ದೆಹಲಿ ಪೊಲೀಸ್
ಡೆಲ್ಲಿ ಪೋಲಿಸ್ ಎಂದು ಕೂಡ ಕರೆಯಲಾಗುವ ದಿ ಡಿಪಾರ್ಟ್‍ಮೆಂಟ್ ಆಫ್ ಪೋಲಿಸ್ (DoP ), ರಾಷ್ಟ್ರ ರಾಜಧಾನಿ ದೆಹಲಿಯ (National Capital Territory of Delhi) ಕಾನೂನು ಮತ್ತು ರಕ್ಷಣೆಯನ್ನು ನೋಡಿಕೊಳ್ಳುವ ಏಜೆನ್ಸಿ ಆಗಿದೆ. ಅದು ರಾಷ್ಟ್ರ ರಾಜಧಾನಿ ಪ್ರದೇಶದ ಹೊರಗಿರುವ ಸ್ಥಳಗಳ ಅಧಿಕಾರ ವ್ಯಾಪ್ತಿ ಹೊಂದಿಲ್ಲ.
ದೆಹಲಿ ಪೊಲೀಸ್ | |
---|---|
ಚಿತ್ರ:Logdelhi.jpg | |
ಧ್ಯೇಯವಾಕ್ಯ | Citizens First |
ಸಂಸ್ಥೆಯ ಮೇಲ್ನೋಟ | |
ಸ್ಥಾಪನೆ | 1861 |
ಕಾನೂನು ವ್ಯಾಪ್ತಿ | National Capital Territory of Delhi |
Sworn members | 57,500 |
ನಿರ್ವಹಣಾ ಮುಖ್ಯಸ್ಥರು |
|
Facilities | |
Stations | 136 |
Lockups | 9 |
Helicopters | 1[೧] |
Website | |
Official website |
ಭಾರತ ಪೋಲಿಸ್ ಕಾಯ್ದೆಯನ್ನು ಅಳವಡಿಸಿಕೊಂಡ ನಂತರ 1861 ರಲ್ಲಿ ಪ್ರಾರಂಭಿಸಿದ ಡೆಲ್ಲಿ ಪೋಲಿಸ್ ಭಾರತ 1947 ರಲ್ಲಿ ಸ್ವಾತಂತ್ರ್ಯ ಪಡೆಯುವವರೆಗೂ ಪಂಜಾಬ್ ಪೋಲಿಸ್‍ನ ಒಂದು ಭಾಗವಾಗಿತ್ತು. 1966 ರಲ್ಲಿ ಅದನ್ನು ಪುನರ್ ರೂಪಿಸಿದ ನಂತರ ನಾಲ್ಕು ಡೆಲ್ಲಿ ಪೋಲಿಸ್ ವಿಭಾಗಗಳಾಗಿ ವಿಂಗಡಿಸಲಾಯಿತು. ಡೆಲ್ಲಿ ಪೋಲಿಸ್ ಕಮೀಶನರ್ ಇದರ ಮುಖ್ಯಸ್ಥರಾಗಿದ್ದಾರೆ. 57,500 ಜನ ಸಿಬ್ಬಂದಿಯನ್ನು ಹೊಂದಿರುವ ಡೆಲ್ಲಿ ಪೋಲಿಸ್ ವಿಶ್ವದ ಅತಿದೊಡ್ಡ ಮೆಟ್ರೊಪಾಲಿಟನ್ ಪೋಲಿಸ್‍ಗಳಲ್ಲಿ ಒಂದಾಗಿದೆ. 2007 ರಲ್ಲಿದ್ದಂತೆ ಡೆಲ್ಲಿ ಪೋಲಿಸ್ NCT ಯಾದ್ಯಂತ 136 ಪೋಲಿಸ್ ಠಾಣೆಗಳನ್ನು ನಿರ್ವಹಿಸುತ್ತಿತ್ತು. ಹೀಗಿದ್ದರೂ ಕೂಡ ಡೆಲ್ಲಿ ಪೋಲಿಸ್ ಕಾಲಕ್ರಮೇಣ ಕುಖ್ಯಾತಿ ಗಳಿಸಿತು, ಇದಕ್ಕೆ ಪ್ರಮುಖ ಕಾರಣ ದೆಹಲಿಯಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪರಾಧದ ಪ್ರಮಾಣ. 2007 ರಲ್ಲಿ ದೆಹಲಿಯ ಅಪರಾಧ ಪ್ರಮಾಣ 100,000 ಜನರಿಗೆ 357.2 ಪ್ರಕರಣಗಳಾಗಿದ್ದುವು, ರಾಷ್ಟ್ರಮಟ್ಟದಲ್ಲಿ ಈ ಪ್ರಮಾಣ 100,000 ಜನರಿಗೆ 167.7 ಪ್ರಕರಣಗಳಾಗಿದ್ದುವು.
