ನಿವೃತ್ತರ ದಿನ
ಡಿಸೆಂಬರ್ ೧೭ ಅನ್ನು 'ನಿವೃತ್ತರ ದಿನ' ಎಂದು ಆಚರಿಸಲಾಗುತ್ತಿದೆ.
ಹಿನ್ನೆಲೆ
ಬದಲಾಯಿಸಿ೧೯೭೯ ರ ಮಾರ್ಚ್ ೩೧ರ ನಂತರ ನಿವೃತ್ತರಾದವರಿಗೆ ಕೇಂದ್ರ ಸರ್ಕಾರ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯನ್ನು ಜಾರಿಗೊಳಿಸಿದಾಗ ಆ ದಿನಾಂಕದ ಹಿಂದೆ ನಿವೃತ್ತರಾದವರಿಗೆ ಈ ಸೌಲಭ್ಯ ದೊರೆಯದೇ ಹೋಯಿತು. ಇಂಥವರಲ್ಲೊಬ್ಬರು ಸರ್ಕಾರದ ಈ ಆಜ್ಞೆಯ ವಿರುದ್ಧವಾಗಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟರು. ೧೯೮೨ರ ಡಿಸೆಂಬರ್ ೧೭ ರಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ವೈ.ವಿ. ಚಂದ್ರಾಚೂಡ ಅವರು ನಿವೃತ್ತರ ಪರವಾಗಿ ಮಹತ್ವದ ತೀರ್ಪೊಂದನ್ನು ನೀಡಿದರು. `ನಿವೃತ್ತಿ ವೇತನವೆಂಬುದು ಸರ್ಕಾರದ ಔದಾರ್ಯದ ಕೊಡುಗೆಯಲ್ಲ. ಅದು ಸರ್ಕಾರ ನೀಡುವ ದಯಾಭಿಕ್ಷೆಯೂ ಅಲ್ಲ. ನಿವೃತ್ತಿ ಹೊಂದಿದ ಪ್ರತಿಯೊಬ್ಬ ಸರ್ಕಾರ ನೌಕರನೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಪಡೆಯಲು ಅರ್ಹ. ನಿವೃತ್ತಿ ವೇತನ ನಿವೃತ್ತಿ ನೌಕರನ ಹಕ್ಕು' ಎಂದು ಹೇಳಿದರು. ೧೯೭೯ರ ಮಾರ್ಚ್ ೩೧ರ ನಂತರ ನಿವೃತ್ತಿಯಾದವರಿಗೆ ಅಷ್ಟೇ ಅಲ್ಲ, ಹಿಂದೆ ನಿವೃತ್ತರಾದವರಿಗೂ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯ ಸೌಲಭ್ಯವನ್ನು ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿತು. ತೀರ್ಪು ಹೊರಬಿದ್ದ ಡಿಸೆಂಬರ್ ೧೭ ರ ಆ ದಿನವನ್ನು ಈಗ `ನಿವೃತ್ತರ ದಿನ'ವೆಂದು ಆಚರಿಸಲಾಗುತ್ತಿದೆ.