸಿಂಗ್ ರ ಪುತ್ರಿಯನ್ನು ಮಾರ್ಚ್ ೧೭೦೧ರಲ್ಲಿ ವಿವಾಹವಾಗುತ್ತಾರೆ, ಉದಿತ್ ಸಿಂಗ್, ಶಿಯೋಪುರ್ ನ ರಾಜಾ ಉತ್ತಮ್ ರಾಮ್ ಗೌರ್ ರ ಸೋದರಳಿಯ. ಜೈ ಸಿಂಗ್,೩ ಆಗಸ್ಟ್ ೧೭೦೧ರಲ್ಲಿ ಬರ್ಹನ್ಪುರ್ ತಲುಪುತ್ತಾರೆ, ಆದರೆ ಭಾರಿ ಮಳೆಯ ಕಾರಣದಿಂದಾಗಿ ಸೇನೆಯನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ೧೩ ಸೆಪ್ಟೆಂಬರ್ ೧೭೦೧ರಂದು ಅವರ ಪದವಿಯನ್ನು ಮತ್ತಷ್ಟು ಕಡಿತಗೊಳಿಸಲಾಗುತ್ತದೆ(೫೦೦ರಷ್ಟು) ಹಾಗು ಅವರು ಕಂದಾಯ ಪಾವತಿಸಲೇಬೇಕಾಗುತ್ತದೆ.[] ಅವರು ನಡೆಸಿದ ಖೇಲ್ನದ ಆಕ್ರಮಣಕ್ಕೆ (೧೭೦೨) ಕೇವಲ ಅವರ ಹಿಂದಿನ ಪದವಿಯನ್ನು ಮತ್ತೆ ನೀಡಲಾಗುತ್ತದೆ; ಹಾಗು ಸವಾಯಿ ಎಂಬ ಬಿರುದನ್ನೂ ನೀಡಲಾಗುತ್ತದೆ.(ಸವಾಯಿ -ಎಂದರೆ ಒಂದೂಕಾಲು, ಅದೆಂದರೆ ಒಬ್ಬನಿಗಿಂತ ಹೆಚ್ಚು ಸಾಮರ್ಥ್ಯವುಳ್ಳವನು). ಔರಂಗಜೇಬನ ಮೊಮ್ಮಗ ಬೀದರ್ ಬಖ್ತ್, ಸವಾಯಿ ಜೈ ಸಿಂಗ್ ರನ್ನು ಮಾಳ್ವ ಪ್ರಾಂತದ ಮೇಲ್ವಿಚಾರಕರಾಗಿ ನಿಯೋಜಿಸಿದಾಗ, ಔರಂಗಜೇಬನು ಈ ನೇಮಕವನ್ನು ಜೈಜ್ ನಿಸ್ಟ್ (ಅನರ್ಹ ಅಥವಾ ಇಸ್ಲಾಂ ಧರ್ಮಕ್ಕೆ ವಿರುದ್ಧ)ಎಂದು ರದ್ದುಪಡಿಸುತ್ತಾನೆ.

ನಂತರದ ಮುಘಲರೊಂದಿಗಿನ ಒಪ್ಪಂದಗಳು

ಬದಲಾಯಿಸಿ

ಔರಂಗಜೇಬನ ಮರಣದ(೧೭೦೭) ಅವಧಿಯಲ್ಲಿ ಮೊದಲಿಗೆ ಜೈ ಸಿಂಗ್ ರಿಗೆ ಆಗಿನ ಸಂದರ್ಭಗಳು ಕೇವಲ ತೊಂದರೆಗಳನ್ನೇ ಹೆಚ್ಚಿಸಿದವು. ಅವರ ಪೋಷಕರಾದ ಬೀದರ್ ಬಖ್ತ್ ಹಾಗು ಅವನ ತಂದೆ ಅಜಮ್, ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವ ನಿಟ್ಟಿನಲ್ಲಿ ನಡೆಸಲಾದ ಯುದ್ಧಗಳಲ್ಲಿ ಸೋತು ಹೋಗುತ್ತಾರೆ-ಈ ಯುದ್ಧದಲ್ಲಿ ವಿಜಯಿಯಾದ ಬಹದ್ದೂರ್ ಶಾ ರಜಪೂತರ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಔರಂಗಜೇಬನ ವಿರೋಧಿ ಹಾಗು ಧರ್ಮಾಂಧ ನೀತಿಯನ್ನೇ ಅನುಸರಿಸುತ್ತಾನೆ. ಸವಾಯಿ ಜೈ ಸಿಂಗ್, ರಜಪೂತರ ರಾಜ್ಯಗಳಾದ ಮೇವಾರ್(ವೈವಾಹಿಕವಾಗಿ) ಹಾಗು ಮಾರ್ವಾರದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ, ಇದು ರಜಪುತಾನದಿಂದ ಮುಘಲರನ್ನು ಸೋಲಿಸಿ ಹೊರಗೋಡಿಸಲು ನೆರವಾಗುತ್ತದೆ. ರಜಪೂತರನ್ನು ಆಡಳಿತದಿಂದ ಹೊರಗಿರಿಸುವ ಔರಂಗಜೇಬನ ನೀತಿಯನ್ನು ನಂತರದ ಮುಘಲರು ಕೈಬಿಡುತ್ತಾರೆ-ಜೈ ಸಿಂಗ್ ರನ್ನು ಆಗ್ರಾ ಹಾಗು ಮಾಳ್ವದ ಪ್ರಮುಖ ಪ್ರಾಂತಗಳ ಮೇಲೆ ಅಧಿಕಾರ ನಡೆಸಲು ನೇಮಕ ಮಾಡುತ್ತಾರೆ. ಆಗ್ರಾದಲ್ಲಿ ಅವರು ಪ್ರಬಲವಾದ ಜಾಟ್ ರೈತಸಮುದಾಯದೊಂದಿಗೆ ಹೋರಾಡುತ್ತಾರೆ.

ಭರತಪುರ್ ರಾಜ್ಯದ ರಚನೆ

ಬದಲಾಯಿಸಿ

ಇತರ ಹಿಂದೂಗಳು ಹಾಗು ಸಿಖ್ ಗಳ ಮಾದರಿಯಲ್ಲಿ, ಜಾಟ್ ಗಳೂ ಸಹ ಔರಂಗಜೇಬನ ಧರ್ಮಾಂಧ ನೀತಿಗಳು ಹಾಗು ಅವನ ಸ್ಥಳೀಯ ಮುಸ್ಲಿಂ ಪ್ರಾಂತಾಧಿಪತಿಗಳ ಕ್ರೌರ್ಯದ ವಿರುದ್ಧ ದಂಗೆಯೇಳುತ್ತಾರೆ. ಔರಂಗಜೇಬನು ಡೆಕ್ಕನ್ ಪ್ರದೇಶದ ವಿರುದ್ಧ ನಡೆಸಿದ ಯುದ್ಧಗಳಲ್ಲಿ ಮುಳುಗಿ, ಕುಗ್ಗಿಹೋಗುತ್ತಿರುವಾಗ, ಜಾಟ್ ಗಳು ಯಶಸ್ವಿಯಾಗಿ ಆಗ್ರಾ ಪ್ರಾಂತದಲ್ಲಿನ ಮುಘಲರ ದುರಾಡಳಿತವನ್ನು ಉರುಳಿಸುತ್ತಾರೆ. ಆದರೆ ನಂತರದ ವರ್ಷಗಳಲ್ಲಿ ಕೆಲವು ಜಾಟ್ ಯುದ್ಧ ತಂಡಗಳು ನಾಗರೀಕರ ಮೇಲೆ ಆಕ್ರಮಣ ನಡೆಸಿ ಅವರನ್ನು ಲೂಟಿ ಮಾಡುತ್ತಿದ್ದವು-ಅವರ ನಾಯಕ ಚುರಮನ್, ರಜಪೂತರ ಮೈತ್ರಿಕೂಟದ(೧೭೦೮–೧೦) ವಿರುದ್ಧ ನಂತರದಲ್ಲಿ ಬಂದ ಮುಘಲರು ನಡೆಸುತ್ತಿದ್ದ ಯುದ್ಧಕ್ಕೆ ಸಹಾಯಕವಾಗಿ ತನ್ನ ೬೦೦೦ ಸೈನಿಕರನ್ನು ಕಳುಹಿಸಿದ. ಸವಾಯಿ ಜೈ ಸಿಂಗ್ ತಮ್ಮ ಪ್ರಾಂತದಲ್ಲಿ ಇಂತಹ ದಂಗೆಯನ್ನು ಸೈರಿಸಲಿಲ್ಲ, ಹಾಗು ಅವರು ೧೭೨೨ರಲ್ಲಿ ತುನ್ ನ ಪ್ರಬಲ ಜಾಟ್ ಸಮುದಾಯದ ಮೇಲೆ ಆಕ್ರಮಣ ನಡೆಸುತ್ತಾರೆ. ಚುರಮನ್ ರ ಸೋದರಳಿಯ ಬದನ್ ಸಿಂಗ್ ಜೈ ಸಿಂಗ್ ರ ನೆರವಿಗೆ ಬರುತ್ತಾನೆ; ಹಾಗು ತುನ್ ನ ದೌರ್ಬಲ್ಯತೆಯ ಸಂಗತಿಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಇವರಿಗೆ ಒದಗಿಸುತ್ತಾನೆ. ಇದರ ವಿಜಯದ ನಂತರ, ಜೈ ಸಿಂಗ್ ಇತರ ಸಣ್ಣ ಕೋಟೆಗಳನ್ನು ಆಕ್ರಮಿಸಿ ಅದನ್ನು ನೆಲಸಮ ಮಾಡುವುದರ ಜೊತೆಗೆ ಜಾಟ್ ಸಮುದಾಯದ ಎಲ್ಲ ಯುದ್ಧ ತಂಡಗಳನ್ನು ಯಶಸ್ವಿಯಾಗಿ ತೊಲಗಿಸುತ್ತಾರೆ. ಸವಾಯಿ ಜೈ ಸಿಂಗ್, ಬದನ್ ಸಿಂಗ್ ನನ್ನು ತಮ್ಮ ಸ್ಥಳೀಯ ಪ್ರತಿನಿಧಿಯಾಗಿ ನೇಮಕ ಮಾಡಿಕೊಳ್ಳುವುದರ ಜೊತೆಗೆ ಜಾಟ್ ಸಮುದಾಯದೊಳಗೆ ಗೌರವಾರ್ಹತೆ ಪಡೆಯಲು ಬ್ರಜ್-ರಾಜ್ (ಮಥುರಾ ರಾಜ್ಯದ ರಾಜ) ಎಂಬ ಬಿರುದನ್ನು ದಯಪಾಲಿಸುತ್ತಾರೆ. ತನ್ನ ಅಧಿಪತಿಯ ಅನುಮತಿಯೊಂದಿಗೆ, ಬದನ್ ಸಿಂಗ್ ಹಲವಾರು ಹೊಸ ಕೋಟೆಗಳನ್ನು ನಿರ್ಮಿಸುತ್ತಾರೆ, ಇದರಲ್ಲಿ ಒಂದು ಕೋಟೆಗೆ ಭರತಪುರ್ ಎಂದು ನಾಮಕರಣ ಮಾಡಲಾಗುತ್ತದೆ, ಇದು ಜಾಟ್ ರಾಜ್ಯದ ಭವಿಷ್ಯದ ರಾಜಧಾನಿಯಾಗುತ್ತದೆ. ಸಾಮಾನ್ಯ ಜಾಟರು, ತಮ್ಮ ಪ್ರಾಂತಾಧಿಕಾರಿಯು ಒಬ್ಬ ಹಿಂದೂ ಹಾಗು ಅವನ ಪ್ರತಿನಿಧಿಯು ತಮ್ಮದೇ ಸಮುದಾಯಕ್ಕೆ ಸೇರಿದ ಒಬ್ಬ ನಾಯಕನೆಂಬ ವಾಸ್ತವದಿಂದ ಸಮಾಧಾನಗೊಳ್ಳುತ್ತಾರೆ. ಬದನ್ ಸಿಂಗ್ ನ ನಾಯಕತ್ವದಲ್ಲಿ ಹಾಗು ಸವಾಯಿ ಜೈ ಸಿಂಗ್ ರ ವಿವೇಚನಾಯುಕ್ತ ನೀತಿಯೊಂದಿಗೆ, ಜಾಟರು ಕೇವಲ ಹಳ್ಳಿಯ ಹೋರಾಟಗಾರರಾಗುವ ಬದಲು ತಮ್ಮದೇ ಆದ ರಾಜ್ಯವನ್ನು ಗುರುತಿಸಿಕೊಳ್ಳುತ್ತಾರೆ.