ಸಂಸ್ಥೆ
ಬದಲಾಯಿಸಿ1948 ಕ್ಕೆ ಮುಂಚೆ ಡೆಲ್ಲಿ ಪಂಜಾಬ್ ಪೋಲಿಸ್‍ನ ಒಂದು ಭಾಗವಾಗಿತ್ತು. 1948 ರಲ್ಲಿ ಇನ್ಸ್ಪೆಕ್ಟರ್ ಜನರಲ್, ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಸೂಪರಿಂಟೆಂಡೆಂಟ್‍ಗಳ ನೇಮಕಾತಿಯೊಂದಿಗೆ ಡೆಲ್ಲಿ ಪೋಲಿಸ್‍ನ್ನು ಪುನರ್ರಚಿಸಲಾಯಿತು. ಶ್ರೀಯುತ ಡಿ.ಡಬ್ಲ್ಯು. ಮೆಹ್ರಾ ಡೆಲ್ಲಿ ಪೋಲಿಸ್‍ನ ಪ್ರಥಮ ಮುಖ್ಯಸ್ಥರಾದರು. 1966 ರಲ್ಲಿ ಡೆಲ್ಲಿ ಪೋಲಿಸ್ ಕಮೀಶನ್ ಸ್ಥಾಪಿಸಲಾಯಿತು ಹಾಗೂ ಇದು ಜುಲೈ 1, 1978 ರಿಂದ ಪೋಲಿಸ್ ಕಮೀಶನರ್ ವ್ಯವಸ್ಥೆ ಜಾರಿಗೆ ತಂದಿತು. ಶ್ರೀ. ಜೆ.ಎನ್.ಚತುರ್ವೇದಿ ಡೆಲ್ಲಿಯ ಪ್ರಥಮ ಪೋಲಿಸ್ ಕಮೀಶನರ್ ಆದರು. ಪ್ರಸಕ್ತವಾಗಿ ಇಂದ್ರಪ್ರಸ್ಥ ಎಸ್ಟೇಟ್ ನಲ್ಲಿ ತನ್ನ ಕೇಂದ್ರೀಯ ಕಛೇರಿ ಹೊಂದಿರುವ ಡೆಲ್ಲಿ ಪೋಲಿಸ್ ತನ್ನ 149 ಪೋಲಿಸ್ ಠಾಣೆಗಳೊಂದಿಗೆ ವಿಶ್ವದ ಅತಿದೊಡ್ಡ ಮೆಟ್ರೊಪಾಲಿಟನ್ ಪೋಲಿಸ್ ಆಗಿದೆ. ಡೆಲ್ಲಿ ಪೋಲಿಸ್ ಕೆಳಕಂಡ ಸಿಬ್ಬಂದಿಯನ್ನು ಹೊಂದಿದೆ: 3 ವಿಶೇಷ ಕಮೀಶನರ‍್ಗಳು 17 ಜಾಯಿಂಟ್ ಕಮೀಶನರ‍್ಗಳು 7 ಹೆಚ್ಚುವರಿ ಕಮೀಶನರ‍್ಗಳು 74 ಡೆಪ್ಯೂಟಿ ಕಮೀಶನರ‍್ಗಳು 272 ACP ಗಳು ಜನರು ಡೆಲ್ಲಿಗೆ ವಿದ್ಯಾಭ್ಯಾಸ, ವ್ಯಾಪಾರ, ಉದ್ಯೋಗ ಮುಂತಾದ ಕಾರಣಗಳಿಗೆ ವಲಸೆ ಬರುವುದರಿಂದ ದೊಡ್ಡ ಸಂಖ್ಯೆಯ ಮಿಶ್ರ ಜನಸಂಖ್ಯೆ ಡೆಲ್ಲಿಯಲ್ಲಿ ಸೇರಿದೆ, ಹಾಗಾಗಿ ಅಪರಾಧ ಪ್ರಮಾಣ ಹೆಚ್ಚಾಗಿದ್ದು ಡೆಲ್ಲಿ ಪೋಲಿಸ್ ಜನರ ರಕ್ಷಣೆಗಾಗಿ ಅವಿರತ ದುಡಿಯುತ್ತಿದ್ದಾರೆ. ಇದು ಭಾರತದ ರಾಜಧಾನಿ ಆಗಿದೆ ಹಾಗೂ ವಿಶಾಲವಾದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಡೆಲ್ಲಿ ಪೋಲಿಸ್ ಹಲವು ಪಾತ್ರಗಳನ್ನು ವಹಿಸಬೇಕಾಗುತ್ತದೆ. ಡೆಲ್ಲಿ ಪೋಲಿಸ್ ಕೆಳಕಂಡ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ: ಅಪರಾಧಗಳ ತನಿಖೆ ಕ್ರಿಮಿನಲ್ ಚಟುವಟಿಕೆಗಳ ನಿಯಂತ್ರಣ ಮಹಿಳೆಯರಿಗೆ ರಕ್ಷಣೆ ಸಂಚಾರ ಸಮಸ್ಯೆ ನಿಯಂತ್ರಣ ಡೆಲ್ಲಿ ಪೋಲಿಸ್ ಭಾರತದಲ್ಲಿ ಅತ್ಯಾಧುನಿಕ ಆಡಳಿತ ವ್ಯವಸ್ಥೆ ಹೊಂದಿದೆ ಎಂದು ಪರಿಗಣಿಸಲಾಗಿದೆ. ಅದು, ’ನಾಗರೀಕ ಮೊದಲು’ ಎಂಬ ತತ್ವದಲ್ಲಿ ವಿಶ್ವಾಸ ಹೊಂದಿದೆ. ಅಪಘಾತಗಳನ್ನು ತಡೆಯಬೇಕಾದರೆ ಸಂಚಾರ ನಿಯಂತ್ರಣ ಬಹಳ ಮುಖ್ಯ ಹಾಗೂ ಈ ಕ್ಷೇತ್ರದಲ್ಲಿ ಡೆಲ್ಲಿ ಪೋಲಿಸ್ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಪೋಲಿಸ್ ಕಮೀಶನರ್ (C.P)ಅಡಿಯಲ್ಲಿ ಡೆಲ್ಲಿ ಪೋಲಿಸ್‍ನ್ನು ಹನ್ನೆರಡು ಶಾಖೆಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳಲ್ಲಿ ನಾಲ್ಕು ಪ್ರಮುಖ ಶಾಖೆಗಳೆಂದರೆ: ವಿಶೇಷ C.P ಆಡಳಿತ ವಿಶೇಷ C.P ತರಬೇತಿ ವಿಶೇಷ C.P ಭದ್ರತೆ ಮತ್ತು ಸಶಸ್ತ್ರ ಪೋಲಿಸ್ ವಿಶೇಷ C.P ಗುಪ್ತವಾರ್ತೆ ನಾಲ್ಕು ಪೋಲಿಸ್ ಕಮೀಶನರ್ (C.P) ಜೊತೆಗೆ 8 ಜನ ಜಾಯಿಂಟ್ ಪೋಲಿಸ್ ಕಮೀಶನರ‍್ಗಳಿದ್ದಾರೆ.
