ಆಲಿಘಢ್
ಅಲಿಘಢ್ (ಹಿಂದಿ:अलीगढ़, ಇದು ಉತ್ತರ ಭಾರತದ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿದೆ. ನಗರವು ಸುಮಾರು 90 miles (140 km)ರಲ್ಲಿ ನೆಲೆಯಾಗಿದೆ.ನವದೆಹಲಿಯ ಆಗ್ನೇಯ ಭಾಗದಲ್ಲಿದೆ. ಇದು ತನ್ನ ಆಡಳಿತ ಕಚೇರಿ ಹೊಂದಿರುವ ಅಲಿಘಢ್ ಜಿಲ್ಲೆ, ಅಲಿಘಢ್ ಪೊಲೀಸ್ ರೇಂಜ್ ಮತ್ತು ಅಲಿಘಢ್ ವಿಭಾಗವಾಗಿದೆ.ಅದಲ್ಲದೇ ಇದರ ಜನಸಂಖ್ಯೆಯು ಸುಮಾರು ಅರ್ಧ ಮಿಲಿಯನ್‍ನ್ನಿಷ್ಟಿದೆ. ಇದನ್ನು ವಿಶ್ವವಿದ್ಯಾಲಯ ನಗರ ಎಂದು ಕರೆಯಲಾಗುತ್ತದೆ, ಪ್ರಸಿದ್ದ ಅಲಿಘಢ್ ಮುಸ್ಲಿಮ್ ಯುನ್ವರ್ಸಿಟಿ ಇಲ್ಲಿ ಸ್ಥಾಪಿತವಾಗಿದೆ. ಈ ಅಲಿಘಢ್ ವಿಭಾಗವು ಅಲಿಘಢ್ ಪ್ರದೇಶವನ್ನೊಳಗೊಂಡಿದೆ, ಇಟಾಹ್, ಹಥ್ರಾಸ್, ಮತ್ತು ಕಾನ್ಸಿ ರಾಮ್ ನಗರ ಜಿಲ್ಲೆಗಳು ಇದರ ವಿಭಾಗದಲ್ಲಿ ಬರುತ್ತವೆ. ಅಲಿಘಢ್‌ದಲ್ಲಿ ಭಾರತದಲ್ಲೇ ಅತ್ಯುತ್ತಮವಾದ ಶಿಕ್ಷಣ ಸಂಸ್ಥೆಗಳಿವೆ. ಇದನ್ನು ಜನಪ್ರಿಯತೆಯಿಂದ ಮೆಕ್ಕಾ ಆಫ್ ಎಜುಕೇಶನ್ ಎಂದು ಹೇಳಲಾಗುತ್ತದೆ. ಶಿಕ್ಷಣದ ಪವಿತ್ರ ಸ್ಥಳ ಎನ್ನಲಾಗುತ್ತದೆ.
,Aligarh | |
ರಾಜ್ಯ - ಜಿಲ್ಲೆ |
ಉತ್ತರ ಪ್ರದೇಶ - Aligarh |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 178 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
667732 - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 20200x - +0571 - UP-81 |
ಇತಿಹಾಸ
ಬದಲಾಯಿಸಿಅಲಿಘಢ್ವನ್ನು ಈ ಮೊದಲು ಹೆಸರು ಕೊಲ್ ಅಥವಾ ಕೊಯಿಲ್ ಎಂದು 18 ನೆಯ ಶತಮಾನದಲ್ಲಿ ಕರೆಯಲಾಗುತಿತ್ತು.[೧] ಕೊಲ್ ಎಂಬ ಹೆಸರು ನಗರ ಮಾತ್ರವಲ್ಲದೇ ಇಡೀ ಜಿಲ್ಲೆಯನ್ನೇ ಪ್ರತಿನಿಧಿಸುತಿತ್ತು.ಇದರ ಪ್ರಾದೇಶಿಕ ಗಡಿಗಳು, ಭೌಗೋಳಿಕತೆ ಆಗಾಗ ಬದಲಾವಣೆಯಾಗುತ್ತಿದ್ದವು. ಈ ಹೆಸರಿನ ಮೂಲದ ಬಗೆಗೆ ಸ್ಪಷ್ಟತೆ ಇಲ್ಲ. ಕೆಲವು ಪ್ರಾಚೀನ ಗ್ರಂಥಗಳಲ್ಲಿ ಕೊಲ್ ಎಂಬ ಪದವು ಒಂದು ಬುಡಕಟ್ಟು ಅಥವಾ ಜಾತಿ,ಒಂದು ಸ್ಥಳದ ಹೆಸರು ಅಥವಾ ಪರ್ವತ ಇಲ್ಲವೆ ಸನ್ಯಾಸಿ ಅಥವಾ ರಾಕ್ಷನೊಬ್ಬನ ಹೆಸರಿರಬಹುದೆಂದು ಉಲ್ಲೇಖಿತವಾಗಿದೆ. ಜಿಲ್ಲೆಯ ಸ್ಥಳ-ನಾಮಗಳ ಅಧ್ಯಯನದ ಪ್ರಕಾರ ಈ ಹಿಂದೆ ಜಿಲ್ಲೆಯು ಅರಣ್ಯ, ಗಿಡಗಂಟಿಗಳು ಮತ್ತು ಮಾವಿನ ತೋಪುಗಳನ್ನೊಳಗೊಂಡಿತ್ತೆಂದು ಹೇಳಲಾಗುತ್ತದೆ. ಜಿಲ್ಲೆಯ ಆರಂಭಿಕ 12 ನೆಯ AD ಶತಮಾನದ ಇತಿಹಾಸವು ಸ್ಪಷ್ಟವಾಗಿಲ್ಲ.[೧] ಎಡ್ವಿನ್ ಟಿ.ಅಟ್ಕಿನ್ ಸನ್ ಅವರ ಪ್ರಕಾರ ಈ ಹೆಸರನ್ನು ಆ ಕಾಲದಲ್ಲಿ ಬಲರಾಮ ಇದಕ್ಕೆ ನೀಡಿದ್ದಾನೆ.ಆಗಿನ ಕಾಲದ ಮಹಾ ಅಸುರ ಕೊಲ್‍ನನ್ನು ಆತ ಇದೇ ಜಾಗದಲ್ಲಿ ಕೊಂದಿದ್ದಾನೆ. ಅಹಿರ್ ಮತ್ತು ಡೋಬ್‍ನಲ್ಲಿ ಇದನ್ನು ಇಭ್ಭಾಗವಾಯಿತೆಂದು ಹೇಳಲಾಗುತ್ತದೆ.[೨] ಇನ್ನೊಂದು ಟಿಪ್ಪಣಿಯಲ್ಲಿ ಅಟ್ಕಿನ್‍ಸನ್ ಒಂದು "ಪುರಾಣ" ಆಧಾರದ ಮೇಲೆ, ಕೊಲ್ ಎಂಬುದು 372 AD ಯಲ್ಲಿ ರಜಪೂತರ ಕಾಲದಲ್ಲಿನ ಡೋರ್ ಎಂಬ ಪಂಗಡದವರಿಂದ ಸ್ಥಾಪನೆಯಾಗಿದೆ. ಮುಸ್ಲಿಮ್‍ರ ದಾಳಿಗೆ ಮುಂಚೆ ಡೋರ್ ರಜಪೂತರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಮಹಮ್ಮುದ್ ಘಜನಿಯ ದಾಳಿಯ ಸಂದರ್ಭದಲ್ಲಿ ಬರಾನ್‍ನ ಹರದತ್ತಾ ಡೋರ್‍ಗಳ ಮುಖಂಡರಾಗಿದ್ದರು.[೨] ಇಲ್ಲಿನ ಉತ್ಖನನ ನಡೆಸಿದ ನಂತರ ಕೊಲ್‍ನಲ್ಲಿ ದೊರೆತ ಬುದ್ದನ ಅವಶೇಷಗಳು ಮತ್ತು ಧಾರ್ಮಿಕ ಪಳೆಯುಳಿಕೆಗಳ ಪ್ರಕಾರ ಒಂದು ಕಾಲದಲ್ಲಿ ಇದು ಬೌದ್ದರ ನೆಲೆವಾಸವಾಗಿತ್ತು. ಹೀಗೆ ಕೊಯಿಲ್ ಕೋಟೆ ಭಾಗದಲ್ಲಿ ನಡೆದ ಉತ್ಖನನವು ಮಾಹಿತಿ ಒದಗಿಸುತ್ತದೆ. ಇದರಲ್ಲಿ ಹಿಂದು ಧರ್ಮದ ಪಳೆಯುಳಿಕೆಗಳೂ ಜೊತೆಯಲ್ಲಿಯೇ ದೊರೆತಿದ್ದು ಕೋಟೆಯಲ್ಲಿ ಬುದ್ದ ಮತ್ತು ಹಿಂದೂ ದೇವಸ್ಥಾನಗಳಿದ್ದವು.[೨] ಆಗ 1194 AD ನಲ್ಲಿ ಕುತ್ಬ್-ಉದ್-ದಿನ್ ಐಬಕ್ ದೆಹಲಿಯಿಂದ ಕೊಯಿಲ್‍ವರೆಗೂ ಯಾತ್ರೆ ನಡೆಸಿದ್ದಾನೆ.ಆಗ ಇದು "ಹಿಂದ್‍ನ ಅತ್ಯಂತ ಪ್ರಸಿದ್ದ ಕೋಟೆಗಳಲ್ಲಿ ಒಂದಾಗಿತ್ತು."[೨] ಕುತ್ಬ್-ಉದ್-ದಿನ್ ಐಬಕ್ ಆಗ ಹಿಸಮ್-ಉದ್-ದಿನ್ ಉಲ್ಬಕ್ ಎಂಬಾತನನ್ನು ಕೊಯಿಲ್‍ನ ಮೊದಲ ಮುಸ್ಲಿಮ್ ಗವರ್ನರ್ ಆಗಿ ನೇಮಿಸಿದನು.[೨] ಲೇಖಕ ಇಬ್ನ್ ಬಟ್ಟುಟಾ ನ ರಿಹ್ಲಾ ದಲ್ಲಿ ಸಹ ಕೊಯಿಲ್‍ನ ಉಲ್ಲೇಖವಿದೆ. ಚೀನಾ ಸಾಮ್ರಾಜ್ಯದ ಯುವಾನ್ ಪ್ರದೇಶದ ಮೊಂಗೊಲ್ ಚಕ್ರವರ್ತಿ ಉಖಾಂತು ಖಾನ್‍ನ ಪ್ರತಿನಿಧಿಯಾಗಿ ತನ್ನೊಂದಿಗೆ 15 ರಾಜದೂತರೊಂದಿಗೆ ಆತ ಕ್ಯಾಂಬೆಯ್(ಗುಜರಾತ) ಕರಾವಳಿ ಮೂಲಕ ಕೊಯಿಲ್‍ಗೆ 1341 ರಲ್ಲಿ ಭೇಟಿ ನೀಡಿದ್ದ. ಇಬ್ನ್ ಬಟ್ಟುಟಾ ಪ್ರಕಾರ ಆಗ ಜಿಲ್ಲೆಯು ಅಶಾಂತಿಯಿಂದ ಕೂಡಿತ್ತು.ಆಗ ಹೋಗಿದ್ದ ಚಕ್ರವರ್ತಿಯ ರಾಜಧೂತರೇ ಜಲಾಲಿಯನ್ನು ಮುಕ್ತಗೊಳಿಸಬೇಕಾಯಿತು.