ಸವಾಯಿ ಜೈ ಸಿಂಗ್ ಹಾಗು ಮರಾಠರು

ಬದಲಾಯಿಸಿ

ಕಚ್ವಾಹ ಅರಸನನ್ನು ೧೭೧೪ ರಿಂದ ೧೭೩೭ರ ನಡುವೆ ಮೂರು ಬಾರಿ ಮಾಳ್ವ ಪ್ರಾಂತವನ್ನು ರಾಜ್ಯಭಾರ ಮಾಡಲು ನೇಮಿಸಲಾಗಿತ್ತು. ಮಾಳ್ವ ಪ್ರಾಂತದ ಅಧಿಕಾರವನ್ನು(ಸುಬಾಹ್ದರ್) [ಸುಬೇದಾರ]ವಹಿಸಿಕೊಂಡ ಮೊದಲ ಅವಧಿಯಲ್ಲಿ (೧೭೧೪–೧೭೧೭) ಜೈ ಸಿಂಗ್, ದಕ್ಷಿಣದಿಂದ(ಡೆಕ್ಕನ್) ಈ ಪ್ರಾಂತಕ್ಕೆ ಪ್ರವೇಶಿಸಿದ ಮರಾಠ ಯುದ್ಧ ತಂಡಗಳನ್ನು ಜೈ ಸಿಂಗ್ ಸತತವಾಗಿ ಸೋಲಿಸಿ ಅದನ್ನು ಹಿಮ್ಮೆಟ್ಟಿಸುತ್ತಾರೆ. ಹೀಗೆ ೧೭೨೮ರಲ್ಲಿ, ಪೇಶ್ವ ಬಾಜಿ ರಾವ್, ಮುಘಲ್ ಡೆಕ್ಕನ್ ನ ಆಳ್ವಿಕೆಯಲ್ಲಿದ್ದ ಹೈದರಾಬಾದಿನ ನಿಜಾಮನನ್ನು ಸೋಲಿಸುತ್ತಾನೆ.(ಶಿಯೋಗಾವ್ ಒಪ್ಪಂದ, ಫೆಬ್ರವರಿ ೧೭೨೮). ನಿಜಾಮನ ಸ್ವಂತ ರಾಜ್ಯವನ್ನು ಉಳಿಸಿಕೊಳ್ಳಲು ಬಾಜಿ ರಾವ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ನಿಜಾಮನು, ಹಿಂದೂಸ್ತಾನಕ್ಕೆ ಪ್ರವೇಶ ಮಾರ್ಗವಾದ ಬೇರಾರ್ ಹಾಗು ಖಂದೇಶ್ ನ ಮೂಲಕ ಮರಾಠರಿಗೆ ಮುಕ್ತವಾಗಿ ಹಾದುಹೋಗಲು ಅವಕಾಶ ಮಾಡಿಕೊಟ್ಟ. ನಂತರದಲ್ಲಿ ಇದರಿಂದ ಮರಾಠರು ಮಾಳ್ವದ ದಕ್ಷಿಣ ಗಡಿಯಾಚೆಗೂ ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಯಿತು. ಆಗ ೨೯ ನವೆಂಬರ್ ೧೭೨೮ರಲ್ಲಿ ಮಾಳ್ವದ ಪ್ರಾಂತಾಧಿಪತಿ ಗಿರ್ಧರ್ ಬಹಾದುರ್ ನ ವಿರುದ್ಧ ಪೇಶ್ವನ ಸಹೋದರ, ಚಿಮಾಜಿ ಅಪ್ಪಾ ಗಳಿಸಿದ ವಿಜಯದ ನಂತರ, ಮರಾಠರು ನರ್ಮದಾ ನದಿಯ ದಕ್ಷಿಣ ಗಡಿಯಾಚೆಗೂ ಇರುವ ರಾಜ್ಯವನ್ನೂ ನಡುಗಿಸುವಲ್ಲಿ ಸಮರ್ಥರಾದರು. ಎರಡನೇ ಬಾರಿ ಮಾಳ್ವ ಪ್ರಾಂತದ ಅಧಿಕಾರ ವಹಿಸಿಕೊಂಡ (೧೭೨೯–೧೭೩೦)ನಂತರ, ದೂರದೃಷ್ಟಿಯುಳ್ಳ ಒಬ್ಬ ರಾಜ್ಯನೀತಿಜ್ಞರಾಗಿ ಸವಾಯಿ ಜೈ ಸಿಂಗ್, ರಾಜ್ಯದ ಪರಿಸ್ಥಿತಿಯಲ್ಲಿ ಒಂದು ಸಂಪೂರ್ಣ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾದರು, ಅಲ್ಲಿ ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡು ಹನ್ನೆರಡು ವರ್ಷಗಳು ಕಳೆದಿದ್ದವು. ಹೈದರಾಬಾದಿನ ನಿಜಾಮನು ದಂಗೆಯೆದ್ದ ಕಾರಣದಿಂದಾಗಿ ಆ ವೇಳೆಗಾಗಲೇ ಪರಮಾಧಿಕಾರವು ದುರ್ಬಲಗೊಳ್ಳುವುದರ ಜೊತೆಗೆ ಮರಾಠರ ಆಂತರಿಕ ಪರಿಸ್ಥಿತಿಯನ್ನು ಸುಭದ್ರಗೊಳಿಸಲು ಪೇಶ್ವ ಬಾಜಿ ರಾವ್ ನ ಸಾಮರ್ಥ್ಯದ ಪರಿಣಾಮವಾಗಿ ಅವರು ಗುಜರಾತ್ ನ ಮೇಲೆ ಆಕ್ರಮಣ ಮಾಡುತ್ತಾರೆ ಹಾಗು ಅವರ ಸೈನ್ಯವು ಬಹುವಾಗಿ ವಿಸ್ತಾರಗೊಳ್ಳುತ್ತದೆ. ಆದಾಗ್ಯೂ, ತಮ್ಮ ರಾಜವಂಶಸ್ಥ ಪೂರ್ವೀಕರ ನಡುವಿನ ಸ್ನೇಹದ ಹೆಸರಿನಲ್ಲಿ, ಸವಾಯಿ ಜೈ ಸಿಂಗ್ II, ಮಾಂಡುನ ಕೋಟೆಯಲ್ಲಿ ಪರಮಾಧಿಕಾರವನ್ನು ಮತ್ತೆ ಸ್ಥಾಪಿಸಲು ಶಾಹುನ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ, ಈ ಕೋಟೆಯನ್ನು ಮರಾಠರು ಕೆಲ ವಾರಗಳ ಹಿಂದೆ ಆಕ್ರಮಿಸಿಕೊಂಡಿರುತ್ತಾರೆ.(ಕ್ರಮ ದಿನಾಂಕ ೧೯ ಮಾರ್ಚ್ ೧೭೩೦) ಮೇ ತಿಂಗಳ ಹೊತ್ತಿಗೆ, ತುರ್ತು ವಿಷಯಗಳಲ್ಲಿ ಪಾಲ್ಗೊಳ್ಳಲು ಜೈ ಸಿಂಗ್ ರನ್ನು ರಜಪುತಾನಕ್ಕೆ ಹಿಂದಕ್ಕೆ ಕರೆಸಿಕೊಳ್ಳಲಾಯಿತು, ಇದರಿಂದಾಗಿ ಅವರು ಮತ್ತೆರಡು ವರ್ಷಗಳ ಕಾಲ ಮಾಳ್ವದಿಂದ ಪ್ರತ್ಯೇಕಗೊಂಡರು. ಜೈ ಸಿಂಗ್ ರನ್ನು ಕಡೆ ಬಾರಿಗೆ ಮಾಳ್ವದ(ಸುಬೇದಾರ) ಸುಬಹ್ದಾರರಾಗಿ ೧೭೩೨ರಲ್ಲಿ ನೇಮಕ ಮಾಡಲಾಯಿತು(೧೭೩೨–೧೭೩೭), ಈ ಅವಧಿಯಲ್ಲಿ ಅವರು ಶಾಹುವಿನ ಮುಖಂಡತ್ವದಲ್ಲಿದ್ದ ಮರಾಠರೊಂದಿಗೆ ಸಂಧಾನ ಮಾಡಿಕೊಳ್ಳಲು ಮೊಹಮ್ಮದ್ ಷಾನಿಗೆ ಶಿಫಾರಸು ಮಾಡಿದರು, ಶಾಹು ದಿವಂಗತ ಮಿರ್ಜಾ ರಾಜ(ಜೈ ಸಿಂಗ್ I) ಹಾಗು ತನ್ನ ಅಜ್ಜ ಶಿವಾಜಿ ನಡುವಿನ ಸ್ನೇಹ ಹಾಗು ಸಂಬಂಧವನ್ನು ಬಹಳವಾಗಿ ಸ್ಮರಿಸುತ್ತಾನೆ. ಈ ರೀತಿಯಾದ ವಿವೇಚನಾಯುಕ್ತ ಸಲಹೆಯ ಜೊತೆಗೆ ದೆಹಲಿಯ ಮುಘಲ್ ಆಸ್ಥಾನದಲ್ಲಿ ಜೈ ಸಿಂಗ್ ಗೆ ವಿರುದ್ಧವಾಗಿ ಮನವೊಲಿಸಿಕೊಳ್ಳುವ ಪ್ರಯತ್ನ, ಜೊತೆಗೆ ತನ್ನದೇ ಆದ ಉದ್ದೇಶವನ್ನು ಪ್ರತಿಪಾದಿಸುವ ಮೊಹಮ್ಮದ್ ಷಾನ ಅಸಾಮರ್ಥ್ಯದಿಂದಾಗಿ, ಜೈ ಸಿಂಗ್ ರನ್ನು ಅವರ ಪದವಿಯಿಂದ ಪದಚ್ಯುತಗೊಳಿಸಲಾಯಿತು, ಈ ನಡುವೆ ಮುಘಲರು ಯುದ್ಧ ಮಾಡಲು ನಿರ್ಧರಿಸಿದರು. ಈ ವಿಷಯಕ್ಕೆ ಬಂದರೆ, ಸವಾಯಿ ಜೈ ಸಿಂಗ್ II ಕಾರ್ಯತಃ ಮಾಳ್ವದ ಕಡೆ ಸುಬಹ್ದಾರರು, ಏಕೆಂದರೆ ಇವರ ಸ್ಥಾನವನ್ನು ೧೭೩೭ರಲ್ಲಿ ನಿಜಾಮ್-ಉಲ್-ಮುಲ್ಕ್ ಅಸಫ್ ಜಾಹ್ ಆಕ್ರಮಿಸಿದ, ಈತ ಪೇಶ್ವರಿಂದ ನಿರರ್ಥಕ ಸೋಲನ್ನು ಅನುಭವಿಸಿದ. ಇದರ ಪರಿಣಾಮವಾಗಿ ಮರಾಠರು ಸಂಪೂರ್ಣವಾಗಿ ಮಾಳ್ವ Archived 2007-05-20 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ವಶಪಡಿಸಿಕೊಂಡರು.(ದುರಹ ಒಪ್ಪಂದ, ಶನಿವಾರ ೭ ಜನವರಿ ೧೭೩೮). ದೆಹಲಿ ಆಡಳಿತದ ಅವನತಿಯನ್ನು ಬಳಸಿಕೊಂಡು, ಪರ್ಷಿಯನ್ ಆಕ್ರಮಣಕಾರ ನಾದಿರ್ ಷಾ ಮುಘಲರನ್ನು ಕರ್ನಾಲ್ ನಲ್ಲಿ ಸೋಲಿಸಿ, ಅಂತಿಮವಾಗಿ ದೆಹಲಿಯನ್ನು ಕೊಳ್ಳೆ ಹೊಡೆಯುತ್ತಾನೆ.(೧೧ ಮಾರ್ಚ್, ಅದೇ ವರ್ಷ) ಗಲಭೆ ಉಂಟಾದ ಈ ಅವಧಿಯಲ್ಲಿ ಜೈ ಸಿಂಗ್ ತನ್ನ ರಾಜ್ಯದಲ್ಲೇ ಉಳಿಯುತ್ತಾರಾದರೂ-ವ್ಯರ್ಥವಾಗಿ ಕೂರುವುದಿಲ್ಲ. ಮುಂಬರುವ ತೊಂದರೆಗಳನ್ನು ಮನಗಂಡು, ಸವಾಯಿ ಜೈ ಸಿಂಗ್ ಈ, ಜೈಪುರದಡಿಯಲ್ಲಿ ಠಿಕಾಣಗಳೊಳಗೆ ವ್ಯಾಪಕವಾದ ರಕ್ಷಾಣೋಪಾಯ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ, ಇಂದಿಗೂ ಹಿಂದಿನ ಜೈಪುರ ರಾಜ್ಯವನ್ನು ಸುತ್ತುವರಿದ ನಂತರದ ಕೋಟೆ ನಿರ್ಮಾಣಗಳನ್ನು ಸವಾಯಿ ಜೈ ಸಿಂಗ್ IIರ ಆಳ್ವಿಕೆಯ ಅವಧಿಯದ್ದೆಂದು ಹೇಳಲಾಗುತ್ತದೆ.

