ಉಷಾ ನವರತ್ನರಾಂ
ಉಷಾ ನವರತ್ನ ರಾಂ (ನವೆಂಬರ್ ೨೩, ೧೯೩೯ - ಅಕ್ಟೋಬರ್ ೦೧, ೨೦೦೦) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲೊಬ್ಬರು.
ಉಷಾ ನವರತ್ನರಾಂ | |
---|---|
ಜನನ | ನವೆಂಬರ್ ೨೩, ೧೯೩೯ ಬೆಂಗಳೂರು |
ಮರಣ | ಅಕ್ಟೋಬರ್ ೧೧, ೨೦೦೦ |
ವೃತ್ತಿ | ಶಿಕ್ಷಕಿ, ಕಥೆಗಾರ್ತಿ |
ಕೌಟುಂಬಿಕ
ಬದಲಾಯಿಸಿಕನ್ನಡದ ಜನಪ್ರಿಯ ಲೇಖಕಿ ಉಷಾ 1939 ನವೆಂಬರ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ್. ಉಷಾ ನವರತ್ನರಾಂ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿ ಸುಮಾರು 3 ದಶಕಗಳ ಕಾಲ ಶಿಕ್ಷಕರಾಗಿ ಹುದ್ದೆ ನಿರ್ವಹಿಸಿದ್ದರು. ಅವರು ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ಅಂಕಣಗಾರ್ತಿಯೂ ಆಗಿದ್ದರು. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಉಷಾರವರ ಮದುವೆ ೧೯೬೯ ಫೆಬ್ರುವರಿ ೩ರಂದು ಖ್ಯಾತ ಸಾಹಿತಿ ನವರತ್ನ ರಾಮ್ ರವರ ಜೊತೆಗೆ ಜರುಗಿತು. ಇವರಿಗೆ ಮೂವರು ಮಕ್ಕಳು: ಆರತಿ, ಅಂಜಲಿ ಹಾಗು ಆಶ್ರಯಾ.
ಕೃತಿಗಳು
ಬದಲಾಯಿಸಿಉಷಾ ನವರತ್ನ ರಾಮ್ ಅವರ ಅನೇಕ ಕಾದಂಬರಿಗಳು ಸುಧಾ, ಪ್ರಜಾಮತ, ಕರ್ಮವೀರ, ತರಂಗ, ಮಂಗಳ ಮೊದಲಾದ ಕನ್ನಡದ ವಿವಿಧ ವಾರಪತ್ರಿಕೆಗಳಲ್ಲಿ ಹಾಗು ಮಲ್ಲಿಗೆ, ತುಷಾರ, ವನಿತಾ, ಪ್ರಿಯಾಂಕ, ರಾಗಸಂಗಮ, ಹಂಸರಾಗ ಮೊದಲಾದ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದವು.
ಕಥಾಸಂಕಲನ
ಬದಲಾಯಿಸಿ- ಅಭಿನಯ
- ಕತೆ ಹೇಳುವೆ
- ಕೇಳು ನನ್ನ ಕಥೆಯಾ
ಕಾದಂಬರಿ
ಬದಲಾಯಿಸಿ- ಅಭಿನಯ
- ಇರುಳು ಕಂಡ ಬಾವಿ
- ಉಪಕಾರ
- ಉಯಿಲು
- ಎಂದೆಂದಿಗೂ ನಿನ್ನವನೆ
- ಎಲ್ಲಾದರು ಸುಖವಾಗಿರು
- ಒಂದು ದಿನ ರಾತ್ರಿಯಲಿ
- ಒಡಕು ದೋಣಿ
- ಒಳಗೆ ಬಾ ಅತಿಥಿ
- ಕರೆಗಂಟೆ
- ಕರೆದರೆ ಬರೆಬಾರದೆ
- ಕಿಚ್ಚು
- ಕೃಷ್ಣಾ ನೀ ಬೇಗನೆ ಬಾರೊ
- ಕ್ಷಮೆಯಿರಲಿ ತಂದೆ
- ಗುಪ್ತಗಾಮಿನಿ (ಹೊರನೋಟ, ಹಂಸರಾಗ)
- ಗೂಡು ಬಿಟ್ಟ ಹಕ್ಕಿ
- ದಾರಿ ಯಾವುದಯ್ಯಾ?