ವಿಶೇಷ C.P ಆಡಳಿತ, ತಮ್ಮ ಕೆಳಗೆ ಮೂರು ಜನ ಜಾಯಿಂಟ್ ಪೋಲಿಸ್ ಕಮೀಶನರ‍್ಗಳು ಮತ್ತು ಇಬ್ಬರು ಹೆಚ್ಚುವರಿ C.P. ಗಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಕೇಂದ್ರ ಕಛೇರಿಗೆ ಜವಾಬ್ದಾರರಾಗಿರುತ್ತಾರೆ. ಪ್ರತಿಯೊಬ್ಬ ಜಾಯಿಂಟ್ C.P ಮತ್ತು ಹೆಚ್ಚುವರಿ C.P ಅವರ ಕೆಳಗೆ ಒಬ್ಬ DCP ಯನ್ನು ಹೊಂದಿದ್ದಾರೆ. ಕೇಂದ್ರ ಕಛೇರಿಯ ಜವಾಬ್ದಾರಿ ಹೊಂದಿರುವ C.P ಸಾರ್ವಜನಿಕ ಸಂಪರ್ಕವನ್ನೂ ನಿರ್ವಹಿಸುತ್ತಾರೆ ಹಾಗೂ ಅವರ ಕೈಕೆಳಗೆ ಒಬ್ಬ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಇರುತ್ತಾರೆ.
ವಿಶೇಷ C.P ಕೈಕೆಳಗೆ ಒಬ್ಬ ಡೆಪ್ಯೂಟಿ ಕಮೀಶನರ್ ಆಫ್ ಪೋಲಿಸ್ (D.C.P) ಇರುತ್ತಾರೆ. ಪೋಲಿಸ್ ತರಬೇತಿ ಕಾಲೇಜಿನ (P.T.C) ಉಪ-ಪ್ರಾಚಾರ್ಯರು D.C.P ಗೆ ಉತ್ತರಿಸುತ್ತಾರೆ.
ವಿಶೇಷ C.P ಭದ್ರತೆ ಮತ್ತು ಸಶಸ್ತ್ರ ಪೋಲಿಸ್ ಕೈಕೆಳಗೆ ಮೂರು ಜನ ಜಾಯಿಂಟ್ C.P ಗಳು ಕೆಲಸ ಮಾಡುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಕೈಕೆಳಗೆ ಒಬ್ಬ ಹೆಚ್ಚುವರಿ C.P ಯನ್ನು ಹೊಂದಿರುತ್ತಾರೆ. ಹೆಚ್ಚುವರಿ C.P ಪ್ರತಿ ಪೋಲಿಸ್ ಬೆಟಾಲಿಯನ್ನಿನ C.P ಗಳಿಗೆ ಆದೇಶಗಳನ್ನು ಕೊಡುತ್ತಾರೆ.
ವಿಶೇಷ C.P ಗುಪ್ತವಾರ್ತೆ ಇವರ ಕೈಕೆಳಗೆ ಒಬ್ಬ ಜಾಯಿಂಟ್ C.P ಮತ್ತು ಒಬ್ಬ ಹೆಚ್ಚುವರಿ C.P ಕೆಲಸ ಮಾಡುತ್ತಾರೆ. ವಿಶೇಷ C.P ಒಬ್ಬ ಹೆಚ್ಚುವರಿ C.P ಮತ್ತು F.R.R.O ವಿಭಾಗಕ್ಕೆ ಆದೇಶಗಳನ್ನು ಕೊಡುತ್ತಾರೆ. ಡೆಲ್ಲಿ ಪೋಲಿಸ್ ಠಾಣೆಯಲ್ಲಿ ವಿದೇಶೀಯರನ್ನು ನೋಂದಣೆ ಮಾಡಿಕೊಳ್ಳುವ ಜವಾಬ್ದಾರಿ ಅವರದಾಗಿರುತ್ತದೆ. ವಿಶೇಷ C.P ಕೈಕೆಳಗೆ ಒಬ್ಬ D.C.P ಕೆಲಸ ಮಾಡುತ್ತಾರೆ. D.C.P ಕೆಳಗೆ ಒಬ್ಬ ಹೆಚ್ಚುವರಿ D.C.P ಇರುತ್ತಾರೆ.