ಸವಾಯಿ ಜೈ ಸಿಂಗ್ ರ ಶಸ್ತ್ರಸಜ್ಜಿತ ಸೇನೆಗಳು ಹಾಗು ರಜಪುತಾನದಲ್ಲಿ ಅವರ ಮಹತ್ತ್ವಾಕಾಂಕ್ಷೆಗಳು

ಬದಲಾಯಿಸಿ

ಜೈ ಸಿಂಗ್ ತಮ್ಮ ಪೂರ್ವೀಕರ ಸಾಮ್ರಾಜ್ಯದ ಗಾತ್ರವನ್ನು, ಮುಘಲರಿಂದ ಹಾಗು ದಂಗೆಕೋರ ನಾಯಕರುಗಳಿಂದ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ವಿಸ್ತರಿಸಿದರು-ಕೆಲವೊಂದು ಬಾರಿ ಹಣ ನೀಡುವ ಮೂಲಕ ಹಾಗು ಕೆಲವೊಂದು ಬಾರಿ ಯುದ್ಧದ ಮುಖಾಂತರ ತಮ್ಮ ರಾಜ್ಯದ ವಿಸ್ತರಣೆ ಮಾಡಿಕೊಂಡರು. ಅವರ ಅತ್ಯಂತ ಗಣನೀಯ ಪ್ರಮಾಣದ ಸಂಪಾದನೆಯೆಂದರೆ ಶೇಖಾವತಿ, ಇದು ಜೈ ಸಿಂಗ್ ರಿಗೆ, ತ್ವರಿತವಾಗಿ ವಿಸ್ತರಿಸುತ್ತಿರುವ ಅವರ ಸೇನೆಗೆ ಅತ್ಯಂತ ಸಮರ್ಥ ಸೈನಿಕ Archived 2006-10-20 ವೇಬ್ಯಾಕ್ ಮೆಷಿನ್ ನಲ್ಲಿ. ರನ್ನೂ ಸಹ ನೀಡಿತು. ಜಾದುನಾಥ್ ಸರ್ಕಾರ್ ರ ಒಂದು ಅಂದಾಜಿನ ಪ್ರಕಾರ; ಜೈ ಸಿಂಗ್ ರ ಸಾಮಾನ್ಯ ಸೈನ್ಯವು ೪೦,೦೦೦ ಜನರಿಗಿಂತ ಹೆಚ್ಚಿರಲಿಲ್ಲ, ಇದರಿಂದ ವರ್ಷಕ್ಕೆ ಸುಮಾರು ೬೦ ಲಕ್ಷಗಳಷ್ಟು ವೆಚ್ಚ ತಗಲುತ್ತಿತ್ತು, ಆದರೆ ಅವರ ಬಲವು ದೊಡ್ಡ ಸಂಖ್ಯೆಯ ಫಿರಂಗಿದಳ ಹಾಗು ಶಸ್ತ್ರಾಸ್ತ್ರಗಳ ಹೇರಳ ಸರಬರಾಜಿನಲ್ಲಿ ಅಡಗಿತ್ತು, ಇದನ್ನು ಅವರು ಬಹಳ ಜಾಗರೂಕರಾಗಿ ನಿರ್ವಹಣೆ ಮಾಡುತ್ತಿದ್ದರು. ಅದಲ್ಲದೇ ಸಾಂಪ್ರದಾಯಿಕ ರಜಪೂತ ಕತ್ತಿಗಳು ಹಾಗು ಗುರಾಣಿಗಳ ಬದಲಾಗಿ ಕಾಲ್ನಡಿಗೆಯಲ್ಲಿ ಸರಬತ್ತಿ ಬಂದೂಕನ್ನು ಹಿಡಿದು ಯುದ್ಧ ಮಾಡುವ ಅವರ ರೀತಿ ಗಮನಾರ್ಹವಾಗಿತ್ತು - ಭಾರತೀಯ ಸಮರದಲ್ಲಿ ಪರಿಚಯಿಸಲಾದ ಫಿರಂಗಿಗಳು ತರುವ ಬದಲಾವಣೆಯನ್ನು ಬಹಳ ಮುಂಚೆಯೇ ಇವರು ಗುರುತಿಸಿದ್ದರು. ಅಲ್ಲದೇ ಗರಿಷ್ಠ ಮಟ್ಟದಲ್ಲಿ ತಮ್ಮ ಸೇನೆಯು ಗುಂಡು ಹಾರಿಸಿ ವಿರೋಧಿಗಳ ಶಕ್ತಿಯನ್ನು ನಾಶಮಾಡಲು ಹೊಸ ಯುದ್ಧ ನೀತಿಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ಅವರು ನಂತರದ ಭಾರತೀಯ ರಾಜರಾದ ಮಿರ್ಜಾ ನಜಾಫ್ ಖಾನ್, ಮಹದ್ಜಿ ಸಿಂಧಿಯಾ ಹಾಗು ಟೀಪು ಸುಲ್ತಾನ್ ರ ಯಶಸ್ಸನ್ನು ನಿರೀಕ್ಷಿಸಿದ್ದರು. ಸವಾಯಿ ಜೈ ಸಿಂಗ್ ರ ಪ್ರಾಯೋಗಿಕ ಆಯುಧ ಜೈವಾನ, ಅವರ ರಾಜಧಾನಿಯು ಜೈಪುರಕ್ಕೆ ಸ್ಥಳಾಂತರಗೊಳ್ಳುವ ಮೊದಲು ರೂಪುಗೊಂಡಿತ್ತು, ಇದು ಇಂದಿಗೂ ವಿಶ್ವದ ಅತ್ಯಂತ ದೊಡ್ಡ ಗಾಲಿಯುಳ್ಳ ಬಂಡಿತೋಪಾಗಿ ಉಳಿದಿದೆ. ಸವಾಯಿ ಜೈ ಸಿಂಗ್, ಮಾಳ್ವದ ಅಧಿಕಾರವನ್ನು ೧೭೩೨ರಲ್ಲಿ ವಹಿಸಿಕೊಂಡ ನಂತರ, ೩೦,೦೦೦ ಸೈನ್ಯ, ಹಾಗು ಅದೇ ಸಂಖ್ಯೆಯಲ್ಲಿ ಅಶ್ವಸೈನ್ಯ ಹಾಗು ಕಾಲ್ನಡಿಗೆ ಬಂದೂಕುಧಾರಿ ಸಿಪಾಯಿಗಳ ಕಾಲ್ದಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡರು. ಇದು ಆಗ್ರಾ ಹಾಗು ಅಜ್ಮೇರ್ ಗಳ ಸುಬಾಹ್ಸ್ ಗಳಲ್ಲಿರುವ ಅವರ ದತ್ತದಳವನ್ನು ಹಾಗು ಅವರ ಸ್ವಂತ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಹಾಗು ಕೋಟೆ ರಕ್ಷಕಸೈನ್ಯಗಳನ್ನು ಒಳಗೊಂಡಿರಲಿಲ್ಲ. ಜೈ ಸಿಂಗ್ ರ ಶಸ್ತ್ರಸಜ್ಜಿತ ಬಲವು ಅವರನ್ನು ಎಂದಿಗೂ ಉತ್ತರ ಭಾರತದ ಅತ್ಯಂತ ಅಸಾಧಾರಣ ರಾಜನನ್ನಾಗಿ ಮಾಡಿತು. ಜೊತೆಗೆ ಇತರ ಎಲ್ಲ ರಾಜರುಗಳು ರಕ್ಷಣೆಗಾಗಿ ಹಾಗು ಪರಮಾಧಿಕಾರವುಳ್ಳ ಪ್ರದೇಶದಲ್ಲಿ ಅವರ ಹಿತಾಸಕ್ತಿಗಳಿಗೆ ನೆರವಾಗಲು ಇವರ ಸಹಾಯ ಬಯಸುತ್ತಿದ್ದರು.ಮರಾಠರ ಆಧಿಪತ್ಯದ ಶೀಘ್ರ ಹರಡುವಿಕೆ ಹಾಗು ಉತ್ತರ ಭಾಗದ ಮೇಲೆ ಅವರುಗಳ ಆಕ್ರಮಣವು ರಜಪೂತ ನಾಯಕರುಗಳ ನಡುವೆ ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿತು——ಈ ಗಂಡಾಂತರದಿಂದ ಪಾರಾಗಲು ಜೈ ಸಿಂಗ್ ಹುರ್ದನಲ್ಲಿ ರಜಪೂತ ನಾಯಕರುಗಳ ಒಂದು ಸಭೆ ಕರೆದರು, ಆದರೆ ಈ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ನಂತರ ೧೭೩೬ರಲ್ಲಿ ಪೇಶ್ವ ಬಾಜಿ ರಾವ್, ಮೇವಾರ್ ಸಾಮ್ರಾಜ್ಯದ ಮೇಲೆ ಕಪ್ಪವನ್ನು ಹೇರಿದ. ಮರಾಠರ ಪ್ರಾಬಲ್ಯಕ್ಕೆ ಮತ್ತಷ್ಟು ಭಂಗ ತರುವ ಉದ್ದೇಶದಿಂದ, ಸವಾಯಿ ಜೈ ಸಿಂಗ್, ಜೈಪುರದ ಆಡಳಿತದಡಿಯಲ್ಲಿ ಒಂದು ಸ್ಥಳೀಯ ಮುಖಂಡತ್ವವನ್ನು ಯೋಜಿಸಿದಾಗ, ಇದು ರಜಪುತಾನದ ರಾಜಕೀಯ ಒಕ್ಕೂಟವಾಗಿತ್ತು. ಅವರು ಮೊದಲು ಮಾಳ್ವ ಪ್ರಸ್ಥಭೂಮಿಯಲ್ಲಿರುವ ಬುಂಡಿ ಹಾಗು ರಾಮಪುರವನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಮೇವಾರದೊಂದಿಗೆ ವೈವಾಹಿಕ ಸಂಬಂಧವನ್ನೂ ಏರ್ಪಡಿಸುತ್ತಾರೆ, ಅಲ್ಲದೇ ಬಿಕನೇರ್ ಹಾಗು ಜೋಧ್ಪುರದ ರಾಥೋರ್ ಗಳ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಈ ಅರೆ-ಯಶಸ್ವಿ ಪ್ರಯತ್ನಗಳು ಕೇವಲ ಮರಾಠರಿಗೆ ನೆರವಾಗುತ್ತಿದ್ದ ಇತರ ರಜಪೂತ ಗುಂಪುಗಳನ್ನು ಎಚ್ಚರಿಸಿತು. ಇದರ ಪರಿಣಾಮವಾಗಿ ರಾಜಸ್ಥಾನದ ಮೇಲೆ ಅವರ ಪ್ರಾಬಲ್ಯವನ್ನೂ ಹೆಚ್ಚಿಸಿತು! ಆದರೆ ೧೭೪೩ರಲ್ಲಿ ಸವಾಯಿ ಜೈ ಸಿಂಗ್ ರ ನಿಧನದ ನಂತರ(ಅವರ ಅಂತ್ಯಸಂಸ್ಕಾರವನ್ನು ಜೈಪುರದ ಉತ್ತರ ಭಾಗದಲ್ಲಿರುವ ಗೈತೋರ್ ನ ರಾಯಲ್ ದಹನಭೂಮಿಯಲ್ಲಿ ನಡೆಸಲಾಯಿತು), ಈ ಸಮಸ್ಯೆಗಳು ಅವರ ಅಷ್ಟೇನೂ ಸಮರ್ಥನಲ್ಲದ ಪುತ್ರ ಈಶ್ವರಿ ಸಿಂಗ್ ಗೆ ವರ್ಗಾವಣೆಯಾಯಿತು.