ಆ ಸಂದರ್ಭದಲ್ಲಿ ಹಿಂದು ಸಂಘಸಂಸ್ಥೆಗಳ ಮೇಲೆ ದಾಳಿ ನಡೆದು ಅವರ ಅಧಿಕಾರಿಗಳಲ್ಲೊಬ್ಬರನ್ನು ಕಳೆದುಕೊಳ್ಳಬೇಕಾಯಿತು. ಇಬ್ನ್ ಬಟ್ಟುಟಾ ಪ್ರಕಾರ ಕೊಯಿಲ್ "ಒಂದು ಉತ್ತಮ ನಗರ, ಸುತ್ತಲೂ ಮಾವಿನ ತೋಟಗಳ ರಮಣೀಯ ಸ್ಥಳ." ಈ ಹಸಿರು ತೋಪುಗಳಿಂದಾಗಿಯೇ ಕೊಯಿಲ್ ನ್ನು ಉತ್ತಮ ಪರಿಸರದ ಸಬ್ಜಾಬಾದ್ ಅಥವಾ "ಹಸಿರು ದೇಶ" ಎನ್ನಲಾಗಿದೆ.[೨] ಅಕ್ಬರ್‍ನ ಕಾಲದಲ್ಲಿ ಕೊಯಿಲ್ ಸರ್ಕಾರ್ ಎಂಬ ಆಡಳಿತ ವಿಧಾನದಲ್ಲಿ ಮರಾಹಾರಾ ದಸ್ತೂರ್ ಗಳು ,ಕೊಲ್ ಬಾ ಹವೇಲಿ,ಠಾಣಾ ಫರೀದಾ ಮತ್ತು ಅಕ್ಬರ್ ಬಾದ್ ನ್ನೊಳಗೊಂಡಿತ್ತು.[೨] ಅಕ್ಬರ್ ಮತ್ತು ಜಹಾಂಗೀರ್ ಬೇಟೆಯ ಸಲುವಾಗಿ ಕೊಲ್‍ಗೆ ಇಬ್ಬರೂ ಭೇಟಿ ನೀಡಿದ್ದರು. ಜಹಾಂಗೀರ್ ತಾನು ತೋಳಗಳನ್ನು ಬೇಟೆಯಾಡಿದ ಪ್ರದೇಶವನ್ನು ಸ್ಪಷ್ಟವಾಗಿ ಕೊಲ್ ಎಂದು ಹೆಸರಿಸಿದ್ದಾನೆ.[೧] ಇಬ್ರಾಹಿಮ್ ಲೋಧಿಯ ಆಳ್ವಿಕೆ ಕಾಲದಲ್ಲಿ ಉಮರ್ ಪುತ್ರ ಮುಹಮ್ಮದ್ ಕೊಯಿಲ್‍ನ ಗವರ್ನರ್ ಆಗಿದ್ದ.ಅಲ್ಲಿ 1524-25 ರಲ್ಲಿ ಕೋಟೆಯೊಂದನ್ನು ನಿರ್ಮಿಸಿ ತನ್ನ ಹೆಸರು ಸೇರಿಸಿ ಮುಹಮ್ಮದಘರ್ ಎಂದು ಕರೆದ.ನಂತರ ಫಾರೂಖ್ ಸಿಯಾರ್ ಮತ್ತು ಮುಹಮ್ಮದ್ ಶಾ ರ ಆಳ್ವಿಕೆಯಲ್ಲಿ ಸಬಿತ್ ಖಾನ್ ಎಂಬಾತ ಇದರ ಗವರ್ನರ್ ಆದ. ಈ ಹಳೆಯ ಲೋಧಿ ಕೋಟೆಯನ್ನು ಮರುನಿರ್ಮಿಸಿ ತನ್ನ ಹೆಸರು ಸೇರಿಸಿ ಸಬಿತ್ ಘರ್ ಎಂದು ಕರೆದ. ಕೊಯಿಲ್‍ನ ಆಡಳಿತಗಾರ ಆಗ ಬರ್ಗುಜರ್ ಕಿಂಗ್ ರಾವ್ ಬಹದ್ದೂರ್ ಸಿಂಗ್ ಅವರ ಹಿಂದಿನದನ್ನು ಗಮನಿಸಿದರೆ ಆತನ ಮನೆತನದ ಪೂರ್ವಿಕರು ಅದನ್ನು 1184 ರಿಂದ ಆಡಳಿತ ನಡೆಸುತ್ತಾ ಬಂದಿದ್ದಾರೆ. ಆಗಿನ ಕೊಯಿಲ್ ಅಜಿತ್ ಸಿಂಗ್‍ನ ಪುತ್ರಿಯನ್ನು ರಾಜಾ ಪ್ರತಾಪ ಸಿಂಗ್ ಬರ್ಗುಜಾರ್ ಮದುವೆಯಾಗಿದ್ದ. ಆರಂಭಿಕ 1753 ರಲ್ಲಿ ಬರ್ಗುಜರ್ ಮುಖ್ಯಸ್ಥ ಹಿಂದು ದೇವಾಲಯಗಳ ನಾಶಮಾಡುತ್ತಿರುವವರ ವಿರುದ್ದ ಎದ್ದು ನಿಂತು ಹಿಮ್ಮೆಟ್ಟಿಸಿದ. ಆಗಿನ ಜಾಟ್ ಆಡಳಿತಗಾರ ಸೂರಜ್ ಮಲ್ 1753 ರಲ್ಲಿ ಜೈಪುರದ ಜೈಸಿಂಗ್ ಮತ್ತು ಮುಸ್ಲಿಮ್ ಸೈನ್ಯದ ನೆರವಿನಿಂದ ಕೊಯಿಲ್ ಕೋಟೆ ಮೇಲೆ ದಾಳಿ ನಡೆಸಿದ. ಬರ್ಗುಜರ್ ರಾಜಾ ಬಹುದ್ದೂರ್ ಸಿಂಗ್ ಮತ್ತೊಂದು ಕೋಟೆಯಿಂದ ಯುದ್ದಕ್ಕೆ ಪ್ರಾರಂಭಿಸಿದಾಗ ಆತ ಅದರಲ್ಲಿ ಮಡಿದ. ಅದನ್ನೀಗ "ಘಸೇರಾ ಕಾಳಗ" ಬ್ಯಾಟಲ್ ಆಫ್ ಘಸೇರಾ ಎನ್ನಲಾಗುತ್ತದೆ. ಆಗ ಸಂಭಂಧಪಟ್ಟ ಎಲ್ಲಾ ಮಹಿಳೆಯರು ಸತಿಸಹಗಮನಗೈದರು. ಅದನ್ನು ಆಗ ರಾಮ್ ಘರ್ ಎಂದು ಮರುನಾಮಕರಣ ಮಾಡಲಾಯಿತು. ಯಾವಾಗ ಶಿಯಾ ಕಮಾಂಡರ್ ನಜಾಫ್ ಖಾನ್ ಕೊಲ್ ನ್ನು ವಶಪಡಿಸಿಕೊಂಡನೋ ಆಗ ಅದಕ್ಕೆ ಸದ್ಯದ ಹೆಸರು ಅಲಿಘಢ್ ಎಂದು ಹೆಸರಿಸಿದ. ಅಲಿಘಢ್ ಕೋಟೆ (ಇದನ್ನು ಅಲಿಘಢ್ ಕಿಲ್ಲಾ ಎನ್ನಲಾಗುತ್ತದೆ.) ಸದ್ಯ ನಿಂತಿರುವ ಇದನ್ನು ಫ್ರೆಂಚ್ ಎಂಜನೀಯರ್ ಗಳು ಫ್ರೆಂಚ್ ಅಧಿಕಾರಿಗಳಾದ ಬೆನೊಇಟ್ ಡೆ ಬೊಗ್ನೆ ಮತ್ತು ಪೆರೊನ್ ಇವರ ಉಸ್ತುವಾರಿಯಲ್ಲಿ ನಿರ್ಮಿಸಿದ್ದಾರೆ.[೧]
ಅಲ್ಲಿಯ್ ಘೌರ್‍ನ ಕಾಳಗ (1803)
ಬದಲಾಯಿಸಿಈ ಬಾಟಲ್ ಆಫ್ ಅಲ್ಲಿಯ್ ಘೌರ್ ಕಾಳಗವು ಸೆಪ್ಟೆಂಬರ್ 1, 1803 ರಲ್ಲಿ ನಡೆದದ್ದು ಎರಡನೆಯ ಆಂಗ್ಲೊ-ಮರಾಠಾ ಯುದ್ದ ಸಂದರ್ಭದಲ್ಲಿ; (1803–1805) ಇದು ಅಲಿಘಢ್ ಕೋಟೆ ಬಳಿ ಸಂಭವಿಸಿತು. ಆಗಿನ ಬ್ರಿಟಿಶ್ 76 ನೆಯ ರೆಜಿಮೆಂಟ್ ಅದನ್ನು ಡ್ಯುಕ್ ಆಫ್ ವೆಲಿಂಗ್ಟನ್ಸ್ ರೆಜಿಮೆಂಟ್ ಎನ್ನಲಾಗುತ್ತಿದ್ದು ಅದು ಮೊದಲ ದರ್ಜೆ ಫ್ರೆಂಚ್ ಅಧಿಕಾರಿ ಪೆರಾನ್ ನೇತೃತ್ವದಲ್ಲಿ ಈ ಕೋಟೆಗೆ ಮುತ್ತಿಗೆ ಹಾಕಿತು. ಅಲಿಘಢವು 1804 ರಲ್ಲಿ ಎರಡು, ಮೂರನೆಯ ಮತ್ತು ನಾಲ್ಕನೆಯ ಯುನಿಯನ್ ಮೂಲಕ ಜಿಲ್ಲೆಯಾಗಿ ವಿಭಜಿತವಾಗಿತ್ತು. ಇದರಲ್ಲಿ ಮೊರದಾಬಾದ್‍ನಿಂದ ಅನುಪ್ ಶಹರ್ ಮತ್ತು ಎಟ್ವಾದಿಂದ ಸಿಕಂದ್ರಾ ರಾವ್ ನ್ನೂ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಯಿತು. ನಂತರ ಆಗಷ್ಟ್ 1,1804, ರಲ್ಲಿ ಕ್ಲೌಡೆ ರಸ್ಸೆಲ್ ಅವರು ಹೊಸ ಜಿಲ್ಲೆಯ ಮೊದಲ ಕಲೆಕ್ಟರ್ ಆಗಿ ನೇಮಕವಾದರು.[೩]
ಅಲಿಘಢ್ ಮುಸ್ಲಿಮ್ ಯುನ್ವರ್ಸಿಟಿ ಸ್ಥಾಪನೆ (1875)
ಬದಲಾಯಿಸಿಆಗ 1875,ರಲ್ಲಿ ಸರ್ ಸಯದ್ ಅಹ್ಮದ್ ಖಾನ್ ಅವರು ಮುಹಮ್ಮದ್ ಆಂಗ್ಲೊ ಒರಿಯೆಂಟಲ್ ಕಾಲೇಜನ್ನು ಅಲಿಘಢ್ ನಲ್ಲಿ ಸ್ಥಾಪಿಸಿದರು.ಇದನ್ನು ಆಕ್ಸ್‌ಫರ್ಡ್ ಮತ್ತು ಕ್ಯಾಂಬ್ರಿಜ್ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ರೂಪಿಸಲಾಯಿತು.ಅವರು ಇಂಗ್ಲೆಂಡ್‍ಗೆ ಪ್ರವಾಸ ಹೋದಾಗ ಈ ಬಗ್ಗೆ ಪ್ರಭಾವಿತರಾಗಿದ್ದರು. ಇದು ನಂತರ 1920 ರಲ್ಲಿ ಅಲಿಘಢ್ ಮುಸ್ಲಿಮ್ ಯುನ್ವರ್ಸಿಟಿ ಆಯಿತು.
ಭೂವಿವರಣೆ (ಭೌಗೋಳಿಕತೆ)
ಬದಲಾಯಿಸಿಅಲಿಘಢ್ ವು 27°53′N 78°05′E / 27.88°N 78.08°E ರಲ್ಲಿ ಸ್ಥಾಪಿತವಾಗಿದೆ.[೪] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ. ನಗರವು ಡೋಬ್‍ನ ಭಾಗವಾಗಿರುವ ಪ್ರದೇಶದ ಮಧ್ಯ ಭಾಗದಲ್ಲಿ ನೆಲೆಯಾಗಿದೆ.ಅಥವಾ ಈ ಭೂ ಪ್ರದೇಶವು ಗಂಗಾ ಮತ್ತು ಯಮುನಾ ನದಿಗಳ ಪ್ರದೇಶದ ನಡುವೆ ಸ್ಥಾಪಿತವಾಗಿದೆ. ದ ಗ್ರ್ಯಾಂಡ್ ಟ್ರಂಕ್ ರೋಡ್ ಕೂಡಾ ನಗರದ ಮಧ್ಯದಲ್ಲಿ ಹಾಯ್ದು ಹೋಗುತ್ತದೆ.
ಹವಾಮಾನ
ಬದಲಾಯಿಸಿAligarh | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಅಲಿಘಢ್‍ನಲ್ಲಿ ಮಾನ್ಸೂನ್ ಪ್ರಭಾವಿತ ಹವಾಮಾನವಿದೆ. ಉತ್ತರ-ಕೇಂದ್ರ ಭಾಗದಲ್ಲಿರುವ ಸಮಶೀತೋಷ್ಣ ಆರ್ದ್ರತೆಯುಳ್ಳ ವಾತಾವರಣ ಕಾಣುತ್ತದೆ. ಏಪ್ರಿಲ್‍ನಲ್ಲಿ ಆರಂಭವಾಗುವ ಬೇಸಿಗೆಯು ಮೇ ತಿಂಗಳಲ್ಲಿ ಅಧಿಕ ಉಷ್ಣತೆ ಹೊಂದಿರುತ್ತದೆ. ಸರಾಸರಿ ಉಷ್ಣತೆಯು 28–33 °C (82–91 °F)ರ ನಡುವೆ ಇರುತ್ತದೆ. ಮಾನ್ಸೂನ್‍ನ ಮಾರುತವು ತನ್ನ ಚಲನೆಯನ್ನು ಜೂನ್ ತಿಂಗಳ ಕೊನೆಯಿಂದ ಆರಂಭಿಸಿದರೆ, ಅಕ್ಟೋಬರ್ ಕೊನೆಯಲ್ಲಿ ಅಧಿಕ ಆರ್ದ್ರತೆ ಹವಾಮಾನದೊಂದಿಗೆ ಮುಕ್ತಾಯವಾಗುತ್ತದೆ. ಆಲಿಘಢ್ ತನ್ನ ಬಹುತೇಕ ಮಳೆಯನ್ನು 800 millimetres (31 in) ಪ್ರಮಾಣದಲ್ಲಿ ಈ ತಿಂಗಳುಗಳಲ್ಲಿ ಪಡೆಯುತ್ತದೆ. ಆಗ ಉಷ್ಣತೆ ಪ್ರಮಾಣ ಇಳಿಮುಖಗೊಂಡು ಡಿಸೆಂಬರ್‍ನಲ್ಲಿ ಚಳಿಗಾಲ ಆರಂಭವಾಗುತ್ತದೆ. ಇದು ಫೆಬ್ರವರಿ ಆರಂಭದವರೆಗೂ ಮುಂದುವರೆಯುತ್ತದೆ. ಉಷ್ಣತೆಯು 12–16 °C (54–61 °F) ಇದರ ಆಸುಪಾಸಿನಲ್ಲಿರುತ್ತದೆ. ಸಾಮಾನ್ಯವಾಗಿ ಅಲಿಘಢ್‍ನಲ್ಲಿ ಚಳಿಗಾಲ ಸೌಮ್ಯವಾಗಿರುತ್ತದೆ. ಆಗಾಗ ಮಂಜು ಮತ್ತು ತೀಕ್ಷ್ಣ ಚಳಿಯ ಪ್ರಸಂಗಗಳುಂಟು. ಅಲಿಘಢ್‍ಗೆ ಸಂದರ್ಶನ ನೀಡುವವರಿಗೆ ಉತ್ತಮ ಸಮಯವೆಂದರೆ ಫೆಬ್ರವರಿ, ಮಾರ್ಚ್ ಅಥವಾ ನವೆಂಬರ್, ಆಗ ಉಷ್ಣತೆ ಮತ್ತು ಆರ್ದ್ರತೆ ಮಂದಗಾಮಿಯಾಗಿರುತ್ತವೆ.
ಜನಸಂಖ್ಯಾಶಾಸ್ತ್ರ
ಬದಲಾಯಿಸಿಒಟ್ಟಾರೆ ಆಗಿನ ಜನಗಣತಿ[೫] 2001,[೬] ಯ ಅಂಕಿಅಂಶ ಅಲಿಘಢ್‍ನಲ್ಲಿ ಒಟ್ಟು 667,732 ರಷ್ಟು ಜನಸಂಖ್ಯೆ ಇದೆ. ಒಟ್ಟು ಜನಸಂಖ್ಯೆಯಲ್ಲಿ ಪುರುಷರು 51% ಮತ್ತು ಮಹಿಳೆಯರು 47% ಇದ್ದಾರೆ. ಭದ್ರಾಚಲಂನ ಸರಾಸರಿ ಸಾಕ್ಷರತೆ ಪ್ರಮಾಣವು 73% ಆಗಿದ್ದು, ಇದು ರಾಷ್ಟ್ರೀಯ ಸರಾಸರಿಯಾದ 59.5% ಕ್ಕಿಂತ ಹೆಚ್ಚಾಗಿದೆ; 54% ರಷ್ಟು ಪುರುಷರು ಮತ್ತು 46% ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಜನಸಂಖ್ಯೆ 11% ರಷ್ಟು ಜನರು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ಹಳ್ಳಿಗಳಿಗೆ ಹತ್ತಿರ
ಬದಲಾಯಿಸಿಮಂಗರಿಹ್ - ಇದು ಆಲಿಘಢ್ ದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಒಂದು ಗ್ರಾಮವಾಗಿದೆ.ಆಲಿಘಢ್ ಗೊಂಡಾ ರಸ್ತೆಯ ಮೇಲಿದೆ. ಗೊರೈ - ಇದು ಆಲಿಘಢ್ ದಿಂದ 39 ಕಿಲೊಮೀಟರ್ ದೂರದಲ್ಲಿ ನೆಲೆಯಾಗಿದೆ.ಇದಲ್ಲದೇ ಮಥುರಾಕ್ಕೆ ಹತ್ತಿರವಾಗಿದೆ. ಬಾರೌಲಿ ರಾವ್ ಆಲಿಘಢ್ ದಿಂದ 24 ಕಿ.ಮೀ ದೂರದಲ್ಲಿದೆ. ಸಿದರ್ ಮೇನ್ - ಇದು ಇಟಾ-ಆಲಿಘಢ್ ಗಡಿಯಲ್ಲಿದೆ.ಇದು ಮೂಂಗ್ ಮಾಲಾಸ್ (ಕಾಳಿನ ಕರಿದ ತಿಂಡಿ)ಮಾಡುವಲ್ಲಿ ಪ್ರಸಿದ್ದಿ ಪಡೆದಿದೆ. ಕಾಸಿಮ್ ಪುರ್ ಪಾವರ್ ಹೌಸ್ ಕಾಲೊನಿ & ಗ್ರಾಮ - ಇದು ಜಾವಾ-ಆಲಿಘಢ್ ರಸ್ತೆಹತ್ತಿರದ ಅನುಪ್ ಶೇರ್ ನಲ್ಲಿ ನೆಲೆಯಾಗಿದೆ.ಇದು ವಿದ್ಯುತ್ ಯೋಜನೆಗಳ ರೂಪಿಸುವಲ್ಲಿ ಪ್ರಖ್ಯಾತವಾಗಿದೆ. (ಸರ್ಕಾರ್. U.P.).
ಮಾತನಾಡುವ ಭಾಷೆಗಳು
ಬದಲಾಯಿಸಿಆಲಿಘಢ್ ದಲ್ಲಿ ಪ್ರಮುಖವಾಗಿ ಮಾತನಾಡುವ ಭಾಷೆಗಳೆಂದರೆ ಹಿಂದಿ,ಇಂಗ್ಲಿಷ್ ಮತ್ತು ಉರ್ದು. ಇದಕ್ಕೆ ಕಾರಣವೆಂದರೆ ಉತ್ತರ ಪ್ರದೇಶ ರಾಜ್ಯವು ಹಿಂದಿ-ಹೃದಯಭಾಗದಲ್ಲಿರುವ ಭಾಷೆಗೆ ಅಗ್ರ ಸ್ಥಾನ ನೀಡಿದೆ. ಆಲಿಘಢ್ ದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯೆಂದರೆ ಹಿಂದಿಯ ಸ್ವರೂಪವಾದ ಹಿಂದುಸ್ತಾನಿ. ಹಿಂದಿಯನ್ನು ಹೆಚ್ಚಾಗಿ ಆಡಳಿತ ವಲಯದಲ್ಲಿ ಬಳಸಲಾಗುತ್ತದೆ. ಆಲಿಘಢ್ ನಲ್ಲಿ ಮಾತನಾಡುವ ಇನ್ನೊಂದು ಪ್ರಮುಖ ಭಾಷೆಯೆಂದರೆ ಬ್ರಿಜ್ ಭಾಷಾ ಪ್ರಮುಖವಾಗಿ ಬ್ರಾಜ್ ನಲ್ಲಿ ಗ್ರಾಮೀಣ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.
ಉದ್ಯಮ
ಬದಲಾಯಿಸಿಆಲಿಘಢ್ ಉದ್ದಿಮೆ ನಗರವಾಗಿ ಹೆಚ್ಚು ಪ್ರಸಿದ್ದಿ ಪಡೆದಿದೆ. ಇದನ್ನು ತಾಲಾ ನಗರಿ ಎನ್ನುತ್ತಾರೆ. (ಲಾಕ್ಸ್ ಸಿಟಿ ಆಫ್ ಇಂಡಿಯಾ, ಭಾರತದ ಬೀಗಗಳ ನಗರ). ಬೀಗಗಳ ತಯಾರಿಕೆಯಲ್ಲಿ ದೇಶದಲ್ಲೇ ಎರಡನೆಯ ಸ್ಥಾನ ಪಡೆದಿರುವ ಲಿಂಕ್ಸ್ ಲಾಕ್ಸ್ ನಗರ ಮೂಲದಲ್ಲೇ ಇದ್ದು,ತನ್ನ ಉತ್ಪಾದನೆಗಳ ಮಾರಾಟದಲ್ಲಿ ತೊಡಗಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು 25,000 ಉದ್ಯಮಗಳಿವೆ.ಎರಡೂ ಸಣ್ಣ ಪ್ರಮಾಣದ ಮತ್ತು ಬೃಹತ್ ಉದ್ದಿಮೆಗಳ ಸಂಖ್ಯೆಯೂ ಇದರಲ್ಲಿದೆ. ಆಲಿಘಢ್ ಸದ್ಯ ಕಟ್ಟಡ ನಿರ್ಮಾಣದ ವಲಯದಲ್ಲಿ ಸುಗ್ಗಿ ಕಾಲ ಅನುಭವಿಸುತ್ತದೆ,ಸದ್ಯ ಹೊಸ ಬಹುಮಹಡಿ ಕಟ್ಟಡಗಳು,ಶಾಪಿಂಗ್ ಸಂಕೀರ್ಣಗಳು ಮತ್ತು ಅಪಾರ್ಟ್ ಮೆಂಟ್ ಗಳು ತಲೆ ಎತ್ತಿವೆ. ಇತ್ತೀಚಿಗೆ ಹಲವಾರು ಶಾಪಿಂಗ್ ಮಾಲ್ ಅಥವಾ ಮಳಿಗೆಗಳನ್ನು ದೆಹಲಿ ಮತ್ತು ಆಲಿಘಢ್ ನ ಡೆವಲ್ಪರ್ ಗಳ ಮೂಲಕ ನಿರ್ಮಿಸಲಾಗುತ್ತಿದೆ. ನಗರದಲ್ಲಿರುವ ಮಾಲ್ ಅಥವಾ ಶಾಪಿಂಗ್ ಮಳಿಗೆಗಳೆಂದರೆ,ರಾಮಘಾಟ್ ರಸ್ತೆಯಲ್ಲಿನ ಗ್ರೇಟ್ ಶಾಪಿಂಗ್ ಮಾಲ್, ಹಲವು ಇನ್ನೂ ನಿರ್ಮಾಣ ಅಹಂತದಲ್ಲಿವೆ.ಇವು ನಗರದಲ್ಲಿ ಅತ್ಯುತ್ತಮ ಹೆಗ್ಗುರುತುಗಳಂತೆ ಬೆಳೆಯಲಿವೆ. ದಿ ಲ್ಯಾಂಡ್ ಮಾರ್ಕ್ ಮಾಲ್ ಮಾರಿಸ್ ರಸ್ತೆಯಲ್ಲಿದೆ; ಶಾರದಾ ಮಾಲ್ ಸೆಂಟರ್ ಪಾಯಿಂಟ್ ನಲ್ಲಿದೆ;ಓಝೋನ್ ಮಾಲ್ ರಿಂಗ್ ರೋಡ್ ನಲ್ಲಿದ್ದರೆ ಗ್ರೇಟ್ ವ್ಯಾಲ್ಯು ಮಾಲ್ ರಾಮಘಾಟ್ ರಸ್ತೆಯಲ್ಲಿದೆ. ಆಲಿಘಢ್ ನಲ್ಲಿ ಹಲವಾರು ಅಂತರರಾಷ್ಟ್ರೀಯ ಖ್ಯಾತಿಯ ಬ್ರಾಂಡ್ ಯುಳ್ಳ ಬಟ್ಟೆ ಮತ್ತು ಕ್ರೀಡಾ ಬ್ರಾಂಡ್ ಗಳು ದೊರೆಯುತ್ತವೆ. ಉತ್ತರ ಪ್ರದೇಶ ಸ್ಟೇಟ್ ಇಂಡಸ್ಟ್ರಿಯಲ್ ಡೆವಲ್ಪ್ಮೆಂಟ್ ಕಾರ್ಪೊರೇಶನ್ (UPSIDC),ರಾಮಘಾಟ್ ರಸ್ತೆಯಲ್ಲಿ ತಾಲಾ ನಗರಿ ಇಂಡಸ್ಟ್ರಿಯಲ್ ಏರಿಯಾವನ್ನು ಅಭಿವೃದ್ಧಿಪಡಿಸಿದೆ. ಒಟ್ಟು ಮೂರು ಔದ್ಯೋಗಿಕ ಪ್ರದೇಶಗಳಿವೆ,ಇಂಡಸ್ಟ್ರಿಯಲ್ ಎಸ್ಟೇಟ್,ಪಾಲಾ ರೋಡ್ ಮತ್ತು ತಾಲಾ ನಗರಿ. ಆಲಹಂಪೂರ್ ಇಂಡಸ್ಟ್ರಿಯಲ್ ಏರಿಯಾವನ್ನು UPSIDC ಯೋಜನೆಗಾಗಿ ಪ್ರಸ್ತಾಪಿಸಿದ್ದು, ಇದು ದೆಹಲಿ ಜಿ.