ಆಶೀರ್ವಾದ್ (ಬ್ರಾಂಡ್)
ಆಶೀರ್ವಾದ್ ಐಟಿಸಿ ಲಿಮಿಟೆಡ್ ಒಡೆತನದ ಪ್ರಮುಖ ಆಹಾರ ಮತ್ತು ಅಡುಗೆ ಪದಾರ್ಥಗಳ ಬ್ರಾಂಡ್ ಆಗಿದೆ. [೧] ಆಶೀರ್ವಾದ್ ಬ್ರಾಂಡ್ ಅನ್ನು 2002 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಅದರ ಉತ್ಪನ್ನಗಳ ಶ್ರೇಣಿಯಲ್ಲಿ ಹಿಟ್ಟು, ಉಪ್ಪು, ಮಸಾಲೆಗಳು, ತ್ವರಿತ ಆಹಾರ ಮಿಶ್ರಣಗಳು, ಡೈರಿ ಉತ್ಪನ್ನಗಳು ಮತ್ತು ಸೂಪರ್‌ಫುಡ್‌ಗಳು ಸೇರಿವೆ. [೨]
ಉತ್ಪನ್ನಗಳು
ಬದಲಾಯಿಸಿಗೋಧಿ ಹಿಟ್ಟು
ಬದಲಾಯಿಸಿ2002ರ ಮೇ 26ರಂದು ಬಂಗಾಳ ಮತ್ತು ಚಂಡೀಗಢದಲ್ಲಿ "ಆಶೀರ್ವಾದ್ ಅಟ್ಟಾ" ಬಿಡುಗಡೆಯೊಂದಿಗೆ ಐಟಿಸಿ ಬ್ರಾಂಡೆಡ್ ಅಟ್ಟಾ (ಪ್ಯಾಕೇಜ್ ಮಾಡಿದ ಗೋಧಿ ಹಿಟ್ಟು) ಮಾರುಕಟ್ಟೆಯನ್ನು ಪ್ರವೇಶಿಸಿತು. ಈ ಉತ್ಪನ್ನವು ಈಗ ಭಾರತದಾದ್ಯಂತ ಲಭ್ಯವಿದೆ. ಆಶೀರ್ವಾದ್ ಪ್ಯಾಕೇಜ್ ಪಿಇಟಿ ಪಾಲಿ ಆಗಿದ್ದು, ಭಾರತದ ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಕೃಷಿ ಪ್ರಕ್ರಿಯೆಯನ್ನು ತೋರಿಸುವ, ಮಧುಬನಿ ವರ್ಣಚಿತ್ರದ ರೂಪದ ವಿನ್ಯಾಸವನ್ನು ಹೊಂದಿದೆ.[೩]
ಆಶೀರ್ವಾದ್ ಸೆಲೆಕ್ಟ್ ಅಟ್ಟಾವನ್ನು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಿಂದ ಬರುವ ಶರ್ಬತಿ ಗೋಧಿಯಿಂದ ತಯಾರಿಸಲಾಗುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ][ ಉಲ್ಲೇಖದ ಅಗತ್ಯವಿದೆ ]
2018 ರಲ್ಲಿ 28% ಮತ್ತು ₹೪,೨೦೦ ಕೋಟಿ (ಯುಎಸ್$೯೩೨.೪ ದಶಲಕ್ಷ) ವಹಿವಾಟು ಹೊಂದಿರುವ ಪ್ಯಾಕೇಜ್ಡ್ ಅಟ್ಟಾದಲ್ಲಿ ಆಶೀರ್ವಾದ್ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿತ್ತು ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ. [೪]
ಉಪ್ಪು
ಬದಲಾಯಿಸಿಐಟಿಸಿ 26 ಮಾರ್ಚ್ 2003 ರಂದು 'ಆಶೀರ್ವಾದ್ ಸಾಲ್ಟ್' ಬ್ರಾಂಡ್ ಹೆಸರಿನಲ್ಲಿ ಪ್ಯಾಕೇಜ್ಡ್ ಉಪ್ಪನ್ನು ಬಿಡುಗಡೆ ಮಾಡಿತು [೫]
ಮಸಾಲೆಗಳು
ಬದಲಾಯಿಸಿಕಂಪನಿಯು ಸಾವಯವ ಆಹಾರಗಳ ಚಿಲ್ಲರೆ ವ್ಯಾಪಾರವನ್ನು ಜುಲೈ 2007 ರಲ್ಲಿ ಪ್ರಾರಂಭಿಸಿತು. ಮೆಣಸಿನಕಾಯಿ, ಅರಿಶಿನ ಮತ್ತು ಕೊತ್ತಂಬರಿ ಪುಡಿಗಳನ್ನು ಒಳಗೊಂಡಿರುವ "ಆಶೀರ್ವಾದ್ ಸೆಲೆಕ್ಟ್" ಸಾವಯವ ಮಸಾಲೆಗಳನ್ನು ಪ್ರಾರಂಭಿಸಿತು.[೫]
ತ್ವರಿತ ಆಹಾರ ಮಿಶ್ರಣ(ಇನ್ಸ್ಟಂಟ್ ಫುಡ್ ಮಿಕ್ಸ್)
ಬದಲಾಯಿಸಿಮಾರ್ಚ್ 2006 ರಲ್ಲಿ ಪ್ರಾರಂಭವಾದ ಈ ಶ್ರೇಣಿಯು ಗುಲಾಬ್ ಜಾಮೂನ್, ರವೆ ಇಡ್ಲಿ, ಅಕ್ಕಿ ಇಡ್ಲಿ, ಅಕ್ಕಿ ದೋಸೆ, ಢೋಕ್ಲಾ, ಖಮನ್, ರಸಮಲೈ ಮತ್ತು ವಡೆ ಮಿಶ್ರಣವನ್ನು ಒಳಗೊಂಡಿದೆ. [೫] 2021 ರಲ್ಲಿ, ಇದು ಇನ್ಸ್ಟಂಟ್ ಅವಲಕ್ಕಿ, ಉಪ್ಪಿಟ್ಟು, ಸಾಂಬಾರ್ ಮತ್ತು ಸಜ್ಜಿಗೆ ಮಿಶ್ರಣಗಳೊಂದಿಗೆ "ರೆಡಿ-ಟು-ಮಿಕ್ಸ್" ಉಪಹಾರ ವಲಯವನ್ನು ಪ್ರವೇಶಿಸಿತು. [೬]
ಬಹುಪಯೋಗಿ ಅಡುಗೆ ಪೇಸ್ಟ್