ಖಗೋಳಶಾಸ್ತ್ರದ ಅಧ್ಯಯನ

ಬದಲಾಯಿಸಿ

ಜಯಸಿಂಹನಿಗೆ ಬಾಲ್ಯದಿಂದಲೂ ಖಗೋಳಶಾಸ್ತ್ರದಲ್ಲಿ ಉತ್ಕಟಾಸಕ್ತಿ. ಅದರ ವಿಶೇಷವಾದ ಅಧ್ಯಯನಕ್ಕಾಗಿ ಜಯನಗರ ಅಥವಾ ಜಯಪುರ ಎಂಬ ನಗರವನ್ನು 1728ರಲ್ಲಿ ನಿರ್ಮಿಸಿ ತನ್ನ ಅಧ್ಯಯನದ ಕೇಂದ್ರವನ್ನಾಗಿ ಮಾಡಿಕೊಂಡ. ಆಗಿನ ಕಾಲದಲ್ಲಿ ನಾನಾ ಸಿದ್ಧಾಂತಗಳ ಆಧಾರದಿಂದ ತಯಾರಾಗಿ ಬಳಕೆಯಲ್ಲಿದ್ದ ಖಗೋಳ ಶಾಸ್ತ್ರೀಯ ಕೋಷ್ಟಕಗಳಲ್ಲಿ ಅನೇಕ ದೋಷಗಳನ್ನು ಗಮನಿಸಿ, ದೋಷರಹಿತವಾದ ಮತ್ತು ಯಾವುದಾದರೊಂದು ಸಿದ್ಧಾಂತಕ್ಕೆ ಒಳಪಟ್ಟಿರುವ ಕೋಷ್ಟಕಗಳನ್ನು ತಯಾರಿಸಬೇಕೆಂದು ನಿಶ್ಚಯಿಸಿದ. ಇದಕ್ಕಾಗಿ ಜಯಸಿಂಹ ಹಿಂದೂ, ಮುಸ್ಲಿಮ್ ಮತ್ತು ಯೂರೋಪಿಯನ್ ಪದ್ಧತಿಗಳ ಖಗೋಳಶಾಸ್ತ್ರ ಗ್ರಂಥಗಳನ್ನು ಓದಿ 1728ರಲ್ಲಿ ಚಕ್ರವರ್ತಿಯ ಹೆಸರಿನಲ್ಲಿ ಜಿಜ್-ಎ-ಮಹಮ್ಮದ್ ಷಾಹಿ ಎಂಬ ಖಗೋಳ ಶಾಸ್ತ್ರೀಯ ಕೋಷ್ಟಕಗಳನ್ನು ತಯಾರಿಸಿದ. ಜಯಸಿಂಹ ಅಧ್ಯಯನ ಮಾಡಿದ ಗ್ರಂಥಗಳಲ್ಲಿ ಟಾಲೆಮಿಯ ಆಲ್ಮಜೆಸ್ಟ್, ಉಲೂಣ್ ಬೇಗ್‍ನ ಖಗೋಳ ಶಾಸ್ತ್ರೀಯ ಕೋಷ್ಟಕಗಳು. ಅರಿಸ್ಟಾಟಲನ ಕೆಲವು ಗ್ರಂಥಗಳು, ಲಾಹೆರ್‍ನ ಖಗೋಳಶಸ್ತ್ರೀಯ ಕೋಷ್ಟಕಗಳು, ಫ್ಲೇಮ್‍ಸ್ಟೀಡನ ಹಿಸ್ಟೋರಿಯಾ ಸೆಲೆ ಸ್ಟಿಸ್ ಬ್ರಿಟಾನ್ನಿಕಾ, ಯೂಕ್ಲಿಡನ ಎಲಿಮೆಂಟ್ಸ್, ಸಮತಲ ಮತ್ತು ಗೋಳೀಯ ತ್ರಿಕೋಣಮಿತಿಯನ್ನು ಕುರಿತ ಕೆಲವು ಪಾಶ್ಚಾತ್ಯ ಗ್ರಂಥಗಳು ಮುಖ್ಯವಾದವು. ತನಗೆ ಅಧ್ಯಯನದಲ್ಲಿ ನೆರವಾಗಲು ಭಾರತೀಯ, ಮುಸ್ಲಿಮ್ ಮತ್ತು ಯೂರೋಪಿಯನ್ ಖಗೋಳಶಾಸ್ತ್ರಜ್ಞರನ್ನು ಈತ ನೇಮಕ ಮಾಡಿಕೊಂಡಿದ್ದ. ಖಗೋಳ ಶಾಸ್ತ್ರದ ಅಧ್ಯಯನದಲ್ಲಿ ತನ್ನ ಪ್ರಧಾನ ಸಹಾಯಕನಾದ, ಅರಾಬಿಕ್ ಮತ್ತು ಸಂಸ್ಕೃತ ಭಾಷೆಗಳ ಹಾಗೂ ಭಾರತೀಯ ಖಗೋಳಶಾಸ್ತ್ರ ವಿದ್ವಾಂಸನಾದ, ಸಾಮ್ರಾಟ್ ಜಗನ್ನಾಥನೆಂಬ ಪಂಡಿತನಿಂದ ಈತ ಯೂಕ್ಲಿಡನ ಎಲಿಮೆಂಟ್ಸ್ ಎಂಬ ಗ್ರಂಥವನ್ನು ರೇಖಾಗಣಿತ ಕ್ಷೇತ್ರ ವ್ಯವಹಾರ ಎಂಬ ಹೆಸರಿನಲ್ಲಿ ಸಂಸ್ಕøತಕ್ಕೆ ಅನುವಾದ ಮಾಡಿಸಿದ (1730). ಅರಾಬಿಕ್ ಭಾಷೆಗೆ ಮಿಜಾಸ್ತಿ ಎಂಬ ಹೆಸರಿನಲ್ಲಿ ಅನುವಾದವಾಗಿದ್ದ ಟಾಲೆಮಿಯ ಆಲ್ಮಜೆಸ್ಟ್ ಎಂಬ ಗ್ರಂಥವನ್ನು ಜಗನ್ನಾಥ 1731ರಲ್ಲಿ ಸಮ್ರಾಟ್ ಜಗನ್ನಾಥ ಎಂಬ ಹೆಸರಿನಿಂದ ಸಂಸ್ಕøತಕ್ಕೆ ಅನುವಾದಿಸಿದ. ಇದಕ್ಕೆ ಸಿದ್ಧಾಂತಸಾರ ಕೌಸ್ತುಬವೆಂದೂ ಹೆಸರುಂಟು. ಇದು ಆಲ್ಮಜೆಸ್ಟ್ ಗ್ರಂಥದ ಕೇವಲ ಅನುವಾದ ಅಲ್ಲ. ಬದಲು ಜಯಸಿಂಹನಿಂದ ನಿರೂಪಿತವಾದ ಖಗೋಳಶಾಸ್ತ್ರದ ಹೊಸಪದ್ಧತಿಗಳನ್ನೂ ಒಳಗೊಂಡಿರುವುದಾಗಿ ಜಯಸಿಂಹ ಹೇಳಿದ್ದಾನೆ. ಇವು ಮುದ್ರಿತವಾಗಿರುವಂತೆ ಕಾಣುವುದಿಲ್ಲ. ಹೀಗೆ ಪಾಶ್ಚಾತ್ಯ ವಿಜ್ಞಾನಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿಸಿರುವುದಲ್ಲದೆ ಜಯಸಿಂಹ ಸ್ವತಂತ್ರವಾಗಿ ಖಗೋಳದೃಶ್ಯಗಳ ಪರೀಕ್ಷೆಗೆ ಉಪಯುಕ್ತವಾದ ಲೋಹ ಯಂತ್ರಗಳ ರಚನೆಯನ್ನು ಕುರಿತ ಎರಡು ಗ್ರಂಥಗಳನ್ನು ಕೂಡ ರಚಿಸಿದ್ದಾನೆ. ಇವುಗಳಲ್ಲಿ ಯಂತ್ರರಾಜ ಎಂಬ ಗ್ರಂಥ ಛಾಯಾ ಯಂತ್ರದ ರಚನಾಕ್ರಮವನ್ನೂ ಯಂತ್ರರಾಜರಚನಾಪ್ರಕಾರ ಎಂಬ ಗ್ರಂಥ ನಾಕ್ಷತ್ರಿಕ ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಕಾಲಗಳನ್ನು ತಿಳಿಯಲು ಸಹಾಯಕವಾಗುವ ಯಂತ್ರದ ರಚನೆಯನ್ನೂ ತಿಳಿಸುತ್ತವೆ. ಇವೂ ಮುದ್ರಣಗೋಂಡಿಲ್ಲವೆಂದು ತೋರುತ್ತದೆ.

ಜಯಸಿಂಹ ಖಗೋಳಶಾಸ್ತ್ರದ ನಾನಾ ಸಿದ್ಧಾಂತ ಗ್ರಂಥಗಳ ಕೇವಲ ಅಧ್ಯಯನದಿಂದ ತೃಪ್ತನಾಗದೆ, ಆ ಶಾಸ್ತ್ರದ ಹಲವು ವಿಷಯಗಳನ್ನು ಪ್ರತ್ಯಕ್ಷವಾಗಿ ತಿಳಿದು ಸಂಗ್ರಹಿಸಲು ಪಾಡ್ರೆ ಮ್ಯಾನ್ಯುಯಲ್ ಎಂಬ ಪೋರ್ಚುಗಲ್ ಕ್ರೈಸ್ತಮಂಡಲಿಯ ಸದಸ್ಯನೊಡನೆ ಕೆಲವು ವಿದ್ವಾಂಸರನ್ನು ಯೂರೋಪಿಗೆ ಕಳುಹಿಸಿದ. ಮಹಮ್ಮದ್ ಷರೀಫ್ ಎಂಬ ವಿದ್ವಾಂಸನನ್ನು ದಕ್ಷಿಣ ಮೇರುವಿನ ಸಮೀಪದ ಒಂದು ಸ್ಥಳಕ್ಕೂ ಮಹಮ್ಮದ್ ಮಹದಿ ಎಂಬ ವಿದ್ವಾಂಸನನ್ನು ಇನ್ನೂ ಆಚಿನ ದ್ವೀಪಗಳಿಗೂ ಕಳುಹಿಸಿದ್ದ. ಅಲ್ಲದೆ ಪಾಶ್ಚಾತ್ಯ ದೇಶಗಳಿಂದಲೂ ಖಗೋಳಶಾಸ್ತ್ರ ಪಂಡಿತರನ್ನು ಜಯಪುರಕ್ಕೆ ಆಹ್ವಾನಿಸಿ ವಿಚಾರಗೋಷ್ಠಿಗಳನ್ನು ಏರ್ಪಡಿಸಿದ್ದ. ಅಂಡ್ರೆಸ್ಟ್ರೋಬೆಲ್ ಎಂಬ ಜರ್ಮನಿಯ ಖಗೋಳಶಾಸ್ತ್ರಜ್ಞನನ್ನು ಕರೆಯಿಸಿ ತನ್ನಲ್ಲೇ ಇರಿಸಿಕೊಂಡಿದ್ದ. ಹೀಗೆ ಖಗೋಳಶಾಸ್ತ್ರದ ನಾನಾ ಸಿದ್ಧಾಂತಗಳ ಪರಿಚಯವನ್ನು ಹೊಂದಿ ಅನಂತರ ವೀಕ್ಷಣಾಲಯಗಳ ನಿರ್ಮಾಣಕಾರ್ಯವನ್ನು ಜಯಸಿಂಹ ಪ್ರಾರಂಭಿಸಿದ. ಲೋಹಗಳಿಂದ ರಚಿತವಾದ ಯಂತ್ರಗಳು ಉಪಯೋಗವಾದಂತೆಲ್ಲ ಸವೆದು ಹೋಗುವುದರಿಂದ ಅವುಗಳಿಂದ ಸೂಚಿತವಾದ ಅಳತೆಗಳು ಒಂದೇ ರೀತಿಯಾಗಿ ಇರುವುದಿಲ್ಲವೆಂದೂ ಅವನ್ನು ಸುಲಭವಾಗಿ ಸರಿಪಡಿಸುವುದು ಸಾಧ್ಯವಲ್ಲವೆಂದೂ ತಿಳಿದು ಅದೇ ಮಾದರಿಯಲ್ಲಿ ಬೃಹದಾಕಾರದ ಹೆಚ್ಚಿನ ನಿಖರತೆಯನ್ನು ಸಾಧಿಸಬಹುದು ಎಂಬುದು ಇನ್ನೊಂದು ಉದ್ದೇಶ. ಕಲ್ಲಿನಿಂದ ನಿರ್ಮಿತವಾದ ಯಂತ್ರಗಳನ್ನು ಒಳಗೊಂಡ ವೀಕ್ಷಣಾಲಯಗಳನ್ನು ನಿರ್ಮಿಸುವುದರಲ್ಲಿ ಆಸಕ್ತನಾದ. ಜಯಸಿಂಹನಿಂದ ರಚಿತವಾದ ಲೋಹಯಂತ್ರಗಳನ್ನು ಈಗಲೂ ನಾವು ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.