ಪೋಲಿಸ್ ಕಮೀಶನರ್ ನೇರವಾಗಿ ಜಾಯಿಂಟ್ C.P ಯನ್ನು ನಿಯಂತ್ರಿಸುತ್ತಾರೆ ಹಾಗೂ ಇವರು ಉತ್ತರ, ದಕ್ಷಿಣ ಮತ್ತು ಪೂರ್ವ D.C.P ಗಳನ್ನು ನಿಯಂತ್ರಿಸುತ್ತಾರೆ. N.D.D ಯ ಜಾಯಿಂಟ್ C.P, D.C.P STF ಮತ್ತು D.C.P ಸುಪ್ರೀಂ ಕೋರ್ಟ್ ಇವರನ್ನೂ ನಿಯಂತ್ರಿಸುತ್ತಾರೆ.
ಡೆಲ್ಲಿ ಪೋಲಿಸ್ ಒಂದು ಸಹಾಯವಾಣಿ ಸಂಖ್ಯೆಗಳ ಪಟ್ಟಿ ಹೊಂದಿದ್ದಾರೆ, ಇವುಗಳ ಮೂಲಕ ಯಾರು ಬೇಕಾದರೂ ಪೋಲಿಸ್ ಠಾಣೆಗೆ ಹೋಗದೆ ಸಂಪರ್ಕ ಮಾಡಬಹುದು. ಡೆಲ್ಲಿ ಪೋಲಿಸರ ವಿವಿಧ ಸಹಾಯವಾಣಿ ಸಂಖ್ಯೆಗಳು ಕೆಳಕಂಡಂತಿವೆ: ಪೋಲಿಸ್ ಕಂಟ್ರೋಲ್ ರೂಮ್- 100 ವಿದ್ಯಾರ್ಥಿಗಳು ಅಥವಾ ಹಿರಿಯ ನಾಗರಿಕರ ರಕ್ಷಣಾ ಸೆಲ್ - 1291(ಟೋಲ್ ಫ್ರೀ) ವಿಜಿಲೆನ್ಸ್ ಸಂಬಂಧಪಟ್ಟ ವಿಚಾರಗಳು - 23213355, 23210011 ಅಪರಾಧ ನಿರೋಧ ವಿಭಾಗ- 23890018, 23890019 ಸಂಚಾರ ಸಮಸ್ಯೆಗಳು- 23378888 ಮಹಿಳಾ ಸಹಾಯವಾಣಿ- 1091
ವಿವಾದಗಳು
ಬದಲಾಯಿಸಿಕಾಲಕ್ರಮೇಣ ಡೆಲ್ಲಿ ಪೋಲಿಸರು ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ;ಅಭಿರಕ್ಷೆಯಲ್ಲಿ ಸಾವಿನಿಂದ ಹಿಡಿದು, ಅಭಿರಕ್ಷೆಯಲ್ಲಿ ಅತ್ಯಾಚಾರ, ಮೊದಲ ಮಾಹಿತಿ ವರದಿ ಬರೆಯಲು ನಿರಾಕರಣೆ, ಕೋಮು ಗಲಭೆಗಳಲ್ಲಿ ಪಾತಕಿಗಳ ಜೊತೆ ಸೇರಿರುವುದು ಅಥವಾ ಏನೂ ಕ್ರಮ ತೆಗೆದುಕೊಳ್ಳದಿರುವುದು, ಮತ್ತು ನಾಟಕೀಯ ಎನ್‍ಕೌಂಟರ್ ಮುಂತಾದ ವ್ಯವಸ್ಥಾತ್ಮಕ ಸಮಸ್ಯೆಗಳು, ಭಾರತೀಯ ಪೋಲಿಸ್ ಮತ್ತು ವಿಶ್ವಾದ್ಯಂತ ಪೋಲಿಸ್ ವ್ಯವಸ್ಥೆಯಲ್ಲಿರುವ ರೋಗವಾಗಿದೆ.