- ನನ್ನ ಮುದ್ದು ಮರಿ
- ನಾನು ವೀಣೆ ನೀನೇ ತಂತಿ
- ನಾಳೆಯು ಬರಲಿ
- ನಿನ್ನೊಲುಮೆ ನನಗಿರಲಿ
- ನೀ ಮುಡಿದಾ ಮಲ್ಲಿಗೆ
- ನೀನೆ ಅನಾಥ ಬಂಧು
- ನೆನ್ನೆ ನೆನ್ನೆಗೆ! ನಾಳೆ ನಾಳೆಗೆ!
- ಪ್ರತೀಕಾರ
- ಪ್ರೀತಿಸಿ ನೋಡು
- ಬಂಧನ
- ಬದುಕು ಬಂಗಾರ
- ಬಯಕೆಯ ಬಲೆಯಲ್ಲಿ
- ಬಿನ್ನಹಕೆ ಬಾಯಿಲ್ಲ
- ಬಿರುಕು
- ಮಕ್ಕಳಿರಲವ್ವ ಮನೆ ತುಂಬ
- ಮತ್ತೆ ಮಡಿಲಿಗೆ
- ಮನೆಯೇ ಬೃಂದಾವನ
- ಮರೆವು
- ಮೊದಲು ಮಾನವನಾಗು
- ಯೌವನದ ಹೊನಲಲ್ಲಿ
- ಸಮರ್ಪಣೆ
- ಸ್ಫೋಟ
- ಹಕ್ಕಿ ಹಾರುತಿದೆ
- ಹೂವನ್ನು ಮುಡಿಬೇಕು
- ಹೊಂಬಿಸಿಲು
- ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
- ಹ್ಯಾಪಿ ಬರ್ತಡೇ
ಚಿತ್ರೀಕರಣ
ಬದಲಾಯಿಸಿಉಷಾರವರ ಈ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ:
- ಹೊಂಬಿಸಿಲು (ವಿಷ್ಣುವರ್ಧನ ಹಾಗು ಆರತಿ ನಾಯಕ, ನಾಯಕಿಯರು)
- ಪ್ರೀತಿಸಿ ನೋಡು ( ವಿಷ್ಣುವರ್ಧನ ಹಾಗು ಆರತಿ ನಾಯಕ, ನಾಯಕಿಯರು)
- ಸಮರ್ಪಣೆ ( ರಾಜೀವ ಹಾಗು ಆರತಿ ನಾಯಕ, ನಾಯಕಿಯರು)
- ಬಂಧನ ( ವಿಷ್ಣುವರ್ಧನ ಹಾಗು ಸುಹಾಸಿನಿ ನಾಯಕ, ನಾಯಕಿಯರು)
- ನಾಳೆಯು ಬರಲಿ
ಗೌರವ
ಬದಲಾಯಿಸಿ- ೧೯೭೫ರಲ್ಲಿ ರಾಯಚೂರಿನ ಕನ್ನಡ ಸಂಘದಿಂದ ಅತ್ಯುತ್ತಮ ಕನ್ನಡ ಲೇಖಕಿ ಪ್ರಶಸ್ತಿ
- ೧೯೮೨-೮೩ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ
- ೧೯೯೪ ಅಕ್ಟೋಬರ ೨೩ರಂದು ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಮನುಶ್ರೀ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
- ೧೯೯೫ ಸಪ್ಟಂಬರ ೧೫ರಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ ಪ್ರತಿಷ್ಠಾನದಿಂದ ಸ್ ಎಂ.ವಿ.ನವರತ್ನ ಪ್ರಶಸ್ತಿ
ನಿಧನ
ಬದಲಾಯಿಸಿಆಕರ
ಬದಲಾಯಿಸಿಕಣಜ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.