ಸಾಮಾಜಿಕ ಹಾಗು ಸಾಂಸ್ಕೃತಿಕ ಸಾಧನೆಗಳು

ಬದಲಾಯಿಸಿ

ಸವಾಯಿ ಜೈ ಸಿಂಗ್, ಇತ್ತೀಚಿನ ಶತಮಾನಗಳಲ್ಲಿ ಪುರಾತನ ವೈದಿಕ ಆಚರಣೆಗಳಾದ ಅಶ್ವಮೇಧ ಯಾಗಗಳು (೧೭೧೬)[] ಹಾಗು ವಾಜಪೇಯವನ್ನು (೧೭೩೪)ನಡೆಸಿದ ಮೊದಲ ಹಿಂದೂ ರಾಜ, ಎರಡೂ ಸಂದರ್ಭಗಳಲ್ಲಿ ಧರ್ಮಾರ್ಥ ಕಾರ್ಯಗಳಿಗೆ ಹೆಚ್ಚಿನ ಹಣ ನೀಡಲಾಗಿತ್ತು. ವೈಷ್ಣವ ಧರ್ಮದ ನಿಮ್ಬರ್ಕ ಸಂಪ್ರದಾಯದಿಂದ ದೀಕ್ಷೆ ಪಡೆದು, ಸಂಸ್ಕೃತ ಭಾಷಾ ಕಲಿಕೆಯನ್ನೂ ಸಹ ಉತ್ತೇಜಿಸಿದರು. ಅಲ್ಲದೇ ಹಿಂದೂ ಸಮಾಜದಲ್ಲಿ ಸತಿ ರದ್ದತಿಯಂತಹ ಸುಧಾರಣೆಗೆ ದನಿ ಎತ್ತುವುದರ ಜೊತೆಗೆ ರಜಪೂತರ ಮದುವೆಗಳಲ್ಲಿ ಮಾಡಲಾಗುತ್ತಿದ್ದ ಅನವಶ್ಯಕ ದುಂದು ವೆಚ್ಚಕ್ಕೆ ತಡೆ ಒಡ್ಡಿದರು. ಔರಂಗಜೇಬನು ಹಿಂದೂ ಜನರ ಮೇಲೆ ಹೇರಿದ್ದ ಒಲ್ಲದ ಜಜಿಯಾ ತೆರಿಗೆಯನ್ನು ಜೈ ಸಿಂಗ್ ರ ಒತ್ತಾಯದ ಮೇರೆಗೆ ಅಂತಿಮವಾಗಿ ಸಾಮ್ರಾಟ ಮೊಹಮ್ಮದ್ ಷಾ ೧೭೨೦ರಲ್ಲಿ ರದ್ದುಪಡಿಸುತ್ತಾನೆ. ಜೈ ಸಿಂಗ್, ಗಯಾದಲ್ಲಿ ಹಿಂದೂಗಳ ಮೇಲೆ ಹೇರಲಾಗುತ್ತಿದ್ದ ಯಾತ್ರಾ ತೆರಿಗೆಯನ್ನೂ ಸಹ ರದ್ದುಪಡಿಸುವಂತೆ ೧೭೨೮ರಲ್ಲಿ ಸಾಮ್ರಾಟನ ಮನವೊಲಿಸುತ್ತಾರೆ. ಮುಘಲ್ ಸಾಮ್ರಾಟ ಮೊಹಮ್ಮದ್ ಷಾ ರಂಗೀಲಾನ ಆಸ್ಥಾನದಲ್ಲಿ, ೧೭೧೯ರಲ್ಲಿ ನಡೆದ ಗದ್ದಲ ತುಂಬಿದ ಚರ್ಚೆಗೆ ಇವರು ಸಾಕ್ಷಿಯಾಗುತ್ತಾರೆ. ಸಾಮ್ರಾಟನು ಪ್ರಯಾಣ ಆರಂಭಿಸಲು ಶುಭ ದಿನ ನಿರ್ಧರಿಸಬೇಕಾದರೆ ಹೇಗೆ ಖಾಗೋಳಿಕ ಲೆಕ್ಕಾಚಾರ ಮಾಡಬೇಕೆಂಬುದರ ಬಗ್ಗೆ ಆಗ ಕಾವೇರಿದ,ಬಿರುಸಾದ ಚರ್ಚೆ ನಡೆಯಿತು. ಈ ಚರ್ಚೆಯು, ಖಗೋಳ ವಿಜ್ಞಾನದ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಿಸಬೇಕೆಂದು ಜೈ ಸಿಂಗ್ ಯೋಚಿಸಲು ದಾರಿ ಮಾಡಿಕೊಟ್ಟಿತು. ಸ್ಥಳೀಯ ಯುದ್ಧಗಳು, ವಿದೇಶಿ ಆಕ್ರಮಣಗಳು, ಹಾಗು ನಂತರದ ಗಲಭೆಗಳ ನಡುವೆಯೂ, ಸವಾಯಿ ಜೈ ಸಿಂಗ್, ಖಾಗೋಳಿಕ ವೀಕ್ಷಣಾಲಯಗಳನ್ನು ನಿರ್ಮಿಸಲು ಸಮಯ ಹಾಗು ಸಾಮರ್ಥ್ಯ ಹೊಂದಿದ್ದರೆಂಬುದು ಅಚ್ಚರಿಯ ವಿಷಯ.

 
ದೆಹಲಿಯಲ್ಲಿ ಸವಾಯಿ ಜೈ ಸಿಂಗ್ ನಿರ್ಮಿಸಿದ ವೀಕ್ಷಣಾಲಯ

ದೆಹಲಿ, ಮಥುರ(ಆಗ್ರಾ ಪ್ರಾಂತದಲ್ಲಿ), ಬನಾರಸ್, ಉಜ್ಜೈನ್(ಮಾಳ್ವ ಪ್ರಾಂತದ ರಾಜಧಾನಿ), ಹಾಗು ಜೈಪುರ್ ನ ತಮ್ಮದೇ ಆದ ರಾಜಧಾನಿಯಲ್ಲಿ ಕಡಿಮೆಯೆಂದರೆ ಐದು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಈ ಎಲ್ಲ ವೀಕ್ಷಣಾಲಯಗಳಲ್ಲಿ ಕೇವಲ ಜೈಪುರದಲ್ಲಿರುವ ವೀಕ್ಷಣಾಲಯ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮೂಲವಾಗಿ ಹಿಂದೂ ಖಗೋಳ ವಿಜ್ಞಾನವನ್ನು ಅವಲಂಬಿಸಿರುವ ಈ ವೀಕ್ಷಣಾಲಯಗಳು ಗ್ರಹಣಗಳು ಹಾಗು ಇತರ ಖಾಗೋಳಿಕ ಸಂಗತಿಗಳ ಬಗ್ಗೆ ನಿಖರವಾಗಿ ಮುನ್ನುಡಿಯುತ್ತಿದ್ದವು. ಇವರ ವೀಕ್ಷಣಾಲಯಗಳಲ್ಲಿ ಬಳಸಲಾಗುತ್ತಿದ್ದ ವೀಕ್ಷಣಾ ವಿಧಾನಗಳು ಹಾಗು ಉಪಕರಣಗಳು, ಅವರ ವೀಕ್ಷಣಾಲಯಕ್ಕೆ ಆಹ್ವಾನಿತರಾಗಿರುತ್ತಿದ್ದ ಯುರೋಪಿಯನ್ ಜೆಸ್ಯೂಟ್ ಖಗೋಳ ವಿಜ್ಞಾನಿಗಳು ಬಳಸುತ್ತಿದ್ದ ಉಪಕರಣಗಳಿಗಿಂತ ಹೆಚ್ಚು ಉತ್ತಮ ಮಟ್ಟದ್ದಾಗಿರುತ್ತಿದ್ದವು.