ಬಹಳಷ್ಟು ಸಮಯಗಳಲ್ಲಿ ಡೆಲ್ಲಿ ಪೋಲಿಸ್ ಕಾನೂನಿನ ತಪ್ಪು ಭಾಗದಲ್ಲಿರುವುದು ಪ್ರತ್ಯಕ್ಷವಾಗಿ ತಿಳಿದು ಬಂದಿದೆ ಹಾಗೂ ಈ ಕಾರಣಕ್ಕಾಗಿ ಭಾರತದ ಸುಪ್ರೀಮ್ ಕೋರ್ಟ್,ಕೇಂದ್ರ ತನಿಖಾ ದಳ ಮತ್ತು ವಿವಿಧ ಮಾನವ ಹಕ್ಕುಗಳ ಸಂಸ್ಥೆಗಳ ಅವಹೇಳನೆಗೆ ಗುರಿಯಾಗಿದೆ.
1984 ರ ಸಿಖ್-ವಿರೋಧಿ ಗಲಭೆಯಲ್ಲಿ ಪಾತ್ರ
ಬದಲಾಯಿಸಿಸಿಖ್ ವಿರೋಧಿ ಗಲಭೆಗಳ ಸಮಯದಲ್ಲಿ ಸಿಖ್ಖರಿಗೆ ರಕ್ಷಣೆ ನೀಡದಿರುವುದಕ್ಕಾಗಿ ಡೆಲ್ಲಿ ಪೋಲಿಸರು ಕಟುವಾದ ಟೀಕೆಗೆ ಗುರಿಯಾದರು ಹಾಗೂ ಕೆಲವು ಪ್ರಕರಣಗಳಲ್ಲಿ ಜನಜಂಗುಳಿಯೊಂದಿಗೆ ಸಹಾಪರಾಧಿಗಳಾಗಿದ್ದರು. TIME ಪತ್ರಿಕೆಗೆ ದೊರಕಿದ ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಡೆಲ್ಲಿ ಪೋಲಿಸರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ಹಾಗೂ "ಪಾತಕಿಗಳು ಮತದಾರರ ಪಟ್ಟಿಯನ್ನು ಹಿಡಿದು ಸಿಖ್ಖರ ಮನೆಗಳನ್ನು ಗುರುತಿಸಿ ಅವುಗಳ ಮೇಲೆ ದೊಡ್ಡ X ಗುರುತನ್ನು ಮಾಡಿ ಕೊಲೆ ಮತ್ತು ಅತ್ಯಾಚಾರ ಎಸಗುತ್ತಿದ್ದರು ಹಾಗೂ ಸಿಖ್ಖರಿರುವ ದೊಡ್ಡ ದೊಡ್ಡ ಪ್ರದೇಶಗಳಿಗೆ ಬಸ್ಸಿನಲ್ಲಿ ವಿಧ್ವಂಸಕರನ್ನು ರವಾನಿಸುತ್ತಿದ್ದರು." ನವೆಂಬರ್ 1984 ರಲ್ಲಿ, ಡೆಲ್ಲಿ ಆಧಾರಿತ ಮಾನವ ಹಕ್ಕುಗಳ ಸಂಸ್ಥೆಗಳಾದ PUDR ಮತ್ತು PUCL ಪ್ರಕಟಿಸಿದ ಒಂದು ವರದಿಯಲ್ಲಿ ಈ ಟೀಕೆಗಳು ಪ್ರತಿಧ್ವನಿಸಿದ್ದುವು. [೧] Archived 2018-04-11 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2009-02-07 ವೇಬ್ಯಾಕ್ ಮೆಷಿನ್ ನಲ್ಲಿ.
