ಉದಯ್ ಚಂದ್
'ಉದಿ ಚಂದ್' (ಜನನ ೨೫ ಜೂನ್ ೧೯೩೫) ನಿವೃತ್ತ ಭಾರತ ನ ಕುಸ್ತಿಪಟು ಮತ್ತು ಕುಸ್ತಿ ತರಬೇತುದಾರರಾಗಿದ್ದು, ಇವರು ಸ್ವತಂತ್ರ ಭಾರತದಿಂದ ಮೊದಲ ವೈಯಕ್ತಿಕ ವಿಶ್ವ ಚಾಂಪಿಯನ್ಷಿಪ್ ವಿಜೇತರಾಗಿದ್ದಾರೆ.
೧೯೬೧ ರಲ್ಲಿ ಅವರು ಭಾರತ ಸರ್ಕಾರ ವ್ರೆಸ್ಲಿಂಗ್ನಲ್ಲಿ ಮೊದಲ ಅರ್ಜುನ ಪ್ರಶಸ್ತಿ ಪ್ರಶಸ್ತಿಯನ್ನು ಪಡೆದರು. [೧]
ಜನನ
ಬದಲಾಯಿಸಿಉದಯ್ ಚಂದ್ ಅವರು ಹುಟ್ಟಿದು ೨೫ ಜೂನ್ ೧೯೩೫ರಲ್ಲಿ ಹಿಸಾರ್ ಜಿಲ್ಲೆಯ ಜಾಂಡ್ಲಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಇವರು ಹಿಸಾರ್ ನಲ್ಲಿ ವಾಸಿಸುತಿದ್ದಾರೆ.[೨]
ವೃತ್ತಿ ಜೀವನ
ಬದಲಾಯಿಸಿಅವರು ಭಾರತೀಯ ಸೇನೆಯೊಂದಿಗೆ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರು ೧೯೬೧ ರಲ್ಲಿ ಯೋಕೊಹಾಮಾದಲ್ಲಿ ನಡೆದ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್ನಲ್ಲಿ ಲೈಟ್ ವೈಟ್ (೬೭ಕ್ರಎಜಿ)ಫ್ರೀಸ್ಟೈಲ್ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ.[೩] ಅವರ ಸಾಧನೆಗಳಿಗಾಗಿ ಅವರು ೧೯೬೧ರಲ್ಲಿ ಭಾರತದ ಅಧ್ಯಕ್ಷರಿಂದ ಕುಸ್ತಿಯಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು.
ಅವರು ರೋಮ್ ೧೯೬೦,ಟೋಕಿಯೋ ೧೯೬೪, ಮೆಕ್ಸಿಕೊಸಿಟಿ ೧೯೬೮ ಎಂಬ ಮೂರು ಒಲಂಪಿಕ್ ಕ್ರೀಡಾಕೂಡಗಳಲ್ಲಿ ಪಾಲ್ಗೊಂಡರು ಮತ್ತು ಮೆಕ್ಸಿಕೊ ಸಿಟಿಯಲ್ಲಿ ೬ನೇ ಶ್ರೇಯಾಂಕವನ್ನು ಗಳಿಸಿದರು.[೪]
ಏಷಿನ್ ಗೇಮ್ಸ್ ನಲ್ಲೆ ಎರಡು ಭಾರಿ ಪಾಲ್ಗೊಳ್ಳುವ ಮೂಲಕ ಇವರು ಎರಡು ಬೆಳ್ಳಿಯ ಪದಕವನ್ನು ೭೦ಕೆಜಿ ಫ್ರೀಸ್ಟೈಲ್ ಮತ್ತು ೭೦ಕೆ.ಜಿ. ಗ್ರೆಕೊ-ರೋಮನ್ನಲ್ಲಿ ೧೯೬೨ರ ಏಷ್ಯನ್ ಕ್ರೀಡಾಕೂಡದಲ್ಲಿ ಹಾಗು ೭೦ಕೆ.ಜಿ. ಫ್ರೀಸ್ಟೈಲ್ ನಲ್ಲಿ ೧೯೬೬ರ ಏಷ್ಯನ್ ಗೇಮ್ಸ್ ಬ್ಯಾಂಕಾಕ್ನಲ್ಲಿ ಕಂಚಿನ ಪದಕ ಗೆದ್ದರು.ಇದರ ಜೊತೆಯಲ್ಲಿ ಅವರು ನಾಲ್ಕು ವಿಭಿನ್ನ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ (ಯೋಕೋಹಾಮಾ ೧೯೬೧,ಮ್ಯಾಂಚೆಸ್ಟರ್ ೧೯೬೫, ದೆಹಲಿ ೧೯೬೭ ಮತ್ತು ಎಡ್ಮಂಟನ್ ೧೯೭೦)ಗಳಲ್ಲಿ ಪಾಲ್ಗೊಂಡಿದ್ದರು. ಸ್ಕಾಟ್ಲೆಂಡ್ನ ಮತ್ತು ಎಡಿನ್ ಬರ್ಗ್ ನಲ್ಲಿ ನಡೆದ ೧೯೭೦ರ ಬ್ರಿಟಿಷ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಅತ್ಯುತ್ತಮ ಚಿನ್ನದ ಪದಕದೊಂದಿಗೆ ತಮ್ಮ ಹೊಳೆಯುವ ವೃತ್ತಿಜೀವನವನ್ನು ಮುಕ್ತಯಗೂಳಿಸಿದರು[೫].ಅವರು ೧೯೫೮ ರಿಂದ ೧೯೭೦ ರವರೆಗೆ ಭಾರತದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿಯೇ ಉಳಿದರು.
ನಂತರದ ಜೀವನ
ಬದಲಾಯಿಸಿಭಾರತೀಯ ಸೈನ್ಯದಿಂದ ನಿವೃತ್ತರಾದ ನಂತರ,ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇರಿದರು,ಹಿಸಾರ್ ತರಬೇತುದಾರರಾಗಿ ೧೯೭೦ರಿಂದ ೧೯೯೬ರ ವರಗೆ ಅವರು ಸೇವೆಗಳನ್ನು ಸಲ್ಲಿಸಿದರು.ತರಬೇತುದಾರನಾಗಿ ಅವರು ಅನೇಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುಗಳನ್ನು ಗೆದ್ದರು. ಇಂದಿಗೂ ಕುಸ್ತಿ ಪಟು ಆಗಲು ಬಂದವರಿಗೆ ಇವರು ಮಾರ್ಗದಶಿಗಳಾಗಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿಅವರಿಗೆ ಭಾರತ ಸರ್ಕಾರವು ೧೯೬೧ ರಲ್ಲಿ, ಕುಸ್ತಿಯಲ್ಲಿ ಮೊದಲ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೬] ಅದೇ ವರುಷ ಅವರು ಕಂಚಿನ ಪದಕವನ್ನು ಗೆದ್ದರು. ೧೯೭೦ ರಲ್ಲಿ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೂಂಡರು.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedar
- ↑ https://timesofindia.indiatimes.com/life-style/health-fitness/fitness/meet-the-popular-wrestlers-of-india/articleshow/15040858.cms
- ↑ https://www.foeldeak.com/en/wrestlingdatabase.php
- ↑ "ಆರ್ಕೈವ್ ನಕಲು". Archived from the original on 2020-04-18. Retrieved 2018-10-27.
- ↑ "ಆರ್ಕೈವ್ ನಕಲು". Archived from the original on 2013-02-15. Retrieved 2018-10-27.
- ↑ "ಆರ್ಕೈವ್ ನಕಲು". Archived from the original on 2011-07-19. Retrieved 2018-10-27.