[][] ಜಂತರ್ ಮಂತರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಇವುಗಳು ರಾಮ್ ಯಂತ್ರ ವನ್ನು ಒಳಗೊಂಡಿರುತ್ತಿದ್ದವು. (ಚಾವಣಿಯಿಲ್ಲದ ಮೇಲ್ಭಾಗ ಹಾಗು ಮಧ್ಯಭಾಗದಲ್ಲಿ ಒಂದು ಆಧಾರ ಸ್ತಂಬ ಹೊಂದಿರುತ್ತಿದ್ದ ಸಿಲಿಂಡರಾಕಾರದ ಕಟ್ಟಡ), ಜೈ ಪ್ರಕಾಶ್ (ಒಳಬಾಗಿನ ಗೋಳಾರ್ಧ), ಸಾಮ್ರಾಟ್ ಯಂತ್ರ (ಬೃಹತ್ತಾದ ಸಮಭಾಜಕ ಸೂಚಿಫಲಕ), ದಿಗಾಂಶ ಯಂತ್ರ (ಎರಡು ಗೋಳಾಕಾರದ ಭಿತ್ತಿಗಳಿಂದ ಸುತ್ತುವರಿದ ಒಂದು ಕಂಬ), ಹಾಗು ನರಿವಾಲಯ ಯಂತ್ರ (ಸಿಲಿಂಡರಾಕಾರದ ಸೂಚಿಫಲಕ). ಜೈ ಸಿಂಗ್ ರ ಮಹತ್ವದ ಸಾಧನೆಯೆಂದರೆ ಜೈಪುರ್ ನಗರದ ನಿರ್ಮಾಣ(ನಗರವನ್ನು ಮೂಲವಾಗಿ ಜೈನಗರವೆಂದು ಕರೆಯಲಾಗುತ್ತಿತ್ತು.(ಸಂಸ್ಕೃತದಲ್ಲಿ, 'ವಿಜಯಗಳ ನಗರ' ಎಂಬ ಅರ್ಥ ನೀಡುತ್ತದೆ. ಅದು ೨೦ನೇ ಶತಮಾನದ ಆರಂಭದಲ್ಲಿ ಬ್ರಿಟಿಷರು ಇದನ್ನು 'ಪಿಂಕ್ ಸಿಟಿ' ಎಂದು ಕರೆದರು), ಯೋಜನೆಗೆ ಅನುಸಾರವಾದ ನಗರ, ಇದು ನಂತರದಲ್ಲಿ ಭಾರತದ ರಾಜ್ಯ ರಾಜಸ್ಥಾನದ ರಾಜಧಾನಿಯಾಯಿತು. ಹೊಸ ರಾಜಧಾನಿಯ ನಿರ್ಮಾಣವು ೧೭೨೫ರಲ್ಲೇ ಆರಂಭಗೊಂಡಿತಾದರೂ, ಅಧಿಕೃತವಾಗಿ ೧೭೨೭ರಲ್ಲಿ ಅಡಿಪಾಯ ಹಾಕಲಾಯಿತು, ಹಾಗು ೧೭೩೩ರಲ್ಲಿ ಅಂಬರ್ ನ ಬದಲಿಗೆ ಜೈಪುರವು ಅಧಿಕೃತವಾಗಿ ಕಚ್ವಾಹಗಳ ರಾಜಧಾನಿಯಾಯಿತು. ನಗರವು ೩೦೦೦ BCEನಲ್ಲಿ ಕಂಡುಬಂದ ಪ್ರಾಕ್ತನ ಶಾಸ್ತ್ರದ ಪುರಾತನ ಹಿಂದೂ ಗ್ರಿಡ್ ಪಳೆಯುಳಿಕೆಗಳ(ಸರಳುಗಳನ್ನು ಅಡ್ಡಡ್ಡಕ್ಕೂ ಉದ್ದುದ್ದಕ್ಕೂ ಸಮಾಂತರವಾಗಿ ಅಳವಡಿಸಿರುವ ಚೌಕಟ್ಟು) ಮಾದರಿಯಲ್ಲಿ ನಿರ್ಮಾಣಗೊಂಡಿದೆ, ನಗರ ವಿನ್ಯಾಸದ ಯೋಜನೆ ಹಾಗು ವಾಸ್ತುಶಿಲ್ಪವನ್ನು ಪುರಾತನ ಸಂಸ್ಕೃತ ಕೈಪಿಡಿಯ(ಶಿಲ್ಪಿ-ಸೂತ್ರಗಳು ) ನೆರವಿನಿಂದ ವಿದ್ಯಾಧರ ಎಂಬ ಬ್ರಾಹ್ಮಣ ರೂಪಿಸಿದ. ತುಲನಾತ್ಮಕ ಸುರಕ್ಷತೆ ಹೊಂದಿದ್ದ ಈ ಶ್ರೀಮಂತ ನಗರದಲ್ಲಿ ಭಾರತದ ಎಲ್ಲ ಭಾಗದ ವರ್ತಕರು ನೆಲೆಗೊಂಡಿದ್ದರು. ನಗರವು ಕೋಟೆಗೋಡೆಗಳು, ದಪ್ಪನಾದ ಭಿತ್ತಿಗಳು, ಹಾಗು ಸಾಕಷ್ಟು ಫಿರಂಗಿದಳದ ನೆರವಿನೊಂದಿಗೆ ೧೭,೦೦೦ ಕಾವಲು ಪಡೆಯಿಂದ ರಕ್ಷಿತವಾಗಿತ್ತು. ಈ ಅರಸ, ಜಾನ್ ನೇಪಿಯರ್ ನಂತಹ ಲೇಖಕರ ಕೃತಿಗಳನ್ನೂ ಸಹ ತರ್ಜುಮೆ ಮಾಡಿದ್ದಾರೆ. ಈ ರೀತಿ ಹಲವಾರು ಸಾಧನೆಗಳಿಂದ ಸವಾಯಿ ಜೈ ಸಿಂಗ್ ಈ, ೧೮ನೇ ಶತಮಾನದಲ್ಲಿ ಭಾರತ ಕಂಡ ಅತ್ಯಂತ ಪ್ರಬುದ್ಧ ರಾಜನೆಂದು ಇಂದಿಗೂ ಸ್ಮರಣೀಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೈ ಸಿಂಗ್ ರ ವೀಕ್ಷಣಾಲಯಗಳು ಜೈಪುರ, ವಾರಾಣಸಿ, ಹಾಗು ಉಜ್ಜೈನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಕೇವಲ ದೆಹಲಿಯಲ್ಲಿರುವ ವೀಕ್ಷಣಾಲಯವು ಕಾರ್ಯ ನಿರ್ವಹಿಸುತ್ತಿಲ್ಲ; ಹಾಗು ಮಥುರಾನಲ್ಲಿದ್ದ ವೀಕ್ಷಣಾಲಯವು ಬಹಳ ದಿನಗಳ ಹಿಂದೆಯೇ ಕಣ್ಮರೆಯಾಯಿತು. []