ಬದಲಾಯಿಸಿ'ಆಶೀರ್ವಾದ್ ಬಹುಪಯೋಗಿ ಅಡುಗೆ ಪೇಸ್ಟ್' , ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯಲ್ಲಿ ಈರುಳ್ಳಿ, ಟೊಮ್ಯಾಟೊ, ಶುಂಠಿ ಮತ್ತು ಬೆಳ್ಳುಳ್ಳಿಯ ಹುರಿದ ಪೇಸ್ಟ್ ಆಗಿದೆ. ಇದು ಹೆಚ್ಚಿನ ಉತ್ತರ ಭಾರತೀಯ ಭಕ್ಷ್ಯಗಳ[೭] ತಯಾರಿಕೆಗೆ ಬಳಸುವ ಸಾಮಾನ್ಯ ಪೇಸ್ಟ್ ಆಗಿದೆ.
ಡೈರಿ
ಬದಲಾಯಿಸಿಆಶೀರ್ವಾದ್ 2015 ರಲ್ಲಿ ತುಪ್ಪದ ಬಿಡುಗಡೆಯೊಂದಿಗೆ ಪ್ಯಾಕೇಜ್ಡ್ ಡೈರಿ ವಿಭಾಗವನ್ನು ಪ್ರವೇಶಿಸಿತು. [೮] ಡೈರಿ ವಿಭಾಗವು ಹಾಲು, ಮೊಸರು, ಪನೀರ್, ಲಸ್ಸಿ ಮತ್ತು ಮಿಷ್ಟಿ ದೋಯಿಗಳನ್ನು 'ಆಶೀರ್ವಾದ್ ಸ್ವಸ್ತಿ' ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. [೯]
ಉತ್ತಮ ಜೀರ್ಣಕಾರಿ ಆರೋಗ್ಯಕ್ಕಾಗಿ ಕ್ರಮ
ಬದಲಾಯಿಸಿಉತ್ತಮ ಜೀರ್ಣಕಾರಿ ಆರೋಗ್ಯದ ಮಹತ್ವದ ಕಡೆಗೆ ಗ್ರಾಹಕರ ಗಮನವನ್ನು ತರಲು ಆಶೀರ್ವಾದ್ ಡಿ. ಕ್ಯೂ. ಪರೀಕ್ಷೆಯನ್ನು ಪ್ರಾರಂಭಿಸಿತು. [೧೦]
ಉಲ್ಲೇಖಗಳು
ಬದಲಾಯಿಸಿ- ↑ "ITC Foods Business | Ready to Eat Packaged Foods". www.itcportal.com. Retrieved 2017-12-21.
- ↑ Tandon, Suneera (3 July 2019). "ITC strengthens nutrition portfolio under Aashirvaad brand". mint (in ಇಂಗ್ಲಿಷ್). Retrieved 25 February 2023.
- ↑ "Aashirvaad Story". Aashirvaad. Archived from the original on 21 August 2018. Retrieved 23 June 2013.
- ↑ "ITC's Aashirvaad becomes Rs 4,000 cr brand, forays into new segments". The Hindu Businessline (in ಇಂಗ್ಲಿಷ್). 6 March 2018. Retrieved 25 February 2023.
- ↑ ೫.೦ ೫.೧ ೫.೨ "Aashirvaad". ITC. Retrieved 23 June 2013. ಉಲ್ಲೇಖ ದೋಷ: Invalid
<ref>
tag; name "ITC" defined multiple times with different content - ↑ "ITC launches ready-to-cook, ready-to-mix breakfast staples". Moneycontrol (in ಇಂಗ್ಲಿಷ್). Retrieved 25 February 2023.
- ↑ "Masala Lauki --Chana Dal". Raaga on. The Singing Chef. 17 May 2008. Retrieved 23 June 2013.
- ↑ Mukherjee, Writankar (5 October 2015). "ITC enters dairy market, set to launch Aashirvaad ghee". The Economic Times. Retrieved 25 February 2023.
- ↑ "ITC's dairy business to focus on east India for next few years: Official". The Economic Times. 2 March 2022. Retrieved 25 February 2023.
- ↑ "56% of Indian families report Digestive Health issues, reveals survey conducted by Aashirvaad Atta with Multigrains: Official". Medianews4u. 28 May 2021. Retrieved 4 August 2023.