ಟಿ.ರಸ್ತೆಯಲ್ಲಿದೆ. ದಕ್ಷಿಣಾಂಚಲ್ ವಿದ್ಯುತ್ ವಿತರಣ್ ನಿಗಮ ಲಿಮಿಟೆಡ್ ತಾಲಾ ನಗರಿಗೆ ತಡೆರಹಿತ ವಿದ್ಯುತ್ ಪೂರೈಕೆ ಮಾಡುತ್ತದೆ. ಆಲಿಘಢ್ ವು ಭಾರತದಲ್ಲೇ ಅತಿ ಹೆಚ್ಚು ಬೀಗಗಳ ಉತ್ಪಾದನೆ ಮತ್ತು ಹಾರ್ಡ್ ವೇರ್ ವಸ್ತುಗಳ ತಯಾರಿಕೆಗೆ ಪ್ರಖ್ಯಾತವಾಗಿದೆ.ಹಿತ್ತಾಳೆ ಫಿಟ್ಟಿಂಗ್ಸ್ ಗಳ ಉತ್ಪಾದನೆಯಲ್ಲೂ ಅದು ಅಗ್ರ ಸ್ಥಾನದಲ್ಲಿದೆ. ಇದು ಪ್ಲ್ಯಾಸ್ಟಿಕ್ ಮತ್ತು ಕಬ್ಬಿಣದ ಆಟದ ಪಿಸ್ತೂಲ್ ಗಳನ್ನು,ಕೈಬೇಡಿಗಳು,ಬೆಲ್ಟ್ ಗಳು,ಗುರುತಿನ ಬ್ಯಾಜ್ ಗಳನ್ನು ಶಾಲೆಗಳಿಗಾಗಿ ಮತ್ತು ಸರ್ಕಾರಕ್ಕೂ ಪೂರೈಸುತ್ತದೆ. ಇದು ಕಲಾಪ್ರಕಾರ ಮತ್ತು ಶಿಲ್ಪಕಲಾಕೆತ್ತನೆಯ ಉದ್ಯಮವನ್ನೂ ಹೊಂದಿದೆ. ಇದು ಉತ್ಪಾದನೆಗಳನ್ನು ವಿಶ್ವಾದಾದ್ಯಂತ ಪೂರೈಸುತ್ತದೆ. ಆಲಿಘಢ್ ದಲ್ಲಿನ ಹಿತ್ತಾಳೆ ಮಾರುಕಟ್ಟೆ ಇಡೀ ಭಾರತದಲ್ಲೇ ಅತಿ ದೊಡ್ಡದಾಗಿದೆ.ಇಲ್ಲಿ ಸಾವಿರಾರು ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ. ಪ್ರತಿನಿತ್ಯ 100 ಟನ್ ಗಳಷ್ಟು ಹಿತ್ತಾಳೆ ಮತ್ತು 50 ಟನ್ ಗಳಷ್ಟು ಸತು ಇಲ್ಲಿ ಸಂಸ್ಕರಣೆಗೆ ಒಳಪಡುತ್ತದೆ. ಕಬ್ಬಿಣ,ಆಲ್ಯುಮಿನಿಯಮ್,ಕಂಚು ಮತ್ತು ಸತು ಬಳಸಿಕೊಂಡು ಹಲವು ಉತ್ಪಾದನೆಗಳನ್ನು ನಗರದಲ್ಲಿ ಮಾಡಲಾಗುತ್ತದೆ. ಆಲಿಘಢ್ ವು ದೊಡ್ಡ ಪ್ರಮಾಣದಲ್ಲಿ ಸತುವಿನ ಡೈ ಕಾಸ್ಟ್ ಗಳನ್ನು(ಸತುವು ಮುದ್ರಣಾ ಲೋಹ) ಮಾಡುವ ಅತ್ಯುಷ್ಣ ಕೊಠಡಿ ಮಾದರಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಸಾಮಾನುಗಳು ಕಡೆಯ ಗೃಹ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಬೆರಕೆ ಸತುವಿನ ಬಳಕೆ ಭಾರತದ ಎಲ್ಲಿಗಿಂತಲೂ ಆಲಿಘಢ್ ದಲ್ಲಿಯೇ ಹೆಚ್ಚು. ಆಲಿಘಢ್ ದಲ್ಲಿ ತಯಾರಾದ ಸತುವಿನ ಮುದ್ರಕಗಳು 2 ರಿಂದ 4 ವರ್ಷಗಳೊಳಗೆ ಮುರಿದು ಹೋಗಲು ಕಾರಣವೆಂದರೆ ಅದು ಸತುವಿನ ಮರುಬಳಕೆಯ ಲೋಹದ ಮೂಲಕ ಇವುಗಳನ್ನು ತಯಾರಿಸುತ್ತಿರುತ್ತದೆ.ಇದರಲ್ಲಿ ಬಹಳಷ್ಟು ಅಶುದ್ದತೆ ಅದರಲ್ಲೂ ಈ ಸೀಸದಲ್ಲಿ ಇನ್ನೂ ಹೆಚ್ಚು ಕಳಪೆ ಲೋಹ ಬಳಕೆಯಾಗಿರುತ್ತದೆ. ಆಲಿಘಢ್ ದಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಸಿದ್ದಪಡಿಸುವ ಘಟಕಗಳಿದ್ದು ಅದರ ಉತ್ಪನ್ನಗಳು ಭಾರತ ಮತ್ತು ಹೊರದೇಶಗಳಿಗೂ ರಫ್ತಾಗುತ್ತವೆ. ಇದು ನಾಲ್ಕು; ಕಾಯಿಗಳನ್ನು ಹಣ್ಣಾಗಿಸುವ,ಮಾಗಿಸುವ/ಕಾಯ್ದಿಡುವ ಒಣಗಿಸಿದ ಹಣ್ಣುಗಳು ಮತ್ತು ತರಕಾರಿಗಳಿಗೆ ಉತ್ತಮ ಸಂಸ್ಕರಣ ಮಾಡುವ ಸ್ಥಾವರಗಳಿರುವ ನಗರ ಸ್ಥಾನವೆನಿಸಿದೆ.
ಆರ್ಥಿಕತೆ
ಬದಲಾಯಿಸಿನಗರವು ಒಂದು ಕೃಷಿ ವ್ಯಾಪಾರದ ಕೇಂದ್ರವಾಗಿದೆ.[೭] ಕೃಷಿ ಉತ್ಪನ್ನಗಳ ಸಂಸ್ಕರಣ ಮತ್ತು ಉತ್ಪಾದನೆಗಳ ಚಟುವಟಿಕೆ ಮಹತ್ವದ್ದಾಗಿದೆ.[೮] ಆಲಿಘಢ್ ಯಾವಾಗಲೂ ಉತ್ತರ ಪ್ರದೇಶದ ಮಹತ್ವದ ವ್ಯಾಪಾರಿ ಕೇಂದ್ರ ಸ್ಥಳವಾಗಿದೆ.ಅದು ತನ್ನ ಬೀಗಗಳ ಉದ್ದಿಮೆಗೆ ಪ್ರಸಿದ್ದಿಯಾಗಿದೆ. ಆಲಿಘಢ್ ದಲ್ಲಿ ತಯಾರಾಗುವ ಬೀಗಗಳನ್ನು ವಿಶ್ವದ ಹಲವೆಡೆ ರಫ್ತು ಮಾಡಲಾಗುತ್ತದೆ. ಜಾನ್ಸನ್ ಅಂಡ್ ಕಂಪನಿಯು 1870 ರಲ್ಲಿ ಆಲಿಘಢ್ ನಲ್ಲಿ ಮೊದಲ ಇಂಗ್ಲೀಷ್ ಬೀಗಗಳ ಘಟಕವನ್ನು ಸ್ಥಾಪಿಸಿತು. ಆಗಿನ ಜಾನ್ಸನ್ ಅಂಡ್ ಕಂ.1890 ರಲ್ಲಿ ಬೀಗಗಳನ್ನು ತಯಾರು ಮಾಡುವ ಸಣ್ಣ ಪ್ರಮಾಣದ ಕೈಯಿಂದ ಮಾಡಿದ್ದ ಬೀಗಗಳನ್ನು ಮಾರುತಿತ್ತು.[೯] ರೇಲ್ ರೋಡ್ ಜಂಕ್ಷನ್ (ರೈಲ್ವೆ ಮಾರ್ಗದ ಕೂಡುಸ್ಥಳ)ಹೊಂದಿರುವ ಆಲಿಘಢ್ ಕೃಷಿ ಉತ್ಪನ್ನಗಳಿಗೆ ಪ್ರಾದೇಶಿಕ ಸ್ಥಳವಾಗಿದೆ,ಗೋದಿ,ಕಬ್ಬು,ಹತ್ತಿ,ಜೋಳ,ಬಾರ್ಲಿ,ಆಲೂಗಡ್ಡೆ,ಪೇರಲ ಹಣ್ಣು ಮತ್ತು ಸಜ್ಜೆಅಯಂತಹ ಧಾನ್ಯ್ತ ಬೆಳೆಯುತ್ತದೆ. ಬೀಗ ಮತ್ತು ಬೀಗದ ಕೈಗಳ ಉತ್ಪಾದನೆಯಲ್ಲದೇ ಆಲಿಘಢ್ ಹಿಟ್ಟು ಮಾಡುವ,ಕಚ್ಚಾ ಅಹ್ತ್ತಿ ಸಂಸ್ಕರಣೆ,ಬೆಣ್ಣೆ ಉತ್ಪಾದನೆ,ಥರ್ಮಾಮೀಟರ್ ಮತ್ತು ಗಾಜು ತಯಾರಿಕೆಯಲ್ಲಿ ಹೆಸರಾಗಿದೆ. ಆಲಿಘಢ್ ಅದರ ಹಿತ್ತಾಳೆ ಲೋಹದ ಉಪಕರಣ ಮತ್ತು ಶಿಲ್ಪ-ಕಲಾ ಕೆತ್ತನೆಗಳಿಗೆ ಪ್ರಸಿದ್ದವಾಗಿದೆ. ನಗರದಲ್ಲಿಂದು ಸಾವಿರಾರು ಉತ್ಪಾದಕರು,ರಫ್ತುದಾರರು ಪೂರೈಕೆದಾರರು ಹಿತ್ತಾಳೆ,ಕಂಚು,ಕಬ್ಬಿಣ ಮತ್ತು ಅಲ್ಯುಮಿನಿಯಮ್ ಲೋಹಗಳ ಉದ್ದಿಮೆ-ವಹಿವಾಟಿನಲ್ಲಿದ್ದಾರೆ. ನಗರದಿಂದ 15 ಕಿ.ಮೀ ದೂರದಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರವಿದೆ. ಇದನ್ನು ಹರ್ದೌಗಂಜ್ ಥರ್ಮಲ್ ಪಾವರ್ ಸ್ಟೇಶನ್ (ಅಲ್ಲದೇ ಕಾಸಿಮ್ ಪುರ್ ಪಾವರ್ ಹೌಸ್ )ಎನ್ನಲಾಗುತ್ತದೆ. ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರವೆಂದರೆ ನರೊರಾ ಆಟೊಮಿಕ್ ಪಾವರ್ ಸ್ಟೇಶನ್ ಆಲಿಘಢ್ ದಿಂದ 50 ಕಿ.ಮೀ ದೂರದಲ್ಲಿದೆ. ವಿಶಾಲವಾದ ಎರಡು ವಿದ್ಯುತ್ ಕೇಂದ್ರಗಳ ಹತ್ತಿರದ ಪರಿಧಿಯಲ್ಲಿದ್ದರೂ ಆಲಿಘಢ್ ದಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಇವು ನಿರಂತರ-ನಿಯಮಿತವಾಗಿಲ್ಲದಿದ್ದರೂ ಗೊಂದಲ ಸೃಷ್ಟಿಯಲ್ಲಿ ಹಿಂದೆ ಬಿದ್ದಿಲ್ಲ. ಸದ್ಯದ ಪರ್ಸಿಥಿತಿಯಲ್ಲಿ ಜನರು ತಮ್ಮದೇ ಆದ ವಿದ್ಯುತ್ ಪರ್ಯಾಯಗಳನ್ನು ಜನರೇಟರ್ ಮತ್ತು ಇನ್ ವರ್ಟರ್ ಗಳ ಮೂಲಕ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ 10 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ವಿದ್ಯುತ್ ಪೂರೈಕೆಗೆ ವ್ಯತ್ಯಯವಾಗುವುದು ಇಲ್ಲಿ ಸಾಮಾನ್ಯ. ಆಲಿಘಢ್ ದಲ್ಲಿ ಹೆಂಜ್-ಸಾಸ್ ತಯಾರಿಸುವ ಘಟಕವು ಮಂಜುರ್ ಗರಹ್ ದಲ್ಲಿದೆ.(ಆಲಿಘಢ್ ದಿಂದ 15 ಕಿ.ಮೀ ದೂರ) ಆಲಿಘಢ್ ತನ್ನ ಸಕ್ಕರೆ ಕಾರ್ಖಾನೆಗೂ ಪ್ರಖ್ಯಾತಿ ಪಡೆದಿದೆ.ನಗರದಿಂದ ಸುಮಾರು 12 ಕಿ.ಮೀ ದೂರದನ ಕೇಂದ್ರ ಭಾಗದಲ್ಲಿ ಸಾಥಾ ಸಕ್ಕರೆ ಖಾರ್ಖಾನೆ ಇದೆ. ಸಾಥಾ ಸಕ್ಕರೆ ಕಾರ್ಖಾನೆಯು ಆಲಿಘಢ್ ಕಾಸಿಮ್ ಪುರ್ ಮಾರ್ಗದಲ್ಲಿದೆ. ಇದೇ ಮಾರ್ಗದಲ್ಲಿ ಒಂದು ಸಿಮೆಂಟ್ ಫ್ಯಾಕ್ಟರಿಯೂ ಸಿಗುತ್ತದೆ. ಕೆಲವು ಮುಂಚೂಣಿಯಲ್ಲಿರುವ ಮುದ್ರಣಕಾರರು : ಆಲಿಘಢ್ ಡಿಜಿಟಲ್ ಪ್ರೆಸ್.