ದೆಹಲಿ ವೀಕ್ಷಣಾಲಯ

ಬದಲಾಯಿಸಿ

ಇದು ಜಂತರ್ ಮಂತರ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಜಯಸಿಂಹನಿಂದ ಮೊಟ್ಟಮೊದಲು ನಿರ್ಮಿತವಾದ ಖಗೋಳ ವೀಕ್ಷಣಾಲಯವಿದು (1734). ಇಲ್ಲಿ ಏಳು ವರ್ಷಗಳ ಕಾಲ ಸತತವಾಗಿ ಖಗೋಳ ದೃಶ್ಯಗಳನ್ನು ಅವಲೋಕಿಸಿ ಜಯಸಿಂಹ ಜಿûೀeóï ಮಹಮ್ಮದ್ ಷಾಹಿ ಎಂಬ ಖಗೋಳಶಾಸ್ತ್ರೀಯ ಕೋಷ್ಟಕಗಳನ್ನು ತಯಾರಿಸಿದ. ಈ ವೀಕ್ಷಣಾಲಯದ ಮುಖ್ಯಾಂಶಗಳು ಈ ರೀತಿಯಾಗಿವೆ : ಅಕ್ಷಾಂಶ : 280 37 35” ಉತ್ತರಕ್ಕೆ ರೇಖಾಂಶ : 770 18 5” ಗ್ರೀನಿಚ್‍ನಿಂದ ಪೂರ್ವಕ್ಕೆ ಸಮುದ್ರ ಮಟ್ಟದಿಂದ ಎತ್ತರ : 212 ಮೀಟರುಗಳು ಕಾಂತ ವಿಚಲನೆ : 1919ರಲ್ಲಿ ಪೂರ್ವಕ್ಕೆ 10 45 , ವಾರ್ಷಿಕ ವ್ಯತ್ಯಾಸ 3 ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 21 ಮಿ. 7.7 ಸೆ. ಸಮ್ರಾಟ್ ಯಂತ್ರ, ಜೈಪ್ರಕಾಶ್ ಯಂತ್ರ, ರಾಮಯಂತ್ರ, ಮಿಶ್ರಯಂತ್ರ, ಚಿಕ್ಕಸಮ್ರಾಟ್‍ಯಂತ್ರ, ದಕ್ಷಿಣಾವೃತ್ತಿಯಂತ್ರ, ಕರ್ಕರಾಶಿವಲಯ ಯಂತ್ರ ಮತ್ತು ಕೆಲವು ಲೋಹದ ಯಂತ್ರಗಳನ್ನು ಇಲ್ಲಿ ಕಾಣಬಹುದು. ಇವುಗಳಲ್ಲಿ ಮಿಶ್ರಯಂತ್ರ ಜಯಸಿಂಹನ ಮಗ ಮಧುಸಿಂಗ್‍ನಿಂದ ಸೇರಿಸಲ್ಪಟ್ಟುದೆಂದು ಭಾವಿಸಲಾಗಿದೆ.

ಜಯಪುರದ ವೀಕ್ಷಣಾಲಯ

ಬದಲಾಯಿಸಿ

ಜಯಸಿಂಹನಿಂದ ನಿರ್ಮಿತವಾದ (1728) ಈ ನಗರದಲ್ಲಿ 1734ರಲ್ಲಿ ಸಮೀಕ್ಷಾಮಂದಿರದ ನಿರ್ಮಾಣವಾಯಿತು. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ. ಅಕ್ಷಾಂಶ : 280 55 27.4” ಉತ್ತರಕ್ಕೆ ರೇಖಾಂಶ : 750 49 18.7” ಗ್ರೀನಿಚ್‍ನಿಂದ ಪೂರ್ವಕ್ಕೆ ಸಮುದ್ರಮಟ್ಟದಿಂದ ಎತ್ತರ : 482 ಮೀಟರುಗಳು ಕಾಂತವಿಚಲನೆ : 1919ರಲ್ಲಿ ಪೂರ್ವಕ್ಕೆ 1035 ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 26 ಮಿ.45 ಸೆ. ಸಮ್ರಾಟ್ ಯಂತ್ರ, ಜೈಪ್ರಕಾಶ್‍ಯಂತ್ರ, ರಾಶಿವಲಯ ಯಂತ್ರ, ಷಷ್ಠಾಂಶ ಯಂತ್ರ, ಕಪಾಲ ಯಂತ್ರ, ರಾಮಯಂತ್ರ, ದಿಗಂಶಯಂತ್ರ, ನಾಡೀವಲಯ ಯಂತ್ರ ಮತ್ತು ದಕ್ಷಿಣಾವೃತ್ತಿಯಂತ್ರಗಳನ್ನು ಇಲ್ಲಿ ಕಾಣಬಹುದು.

