ಎಮ್.ಕೆ.ವರಗಿರಿಯವರು ೧೯೧೨ ಜನೆವರಿ ೨೧ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಜನಿಸಿದರು.

ಶಿಕ್ಷಣ ,ವೃತ್ತಿ

ಬದಲಾಯಿಸಿ

ಇವರ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ರಾಣಿಬೆನ್ನೂರು ತಾಲೂಕಿನಲ್ಲಿ ಜರುಗಿದವು. ಬಿ.ಎ. ಪದವಿಯನ್ನು ವರಗಿರಿಯವರು ಪುಣೆಯಲ್ಲಿ ಪಡೆದರು. ಎಮ್.ಎ. ಹಾಗು ಎಮ್.ಇಡಿ ಪದವಿಗಳನ್ನು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಆಬಳಿಕ ಶಿಕ್ಷಣಾಧಿಕಾರಿಗಳಾಗಿ ಧಾರವಾಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದರು.

ಸಾಹಿತ್ಯ

ಬದಲಾಯಿಸಿ
  • ಗಂಗಾಸಾನಿ (ಕಾದಂಬರಿ)
  • ಪ್ರೇಮತರಂಗಿಣಿ (ಕಥಾ ಸಂಕಲನ)
  • ದ್ಯಾಮ-ಕಂಚಿ (ಕಥಾಸಂಕಲನ)

(ದ್ಯಾಮ-ಕಂಚಿಯು ನಾಟಕವಾಗಿ ರೂಪಾಂತರಿಸಲ್ಪಟ್ಟು ಧಾರವಾಡ ಆಕಾಶವಾಣಿಯಿಂದ ಪ್ರಸಾರಿತವಾಯಿತು, ಅಲ್ಲದೆ ನೀನಾಸಂದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಹ ಪ್ರಯೋಗಿಸಲ್ಪಟ್ಟಿತು.

  • ಎಮ್.ಕೆ.ವರಗಿರಿಯವರು "ಖೋ" ಕಾದಂಬರಿಯ ಸಹಲೇಖಕರು. (ಈ ಕಾದಂಬರಿಯು ೧೯೫೮ರಲ್ಲಿ ಧಾರವಾಡದ ಮನೋಹರ ಗಂಥಮಾಲೆಯಿಂದ ಪ್ರಕಟವಾಗಿದ್ದು, ಪ್ರಯೋಗಾರ್ಥವಾಗಿ ಈ ಕಾದಂಬರಿಯನ್ನು ಹನ್ನೊಂದು ಜನ ಲೇಖಕರು ಬರೆದಿದ್ದಾರೆ.)

ಎಂ.ಕೆ.ವರಗಿರಿಯವರು ೨೦೦೬ ಮೇ ೩ರಂದು ನಿಧನರಾದರು.