ಶಿಕ್ಷಣ
ಬದಲಾಯಿಸಿಆಲಿಘಢ್ ವು ಉತ್ತರ ಪ್ರದೇಶದ ನಗರವಾಗಿ ಶಿಕ್ಷಣದ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು ಇದು ಎಲ್ಲಾ ಶೈಕ್ಷಣಿಕ ಸವಲತ್ತುಗಳನ್ನು ಹೊಂದಿದೆ. ಆಲಿಘಢ್ ಮುಸ್ಲಿಮ್ ಯುನ್ವರ್ಸಿಟಿ,ಒಂದು ಸ್ಥಾನಿಕ ಶೈಕ್ಷಣಿಕ ಸಂಸ್ಥೆಯಾಗಿದ್ದರೂ ಅದು ಅಂತರ್ ರಾಷ್ಟ್ರೀಯ ಖ್ಯಾತಿ ಪಡೆದಿದೆ.ಇದು ನಗರದ ಸಿವಿಲ್ ಲೈನ್ ಪ್ರದೇಶದಲ್ಲಿದೆ. ಆಲಿಘಢ್ ಮುಸ್ಲಿಮ್ ಯುನ್ವರ್ಸಿಟಿಯಲ್ಲಿ ಸುಮಾರು 250ಕ್ಕಿಂತ ಹೆಚ್ಚು ಶಿಕ್ಷಣ ಕೋರ್ಸ್ ಗಳನ್ನು ಸಾಂಪ್ರದಾಯಿಕ ಮತ್ತು ಆಧುನಿಕ ವಲಯವನ್ನಾಧರಿಸಿದ ತರಬೇತಿ ಕೋರ್ಸುಗಳಿವೆ. ಆಲಿಘಢ್ ಮುಸ್ಲಿಮ್ ಯುನ್ವರ್ಸಿಟಿಯನ್ನು ಕ್ಯಾಂಬ್ರಿಜ್ ಮತ್ತು ಆಕ್ಸ್ ಫರ್ಡ್ ಮಾದರಿಯಲ್ಲಿ 1920 ರಲ್ಲಿ ಸ್ಥಾಪಿಸಲಾಯಿತು. ಮಂಗಲಯಾತನ್ ಯುನ್ವರಿಸಿಟಿಯನ್ನು ಪ್ರಖ್ಯಾತ ಲೋಕೋಪಯೋಗಿ,ಸಮಾಜ ಕಾರ್ಯಕರ್ತ ಪತ್ರಕರ್ತ ಪವನ್ ಜೈನ್ ಆಲಿಘಢ್ ನಲ್ಲಿ ಸ್ಥಾಪಿಸಿದರು.[೧೦] ಇನ್ನಿತರ ಶಾಲೆಗಳು/ ಕಾಲೇಜುಗಳು/ ಮತ್ತು ಆಲಿಘಢ್ ದ ಸಂಸ್ಥೆಗಳು:
- ಅವರ್ ಲೇಡಿ ಆಫ್ ಫಾತಿಮಾ ಸೆಕೆಂಡರಿ ಸ್ಕೂಲ್
- ಎಂ.ಎಂ.ಪ್ರಸೆಡೆನ್ಸಿ ಗರ್ಲ್ಸ್ ಇಂಟರ್ ಕಾಲೇಜ್,ಖೇರ್ ಬೈಪಾಸ್ ರೋಡ್, ಆಲಿಘಢ್. Ph-9837109853
- ಸೇಂಟ್. ಫಿಡೆಲಿಸ್
- ಆಯೆಶಾ ತಾರೆನ್ ಮಾಡೆರ್ನ್ ಪಬ್ಲಿಕ್ ಸ್ಕೂಲ್(+2), P.O. CDF
- ಥ್ರೀ ಡಾಟ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್
- ಎಮ್.ಎಂ.ಯು ಸಿಟಿ ಹೈ ಸ್ಕೂಲ್
- ದೆಹಲಿ ಪಬ್ಲಿಕ್ ಸ್ಕೂಲ್
- ಗಗನ್ ಪಬ್ಲಿಕ್ ಸೀನಿಯರ್ ಸೆಕೆಂಡರಿ ಸ್ಕೂಲ್
- ಕೃಷ್ಣ ಇಂಟರ್ ನ್ಯಾಶನಲ್ ಸ್ಕೂಲ್
- ಬ್ಲು ಬರ್ಡ್ ಸಿನೀಯರ್ ಸೆಕೆಂಡರಿ ಸ್ಕೂಲ್
- ಅಲ್-ಬರ್ಕತ್ ಪಬ್ಲಿಕ್ ಸ್ಕೂಲ್(10+2)
- ಆಲಿಘಢ್ ಪಬ್ಲಿಕ್ ಸ್ಕೂಲ್
- ಮೂನ್ ಅಪ್ ಇನ್ ಫೊಟೆಕ್, ಆಲಿಘಢ್
- ಹೆರಿಟೇಜ್ ಇಂಟರ್ ನ್ಯಾಶನಲ್ ಸ್ಕೂಲ್(ತಾಲಾ ನಗರಿ & ಪ್ರಿಮಿಯರ್ ನಗರ್)
- ಹರೇ ಕೃಷ್ಣ ಪಬ್ಲಿಕ್ ಸ್ಕೂಲ್
- ರಘುವೀರ್ ಬಾಲ್ ಮಂದಿರ್
- ಇಂಘ್ರಾಮ್ ಇನ್ ಸ್ಟಿಟುಟ್
- ಶ್ರೀ ವರ್ಶೆನೆಯ್ ಕಾಲೇಜ್, ಆಲಿಘಢ್.
- ಸರಸ್ವತಿ ವಿದ್ಯಾ ಅಮಂದಿರ್, ಗೊಂಡಾ ಮೊಡ್Mod, ಖೇರ್ ರೋಡ್, ಆಲಿಘಢ್
- ಡಿ.ಎಸ್. ಡಿಗ್ರೀ ಕಾಲೇಜ್
- ಟಿ.ಆರ್. ಗರ್ಲ್ಸ್ ಕಾಲೇಜ್
- ಹೀರಾಲಾಲ್ ಬರಹಸೆನಿ ಇಂಟರ್ ಕಾಲೇಜ್
- ಇಂಡಿಯನ್ ಇನ್ ಸ್ಟಿಟ್ಯುಟ್ ಆಫ್ ಮೆಡಿಕಲ್ ರಿಪ್ರೆಜಂಟೇಟಿವ್ (Iimr)
- ಇನ್ ಸ್ಟಿಟ್ಯುಟ್ ಆಫ್ ಇನ್ ಫಾರ್ಮೇಶನ್ ಮ್ಯಾನೇಜ್ ಮೆಂಟ್ ಟೆಕ್ನಾಲಜಿ (Iimt)
- ಶಿವದನ್ ಸಿಂಗ್ ಇನ್ ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ (SSITM)
- ಆಲಿಘಢ್ ಕಾಲೇಜ್ ಆಫ್ ಎಂಜನೀಯರಿಂಗ್ ಅಂಡ್ ಟೆಕ್ನಾಲಜಿ (Acet)
- ಆಲಿಘಢ್ ಕಾಲೇಜ್ ಆಫ್ ಎಂಜನೀಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ (Acem)
- ಎಸ್.ಟಿ.ಹೈ ಸ್ಕೂಲ್ (ಮಿಂಟೊ ಸರ್ಕಲ್)
- ತಾಮೀರ್-ಇ-ಮಿಲ್ಲತ್ ಇಸ್ಲಾಮಿಯಾ ಸ್ಕೂಲ್, ದೋಧಪುರ್
- ಅಲ್ಬರ್ಕತ್ ಇನ್ ಸ್ಟಿಟುಟ್ ಆಫ್ ಮ್ಯಾನೇಜ್ ಮೆಂಟ್(ಅನೋಪ್ ಶೆಹರ್ ರೋಡ್)
- ಝಾಕೀರ್ ಹುಸೇನ್ ಸೀನಿಯರ್ ಸೆಕೆ,ಸ್ಕೂಲ್
- ಸರಸ್ವತಿ ವಿದ್ಯಾ ಮಂದಿರ್, ಮಥುರಾ ರೋಡ್, ಆಸ್ನಾ ಅಜಿತ್ ಪುರ್ ಆಲಿಘಡ್.
- ಎಚ್.ಬಿ. ಇಂಟರ್ ಕಾಲೇಜ್
- ಬಾಬು ಲಾಲ್ ಜೈನ್ ಇಂಟರ್ ಕಾಲೇಜ್, ಜೈನ್ ಪುರಿ
- ಶ್ರೀ ಸಾಯಿ ಆಯುರ್ವೇದಿಕ್ ಕಾಲೇಜ್
- ಇಕ್ರಾ ಪಬ್ಲಿಕ್ ಸ್ಕೂಲ್
- ನವರಂಗಿ ಲಾಲ್ ಸರ್ಕಾರಿ. ಇಂಟರ್ ಕಾಲೇಜ್
- ಜಗದೀಶ್ ಬಾಲ್ ಮಂದಿರ್, ರಾಜೇಂದ್ರ ನಗರ
- ನೀಲ್ ಗಿರಿ ಇಂಟರ್ ಕಾಲೇಜ್, ಆಗ್ರಾ ರೋಡ್
- ರಘುವೀರ್ ಸಹಾಯ್ ಇಂಟರ್ ಕಾಲೇಜ್
- ಡ್ಯಾಜ್ಲಿಂಗ್ ಪಬ್ಲಿಕ್ ಸ್ಕೂಲ್, \ಆರ್. ಕೆ. ಪುರಮ್, ಆಗ್ರಾ ರೋಡ್ & ಗಭಾನಾ, ಆಲಿಘಡ್-ದೆಹಲಿ ಹೈವೆ.