ಉಜ್ಜಯಿನಿಯ ವೀಕ್ಷಣಾಲಯ

ಬದಲಾಯಿಸಿ

ಉಜ್ಜಯಿನಿ ಹಿಂದಿನಿಂದಲೂ ಖಗೋಳ ಶಾಸ್ತ್ರದ ಅಧ್ಯಯನದ ಕೇಂದ್ರವಾಗಿದ್ದು ಭಾರತದ ಗ್ರೀನಿಚ್ ಎಂದು ಪ್ರಸಿದ್ಧವಾಗಿದೆ. ಪ್ರಾಚೀನ ಭಾರತದಲ್ಲಿ ಇದು ಅವಂತಿಯೆಂದು ಪ್ರಸಿದ್ಧವಾಗಿದ್ದ ದೇಶದ ರಾಜಧಾನಿ. 1728 ರಿಂದ 1734ರ ಅವಧಿಯಲ್ಲಿ ಜಯಸಿಂಹ ಈ ಸಮೀಕ್ಷಾಮಂದಿರವನ್ನು ನಿರ್ಮಿಸಿದ. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ : ಅಕ್ಷಾಂಶ : 280 10 16” ಉತ್ತರಕ್ಕೆ ರೇಖಾಂಶ : 750 46 3” ಗ್ರೀನಿಚ್‍ನಿಂದ ಪೂರ್ವಕ್ಕೆ ಸಮುದ್ರಮಟ್ಟದಿಂದ ಎತ್ತರ : 457 ಮೀಟರುಗಳು ಕಾಂತವಿಚಲನೆ : 1915ರಲ್ಲಿ 00 49, ವಾರ್ಷಿಕ ವ್ಯತ್ಯಾಸ —3 ಸ್ಥಾನಿಕ ಕಾಲ : ಶಿಷ್ಟಕಾಲದ ತರುವಾಯ 26 ಮಿ. 52 ಸೆ. ಬಹಳ ಶಿಥಿಲವಾಗಿರುವ ಈ ಸಮೀಕ್ಷಾಮಂದಿರದಲ್ಲಿ ಸಮ್ರಾಟ್‍ಯಂತ್ರ, ನಾಡೀವಲಯ ಯಂತ್ರ. ದಿಗಂಶಯಂತ್ರ ಮತ್ತು ದಕ್ಷಿಣಾವೃತ್ತಿಯಂತ್ರಗಳನ್ನು ಕಾಣಬಹುದು.

ಬನಾರಸ್ ವೀಕ್ಷಣಾಲಯ

ಬದಲಾಯಿಸಿ

ಜಯನಿಂಹನಿಂದ ನಿರ್ಮಿತವಾದ ಸಮೀಕ್ಷಾ ಮಂದಿರಗಳಲ್ಲಿ ಇದು ನಾಲ್ಕನೆಯದು. ಹದಿನೇಳನೆಯ ಶತಮಾನದಲ್ಲಿ ಅಂಬರ್ ಸಂಸ್ಥಾನದ ಒಡೆಯನಾಗಿದ್ದ ಮಾನ್‍ಸಿಂಗ್ ಎಂಬುವನಿಂದ ನಿರ್ಮಿತವಾಗಿದ್ದ ಮಾನಮಂದಿರವೆಂಬ ಮಹಾಸೌಧದ ಮಹಡಿಯ ಮೇಲೆ ಇದು ನಿರ್ಮಿತವಾಗಿದೆ. ಇದರ ಮುಖ್ಯಾಂಶಗಳು ಈ ರೀತಿಯಾಗಿವೆ: ಅಕ್ಷಾಂಶ : 25º 18' 24.9' ಪೂರ್ವಕ್ಕೆ ರೇಖಾಂಶ : 83º 0' 46.1' ಗ್ರೀನಿಚ್‍ನಿಂದ ಪೂರ್ವಕ್ಕೆ ಸಮುದ್ರಮಟ್ಟದಿಂದ ಎತ್ತರ : 107 ಮೀಟರುಗಳು ಕಾಂತವಿಚಲನೆ : 1919ರಲ್ಲಿ 0º 55' ಪೂರ್ವಕ್ಕೆ ಸ್ಥಾನಿಕ ಕಾಲ : ಶಿಷ್ಟಕಾಲಕ್ಕೆ 2 ಮಿ. 3 ಸೆ. ಮುಂಚೆ

ಇಲ್ಲಿ ಸಮ್ರಾಟ್‍ಯಂತ್ರ ನಾಡೀವಲಯ ಯಂತ್ರ ಚಕ್ರಯಂತ್ರ ಮತ್ತು ದಿಗಂಶಯಂತ್ರಗಳನ್ನು ಕಾಣಬಹುದು.

ಉತ್ತರ ಮಥುರಾ ವೀಕ್ಷಣಾಲಯ

ಬದಲಾಯಿಸಿ

ಜಯಪುರದ ಮಹಾರಾಜನಾಗಿದ್ದ ರಾಜಾಮಾನ್ ಸಿಂಗ್ ಎಂಬುವನಿಂದ ಜೀರ್ಣೋದ್ಧಾರ ಮಾಡಲ್ಪಟ್ಟ ಮಥುರಾ ಕೋಟೆಯ ಮೇಲೆ ಜಯಸಿಂಹ ಈ ಸಮೀಕ್ಷಾ ಮಂದಿರವನ್ನು ನಿರ್ಮಿಸಿದ. ಈಗ ಇದು ಸಂಪೂರ್ಣವಾಗಿ ನಾಶಹೊಂದಿ ಇಲ್ಲಿ ನಿರ್ಮಿತವಾದ ಯಂತ್ರಗಳ ಸುಳಿವೇ ಇಲ್ಲ. ದೆಹಲಿಯ ಸಮೀಕ್ಷಾಮಂದಿರ ಜಯಸಿಂಹನ ಪ್ರಧಾನ ಕೇಂದ್ರವಾಗಿತ್ತು. ಇಲ್ಲಿ ಅವಲೋಕಿಸಿದ ಖಗೋಳ ದೃಶ್ಯಗಳ ಸ್ಥಿರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಲ್ಲಿ ಸಮೀಕ್ಷಾಮಂದಿರಗಳನ್ನು ನಿರ್ಮಿಸಿ, ಮಧ್ಯಯುಗೀನ ಭಾರತದ ವಿಜ್ಞಾನ ಸಾರ್ವಭೌಮನೆಂದು ಈತ ಕೀರ್ತಿ ಗಳಿಸಿದ್ದಾನೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:




ಇವನ್ನೂ ಗಮನಿಸಿ‌

ಬದಲಾಯಿಸಿ
  • ರಜಪೂತರ ಪಟ್ಟಿ

ಟಿಪ್ಪಣಿಗಳು

ಬದಲಾಯಿಸಿ
  1. ಸರ್ಕಾರ್, ಜದುನಾಥ್(೧೯೮೪, ಮರುಮುದ್ರಣ ೧೯೯೪) ಏ ಹಿಸ್ಟರಿ ಆಫ್ ಜೈಪುರ್ , ನವದೆಹಲಿ: ಓರಿಯಂಟ್ ಲಾಂಗ್ಮನ್, ISBN ೮೧-೨೫೦-೦೩೩೩-೯, ಪುಟ.೧೭೧
  2. ಸರ್ಕಾರ್, ಜದುನಾಥ್(೧೯೮೪, ಮರುಮುದ್ರಣ ೧೯೯೪) ಏ ಹಿಸ್ಟರಿ ಆಫ್ ಜೈಪುರ್ , ನವದೆಹಲಿ: ಓರಿಯಂಟ್ ಲಾಂಗ್ಮನ್, ISBN ೮೧-೨೫೦-೦೩೩೩-೯, ಪುಟ.೧೫೭
  3. ಬೋವ್ಕರ್, ಜಾನ್, ದಿ ಆಕ್ಸ್ಫರ್ಡ್ ಡಿಕ್ಷನರಿ ಆಫ್ ವರ್ಲ್ಡ್ ರಿಲೀಜಿಯನ್ಸ್, ನ್ಯೂಯಾರ್ಕ್, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೭, ಪುಟ. ೧೦೩
  4. Sharma, Virendra Nath (1995), Sawai Jai Singh and His Astronomy, Motilal Banarsidass Publ., pp. ೮–೯, ISBN ೮೧೨೦೮೧೨೫೬೫ {{citation}}: Check |isbn= value: invalid character (help)
  5. Baber, Zaheer (1996), The Science of Empire: Scientific Knowledge, Civilization, and Colonial Rule in India, State University of New York Press, pp. ೮೨–೯೦, ISBN ೦೭೯೧೪೨೯೧೯೯ {{citation}}: Check |isbn= value: invalid character (help)
  6. ಶರ್ಮ, ವೀರೇಂದ್ರನಾಥ್ (೧೯೯೫), ಸವಾಯಿ ಜೈಸಿಂಗ್ ಅಂಡ್ ಹೀಸ್ ಅಸ್ಟ್ರಾನಮಿ , ಮೋತಿಲಾಲ್ ಬನಾರಸಿದಾಸ್, ISBN ೮೧೨೦೮೧೨೫೬೫


ಉಲ್ಲೇಖಗಳು‌

ಬದಲಾಯಿಸಿ
  1. ಸರ್ಕಾರ್, ಜದುನಾಥ್(೧೯೮೪, ಮರುಮುದ್ರಣ ೧೯೯೪) ಏ ಹಿಸ್ಟರಿ ಆಫ್ ಜೈಪುರ್ , ನ್ಯೂ ದೆಹಲಿ: ಓರಿಯಂಟ್ ಲಾಂಗ್ಮನ್, ISBN ೮೧-೨೫೦-೦೩೩೩-೯
  2. ಜ್ಯೋತಿ J. (೨೦೦೧) ರಾಯಲ್ ಜೈಪುರ್ , ರೋಲಿ ಬುಕ್ಸ್, ISBN ೮೧೭೪೩೬೧೬೬೯
  3. ಟಿಲ್ಲೋಟ್ಸನ್ G, (೨೦೦೬) ಜೈಪುರ್ ನಾಮ , ಪೆಂಗ್ವಿನ್ ಬುಕ್ಸ್
  4. ಮೈಕಲ್ ಸ್ಚ್ವಾರ್ಜ್, (೧೯೮೦) ಅಬ್ಸರ್ವೇಟರಿಯ : ಡೆ ಅಸ್ಟ್ರೋನೋಮಿಸ್ಚೆ ಇನ್ಸ್ಟ್ರುಮೆನ್ಟೆನ್ ವ್ಯಾನ್ ಮಹಾರಾಜ ಸ್ವಾಮೀ ಜೈ ಸಿಂಗ್ II ಇನ್ ನ್ಯೂ ದೆಹಲಿ, ಜೈಪುರ್, ಉಜ್ಜೈನ್ ಎನ್ ಬನಾರಸ್ , ಆಮ್ಸ್ಟರ್ : ವೆಸ್ಟ್ ಲ್ಯಾಂಡ್/ಉಟ್ರೆಚೆಟ್ ಹೈಪೋತೀಕ್ಬ್ಯಾಂಕ್

ಬಾಹ್ಯ ಕೊಂಡಿಗಳು

ಬದಲಾಯಿಸಿ