ಎಂ. ಕೃಷ್ಣಪ್ಪ ಇವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ.

ಎಂ. ಕೃಷ್ಣಪ್ಪ

ಕರ್ನಾಟಕ ವಿಧಾನಸಭೆಯ ಸದಸ್ಯ
ಹಾಲಿ
ಅಧಿಕಾರ ಸ್ವೀಕಾರ 
೨೦೦೮
ಪೂರ್ವಾಧಿಕಾರಿ ಕ್ಷೇತ್ರ ಸ್ಥಾಪನೆ
ಮತಕ್ಷೇತ್ರ ಬೆಂಗಳೂರು(ವಿಧಾನಸಭಾ ಕ್ಷೇತ್ರ))
ವೈಯಕ್ತಿಕ ಮಾಹಿತಿ
ಜನನ (1962-06-01) ೧ ಜೂನ್ ೧೯೬೨ (ವಯಸ್ಸು ೬೧)[೧]
ಬೆಂಗಳೂರು
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ

ವೈಯಕ್ತಿಕ ಜೀವನ ಬದಲಾಯಿಸಿ

ಇವರು ದಿವಂಗತ ಮುನಿಸ್ವಾಮಪ್ಪ ಅವರ ಪುತ್ರ. ಇವರು ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು.[೨] ಅವರ ಪತ್ನಿ ಕೈಗಾರಿಕೋದ್ಯಮಿ. ಇವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಾಗಿದ್ದಾರೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಮತ್ತು ಹುಲಿಯನ್ನು ದತ್ತು ಪಡೆದರು.[೩]

ವೃತ್ತಿ ಬದಲಾಯಿಸಿ

ಕೃಷ್ಣಪ್ಪ ೧೯೮೩ರಲ್ಲಿ ಸಹೋದರನ ರಾಜಕೀಯ ಪ್ರಚಾರಕ್ಕೆ ಸಹಾಯ ಮಾಡುವ ಮೂಲಕ ಇವರು ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ೨೦೦೫ರ ಜಿಲ್ಲಾ ಪಂಚಾಯತ್ ಚುನಾವಣೆಒಂದು ವರ್ಷದ ಅವಧಿಗೆ ಉತ್ತರಹಳ್ಳಿಯಿಂದ ಮೊದಲ ಬಾರಿಗೆ ಆಯ್ಕೆಯಾದರು.[೪] ಈ ಅವಧಿಯಲ್ಲಿ ಅವರು ಉತ್ತರಹಳ್ಳಿಯ ಸರ್ಕಾರಿ ಶಾಲಾ ಸುಧಾರಣಾ ಸಮಿತಿಯ ಕೌನ್ಸೆಲಿಂಗ್ ಸದಸ್ಯರಾದರು. ೨೦೧೧ರಲ್ಲಿ ಅವರು ಬಿಎಂಟಿಸಿಯ ಉಪಾಧ್ಯಕ್ಷರಾದರು.

೨೦೦೮ ರಲ್ಲಿ ಅವರು ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ನಂತರ, ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು.[೫][೬]

ವಿವಾದಗಳು ಬದಲಾಯಿಸಿ

ಡಿಸೆಂಬರ್ ೨೦೧೪ ರಂದು ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್ ರಾವ್ ಅವರು ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅವರ ವಿರುದ್ಧ ಆರೋಪ ಹಾಕಿದರು ಮತ್ತು ಅವರ ಹುದ್ದೆಯನ್ನು ಮುಂದುವರಿಸಬಾರದು ಎಂದು ಘೋಷಿಸಿದರು.

ಉಲ್ಲೇಖಗಳು ಬದಲಾಯಿಸಿ

  1. https://www.bangalorean.com/blr-constituency/bengaluru-bangalore-bangalore-south/nominee/elections-2018-m-krishnapppa/ Archived 2020-10-29 ವೇಬ್ಯಾಕ್ ಮೆಷಿನ್ ನಲ್ಲಿ. BJP Nominee M Krishnappa Bangalore South Constituency
  2. https://myneta.info/karnataka2018/candidate.php?candidate_id=5934 Karnataka 2018 M KRISHNAPPA (Winner) BANGALORE SOUTH (BANGALORE URBAN)
  3. Reddy, Y Maheswara (11 May 2020). "Bengaluru MLA M Krishnappa adopts elephant, tigress". Bangalore Mirror. Retrieved 11 August 2020.
  4. Tracking Bangalore South MLA M Krishnappa https://bengaluru.citizenmatters.in/tracking-bangalore-south-mla-m-krishnappa-24172
  5. Bangalore South Election Result 2018 live updates: M. Krishnappa wins in Bangalore South constituency https://www.timesnownews.com/elections/karnataka-assembly-election-2018-latest/constituency/article/bangalore-south-m-krishnappa-r-k-ramesh-r-prabhakar-reddy-bjp-congress-jds/224852
  6. "Bangalore South Election Results 2018 Live Updates: BJP's M Krishnappa Won". news18.com. 16 May 2018. Retrieved 11 November 2019.