- ಮಂಗಲಯಾತನ ಯುನ್ವರ್ಸಿಟಿ, ಆಲಿಘಡ್ ಮಥುರಾ ರಸ್ತೆ ಮತ್ತು ಮತ್ತಷ್ಟು....
- ವಿಶ್ವ ಭಾರತಿ ಪಬ್ಲಿಕ್ ಸ್ಕೂಲ್ ಸಾಸ್ನಿ ಗೇಟ್ ಆಲಿಘಡ್
- ದಯಾನಂದ ಸರಸ್ವತಿ ವಿದ್ಯಾ ಮಂದಿರ.ಕಾಸಿಮ್ ಪುರ್ ಆಲಿಘಡ್
- ಯುರೊಕಿಡ್ಸ್ ಆಲಿಘಡ್[೧೧]
- ಮಕೂನ್ಸ್ ಶಾಲೆ[೧೨]
- ಜಾಮಿಯಾ ಉರ್ದು ಡಿಸ್ಟನ್ಸ್ ( ಡಿಸ್ಟನ್ಸ್ ಒಪನ್ ಯುನ್ವರ್ಸ್ವಿಟಿ) ಫಾರ್ ಉರ್ದು ಪ್ರೊಮೊಶನ್
- ಅಲ್-ಫಲಾಹ್ ಪಬ್ಲಿಕ್ ಸ್ಕೂಲ್,ನಾಗಲಾ ಮಸನಿ
- ಜಾಗರನ್ ಪಬ್ಲಿಕ್ ಸ್ಕೂಲ್,ಮಥುರಾ ರಸ್ತೆ
- ಫಿರ್ದೌಸ್ ಪಬ್ಲಿಕ್ ಸ್ಕೂಲ್
ಮಹತ್ವದ ಸ್ಥಳಗಳು
ಬದಲಾಯಿಸಿಆಲಿಘಡ್ ದಲ್ಲಿ ಎರಡು ಜನಪ್ರಿಯ ಗುರುತಿಸುವ ಸ್ಥಳಗಳಿವೆ. ಒಂದು ಆಲಿಘಡ್ ಕೋಟೆ ಮತ್ತು ಇನ್ನೊಂದು ಸರ್ ಸಯ್ಯದ್ ಮಸ್ಜಿದ್, ಇದುಆಲಿಘಡ್ ಮುಸ್ಲಿಮ್ ಯುನ್ವರ್ಸಿಟಿಯ ಕ್ಯಾಂಪಸ್ ನಲ್ಲಿದೆ. ಇನ್ನೊಂದು ಹಳೆ ಕೋಟೆ ಡೋರ್ ಕೋಟೆ, (1524)ಸದ್ಯ ಹಾಳಾಗಿದ್ದು ನಗರದ ಮಧ್ಯದಲ್ಲಿದೆ.ಇದು ಇಂದಿನ ಅಪ್ಪರ್ ಕೋಟ್ ಎಂದು ಕರೆಯಲಾಗುವ ಸ್ಥಳದಲ್ಲಿದೆ.ಇಲ್ಲಿ 18-ನೆಯ ಶತಮಾನದ ಮಸೀದೆ ಇದೆ. ನಗರದಲ್ಲಿ ಮುಸ್ಲಿಮ್, ಸಂತರ ಸಮಾಧಿಗಳೂ ಇವೆ.[೧೩] ಆಲಿಘಡ್ ನಲ್ಲಿನ ಪ್ರಸಿದ್ದ ಸಮಾಧಿ ಸ್ಥಳ (ಬಾಬಾ ಬರ್ಚಿ),ಇದು ಕಟ್ ಪುಲಾದಲ್ಲಿದೆ. ಒಂದು ಪ್ರಸಿದ್ದ ಜೈನ್ ಧರ್ಮದ ಜೈನಿಜಮ್ ತೀರ್ಥ ಧಾಮ್ "ಮಂಗಲಯಾತನ ತೀರ್ಥ ಧಾಮ"ಇದನ್ನು ಆಗ್ರಾ ರಸ್ತೆ ಮೇಲೆ ನಿರ್ಮಿಸಲಾಗಿದೆ. ಇನ್ನೊಂದು ಹಳೆಯದಾದ ಜೈನ್ ಮಂದಿರವು ತನ್ನ ಗೋಡೆ ಹಾಗು ಒಳಾಂಗಣದಲ್ಲಿ ಹಸಿ ಚಿತ್ರ ರಚನಾ ಕಲೆ ಮೂಲಕ ಅನೇಕ ಚಿತ್ರಗಳನ್ನು ಹೊಂದಿದೆ.ನಗರದ ಪ್ರಮುಖ ಭಾಗದಲ್ಲಿನ ಆಗ್ರಾ ರಸ್ತೆ ಮೇಲಿನ ಖಿರ್ನಿ ಗೇಟ್ ಪೊಲೀಸ್ ಚೌಕಿ ಹಿಂಭಾಗದಲ್ಲಿದೆ.
"ತಿಜ್ರಾ ಹೌಸ್ ನಲ್ಲಿರುವ ಇನ್ನೊಂದು ಪ್ರೇಕ್ಷಣೀಯ ಸ್ಥಳವೆಂದರೆ ಇಬ್ನ್ ಸಿನಾ ಅಕಾಡಮಿ ಆಫ್ ಮೆಡಿವಲ್ ಮೆಡಿಸಿನ್ ಅಂಡ್ ಸೈನ್ಸಸ್[೧೪] ಇಲ್ಲಿ ಬೃಹತ್ ವಾಚನಾಲಯವು ಹಿಸ್ಟ್ರಿ ಆಫ್ ಮೆಡಿಸಿನ್ (ಔಷಧಿ ಇತಿಹಾಸ)ಮತ್ತು ಹಿಸ್ಟ್ರಿ ಆಫ್ ಸೈನ್ಸ್ (ವಿಜ್ಞಾನದ ಇತಿಹಾಸ)ಅಲ್ಲದೇ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ತೆರೆದಿಡುವ ಭಂಡಾರವಿದೆ.[೧೫] ಇದನ್ನು ಯುನಾನಿ ವೈದ್ಯ ಮತ್ತು ಲೋಕಾಉಪಕಾರಿ ಹಕೀಮ್ ಸಯೆದ್ ಜಿಲ್ಲುರ್ ರಹಮಾನ್S ಕಟ್ಟಿಸಿದ್ದಾರೆ. ಇಲ್ಲಿ ವಾರ್ಷಿಕ ಸಾಂಸ್ಕೃತಿಕ ಪ್ರದರ್ಶನ ಹಬ್ಬವನ್ನು ಜನಪ್ರಿಯವಾಗಿ ನುಮೇಶ್ ಎಂದು ಕರೆಯುತ್ತಾರೆ.ಪ್ರದರ್ಶನ ಇಲ್ಲಿನ ಮೈದಾನದಲ್ಲಿ ಜನವರಿ ಮತ್ತು ಫೆಬ್ರವರಿಗಳಂದು ನಡೆಯುತ್ತದೆ. ಆಲಿಘಡ್ ಶೆರ್ವಾನಿಗಳಿಗೂ ಪ್ರಸಿದ್ದಿ ಪಡೆದಿದೆ.ವಿಶೇಷವಾಗಿ ಮೆಹಂದಿ ಹಸನ್ ರ ಅಂಗಡಿಗೆ ಆಗಿನ ಪ್ರಧಾನಿ ಪಂಡಿತ್ ನೆಹ್ರೂ ಅಲ್ಲಿ ಭೇಟಿ ನೀಡುತ್ತಿದ್ದರು. ಆಲಿಘಡ್ ನಲ್ಲಿ ಕೆಲವು ಚರ್ಚ್ ಗಳಿವೆ.ಪ್ರಸಿದ್ದವಾದವುಗಳೆಂದರೆ,ಚರ್ಚ್ ಆಫ್ ಅಸೆನ್ಸೆನ್,ಕ್ರಿಶ್ಚ್ ಚರ್ಚ್ ಮತ್ತು ಮೆಥೊಡಿಸ್ಟ್ ಚರ್ಚ್.
ಮಾರುಕಟ್ಟೆಗಳು
ಬದಲಾಯಿಸಿಆಲಿಘಡ್ ದ ಪ್ರಮುಖ ಮಾರುಕಟ್ತೆಗಳೆಂದರೆ ಸೆಂಟರ್ ಪಾಯಿಂಟ್ ಮಾರ್ಕೆಟ್,ರೈಲ್ವೆ ರೋಡ್ ಮಾರ್ಕೆಟ್,ಶಮ್ಶಾದ್ ಮಾರ್ಕೆಟ್,ಮಹಾವೀರ್ ಗಂಜ್,ಅಪ್ಪರ್ ಫೊರ್ಟ್ (ಇದನ್ನು ಆಪ್ಪರ್ ಕೋಟ್ ಎನ್ನಲಾಗುತ್ತದೆ.)ತಸ್ವೀರ್ ಮಹಲ್ ಮತ್ತು ಅಮೀರ್ ನಿಶಾ. ಸೆಂಟರ್ ಪಾಯಿಂಟ್ ಮಾರ್ಕೆಟ್ ಎಲ್ಲಾ ತೆರನಾದ ಬ್ರಾಂಡ್ ವಸ್ತುಗಳ ದೊರೆಯುವ ಬ್ರಾಂಡ್ ಪ್ರಿಯರ ಪ್ರಮುಖ ಸ್ಥಳವಾಗಿದೆ. ಪ್ರಮುಖ ಬ್ರಾಂಡ್ ಗಳ ವಸ್ತುಗಳ ಮಾರಾಟವು ಮಾರುಕಟ್ಟೆಯ ಪರಿಧಿಯಲ್ಲಿಯೇ ನಡೆಯುತ್ತದೆ.ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಆದಿದಾದ್ ,ಪ್ಯುಮಾ ತಮ್ಮ ಮಳಿಗೆಗಳನ್ನು ಆರಂಭಿಸಿವೆ. ರೈಲ್ವೆ ರೋಡ್ ಮತ್ತು ಆಮಿರ್ ನಿಶಾ ಮಾರುಕಟ್ಟೆಗಳು ದೊಡ್ಡ ಪ್ರಮಾಣದ ಖರೀದಿಗೆ ಉತ್ತಮ ಶಾಪಿಂಗ್ ತಾಣಗಳಾಗಿವೆ.ಅಲ್ಲಿ ಬಟ್ಟೆ,ಪ್ರಸಾಧನಗಳು,ಆಭರಣಗಳು ಮತ್ತು ಪಾದರಕ್ಷೆಗಳ ವ್ಯಾಪಾರ ನಡೆಯುತ್ತದೆ. ಶಮ್ಶಾದ್ ಮಾರ್ಕೆಟ್ ಮತ್ತು ಆಚಲ್ ತಾಲ್ ಮಾರ್ಕೆಟ್ ಶಿಕ್ಷಣ ಪಠ್ಯಗಳ ಮಾರಾಟಕ್ಕೆ ಪ್ರಖ್ಯಾತಿ ಪಡೆದಿವೆ. ಮಹಾವೀರ್ ಗಂಜ್ ಕಿರಾಣಿ ವಸ್ತುಗಳಿಗೆ ಪ್ರಸಿದ್ದವಾಗಿದೆ.ಉದಾಹರಣೆಗಾಗಿ ತುಪ್ಪ,ಮಸಾಲೆ ಸಾಮಾನುಗಳು,ಒಣ ಹಣ್ಣುಗಳು,ಬೇಳೆ ಕಾಳುಗಳು ಇತ್ಯಾದಿ. ಆಲಿಘಡ್ ನಲ್ಲಿನ ಬಹುತೇಕ ಮಾರುಕಟ್ಟೆಗಳು ದಿನದ ವೇಳೆಯಲ್ಲಿ ಜನನಿಬಿಡವಾಗಿರುತ್ತವೆ.ಇಲ್ಲಿನ ಕಿರು ರಸ್ತೆಗಳಿಂದಾಗಿ ಅತ್ಯಂತ ಹೆಚ್ಚಿನ ಜನರ ಗುಂಪು ಇಲ್ಲಿರುತ್ತದೆ. ಕಾರ್ ಗಳು ಮತ್ತು ಸೈಕಲ್ ರಿಕ್ಷಾಗಳು ಇಡೀ ರಸ್ತೆಯನ್ನು ಆವರಿಸಿ ಒಮ್ಮೊಮ್ಮೆ ಗಂಟೆಗಟ್ಟಳೇ ಸಂಚಾರ ಅಸ್ತವ್ಯಸ್ತಗೊಳ್ಲುತ್ತದೆ.