ಕ್ರಮ ಕೈಗೊಂಡ ಅಧಿಕಾರಿ
ಬದಲಾಯಿಸಿಕುತೂಹಲಕಾರಿ ಅಂಶವೆಂದರೆ 1984 ರ ದೊಂಬಿಗಳ ತನಿಖೆ ಮಾಡಿದ DCP ಶ್ರೀ ಎ.ಎ. ಫರೂಕೀ, ಶ್ರೀ ಎಚ್.ಕೆ.ಎಲ್.ಭಗತ್ ರನ್ನು ದಸ್ತಗಿರಿ ಮಾಡಿದರು, ಆದರೆ ಇವರನ್ನು CBI ದಾಳಿಗೆ ಗುರಿಮಾಡಲಾಯಿತು ಮತ್ತು ಕಳೆದ 5 ವರ್ಷಗಳಿಂದ ಅಮಾನತ್ತಿನಲ್ಲಿಡಲಾಗಿದೆ. ಡೆಲ್ಲಿ ಪೋಲಿಸ್‍ನ ಅತ್ಯಂತ ಪ್ರಾಮಾಣಿಕ ಅಧಿಕಾರಿಗಳಲ್ಲೊಬ್ಬರು, ಹೆಸರಾಂತ ಕಾದಂಬರಿಕಾರರು, ಹಾಗೂ ಪೈಗಮ್ ಅಫಾಕಿ ಎಂಬ ಕಾವ್ಯನಾಮ ಹೊಂದಿದ್ದ ಇವರ ಮೇಲೆ ಅಸಮ ಪ್ರಮಾಣ ಆಸ್ತಿ ಹೊಂದಿದ್ದಾರೆಂಬ ಅಪಾದನೆ ಹೊರಿಸಲಾಯಿತು ಆದರೆ ಈ ಆರೋಪ ಸಾಬೀತಿಗೆ ಯಾವ ಭ್ರಷ್ಟಾಚಾರದ ಸಾಕ್ಷಿಯನ್ನೂ ಒದಗಿಸಲಿಲ್ಲ. ಇದು ವಿಚಿಯ್ರವಾದರೂ ನಿಜ. ಬಹುಶಃ ಒಬ್ಬ ಕ್ರಿಯಾತ್ಮಕ ವ್ಯಕ್ತಿಯಾಗಿ ಮತ್ತು ಒಬ್ಬ ಲೇಖಕನಾಗಿ ಕಾನೂನು ಅಗತ್ಯದಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.
Such wide-scale violence cannot take place without police help. Delhi Police, whose paramount duty was to upkeep law and order situation and protect innocent lives, gave full help to rioters who where working under able guidance of great leaders like Jagdish Tytler and H.K.L. Bhagat. It is a known fact that many jails, sub-jails and lock-ups were opened for three days and prisoners, for the most part hardened criminals, were provided fullest provisions, means and instruction to "teach the Sikhs a lesson". But it will be wrong to say that Delhi Police did nothing, for it took full and keen action against Sikhs who tried to defend themselves. The Sikhs who opened fire to save their lives and property had to spend months dragging heels in courts afterwards.
— Jagmohan Singh Khurmi, The Tribune
ಮುಖ್ಯ ಸಂಪರ್ಕ ಸಂಖ್ಯೆಗಳು
ಬದಲಾಯಿಸಿ- ಕಂಟ್ರೋಲ್ ರೂಮ್:100
- ಮಕ್ಕಳು:1098
- ಮಹಿಳೆಯರು:1091,1096 ಮತ್ತು 011-24121234
- ಹಿರಿಯ ನಾಗರಿಕರು:1091 ಮತ್ತು 1291
- ಅಪರಾಧದ ಬಗ್ಗೆ ಮಾಹಿತಿ ನೀಡಲು:1090
- ಸಂಚಾರ:011-23010101
- ವಿಜಿಲೆನ್ಸ್ ಸೆಲ್:011-23213355
- ಅಪರಾಧ ನಿರೋಧ ಸೆಲ್:011-23890018 ಮತ್ತು 011-23890019
- ಲೀಗಲ್ ಸೆಲ್:011-23490258 ಮತ್ತು 011-23490010, Ext.4258
- ಹೆಣ್ಣುಮಕ್ಕಳ ಲೇವಡಿ ನಿರೋಧ, ಅಶ್ಲೀಲ ಕರೆಗಳು: 011-27894455
(ವಿಕಿಪೀಡಿಯಾಗೆ ಸಹಾಯ ಮಾಡಿ ಈ ಸಂಖ್ಯೆಗಳು ಅಪ್ ಟು ಡೇಟ್ ಆಗಿರುವಂತೆ ನೋಡಿಕೊಳ್ಳಿ. ಇದು ನಾಗರಿಕರಿಗೆ ಏಕ-ಸಂಪರ್ಕ ಕೇಂದ್ರವಾಗುತ್ತದೆ)
ಟಿಪ್ಪಣಿಗಳು
ಬದಲಾಯಿಸಿ