ಸಿನೆಪ್ಲೆಕ್ಸಿಸ್ (ಚಲನಚಿತ್ರ ಪ್ರದರ್ಶನ ಸ್ಥಳಗಳು)
ಆಲಿಘಡ್ ನಲ್ಲಿ ಹಲವಾರು ಚಲನ ಚಿತ್ರ ಪ್ರದರ್ಶನ ಮಂದಿರಗಳಿವೆ.ಉದಾಹರಣೆಗೆsuch as ಗ್ರ್ಯಾಂಡ್ ಸುರ್ಜಿತ್, ವಡ್ರಾ ಬಿಗ್ ಸಿನೆಮಾಸ್(ಆಡ್ ಲಾಬ್ಸ್), ಮೀನಾಕ್ಷಿ(ಇದೊಂದರಲ್ಲೇ ಡೊಲ್ಬೈ ಡಿಜಿಟಲ್ ಸೌಂಡ್ ಸಿಸ್ಟೆಮ್ ಅಳವಡಿಸಲಾಗಿದೆ), ನಂದನ್, ಲಕ್ಷ್ಮಿ, ನಿಶಾತ್, ತಸ್ವೀರ್ ಮಹಲ್ ಮತ್ತು ನಾವೆಲ್ಟಿ.
ಮಹತ್ವದ ಜನವಸತಿ ಪ್ರದೇಶಗಳು
ಬದಲಾಯಿಸಿನಗರವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ,ಅವುಗಳನ್ನು ಹಳೆ ಆಲಿಘಡ್(ನಗರ) ಮತ್ತು ಹೊಸ ಆಲಿಘಡ್ (ಸಿವಿಲ್ ಲೈನ್ಸ್ ).
ಹೊಸ ಆಲಿಘಡ್
ಬದಲಾಯಿಸಿಅದು ಚರ್ಚ್ ಕಾಂಪೌಂಡ್ ಒಳಗೊಂಡಿದೆ,ಜಮಾಲ್ ಪುರ್,ಹಮ್ ದರ್ದ್ ನಗರ ಬ್ಲಾಕ್- A,B,C & D, ತಯ್ಯಬ್ ಕಾಲೊನಿ, ಲಾಲ್ ದಿಗ್ಗಿ ರೋಡ್,ಬೇಗಮ್ ಬಾಗ್, ಅನ್ವರುಲ್ ಹುಡಾ ಕಂಪೌಂಡ್, ಆಮಿರ್ ನಿಶಾ, ಅಜೀಮ್ ಕಾಂಪೌಂಡ್, ಝಕಾರಿಯಾ ಮಾರ್ಕೆಟ್, ಧೋರ್ರಾ ಮಾಫಿ (ಏಶಿಯಾದಲ್ಲೇ ಅತಿ ಹೆಚ್ಚು ಶಿಕ್ಷಣ ಮತ್ತು ಅಭಿವೃದ್ಧಿಯಾದ ಗ್ರಾಮಗಳೆಂದು ಗಿನೀಸ್ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿವೆ.), ಸರ್ ಸಯೆದ್ ನಗರ್(ಏಶಿಯಾದ ಅತಿ ಹೆಚ್ಚು ಶಿಕ್ಷಣ ಪಡೆದ ಕಾಲೊನಿ ಎನ್ನಲಾಗಿದ್ದು ಇದನ್ನು ಗಿನೀಸ್ ದಾಖಲೆಗೂ ಸೇರಿಸಲಾಗಿದೆ.ಆದರೆ ಅಲ್ಲಿನ ಕಸ ವಿಲೆವಾರಿ ಸರಿಯಾಗಿಲ್ಲವೆಂದು ಅರಾಮ್ ಖಾನ್ ಮಾಹಿತಿ ನೀಡುತ್ತಾರೆ.)ಇಕ್ರಾ ಕಾಲೊನಿ, ಶಿಬ್ಲಿ ಭಾಗ್, ಕಬೀರ್ ಕಾಲೊನಿ, ಫ್ರೆಂಡ್ಸ್ ಕಾಲೊನಿ, ನಿವ್ ಜಮಾಲ್ ಪುರ್, ಹಮ್ ದರ್ದ್ ನಗರ್ ಬಿ,ಬದಾರ್ ಬಾಗ್, ಹಬೀಬ್ ಬಾಗ್, ಭಾಮೊಲಾ, ಝೋಹಾ ಬಾಗ್,ಘಾಲಿಬ್ ಬಾಗ್, ದೋಧ್ ಪುರ್, ಸಬಿಸ್ತಾನ್ ಕಂಪೌಂಡ್, ಜೀವನ್ ಘರ್, ಕೇಲಾ ಅನ್ಗರ್, ಫಿರ್ದುಸ್ ನಗರ್,ಫಿರ್ದೌಸ್ ಕಾಂಪ್ಲೆಕ್ಸ್, ಕಬೀರ್ ಕಾಲೊನಿ, ಜಾನಕಪುರಿ, ಪ್ರೊಫೆಸ್ಸರ್ ಕಾಲೊನಿ, ಪರಾಗ್ ಸರೋವರ್, ಗ್ಯಾನ್ ಸರೋವರ್ (100 ಅಡಿ ರಸ್ತೆಯೊಂದಿಗೆ), ಮಾನ್ ಸರೋವರ್, ಆವಂತಿಕಾ-1 ,ಮತ್ತು 2, ಕ್ವಾರ್ಸಿ, ಸ್ವರ್ಣ ಜಯಂತಿ ನಗರ್, ಶ್ಯಾಮ್ ನಗರ್,ಜಾನಕಪುರಿ, ವಿಕ್ರಮ್ ಕಾಲೊನೊ, ಮೆಡಿಕಲ್ ಕಾಲೊನಿ, ಲೇಖರಾಜ್ ನಗರ್, ರಮಸಿಹ್ ವಿಹಾರ್ ಕಾಲೊನಿ, ದುರ್ಗಾ ಬಡಿ, ಮ್ಯಾರಿಸ್ ರೋಡ್, ವಿದ್ಯಾ ನಗರ್, ರಾಮಕೃಷ್ಣ ಪುರಮ್, ಸಾಸ್ನಿ ಗೇಟ್, ದೆಹಲಿ GT ರೋಡ್ ಮತ್ತು GT ರೋಡ್ ನಲ್ಲಿನ ವಿದ್ಯುತ್ ನಗರ ಇತ್ಯಾದಿ ಹಲವು ಹೊಸ ಕಾಲೊನಿಗಳು ಆಲಿಘಡ್ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಹೊಂದಿವೆ.'
ಹಳೆ ಆಲಿಘಡ್
ಬದಲಾಯಿಸಿಕಪಿಲ್ ವಿಹಾರ್ ಕಾಲೊನಿ, ಬನ್ನಾದೇವಿ ಪೊಲೀಸ್ ಕಾಲೊನಿ, ಕಿಶನ್ ಪುರ್, ಭಾಮೊಲಾ,ಅನೊನಾ ಹೌಸ್,ಪಹಸು ಹೌಸ್, ರಸಾಲಗುಂಜ್ ಗಂಭೀರ್ ಪುರ, ಮಹೆಂದ್ರ ನಗರ, ಸುರೆಂದ್ರ ನಗರ, ಬ್ಯಾಂಕ್ ಕಾಲೊನಿ (ಪ್ರಿಮಿಯರ್ ನಗರ), ಗಾಂಧಿ ನಗರ, ಸರಯ ಸುಲ್ತಾನಿ, ಆಚಲ್ ತಲಾಬ್ ಮತ್ತು ಖಿರ್ನಿ ಗೇಟ್ ಇವು ಹಳೆ ಆಲಿಘಡ್ ದ ಕೆಲವು ಜನವಸತಿ ಪ್ರದೇಶಗಳಾಗಿವೆ. ಗ್ರೀನ್ ಪಾರ್ಕ್ ಕಾಲೊನಿ ಬಳಿ ಇರುವ SBBM ಇಂಟರ್ ಕಾಲೇಜ್ ನೂತನವಾಗಿ ನಿರ್ಮಿಸಿದ ಕಾಲೊನಿಯಾಗಿದೆ.
ಪ್ರಧಾನ ಸಮೂಹ ಮಾಧ್ಯಮಗಳು
ಬದಲಾಯಿಸಿಆಲಿಘಡ್ ನಲ್ಲಿ ಸದ್ಯ 2 ಎಫ್ ಎಂ ರೇಡಿಯೊ ಕೇಂದ್ರಗಳಿವೆ:
- 92.7 MHz ಬಿಗ್ ಎಫ್ ಎಂ
- 101.3 MHz ಆಲ್ ಇಂಡಿಯಾ ರೇಡಿಯೊ,
ಕವ್ವಾಲ್ ಹಬೀಬ್ ಚಿತ್ರಗಾರ ಕೂಡ ಹಳೆ ಆಲಿಘಡ್ ನಗರದವರು,ಹಲವಾರು ಜನಪ್ರಿಯ ಬಲಿಯುಡ್ ನಟರು,ಕಲಾವಿದರು ಆಲಿಘಡ್ ನವರಾಗಿದ್ದಾರೆ. ಅದರಲ್ಲಿನ ಕೆಲವರೆಂದರೆ ಚಂದ್ರ ಚೂಡ್ ಸಿಂಗ್, ಸುನಿಧಿ ಚೌವ್ಹಾನ್, ಫಾಹೀಮ್ ಉದ್ದೀನ್, ನಾಸಿರುದ್ದೀನ್ ಶಾ, ರವೀಂದ್ರ ಜೈನ್ ಮತ್ತು ಜಾವೆದ್ ಆಕ್ತರ್. ಕಾಕಾ ಹಥ್ರಾಸಿ ಕೂಡಾ ಆಲಿಘಡ್ ನವರು (ಹಥ್ರಾಸ್, ಈಗ ಜಿಲ್ಲೆ. ಮಹಾ ಮಾಯಾ ನಗರ ಮೊದಲು ಆಲಿಘಡ್ ನ ಉಪಜಿಲ್ಲೆಯಾಗಿತ್ತು.). ಬಾಲಿಯುಡ್ ನ ಸೂಪರ್ ಸ್ಟಾರ್ ಎನಿಸಿದ ಸಿನಿಮಾ ತಾರೆ ಭರತ್ ಭೂಷಣ 1950 ರಲ್ಲಿ ಆಲಿಘಡ್ ನಲ್ಲಿಯೇ ಜನಿಸಿದ್ದಾರೆ.
ಸಾರಿಗೆ
ಬದಲಾಯಿಸಿಆಲಿಘಡ್ ಇನ್ನುಳಿದ ನಗರಗಳಿಗೆ ಉತ್ತಮ ಸಂಪರ್ಕ ಜಾಲ ಪಡೆದಿದೆ. ಭಾರತದ ಅತಿ ಉದ್ದದ ರಸ್ತೆ G.T ರೋಡ್ ಆಲಿಘಡ್ ಮೂಲಕ ಹಾಯ್ದು ಹೋಗುತ್ತದೆ. ಅತಿ ಸಮೀಪದ ವಿಮಾನನಿಲ್ದಾಣವೆಂದರೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುಮಾರು 160 ಕಿ.ಮೀ ದೂರದಲ್ಲಿದೆ. ರಸ್ತೆ ಮಾರ್ಗದ ಮೂಲಕ ಆಲಿಘಡ್ ವು ಉತ್ತಮ ಸಂಪರ್ಕ ವ್ಯವಸ್ಥೆಯನ್ನು ದೆಹಲಿ, ನೊಯಿಡಾ, ಗ್ರೇಟರ್ ನೊಯಿಡಾ, ಫರೀದಾಬಾದ್, ಘಜಿಯಾಬಾದ್, ಆಗ್ರಾ, ಮಥುರಾ, ಮೀರಟ್, ಇತ್ಯಾದಿಗಳಿಗೆ ಹೊಂದಿದೆ.ಬೃಹತ್ ಪ್ರಮಾಣದ ಪ್ರಯಾಣಿಕರು ಪ್ರತಿನಿತ್ಯ ದೆಹಲಿ, ನೊಯಿಡಾ, ಗ್ರೇಟರ್ ನೊಯಿಡಾ, ಘಜಿಯಾಬಾದ್ ಮತ್ತು ಗುರಗಾಂವ್ ಗಳಿಗೆ ಕೆಲಸ-ಕಾರ್ಯಗಳಿಗಾಗಿ ಹೋಗುತ್ತಾರೆ. ಎರಡು ರಾಷ್ಟ್ರೀಯ ಹೆದ್ದಾರಿಗಳು(NH-91, NH-93) ಆಲಿಘಡ್ ಮೂಲಕ ಹೋಗುತ್ತವೆ. ಸದ್ಯ ದೆಹಲಿಯಿಂದ ಆಗ್ರಾಕ್ಕೆ ತೆರಳುವ ಎಕ್ಸ್ ಪ್ರೆಸ್ ವೇ ಅಂದರೆ ಯಮುನಾ ಎಕ್ಸ್ ಪ್ರೆಸ್ ವೇ ಕೆಲಸ ನಡೆಯುತ್ತಿದ್ದು ಅದು ಆಲಿಘಡ್ ಮೂಲಕ ಹಾಯ್ದು ಹೋಗುತ್ತದೆ. ಒಟ್ಟು ಎರಡು ಬಸ್ ಕೇಂದ್ರ ನಿಲ್ದಾಣಗಳಿವೆ;ಮಸೂದಾಬಾದ್ ಬಸ್ ಟರ್ಮಿನಲ್ ಮತ್ತು ಗಾಂಧಿ ಪಾರ್ಕ್ ಬಸ್ ಟರ್ಮಿನಲ್ ಇಲ್ಲಿಂದ ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮ (UPSRTC) ದಿಂದ ಉತ್ತರ ಪ್ರದೇಶ ರಾಜ್ಯದ ಎಲ್ಲಾ ಪ್ರದೇಶಗಳಿಗೆ ಬಸ್ ಓಡಿಸಲಾಗುತ್ತದೆ.ಇನ್ನುಳಿದ ನಗರಗಳಿಗೆ ಅಂದರೆ ಉತ್ತರಾಂಚಲ್ ನಲ್ಲಿನ ನಗರಗಳು ರಾಜಸ್ಥಾನ್, ಮಧ್ಯ ಪ್ರದೇಶ ಮತ್ತು ಹರ್ಯಾನ್ ರಾಜ್ಯಗಳ ನಗರಗಳಿಗೆ ಸಂಪರ್ಕ ಒದಗಿಸುತ್ತವೆ. ಆಲಿಘಡ್ ನಲ್ಲಿ ಪ್ರಮುಖ ರೈಲ್ವೆ ಸ್ಟೇಶನ್ ಇದ್ದು ಅದನ್ನು ಆಲಿಘಡ್ ಜಂಕ್ಷನ್ ಎನ್ನುತ್ತಾರೆ. ಇದು ಆಲಿಘಡ್ ವನ್ನು ಪಶ್ಚಿಮ ಬಂಗಾಲ್, ಓರಿಸ್ಸಾ, ಬಿಹಾರ್,ಜಾರ್ಖಂಡ್,ಈಶಾನ್ಯ ಮತ್ತು ಎಲ್ಲಾ ಸುಮಾರು ಉತ್ತರ ಪ್ರದೇಶ ಜಿಲ್ಲೆಗಳಿಗೆ ಸಂಪರ್ಕಿಸುತ್ತದೆ. ಈ ಜಂಕ್ಷನ್ ನಲ್ಲಿ ದಿನಾಲೂ 70 ಮೇಲ್/ ಎಕ್ಸ್ ಪ್ರೆಸ್/ E.M.U ಟ್ರೇನ್ಸ್ ಗಳಿವೆ. ಇದು ನಗರಕ್ಕೆ ಹಲವು ಮಹತ್ವದ ಸ್ಥಳಗಳಿಗೆ ಸಂಪರ್ಕ ಒದಗಿಸುತ್ತದೆ,ಉದಾಹರಣೆಗೆ ನವದೆಹಲಿ, ಮುಂಬಯಿ, ಕೊಲ್ಕತ್ತಾ, ಭೂಪಾಲ್, ಗ್ವಾಲಿಯರ್, ಲಖನೌ, ಝಾನ್ಸಿ, ಪುರಿ, ಕಾನಪುರ್, ಆಗ್ರಾ, ವಾರಾಣಸಿ ಮತ್ತುಜೈಪುರ್. ನಗರದಲ್ಲಿ ಸಂಚಾರಕ್ಕಾಗಿ ಸಿಟಿ ಬಸ್ ಗಳು,ಟೆಂಪೊಗಳು ಮತ್ತು ರಿಕ್ಷಾಗಳ ಸೌಲಭ್ಯವಿದೆ. ದೆಹಲಿಯ ಅಂತರರಾಷ್ಟ್ರೀಯ ವಿಮಾನಯಾನ ಸೌಲಭ್ಯಕ್ಕಾಗಿ ಜೆವಾರ್ ನಲ್ಲಿನ ಸರ್ಕಾರ ಒಪ್ಪಿದ್ದು; ಇದು ಆಲಿಘಡ್ ನ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತಿದ್ದು ರಸ್ತೆ ಮಾರ್ಗವಾಗಿ ಇಲ್ಲಿಗೆ ಹೋಗಲು 70 ಕಿ.ಮೀ ಸಾಗಬೇಕಾಗುತ್ತದೆ. ಮೆಟ್ರೊ ರೇಲ್ ಪ್ರೊಜೆಕ್ಟ್ ಅನುಷ್ಟಾನಗೊಳ್ಳುತ್ತಿದ್ದು 2014 ರಲ್ಲಿ ಆಲಿಘಡ್ ನಗರದಲ್ಲಿ ರೈಲ್ವೆ ಸಂಚಾರ ಆರಂಭವಾಗಲಿದೆ. ಈಗಾಗಲೇ ಜಾರಿಗೆ ಕಾದಿರುವ ಯೋಜನೆಗಳೆಂದರೆ ಇನ್ನರ್ ರಿಂಗ್ ರೋಡ್,ಒಟರ್ ರಿಂಗ್ ರೋಡ್ ಇವುಗಳನ್ನು ಕೇಂದ್ರ ಸರ್ಕಾರ ನಿರ್ಮಿಸಲಿದೆ.ಹೊಸ ಮೇಲ್ಸೇತುವೆ ಕಾಮಗಾರಿಗಳಿಗೂ ಹಸಿರು ನಿಶಾನೆ ತೋರಿದೆ. ಸರ್ಕಾರದಿಂದ ಒಂದು ವಿಮಾನ ನಿಲ್ದಾಣ ಕೂಡ ಸಮ್ಮತಿ ಪಡೆದಿದೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ "ಹಿಸ್ಟ್ರಿ ಆಫ್ ಆಲಿಘಡ್". Archived from the original on 2012-02-12. Retrieved 2010-11-08.
- ↑ ೨.೦ ೨.೧ ೨.೨ ೨.೩ ೨.೪ ೨.೫ ೨.೬ ಡಿಸ್ಕ್ರ್ಪ್ಟಿವ್ ಅಂಡ್ ಹಿಸ್ಟಾರಿಕಲ್ ಅಕೌಂಟ್ ಆಫ್ ದಿಅ ಅಲಿಘಡ್ ಡಿಸ್ಟ್ರಿಕ್ಟ್ ಬೈ ಎಡ್ವಿನ್ ಟಿ.ಅಟ್ಕಿನ್ಸ್ಸನ್, page 484
- ↑ ಡಿಸ್ಕ್ರ್ಪ್ಟಿವ್ ಅಂಡ್ ಹಿಸ್ಟಾರಿಕಲ್ ಅಕೌಂಟ್ ಆಫ್ ದಿಅ ಅಲಿಘಡ್ ಡಿಸ್ಟ್ರಿಕ್ಟ್ ಬೈ ಎಡ್ವಿನ್ ಟಿ.ಅಟ್ಕಿನ್ಸ್ಸನ್, p. 348
- ↑ ಫಾಲಿಂಗ್ ರೇನ್Rain ಜಿನೊಮಿಕ್ಸ್, ಇಂಕ್- ಆಲಿಘಡ್
- ↑ GRIndia
- ↑ "ಸೆನ್ಸಸ್ ಆಫ್ ಇಂಡಿಯಾ 2001". Archived from the original on 2004-06-16. Retrieved 2004-06-16.
- ↑ India9.com
- ↑ ಬ್ರಿಟಾನಿಕಾ
- ↑ ಟೈಮ್ಸ್ ಆಫ್ ಇಂಡಿಯಾ
- ↑ "ಮಂಗಲಯಾತನ್ ಯುನ್ವರ್ಸಿಟಿ". Archived from the original on 2017-10-05. Retrieved 2021-08-09.
- ↑ ಯುರೊಕಿಡ್ ಸ್ಕೂಲ್
- ↑ ಮಕೂನ್ಸ್ ಶಾಲೆ
- ↑ ಬ್ರಿಟಾನಿಕಾ ಇಂಡಿಯಾ, ಬೈ ಡೇಲ್ ಹೊಯ್ಬರ್ಗ್,ಇಂದೂ ರಾಮಚಂದಾನಿ
- ↑ ಆಫೀಸಿಯಲ್ ವೆಬ್ ಸೈಟ್ ಆಫ್ ಇಬ್ನ್ ಸಿನಾ ಅಕಾಡಮಿ
- ↑ ಹಿಸ್ಟ್ರಿ ಆಫ್ ಮೆಡಿಸಿನ್ ಕಲೆಕ್ಷನ್, ಲಿಸ್ಟೆಡ್ ಆಟ್at NLM, ನ್ಯಾಶನಲ್ ಇನ್ ಸ್ಟಿಟಿಟುಟ್ ಆಫ್ ಹೆಲ್ತ್, USA
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಆಲಿಘಡ್ ಇನ್ ಮೈ ಡೇಯ್ಸ್ (ಆಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳ ಸಂದರ್ಶನಗಳು ), ಸಂ. ಸಯ್ಯದ್ ಜೈವುರ್ ರೆಹಮಾನ್, ಅನಿವಾಸಿ ವಿದ್ಯಾರ್ಥಿಗಳ ಕೇಂದ್ರ, ಆಲಿಘಡ್ ಮುಸ್ಲಿಮ್ ಯುನ್ವರ್ಸಿಟಿ, ಆಲಿಘಡ್, 1997.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಸೈಟ್ ಫಾರ್ ಕನೆಕ್ಟಿಂಗ್ ಆಲಿಗ್ಸ್ Archived 2007-09-25 ವೇಬ್ಯಾಕ್ ಮೆಷಿನ್ ನಲ್ಲಿ.
- ಆಲಿಘಡ್ ಸ್ ವೆಬ್ ಪೊರ್ಟಲ್' Archived 2016-08-10 ವೇಬ್ಯಾಕ್ ಮೆಷಿನ್ ನಲ್ಲಿ.
- ಆಲಿಘಢ್ Archived 2011-09-03 ವೇಬ್ಯಾಕ್ ಮೆಷಿನ್ ನಲ್ಲಿ.COM Archived 2011-09-03 ವೇಬ್ಯಾಕ್ ಮೆಷಿನ್ ನಲ್ಲಿ.
- ಸುಧಾ ಎಂಟರ್ ಪ್ರೈಜಿಸ್
- ಆಲಿಘಡ್ ಫುಲ್ಲಿ ಯಲೊಪೇಜ್ ಡೈರೆಕ್ಟರಿ Archived 2015-05-13 ವೇಬ್ಯಾಕ್ ಮೆಷಿನ್ ನಲ್ಲಿ.
- ಡೊಮೇನ್ ಬುಕಿಂಗ್ ನ್ವೆಬ್ ಸೈಟ್ Archived 2011-01-28 ವೇಬ್ಯಾಕ್ ಮೆಷಿನ್ ನಲ್ಲಿ.
- ಜಂತಾರಿವಿವ್ ಆಲಿಘಡ್ ಸೈಟ್
- ಆಲಿಘಢ್ ಮುಸ್ಲಿಂ ವಿಶ್ವವಿದ್ಯಾಲಯ
- ಇಬ್ನ್ ಸಿನಾ ಅಕಾಡಮಿ ಆಫ್ ಮೈಡಿಸಿನ್ ಅಂಡ್ ಸೈನ್ಸಿಸ್ ಆಲಿಘಡ್
- ಡಿಸ್ಕ್ರ್ಪ್ಟಿವ್ ಅಂಡ್ ಹಿಸ್ಟಾರಿಕಲ್ ಅಕೌಂಟ್ ಆಫ್ ದಿಅ ಅಲಿಘಡ್ ಡಿಸ್ಟ್ರಿಕ್ಟ್ ಬೈ ಎಡ್ವಿನ್ ಟಿ.ಅಟ್ಕಿನ್ಸ್ಸನ್,